Tag: Actress Ragini Dwivedi

  • ರಾಗಿಣಿ ಹುಟ್ಟುಹಬ್ಬಕ್ಕೆ ‘ಸಂಜು ವೆಡ್ಸ್ ಗೀತಾ 2’ ಟೀಮ್‌ನಿಂದ ಸ್ಪೆಷಲ್ ವಿಡಿಯೋ ರಿಲೀಸ್

    ರಾಗಿಣಿ ಹುಟ್ಟುಹಬ್ಬಕ್ಕೆ ‘ಸಂಜು ವೆಡ್ಸ್ ಗೀತಾ 2’ ಟೀಮ್‌ನಿಂದ ಸ್ಪೆಷಲ್ ವಿಡಿಯೋ ರಿಲೀಸ್

    ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Ragini Dwivedi)  ಇಂದು (ಮೇ 24) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಾಗಿಣಿ 34ನೇ ವರ್ಷದ ಬರ್ತ್‌ಡೇಯ ಸಂಭ್ರಮ ಡಬಲ್ ಮಾಡಲು ‘ಸಂಜು ವೆಡ್ಸ್ ಗೀತಾ 2’ (Sanju Weds Geetha 2) ಚಿತ್ರತಂಡ ಸ್ಪೆಷಲ್ ವಿಡಿಯೋವೊಂದು ರಿಲೀಸ್ ಮಾಡಿ ನಟಿಗೆ ಶುಭಕೋರಿದ್ದಾರೆ. ರಿಲೀಸ್ ಮಾಡಿರುವ ಮೇಕಿಂಗ್ ವಿಡಿಯೋದಲ್ಲಿ ರಾಗಿಣಿ ಸಖತ್ ಗ್ಲ್ಯಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಬೆಳ್ಳಿಪರದೆಯಲ್ಲಿ ಸಮಂತಾ ಎಂಟ್ರಿ ನೋಡ್ತಿದ್ದಂತೆ ನಾಚಿ ನೀರಾದ ನಾಗಚೈತನ್ಯ

    ಅಂದಹಾಗೆ, ಕಾಡುವಂಥ ಪ್ರೇಮಕಥೆಗಳನ್ನು ತೆರೆಮೇಲೆ ಮೂಡಿಸಿದ ನಿರ್ದೇಶಕ ನಾಗಶೇಖರ್ ಇದೀಗ ಕನ್ನಡ ಸಿನಿರಸಿಕರಿಗಾಗಿ ಮತ್ತೊಂದು ಅದ್ಭುತ ಲವ್ ಸ್ಟೋರಿಯನ್ನು ಹೇಳಹೊರಟಿದ್ದಾರೆ. ದಶಕದ ಹಿಂದೆ ತಮ್ಮದೇ ನಿರ್ದೇಶನದಲ್ಲಿ ತೆರೆಕಂಡು, ಜನಮನ ಸೂರೆಗೊಂಡು ಯಶಸ್ವಿಯಾಗಿದ್ದ ‘ಸಂಜು ವೆಡ್ಸ್ ಗೀತಾ’ ಚಿತ್ರದ ಟೈಟಲ್ ಇಟ್ಟುಕೊಂಡು ನವನವೀನ ಪ್ರೇಮಕಥೆ ಹೆಣೆದು ‘ಸಂಜು ವೆಡ್ಸ್ ಗೀತಾ 2’ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಶ್ರೀನಗರ ಕಿಟ್ಟಿ ಮತ್ತು ರಚಿತಾ (Rachita Ram) ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಹಾಡೊಂದರ ಚಿತ್ರೀಕರಣ ಇತ್ತೀಚೆಗೆ ನಡೆಯಿತು. ನಾಯಕ ಸಂಜು ಹಾಗೂ ನಾಯಕಿ ಗೀತಾ ಇಬ್ಬರ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬರುವ ಪಾರ್ಟಿ ಸಾಂಗ್ ಅದಾಗಿದ್ದು, ವಿಶೇಷವಾಗಿ ಈ ಹಾಡಲ್ಲಿ ತುಪ್ಪದ ಬೆಡಗಿ ರಾಗಿಣಿ ಇವರಿಬ್ಬರ ಜೊತೆ ಸ್ಟೆಪ್ಸ್ ಹಾಕಿದ್ದಾರೆ. ಅದೇ ಸಂದರ್ಭದ ಸಣ್ಣ ತುಣುಕನ್ನು ಇದೀಗ ರಾಗಿಣಿ ಹುಟ್ಟುಹಬ್ಬದ ದಿನ ರಿಲೀಸ್ ಮಾಡಿದ್ದಾರೆ.

    ಕುಂಬಳಗೋಡಿನ ಬಿಜಿಎಸ್ ಹೈಸ್ಕೂಲಿನ ಗ್ಲಾಸ್ ಹೌಸ್‌ನಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಿತು. 200 ರಿಂದ 250 ಜನ ಡಾನ್ಸರ್ಸ್ ಈ ಹಾಡಲ್ಲಿ ಹೆಜ್ಜೆ ಹಾಕಿದ್ದಾರೆ. ಖ್ಯಾತ ಗಾಯಕಿ ಮಂಗ್ಲಿ ಈ ಹಾಡಿಗೆ ದನಿಯಾಗಿದ್ದು, ಭಜರಂಗಿ ಮೋಹನ್ ಅವರು ಕೊರಿಯೋಗ್ರಾಫ್ ಮಾಡಿದ್ದಾರೆ. ಈ ವರ್ಷದ ಸೂಪರ್ ಹಿಟ್ ಸಾಂಗ್ ಇದಾಗಲಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, 2 ಫೈಟ್ಸ್, ಒಂದು ಹಾಡಿನ ಪ್ಯಾಚ್ ವರ್ಕ್ ಮಾತ್ರವೇ ಬಾಕಿಯಿದೆ. ರೇಶ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ ನಮ್ಮ ಮಣ್ಣಿನ ಪ್ರೇಮಿಗಳ ಅದ್ಭುತ ಪ್ರೇಮಕಥೆ ಈ ಚಿತ್ರದಲ್ಲಿದೆ.

    ಈಗಾಗಲೇ ಚಿತ್ರದ ಎಡಿಟಿಂಗ್ ಮುಗಿದು, ಡಬ್ಬಿಂಗ್ ಕೂಡ ಕೊನೇ ಹಂತದಲ್ಲಿದೆ. ಚಿತ್ರಕ್ಕೆ ಸ್ವಿಟ್ಜರ್ ಲ್ಯಾಂಡ್ ನಲ್ಲಿ 15 ದಿನ ಹನ್ನೊಂದು ಲೊಕೇಶನ್ ಗಳಲ್ಲಿ ಮೂರನೇ ಹಂತದ ಚಿತ್ರೀಕರಣ ನಡೆಸಲಾಗಿದೆ. ಅಲ್ಲದೆ 50 ಲಕ್ಷ ರೂ.ಗಳ ವೆಚ್ಚದಲ್ಲಿ ಕುಣಿಗಲ್ ನ ಯುಬಿ ಸ್ಟೆಡ್ ಫಾರಂ(ಕುದುರೆ ಫಾರಂ)ನಲ್ಲಿ ಸುಮಾರು 5 ದಿನಗಳವರೆಗೆ ಅದ್ದೂರಿಯಾಗಿ ಹಾಡೊಂದನ್ನು ಚಿತ್ರೀಕರಿಸಲಾಗಿದೆ. ಹೀಗೆ ಚಿತ್ರಕಥೆಯಷ್ಟೇ ಪ್ರಾಮುಖ್ಯತೆಯನ್ನು ಚಿತ್ರದ ಹಾಡುಗಳಿಗೂ ಸಹ ನೀಡಲಾಗಿದ್ದು, ಒಂದು ಸಿನಿಮಾಗಾಗುವಷ್ಟು ಖರ್ಚನ್ನು ನಿರ್ಮಾಪಕ ಛಲವಾದಿ ಕುಮಾರ್ ಅವರು ಹಾಡುಗಳಿಗೇ ಮಾಡುವ ಮೂಲಕ ಅದ್ದೂರಿತನಕ್ಕೆ ಎಲ್ಲೂ ಕೊರತೆ ಬಾರದಂತೆ ನೋಡಿಕೊಂಡಿದ್ದಾರೆ. ಅಲ್ಲದೆ ಹಾಡುಗಳನ್ನು ಹಾಸನ ಮತ್ತು ಹಾವೇರಿಯಲ್ಲಿ ಅದ್ದೂರಿ ಸಮಾರಂಭದಲ್ಲಿ ರಿಲೀಸ್ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.

    ನಾಗಶೇಖರ್ ಅವರ ಕಥೆ, ಚಿತ್ರಕಥೆ ನಿರ್ದೇಶನ ಚಿತ್ರಕ್ಕಿದ್ದು, ಶ್ರೀಧರ ವಿ. ಸಂಭ್ರಮ್ 5 ಹಾಡುಗಳನ್ನು ಕಂಪೋಜ್ ಮಾಡಿದ್ದಾರೆ. ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿ ದನಿಯಾಗಿದ್ದಾರೆ. ರಾಗಿಣಿ ದ್ವಿವೇದಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ, ತಬಲಾನಾಣಿ, ಗಿಚ್ಚಿ ಗಿಲಿಗಿಲಿ ವಿನೋದ್ ಅಲ್ಲದೆ, ಖಳನಟ ಸಂಪತ್ ಕುಮಾರ್ ಸೇರಿದಂತೆ ಹೆಸರಾಂತ ಕಲಾವಿದರ ತಾರಾಗಣ ಈ ಚಿತ್ರಕ್ಕಿದೆ.

  • ನಮಗೇ ನೀರಿಲ್ಲ, ತಮಿಳುನಾಡಿಗೆ ನೀರು ಬಿಡೋದು ಹೇಗೆ? ರಾಗಿಣಿ ದ್ವಿವೇದಿ ಪ್ರತಿಕ್ರಿಯೆ

    ನಮಗೇ ನೀರಿಲ್ಲ, ತಮಿಳುನಾಡಿಗೆ ನೀರು ಬಿಡೋದು ಹೇಗೆ? ರಾಗಿಣಿ ದ್ವಿವೇದಿ ಪ್ರತಿಕ್ರಿಯೆ

    ನ್ನಡ ಸಿನಿಮಾರಂಗದ ನಟ-ನಟಿಯರು ಕಾವೇರಿದ ಕಾವೇರಿ ಹೋರಾಟಕ್ಕೆ (Cauvery Protest) ಬೆಂಬಲ ಸೂಚಿಸಿದ್ದಾರೆ. ಕಿಚ್ಚ ಸುದೀಪ್(Kiccha Sudeep), ದರ್ಶನ್, ರಾಘವೇಂದ್ರ ರಾಜ್‌ಕುಮಾರ್, ಧ್ರುವ ಸರ್ಜಾ (Dhruva Sarja) ಸೇರಿದಂತೆ ಅನೇಕರು ನೀರಿಗಾಗಿ ಹೋರಾಡಲು ಸಿದ್ಧ ಎಂದು ಧ್ವನಿಯೆತ್ತಿದ್ದಾರೆ. ಈಗ ಕನ್ನಡದ ನಟಿ ರಾಗಿಣಿ ದ್ವಿವೇದಿ (Ragini Dwivedi) ಕೂಡ ಕಾವೇರಿ ಹೋರಾಟದ ಪರ ಮಾತನಾಡಿದ್ದಾರೆ. ನಮಗೇ ನೀರಿಲ್ಲ, ಇಂತಹ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಡೋದು ಹೇಗೆ ಎಂದು ರಾಗಿಣಿ ಪ್ರಶ್ನೆ ಮಾಡಿದ್ದಾರೆ.

    ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾತಾಡಿದ ನಟಿ ರಾಗಿಣಿ ದ್ವಿವೇದಿ, ನಮಗೆ ನೀರಿಲ್ಲ ಇಂತಹ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಡೋದು ಹೇಗೆ? ಕಾವೇರಿ ಹೋರಾಟಕ್ಕೆ ನಾನು ಸದಾ ಸಿದ್ಧ. ರೈತರಿಗೆ ನೀರು ಮುಖ್ಯ, ರೈತರಿದ್ರೆ ನಮ್ಮ ಜೀವನ. ಯೋಚನೆ ಮಾಡಿ ನೀರು ಬಿಡಬೇಕು ಎಂದು ರಾಗಿಣಿ ಹೇಳಿದ್ದಾರೆ.

    ನಮ್ಮ ರೈತರಿಗೆ ತೊಂದರೆ ಆದರೆ ನಾವು ಹೇಗೆ ಸುಮ್ಮನೆ ಇರೋಕೆ ಆಗುತ್ತೆ. ಕರ್ನಾಟಕ ನಮ್ಮ ಮನೆ, ಮೊದಲು ನಮ್ಮ ರೈತರ ಹಿತ ಮುಖ್ಯ. ಸ್ಯಾಂಡಲ್‌ವುಡ್ (Sandalwood) ಸದಾ ರೈತರ ಪರವಾಗಿ ಇರಲಿದೆ. ರೈತರ ಪರವಾಗಿ ನನ್ನ ಸಪೋರ್ಟ್ ಸಹ ಇದೆ. ಶುಕ್ರವಾರದ ಬಂದ್‌ಗೆ ಅಗತ್ಯ ಬಿದ್ದರೆ ನಾನು ಹೋಗಿ ಬೆಂಬಲ ಕೊಡ್ತೀನಿ. ಈಗಾಗಲೇ ಸಾಕಷ್ಟು ಜನ ಚಿತ್ರರಂಗದವರು ಬೆಂಬಲ ನೀಡಿದ್ದಾರೆ ಎಂದು ನಟಿ ರಾಗಿಣಿ ದ್ವಿವೇದಿ ಪ್ರತಿಕ್ರಿಯೆ ನೀಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೀಲಿ ಬಣ್ಣದ ಉಡುಗೆಯಲ್ಲಿ ರಾಗಿಣಿ ದ್ವಿವೇದಿ ಮಿಂಚಿಂಗ್

    ನೀಲಿ ಬಣ್ಣದ ಉಡುಗೆಯಲ್ಲಿ ರಾಗಿಣಿ ದ್ವಿವೇದಿ ಮಿಂಚಿಂಗ್

    ಸ್ಯಾಂಡಲ್‌ವುಡ್‌ನ (Sandalwood) ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Ragini Dwivedi) ಸಿನಿಮಾಗಳ ಜೊತೆ ಆಗಾಗ ಫೋಟೋಶೂಟ್‌ನಿಂದ (Photoshoot) ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಮತ್ತೆ ಹೊಸ ಲುಕ್‌ನಲ್ಲಿ ನಟಿ ಕಂಗೊಳಿಸಿದ್ದಾರೆ.

    ಕಿಚ್ಚ ಸುದೀಪ್, ದುನಿಯಾ ವಿಜಯ್, ಶರಣ್, ಶ್ರೀನಗರ ಕಿಟ್ಟಿ ಸೇರಿದಂತೆ ಹಲವರಿಗೆ ನಾಯಕಿಯಾಗಿ ಚಂದನವನದಲ್ಲಿ ಗುರುತಿಸಿಕೊಂಡಿದ್ದಾರೆ. ಮಹಿಳಾ ಪ್ರಧಾನ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ʻಪೊನ್ನಿಯಿನ್ ಸೆಲ್ವನ್-2ʼ ಟ್ರೈಲರ್ ರಿಲೀಸ್: ಚೋಳಾ ಸಾಮ್ರಾಜ್ಯಕ್ಕಾಗಿ ಮುಂದುವರೆದ ಹೋರಾಟ

    ತುಪ್ಪದ ಬೆಡಗಿ ರಾಗಿಣಿ ಇದೀಗ ಹಾಟ್ ಫೋಟೋಶೂಟ್‌ವೊಂದನ್ನ ಮಾಡಿಸಿದ್ದಾರೆ. ನೀಲಿ ಬಣ್ಣ ಉಡುಗೆಯಲ್ಲಿ ನಟಿ ಮಿಂಚಿದ್ದಾರೆ. ನಟಿಯ ಮಾದಕ ಲುಕ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ.

    ನಟಿ ರಾಗಿಣಿ, ಬಾಲಿವುಡ್, ಕನ್ನಡ ಸೇರಿದಂತೆ 7ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ವರ್ಷ ಒಂದೊAದೇ ಚಿತ್ರಗಳು ತೆರೆಗೆ ಬರಲಿದೆ.

  • ಹಳದಿ ಬಣ್ಣದ ಸೀರೆಯಲ್ಲಿ ಹಾಟ್ ಆಗಿ ಮಿಂಚಿದ ರಾಗಿಣಿ ದ್ವಿವೇದಿ

    ಹಳದಿ ಬಣ್ಣದ ಸೀರೆಯಲ್ಲಿ ಹಾಟ್ ಆಗಿ ಮಿಂಚಿದ ರಾಗಿಣಿ ದ್ವಿವೇದಿ

    ಸ್ಯಾಂಡಲ್‌ವುಡ್ (Sandalwood) ಬ್ಯೂಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಇದೀಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಸಿನಿಮಾಗಿಂತ ಫೋಟೋಶೂಟ್‌ನಲ್ಲಿ ನಟಿ ಮಿಂಚ್ತಿದ್ದಾರೆ.

    ತುಪ್ಪದ ಬೆಡಗಿ ರಾಗಿಣಿ ಕನ್ನಡ, ಹಿಂದಿ, ಸೌತ್ ಸಿನಿಮಾಗಳು ಅಂತಾ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಆಲ್ಬಂ ಸಾಂಗ್‌ವೊಂದರಲ್ಲಿ ಹೆಜ್ಜೆ ಹಾಕಿ ಅಭಿಮಾನಿಗಳ ಗಮನ ಸೆಳೆದಿದ್ದರು. ಇದೀಗ ರಾಗಿಣಿ ಬದಲಾಗಿದ್ದಾರೆ. ವರ್ಕೌಟ್ ಮತ್ತು ಬ್ಯೂಟಿಗೆ ನಟಿ ಆದ್ಯತೆ ಕೊಡುತ್ತಾರೆ.

     

    View this post on Instagram

     

    A post shared by Ragini dwivedi (@rraginidwivedi)

    ಸದ್ಯ ಹಳದಿ ಬಣ್ಣದ ಸೀರೆಯುಟ್ಟು ರಾಗಿಣಿ ಮಿಂಚಿದ್ದಾರೆ. ಸದಾ ಮಾಡರ್ನ್ ಲುಕ್‌ನಲ್ಲಿ ಹಾಟ್ ಹಾಟ್ ಆಗಿ ಪೋಸ್ ನೀಡುತ್ತಿದ್ದ ನಟಿ ಈಗ ಸಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಈ ಹೊಸ ಫೋಟೋಶೂಟ್ ನೆಟ್ಟಿಗರ ಗಮನ ಸೆಳೆದಿದೆ. ಶಿವರಾತ್ರಿ ಹಬ್ಬದ ವೇಳೆ ತೆಗೆದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

     

    View this post on Instagram

     

    A post shared by Ragini dwivedi (@rraginidwivedi)

    ಇನ್ನೂ ರಾಗಿಣಿ ದ್ವಿವೇದಿ ಅವರ ಕೈಯಲ್ಲಿ 7ಕ್ಕೂ ಹೆಚ್ಚು ಸಿನಿಮಾಗಳು ಕೈಯಲ್ಲಿದೆ. ಈ ವರ್ಷ ಒಂದೊಂದೇ ಸಿನಿಮಾಗಳು ತೆರೆಗೆ ಬರಲಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಡ್‌ರೂಮ್ ಫೋಟೋ ಹಂಚಿಕೊಂಡ ನಟಿ ರಾಗಿಣಿ ದ್ವಿವೇದಿ

    ಬೆಡ್‌ರೂಮ್ ಫೋಟೋ ಹಂಚಿಕೊಂಡ ನಟಿ ರಾಗಿಣಿ ದ್ವಿವೇದಿ

    ಸ್ಯಾಂಡಲ್‌ವುಡ್ (Sandalwood) ಬ್ಯೂಟಿ ರಾಗಿಣಿ ದ್ವಿವೇದಿ (Ragini Dwivedi) ಈಗ ಬದಲಾಗಿದ್ದಾರೆ. ಹೊಸ ಹೊಸ ಅವತಾರಗಳ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಈಗ ಬೆಡ್‌ರೂಮ್ ಫೋಟೋ ಹಂಚಿಕೊಂಡಿರುವ ನಟಿಯ ಹೊಸ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಇತ್ತೀಚಿಗೆ ಬಾತ್‌ಟಬ್‌ನಲ್ಲಿ ಕುಳಿತಿರುವ ಹಾಟ್ ಫೋಟೋ ಶೇರ್ ಮಾಡಿ, ನೆಟ್ಟಿಗರ ಗಮನ ಸೆಳೆದಿದ್ದರು. ಈಗ ಬೆಡ್‌ರೂಮ್‌ನಲ್ಲಿ ಕುಳಿತು ಗ್ಲ್ಯಾಮರಸ್ ಆಗಿ ಕ್ಯಾಮರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. ಇದನ್ನೂ ಓದಿ: ಆಶಿಕಾ ರಂಗನಾಥ್‌ಗೆ ಮನಸಾರೆ ಹಾರೈಸಿದ ಜ್ಯೂ.ಎನ್‌ಟಿಆರ್‌

     

    View this post on Instagram

     

    A post shared by Ragini dwivedi (@rraginidwivedi)

    ಬಿಳಿ ಬಣ್ಣದ ಡ್ರೆಸ್‌ನಲ್ಲಿ ರಾಗಿಣಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ, ನಟಿಯ ಹಸಿ ಬಿಸಿ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಳಕುವ ಬಳ್ಳಿ ತರ ಕಾಣುವ ರಾಗಿಣಿ ಲುಕ್‌ಗೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ. ನಟಿಯ ಫೋಟೋ ಈಗ ಎಲ್ಲೆಡೆ ಸದ್ದು ಮಾಡ್ತಿದೆ.

    ಹಿಂದಿ ಸೇರಿ ಒಟ್ಟು 7 ಸಿನಿಮಾಗಳಲ್ಲಿ ರಾಗಿಣಿ ಕಾಣಿಸಿಕೊಂಡಿದ್ದಾರೆ. ಈ ವರ್ಷ ಒಂದೊಂದೇ ಸಿನಿಮಾಗಳು ತೆರೆಗೆ ಅಬ್ಬರಿಸಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾತ್‌ಟಬ್‌ನಲ್ಲಿ ಹಾಟ್ ಆಗಿ ಪೋಸ್ ಕೊಟ್ಟ ತುಪ್ಪದ ಬೆಡಗಿ ರಾಗಿಣಿ

    ಬಾತ್‌ಟಬ್‌ನಲ್ಲಿ ಹಾಟ್ ಆಗಿ ಪೋಸ್ ಕೊಟ್ಟ ತುಪ್ಪದ ಬೆಡಗಿ ರಾಗಿಣಿ

    ಸ್ಯಾಂಡಲ್‌ವುಡ್ (Sandalwood) ನಟಿ ರಾಗಿಣಿ (Ragini Dwivedi) ಇದೀಗ ಸಾಲು ಸಾಲು ಸಿನಿಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ಈ ನಡುವೆ ರಾಗಿಣಿ ಹಾಟ್ ಆಗಿ ಫೋಟೋಶೂಟ್‌ವೊಂದು ಮಾಡಿಸಿದ್ದಾರೆ. ಈಗ ನಟಿಯ ಹೊಸ ಲುಕ್ ಪಡ್ಡೆಹುಡುಗರ ನಿದ್ದೆಗೆಡಿಸಿದೆ. ಇದನ್ನೂ ಓದಿ:ವಿಜಯ್ ನಟನೆಯ ‘ದಳಪತಿ 67’ ಸಿನಿಮಾಗೆ ಚಾಲನೆ

    `ವೀರಮದಕರಿ’ (Veeramadakari) ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಲಗ್ಗೆಯಿಟ್ಟ ನಟಿ ರಾಗಿಣಿ ದ್ವಿವೇದಿ, ಸಾಕಷ್ಟು ಸಂಕಷ್ಟಗಳ ನಂತರ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಕೈತುಂಬಾ ಸಿನಿಮಾಗಳಲ್ಲಿ ನಟಿ ಬ್ಯುಸಿಯಿದ್ದಾರೆ. ಜೊತೆಗೆ ಬಾಲಿವುಡ್‌ಗೂ (Bollywood) ನಟಿ ಎಂಟ್ರಿ ಕೊಟ್ಟಿದ್ದಾರೆ.

    ನಟಿ ರಾಗಿಣಿ ದ್ವಿವೇದಿ ಹಾಟ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಬಾತ್‌ಟಬ್‌ನಲ್ಲಿ ಕುಳಿತು ಶಾರ್ಟ್ ಡ್ರೆಸ್ ಧರಿಸಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ನಟಿಯ ಹಸಿ ಬಿಸಿ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಳಕುವ ಬಳ್ಳಿ ತರ ಕಾಣುವ `ರಾ’ಗಿಣಿ ಲುಕ್‌ಗೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ. ನಟಿಯ ಫೋಟೋ ಈಗ ಎಲ್ಲೆಡೆ ಸದ್ದು ಮಾಡ್ತಿದೆ.

    ಹಿಂದಿ ಸೇರಿ ಒಟ್ಟು 7 ಸಿನಿಮಾಗಳಲ್ಲಿ ರಾಗಿಣಿ ಕಾಣಿಸಿಕೊಂಡಿದ್ದಾರೆ. ಈ ವರ್ಷ ಒಂದೊಂದೇ ಸಿನಿಮಾಗಳು ತೆರೆಗೆ ಅಬ್ಬರಿಸಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಂಕ್ರಾಂತಿ ಹಬ್ಬಕ್ಕೆ ಸೆಲೆಬ್ರೆಟಿಗಳ ಸಂಭ್ರಮ

    ಸಂಕ್ರಾಂತಿ ಹಬ್ಬಕ್ಕೆ ಸೆಲೆಬ್ರೆಟಿಗಳ ಸಂಭ್ರಮ

    ನೆ ಮನೆಗಳಲ್ಲೂ ಸಂಕ್ರಾಂತಿ ಸಂಭ್ರಮ (Sankranti Festival) ಮುಗಿಲು ಮುಟ್ಟಿದೆ. ಸ್ಯಾಂಡಲ್‌ವುಡ್ (Sandalwood) ಮತ್ತು ಸೌತ್ ಸಿನಿಮಾರಂಗದಲ್ಲೂ ಸಂಕ್ರಾಂತಿ ಹಬ್ಬ ಜೋರಾಗಿದೆ. ಹಾಗಾದ್ರೆ ಸೆಲೆಬ್ರೆಟಿಗಳ ಮನೆಯಲ್ಲಿ ಹಬ್ಬ ಹೇಗಿತ್ತು ಎಂಬುದರ ಝಲಕ್ ಇಲ್ಲಿದೆ ನೋಡಿ.

     

    View this post on Instagram

     

    A post shared by DrShivaRajkumar (@nimmashivarajkumar)

    ಹ್ಯಾಟ್ರಿಕ್ ಹೀರೋ ಶಿವಣ್ಣ (Shivarajkumar), ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿಗುರಲಿ ಎಂದು ಸಮಸ್ತ ಜನತೆಗೆ ಸಂಕ್ರಾಂತಿ ಹಬ್ಬಕ್ಕೆ ವೀಡಿಯೋ ಮೂಲಕ ಶುಭಹಾರೈಸಿದ್ದಾರೆ. ಇದನ್ನೂ ಓದಿ: ಮ್ಯಾರೇಜ್ ಆಫರ್ ಕೊಟ್ಟವನಿಗೆ ನೋ ನೋ ಎಂದ ಅನುಶ್ರೀ

     

    View this post on Instagram

     

    A post shared by Shwetha Srivatsav (@shwethasrivatsav)

    ಸಿಂಪಲ್ ಸುಂದರಿ ಶ್ವೇತಾ ಶ್ರೀವಾಸ್ತವ್ (Shwetha Srivastav) ಸಂಕ್ರಾಂತಿ ಹಬ್ಬದಲ್ಲಿ ಮಿಂಚಿದ್ದಾರೆ. ನೀಲಿ ಸೀರೆಯುಟ್ಟು, ಕಬ್ಬು ಹಿಡಿದು ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಪೋಸ್ ನೀಡಿದ್ದಾರೆ.

     

    View this post on Instagram

     

    A post shared by Ragini Prajwal (@iamraginiprajwal)

    ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devraj) ತಮ್ಮ ಕುಟುಂಬದ ಜೊತೆ ಸಂಕ್ರಾಂತಿ ಹಬ್ಬವನ್ನ ಸೆಲೆಬ್ರೆಟ್ ಮಾಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

     

    View this post on Instagram

     

    A post shared by Amulya (@nimmaamulya)

    ಗೋಲ್ಡನ್ ಕ್ವೀನ್ ಅಮೂಲ್ಯ(Amulya), ಪತಿ ಜಗದೀಶ್ ಮತ್ತು ಅವಳಿ ಮಕ್ಕಳ ಜೊತೆ ಹಬ್ಬವನ್ನ ಖುಷಿ ಖುಷಿಯಾಗಿ ಆಚರಿಸಿದ್ದಾರೆ. ಅಮೂಲ್ಯರ ಮುದ್ದಾದ ಮಕ್ಕಳ ಜೊತೆ ಹಸು ಕೂಡ ಹೈಲೈಟ್ ಆಗಿದೆ.

     

    View this post on Instagram

     

    A post shared by Ragini dwivedi (@rraginidwivedi)

    ಬಾಲಿವುಡ್ (Bollywood) ಸಿನಿಮಾ ಸೇರಿದಂತೆ ಏಳು ಸಿನಿಮಾಗಳಲ್ಲಿ ಬ್ಯುಸಿಯಿರುವ ತುಪ್ಪದ ಬೆಡಗಿ ರಾಗಿಣಿ (Ragini Dwivedi), ಸಂಕ್ರಾಂತಿ ಹಬ್ಬದಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಕೇಸರಿ ಮತ್ತು ನೀಲಿ ಲಂಗ ದಾವಣಿಯಲ್ಲಿ ಕ್ಯೂಟ್ ಆಗಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ಕೊಟ್ಟಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಹಬ್ಬಕ್ಕೆ ಶುಭಹಾರೈಸಿದ್ದಾರೆ.

    ಟಾಲಿವುಡ್ ನಟ ವಿಜಯ್ ದೇವರಕೊಂಡ (Actor Vijay Devarakonda) ತಮ್ಮ ಸ್ನೇಹಿತರು ಮತ್ತು ಕುಟುಂಬದ ಜೊತೆ ಸಂಕ್ರಾಂತಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಹಬ್ಬದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆ ಬಗ್ಗೆ ಮೌನ ಮುರಿದ ರಾಗಿಣಿ ದ್ವಿವೇದಿ

    ಮದುವೆ ಬಗ್ಗೆ ಮೌನ ಮುರಿದ ರಾಗಿಣಿ ದ್ವಿವೇದಿ

    ಚಂದನವನದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Actress Ragini Dwivedi) ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಬಾಲಿವುಡ್ (Bollywood) ಅಂಗಳಕ್ಕೂ ನಟಿ ಲಗ್ಗೆ ಇಡ್ತಿದ್ದಾರೆ. ಹೀಗಿರುವಾಗ ಮದುವೆ, ಸಂಸಾರಿಕ ಜೀವನದ ಬಗ್ಗೆ ರಾಗಿಣಿ ಮಾತನಾಡಿದ್ದಾರೆ.

    ಕನ್ನಡದ ಚಿತ್ರರಂಗದ ಬ್ಯುಸಿ ನಟಿಯರಲ್ಲಿ ರಾಗಿಣಿ ಕೂಡ ಒಬ್ಬರು. ಹಿಂದಿ ಸೇರಿದಂತೆ ಒಟ್ಟು ಏಳು ಸಿನಿಮಾಗಳು (7 Films) ರಾಗಿಣಿ ಕೈಯಲ್ಲಿದೆ. ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಗಾಂಧಿನಗರದಲ್ಲಿ ಸ್ಟಾರ್ ಜೋಡಿಗಳ ಗಟ್ಟಿಮೇಳ ಕೂಡ ಜೋರಾಗಿದೆ. ಹರಿಪ್ರಿಯಾ ಮತ್ತು ವಸಿಷ್ಠ ಹಸೆಮಣೆ ಏರುತ್ತಿರುವ ಬೆನ್ನಲ್ಲೇ ರಾಗಿಣಿ ಅವರಿಗೂ ಕೂಡ ಮದುವೆ ಯಾವಾಗ ಎಂಬುದರ ಬಗ್ಗೆ ಪ್ರಶ್ನೆ ಎದುರಾಗಿದೆ. ಚಿತ್ರವೊಂದರ ಸುದ್ದಿಗೋಷ್ಠಿಯಲ್ಲಿ ನಟಿ ಈ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಹಿಂದಿ ಸೇರಿ ಏಳು ಸಿನಿಮಾಗಳಲ್ಲಿ ರಾಗಿಣಿ ದ್ವಿವೇದಿ ಬ್ಯುಸಿ

    ಸಾಕಷ್ಟು ಸಿನಿಮಾಗಳು ನನ್ನ ಕೈಯಲ್ಲಿದೆ. ಮದುವೆಯ ಬಗ್ಗೆ ಈಗ ನನಗೆ ಆಲೋಚನೆ ಇಲ್ಲ. ಸದ್ಯ ನನಗೆ ಕೆಲಸ ಖುಷಿ ಕೊಡ್ತಿದೆ ಎಂದು ಮಾತನಾಡಿದ್ದಾರೆ. ಎಲ್ಲರೂ ಎಂಜಾಯ್ ಮಾಡ್ತಾ ಮದುವೆಯಾಗಲಿ. ನಾನು ಮದುವೆಗೆ ಹೋಗಿ ಎಂಜಾಯ್ ಮಾಡುತ್ತೇನೆ ಎಂದು ರಾಗಿಣಿ ತಮ್ಮ ಮದುವೆಯ ಬಗ್ಗೆ ಇರುವ ಭಾವನೆಯನ್ನ ಮುಕ್ತವಾಗಿ ಮಾತನಾಡಿದ್ದಾರೆ. ಹಾಗೆಯೇ ಈ ವೇಳೆ, ಒಂದು ತಿಂಗಳು ಟೈಮ್ ಕೊಡಿ. ನಿಮಗೆ ಬಿಗ್ ಅನೌನ್ಸ್‌ಮೆಂಟ್ ಕೊಡುತ್ತೇನೆ ಎಂದು ಮಾತನಾಡಿದ್ದಾರೆ.

    ಇನ್ನೂ ರಾಗಿಣಿ, ಕನ್ನಡ, ಮಲಯಾಳಂ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಭೇಟಿಯಾದ ತುಪ್ಪದ ಬೆಡಗಿ ರಾಗಿಣಿ

    ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಭೇಟಿಯಾದ ತುಪ್ಪದ ಬೆಡಗಿ ರಾಗಿಣಿ

    ಸ್ಯಾಂಡಲ್‌ವುಡ್ ನಟಿ ರಾಗಿಣಿ (Ragini Dwivedi) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಶೂಟಿಂಗ್ ವೇಳೆ ಎಡಗೈಗೆ ಪೆಟ್ಟು ಮಾಡಿಕೊಂಡಿದ್ದ ನಟಿ ಆರೋಗ್ಯದಲ್ಲಿ ಚೇತರಿಕೆ ಕಂಡ ಬೆನ್ನಲ್ಲೇ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ (Kapil Dev) ಅವರನ್ನು ಭೇಟಿಯಾಗಿದ್ದಾರೆ.

    ಸಾಕಷ್ಟು ಸಂಕಷ್ಟಗಳನ್ನ ಎದುರಿಸಿದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ರಾಗಿಣಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಕಮಾಂಡೋ ಚಿತ್ರೀಕರಣದ ವೇಳೆ ಎಡಗೈಗೆ ಪೆಟ್ಟು ಮಾಡಿಕೊಂಡಿದ್ದರು. ಅದಕ್ಕೆ ಚಿಕಿತ್ಸೆ ಕೂಡ ಪಡೆದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಇದೀಗ ನಟಿ ಮುಂಬೈನತ್ತ ಮುಖ ಮಾಡಿದ್ದಾರೆ. ಪೆಟ್ಟು ಮಾಡಿಕೊಂಡಿದ್ದ ಕೈಗೆ ಫಿಜಿಯೋ ಥೆರಪಿ ಕೂಡ ಮಾಡಿಸಿಕೊಂಡಿದ್ದಾರೆ. ಸದ್ಯ ಮುಂಬೈನಲ್ಲಿ ಬೀಡು ಬಿಟ್ಟಿರುವ ರಾಗಿಣಿ ಕಪಿಲ್ ಅವರನ್ನ ಭೇಟಿಯಾಗಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣ ರೀತಿಯಲ್ಲಿಯೇ ಕೈ ಸನ್ನೆ ಮಾಡಿ ರಿಷಬ್ ತಿರುಗೇಟು

    ಕ್ರಿಕೆಟ್ ಲೋಕದ ಮಹಾನ್ ದಿಗ್ಗಜ ಕಪಿಲ್ ದೇವ್ ಅವರನ್ನ ಮುಂಬೈನಲ್ಲಿ ಅನಿರೀಕ್ಷಿತವಾಗಿ ಭೇಟಿಯಾಗಿ ತಮ್ಮ ಪರಿಚಯ ಮಾಡಿಕೊಂಡಿದ್ದಾರೆ. ಅವರ ಜೊತೆಗೆ ಸಾಕಷ್ಟು ಸಮಯ ಮಾತನಾಡಿದ್ದಾರೆ. ಎಲ್ಲ ಫ್ಯಾನ್ಸ್ ರೀತಿಯಲ್ಲಿಯೇ ಕಪಿಲ್ ದೇವ್ ಜೊತೆ ರಾಗಿಣಿ ಫೋಟೋ ಕ್ಲಿಕಿಸಿಕೊಂಡಿದ್ದಾರೆ. ನೆಚ್ಚಿನ ಕ್ರಿಕೆಟ್ ಆಟಗಾರನ ಜೊತೆ ಫೋಟೋ ತೆಗೆಸಿಕೊಂಡಿದ್ದಕ್ಕೆ ರಾಗಿಣಿ ಸಂಭ್ರಮದಿಂದ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸ್ವಿಮ್ ಸೂಟ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ `ರಾ’ಗಿಣಿ

    ಸ್ವಿಮ್ ಸೂಟ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ `ರಾ’ಗಿಣಿ

    ಸ್ಯಾಂಡಲ್‌ವುಡ್ ನಟಿ ರಾಗಿಣಿ ದಿನದಿಂದ ದಿನಕ್ಕೆ ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಳ್ತಿದ್ದಾರೆ. ಹೊಸ ಹೊಸ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ಈಗ ಸ್ವಿಮ್ ಸೂಟ್‌ನಲ್ಲಿ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ವೀರಮದಕರಿ, ಕೆಂಪೇಗೌಡ, ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಗಮನ ಸೆಳೆದಿರುವ ರಾಗಿಣಿ, ಈಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಬೋಲ್ಡ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಡುವ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ. ರಾಗಿಣಿಯ ನಯಾ ಲುಕ್‌ನಿಂದ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಬ್ಲ್ಯಾಕ್ ಕಲರ್ ಸ್ವಿಮ್ ಸೂಟ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ನಟಿ ಪವಿತ್ರಾ ಲೋಕೇಶ್ ನನ್ನ ಬೆಸ್ಟ್ ಫ್ರೆಂಡ್ : ಪತ್ನಿ ರಮ್ಯಾ ಆರೋಪಕ್ಕೆ ನಟ ನರೇಶ್ ತಿರುಗೇಟು

    ನಟಿ ರಾಗಿಣಿ ಸಾಕಷ್ಟು ಸಂಕಷ್ಟಗಳನ್ನು ಏದುರಿಸಿದ ನಂತರ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಕನ್ನಡ ಮತ್ತು ತಮಿಳಿನ ಸಿನಿಮಾಗಳ ಮೂಲಕ ಸೌಂಡ್ ಮಾಡಿದ್ದಾರೆ. ಈ ವರ್ಷದಲ್ಲಿ ಒಂದೊಂದೇ ಸಿನಿಮಾಗಳ ಮೂಲಕ ತೆರೆಯ ಮೇಲೆ ಅಬ್ಬರಿಸಲಿದ್ದಾರೆ.

    Live Tv