Tag: actor

  • ತಮಿಳು ನಟ ಪ್ರತಾಪ್ ಪೋಥೆನ್ ಚೆನ್ನೈ ಫ್ಲಾಟ್ ನಲ್ಲಿ ಶವವಾಗಿ ಪತ್ತೆ

    ತಮಿಳು ನಟ ಪ್ರತಾಪ್ ಪೋಥೆನ್ ಚೆನ್ನೈ ಫ್ಲಾಟ್ ನಲ್ಲಿ ಶವವಾಗಿ ಪತ್ತೆ

    ಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಮತ್ತು ಹನ್ನೆರಡಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಪ್ರತಾಪ್ ಪೋಥೆನ್ ತಮ್ಮ ಚೆನ್ನೈನ ಅಪಾರ್ಟಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 69ರ ವಯಸ್ಸಿನ ಪ್ರತಾಪ್, ಕೇರಳ ಮೂಲದವರು. ಮಲಯಾಳಂ ಸಿನಿಮಾ ರಂಗದಿಂದ ವೃತ್ತಿ ಆರಂಭಿಸಿದ್ದ ಇವರು, ನಂತರ ತೆಲುಗು, ಹಿಂದಿ, ತಮಿಳಿನಲ್ಲೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಇದನ್ನೂ ಓದಿ:ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಫ್ಯಾಶನ್‌ ಡಿಸೈನರ್‌ ಮಸಾಬ ಗುಪ್ತಾ

    ಪ್ರತಾಪ್ ನಿಧನಕ್ಕೆ ಅನಾರೋಗ್ಯವೇ ಕಾರಣ ಎಂದು ಹೇಳಲಾಗುತ್ತಿದೆ. ಹಲವು ದಿನಗಳಿಂದ ಇವರು ಅನಾರೋಗ್ಯದಿಂದ ಬಳಲುತ್ತಿದ್ದರು. ಒಂಟಿಯಾಗಿ ವಾಸಿಸುತ್ತಿದ್ದರಿಂದ ಸಾವಿನ ಬಗ್ಗೆ ನಿಖರ ಮಾಹಿತಿ ತಿಳಯಬೇಕಿದೆ. ಹಿರಿಯ ಕಲಾವಿದರ ನಿಧನಕ್ಕೆ ತಮಿಳು ಮತ್ತು ಮಲಯಾಳಂ ಸಿನಿಮಾ ರಂಗ ಕಂಬನಿ ಮಿಡಿದಿದೆ. ಅನೇಕ ಅಭಿಮಾನಿಗಳು ಕೂಡ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ.

    ಪ್ರತಾಪ್ ಪೋಥೆನ್ ಅವರ ಖಾಸಗಿ ಬದುಕಿ ಅಷ್ಟೊಂದು ನೆಮ್ಮದಿಯಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಜನಪ್ರಿಯತೆಯ ಉತ್ತುಂಗದಲ್ಲಿರುವಾಗ ನಟಿ ರಾಧಿಕಾ ಅವರನ್ನು ಮದುವೆಯಾಗಿದ್ದರಂತೆ. ಸಪ್ತಪದಿ ತುಳಿದ ಒಂದೇ ವರ್ಷಕ್ಕೆ ಈ ವಿವಾಹ ಮುರಿದು ಬಿದ್ದಿದೆ. ನಂತರ ಅಮಲಾ ಸತ್ಯನಾಥ್ ಎನ್ನುವವರ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. 22 ವರ್ಷದ ಬಳಿಕ ಅವರೊಂದಿಗೆ ವಿಚ್ಚೇದನ ಪಡೆದಿದ್ದಾರೆ. ಈ ಜೋಡಿಗೆ ಒಂದು ಹೆಣ್ಣು ಮಗು ಕೂಡ ಇದೆ.

    ನಟನೆ ಮತ್ತ ನಿರ್ದೇಶನ ಎರಡರಲ್ಲೂ ಪಳಗಿದ್ದ ಪ್ರತಾಪ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಮೀಂದು ಒರು ಕಾದಲ್ ಕಥೈ ಸಿನಿಮಾ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಈ ಸಿನಿಮಾ ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿತ್ತು. ನಟನೆ ಮತ್ತು ನಿರ್ದೇಶನಕ್ಕಾಗಿ ಮೂರು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಯನ್ನೂ ಇವರು ಪಡೆದಿದ್ದಾರೆ. ಅನಾರೋಗ್ಯದ ನಡುವೆಯೂ ಅವರು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಾಪ್ ನಿಧನಕ್ಕೆ ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಟ ಶಿವರಂಜನ್ ಬೋಳ್ಳಣ್ಣವರ್ ಮೇಲೆ ಗುಂಡಿನ ದಾಳಿ

    ನಟ ಶಿವರಂಜನ್ ಬೋಳ್ಳಣ್ಣವರ್ ಮೇಲೆ ಗುಂಡಿನ ದಾಳಿ

     ಬೆಳಗಾವಿ: ಚಿತ್ರನಟ ಶಿವರಂಜನ್ ಬೋಳ್ಳಣ್ಣವರ್ ಮೇಲೆ ಬೈಲಹೊಂಗಲ ಪಟ್ಟಣದಲ್ಲಿ ಗುಂಡಿನ ದಾಳಿ ನಡೆದಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಹನುಮಂತ ದೇವಸ್ಥಾನ ಬಳಿಯಿರುವ ಮನೆ ಮುಂದೆ ಅಪರಿಚಿತ ವ್ಯಕ್ತಿ ಶಿವರಂಜನ್ ಮೇಲೆ ಮೂರು ಸುತ್ತು ಗುಂಡಿನ ದಾಳಿ ನಡೆಸಿದ್ದಾನೆ. ಮಿಸ್ ಫೈರ್ ಆಗಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಶಿವರಂಜನ್ ಪಾರಾಗಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ಹೊಸ ಲಾಂಛನಕ್ಕೆ ವಿಪಕ್ಷಗಳ ಆಕ್ರೋಶ – ಆಕ್ರಮಣಕಾರಿ ಲಾಂಛನ ಅಂತ ಕಟು ಟೀಕೆ

    ಸ್ಥಳಕ್ಕೆ ಬೆಳಗಾವಿ ಎಸ್‍ಪಿ ಡಾ. ಸಂಜೀವ ಪಾಟೀಲ್, ಎಎಸ್‍ಪಿ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫೈರಿಂಗ್ ಮಾಡಿರೋ ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಹೊಯ್ಸಳ’ ಡಾಲಿಗೆ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಸಾಥ್

    `ಹೊಯ್ಸಳ’ ಡಾಲಿಗೆ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಸಾಥ್

    `ಬಡವ ರಾಸ್ಕಲ್’ ಚಿತ್ರದ ಸಕ್ಸಸ್ ನಂತರ ನಟರಾಕ್ಷಸ ಡಾಲಿ ಸದ್ಯ ‘ಹೊಯ್ಸಳ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಡಾಲಿ ಮತ್ತು ಚಿತ್ರತಂಡಕ್ಕೆ ಮೋಹಕ ತಾರೆ ರಮ್ಯಾ ಸಾಥ್ ನೀಡಿದ್ದಾರೆ.

    ಡಾಲಿ ಧನಂಜಯ್ ಮತ್ತು ಅಮೃತಾ ನಟನೆಯ ಹೊಯ್ಸಳ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಕಳೆದ ಬಾರಿ ಟೀಂ ಇಂಡಿಯಾ ಆಟಗಾರ್ತಿ ವೇದ ಕೃಷ್ಣಮೂರ್ತಿ ಭೇಟಿ ನೀಡಿರೋ ಬೆನ್ನಲ್ಲೇ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಕೂಡ ಭೇಟಿ ಕೊಟ್ಟಿದ್ದಾರೆ.

     

    View this post on Instagram

     

    A post shared by Dhananjaya KA (@dhananjaya_ka)

    ಇದೀಗ ‘ಹೊಯ್ಸಳ’ ಚಿತ್ರೀಕರಣ ನಡೆಯುತ್ತಿರುವ ಸ್ಥಳಕ್ಕೆ ನಟಿ ರಮ್ಯಾ ಭೇಟಿ ನೀಡಿ, ಚಿತ್ರತಂಡದ ಬಳಿ ಮಾತನಾಡುತ್ತಿರುವ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಮೊದಲೇ ರಮ್ಯಾ ಕಂಬ್ಯಾಕ್ ಕುರಿತು ಸದ್ದು ಮಾಡ್ತಿರೋ ಬೆನ್ನಲ್ಲೇ ಭೇಟಿ ಕೊಟ್ಟಿರೋದನ್ನ ನೋಡಿ ರಮ್ಯಾ ಡಾಲಿಗೆ ಜೊತೆಯಾಗುತ್ತೀದ್ದಾರಾ ಅಂತಾ ಪ್ರಶ್ನಿಸುತ್ತಿದ್ದಾರೆ. ಕೆಆರ್‌ಜಿ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ಹೊಯ್ಸಳ ಚಿತ್ರದಲ್ಲಿ ಡಾಲಿ ಜೊತೆ ರಮ್ಯಾ ನಟಿಸುತ್ತಿದ್ದಾರಾ ಈ ಎಲ್ಲಾ ಪ್ರಶ್ನೆಗಳಿಗೂ ಚಿತ್ರತಂಡದ ಅಧಿಕೃತ ಘೋಷಣೆ ಆಗುವವರೆಗೂ ಕಾದುನೋಡಬೇಕಿದೆ..

    Live Tv
    [brid partner=56869869 player=32851 video=960834 autoplay=true]

  • ಕಾಲಿವುಡ್ ಹಿರಿಯ ನಟ ವಿಜಯ್ ಕಾಂತ್ ಅವರ ಮೂರು ಬೆರಳು ಕತ್ತರಿಸಿದ ವೈದ್ಯರು

    ಕಾಲಿವುಡ್ ಹಿರಿಯ ನಟ ವಿಜಯ್ ಕಾಂತ್ ಅವರ ಮೂರು ಬೆರಳು ಕತ್ತರಿಸಿದ ವೈದ್ಯರು

    ಮಿಳಿನ ಹೆಸರಾಂತ ಹಿರಿಯ ನಟ, ಡಿಎಂಡಿಕೆ ಪಕ್ಷದ ಅಧ್ಯಕ್ಷರೂ ಆಗಿರುವ ವಿಜಯ್ ಕಾಂತ್ ಮಧುಮೇಹದಿಂದ ಬಳಲುತ್ತಿದ್ದರು. ಇತ್ತೀಚೆಗಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧುಮೇಹ ವಿಪರೀತವಾಗಿದ್ದರಿಂದ ಮತ್ತು ಬೆರಳುಗಳಿಗೆ ರಕ್ತ ಸಂಚಾರ ಆಗದೇ ಇರುವ ಕಾರಣದಿಂದಾಗಿ ಅವರ ಕಾಲಿನ ಮೂರು ಬೆರಳುಗಳನ್ನು ಕತ್ತರಿಸಿದ್ದಾರೆ ಎಂದು ಡಿಎಂಡಿಕೆ ಪಕ್ಷ ಮಾಹಿತಿ ನೀಡಿದೆ. ರಕ್ತ ಸಂಚಾರಕ್ಕೆ ತೊಂದರೆ ಆಗುತ್ತಿದ್ದರಿಂದ ಬೆರಳುಗಳನ್ನು ಕತ್ತರಿಸುವುದು ಅನಿವಾರ್ಯವಾಗಿತ್ತು ಎಂದು ವೈದ್ಯರು ತಿಳಿಸಿದ್ದರಂತೆ.

    ವಿಜಯ್ ಕಾಂತ್ ತಮಿಳಿನಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ತಮ್ಮದೇ ಆದ ಅಭಿಮಾನ ಬಳಗ ಹೊಂದಿದ್ದರು. ಸಿನಿಮಾ ರಂಗದಿಂದ ರಾಜಕೀಯ ರಂಗಕ್ಕೆ ಜಿಗಿದು, 2005ರಿಂದ ತಮ್ಮದೇ ಡಿಎಂಡಿಕೆ ಪಕ್ಷ ಸ್ಥಾಪನೆ ಮಾಡಿ, ಸಮಾಜಸೇವೆಗೆ ಮುಂದಾಗಿದ್ದರು. ಹತ್ತು ವರ್ಷಗಳ ಕಾಲ ರಾಜಕೀಯ ಜೀವನದಲ್ಲಿದ್ದು, ನಂತರ ಸಿನಿಮಾ ಮತ್ತು ರಾಜಕೀಯ ರಂಗದಿಂದಲೇ ಅವರು ದೂರ ಉಳಿದರು. ಅನಾರೋಗ್ಯದ ಕಾರಣದಿಂದಾಗಿ ಅವರು ಈ ನಿರ್ಧಾರಕ್ಕೆ ಬಂದಿದ್ದರು. ಇದನ್ನೂ ಓದಿ: ಆಗಸ್ಟ್ 11ಕ್ಕೆ ಅಕ್ಷಯ್ ಕುಮಾರ್ ಮತ್ತು ಆಮೀರ್ ಖಾನ್ ನಡುವೆ ಬಿಗ್ ಫೈಟ್ : ಗೆಲುವು ಯಾರ ಪಾಲಿಗೆ?

    ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಅನೇಕ ನಟರ ಜೊತೆ ಒಂದೊಳ್ಳೆ ಬಾಂಧವ್ಯ ಇಟ್ಟುಕೊಂಡಿದ್ದ ವಿಜಯ್ ಕಾಂತ್ ಆರೋಗ್ಯ ಸ್ಥಿರವಾಗಿದ್ದು, ಮಧುಮೇಹಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲೇ ವಿಶ್ರಾಂತಿ ತಗೆದುಕೊಳ್ಳುತ್ತಿದ್ದು, ಕೆಲವು ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರಂತೆ. ವಿಜಯ್ ಕಾಂತ್ ಆರೋಗ್ಯದ ಬಗ್ಗೆ ವಿಷಯ ತಿಳಿದುಕೊಂಡಿರುವ ರಜನಿಕಾಂತ್ ಸೇರಿದಂತೆ ಹಲವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

    Live Tv

  • ಸ್ಪೈನಲ್‍ಗೆ ಮೈನರ್ ಇಂಜುರಿ ಆಗಿದ್ದು, ಆಪರೇಷನ್ ಆಗ್ಬೇಕಿದೆ: ದಿಗಂತ್ ಮಾವ

    ಸ್ಪೈನಲ್‍ಗೆ ಮೈನರ್ ಇಂಜುರಿ ಆಗಿದ್ದು, ಆಪರೇಷನ್ ಆಗ್ಬೇಕಿದೆ: ದಿಗಂತ್ ಮಾವ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ದಿಗಂತ್ ಮಂಚಾಲೆ ಸ್ಪೈನಲ್ ಮೈನರ್ ಇಂಜುರಿ ಆಗಿದೆ ಎಂದು ಪತ್ನಿ ಐಂದ್ರಿತಾ ರೇ ತಂದೆ ಡಾ. ರೇ ಮಾಹಿತಿ ನೀಡಿದ್ದಾರೆ.

    ಅಳಿಯನ ಆರೋಗ್ಯದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿನ್ನೆ ಮಧ್ಯಾಹ್ನ ಘಟನೆ ನಡೆದಿದೆ. ಏನಾಗಿದೆಯೋ ಗೊತ್ತಿಲ್ಲ. ನಾವೀಗ ಆಸ್ಪತ್ರೆಗೆ ಬಂದಿದ್ದೇವೆ. ಸಣ್ಣ ಪ್ರಮಾಣದಲ್ಲಿ ಪೆಟ್ಟಾಗಿದೆ ಎಂದು ತಿಳಿಸಿದರು.

    ಸೋಮವಾರ ಮಧ್ಯಾಹ್ನ 3 ಗಂಟೆಗೆ ಘಟನೆ ಸಂಭವಿಸಿದೆ. ಕತ್ತಿನ ಭಾಗಕ್ಕೆ ಪೆಟ್ಟು ಬಿದ್ದಿದೆ. ಗೋವಾದಲ್ಲಿ ಚಿಕಿತ್ಸೆ ಕೊಡಲಾಗಿದೆ. ಸ್ಲೈನಲ್ ಗೆ ಮೈನರ್ ಇಂಜುರಿ ಆಗಿದೆ. ಈಗ ಇಲ್ಲಿ ಒಂದು ಅಪರೇಷನ್ ಆಗಬೇಕಾಗಿದೆ ಎಂದು ಹೇಳಿದರು. ಇದನ್ನೂ ಓದಿ: ದಿಗಂತ್‌ ಕುತ್ತಿಗೆಗೆ ಪೆಟ್ಟು- ಸ್ಟಂಟ್‌ ಮಾಸ್ಟರ್‌ ಹೇಳಿದ್ದೇನು?

    ನಟ ದಿಗಂತ್ ತಮ್ಮ ಕುಟುಂಬ ಸಮೇತ ಗೋವಾ ಪ್ರವಾಸದಲ್ಲಿದ್ದರು. ಅಂತೆಯೇ ಬೀಚ್‍ನಲ್ಲಿ ಸ್ಟಂಟ್ ಮಾಡಲು ಹೋಗಿ ಕುತ್ತಿಗೆಗೆ ಏಟು ಮಾಡಿಕೊಂಡಿದ್ದಾರೆ. ಕೂಡಲೇ ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿರುವ ನಟನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಏರ್ ಲಿಫ್ಟ್ ಮೂಲಕ ಕರೆತರಲಾಗಿದೆ.‌ ಸದ್ಯ ನಟ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇತ್ತ ಆಸ್ಪತ್ರೆಗೆ ಕಿರುತೆರೆ ನಟರು ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ಅಲ್ಲದೆ ಆಪ್ತ ಸಂಬಂಧಿಗಳು ಕೂಡ ಬರುತ್ತಿದ್ದಾರೆ.

    Live Tv

  • ದಿಗಂತ್‌ ಕುತ್ತಿಗೆಗೆ ಪೆಟ್ಟು- ಸ್ಟಂಟ್‌ ಮಾಸ್ಟರ್‌ ಹೇಳಿದ್ದೇನು?

    ದಿಗಂತ್‌ ಕುತ್ತಿಗೆಗೆ ಪೆಟ್ಟು- ಸ್ಟಂಟ್‌ ಮಾಸ್ಟರ್‌ ಹೇಳಿದ್ದೇನು?

    ಬೆಂಗಳೂರು: ದಿಗಂತ್‌ಗೆ ಜಿಮ್ನಾಸ್ಟಿಕ್ಸ್ ಗೊತ್ತು. ಇದರಿಂದಾಗಿ ಯಾವುದೇ ತೊಂದರೆ ಆಗಿಲ್ಲ ಎಂದು ಸ್ಟಂಟ್‌ ಮಾಸ್ಟರ್‌ ಡೆಫರೆಂಟ್‌ ಡ್ಯಾನಿ ತಿಳಿಸಿದರು.

    ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ದಿಗಂತ್‌ ಅವರು ಬ್ಯಾಕ್‌ಲಿಫ್ಟ್‌ ಸೊಮಾರ್‌ ಸಾಲ್ಟ್‌ ಎಲ್ಲಾ ಮಾಡುತ್ತಿದ್ದರು. ಅವರ ಫಿಟ್‌ ಆಗಿ ಚೆನ್ನಾಗಿದ್ದರು. ಯಾವಾಗಲೂ ಅವರು ವ್ಯಾಯಾಮ, ಪ್ರ್ಯಾಕ್ಟಿಸ್‌ ಮಾಡುತ್ತಿದ್ದರು. ಇದರಿಂದಾಗಿ ಅಷ್ಟೇನೂ ತೊಂದರೆ ಇಲ್ಲ ಅನಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.

    ಬೀಚ್‌ನಲ್ಲಿ, ಮರಳಿನಲ್ಲಿ  ಬ್ಯಾಕ್ ಸೊಮಾರ್‌ ಸಾಲ್ಟ್‌, ಫ್ರಂಟ್‌ ಸೊಮಾರ್‌ ಸಾಲ್ಟ್‌ ಮಾಡುವುದು ಕಾಮನ್‌ ಆಗಿದೆ. ಯಾವಾಗಲೂ ಮಾಡುತ್ತಿದ್ದರೆ ತೊಂದರೆ ಆಗುವುದಿಲ್ಲ. ಆದರೂ ಇದನ್ನು ತುಂಬಾ ದಿನದ ನಂತರ ಮಾಡಿರುವುದರಿಂದ ಈ ರೀತಿ ತೊಂದರೆ ಆಗಿದೆ ಅನಿಸುತ್ತದೆ. ಸೊಮಾರ್‌ ಸಾಲ್ಟ್‌ ಮಾಡುವಾಗ ಸ್ವಲ್ಪ ಎತ್ತರದಿಂದ ಮಾಡಿದರೆ ಏನೂ ಆಗುತ್ತಿರಲಿಲ್ಲ. ದಿಗಂತ ಅವರು ಸ್ವಲ್ಪ ಕೆಳಗಿನಿಂದ ಸೊಮಾರ್‌ ಸಾಲ್ಟ್‌ ಮಾಡಿದ್ದಾರೆ ಎನಿಸುತ್ತದೆ. ಅದಕ್ಕೆ ಈ ರೀತಿ ಆಗಿದೆ ಎಂದರು. ಇದನ್ನೂ ಓದಿ: ದಿಗಂತ್‌ಗೆ ಏನೂ ಆಗಿಲ್ಲ, ಆತಂಕ ಪಡಬೇಡಿ: ನಟನ ಕುಟುಂಬಸ್ಥರು

    ಸ್ಯಾಂಡಲ್‌ವುಡ್ ನಟ ದಿಗಂತ್ ಮಂಚಾಲೆ ಅವರ ಕುತ್ತಿಗೆಗೆ ಪೆಟ್ಟಾಗಿದ್ದು, ಕುಟುಂಬ ಸಮೇತ ಗೋವಾ ಪ್ರವಾಸಕ್ಕೆ ನಟ ತೆರಳಿದ್ದರು. ಸಮುದ್ರ ತಟದಲ್ಲಿ ಸೊಮರ್ ಸಾಲ್ಟ್ ಹೊಡೆಯುವ ವೇಳೆ ಮಿಸ್ಸಾಗಿ ದಿಗಂತ್ ಕುತ್ತಿಗೆಗೆ ಪೆಟ್ಟು ಬಿದ್ದಿದೆ.  ಕೂಡಲೇ ಗೋವಾದಲ್ಲಿಯೇ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಇದೀಗ ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರಲಾಗುತ್ತಿದೆ. ಪತ್ನಿ ಐಂದ್ರಿತಾ ರೇ ಕೂಡ ದಿಗಂತ್‌ ಜೊತೆ ಇದ್ದಾರೆ.

    Live Tv

  • ಬುದ್ದಿಜೀವಿ ವಲಯಕ್ಕೆ ನಟ ಚೇತನ್ ‘ಚಮಚ’ ಅಂದಿದ್ದು ಯಾಕೆ ಮತ್ತು ಯಾರಿಗೆ?

    ಬುದ್ದಿಜೀವಿ ವಲಯಕ್ಕೆ ನಟ ಚೇತನ್ ‘ಚಮಚ’ ಅಂದಿದ್ದು ಯಾಕೆ ಮತ್ತು ಯಾರಿಗೆ?

    ಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್, ಸಾಮಾಜಿಕ ಜಾಲತಾಣದಲ್ಲಿ ಒಂದು ವಿಚಿತ್ರವಾದ ಪೋಸ್ಟ್ ಮಾಡಿದ್ದಾರೆ. ಅದು ಈಗ ವಿವಾದಕ್ಕೂ ಮತ್ತು ಚರ್ಚೆಗೆ ಕಾರಣವಾಗಿದೆ. ಅವರು ಫೇಸ್ ಬುಕ್ ಪೇಜ್ ನಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಪೋಸ್ಟ್ ಮಾಡಿದ್ದು, “ಕರ್ನಾಟಕ ಕಾಂಗ್ರೆಸ್ ಮತ್ತು ಚಮಚಾ ಬುದ್ದಿಜೀವಿ ವಲಯ ಬಾಬಾಸಾಹೇಬರ ಕೆಲವು ಜೀವನದ ಅಂಶಗಳನ್ನು ಪಠ್ಯಪುಸ್ತಕದಿಂದ ತಗೆದಿದ್ದಾರೆ ಅಂತ ಬೊಬ್ಬೆ ಹಾಕುತ್ತಿದ್ದಾರೆ. ಬಾಬಾ ಸಾಹೇಬರ ಬಗ್ಗೆ ಅವರ ಕಾಳಜಿ ನೋಡಿ ಖುಷಿಯಾಗುತ್ತಿದೆ. ಕಾಂಗ್ರೆಸ್ ಮಾಡುವ ಪರಿಷ್ಕೃತ ಪಠ್ಯದಲ್ಲಿ ಬಾಬಾ ಸಾಹೇಬರ ಕಾಂಗ್ರೆಸ್ ಮತ್ತು ಗಾಂಧಿ ಅಸ್ಪ್ರಶಸ್ಯರಿಗೆ ಏನು ಮಾಡಿದರು ಎಂಬ ಪಾಠ ಇರಲಿದೆಯಾ” ಎಂದು ಪ್ರಶ್ನೆ ಮಾಡಿದ್ದಾರೆ.

    ಮತ್ತೊಂದು ಪೋಸ್ಟ್ ನಲ್ಲಿ ಬಿಜೆಪಿ ವಿರೋಧಿ ನಿಲುವಿನ ಮತ್ತು ಕಾಂಗ್ರೆಸ್ ಬೆಂಬಲಿಸುವ ಕರ್ನಾಟಕದ ಬುದ್ಧಿಜೀವಿ ವಲಯ ಲಿಬರಲ್ಗಳು ಅಥವಾ ನಡುಪಂಥೀಯರಿಗೆ, ಬ್ರಾಹ್ಮಣ್ಯದ ಅರಿವು ತುಂಬಾ ಕಡಿಮೆ. ಎಂದು ಹೇಳುತ್ತಾ ನಾವು ಇಡೀ ರಾಜಕೀಯ ವ್ಯವಸ್ಥೆಯನ್ನೇ ಎದುರಿಸಬೇಕು. ಒಂದು ಪಾರ್ಟಿಯನ್ನಲ್ಲ ಎಂದು ಕರ್ನಾಟಕರ ಮೂರು ಪಾರ್ಟಿಗಳಿಗೂ ಚೇತನ್ ತಿವಿದಿದ್ದಾರೆ. ಇದನ್ನೂ ಓದಿ: ಶಿವಣ್ಣ – ತಲೈವಾ ಸಿನಿಮಾಗೆ `ಜೈಲರ್’ ಟೈಟಲ್ ಫಿಕ್ಸ್

    Actor chetan (1)

    ಈವರೆಗೂ ಬುದ್ಧಿಜೀವಿ ವಲಯದಲ್ಲಿ ಗುರುತಿಸಿಕೊಂಡಿದ್ದ ಚೇತನ್ ಅವರ ಪೋಸ್ಟ್ ನೋಡಿ ಸ್ವತಃ ಬುದ್ದಿಜೀವಿ ವಲಯವೇ ಗೊಂದಲಕ್ಕೀಡಾಗಿದೆ. ಚೇತನ್ ಯಾರ ಪರ ಮಾತನಾಡುತ್ತಿದ್ದಾರೆ? ಅವರು ಯಾರ ಪರ? ಯಾರ ವಿರೋಧಿ ಎನ್ನುವುದನ್ನು ಸ್ಪಷ್ಟ ಪಡಿಸಲಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ನಾಳೆ ಪ್ರಗತಿಪರರು, ಕುವೆಂಪು, ಬಸವಣ್ಣನ ಅನುಯಾಯಿಗಳು  ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಆದ ಪಠ್ಯಪುಸ್ತಕ ಪರಿಷ್ಕೃತ ವಿರುದ್ಧ ದೊಡ್ಡ ಮಟ್ಟದಲ್ಲಿ ಚಳವಳಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ಬೆಂಗಳೂರು ರೈಲು ನಿಲ್ದಾಣದಿಂದ ಸ್ವಾತಂತ್ರ್ಯ  ಉದ್ಯಾನದವರೆಗೂ ಪ್ರತಿಭಟನೆ ಜಾತಾ ಹಮ್ಮಿಕೊಳ್ಳಲಾಗಿದೆ. ಅದಕ್ಕೂ ಒಂದು ದಿನ ಮುನ್ನ ಚೇತನ್ ಹಾಕಿದ ಈ ಪೋಸ್ಟ್ ಮಹತ್ವ ಪಡೆದುಕೊಂಡಿವೆ.

    Live Tv

  • ತಮಿಳಿನಲ್ಲಿ ತಾವೇ ಹೀರೋ ಆದ ಚಿತ್ರಕ್ಕೆ, ಹಿಂದಿ ರೀಮೇಕ್‌ನಲ್ಲಿ ಅತಿಥಿ ಪಾತ್ರ ಮಾಡಿದ ತಮಿಳು ನಟ ಸೂರ್ಯ

    ತಮಿಳಿನಲ್ಲಿ ತಾವೇ ಹೀರೋ ಆದ ಚಿತ್ರಕ್ಕೆ, ಹಿಂದಿ ರೀಮೇಕ್‌ನಲ್ಲಿ ಅತಿಥಿ ಪಾತ್ರ ಮಾಡಿದ ತಮಿಳು ನಟ ಸೂರ್ಯ

    ಭಾರತೀಯ ಕೆಳ, ಮಧ್ಯಮ ವರ್ಗದ ಕುಟುಂಬಕ್ಕೂ ವಿಮಾನಯಾನವನ್ನು ಸುಗಮಗೊಳಿಸಿದ, ಅತೀ ಕಡಿಮೆ ದರದಲ್ಲಿ ವಿಮಾನ ಟಿಕೆಟ್ ಸಿಗುವಂತೆ ಮಾಡಿದ ಕ್ಯಾಪ್ಟನ್ ಗೋಪಿನಾಥ್ ಬದುಕಿನ ಸಿನಿಮಾ ತಮಿಳಿನಲ್ಲಿ ಸೂರೈರ್ ಪ್ರೊಟ್ರು ಹೆಸರಿನಲ್ಲಿ ಮೂಡಿ ಬಂದಿತ್ತು. ಬಾಕ್ಸ್ ಆಫೀಸಿನಲ್ಲೂ ಅದು ಸದ್ದು ಮಾಡಿತ್ತು. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಮೂಡಿ ಬಂದ ಈ ಚಿತ್ರವು ಇದೀಗ ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ. ಹಿಂದಿ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ.

    ತಮಿಳಿನಲ್ಲಿ ಈ ಸಿನಿಮಾ ಬಂದಾಗ ತಮಿಳಿನ ಖ್ಯಾತ ನಟ ಸೂರ್ಯ ಅವರೇ ಈ ಚಿತ್ರವನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದ್ದರು. ಈ ಸಿನಿಮಾ ಅದ್ಭುತವಾಗಿ ಮೂಡಿ ಬಂದಿತ್ತು. ನಾಲ್ಕೈದು ಭಾಷೆಗೂ ಡಬ್ ಆಗಿತ್ತು. ಇದೀಗ ಅದೇ ಸಿನಿಮಾವನ್ನು ಹಿಂದಿಯಲ್ಲಿ ಅಕ್ಷಯ್ ಕುಮಾರ್ ಮಾಡುತ್ತಿದ್ದಾರೆ. ಕ್ಯಾಪ್ಟನ್ ಗೋಪಿನಾಥ್ ಅವರ ಪಾತ್ರವನ್ನು ಅಕ್ಷಯ್ ಕುಮಾರ್ ನಿರ್ವಹಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸೂರ್ಯ ಅವರು ಅತಿಥಿ ಪಾತ್ರ ಮಾಡುತ್ತಿದ್ದಾರೆ. ಇದನ್ನೂ ಓದಿ : ಜೈ ಶ್ರೀರಾಮ್ ಎನ್ನುತ್ತಾ ಮುಸ್ಲಿಮರನ್ನು ಹತ್ಯೆ ಮಾಡುವುದು, ಕಾಶ್ಮೀರ ಪಂಡಿತರ ಹತ್ಯೆಗೆ ಸಮ: ಸಾಯಿ ಪಲ್ಲವಿ ವೀಡಿಯೋ ವೈರಲ್

    ಸೂರೈರ್ ಪೋಟ್ರು ಸಿನಿಮಾವನ್ನು ತಮಿಳಿನಲ್ಲಿ ಮಾಡಿದ್ದ ನಿರ್ದೇಶಕರೇ ಹಿಂದಿಯಲ್ಲೂ ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿ ಸೂರ್ಯ ಅವರು ಅತಿಥಿ ಪಾತ್ರವನ್ನು ಒಪ್ಪಿಕೊಂಡಿದ್ದಾರಂತೆ. ಮೊದಲು ಇದು ಗಾಸಿಪ್ ಎನ್ನುವಂತೆ ಸುದ್ದಿಯಾಗಿತ್ತು. ಆದರೆ ಇದೀಗ ಸ್ವತಃ ಸೂರ್ಯ ಅವರೇ ಈ ಮಾಹಿತಿಯನ್ನು ಖಚಿತ ಪಡಿಸಿದ್ದಾರೆ. ಅಕ್ಷಯ್ ಕುಮಾರ್ ಜೊತೆಗಿದ್ದ ಫೋಟೋವನ್ನು ಅವರು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಆದರೆ, ಯಾವ ಪಾತ್ರ ಎನ್ನುವುದನ್ನು ಮಾತ್ರ ಗೌಪ್ಯವಾಗಿ ಇಡಲಾಗಿದೆ.

    Live Tv

  • ಬಾಹುಬಲಿ ಪ್ರಭಾಸ್‌ಗೆ ಕೊನೆಗೂ ಕೂಡಿ ಬಂತು ಕಂಕಣ ಭಾಗ್ಯ: ಹುಡುಗಿ ಯಾರು?

    ಬಾಹುಬಲಿ ಪ್ರಭಾಸ್‌ಗೆ ಕೊನೆಗೂ ಕೂಡಿ ಬಂತು ಕಂಕಣ ಭಾಗ್ಯ: ಹುಡುಗಿ ಯಾರು?

    ತೆಲುಗಿನ ಖ್ಯಾತ ನಟ, ಸದ್ಯ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸಲಾರ್ ಸಿನಿಮಾ ಮಾಡುತ್ತಿರುವ ಪ್ರಭಾಸ್ ಮದುವೆ ಬಗ್ಗೆ ಹಲವು ವರ್ಷಗಳಿಂದ ಇಡೀ ತೆಲುಗು ಇಂಡಸ್ಟ್ರಿ ತಲೆ ಕೆಡಿಸಿಕೊಂಡಿತ್ತು. ಪ್ರಭಾಸ್ ಎಲ್ಲಿಗೆ ಹೋಗಲಿ ಮದುವೆ ಬಗ್ಗೆ ಪ್ರಸ್ತಾಪವಾಗುತ್ತಿತ್ತು. ಯಾಕೆ ಜನರು ತನ್ನ ಮದುವೆಯ ಬಗ್ಗೆ ಇಷ್ಟೊಂದು ತಲೆ ಕೆಡಿಸಿಕೊಂಡಿದ್ದಾರೆ ಎಂದು ಸ್ವತಃ ಪ್ರಭಾಸ್ ಹೇಳಿಕೆ ನೀಡಿದ್ದರು. ಕೊನೆಗೂ ಈಗ ಅವರ ಮದುವೆಯ ಬಗ್ಗೆ ಸಿಹಿ ಸುದ್ದಿ ಸಿಕ್ಕಿದೆ. ಸದ್ಯದಲ್ಲೇ ಪ್ರಭಾಸ್ ಮದುವೆ ಆಗಲಿದ್ದಾರೆ ಎಂದು ಕುಟುಂಬದ ಸದಸ್ಯರು ಹೇಳಿಕೊಂಡಿದ್ದಾರೆ.

    ಪ್ರಭಾಸ್ ಪಾಲಕರು ಈಗಾಗಲೇ ಹುಡುಗಿಯನ್ನು ಗೊತ್ತು ಮಾಡಿದ್ದು, ಮನೆಯವರು ಆಯ್ಕೆ ಮಾಡಿದ ಹುಡುಗಿಯನ್ನೇ ಅವರು ಮದುವೆ ಆಗಲಿದ್ದಾರಂತೆ. ಹುಡುಗಿ ಸಿನಿಮಾ ರಂಗದವರು ಅಲ್ಲ ಎನ್ನುವ ಸುಳಿವನ್ನೂ ಅವರು ನೀಡಿದ್ದಾರೆ. ಹಾಗಾಗಿ ಪ್ರಭಾಸ್ ಮತ್ತು ಹಲವು ನಟಿಯರ ಸಂಬಂಧದ ಬಗೆಗಿನ ಗಾಸಿಪ್ ಗೂ ಕೂಡ ಅವರು ತೆರೆ ಎಳೆದಿದ್ದಾರೆ. ಸಿನಿಮಾ ರಂಗಕ್ಕೆ ಸಂಬಂಧವೇ ಪಡದ ಹುಡುಗಿಯೊಂದಿಗೆ ಪ್ರಭಾಸ್ ಸಪ್ತಪದಿ ತುಳಿಯಲಿದ್ದಾರೆ. ಇದನ್ನೂ ಓದಿ: ನಾಲ್ಕು ಕೈ- ನಾಲ್ಕು ಕಾಲು ಇರುವ ಮಗುವಿನ ಶಸ್ತ್ರ ಚಿಕಿತ್ಸೆಗೆ ನೆರವಾದ ಸೋನು ಸೂದ್

    ಪ್ರಭಾಸ್ ಮತ್ತು ಹಲವು ನಟಿಯರ ಲವ್ವಿ ಡವ್ವಿ ಕಥೆಗಳು ತೆಲುಗು ಸಿನಿಮಾ ರಂಗದಲ್ಲಿ ಹರಿದಾಡುತ್ತಿದ್ದವು. ಅದರಲ್ಲೂ ಅನುಷ್ಕಾ ಜೊತೆ ಪ್ರಭಾಸ್ ಮದುವೆ ಆಗಲಿದ್ದಾರೆ ಎನ್ನುವ ಗಾಸಿಪ್ ಕೂಡ ಇತ್ತು. ಸಿನಿಮಾ ರಂಗದವರನ್ನೇ ಪ್ರಭಾಸ್ ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಇದೆಲ್ಲ ಪ್ರಶ್ನೆಗೂ ಉತ್ತರ ಸಿಕ್ಕಿದ್ದು, ಈ ವರ್ಷದ ಒಳಗೆ ಪ್ರಭಾಸ್ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ವತಃ ಪ್ರಭಾಸ್ ಅಭಿಮಾನಿಗಳ ಸಂಘದ ಅಧ್ಯಕ್ಷ ಕೂಡ ಇದನ್ನು ಖಚಿತ ಪಡಿಸಿದ್ದಾರೆ.

  • Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ

    Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ

    ತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅಗಲಿ ಜೂನ್ 14ಕ್ಕೆ ಒಂದು ವರ್ಷ ತುಂಬುತ್ತದೆ. ಅಗಲಿದ ನಟನ ನೆನಪಿಗೆ ಒಂದು ವಾರ ಮುಂಚೆಯೇ ಅವರ ಕುಟುಂಬದವರು ಮತ್ತು ಆಪ್ತರು, ಸ್ನೇಹಿತರು ಹಾಗೂ ಅಭಿಮಾನಿಗಳು ಇಂದು ಮೊದಲ ವರ್ಷದ ಪುಣ್ಯತಿಥಿಯನ್ನು ವಿಜಯ್ ಹುಟ್ಟೂರು ಪಂಚನಹಳ್ಳಿಯಲ್ಲಿ ನೆರವೇರಿಸಿದರು. ಇದನ್ನೂ ಓದಿ:`ಜವಾನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶಾರುಖ್ ಖಾನ್ ಎಂಟ್ರಿ

    ಮೊದಲ ವರ್ಷದ ಪುಣ್ಯಸ್ಮರಣೆಯ ದಿನದಂದು ವಿಜಯ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಲಾಗಿದೆ. ವಿಜಯ್ ಸಹೋದರರಾದ ಬಿ.ವೀರೂಪಾಕ್ಷ ಮತ್ತು ಸಿದ್ದೇಶಕುಮಾರ್ ಸಹೋದರನ ಸುಂದರ ಮೂರ್ತಿಯನ್ನು ಅರ್ಥಗರ್ಭಿತವಾಗಿ ತಯಾರಿಸಿದ್ದು, ಇಂದು ಆ ಪುತ್ಥಳಿ ಪಂಚನಹಳ್ಳಿಯ ವಿಜಯ್ ಸಮಾಧಿ ಸ್ಥಳದಲ್ಲಿ ಅನಾವರಣಗೊಂಡಿದೆ. ಇದನ್ನೂ ಓದಿ : ನಿತ್ಯಾನಂದ ಕುರಿತು ಸಾಕ್ಷ್ಯಚಿತ್ರ : ದೇವಮಾನವನ ನಿಜಬಣ್ಣ ಬಟಾಬಯಲು

    ವಿಜಯ್ ಅವರ ಪ್ರಥಮ ಪುಣ್ಯಸ್ಮರಣೆಯಲ್ಲಿ ವಿಜಯ್ ಅವರ ಪರಮಾಪ್ತ ಸ್ನೇಹಿತರಾದ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ, ನಿರ್ದೇಶಕ ವೀರೂ ಮಲ್ಲಣ್ಣ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಕಳೆದ ವರ್ಷ ವಿಜಯ್ ರಸ್ತೆ ಅಪಘಾತದಲ್ಲಿ ನಿಧನಹೊಂದಿದ್ದರು. ಅತೀ ಚಿಕ್ಕ ವಯಸ್ಸಿನ ಪ್ರತಿಭಾವಂತ ನಟನನ್ನು ಕಳೆದುಕೊಂಡ ಸಿನಿಮಾ ರಂಗ ಬಡವಾಗಿತ್ತು.