Tag: actress meghana raj

  • ಅಕ್ಟೋಬರ್ ತಿಂಗಳು ಸ್ಪೆಷಲ್ – ವಿಶೇಷ ಪೋಸ್ಟ್ ಹಂಚಿಕೊಂಡ ಮೇಘನಾ

    ಅಕ್ಟೋಬರ್ ತಿಂಗಳು ಸ್ಪೆಷಲ್ – ವಿಶೇಷ ಪೋಸ್ಟ್ ಹಂಚಿಕೊಂಡ ಮೇಘನಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೆಘನಾ ರಾಜ್ ಪತಿ ಚಿರಂಜೀವಿ ಸರ್ಜಾ ಸಾವಿನ ನಂತರ ತೀವ್ರ ನೋವು ಅನುಭವಿಸಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಮಗ ರಾಯಾನ್ ರಾಜ್ ಸರ್ಜಾ ಹುಟ್ಟಿದ ನಂತರದಲ್ಲಿ ಅವರ ಮುಖದಲ್ಲಿ ಮಂದಹಾಸ ಮೂಡಿದೆ. ಸೋಶಿಯಲ್ ಮೀಡಿಯಾ ಮೂಲಕವಾಗಿ ನಿರಂತರ ಸಂಪರ್ಕದಲ್ಲಿ ಇರುವ ನಟಿ ಈಗ ಅಕ್ಟೋಬರ್ ವಿಶೇಷ ತಿಂಗಳು ಎಂದು ಪೋಸ್ಟ್ ಮಾಡಿದ್ದಾರೆ.

    ಮೇಘನಾಗೆ ಅಕ್ಟೋಬರ್ ತಿಂಗಳು ವಿಶೇಷ ಏಕೆ ಅದಕ್ಕೆ ಕಾರಣ ಇದೆ. ಮೇಘನಾ ರಾಜ್ ಪತಿ ಚಿರಂಜೀವಿ ಸರ್ಜಾ ಹಾಗೂ ಮಗ ರಾಯನ್ ರಾಜ್ ಸರ್ಜಾ ಇಬ್ಬರೂ ಹುಟ್ಟಿದ್ದು ಅಕ್ಟೋಬರ್ ತಿಂಗಳಲ್ಲೇ. ಕೇವಲ ಐದು ದಿನಗಳ ಅಂತರದಲ್ಲಿ ಇಬ್ಬರ ಜನ್ಮದಿನ ಬರಲಿದೆ. ಅಕ್ಟೋಬರ್ 17 ಚಿರಂಜೀವಿ ಜನ್ಮದಿನ. ರಾಯನ್ ಹುಟ್ಟಿದ್ದು ಅಕ್ಟೋಬರ್ 22ರಂದು. ಇದು ಮೇಘನಾಗೆ ಖುಷಿಯ ವಿಚಾರ. ಈ ಬಗ್ಗೆ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಸ್ಟೇಟಸ್ ಹಾಕಿದ್ದಾರೆ. ಇದನ್ನೂ ಓದಿ:  ಮದುವೆ ಊಟಕ್ಕೆ ಕರೆದಿಲ್ಲವೆಂದು ಫೋಟೋಗಳನ್ನೇ ಡಿಲೀಟ್ ಮಾಡಿದ ಫೋಟೋಗ್ರಾಫರ್!

     

    ಚಿರಂಜೀವಿ ಸರ್ಜಾ ಮೃತಪಟ್ಟ ನಂತರ ಅಭಿಮಾನಿಗಳು ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇದು ಅವರು ಇಲ್ಲದೆ ಆಚರಿಸುತ್ತಿರುವ ಎರಡನೇ ವರ್ಷದ ಜನ್ಮದಿನ. ಈ ವಿಶೇಷ ದಿನದಂದು ಕುಟುಂಬದವರು ಚಿರು ಸಮಾಧಿಗೆ ತೆರಳಿ ವಿಶೇಷ ಪೂಜೆ ಅರ್ಪಿಸುವ ಸಾಧ್ಯತೆ ಇದೆ. ಇನ್ನು ರಾಯನ್‍ಗೆ ಇದು ಮೊದಲ ವರ್ಷದ ಹುಟ್ಟುಹಬ್ಬ. ಹೀಗಾಗಿ ಕುಟುಂಬದವರು ಬರ್ತ್ ಡೇಯನ್ನು ಅದ್ದೂರಿಯಾಗಿ ಆಚರಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಮೇಘನಾ ರಾಜ್ ಅವರ ಅಭಿಮಾನಿಗಳ ಪಾಲಿಗೆ ಈ ತಿಂಗಳು ತುಂಬಾನೇ ವಿಶೇಷವಾಗಿರಲಿದೆ.

    ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣದ ವೇಳೆ ಮೇಘನಾ ರಾಜ್ ಗರ್ಭಿಣಿಯಾಗಿದ್ದರು. ಈ ಎಲ್ಲಾ ನೋವುಗಳನ್ನು ದಾಟಿ ಮೇಘನಾ ರಾಜ್ ಮುಂದೆ ಬಂದಿದ್ದಾರೆ. ಚಿರುವನ್ನು ಕಳೆದುಕೊಂಡು ಒಂದು ವರ್ಷದ ಮೇಲಾಗಿದ್ದು, ಅವರು ಈಗ ಮೊದಲಿನ ಮನಸ್ಥಿತಿಗೆ ಮರಳುತ್ತಿದ್ದಾರೆ.

  • ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ವಿರುದ್ಧ ಪ್ರತಿಭಟನೆ

    ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ವಿರುದ್ಧ ಪ್ರತಿಭಟನೆ

    ಬೆಂಗಳೂರು: ಹಿರಿಯ ನಟ ಸುಂದರ್ ರಾಜ್ ಅವರ ಪುತ್ರಿ ನಟಿ ಮೇಘನಾ ರಾಜ್ ಅವರ ಸಿನಿಮಾದ ಡೈಲಾಗ್‍ವೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ.

    ಜಿಂದಾ ಸಿನಿಮಾದಲ್ಲಿ `ಗಂಡಸರು ಕಚಡಾ ನನ್ ಮಕ್ಳು’ ಅಂತಾ ಅವಹೇಳನಾಕಾರಿ ಪದ ಬಳಕೆ ಮಾಡಿರುವ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

    ಈ ಅವಹೇಳನಾಕಾರಿ ಪದ ಬಳಕೆಗೆ ಕ್ಷಮೆ ಕೋರಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದು, ಸದ್ಯ ಪ್ರತಿಭಟನಾಕಾರರನ್ನು ನಟಿ ಮೇಘನಾ ರಾಜ್ ಸಮಾಧಾನಪಡಿಸುತ್ತಿದ್ದಾರೆ. ಭಾನುವಾರದಿಂದಲೇ ಮೇಘನಾ ರಾಜ್ ಮನೆ ಮುಂದೆ ಪ್ರತಿಭಟನೆ ನಡೆಯುತ್ತಿದೆ. ಜನ್ಮಭೂಮಿ ರಕ್ಷಣಾ ಪಡೆ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿದೆ.

    ಮುಸ್ಸಂಜೆ ಮಹೇಶ್ ನಿರ್ದೇಶನದಲ್ಲಿ ಜಿಂದಾ ಸಿನಿಮಾ ಮೂಡಿ ಬರುತ್ತಿದ್ದು, ಇದೇ ಜೂನ್ ತಿಂಗಳಲ್ಲಿ ತೆರೆಗೆ ಬರಲಿದೆ.