Tag: actress Aindrita Ray

  • ಸುತ್ತೂರು ಮಠಕ್ಕೆ ಎಲೆಕ್ಟ್ರಿಕಲ್ ಆನೆ ದೇಣಿಗೆ ನೀಡಿದ ದಿಗಂತ್ ದಂಪತಿ

    ಸುತ್ತೂರು ಮಠಕ್ಕೆ ಎಲೆಕ್ಟ್ರಿಕಲ್ ಆನೆ ದೇಣಿಗೆ ನೀಡಿದ ದಿಗಂತ್ ದಂಪತಿ

    ತ್ತೀಚೆಗೆ ಕೇರಳದ ದೇವಸ್ಥಾನವೊಂದಕ್ಕೆ ಕನ್ನಡತಿ ಪ್ರಿಯಾಮಣಿ ಎಲೆಕ್ಟ್ರಿಕಲ್ ಆನೆಯೊಂದನ್ನು (Electrical Elephant) ದೇಣಿಗೆ ನೀಡಿದ್ದರು. ಇದೀಗ ಸುತ್ತೂರು ಮಠಕ್ಕೆ ಎಲೆಕ್ಟ್ರಿಕಲ್ ಆನೆಯನ್ನು ಉಡುಗೊರೆಯಾಗಿ ಸ್ಯಾಂಡಲ್‌ವುಡ್ ನಟ ದಿಗಂತ್ (Diganth) ಮತ್ತು ಐಂದ್ರಿತಾ ರೇ  (Aindrita Ray) ದಂಪತಿ ನೀಡಿದ್ದಾರೆ. ಇದನ್ನೂ ಓದಿ:ಅನಂತ್ ಅಂಬಾನಿ ಹುಟ್ಟುಹಬ್ಬದಲ್ಲಿ ಕುಣಿದು ಕುಪ್ಪಳಿಸಿದ ಸಲ್ಮಾನ್

    ಸುತ್ತೂರು ಮಠಕ್ಕೆ ಭೇಟಿ ನೀಡಿ ಎಲೆಕ್ಟ್ರಿಕಲ್ ಆನೆಯನ್ನು ದೇಣಿಗೆ ನೀಡಿದ್ದು, ದಿಗಂತ್ ದಂಪತಿಯ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ದಿಗಂತ್ ದಂಪತಿಯ ಕಾರ್ಯಕ್ಕೆ ಬಿಗ್ ಬಾಸ್ ಬೆಡಗಿ ಸಂಗೀತಾ ಶೃಂಗೇರಿ (Sangeetha Sringeri) ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ನಟ ದಿಗಂತ್ ಕನ್ನಡದ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಐಂದ್ರಿತಾ ರೇ ಕನ್ನಡದ ಜೊತೆ ಪರಭಾಷೆಯ ಸಿನಿಮಾಗಳಲ್ಲೂ ಆ್ಯಕ್ಟೀವ್ ಆಗಿದ್ದಾರೆ.

  • ನಾವು ಏನೂ ಮಾತಾಡುವ ಹಾಗಿಲ್ಲ: ಐಂದ್ರಿತಾ ರೇ

    ನಾವು ಏನೂ ಮಾತಾಡುವ ಹಾಗಿಲ್ಲ: ಐಂದ್ರಿತಾ ರೇ

    -ವಿ ಆರ್ ಫಾಲೋಯಿಂಗ್ ಸಿಸಿಬಿ ರೂಲ್ಸ್

    ಬೆಂಗಳೂರು: ಪ್ರಕರಣದ ಬಗ್ಗೆ ನಾವು ಏನೂ ಮಾತನಾಡುವ ಹಾಗಿಲ್ಲ. ಸಿಸಿಬಿ ಪೊಲೀಸರ ನಿಯಮಗಳನ್ನ ಪಾಲಿಸುತ್ತಿದ್ದೇವೆ ಎಂದು ಚಂದನವನದ ಪಾರಿಜಾತ ಐಂದ್ರಿತಾ ರೇ ಹೇಳಿದ್ದಾರೆ.

    ಬುಧವಾರ ದಿಗಂತ್ ಮತ್ತು ಐಂದ್ರಿತಾ ಸಿಸಿಬಿಗೆ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ಬಳಿಕ ಐಂದ್ರಿತಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇಂದು ಬೆಳಗ್ಗೆ ಮನೆಯ ಬಾಲ್ಕನಿಗೆ ಅತ್ತೆ ಜೊತೆ ಬಂದ ಐಂದ್ರಿತಾ ರೇ, ಸಿಸಿಬಿ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ನಾಗರೀಕರಾಗಿ ಪೊಲೀಸರ ತನಿಖೆ ಸಹಕಾರ ನೀಡೋದು ನಮ್ಮ ಕರ್ತವ್ಯ. ನಿನ್ನೆಯೇ ಪ್ರತಿಕ್ರಿಯೆ ನೀಡಿದ್ದೇವೆ. ಸಿಸಿಬಿ ಕೊಟ್ಟಿರೋ ನಿಯಮಗಳ ಪಾಲನೆ ಮಾಡುತ್ತಿದ್ದೇವೆ. ಮಾಧ್ಯಮಗಳ ಜೊತೆ ಮಾತನಾಡಿದ್ರೆ ರೂಲ್ಸ್ ಬ್ರೇಕ್ ಮಾಡಿದಂತಾಗುತ್ತದೆ ಎಂದು ತಿಳಿಸಿದರು.

    ನಾಳೆ ದಿಗಂತ್ ಚಿತ್ರೀಕರಣಕ್ಕೆ ಹೋಗಬಹುದು ಅದರ ಬಗ್ಗೆ ನನಗೆ ಗೊತ್ತಿಲ್ಲ. ಸದ್ಯಕ್ಕೆ ಯಾವುದೇ ನೋಟಿಸ್ ಬಂದಿಲ್ಲ ಎಂದು ದಿಗಂತ್ ತಾಯಿ ಮಲ್ಲಿಕಾ ಹೇಳಿದರು.

    ವಿಚಾರಣೆ ಹಂತದಲ್ಲಿರುವದರಿಂದ ಬೆಂಗಳೂರು ತೊರೆಯುವಂತಿಲ್ಲ ಎಂದು ಸಿಸಿಬಿ ನೀಡಿದೆ ಎನ್ನಲಾಗಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಮಾರಿಗೋಲ್ಡ್ ಸಿನಿಮಾ ಚಿತ್ರೀಕರಣದಲ್ಲಿ ದಿಗಂತ್ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ವಿಚಾರಣೆಯಿಂದ ಸಿನಿಮಾಗಳಿಗೆ ಯಾವುದೇ ತೊಂದರೆ ಆಗಲ್ಲ ಎಂದು ದಿಗಂತ್ ಸಿನಿಮಾ ತಂಡಕ್ಕೆ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  • ಭಾವಿ ಪತ್ನಿಗೆ ಶೂಟಿಂಗ್ ಸ್ಪಾಟ್‍ನಲ್ಲೇ ಸರ್ಪ್ರೈಸ್ ಕೊಟ್ಟ ದಿಗಂತ್!

    ಭಾವಿ ಪತ್ನಿಗೆ ಶೂಟಿಂಗ್ ಸ್ಪಾಟ್‍ನಲ್ಲೇ ಸರ್ಪ್ರೈಸ್ ಕೊಟ್ಟ ದಿಗಂತ್!

    ಬೆಂಗಳೂರು: ಹಲವು ವರ್ಷಗಳಿಂದ ಪ್ರೇಮಪಕ್ಷಿಗಳಾಗಿದ್ದ ಸ್ಯಾಂಡಲ್‍ವುಡ್ ತಾರೆಯರಾದ ದಿಗಂತ್, ಐಂದ್ರಿತಾ ರೇ ಸಪ್ತಪದಿ ತುಳಿಯುಲು ಸಜ್ಜಾಗುತ್ತಿರುವ ಸುದ್ದಿ ಬಹಿರಂಗವಾಗುತ್ತಿದಂತೆ ಇಬ್ಬರಿಗೂ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

    ಇತ್ತ ನಟ ದಿಗಂತ್ ಭಾವಿ ಪತ್ನಿಗೆ ಗೋವಾ ಶೂಟಿಂಗ್ ಸ್ಪಾಟ್‍ನಲ್ಲೇ ಪ್ರಪೋಸ್ ಮಾಡಿದ್ದು, ನೀನು ನನ್ನನ್ನು ಮದುವೆಯಾಗುತ್ತಿಯಾ ಎಂದು ಹೇಳಿ ರಿಂಗ್ ತೊಡಿಸಿದ್ದಾರೆ. ಐಂದ್ರಿತಾ ಅವರಿಗೆ ತಿಳಿಸದೇ ಪ್ಲಾನ್ ಮಾಡಿದ್ದ ದಿಗಂತ್ ಈ ಮೂಲಕ ಬಿಗ್ ಸರ್ಪ್ರೈಸ್ ನೀಡಿದರು.

    ಡಿಸೆಂಬರ್ 12 ರಂದು ಈ ಪ್ರೇಮಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ. ಬೆಂಗಾಳಿ ಹಾಗೂ ಕರ್ನಾಟಕ ಸಂಪ್ರದಾಯದಲ್ಲಿ ಮದುವೆ ನಡೆಸಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ.

    ಈಗಾಗಲೇ ಶ್ರೀಲಂಕಾದಲ್ಲಿ ನಟ ದಿಗಂತ್ ಬ್ಯಾಚುಲರ್ ಪಾರ್ಟಿ ಮಾಡಿ ಮುಗಿಸಿದ್ದು, ಸದ್ಯ ಐಂದ್ರಿತಾ ಗೋವಾದಲ್ಲಿ ಗರುಡ ಚಿತ್ರದ ಶೂಟಿಂಗ್‍ನಲ್ಲಿದ್ದಾರೆ. ಝೀರೋ ವೇಸ್ಟೇಜ್ ಕಾನ್ಸೆಪ್ಟ್ ನಲ್ಲಿ ಮದುವೆ ಕಾರ್ಯಕ್ರಮ ಮಾಡಲು ಐಂದ್ರಿತಾ ದಿಗಂತ್ ಪ್ಲ್ಯಾನ್ ಮಾಡಿದ್ದು, ಸರಳವಾಗಿ ಸಾಂಪ್ರದಾಯಿಕವಾಗಿ ಮದುವೆ ಆಗಲು ಜೋಡಿ ನಿರ್ಧರಿಸಿದೆ.

    ಶೂಟಿಂಗ್ ಸ್ಥಳದಲ್ಲಿ ಹಿರಿಯ ನಟ ರಂಗಾಯಣ ರಘು ಸೇರಿದಂತೆ ಇಡೀ ಚಿತ್ರತಂಡ ಐಂದ್ರಿತಾ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಡಿಸೆಂಬರ್ 12 ಮದುವೆ ಎಂದು ಐಂದ್ರಿತಾ ಅವರು ಘೋಷಣೆ ಮಾಡುತ್ತಿದಂತೆ ಚಿತ್ರತಂಡ ಎಲ್ಲಾ ಸದಸ್ಯರು ಸಂತಸಗೊಂಡರು. ಬಳಿಕ ಮಾತನಾಡಿದ ರಂಗಾಯಣ ರಘು ಅವರು, ಇಬ್ಬರು ಒಳ್ಳೆ ಜೋಡಿಯಾಗಿದ್ದು, ದೇವರು ಇವರ ಜೀವನದಲ್ಲಿ ಸಂತಸ ನೀಡಲಿ ಎಂದು ಹಾರೈಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv