Tag: Actress Ragini

  • ನವರಾತ್ರಿಯ ದಿನ ನವ ಕನ್ಯೆಯರ ಪೂಜೆ ನೆರವೇರಿಸಿದ ರಾಗಿಣಿ

    ನವರಾತ್ರಿಯ ದಿನ ನವ ಕನ್ಯೆಯರ ಪೂಜೆ ನೆರವೇರಿಸಿದ ರಾಗಿಣಿ

    ಪ್ರತಿ ವರ್ಷದಂತೆ ಈ ವರ್ಷವೂ ನಟಿ ರಾಗಿಣಿ ದ್ವಿವೇದಿ ದಸರಾ ಹಬ್ಬವನ್ನ ಅದ್ಧೂರಿಯಾಗಿ ಆಚರಿಸಿದ್ದಾರೆ. ಈ ವಿಡಿಯೋಗಳನ್ನು ಇದೀತ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಪಂಜಾಬ್ ಮೂಲದವರಾದ ಅವರ ಕುಟುಂಬದ ಸಂಪ್ರದಾಯದ ಪ್ರಕಾರ ನವರಾತ್ರಿ ಹಬ್ಬದಲ್ಲಿ ಕನ್ಯೆಯರ ಪೂಜೆ ವಿಶೇಷ. ಹೀಗಾಗಿ ಪ್ರತಿ ವರ್ಷ ಮನೆಗೆ ಬಡ ಕುಟುಂಬದ ಹೆಣ್ಣುಮಕ್ಕಳನ್ನ ಕರೆದು ಹೂ ಮುಡಿಸಿ, ಬಳೆ ತೊಡಿಸಿ, ಊಟ ತಿಂಡಿ ಕೊಟ್ಟು ಗಿಫ್ಟ್ ಕೊಟ್ಟು ಕಳಿಸುತ್ತಾರೆ. ಈ ಪದ್ಧತಿಯನ್ನ ಕಣಜಕ್ ಪೂಜೆ ಎಂದು ಕರೆಯಲಾಗುತ್ತೆ. ಇದನ್ನೂ ಓದಿ: BBK 12| ಬಂದ ದಿನವೇ ಔಟಾಗಿದ್ದ ರಕ್ಷಿತಾ ಶೆಟ್ಟಿ ವಾಪಸ್ – ಕಿಚ್ಚಿನೊಂದಿಗೆ ರೀ ಎಂಟ್ರಿ ಕೊಟ್ಟ ಕರಾವಳಿ ಬೆಡಗಿ

    ನವರಾತ್ರಿ ಉಪವಾಸದ 9ನೇ ದಿನ 9 ಕನ್ಯೆಯರು ಹಾಗೂ 9 ಮುತೈದೆಯರಿಗೆ ಬಳೆ ಕೊಟ್ಟು ಉಡುಗೊರೆ ನೀಡಿ ಊಟ ಬಡಿಸಿ ಅವರು ಊಟ ಮಾಡಿದ ಬಳಿಕವೇ ಉಪವಾಸ ತೊರೆಯುವ ಪದ್ಧತಿ ಇರುತ್ತೆ. ಹೀಗಾಗಿ ಕುಟುಂಬದ ಸಂಪ್ರದಾಯಂತೆ ಈ ಬಾರಿಯೂ ರಾಗಿಣಿ ತಮ್ಮ ನಿವಾಸದಲ್ಲಿ 9 ಬಡ ಕುಟುಂಬದ ಹೆಣ್ಣುಮಕ್ಕಳನ್ನ ಕರೆದು ಕಣಜಕ್ ಪೂಜಾ ಕಾರ್ಯ ಪೂರೈಸಿದ್ದಾರೆ. ಇದನ್ನೂ ಓದಿ: ‘ಕಾಂತಾರ’ಗೆ ಟಿಕೆಟ್‌ ಸಿಗದ ಕಾರ್ಯಕರ್ತರಿಗೆ ಸೋಮವಾರ ವ್ಯವಸ್ಥೆ ಮಾಡುತ್ತೇನೆ: ಪ್ರತಾಪ್‌ ಸಿಂಹ

  • ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್‌ ಕೊಟ್ಟ ತುಪ್ಪದ ಹುಡುಗಿ ರಾಗಿಣಿ

    ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್‌ ಕೊಟ್ಟ ತುಪ್ಪದ ಹುಡುಗಿ ರಾಗಿಣಿ

    ಸ್ಯಾಂಡಲ್‌ವುಡ್ ಚೆಲುವೆ ರಾಗಿಣಿ ದ್ವಿವೇದಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಿದ್ದಾರೆ. ಕೈತುಂಬಾ ಸಿನಿಮಾಗಳಿರುವ ರಾಗಿಣಿ ಕೊಂಚ ಬಿಡುವು ಮಾಡಿಕೊಂಡು ಟ್ರಾವೆಲಿಂಗ್ ಮೂಡ್‌ನಲ್ಲಿದ್ದಾರೆ. ಇದೀಗ ಸುಂದರ ತಾಣದಲ್ಲಿ ನಿಂತು ಹಾಟ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿ, ಪಡ್ಡೆಹುಡುಗರ ಟೆಂಪ್ರೇಚರ್ ಹೆಚ್ಚಿಸಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ಕೆಂಪೇಗೌಡ, ವೀರ ಮದಕರಿ, ಹೀಗೆ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟಿ ರಾಗಿಣಿ, ಸಿನಿಮಾಗಳ ವಿಚಾರವಾಗಿ ಅದೆಷ್ಟು ಸುದ್ದಿಯಾಗುತ್ತಾರೋ, ಅಷ್ಟೇ ಹಾಟ್ ಫೋಟೋಶೂಟ್‌ಗಳ ಮೂಲಕ ಸುದ್ದಿಯಾಗುತ್ತಾರೆ. ಇದೀಗ ಶಾರ್ಟ್ಸ್ ಮತ್ತು ಕ್ರಾಪ್ ಟಾಪ್ ಧರಿಸಿ ಬೋಲ್ಡ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಇನ್ನು ರಾಗಿಣಿಯ ಹಾಟ್‌ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಇದನ್ನೂ ಓದಿ: ಡಾ.ರಾಜ್‌ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿ ಮಹತ್ತರ ಸಾಧನೆ: 8 ಮಂದಿ ಯುಪಿಎಸ್‌ಸಿ ರ‍್ಯಾಂಕ್

     

    View this post on Instagram

     

    A post shared by Ragini dwivedi (@rraginidwivedi)

    ಇನ್ನು ರಾಗಿಣಿ ಲಿಸ್ಟ್ನಲ್ಲಿ ಸಾರಿ ಕರ್ಮ ರಿಟರ್ನ್ಸ್, ಗಾಂಧಿಗಿರಿ ಸೇರಿದಂತೆ ತಮಿಳಿನ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಬಗೆಯ ಪಾತ್ರಗಳ ಮೂಲಕ ರಂಜಿಸಲು ತುಪ್ಪದ ಬೆಡಗಿ ರಾಗಿಣಿ ಸಜ್ಜಾಗಿದ್ದಾರೆ.

  • ತುಪ್ಪದ ಬೆಡಗಿ ರಾಗಿಣಿಯ ನ್ಯೂ ಫೋಟೋಶೂಟ್

    ತುಪ್ಪದ ಬೆಡಗಿ ರಾಗಿಣಿಯ ನ್ಯೂ ಫೋಟೋಶೂಟ್

    ಸೌಂದರ್ಯದ ಜೊತೆ ಪ್ರತಿಭೆಯಿರೋ ಸ್ಯಾಂಡಲ್‌ವುಡ್ ಮುದ್ದು ನಟಿ ರಾಗಿಣಿ ದ್ವಿವೇದಿ, ಕಿಚ್ಚ ಸುದೀಪ್‌ಗೆ ನಾಯಕಿಯಾಗುವ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ್ರು. ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಕಲರ್‌ಫುಲ್ ಫೋಟೋಶೂಟ್‌ನಿಂದ ಗಮನ ಸೆಳೆಯುತ್ತಿದ್ದಾರೆ. ಸದ್ಯ ರಾಗಿಣಿ ನಯಾ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗ್ತಿದೆ.

    `ತುಪ್ಪ ಬೇಕಾ ತುಪ್ಪ’ ಅಂತಾ ಗಂಡ್ ಹೈಕ್ಳ ಹಾರ್ಟಿಗೆ ಲಗ್ಗೆಯಿಟ್ಟ ಸುಂದರಿ ರಾಗಿಣಿ ಮತ್ತೆ ಸಿನಿಮಾಗಳತ್ತ ಆಕ್ಟೀವ್ ಆಗಿದ್ದಾರೆ. ರಾಗಿಣಿ ಲಿಸ್ಟ್ನಲ್ಲಿ ಕೈತುಂಬಾ ಚಿತ್ರಗಳಿವೆ. ಶೂಟಿಂಗ್ ಮಧ್ಯೆ ಸ್ವಲ್ಪ ಫ್ರೀ ಮಾಡಿಕೊಂಡು, ಇದೀಗ ನಟಿ ಬೋಲ್ಡ್ ಲುಕ್ಕಿನಲ್ಲಿ ಕಣ್ಣು ಕುಕ್ಕುವಂತೆ ಫೋಟೋಶೂಟ್ ಮಾಡಿಸಿದ್ದಾರೆ.

    ಕಲರ್‌ಫುಲ್ ಲುಕ್ಕಿನಲ್ಲಿ ಬೋಲ್ಡ್ ಅವತಾರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾಗಿಣಿ ನ್ಯೂ ಲುಕ್ ನೋಡಿ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಇದನ್ನೂ ಓದಿ:‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    View this post on Instagram

     

    A post shared by Ragini dwivedi (@rraginidwivedi)

    ಸದ್ಯ ರಾಗಿಣಿ ಕೈಯಲ್ಲಿ `ಸಾರಿ ಕರ್ಮ ರಿಟನ್ಸ್’, `ಒನ್ ಟು ಒನ್’,`ಜಾನಿವಾಕರ್’, ಮತ್ತು `ಕರ್ವ 3′ ಚಿತ್ರಗಳಿವೆ. ಕನ್ನಡ ಮಾತ್ರವಲ್ಲದೇ ಪರಭಾಷಾ ಚಿತ್ರಗಳಲ್ಲೂ ಬ್ಯುಸಿಯಾಗಿದ್ದಾರೆ. ರಾಗಿಣಿ ನಟನೆಯ ಚಿತ್ರಗಳಿಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

  • ಕೆಲವು ಜೀವಗಳನ್ನು ಉಳಿಸಲು ಸಹಾಯವಾಗುತ್ತದೆ, ರಕ್ತದಾನ ಮಾಡಿ: ರಾಗಿಣಿ

    ಕೆಲವು ಜೀವಗಳನ್ನು ಉಳಿಸಲು ಸಹಾಯವಾಗುತ್ತದೆ, ರಕ್ತದಾನ ಮಾಡಿ: ರಾಗಿಣಿ

    ಬೆಂಗಳೂರು: ಕೋವಿಡ್ ಸಂಕಷ್ಟದಿಂದಾಗಿ ಕಷ್ಟದಲ್ಲಿರುವ ಕುಟುಂಬಗಳಿಗೆ ದಿನಸಿ ಕಿಟ್ ಹಾಗೂ ಆಹಾರ ಪೆÇಟ್ಟಣ್ಣ ನೀಡುವ ಮೂಲಕ ರಾಗಿಣಿ ದ್ವಿವೇದಿ ನೆರವಾಗುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವ ಮುನ್ನ ರಕ್ತದಾನ ಮಾಡಿ ಎಂದು ಜಾಗೃತಿ ಮೂಡಿಸುತ್ತಿದ್ದಾರೆ.

    ನಟಿ ರಾಗಿಣಿ ದ್ವಿವೇದಿ ಇಂದು ರಕ್ತದಾನ ಮಾಡಿದ್ದಾರೆ. ಇಂದು ವಿಶೇಷ ದಿನವಾಗಿದೆ. ರಕ್ತ ಮತ್ತು ಪ್ಲಾಸ್ಮಾಕ್ಕೆ ತುಂಬಾ ಅಗತ್ಯವಿರುವುದರಿಂದ ನಾನು ರಕ್ತದಾನವನ್ನು ಮಾಡಿದ್ದೇನೆ. ಕೆಲವು ಜೀವಗಳನ್ನು ಉಳಿಸಲು ಸಹಾಯವಾಗುತ್ತದೆ. ರಕ್ತದಾನವನ್ನು ಮಾಡಿ ಎಂದು ಮನವಿ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ರಾಗಿಣಿ ರಕ್ತ ದಾನ ಮಾಡಿ ಅಭಿಮಾನಿಗಳಿಗೂ ರಕ್ತದಾನ ಮಾಡುವಂತೆ ಮನವಿ ಮಾಡಿದ್ದಾರೆ. ಸದ್ಯ ಎಲ್ಲೆಡೆ ಕೊರೊನಾ ಭೀತಿಯಿಂದಾಗಿ ಜನರು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಒಮ್ಮೆ ಯಾವುದೇ ಲಸಿಕೆ ಹಾಕಿಸಿಕೊಂಡರೆ 28 ದಿನಗಳ ಕಾಲ ರಕ್ತದಾನ ಮಾಡುವಂತಿಲ್ಲ. ಬೇರೆ ರೋಗಿಗಳಿಗೆ, ಅಪಘಾತಕ್ಕೊಳಗಾದವರು ಸೇರಿದಂತೆ ಹಲವರಿಗೆ ರಕ್ತದ ಅಭಾವ ಎದುರಾಗಲಿದೆ ಎಂದು ಸಾಕಷ್ಟು ಮಂದಿ ಸೆಲೆಬ್ರಿಟಿಗಳು ರಕ್ತದಾನ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಅಂತೆಯೇ ರಾಗಿಣಿ ಸಹ ಇಂದು ರಕ್ತದಾನ ಮಾಡುವ ಮೂಲಕ ಮನವಿ ಮಾಡಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ರಾಗಿಣಿ ಕೊರೊನಾದಿಂದಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸುವ ಮೂಲಕ ನೆರವಾಗಿದ್ದಾರೆ. ನಿತ್ಯ ಆಹಾರ ಪೆÇಟ್ಟಣ್ಣಗಳನ್ನು ಅಗತ್ಯವಿರುವವರಿಗೆ ವಿತರಿಸುವ ಕೆಲಸ ಮಾಡುತ್ತಿದ್ದಾರೆ. ಸೆಲೆಬ್ರೆಟಿ ಸ್ಟಾರ್‍ಗಳು ಹಲವರು ಸಹಾಯವನ್ನು ಮಾಡುತ್ತಿದ್ದಾರೆ.

  • ರಾಗಿಣಿಗೆ ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ

    ರಾಗಿಣಿಗೆ ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ

    ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟಿ ರಾಗಿಣಿ ದ್ವಿವೇದಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದಿನ ವಾರಕ್ಕೆ ಮುಂದೂಡಿದೆ.

    ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಗಿಣಿ ಸಲ್ಲಿಸಿದ್ದ ಜಾಮೀನು ಅರ್ಜಿ ಮತ್ತು ಪ್ರಕರಣ ನಂಬರ್ 1 ಆರೋಪಿ ಶಿವಪ್ರಕಾಶ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಒಗ್ಗೂಡಿಸಿ ನ್ಯಾ.ನಾಗೇಶ್ವರಾವ್ ನೇತೃತ್ವದ ತ್ರಿ ಸದಸ್ಯ ಪೀಠ ವಿಚಾರಣೆ ನಡೆಸಿತು. ವಿಚಾರಣೆಗೂ ಮುನ್ನ ಅನಾರೋಗ್ಯ ಹಿನ್ನಲೆ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಆರೋಪಿ ಶಿವಪ್ರಕಾಶ್ ಮನವಿ ಮಾಡಿದ ಹಿನ್ನಲೆ ವಿಚಾರಣೆ ಮುಂದೂಡಲಾಯಿತು. ಸೋಮವಾರ ಬದಲಿ ಪೀಠದಲ್ಲಿ ವಿಚಾರಣೆ ನಡೆಯುವ ಸಾಧ್ಯತೆಗಳಿವೆ.

    ಈ ಹಿಂದೆ ಸಹ ಜಾಮೀನು ಅರ್ಜಿ ವಿಚಾರಣೆಯನ್ನು ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್ ಜನವರಿ ಮೊದಲ ವಾರಕ್ಕೆ ಮುಂದೂಡಿತ್ತು. ಈ ಹಿನ್ನೆಲೆಯಲ್ಲಿ ಹೊಸ ವರ್ಷವನ್ನು ಸಹ ನಟಿ ಜೈಲಿನಲ್ಲೇ ಬರಮಾಡಿಕೊಳ್ಳುವಂತಾಗಿತ್ತು.

    ಕೋರ್ಟ್, ರಾಜ್ಯ ಸರ್ಕಾರ ಹಾಗೂ ಸಿಸಿಬಿ ಪೊಲೀಸರಿಗೂ ನೋಟಿಸ್ ನೀಡಲಾಗಿತ್ತು. ಅಲ್ಲದೆ ಅರ್ಜಿ ವಿಚಾರಣೆಯನ್ನು ಜನವರಿಗೆ ಮುಂದೂಡಿತ್ತು. ಆದರೆ ಇಂದು ವಿಚಾರಣೆ ಆರಂಭವಾಗುವುದಕ್ಕೂ ಮುನ್ನ ಆರೋಪಿ ಶಿವಪ್ರಕಾಶ್ ಅನಾರೋಗ್ಯದ ಹಿನ್ನೆಲೆ ಮನವಿ ಮಾಡಿದ್ದಕ್ಕೆ ಮತ್ತೆ ವಿಚಾರಣೆಯನ್ನು ಮುಂದೂಡಿದೆ.

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಸೆಪ್ಟೆಂಬರ್ 4ರಂದು ತುಪ್ಪದ ಬೆಡಗಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರಾಗಿಣಿ, ಕೆಳ ನ್ಯಾಯಾಲಯದಲ್ಲಿ ಜಾಮೀನು ಸಿಗದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

  • ನಟಿ ರಾಗಿಣಿ ಜೊತೆ ನಂಟು- ಬಂಧನ ಭೀತಿಯಲ್ಲಿ ಜಾಮೀನು ಪಡೆದ ಕೈ ಮುಖಂಡ

    ನಟಿ ರಾಗಿಣಿ ಜೊತೆ ನಂಟು- ಬಂಧನ ಭೀತಿಯಲ್ಲಿ ಜಾಮೀನು ಪಡೆದ ಕೈ ಮುಖಂಡ

    ಹುಬ್ಬಳ್ಳಿ: ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿರುವ ನಟಿ ರಾಗಿಣಿ ಜೊತೆ ನಂಟು ಹೊಂದಿದ್ದ ಕೈ ನಾಯಕ ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

    ನಟಿ ರಾಗಿಣಿ ಬಂಧನದ ನಂತರ ಹುಬ್ಬಳ್ಳಿ ಕಾಂಗ್ರೆಸ್ ಮುಖಂಡ, ಮಾಜಿ ಸಚಿವರ ಆಪ್ತರನಾಗಿರುವ ಗಿರೀಶ್ ಗದಿಗೆಪ್ಪಗೌಡರ ನಟಿ ರಾಗಿಣಿ ಜೊತೆ ನಂಟು ಹೊಂದಿದ್ದು, ಬೆಳಕಿಗೆ ಬಂದಿತ್ತು. ಈ ಹಿನ್ನಲೆಯಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ಕೈ ನಾಯಕ ಗದಿಗೆಪ್ಪಗೌಡರನ್ನ ತ್ರೀವ ವಿಚಾರಣೆ ಒಳಪಡಿಸಿದ್ದರು. ಹೀಗಾಗಿ ಬಂಧನದ ಭೀತಿ ಎದುರಿಸುತ್ತಿದ್ದ ಗದಿಗೆಪ್ಪಗೌಡರ್ ಧಾರವಾಡದ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.

    ನಟಿ ರಾಗಿಣಿ ಜೊತೆ ಹೊಂದಿದ ನಂಟು ಹಾಗೂ ಗೋವಾದ ಕ್ಯಾಸಿನೋ ಉದ್ಘಾಟನೆಯನ್ನು ನಟಿ ರಾಗಿಣಿ ನೇರವೇರಿಸಿದ ಬಗ್ಗೆ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ಗಿರೀಶ್ ಗದಿಗೆಪ್ಪಗೌಡರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಆದರೂ ಬಂಧನದ ಭೀತಿಯಿಂದ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕರು ಗಿರೀಶ್ ಗದಿಗೆಪ್ಪಗೌಡರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಜಾಮೀನು ನೀಡುವ ಅವಶ್ಯಕತೆ ಇಲ್ಲವೆಂದು ವಾದಿಸಿದ್ದರು. ಆದರೆ ಬಂಧನ ಭೀತಿ ಬಗ್ಗೆ ಗದಿಗೆಪ್ಪಗೌಡರ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿ ಕೆಲ ಉದಾಹರಣಗಳ ಹಾಗೂ ಸಾಂದರ್ಭಿಕ ಘಟನೆಗಳ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿ ನಿರೀಕ್ಷಣಾ ಜಾಮೀನಿನ ಬಗ್ಗೆ ಪ್ರಸ್ತಾಪಿಸಿದ್ದರು.

    ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಹಾಗೂ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಬಂಧನ ಮಾಡುವ ಪ್ರಸಂಗ ಎದುರಾದರೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಧೀಶರು ಆದೇಶ ಮಾಡಿದ್ದಾರೆ. ಆದರೆ ಪ್ರಕರಣ ದಾಖಲಾಗುವ ಮುನ್ನವೇ ಕೈ ನಾಯಕ ಗಿರೀಶ್ ಗದಿಗೆಪ್ಪಗೌಡರ ನಿರೀಕ್ಷಣಾ ಜಾಮೀನು ಪಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.

  • ಇವತ್ತು ನಟಿ ರಾಗಿಣಿ, ಸಂಜನಾ ಬೇಲ್ ಭವಿಷ್ಯ

    ಇವತ್ತು ನಟಿ ರಾಗಿಣಿ, ಸಂಜನಾ ಬೇಲ್ ಭವಿಷ್ಯ

    – ಮತ್ತೆ ಜೈಲೇ ಗತಿನಾ ಅಥವಾ ರಿಲೀಸ್ ಆಗ್ತಾರಾ?

    ಬೆಂಗಳೂರು: ನಟಿ ರಾಗಿಣಿ ಮತ್ತು ಸಂಜನಾ ಸಲ್ಲಿಸಿರುವ ಬೇಲ್ ಅರ್ಜಿಯ ವಿಚಾರಣೆ ಇಂದು ಬೆಂಗಳೂರಿನ ಎನ್‍ಡಿಪಿಎಸ್ ಕೋರ್ಟಿನಲ್ಲಿ ನಡೆಯಲಿದೆ.

    ಸದ್ಯ ಇಬ್ಬರೂ ನಟಿಯರು ನ್ಯಾಯಾಂಗ ಬಂಧನದಡಿ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಸೋಮವಾರ ರಾಗಿಣಿ ಮತ್ತು ಸಂಜನಾ ಅವರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು. ಆದರೆ ನ್ಯಾಯಾಲಯ ಇಬ್ಬರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.24ಕ್ಕೆ ಮುಂದೂಡಿತ್ತು. ಪರಿಣಾಮ ನಟಿಯರು ಜೈಲಿನಲ್ಲೇ ಸಮಯ ಕಳೆದಿದ್ದರು.

    ಈಗಾಗಲೇ ರಾಗಿಣಿ, ಸಂಜನಾ ಅವರ ಜಾಮೀನು ನಿರಾಕರಿಸಲಿ ಸಿಸಿಬಿ ಪೊಲೀಸರು ಪುಟಗಟ್ಟಲೇ ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ. ಸಿಸಿಬಿಯ ಪರ ವಕೀಲರು ಇಂದು ವಾದ ಮಂಡನೆ ಮಾಡಲಿದ್ದು, ನಟಿ ರಾಗಿಣಿಗೆ ಸಿಸಿಬಿ ಪರ ವಕೀಲ ವಾದ ಮುಳುವಾಗಲಿದ್ಯಾ ಎಂಬ ಪ್ರಶ್ನೆ ಮೂಡಿದೆ.

    ಸಿಸಿಬಿ ಆಕ್ಷೇಪಣೆ ಏನು?

    ಈಗಾಗಲೇ ಸಾಕ್ಷ್ಯ ನಾಶದ ಆರೋಪ ಇದೆ. ಹೀಗಾಗಿ ಮತ್ತೆ ಸಾಕ್ಷ್ಯ ನಾಶ ಮಾಡ್ತಾರೆ. ಇವರಿಂದ ಮತ್ತಷ್ಟು ಆರೋಪಿಗಳು ಬಚವಾಗೋ ಸಾಧ್ಯತೆ ಇದೆ. ಕಳೆದ 5 ವರ್ಷಗಳಿಂದ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ತನ್ನ ಇತರ ಮೆಂಬರ್ಸ್ ಜೊತೆ ಸೇರಿ ಪಾರ್ಟಿಗಳ ಆಯೋಜನೆ ಮಾಡಿದ್ದಾರೆ. ಪಾರ್ಟಿಗೆ ಬಂದವರಿಗೆ ಡ್ರಗ್ ಸಪ್ಲೆ ಮಾಡಿದ್ದಾರೆ. ಆಂಧ್ರ, ಗೋವಾ, ಪಂಜಾಬ್ ಮತ್ತು ಬಾಂಬೆ ಸೇರಿದಂತೆ ಕೆಲ ವಿದೇಶಿಗರಿಂದಲೂ ಡ್ರಗ್ಸ್ ತರಿಸಿಕೊಂಡಿದ್ದಾರೆ.

    ಜಾಮೀನು ನೀಡಿದರೇ ಸಾಕ್ಷಿ ನಾಶ ಮಾಡುವ ಸಾಧ್ಯತೆಗಳಿವೆ. ಪ್ರಕರಣದಲ್ಲಿ ರಾಗಿಣಿ ನೇರ ಪಾತ್ರವಿದ್ದು, ಪ್ರಭಾವಿಗಳಾಗಿರುವ ಕಾರಣ ಸಾಕ್ಷಿಗಳ ಮೇಲೆ ಒತ್ತಡ ಹಾಕುವ ಸಾಧ್ಯತೆ ಇದೆ. ಹಲವು ಡ್ರಗ್ ಪೆಡ್ಲರ್ ಗಳು ನಾಪತ್ತೆಯಾಗಿದ್ದಾರೆ. ಇವರು ಕ್ರಿಮಿನಲ್ ಆರೋಪದಲ್ಲಿ ಬಂಧಿತರಾಗಿದ್ದು, ಬೇಲ್ ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಲಿದೆ. ಆಕೆ ತಾನು ಡ್ರಗ್ ವಿರುದ್ಧ ಕ್ಯಾಂಪೇನ್ ಮಾಡುವ ಮೂಲಕ ಆಕೆಯ ಮತ್ತೊಂದು ಮುಖ ಬಚ್ಚಿಟ್ಟಿದ್ದಾರೆ. ಆರೋಪಿಯ ವಿರುದ್ಧ ಅನೇಕ ಡಿಜಿಟಲ್ ಸಾಕ್ಷಿಗಳು ಲಭ್ಯವಾಗಿದ್ದು, ಮೊಬೈಲ್ ಪಾಸ್ ವರ್ಡ್ ನೀಡದೇ ಕಿರಿಕಿರಿ ಮಾಡಿದ್ರು. ವಿಚಾರಣೆ ವೇಳೆ ತನಿಖೆ ಸಹಕರಿಸಿಲ್ಲ. ಬೇರೆ ಎಲ್ಲಾ ಆರೋಪಿಗಳು ಇವರ ಪಾತ್ರದ ಬಗ್ಗೆ ಹೇಳಿದ್ದಾರೆ ಎಂಬುದು ಆಕ್ಷೇಪಣೆಯ ಪ್ರಮುಖ ಅಂಶಗಳಾಗಿವೆ.

  • ಮಧ್ಯರಾತ್ರಿವರೆಗೂ ಕಣ್ಣೀರಾಕುತ್ತಾ ಕುಳಿತ ರಾಗಿಣಿ – ಬುಕ್ ಓದಿದ ನಂತ್ರ ಜಂಖಾನ ಹಾಸ್ಕೊಂಡು ನಟಿ ನಿದ್ದೆ

    ಮಧ್ಯರಾತ್ರಿವರೆಗೂ ಕಣ್ಣೀರಾಕುತ್ತಾ ಕುಳಿತ ರಾಗಿಣಿ – ಬುಕ್ ಓದಿದ ನಂತ್ರ ಜಂಖಾನ ಹಾಸ್ಕೊಂಡು ನಟಿ ನಿದ್ದೆ

    – ರಾಗಿಣಿಗೆ ಜೈಲ್‍ನಲ್ಲಿ ವಿಚಾರಣಾಧೀನ ಕೈದಿ ನಂಬರ್

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ ಮಾಫಿಯಾ ಕೇಸಲ್ಲಿ ನಟಿ ರಾಗಿಣಿ ದ್ವಿವೇದಿ ಜೈಲು ಪಾಲಾಗಿದ್ದಾರೆ. ಸಿಸಿಬಿ ಕಸ್ಟಡಿಯ ಅಂತ್ಯವಾದ ಹಿನ್ನೆಲೆಯಲ್ಲಿ ರಾಗಿಣಿಯನ್ನು 1ನೇ ಎಸಿಎಂಎಂ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟಿ ರಾಗಿಣಿ ಮೊದಲ ದಿನ ಸರಿಯಾಗಿ ನಿದ್ದಯಿಲ್ಲದೆ ಕಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಡ್ರಗ್ಸ್ ಕೇಸ್‍ನಲ್ಲಿ ಕನ್ನಡದ ಮೊದಲ ನಟಿ ಜೈಲಿಗೆ – ಕೋರ್ಟಿನಲ್ಲಿ ಇಂದು ಏನೇನಾಯ್ತು?

    ಜೈಲಿನಲ್ಲಿ ರಾತ್ರಿ ಸಿಸಿಬಿಯವರು ಕೊಟ್ಟಿದ್ದ ರಾತ್ರಿ ಊಟ ತಿಂದಿದ್ದಾರೆ. ರೋಟಿ, ದಾಲ್ ತಿಂದು ಜೈಲು ರಾತ್ರಿಯ ವಾಸ್ತವ್ಯಕ್ಕೆ ನಟಿ ಅಣಿಯಾಗಿದ್ದು, ಮೊದಲ ಬಾರಿ ಜೈಲು ಸೇರಿದ ನಟಿಗೆ ತಡ ರಾತ್ರಿವರೆಗೂ ನಿದ್ದೆ ಬಂದಿಲ್ಲವಂತೆ. ಜೈಲಾಧಿಕಾರಿಗಳು ಜಂಖಾನ, ಒಂದು ಬೆಡ್ ಶೀಟ್ ಮತ್ತು ದಿಂಬು ಕೊಟ್ಟಿದ್ದರು. ಕ್ವಾರೆಂಟೈನ್ ವಾರ್ಡಿನಲ್ಲಿ ಫ್ಯಾನ್ ಬಿಟ್ಟರೆ ಬೇರೆ ಯಾವ ಸವಲತ್ತು ಇಲ್ಲ. ಹೀಗಾಗಿ ನೆಲದ ಮೇಲೆ ಜಂಖಾನ ಹಾಸಿಕೊಂಡು ಮಧ್ಯರಾತ್ರಿಯ ನಂತರ ನಟಿ ರಾಗಿಣಿ ನಿದ್ದೆಗೆ ಜಾರಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಜೈಲುಪಾಲಾದ ರಾಗಿಣಿಗೆ ಕಣ್ಣೀರ ವಿದಾಯ ಹೇಳಿದ ಸಂಜನಾ

    ತುಂಬಾ ಸಮಯದವರೆಗೂ ಮಹಿಳಾ ವಾರ್ಡಿನ ಕ್ವಾರೆಂಟೈನ್ ರೂಮಿನಲ್ಲಿ ನಟಿ ರಾಗಿಣಿ ಅಳುತ್ತಿದ್ದರು ಎಂದು ತಿಳಿದುಬಂದಿದೆ. ಬಳಿಕ ಜೈಲಿಗೆ ಬರುವ ಮುನ್ನ ತಂದಿದ್ದ ಪುಸ್ತಕವನ್ನು ಓದಿದ್ದಾರೆ. ತಡರಾತ್ರಿಯ ನಂತರ ನಿದ್ದೆ ಮಾಡಿದ್ದಾರೆ. ಮುಂಜಾನೆ ಆಗುತ್ತಿದ್ದಂತೆ ಕನ್ನಡ, ಇಂಗ್ಲೀಷ್ ಪೇಪರ್ ಓದಿದ್ದಾರೆ. ರಾಗಿಣಿ ಸೆಲೆಬ್ರಿಟಿ ಆಗಿರುವುದರಿಂದ ಜೈಲ್ ಕ್ವಾರಂಟೈನ್‍ನಲ್ಲಿ ಇತರೆ ಆರೋಪಿಗಳು ಅವರನ್ನು ಮಾತನಾಡಿಸಲು ಯತ್ನಿಸಿದ್ದಾರೆ. ಆದರೆ ಜೈಲು ಕ್ವಾರಂಟೈನ್‍ನಲ್ಲಿ ರಾಗಿಣಿ ಹೆಚ್ಚಾಗಿ ಯಾರನ್ನು ಮಾತನಾಡಿಸಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಡ್ರಗ್ಸ್‌ ಕೇಸ್‌ – ರಾಗಿಣಿ 14 ದಿನ ಜೈಲುಪಾಲು

    ಕಳೆದ 12 ದಿನಗಳಿಂದ ಸಿಸಿಬಿ ಕಸ್ಟಡಿಯಲ್ಲಿದ್ದ ನಟಿ ರಾಗಿಣಿ ಮುಂದಿನ 14 ದಿನ ಅಂದರೆ ಸೆಪ್ಟೆಂಬರ್ 28ರವರೆಗೆ ಪರಪ್ಪನ ಅಗ್ರಹಾರ ಜೈಲಲ್ಲಿ ಇರಲಿದ್ದಾರೆ. ಸಿಸಿಬಿ ಅಧಿಕಾರಿಗಳು ತಮ್ಮ ಕಸ್ಟಡಿಗೆ ಕೇಳದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ರಾಗಿಣಿಯನ್ನು ಪರಪ್ಪನ ಅಗ್ರಹಾರದಲ್ಲಿರೋ ಸೆಂಟ್ರಲ್ ಜೈಲಿಗೆ ಕಳಿಸಿದ್ದಾರೆ. ಮಡಿವಾಳದ ಎಫ್‍ಎಸ್‍ಎಲ್ ಕೇಂದ್ರದಿಂದ ಸೋಮವಾರ ಸಂಜೆ 7 ಗಂಟೆ ಹೊತ್ತಿಗೆ ನಟಿ ರಾಗಿಣಿ ಸೇರಿ ಐವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.

    ಮಡಿವಾಳದ ಎಫ್‍ಎಸ್‍ಎಲ್ ಕೇಂದ್ರದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಗಿಣಿಯನ್ನು 1ನೇ ಎಸಿಎಂಎಂ ಕೋರ್ಟ್ ಜಡ್ಜ್ ಎದುರು ಹಾಜರು ಪಡಿಸಲಾಗಿತ್ತು. ಈ ವೇಳೆ ರಾಗಿಣಿ ತಮಗೆ ಆರೋಗ್ಯ ಸಮಸ್ಯೆ ಇದೆ. ಖಾಸಗಿ ಆಸ್ಪತ್ರೆಗೆ ಅವಕಾಶ ಕೊಡಿ ಎಂದಿದ್ದಾರೆ. ಆದರೆ ಜಡ್ಜ್ ಇದಕ್ಕೆ ನಿರಾಕರಿಸಿದ್ದಾರೆ.

     

    ಡ್ರಗ್ಸ್ ಕೇಸಲ್ಲಿ ರಾಗಿಣಿ ಜೊತೆ ಇನ್ನೂ ಐವರು ಕೂಡ ಪರಪ್ಪನ ಅಗ್ರಹಾರ ಸೇರಿದ್ದಾರೆ. ಆರೋಪಿನ ನಂಬರ್ 2 ರಾಗಿಣಿ ಜೊತೆಗೆ, ಆರೋಪಿ 4 ಪ್ರಶಾಂತ್ ರಾಂಕಾ, ಆರೋಪಿ 7 ಇಂಟರ್ ನ್ಯಾಷನಲ್ ಡ್ರಗ್ಸ್ ಸಪ್ಲೈಯರ್ ಲೂಮ್ ಪೆಪ್ಪರ್, ಸಂಜನಾ ಆಪ್ತ ಆರೋಪಿ ನಂಬರ್ 11ರ ರಾಹುಲ್ ಶೆಟ್ಟಿ ಹಾಗೂ ಆರೋಪಿ ನಂಬರ್ 13 ನಿಯಾಜ್ ಅಹ್ಮದ್ ಒಟ್ಟಿಗೆ ಐದು ಜನ ಕಂಬಿ ಎಣಿಸುತ್ತಿದ್ದಾರೆ.

  • ಕೋರ್ಟ್ ಆದೇಶ ಹೊರಬರುತ್ತಿದ್ದಂತೆ ರಾಗಿಣಿ-ಸಂಜನಾ ಕಣ್ಣೀರು

    ಕೋರ್ಟ್ ಆದೇಶ ಹೊರಬರುತ್ತಿದ್ದಂತೆ ರಾಗಿಣಿ-ಸಂಜನಾ ಕಣ್ಣೀರು

    ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಬಂಧನದಲ್ಲಿರುವ ನಟಿಯರಾದ ರಾಗಿಣಿ, ಸಂಜನಾ ಅವರ ಸಿಸಿಬಿ ಕಸ್ಟಡಿಯನ್ನು ನ್ಯಾಯಾಲಯ ಸೆ.14ರ ವರೆಗೂ ಮುಂದುವರಿಸಿ ಆದೇಶ ನೀಡಿದೆ. ಕೋರ್ಟ್ ಆದೇಶ ಹೊರಬರುತ್ತಿದ್ದಂತೆ ಇಬ್ಬರೂ ಕಣ್ಣೀರಿಟ್ಟಿದ್ದಾರೆ ಎಂಬ ಮಾಹಿತಿ ಸದ್ಯ ಲಭ್ಯವಾಗಿದೆ.

    ಇಂದು ಸುಮಾರು 45 ನಿಮಿಷಗಳ ಕಾಲ ವಾದ-ಪ್ರತಿವಾದ ಆಲಿಸಿದ ಕೋರ್ಟ್ ಬಳಿಕ ತನ್ನ ಆದೇಶವನ್ನು ನೀಡಿತ್ತು. ಆದರೆ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಸಿಸಿಬಿ ಪೊಲೀಸರು ರಾಗಿಣಿ, ಸಂಜನಾರನ್ನು ಹಾಜರು ಪಡಿಸಿದ್ದರು. ವಾದ-ಪ್ರತಿವಾದ ಮುಗಿದ ನಂತರ ತೀವ್ರ ಆತಂಕಗೊಂಡಿದ್ದ ಇಬ್ಬರು ನಟಿಯರು, ಕೊಠಡಿಯಲ್ಲಿ ಕುಳಿತ್ತಿದ್ದರು. ತೀರ್ಪಿಗೂ ಮುನ್ನ ವಿಡಿಯೋ ಕಾನ್ಫರೆನ್ಸ್ ಕಟ್ ಆಗಿದ್ದ ಕಾರಣ, ಇನ್ಸ್ ಪೆಕ್ಟರ್ ಅಂಜುಮಾಲ ಅವರಿಂದ ಆದೇಶದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಇದನ್ನೂ ಓದಿ: ಸಿಕ್ಕಾಕೊಂಡ್ರರೆ ನಾವು ಮತ್ತೆ ಜೈಲಿಗೆ ಹೋಗ್ಬೇಕಾಗುತ್ತೆ- ಆಸ್ಪತ್ರೆಯಲ್ಲಿ ನಟಿ ರಾಗಿಣಿ ಕಿರಿಕ್

    ಆದೇಶದಂತೆ ಮತ್ತೆ ಮೂರು ದಿನಗಳ ಕಾಲ ಕಸ್ಟಡಿ ಎಂದ ಕೂಡಲೇ ರಾಗಿಣಿ ಮತ್ತು ಸಂಜನಾ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಯಾರೊಂದಿಗೂ ಮಾತಾಡದೇ ಇಬ್ಬರು ಮೌನವಾಗಿ ಕೊಠಡಿಯಲ್ಲಿ ಉಳಿದುಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದನ್ನೂ ಓದಿ: ನಟಿ ಸಂಜನಾ ಸೇರಿ ಉಳಿದ ಆರೋಪಿಗಳೂ 3 ದಿನ ಸಿಸಿಬಿ ಕಸ್ಟಡಿಗೆ

    ಲಭ್ಯ ಮಾಹಿತಿಯ ಅನ್ವಯ, ನ್ಯಾಯಾಂಗ ಬಂಧನ ನೀಡಿದಿದ್ದರೆ ಜಾಮೀನು ಪಡೆಯುವುದು ಸುಲಭವಾಗುತ್ತಿತ್ತು. ಅಲ್ಲದೇ ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಪೊಲೀಸರ ವಿಚಾರಣೆ ಎದುರಿಸಬೇಕು ಎಂಬ ಚಿಂತನೆಯನ್ನು ನಟಿಯರಿಬ್ಬರು ಮಾಡಿದ್ದರು ಎನ್ನಲಾಗಿದೆ. ಸದ್ಯ ಸಿಸಿಬಿ ಪೊಲೀಸರು ನಟಿಯರ ವಿಚಾರಣೆಯನ್ನು ಮುಂದೂವರಿಸಲಿದೆ. ಇದರ ನಡುವೆಯೇ ಸಂದೀಪ್ ಪಾಟೀಲ್ ಅವರು ಇಂದು ನಡೆಸಿದ ವಿಚಾರಣೆಯಲ್ಲಿ ಸಂಜನಾ, ರಾಗಿಣಿ ಅವರು ಇಬ್ಬರು ಪ್ರಭಾವಿ ನಾಯಕರ ಹೆಸರನ್ನು ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೇ ನಾವು ಹೇಳುವ ಪ್ರಭಾವಿಗಳ ವಿಚಾರಣೆ ನಡೆಸಲು ಸಾಧ್ಯವೇ ಎಂದು ನಟಿಯರಿಬ್ಬರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮತ್ತೆ 3 ದಿನ ಸಿಸಿಬಿ ಕಸ್ಟಡಿಗೆ ನಟಿ ರಾಗಿಣಿ

  • ಸಿಕ್ಕಾಕೊಂಡ್ರರೆ ನಾವು ಮತ್ತೆ ಜೈಲಿಗೆ ಹೋಗ್ಬೇಕಾಗುತ್ತೆ- ಆಸ್ಪತ್ರೆಯಲ್ಲಿ ನಟಿ ರಾಗಿಣಿ ಕಿರಿಕ್

    ಸಿಕ್ಕಾಕೊಂಡ್ರರೆ ನಾವು ಮತ್ತೆ ಜೈಲಿಗೆ ಹೋಗ್ಬೇಕಾಗುತ್ತೆ- ಆಸ್ಪತ್ರೆಯಲ್ಲಿ ನಟಿ ರಾಗಿಣಿ ಕಿರಿಕ್

    ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ಅವರನ್ನು ನ್ಯಾಯಾಲಯ ಮತ್ತೆ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ರಾಗಿಣಿಯನ್ನು ಮತ್ತೆ ಕಸ್ಟಡಿಗೆ ನೀಡಲು ವೈದ್ಯಕೀಯ ಪರೀಕ್ಷೆ ನಡೆಸುವ ವೇಳೆ ಅವರು ಮಾಡಿದ ಕಿರಿಕ್ ಕಾರಣ ಎನ್ನಲಾಗಿದೆ.

    ವಿಚಾರಣೆ ಸಂದರ್ಭದಲ್ಲಿ ಪದೇ ಪದೇ ಅನಾರೋಗ್ಯ ನೆಪವೊಡ್ಡುತ್ತಿದ್ದ ಅವರ ಆರೋಗ್ಯ ತಪಾಸಣೆ ನಡೆಸಲು ನಗರದ ಕೆಸಿ ಜನರಲ್ ಆಸ್ಪತ್ರೆಗೆ ಕರೆತರಲಾಗಿತ್ತು. ಆ ಬಳಿಕ ಅವರನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ನ್ಯಾಯಾಲಯದ ಅನುಮತಿ ಪಡೆದು ರಾಗಿಣಿ ಅವರಿಗೆ ಡೋಪಿಂಗ್ ಪರೀಕ್ಷೆ ನಡೆಸಲು ಮುಂದಾಗಿದ್ದರು. ಆದರೆ ಈ ವೇಳೆ ಅಧಿಕಾರಿಗಳ ವಿರುದ್ಧವೇ ಗರಂ ಆದ ನಟಿ ವೈದ್ಯಕೀಯ ಪರೀಕ್ಷೆ ನಡೆಸಿಕೊಳ್ಳಲು ನಿರಾಕರಿಸಿದ್ದರು. ಈ ಕುರಿತ ವಿಡಿಯೋ ಸದ್ಯ ವೈರಲ್ ಆಗಿದೆ. ಇದನ್ನೂ ಓದಿ: ಸಾಂತ್ವನ ಕೇಂದ್ರದಲ್ಲಿ ಗಲಾಟೆ, ಪೊಲೀಸ್ ವಾಹನದಲ್ಲಿ ಮಾತುಕತೆ – ಇದು ರಾಗಿಣಿ, ಸಂಜನಾ ಫ್ರೆಂಡ್‍ಶಿಪ್

    ವಿಡಿಯೋದಲ್ಲಿ ಅಧಿಕಾರಿಗಳ ಗಲಾಟೆ ಮಾಡಿದ್ದು, ನಮ್ಮ ಲೈಫ್ ಈಗಾಗಲೇ ಹಾಳಾಗಿ ಹೋಗಿದೆ. ನೀವು ಬಂದನ ಮಾಡಿದ ಕಾರಣ ನಮ್ಮ ಮರ್ಯಾದೆ ಹೋಗಿದೆ. ಮೊದಲೇ ನಮ್ಮ ಲೈಪ್ ಬರ್ನ್ ಆಗಿದೆ. ಇದರಲ್ಲಿ ಸಿಕ್ಕಿಹಾಕ್ಕೋಂಡ್ರೆ ಜೈಲಿಗೆ ಹೋಗಬೇಕಾಗುತ್ತೆ ಎಂದು ಪರೀಕ್ಷೆ ಮಾಡಿಸಿಕೊಳ್ಳುವ ವಿಚಾರದಲ್ಲಿ ಹಠ ಮಾಡಿದ್ದರು. ಯಾವುದೇ ಟೆಸ್ಟ್ ಮಾಡೋದಿದ್ದರೂ ನಮ್ಮ ವಕೀಲರು ಬರಲಿ ಎಂದು ಹೇಳಿದ್ದರು. ಸದ್ಯ ಈ ವಿಡಿಯೊ ವೈರಲ್ ಆಗಿದೆ. ಇದನ್ನೂ ಓದಿ: ನಟಿ ಸಂಜನಾ ಸೇರಿ ಉಳಿದ ಆರೋಪಿಗಳೂ 3 ದಿನ ಸಿಸಿಬಿ ಕಸ್ಟಡಿಗೆ

    ಇಂದು ನಟಿ ರಾಗಿಣಿ ಮತ್ತು ಸಂಜನಾ ಅವರನ್ನು ಸಿಸಿಬಿ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ 1ನೇ ಎಸಿಎಂಎಂ ಕೋರ್ಟ್ ಜಡ್ಜ್ ಮುಂದೆ ಹಾಜರ್ ಪಡಿಸಿದ್ದರು. ಈ ವೇಳೆ ವಿಚಾರಣೆಯನ್ನು ಮುಂದುವರಿಸಲು ಮತ್ತೆ 6 ದಿನ ಪೊಲೀಸ್ ಕಸ್ಟಡಿಗೆ ನೀಡಲು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದನ್ನೂ ಓದಿ: ಮತ್ತೆ 3 ದಿನ ಸಿಸಿಬಿ ಕಸ್ಟಡಿಗೆ ನಟಿ ರಾಗಿಣಿ

    ಆದರೆ ರಾಗಿಣಿ ಪರ ವಕೀಲರು ತಮ್ಮ ವಾದ ಮಂಡಿಸಿ, ಈಗಾಗಲೇ 8 ದಿನ ಪೊಲೀಸ್ಟ್ ಕಸ್ಟಡಿಗೆ ನೀಡಲಾಗಿದೆ. ಪ್ರಕರಣದಲ್ಲಿ ರಕ್ತ ಮಾದರಿಯ ಪರೀಕ್ಷೆ ಬಿಟ್ಟು ಬೇರೆ ಯಾವುದೇ ಪ್ರಗತಿ ಮಾಡಿಲ್ಲ. ನನ್ನ ಕಕ್ಷಿದಾರರು ಈಗಾಗಲೇ ತಮಗೇ ತಿಳಿದಿರುವ ಮಾಹಿತಿಯನ್ನು ತಿಳಿಸಿದ್ದಾರೆ. ಆದ್ದರಿಂದ ಅವರನ್ನು ನ್ಯಾಯಾಂಗ ಬಂಧನ ನೀಡಿ ಎಂದು ಮನವಿ ಮಾಡಿದ್ದರು. ಆದರೆ ನಟಿಯರು ತಮ್ಮ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ಸಿಸಿಬಿ ಪೊಲೀಸರು ವೈದ್ಯಕೀಯ ತಪಾಸಣೆ ವೇಳೆ ಮಾಡಿದ್ದ ಕಿರಿಕ್ ವಿಡಿಯೋವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿಯೇ ಮತ್ತೆ ಮೂರು ದಿನಗಳ ಕಾಲ ಎಲ್ಲಾ ಆರೋಪಿಗಳನ್ನು ಸಿಸಿಬಿ ಕಸ್ಟಡಿಗೆ ಕೋರ್ಟ್ ನೀಡಿದೆ ಎಂಬ ಮಾಹಿತಿ ಲಭಿಸಿದೆ.