Tag: actress amulya

  • ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಸಹೋದರ ದೀಪಕ್‌ ಅರಸ್‌ ನಿಧನ

    ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಸಹೋದರ ದೀಪಕ್‌ ಅರಸ್‌ ನಿಧನ

    ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಅವರ ಸಹೋದರ ದೀಪಕ್‌ ಅರಸ್‌ (46) ನಿಧನರಾಗಿದ್ದಾರೆ.

    ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ದೀಪಕ್ ಕೊನೆಯುಸಿರೆಳೆದಿದ್ದಾರೆ. ಇವರು ಮನಸಾಲಜಿ, ಶುಗರ್ ಫ್ಯಾಕ್ಟರಿ ಸಿನಿಮಾಗಳನ್ನು ನಿರ್ದೇಶಿಸಿದ್ದರು.

    ಕಿಡ್ನಿ ವೈಫಲ್ಯದಿಂದ ನಿಧನರಾಗಿದ್ದಾರೆಂದು ತಿಳಿದುಬಂದಿದೆ. ದೀಪಕ್‌ ಅರಸ್‌ ಅವರಿಗೆ ಮದುವೆ ಆಗಿ ಇಬ್ಬರು ಮಕ್ಕಳಿದ್ದರು.

    ವಯಾಲಿ ಕಾವಲ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

  • ʻಈ ಸಲ ಕಪ್‌ ನಮ್ದೆʼ ಅಂತಿದ್ದಾರೆ ನಟಿ ಅಮೂಲ್ಯ ಮಕ್ಕಳು – ಪುಟಾಣಿ ಫ್ಯಾನ್ಸ್‌ಗೆ ನೆಟ್ಟಿಗರು ಫಿದಾ

    ʻಈ ಸಲ ಕಪ್‌ ನಮ್ದೆʼ ಅಂತಿದ್ದಾರೆ ನಟಿ ಅಮೂಲ್ಯ ಮಕ್ಕಳು – ಪುಟಾಣಿ ಫ್ಯಾನ್ಸ್‌ಗೆ ನೆಟ್ಟಿಗರು ಫಿದಾ

    ಬೆಂಗಳೂರು: ಐಪಿಎಲ್‌ ಟೂರ್ನಿ (IPL 2023) ಬಂತೆಂದರೆ ಸಾಕು ಪ್ರಮುಖವಾಗಿ ಕೇಳಿಬರುವ ಹೆಸರೇ RCB. ಆರ್‌ಸಿಬಿ ಹೆಸರಲ್ಲೇ ಒಂದು ಹವಾ ಇದೆ, ಎಷ್ಟು ಬಾರಿ ಪಂದ್ಯ ಸೋತರೂ ಉತ್ಸಾಹ ಕಳೆದುಕೊಳ್ಳದೆ ಪ್ರತಿ ಸಲ ʻಈ ಸಲ ಕಪ್‌ ನಮ್ದೆ’ ಎನ್ನುತ್ತಾ ಹೊಸ ಉರುಪಿನೊಂದಿಗೆ ಮತ್ತೆ ಮತ್ತೆ ಕ್ರಿಕೆಟ್‌ ಅಂಗಳದಲ್ಲಿ ರಂಗೇರಿಸುತ್ತಿದೆ.

    ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ನಡುವಿನ ರಣರೋಚಕ ಪಂದ್ಯದಲ್ಲಿ ಸಿಎಸ್‌ಕೆ 8 ರನ್‌ಗಳ ರೋಚಕ ಜಯ ಸಾಧಿಸಿತು. ಕೊನೆಯವರೆಗೂ ಛಲಬಿಡದೇ ಹೋರಾಡಿದ ಆರ್‌ಸಿಬಿ ವಿರೋಚಿತ ಸೋಲನುಭವಿಸಿತು. ಇದನ್ನೂ ಓದಿ: ಮ್ಯಾಕ್ಸಿ, ಡುಪ್ಲೆಸಿಸ್‌ ಸ್ಫೋಟಕ ಫಿಫ್ಟಿ – ಹೋರಾಡಿ ಕೊನೆಗೆ ಸೋತ ಆರ್‌ಸಿಬಿ

    ಈ ಬೆನ್ನಲ್ಲೇ ನಟಿ ಅಮೂಲ್ಯ (Actress Amulya) ತಮ್ಮ ಅವಳಿ ಮಕ್ಕಳಾದ ಅಥರ್ವ್ ಮತ್ತು ಆಧವ್ ಇಬ್ಬರಿಗೂ ಆರ್​ಸಿಬಿ ಜೆರ್ಸಿ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಈ ವಿಶೇಷ ಫೋಟೋಗಳನ್ನ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಆರ್‌ಸಿಬಿಯನ್ನ ಬೆಂಬಲಿಸಿದ್ದಾರೆ. ಅಲ್ಲದೇ ʻಈ ಸಲ ಕಪ್‌ ನಮ್ದೆʼ ಎಂದು ಮಕ್ಕಳೇ ಹೇಳಿರುವಂತೆ ಬರೆದುಕೊಂಡಿದ್ದಾರೆ. ಪುಟಾಣಿ ಫ್ಯಾನ್ಸ್‌ಗಳನ್ನ ನೋಡಿ ಆರ್‌ಸಿಬಿ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ. ನಟಿ ಅಮೂಲ್ಯ ಪೋಸ್ಟ್‌ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: IPL 2023: ಇಶಾನ್‌ ಕಿಶನ್‌ ಶೈನ್‌, ಅಯ್ಯರ್‌ ಶತಕದಾಟ ವ್ಯರ್ಥ – ಮುಂಬೈಗೆ 5 ವಿಕೆಟ್‌ಗಳ ಜಯ

    ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು 20 ಓವರ್‌ಗಳಲ್ಲಿ 226 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಆರ್‌ಸಿಬಿ ಸಿಕ್ಸರ್‌, ಬೌಂಡರಿಗಳ ಹೊಡಿಬಡಿ ಆಟದ ಹೊರತಾಗಿಯೂ 218 ರನ್‌ಗಳಿಸಿ 8 ರನ್‌ಗಳಿಂದ ವಿರೋಚಿತ ಸೋಲನುಭವಿಸಿತು.

  • ಮತಗಟ್ಟೆಯಲ್ಲಿ ಕೋವಿಡ್ ಕುರಿತು ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ: ನಟಿ ಅಮೂಲ್ಯ

    ಮತಗಟ್ಟೆಯಲ್ಲಿ ಕೋವಿಡ್ ಕುರಿತು ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ: ನಟಿ ಅಮೂಲ್ಯ

    ಬೆಂಗಳೂರು: ಆರ್.ಆರ್ ನಗರ ಮತ್ತು ಶಿರಾ ಉಪಚುನಾವಣೆಯ ಮತದಾನ ಆರಂಭವಾಗಿದ್ದು, ಮತದಾನಕ್ಕೆ ಜನರು ಉತ್ಸುಕತೆಯಿಂದ ಭಾಗಿಯಾಗಿದ್ದಾರೆ. ನಟಿ ಅಮೂಲ್ಯ ಅವರು ಕುಟುಂಬದೊಂದಿಗೆ ಆಗಮಿಸಿ ಆರ್.ಆರ್ ನಗರದ ಬೂತ್ ನಂಬರ್ 369ರ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

    ಮತದಾನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ಅಮೂಲ್ಯ ಅವರು, ಕೊರೊನಾ ಕಾರಣದಿಂದ ಮತದಾನ ಕಷ್ಟ ಎಂದುಕೊಂಡಿದ್ದೇವು. ಆದರೆ ಕೆಲವರು ವೀಲ್ ಚೇರ್ ನಲ್ಲೂ ಬಂದ್ ಮತದಾನ ಮಾಡುತ್ತಿದ್ದಾರೆ. ಎಲ್ಲರೂ ಒಂದಲ್ಲಾ ಒಂದು ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ. ಪ್ರತಿಯೊಂದು ಬೂತ್‍ನಲ್ಲೂ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಆದ್ದರಿಂದ ಯುವ ಜನತೆ ಸೇರಿದಂತೆ ಎಲ್ಲರೂ ದಯವಿಟ್ಟು ಬಂದು ಮತದಾನ ಮಾಡಿ ಎಂದು ಮನವಿ ಮಾಡಿದರು.

    ಕೊರೊನಾ ಸೋಂಕಿನ ಸಂಕಷ್ಟದ ನಡುವೆಯೇ ಮತದಾನಕ್ಕೆ ಬರುವವರಿಗೆ ಹೆಚ್ಚಿನ ಸೌಲಭ್ಯಗಳನ್ನು ಚುನಾವಣಾ ಆಯೋಗ ಕೈಗೊಂಡಿದೆ. ಒಂದೊಮ್ಮೆ ಮತದಾನಕ್ಕೆ ಬರುವವರಿಗೆ ಟೆಂಪರೇಚರ್ ಹೆಚ್ಚಾಗಿದ್ದಾರೆ ಅವರಿಗೆ ಸಂಜೆ 5 ಗಂಟೆಯ ಬಳಿಕ ಅವಕಾಶ ನೀಡಲಾಗುತ್ತಿದೆ. ಕೊರೊನಾ ಸೋಂಕಿತರಿಗೂ ಕೂಡ ಸಂಜೆ 5 ಗಂಟೆ ಬಳಿಕ ಪಿಪಿಇ ಕಿಟ್ ಧರಿಸಿ ಮತದಾನ ಮಾಡಲು ಅವಕಾಶ ನೀಡಲಾಗಿದೆ.

    ಮತದಾನ ಕೇಂದ್ರದ ಬಳಿ ನೂಕುನುಗ್ಗಲಿಗೆ ಅವಕಾಶ ನೀಡದಂತೆ ಸಾಮಾಜಿಕ ಅಂತರ ಪಾಲನೆ ಮಾಡುವಂತೆ ಮಾರ್ಕ್ ಮಾಡಲಾಗಿದೆ. ಹೆಚ್ಚು ಜನರು ಆಗಮಿಸಿದರಿಗೆ ಟೋಕನ್ ವ್ಯವಸ್ಥೆ ಜಾರಿ ಮಾಡಲು ಆಯೋಗ ಸಿದ್ಧವಾಗಿದೆ. ಮತಗಟ್ಟೆಯನ್ನು ಸೋಂಕು ನಿವಾರಕ ದ್ರಾವಣ ಹಾಕಿ ಸ್ವಚ್ಛಗೊಳಿಸಿ ಬಳಿಕ ಮತದಾನಕ್ಕೆ ಅವಕಾಶ ನೀಡಲಾಗಿದೆ.

  • ಅಮೂಲ್ಯ-ಜಗದೀಶ್, ಹೆಚ್‍ಡಿಕೆ ದಂಪತಿಯಿಂದ ಆದಿಚುಂಚನಗಿರಿಯಲ್ಲಿ ವಿಶೇಷ ಪೂಜೆ

    ಅಮೂಲ್ಯ-ಜಗದೀಶ್, ಹೆಚ್‍ಡಿಕೆ ದಂಪತಿಯಿಂದ ಆದಿಚುಂಚನಗಿರಿಯಲ್ಲಿ ವಿಶೇಷ ಪೂಜೆ

    ಮಂಡ್ಯ: ಚಿತ್ರ ನಟಿ ಅಮೂಲ್ಯ ತಮ್ಮ ಭಾವಿ ಪತಿಯೊಂದಿಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಶ್ರೀ ಕಾಲಭೈರವೇಶ್ವರ ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಅಮವಾಸ್ಯೆ ಪೂಜೆ ಸಲ್ಲಿಸಿದ್ರು.

    ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿರುವ ಅಮೂಲ್ಯ ಮತ್ತು ಜಗದೀಶ್ ದೇವರ ಸನ್ನಿಧಿಯಲ್ಲಿ ಕುಳಿತು ಕಾಲಭೈರವ ಕ್ಷೇತ್ರಾದಿ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಅಮೂಲ್ಯ ತಮ್ಮ ಭಾವಿ ಪತಿಯೊಂದಿಗೆ ಪೂಜೆ ಸಲ್ಲಿಸುತ್ತಿದ್ದು, ಕ್ಷೇತ್ರಕ್ಕೆ ಪೂಜೆಗೆ ಬಂದ ಭಕ್ತರು ಯುವ ಜೋಡಿಯನ್ನು ಕುತೂಹಲದಿಂದ ನೋಡುತ್ತಿದ್ರು.

    ಹೆಚ್‍ಡಿಕೆ ದಂಪತಿಯಿಂದ್ಲೂ ವಿಶೇಷ ಪೂಜೆ: ಇಂದು ಅಮಾವಾಸ್ಯೆ ಪೂಜೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿಯವರು ಕೂಡ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸ್ವತಃ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿಯವರು ಅಮವಾಸ್ಯೆ ಪೂಜೆ ನೆರವೇರಿಸಿಕೊಟ್ರು. ರಾತ್ರಿಯೇ ಬಂದು ಶ್ರೀ ಮಠದಲ್ಲಿ ವಾಸ್ತವ್ಯವಿದ್ದ ದಂಪತಿ ಮುಂಜಾನೆಯಿಂದಲೇ ಹೋಮ, ಹವನಾದಿಯೊಂದಿಗೆ ಕಾಲಭೈರವೇಶ್ವರಸ್ವಾಮಿಯ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡ್ರು. ಭಕ್ತಿ ಭಾವದಿಂದ ಕಾಲ ಭೈರವನಿಗೆ ವಿಶೇಷ ಪೂಜೆ ಸಲ್ಲಿಸಿದ್ರು.

    ಕಳೆದ ಕೆಲ ಅಮವಾಸ್ಯೆಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಪತ್ನಿ ಚನ್ನಮ್ಮ ಅವರೊಂದಿಗೆ ಕಾಲಭೈರವೇಶ್ವರಸ್ವಾಮಿ ಸನ್ನಿಧಿಗೆ ಬಂದು ವಿಶೇಷ ಅಮವಾಸ್ಯೆ ಪೂಜೆ ಸಲ್ಲಿಸಿದ್ರು. ಮಳೆ ಬೆಳೆ ಸೇರಿದಂತೆ, ರಾಜಕೀಯ ಯಶಸ್ಸಿಗೂ ದೇವೇಗೌಡ ದಂಪತಿ ಕಾಲಭೈರವ ಕ್ಷೇತ್ರಾದಿ ದೇವತೆಗಳಿಗೆ ಪೂಜೆ ಸಲ್ಲಿಸಿದ್ರು. ಈ ಹಿನ್ನೆಲೆಯಲ್ಲಿ ಇಂದು ಕುಮಾರಸ್ವಾಮಿ ತಮ್ಮ ಪತ್ನಿಯೊಂದಿಗೆ ಕಾಲಭೈರವೇಶ್ವರ ಕ್ಷೇತ್ರಾದಿ ದೇವತೆಗಳಿಗೆ ಪೂಜೆ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಎಲ್ಲರೂ ಒಟ್ಟಿಗೆ ಕಾಲಭೈರವೇಶ್ವರನ ಎದುರು ಕುಳಿತು ಪೂಜೆ ಸಲ್ಲಿಸುತ್ತಿದ್ದು ಭಕ್ತಾದಿಗಳು ಮತ್ತು ಅಭಿಮಾನಿಗಳ ಗಮನ ಸೆಳೆಯಿತು.