Tag: actress

  • ʻಲಕ್ಷ್ಮಿ ನಿವಾಸʼದಿಂದ ಹೊರನಡೆದ ಅಂಜಲಿ – ಕಾರಣವೇನು?

    ʻಲಕ್ಷ್ಮಿ ನಿವಾಸʼದಿಂದ ಹೊರನಡೆದ ಅಂಜಲಿ – ಕಾರಣವೇನು?

    ಪ್ರತಿಷ್ಠಿತ ಧಾರಾವಾಹಿ ʻಲಕ್ಷ್ಮಿ ನಿವಾಸʼದಿಂದ ನಟಿ ಅಂಜಲಿ ಸುಧಾಕರ್ (Anjali Sudhakar) ಹೊರ ನಡೆದಿದ್ದಾರೆ. ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ರೇಣುಕಾ ಪಾತ್ರದ ಮೂಲಕ ಮನೆ ಮಾತಾಗಿದ್ದ ಅಂಜಲಿ ಸುಧಾಕರ್ ಇತ್ತೀಚೆಗೆ ತಮ್ಮ ಪಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದ್ರೆ ಈಗ ದಿಢೀರ್ ಅಂತಾ ಧಾರಾವಾಹಿಯಿಂದಲೇ ಹೊರ ಬಂದಿದ್ದಾರೆ. ಅಂಜಲಿ ಹೊರಬರೋದಕ್ಕೆ ಕಾರಣವೇನು ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿವೆ.

    ಅಂಜಲಿ ಸುಧಾಕರ್ ಸೀರಿಯಲ್‌ನಿಂದ (Lakshmi Nivasa Serial) ಹೊರ ಬಂದಿರುವ ಬಗ್ಗೆ ಅವರ ಸ್ನೇಹಿತೆ ವಿಜಯಲಕ್ಷ್ಮಿ ಸುಬ್ರಮಣಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಖುದ್ದಾಗಿ ಅಂಜಲಿಯವರನ್ನ ಸಂಪರ್ಕ ಮಾಡಿದಾಗ ಸ್ಪಷ್ಟನೆ ಕೊಟ್ಟಿದ್ದಾರೆ. ಧಾರಾವಾಹಿಯಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿತ್ತು. ಇತ್ತೀಚೆಗೆ ಪಾತ್ರದ ತಿರುವುಗಳಲ್ಲಿ ತುಂಬಾ ಬದಲಾವಣೆ ಮಾಡಿದ್ದಾರೆ. ನನ್ನ ಪಾತ್ರವನ್ನ ತುಂಬಾ ನೆಗೆಟಿವ್ ಆಗಿ ಪೋಷಣೆ ಮಾಡುತ್ತಿರೋದು ತುಂಬಾ ಬೇಸರ ಮೂಡಿಸಿದೆ. ಚಾನೆಲ್ ಅವರಿಂದ ಈ ಸಮಸ್ಯೆಯಾಗಿಲ್ಲ ಬದಲಾಗಿ ಧಾರಾವಾಹಿ ತಂಡದಿಂದ ಈ ಸಮಸ್ಯೆಯಾಗಿದೆ ಎಂದಿದ್ದಾರೆ ನಟಿ ಅಂಜಲಿ ಸುಧಾಕರ್.

    ಇನ್ನು ಈ ಲಕ್ಷ್ಮಿ ನಿವಾಸ ಧಾರಾವಾಹಿಯಿಂದ ಆಚೆ ಬಂದಿರೋದು ಪೇಮೆಂಟ್ ವಿಚಾರಕ್ಕೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೂ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ. ನನಗೆ ಪೇಮೆಂಟ್ ವಿಚಾರದಲ್ಲಿ ಯಾವುದೇ ತೊಂದರೆಯಾಗಿಲ್ಲ, ಕೆಲವು ಬಾರಿ ಡಿಲೇ ಆಗಿದೆ, ಹೊರತು ವೇತನದ ಸಮಸ್ಯೆಯಾಗಿಲ್ಲ ಎಂದಿದ್ದಾರೆ.

    ಈ ಮುಂಚೆ ನಟಿ ಶ್ವೇತಾ ಕೂಡಾ ಈ ಧಾರಾವಾಹಿಯಿಂದ ಹೊರ ನಡೆದಿದ್ದರು. ಇದರ ಬೆನ್ನಲ್ಲೇ ಇದೀನ ನಟಿ ಅಂಜಲಿ ಸುಧಾಕರ್ ರೇಣುಕಾ ಪಾತ್ರವನ್ನ ತೊರೆದು ಆಚೆ ಬಂದಿದ್ದಾರೆ.

    ನಟಿ ಅಂಜಲಿ ಸುಧಾಕರ್ ಬೇರೆ ಬೇರೆ ಧಾರಾವಾಹಿಯಲ್ಲಿ ಪಾಸಿಟಿವ್ ಆಗಿರುವ ಪಾತ್ರದ ಮೂಲಕ ಜನಮನ್ನಣೆ ಪಡೆಯುತ್ತಿದ್ದಾರೆ. ಆದರೆ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಮಾತ್ರ ತುಂಬಾ ನೆಗೆಟಿವ್ ಆಗಿರುವ ಪಾತ್ರದ ಪೋಷಣೆ ನಿರ್ವಹಿಸುವುದು. ಆ ಮೂಲಕ ಜನರು ಸ್ವೀಕರಿಸುವ ರೀತಿ ಕಷ್ಟವಾಗುತ್ತಿರುವ ಕಾರಣದಿಂದ ಈ ಧಾರಾವಾಹಿಯಿಂದ ಆಚೆ ನಡೆದಿದ್ದಾರಂತೆ ನಟಿ ಅಂಜಲಿ ಸುಧಾಕರ್.

  • ಹಿಂದೆಂದೂ ಕಂಡು ಕೇಳರಿಯದ ರುಕ್ಮಿಣಿ ವಸಂತ್ ಬೋಲ್ಡ್ ಫೋಟೋಶೂಟ್

    ಹಿಂದೆಂದೂ ಕಂಡು ಕೇಳರಿಯದ ರುಕ್ಮಿಣಿ ವಸಂತ್ ಬೋಲ್ಡ್ ಫೋಟೋಶೂಟ್

    ಮೊನ್ನೆಯಷ್ಟೇ `ಸಪ್ತಸಾಗರದಾಚೆ ಎಲ್ಲೋ’ ಚಿತ್ರ ತಮಗೆ ತಂದುಕೊಟ್ಟ ಯಶಸ್ಸನ್ನ ನೆನೆದು ಸಾರ್ಥಕ ಭಾವದಿಂದ ಪತ್ರ ಬರೆದಿದ್ದರು ರುಕ್ಮಿಣಿ ವಸಂತ್ (Rukmini Vasanth). ಮೈತುಂಬಾ ಸೀರೆಯುಟ್ಟು ಕಾಣಿಸ್ಕೊಳ್ಳುವುದೇ ರುಕ್ಮಿಣಿ ಶೈಲಿಯಾಗಿತ್ತು. ಇದುವರೆಗೂ ರುಕ್ಮಿಣಿ ಪಕ್ಕದ್ಮನೆ ಹುಡುಗಿ ಲುಕ್‌ನಿಂದಲೇ ಮನಸೊರೆಗೊಂಡವರು. ಆದರೆ ಇದೇ ಮೊದಲ ಬಾರಿ ಬೋಲ್ಡ್ ಫೋಟೋಶೂಟ್ ಮಾಡಿಸಿದ್ದಾರೆ ರುಕ್ಮಿಣಿ. ಕೆಂಪು ಬಣ್ಣದ ಗೌನ್ ಧರಿಸಿರುವ ರುಕ್ಮಿಣಿ ಹಿಂದೆಂದೂ ಕಂಡು ಕೇಳರಿಯದ ಬೋಲ್ಡ್ ಅವತಾರದಲ್ಲಿ ಪೋಸ್ ಕೊಟ್ಟಿದ್ದಾರೆ.

    ಸಿನಿಮಾ ಪಾತ್ರ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಅಪ್‌ಲೋಡ್ ಮಾಡುವಲ್ಲೂ ರುಕ್ಮಿಣಿ ಇದುವರೆಗೆ ಬೋಲ್ಡ್ ಲುಕ್ ಲೈನ್ ದಾಟಿರಲಿಲ್ಲ. ಆದರೆ ಪಾತ್ರಕ್ಕೆ ತಕ್ಕಂತೆ ಬದಲಾವಣೆ, ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುವಿಕೆ ಅನಿವಾರ್ಯ ಅನ್ನೋದು ರುಕ್ಮಿಣಿ ಗಮನಕ್ಕೆ ಈಗ ಬಂದಿರಬಹುದು. ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿರುವ ಹೊಸ ಫೋಟೋಶೂಟ್‌ನಲ್ಲಿ ರುಕ್ಮಿಣಿ ಎದೆಸೀಳು ಕಾಣುವಂತೆ ಉಡುಗೆ ಧರಿಸಿದ್ದಾರೆ.

    ದಕ್ಷಿಣ ಭಾರತದಲ್ಲಿ ಇದೀಗ ರುಕ್ಮಿಣಿ ವಸಂತ್ ಹೆಚ್ಚು ಜನಪ್ರಿಯರಾಗಿದ್ದು, ಕನ್ನಡದ ಜೊತೆ ಜೊತೆಗೆ ಪರಭಾಷೆಯ ಇಂಡಸ್ಟ್ರಿಯಲ್ಲೂ ಹೆಸರು ಮಾಡುತ್ತಿದ್ದಾರೆ. ಕಾಂತಾರ-1 , ಡ್ರ್ಯಾಗನ್‌ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದ ಬಳಿಕವಂತೂ ರುಕ್ಮಿಣಿ ಖ್ಯಾತಿ ಮೇಲ್ಪಂಕ್ತಿಗೆ ಬಂದಿದೆ. ಬೇಡಿಕೆ, ಅವಕಾಶಗಳು ಹೆಚ್ಚಾದಂತೆ ಸೋಶಿಯಲ್ ಮೀಡಿಯಾದಲ್ಲೂ ಹೆಚ್ಚು ಆಕ್ವೀವ್ ಆಗತೊಡಗಿದ್ದಾರೆ ರುಕ್ಮಿಣಿ. ಒಟ್ನಲ್ಲಿ ರುಕ್ಮಿಣಿ ಫ್ಯಾಶನ್ ಶೈಲಿ ಬದಲಾಗುತ್ತಿದೆ.

  • ಹಿರಿಯ ಜೀವವನ್ನು ಕಳ್ಕೊಂಡಿದ್ದೇವೆ, ಕನ್ನಡ ಚಿತ್ರರಂಗ ಹಿರಿಯರಿಲ್ಲದ ಮನೆಯಾಗುತ್ತಿದೆ – ಭಾವುಕರಾದ ಉಮಾಶ್ರೀ

    ಹಿರಿಯ ಜೀವವನ್ನು ಕಳ್ಕೊಂಡಿದ್ದೇವೆ, ಕನ್ನಡ ಚಿತ್ರರಂಗ ಹಿರಿಯರಿಲ್ಲದ ಮನೆಯಾಗುತ್ತಿದೆ – ಭಾವುಕರಾದ ಉಮಾಶ್ರೀ

    ರೋಜಮ್ಮ ನಮ್ಮ ಜೊತೆ ಇರಬೇಕಿತ್ತು ಹಿರಿಯ ಜೀವವನ್ನು ಕಳ್ಕೊಂಡಿದ್ದೇವೆ, ಕನ್ನಡ ಚಿತ್ರರಂಗ ಹಿರಿಯರಿಲ್ಲದ ಮನೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯೆ, ಹಿರಿಯ ನಟಿ ಉಮಾಶ್ರೀ (Umashree) ಭಾವುಕರಾಗಿದ್ದಾರೆ.

    ಬಿ.ಸರೋಜಾದೇವಿಯವರ ಅಂತಿಮ ದರ್ಶನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಭಾರತ ದೇಶದಲ್ಲಿ ಅತ್ಯಂತ ಪ್ರಬುದ್ಧವಾದಂತಹ, ದಕ್ಷಿಣದ ಧ್ರುವ ತಾರೆಯೆಂದೇ ಪ್ರಸಿದ್ಧಿಯಾಗಿದ್ದ ಮೇರು ನಟಿ ಇಂದು ನಮ್ಮ ಜೊತೆಗಿಲ್ಲ ಎನ್ನುವುದು ತುಂಬಾ ದುಃಖದ ಸಂಗತಿ. ಅವರು ವೈಯಕ್ತಿಕ ಜೀವನ, ವೃತ್ತಿ ಜೀವನ, ಅವರು ನಡೆದು ಬಂದ ರೀತಿ ಮುಂದಿನ ಎಲ್ಲ ಪೀಳಿಗೆಗೂ ಮಾದರಿ. ಹೇಗೆ ಶಿಸ್ತುಬದ್ದವಾಗಿ ಇರಬೇಕು ಎನ್ನುವುದು ಸರೋಜಮ್ಮನನ್ನು ನೋಡಿ ಕಲಿಬೇಕು ಎಂದರು.ಇದನ್ನೂ ಓದಿ: ಕೋಲಾರ | KSRTC ನೌಕರ ಹೃದಯಾಘಾತದಿಂದ ಸಾವು

    ಬಣ್ಣದ ಜಗತ್ತಿಗೆ ಕಾಲಿಟ್ಟು ಸುಮಾರು 70 ವರ್ಷಗಳಾಗಿದೆ. 2019ರ ತೆರೆಕಂಡ ನಟ ಸಾರ್ವಭೌಮ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಅವರ ರೀತಿಯ ಸಾಧನೆ ಯಾರಿಗೂ ಮಾಡೋಕೆ ಆಗಲ್ಲ. ಹಿರಿಯ ಜೀವ, ನಮ್ಮ ಜೊತೆ ಇರಬೇಕಿತ್ತು. ಆದರೆ ಕಳ್ಕೊಂಡಿದ್ದೇವೆ. ಕನ್ನಡ ಚಿತ್ರರಂಗ ಹಿರಿಯರಿಲ್ಲದ ಮನೆಯಾಗುತ್ತಿದೆ. ಭಾರತ ದೇಶದ ಪ್ರತಿಯೊಂದು ಭಾಷೆಯವರು ಗೌರವದಿಂದ ಕಾಣುತ್ತಿದ್ದ ಖ್ಯಾತ ಕಲಾವಿದೆ ಸರೋಜಾದೇವಿಯವರು.

    ನಮ್ಮ ಕನ್ನಡ ಚಿತ್ರರಂಗದಲ್ಲಿ ಪದ್ಮಭೂಷಣ, ಪದ್ಮವಿಭೂಷಣ, ಬೇರೆ ಬೇರೆ ರಾಜ್ಯಗಳ ಪ್ರಶಸ್ತಿ, ಡಾಕ್ಟರೇಟ್ ಹಾಗೂ ಇತರೇ ಸಾಧನೆಗಳನ್ನು ಮಾಡಿದವರಲ್ಲಿ ನನಗೆ ಗೊತ್ತಿರುವವರು ಇವರೇ ಮೊದಲಿಗರು ಅನಿಸುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಸ್ಥರಿಗೆ, ಎಲ್ಲರಿಗೂ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪಾರ್ಥಿಸುತ್ತೇನೆ ಎಂದು ಹೇಳಿದರು.ಇದನ್ನೂ ಓದಿ: ಮುಂಬೈ ವಿಮಾನ ನಿಲ್ದಾಣದಲ್ಲಿ 62.6 ಕೋಟಿ ಮೌಲ್ಯದ ಕೊಕೇನ್ ವಶಕ್ಕೆ – ಭಾರತೀಯ ಮಹಿಳೆ ಅರೆಸ್ಟ್

  • ಪುನೀತ್ ತನ್ನ ಮಗನಾಗಿದ್ದರೆ ಚೆನ್ನಾಗಿತ್ತು ಎಂದುಕೊಂಡಿದ್ದರಂತೆ ಸರೋಜಾದೇವಿ

    ಪುನೀತ್ ತನ್ನ ಮಗನಾಗಿದ್ದರೆ ಚೆನ್ನಾಗಿತ್ತು ಎಂದುಕೊಂಡಿದ್ದರಂತೆ ಸರೋಜಾದೇವಿ

    `ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ’ ಈ ಹಾಡನ್ನು ಬಾಲನಟನಾಗಿದ್ದ ಪುನೀತ್ ರಾಜಕುಮಾರ್ ಹಾಡಿದ್ದರು. ಆಗಲೇ ಪುನೀತ್ ತನ್ನ ಮಗನಾಗಿದ್ದರೆ ಚೆನ್ನಾಗಿತ್ತು ಎಂದುಕೊಂಡಿದ್ದರಂತೆ ಬಿ.ಸರೋಜಾದೇವಿಯವರು.

    ಸರೋಜಾದೇವಿಯವರು ಅಮ್ಮನಾಗಿ, ಪುನೀತ್ ಮಗನಾಗಿ ನಟಿಸಿದ `ಯಾರಿವನು’ ಸಿನಿಮಾದ `ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ’ ಹಾಡು ಜನಮನದಲ್ಲಿ ಇಂದಿಗೂ ಹಸಿರಾಗಿದೆ. ಸಿನಿಮಾದಲ್ಲಿ ಬಾಲನಟನಾಗಿದ್ದ ಪುನೀತ್ ಸ್ವತಃ ಈ ಹಾಡನ್ನು ಹಾಡಿದ್ದರು. ಆಗಲೇ ಸರೋಜಾದೇವಿಯವರು ಪುನೀತ್ ತನ್ನ ಮಗನಾಗಿದ್ದರೆ ಚೆನ್ನಾಗಿತ್ತು ಅಂದುಕೊಂಡಿದ್ದರಂತೆ.ಇದನ್ನೂ ಓದಿ: 65 ಕೋಟಿ ವಹಿವಾಟು – ವೀಸಾ ಹಿಂದಿಕ್ಕಿ ವಿಶ್ವದಲ್ಲೇ ಈಗ UPI ನಂಬರ್ 1

    ಯಾವಾಗಲೂ ಪುನೀತ್ ರಾಜ್‌ಕುಮಾರ್ ಕಂಡರೆ ಮಗನಂತಹ ಭಾವ. ಅಲ್ಲದೇ ಪುನೀತ್ ನಟನೆಯ `ನಟ ಸಾರ್ವಭೌಮ’ ಚಿತ್ರದಲ್ಲಿ ಸರೋಜಾದೇವಿಯವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದು ಅವರ ಕೊನೆಯ ಸಿನಿಮಾ ಆಗಿತ್ತು.

    1938ರ ಜ.7ರಂದು ಜನಿಸಿದ್ದ ಸರೋಜಾದೇವಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಸೋಮವಾರ (ಜು.14) ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ನಿಧನರಾದರು.

    ಸುಮಾರು 6 ದಶಕಗಳ ಕಾಲ ಚಿತ್ರರಂಗದ ಸೇವೆ ಮಾಡಿರುವ ಇವರು 5 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ 17ನೇ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗದ ಭೀಷ್ಮ ಹೊನ್ನಪ್ಪ ಭಾಗವತರ್ ಅವರ `ಮಹಾಕವಿ ಕಾಳಿದಾಸ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.ಇದನ್ನೂ ಓದಿ: ಬಳ್ಳಾರಿ | ಶಾಲೆಗೆ ತೆರಳುತ್ತಿದ್ದ ಬಾಲಕಿ ಹಠಾತ್ ಕುಸಿದು ಬಿದ್ದು ಸಾವು

  • ಬಿ.ಸರೋಜಾದೇವಿ ನಿಧನಕ್ಕೆ ನಿಖಿಲ್ ಕುಮಾರಸ್ವಾಮಿ, ಆರ್.ಅಶೋಕ್ ಸಂತಾಪ

    ಬಿ.ಸರೋಜಾದೇವಿ ನಿಧನಕ್ಕೆ ನಿಖಿಲ್ ಕುಮಾರಸ್ವಾಮಿ, ಆರ್.ಅಶೋಕ್ ಸಂತಾಪ

    ನ್ನಡ ಚಿತ್ರರಂಗದ ಹಿರಿಯ ನಟಿ ಬಿ.ಸರೋಜಾದೇವಿ ಅವರ ನಿಧನಕ್ಕೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy), ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಸಂತಾಪ ಸೂಚಿಸಿದರು.

    ಈ ಬಗ್ಗೆ ಶೋಕ ಸಂದೇಶ ಬಿಡುಗಡೆ ಮಾಡಿರುವ ಅವರು, ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಬಿ.ಸರೋಜಾದೇವಿ (B.Saroja Devi) ಅವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಆರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು ಎಂದು ಹೇಳಿದರು.ಇದನ್ನೂ ಓದಿ: ಕೋವಿಡ್ ವೇಳೆ 2 ಲಕ್ಷ ಕೊಟ್ಟು ಯಾರಿಗಾದ್ರೂ ಸಹಾಯ ಮಾಡು ಅಂತ ಹೇಳಿದ್ರು – ಸಾಧು ಕೋಕಿಲಾ

    ಸರೋಜಾದೇವಿ ಅವರ ಸಾವಿನಿಂದ ಇಡೀ ಕಲಾಜಗತ್ತು ಬಡವಾಗಿದೆ. ಸರೋಜಾದೇವಿಯವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬವರ್ಗ ಹಾಗೂ ಅಭಿಮಾನಿ ಬಳಗಕ್ಕೆ ದು:ಖವನ್ನು ಭರಿಸುವ ಶಕ್ತಿ ತುಂಬಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

    ಮಾಧ್ಯಮದವರೊಂದಿಗೆ ಮಾತನಾಡಿದ ಆರ್.ಅಶೋಕ್, ಕನ್ನಡದ ಖ್ಯಾತ ಚಿತ್ರ ನಟಿಯಾಗಿ ಹಲವು ಭಾಷೆಗಳಲ್ಲಿ ನಟನೆ ಮಾಡಿದ್ದರು. ಡಾ ರಾಜಕುಮಾರ್, ಎಂಜಿಆರ್, ಎನ್‌ಟಿಆರ್ ಜೊತೆ ನಟಿಯಾಗಿ ನಟಿಸಿ, ಬಹಳ ಹೆಸರು ಮಾಡಿದ್ದರು. ಹಲವು ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಅವರಿಗೆ ಜೀವಮಾನದ ಪ್ರಶಸ್ತಿ ನೀಡುವ ವೇಳೆ ನಾನಿದ್ದೆ. ಹತ್ತಾರು ಬಾರಿ ಭೇಟಿಯಾಗಿದ್ದೇನೆ. ನನಗೆ ದೂರದ ಸಂಬಂಧಿಗಳಾದ ಅವರು ಮಗನಂತೆ ಮಾತನಾಡಿಸುತ್ತಿದ್ದರು. ಕನ್ನಡ ಚಿತ್ರರಂಗದಲ್ಲಿ ಮರೆಯಾಲಾಗದ ಪಾತ್ರ ಮಾಡಿದ್ದರು. ಪರಭಾಷಾ ಕಲಾವಿದರಿಗೆ ಹೆಚ್ಚು ಅವಕಾಶ ಇದ್ದಾಗಲೇ ಬೇರೆ ಭಾಷೆಗಳಲ್ಲೂ ಹಿರಿಮೆ ಸಾಧಿಸಿದ್ದರು ಎಂದು ಹೇಳಿದರು.

    ಇದೀಗ ಅವರು ನಮ್ಮ ಮಧ್ಯೆ ಇಲ್ಲ ಎನ್ನುವ ನೋವಿನ ಜೊತೆಗೆ ಇಂತಹ ನಟಿಯನ್ನು ಕಳೆದುಕೊಂಡಿರುವ ದುಃಖ ಹೆಚ್ಚಿದೆ. ಅವರ ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದರು.ಇದನ್ನೂ ಓದಿ: ಕಲಬುರಗಿ ಚಿನ್ನದಂಗಡಿ ದರೋಡೆ ಕೇಸ್; ಖದೀಮರ ಸುಳಿವು ಪತ್ತೆ – ಇಬ್ಬರು ಅಂದರ್

  • ಕೋವಿಡ್ ವೇಳೆ 2 ಲಕ್ಷ ಕೊಟ್ಟು ಯಾರಿಗಾದ್ರೂ ಸಹಾಯ ಮಾಡು ಅಂತ ಹೇಳಿದ್ರು – ಸಾಧು ಕೋಕಿಲಾ

    ಕೋವಿಡ್ ವೇಳೆ 2 ಲಕ್ಷ ಕೊಟ್ಟು ಯಾರಿಗಾದ್ರೂ ಸಹಾಯ ಮಾಡು ಅಂತ ಹೇಳಿದ್ರು – ಸಾಧು ಕೋಕಿಲಾ

    -ಸೂಪರ್ ಸ್ಟಾರ್‌ಗಳು ಇವರ ಡೇಟ್‌ಗಾಗಿ ಕಾಯುತ್ತಿದ್ದರು
    – ಆ ದೇವರು ಒಳ್ಳೆಯ ಅಂತ್ಯ ಕೊಟ್ಟಿದ್ದಾನೆ ಎಂದ ನಟ

    ಕೋವಿಡ್ ಸಮಯದಲ್ಲಿ 2 ಲಕ್ಷ ರೂ. ಕೊಟ್ಟು ಯಾರಿಗಾದರೂ ಸಹಾಯ ಮಾಡು, ಕಲಾವಿದರಿಗೆ ಒಳ್ಳೆಯದಾಗಬೇಕು ಅಂದಿದ್ದರು, ಆದ್ರೆ ಈವರೆಗೂ ಆ ಹಣದ ಬಗ್ಗೆ ಕೇಳಿರಲಿಲ್ಲ ಎಂದು ಸಂಗೀತ ನಿರ್ದೇಶಕ, ನಟ ಸಾಧು ಕೋಕಿಲಾ (Sadhu Kokila) ಹೇಳಿದರು.

    ನಟಿ ಬಿ.ಸರೋಜಾದೇವಿಯವರ (B.Saroja Devi) ಸಿನಿ ಪಯಣ ಹಾಗೂ ಸಹಾಯ ಮನೋಭಾವದ ಕುರಿತು `ಪಬ್ಲಿಕ್ ಟಿವಿ’ ಜೊತೆ ಮಾತನಾಡಿ, ಕೋವಿಡ್ ಸಮಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ನನಗೆ ಕರೆ ಮಾಡಿ 2 ಲಕ್ಷ ರೂ. ಕೊಟ್ಟು ಯಾರಿಗಾದರೂ ಸಹಾಯ ಮಾಡು, ಕಲಾವಿದರಿಗೆ ಒಳ್ಳೆಯದಾಗಬೇಕು ಎಂದು ಹೇಳಿದ್ದರು. ಬಳಿಕ ನಾನು ಅದನ್ನು ಉಪೇಂದ್ರ ಅವರ ಟ್ರಸ್ಟ್ಗೆ ಕಳುಹಿಸಿದೆ. ಆದರೆ ಈವರೆಗೂ ಸರೋಜಾದೇವಿಯವರು ನನಗೆ ಆ ಹಣವನ್ನು ಯಾರಿಗೆ ಕೊಟ್ಟೆ ಎಂದು ಕೇಳಲಿಲ್ಲ ಎಂದರು.ಇದನ್ನೂ ಓದಿ: ಸರೋಜಾದೇವಿಯವ್ರು ತಲೆಮಾರುಗಳಲ್ಲಿ ಅಳಿಸಲಾಗದ ಗುರುತು ಬಿಟ್ಟು ಹೋಗಿದ್ದಾರೆ: ಮೋದಿ ಸಂತಾಪ

    ಸರೋಜಾದೇವಿ ಅಂತಹವರು ಸಿಗೋದು ತುಂಬಾ ವಿರಳ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದವರು, ನಾಲ್ಕು ಭಾಷೆಗಳಲ್ಲಿ ಬೇರೆ ಬೇರೆ ನಾಯಕ ನಟರೊಂದಿಗೆ ನಟಿಸಿದವರು, ದೊಡ್ಡ ಮಟ್ಟದ ಪ್ರಶಸ್ತಿಗಳನ್ನು ಪಡೆದವರು. ಆದರೂ ಕೂಡ ಸಾಮಾನ್ಯರಂತೆ ಇರುವವರು ತುಂಬಾ ಕಡಿಮೆ. ನಮಗೆ ಸ್ವಲ್ಪ ಏನಾದರೂ ಸಿಕ್ಕರೆ ಅಹಂ ಬರುತ್ತದೆ. ಆದರೆ ಸರೋಜಾದೇವಿಯವರು ಯಾವತ್ತೂ ಹಾಗಿರಲಿಲ್ಲ. ಇನ್ನೂ ಸೂಪರ್ ಸ್ಟಾರ್‌ಗಳು ಇವರ ಜೊತೆ ನಟಿಸಬೇಕೆಂದು ಕಾಯುತ್ತಿದ್ದರು. ಸರೋಜಾದೇವಿಯವರು ನಟಿಸ್ತಾರೆ ಎಂದರೆ ಎಂಜಿಆರ್, ಶಿವಾಜಿ ಗಣೇಶನ್, ಎನ್‌ಟಿಆರ್ ಎಲ್ಲರೂ ಮೊದಲು ಮೇಡಂ ಬಳಿ ಡೇಟ್ಸ್ ತಗೊಳ್ಳಿ, ಬಳಿಕ ನಾವು ಆ್ಯಕ್ಟ್ ಮಾಡ್ತೀವಿ ಎಂದು ಹೇಳುತ್ತಿದ್ದರು. ಅಂತಹ ಗತ್ತನ್ನು ಇಟ್ಟುಕೊಂಡು ಜೀವನ ನಡೆಸಿದವರು ಎಂದು ತಿಳಿಸಿದರು.

    ಇನ್ನೂ ಶಿಸ್ತಿನ ವಿಷಯದಲ್ಲಿ ಕಡೆಯವರೆಗೂ ನಟಿ ಎಂಬ ಗ್ಲ್ಯಾಮರ್‌ನ್ನು ಬಿಟ್ಟು ಕೊಡಲೇ ಇಲ್ಲ. ಮೃದು ಹೃದಯದವರು, ಸಾಕಷ್ಟು ಜನರಿಗೆ ಸಹಾಯ ಮಾಡಿದರು. ಯಾರಿಗೂ ತೊಂದರೆ ಕೊಡದೇ ದೇವರ ಪಾದ ಸೇರಿದ್ದಾರೆ, ದೇವರು ಕೂಡ ಅವರಿಗೆ ಒಳ್ಳೆಯ ಅಂತ್ಯವನ್ನು ಕೊಟ್ಟಿದ್ದಾನೆ ಎಂದುಕೊಳ್ಳುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದರು.ಇದನ್ನೂ ಓದಿ: ಡಿವೋರ್ಸ್‌ ಕೇಸ್‌| ಸಂಗಾತಿ ರೆಕಾರ್ಡ್ ಮಾಡಿದ ಕರೆಯನ್ನು ಸಾಕ್ಷಿಯಾಗಿ ಪರಿಗಣಿಸಬಹುದು – ಸುಪ್ರೀಂ

     

  • ಸರೋಜಾದೇವಿಯವ್ರು ತಲೆಮಾರುಗಳಲ್ಲಿ ಅಳಿಸಲಾಗದ ಗುರುತು ಬಿಟ್ಟು ಹೋಗಿದ್ದಾರೆ: ಮೋದಿ ಸಂತಾಪ

    ಸರೋಜಾದೇವಿಯವ್ರು ತಲೆಮಾರುಗಳಲ್ಲಿ ಅಳಿಸಲಾಗದ ಗುರುತು ಬಿಟ್ಟು ಹೋಗಿದ್ದಾರೆ: ಮೋದಿ ಸಂತಾಪ

    ಖ್ಯಾತ ನಟಿ ಬಿ.ಸರೋಜಾದೇವಿಯವರ (B.Saroja Devi) ವೈವಿಧ್ಯಮಯ ಅಭಿನಯವೂ ತಲೆಮಾರುಗಳಲ್ಲಿ ಅಳಿಸಲಾಗದಂತಹ ಗುರುತನ್ನು ಬಿಟ್ಟುಹೋಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಸಂತಾಪ ಸೂಚಿಸಿದ್ದಾರೆ.ಇದನ್ನೂ ಓದಿ:ಸಿನಿಮಾದ ಸುವರ್ಣ ಯುಗವೊಂದು ಅಂತ್ಯವಾಗಿದೆ – ಸರೋಜಾದೇವಿ ನಿಧನಕ್ಕೆ ಕಂಬನಿ ಮಿಡಿದ ರಜನಿಕಾಂತ್‌, ಖುಷ್ಬು 

    ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಖ್ಯಾತ ನಟಿ, ಅಭಿನಯ ಸರಸ್ವತಿ ಬಿ.ಸರೋಜಾದೇವಿ ಅವರ ನಿಧನದ ಸುದ್ದಿ ಕೇಳಿ ತುಂಬಾ ನೋವಾಗಿದೆ. ಭಾರತೀಯ ಸಿನಿಮಾ ಹಾಗೂ ಸಂಸ್ಕೃತಿಯ ಆದರ್ಶ ಮೂರ್ತಿ ಅವರು, ತಮ್ಮ ವೈವಿಧ್ಯಮಯ ನಟನೆಯಿಂದಲೇ ತಲೆಮಾರುಗಳಲ್ಲಿ ಅಳಿಸಲಾಗದ ಗುರುತನ್ನು ಬಿಟ್ಟು ಹೋಗಿದ್ದಾರೆ.

    ಬೇರೆ ಬೇರೆ ಭಾಷೆಗಳಲ್ಲಿ ತಮ್ಮ ನಟನಾ ಶೈಲಿಯ ಮೂಲಕ ಬಹುಮುಖ ಪ್ರತಿಭೆಯನ್ನು ಎತ್ತಿ ತೋರಿಸಿದ್ದಾರೆ. ದೇವರು ಅವರ ಕುಟುಂಬ ವರ್ಗಕ್ಕೆ ಹಾಗೂ ಅಭಿಮಾನಿಗಳಿಗೆ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.ಇದನ್ನೂ ಓದಿ: ಸಿಗಂದೂರು ಸೇತುವೆ ಲೋಕಾರ್ಪಣೆಗೊಳಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

    ಕಂಬನಿ ಮಿಡಿದ ತಲೈವಾ
    ತಮಿಳಿನ ಖ್ಯಾತ ನಟ ತಲೈವಾ ರಜನಿಕಾಂತ್‌ ಸಹ ಸಂತಾಪ ಸೂಚಿಸಿ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ʻಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದ ಮಹಾನ್ ನಟಿ ಸರೋಜಾ ದೇವಿ ಈಗ ನಮ್ಮೊಂದಿಗಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಒಂದು ಸುವರ್ಣ ಸಿನಿಮಾ ಯುಗ ಅಂತ್ಯಗೊಂಡಿದೆʼ ಅಂತ ಭಾವುಕ ಸಂದೇಶವೊಂದನ್ನ ಫೋಟೋ ಜೊತೆಗೆ ಹಂಚಿಕೊಂಡಿದ್ದಾರೆ.

    ಸರೋಜಾದೇವಿ ಅಮ್ಮ ಎಲ್ಲಾ ಕಾಲಕ್ಕೂ ಶ್ರೇಷ್ಠ
    ಬಹುಭಾಷಾ ನಟಿ ಖುಷ್ಬು ಸುಂದರ್‌ ಕೂಡ ಸರೋಜಾ ದೇವಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ʻಸರೋಜಾದೇವಿ ಅಮ್ಮ ಎಲ್ಲಾ ಕಾಲದಲ್ಲೂ ಶ್ರೇಷ್ಠರು. ದಕ್ಷಿಣದಲ್ಲಿ ಅವರಷ್ಟು ಹೆಸರು, ಖ್ಯಾತಿ ಪಡೆದ ಮಹಿಳಾ ನಟಿ ಇನ್ನೊಬ್ಬರಿಲ್ಲ. ಅವರು ನನ್ನ ಪ್ರೀತಿಯ ಮತ್ತು ಆರಾಧ್ಯ ದೈವವೂ ಕೂಡ ಹೌದು. ಅವರನ್ನು ಭೇಟಿಯಾಗದೇ ನನ್ನ ಬೆಂಗಳೂರಿಗೆ ಪ್ರವಾಸ ಅಪೂರ್ಣವಾಗಿತ್ತು. ಚೆನ್ನೈಗೆ ಬಂದಾಗೆಲ್ಲ ಅವರು ನನಗೆ ಕರೆ ಮಾಡಿ ಮಾತನಾಡುತ್ತಿದ್ದರು. ಈಗ ಅವರನ್ನ ತುಂಬಾ ಮಿಸ್‌ ಮಾಡಿಕೊಳ್ತೀನಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಾವುಕ ಸಂದೇಶ ಹಂಚಿಕೊಂಡಿದ್ದಾರೆ.

  • ಕೆಲಸಕ್ಕೆ ಬಾರದವರೆಲ್ಲ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ನಟಿಯೆಂದು ಹೇಳ್ಕೊತಾರೆ, ಇವ್ರು ಇದನ್ನೆಲ್ಲ ಮಾಡ್ಲೇ ಇಲ್ಲ – ರಾಜೇಂದ್ರ ಸಿಂಗ್ ಬಾಬು

    ಕೆಲಸಕ್ಕೆ ಬಾರದವರೆಲ್ಲ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ನಟಿಯೆಂದು ಹೇಳ್ಕೊತಾರೆ, ಇವ್ರು ಇದನ್ನೆಲ್ಲ ಮಾಡ್ಲೇ ಇಲ್ಲ – ರಾಜೇಂದ್ರ ಸಿಂಗ್ ಬಾಬು

    ಬೆಂಗಳೂರು: ಸುಮ್ಮನೇ ಕೆಲಸಕ್ಕೆ ಬಾರದವರೆಲ್ಲ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ನಟಿ ಎಂದು ಹೇಳಿಕೊಂಡು ತಿರುಗಾಡುತ್ತಾರೆ. ಆದರೆ ನಟಿ ಸರೋಜಾದೇವಿಯವರು (B.Sarojadevi) ಇದನ್ನೆಲ್ಲ ಮಾಡಲೇ ಇಲ್ಲ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು (Rajendra Singh Babu) ಅವರು ಹೇಳಿದರು.

    ನಟಿ ಬಿ.ಸರೋಜಾದೇವಿ ಅವರ ಸಿನಿ ಪಯಣದ ಬಗ್ಗೆ `ಪಬ್ಲಿಕ್ ಟಿಬಿ’ (PUBLiC TV) ಜೊತೆ ಮಾತನಾಡಿದ ಅವರು, ಸುಮಾರು 1954ರಲ್ಲಿ ನಮ್ಮ ತಂದೆಯವರ `ಆಷಾಡಭೂತಿ’ (AshadaBhooti) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಅವಾಗಿನಿಂದಲೂ ನಮ್ಮ ಕುಟುಂಬಕ್ಕೆ ತೀರ ಹತ್ತಿರವಾದವರು. ಪ್ರತಿ ಬಾರಿ ನಮ್ಮ ಮನೆಗೆ ಬಂದಾಗ ನಮ್ಮನ್ನೆಲ್ಲಾ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅದಾದ ನಂತರ ನಟನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಬಹು ದೊಡ್ಡ ಸ್ಟಾರ್ ಆದರು. ಆಗಲೂ ಅವರು ನಮ್ಮ ಮನೆಗೆ ಬಂದಾಗ ಮೊದಲು ಹೇಗೆ ನೋಡಿಕೊಳ್ಳುತ್ತಿದ್ದರೂ ಅದೇ ರೀತಿ ನಮ್ಮನ್ನೆಲ್ಲಾ ಕಾಣುತ್ತಿದ್ದರು. ಇನ್ನೂ ನನಗೆ ತುಂಬಾ ಹತ್ತಿರದವರು, ಯಾಕಂದ್ರೆ ಪ್ರತಿ ಬಾರಿ ನಾನು ಮದ್ರಾಸ್‌ಗೆ ಹೋದಾಗ ಚೆನ್ನಾಗಿ ಓದಬೇಕು ಅಂತ ಹೇಳಿ, ಒಂದು ಗಡಿಯಾರ ಉಡುಗೊರೆಯಾಗಿ ನೀಡಿದ್ದರು ಎಂದರು.ಇದನ್ನೂ ಓದಿ: ಪೂಜೆ ಮಾಡಿ ಟಿವಿ ಆನ್‌ ಮಾಡಿದ್ದರು – ಸರೋಜಾದೇವಿಯವರ ಕೊನೆ ಕ್ಷಣ ಹೀಗಿತ್ತು

    ನಮ್ಮ ತಾಯಿಯನ್ನು ಕಂಡರೆ ಅವರಿಗೆ ತುಂಬಾ ಪ್ರೀತಿ, ಅದಲ್ಲದೇ ನನ್ನ ಸ್ನೇಹಿತನೊಬ್ಬನಿಗೆ ತುಂಬಾ ಸಹಾಯ ಮಾಡಿದ್ದರು. ಬಹಳ ಶಿಸ್ತಿನ ನಟಿ, ಅವರ ರೀತಿ ಈಗಿನ ಯಾವ ನಟಿಯರೂ ಇಲ್ಲ. ಸುಮ್ಮನೇ ಕೆಲಸಕ್ಕೆ ಬಾರದವರೆಲ್ಲ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ನಟಿ ಎಂದು ಹೇಳಿಕೊಂಡು ತಿರುಗಾಡುತ್ತಾರೆ. ಆದರೆ ಸರೋಜಾದೇವಿಯವರು ಇದನ್ನೆಲ್ಲ ಮಾಡಲೇ ಇಲ್ಲ. ನಾಲ್ಕು ಭಾಷೆಯಲ್ಲಿ ನಟಿಸೋದು ಅಂದರೆ ಸಣ್ಣ ಮಾತಲ್ಲ. ಹಿಂದಿ, ತಮಿಳು, ತೆಲುಗು ಹಾಗೂ ಕನ್ನಡದಲ್ಲಿ ನಟಿಸಿದರು. ಅವರು ಎಷ್ಟೇ ಬೆಳೆದರೂ ಕೂಡ ಕನ್ನಡದಲ್ಲಿ ಕಿತ್ತೂರು ಚೆನ್ನಮ್ಮ, ಭಾಗ್ಯವಂತರು ಅಂತಹ ಪಾತ್ರಗಳಲ್ಲಿ ನಟಿಸುವುದನ್ನು ನಿಲ್ಲಿಸಲಿಲ್ಲ. ಕೆಲವರಾದರೆ ಕನ್ನಡವನ್ನೇ ಮರೆತು ಬಿಡುತ್ತಿದ್ದರು. ಆದರೆ ಇವರು ಯಾವತ್ತೂ ಕನ್ನಡವನ್ನು ಮರೆಯಲಿಲ್ಲ. ಅಚ್ಚ ಕನ್ನಡದ ನಟಿ, ತುಂಬಾ ಎತ್ತರಕ್ಕೆ ಬೆಳೆದವರು. ಅವರ ಮಟ್ಟಕ್ಕೆ ಯಾರೂ ತಲುಪಲೇ ಇಲ್ಲ. ರಾಜಕುಮಾರ್ ಬಳಿಕ ಯಾರಿಗೂ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಿಲ್ಲ, ಬಿ.ಸರೋಜಾದೇವಿ ಅವರಿಗೆ ಈ ಪ್ರಶಸ್ತಿ ನೀಡಬೇಕಿತ್ತು ಎಂದರು ತಿಳಿಸಿದರು.

    ಚಿತ್ರರಂಗದ ಯಾವುದೇ ಆಗು-ಹೋಗಗಳಲ್ಲೂ ನಟಿ ಜೊತೆಗೆ ಇರುತ್ತಿದ್ದರು. ನಿಜಕ್ಕೂ ಚಿತ್ರರಂಗಕ್ಕೆ ಬಹುದೊಡ್ಡ ನಷ್ಟ ಎಂದು ಸಂತಾಪ ಸೂಚಿಸಿದರು.ಇದನ್ನೂ ಓದಿ: ಹಿರಿಯ ನಟಿ ಬಿ. ಸರೋಜಾದೇವಿ ನಿಧನ – ಡಿಕೆಶಿ ಸಂತಾಪ

  • ಪಾರ್ಟಿ, ಪಬ್‌ಗೆ ಹೋಗಿ ಸಮಯವಲ್ಲದ ಸಮಯಕ್ಕೆ ಮನೆಗೆ ಬರ್ತಿದ್ಳು: ಕಿರುತೆರೆ ನಟಿ ಶ್ರುತಿ ಪತಿಯ ಆರೋಪ

    ಪಾರ್ಟಿ, ಪಬ್‌ಗೆ ಹೋಗಿ ಸಮಯವಲ್ಲದ ಸಮಯಕ್ಕೆ ಮನೆಗೆ ಬರ್ತಿದ್ಳು: ಕಿರುತೆರೆ ನಟಿ ಶ್ರುತಿ ಪತಿಯ ಆರೋಪ

    ಬೆಂಗಳೂರು: ಪಾರ್ಟಿ, ಪಬ್ ಅಂತಾ ಹೋಗಿ ಸಮಯವಲ್ಲದ ಸಮಯಕ್ಕೆ ಮನೆ ಬರ್ತಿದ್ಳು ಎಂದು ಕಿರುತೆರೆ ನಟಿ ಶ್ರುತಿ (Actress Shruti) ವಿರುದ್ಧ ಪತಿ (Husband) ಅಂಬರೀಶ್ ಪೊಲೀಸ್ ವಿಚಾರಣೆ ವೇಳೆ ಸಾಲು ಸಾಲು ಆರೋಪ ಮಾಡಿದ್ದಾರೆ.

    ಮಂಜುಳಾ ಅಲಿಯಾಸ್ ಶ್ರುತಿಗೆ ಜು. 4ರಂದು ಚಾಕು ಇರಿದಿದ್ದ ಪತಿ ಅಂಬರೀಶ್‌ನನ್ನು ಬಂಧಿಸಿದ್ದ ಹನುಮಂತ ನಗರ ಪೊಲೀಸರು (Hanumantha nagara Police) ವಿಚಾರಣೆ ಮಾಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ಪತಿ, ಪತ್ನಿಯ ಮೇಲೆ ಸಾಲು ಸಾಲು ಆರೋಪಗಳನ್ನ ಮಾಡಿದ್ದಾನೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಕಿರುತೆರೆ ನಟಿ ಶ್ರುತಿಗೆ ಮನೆಯಲ್ಲೇ ಚಾಕು ಇರಿದು ಕೊಲೆಗೆ ಯತ್ನ, ಪತಿ ಅರೆಸ್ಟ್‌

    ನನ್ನ ಪತ್ನಿ ಮಂಜುಳಾಗೆ ಕುಟುಂಬದ ಜವಾಬ್ದಾರಿ ಇರಲಿಲ್ಲ. ಇಬ್ಬರು ಹೆಣ್ಣುಮಕ್ಕಳಿಗೆ ತಾಯಿ ಪ್ರೀತಿ ಅನ್ನೋದು ತೋರಿಸಿಲ್ಲ. ಪಾರ್ಟಿ ಪಬ್ ಅಂತ ಹೋಗಿ ಸಮಯವಲ್ಲದ ಸಮಯಕ್ಕೆ ಮನೆಗೆ ಬರುತ್ತಿದ್ದಳು. ಹೊರಗಡೆ ಹೋದರೆ ವಾರ, 15 ದಿನ ಮನೆಗೆ ಬರುತ್ತಿರಲಿಲ್ಲ. ಇತ್ತೀಚೆಗೆ ಕುಂಭಮೇಳಕ್ಕೆ ಅಂತ ಹೋಗಿ 15 ದಿನ ಮನೆಗೆ ಬಂದಿರಲಿಲ್ಲ. ಈ ವಿಚಾರವಾಗಿ ಗಲಾಟೆ ಆಗಿತ್ತು ಎಂದು ದೂರಿದ್ದಾರೆ. ಇದನ್ನೂ ಓದಿ: ಮಂಗಳವಾರ ಬಾಹ್ಯಾಕಾಶದಿಂದ ಭೂಮಿಗೆ ಮರಳಲಿದ್ದಾರೆ ಶುಭಾಂಶು ಶುಕ್ಲಾ

    ನನ್ನ ಮೇಲೆ ಒಮ್ಮೆ ಶ್ರುತಿ ದೂರು ಕೂಡ ನೀಡಿದ್ದಳು. 25 ಲಕ್ಷ ರೂ. ಹಣ ಕೊಟ್ಟು ಅಪಾರ್ಟ್ಮೆಂಟ್‌ನಲ್ಲಿ ಮನೆ ಭೋಗ್ಯಕ್ಕೆ ಹಾಕಿಕೊಂಡಿದ್ದೆ. ಭೋಗ್ಯ ಕ್ಯಾನ್ಸಲ್ ಮಾಡಿ ಆ ದುಡ್ಡಿನೊಂದಿಗೆ ಮನೆ ಬಿಟ್ಟು ಹೋಗಲು ಶ್ರುತಿ ಪ್ಲಾನ್ ಕೂಡ ಮಾಡಿದ್ದಳು. ಹಾಗಾಗಿ ಮನೆಯಲ್ಲಿ ಇಬ್ಬರ ನಡುವೆ ಗಲಾಟೆ ಆಗುತ್ತಿತ್ತು. ಮೊನ್ನೆ ಕೂಡ ಗಲಾಟೆ ಆದಾಗ ರೂಡಾಗಿ ನಡೆದುಕೊಂಡಿದ್ದಕ್ಕೆ ದುಡುಕಿ ಚಾಕುವಿನಿಂದ ಹಲ್ಲೆ ಮಾಡಿದ್ದಾಗಿ ಆರೋಪಿ ಪತಿ ಪೊಲೀಸರ ತನಿಖೆಯ ವೇಳೆ ಹೇಳಿಕೊಂಡಿದ್ದಾರೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

  • ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ – ಟ್ರೋಲ್‌ಗಳಿಗೆ ಖುಷಿ ಮುಖರ್ಜಿ ಉತ್ತರ

    ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ – ಟ್ರೋಲ್‌ಗಳಿಗೆ ಖುಷಿ ಮುಖರ್ಜಿ ಉತ್ತರ

    ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟೀವ್‌ ಆಗಿರುವ ನಟಿಯರಲ್ಲಿ ಖುಷಿ ಮುಖರ್ಜಿ (Khushi Mukherjee) ಕೂಡ ಒಬ್ಬರು. ಸದಾ ತುಂಡುಡುಗೆ ತೊಟ್ಟು ಸದ್ದು ಮಾಡುತ್ತಿರು ಬೆಡಗಿ ಎಂದೇ ಹೇಳಬಹುದು. ಇದೀಗ ತಮ್ಮ ವಿರುದ್ಧ ಕೇಳಿಬರ್ತಿದ್ದ ನೆಗೆಟಿವ್‌ ಕಾಮೆಂಟ್‌ಗಳಿಗೆ ನಟಿ ಹನುಮಾನ್‌ ಚಾಲಿಸಾ ಪಠಿಸುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.

    ತಮ್ಮ ಇನ್‌ಸ್ಟಾ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ನಟಿ, ನಾನು ಬಂಗಾಳಿ ಬ್ರಾಹ್ಮಣ ಕುಟುಂಬದಿಂದ ಬಂದವಳು. ನಮ್ಮ ಸಂಸ್ಕೃತಿಯ ನಿಯಮಗಳೆಲ್ಲವೂ ಗೊತ್ತಿದೆ. ಎಲ್ಲ ವಿಷಯಗಳ ಬಗ್ಗೆಯೂ ಒಂದಿಷ್ಟು ಜ್ಞಾನ ಇರಬೇಕು. ಅದು ನನಗೂ ಇದೆ ಎಂದಿದ್ದಾರೆ. ಈ ವೇಳೆ ಸುಮಾರು 2-3 ನಿಮಿಷಗಳ ಕಾಲ ಹನುಮಾನ್‌ ಚಾಲೀಸಾ ಪಠಿಸಿ ನನಗೂ ಸಂಸ್ಕೃತಿಯ ಬಗ್ಗೆ ಅರಿವಿದೆ ಅನ್ನೋದಕ್ಕೆ ಇದನ್ನು ಪಠಿಸಿದ್ದೇನೆ ಎಂದು ಹೇಳಿದ್ದಾರೆ.

    ಅಲ್ಲದೇ ಕೆಲವರು ಈಗಲೂ ನನ್ನನ್ನ ಟ್ರೋಲ್‌ ಮಾಡ್ತಿದ್ದಾರೆ. ಆದ್ರೆ ಒಂದು ನೆನಪಿಟ್ಟುಕೊಳ್ಳಿ. ಯಾವುದೋ ಟೈಪ್‌ ಬಟ್ಟೆ ಹಾಕಿದಾಕ್ಷಣ ನಮ್ಮ ಸಂಸ್ಕೃತಿ, ನಾನು ಎಲ್ಲಿಂದ ಬಂದವಳು ಅನ್ನೋದನ್ನ ಮರೆತಿದ್ದೀನಿ ಎಂದಲ್ಲ. ಅದು ನನ್ನ ಫ್ಯಾಷನ್‌ ಅಷ್ಟೇ ಅಂದಿದ್ದಾರೆ ಎಂದು ಟ್ರೋಲ್‌ಗಳಿಗೆ ಉತ್ತರಿದ್ದಾರೆ.

    ಇತ್ತೀಚೆಗೆ ಮುಂಬೈನಲ್ಲಿ (Mumbai) ಕಾರ್ಯಕ್ರಮವೊಂದಕ್ಕೆ ಒಳಉಡುಪು ಧರಿಸದೇ ಇರೋದು ಕಾಣಿಸುವಂತಹ ಟ್ರಾನ್ಸ್‌ಪರೆಂಟ್‌ ಡ್ರೆಸ್‌ ತೊಟ್ಟು ಫೋಟೋಗೆ ಪೋಸ್‌ ಕೊಟ್ಟಿದ್ದರು. ಅದಕ್ಕೂ ಮುನ್ನ ಗೋಲ್ಡನ್‌ ಕಲ್ಲರ್‌ ತುಂಡು ಬಟ್ಟೆ ಧರಿಸಿದ್ದ ವಿಡಿಯೋ ಹಂಚಿಕೊಂಡಿದ್ದರು. ಇತ್ತೀಚೆಗೆ ಒಳ ಉಡುಪು ಧರಿಸದ ತುಂಡು ಉಡುಗೆ ತೊಟ್ಟ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೆಂಡ್‌ ಆಗಿತ್ತು. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಕಣ್ಣುಕುಕ್ಕುವಂತೆ ಮಾಡಿತ್ತು. ಕೆಲ ನೆಟ್ಟಿಗರು ನಟಿಯ ಬೋಲ್ಡ್‌ ಅವತಾರಕ್ಕೆ ʻವಾವ್‌ ಎಷ್ಟು ಸೆಕ್ಸಿʼ ಅಂತಾ ಕಾಮೆಂಟ್‌ ಮಾಡಿದ್ರೆ ಇನ್ನೂ ಕೆಲವರು ಇನ್ನೂ ಸ್ವಲ್ಪ ಚೋಟುದ್ದ ಡ್ರೆಸ್‌ ತೊಟ್ಟಿದ್ರೆ ಮಜಾ ಇರ್ತಿತ್ತು, ನಾನೇ ಒಳಉಡುಪು ಕೊಡಿಸಲೇ? ಅಂತೆಲ್ಲಾ ಕಾಮೆಂಟ್‌ ಮಾಡಿದ್ದರು. ಇನ್ನೂ ಕೆಲವರು ನಟಿಯನ್ನ ಟ್ರೋಲಿಗೆಳೆದಿದ್ದರು.

    ಸಹಜವಾಗಿ ಚಿತ್ರ ನಟಿಯರು ಫಂಕ್ಷನ್​ಗಳಿಗೆ ಹೋಗುವಾಗ.. ರೆಡ್​ ಕಾರ್ಪೆಟ್​ ಮೇಲೆ ನಡೆಯುವಾಗ ಅವರ ಡ್ರೆಸ್​ ಹಿಡಿದುಕೊಳ್ಳಲು ಇನ್ನೊಬ್ಬ ಸಹಾಯಕರು ಇರ್ತಾರೆ. ಇಡೀ ರಸ್ತೆ ಗುಡಿಸುವಂತೆ ಒಬ್ಬರು ಡ್ರೆಸ್​ ಹಾಕಿಕೊಂಡರೆ, ಹಲವಾರು ಸುತ್ತುಗಳ ವಿಚಿತ್ರ ಡ್ರೆಸ್​ ಇನ್ನೊಬ್ಬರು ಧರಿಸುತ್ತಾರೆ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್​ ಹಾಕಿಕೊಂಡು ಆಗಾಗ್ಗೆ ಮೇಲೆ ಮೇಲೆ ಎಳೆದುಕೊಳ್ಳುವುದನ್ನೂ ನಾವು ನೋಡಬಹುದು. ಇನ್ನೂ ಕೆಲ ನಟಿಯರಿಗೆ ಮೈಮೇಲೆ ಬಟ್ಟೆಯೇ ನಿಲ್ಲುವುದಿಲ್ಲ ಎನ್ನುವಂತಹ ಡ್ರೆಸ್‌ ತೊಟ್ಟು ಟ್ರೋಲಿಗೆ ಒಳಗಾಗ್ತಾರೆ. ಖುಷಿ ಮುಖರ್ಜಿಯ ವಿಷಯದಲ್ಲೂ ಅದೇ ಆಗಿತ್ತು.