Tag: actre

  • ಹೆಣ್ಣು ಮಗುವಿನ ತಾಯಿಯಾದ  ನಟಿ ಶ್ವೇತಾ ಶ್ರೀವಾತ್ಸವ್

    ಹೆಣ್ಣು ಮಗುವಿನ ತಾಯಿಯಾದ ನಟಿ ಶ್ವೇತಾ ಶ್ರೀವಾತ್ಸವ್

    ಬೆಂಗಳೂರು: ಕನ್ನಡ ಚಿತ್ರರಂಗದ ನಟಿ ಶ್ವೇತಾ ಶ್ರೀವಾತ್ಸವ್‍ಗೆ ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಈ ಬಗ್ಗೆ ಶ್ವೇತಾ ಟ್ವೀಟ್ ಮಾಡಿದ್ದು, ಹೆಣ್ಣು ಮಗು ಆಗಿರೋ ವಿಚಾರವನ್ನು ತಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಖುಷಿಯಾಗ್ತಿದೆ. ನಿಮ್ಮ ಪ್ರೀತಿ ಹಾಗೂ ಹಾರೈಕೆಗೆ ಧನ್ಯವಾದಗಳು ಅಂತ ಬರೆದುಕೊಂಡಿದ್ದಾರೆ.

    ತುಂಬು ಗರ್ಭಿಣಿ ತನ್ನ ಹೊಟ್ಟೆಯ ಮೇಲೆ ಮೆಹಂದಿ ಚಿತ್ತಾರ ಮಾಡಿಸೋ ಮೂಲಕ ಸಿಂಪಲ್ ಸುಂದರಿ ಶ್ವೇತಾ ಶ್ರೀ ವಾತ್ಸವ್ ಸುದ್ದಿಯಾಗಿದ್ದರು. 3ಡಿ ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ಶ್ವೇತಾ ಶ್ರೀವಾತ್ಸವ್ ಹೊಟ್ಟೆಯಲ್ಲಿ ಮಲಗಿರುವ ಮಗುವಿನ ಚಿತ್ರವನ್ನು ಸುಂದರವಾಗಿ ಬಿಡಿಸಿದ್ದರು. ಹೊಟ್ಟೆಯ ಮೇಲೆ ಮೆಹಂದಿ ಚಿತ್ತಾರ ಹಾಕಿಸಿಕೊಂಡು ಪೋಸ್ ಕೊಟ್ಟಿರೋ ಶ್ವೇತಾ ಶ್ರೀವಾತ್ಸವ್ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಗರ್ಭಿಣಿಯರು ಹೊಟ್ಟೆಯನ್ನು ಆದಷ್ಟು ಮುಚ್ಚಿಡುವುದು ಇಲ್ಲವೇ ಸಾರ್ವಜನಿಕವಾಗಿ ತೋರಿಸುವುದು ನಿಷಿದ್ಧ ಎನ್ನುವ ಕಾಲವಿತ್ತು. ಆದರೆ ಈಗ ಇದು ಬದಲಾಗಿದೆ. ಬಾಲಿವುಡ್, ಹಾಲಿವುಡ್ ಸೆಲೆಬ್ರಿಟಿಗಳು ಇಂತಹ ಚಿತ್ತಾರ ಹಾಕಿಸಿಕೋಳ್ಳುವುದು ಸಾಮಾನ್ಯವಾಗಿದೆ. ಇದೇ ಸಾಲಿಗೆ ಶ್ವೇತಾ ಕೂಡ ಸೇರಿದ್ದರು.ಇದಕ್ಕೂ ಮೊದಲು ಮೆಟರ್ನಿಟಿ ಫೋಟೊಶೂಟ್ ಮಾಡಿಸಿ, ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶ್ವೇತಾ ಶ್ರೀವಾತ್ಸವ್ ಹಂಚಿಕೊಂಡಿದ್ದರು.