Tag: Actress Kangana Ranaut

  • ‘ಎಮರ್ಜೆನ್ಸಿ’ ಚಿತ್ರದ ರಿಲೀಸ್ ಡೇಟ್ ಘೋಷಿಸಿದ ಕಂಗನಾ ರಣಾವತ್

    ‘ಎಮರ್ಜೆನ್ಸಿ’ ಚಿತ್ರದ ರಿಲೀಸ್ ಡೇಟ್ ಘೋಷಿಸಿದ ಕಂಗನಾ ರಣಾವತ್

    ಬಾಲಿವುಡ್ ಬೆಡಗಿ ಕಂಗನಾ ರಣಾವತ್ (Kangana Ranaut) ಈಗ ಬಿಜೆಪಿ ಸಂಸದೆಯಾಗಿದ್ದಾರೆ. ಮಂಡಿ ಕ್ಷೇತ್ರದಲ್ಲಿ ಗೆದ್ದು ರಾಜಕೀಯ ಕ್ಷೇತ್ರದಲ್ಲಿ ನಟಿ ಸದ್ದು ಮಾಡುತ್ತಿದ್ದಾರೆ. ಇದೀಗ ಇಂದಿರಾ ಗಾಂಧಿ (Indira Gandhi) ಕುರಿತ ಸಿನಿಮಾ ‘ಎಮರ್ಜೆನ್ಸಿ’ (Emergency Film) ಬರೋದು ಯಾವಾಗ? ಎಂದು ಕಾಯುತ್ತಿದ್ದವರಿಗೆ ಸಿಹಿಸುದ್ದಿ ಸಿಕ್ಕಿದೆ.

    ಕಳೆದ ಕೆಲವು ತಿಂಗಳುಗಳಿಂದ ಚುನಾವಣೆ ಕೆಲಸ ಎಂದು ಕಂಗನಾ ಬ್ಯುಸಿಯಾಗಿದ್ದರು. ರಿಲೀಸ್ ಡೇಟ್ ಕೂಡ ಮುಂದಕ್ಕೆ ಹೋಗಿತ್ತು. ಈಗ ಸೆಪ್ಟೆಂಬರ್ 6ರಂದು ‘ಎಮರ್ಜೆನ್ಸಿ’ ಸಿನಿಮಾ ರಿಲೀಸ್ ಮಾಡೋದಾಗಿ ಕಂಗನಾ ಘೋಷಿಸಿದ್ದಾರೆ.

     

    View this post on Instagram

     

    A post shared by Kangana Ranaut (@kanganaranaut)

    ಭಾರತದ ಪ್ರಜಾಪ್ರಭುತ್ವದ ಕರಾಳ ಅಧ್ಯಾಯಕ್ಕೆ 50 ವರ್ಷವಾದ ಹಿನ್ನೆಲೆಯಲ್ಲಿ ‘ಎಮರ್ಜೆನ್ಸಿ’ ಚಿತ್ರದ ರಿಲೀಸ್ ಡೇಟ್ ಘೋಷಿಸುತ್ತಿದ್ದೇನೆ. ಸ್ವಾತಂತ್ರ್ಯ ಭಾರತದ ಅತ್ಯಂತ ವಿವಾದಾತ್ಮಕ ನಿರ್ಣಯದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಲಂಡನ್ ಟ್ರಿಪ್ ಮುಗಿಸಿ ಮುಂಬೈಗೆ ಬಂದಿಳಿದ ದೀಪಿಕಾ ದಂಪತಿ

    ಅಂದಹಾಗೆ, ಇಂದಿರಾ ಗಾಂಧಿ ಪಾತ್ರಕ್ಕೆ ಕಂಗನಾ ಜೀವ ತುಂಬಿದ್ದು, ಈ ಚಿತ್ರಕ್ಕೆ ನಿರ್ದೇಶನದ ಜೊತೆ ನಿರ್ಮಾಣ ಕೂಡ ಮಾಡ್ತಿದ್ದಾರೆ. ಈ ಸಿನಿಮಾದ ನಂತರ ಕಂಗನಾ ಬಾಲಿವುಡ್‌ಗೆ ಗುಡ್‌ ಬೈ ಹೇಳ್ತಾರಾ? ಕಾದುನೋಡಬೇಕಿದೆ.

  • ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ – ಬಿಜೆಪಿ ಸಂಸದ ದಿಲೀಪ್ ಘೋಷ್, ಕಾಂಗ್ರೆಸ್‌ನ ಸುಪ್ರಿಯಾಗೆ ಚು‌ನಾವಣಾ ಆಯೋಗ ಛೀಮಾರಿ

    ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ – ಬಿಜೆಪಿ ಸಂಸದ ದಿಲೀಪ್ ಘೋಷ್, ಕಾಂಗ್ರೆಸ್‌ನ ಸುಪ್ರಿಯಾಗೆ ಚು‌ನಾವಣಾ ಆಯೋಗ ಛೀಮಾರಿ

    ನವದೆಹಲಿ: ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ದಿಲೀಪ್ ಘೋಷ್ (Dilip Ghosh) ಮತ್ತು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಥೆ (Supriya Shrinate) ಅವರಿಗೆ ಚುನಾವಣಾ ಆಯೋಗ (Election Commission) ಛೀಮಾರಿ ಹಾಕಿದೆ. ಇಬ್ಬರೂ ನಾಯಕರ ಹೇಳಿಕೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಆಯೋಗ ಎಚ್ಚರಿಕೆ ನೀಡಿದ್ದು, ಚುನಾವಣಾ ಸಮಯದಲ್ಲಿ ಆಯೋಗವು ಅವರ ಮೇಲೆ ವಿಶೇಷ ನಿಗಾ ಇಡಲಿದೆ ಎಂದು ತಿಳಿಸಿದೆ.

    ನೀತಿ ಸಂಹಿತೆ ಉಲ್ಲಂಘಿಸಿ ವೈಯಕ್ತಿಕ ದಾಳಿ ನಡೆಸಿದ ಹಿನ್ನೆಲೆ ಚುನಾವಣಾ ಆಯೋಗ ದಿಲೀಪ್ ಘೋಷ್ ಮತ್ತು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಥೆ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ನೋಟಿಸ್‌ಗೆ ಉತ್ತರಿಸಿದ ಉಭಯ ನಾಯಕರು ನೀತಿ ಸಂಹಿತೆ ಉಲ್ಲಂಘಿಸಿ ವೈಯಕ್ತಿಕ ದಾಳಿ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಕೇಂದ್ರದಿಂದ ಬಿಗ್‌ ರಿಲೀಫ್‌ – ಚುನಾವಣೆ ಮುಗಿಯವರೆಗೂ ತೆರಿಗೆ ವಸೂಲಿ ಇಲ್ಲ

    ಉತ್ತರವನ್ನು ಸ್ವೀಕರಿಸಿದ ನಂತರ ಆಯೋಗವು ಉಭಯ ನಾಯಕರಿಗೆ ಎಚ್ಚರಿಕೆ ನೀಡಿದ್ದು, ಮುಂದೆ ಇಂತಹ ಬಹಿರಂಗ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ವಹಿಸಬೇಕು. ಅಲ್ಲದೆ, ಚುನಾವಣಾ ಸಮಯದಲ್ಲಿ ಇಬ್ಬರೂ ನಾಯಕರ ಹೇಳಿಕೆಗಳನ್ನು ಚುನಾವಣಾ ಆಯೋಗವು ವಿಶೇಷವಾಗಿ ಪರಿಶೀಲಿಸುತ್ತದೆ. ಇಬ್ಬರೂ ನಾಯಕರು ಕೀಳು ಮಟ್ಟದ ವೈಯಕ್ತಿಕ ದಾಳಿ ನಡೆಸಿದ್ದು, ಇದು ಮಾದರಿ ನೀತಿ ಸಂಹಿತೆಯ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ಆಯೋಗ ಹೇಳಿದೆ.

    ಸೋಮವಾರದಿಂದ ಈ ಇಬ್ಬರು ನಾಯಕರ ಚುನಾವಣಾ ಸಂಬಂಧಿತ ಸಂವಹನಗಳ ಮೇಲೆ ಆಯೋಗವು ವಿಶೇಷ ಮತ್ತು ಹೆಚ್ಚುವರಿ ನಿಗಾ ಇರಿಸಲಿದೆ. ಇದೇ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮತ್ತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ತಮ್ಮ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡುವಂತೆ ಆಯೋಗವು ಆಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಸೂಚನಾ ಪ್ರತಿಯನ್ನು ಕಳುಹಿಸಿದೆ. ಇದನ್ನೂ ಓದಿ: ಕೇಜ್ರಿವಾಲ್‌ಗೆ 15 ದಿನ ನ್ಯಾಯಾಂಗ ಬಂಧನ – ತಿಹಾರ್‌ ಜೈಲಿಗೆ ಶಿಫ್ಟ್‌ ಆಗಲಿದ್ದಾರೆ ದೆಹಲಿ ಸಿಎಂ

    ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್‌ ವಿರುದ್ಧ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಥೆ ಸಾಮಾಜಿಕ ಮಾಧ್ಯಮದಲ್ಲಿ ಅಸಭ್ಯವಾಗಿ ಪೋಸ್ಟ್ ಮಾಡಿದ್ದರು. ಇದು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆಗೆ ಕಾರಣವಾಗಿತ್ತು‌. ಬಿಜೆಪಿ ಸಂಸದ ದಿಲೀಪ್ ಘೋಷ್ ಅವರು ಚುನಾವಣಾ ಪ್ರಚಾರದ ವೇಳೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.

  • ರಾಘವ, ಕಂಗನಾ ನಟನೆಯ ಚಂದ್ರಮುಖಿ‌ 2 ಟ್ರೈಲರ್ ರಿಲೀಸ್

    ರಾಘವ, ಕಂಗನಾ ನಟನೆಯ ಚಂದ್ರಮುಖಿ‌ 2 ಟ್ರೈಲರ್ ರಿಲೀಸ್

    ರಾಘವ ಲಾರೆನ್ಸ್ (Raghava Lawrence), ಕಂಗನಾ ರಣಾವತ್ (Kangana Ranaut) ನಟನೆಯ ಚಂದ್ರಮುಖಿ 2 ಸಿನಿಮಾದ ಟ್ರೈಲರ್ ಸೆಪ್ಟೆಂಬರ್ 3ರಂದು ರಿಲೀಸ್ ಆಗಿದೆ. ಸೆ.15ಕ್ಕೆ ಚಂದ್ರಮುಖಿ 2 (Chandramukhi 2) ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು, ಟ್ರೈಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾದ ಟ್ರೈಲರ್‌ ಕುತೂಹಲಕಾರಿಯಾಗಿದೆ. ಇದನ್ನೂ ಓದಿ:ಸ್ಕ್ರಿಪ್ಟ್ ಬರೆಯುವಾಗ ರಪ್ ಅಂತ ರಮ್ಯಾ ಪಾಸಾದ್ರು: ನಿರ್ದೇಶಕ ವಿಜಯ ಪ್ರಸಾದ್

    ಚಿತ್ರದ ಟ್ರೈಲರ್‌ನಲ್ಲಿ ದೊಡ್ಡ ಅವಿಭಕ್ತ ಕುಟುಂಬವೊಂದು ಅರಮನೆಯಂತಹ ಬಂಗಲೆಗೆ ಬರುವುದನ್ನು ನೋಡಬಹುದು. ಈ ಬಂಗಲೆಯಲ್ಲಿ ಒಂದು ಕೋಣೆಯನ್ನು ಮಾತ್ರ ಪ್ರವೇಶಿಸಬಾರದು. ಅದು ಬಂಗಲೆಯ ದಕ್ಷಿಣ ಬ್ಲಾಕ್‌ನಲ್ಲಿರುವ ಕೋಣೆ. ಇದರ ಬಾಗಿಲು ತೆಗೆದರೆ ಸಮಸ್ಯೆಗಳು ಶುರುವಾಗುತ್ತವೆ. ಚಂದ್ರಮುಖಿ ಕಥೆಗೆ 17 ವರ್ಷಗಳ ನಂತರ ಹೊಸ ತಿರುವು ಸಿಗುತ್ತದೆ. 200 ವರ್ಷಗಳಷ್ಟು ಹಳೆಯದಾದ ಚಂದ್ರಮುಖಿ ಮತ್ತು ರಾಜ ವೆಟ್ಟೈಯನ್ ಅವರ ಸೇಡಿನ ಕಥೆ. ಈ ಕಥೆಯನ್ನು ವರ್ತಮಾನಕ್ಕೆ ಹೊಂದಿಸಿರುವುದನ್ನು  ಟ್ರೈಲರ್‌ನಲ್ಲಿ ನೋಡಬಹುದಾಗಿದೆ.

    ಪಿ. ವಾಸು ನಿರ್ದೇಶನದ ಚಂದ್ರಮುಖಿ 2ನಲ್ಲಿ ರಾಘವ ಲಾರೆನ್ಸ್, ಕಂಗನಾ, ರಾಧಿಕಾ ಶರತ್ ಕುಮಾರ್, ವಡಿವೇಲು, ಲಕ್ಷ್ಮಿ ಮೆನನ್ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರಕ್ಕೆ ಆಸ್ಕರ್ ವಿಜೇತ ಎಂ.ಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ.

    ಸಕ್ಸಸ್‌ಗಾಗಿ ಎದುರು ನೋಡ್ತಿರುವ ಕಂಗನಾ ರಣಾವತ್‌ಗೆ ಚಂದ್ರಮುಖಿ 2 ಸಿನಿಮಾ ಕೈ ಹಿಡಿಯುತ್ತಾ? ರಾಘವ್-ಕಂಗನಾ ಕಾಂಬೋ ಕಮಾಲ್ ಮಾಡುತ್ತಾ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಧು ಯಾಮಿಯನ್ನ ರಾಧೆ ಮಾಗೆ ಹೋಲಿಸಿದ ನಟ – ಚಪ್ಪಲಿ ಕೇಳಿದ ಕಂಗನಾ

    ವಧು ಯಾಮಿಯನ್ನ ರಾಧೆ ಮಾಗೆ ಹೋಲಿಸಿದ ನಟ – ಚಪ್ಪಲಿ ಕೇಳಿದ ಕಂಗನಾ

    ಮುಂಬೈ: ವಧು ಯಾಮಿ ಗೌತಮಿಯನ್ನ ರಾಧೆ ಮಾಗೆ ನಟ ವಿಕ್ರಾಂತ್ ಮೆಸ್ಸಿ ಹೋಲಿಕೆ ಮಾಡಿದ್ದಕ್ಕೆ ನಟಿ ಕಂಗನಾ ರಣಾವತ್ ಕೆಂಡಾಮಂಡಲವಾಗಿದ್ದಾರೆ. ನಟನ ಕಮೆಂಟ್ ಗೆ ರಿಪ್ಲೈ ಮಾಡಿರುವ ಕಂಗನಾ, ನನ್ನ ಚಪ್ಪಲಿ ಕೊಡು ಎಂದು ಕಮೆಂಟ್ ಮಾಡಿದ್ದಾರೆ.

    ಜೂನ್ 4ರಂದು ಯಾಮಿ ಹಿಮಾಚಲ ಪ್ರದೇಶದಲ್ಲಿ ಉರಿ ಚಿತ್ರದ ನಿರ್ದೇಶಕ, ರೈಟರ್ ಆದಿತ್ಯ ಅವರ ಜೊತೆ ವೈವಾಹಿಕ ಬಂಧನಕ್ಕೆ ಕಾಲಿಟ್ಟಿದ್ದರು. ಕೊರೊನಾ ಹಿನ್ನೆಲೆ ಆಪ್ತರ ಸಮ್ಮುಖದಲ್ಲಿ ಈ ಮದುವೆ ನಡೆದಿತ್ತು. ಫೋಟೋಗಳು ವೈರಲ್ ಬಳಿಕ ಅಭಿಮಾನಿಗಳಿಗೆ ಮದುವೆ ವಿಷಯ ತಿಳಿದಿತ್ತು. ಅಭಿಮಾನಿಗಳು ಸೇರಿದಂತೆ ಸ್ಟಾರ್ ಗಳು ಸೋಶಿಯಲ್ ಮೀಡಿಯಾ ಮೂಲಕವೇ ನಟಿಗೆ ಮದುವೆ ವಿಷಯ ತಿಳಿಸಿದ್ದರು.

    ಅದೇ ರೀತಿ ಕಂಗನಾ ರಣಾವತ್, ಹಿಮಾಚಲ ಪ್ರದೇಶದ ವಧು ಗಾರ್ಜಿಯಸ್ ಮತ್ತು ನೋಡಲು ದೇವಿಯ ರೀತಿಯಲ್ಲಿ ಕಾಣುತ್ತಿದ್ದಾರೆ ಎಂದು ಯಾಮಿ ಫೋಟೋಗೆ ಕಮೆಂಟ್ ಮಾಡಿದ್ದರು. ಇದೇ ಫೋಟೋಗೆ ವಿಕ್ರಾಂತ್ ಮೆಸ್ಸಿ, ಶುದ್ಧ ಮತ್ತು ಪವಿತ್ರ, ನೋಡಲು ಅಚ್ಚು ರಾಧೆ ಮಾ.. ಎಂದು ಬರೆದುಕೊಂಡಿದ್ದರು. ಈ ಕಮೆಂಟ್ ಗೆ ಪ್ರತಿಕ್ರಿಯಿಸಿರುವ ಕಂಗನಾ, ಎಲ್ಲಿಂದ ಬಂತು ಈ ಜಿರಳೆ, ನನ್ನ ಚಪ್ಪಲಿಯನ್ನ ಕೊಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಂಗನಾ ರಣಾವತ್ ಗನ್ ಮ್ಯಾನ್ ಮಂಡ್ಯದಲ್ಲಿ ಅರೆಸ್ಟ್

    ರಾಧೆ ಮಾ ಸ್ವಯಂ ಘೋಷಿತ ದೇವತೆ. ಹಲವು ವಿವಾದಗಳಿಂದಲೇ ರಾಧೆ ಮಾ ಸುದ್ದಿಯಲ್ಲಿದ್ದರು. ರಾಧೆ ಮಾ ಸಹ ಕೆಂಪು ಬಣ್ಣದ ಸೀರೆ ಧರಿಸಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಯಾಮಿ ಸಹ ಕೆಂಪು ಬಣ್ಣದ ಸೀರೆ ಧರಿಸಿ, ಸಿಂಧೂರವಿಟ್ಟ ಫೋಟೋ ವೈರಲ್ ಆಗಿದೆ. ಇದನ್ನೂ ಓದಿ: ‘ದುಡ್ಡಿಗಾಗಿ ವಂಚನೆ’ – ಸೋನು ಸೂದ್ ವಿರುದ್ಧದ ಪೋಸ್ಟ್‌ಗೆ ಲೈಕ್ ಕೊಟ್ಟ ಕಂಗನಾ

  • ಜಯಾ ಆಯ್ತು ಈಗ ಇಂದಿರಾ ಗಾಂಧಿಯಾಗಲಿದ್ದಾರೆ ಕಂಗನಾ

    ಜಯಾ ಆಯ್ತು ಈಗ ಇಂದಿರಾ ಗಾಂಧಿಯಾಗಲಿದ್ದಾರೆ ಕಂಗನಾ

    ಮುಂಬೈ: ನಟಿ ಕಂಗನಾ ರಣಾವತ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಕಾಲಿವುಡ್ ನಟಿ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್ ಸಿನಿಮಾದಲ್ಲಿ ಅಭಿನಯಿಸಿದ್ದ ಕಂಗನಾ ಇದೀಗ ಮತ್ತೊರ್ವ ರಾಜಕಾರಣಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಕಂಗನಾ ಇದೀಗ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರಕ್ಕೆ ಬಣ್ಣಹಚ್ಚಲಿದ್ದಾರೆ.

    ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಂಗನಾ, ಈ ಚಿತ್ರವು ಕೇವಲ ಇಂದಿರಾ ಗಾಂಧಿಯವರ ಜೀವನ ಚರಿತ್ರೆಯನ್ನು ಮಾತ್ರ ಹೊಂದಿಲ್ಲ. ಬದಲಾಗಿ ಆಪರೇಷನ್ ಬ್ಲೂ ಸ್ಟಾರ್ ಮತ್ತು 1997 ರಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಜೊತೆಗೆ ಭಾರತೀಯ ರಾಜಕೀಯ ಇತಿಹಾಸದ ಮಹತ್ವ ಕ್ಷಣಗಳನ್ನು ಚಿತ್ರ ಒಳಗೊಂಡಿದೆ ಎಂದು ತಿಳಿಸಿದರು.

    ಸದ್ಯ ಚಿತ್ರಕ್ಕೆ ಸಂಬಂಧಿಸಿದಂತೆ ಕೆಲಸಗಳು ನಡೆಯುತ್ತಿದ್ದು, ಸ್ಕ್ರಿಪ್ಟ್ ಕೆಲಸ ಅಂತಿಮ ಹಂತದಲ್ಲಿದೆ. ಈ ಚಿತ್ರ ಇಂದಿರಾ ಗಾಂಧಿಯವರ ಜೀವನ ಚರಿತ್ರೆಯಲ್ಲ. ಇದೊಂದು ಕಂಪ್ಲೀಟ್ ಪೊಲಿಟಿಕಲ್ ಡ್ರಾಮಾ ಹೊಂದಿದೆ ಎಂದು ಹೇಳಿದರೆ ತಪ್ಪಾಗಲಾರದು. ಈ ಸಿನಿಮಾ ಪ್ರಸ್ತುತ ಭಾರತದ ಸಾಮಾಜಿಕ ಹಾಗೂ ರಾಜಕೀಯ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ಯುವ ಪೀಳಿಗೆಗೆ ಸಹಾಯಕವಾಗುತ್ತದೆ ಎಂದಿದ್ದಾರೆ.

    ಇದೀಗ ಕಂಗನಾ ರಣವತ್ ಇಂದಿರಾ ಗಾಂಧಿ ಪಾತ್ರಕ್ಕಾಗಿ ಎದರು ನೋಡುತ್ತಿದ್ದು, ಅಂದಿನ ಭಾರತೀಯ ಇತಿಹಾಸದ ಅಪ್ರತಿಮ ನಾಯಕರಾದ ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಮೊರಾರ್ಜಿ ದೇಸಾಯಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಸೇರಿದಂತೆ ಹಲವಾರು ರಾಜಕೀಯ ನಾಯಕರ ಹೆಜ್ಜೆಗುರುತು ಸಿನಿಮಾದಲ್ಲಿದೆ ಎಂದಿದ್ದಾರೆ. ಹಾಗಾಗಿ ಅನೇಕ ಪ್ರಮುಖ ನಟರು ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಿದ್ದಾರೆ.

    ಸಾಯಿ ಕಬೀರ್ ನಿರ್ದೇಶನದ ಈ ಚಿತ್ರಕ್ಕೆ ಟೈಟಲ್ ನಿಗದಿಯಾಗಿಲ್ಲ. ಮುಂಬರುವ ದಿನಗಳಲ್ಲಿ ಹೆಸರು ಪ್ರಕಟವಾಗುವ ಸಾಧ್ಯತೆಯಿದೆ.

  • ಕಂಗನಾಗೆ ವಕೀಲನಿಂದ ಅತ್ಯಾಚಾರದ ಬೆದರಿಕೆ

    ಕಂಗನಾಗೆ ವಕೀಲನಿಂದ ಅತ್ಯಾಚಾರದ ಬೆದರಿಕೆ

    – ಐಡಿ ಹ್ಯಾಕ್ ಆಗಿದೆ ಎಂದ ಲಾಯರ್

    ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅತ್ಯಾಚಾರದ ಬೆದರಿಕೆ ಬಂದಿದೆ. ಕಂಗನಾ ನವರಾತ್ರಿ ಹಬ್ಬದ ಶುಭಾಶಯ ತಿಳಿಸಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಗೆ ಕಮೆಂಟ್ ಮಾಡಿದ್ದ ವಕೀಲರೊಬ್ಬರ ಖಾತೆಯಿಂದ ನಿಮ್ಮನ್ನ ನಡುರಸ್ತೆಯಲ್ಲಿ ರೇಪ್ ಮಾಡಬೇಕೆಂದು ಬೆದರಿಕೆ ಬಂದಿತ್ತು. ಕಮೆಂಟ್ ಗೆ ವ್ಯಾಪಕ ಆಕ್ರೋಶವಾಗುತ್ತಲೇ ಸ್ಪಷ್ಟನೆ ನೀಡಿರುವ ವಕೀಲ, ನನ್ನ ಫೇಸ್‍ಬುಕ್ ಐಡಿ ಹ್ಯಾಕ್ ಆಗಿದೆ ಎಂದಿದ್ದಾರೆ.

    ಓಡಿಶಾದ ವಕೀಲ ಮೆಹೆಂದಿ ರಾಜಾ ಫೇಸ್‍ಬುಕ್ ಖಾತೆಯಿಂದ ವಿವಾದಾತ್ಮಕ ಕಮೆಂಟ್ ಮಾಡಲಾಗಿತ್ತು. ನಗರದ ಹೃದಯ ಭಾಗದಲ್ಲಿ ನಿಮ್ಮ ಅತ್ಯಾಚಾರ ಆಗಬೇಕೆಂದು ಆಕ್ಷೇಪಾರ್ಹ ಕಮೆಂಟ್‍ಗೆ ನೆಟ್ಟಿಗರು ಗರಂ ಆಗಿದ್ದರು. ಈ ಸಂಬಂಧ ಮೆಹೆಂದಿ ರಾಜಾ ವಿರುದ್ಧ ದೂರು ದಾಖಲಾಗಿರುವ ಬಗ್ಗೆ ವರದಿಯಾಗಿದೆ. ಮೆಹೆಂದಿ ರಾಜಾ ಓಡಿಶಾದ ಝಾರಸಗುಢ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿದ್ದಾರೆ. ಇದನ್ನೂ ಓದಿ: ಕಂಗನಾ ವಿರುದ್ಧ FIR ದಾಖಲಿಸಲು ಕೋರ್ಟ್ ಆದೇಶ – ಕ್ವೀನ್ ಗೆ ಶುರುವಾಯ್ತು ಬಂಧನ ಭೀತಿ?

    ಇಂದು ನನ್ನ ಫೇಸ್‍ಬುಕ್ ಐಡಿ ಹ್ಯಾಕ್ ಆಗಿದ್ದರಿಂದ ಆಕ್ಷೇಪಾರ್ಹ ಕಮೆಂಟ್ ಪೋಸ್ಟ್ ಆಗಿದೆ. ಯಾವುದೇ ಮಹಿಳೆ ಮತ್ತು ಸಮುದಾಯದ ಬಗ್ಗೆ ನನಗೆ ದ್ವೇಷವಿಲ್ಲ. ಕಮೆಂಟ್ ನೋಡಿ ನಾನೇ ಆಶ್ಚರ್ಯಗೊಂಡಿದ್ದೇನೆ. ನನ್ನ ಖಾತೆಯಿಂದ ಕಮೆಂಟ್ ಬಂದ ಹಿನ್ನೆಲೆ ನಾನು ಕ್ಷಮೆ ಕೇಳುತ್ತೇನೆ. ಜನರು ನನ್ನ ಕ್ಷಮೆಯನ್ನ ಪ್ಪಿಕೊಳ್ಳಬೇಕು. ಜನರ ಭಾವನೆಗಳಿಗೆ ನೋವುಂಟು ಮಾಡಿದಕ್ಕೆ ಮತ್ತೊಮ್ಮೆ ಎಲ್ಲರ ಬಳಿ ಕ್ಷಮೆ ಕೇಳುತ್ತೇನೆ ಎಂದು ಮೆಹೆಂದಿ ರಾಜಾ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕಂಗನಾ ಕಟ್ಟಡ ನೆಲಸಮಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ: ಶಿವಸೇನೆ 

    ಶನಿವಾರ ಮುಂಬೈನ ಬಾಂದ್ರಾ ನ್ಯಾಯಾಲಯ ಕಂಗನಾ ವಿರುದ್ಧ ಎಫ್‍ಐಆರ್ ದಾಖಲು ಮಾಡುವಂತೆ ಆದೇಶಿಸಿದೆ. ಸಾಹಿಲ್ ಆಶ್ರಫ್ ಅಲಿ ಸೈಯದ್ ಎಂಬವರು ಕಂಗನಾ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿಯೊಂದನ್ನ ಸಲ್ಲಿಸಿದ್ದರು. ಕಂಗನಾ ರಣಾವತ್ ಕಳೆದ ಕೆಲ ತಿಂಗಳುಗಳಿಂದ ಸ್ವಜನಪಕ್ಷಪಾತ ಮತ್ತು ಫೇವರಿಟಿಸಂ ಹೆಸರಲ್ಲಿ ಬಾಲಿವುಡ್ ನ್ನು ಅವಮಾನಿಸುತ್ತಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆ ಮತ್ತು ಖಾಸಗಿ ವಾಹಿನಿಗಳಿಗೆ ನೀಡಿರುವ ಸಂದರ್ಶನದಲ್ಲಿ ಹಿಂದೂ ಮತ್ತು ಮುಸ್ಲಿಂ ಎಂದು ಕಲಾವಿದರನ್ನ ವಿಂಗಡನೆ ಮಾಡುವ ಮೂಲಕ ಉದ್ಯಮವನ್ನ ಇಬ್ಭಾಗಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಸಾಹಿಲ್ ಅರ್ಜಿಯಲ್ಲಿ ಆರೋಪಿಸಿದ್ದರು.  ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರದ ಬಳಿ ಕ್ಷಮೆ ಕೇಳು: ಕಂಗನಾಗೆ ರಾಖಿ ಸಾವಂತ್ ಆಗ್ರಹ

    ಬಾಂದ್ರಾ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಜಯದೇವ್ ವೈ. ಗುಲೆ, ನಟಿ ಕಂಗನಾ ರಣಾವತ್ ವಿರುದ್ಧ ಸಿಆರ್ಪಿಸಿ 156 (3) ಪ್ರಕಾರ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಂಗನಾ ಅವರನ್ನ ವಿಚಾರಣೆಗೆ ಒಳಪಡಿಸಬಹುದು ಮತ್ತು ನಟಿ ವಿರುದ್ಧ ಸಾಕ್ಷ್ಯ ಲಭ್ಯವಾದ್ರೆ ಬಂಧಿಸುವ ಸಾಧ್ಯತೆಗಳು ದಟ್ಟವಾಗಿವೆ. ಇದನ್ನೂ ಓದಿ: ಕೋರ್ಟ್ ಆದೇಶದಂತೆ ತುಮಕೂರಲ್ಲಿ ಕಂಗನಾ ವಿರುದ್ಧ ಎಫ್‍ಐಆರ್

    ತಮ್ಮ ವಿರುದ್ಧ ಎಫ್‍ಐಆರ್ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕಂಗನಾ, ನನ್ನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದ ಪಪ್ಪು ಸೇನೆ ನನ್ನ ಹಿಂದೆಯೇ ಬಿದ್ದಿದೆ. ನೀವು ನನ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ನಾನೇ ನಿಮ್ಮ ಬಳಿ ಬರುತ್ತೇನೆ ಎಂದು ಹೇಳಿದ್ದಾರೆ.

  • ಮಹಾರಾಷ್ಟ್ರ ಸರ್ಕಾರದ ಬಳಿ ಕ್ಷಮೆ ಕೇಳು: ಕಂಗನಾಗೆ ರಾಖಿ ಸಾವಂತ್ ಆಗ್ರಹ

    ಮಹಾರಾಷ್ಟ್ರ ಸರ್ಕಾರದ ಬಳಿ ಕ್ಷಮೆ ಕೇಳು: ಕಂಗನಾಗೆ ರಾಖಿ ಸಾವಂತ್ ಆಗ್ರಹ

    -ನೀನು ಸುಳ್ಳಿ, ಸುಶಾಂತ್ ಸಾವನ್ನ ವೈಯಕ್ತಿಯ ಲಾಭಕ್ಕೆ ಬಳಕೆ

    ಮುಂಬೈ: ನಟಿ ಕಂಗನಾ ರಣಾವತ್ ಮಹಾರಾಷ್ಟ್ರ ಸರ್ಕಾರ ಮತ್ತು ಸಿಎಂ ಉದ್ಧವ್ ಠಾಕ್ರೆ ಬಳಿ ಕ್ಷಮೆ ಕೇಳಬೇಕೆಂದು ನಟಿ ರಾಖಿ ಸಾವಂತ್ ಆಗ್ರಹಿಸಿದ್ದಾರೆ. ರಾಖಿ ಸಾವಂತ್ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದು ಕಂಗನಾ ವಿರುದ್ಧ ಕಿಡಿಕಾರಿದ್ದಾರೆ.

    ಕಂಗನಾ ಇಷ್ಟು ದಿನ ಹೇಳಿದೆಲ್ಲ ಸುಳ್ಳು ಅನ್ನೋದು ಸಾಬೀತಾಗ್ತಿದೆ. ಸುಶಾಂತ್ ಸಿಂಗ್ ರಜಪೂತ್ ಸಾವನ್ನ ವೈಯಕ್ತಿಯ ಮತ್ತು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡ ನಟಿ ಕಂಗನಾಗೆ ನಾಚಿಕೆ ಆಗಬೇಕು. ಹಾಗಾಗಿ ಸುಶಾಂತ್ ಅವರ ನಿಜವಾದ ಅಭಿಮಾನಿಗಳು, ಸಿಎಂ ಠಾಕ್ರೆ ಮತ್ತು ಪುತ್ರ ಆದಿತ್ಯ ಬಳಿ ಬಹಿರಂಗವಾಗಿ ಕ್ಷೆಮ ಯಾಚಿಸಬೇಕು. ಜೊತೆಗೆ ನಿರ್ಮಾಪಕ ಕರಣ್ ಜೋಹರ್, ಹಿರಿಯ ನಟಿ ಊರ್ಮಿಳಾ ಮಾತೊಂಡ್ಕರ್, ದೀಪಿಕಾ ಪಡುಕೋಣೆ ಸೇರಿದಂತೆ ಎಲ್ಲ ಬಾಲಿವುಡ್ ಸೆಲೆಬ್ರಿಟಿಗಳ ಬಳಿ ಕ್ಷಮೆ ಯಾವಾಗ ಕೇಳ್ತಿಯಾ ಎಂದು ರಾಖಿ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಕಂಗನಾ ವಿರುದ್ಧ ಡ್ರಗ್‌ ಪರೀಕ್ಷೆ – ಸಾಬೀತಾದ್ರೆ ಮುಂಬೈ ತೊರೆಯುತ್ತೇನೆ

    ನೀನು ಸೋತಿದ್ದೀಯಾ, ನಿನ್ನ ಬಗ್ಗೆ ನನಗೆ ಅನುಕಂಪ ಇದೆ. ರಾಜಕೀಯ ಲಾಭ ಪಡೆದುಕೊಳ್ಳಲು ಬಾಲಿವುಡ್ ಗೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದ ನಿನ್ನ ಎಲ್ಲ ಕಾರ್ಯಗಳು ವಿಫಲವಾಗಿವೆ. ಮುಂದಿನ ದಿನಗಳಲ್ಲಿ ನಿನಗೆ ಯಾವುದೇ ಸಿನಿಮಾಗಳು ಸಿಗಲ್ಲ. ನಿನಗೆ ಹೋರಾಟ ಅಂದ್ರೆ ಇಷ್ಟ ಅಲ್ವಾ, ದೇಶದ ಗಡಿಯಲ್ಲಿ ಹೋಗಿ ಸೇವೆ ಸಲ್ಲಿಸು. ಅಲ್ಲಿ ಚೀನಾ ವಿರುದ್ಧ ಹೋರಾಟ ಮಾಡು. ಎಲ್ಲ ಕಡೆಯೂ ನಿನ್ನ ಸುಳ್ಳು ಬಯಲಾಗಿದೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿಕಂಗನಾ V/s ಮಹಾರಾಷ್ಟ್ರ ಸರ್ಕಾರ- ಮನೆ, ಕಚೇರಿ ನೆಲಸಮಕ್ಕೆ ಹೈಕೋರ್ಟ್ ತಡೆ-ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ

    ಈ ಹಿಂದೆಯೂ ಕಂಗನಾ ವಿರುದ್ಧ ಗುಡುಗಿದ್ದ ರಾಖಿ ಸಾವಂತ್, ಸಿನಿಮಾ ಇಂಡಸ್ಟ್ರಿಯಲ್ಲಿರೋ ಎಲ್ಲ ನಿರ್ಮಾಪಕರು, ನಿರ್ದೇಶಕರು ಕೆಟ್ಟವರಿದ್ದಾರೆ. ನಿನ್ನ ತಲೆಯ ಮೇಲೆ ಕೊಹಿನೂರು ವಜ್ರ ಇದೆಯಾ? ನಿನ್ನ ಹೊರತು ಬಾಲಿವುಡ್‍ನಲ್ಲಿರುವವರು ಕೆಟ್ಟವರಾ? ಬಾಲಿವುಡ್ ಕಂಗನಾಳನ್ನ ಬಾಯ್‍ಕಾಟ್ ಮಾಡಿ. ಅಲ್ಲೇ ಹಿಮಾಲಯದ ಮನೆಯಲ್ಲಿ ಕುಳಿತುಕೊಳ್ಳಿ. ಬಾಲಿವುಡ್ ಸಿನಿಮಾದ ಹಣದಿಂದ ಊರಲ್ಲಿ ಮನೆ ಇದೆ. ಮೊದಲಿಗೆ ಅದು ಸಹ ಇರಲಿಲ್ಲ. ಈಗ ಬಾಲಿವುಡ್ ಕಂಗನಾಗೆ ಕೆಟ್ಟದಾಗಿ ಕಾಣುತ್ತಿದೆಯಾ ಎಂದು ರಾಖಿ ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ: ಕಂಗನಾ ಕಟ್ಟಡ ನೆಲಸಮಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ: ಶಿವಸೇನೆ

    https://www.instagram.com/p/CGKjhRTHVDW/

    ಕಂಗನಾ ಹೇಳಿಕೆ ಪ್ರಕಾರ ಮುಂಬೈನಲ್ಲಿ ಭಯೋತ್ಪಾದಕರಿದ್ದಾರೆ ಅಂತೆ. ಮುಂಬೈ ನಗರವನ್ನ ಪಿಓಕೆ ಹೋಲಿಕೆ ಮಾಡೋದು ಎಷ್ಟು ಸರಿ. ಮುಂಬೈ ಬಗ್ಗೆ ಮಾತನಾಡುವ ನೀನು ಇಲ್ಲಿಗ್ಯಾಕೆ ಬಂದಿರುವೆ. ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತ ಇದೆನಾ? ನೋಡೋಣ ನೀನು ಎಷ್ಟು ಜನರಿಗೆ ಉದ್ಯೋಗ ಕೊಡ್ತೀಯಾ ತಿಳಿಸು. ಬಾಲಿವುಡ್ ಸೂಪರ್ ಹಿಟ್ ಸಿನಿಮಾ ನೀಡಿರುವ ಕರಣ್ ಜೋಹರ್ ಅವರನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ನಿನ್ನ ವರ್ತನೆಗೆ ಸಿನಿಮಾಗಳು ಸಿಕ್ಕಿಲ್ಲ. ಹಾಗಾಗಿ ನಿನ್ನದೇ ಪ್ರೊಡೆಕ್ಷನ್ ಹೌಸ್ ಮಾಡಿಕೊಡು ಸಿನಿಮಾ ಮಾಡುವ ಪರಿಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದ್ದರು. ಇದನ್ನೂ ಓದಿ: ನನ್ನ ಮನೆಯಂತೆ ನಾಳೆ ನಿನ್ನ ಅಹಂಕಾರ ನೆಲಸಮ ಆಗುತ್ತೆ: ಸಿಎಂ ಠಾಕ್ರೆ ವಿರುದ್ಧ ಕಂಗನಾ ಪ್ರಹಾರ

  • ತುಮಕೂರಲ್ಲಿ ಕಂಗನಾ ವಿರುದ್ಧ  ದೂರು ದಾಖಲು

    ತುಮಕೂರಲ್ಲಿ ಕಂಗನಾ ವಿರುದ್ಧ ದೂರು ದಾಖಲು

    ತುಮಕೂರು: ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ತುಮಕೂರಿನ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ.

    ಹೈಕೋರ್ಟ್ ವಕೀಲ ರಮೇಶ್ ನಾಯಕ್ ಖಾಸಗಿ ದೂರು ದಾಖಲಿಸಿದ್ದು, ಸಂಸತ್ತಿನಲ್ಲಿ ಕೃಷಿ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದೆ. ಇದನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರನ್ನು ಭಯೋತ್ಪಾದಕರು ಎಂದು ಕಂಗನಾ ಟ್ವಿಟ್ಟರ್ ನಲ್ಲಿ ಅಪಮಾನಿಸಿದ್ದಾರೆ. ಇದರಿಂದ ಲಕ್ಷಾಂತರ ರೈತರಿಗೆ ಅಪಮಾನ ಮಾಡಿದ್ದಾರೆ ಎಂದು ಜೆಎಮ್‍ಎಫ್ ನ್ಯಾಯಾಲಯದಲ್ಲಿ ಪಿಸಿಆರ್ ಕ್ರಿಮಿನಲ್ ದೂರನ್ನು ರಮೇಶ್ ಶುಕ್ರವಾರ ಮಧ್ಯಾಹ್ನ ದಾಖಲಿಸಿದ್ದಾರೆ.

    ಕಂಗನಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಜಿಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಇಮೇಲ್ ಮೂಲಕ ದೂರು ಸಲ್ಲಿಸಿದ್ದರು. ಪೊಲೀಸರು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಲು ಜಿಲ್ಲಾ ಪ್ರಧಾನ ಮತ್ತು ನ್ಯಾಯಾಧೀಶರಿಗೆ ಅನುಮತಿ ಕೋರಿದ್ದರು. ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಕಾದು ನೋಡಬೇಕಿದೆ.

    ಕೃಷಿ ಮಸೂದೆ ಕುರಿತು ದೇಶಾದ್ಯಂತ ಭಾರೀ ಚರ್ಚೆ ನಡೆಯುತ್ತಿದ್ದು, ಹಲವು ರೈತ ಸಂಘಟನೆಗಳು ರಾಷ್ಟ್ರವ್ಯಾಪಿ ಬಂದ್‍ಗೆ ಕರೆ ನಿಡಿದ್ದರು. ಅಲ್ಲದೆ ಪಂಜಾಬ್ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಈ ಪ್ರತಿಭಟನೆ ಕುರಿತು ಕಂಗನಾ ರಣಾವತ್ ಟ್ವೀಟ್ ಮಾಡಿ ಹೋರಾಟಗಾರರನ್ನು ಭಯೋತ್ಪಾದಕರಿಗೆ ಹೋಲಿಸಿದ್ದರು. ಹೀಗಾಗಿ ಅವರ ಟ್ವೀಟ್ ಕುರಿತು ಇದೀಗ ವಿವಾದ ಹುಟ್ಟಿಕೊಂಡಿದೆ, ಸಾಕಷ್ಟು ಚರ್ಚೆಯಾಗುತ್ತಿದೆ.