Tag: Actress Ragini Dwivedi

  • ಪಡ್ಡೆಹುಡುಗರ ನಿದ್ದೆಗೆಡಿಸಿದ `ರಾ’ಗಿಣಿ ನಯಾ ಲುಕ್

    ಪಡ್ಡೆಹುಡುಗರ ನಿದ್ದೆಗೆಡಿಸಿದ `ರಾ’ಗಿಣಿ ನಯಾ ಲುಕ್

    ನ್ನಡ ಚಿತ್ರರಂಗದ ತುಪ್ಪದ ಬೆಡಗಿ ರಾಗಿಣಿ ದಿನದಿಂದ ದಿನಕ್ಕೆ ಹಾಟ್ ಆಗಿ ಕಾಣಿಸಿಕೊಳ್ತಿದ್ದಾರೆ. ಸದ್ಯ ತಮಿಳು ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಿರೋ ರಾಗಿಣಿಯ ಲುಕ್ ರಿವೀಲ್ ಆಗಿದ್ದು, ತುಪ್ಪದ ಹುಡುಗಿ ರಾಗಿಣಿ ಲುಕ್‌ಗೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ.

    ಕೆಂಪೇಗೌಡ, ವೀರ ಮದಕರಿ ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ನಟಿ ರಾಗಿಣಿ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಕಷ್ಟು ಚಾಲೆಂಜಿಂಗ್ ದಿನಗಳನ್ನ ಎದುರಿಸಿದ ಮೇಲೆ ಈಗ ಮತ್ತಷ್ಟು ಫಿಟ್ ಆಗಿ ಬಗೆ ಬಗೆಯ ಪಾತ್ರಗಳಲ್ಲಿ ನಟಿಸಲು ಸಜ್ಜಾಗಿದ್ದಾರೆ. ಹೊಸ ಫೋಟೋಶೂಟ್ ಮೂಲಕ ಆಗಾಗ ಪಡ್ಡೆಹುಡುಗರ ಟೆಂಪ್ರೇಚರ್ ಹೆಚ್ಚಿಸಿದ್ದಾರೆ. ವೈಟ್ ಕಲರ್ ಡ್ರೆಸ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿರೋ ರಾಗಿಣಿ ಲುಕ್ಕಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ: `ಕಾಂತಾರ’ ರಿಷಬ್ ಶೆಟ್ಟಿಗೆ ಸಪ್ತಮಿ ಗೌಡ ನಾಯಕಿ

    ಸದ್ಯ ರಾಗಿಣಿ ತಮಿಳಿನ ಚಿತ್ರವೊಂದರಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಲುಕ್ ಅನ್ನು ಆಗಾಗ ಶೇರ್ ಮಾಡಿಕೊಳ್ಳುವ ರಾಗಿಣಿ ಮತ್ತೆ ಹೊಸ ಲುಕ್‌ನಿಂದ ಸುದ್ದಿಯಲ್ಲಿದ್ದಾರೆ. ಸಾಲು ಸಾಲು ಚಿತ್ರಗಳು ರಾಗಿಣಿ ಕೈಯಲ್ಲಿದ್ದು, ಒಂದೊಂದೇ ಸಿನಿಮಾಗಳು ತೆರೆಗೆ ಬರಲಿದೆ.

  • `ರಾ’ಗಿಣಿ ಕರ್ಮ ರಿಟರ್ನ್ಸ್: ರಾಗಿಣಿ ಹುಟ್ಟುಹಬ್ಬಕ್ಕೆ ಭಗವದ್ಗೀತೆ ಗಿಫ್ಟ್

    `ರಾ’ಗಿಣಿ ಕರ್ಮ ರಿಟರ್ನ್ಸ್: ರಾಗಿಣಿ ಹುಟ್ಟುಹಬ್ಬಕ್ಕೆ ಭಗವದ್ಗೀತೆ ಗಿಫ್ಟ್

    ಸ್ಯಾಂಡಲ್‌ವುಡ್ ನಟಿ ರಾಗಿಣಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಡ್ರಗ್ಸ್ ಪ್ರಕರಣದ ನಂತರ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಿರುವ ರಾಗಿಣಿ ಈಗ ತಮ್ಮ ಹೊಸ ಸಿನಿಮಾದ ಲುಕ್ ರಿವೀಲ್ ಮಾಡಿರೋದರ ಜೊತೆಗೆ ಹೊಸ ಚಿತ್ರ ಅನೌನ್ಸ್ ಮಾಡಿದ್ದಾರೆ.

    ಮೀರ ಮದಕರಿ. ಕೆಂಪೇಗೌಡ ಸಿನಿಮಾಗಳ ಮೂಲಕ ಮೋಡಿ ಮಾಡಿರೋ ನಟಿ ರಾಗಿಣಿ ಇದೀಗ 32ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಡ್ರಗ್ಸ್ ಪ್ರಕರಣ ಮತ್ತು ಸಾಕಷ್ಟು ಸವಾಲುಗಳನ್ನು ಎದರಿಸಿದ ನಂತರ ಮತ್ತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ರಾಗಿಣಿ ಹುಟ್ಟು ಹಬ್ಬದಂದು `ಸಾರಿ ಕರ್ಮ ರಿಟನ್ಸ್’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ವೇಳೆ ರಾಗಿಣಿಗೆ ಭಗವದ್ಗೀತೆ ನೀಡಿ ಸನ್ಮಾನಿಸಲಾಯಿತು. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್ ನಿಂದ ಮತ್ತೆರಡು ಪ್ಯಾನ್ ಇಂಡಿಯಾ ಸಿನಿಮಾ

    ನಟಿ ರಾಗಿಣಿ ಕಳೆದ ವರ್ಷ ಜೈಲಿನಿಂದ ಬಂದ ನಂತರ ಹುಟ್ಟುಹಬ್ಬ ಆಚರಿಸಿರಲಿಲ್ಲ. ಈ ವರ್ಷ ಸಾಲು ಸಾಲು ಸಿನಿಮಾಗಳ ಜೊತೆ ಕಮ್ ಬ್ಯಾಕ್ ಆಗಿದ್ದಾರೆ. ಹೊಸ ಸಿನಿಮಾಗಳ ಅನೌನ್ಸ್ ಮಾಡ್ತಿದ್ದಾರೆ. ಜೈಲಿಂದ ಬಂದ ನಂತರ ರಾಗಿಣಿಯ ಲಕ್‌ಯೇ ಬದಲಾಗಿದೆ. ಒಳ್ಳೆಯ ಕಥೆಗಳು ಅರಸಿ ಬರೋದರ ಜತೆಗೆ ಪರಭಾಷೆಗಳಿಂದಲೂ ನಟಿಗೆ ಬುಲಾವ್ ಬರುತ್ತಿದೆ. ಸದ್ಯ `ಗಾಂಧಿಗಿರಿ’, ತಮಿಳಿನ ಒಂದು ಪ್ರಾಜೆಕ್ಟ್ ಜೊತೆ ಹೆಸರಿಡದ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

  • ಎರಡು ಬಾರಿ ಎಂಡಿಎಂಎ ಡ್ರಗ್ ಬಳಕೆ- ರಾಗಿಣಿ ತಪ್ಪೊಪ್ಪಿಗೆ!

    ಎರಡು ಬಾರಿ ಎಂಡಿಎಂಎ ಡ್ರಗ್ ಬಳಕೆ- ರಾಗಿಣಿ ತಪ್ಪೊಪ್ಪಿಗೆ!

    ಬೆಂಗಳೂರು: ಎರಡು ಬಾರಿ ಎಂಡಿಎಂಎ (ಮೀಥೈಲ್ ಎನೆಡಿಯಾಕ್ಸಿ ಮೆಥಾಂಫೆಟಮೈನ್ ನನ್ನು ಎಕ್‍ಸಸ್ಟಿ ಮಾತ್ರೆ ಎಂದು ಕರೆಯಲಾಗುತ್ತದೆ) ಡ್ರಗ್ ತೆಗೆದುಕೊಂಡಿರೋದಾಗಿ ನಟಿ ರಾಗಿಣಿ ದ್ವಿವೇದಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಗೆಳೆಯ ರವಿಶಂಕರ್ ತಂದುಕೊಟ್ಟಿದ್ದ ಎಂಡಿಎಂಎ ಡ್ರಗ್ ಮನೆಯಲ್ಲಿಯೇ ಬಳಕೆ ಮಾಡಿದ್ದೇನೆ ಎಂದು ರಾಗಿಣಿ ಹೇಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಎರಡು ಬಾರಿಯೂ ರವಿಶಂಕರ್ ಡ್ರಗ್ಸ್ ತಂದಿದ್ದನು. ಇತ್ತ ರಾಗಿಣಿ, ರವಿಶಂಕರ್ ಮತ್ತು ರಾಹುಲ್ ಬಳಸುತ್ತಿದ್ದ ಮೊಬೈಲ್ ಮಾಹಿತಿಯನ್ನ ಪುನಃ ಕಲೆ ಹಾಕಲಾಗಿದೆ. ಎಫ್‍ಎಸ್‍ಎಲ್ ವರದಿ ಸಿಸಿಬಿ ಪೊಲೀಸರ ಕೈಗೆ ಸೇರಿದೆ. ಇದನ್ನೂ ಓದಿ: ಸಿಸಿಬಿ ಪಂಜರದಲ್ಲಿ ತುಪ್ಪದ ಬೆಡಗಿ- ಅರೆಸ್ಟ್ ಆದ್ರೂ ಕಮ್ಮಿಯಾಗದ ಚಾರ್ಮಿಂಗ್– ಕಿಟಕಿ ಮೂಲಕ ಫ್ಲೈಯಿಂಗ್ ಕಿಸ್

    ರಾಗಿಣಿ ಮದ್ಯದ ಜೊತೆ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂದು ಸಿಸಿಬಿ ವಿಚಾರಣೆ ರವಿಶಂಕರ್ ಹೇಳಿಕೆ ಆಧರಿಸಿ ನಟಿಯನ್ನ ವಿಚಾರಣೆಗೆ ಒಳಪಡಿಸಲಾಗಿತ್ತು. ಪ್ರಕರಣ ಸಂಬಂಧ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಎನ್‍ಡಿಪಿಎಸ್ ಆಕ್ಟ್ ಸೆಕ್ಷನ್ 21, 21ಸಿ, 27ಬಿ, 27ಎ, 29, ಐಪಿಸಿ 120ಬಿ ಅಡಿ ಎಫ್‍ಐಆರ್ ದಾಖಲಾಗಿದೆ. ಪ್ರಕರಣದಲ್ಲಿ 12 ಜನರನ್ನು ಆರೋಪಿಗಳ ಹೆಸರು ಉಲ್ಲೇಖವಾಗಿದೆ. ರಾಗಿಣಿ ದ್ವಿವೇದಿ ಎರಡನೇ ಆರೋಪಿಯ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಬೆಲ್ಜಿಯಂ ಟು ಬೆಂಗಳೂರು – ಸ್ಯಾಂಡಲ್‌ವುಡ್‌ ಡ್ರಗ್ಸ್‌ ಕಹಾನಿ – ಒಂದು ಮಾತ್ರೆ 1500 ರೂ.ಗೆ ಮಾರಾಟ

    12 ಆರೋಪಿಗಳು: ಶಿವಪ್ರಕಾಶ್ (ಎ1), ರಾಗಿಣಿ ದ್ವಿವೇದಿ (ಎ2), ವೀರೇನ್ ಖನ್ನಾ (ಎ3), ಪ್ರಶಾಂತ್ ರಂಕಾ (ಎ4), ವೈಭವ್ ಜೈನ್ (ಎ5), ಆದಿತ್ಯ ಆಳ್ವಾ (ಎ6), ಲೂಮ್ ಪೆಪ್ಪರ್ (ಎ7), ಪ್ರಶಾಂತ್ ರಿಜು (ಎ8), ಅಶ್ವಿನ್ (ಎ9), ಅಭಿ ಸ್ವಾಮಿ (ಎ10), ರಾಹುಲ್ (ಎ11), ವಿನಯ್ (ಎ12)

  • ನಟಿ ರಾಗಿಣಿಗಾಗಿ ಪ್ರೇಮಿಗಳಿಬ್ಬರ ಕಿತ್ತಾಟ

    ನಟಿ ರಾಗಿಣಿಗಾಗಿ ಪ್ರೇಮಿಗಳಿಬ್ಬರ ಕಿತ್ತಾಟ

    ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿಗಾಗಿ ಅವರ ಇಬ್ಬರು ಬಾಯ್ ಫ್ರೆಂಡ್ಸ್ ಕಿತ್ತಾಡಿಕೊಂಡಿರುವ ಘಟನೆ ನಗರದ ಖಾಗಿಸಿ ಹೋಟೆಲ್ ನಲ್ಲಿ ನಡೆದಿದ್ದು, ನಟಿಯ ಮುಂದೆಯೇ ಇಬ್ಬರು ಗೆಳೆಯರು ಬಾಟಲಿಯಿಂದ ಬಡಿದಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ರಾಗಿಣಿ ಅವರ ಮಾಜಿ ಗೆಳೆಯ ಗಣಿ ಉದ್ಯಮಿ, ಶಿವಪ್ರಕಾಶ್ ಚಿಪ್ಪಿ ಹಾಗೂ ಆರ್ ಟಿಒ ಅಧಿಕಾರಿ ರವಿ ನಡುವೆ ಗಲಾಟೆ ನಡೆದಿದೆ. ನಿನ್ನೆ ರಾತ್ರಿ ರಿಟ್ಜ್ ಕಾರ್ಲ್ ಟನ್ ಹೋಟೆಲ್ ನಲ್ಲಿ ಶಿವಪ್ರಕಾಶ್ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ನಟಿ ತಮ್ಮ ಗೆಳೆಯ ರವಿರೊಂದಿಗೆ ಹೋಟೆಲ್ ತೆರಳಿದ್ದು, ಇದನ್ನು ಕಂಡ ಶಿವಪ್ರಕಾಶ್, ರವಿರೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ. ಅಲ್ಲದೇ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ. ಇಬ್ಬರ ನಡುವೆ ಜಗಳ ಆರಂಭವಾಗಿ ಬಿಯರ್ ಬಾಟೆಲ್‍ನಿಂದ ಬಡಿದಾಡಿಕೊಂಡಿದ್ದಾರೆ.

    ಅಂದಹಾಗೇ ಉದ್ಯಮಿ ಶಿವಪ್ರಕಾಶ್ ನನ್ನ ಮೊದಲು ನಟಿ ರಾಗಿಣಿ ದ್ವಿವೇದಿ ಪ್ರೀತಿಸುತ್ತಿದ್ದರು. ಆದರೆ ಆ ಬಳಿಕ ರವಿ ಅವರೊಂದಿಗೆ ಒಡನಾಟ ಹೆಚ್ಚಿತ್ತು. ನಿನ್ನೆ ರಾತ್ರಿ ನಡೆದ ಗಲಾಟೆ ಬಳಿಕ ಶಿವಪ್ರಕಾಶ್, ರಾಗಿಣಿ ಅವರ ಬಳಿ ಇದ್ದ ಮರ್ಸಿಡೀಸ್ ಬೆಂಜ್ ಕಾರು ಕಿತ್ತುಕೊಂಡಿದ್ದಾರೆ. ಕೋರಮಂಗಲ ಆರ್ ಟಿಒ ಕಚೇರಿಯಲ್ಲಿ ಆಫೀಸರ್ ಆಗಿ ರವಿ ಕಾರ್ಯನಿರ್ವಹಿಸುತ್ತಿದ್ದಾರೆ.

    ರಾಗಿಣಿ ಅವರ ಬಳಿ ಇದ್ದ ಕಾರನ್ನು ಶಿವಪ್ರಕಾಶ್ ಕೊಡಿಸಿದ್ದರು ಎನ್ನಲಾಗಿದ್ದು, ಅದ್ದರಿಂದಲೇ ಕಾರನ್ನು ಕಿತ್ತುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಗಲಾಟೆಯಲ್ಲಿ ಗಾಯಗೊಂಡಿದ್ದ ರವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಆ ಬಳಿಕ ಅಶೋಕನಗರ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ. ಸದ್ಯ ಅವರ ಆರೋಗ್ಯ ಪರಿಸ್ಥಿತಿ ಚೇತರಿಸಿ ಕೊಂಡಿದ್ದು, ರವಿ ನೀಡಿದ ದೂರಿನ ಅನ್ವಯ ಪೊಲೀಸರು ಎಫ್‍ಐಆರ್ ದಾಖಲಿಸಿ ಶಿವಪ್ರಕಾಶ್ ರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.