Tag: Actress Rachita Ram

  • ‘ಸಂಜು ವೆಡ್ಸ್ ಗೀತಾ 2’ನಲ್ಲಿ ಶ್ರೀನಗರ ಕಿಟ್ಟಿಗೆ ವಿಲನ್ ಆದ ರಾಗಿಣಿ ದ್ವಿವೇದಿ

    ‘ಸಂಜು ವೆಡ್ಸ್ ಗೀತಾ 2’ನಲ್ಲಿ ಶ್ರೀನಗರ ಕಿಟ್ಟಿಗೆ ವಿಲನ್ ಆದ ರಾಗಿಣಿ ದ್ವಿವೇದಿ

    ಸ್ಯಾಂಡಲ್‌ವುಡ್ ಬ್ಯೂಟಿ ರಾಗಿಣಿ ದ್ವಿವೇದಿ (Ragini Dwivedi) ಸದ್ಯ ಕನ್ನಡ ಮತ್ತು ಪರಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಹೊಸ ಬಗೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲು ನಟಿ ಮುಂದಾಗಿದ್ದಾರೆ. ಶ್ರೀನಗರ ಕಿಟ್ಟಿಗೆ ವಿಲನ್ ಆಗಿ ರಾಗಿಣಿ ಕಾಣಿಸಿಕೊಂಡಿದ್ದಾರೆ.

    ‘ಸಂಜು ವೆಡ್ಸ್ ಗೀತಾ ಪಾರ್ಟ್ 2’ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ (Srinagar Kitty) ಮತ್ತು ರಚಿತಾ ರಾಮ್ (Rachita Ram) ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರದಲ್ಲಿ ಹೀರೋ ಶ್ರೀನಗರ ಕಿಟ್ಟಿಗೆ ರಾಗಿಣಿ ವಿಲನ್ (Villain) ಆಗಿ ಠಕ್ಕರ್ ಕೊಡಲಿದ್ದಾರೆ.

    ಹೀರೋಯಿನ್ ಆಗಿ ಗ್ಲ್ಯಾಮರ್ ಗೊಂಬೆಯಾಗಿ ಗುರುತಿಸಿಕೊಂಡಿದ್ದ ನಟಿ ರಾಗಿಣಿ, ‘ಸಂಜು ವೆಡ್ಸ್ ಗೀತಾ 2’ ಮೂಲಕ ವಿಭಿನ್ನ ಪಾತ್ರದಲ್ಲಿ ನಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಾಗಿಣಿ ವಿಲನ್ ಎಂದು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅದಷ್ಟೇ ಅಲ್ಲ, ಚಿತ್ರದಲ್ಲಿ ಸ್ಪೆಷಲ್ ಹಾಡಿಗೂ ಕೂಡ ನಟಿ ಹೆಜ್ಜೆ ಹಾಕಿದ್ದಾರೆ.

    ಇನ್ನೂ ಶ್ರೀನಗರ ಕಿಟ್ಟಿ, ರಮ್ಯಾ (Ramya) ನಟನೆಯ ‘ಸಂಜು ವೆಡ್ಸ್ ಗೀತಾ’ ಮೊದಲ ಭಾಗ ಸೂಪರ್ ಡೂಪರ್ ಹಿಟ್ ಆಗಿತ್ತು. ಹಾಗಾಗಿ ನಾಗಶೇಖರ್ ನಿರ್ದೇಶನದ ಈ ಸಿನಿಮಾ ಬಗ್ಗೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ರಿಲೀಸ್‌ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

  • ಇಂಥ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಜನಸಾಮಾನ್ಯರ ಕೈಗೆ ಒಪ್ಪಿಸಿ: ನೇಹಾ ಕೊಲೆ ಬಗ್ಗೆ ನಟಿ ರಚಿತಾ ರಾಮ್‌ ಪ್ರತಿಕ್ರಿಯೆ

    ಇಂಥ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಜನಸಾಮಾನ್ಯರ ಕೈಗೆ ಒಪ್ಪಿಸಿ: ನೇಹಾ ಕೊಲೆ ಬಗ್ಗೆ ನಟಿ ರಚಿತಾ ರಾಮ್‌ ಪ್ರತಿಕ್ರಿಯೆ

    ಬೆಂಗಳೂರು: ಹುಬ್ಬಳ್ಳಿ ನೇಹಾ ಹಿರೇಮಠ್‌ (Neha Hiremath) ಹತ್ಯೆ ಪ್ರಕರಣದ ಕುರಿತು ನಟಿ ರಚಿತಾ ರಾಮ್‌ (Rachita Ram) ಪ್ರತಿಕ್ರಿಯೆ ನೀಡಿದ್ದಾರೆ. ಕೊಲೆಗಾರನಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

    ಪ್ರಕರಣ ಕುರಿತು ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್‌ ಹಾಕಿರುವ ರಚಿತಾ ರಾಮ್‌, ಈ ರೀತಿಯ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಅವರನ್ನು ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನನ್ನ ಮಗ ತಪ್ಪು ಮಾಡಿದ್ದಾನೆ.. ಅವನಿಗೆ ಶಿಕ್ಷೆ ಆಗಲೇಬೇಕು: ಕೊಲೆಗಾರ ಫಯಾಜ್‌ ತಾಯಿ ಕಣ್ಣೀರು

     

    View this post on Instagram

     

    A post shared by Rachitaa Ram (@rachita_instaofficial)

    ಜಾತಿ, ಧರ್ಮ ಯಾವುದೇ ಆಗಿರಲಿ. ಮೊದಲು ನಾವು ಮಾನವರು. ನಾನು ಈ ಪೋಸ್ಟ್‌ ಹಾಕಲು ಕಾರಣ ಆಕೆಗೆ (ನೇಹಾ) ಆಗಿರುವ ಅನ್ಯಾಯ. ತಪ್ಪು ಯಾರೇ ಮಾಡಿದರು ತಪ್ಪೆ ಎಂದು ನಟಿ ಅಭಿಪ್ರಾಯಪಟ್ಟಿದ್ದಾರೆ.

    ಸರ್ಕಾರಕ್ಕೆ ನನ್ನ ಒಂದು ಮನವಿ! ರಾಜಕೀಯ ಆಯಾಮದಲ್ಲಿ ಈ ವಿಷಯವನ್ನು ತರಬೇಡಿ. ಆಗಿರೋದು ಅನ್ಯಾಯ. ಈಗ ನ್ಯಾಯ ಬೇಕಾಗಿದೆ ಅಷ್ಟೆ. ಈ ರೀತಿಯ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಅವರನ್ನು ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನೇಹಾ ಹತ್ಯೆ ಕೇಸ್ – ಎಬಿವಿಪಿಯಿಂದ ಗೃಹಸಚಿವರ ಮನೆ ಮುತ್ತಿಗೆಗೆ ಯತ್ನ

    ನಟಿ ರಚಿತಾ ರಾಮ್‌, ಕೊಲೆಯಾದ ನೇಹಾ ಹಿರೇಮಠ್‌ ಫೋಟೊ ಜೊತೆಗೆ ಈ ಪೋಸ್ಟ್‌ ಅನ್ನು ಹಂಚಿಕೊಂಡಿದ್ದಾರೆ. ಅಲ್ಲದೇ #wewantjustice ಎಂದು ಟ್ಯಾಗ್‌ ಕೂಡ ಹಾಕಿದ್ದಾರೆ.

  • ಉಪ್ಪಿ-ರಚ್ಚು ಮಧ್ಯೆ  I Love You ವಾರ್- ಬುದ್ಧಿವಂತನ ಮೊದಲ ಪ್ರತಿಕ್ರಿಯೆ

    ಉಪ್ಪಿ-ರಚ್ಚು ಮಧ್ಯೆ I Love You ವಾರ್- ಬುದ್ಧಿವಂತನ ಮೊದಲ ಪ್ರತಿಕ್ರಿಯೆ

    ಬೆಂಗಳೂರು: ನಾನು ಮತ್ತೆ ಯಾವತ್ತು ಈ ರೀತಿಯ ಪಾತ್ರ ಮಾಡಲ್ಲ ಎಂದು ಗುಳಿಕೆನ್ನೆ ಹುಡುಗಿ ರಚಿತಾ ರಾಮ್ ಶಪಥ ಮಾಡಿದ್ದರು. ರಚಿತಾ ರಾಮ್ ಅವರ ಈ ನಿರ್ಧಾರಕ್ಕೆ ನಟ ಉಪೇಂದ್ರ ಫಸ್ಟ್ ಟೈಮ್ ರಿಯಾಕ್ಟ್ ಮಾಡಿದ್ದಾರೆ. ಬಲವಂತವಾಗಿ ಆ್ಯಕ್ಟ್ ಮಾಡಿಸೋಕ್ಕೆ ಆಗುತ್ತಾ? ಸುಮಾರು ಸಿನಿಮಾಗಳಲ್ಲಿ ನಟಿಸಿರುವ ರಚಿತಾ ಈ ರೀತಿ ಹೇಳೋದು ಸರಿನಾ ಎಂದು ಪ್ರಶ್ನೆ ಮಾಡಿದ್ದಾರೆ.

    ‘ಐ ಲವ್ ಯೂ’ ಸಿನಿಮಾ ಅಂಗಳದಲ್ಲಿ ಏನಾಗಿತ್ತು ಎಂಬ ಬಗ್ಗೆ ರಿಯಲ್ ಸ್ಟಾರ್ ಮೊದಲ ಬಾರಿಗೆ ಮಾತನಾಡಿದ್ದಾರೆ. ಉಪ್ಪಿ ‘ಐ ಲವ್ ಯೂ’ ಸಿನಿಮಾ ಸದ್ಯ ಥಿಯೇಟರ್‍ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಆದರೆ ಸಿನಿಮಾದ ಒಂದು ಹಸಿಬಿಸಿ ದೃಶ್ಯ ಉಪೇಂದ್ರ ಮತ್ತು ರಚಿತಾ ರಾಮ್ ನಡುವಿನ ಕುಸ್ತಿಗೆ ಕಾರಣವಾಗಿದೆ. ಇನ್ನುಂದೆ ನಾನು ಇಂಥ ಪಾತ್ರ ಮಾಡಲ್ಲ. ಇದಕ್ಕೆಲ್ಲಾ ಉಪೇಂದ್ರ ಅವರೇ ಕಾರಣ ಎಂದು ರಚಿತಾ ರಾಮ್ ಆರೋಪಿಸಿದ್ದರು. ಇದಕ್ಕೆ ತಿರುಗೇಟು ಕೊಟ್ಟಿದ್ದ ಪ್ರಿಯಾಂಕಾ ಉಪೇಂದ್ರ ಪದೇ ಪದೇ ಉಪ್ಪಿ ಹೆಸರು ತರಬೇಡಿ ಎಂದು ಗರಂ ಆಗಿದ್ದರು.

    ಈ ಬಗ್ಗೆ ಮಾತನಾಡಿರುವ ಉಪೇಂದ್ರ ಅವರು, ಒಂದು ಸೀನ್‍ನಿಂದ ಸಿನಿಮಾ ಸಕ್ಸಸ್ ಆಗುವ ಹಾಗಿದ್ದರೆ ಎಲ್ಲಾ ಸಿನಿಮಾದಲ್ಲೂ ಆ ರೀತಿಯ ಸೀನ್ ಮಾಡಿಬಿಡುತ್ತಿದ್ದರು. ಅದು ಅಲ್ಲದೇ ಖ್ಯಾತ, ಹಿರಿಯ ನೃತ್ಯ ನಿರ್ದೇಶಕ ಚಿನ್ನಿ ಮಾಸ್ಟರ್ ಅವರು ಈ ಹಾಡಿಗೆ ನೃತ್ಯ ನಿದೇಶನ ಮಾಡಿದ್ದರು. ಅವರು ಹೇಳಿದನ್ನ ಮಾಡುವುದೇ ನಟರಿಗೆ ದೊಡ್ಡ ಟಾಸ್ಕ್. ಹೀಗಿರೋವಾಗ ನಾನೇ ಡೈರೆಕ್ಟ್ ಮಾಡಿದೆ ಎಂದು ರಚಿತಾ ರಾಮ್ ಹೇಳಿದ್ದು ಸರಿಯಲ್ಲ. ಅವರಿಗೆ ಇಷ್ಟ ಇಲ್ಲದಿದ್ದರೆ ಆಗಲ್ಲ ಎಂದು ಹೇಳಬಹುದಿತ್ತು ಎಂದಿದ್ದಾರೆ.

    ನಿರ್ದೇಶಕರು ತುಂಬಾ ಮುತುವರ್ಜಿ ವಹಿಸಿ ಈ ದೃಶ್ಯವನ್ನು ನಿರ್ದೇಶನ ಮಾಡಿದ್ದಾರೆ. ಏಕೆಂದರೆ ಇಂತಹ ದೃಶ್ಯ ಮಾಡುವ ವೇಳೆ ನೋಡುಗರಿಗೆ ಇಷ್ಟವಾಗಬೇಕು. ಆದ್ದರಿಂದಲೇ ಪ್ರತಿ ಬಾರಿ ಮಾನಿಟರ್ ನೋಡಿ ದೃಶ್ಯ ಚೆನ್ನಾಗಿಲ್ಲಾ ಎಂದರೆ ರಿ ಟೇಕ್ ಮಾಡುತ್ತಿದ್ದರು. ಅಂದಹಾಗೇ ಇದನ್ನು ಅವರು ಯಾವುದೋ ಫೀಲಿಂಗ್‍ನಲ್ಲಿ ಹೇಳಿದ್ದಾರೆ. ಅದು 10 ಬಾರಿ ಪದೇ ಪದೇ ಕೇಳಿರುವುದರಿಂದ ಎಮೋಷನಲ್ ಆಗಿ ಹೇಳಿದ್ದಾರೆ ಅಷ್ಟೇ ಎಂದಿದ್ದಾರೆ.

    ಆರ್. ಚಂದ್ರು ನಿರ್ದೇಶನದ ಸಿನಿಮಾಗೆ ಜನ ಒಳ್ಳೆ ಪ್ರತಿಕ್ರಿಯೆ ನೀಡಿದ್ದಾರೆ. ಥೇಟರ್‍ನಲ್ಲಿ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ರಚಿತಾ ರಾಮ್ ಹೇಳಿಕೆ ಮಾತ್ರ ಮತ್ತೆ ಮತ್ತೆ ಸೌಂಡ್ ಮಾಡುತ್ತಿದೆ.

  • ಎಚ್‍ಡಿ ಕುಮಾರಸ್ವಾಮಿ ಪರ ನಟಿ ರಚಿತಾ ರಾಮ್ ಪ್ರಚಾರ

    ಎಚ್‍ಡಿ ಕುಮಾರಸ್ವಾಮಿ ಪರ ನಟಿ ರಚಿತಾ ರಾಮ್ ಪ್ರಚಾರ

    ಬೆಂಗಳೂರು: ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದಂತೆ ಹಲವು ಸ್ಯಾಡಲ್‍ವುಡ್ ನಟ ನಟಿಯರು ತಮ್ಮ ನೆಚ್ಚಿನ ರಾಜಕೀಯ ನಾಯಕರ ಪರ ಪ್ರಚಾರ ನಡೆಸುತ್ತಾರೆ. ಸದ್ಯ ಈ ಸಾಲಿನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಣಿಸಿಕೊಂಡು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ್ದಾರೆ.

    ಮತದಾನ ಮಹತ್ವದ ಕುರಿತ ವಿಡಿಯೋವೊಂದರಲ್ಲಿ ಮಾತನಾಡಿರುವ ರಚಿತಾ ರಾಮ್ ಕರ್ನಾಟಕ ಅಭಿವೃದ್ಧಿ ಕಡೆ ನಡೆಯಲು ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿ ಎಂದು ತಿಳಿಸಿದ್ದಾರೆ.

    ಕರ್ನಾಟಕ ರಾಜ್ಯ ಅಭಿವೃದ್ಧಿಗೆ ಕುಮಾರಸ್ವಾಮಿ ಅವರು ತಮ್ಮ 20 ತಿಂಗಳ ಆಡಳಿತ ಅವಧಿಯಲ್ಲಿ ಮಾಡಿರುವ ಸಾಧನೆ ಉದಾಹರಣೆಯಾಗಿದೆ. ರಾಜ್ಯದಲ್ಲಿ ರೈತರ ಪರ ಹೋರಾಟ ನಡೆಸುವ ನಾಯಕರ ಅಗತ್ಯವಿದ್ದು, ಕುಮಾರ ಸ್ವಾಮಿಯವರು ಒಳ್ಳೆಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕರ್ನಾಟಕ ಭವಿಷ್ಯಕ್ಕಾಗಿ ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿ ಆಗುವುದು ಬಹಳ ಮುಖ್ಯವಾಗಿದ್ದು, ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಎಂದು ವಿಡಿಯೋದಲ್ಲಿ ಕೇಳಿಕೊಂಡಿದ್ದಾರೆ.