Tag: actor

  • ಹಾಸ್ಯನಟ ರಾಜು ಶ್ರೀವಾಸ್ತವ್‌ ಆರೋಗ್ಯ ಸ್ಥಿತಿ ಚಿಂತಾಜನಕ

    ಹಾಸ್ಯನಟ ರಾಜು ಶ್ರೀವಾಸ್ತವ್‌ ಆರೋಗ್ಯ ಸ್ಥಿತಿ ಚಿಂತಾಜನಕ

    `ದಿ ಗ್ರೇಟ್ ಇಂಡಿಯನ್ ಲಾಪ್ಟರ್ ಚಾಲೆಂಜ್’ ಖ್ಯಾತಿಯ ಹಾಸ್ಯ ನಟ ರಾಜು ಶ್ರೀವಾಸ್ತವ್‌ಗೆ  ಹೃದಯಾಘಾತವಾದ ನಂತರ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಅವರ ಸದ್ಯದ ಆರೋಗ್ಯದ ಸ್ಥಿತಿ ಗಂಭೀರವಾಗಿದೆ.

    ವಿಭಿನ್ನ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ಜನಪ್ರಿಯ ಹಾಸ್ಯ ನಟ ರಾಜು ಶ್ರೀವಾಸ್ತವ್ ಅವರಿಗೆ ಹೃದಯಾಘಾತವಾಗಿರುವ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಮ್‌ನಲ್ಲಿ ಅವರು ಕಸರತ್ತು ನಡೆಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಅವರು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ನಟ ರಾಜು ಅವರನ್ನು ಇರಿಸಲಾಗಿತ್ತಿದ್ದು, ಸದ್ಯ ಆರೋಗ್ಯದ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ. ಡಾ. ನಿತೀಶ್ ನಾಯ್ಕ್ ನೇತೃತ್ವದಲ್ಲಿ ರಾಜು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ- ಸ್ಪೂರ್ತಿ ಗೌಡ ಲವ್ವಿ ಡವ್ವಿ

    ಕಳೆದ ಹಿಂದಿನ ದಿನ ಎಂದಿನಂತೆ ದೆಹಲಿಯಲ್ಲಿರುವ ಜಿಮ್‌ನಲ್ಲಿ ರಾಜು ಅವರು ವರ್ಕೌಟ್ ಮಾಡುತ್ತಿದ್ದರು. ಅವರಿಗೆ ಏನೋ ಸರಿ ಇಲ್ಲ ಎನಿಸಿದೆ. ಆ ಸಂದರ್ಭದಲ್ಲೇ ರಾಜು ನೆಲಕ್ಕೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇದೀಗ ಅವರು ಬೇಗ ಗುಣಮುಖರಾಗಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಒಂದು ಹುಡುಗಿ ನಿಮ್ಮೊಂದಿಗೆ ಸೆಕ್ಸ್ ಮಾಡಬೇಕು ಅಂದ್ರೆ..? – ಶಕ್ತಿಮಾನ್ ಖ್ಯಾತಿಯ ಮುಖೇಶ್ ವಿವಾದಾತ್ಮಕ ಹೇಳಿಕೆ

    ಒಂದು ಹುಡುಗಿ ನಿಮ್ಮೊಂದಿಗೆ ಸೆಕ್ಸ್ ಮಾಡಬೇಕು ಅಂದ್ರೆ..? – ಶಕ್ತಿಮಾನ್ ಖ್ಯಾತಿಯ ಮುಖೇಶ್ ವಿವಾದಾತ್ಮಕ ಹೇಳಿಕೆ

    ನವದೆಹಲಿ: ಮಹಾಭಾರತ ಸೀರಿಯಲ್‌ನಲ್ಲಿ ಭೀಷ್ಮನ ಪಾತ್ರ ನಿರ್ವಹಿಸಿದ್ದ ಶಕ್ತಿಮಾನ್ ಖ್ಯಾತಿಯ ನಟ ಮುಖೇಶ್ ಖನ್ನಾ ಇದೀಗ ಹೆಣ್ಣುಮಕ್ಕಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಭಾರೀ ಟೀಕೆಗೆ ಗುರಿಯಾಗಿದ್ದಾರೆ.

    `ಕ್ಯಾ ಆಪ್ಕೋ ಭಿ ಐಸಿ ಲಡ್ಕಿಯಾ ಲುಭಾತಿ ಹೈ’ ಶೀರ್ಷಿಕೆಯ ವೀಡಿಯೋವೊಂದರಲ್ಲಿ ಮಹಿಳೆಯರ ಖಾಸಗಿ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಲ್ಲೆಡೆ ಆಕ್ಷೇಪ ವ್ಯಕ್ತವಾಗಿದೆ. ಇದನ್ನೂ ಓದಿ: ಗಂಡ ತೀರಿಕೊಂಡ ಬಳಿಕ ಮತ್ತೊಬ್ಬನ ಸಂಗ, ಅಕ್ರಮ ಸಂಬಂಧ ವಿರೋಧಿಸಿದಕ್ಕೆ ಮಗನನ್ನೇ ಕೊಂದ ತಾಯಿ

    ವೀಡಿಯೋದಲ್ಲಿ ಶಕ್ತಿಮಾನ್ ಮುಖೇಶ್ ಹೇಳಿದ್ದೇನು?
    ಯಾರಾದರೂ ಹುಡುಗಿ ನಾನು ನಿಮ್ಮೊಂದಿಗೆ ಸೆಕ್ಸ್ ಮಾಡಲು ಬಯಸುತ್ತೇನೆ ಎಂದು ಆಮಿಷ ಒಡ್ಡಿದರೆ, ಆ ಹುಡುಗಿ ಲೈಂಗಿಕ ಕಾರ್ಯಕರ್ತೆಗೆ ಸಮ. ಏಕೆಂದರೆ ಸುಸಂಸ್ಕೃತ ಸಮಾಜಕ್ಕೆ ಸೇರಿದ ಹುಡುಗಿ ಎಂದಿಗೂ ಅಂತಹ ವಿಷಯಗಳನ್ನು ಮಾತನಾಡುವುದಿಲ್ಲ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್‍ಗೆ ಕರ್ನಾಟಕದ ಸಿಎಂಗಳೆಂದರೆ ಕೈ ಗೊಂಬೆ ಇದ್ದಹಾಗೆ ಆಡಿಸಿಯೂ ನೋಡ್ತಾರೆ, ಬೀಳಿಸಿಯೂ ನೋಡ್ತಾರೆ: ಕಾಂಗ್ರೆಸ್

    1997ರಿಂದ 2005ರ ವರೆಗೆ ಪ್ರಸಾರವಾದ ಶಕ್ತಿಮಾನ್ ಧಾರಾವಾಹಿಯಲ್ಲಿ ಸೂಪರ್ ಹೀರೋ ಆಗಿ ಕಾಣಿಸಿಕೊಂಡಿದ್ದ ಶಕ್ತಿಮಾನ್ ಖ್ಯಾತಿಯ ಮುಖೇಶ್ ಕನ್ನಾ ಇಂದು ಭಾರೀ ಟೀಕೆಗಳಿಗೆ ಒಳಗಾಗಿದ್ದಾರೆ. ಹಿಂದಿ ಚಿತ್ರರಂಗದ ಅನೇಕ ದಿಗ್ಗಜರೂ ಈ ಹೇಳಿಕೆ ವಿರುದ್ಧ ಸಿಡಿದೆದ್ದಿದ್ದಾರೆ. `ಲಿಪ್‌ಸ್ಟಿಕ್ ಅಂಡರ್ ಮೈ ಬುರ್ಕಾ’ಚಿತ್ರದ ರತ್ನ ಪಾಠಕ್ ಶಾ ಸಹ ಮುಖೇಶ್ ವಿರುದ್ಧ ಕಿಡಿ ಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪತಿ ಮಾಡಿದ ಎಡವಟ್ಟು: ನಯನತಾರಾ ಆಸ್ಪತ್ರೆಗೆ ದಾಖಲು

    ಪತಿ ಮಾಡಿದ ಎಡವಟ್ಟು: ನಯನತಾರಾ ಆಸ್ಪತ್ರೆಗೆ ದಾಖಲು

    ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತೆ ಸುದ್ದಿಯಲ್ಲಿದ್ದಾರೆ. ಮದುವೆ ಆಗಿ ಕೆಲವೇ ತಿಂಗಳಿಗೆ ನಯನತಾರಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪತಿ ಮಾಡಿರುವ ಎಡವಟ್ಟು ಈಗ ನಯನತಾರಾ ಆಸ್ಪತ್ರೆಗೆ ದಾಖಲಾಗುವ ಹಾಗೆ ಮಾಡಿದೆ. ಅಷ್ಟಕ್ಕೂ ಆಗಿದ್ದೇನು.

    ನವ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಒಂದಲ್ಲಾ ಒಂದು ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ನಯನತಾರಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಪತಿ ವಿಘ್ನೇಶ್ ಮಾಡಿದ ಕೆಲಸದಿಂದ ನಯನ ಆಸ್ಪತ್ರೆ ಸೇರುವಂತಾಗಿದೆ. ಸದ್ಯ ಈ ವಿಚಾರ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: `ಬ್ರಹ್ಮಾಸ್ತ್ರ’ ಚಿತ್ರ ರಿಲೀಸ್ ಬೆನ್ನಲ್ಲೇ ಇಟಲಿಗೆ ಹಾರಿದ ರಣ್‌ಬೀರ್ ಕಪೂರ್ ದಂಪತಿ

    ನಯನತಾರಾ ಮೇಲಿನ ಪ್ರೀತಿಯಿಂದ ಅವರ ಪತಿ ವಿಘ್ನೇಶ್ ಶಿವನ್ ವೀಕೆಂಡ್ ಸ್ಪೆಷಲ್ ಅಡುಗೆ ಮಾಡಿದ್ದಾರೆ. ಇದನ್ನು ತಿಂದ ನಯನತಾರಾ ಆರೋಗ್ಯ ಹದಗೆಟ್ಟಿದೆಯಂತೆ. ಪತಿ ಮಾಡಿದ ಅಡುಗೆ ನಯನತಾರಾ ಫುಲ್ ವಾಂತಿ ಮಾಡಿಕೊಂಡಿದ್ದಾರಂತೆ. ಇದನ್ನೂ ಓದಿ: ನಿತಿನ್‌ಗೆ ನಾಯಕಿಯಾಗಬೇಕಿದ್ದ ರಶ್ಮಿಕಾ ಜಾಗಕ್ಕೆ ಕೃತಿ ಶೆಟ್ಟಿ ಎಂಟ್ರಿ

    ವೈದ್ಯರು ನಯನತಾರಾಳನ್ನು ಕೆಲ ಗಂಟೆಗಳ ಕಾಲ ನಿಗಾದಲ್ಲಿಟ್ಟು ಚೇತರಿಸಿಕೊಂಡ ಬಳಿಕ ಡಿಸ್ಚಾರ್ಜ್ ಮಾಡಿದ್ದಾರೆ. ಈಗಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗಿದ್ದಾರಂತೆ. ಆದರೆ ಈ ಸುದ್ದಿಗೆ ನಯನತಾರಾ ಅಥವಾ ವಿಘ್ನೇಶ್ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಅಪ್ಪು ಸ್ಮರಣಾರ್ಥ ಮೈಸೂರಿನ ಮಿಷನ್ ಆಸ್ಪತ್ರೆಗೆ ಸುಸಜ್ಜಿತ ಅಂಬುಲೆನ್ಸ್ ಕೊಡುಗೆ ನೀಡಿದ ನಟ ಪ್ರಕಾಶ್ ರೈ

    ಅಪ್ಪು ಸ್ಮರಣಾರ್ಥ ಮೈಸೂರಿನ ಮಿಷನ್ ಆಸ್ಪತ್ರೆಗೆ ಸುಸಜ್ಜಿತ ಅಂಬುಲೆನ್ಸ್ ಕೊಡುಗೆ ನೀಡಿದ ನಟ ಪ್ರಕಾಶ್ ರೈ

    – ಅಂಬುಲೆನ್ಸ್ ಗೆ ‘ಅಪ್ಪು ಎಕ್ಸ್ ಪ್ರೆಸ್’ ಎಂದು ಹೆಸರಿಟ್ಟಿದ್ದೇವೆ
    – ರಾಜ್ಯಾದ್ಯಂತ ಸೇವೆ ನೀಡಲಾಗುತ್ತದೆ

    ಮೈಸೂರು: ನಟ ದಿ.ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ನಟ ಪ್ರಕಾಶ್ ರೈ ಅವರು ಸಾಮಾಜಿಕ ಸೇವಾ ಕಾರ್ಯ ಆರಂಭಿಸಿದ್ದಾರೆ. ಮೈಸೂರಿನ ಮಿಷನ್ ಆಸ್ಪತ್ರೆಗೆ ಸುಸಜ್ಜಿತ ಅಂಬುಲೆನ್ಸ್ ಕೊಡುಗೆಯಾಗಿ ನೀಡಿದ್ದಾರೆ.

    ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ, ಅಪ್ಪು ಎಂದೆಂದಿಗೂ ಇರುವ ಕಥಾನಾಯಕ. ಅಪ್ಪು ನಮ್ಮನ್ನು ಅಗಲಿದ್ದಾಗ ಇಡೀ ರಾಜ್ಯಕ್ಕೆ ಅನಾಥ ಪ್ರಜ್ಞೆ ಕಾಡಿತು. ಮಾತು ಹೊರಡದ ಮೌನ ನನ್ನನ್ನು ಕೂಡ ಆವರಿಸಿತ್ತು. ಹೀಗಾಗಿ ಇದುವರೆಗೂ ಅಪ್ಪು ಬಗ್ಗೆ ನಾನು ಎಲ್ಲಿಯೂ ಮಾತಾಡಿರಲಿಲ್ಲ ಎಂದರು.  ಇದನ್ನೂ ಓದಿ: ನವೆಂಬರ್ 1ಕ್ಕೆ ಪುನೀತ್ ರಾಜ್ ಕುಮಾರ್ ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ

    ಯಾರು ಯಾರಿಗೂ ಸಮಾಧಾನ ಹೇಳುವ ಸ್ಥಿತಿಯಲ್ಲಿ ಅಪ್ಪು ಅಗಲಿದ್ದಾಗ ಇರಲಿಲ್ಲ. ಮತ್ತೊಬ್ಬ ಅಪ್ಪು ಹುಟ್ಟಿ ಬರುತ್ತಾನೋ ಗೊತ್ತಿಲ್ಲ. ಶ್ರೀಮಂತರ ಮನೆಯಲ್ಲಿ ಹುಟ್ಟಿದ ಅಪ್ಪುಗೆ ಇದ್ದ ಸಾಮಾಜಿಕ ಬದ್ಧತೆ ಬಹಳ ಅಭೂತಪೂರ್ವವಾದದ್ದು. ಹೊಸ ಪ್ರತಿಭೆಗೆ ಅವಕಾಶ ಕೊಡಲು ಸಣ್ಣಸಣ್ಣ ಸಿನಿಮಾ ಮಾಡಬೇಕು ಎಂದು ಸಲಹೆ ಕೊಟ್ಟಿದ್ದೆ. ಆ ಸಲಹೆಯನ್ನು ಅಪ್ಪು ಅವರು ಗಂಭೀರವಾಗಿ ಪರಿಗಣಿಸಿ ಸಣ್ಣ ಸಣ್ಣ ಸಿನಿಮಾ ನಿರ್ಮಾಣಕ್ಕೆ ಮುಂದಾದರು ಎಂದು ಹಳೆಯ ನೆನಪನ್ನು ಮೆಲುಕು ಹಾಕಿಕೊಂಡರು.

    ಕೋವಿಡ್ ಸಂದರ್ಭದಲ್ಲಿ ಪ್ರಕಾಶ್ ರಾಜ್ ಫೌಂಡೇಶನ್ ಗೆ ರಾಜ್ ಫೌಂಡೇಶನ್ ನಿಂದ ಅಪ್ಪು ಅವರು 2 ಲಕ್ಷ ಕೊಟ್ಟಿದ್ರು. ಅಪ್ಪು ಇದನ್ನು ಎಲ್ಲೂ ಹೇಳಲಿಲ್ಲ. 10 ನಿಮಿಷ ಮುಂಚೆ ಅಪ್ಪು ಗೆ ಅಂಬುಲೆನ್ಸ್ ಸಿಕ್ಕಿದ್ದರೆ ಅಪ್ಪು ಬದುಕುತ್ತಿದ್ದರೇನೋ ಅಂತಾ ನನಗೆ ಅನ್ನಿಸಿತ್ತು. ಈ ಕಾರಣ ಅಂಬುಲೆನ್ಸ್ ವ್ಯವಸ್ಥೆ ಎಲ್ಲಾ ಕಡೆ ಮಾಡಲು ಮುಂದಾಗಿದ್ದೇನೆ. ‘ಅಪ್ಪು ಎಕ್ಸ್‍ಪ್ರೆಸ್’ ಅಂತಾ ಅಂಬುಲೆನ್ಸ್ ಗೆ ಹೆಸರು ಇಟ್ಟಿದ್ದೇವೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅಂಬುಲೆನ್ಸ್ ಕೊಡುತ್ತೇವೆ. ಇನ್ನೊಂದು ವರ್ಷದಲ್ಲಿ ಈ ಕೆಲಸ ಆಗುತ್ತದೆ. ಜನರು, ಆತ್ಮೀಯರ ಬಳಿ ಇದಕ್ಕಾಗಿ ಹಣ ಕೇಳುತ್ತೇನೆ. ಅಷ್ಟು ಹಣ ಸಂಗ್ರಹವಾಗದೆ ಇದ್ದರೂ ನಾನೇ ದುಡಿದ ಈ ಕೆಲಸ ಸಂಪೂರ್ಣ ಮಾಡುತ್ತೇನೆ ಎಂದು ನಟ ವಿವರಿಸಿದರು.

    ಇದೇ ವೇಳೆ ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ನಿರ್ದೇಶಕ ಆನಂದರಾಮ್ ಮಾತನಾಡಿ, ಅಂಬುಲೆನ್ಸ್‍ಗೆ ರಾಜಕುಮಾರ್ ಚಿತ್ರದ ಅಪ್ಪು ಅವರ ಚಿತ್ರವನ್ನು ಬಳಸಿಕೊಳ್ಳಲಾಗಿದೆ. ಇಡೀ ರಾಜ್ಯಾದ್ಯಂತ ಇಂತಹ ಅಂಬುಲೆನ್ಸ್ ಗಳನ್ನು ನೀಡಲಾಗುತ್ತದೆ. ಪ್ರಕಾಶ್ ರಾಜ್ ಫೌಂಡೇಶನ್ ನಿಂದ ಅಪ್ಪು ಅವರ ಸ್ಮರಣೆ ಆಗುತ್ತಿದೆ. ಅಪ್ಪು ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗುತ್ತಿರಲಿಲ್ಲ. 10 ವರ್ಷದ ಹಿಂದೆ ನಮ್ಮ ತಂದೆಯ ಹೃದಯದ ಶಸ್ತ್ರ ಚಿಕಿತ್ಸೆಗೆ ಅಪ್ಪು ಅವರು ಹಣ ಕೊಟ್ಟರು ಎಂದು ಮೊನ್ನೆ ಹೋಟೆಲ್ ಸಪ್ಲೈಯರ್ ಒಬ್ಬ ಹೇಳಿದ. ಎಲ್ಲಿಯ ಹೋಟೆಲ್ ಸಪ್ಲೈಯರ್ ಎಲ್ಲಿಯಾ ಅಪ್ಪು, ಒಳ್ಳೆ ಕೆಲಸ ಮಾಡುವವರನ್ನೂ ಟ್ರೋಲ್ ಮಾಡಿಕೊಂಡು ತಿರುಗಾಡುವ ಸಮಾಜದಲ್ಲಿ ಅಪ್ಪು ಅವರು ಸದ್ದಿಲ್ಲದೆ ಸಾಮಾಜಿಕವಾಗಿ ಜನರಿಗೆ ನೆರವಾದರು ಎಂದು ಹೇಳುತ್ತಾ ಅಪ್ಪುವನ್ನು ಕೊಂಡಾಡಿದರು.

    Live Tv
    [brid partner=56869869 player=32851 video=960834 autoplay=true]

  • ಹಿರಿಯ ನಟ ಮಿಥಿಲೇಶ್ ಚತುರ್ವೇದಿ ವಿಧಿವಶ

    ಹಿರಿಯ ನಟ ಮಿಥಿಲೇಶ್ ಚತುರ್ವೇದಿ ವಿಧಿವಶ

    ಬಾಲಿವುಡ್ ಹಿರಿಯ ನಟ ಮಿಥಿಲೇಶ್ ಚತುರ್ವೇದಿ ನಿಧನರಾಗಿದ್ದಾರೆ. ಹೃದಯ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ನಟ ಚಿಕಿತ್ಸೆ ಫಲಕಾರಿಯಾಗದೇ, ಇದೀಗ ಇಹಲೋಕ ತ್ಯಜಿಸಿದ್ದಾರೆ.

    ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಛಾಪೂ ಮೂಡಿಸಿರುವ ನಟ ಮಿಥಿಲೇಶ್ ನಿನ್ನೆ ಆಗಸ್ಟ್ 3ರಂದು ಇಹಲೋಕ ತ್ಯಜಿಸಿದ್ದಾರೆ. ಹೃದಯ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಕೆಲ ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ನಟ ಮಿಥಿಲೇಶ್ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.ಇದನ್ನೂ ಓದಿ:‘ಆಪರೇಷನ್ ಲಂಡನ್ ಕೆಫೆ’ ಚಿತ್ರತಂಡದಿಂದ ಮೇಘಾ ಶೆಟ್ಟಿ ಹುಟ್ಟು ಹಬ್ಬಕ್ಕೆ ಗಿಫ್ಟ್

    ಮಿಥಿಲೇಶ್ ಚತುರ್ವೇದಿ ದಶಕಗಳಿಂದ ಮನರಂಜನಾ ಕ್ಷೇತ್ರದಲ್ಲಿದ್ದಾರೆ. ಅವರು ಹೃತಿಕ್ ರೋಷನ್ ಜೊತೆ `ಕೋಯಿ ಮಿಲ್ ಗಯಾ’, ಸನ್ನಿ ಡಿಯೋಲ್ ಜೊತೆ ಗದರ್ ಏಕ್ ಪ್ರೇಮ್ ಕಥಾ, ಸತ್ಯ, ಬಂಟಿ ಔರ್ ಬಬ್ಲಿ, ಕ್ರಿಶ್, ತಾಲ್, ರೆಡಿ, ಅಶೋಕ ಮತ್ತು ಫಿಜಾ ಸೇರಿದಂತೆ ಕೆಲವು ದೊಡ್ಡ ಬಾಲಿವುಡ್ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇದೀಗ ನಟ ಮಿಥಿಲೇಶ್ ಸಾವಿಗೆ ಚಿತ್ರರಂಗದ ಸ್ನೇಹಿತರು, ಆತ್ಮೀಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹರೀಶ್ ರಾಜ್ ಸಿನಿಪಯಣಕ್ಕೆ ಬೆಳ್ಳಿಹಬ್ಬದ ಸಂಭ್ರಮ: ಅಭಿಮಾನಿಗಳಿಗೆ ಋಣಿ ಎಂದ ನಟ

    ಹರೀಶ್ ರಾಜ್ ಸಿನಿಪಯಣಕ್ಕೆ ಬೆಳ್ಳಿಹಬ್ಬದ ಸಂಭ್ರಮ: ಅಭಿಮಾನಿಗಳಿಗೆ ಋಣಿ ಎಂದ ನಟ

    ಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ನಟ ಹರೀಶ್ ರಾಜ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷಗಳು ಕಳೆದಿದೆ.  ತಮ್ಮ ಸಿನಿಪಯಣಕ್ಕೆ 25 ವಸಂತಗಳು ಪೂರೈಸಿರುವ ಈ ಹೊತ್ತಿನಲ್ಲಿ ಹರೀಶ್ ರಾಜ್ ಚಿಕ್ಕ ಸಮಾರಂಭವೊಂದನ್ನು ಆಯೋಜಿಸಿದ್ದರು. ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ನಟ, ನಿರ್ದೇಶಕ ಸುನೀಲ್ ಪುರಾಣಿಕ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ಮಾಪಕ ಮಧುಸೂದನ್ ಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

    1997 ರಲ್ಲಿ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದಲ್ಲಿ ಸೌಂದರ್ಯ ಅವರು ನಟಿಸಿದ್ದ”ದೋಣಿ ಸಾಗಲಿ” ಚಿತ್ರದ ಮೂಲಕ ನನ್ನ ಸಿನಿಪಯಣ ಆರಂಭವಾಯಿತು. ಅದೇ ವರ್ಷ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ನಿರ್ದೇಶಿಸಿದ್ದ “ತಾಯಿ ಸಾಹೇಬ” ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಅದರಲ್ಲಿ ನಾನು ಜಯಮಾಲ ಅವರ ಮಗನ ಪಾತ್ರ ನಿರ್ವಹಣೆ ಮಾಡಿದ್ದೆ.  ಇಂದಿನ ಸಮಾರಂಭಕ್ಕೆ ನನ್ನ ಮೊದಲ ಸಿನಿಮಾ ನಿರ್ಮಾಪಕರಾದ ಮಧುಸೂದನ್ ಗೌಡ ಅವರು, ಖ್ಯಾತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಸರ್, ಸುನೀಲ್ ಪುರಾಣಿಕ್ ಹಾಗೂ ಭಾ.ಮ.ಹರೀಶ್  ಸರ್ ಬಂದಿರುವುದು ತುಂಬಾ ಖುಷಿಯಾಗಿದೆ. ಅವರಿಗೆ ಅನಂತ ಧನ್ಯವಾದ. ನಾನು, ಸುನೀಲ್ ಪುರಾಣಿಕ್ ಅವರು ಫಣಿ ರಾಮಚಂದ್ರ ನಿರ್ದೇಶನದ “ದಂಡ ಪಿಂಡಗಳು” ಧಾರಾವಾಹಿಯಲ್ಲಿ ಜೊತೆಗೆ ನಟಿಸಿದ್ದೆವು. ಇದೆಲ್ಲಾ ನೆನಪಿಸಿಕೊಂಡರೆ ಇಷ್ಟು ಬೇಗ 25 ವರ್ಷಗಳು ಕಳೆದು ಹೋಯಿತಾ? ಅನಿಸುತ್ತದೆ.  ಈ ಇಪ್ಪತ್ತೈದು ವರ್ಷಗಳಲ್ಲಿ 60 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಾಡಿದ್ದೇನೆ. ಗಿರೀಶ್ ಕಾಸರವಳ್ಳಿ, ಗಿರೀಶ್ ಕಾರ್ನಾಡ್, ರಾಜೇಂದ್ರ ಸಿಂಗ್ ಬಾಬು ಅವರಂತಹ ಶ್ರೇಷ್ಠ ನಿರ್ದೇಶಕರ ಚಿತ್ರಗಳಲ್ಲಿ ನಟಿಸಿದ್ದೇನೆ.

    ಬಿಗ್ ಬಾಸ್ ನನಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದೆ. ನಾನು ಏನಾದರೂ ಈ ರಂಗದಲ್ಲಿ ಸಾಧನೆ ಮಾಡಿದ್ದೀನಿ ಅಂದರೆ ಅದಕ್ಕೆ ಕಾರಣ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಕಲಾವಿದರು ಹಾಗೂ ಮಾಧ್ಯಮದವರು. ಇಡೀ ಚಿತ್ರರಂಗಕ್ಕೆ ನಾನು ಚಿರ ಋಣಿ ಎಂದರು ಹರೀಶ್ ರಾಜ್. ಇದನ್ನೂ ಓದಿ:ಅಫೇರ್ ಆರೋಪ ಬೆನ್ನಲ್ಲೇ ಧಿಡೀರ್ ಸಂಭಾವನೆ ಹೆಚ್ಚಿಸಿಕೊಂಡ ಪವಿತ್ರಾ ಲೋಕೇಶ್

    ಸ್ನೇಹಿತರೊಬ್ಬರ ಮೂಲಕ ನನಗೆ ಹರೀಶ್ ರಾಜ್ ಪರಿಚಯವಾದರು. ರಬಕವಿಯಲ್ಲಿ “ತಾಯಿಸಾಹೇಬ” ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಜಯಮಾಲ, ಶಿವರಾಮಣ್ಣ ಭಾಗವಹಿಸಿದ್ದರು. ತುರ್ತುಕಾರ್ಯದ ನಿಮಿತ್ತ ಶಿವರಾಮಣ್ಣ ಬೆಂಗಳೂರಿಗೆ ತೆರಳಬೇಕಾಯಿತು. ಆಗ ತಕ್ಷಣ ಹರೀಶ್ ರಾಜ್ ಅವರಿಗೆ ಫೋನ್ ಮಾಡಿ, ನಾಳೆ ನಿಮ್ಮ ಪಾತ್ರದ ಚಿತ್ರೀಕರಣವಿದೆ. ರಾತ್ರಿಯೇ ಹೊರಟು ಬನ್ನಿ ಎಂದೆ. ಬೆಳಗ್ಗೆ ಬಂದರು. ಯಾವುದೇ ಆಯಾಸವಿಲ್ಲದೆ ಅಂದಿನ ಚಿತ್ರೀಕರಣದಲ್ಲಿ ಲವಲವಿಕೆಯಿಂದ ಭಾಗವಹಿಸಿ, ಎಲ್ಲರ ಮೆಚ್ಚುಗೆ ಪಡೆದರು. ನಂತರ ನನ್ನ “ದ್ವೀಪ” ಚಿತ್ರದಲ್ಲೂ ಅಭಿನಯಿಸಿದ್ದರು. ಆ ಚಿತ್ರದ ಅಭಿನಯಕ್ಕಾಗಿ ಇವರು ರಾಷ್ಟ್ರೀಯ ಪ್ರಶಸ್ತಿ ರೇಸ್ ನಲ್ಲಿ ಇದ್ದರು ಎಂದು ನನಗೆ ನಿಧಾನವಾಗಿ ತಿಳಿಯಿತು. ಒಟ್ಟನಲ್ಲಿ ಹರೀಶ್ ರಾಜ್ ಉತ್ತಮ ನಟ.‌ ಮುಂದೆ ಸಹ ಅವರಿಗೆ ಒಳ್ಳೆಯ ಅವಕಾಶಗಳು ಸಿಗಲಿ ಎಂದು ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹಾರೈಸಿದರು.

    ತಮ್ಮ ಹರೀಶ್ ರಾಜ್ ಒಡನಾಟದ ಬಗ್ಗೆ ಸುನೀಲ್ ಪುರಾಣಿಕ್ ನೆನಪಿಸಿಕೊಂಡರು.  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್  ಶುಭಾಶಯ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • Exclusive-ಚಂದನ್ ಹಲ್ಲೆಗೆ ನಾನು ನ್ಯಾಯ ಕೇಳುತ್ತೇನೆ : ನಟಿ, ಚಂದನ್ ಪತ್ನಿ ಕವಿತಾ ಗೌಡ

    Exclusive-ಚಂದನ್ ಹಲ್ಲೆಗೆ ನಾನು ನ್ಯಾಯ ಕೇಳುತ್ತೇನೆ : ನಟಿ, ಚಂದನ್ ಪತ್ನಿ ಕವಿತಾ ಗೌಡ

    ತಿ, ನಟ ಚಂದನ್ ಮೇಲೆ ಆಗಿರುವ ಹಲ್ಲೆಗೆ ನಾನಂತೂ ನ್ಯಾಯ ಕೇಳುತ್ತೇನೆ. ಚಂದನ್ ಬರುತ್ತಾರೋ ಇಲ್ಲವೋ ಅದಕ್ಕಾಗಿ ನಾನು ಕಾಯುವುದಿಲ್ಲ. ನನ್ನ ಪತಿ ಮೇಲಿನ ಹಲ್ಲೆ ಎನ್ನುವುದಕ್ಕಿಂತ, ಒಬ್ಬ ಕಲಾವಿದನ ಮೇಲೆ ಆಗಿರುವ ಹಲ್ಲೆಗೆ ನಾನಂತೂ ನ್ಯಾಯ ಕೇಳುತ್ತೇನೆ ಎಂದು ನಟಿಯೂ ಆಗಿರುವ ಚಂದನ್ ಪತ್ನಿ ಕವಿತಾ ಗೌಡ ಹೇಳಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಅವರು, ಈ ವಿಷಯ ನಿನ್ನೆಯಷ್ಟೇ ನನಗೆ ತಿಳಿಯಿತು ಎಂದು ತಿಳಿಸಿದ್ದಾರೆ.

    ‘ನಾನು ಯಾರಿಗೂ ಹೊಡೆದಿಲ್ಲ. ಚಿಕ್ಕ ಹುಡುಗನ ಮೇಲೆ ಕೈ ಮಾಡುವವನೂ ನಾನಲ್ಲ. ಆ ಹುಡುಗನನ್ನು ಎಡಗೈಯಿಂದ ಜಸ್ಟ್ ತಟ್ಟಿದೆ. ಅದನ್ನೇ ಹೊಡೆದ್ರು ಅಂತ ಹೇಳ್ತಿದ್ದಾರೆ ಎಂದು ಚಂದನ್ ನನಗೆ ಹೇಳಿದರು. 10 ವರ್ಷದಿಂದ ಇರುವ ನಟನನ್ನ ಅವರು ಹಾಗೆ ಟ್ರೀಟ್ ಮಾಡಿದ್ದು ಸರಿ ಅಲ್ಲ. ಮೊದಲು ಅಲ್ಲಿ ಮೂರು ಜನ ಮಾತ್ರ ಇದ್ರಂತೆ. ಆಮೇಲೆ ಎಲ್ಲರನ್ನೂ ಕರೆಸಿ ಗಲಾಟೆ ಮಾಡಿದ್ದಾರೆ. ಇದು ಸರಿಯಾದ ಕ್ರಮವಲ್ಲ’ ಎನ್ನುತ್ತಾರೆ ಕವಿತಾ ಗೌಡ. ಇದನ್ನೂ ಓದಿ:ಡಿವೋರ್ಸ್‌ ನಂತರ ಮತ್ತೆ ಒಟ್ಟಿಗೆ ನಟಿಸಲಿದ್ದಾರೆ ನಾಗಚೈತನ್ಯ- ಸಮಂತಾ

    ನಡೆದಿರೋದು ನಡೆದೋಗಿದೆ. ಆದರೂ, ಯಾರೂ ಅಲ್ಲ ಸಂಯಮ ತಗೆದುಕೊಂಡಿಲ್ಲ. ಕೆಟ್ಟದ್ದಾಗಿಯೇ ಮಾತನಾಡುತ್ತಾ ಕೇಳೋ ಸ್ವಾರಿ ಕೇಳೋ ಅಂತ ಟ್ರೀಟ್ ಮಾಡಿದ್ದಾರೆ. ಆ ವಿಡಿಯೋ ನೋಡಿ ನನಗಂತೂ ಬೇಸರವಾಯಿತು. ಕೆಲವರು ಕನ್ನಡದವರೂ ಅಲ್ಲಿದ್ದರು. ಅವರು ಯಾರೂ ಸಹಾಯಕ್ಕೆ ಬಂದಿಲ್ಲ. ನಾನೂ ತೆಲುಗು ಸೀರಿಯಲ್ ನಲ್ಲಿ ಆಕ್ಟ್ ಮಾಡಿದ್ದೀನಿ. ಆದರೆ, ಇಂತಹ ಘಟನೆಯನ್ನು ಯಾವತ್ತೂ ಕಂಡಿಲ್ಲ ಎನ್ನುವುದು ಕವಿತಾ ಗೌಡ ಮಾತು.

    Live Tv
    [brid partner=56869869 player=32851 video=960834 autoplay=true]

  • Exclusive: ನಟ ಚಂದನ್ ಕಪಾಳಮೋಕ್ಷ ಪ್ರಕರಣ ನಿನ್ನೆಯಷ್ಟೇ ನಡೆದದ್ದು, ಹಳೆಯದ್ದಲ್ಲ

    Exclusive: ನಟ ಚಂದನ್ ಕಪಾಳಮೋಕ್ಷ ಪ್ರಕರಣ ನಿನ್ನೆಯಷ್ಟೇ ನಡೆದದ್ದು, ಹಳೆಯದ್ದಲ್ಲ

    ತೆಲುಗಿನ ‘ಸಾವಿತ್ರಮ್ಮಗಾರು ಅಬ್ಬಾಯಿ’ ಧಾರಾವಾಹಿಯ ಶೂಟಿಂಗ್ ವೇಳೆ ಕನ್ನಡದ ಹೆಸರಾಂತ ಕಿರುತೆರೆ ನಟ ಚಂದನ್ ಮೇಲಿನ ಹಲ್ಲೆಗೆ ಹೊಸ ತಿರುವು ಸಿಕ್ಕಿದ್ದು, ಇದೊಂದು ಪೂರ್ವ ನಿಯೋಜಿತ ಕೃತ್ಯ ಎನ್ನಲಾಗುತ್ತಿದೆ. ಈ ಕುರಿತು ಪಬ್ಲಿಕ್ ಟಿವಿ ಜೊತೆ ವಿಶೇಷವಾಗಿ ಮಾತನಾಡಿರುವ ಅವರು, ಇದು ತಿಂಗಳು ಹಿಂದೆ ನಡೆದ ಘಟನೆಯಲ್ಲ ನಿನ್ನೆಯಷ್ಟೇ ನಡೆದದ್ದು ಎಂದು ತಿಳಿಸಿದ್ದಾರೆ.

    ‘ನಿನ್ನೆ ನನ್ನ ಕಾಲ್ ಶೀಟ್ ಇರಲಿಲ್ಲ. ಆದರೂ, ಶೂಟಿಂಗೆಗೆ ಹೋಗಿದ್ದೆ. ಅದು ನನ್ನ ವೃತ್ತಿ ಬದ್ಧತೆ ಆಗಿತ್ತು. ನನ್ನ ತಾಯಿಗೆ ಹುಷಾರಿಲ್ಲ ಎಂದರೂ, ನಾನು ಚಿತ್ರೀಕರಣದಲ್ಲಿ ಭಾಗಿ ಆಗುವ ಮೂಲಕ ಒಬ್ಬ ನಟನಾಗಿ ಮಾಡಬೇಕಾದ ಕರ್ತವ್ಯ ಮಾಡಿದೆ. ಆದರೆ, ಅವರು ಅದನ್ನು ಉಳಿಸಿಕೊಳ್ಳಲಿಲ್ಲ. ನನ್ನ ಮೇಲಿನ ಘಟನೆಯು ಪ್ರೀಪ್ಲ್ಯಾನ್ಡ್ ಅನ್ಸುತ್ತೆ. ಘಟನೆ ಏನೇ ನಡೆದಿದ್ದರೂ, ಕುಳಿತು ಮಾತನಾಡಬಹುದಿತ್ತು. ಹಾಗೆ ಮಾಡಲಿಲ್ಲ. ಎಲ್ಲರೂ ಒಟ್ಟಾಗಿ ಸೇರಿ ನನ್ನ ಮೇಲೆ ದುರ್ವರ್ತನೆ ತೋರಿದ್ದಾರೆ. ಹೊಡೆದಿದ್ದು ಸರಿ ಇಲ್ಲ ಅಂತ ಅಲ್ಲಿ ಯಾರೊಬ್ಬ ತಂತ್ರಜ್ಞರೂ ಹೇಳಿಲ್ಲ. ಎಲ್ಲರೂ ಸುಮ್ಮನೆ ನೋಡುತ್ತಿದ್ದರು’ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ ಚಂದನ್. ಇದನ್ನೂ ಓದಿ:ಡಿವೋರ್ಸ್‌ ನಂತರ ಮತ್ತೆ ಒಟ್ಟಿಗೆ ನಟಿಸಲಿದ್ದಾರೆ ನಾಗಚೈತನ್ಯ- ಸಮಂತಾ

    ‘ನಿನ್ನೆ ಶೂಟಿಂಗ್ ಸಮಯದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಬಂದು ಎದ್ದೇಳಿಸಿ ಏನೇನೋ ಮಾತನಾಡಿದ್ರು. ಹೋಗೋ ಬರ್ತೀನಿ ಅಂತ ತಳ್ಳಿದೆ ಅಷ್ಟೇ. ಆಮೇಲೆ ಆತ ಹೋಗಿ ಎಲ್ಲರನ್ನೂ ಸೇರಿಸಿ ಈ ರೀತಿ ವರ್ತಿಸಿದ್ದಾನೆ. ಧಾರಾವಾಹಿಯಲ್ಲಿ ನಟಿಸಲ್ಲ ಅಂತ ಹೇಳಿದಾಗಲೂ ಅವರೇ ನನ್ನನ್ನು ಕರೆದು ಆಕ್ಟ್ ಮಾಡಲು ಕೇಳಿಕೊಂಡಿದ್ದರು. ಹಾಗಾಗಿ ಹೋಗಿದ್ದೆ, ನಾನಾಗಿಯೇ ಅವಕಾಶ ಹುಡುಕಿಕೊಂಡು ಹೋಗಿಲ್ಲ. ಈ ಘಟನೆ ನಡೆದು ಬೆಂಗಳೂರಿಗೆ ವಾಪಸ್ ಬರಬೇಕು ಎಂದಾಗ ಮತ್ತೆ ಕಷ್ಟ ಕೊಟ್ಟರು. ಕ್ಯಾಬ್ ಬುಕ್ ಮಾಡಿಕೊಂಡು ಹೋಗೋಕೂ ಬಿಡಲಿಲ್ಲ. ರೂಮ್ ಕೊಡ್ಲಿಲ್ಲ’ ಎಂದು ಘಟನೆಯನ್ನು ವಿವರಿಸಿದರು ಚಂದನ್.

    Live Tv
    [brid partner=56869869 player=32851 video=960834 autoplay=true]

  • ನಟ ಚಂದನ್ ಮೇಲೆ ಹಲ್ಲೆ ಪ್ರಕರಣ: ನಟ ಕೊಡುವ ಸ್ಪಷ್ಟನೆ ಏನು?

    ನಟ ಚಂದನ್ ಮೇಲೆ ಹಲ್ಲೆ ಪ್ರಕರಣ: ನಟ ಕೊಡುವ ಸ್ಪಷ್ಟನೆ ಏನು?

    ತೆಲುಗಿನ ಸಾವಿತ್ರಮ್ಮಗಾರು ಅಬ್ಬಾಯಿ ಧಾರಾವಾಹಿ ಶೂಟಿಂಗ್ ವೇಳೆ ನಡೆದಿದೆ ಎನ್ನಲಾದ ಗಲಾಟೆಯ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ಒಂದು ತಿಂಗಳ ಹಿಂದೆ ನಟ ಚಂದನ್ ಮೇಲೆ ಹಲ್ಲೆ ಮಾಡುವ ಈ ವಿಡಿಯೋ ಬಗ್ಗೆ ನಾನಾ ರೀತಿಯ ಮಾತುಗಳು ಕೇಳಿ ಬಂದಿದ್ದವು. ಸ್ವತಃ ಚಂದನ್ ಅವರೇ ಧಾರಾವಾಹಿಯ ಕ್ಯಾಮೆರಾಮನ್ ಮತ್ತು  ಕ್ಯಾಮೆರಾಮನ್ ಸಹಾಯಕನಿಗೆ ಹೊಡೆದರು, ಆನಂತರ ಸೆಟ್ ನಲ್ಲಿ ಗಲಾಟೆ ನಡೆಯಿತು ಎಂದು ಹೇಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಂದನ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

    ಗಲಾಟೆ ಆಗಿದ್ದು ನಿಜ ಎಂದು ಒಪ್ಪಿಕೊಂಡಿರುವ ಅವರು ಆದರೆ, ಅಲ್ಲಿ ಹೊಡೆದಾಟ ನಡೆದಿಲ್ಲ. ಯಾರೂ ಯಾರ ಮೇಲೂ ಹಲ್ಲೆ ಮಾಡಿಲ್ಲ ಎಂದಿದ್ದಾರೆ. ‘ಈ ಘಟನೆ ನಡೆದಾಗ ನನ್ನ ತಾಯಿಯು ಅನಾರೋಗ್ಯದಲ್ಲಿದ್ದರು. ನಾನು ಟೆನ್ಷನ್ ನಲ್ಲಿದ್ದೆ. ಈ ಸಮಯದಲ್ಲಿ ಕ್ಯಾಮೆರಾಮನ್ ಸಹಾಯಕ ನನ್ನ ಸಹಾಯಕನಿಗೆ ಏರು ಧ್ವನಿಯಲ್ಲಿ ಮಾತನಾಡಿದ್ದ. ನಾನು ಆ ಹುಡುಗನಿಗೆ ಹಾಗೆ ಮಾತನಾಡುವುದು ತಪ್ಪು ಎಂದು ತಳ್ಳಿದ್ದೆ. ಇದರ ಹೊರತಾಗಿ ಅಲ್ಲಿ ಏನೂ ನಡೆದಿಲ್ಲ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇದನ್ನೂ ಓದಿ:ಮಗಳಿಗೆ ಮುದ್ದಾದ ಹೆಸರಿಟ್ಟ ಪ್ರಣಿತಾ ಸುಭಾಷ್

    ಆದರೆ, ವಿಡಿಯೋದಲ್ಲಿ ಇರುವುದು ಬೇರೆಯಾಗಿದೆ. ಶೂಟಿಂಗ್ ಸ್ಥಗಿತಗೊಳಿಸಿ ಚಂದನ್ ಅವರನ್ನು ಸುತ್ತುವರೆದಿದ್ದಾರೆ. ವಾತಾವರಣ ಬಿಸಿಯಾಗಿದೆ. ಚಂದನ್ ಮತ್ತು ಅಲ್ಲಿ ನೆರೆದಿದ್ದವರ ಮಧ್ಯ ಮಾತಿನ ಚಕಮಕಿ ಕೂಡ ನಡೆದಿದೆ. ಕ್ಷಮೆ ಕೇಳಲು ಕೆಲವರು ಚಂದನ್ ಅವರನ್ನು ಒತ್ತಾಯಿಸುತ್ತಾರೆ. ಈ ಮಧ್ಯೆ ಅಲ್ಲಿ ನಿಂತದ್ದ ಒಬ್ಬನು ಚಂದನ್ ಅವರ ಮುಖಕ್ಕೆ ಹೊಡೆಯುತ್ತಾನೆ. ಇಷ್ಟೆಲ್ಲ ವಿಡಿಯೋದಲ್ಲಿ ಸೆರೆಯಾಗಿದೆ. ಆ ವಿಡಿಯೋ ಇದೀಗ ವೈರಲ್ ಆಗಿದೆ.

    ಅಂದಹಾಗೆ ಚಂದನ್ ಅವರು ತೆಲುಗಿನ ‘ಸಾವಿತ್ರಮ್ಮಗಾರು ಅಬ್ಬಾಯಿ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಮಾತ್ರವಲ್ಲ, ಕನ್ನಡದಲ್ಲೂ ಅವರು ಈ ಹಿಂದೆ ಲಕ್ಷ್ಮೀ ಬಾರಮ್ಮ, ‘ರಾಧಾ ಕಲ್ಯಾಣ’,  ‘ಸರ್ವ ಮಂಗಳ ಮಾಂಗಲ್ಯೇ’  ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.  ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಲವ್ ಯು ಅಲಿಯಾ, ಅರ್ಜುನ್ ಸರ್ಜಾ ನಿರ್ದೇಶನದ “ಪ್ರೇಮ ಬರಹ” ಸೇರಿ ಕನ್ನಡದ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ.   ಸದ್ಯ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ’ ಮರಳಿ ಮನಸಾಗಿದೆ ‘ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಮಗಳು ಜಾನಕಿ’ ಖ್ಯಾತಿಯ ನಟ ಯಲಹಂಕ ಬಾಲಾಜಿ ನಿಧನ

    ‘ಮಗಳು ಜಾನಕಿ’ ಖ್ಯಾತಿಯ ನಟ ಯಲಹಂಕ ಬಾಲಾಜಿ ನಿಧನ

    ಕಿರುತೆರೆಯ ನಟ ಯಲಹಂಕ ಬಾಲಾಜಿ ನಿಧನರಾಗಿದ್ದಾರೆ. ಅಲ್ಪ ಕಾಲದ ಅನಾರೋಗ್ಯದಿಂದ ನರಳುತ್ತಿದ್ದ ಬಾಲಾಜಿ ಇಂದು ಇಹಲೋಕ ತ್ಯಜಿಸಿದ್ದಾರೆ ಎಂದು ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಸೀತಾ ರಾಮ್ ಅವರ ಬಹುತೇಕ ಧಾರಾವಾಹಿಗಳಲ್ಲಿ ಬಾಲಾಜಿ ನಟಿಸುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

    ಕನ್ನಡದ ಅತ್ಯಂತ ಜನಪ್ರಿಯ ಧಾರಾವಾಹಿಗಳಾದ ಮಾಯಾಮೃಗದಿಂದ ಮಗಳು ಜಾನಕಿವರೆಗೂ ಸೀತಾರಾಮ್ ಧಾರಾವಾಹಿಗಳಲ್ಲಿ ಬಾಲಾಜಿ ನಟಿಸಿದ್ದರು. ಅಲ್ಲದೇ, ರಂಗಭೂಮಿ ಮತ್ತು ಚಲನಚಿತ್ರಗಳಲ್ಲೂ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅಗಲಿದ ನಟನಿಗೆ ಕಂಬನಿ ಮಿಡಿದಿರುವ ಸೀತಾರಾಮ್ ‘ಅತ್ಯಂತ ಹೃದಯವಂತ ಗೆಳೆಯ. ಎಲ್ಲ ಕಷ್ಟಗಳಲ್ಲೂ, ಸಂತೋಷಗಳಲ್ಲೂ ಜತೆಗೆ ಇರುತ್ತಿದ್ದ ಮನುಷ್ಯ. ಇಡೀ ಬದುಕಿನುದ್ದಕ್ಕೂ ಕಷ್ಟ ಕಂಡಿದ್ದರೂ, ನಗುತ್ತಾ ಬದುಕಿದ ಗೆಳೆಯ. ಬಾಲಾಜಿ ಇನ್ನಿಲ್ಲ ಎಂದು ನೆನಪಿಸಿಕೊಂಡರೆ ಅಪಾರ ಸಂಕಟವಾಗುತ್ತದೆ’ ಎಂದು ಟಿ.ಎನ್.ಸೀರಾತಾಮ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]