Tag: Actress Apeksha Purohit

  • ಮತ್ತೆ ತಂದೆಯಾದ ಸಂಭ್ರಮದಲ್ಲಿ ಪವನ್ ಒಡೆಯರ್- ಮನೆಗೆ ಮುದ್ದು ಮಗಳ ಆಗಮನ

    ಮತ್ತೆ ತಂದೆಯಾದ ಸಂಭ್ರಮದಲ್ಲಿ ಪವನ್ ಒಡೆಯರ್- ಮನೆಗೆ ಮುದ್ದು ಮಗಳ ಆಗಮನ

    ನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪವನ್ ಒಡೆಯರ್ (Pawan Wadeyar) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಪವನ್ ಪತ್ನಿ ಅಪೇಕ್ಷಾ (Apeksha Purohit) ಅವರು 2ನೇ ಮಗುವಿಗೆ ಜನ್ಮ ನೀಡಿದ್ದಾರೆ. ಮನೆಗೆ ಮುದ್ದು ಮಗಳ (Baby Girl) ಆಗಮನವಾಗಿದೆ. ಈ ಸಂತಸದ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಗೂಗ್ಲಿ ನಿರ್ದೇಶಕ ಪವನ್ ಒಡೆಯರ್ ತಿಳಿಸಿದ್ದಾರೆ. ಇದನ್ನೂ ಓದಿ:‘ನೆರ್ಚಪೆಟ್ಟಿ’ ಸಿನಿಮಾ ವಿವಾದ: ಪೋಸ್ಟರ್ ಹರಿದು ಹಾಕಿದ ಕೇರಳಿಗರು

    ಸ್ಯಾಂಡಲ್‌ವುಡ್‌ನ (Sandalwood) ಮುದ್ದಾದ ಜೋಡಿ ನಿರ್ದೇಶಕ ಪವನ್ ಒಡೆಯರ್- ಅಪೇಕ್ಷಾ ಪುರೋಹಿತ್ ದಂಪತಿ ಸದ್ಯ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಈಗಾಗಲೇ ಶೌರ್ಯ ಎಂಬ ಮುದ್ದಾದ ಗಂಡು ಮಗನಿದ್ದು, ಈಗ ಹೆಣ್ಣು ಮಗುವಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ. ತಾಯಿ- ಮಗು ಕ್ಷೇಮವಾಗಿದ್ದಾರೆ.

    ರಣವಿಕ್ರಮ, ಗೂಗ್ಲಿ (Googly) , ಡೊಳ್ಳು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಿರ್ದೇಶಕ ಪವನ್ ಒಡೆಯರ್ ಮನೆಯಲ್ಲಿ ಸಂಭ್ರಮ, ಖುಷಿ ಮನೆ ಮಾಡಿದೆ. ತಮ್ಮ ಕುಟುಂಬಕ್ಕೆ ಹೊಸ ಅತಿಥಿ ಬಂದಿರುವ ಖುಷಿಯಲ್ಲಿದ್ದಾರೆ. ಇತ್ತೀಚಿಗೆ ನಿರ್ದೇಶಕ ಪವನ್ ಪತ್ನಿ ಅಪೇಕ್ಷಾ ಬೇಬಿ ಬಂಪ್ ಫೋಟೋಶೂಟ್ ಮೂಲಕ ಸಿಹಿ ಸುದ್ದಿ ತಿಳಿಸಿದ್ದರು. ಕಪ್ಪು ಬಣ್ಣದ ಉಡುಗೆಯಲ್ಲಿ ನಟಿ ಅಪೇಕ್ಷಾ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಶ್ರೀಮತಿ ಭಾಗ್ಯಲಕ್ಷ್ಮಿ’ ಸೀರಿಯಲ್‌ನಲ್ಲಿ ನಾಯಕಿಯಾಗಿ ಅಪೇಕ್ಷಾ ಬಣ್ಣ ಹಚ್ಚಿದ್ದರು. ಪವನ್ ಒಡೆಯರ್ ಅವರನ್ನು ಪ್ರೀತಿಸಿ (Love) ಗುರುಹಿರಿಯರ ಸಮ್ಮುಖದಲ್ಲಿ 2018ರಲ್ಲಿ ಮದುವೆಯಾದರು. ಈಗ ಅಪೇಕ್ಷಾ ಅವರು ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ಕೂಡ ಗುರುತಿಸಿಕೊಳ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿರ್ದೇಶಕ ಪವನ್ ಒಡೆಯರ್ ಮದುವೆಯಲ್ಲಿ ಪುನೀತ್ ರಾಜ್ ಕುಮಾರ್ ಮನವಿ

    ನಿರ್ದೇಶಕ ಪವನ್ ಒಡೆಯರ್ ಮದುವೆಯಲ್ಲಿ ಪುನೀತ್ ರಾಜ್ ಕುಮಾರ್ ಮನವಿ

    ಬಾಗಲಕೋಟೆ: ನಗರದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ನಡೆದ ಗೂಗ್ಲಿ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ಮದುವೆ ಸಮಾರಂಭದಲ್ಲಿ ನಟ ಪುನೀತ್ ರಾಜ್‍ಕುಮಾರ್ ಭಾಗವಹಿಸಿ ನವ ದಂಪತಿಗೆ ಶುಭಕೋರಿದ್ದಾರೆ.

    ಸರಳವಾಗಿ ನಡೆದ ವಿವಾಹ ಸಮಾರಂಭದಲ್ಲಿ ನಿರ್ದೇಶಕ ಪವನ್ ಒಡೆಯರ್ ಬಾಗಲಕೋಟೆ ಮೂಲದ ನಟಿ ಅಪೇಕ್ಷಾ ಪುರೋಹಿತ ಕೈ ಹಿಡಿದರು. ಎರಡೂ ಕುಟುಂಬಸ್ಥರ ಆಪ್ತ ಸಂಬಂಧಿಕರ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆಯಿತು.

    ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಪುನೀತ್ ರಾಜ್‍ಕುಮಾರ್, ಪವನ್ ಅವರ ಮದುವೆ ಮೂಲಕ ಬಾಗಲಕೋಟೆಗೆ ಬರುವ ಅವಕಾಶ ಲಭಿಸಿದೆ. ಇಬ್ಬರ ಜೀವನ ಸುಖಮಯವಾಗಿರಲಿ ಎಂದು ಹರಿಸಿದರು.

    ಇದೇ ವೇಳೆ ಕೊಡಗಿನಲ್ಲಿ ಸಂಭವಿಸಿರುವ ಪ್ರವಾಹದ ಪರಿಸ್ಥಿತಿ ಬಗ್ಗೆ ಮಾತನಾಡಿ, ಕೊಡಗಿನ ಜನತೆಗೆ ನನ್ನ ಕೈಲಾದಷ್ಟು ನಾನು ಸಹಾಯ ಮಾಡಿದ್ದೇನೆ. ಎಲ್ಲರೂ ಅವರ ಶಕ್ತಿಯಾನುಸಾರ ಸಹಾಯ ಮಾಡಬೇಕು. ಸಂತ್ರಸ್ತ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

    ಅಂದಹಾಗೇ ಕಳೆದ ಡಿಸೆಂಬರ್ ತಿಂಗಳಲ್ಲಿ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ರವರ ನಿಶ್ಚಿತಾರ್ಥ ಸಮಾರಂಭ ಬಾಗಲಕೋಟೆಯ ಹರಿಪ್ರಿಯಾ ಹೋಟೆಲ್‍ನಲ್ಲಿ ನೆರವೇರಿತ್ತು. ಇಬ್ಬರ ಕುಟುಂಬದ ಆಪ್ತರ ಮಧ್ಯೆ ಸರಳವಾಗಿ ನಿಶ್ಚಿತಾರ್ಥ ನಡೆದಿದ್ದು, ಪರಸ್ಪರ ಇಬ್ಬರು ಉಂಗುರವನ್ನು ಬದಲಾಯಿಸಿಕೊಂಡಿದ್ದರು.

    ನಿರ್ದೇಶಕ ಪವನ್ ಒಡೆಯರ್ `ರಣವಿಕ್ರಮ’, `ನಟರಾಜ ಸರ್ವಿಸ್’, `ಗೂಗ್ಲಿ’ ಹಾಗೂ `ಗೋವಿಂದಾಯ ನಮಃ’ ಸಿನಿಮಾಗಳನ್ನು ಮಾಡಿದ್ದಾರೆ. ಪವನ್ ಒಡೆಯರ್ ಸದ್ಯ ಪುನೀತ್ ರಾಜ್ ಕುಮಾರ್ ಅವರ `ನಟ ಸಾರ್ವಭೌಮ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv