Tag: Actress Bhavana

  • `ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು’…ಅಮ್ಮನಾಗುತ್ತಿರುವ ನಟಿ ಭಾವನಾ ಮೊದಲ ಮಾತು

    `ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು’…ಅಮ್ಮನಾಗುತ್ತಿರುವ ನಟಿ ಭಾವನಾ ಮೊದಲ ಮಾತು

    ನಟಿ/ರಾಜಕಾರಣಿ ಭಾವನಾ ತಾಯಿಯಾಗುತ್ತಿರುವ ಸುದ್ದಿ ಈಗ ವ್ಯಾಪಕವಾಗಿ ಹಬ್ಬಿದೆ. ಅವರೀಗ ಆರು ತಿಂಗಳ ಗರ್ಭಿಣಿಯಾಗಿದ್ದು ಅವಳಿ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. IVF (ಐವಿಎಫ್) ಮೂಲಕ ಭಾವನಾ (Bhavana Ramanna) ಗರ್ಭ ಧರಿಸಿದ್ದು ಸೋಶಿಯಲ್ ಮೀಡಿಯಾಡಲ್ಲಿ (Social Media) ಪರ ವಿರೋಧದ ಟೀಕೆ ಹೆಚ್ಚಾಗುತ್ತಿದೆ.

    ಈ ಕುರಿತು ಆಫಿಷಿಯಲ್ ಆಗಿ ಮೊದಲ ಮಾತನ್ನ ಇನ್‌ಸ್ಟಾ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ. 40ರ ಆಸುಪಾಸಿನಲ್ಲಿ ತಾವು ಗರ್ಭಿಣಿಯಾಗಲು (Bhavana Ramanna Pregnant) ನಿರ್ಧರಿಸಿದ್ದು ಯಾಕೆ..? ಆ ದಾರಿ ಹೇಗಿತ್ತು..? ತಂದೆ ಇಲ್ಲದೆ ಮಕ್ಕಳು ಹೇಗೆ ಬೆಳೆಯಬಹುದು..? ಯಾಕೆ ಸೂಕ್ತ ವಯಸ್ಸಿದ್ದಾಗಲೇ ತಾಯ್ತನದ ಬಗ್ಗೆ ಆಸಕ್ತಿ ಇರಲಿಲ್ಲ, ಅನ್ನೋ ವಿಷಯಗಳ ಕುರಿತು ಅವರು ಬಹಿರಂಗವಾಗಿ ಮನದ ಮಾತನ್ನ ಸೋಶಿಯಲ್ ಮೀಡಿಯಾದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಇದನ್ನೂ ಓದಿ: ಮದುವೆಯಾಗದೆ ಅಮ್ಮನಾಗಲಿರುವ ಭಾವನಾ ರಾಮಣ್ಣ

    ತಾಯಿ ಆಗುತ್ತಿರುವ ಕುರಿತು ಭಾವನಾ ಹೇಳಿದ್ದೇನು..?
    ಇದು ನನ್ನ ಹೊಸ ಅಧ್ಯಾಯ, ಹೊಸ ಲಯ, ನಾನು ಇದನ್ನು ಹೇಳುತ್ತೇನೆಂದು ಎಂದಿಗೂ ಊಹಿಸಿರಲಿಲ್ಲ, ಆದರೆ ಇಲ್ಲಿ ನಾನು ಅವಳಿ ಮಕ್ಕಳೊಂದಿಗೆ ಆರು ತಿಂಗಳ ಗರ್ಭಿಣಿಯಾಗಿದ್ದೇನೆ. ನನಗೆ 20-30 ವರ್ಷ ಇದ್ದಾಗ ತಾಯ್ತನದ ಆಸೆ ನನ್ನ ಮನಸ್ಸಿನಲ್ಲಿ ಇರಲಿಲ್ಲ. 40 ವರ್ಷ ತುಂಬಿದಾಗ, ಆ ಆಸೆಯನ್ನು ನಿರಾಕರಿಸಲಾಗಲಿಲ್ಲ. ಒಂಟಿ ಮಹಿಳೆಯಾಗಿ, ದಾರಿ ಸುಲಭವಾಗಿರಲಿಲ್ಲ. ಅನೇಕ ಐವಿಎಫ್ ಸೆಂಟರ್‌ಗಳು ನನ್ನನ್ನು ತಿರಸ್ಕಾರ ಮಾಡಿದ್ದವು. ಬಳಿಕ ನಾನು ಡಾ. ಸುಷ್ಮಾರನ್ನು ಭೇಟಿಯಾದೆ. ಅವರು ನನ್ನ ಮೇಲೆ ಯಾವುದೇ ಯಾವುದೇ ಕೀಳು ಭಾವನೆ ಪಡದೇ ಸ್ವಾಗತಿಸಿದ್ರು. ಅವರ ಬೆಂಬಲದೊಂದಿಗೆ, ನಾನು ನನ್ನ ಮೊದಲ ಪ್ರಯತ್ನದಲ್ಲೇ ಗರ್ಭಿಣಿಯಾಗಿದ್ದೇನೆ. ಇದನ್ನೂ ಓದಿ: ಪ್ರಜ್ವಲ್ ಹುಟ್ಟುಹಬ್ಬಕ್ಕೆ `ಮಾಫಿಯಾ’ ಟೀಮ್ ಗಿಫ್ಟ್

    ನನ್ನ ತಂದೆ, ಒಡಹುಟ್ಟಿದವರು ಮತ್ತು ಪ್ರೀತಿಪಾತ್ರರು ಹೆಮ್ಮೆ ಮತ್ತು ಪ್ರೀತಿಯಿಂದ ನನ್ನ ಪಕ್ಕದಲ್ಲಿ ನಿಂತರು. ಕೆಲವರು ನನ್ನ ಆಯ್ಕೆಯನ್ನು ಪ್ರಶ್ನಿಸಿದರು, ಆದರೆ ನನ್ನ ಮನಸ್ಸಿನಲ್ಲಿ ನಾನು ಎಲ್ಲದಕ್ಕೂ ಸಿದ್ಧಳಾಗಿದ್ದೆ. ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು, ಆದರೆ ಅವರು ಕಲೆ, ಸಂಗೀತ, ಸಂಸ್ಕೃತಿ ಮತ್ತು ಬೇಷರತ್ತಾದ ಪ್ರೀತಿಯಿಂದ ತುಂಬಿದ ಮನೆಯಲ್ಲಿ ಬೆಳೆಯುತ್ತಾರೆ. ದಯೆ, ಆತ್ಮವಿಶ್ವಾಸ ಮತ್ತು ಹೆಮ್ಮೆಯಿಂದ ಬೆಳಯುತ್ತಾರೆ. ನಾನು ರೆಬೆಲ್ ಆಗಲು ಈ ಮಾರ್ಗವನ್ನು ಆರಿಸಿಕೊಂಡಿಲ್ಲ, ನನ್ನ ಸತ್ಯವನ್ನು ಗೌರವಿಸಲು ನಾನು ಈ ಮಾರ್ಗವನ್ನ ಆಯ್ಕೆ ಮಾಡಿಕೊಂಡೆ. ನನ್ನ ಕಥೆ, ಒಬ್ಬಳೇ ಒಬ್ಬಳು ಮಹಿಳೆಯಾದರೂ ತನ್ನನ್ನು ತಾನು ನಂಬುವಂತೆ ಪ್ರೇರೇಪಿಸಿದರೆ ಸಾಕು. ಶೀಘ್ರದಲ್ಲೇ, ಎರಡು ಪುಟ್ಟ ಆತ್ಮಗಳು ನನ್ನನ್ನು ಅಮ್ಮ ಎಂದು ಕರೆಯುತ್ತವೆ ಹಾಗೂ ಅದೇ ಎಲ್ಲವೂ ಆಗಿರುತ್ತದೆ. ಇದನ್ನೂ ಓದಿ: ಜಾನಿ ಮಾಸ್ಟರ್ ಜೊತೆಗಿನ ಫೋಟೋ: ಟೀಕೆಗೆ ಒಳಗಾದ ನಯನತಾರಾ-ವಿಘ್ನೇಶ್

  • ಮದುವೆಯಾಗದೆ ಅಮ್ಮನಾಗಲಿರುವ ಭಾವನಾ ರಾಮಣ್ಣ

    ಮದುವೆಯಾಗದೆ ಅಮ್ಮನಾಗಲಿರುವ ಭಾವನಾ ರಾಮಣ್ಣ

    ವಿಎಫ್‌ ಮೂಲಕ 40ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿ ಅವಳಿ ಮಕ್ಕಳಿಗೆ ಜನ್ಮ ನೀಡುವ ಖುಷಿಯಲ್ಲಿದ್ದ ನಟಿ ಭಾವನಾ ರಾಮಣ್ಣಗೆ (Bhavana Ramanna) ಆಘಾತವೂ ಆಗಿದೆ. ಹೆಣ್ಣು ಮಗುವಿಗೆ ಜನ್ಮ ನೀಡಿ ನಟಿ ಆರೋಗ್ಯವಾಗಿದ್ದರೆ, ಮತ್ತೊಂದು ಮಗು ಹುಟ್ಟಿದಾಗಲೇ ತೀರಿಕೊಂಡಿದೆ.

    ನಟಿ ಭಾವನ ರಾಮಣ್ಣಗೆ ಎರಡು ವಾರಗಳ ಹಿಂದೆ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ತಾಯಿಯದ ನಟಿ ಭಾವನಾ ಅವರು ಸದ್ಯ ಆರೋಗ್ಯವಾಗಿದ್ದಾರೆ. ಆದ್ರೆ ಒಂದು ಮಗು ನಿಧನವಾಗಿದೆ. ಇದನ್ನೂ ಓದಿ: ಮದುವೆಯಾಗದೆ ಅಮ್ಮನಾಗಲಿರುವ ಭಾವನಾ ರಾಮಣ್ಣ

    ಐವಿಎಫ್ (IVF) ಮೂಲಕ ತಾಯಿ ಆದ ನಟಿ ಭಾವನಾ ಅವರು ಇತ್ತೀಚೆಗೆ ಸೀಮಂತ ಮಾಡಿಸಿಕೊಂಡಿದ್ದರು. ವೈದ್ಯರ ಸೂಚನೆಯಂತೆ ಹೆರಿಗೆ ಮಾಡಲಾಗಿದ್ದು, ಒಂದು ಮಗುವಿನಲ್ಲಿ 7 ತಿಂಗಳ ನಂತರ ಸಮಸ್ಯೆ ಕಾಣಿಸಿಕೊಂಡ ಕಾರಣ 8 ತಿಂಗಳಿಗೆ ಹೆರಿಗೆ ಮಾಡಿಸಲಾಗಿದೆ. ಸದ್ಯ ಒಂದು ಮಗು, ತಾಯಿ ಇಬ್ಬರು ಕ್ಷೇಮವಾಗಿದ್ದು, ಮತ್ತೊಂದು ಮಗು ಹುಟ್ಟಿದಾಗಲೇ ತೀರಿಕೊಂಡಿದೆ. ಇದನ್ನೂ ಓದಿ: ನಟಿ ಭಾವನಾ ರಾಮಣ್ಣ ಸೀಮಂತ ಶಾಸ್ತ್ರ

    40ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದ ನಟಿ
    ನಟಿ ಭಾವನಾ ರಾಮಣ್ಣ, ತಮ್ಮ ಬಾಲ್ಯದಿಂದಲೂ ಮಕ್ಕಳ ಜೊತೆಗಿರುವುದನ್ನು ಇಷ್ಟಪಡುತ್ತಿದ್ದರು. ಆದರೆ, ತಮ್ಮ 20ನೇ ವಯಸ್ಸಿನಲ್ಲಿ ತಾಯಿಯಾಗುವ ಯೋಚನೆ ಗಂಭೀರವಾಗಿ ತಟ್ಟಿರಲಿಲ್ಲ. 30ನೇ ವಯಸ್ಸಿನಲ್ಲಿ ಪ್ರೀತಿಯ ಆಕಾಂಕ್ಷೆಯಿದ್ದರೂ, ತಾಯಿಯಾಗುವ ಬಗ್ಗೆ ಯೋಚನೆ ಮಾಡಿರಲಿಲ್ಲ. “ನಾನು ಯಾವಾಗಲೂ ಮಕ್ಕಳ ಸುತ್ತಲಿರುವ ವಾತಾವರಣದಲ್ಲಿ ಬೆಳೆದೆ. ನನ್ನ ತಂದೆ-ತಾಯಿ, ಮೂವರು ಸಹೋದರ-ಸಹೋದರಿಯರು, ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ತುಂಬಿದ ಮನೆಯಲ್ಲಿ ಬೆಳೆದೆ. ಆದರೆ 40 ತಲುಪಿದಾಗ ತಾಯಿಯಾಗಬೇಕೆಂಬ ಕರೆಯನ್ನು ತಡೆಯಲಾಗಲಿಲ್ಲ” ಎಂದು ಹೇಳಿಕೊಂಡಿದ್ದರು. ಇದನ್ನೂ ಓದಿ: `ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು’…ಅಮ್ಮನಾಗುತ್ತಿರುವ ನಟಿ ಭಾವನಾ ಮೊದಲ ಮಾತು

    ಭಾವನಾ ರಾಮಣ್ಣ ಸಿನಿ ಜರ್ನಿ
    ನಂದಿನಿ ರಾಮಣ್ಣ ಎಂಬ ಮೂಲ ಹೆಸರಿನ ಭಾವನಾ, ಕನ್ನಡ ಚಿತ್ರರಂಗದಲ್ಲಿ ತಮ್ಮ ಅಭಿನಯ ಮತ್ತು ಭರನಾಟ್ಯ ಕೌಶಲ್ಯಕ್ಕೆ ಹೆಸರಾಗಿದ್ದಾರೆ. ತುಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಭಾವನಾ, ʻಚಂದ್ರಮುಖಿ ಪ್ರಾಣಸಖಿʼ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದರು. ಭಾವನಾ ʻನೀ ಮುಡಿದ ಮಲ್ಲಿಗೆʼ, ʻಕ್ಷಾಮʼ, ʻಭಾಗೀರಥಿʼ ಸಿನಿಮಾಗಾಗಿ ಮೂರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಟಿಯಾಗಿ ಮಾತ್ರವಲ್ಲ, ರಾಜಕೀಯ ಮತ್ತು ಸಾಮಾಜಿಕ ಕಾರ್ಯಗಳಲ್ಲೂ ಅವರು ತೊಡಗಿಕೊಂಡಿದ್ದಾರೆ. ಸದ್ಯ ಭಾವನಾ ರಾಮಣ್ಣ ಅವರ ಈ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

  • ಮದುವೆ ಇಷ್ಟ, ಆದ್ರೆ ಸರಿಯಾದ ಹುಡುಗ ಸಿಕ್ಕಿಲ್ಲ: ಭಾವನಾ

    ಮದುವೆ ಇಷ್ಟ, ಆದ್ರೆ ಸರಿಯಾದ ಹುಡುಗ ಸಿಕ್ಕಿಲ್ಲ: ಭಾವನಾ

     

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾನೂ ಕಾಂಗ್ರೆಸ್‌ನಿಂದ ಟಿಕೆಟ್ ಕೇಳ್ತೀನಿ – ನಟಿ ಭಾವನಾ

    ನಾನೂ ಕಾಂಗ್ರೆಸ್‌ನಿಂದ ಟಿಕೆಟ್ ಕೇಳ್ತೀನಿ – ನಟಿ ಭಾವನಾ

    ಚಿತ್ರದುರ್ಗ: ನಾನೂ ಈ ಬಾರಿ ಕಾಂಗ್ರೆಸ್‌ನಿಂದ (Congress) ಟಿಕೆಟ್ ಕೇಳ್ತೀನಿ. ಜನರ ಸೇವೆಗಾಗಿ ಚುನಾವಣೆಗೆ (Election) ನಿಲ್ತೀನಿ ಎಂದು ಕನ್ನಡದ ಖ್ಯಾತ ನಟಿ ಭಾವನಾ (Actress Bhavana) ಹೇಳಿದ್ದಾರೆ.

    ಭಾರತ್ ಜೋಡೋ ಯಾತ್ರೆ (Bharath Jodo Yatra) ವೇಳೆ ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಾನು ಈ ಬಾರಿ ಕಾಂಗ್ರೆಸ್‌ನಿಂದ ಟಿಕೆಟ್ ಕೇಳ್ತೀನಿ. ಜನರ ಸೇವೆಗಾಗಿ ನಾನು ಚುನಾವಣೆಗೆ ನಿಲ್ತೀನಿ. ಮುಂದೆ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಪ್ರಧಾನಿ ಮೋದಿಗೆ (Narendra Modi) ಅವರಿಗೆ ರಾಹುಲ್‌ಗಾಂಧಿ (Rahul Gandhi) ಸಮನಾದ ವ್ಯಕ್ತಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಂದೆ ಭಾರತ್ ಜೋಡೋ, ಹಿಂದೆ ಎಲೆಕ್ಷನ್ ಸರ್ವೆ – ಮಳೆಯಲ್ಲೂ ನಿಲ್ಲದ ರಾಹುಲ್ ಜೋಶ್

    ದೇಶದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ರಾಹುಲ್‌ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿ ಕನ್ಯಾಕುಮಾರಿವರೆಗೆ ಭಾರತ್ ಜೋಡೋ ಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲೂ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 14ರ ವರೆಗೆ ರಾಹುಲ್ ಗಾಂಧಿ ಅವರು ಪಾದಯಾತ್ರೆ ನಡೆಸುತ್ತಿದ್ದಾರೆ. ಫುಲ್‌ಜೋಶ್‌ನಲ್ಲಿರೋ ರಾಹುಲ್‌ಗಾಂಧಿ ಜಡೀ ಮಳೆಯಲ್ಲೂ ಉತ್ಸಾಹ ಕಳೆದುಕೊಳ್ಳದೇ ಮುನ್ನುಗ್ಗುತ್ತಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ನಡುವೆ ಪೋಸ್ಟರ್ ವಾರ್ – ರಾರಾಜಿಸುತ್ತಿದೆ ರಾಜು, ಕುಟ್ಟಪ್ಪನ ಸ್ವಾಗತ ಪೋಸ್ಟರ್

    ಮಂಗಳವಾರ (ಅ.11) ರಾಹುಲ್ ಗಾಂಧಿ 10ನೇ ದಿನದ ಪಾದಯಾತ್ರೆ ಚಿತ್ರದುರ್ಗದ ಹರ್ತಿಕೋಟೆಯಿಂದ ಆರಂಭವಾಗುತ್ತಿದ್ದು, 22 ಕಿಮೀ ಪಾದಯಾತ್ರೆ ಮಾಡಲಿದ್ದಾರೆ. ಈ ನಡುವೆ ಅರಬಾವಿ, ಗೋಕಾಕ್, ಗೌರಿಬಿದನೂರು, ಬಾಗೇಪಲ್ಲಿ, ಚಳ್ಳಕೆರೆ, ದಾವಣಗೆರೆ, ಹೊನ್ನಾಳಿ, ಚನ್ನಗಿರಿ, ಶಿವಮೊಗ್ಗ, ಶಿವಾಜಿನಗರ, ಪಾವಗಡ ಕ್ಷೇತ್ರಗಳ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ (Siddramaiah), ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (Dk Shivakumar) ಇನ್ನೂ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡದ ಹುಡುಗನ ಜೊತೆ ಸಪ್ತಪದಿ ತುಳಿದ ಭಾವನಾ-ಫೋಟೋಗಳಲ್ಲಿ ನೋಡಿ

    ಕನ್ನಡದ ಹುಡುಗನ ಜೊತೆ ಸಪ್ತಪದಿ ತುಳಿದ ಭಾವನಾ-ಫೋಟೋಗಳಲ್ಲಿ ನೋಡಿ

    ಬೆಂಗಳೂರು: ಬಹುಭಾಷಾ ಚಿತ್ರ ತಾರೆ, ಮಲೆಯಾಳಂ ಬೆಡಗಿ ನಟಿ ಭಾವನಾ ಕನ್ನಡದ ಹುಡುಗ ನವೀನ್ ಅವರ ಜತೆ ದಾಂಪತ್ಯ ಬಾಳಿಗೆ ಕಾಲಿಟ್ಟಿದ್ದಾರೆ.

    ಕೇರಳದ ತ್ರಿಶೂರ್ ಜವರ್ ಲಾಲ್ ಕನ್ವೇಷನ್ ಹಾಲ್‍ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಜೋಡಿ ಇದೀಗ ಸಪ್ತಪದಿ ತುಳಿದಿದೆ. ಕೇರಳ ಸಂಪ್ರದಾಯದಂತೆ ಇವರ ಮದುವೆ ನಡೆದಿದ್ದು, ಹಲವು ಸಿನಿಮಾ ತಾರೆಯರು, ಆಪ್ತರು ಹಾಗೂ ಅಭಿಮಾನಿಗಳು ಮದುವೆಯ ಫೋಟೋಗಳನ್ನು ಸಾಮಾಜಿಕ ತಾಣದಲ್ಲಿ ಹಾಕಿ ನವ ಜೋಡಿಗೆ ಶುಭಕೋರುತ್ತಿದ್ದಾರೆ.

    ದಕ್ಷಿಣ ಚಿತ್ರರಂಗದ ಈ ವರ್ಷದ ಮೊದಲ ಸಿನಿಮಾ ನಟಿಯ ಮದುವೆ ಇದಾಗಿದೆ. 2017 ಮಾರ್ಚ್ 9ರಂದು ಕೊಚ್ಚಿಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾವನಾ ಮತ್ತು ನವೀನ್ ಕುಟುಂಬದ ಸದಸ್ಯರು ಸೇರಿದಂತೆ ನಟಿಯರಾದ ಮಂಜುವಾರಿಯರ್ ಹಾಗೂ ಸಂಯುಕ್ತವರ್ಮಾ ಪಾಲ್ಗೊಂಡಿದ್ದರು. ಕೇರಳ ಮೂಲದವರಾದ ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ `ಜಾಕಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿದ್ದರು. ನಂತರ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ `ರೋಮಿಯೊ’, ಕಿಚ್ಚ ಸುದೀಪ್‍ನ ಅಭಿನಯದ `ವಿಷ್ಣುವರ್ಧನ್’ ಹಾಗೂ `ಬಚ್ಚನ್’ ಚಿತ್ರಗಳಿಂದ ಭಾವನಾ ಕನ್ನಡಿಗರಿಗೆ ಮನೆ ಮಗಳಾಗಿದ್ದಾರೆ.

    https://www.youtube.com/watch?v=A1aJzuyrLiw

     


  • ಚಿತ್ರದುರ್ಗದ ಮಗಳಾಗಿ ನಾನು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ: ನಟಿ ಭಾವನಾ

    ಚಿತ್ರದುರ್ಗದ ಮಗಳಾಗಿ ನಾನು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ: ನಟಿ ಭಾವನಾ

    ಚಿತ್ರದುರ್ಗ: ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಟಿಕೆಟ್ ಆಕಾಂಕ್ಷಿಯಾಗಿದ್ದು, ಅವಕಾಶ ಕೊಟ್ಟರೆ ಸ್ಪರ್ಧಿಸುವುದಾಗಿ ನಟಿ ಭಾವನ ಹೇಳಿದ್ದಾರೆ. ಭಾವನ ಮೂಲತಃ ಚಿತ್ರದುರ್ಗ ನಗರದ ಬುರುಜನಹಟ್ಟಿ ಬಡಾವಣೆಯ ನಿವಾಸಿಯಾಗಿದ್ದು, ಭಾನುವಾರ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

    ಚುನಾವಣೆಗಳು ಹತ್ತಿರ ಬರುತ್ತಿರುವುದರಿಂದ ಎಲ್ಲರ ರಕ್ತ ಬಿಸಿಯಾಗಿದೆ. ಹಾಗೆಯೇ ನನ್ನ ಎದೆ ಬಡಿತ ಹೆಚ್ಚಾಗಿದೆ. ಕಾಂಗ್ರೆಸ್ ವರಿಷ್ಟರು ಹಾಗು ಕಾರ್ಯಕರ್ತರ ಸಹಕಾರದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕಳಾಗಿದ್ದೇನೆ. ಅಲ್ಲದೇ ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಕಲ ಸಿದ್ಧತೆ ನಡೆಸಿರುವುದಾಗಿ ತಿಳಿಸಿದರು.

    ಆದರೆ ಪಕ್ಷದ ಹಿರಿಯರು, ಅಧ್ಯಕ್ಷರು, ಮುಖ್ಯಮಂತ್ರಿಗಳು ಹಾಗು ವರಿಷ್ಟರ ಸಹಕಾರ, ಮಾರ್ಗದರ್ಶನ ಮತ್ತು ಆಶೀರ್ವಾದದ ಅಗತ್ಯವಿದ್ದು, ಎಲ್ಲರ ಬೆಂಬಲದೊಂದಿಗೆ ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಜನರ ಮುಂದೇ ಬರಲು ಇಷ್ಟಪಡುತ್ತೆನೆ ಎಂದರು.