Tag: Actress Prema

  • ಮರಳಿ ಮನಸಾಗಿದೆ ಸಾಂಗ್ ರಿಲೀಸ್ ಮಾಡಿದ ನಟಿ ಪ್ರೇಮಾ

    ಮರಳಿ ಮನಸಾಗಿದೆ ಸಾಂಗ್ ರಿಲೀಸ್ ಮಾಡಿದ ನಟಿ ಪ್ರೇಮಾ

    ಮುದೇಗೌಡ್ರು ನವೀನ್ ಕುಮಾರ್ ಆರ್.ಓ ಹಾಗೂ ತೆಲಿಗಿ ಮಲ್ಲಿಕಾರ್ಜುನಪ್ಪ ಅವರು ಚೊಚ್ಚಲ ಬಾರಿಗೆ ನಿರ್ಮಿಸಿರುವ, ನಾಗರಾಜ್ ಶಂಕರ್ ನಿರ್ದೇಶನದಲ್ಲಿ ಅರ್ಜುನ್ ವೇದಾಂತ್ ನಾಯಕರಾಗಿ ನಟಿಸಿರುವ `ಮರಳಿ ಮನಸಾಗಿದೆ’ ಚಿತ್ರದ ಹಾಡು ಬಿಡುಗಡೆ ಆಗಿದೆ. ಸಾಹಿತಿ ಕೆ.ಕಲ್ಯಾಣ್ ಅವರು ಬರೆದಿರುವ ಓಡುವ ನದಿಗೆ ಎಂಬ ಹಾಡನ್ನು ಜನಪ್ರಿಯ ನಟಿ ಪ್ರೇಮ ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ.

    ಅನುರಾಧ ಭಟ್ ಅವರು ಈ ಸಮಧುರ ಗೀತೆಯನ್ನು ಹಾಡಿದ್ದು, ವಿನು ಮನಸು ಸಂಗೀತ ನೀಡಿದ್ದಾರೆ. ಇದು ಚಿತ್ರದ ನಾಲ್ಕನೇ ಹಾಗೂ ಕೊನೆಯ ಹಾಡಾಗಿದೆ. ಈವರೆಗೂ ಬಿಡುಗಡೆಯಾಗಿರುವ ಚಿತ್ರದ ಮೂರು ಹಾಡುಗಳು ಕೂಡ ಜನಮನಸೂರೆಗೊಂಡಿದೆ. ಈ ಹಾಡಿಗೂ ಸಹ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ: ಪತ್ರ ಬರೆದು ಅಭಿಮಾನಿಗಳಿಗೆ ಶಾಕ್ ಕೊಟ್ಟ ಅನುಷ್ಕಾ ಶೆಟ್ಟಿ!

    ಯುವಜನತೆಗೆ ಹತ್ತಿರವಾದ ಚಿತ್ರದ ಜೊತೆಗೆ ಸಂಬಂಧಗಳ ಮೌಲ್ಯಗಳನ್ನು ತಿಳಿಸುವ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ಅಂತಿಮ ಹಂತದಲ್ಲಿದೆ. ಸದ್ಯದಲ್ಲೇ ಪ್ರಥಮಪ್ರತಿ ಸಿದ್ದವಾಗಲಿದೆ. ನಿರ್ದೇಶಕ ನಾಗರಾಜ್ ಶಂಕರ್ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಸಂಭಾಷಣೆ ಬರೆದಿದ್ದು, ವಿನು ಮನಸು ಸಂಗೀತ ನೀಡಿದ್ದಾರೆ. ಹಾಲೇಶ್ ಎಸ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ, ಆಶಿತ್ ಸುಬ್ರಹ್ಮಣ್ಯ ಸಹ ನಿರ್ದೇಶನ ಹಾಗೂ ವಿಜಯ್ ಕುಮಾರ್ ಅವರ ನಿರ್ಮಾಣ ಮೇಲ್ವಿಚಾರಣೆ ‘ಮರಳಿ ಮನಸಾಗಿದೆ’ ಚಿತ್ರಕ್ಕಿದೆ.

    ಅರ್ಜುನ್ ವೇದಾಂತ್, ನಿರೀಕ್ಷಾ ಶೆಟ್ಟಿ, ಸ್ಮೃತಿ ವೆಂಕಟೇಶ್, ಟಿ.ಎಸ್. ನಾಗಾಭರಣ, ಸ್ವಾತಿ, ಸಂಗೀತ, ಮಾನಸಿ ಸುಧೀರ್, ಭೋಜರಾಜ್ ವಾಮಂಜೂರ್, ಸೀರುಂಡೆ ರಘು ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ: ರಾಮನ ಪಾತ್ರಕ್ಕಾಗಿ ಮಾಂಸಾಹಾರ, ಮದ್ಯ ಸೇವನೆ ಬಿಟ್ಟಿದ್ದರಂತೆ ರಣ್‌ಬೀರ್ ಕಪೂರ್

  • ರಶ್ಮಿಕಾ ಹೇಳಿಕೆ ವಿವಾದ | ಕೊಡವ ಸಮುದಾಯ ಎಲ್ಲರನ್ನೂ ಬೆಂಬಲಿಸಿದೆ: ನಟಿ ಪ್ರೇಮ

    ರಶ್ಮಿಕಾ ಹೇಳಿಕೆ ವಿವಾದ | ಕೊಡವ ಸಮುದಾಯ ಎಲ್ಲರನ್ನೂ ಬೆಂಬಲಿಸಿದೆ: ನಟಿ ಪ್ರೇಮ

    – ಈಗಿನವರು ಬೇಗ ಬೆಳೆಯಬೇಕು, ಹಣ ಗಳಿಸಬೇಕು ಅನ್ನೋ ಮನಸ್ಥಿತಿಯಲ್ಲಿದ್ದಾರೆಂದು ಬೇಸರ

    ಕೊಡವ ಸಮುದಾಯ ಎಲ್ಲರನ್ನೂ ಬೆಂಬಲಿಸಿದೆ, ಈ ಕುರಿತು ನಮ್ಮ ಸಮುದಾಯದವರು ಮಾತನಾಡುತ್ತಾರೆ ಎಂದು ಹಿರಿಯ ನಟಿ ಪ್ರೇಮ (Actress Prema) ತಿಳಿಸಿದರು.

    ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಮೊದಲು ಬಂದಿದ್ದು ನಾನೇ ಎಂಬ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹೇಳಿಕೆ ಸಂಬಂಧ `ಪಬ್ಲಿಕ್ ಟಿವಿ’ ಜೊತೆಗೆ ಮಾತನಾಡಿದ ಅವರು, ನಡೆದಿರುವ ವಿಷಯದ ಬಗ್ಗೆ ಜನರು ಕಾಮೆಂಟ್ಸ್ ಮೂಲಕ ಅಭಿಪ್ರಾಯ ತಿಳಿಸುತ್ತಿದ್ದಾರೆ, ನಾನೇನು ಹೇಳಬೇಕಾಗಿಲ್ಲ. ಒಬ್ಬೊಬ್ಬರ ಭಾವನೆಗಳು ಒಂದೊಂದು ರೀತಿಯಾಗಿರುತ್ತೆ. ಅವರು ಈ ಸಮುದಾಯದ ವಿಷಯವನ್ನು ಯಾಕೆ ಮಾತನಾಡಿದ್ರೋ ನನಗೂ ಗೊತ್ತಾಗಿಲ್ಲ. ಆದರೆ ನಮ್ಮ ಸಮುದಾಯವನ್ನು ನಾನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದರು.ಇದನ್ನೂ ಓದಿ: ರಶ್ಮಿಕಾ ಬೈ ಮಿಸ್‌ ಆಗಿ ಹೇಳಿರಬೇಕು, ಕ್ಷಮಿಸಿಬಿಡೋಣ: ನಟಿ ಹರ್ಷಿಕಾ ಪೂಣಚ್ಚ

    ಕನ್ನಡ ಚಿತ್ರರಂಗಕ್ಕೆ ಕೊಡವ ಸಮುದಾಯದಿಂದ ನನಗಿಂತ ಮುಂಚೆ ಚಾಮರಾಜಪೇಟೆ ಮೂಲದ ಶಶಿಕಲಾ ಎಂಬುವವರು ಬಂದಿದ್ದರು. ಅವರು ಪೋಷಕ ಪಾತ್ರದಲ್ಲಿ ಮೊದಲು ಕಾಣಿಸಿಕೊಂಡಿದ್ದರು. ಅದಾದ ಬಳಿಕ ನಾನು ನಟಿಯಾಗಿ ಬಂದೆ. ನಂತ್ರ ಕೊಡವ ಸಮುದಾಯದ ಹಲವಾರು ಜನರು ಚಿತ್ರರಂಗಕ್ಕೆ ಬಂದಿದ್ದಾರೆ ಎಂದು ಹೇಳಿದರು.

    ನಟಿ ರಶ್ಮಿಕಾ ಮಂದಣ್ಣ ಹೇಳಿಕೆ ಕುರಿತು ಮಾತನಾಡಲು ನಮ್ಮ ಕೊಡವ ಸಮುದಾಯವಿದೆ, ಅವರು ಚರ್ಚೆ ಮಾಡಿ, ಮಾತನಾಡುತ್ತಾರೆ. ಈ ಬಗ್ಗೆ ಮಾತಾಡುವಷ್ಟು ದೊಡ್ಡವಳು ನಾನಲ್ಲ. ಅಷ್ಟೊಂದು ದೊಡ್ಡ ವ್ಯಕ್ತಿಯೂ ನಾನಲ್ಲ. ನನಗಿನ್ನೂ ಕಲಿಯೋಕೆ ತುಂಬಾ ಇದೆ. ಆದರೆ ಮೊದಲಿನಿಂದಲೂ ಕೊಡವ ಸಮುದಾಯದವರು ಎಲ್ಲರನ್ನೂ ಬೆಂಬಲಿಸಿದ್ದಾರೆ ಎಂದರು.

    ಈಗಿನವರ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ನಾನು ಮೊದಲಿನಿಂದಲೂ ನನಗೆ ಕೊಟ್ಟಿರುವ ಪಾತ್ರವನ್ನು ಸರಿಯಾಗಿ ನಿಭಾಯಿಸಿಕೊಂಡು ಬಂದಿದ್ದೇನೆ. ಅದರ ಹೊರತಾಗಿ ನಿರ್ದೇಶಕರಿಗೆ, ನಿರ್ಮಾಪಕರಿಗೆ ಯಾವತ್ತೂ ಯಾವುದೇ ರೀತಿಯಲ್ಲಿಯೂ ನೋಯಿಸಿಲ್ಲ. ಚಿತ್ರರಂಗದಲ್ಲಿ ನನಗಿಂತ ಕಲ್ಪನಾ, ಆರತಿ, ಮಂಜುಳಾ, ಭಾರತಿ ಇವರೆಲ್ಲರೂ ಅಗ್ರ ಸ್ಥಾನದಲ್ಲಿರುವ ನಟಿಯರು. ಇನ್ನೂ ನಾವೆಲ್ಲರು ರಾಜಕುಮಾರ್ ಸರ್, ವಿಷ್ಟುವರ್ಧನ್ ಸರ್ ಅವರನ್ನು ನೋಡಿಕೊಂಡು ಬೆಳೆದಿದ್ದೇವೆ. ಆದರೆ ಈಗಿನವರೂ ಬೇಗ ಬೆಳೆಯಬೇಕು, ಹಣ ಗಳಿಸಬೇಕು, ಕಾರು ತೆಗೆದುಕೊಳ್ಳಬೇಕು ಅನ್ನೋ ಮನಸ್ಥಿತಿಯಲ್ಲಿದ್ದಾರೆ. ಮೊದಲು ಯಾವುದೇ ಕೆಲಸದಲ್ಲಿಯೂ ಎಲ್ಲರೂ ತಮ್ಮದೇ ಆದ ಸ್ಥಾನವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.ಇದನ್ನೂ ಓದಿ:ಕೊಡವ ಕಮ್ಯೂನಿಟಿಯಿಂದ ಇಂಡಸ್ಟ್ರಿಗೆ ಬಂದಿದ್ದು ನಾನೇ ಫಸ್ಟ್ – ರಶ್ಮಿಕಾ ಮತ್ತೊಂದು ಯಡವಟ್ಟು 

  • ಮದುವೆ ಬಗ್ಗೆ ನಾನು ಯೋಚನೆ ಮಾಡಿಲ್ಲ: ಪ್ರೇಮಾ

    ಮದುವೆ ಬಗ್ಗೆ ನಾನು ಯೋಚನೆ ಮಾಡಿಲ್ಲ: ಪ್ರೇಮಾ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k