Tag: actor

  • ಭಾರತದ ಟಾಪ್ 10 ನಟರಲ್ಲಿ ಕನ್ನಡದ ಯಶ್: ಬಾಲಿವುಡ್ ಅಕ್ಷಯ್ ಕುಮಾರ್ ನನ್ನೂ ಹಿಂದಿಕ್ಕಿದ ರಾಕಿಭಾಯ್

    ಭಾರತದ ಟಾಪ್ 10 ನಟರಲ್ಲಿ ಕನ್ನಡದ ಯಶ್: ಬಾಲಿವುಡ್ ಅಕ್ಷಯ್ ಕುಮಾರ್ ನನ್ನೂ ಹಿಂದಿಕ್ಕಿದ ರಾಕಿಭಾಯ್

    ವರೆಗೂ ಭಾರತದ ಟಾಪ್ ನಟರ ಸ್ಥಾನದಲ್ಲಿ ಕನ್ನಡದ (Sandalwood) ನಟರಿಗೆ ಯಾವ ಸ್ಥಾನಗಳು ದೊರೆಯುತ್ತಿರಲಿಲ್ಲ. ಕೇವಲ ಬಾಲಿವುಡ್ ನಟರು ಮಾತ್ರ ಆ ಸ್ಥಾನಗಳಲ್ಲಿ ಮೆರೆಯುತ್ತಿದ್ದರು, ಹೆಚ್ಚೆಂದರೆ ತಮಿಳು ಮತ್ತು ತೆಲುಗು ನಟರು ಇರುತ್ತಿದ್ದರು. ಇದೀಗ ಕನ್ನಡದ ನಟರಿಗೂ ಅಲ್ಲಿ ಸ್ಥಾನ ಸಿಗುತ್ತಿದೆ. ಕೆಜಿಎಫ್ ಸಿನಿಮಾವೊಂದು ಇಂತಹ ಸ್ಥಾನ ದೊರೆಕಿಸಿ ಕೊಡಲು ಯಶ್ (Yash) ಗೆ ನೆರವಾಗಿದೆ. ಹಾಗಾಗಿ ಯಶ್ ಭಾರತೀಯ ಟಾಪ್ ನಟರ ಯಾದಿಯಲ್ಲಿ ಕಾಣಿಸಿಕೊಂಡಿದ್ದಾರೆ.

    ಪ್ರತಿ ವರ್ಷವೂ ಕೆಲ ಸಂಸ್ಥೆಗಳು ಭಾರತದ ಟಾಪ್ ನಟರ ಲಿಸ್ಟ್ ಅನ್ನು ಬಿಡುಗಡೆ ಮಾಡುತ್ತವೆ. ಈ ಬಾರಿ ಆಮ್ಯಾರ್ಕ್ಸ್ ಸಂಸ್ಥೆಯು ಟಾಪ್ ನಟರ ಪಟ್ಟಿಯನ್ನು ರಿಲೀಸ್ ಮಾಡಿದ್ದು, ದಳಪತಿ ವಿಜಯ್ (Dalpati Vijay) ಟಾಪ್ 1 ಸ್ಥಾನವನ್ನು ಪಡೆದುಕೊಂಡಿದ್ದರೆ, ಯಶ್ ಗೆ ಟಾಪ್ 5 ಸ್ಥಾನ ಸಿಕ್ಕಿದೆ. ಪ್ರಭಾಸ್ (Prabhas) ಎರಡನೇ ಸ್ಥಾನ, ಜ್ಯೂನಿಯರ್ ಎನ್.ಟಿ.ಆರ್ ಮೂರನೇ ಸ್ಥಾನ ಹಾಗೂ ಅಲ್ಲು ಅರ್ಜುನ್ ನಾಲ್ಕನೇ ಸ್ಥಾನವನ್ನು ಪಡೆಯುವ ಮೂಲಕ ಟಾಪ್ 5 ಪಟ್ಟಿಯಲ್ಲಿ ದಕ್ಷಿಣದವರಿಗೆ ಸ್ಥಾನ ಸಿಕ್ಕಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು

    ಮತ್ತೊಂದು ಅಚ್ಚರಿಯ ಸಂಗತಿಯಂದರೆ, ಬಾಲಿವುಡ್ ನಟರಲ್ಲಿ ಕೇವಲ ಅಕ್ಷಯ್ ಕುಮಾರ್ (Akshay Kumar) ಗೆ ಮಾತ್ರ ಸ್ಥಾನ ದೊರೆತಿದ್ದು ಆರನೇ ಸ್ಥಾನದಲ್ಲಿ ಅಕ್ಷಯ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಾಲಿವುಡ್ ನ ಖ್ಯಾತ ನಟರು ದೂರವೇ ಉಳಿಯುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಅಲ್ಲಿಗೆ ದಕ್ಷಿಣದವರೇ ಪ್ರಾಬಲ್ಯ ಮೆರೆದಿದ್ದಾರೆ. ಖಾನ್ ಪಡೆಯ ಒಬ್ಬನೇ ಒಬ್ಬ ನಟನೂ ಕೂಡ ಈ ಯಾದಿಯಲ್ಲಿ ಕಾಣಿಸಿಕೊಳ್ಳದೇ ಇರುವುದು ಅಚ್ಚರಿಗೆ ಕಾರಣವಾಗಿದೆ.

    ಕೆಜಿಎಫ್ ಸಿನಿಮಾದ ಮೂಲಕ ಭಾರತೀಯ ಸಿನಿಮಾ  ರಂಗದ ಗತಿಯನ್ನೇ ಬದಲಿಸಿರುವ ಯಶ್, ಯಾವುದೇ ಸಂಸ್ಥೆಗಳು ಟಾಪ್ (Top) ಪಟ್ಟಿಯನ್ನು ಬಿಡುಗಡೆ ಮಾಡಿದರೂ, ಅದರಲ್ಲಿ ಒಂದು ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಕನ್ನಡದ ಹಿರಿಮೆಯನ್ನು ಹೆಚ್ಚಿಸುತ್ತಿದ್ದಾರೆ. ಕೆಜಿಎಫ್ (KGF)ಸಿನಿಮಾದ ನಂತರ ಬೇರೆ ಯಾವ ಸಿನಿಮಾವನ್ನೂ ಯಶ್ ಒಪ್ಪಿಕೊಳ್ಳದೇ ಇದ್ದರೆ, ಟಾಪ್ ನಲ್ಲಿ ಮಾತ್ರ ಸ್ಥಾನ ಪಡೆದುಕೊಳ್ಳುತ್ತಿರುವುದು ವಿಶೇಷ.

    Live Tv
    [brid partner=56869869 player=32851 video=960834 autoplay=true]

  • ‘ಮಗಳು ಜಾನಕಿ’ ಸೀರಿಯಲ್ ಖ್ಯಾತಿಯ ಕಿರುತೆರೆಯ ಖ್ಯಾತ ಕಲಾವಿದ ಮಂಡ್ಯ ರವಿ ನಿಧನ

    ‘ಮಗಳು ಜಾನಕಿ’ ಸೀರಿಯಲ್ ಖ್ಯಾತಿಯ ಕಿರುತೆರೆಯ ಖ್ಯಾತ ಕಲಾವಿದ ಮಂಡ್ಯ ರವಿ ನಿಧನ

    ನ್ನಡ ಕಿರುತೆರೆಯ (Television)  ಲೋಕದ ಖ್ಯಾತ ಕಲಾವಿದ (Actor) ಮಂಡ್ಯ ರವಿ (Mandya Ravi) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ರವಿ ಅಸಂಖ್ಯಾತ ಅಭಿಮಾನಿಗಳನ್ನು ಅಗಲಿದ್ದಾರೆ. ರವಿ ನಿಧನಕ್ಕೆ ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಅಧ್ಯಕ್ಷರಾದ ಎಸ್.ವಿ. ಶಿವಕುಮಾರ್ ಸೇರಿದಂತೆ ಟೆಲಿವಿಷನ್ ಉದ್ಯಮದ ಅನೇಕ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

    ರವಿ ಪೂರ್ಣ ಹೆಸರು ರವಿ ಪ್ರಸಾದ್ ಎಂ. ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸುತ್ತಲೇ ಮಂಡ್ಯ ರವಿ ಆಗಿ ಫೇಮಸ್ ಆದವರು. ರವಿ ಬಾಲ್ಯದಿಂದಲೇ ನಾಟಕಗಳಲ್ಲಿ ಅಭಿನಯಿಸುತ್ತಾ, ನಂತರ ಬಣ್ಣದ ಲೋಕದತ್ತ ಒಲವು ಬೆಳೆಸಿಕೊಂಡವರು. ಓದಿದ್ದು ಎಂಎ ಇಂಗ್ಲಿಷ್ ಮತ್ತು ಎಲ್‍ಎಲ್‍ಬಿ ಆದರೂ, ಆಯ್ಕೆ ಮಾಡಿಕೊಂಡ ವೃತ್ತಿ ಮಾತ್ರ ನಟನೆ. 1996ರಲ್ಲಿ ಜನದನಿ ಹವ್ಯಾಸಿ ನಾಟಕ ತಂಡ ಸೇರಿ, ಅಲ್ಲಿಂದ ಟಿ.ಎಸ್. ನಾಗಾಭರಣ ನಿರ್ದೇಶನದ ‘ಮಹಾಮಾಯಿ’ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆ ಜಗತ್ತಿಗೆ ಕಾಲಿಟ್ಟರು. ಇದನ್ನೂ ಓದಿ:‘ಮದುವೆ’ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆದ ಮಹಾಲಕ್ಷ್ಮಿ ರವೀಂದರ್

    ಅನೇಕ ಧಾರಾವಾಹಿಗಳಲ್ಲಿ ರವಿ ನಟಿಸಿದ್ದರು, ಮೊದಲು ಬ್ರೇಕ್ ನೀಡಿದ ಧಾರಾವಾಹಿ ಮಿಂಚು, ನಂತರ ಮುಕ್ತಮುಕ್ತ, ಚಿತ್ರಲೇಖ, ಯಶೋಧೆ, ವರಲಕ್ಷ್ಮಿ ಸ್ಟೋರ್ಸ್  ಸೇರಿದಂತೆ ಸಾಕಷ್ಟು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಪ್ರಸಾರವಾದ ಮಗಳು ಜಾನಕಿ ಧಾರಾವಾಹಿಯ ಚಂದು ಭಾರ್ಗಿ (Chandu Bhargi) ಪಾತ್ರದ ಮೂಲಕ ರವಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದರು.  ಅಲ್ಲದೇ, ಕಾಫಿತೋಟ ಸೇರಿದಂತೆ ಹಲವು ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಮ್ಯಾ ನನ್ನ ಮನೆಯಲ್ಲಿ ಇಲ್ಲ, ನನ್ನೊಂದಿಗೆ ವಾಸಿಸುತ್ತಿಲ್ಲ: ನಟ ನರೇಶ್ ಸ್ಪಷ್ಟನೆ

    ರಮ್ಯಾ ನನ್ನ ಮನೆಯಲ್ಲಿ ಇಲ್ಲ, ನನ್ನೊಂದಿಗೆ ವಾಸಿಸುತ್ತಿಲ್ಲ: ನಟ ನರೇಶ್ ಸ್ಪಷ್ಟನೆ

    ಮೈಸೂರಿನಲ್ಲಿ ನಡೆದ ಹೈ ಡ್ರಾಮಾ ನಂತರ ತೆಲುಗು ನಟ ನರೇಶ್ ಮತ್ತು ರಮ್ಯಾ ರಘುಪತಿ (Ramya Raghupathi) ಪ್ರಕರಣ ತಣ್ಣಗಾಗಿತ್ತು. ಕೋರ್ಟ್ ನಲ್ಲಿ ಈ ಪ್ರಕರಣವನ್ನು ನೋಡಿಕೊಳ್ಳುವುದಾಗಿ ನರೇಶ್ ಹೇಳಿದ್ದರು. ಇತ್ತ ಕಡೆ ರಮ್ಯಾ ಅವರ ತಾಯಿಗೆ ಹುಷಾರಿಲ್ಲದ ಕಾರಣ ಅವರ ಮೌನವಹಿಸಿದ್ದರು. ಇದೀಗ ಮತ್ತೆ ರಮ್ಯಾ ಅವರು ನರೇಶ್ ಅವರ ಮನೆಗೆ ಹೋಗಿದ್ದಾರೆ, ನರೇಶ್ ಜೊತೆಯೇ ವಾಸಿಸಲು ನಿರ್ಧಾರ ತಗೆದುಕೊಂಡಿದ್ದಾರೆ ಎನ್ನುವ ಸುದ್ದಿ ಇತ್ತು. ಅದಕ್ಕೆ ನರೇಶ್ ಸ್ಪಷ್ಟನೆ ನೀಡಿದ್ದಾರೆ.

    ನನ್ನ ಮನೆಯಲ್ಲಿ ರಮ್ಯಾ ಇದ್ದಾರೆ, ಇಲ್ಲಿಗೆ ಬಂದಿದ್ದಾರೆ ಎನ್ನುವುದು ಸುಳ್ಳು. ಅದು ಸಾಧ್ಯವಾಗದೇ ಇರುವ ಕೆಲಸ. ಯಾರೋ ಮಾನಸಿಕ ಸರಿ ಇಲ್ಲದ ವ್ಯಕ್ತಿಯೊಬ್ಬ ಈ ರೀತಿ ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾನೆ. ರಮ್ಯಾ ಮತ್ತು ನಾನು ಎಂದಿಗೂ ಮತ್ತೆ ಒಂದಾಗಲು ಸಾಧ್ಯವೇ ಇಲ್ಲ. ಡಿವೋರ್ಸ್ ಕೇಸ್ ಕೋರ್ಟಿನಲ್ಲಿದೆ. ಕೋರ್ಟ್ ತೀರ್ಪಿಗಾಗಿ ನಾನು ಕಾಯುತ್ತಿದ್ದೇನೆ. ಯಾರೂ ವಂದತಿಗಳನ್ನು ಯಾರೂ ನಂಬಬಾರದು ಎಂದು ನರೇಶ್ (Naresh) ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ:ಹಿಂದಿ ಕಿರುತೆರೆಯಲ್ಲಿ ಬರಲಿದೆ `ಕೆಜಿಎಫ್ 2′ ಚಿತ್ರ: ರಾಕಿಭಾಯ್ ಎಂಟ್ರಿಗೆ ಕೌಂಟ್ ಡೌನ್

    ಅಲ್ಲದೇ, ರಮ್ಯಾ ಅವರು ಯಾವುದೇ ರೀತಿಯಲ್ಲೂ ತಮ್ಮನ್ನು ಸಂಪರ್ಕಿಸಿಲ್ಲ ಎನ್ನುವುದನ್ನು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟ ಪಡಿಸಿದ್ದು, ಡಿವೋರ್ಸ್ (Divorce) ತೀರ್ಪಿಗಾಗಿ ತಾವು ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಈ ರೀತಿ ರೂಮರ್ (Rumor) ಹರಡಿಸುವವರ ವಿರುದ್ಧವೂ ನರೇಶ್ ಹರಿಹಾಯ್ದಿದ್ದಾರೆ. ಇನ್ಮುಂದೆ ಇಂತಹ ಸುದ್ದಿಗಳು ಬಂದಾಗ ನಂಬಬೇಡಿ ಎಂದೂ ಅವರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಎಲ್ಲರಿಗೂ ಅವಕಾಶ ಕೊಡುವ ಆತುರದಲ್ಲಿ ಕ್ಯಾಪ್ಟನ್ ರೂಪೇಶ್ ಶೆಟ್ಟಿ ಮಾಡಿದ ಎಡವಟ್ಟೇನು ಗೊತ್ತಾ?

    ಎಲ್ಲರಿಗೂ ಅವಕಾಶ ಕೊಡುವ ಆತುರದಲ್ಲಿ ಕ್ಯಾಪ್ಟನ್ ರೂಪೇಶ್ ಶೆಟ್ಟಿ ಮಾಡಿದ ಎಡವಟ್ಟೇನು ಗೊತ್ತಾ?

    ದೊಡ್ಮನೆಯಲ್ಲಿ ಬಿಗ್ ಬಾಸ್ (Bigg Boss) ಮನೆ ಮಂದಿಗೆ 5 ಲಕ್ಷ ಹಣವನ್ನು ಗಿಫ್ಟ್ ಆಗಿ ನೀಡುವ ಅವಕಾಶವೊಂದನ್ನು ನೀಡಿತ್ತು. ಅದು ಟಾಸ್ಕ್‌ ಅನ್ನು ಇಂತಿಷ್ಟು ಗಂಟೆಯ ಒಳಗೆ ಗೆದ್ದರೆ ಮಾತ್ರ ಎಂಬ ನಿಯಮವಿದೆ. ಅದರಂತೆ ಈ ವಾರ ಒಂದೊಂದೆ ಟಾಸ್ಕ್ ಅನ್ನು ನೀಡುತ್ತಾ ಹೋಗಿದ್ದಾರೆ. ಒಂದೊಂದು ಟಾಸ್ಕ್‌ನಲ್ಲೂ ಬಿಗ್ ಬಾಸ್ ನೀಡುತ್ತಿದ್ದ ಹಣ 50 ಸಾವಿರ. ಆದರೆ ಮನೆ ಮಂದಿ ಯಾವ ಆಟವನ್ನು ಅಷ್ಟು ಸರಿಯಾಗಿ ಆಡಲಿಲ್ಲ. ಹೀಗಾಗಿ 5 ಲಕ್ಷ ಹಣದಲ್ಲಿ ಸದಸ್ಯರ ಪಾಲಾಗಿದ್ದು, 2 ಲಕ್ಷದ 86 ಸಾವಿರ  ಮಾತ್ರ.

    ಎಷ್ಟೇ ಹಣ ಗೆದ್ದರು ಮನೆ ಮಂದಿಗೆಲ್ಲಾ ಸಿಗುತ್ತೆ ಎನ್ನುವ ಹಾಗಿಲ್ಲ. ಈ ಹಣ ಫೈನಲ್ ತಲುಪಿದ ಒಬ್ಬರಿಗೆ ಮಾತ್ರ ಸಿಗಲಿದೆ.  ಆದರೆ ಆಗಾಗ ಆದ ಪೌಲ್ ನೆನೆದು ರೂಪೇಶ್ ಬೇಸರ ಮಾಡಿಕೊಂಡಿದ್ದಾರೆ. ಇಲ್ಲಿ ಸರಿಯಾದ ವ್ಯಕ್ತಿಯನ್ನು ಆಟವಾಡುವುದಕ್ಕೆ ಆರಿಸಿಲ್ಲ ಎಂಬ ಮಾತುಗಳು ಬಂದಿದೆ. ಆ ಒಂದು ಕಾರಣಕ್ಕೆ ರೂಪೇಶ್ (Roopesh Shetty)  ಎಲ್ಲರಿಗೂ ಅವಕಾಶ ನೀಡಿ, ಸೋತರಾ ಎಂಬ ಪ್ರಶ್ನೆಯೂ ಇದೀಗ ಎಲ್ಲರಿಗೂ ಮೂಡಿದೆ.

    ಬಿಗ್ ಬಾಸ್ ಮನೆಯಲ್ಲಿ ಐದನೇ ವಾರ ಸಖತ್ ರೋಚಕ ತಿರುವಿನಿಂದ ಮನೆಯ ರಂಗು ಹೆಚ್ಚಿತ್ತು. ಇನ್ನೂ ಟಾಸ್ಕ್‌ ಕಡೆಯ ದಿನವಾದ ಕಾರಣ ಬಿಗ್ ಬಾಸ್ ಮೂರು ಟಾಸ್ಕ್‌ಗಳನ್ನ ನೀಡಿದ್ದರು. ಬೆಳಗ್ಗೆನೆ ಬುಟ್ಟಿ ಮತ್ತು ಬಾಲ್ ಟಾಸ್ಕ್ ಅನ್ನು ನೀಡಿತ್ತು. ಅದರಲ್ಲಿ ಮೂರು ತಂಡಗಳಾಗಿ ಆಡಲಾಯಿತು. ಜಶ್ವಂತ್, ಸೋನು ಆಂಡ್ ಗುರೂಜಿ ಒಂದು ಟೀಂ ಆಗಿದ್ದರು. ಕೋ ಆರ್ಡಿನೇಷನ್ ಮಿಸ್ ಆಗಿ ಅವರು ಸೋತರು. ಮೂರು ಬಾರಿ ಜಶ್ವಂತ್ ಪೌಲ್ ಆದರು. ಇದರಿಂದ ರೂಪೇಶ್‌ಗೆ ಅದಾಗಲೇ ಕೋಪ ಬಂದಿತ್ತು. ನಿನಗೆ ಗೇಮ್ ಅರ್ಥವಾಗಿಲ್ಲ ಎಂದಾಗ ಒಂದು ಕ್ಷಣ ನಿಂತು ಯೋಚಿಸಿ ಮುಂದುವರೆಯಬೇಕು ಎಂದು ರೂಪೇಶ್ ಸಲಹೆ ನೀಡಿದ್ದರು. ಇದನ್ನೂ ಓದಿ:ಚಪ್ಪಲಿಗೆ ಬಟ್ಟೆ ಸುತ್ತುಕೊಂಡು ಹೊಡಿತ್ತೀನಿ ಎಂದು ಜಯಶ್ರೀ ವಾರ್ನಿಂಗ್‌ ಕೊಟ್ಟಿದ್ಯಾರಿಗೆ?

    ಬಳಿಕ ಕಣ್ಣು ಜೋಡಿಸುವ ಟಾಸ್ಕ್‌ನಲ್ಲಿ ಬಿಗ್ ಬಾಸ್ ನೀಡಿದ್ದು 50 ಸಾವಿರ. ಈ ಗೇಮ್‌ನಿಂದಾಗಿ 50 ಸಾವಿರ ಗೆದ್ದೆ ಬಿಟ್ಟರು. ಇದು ಕಡೆಯ ಟಾಸ್ಕ್ ಎಂದುಕೊಳ್ಳುವಾಗಲೇ ರಾತ್ರಿ 11 ಗಂಟೆಯ ಮೇಲೆ ಕೊನೆಯ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿತ್ತು. ಅದುವೆ ಗ್ಲಾಸ್ ಜೋಡಿಸುವ ಟಾಸ್ಕ್‌ನಲ್ಲಿ ಸೋನು, ಜಶ್ವಂತ್, ಜಯಶ್ರೀ, ಸಾನ್ಯಾಳನ್ನು ಈ ಆಟಕ್ಕೆ ಸೆಲೆಕ್ಟ್ ಮಾಡಲಾಯ್ತು. ಮೊದಲಿಗೆ ಜಶ್ವಂತ್ ಆ ಆಟ ಶುರು ಮಾಡಿದ. ಮೂರು ಲೋಟ ಮೂರು ಪೇಪರ್. ಒಂದರ ಮೇಲೊಂದು ಇಟ್ಟು ಪೇಪರ್ ಎಳೆದಾಗ ಲೋಟಗಳು ಒಂದರ ಮೇಲೆ ಒಂದು ಕೂರಬೇಕು. ಜಶ್ವಂತ್ ಸೂಪರ್ ಆಗಿ, ಫಾಸ್ಟ್ ಆಗಿ ಮಾಡಿದ. ಆದ್ರೆ ಸೋನು ಸಾಕಷ್ಟು ಸಮಯ ತೆಗೆದುಕೊಂಡು ಬಿಟ್ಟರು. ಜಯಶ್ರೀ ಕೂಡ ಚೆನ್ನಾಗಿ ಆಡಿದಳು. ಆದರೆ ಸಾನ್ಯಾ ಮಾಡುವಷ್ಟರಲ್ಲಿ ಸಮಯ ಮುಗಿದಿತ್ತು. ಇದಕ್ಕೆ ಸೋನು ಕ್ಷಮೆ ಕೂಡ ಕೇಳಿದರು. ಮನೆಯವರೆಲ್ಲ ಸಮಾಧಾನ ಕೂಡ ಮಾಡಿದರು. ಆದರೆ ಈ ಆಟವನ್ನು ಸೋತಿದ್ದರು.

    ಬಿಗ್ ಬಾಸ್ (Bigg Boss) ಮನೆಯವರು ಗಳಿಸಿದ ಒಟ್ಟು ಹಣ 2 ಲಕ್ಷದ 86 ಸಾವಿರ ಎಂದಾಗ ಎಲ್ಲರೂ ಖುಷಿ ಪಟ್ಟರು. ಇಲ್ಲಿಗೆ ಈ ವಾರದ ಟಾಸ್ಕ್‌ಗಳು ಮುಕ್ತಾಯವಾಗಿದೆ ಎಂದಾಗ ರೂಪೇಶ್ ಮುಖದಲ್ಲಿ ಬೇಸರ ಆವರಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಈ ಬಾರಿ  ಲೈಂಗಿಕ ದೌರ್ಜನ್ಯ ಆರೋಪಕ್ಕಾಗಿ ನಟ, ನಿರ್ಮಾಪಕ ಕಮಲ್ ಆರ್ ಖಾನ್ ಬಂಧನ

    ಈ ಬಾರಿ ಲೈಂಗಿಕ ದೌರ್ಜನ್ಯ ಆರೋಪಕ್ಕಾಗಿ ನಟ, ನಿರ್ಮಾಪಕ ಕಮಲ್ ಆರ್ ಖಾನ್ ಬಂಧನ

    ವಹೇಳನಕಾರಿ ಟ್ವಿಟ್ ಗೆ ಸಂಬಂಧಿಸಿದಂತೆ ಬಂಧನವಾಗಿದ್ದ ನಟ, ನಿರ್ಮಾಪಕ ಕಮಲ್ ಆರ್ ಖಾನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆ ಅನ್ನುವ ಕಾರಣಕ್ಕಾಗಿ ಇವತ್ತು ಮತ್ತೆ ಬಂಧನವಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಬಾಂದ್ರಾ ನ್ಯಾಯಾಲಯ ಆದೇಶ ನೀಡಿದೆ.

    ಶಿವಸೇನೆ ನಾಯಕರೊಬ್ಬರ ಮೇಲೆ ವಿವಾದ್ಮಾತಕ ಕಾಮೆಂಟ್ ಆರೋಪಗಳ ಮೇಲೆ ಕೆ.ಆರ್.ಕೆ ಆಗಸ್ಟ್ 30 ವರೆಗೂ ನ್ಯಾಯಾಂಗ ಬಂಧನದಲ್ಲಿದ್ದರು. ಆದರೆ ಇದೀಗ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪಕ್ಕಾಗಿ ಮತ್ತೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಘಟನೆಯು 2017ರಲ್ಲೇ ನಡೆದಿದ್ದು, ತಾವು ನಿರ್ಮಾಣ ಮಾಡುವ ಚಿತ್ರದಲ್ಲಿ ಅವಕಾಶ ಕೊಡಿಸುವುದಾಗಿ ಆ ನಟಿಗೆ ನಂಬಿಸಿ ಮೋಸ ಮಾಡಿದ್ದಾರೆಂದು ಆ ನಟಿ ದೂರಿದ್ದಾರೆ. ಇದನ್ನೂ ಓದಿ:ವಿಜಯ್ ಸೇತುಪತಿ ಅಭಿಮಾನಿಗಳಿಗೆ ಡಬಲ್ ಧಮಾಕಾ: ‘ವಿಡುದಲೈ’ ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್

    ಕಮಲ್ ತಾವೊಬ್ಬ ನಿರ್ಮಾಪಕರು ಎಂದು ಪರಿಚಯ ಮಾಡಿಕೊಂಡು, ಆ ನಂತರ ನಟಿಯ ನಂಬರ್ ಪಡೆದಿದ್ದರಂತೆ. ಮೊದ ಮೊದಲು ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದರಂತೆ. ತನ್ನ ಹುಟ್ಟು ಹಬ್ಬದಲ್ಲಿ ಪಾಲ್ಗೊಳ್ಳಲು ನಟಿಗೆ ಕಮಲ್ ಆಹ್ವಾನ ಮಾಡಿದ್ದರಂತೆ. ಈ ಸಂದರ್ಭದಲ್ಲಿ ಜ್ಯೂಸ್ ಕುಡಿಸಿ, ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದರಂತೆ. ಆ ನಟಿ ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದರು ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡದ ಹೆಸರಾಂತ ನಟ ಹರೀಶ್ ರೈಗೆ ಕ್ಯಾನ್ಸರ್: ‘ಕೆಜಿಎಫ್ 2’ ಚಾಚಾ ಆರೋಗ್ಯದ ಬಗ್ಗೆ ಅಭಿಮಾನಿಗಳ ಕಳವಳ

    ಕನ್ನಡದ ಹೆಸರಾಂತ ನಟ ಹರೀಶ್ ರೈಗೆ ಕ್ಯಾನ್ಸರ್: ‘ಕೆಜಿಎಫ್ 2’ ಚಾಚಾ ಆರೋಗ್ಯದ ಬಗ್ಗೆ ಅಭಿಮಾನಿಗಳ ಕಳವಳ

    ತ್ತೀಚೆಗಷ್ಟೇ ಬಿಡುಗಡೆಯಾದ ಕೆಜಿಎಫ್ 2 ಸಿನಿಮಾದಲ್ಲಿ ರಾಕಿಭಾಯ್ ನೆಚ್ಚಿನ ಚಾಚಾ ಪಾತ್ರದಲ್ಲಿ ಕಾಣಿಸಿಕೊಂಡಿರುವ, ಕನ್ನಡದ ಹೆಸರಾಂತ ನಟ ಹರೀಶ್ ರೈ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಯೂಟ್ಯೂಬ್ ವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ತಾವು ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಕ್ಯಾನ್ಸರ್ ನಿಂದ ಈಗಾಗಲೇ ಸಖತ್ ಬಳಲುತ್ತಿರುವ ವಿಷಯವನ್ನೂ ಅವರು ಹಂಚಿಕೊಂಡಿದ್ದಾರೆ.

    ಮೊದಲು ಹರೀಶ್ ರೈ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದರಂತೆ. ಈ ಥೈರಾಯ್ಡ್ ಮುಂದೆ ಕ್ಯಾನ್ಸರ್ ಆಗಿ ಬದಲಾಗಿದೆಯಂತೆ. ಈಗದು ಗಂಭೀರ ಸ್ಥಿತಿಯಲ್ಲಿ ಇರುವುದರಿಂದ ಆರ್ಥಿಕ ಮುಗ್ಗಟ್ಟಿನ ನಡುವೆಯೇ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ ಎಂದು ಹರೀಶ್ ರೈ ಮಾತನಾಡಿದ್ದಾರೆ. ತಾವು ಆರ್ಥಿಕ ಸಂಕಷ್ಟದಲ್ಲಿ ಇರುವುದಾಗಿಯೂ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಈಗೀಗ ಚೈತ್ರಾ ಹಳ್ಳಿಕೇರಿ ಮುಖವಾಡ ಕಳಚ್ತಾ ಇದ್ದಾರೆ : ಸ್ಪೂರ್ತಿ ಗೌಡ

    ಕನ್ನಡದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಹರೀಶ್ ರೈ, ನೆಗೆಟಿವ್ ಪಾತ್ರಗಳ ಮೂಲಕವೇ ಗುರುತಿಸಿಕೊಂಡವರು. ಕೆಜಿಎಫ್ 2 ಸಿನಿಮಾದಲ್ಲಿ ಅವರದ್ದು ಪಾಸಿಟಿವ್ ಪಾತ್ರವಾಗಿತ್ತು. ಹಾಗಾಗಿ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಈ ಗೆಲುವನ್ನು ಅವರು ಸಂಭ್ರಮಿಸಬೇಕು ಎನ್ನುವಷ್ಟರಲ್ಲಿ ಕ್ಯಾನ್ಸರ್ ಅವರನ್ನು ಹಿಂಡಿ ಹಿಪ್ಪಿ ಮಾಡುತ್ತಿದೆ. ಜೋಡಿ ಹಕ್ಕಿ, ತಾಯವ್ವ, ಸಂಜು ವೆಡ್ಸ್ ಗೀತಾ ಸೇರಿದಂತೆ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿರುವ ಹರೀಶ್, ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

    ಹರೀಶ್ ರೈ ಅವರಿಗೆ ಕ್ಯಾನ್ಸರ್ ಆಗಿರುವ ವಿಚಾರ ಮಾಧ್ಯಮಗಳಲ್ಲಿ ಬರುತ್ತಿದ್ದಂತೆಯೇ ಆ ವಿಡಿಯೋವನ್ನು ನಟ ಅನಿರುದ್ಧ ಪೋಸ್ಟ್ ಮಾಡಿದ್ದು, ನಟನಿಗೆ ಸಹಾಯ ಮಾಡುವಂತೆ ವಿನಂತಿಸಿಕೊಂಡಿದ್ದಾರೆ. ಆದಷ್ಟು ಬೇಗ ಅವರು ಕ್ಯಾನ್ಸರ್ ನಿಂದ ಗೆದ್ದು ಬರಲಿ ಎಂದು ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೃಷ್ಣ ಜನ್ಮಾಷ್ಟಮಿಯಂದು ಕಳ್ಳ ಕೃಷ್ಣನ ವೇಷದಲ್ಲಿ ಪ್ರಣಿತಾ ಪುತ್ರಿ ಆರ್ನಾ

    ಕೃಷ್ಣ ಜನ್ಮಾಷ್ಟಮಿಯಂದು ಕಳ್ಳ ಕೃಷ್ಣನ ವೇಷದಲ್ಲಿ ಪ್ರಣಿತಾ ಪುತ್ರಿ ಆರ್ನಾ

    ಕೃಷ್ಣ ಜನ್ಮಾಷ್ಮಮಿ ಎಂದರೆ ಅದೊಂದು ಸಡಗರ. ಮನೆಯಲ್ಲಿ ಮಕ್ಕಳಿದ್ದರಂತೂ ಆ ಸಂಭ್ರಮ ಹೇಳತೀರದು. ಪುಟಾಣಿ ಮಕ್ಕಳಿಗೆ ಕೃಷ್ಣನ ವೇಷ ಹಾಕಿ, ಸಿಂಗರಿಸಿ ಅದರ ಸೊಬಗು ಕಣ್ತುಂಬಿಕೊಳ್ಳುವುದೇ ಒಂದು ದೊಡ್ಡ ಖುಷಿ. ಇದೀಗ ನಟಿ ಪ್ರಣಿತಾ ಸುಭಾಷ್‌ ಸಹ ತಮ್ಮ ಮಗಳು ಆರ್ನಾಗೆ ಕೃಷ್ಣನ ವೇಷ ತೊಡಿಸಿದ್ದಾರೆ.

    ಸಿನಿಮಾಗಳಲ್ಲಿ ಬ್ಯುಸಿಯಿದ್ದ ನಾಯಕಿ ಈಗ ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಬಹುಭಾಷಾ ನಟಿ ಪ್ರಣಿತಾ ಸುಭಾಷ್‌, ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಮ್ಮ ಮಗಳು ಆರ್ನಾಗೆ ಕೃಷ್ಣನ ವೇಷ ಹಾಕಿದ್ದಾರೆ. ಆದರೆ, ಎಲ್ಲಿಯೂ ಮಗುವಿನ ಮುಖವನ್ನು ಮಾತ್ರ ರಿವೀಲ್‌ ಮಾಡಿಲ್ಲ. ಎರಡು ತಿಂಗಳ ಹೆಣ್ಣು ಮಗುವಿಗೆ ಸರಳವಾದ ಕೃಷ್ಣನ ಅಲಂಕಾರ ಮಾಡಿದ್ದಾರೆ. ಪಂಚೆ, ಕೈಯಲ್ಲಿ ಕೊಳಲು, ಹಣೆಗೆ ನಾಮವಿಟ್ಟು ಆಚರಿಸಿದ್ದಾರೆ. ಇದನ್ನೂ ಓದಿ: ಫಸ್ಟ್‌ ಟೈಮ್ ಮುದ್ದಾದ ಎರಡೂ ಮಕ್ಕಳ ಮುಖ ತೋರಿಸಿದ ನಟಿ ಅಮೂಲ್ಯ

    ಮಗಳ ಕೃಷ್ಣಾಲಂಕಾರದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿರುವ ನಟಿ, ಈ ಮೂಲಕ ಎಲ್ಲರಿಗೂ ಜನ್ಮಾಷ್ಟಮಿಯ ಶುಭಾಶಯ ಕೋರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೆಣ್ಣು ಮಗುವಿಗೆ ತಂದೆಯಾದ `ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಚಂದು ಗೌಡ

    ಹೆಣ್ಣು ಮಗುವಿಗೆ ತಂದೆಯಾದ `ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಚಂದು ಗೌಡ

    ನ್ನಡ ಕಿರುತೆರೆ ಮತ್ತು ತೆಲುಗಿನ ಟಿವಿ ಪರದೆಯಲ್ಲಿ ಮೋಡಿ ಮಾಡುತ್ತಿರುವ ಚಂದು ಗೌಡ ಮನೆಯಲ್ಲಿ ಸಂತಸ ಮನೆ ಮಾಡಿದೆ. ನಟ ಚಂದು ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಚಂದು ಪತ್ನಿ ಶಾಲಿನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಸಾಕಷ್ಟು ಸಿನಿಮಾ, ಸೀರಿಯಲ್‌ಗಳ ಮೂಲಕ ಸಂಚಲನ ಮೂಡಿಸಿರುವ ನಟ ಚಂದು ಗೌಡ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಚಂದು ಗೌಡ ಪತ್ನಿ ಶಾಲಿನಿ ನಿನ್ನೆ (ಆಗಸ್ಟ್ 14)ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿನ ಜನನವಾಗಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಇದನ್ನೂ ಓದಿ:ರಾಕೇಶ್ ಮೇಲೆ ನನಗೆ ಫೀಲಿಂಗ್ಸ್ ಇದೆ ಎಂದು ಬಹಿರಂಗವಾಗಿ ಹೇಳಿಕೊಂಡ ಸೋನು ಗೌಡ

    ನಟ ಚಂದು ಗೌಡ ಅವರು ಶಾಲಿನಿ ಜತೆ ಅಕ್ಟೋಬರ್ 2020ಕ್ಕೆ ಹಸೆಮಣೆ ಏರಿದ್ದರು. ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಚಂದು ಮತ್ತು ಶಾಲಿನಿ ಕಾಲಿಟ್ಟಿದ್ದರು. ಈ ಮುದ್ದು ಮಗಳ ಆಗಮನದಿಂದ ಸಂಭ್ರಮ ಮನೆ ಮಾಡಿದೆ.

    Live Tv

  • ಕನ್ನಡದ ಹಿರಿಯ ಹಾಸ್ಯ ನಟ ಉಮೇಶ್ ಸಿನಿ ಪಯಣಕ್ಕೆ 62ನೇ ಸಂಭ್ರಮ:  ವಾಣಿಜ್ಯ ಮಂಡಳಿಯಿಂದ ಅಭಿನಂದನಾ ಕಾರ್ಯಕ್ರಮ

    ಕನ್ನಡದ ಹಿರಿಯ ಹಾಸ್ಯ ನಟ ಉಮೇಶ್ ಸಿನಿ ಪಯಣಕ್ಕೆ 62ನೇ ಸಂಭ್ರಮ: ವಾಣಿಜ್ಯ ಮಂಡಳಿಯಿಂದ ಅಭಿನಂದನಾ ಕಾರ್ಯಕ್ರಮ

    ರಂಗಭೂಮಿ ಹಾಗೂ ಚಲನಚಿತ್ರರಂಗದ ಹಿರಿಯ ಹಾಸ್ಯ ಕಲಾವಿದರಾದ ಎಂ.ಎಸ್.ಉಮೇಶ್ ಕಿರುತೆರೆಯಲ್ಲೂ ಜನಪ್ರಿಯರು. ನಾಟಕಗಳಲ್ಲಿ ಬಾಲ ಕಲಾವಿದರಾಗಿ ಅಭಿನಯಿಸುತ್ತಿದ್ದ ಉಮೇಶ್ ಚಲನಚಿತ್ರ ರಂಗಕ್ಕೆ ‘ಮಕ್ಕಳ ರಾಜ್ಯ’ ಚಿತ್ರದ ಮೂಲಕ ಅಡಿಯಿಟ್ಟರು. ಕನ್ನಡದ ಸುಮಾರು 250ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ವಿವಿಧ ಬಗೆಯ ಪಾತ್ರಗಳನ್ನು ಪೋಷಿಸಿರುವ ಉಮೇಶ್ ಹಾಸ್ಯ ನಟರಾಗಿ ಹೆಸರುವಾಸಿ. ಕಥಾಸಂಗಮದ ‘ಮುನಿತಾಯಿ’ಯಲ್ಲಿ ತಿಮ್ಮರಾಯಿ ಪಾತ್ರ ಅವರ ಕಲಾ ಪ್ರೌಢಿಮೆಯನ್ನು ಬೆಳಕಿಗೆ ತಂದಿತ್ತು. ಈ ಪಾತ್ರಕ್ಕೆ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಮುತ್ತಿಟ್ಟಿರುವ ಉಮೇಶ್ ಕಲಾ ಪಯಣಕ್ಕೆ 62ರ ಸಂಭ್ರಮ.

    ಉಮೇಶ್ ಚಿತ್ರರಂಗದಲ್ಲಿ ಐವತ್ತು ವರ್ಷ ಪೂರೈಸಿರುವ ಹಿನ್ನೆಲೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಭಿನಂದನ ಸಲ್ಲಿಸಿದೆ. ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ.ಹರೀಶ್ ನೇತೃತ್ವದಲ್ಲಿ ಉಮೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ವೇಳೆ ಚಿತ್ರರಂಗದ ಮತ್ತೊಬ್ಬ ಹಿರಿಯ ಕಲಾವಿದರಾದ  ಬೆಂಗಳೂರು ನಾಗೇಶ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 60 ವರ್ಷ ಪೂರೈಸಿದ ಹಿನ್ನೆಲೆ ಅವರನ್ನು ಕೂಡ ಸನ್ಮಾನಿಸಲಾಯಿತು. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಟ್ರೈಯಾಂಗಲ್‌ ಲವ್ ಸ್ಟೋರಿ: ರಾಕೇಶ್ ಅಡಿಗ ಪ್ರೇಮ ಪುರಾಣ

    ಉಮೇಶ್ ಮಾತನಾಡಿ, ಇದು ನನ್ನ ಸುದಿನ ಅಂತ ಭಾವಿಸ್ತೀನಿ. ಚಿತ್ರರಂಗ ನನ್ನನ್ನ ಮನೆ ಮಗನಂತೆ ನೋಡಿದೆ. ಅಭಿಮಾನಿ ಅನ್ನದಾತರಿಂದ ಇಲ್ಲಿದ್ದೇನೆ. ಕಲಾಸೇವೆ ಮಾಡೋ ಅವಕಾಶ ಸಿಕ್ಕಿದ್ದು ಪುಣ್ಯ. ಕನ್ನಡ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು. ಭಾ.ಮಾ.ಹರೀಶ್ ಮಾತನಾಡಿ, ಹಿರಿಯ ಕಲಾವಿದ ಉಮೇಶ್ ಅವರು ಸನ್ಮಾನ ಸ್ವೀಕರಿಸಿರುವುದು ಖುಷಿ ಕೊಟ್ಟಿದೆ. ನಿಮ್ಮ ಆಶೀರ್ವಾದ ಕನ್ನಡ ಇಂಡಸ್ಟ್ರೀ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೇಲೆ ಇರಲಿ. ಹೊಸ ನಿರ್ದೇಶಕರು, ನಿರ್ಮಾಪಕರನ್ನು ಕರೆಸಿ ಪೋಷಕ ಕಲಾವಿದರ ಸಂಘದ ಮೂಲಕ ನೆನಪಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದರು.

    ಐದು ದಶಕಗಳಿಗೂ ಹೆಚ್ಚು ಕಾಲದಿಂದ ಕಲಾವಿದರಾಗಿ ಸಕ್ರಿಯರಾಗಿರುವ ಉಮೇಶ್, ‘ಗೋಲ್ ಮಾಲ್ ರಾಧಾಕೃಷ್ಣ’ ಸಿನಿಮಾದಲ್ಲಿ ಅವರ ಡೈಲಾಗ್ ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. “ಅಯ್ಯೋ ತಪ್ಪಾಯ್ತು ಎಂಬ ಡೈಲಾಗ್ ಉಮೇಶ್ ಅವರನ್ನು ನೋಡಿದರೆ ನೆನಪಾಗುತ್ತದೆ. ವರನಟ ಡಾ.ರಾಜ್ ಕುಮಾರ್ ಜೊತೆ ‘ಶೃತಿ ಸೇರಿದಾಗ’ ಚಿತ್ರದಲ್ಲಿನ “ಇದು ಬೊಂಬೆಯಾಟವಯ್ಯಾ” ಹಾಡಿನಲ್ಲಿ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಹಾಲು ಜೇನು, ಶ್ರಾವಣ ಬಂತು, ಗುರುಶಿಷ್ಯರು, ಮಲಯಮಾರುತ, ನೀನು ನಕ್ಕರೆ ಹಾಲು ಸಕ್ಕರೆ, ಚೈತ್ರದ ಪ್ರೇಮಾಂಜಲಿ ಚಿತ್ರಗಳು ಸೇರಿದಂತೆ ಹಲವು ಚಿತ್ರಗಳಲ್ಲಿ ಉಮೇಶ್ ಅಮೋಘವಾಗಿ ನಟಿಸಿದ್ದಾರೆ. ಎಲ್ಲರಂತಲ್ಲ ನನ್ನ ಗಂಡ, ಜೇನುಗೂಡು, ಚನ್ನ ಸಿನಿಮಾ ಚಿತ್ರಗಳನ್ನು ಉಮೇಶ್ ನಿರ್ದೇಶನ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಸ್ ಚಾರ್ಜ್‍ಗೂ ದುಡ್ಡಿರಲಿಲ್ಲ, ಆದ್ರೀಗ ದೊಡ್ಡ ನಟನಾಗಿ, ರಾಜ್ಯಸಭಾ ಸದಸ್ಯನಾಗಿದ್ದೇನೆ: ಜಗ್ಗೇಶ್

    ಬಸ್ ಚಾರ್ಜ್‍ಗೂ ದುಡ್ಡಿರಲಿಲ್ಲ, ಆದ್ರೀಗ ದೊಡ್ಡ ನಟನಾಗಿ, ರಾಜ್ಯಸಭಾ ಸದಸ್ಯನಾಗಿದ್ದೇನೆ: ಜಗ್ಗೇಶ್

    ರಾಯಚೂರು: ಬಸ್ ಚಾರ್ಜ್‍ಗೂ 39 ರೂ. ದುಡ್ಡಿರಲಿಲ್ಲ. ಈಗ ದೊಡ್ಡ ನಟನಾಗಿ, ರಾಜ್ಯಸಭಾ ಸದಸ್ಯನಾಗಿದ್ದೇನೆ. ಅದಕ್ಕೆ ರಾಯರ ಆಶೀರ್ವಾದ ಕಾರಣ ಎಂದು ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಹೇಳಿದ್ದಾರೆ.

    ಗುರು ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ಹಿನ್ನೆಲೆ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ಜಗ್ಗೇಶ್ ಅವರು, ಶ್ರೀಗಳ ಆಶೀರ್ವಾದ ಪಡೆದು ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಶ್ರೀಗಳ ನೇತೃತ್ವದಲ್ಲಿ ಮಠದ ಘನತೆ ಹೆಚ್ಚುತ್ತಿದೆ. ನನಗೆ ವೈಯಕ್ತಿಕವಾಗಿ ಇರುವ ದೊಡ್ಡ ಆಸೆ ಎಂದರೆ ಮಠಕ್ಕೆ ಒಂದು ಏರೋಡ್ರಮ್ ಬರಬೇಕು. ನಾವೇನು ಮಾಡುವುದಿಲ್ಲ. ರಾಯರೇ ಅದನ್ನು ಮಾಡಿಸುತ್ತಾರೆ. ರಾಯರ ಮೇಲೆ ಭಾರಹಾಕಿ ನಾನು ಈ ವಿಷಯವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತೇನೆ ಅಂತ ತಿಳಿಸಿದರು. ಇದನ್ನೂ ಓದಿ: ‘ಹರ್ ಘರ್ ತಿರಂಗ’ ರ‍್ಯಾಲಿ ವೇಳೆ ಮಾಜಿ ಸಿಎಂ ನಿತಿನ್ ಪಟೇಲ್‍ಗೆ ತಿವಿದ ಹಸು

    ಅಧಿಕಾರಕ್ಕೆ ಬಂದಾಗ ಯಾರೂ ತಮ್ಮ ಕೈ ಗಲೀಜು ಮಾಡಿಕೊಳ್ಳುತ್ತಾರೋ ಅವರನ್ನು ರಾಯರೂ ಎಂದೂ ಕ್ಷಮಿಸಲ್ಲ. ಅಂತವರು ಮುಂದೆ ಬೆತ್ತಲಾಗಿ ನಿಲ್ಲಬೇಕಾಗುತ್ತದೆ. ಅದಕ್ಕೆ ಸದ್ಭಾವನೆಯಿಂದ ಕೆಲಸ ಮಾಡಬೇಕು. ಬಸ್ ಚಾರ್ಜ್‍ಗೂ 39 ರೂ. ದುಡ್ಡಿರಲಿಲ್ಲ. ಈಗ ದೊಡ್ಡ ನಟನಾಗಿ, ರಾಜ್ಯಸಭಾ ಸದಸ್ಯನಾಗಿದ್ದೇನೆ. ಅದಕ್ಕೆ ರಾಯರ ಆಶೀರ್ವಾದ ಕಾರಣ ಎಂದರು.

    ಎಷ್ಟೋ ಯೋಜನೆಗಳ ಬಗ್ಗೆ ಸರಿಯಾಗಿ ಯಾರೂ ಓದಿ ತಿಳಿದುಕೊಳ್ಳುವುದಿಲ್ಲ. ಎಷ್ಟೋ ಫಂಡ್‍ಗಳು ವಾಪಸ್ ಹೋಗಿವೆ. ಹೀಗಾಗಿ ನಮಗೆ ಯೋಜನೆಗಳ ಲಾಭ ಸಿಗುವುದಿಲ್ಲ. ಯೋಜನೆ ಬಗ್ಗೆ ಓದಿ ತಿಳಿದುಕೊಳ್ಳಬೇಕು. ನಮಗೆ ಪ್ರಹ್ಲಾದ್ ಜೋಶಿ, ಸಂತೋಷ ಜಿ ಮಾರ್ಗದರ್ಶನ ಮಾಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಎಣ್ಣೆ ಏಟಲ್ಲಿ ರೆಸ್ಟೋರೆಂಟ್‍ನಲ್ಲಿ ರಂಪಾಟ – ಗಗನಸಖಿ ಸೇರಿ ಮೂವರು ಅರೆಸ್ಟ್

    ಇಡೀ ವಿಶ್ವದಲ್ಲಿ ಯುದ್ಧಗಳು ನಿಲ್ಲಬೇಕು ಅಂದರೆ ಮೋದಿಯವರಂತೆ ಸಾಮರ್ಥ್ಯ ಬೇಕು. ಅಮೇರಿಕ, ರಷ್ಯಾ, ಚೀನಾ ಮೂರು ದೇಶಗಳೊಂದಿಗೆ ಮಾತನಾಡಿ ಅವರನ್ನು ಸಾತ್ವಿಕರನ್ನಾಗಿ ಮಾಡುವ ಶಕ್ತಿ ಮೋದಿಗೆ ಇದೆ. ಹರ್ ಘರ್ ತಿರಂಗದಿಂದ ಪ್ರತಿಯೊಬ್ಬರಲ್ಲೂ ದೇಶ ಭಕ್ತಿ ಬರುತ್ತದೆ. ಚಿಕ್ಕಮಕ್ಕಳು ಸಹ ಬಾವುಟ ಕೈಯಲ್ಲಿ ಹಿಡಿಯುವುದರಿಂದ ಅವರಿಗೆ ಸ್ವಾತಂತ್ರ್ಯದ ಪೂರ್ವ ತಿಳಿಯುತ್ತದೆ. ಮೇಧಾವಿಯಾದ ಮೋದಿ ರಾಷ್ಟ್ರ ಭಕ್ತಿ ಹೆಚ್ಚಿಸಲು ಈ ಯೋಚನೆ ಮಾಡಿದ್ದಾರೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]