Tag: actress Pranitha Subhash

  • ಹಳದಿ ಬಣ್ಣದ ಸೀರೆ ಉಟ್ಟು ಸೀಮಂತ ಸಂಭ್ರಮದಲ್ಲಿ ಮಿಂಚಿದ ಪ್ರಣಿತಾ ಸುಭಾಷ್

    ಹಳದಿ ಬಣ್ಣದ ಸೀರೆ ಉಟ್ಟು ಸೀಮಂತ ಸಂಭ್ರಮದಲ್ಲಿ ಮಿಂಚಿದ ಪ್ರಣಿತಾ ಸುಭಾಷ್

    ಸ್ಯಾಂಡಲ್‌ವುಡ್ ನಟಿ ಪ್ರಣಿತಾ ಸುಭಾಷ್ ಸೀಮಂತದ ಸಂಭ್ರಮದ ಖುಷಿಯಲ್ಲಿದ್ದಾರೆ. ಈ ವೇಳೆ ತಮ್ಮ ಸೀಮಂತ ಶಾಸ್ತ್ರದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಪ್ರಣಿತಾ ಸೀಮಂತದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

    ನಟಿ ಪ್ರಣಿತಾ `ಪೊರ್ಕಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ್ರು. ನಂತರ ಕನ್ನಡ ಜತೆ ತೆಲುಗು, ಹಿಂದಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ್ರು. ಕಳೆದ ವರ್ಷ ಲಾಕ್‌ಡೌನ್‌ನಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಉದ್ಯಮಿ ನಿತಿನ್ ರಾಜು ಜತೆ ಹಸೆಮಣೆ ಏರಿದ್ರು.ಇತ್ತೀಚೆಗಷ್ಟೇ ತಾವು ತಾಯಿಯಾಗುತ್ತಿರುವ ಕುರಿತು ವಿಶೇಷ ಫೋಟೋಶೂಟ್ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ತಿಳಿಸಿದ್ರು. ಈಗ ಸೀಮಂತದ ಫೋಟೋಗಳನ್ನು ನಟಿ ಪ್ರಣಿತಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ನಟಿ ಪ್ರಣಿತಾ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲೂ ಆಕ್ಟೀವ್ ಆಗಿದ್ರು. ಬೇಡಿಕೆಯಲ್ಲಿರುವಾಗಲೇ ಕಳೆದ ವರ್ಷ ಮೇನಲ್ಲಿ ನಿತಿನ್ ರಾಜು ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರು ಪರಸ್ಪರ ಪ್ರೀತಿಸಿ ಗುರು ಹಿರಿಯರ ಒಪ್ಪಿಗೆಯ ಮೇರೆಗೆ ಹಸೆಮಣೆ ಏರಿದ್ದಾರೆ. ಇದೀಗ ಹಳದಿ ಬಣ್ಣದ ಸೀರೆಯುಟ್ಟು ಮಿರ ಮಿರ ಅಂತಾ ಸೀಮಂತದ ಶಾಸ್ತ್ರದಲ್ಲಿ ಪ್ರಣಿತಾ ಮಿಂಚಿದ್ದಾರೆ.

    ಕುಟುಂಬಸ್ಥರ ಮತ್ತು ಆಪ್ತರ ಸಮ್ಮುಖದಲ್ಲಿ ಸೀಮಂತ ಶಾಸ್ತ್ರ ನೆರವೇರಿದ್ದು, ಪ್ರಣಿತಾ ಕೆಂಪು ಕಲರ್ ಬ್ಲೋಸ್ ಜತೆ ಹಳದಿ ಬಣ್ಣದ ಸೀರೆಯುಟ್ಟು ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನೆಚ್ಚಿನ ನಟಿಯ ಸೀಮಂತದ ಸಂಭ್ರಮದ ಖುಷಿ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಸದ್ಯ ಈ ಫೋಟೋಗಳು ಭಾರೀ ವೈರಲ್ ಆಗುತ್ತಿದೆ.

  • ಸರ್ಕಾರಿ ಶಾಲೆಯನ್ನು ದತ್ತು ಪಡೆದ ನಟಿ ಪ್ರಣಿತಾ ಸುಭಾಷ್

    ಸರ್ಕಾರಿ ಶಾಲೆಯನ್ನು ದತ್ತು ಪಡೆದ ನಟಿ ಪ್ರಣಿತಾ ಸುಭಾಷ್

    ಬೆಂಗಳೂರು: ಹಾಸನ ಜಿಲ್ಲೆಯ ಸರ್ಕಾರಿ ಶಾಲೆಗೆ ಮೂಲಸೌಕರ್ಯ ಒದಗಿಸಲು ನಟಿ ಪ್ರಣಿತಾ ಸುಭಾಷ್ 5 ಲಕ್ಷ ರೂ. ಸಹಾಯ ಧನ ನೀಡಿದ್ದು, ಶಾಲೆಯನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದ್ದಾರೆ.

    ಸರ್ಕಾರಿ ಶಾಲೆ ಉಳಿಸಿ ಆಂದೋಲನ ಸಮಿತಿ ಇಂದು ಸುದ್ದಿಗೋಷ್ಠಿ ಆಯೋಜಿಸಿತ್ತು. ಈ ವೇಳೆ ಸಮಿತಿಯ ರಾಜ್ಯ ಶಿಕ್ಷಣ ರಾಯಭಾರಿಯನ್ನಾಗಿ ನಟಿ ಪ್ರಣಿತಾ ಅವರನ್ನು ನೇಮಕ ಮಾಡಲಾಯಿತು. ಜವಾಬ್ದಾರಿ ಹೊತ್ತ ಪ್ರಣಿತಾ ಹಾಸನ ಜಿಲ್ಲೆಯ ಸರ್ಕಾರಿ ಶಾಲೆಯೊಂದನ್ನು ದತ್ತು ತೆಗೆದುಕೊಳ್ಳುವ ಭರವಸೆ ನೀಡಿದರು. ಅಷ್ಟೇ ಅಲ್ಲದೆ ಆ ಶಾಲೆಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸಲು 5 ಲಕ್ಷ ರೂ. ಚೆಕ್ ನೀಡಿದ್ದಾರೆ.

     

    ಈ ಹಿಂದೆ ನಾನು ಟೀಚ್ ಫಾರ್ ಚೇಂಚ್ ಆಂದೋಲನದಲ್ಲಿ ಭಾಗಿಯಾಗಿದ್ದೆ. ಕೆಲ ಸರ್ಕಾರಿ ಶಾಲೆಗೆ ಹೋಗಿ ಮಕ್ಕಳಿಗೆ ಪಾಠ ಮಾಡಿದಾಗ ಅಲ್ಲಿನ ನೈಜ ಸ್ಥಿತಿ ಅರ್ಥವಾಯಿತು. ಮೂಲಸೌಲಭ್ಯಗಳಿಲ್ಲದೇ ಸರ್ಕಾರಿ ಶಾಲೆಗಳು ಸೊರಗುತ್ತಿವೆ. ಶಾಲೆಯಲ್ಲಿ ಶೌಚಾಲಯಗಳೇ ಇರಲಿಲ್ಲ. ಇದರಿಂದಾಗಿ ವಿದ್ಯಾರ್ಥಿಯರೂ ಪರದಾಡುವಂತಾಗುತ್ತಿತ್ತು. ಈ ದುಸ್ಥಿತಿಯನ್ನು ಅರಿತು ನಾನು ಶಾಲೆಯನ್ನು ದತ್ತು ತೆಗೆದುಕೊಳ್ಳುವ ನಿರ್ಧಾರಕ್ಕೆ ಮುಂದಾಗಿರುವೆ ಎಂದು ಹೇಳಿದ್ದಾರೆ.

    ಮೀಟೂ ಅಭಿಯಾನದ ಮೂಲಕ ಮಹಿಳೆಯರಿಗೆ ಧ್ವನಿ ಸಿಕ್ಕಿದೆ. ಎಲ್ಲರೂ ಧೈರ್ಯವಾಗಿ ಮಾತನ್ನ ಹೊರಹಾಕುತ್ತಿದ್ದಾರೆ. ಆದರೆ ಸಿನಿಮಾ ರಂಗದಲ್ಲಿ ನನಗೆ ಯಾವುದೇ ರೀತಿಯ ಲೈಂಗಿಕ ಕಿರುಕುಳದ ಅನುಭವವಾಗಿಲ್ಲ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ನಾನು ಎಲ್ಲ ಕನ್ನಡ ಅಭಿಮಾನಿಗಳನ್ನ ಇಷ್ಟಪಡುತ್ತೇನೆ: ಬಾಲಿವುಡ್ ನಟ ಆಯುಷ್ಮಾನ್ ಖುರಾನಾ

    ನಾನು ಎಲ್ಲ ಕನ್ನಡ ಅಭಿಮಾನಿಗಳನ್ನ ಇಷ್ಟಪಡುತ್ತೇನೆ: ಬಾಲಿವುಡ್ ನಟ ಆಯುಷ್ಮಾನ್ ಖುರಾನಾ

    ಬೆಂಗಳೂರು: ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಕನ್ನಡ ಅಭಿಮಾನಿಗಳು ಎಂದರೇ ನನಗೆ ಇಷ್ಟ, ನಾನು ಒಳ್ಳೇ ಹುಡುಗ ಎಂದು ಹೇಳಿದ್ದಾರೆ.

    ಕನ್ನಡತಿ ಪ್ರಣೀತಾ ಸುಭಾಷ್ ಅವರೊಂದಿಗೆ ಅಲ್ಬಂಸಾಂಗ್ ಒಂದರಲ್ಲಿ ನಟಿಸಿದ್ದ ಬಾಲಿವುಡ್ ನಟ ಆಯುಷ್ಮಾನ್ ಕುರಾನ್ ಪ್ರಣೀತಾ ಅವರೊಂದಿಗೆ ಮಾತುಕತೆ ನಡೆಸುವ ವೇಳೆ ಕನ್ನಡದಲ್ಲೇ ಮಾತನಾಡಿ ತಮ್ಮ ಕನ್ನಡ ಪ್ರೇಮ ಮೆರೆದಿದ್ದಾರೆ. ಸದ್ಯ ಈ ವಿಡಿಯೋವನ್ನು ನಟಿ ಪ್ರಣೀತಾ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಯಾರು ಕನ್ನಡ ಕಲಿಯುತ್ತಿದ್ದಾರೆ ನೋಡಿ ಎಂದು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

    ಪ್ರಣೀತಾ ಹಾಗೂ ಆಯುಷ್ಮಾನ್ ಖುರಾನಾ ಇಬ್ಬರು ಒಟ್ಟಿಗೆ ಕಾಣಿಸಿದ್ದ ಆಲ್ಬಂಸಾಂಗ್ ಅನ್ನು ಸುರೇಶ್ ತ್ರಿವೇಣಿ ನಿರ್ದೇಶಿಸಿದ್ದರು. ಈ ಆಲ್ಬಂನ `ಚನ್ ಕಿತ್ತಾನ್’ ಶೀರ್ಷಿಕೆ ಅಡಿ ಬಿಡುಗಡೆಯಾಗಿದ್ದ ಹಾಡಿನಲ್ಲಿ ಪ್ರಣೀತಾ ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಹುಡುಗಿಯಾಗಿ ಕಾಣಿಸಿಕೊಂಡಿದ್ದರು. ಒಂದೇ ಹಾಡಿನಲ್ಲಿ ಉತ್ತಮ ಸಂದೇಶ, ಸನ್ನಿವೇಶ ಮೂಡುವಂತೆ ಮಾಡಿ ನಿರ್ದೇಶಕರು ಸೈ ಎನಿಸಿಕೊಂಡಿದ್ದರು.

    ಹಾಡಿನ ಕುರಿತು ಬಾಲಿವುಡ್ ನ ಹಲವು ಸ್ಟಾರ್ ಸೆಲೆಬ್ರೆಟಿಗಳು ನಟಿ ಪ್ರಣೀತಾ ಅವರಿಗೆ ಅಭಿನಂದನೆ ತಿಳಿಸಿದ್ದರು. ಅಲ್ಲದೇ ಹಾಡಿಗೆ ಜನತೆಯಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಪ್ರಣೀತಾ ಸಂತಸ ವ್ಯಕ್ತಪಡಿಸಿದ್ದರು.