Tag: Actress Leelavati

  • ನಟಿ ಲೀಲಾವತಿ ಎಸ್ಟೇಟ್ ಬಳಿ ಅಗ್ನಿ ಅವಘಡ – ತಪ್ಪಿದ ಭಾರೀ ಅನಾಹುತ

    ನಟಿ ಲೀಲಾವತಿ ಎಸ್ಟೇಟ್ ಬಳಿ ಅಗ್ನಿ ಅವಘಡ – ತಪ್ಪಿದ ಭಾರೀ ಅನಾಹುತ

    ನೆಲಮಂಗಲ: ಹಿರಿಯ ನಟಿ ದಿ.ಲೀಲಾವತಿಯವರ ಎಸ್ಟೇಟ್ ಬಳಿ ಅಗ್ನಿ ಅವಘಡ ಸಂಭವಿಸಿದ್ದು, ತೋಟದ ಸಿಬ್ಬಂದಿ ಬೆಂಕಿ ನಂದಿಸಿ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.

    ಬೆಂಗಳೂರು (Bengaluru) ಹೊರವಲಯದ ನೆಲಮಂಗಲ (Nelamangala) ತಾಲೂಕಿನ ಸೋಲದೇವನಹಳ್ಳಿಯ ಹಿರಿಯ ನಟಿ ದಿ.ಲೀಲಾವತಿ ತೋಟದ ಪಕ್ಕದಲ್ಲಿ ಈ ಅವಘಡ ಸಂಭವಿಸಿದೆ. ಅರಣ್ಯ ಪ್ರದೇಶ ಹಾಗೂ ಅಕ್ಕಪಕ್ಕದ ರೈತರ ಜಮೀನಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.ಇದನ್ನೂ ಓದಿ: ಡೈರೆಕ್ಟರ್ ಅಶುತೋಷ್ ಗೋವಾರಿಕರ್ ಪುತ್ರನ ಮದುವೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡ್ರು ಐಶ್ವರ್ಯಾ ರೈ ದಂಪತಿ

    ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ವಿನೋದ್ ರಾಜ್ ತೋಟದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬರುವ ಮೊದಲೇ ತೋಟದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು. ಸ್ವಲ್ಪ ಯಾಮಾರಿದ್ದರೂ ಕೂಡ ಬೆಂಕಿ ಸಂಪೂರ್ಣವಾಗಿ ಲೀಲಾವತಿ ಎಸ್ಟೇಟ್ ಹಾಗೂ ತೋಟಕ್ಕೆ ಆವರಿಸಿಕೊಳ್ಳುತ್ತಿತ್ತು.

    ಬೇಸಿಗೆ ಹಿನ್ನೆಲೆ ಒಣಗಿದ ಅರಣ್ಯದಿಂದ ಕಾಡ್ಗಿಚ್ಚು ಉಂಟಾಗಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದ್ದು, ಸಂಪೂರ್ಣವಾಗಿ ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.ಇದನ್ನೂ ಓದಿ: ಮೈದಾನದಲ್ಲೇ ಕುಲದೀಪ್‌ಗೆ ಕೊಹ್ಲಿ, ರೋಹಿತ್‌ ಕ್ಲಾಸ್‌!

  • ಸ್ವಂತ ಜಮೀನು ಮಾರಿ ಆಸ್ಪತ್ರೆ ಕಟ್ಟಿಸಲು ಮುಂದಾದ ಹಿರಿಯ ನಟಿ ಲೀಲಾವತಿ: ಬಹುಪರಾಕ್ ಹೇಳಿದ ಕನ್ನಡ ಜನತೆ

    ಸ್ವಂತ ಜಮೀನು ಮಾರಿ ಆಸ್ಪತ್ರೆ ಕಟ್ಟಿಸಲು ಮುಂದಾದ ಹಿರಿಯ ನಟಿ ಲೀಲಾವತಿ: ಬಹುಪರಾಕ್ ಹೇಳಿದ ಕನ್ನಡ ಜನತೆ

    ಹಿರಿಯ ನಟಿ ಲೀಲಾವತಿ ಅವರು ತಮ್ಮ ಸ್ವಂತ ಜಮೀನು ಮಾರಿ, ಬೆಂಗಳೂರು ಗ್ರಾಮಾಂತರದ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಪ್ರಾಥಮಿಕ ಆಸ್ಪತ್ರೆಗೆ ನಿರ್ಮಿಸಲು ಮುಂದಾಗಿದ್ದಾರೆ. ಲೀಲಾವತಿ ಅವರ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹಿರಿಯ ನಟಿಯ ಈ ಸಮಾಜಮುಖಿ ಕೆಲಸಕ್ಕೆ ಕರುನಾಡೇ ಭೇಷ್ ಎಂದಿದೆ. ಇದನ್ನೂ ಓದಿ : ಇಡೀ ಥಿಯೇಟರ್ ನಲ್ಲಿ ಒಬ್ಬರೇ ಕೂತು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ವೀಕ್ಷಿಸಿದ ಡೈಮಂಡ್ ರವಿ

    ಈ ಮೊದಲು ಇದೇ ಗ್ರಾಮದಲ್ಲಿಯೇ ಲೀಲಾವತಿ ಮತ್ತು ಪುತ್ರ ವಿನೋದ್ ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡಿದ್ದರು. ಒಬ್ಬರು ವೈದ್ಯರನ್ನು ಕೊಡಿ ಎಂದು ಸರಕಾರಕ್ಕೆ ಹಲವು ಮನವಿಗಳನ್ನೂ ಸಲ್ಲಿಸಿದ್ದರು. ಕೊನೆಗೂ ವೈದ್ಯರಿಗೂ ತಾವೇ ಸಂಬಳ ಕೊಟ್ಟೂ, ಆರೋಗ್ಯ ಕೇಂದ್ರವನ್ನು ನೋಡಿಕೊಳ್ಳುವಂತೆ ಮಾಡಿದ್ದರು. ಇದೀಗ ತಮ್ಮ ಸ್ವಂತ ಹಣದಲ್ಲಿ ಅಲ್ಲಿಯೇ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದ್ದಾರೆ. ಇದನ್ನೂ ಓದಿ : ಎರಡು ಮಕ್ಕಳ ಜತೆಗೆ ಮತ್ತೊಂದು ಮಗು ಬೇಕು ಎಂದ ಬಿಗ್ ಬಾಸ್ ಬೆಡಗಿ ಡಿಂಪಿ

    ಆಸ್ಪತ್ರೆಯ ನಿರ್ಮಾಣದ ಕೆಲಸ ಈಗಾಗಲೇ ಶುರುವಾಗಿದೆ. ಮೊನ್ನೆಯಷ್ಟೇ ಭೂಮಿ ಪೂಜೆಯನ್ನು ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಕುಮಾರ್ ಮತ್ತು ನೆಲಮಂಗಲದ ಶಾಸಕ ಡಾ.ಕೆ ಶ್ರೀನಿವಾಸ ಮೂರ್ತಿ ಮಾಡಿದ್ದಾರೆ. ಸರಕಾರದ ಕಡೆಯಿಂದ ಸೌಲಭ್ಯ ಕೊಡಿಸುವುದಾಗಿಯೂ ಶಾಸಕರು ಹೇಳಿದ್ದಾರೆ. ಆದರೂ, ಲೀಲಾವತಿ ಅವರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಪ್ರಾಥಮಿಕ ಆಸ್ಪತ್ರೆಯನ್ನು ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದಾರೆ. ಇದನ್ನೂ ಓದಿ : ಗಣೇಶ್ ಮತ್ತು ಪ್ರೀತಂ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ

    ಈ ಆಸ್ಪತ್ರೆಯ ನಿರ್ಮಾಣಕ್ಕಾಗಿ ಅವರು ಚೆನ್ನೈನಲ್ಲಿರುವ ತಮ್ಮ ಸ್ವಂತ ಜಮೀನನ್ನು ಮಾರಾಟ ಮಾಡಲೂ ಮುಂದಾಗಿದ್ದಾರೆ. ಲೀಲಾವತಿ ಅವರಿಗೆ ಆರೋಗ್ಯ ಸರಿವಿಲ್ಲದ ಕಾರಣ, ಅಂದು ಭೂಮಿ ಪೂಜೆ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು. ಆದರೂ, ಮನೆಯಿಂದಲೇ ಈ ಸಮಾಜದ ಋಣ ತೀರಿಸಲು ನಾನು ಸದಾ ಸಿದ್ಧವೆಂಬ ಸಂದೇಶ ಕಳುಹಿಸಿದ್ದರು.