Tag: Actress Radhika Pandit

  • ಮುಂಬೈನಲ್ಲಿ ರಾಕಿಭಾಯ್ ಹವಾ ಜೋರು..!

    ಮುಂಬೈನಲ್ಲಿ ರಾಕಿಭಾಯ್ ಹವಾ ಜೋರು..!

    ರಾಕಿಂಗ್‌ಸ್ಟಾರ್ ಯಶ್ (Rocking Star Yash) `ಕೆಜಿಎಫ್’ (KGF) ಸಿನಿಮಾದಿಂದ ನ್ಯಾಷನಲ್ ಸ್ಟಾರ್ ಆಗಿದ್ದಾರೆ. `ಟಾಕ್ಸಿಕ್’ (Toxic) ಸಿನಿಮಾದಿಂದ ಇಂಟರ್‌ನ್ಯಾಷನಲ್ ಸ್ಟಾರ್ ಆದ್ರೂ ಆಶ್ಚರ್ಯವೇನಿಲ್ಲ. ಯಾಕಂದ್ರೆ ಯಶ್ ಸಿನಿಮಾಗಾಗಿ ಮಾಡಿಕೊಳ್ಳುವ ತಯಾರಿ, ಡೇಡಿಕೇಶನ್ ಹಾಗಿರುತ್ತೆ. ಅದಕ್ಕೆ ತಾಜಾ ಉದಾಹರಣೆಗಳು ನಮ್ಮ ಕಣ್ಮುಂದಿವೆ. ಒಂದೊಮ್ಮೆ ಯಶ್ ಆಡಿದ ಮಾತುಗಳು ನಿಜವಾದಾಗ ಎಲ್ಲರೂ ಹುಬ್ಬೇರಿಸಿ, ಬಾಯಿಮೇಲೆ ಬೆರಳಿಟ್ಟುಕೊಂಡಿದ್ದರು.

    ಸದ್ಯ ಟಾಕ್ಸಿಕ್’ ಸಿನಿಮಾದಲ್ಲಿ ಬ್ಯುಸಿಯಾಗಿರೋ ರಾಕಿಭಾಯ್ (Rocky Bhai) ಅವರ ಚಿತ್ರದ ಬಗ್ಗೆಯಾಗಲಿ, ಪಾತ್ರದ ಬಗ್ಗೆಯಾಗಲಿ ಮೂಗಿನಿಂದಲೂ ಉಸಿರು ಬಿಡುತ್ತಿಲ್ಲ. ಅಷ್ಟೂ ಸಸ್ಪೆನ್ಸ್ ಆಗಿಟ್ಟಿದ್ದಾರೆ. ಹಿಂದೊಮ್ಮೆ ಬಾಂಬೆಯಲ್ಲಿ ಅಭಿಮಾನಿಗಳತ್ತ ಕೈ ಮಾಡಿದ ಯಶ್ ವಿಡಿಯೋ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ವು. ಜೊತೆಗೆ ಅವರ ಸ್ಟೈಲಿಶ್ ಲುಕ್ ಕೂಡಾ ರಿವೀಲ್ ಆಗಿತ್ತು.ಇದನ್ನೂ ಓದಿ: ಹುಡುಗರಂತೆ ವರ್ಕೌಟ್ ಮಾಡಿ ಬೈಸಿಪ್ಸ್ ಪ್ರದರ್ಶಿಸಿದ ಚೈತ್ರಾ ವಾಸುದೇವನ್

    ಯಶ್ ಇದೀಗ ಮುಂಬೈ ಶಹರ್‌ನಲ್ಲಿ ಪತ್ನಿ ರಾಧಿಕಾ ಜೊತೆ ರೌಂಡ್ಸ್ ಹಾಕ್ತಿದ್ದಾರೆ. ಮುಂಬೈನಲ್ಲಿ ಯಶ್ ಸೆಲ್ಫಿಗೆ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಫ್ಯಾನ್ಸ್ಗೆ ಶೇಕ್‌ಹ್ಯಾಂಡ್ ಕೊಟ್ಟಿದ್ದಾರೆ ರಾಕಿಭಾಯ್. ಅಭಿಮಾನಿಯೋರ್ವ ಕನ್ನಡದಲ್ಲೇ “ಆರಾಮ ಸರ್, ಆರಾಮ ಮೇಡಂ” ಎಂದು ಕುಶಲೋಪರಿ ವಿಚಾರಿಸಿದ್ದಾನೆ. ಈ ವಿಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಟಾಕ್ಸಿಕ್’ ಸಿನಿಮಾ ಬ್ಯುಸಿಯ ನಡುವೆಯೂ ಪತ್ನಿ ಜೊತೆ ಯಶ್ ಮುಂಬೈನಲ್ಲಿ ಸುತ್ತಾಟ ನಡೆಸಿದ್ದಾರೆ. ರಾಕಿಂಗ್‌ಸ್ಟಾರ್ ಯಶ್ ಅಭಿನಯದ ಮೋಸ್ಟ್ ಅವೈಟೆಡ್ ಟಾಕ್ಸಿಕ್ ಸ್ಯಾಂಪಲ್ಸ್‌ನಿಂದಲೇ ಅಟ್ರ್ಯಾಕ್ಟ್‌ ಮಾಡಿದೆ. `ಟಾಕ್ಸಿಕ್’ ಮುಂದಿನ ಅಪ್‌ಡೇಟ್‌ಗಾಗಿ ಫ್ಯಾನ್ಸ್ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.ಇದನ್ನೂ ಓದಿ: ಸ್ವಿಮ್ ಸೂಟ್ ಧರಿಸಿ ನೀರಿಗಿಳಿದ ರಾಗಿಣಿ

  • `ಸಲಾಂ ರಾಕಿಭಾಯ್’ ಎಂದ ಯಶ್ ಪುತ್ರಿ ಐರಾ

    `ಸಲಾಂ ರಾಕಿಭಾಯ್’ ಎಂದ ಯಶ್ ಪುತ್ರಿ ಐರಾ

    ನ್ನಡದ ಹೆಮ್ಮೆ `ಕೆಜಿಎಫ್ 2′ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ಆಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆಯುತ್ತಿದೆ. ದೇಶದ ಮೂಲೆ ಮೂಲೆಯಲ್ಲೂ ಯಶ್ ಖಡಕ್ ಆಕ್ಟಿಂಗ್ ನೋಡಿ ಅಭಿಮಾನಿ ದೇವರುಗಳು ಅಪ್ಪಿ ಒಪ್ಪಿಕೊಂಡಿದಾಯ್ತು. ಈಗ ರಾಕಿಭಾಯ್ ಮಗಳು ಐರಾ ಸಲಾಮ್ ರಾಕಿಭಾಯ್ ಅಂತಾ ಹೇಳಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

    kgf 2

    ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬಿನೇಶನ್‌ನ ಯಶಸ್ವಿ ಚಿತ್ರ `ಕೆಜಿಎಫ್ 2′ ಬಾಕ್ಸ್ಆಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಬಾಲಿವುಡ್‌ನಲ್ಲಿ ಯಶ್‌ದೇ ಕಾರುಬಾರು ಹೀಗೆಲ್ಲಾ ಇರುವಾಗ ಇದೀಗ ಮಾಸ್ಟರ್‌ಪೀಸ್ ಯಶ್ ಮಗಳು ಐರಾ ಸಲಾಂ ರಾಕಿಭಾಯ್ ರಾ.. ರಾ..ರಾಕಿ ಅಂತಾ ಮುದ್ದು ಮುದ್ದಾಗಿ ಹೇಳಿದ್ದಾರೆ.

     

    View this post on Instagram

     

    A post shared by Yash (@thenameisyash)

    ನ್ಯಾಷನಲ್ ಯಶ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಬೆಳಗಿನ ಆಚರಣೆ ರಾಕಿಭಾಯ್ ಜತೆ ತಮಾಷೆಯೊಂದಿಗೆ ಶುರುವಾಗಬೇಕು ಎಂದು ಪುತ್ರಿ ಐರಾ ಸಲಾಂ ರಾಕಿಭಾಯ್ ರಾ.. ರಾ..ರಾಕಿ ಅಂತಾ ವಿಡಿಯೋ ಯಶ್ ಸೋಷಿಯಲ್ ಮೀಡಿಯಾ ಖಾತೆ ಸಖತ್ ವಿವ್ಸ್ ಗಿಟ್ಟಿಸಿಕೊಳ್ಳುವುದರ ಜತೆಗೆ ಸಲಾಂ ರಾಕಿಭಾಯ್ ಎಂದ ಐರಾ ಕ್ಯೂಟ್‌ನೆಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.‌ ಇದನ್ನೂ ಓದಿ: `ಪುಷ್ಪ’ ಬೆಡಗಿ ರಶ್ಮಿಕಾ ಒಂದೇ ದಿನ ಏನೆಲ್ಲಾ ತಿಂತಾರೆ ಗೊತ್ತಾ? ರಶ್ಮು ವಿಡಿಯೋ ವೈರಲ್

    ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 ಯಶಸ್ಸಿನಿಂದ ಮಿರ ಮಿರ ಅಂತಾ ಮಿಂಚ್ತಿರೋ ಯಶ್ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಜತೆಗೆ `ಕೆಜಿಎಫ್ 2′ ಅಪ್‌ಡೇಟ್ ಕುರಿತು ಕ್ಯೂರಿಯಸ್ ಆಗಿದ್ದಾರೆ.

  • ಮದ್ವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ‘ರಾಕಿಂಗ್’ ದಂಪತಿ- ಥ್ಯಾಂಕ್ಯೂ ಹಸ್ಬೆಂಡ್ ಅಂದ್ರು ಸಿಂಡ್ರೆಲ್ಲಾ

    ಮದ್ವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ‘ರಾಕಿಂಗ್’ ದಂಪತಿ- ಥ್ಯಾಂಕ್ಯೂ ಹಸ್ಬೆಂಡ್ ಅಂದ್ರು ಸಿಂಡ್ರೆಲ್ಲಾ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಕ್ಯೂಟ್ ಕಪಲ್ ಯಶ್, ರಾಧಿಕಾ ಸಂಸಾರಕ್ಕೆ ನಾಲ್ಕು ವರ್ಷ ತುಂಬಿದೆ. ಈ ಖುಷಿಯ ಕ್ಷಣದಲ್ಲಿ ಕ್ಲಿಕ್ಕಿಸಿರುವ ಫೋಟೋವೊಂದನ್ನು ರಾಧಿಕಾ ಪಂಡಿತ್ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಹೌದು. ಯಶ್-ರಾಧಿಕಾ ಪಂಡಿತ್ ಪಾಲಿಗೆ ಡಿ.9 ವಿಶೇಷ ದಿನವಾಗಿತ್ತು. ‘ರಾಕಿಂಗ್’ ದಂಪತಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮವನ್ನು ನಿನ್ನೆ ದಂಪತಿ ಸೆಲೆಬ್ರೆಟ್ ಮಾಡಿದ್ದಾರೆ. ವಾರ್ಷಿಕೋತ್ಸವದ ಸಂಭ್ರಮದ ಫೋಟೋವನ್ನು ಹಂಚಿಕೊಂಡು ‘ಡಿಯರ್ ಹಸ್ಬೆಂಡ್ ಥ್ಯಾಂಕ್ ಯೂ’ ಎಂದು ಬರೆದುಕೊಂಡಿದ್ದಾರೆ. ದಂಪತಿಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಮೂಲಕ ಶುಭ ಕೋರಿದ್ದಾರೆ.

    ಕಿರುತೆರೆಯಲ್ಲಿ ನಟಿಸುತ್ತಿದ್ದ ನಂದಗೋಕುಲ ಧಾರಾವಾಹಿ ಮೂಲಕ ನಟ ಯಶ್ ಮತ್ತು ನಟಿ ರಾಧಿಕಾ ನಡುವೆ ಪ್ರೀತಿ ಚಿಗುರಿತು. ಆನಂತರ ಇವರಿಬ್ಬರಿಗೆ ಬೆಳ್ಳಿ ಪರದೆಯ ಮೇಲೆ ನಟಿಸುವ ಅವಕಾಶ ಒದಗಿ ಬಂತು. ಡಿಸೆಂಬರ್ 9, 2016ರಂದು ಯಶ್ ಹಾಗೂ ರಾಧಿಕಾ ಪಂಡಿತ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕಿರುತೆರೆಯಿಂದ ಒಂದಾದ ಈ ಜೋಡಿ ಬೆಳ್ಳಿತೆರೆ ಮೇಲೂ ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಈಗ ಪತಿ-ಪತ್ನಿಯರಾಗಿ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ.

    ರಾಧಿಕಾ ಪಂಡಿತ್ ಮತ್ತು ಯಶ್ ಬಹುವರ್ಷಗಳಿಂದ ಪರಸ್ಪರ ಗುಟ್ಟಾಗಿ ಪ್ರೀತಿಸುತ್ತಿದ್ದರು. 2016ರ ಆಗಸ್ಟ್‍ನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದೇ ವರ್ಷ ಡಿಸೆಂಬರ್ 9ರಂದು ಬೆಂಗಳೂರಿನ ಖಾಸಗಿ ಹೋಟೆಲ್‍ವೊಂದರಲ್ಲಿ ಅದ್ದೂರಿಯಾಗಿ ಮದುವೆಯಾದರು. ತಮ್ಮ ನೆಚ್ಚಿನ ನಟ-ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅಭಿಮಾನಿಗಳಿಗೆ ಸಖತ್ ಖುಷಿಯನ್ನು ನೀಡಿತ್ತು. ಸ್ಯಾಂಡಲ್‍ವುಡ್‍ನ ಈ ಜೋಡಿ ರಿಯಲ್ ಲೈಫ್‍ನಲ್ಲಿ ಒಂದಾಗಿ ಇಂದಿಗೆ ನಾಲ್ಕು ವರ್ಷ ಕಳೆದಿದೆ.

     

    View this post on Instagram

     

    A post shared by Radhika Pandit (@iamradhikapandit)

    ಮದುವೆ ಬಳಿಕ ನಟನೆಗಿಂತಲೂ ಹೆಚ್ಚಾಗಿ ರಾಧಿಕಾ ಪಂಡಿತ್ ಕುಟುಂಬದ ಕಡೆಗೆ ಗಮನ ನೀಡಿದ್ದರು. ಹಸೆಮಣೆ ಏರಿದ ನಂತರ ಅವರು ನಟಿಸಿದ ಏಕೈಕ ಸಿನಿಮಾ ಎಂದರೆ ಅದು ‘ಆದಿ ಲಕ್ಷ್ಮೀ ಪುರಾಣ’. ಆ ಬಳಿಕ ಅವರು ಯಾವುದೇ ಸಿನಿಮಾಗಳನ್ನೂ ಒಪ್ಪಿಕೊಳ್ಳಲಿಲ್ಲ. ಈಗ ಯಶ್-ರಾಧಿಕಾ ದಂಪತಿಗೆ ಐರಾ ಯಶ್ ಮತ್ತು ಯಥರ್ವ್ ಯಶ್ ಎಂಬ ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ. ಮಕ್ಕಳ ತುಂಟಾಟದ ಫೆÇೀಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ದಂಪತಿ ಹಂಚಿಕೊಳ್ಳುತ್ತಿರುತ್ತಾರೆ.

    ಸದಾ ಸಿನಿಮಾ ಚಟುವಟಿಕೆಗಳಲ್ಲಿ ಬ್ಯುಸಿ ಆಗಿರುವ ಯಶ್ ಲಾಕ್‍ಡೌನ್ ಕಾರಣದಿಂದ 2020ರಲ್ಲಿ ಕುಟುಂಬದವರ ಜೊತೆ ಹೆಚ್ಚು ಸಮಯವನ್ನು ಕಳೆದಿದ್ದಾರೆ. ಆದರೆ ಚಿತ್ರೀಕರಣಕ್ಕೆ ಸರ್ಕಾರದಿಂದ ಅನುಮತಿ ಸಿಕ್ಕ ನಂತರ ಅವರು ‘ಕೆಜಿಎಫ್ ಚಾಪ್ಟರ್ 2’ ಸಿನಿಮಾದ ಕೊನೇ ಹಂತದ ಶೂಟಿಂಗ್‍ನಲ್ಲಿ ಪಾಲ್ಗೊಂಡಿದ್ದಾರೆ. ಇತ್ತೀಚೆಗಷ್ಟೇ ಹೈದರಾಬಾದ್‍ನಲ್ಲಿ ಅವರ ಮತ್ತು ಸಂಜಯ್ ದತ್ ನಡುವಿನ ಫೈಟಿಂಗ್ ದೃಶ್ಯಗಳನ್ನು ಚಿತ್ರಿಕರಿಸಲಾಗಿದೆ. ಈ ಸಿನಿಮಾದ ಮೇಲೆ ದೇಶಾದ್ಯಂತ ಭಾರೀ ನಿರೀಕ್ಷೆ ಸೃಷ್ಟಿ ಆಗಿದೆ.

  • ದೇವರ ದಯೆಯಿಂದ ಜೀವನದಲ್ಲಿ ಮತ್ತೆ ಸಿಹಿ ಸುದ್ದಿ ಬಂದಿದೆ: ರಾಧಿಕಾ ಪಂಡಿತ್

    ದೇವರ ದಯೆಯಿಂದ ಜೀವನದಲ್ಲಿ ಮತ್ತೆ ಸಿಹಿ ಸುದ್ದಿ ಬಂದಿದೆ: ರಾಧಿಕಾ ಪಂಡಿತ್

    ಬೆಂಗಳೂರು: ದೇವರ ದಯೆಯಿಂದ ಜೀವನದಲ್ಲಿ ಮತ್ತೆ ಸಿಹಿ ಸುದ್ದಿ ಬಂದಿದೆ ನಟಿ ರಾಧಿಕಾ ಪಂಡಿತ್ ಹೇಳಿದ್ದಾರೆ.

    ಆದಿಲಕ್ಷ್ಮಿ ಪುರಾಣ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದಾಗ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ದೇವರ ದಯೆಯಿಂದ ಸಿಹಿ ಸುದ್ದಿ ಜೀವನದಲ್ಲಿ ಮತ್ತೆ ಬಂದಿದೆ. ಮತ್ತೊಂದು ಎಡಿಷನ್‍ಗೆ ಕಾಯುತ್ತಿದ್ದೇವೆ. ಎಲ್ಲದ್ದಕ್ಕೂ ಒಂದು ಹಣೆಬರಹ ಅಂತ ಒಂದು ಇರುತ್ತದೆ. ಆಯಿತಲ್ಲ ಇನ್ನೇನು ಎಂದು ಖುಷಿ ವ್ಯಕ್ತಪಡಿಸಿದರು.

    ಈ ವೇಳೆ ಯಾಕೆ ಐರಾ ಹೆಸರನ್ನೇ ಇರಿಸಿದ್ದು ಯಾಕೆ ಎಂದು ಕೇಳಿದ್ದಕ್ಕೆ, ಅಭಿಮಾನಿಗಳು ಅನೇಕ ಹೆಸರುಗಳನ್ನು ತಿಳಿಸಿದ್ದರು. ಆದರೆ ಐರಾ ಎನ್ನುವುದು ಐರಾವತಿ ಎಂಬ ದೇವಿಯ ಹೆಸರಾಗುತ್ತದೆ. ಇದು ನಮ್ಮ ಮಗಳಿಗೆ ಸರಿಯಾದ ಹೆಸರು ಅಂತ ಯೋಚನೆ ಮಾಡಿದ್ದೇವು ಎಂದು ಉತ್ತರಿಸಿದರು.

    ಮಗಳು ಹುಟ್ಟಿದಾಗ ಎಲ್ಲರೂ ಸಾಮಾನ್ಯವಾಗಿ ಮನೆಗೆ ಲಕ್ಷ್ಮಿ ಬಂದಳು ಅಂತ ಹೇಳುತ್ತಾರೆ. ಹೀಗಾಗಿ ಮಗಳಿಗೆ ಲಕ್ಷ್ಮಿಗೆ ಇರುವ ವಿವಿಧ ಹೆಸರಗಳನ್ನು ತಿಳಿಸಿದುಕೊಂಡು ಐರಾವತಿಯಲ್ಲಿರುವ ಐರಾವನ್ನು ಅಂತಿಮಗೊಳಿಸಿದ್ದೇವು. ಈ ಹೆಸರಿನ ಮೊದಲ ಹಾಗೂ ಕೊನೆಯ ಅಕ್ಷರ ಎ ಆಗಿದೆ. ಎ ಆರ್ ಮಧ್ಯೆ ವೈ ಹಾಗೂ ವೈ ಎ ಮಧ್ಯೆ ಆರ್ ಬರುತ್ತದೆ. ಅಷ್ಟೇ ಅಲ್ಲದೆ ಅಪ್ಪ ಯಶ್ (ಎವೈ), ರಾಧಿಕಾ ಅಮ್ಮ (ಆರ್ ಎ) ಅಂತ ಈ ಹೆಸರು ತಿಳಿಸುತ್ತದೆ ಎಂದರು.

    ನಾಮಕರಣಕ್ಕೆ ಹೆಚ್ಚು ಸಮಯ ತೆಗೆದುಕೊಂಡಿದ್ದು ಯಾಕೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರಾಧಿಕಾ ಪಂಡಿತ್ ಅವರು, ಮಗಳು ಬೆಳೆದು ದೊಡ್ಡವಳಾದ ಮೇಲೆ ಏನು ಎಂತಹ ಹೆಸರು ಇಟ್ಟಿದ್ದೀರಿ ಅಂತ ಬೈಬಾರದು ಅದಕ್ಕೆ ಯೋಚಿಸಿ, ಮುದ್ದಾದ ಹೆಸರು ಇಟ್ಟಿದ್ದೇವೆ. ಈ ಹೆಸರಲ್ಲಿ ಅಪ್ಪ ಅಮ್ಮ ಇಬ್ಬರು ಇದ್ದೇವೆ. ಅಷ್ಟೇ ಅಲ್ಲ ಹೆಸರು ಶಾರ್ಟ್ ಆಂಡ್ ಸ್ವೀಟ್ ಆಗಿದೆ ಎಂದು ಹೇಳಿ ನಕ್ಕಿದರು.

    ರಾಧಿಕಾ ಪಂಡಿತ್ ಅವರು 4 ತಿಂಗಳ ಗರ್ಭಿಣಿಯಾಗಿದ್ದು, ಈ ಬಗ್ಗೆ ಸ್ವತಃ ಯಶ್ ಅವರೇ ಇಂದು ಸಂಜೆ ತಮ್ಮ ಮಗಳ ವಿಡಿಯೋ ಮೂಲಕ ತಂದೆಯಾಗುತ್ತಿರುವ ಖುಷಿಯನ್ನು ಹಂಚಿಕೊಂಡಿದ್ದಾರೆ.

    ಇದೇ 23ರಂದು ಯಶ್ ದಂಪತಿ ತಮ್ಮ ಮಗಳಿಗೆ ಐರಾ ಎಂದು ನಾಮಕರಣ ಮಾಡಿದ್ದಾರೆ. ಇದರ ಬೆನ್ನಲ್ಲೇ ಈಗ ತಮ್ಮ ಎರಡನೇ ಮಗುವಿನ ಆಗಮನದ ಬಗ್ಗೆ ಯಶ್ ಅವರು ಎಲ್ಲರಿಗೂ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ.

    ವೈಜಿಎಫ್ ಚಾಪ್ಟರ್ 2, ಮತ್ತೊಂದು ಸಿಹಿ ಸುದ್ದಿ ನಿಮ್ಮ ಪ್ರೀತಿ ಹಾರೈಕೆ ನಮ್ಮ ಕುಟುಂಬದ ಮೇಲಿರಲಿ ಎಂದು ಬರೆದು ಮಗಳ ವಿಡಿಯೋ ಮೂಲಕ ಈ ಸಿಹಿ ಸುದ್ದಿಯನ್ನು ಯಶ್ ಹಂಚಿಕೊಂಡಿದ್ದಾರೆ.

    ಭಾನುವಾರ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ನಡೆದ ಅದ್ಧೂರಿ ನಾಮಕರಣ ಸಮಾರಂಭದಲ್ಲಿ ಯಶ್ ರಾಧಿಕಾ ದಂಪತಿ ತಮ್ಮ ಮುದ್ದಾದ ಮಗಳಿಗೆ `ಐರಾ’ ಎಂದು ಹೆಸರಿಟ್ಟಿದ್ದರು. ಯಶ್ ಹಾಗೂ ರಾಧಿಕಾ ಹೆಸರಿನ ಅಕ್ಷರಗಳನ್ನು ಜೋಡಿಸಿ ಈ ಹೆಸರಿಟ್ಟಿರುವುದು ಒಂದು ವಿಶೇಷವಾದರೆ ಇದರ ಅರ್ಥ ಇನ್ನೊಂದು ವಿಶೇಷತೆ ಹೊಂದಿದೆ. ಅರೇಬಿಕ್‍ನಲ್ಲಿ ‘ಐರಾ’ ಎಂದರೆ `ಕಣ್ಣು ತೆರೆಸುವವರು’ ಅಥವಾ `ಗೌರವಾನ್ವಿತರು’ ಎನ್ನುವ ಅರ್ಥ ಬರುತ್ತದೆ. ಕನ್ನಡದಲ್ಲಿ ‘ಭೂದೇವಿಯಲ್ಲಿ ಸನ್ನಿಹಿತಳಾದ ಲಕ್ಷ್ಮೀ’ ಎನ್ನುವ ಅರ್ಥ ಬರುತ್ತದೆ.