ಸ್ಯಾಂಡಲ್‌ವುಡ್‌ನ (Sandalwood) ಹಿರಿಯ ನಿರ್ದೇಶಕ ಭಗವಾನ್ (Director Bhagavan) ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‌ವುಡ್ ನಟ ಮನದೀಪ್ ರಾಯ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು
ನಟ,ನಿರ್ದೇಶಕ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗದಲ್ಲಿ ಭಗವಾನ್ ಗುರುತಿಸಿಕೊಂಡಿದ್ದರು. ಇದೀಗ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 89 ವರ್ಷದ ಭಗವಾನ್ ಅವರು ಇತ್ತೀಚೆಗೆ ಶೀತದಿಂದ ಬಳಲುತ್ತಿದ್ದರು. ಉಸಿರಾಟದ ಸಮಸ್ಯೆಯಿಂದ 2 ದಿನದ ಹಿಂದೆಯೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಡಾ.ಮಂಜುನಾಥ್ ಅವರು ಭಗವಾನ್‌ಗೆ ಚಿಕಿತ್ಸೆ ನೀಡುತ್ತಿದ್ದಾರೆ.
1966ರಲ್ಲಿ ʻಸಂಧ್ಯಾರಾಗʼ ಸಿನಿಮಾ ಮೂಲಕ ಸಹಾಯಕ ನಿರ್ದೇಶಕರಾಗಿ ಭಗವಾನ್ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ದೊರೈರಾಜ್ ಅವರ ಜೊತೆಗೂಡಿ ಸಾಕಷ್ಟು ಸಿನಿಮಾಗಳನ್ನ ನಿರ್ದೇಶನ ಮಾಡಿದ್ದರು.
Live Tv
[brid partner=56869869 player=32851 video=960834 autoplay=true]
ಕನ್ನಡದಲ್ಲಿ ಐನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ, ಹಾಸ್ಯ ನಟ ಮನದೀಪ್ ರಾಯ್ ಅವರಿಗೆ ಹೃದಯಾಘಾತವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರು ದಿನಗಳ ಹಿಂದೆಯೇ ಅವರಿಗೆ ಹೃದಯಾಘಾತವಾಗಿದ್ದು, ಸದ್ಯ ಅವರು ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನದೀಪ್ ರಾಯ್ ಹೃದಯಾಘಾತದಿಂದ ಆಸ್ಪತ್ರೆಗೆ ಸೇರಿರುವ ವಿಚಾರ ಚಿತ್ರೋದ್ಯಮಕ್ಕೆ ತಿಳಿಯುತ್ತಿದ್ದಂತೆಯೇ ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಹಲವರು ಹಾರೈಸಿದ್ದಾರೆ. ಆಪ್ತರು ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ. ಮನದೀಪ್ ರಾಯ್ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪ್ರೀ ವೆಡ್ಡಿಂಗ್ ಪಾರ್ಟಿಯಲ್ಲಿ ಮಿಂಚಿದ `ಬಿಂದಾಸ್’ ನಟಿ ಹನ್ಸಿಕಾ ಮೋಟ್ವಾನಿ
ಹಲವು ದಶಕಗಳಿಂದ ಹಾಸ್ಯ ಕಲಾವಿದರಾಗಿ ರಂಜಿಸಿರುವ ಮನದೀಪ್ ರಾಯ್, ಅನಂತ್ ನಾಗ್ ಹಾಗೂ ಶಂಕರ್ ನಾಗ್ ಜೊತೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವರು. ಮಿಂಚಿನ ಓಟ , ಬೆಂಕಿಯ ಬಲೆ, ಆಕಸ್ಮಿಕ, ಏಳು ಸುತ್ತಿನ ಕೋಟೆ, ಆಸೆಗೊಬ್ಬ ಮೀಸೆಗೊಬ್ಬ, ಆಪ್ತ ರಕ್ಷಕ , ಆಂಟಿ ಪ್ರೀತ್ಸೆ , ಪ್ರೀತ್ಸೋದ್ ತಪ್ಪ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಡಾ.ರಾಜ್ ಕುಮಾರ್ ಅವರಿಂದ ಹಿಡಿದು ಎಲ್ಲಾ ದಿಗ್ಗಜರ ಜೊತೆಯೂ ನಟಿಸಿರುವ ಹೆಗ್ಗಳಿಕೆ ಇವರದ್ದು.
Live Tv
[brid partner=56869869 player=32851 video=960834 autoplay=true]
ಯುವ ನಿರ್ದೇಶಕ ಎಂ. ಆನಂದ್ ರಾಜ್ ನಿರ್ದೇಶನದಲ್ಲಿ ವಿಜಯ ರಾಘವೇಂದ್ರ ನಟಿಸುತ್ತಿರುವ ಸಿನಿಮಾ ರಾಘು. ಫಸ್ಟ್ ಲುಕ್ ಮೂಲಕ ಗಮನ ಸೆಳೆದಿರೋ ಈ ಚಿತ್ರ ವಿಜಯ ರಾಘವೇಂದ್ರ ಸಿನಿ ಕೆರಿಯರ್ ನ ವಿಭಿನ್ನ ಸಿನಿಮಾ ಅನ್ನೋದನ್ನ ಚಿತ್ರತಂಡ ಆರಂಭದಿಂದ ಹೇಳಿಕೊಂಡು ಬಂದಿತ್ತು. ಇದೀಗ ಅದಕ್ಕೆ ಸಾಕ್ಷಿ ಎನ್ನುವಂತೆ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿ ಸಿನಿ ಪ್ರೇಕ್ಷಕರಲ್ಲಿ ಕ್ಯೂರಿಯಾಸಿಟಿ ಮೂಡಿಸಿದೆ.
‘ರಾಘು’ ಸಿನಿಮಾ ಮೂಲಕ ತಮ್ಮ ಸಿನಿ ಕೆರಿಯರ್ ನಲ್ಲೇ ಹೊಸದೊಂದು ಪ್ರಯೋಗಕ್ಕೆ ವಿಜಯ ರಾಘವೇಂದ್ರ ತಮ್ಮನ್ನು ತಾವು ಒಡ್ಡಿಕೊಂಡಿದ್ದಾರೆ. ಆ ಸಿಕ್ರೇಟ್ ಮೋಷನ್ ಪೋಸ್ಟರ್ ಮೂಲಕ ರಿವೀಲ್ ಆಗಿದೆ. ‘ರಾಘು’ ಸಿನಿಮಾ ಸೋಲೋ ಆಕ್ಟಿಂಗ್ ಸಿನಿಮಾವಾಗಿದ್ದು ಇಂಟ್ರಸ್ಟಿಂಗ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿ ಕ್ಯೂರಿಯಾಸಿಟಿ ಹುಟ್ಟು ಹಾಕಿದೆ. ಕನ್ನಡದ ಮಟ್ಟಿಗೆ ಇದೊಂದು ಹೊಸ ರೀತಿಯ ಪ್ರಯೋಗವಾಗಿದ್ದು, ಅಷ್ಟೇ ವಿಭಿನ್ನತೆಯನ್ನು ಸಿನಿಮಾ ಒಳಗೊಂಡಿದೆ. ಹೊಸ ರೀತಿಯ ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ಪೂರ್ತಿ ಸಿನಿಮಾ ವಿಜಯ ರಾಘವೇಂದ್ರ ಒಬ್ಬರೇ ನಟಿಸಿದ್ದಾರೆ. ಇದನ್ನೂ ಓದಿ: ತಮಿಳಿನತ್ತ ಹೊಂಬಾಳೆ ಫಿಲ್ಮ್ಸ್:ಕೀರ್ತಿ ಸುರೇಶ್ ನಟನೆಯ `ರಘುತಥಾ’ ಚಿತ್ರ ನಿರ್ಮಾಣಕ್ಕೆ ಸಾಥ್
‘ಆನ’ ಹಾಗೂ ‘ಬ್ಯಾಂಗ್’ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವ ಇರುವ ಎಂ. ಆನಂದ್ ರಾಜ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸಂಪೂರ್ಣ ಹೊಸತನದಿಂದ ಕೂಡಿರುವ ಈ ಸಿನಿಮಾ ಕನ್ನಡದಲ್ಲಿ ಹೊಸ ಪ್ರಯೋಗ. ವಿಜಯ ರಾಘವೇಂದ್ರ ಸಿನಿ ಕೆರಿಯರ್ ನ ಡಿಫ್ರೆಂಟ್ ಸಿನಿಮಾ ಇದಾಗಿದ್ದು, ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಡಿಫ್ರೆಂಟ್ ಶೇಡ್ ನಲ್ಲಿ ತೆರೆ ಮೇಲೆ ಪ್ರೇಕ್ಷಕರನ್ನು ಎದುರುಗೊಳ್ಳಲಿದ್ದಾರೆ ಎನ್ನುತ್ತಾರೆ ನಿರ್ದೇಶಕ ಎಂ. ಆನಂದ್ ರಾಜ್.
ತಾಂತ್ರಿಕವಾಗಿ ಹಾಗೂ ಕ್ವಾಲಿಟಿ ವಿಚಾರದಲ್ಲಿ ಯಾವುದೇ ಕಾಂಪ್ರಮೈಸ್ ಆಗದೇ ಶ್ರೀಮಂತವಾಗಿ ಸಿನಿಮಾವನ್ನು ಸೆರೆ ಹಿಡಿಯಲಾಗಿದೆ. ಅದಕ್ಕೆಂದೇ ಹೊಸ ಟೆಕ್ನಾಲಜಿ ಇರುವ ಕ್ಯಾಮೆರಾಗಳು, ಅದ್ದೂರಿ ಸೆಟ್ ನಿರ್ಮಾಣ ಮಾಡಿ ‘ರಾಘು’ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕಾಗಿ ಸೌಂಡ್ ಡಿಸೈನಿಂಗ್ ನಲ್ಲಿ ಹೊಸ ರೀತಿಯ ಪ್ರಯೋಗವನ್ನು ಮಾಡಲಾಗಿದ್ದು, ಬಿ.ಆರ್.ನವೀನ್ ಕುಮಾರ್ ಡಿಫ್ರೆಂಟ್ ಇನ್ಸ್ ಟ್ರುಮೆಂಟ್ ಬಳಸಿ ಚಿತ್ರಕ್ಕೆ ಹೊಸ ರೀತಿಯ ಸೌಂಡ್ ಎಫೆಕ್ಟ್ ನೀಡಿದ್ದಾರೆ.
ರಾಘು ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು ಚಿತ್ರದ ಪ್ರಚಾರ ಕಾರ್ಯವನ್ನು ಚಿತ್ರತಂಡ ಆರಂಭಿಸಿದೆ. ಸದ್ಯದಲ್ಲೇ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅನೌನ್ಸ್ ಮಾಡಲಿದೆ. ಡಿ ಕೆ ಎಸ್ ಸ್ಟುಡಿಯೋ, ಕೋಟಾ ಫಿಲಂ ಫ್ಯಾಕ್ಟರಿ ಪ್ರೊಡಕ್ಷನ್ ಹೌಸ್ ನಡಿ ಸಿನಿಮಾ ನಿರ್ಮಾಣವಾಗಿದ್ದು, ರಣ್ವಿತ್ ಶಿವಕುಮಾರ್, ಅಭಿಷೇಕ್ ಕೋಟ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ವಿಜೇತ್ ಚಂದ್ರ ಸಂಕಲನ, ಉದಯ್ ಲೀಲಾ ಕ್ಯಾಮೆರಾ ವರ್ಕ್, ಹಾಡುಗಳಿಗೆ ಸೂರಜ್ ಜೋಯಿಸ್ ಸಂಗೀತ ಸಂಯೋಜನೆ ಮಾಡಿದ್ದು, ರಿತ್ವಿಕ್ ಮುರಳಿಧರ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.
Live Tv
[brid partner=56869869 player=32851 video=960834 autoplay=true]
ಸ್ಯಾಂಡಲ್‌ವುಡ್‌ನ(Sandalwood) ಸಕಲಕಲಾವಲ್ಲಭ ಹಿರಿಯ ನಟ ದ್ವಾರಕೀಶ್ ಅವರು ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ. ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ನಟ ದ್ವಾರಕೀಶ್ ಅವರ ಕಲಾಸೇವೆ ಗುರುತಿಸಿ, ಬೆಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ (Doctorate) ಘೋಷಣೆ ಮಾಡಿದ್ದಾರೆ.
ನಟ, ನಿರ್ದೇಶಕ, ನಿರ್ಮಾಪಕ, ಹೀಗೆ ಕಲಾಸೇವೆ ಸಲ್ಲಿಸಿರುವ ಹಿರಿಯ ನಟ ದ್ವಾರಕೀಶ್ ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ. ನೂರಾರು ಸಿನಿಮಾಗಳಲ್ಲಿ ನಟನೆ, 40ಕ್ಕೂ ಹೆಚ್ಚು ಸಿನಿಮಾ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿರುವ ಪ್ರತಿಭಾನ್ವಿತ ನಟ ದ್ವಾರಕೀಶ್‌ಗೆ ಬೆಂಗಳೂರು ವಿವಿ 57ನೇ ಘಟಿಕೋತ್ಸವದಂದು ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದೆ. ಇದನ್ನೂ ಓದಿ:ಪ್ರಭಾಸ್ ಲವ್ ಲೈಫ್ ಬಗ್ಗೆ ಸುಳಿವು ಕೊಟ್ಟ ವರುಣ್ ಧವನ್
ಚಲನಚಿತ್ರ ವಿಭಾಗದಲ್ಲಿ ದ್ವಾರಕೀಶ್, ಕಾನೂನು ಅಟಾರ್ನಿ ಹಾಗೂ ನ್ಯಾಯ ಸಲಹೆಗಾರರು ವಿಭಾಗ ಅಮರನಾಥ ಗೌಡ, ವರ್ಣ ಚಿತ್ರಕಾರರು ವಿಭಾಗ ಡಾ.ಟಿ. ಅನಿಲ್ ಕುಮಾರ್ ಸೇರಿದಂತೆ ಗೌರವ ಡಾಕ್ಟರೇಟ್ ಅನ್ನು ಡಿ.5ರಂದು ಜ್ಞಾನ ಭಾರತಿ ಆಡಿಟೋರಿಯಂನಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುವುದು.
Live Tv
[brid partner=56869869 player=32851 video=960834 autoplay=true]
‘ರಾಮಾ ರಾಮಾ ರೇ’, ‘ಒಂದಲ್ಲ ಎರಡಲ್ಲ’ ಸಿನಿಮಾ ಖ್ಯಾತಿಯ ಪ್ರತಿಭಾವಂತ ನಿರ್ದೇಶಕ ಸತ್ಯ ಪ್ರಕಾಶ್. ಎರಡು ಅಪರೂಪದ ಸಿನಿಮಾಗಳ ಮೂಲಕ ಜನಮೆಚ್ಚುಗೆ ಜೊತೆಗೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿರುವ ಸತ್ಯ ಪ್ರಕಾಶ್ ಹೊಸದೊಂದು ಸಾಹಸಕ್ಕೆ ಹೊರಳಿದ್ದಾರೆ. ನಿರ್ದೇಶಕ, ನಿರ್ಮಾಪಕನಾಗಿ ಯಶಸ್ವಿಯಾಗಿರುವ ಸತ್ಯ ಪ್ರಕಾಶ್ ನಟನಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಈ ನಡುವೆ ನಿರ್ದೇಶಕರು ನಟನಾಗುತ್ತಿರೋದು ಕಾಮನ್ ವಿಚಾರವಾಗಿದೆ. ಜೊತೆಗೆ ತಾವೇ ಬರೆದ ಕಥೆಗೆ ನಿರ್ದೇಶನ ಮಾಡಿ ನಿರ್ಮಾಣ ಮಾಡಿ ನಟನಾಗುವುದು ಒಂದು ರೀತಿ ಟ್ರೆಂಡ್ ಆಗಿದೆ. ಅಂತಹದ್ದೇ ಒಂದು ಪ್ರಯತ್ನಕ್ಕೆ ಸತ್ಯ ಪ್ರಕಾಶ್ ಕೈ ಹಾಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸತ್ಯ ಪ್ರಕಾಶ್ ಇದೊಂದು ಹೊಸ ರೀತಿಯ ಕಥೆ. ಒಬ್ಬೊಬ್ಬರ ಜೀವನದಲ್ಲಿ ಒಂದೊಂದು ಘಟನೆ ನಡೆದಿರುತ್ತೆ. ನನ್ನ ಬದುಕಿನಲ್ಲೂ ಒಂದಷ್ಟು ಘಟನೆಗಳು ನಡೆದಿವೆ. ಅವೆಲ್ಲವನ್ನು ಆಧರಿಸಿ ಕಥೆ ಹೆಣೆದಿದ್ದೇನೆ. ಈ ಕಥೆಯಲ್ಲಿ ಒಬ್ಬ ಹೊಸ ನಾಯಕ ನನಗೆ ಕಾಣುತ್ತಿದ್ದಾನೆ ಆದ್ರಿಂದ ನಾನೇ ನಟಿಸುತ್ತಿದ್ದೇನೆ. ನಾಯಕ ನಟ ಅನ್ನೋದಕ್ಕಿಂತ ಮುಖ್ಯ ಪಾತ್ರ ಎಂದಷ್ಟೇ ಹೇಳಬಹುದು ಎನ್ನುತ್ತಾರೆ ನಿರ್ದೇಶಕ ಸತ್ಯ ಪ್ರಕಾಶ್.
ಈ ಚಿತ್ರ ಸಾಮಾನ್ಯ ಮನುಷ್ಯನ ಬದುಕಿಗೆ ಸಂಬಂಧಿಸಿದ ಕಥೆ ಒಳಗೊಂಡಿದೆ. ಸಾಮಾನ್ಯ ವ್ಯಕ್ತಿ ಬದುಕಲ್ಲಿ ಹಾಸ್ಯ, ಎಮೋಷನ್ಸ್, ರಾಜಕೀಯ ಎಲ್ಲವೂ ಇರುತ್ತೆ ಈ ಚಿತ್ರದಲ್ಲೂ ಅವೆಲ್ಲವೂ ಇದೆ. ಕಥಾನಾಯಕನಿಗೆ ಎಲ್ಲರಿಗೂ ಒಳ್ಳೆಯದನ್ನು ಬಯಸುವ ಗುಣವಿರುತ್ತೆ ಆದ್ರೆ ಆತನ ಒಳ್ಳೆಯ ಗುಣದಿಂದ ಅವನಿಗಾಗುವ ಪ್ರಯೋಜನ ಹಾಗೂ ತೊಂದರೆಗಳೇನು ಎಂಬುದನ್ನು ಹಾಸ್ಯದ ಮೂಲಕ ಹೇಳ ಹೊರಟಿದ್ದೇನೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಸತ್ಯ ಪ್ರಕಾಶ್. ಇದನ್ನೂ ಓದಿ:ರಶ್ಮಿಕಾ ಮಂದಣ್ಣ ರೀತಿಯಲ್ಲಿಯೇ ಕೈ ಸನ್ನೆ ಮಾಡಿ ರಿಷಬ್ ತಿರುಗೇಟು
ನಾನು ಯಾವಾಗಲೂ ಯೂನಿವರ್ಸಲ್ ಸಬ್ಜೆಕ್ಟ್ ಆಯ್ಕೆ ಮಾಡಿಕೊಳ್ಳುತ್ತೇನೆ. ನನ್ನ ಸಿನಿಮಾವನ್ನು ಎಲ್ಲಾ ವರ್ಗದ ಜನರು ನೋಡಬೇಕು ಎನ್ನುವುದು ನನ್ನ ಆಸೆ. ಈ ಚಿತ್ರದ ಕಥೆಯೂ ಹಾಗೆ ಇದೆ. ಸಿನಿಮಾ ಚಿತ್ರೀಕರಣ ಜನವರಿಯಲ್ಲಿ ಆರಂಭವಾಗಲಿದೆ .ರಾಮಾ ರಾಮಾ ರೇ ಸಿನಿಮಾದಲ್ಲಿ ಕೆಲಸ ಮಾಡಿದ ತಂತ್ರಜ್ಞರೇ ಈ ಚಿತ್ರಕ್ಕೂ ಕೆಲಸ ಮಾಡಲಿದ್ದಾರೆ ಎಂದು ಮಾಹಿತಿ ನೀಡಿರುವ ಸತ್ಯ ಪ್ರಕಾಶ್ ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡೋದಾಗಿ ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗುವುದರ ಮೂಲಕ ವಿವಾದಕ್ಕೆ ಕಾರಣರಾಗಿದ್ದರು. ಕಾಲೇಜು ಫೆಸ್ಟ್ ಅಲ್ಲಿ ಈ ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಘೋಷಣೆ ಕೂಗಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಕೂಡ ನಡೆದಿದೆ ಎಂದು ಹೇಳಲಾಗಿತ್ತು. ಈ ಕುರಿತು ನಟ ಚೇತನ್ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದವರ ಪರ ಧ್ವನಿ ಎತ್ತಿದ್ದಾರೆ.
ಈ ಕುರಿತು ಚೇತನ್ ಟ್ವಿಟ್ ಮಾಡಿದ್ದು, ‘ನಿನ್ನೆ ನಡೆದ ಕಾಲೇಜು ಫೇಸ್ಟ್ ನಲ್ಲಿ ಬೆಂಗಳೂರಿನ 3 ವಿದ್ಯಾರ್ಥಿಗಳು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಇದನ್ನು ವಿನೋದಕ್ಕಾಗಿ ಮಾಡಲಾಗಿದೆ. ಈ ಕಾರಣಕ್ಕಾಗಿ ಆರ್ಯನ್, ರಿಯಾ ಮತ್ತು ದಿನಕರ್ ಅವರನ್ನು ಥಳಿಸಿದ ಬೆದರಿಸಿ ಮತ್ತು ಪೊಲೀಸ್ ಕಸ್ಟಡಿಗೆ ತಗೆದುಕೊಳ್ಳಲಾಗಿದೆ. ಇದು ಅಸಂಬಂಧ ಮತ್ತು ಅಪಾಯಕಾರಿ’ ಎಂದು ಅವರು ಟ್ವಿಟ್ ಮಾಡಿದ್ದಾರೆ.
ಅಲ್ಲದೇ, ‘ಪಾಕಿಸ್ತಾನದ ಜನರು ನಮ್ಮ ಸಹೋದರಿಯರು ಮತ್ತು ಸಹೋದರರು ಶತ್ರುಗಳಲ್ಲ. ವಿದ್ಯಾರ್ಥಿಗಳನ್ನು ಥಳಿಸಿ ಬೆದರಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದು ಅಪಾಯಕಾರಿ. ಪಾಕಿಸ್ತಾನ ಕ್ಕೆ ಜೈಕಾರ ಹಾಕೋದು ವಾಕ್ ಸ್ವಾತಂತ್ರ್ಯ’ ಎಂದು ಚೇತನ್ ವಿವಾದಾತ್ಮಕ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಸಾಕಷ್ಟು ವೈರಲ್ ಕೂಡ ಆಗಿದೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಕರೆದ ದೇಶದ್ರೋಹಿಗಳ ಜೊತೆ ಚೇತನ್ ನಿಂತಿದ್ದಾರೆ ಎಂದು ಕೆಲವರು ಕಾಮೆಂಟ್ ಕೂಡ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಚೇತನ್ ಬರೆದ ಪ್ರತಿ ಪೋಸ್ಟ್ ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ವಿವಾದಕ್ಕೂ ಕಾರಣವಾಗುತ್ತಿವೆ. ಕೆಲವರು ಅವರ ನಡೆಯನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಅವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಟ್ವಿಟ್ ಇನ್ನ್ಯಾವ ವಿವಾದದ ತಿರುವು ಪಡೆದುಕೊಳ್ಳುತ್ತದೋ ಕಾದು ನೋಡಬೇಕು.
Live Tv
[brid partner=56869869 player=32851 video=960834 autoplay=true]
ಸ್ಯಾಂಡಲ್‌ವುಡ್‌ನ(Sandalwood) `ಆ ದಿನಗಳು’ ಖ್ಯಾತಿಯ ನಟ ಚೇತನ್ ಕುಮಾರ್ (Chetan Kumar) ಸದಾ ಒಂದಲ್ಲಾ ಒಂದು ವಿವಾದದ ಮೂಲಕ ಸುದ್ದಿಯಾಗಲೇ ಇರುತ್ತಾರೆ. `ಕಾಂತಾರ’ ಚಿತ್ರದ ವಿರುದ್ಧ ಕಿಡಿಕಾರಿದ ನಂತರ ಜೆಡಿಎಸ್ ರಾಜಕಾರಣಿ ಸಿಎಂ ಇಬ್ರಾಹಿಂ(Ibrahim) ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಸಲ್ಮಾನರಾಗಿ ಹುಟ್ಟಿದ ಟಿಪ್ಪುವಿನ ಮೇಲೆ ಹಿಂದುತ್ವದ ದ್ವೇಷವನ್ನು ನಾವು ಖಂಡಿಸಲೇಬೇಕು ಮತ್ತು ಟಿಪ್ಪುವಿನ ಮೇಲೆ ಇಸ್ಲಾಮಿಸ್ಟ್ ಲಾಬಿಗಳ ಇಸ್ಲಾಮಿನ ಹೇರಿಕೆಯನ್ನು ಕೂಡ ನಾವು ವಿರೋಧಿಸಬೇಕು. ಟಿಪ್ಪು ಸುಲ್ತಾನ್ ಆಧುನಿಕ ಕರ್ನಾಟಕದ ಐಕಾನ್ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂಬ ಚೇತನ್ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
Live Tv
[brid partner=56869869 player=32851 video=960834 autoplay=true]
ಬಾಲಿವುಡ್‌ನ(Bollywood) ಸಾಕಷ್ಟು ಸಿನಿಮಾಗಳಲ್ಲಿ ಛಾಪು ಮೂಡಿಸಿರುವ ನಟ ವರುಣ್ ಧವನ್(Varun Dhawan) ಇದೀಗ ಸುದ್ದಿಯಲ್ಲಿದ್ದಾರೆ. ಸಮಂತಾ (Samantha) ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಬೆನ್ನಲ್ಲೇ ವರುಣ್ ಆರೋಗ್ಯದ ವಿಚಾರ ಇದೀಗ ರಿವೀಲ್ ಆಗಿದೆ. ನಟ ವರುಣ್ ಧವನ್ ಕೂಡ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕುರಿತು ಸ್ವತಃ ವರುಣ್ ಅವರೇ ರಿವೀಲ್ ಮಾಡಿದ್ದಾರೆ.
ಸ್ಟಾರ್ ನಟ ವರುಣ್ ಧವನ್ ಸದ್ಯ `ಭೇಡಿಯಾ’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ತಮಗಿರುವ ಆರೋಗ್ಯದ ಸಮಸ್ಯೆಯ ಬಗ್ಗೆ ಬಾಯ್ಬಿಟ್ಟಿದ್ದಾರೆ. ವರುಣ್, ವೆಸ್ಟಿಬುಲಾರ್ ಹೈಪೋಫಂಕ್ಷನ್ ಎಂಬ ಆರೋಗ್ಯ ಸ್ಥಿತಿಯಿಂದ ಬಳಲುತ್ತಿದ್ದಾರೆ. ಕೋವಿಡ್‌ಗೂ ಮುನ್ನ ಈ ಅಪರೂಪದ ರೋಗದ ಬಗ್ಗೆ ನಟನ ಗಮನಕ್ಕೆ ಬಂದಿದ್ದು, ಕೋವಿಡ್ ನಂತರ ಅವಧಿಯಿಂದ ಸಾಕಷ್ಟು ಕಷ್ಟಪಡುತ್ತಿರೋದಾಗಿ ತಿಳಿಸಿದ್ದಾರೆ.
ಇದೊಂದು ಡಿಸಾರ್ಡರ್ ಆಗಿದ್ದು ಇದರಲ್ಲಿ ಕಿವಿಯ ಆಂತರಿಕ ಭಾಗದಲ್ಲಿರುವ ಹಾಗೂ ಶರೀರ ಸಮತೋಲನಕ್ಕೆ ಪ್ರಮುಖವಾಗಿರುವ ಭಾಗವು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಈ ಪರಿಣಾಮವಾಗಿ ವ್ಯಕ್ತಿ ತಲೆ ತಿರುಗಿ ಸಮತೋಲನವನ್ನೇ ಕಳೆದುಕೊಳ್ಳುತ್ತಾನೆ. ಇದು ಈ ರೋಗದ ಲಕ್ಷಣವಾಗಿದೆ. ಇದನ್ನೂ ಓದಿ:ನಟಿ ಅದಿತಿ ಪ್ರಭುದೇವ ಮದುವೆ ಡೇಟ್ ಫಿಕ್ಸ್
ಸದ್ಯ `ಭೇಡಿಯಾ’ ಚಿತ್ರ ನವೆಂಬರ್ 25ರಂದು ತೆರೆಗೆ ಅಪ್ಪಳಿಸುತ್ತಿದೆ. ಚಿತ್ರದ ಟ್ರೈಲರ್ ಮತ್ತು ಪೋಸ್ಟರ್ ಮೂಲಕ ಈಗಾಗಲೇ ನೆಟ್ಟಿಗರ ಗಮನ ಸೆಳೆದಿದೆ. ʻಕಾಂತಾರʼದ ಹವಾ ಮಧ್ಯೆ ವರುಣ್ ಧವನ್ ಸಿನಿಮಾ ಗೆಲ್ಲುತ್ತಾ ಎಂಬುದನ್ನ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
ಕನ್ನಡ ಕಿರುತೆರೆ ನಿರ್ದೇಶಕ, ನಟ ಸಯ್ಯದ್ ಅಶ್ರಫ್ ಇಂದು ಬೆಳಗ್ಗೆ 3 ಗಂಟೆಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೇವಲ 42ರ ವಯಸ್ಸಿನ ಸಯ್ಯದ್ ಕನ್ನಡ ಕಿರುತೆರೆಯಲ್ಲಿ ನಟರಾಗಿ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಅದರಲ್ಲೂ ಕನ್ನಡ ಕಿರುತೆರೆ ಜಗತ್ತಿಗೆ ಭಕ್ತಿ ಪ್ರಧಾನ ಮತ್ತು ಫ್ಯಾಂಟಿಸಿ ಧಾರಾವಾಹಿಗಳನ್ನು ಕೊಟ್ಟ ಹೆಗ್ಗಳಿಕೆ ಇವರದ್ದು.
ಅಮ್ಮ ನಾಗಮ್ಮ, ನಾಗಮಣಿ, ಪಾಂಡುರಂಗ, ಚಕ್ರವಾಕ, ತಕಧಿಮಿತಾ, ಅಳುಗುಳಿಮನೆ ಸೇರಿದಂತೆ ಸಾವಿರಾರು ಕಂತುಗಳಲ್ಲಿ ಪ್ರಸಾರವಾಗಿರುವ ಧಾರಾವಾಹಿಗಳಿಗೆ ಇವರು ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅದರಲ್ಲೂ ಬಿ.ಸುರೇಶ ಅವರ ಸಾರಥ್ಯದಲ್ಲಿ ಮೂಡಿ ಬಂದ ಹಲವಾರು ಧಾರಾವಾಹಿಗಳಿಗೆ ಇವರದ್ದೇ ನಿರ್ದೇಶನವಿದೆ. ಮೀಡಿಯಾ ಹೌಸ್ ಸ್ಟುಡಿಯೋ ನಿರ್ಮಾಣದಲ್ಲಿ ಹತ್ತು ವರ್ಷಗಳ ಕಾಲ ಧಾರಾವಾಹಿಗಾಗಿ ದುಡಿದಿದ್ದಾರೆ. ಇದನ್ನೂ ಓದಿ:ವಿರಹ ಮುಂದುವರೆಯಲಿ ಎಂದು ದಿವ್ಯಾ ಉರುಡುಗ ಕಾಲೆಳೆದ ಕಿಚ್ಚ
ಸಯ್ಯದ್ ಅಶ್ರಫ್ ನಿಧನಕ್ಕೆ ಬಿ.ಸುರೇಶ, ಶೈಲಜಾ ನಾಗ್ ಹಾಗೂ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ. ಶಿವಕುಮಾರ್ ಸೇರಿದಂತೆ ಹಲವರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಮಧ್ಯಾಹ್ನದವರೆಗೂ ಅಶ್ರಫ್ ಅವರ ಸ್ವಗೃಹದಲ್ಲಿ ಅವರ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ನಂತರ ಅಂತ್ಯ ಸಂಸ್ಕಾರ ಮಾಡುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಕೊಪ್ಪಳ: ತಮ್ಮ ಅಭಿನಯದಿಂದ ಗಮನ ಸೆಳೆದಿರುವ ಚಿತ್ರನಟ ಯಶ್ (Yash) ರೈತರ ಅನುಕೂಲಕ್ಕಾಗಿ ಕೈಗೊಂಡಿರುವ ಕಾರ್ಯ ಈಗ ಆಕರ್ಷಣೆಯ ಕೇಂದ್ರವಾಗಿದೆ. ಯಶ್ ಅವರ ʻಯಶೋಮಾರ್ಗʼದ (Yasho Marga Foundation) ಸೇವಾ ಕಾರ್ಯ ಈಗ ಯಶಸ್ಸು ಕಂಡಿದೆ. ಯಶ್ ಕಾರ್ಯಕ್ಕೆ ರೈತರು ಖುಷಿಗೊಂಡಿದ್ದಾರೆ. ಕಳೆದ 14 ವರ್ಷದ ನಂತರ ಕೆರೆಯ ಕೊಡಿ ಬಿದ್ದಿದೆ. ಕೆರೆಯಿಂದ ನೀರು ಹರಿಯುತ್ತಿರುವುದು ಸಂತಸ ತಂದಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು ಗ್ರಾಮದಲ್ಲಿರುವ ಕೆರೆ. ಈ ಭಾಗ ಒಣ ಭೂಮಿ ಪ್ರದೇಶವಾಗಿತ್ತು. ಅಂತರ್ಜಲ ಮಟ್ಟ ತೀರಾ ಕುಸಿದಿತ್ತು. ಈ ಸಂದರ್ಭದಲ್ಲಿ ಯಶ್ ಈ ಕೆರೆಯನ್ನು ಅಭಿವೃದ್ದಿ ಪಡಿಸಲು ಮುಂದಾದರು. ಅಂತರ್ಜಲಮಟ್ಟ ಹೆಚ್ಚಿಸಲು ಸ್ಥಳೀಯರು, ಜಲಮೂಲ ಸಂರಕ್ಷಣಾ ಮುಖಂಡರೊಂದಿಗೆ 2017 ರಲ್ಲಿ ತಲ್ಲೂರು ಕೆರೆಯನ್ನು 4 ಕೋಟಿ ರೂಪಾಯಿಯಲ್ಲಿ ಅಭಿವೃದ್ದಿ ಪಡಿಸಿದ್ದಾರೆ.
96 ಎಕರೆ ವಿಸ್ತಾರವಿರುವ ತಲ್ಲೂರು ಕೆರೆಯು (Tallur Lake) 1,038 ಎಕರೆ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಇಲ್ಲಿರುವ ಕೆರೆಯು ಹೂಳು ತುಂಬಿತ್ತು. ಸುತ್ತಲಿನ 14 ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿತ್ತು. ಕೆರೆ ಅಭಿವೃದ್ದಿಪಡಿಸಿದ ನಂತರ ಈಗ ಅಂತರ್ಜಲಮಟ್ಟ ಹೆಚ್ಚಳವಾಗಿದೆ. ಈ ಮಧ್ಯೆ ಈಗ ಇದೇ ಕೆರೆಯು ಭರ್ತಿಯಾಗಿ ಕೊಡಿ ಬಿದ್ದಿದೆ. ಇದರಿಂದ ರೈತರು ಸಂತಸಗೊಂಡಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ PFI ಟೆರರ್ ಟ್ರೈನಿಂಗ್- ಸ್ಫೋಟಕ ಸತ್ಯ ಬಯಲು
ಈ ಕೆರೆಯು 2008 ರಲ್ಲಿ ಭರ್ತಿಯಾಗಿ ಕೊಡಿ ಬಿದ್ದಿತ್ತು. ಅದರ ನಂತರ ಯಶ್ ಕೆರೆ ಅಭಿವೃದ್ದಿ ಪಡಿಸಿದರು. ಇದೇ ವೇಳೆ ಕಳೆದು ಮೂರು ನಾಲ್ಕು ವರ್ಷದಿಂದ ಉತ್ತಮ ಮಳೆಯಾಗುತ್ತಿದೆ. ಈ ಮಳೆಗೆ ಕೆರೆ ಭರ್ತಿಯಾಗಿತ್ತು. ಆದರೆ ಕೊಡಿ ಬಿದ್ದಿರಲಿಲ್ಲ. ಈ ಮಧ್ಯೆ ಕಳೆದ ಎರಡು ದಿನಗಳಿಂದ ಭರ್ಜರಿ ಮಳೆಯಾದ ಕಾರಣ ಕೆರೆಯಲ್ಲಿ ಕೊಡಿ ಬಿದ್ದಿದೆ. ಇದರಿಂದ ತಲ್ಲೂರು ಸೇರಿ ಸುತ್ತಲಿನ ಗ್ರಾಮಸ್ಥರು ಸಂತಸಗೊಂಡಿದ್ದಾರೆ.
ಇಂದು ಮುಂಜಾನೆ ನೂರಾರು ಜನ ಕೆರೆಗೆ ಭೇಟಿ ನೀಡಿ ದೃಶ್ಯ ನೋಡಿ ಆನಂದಿಸಿದ್ದಾರೆ. ಒಟ್ನಲ್ಲಿ ಯಶೋಮಾರ್ಗದ ಮೂಲಕ ನಟ ಯಶ್ ಅವರ ಸಂಕಲ್ಪ ಈಗ ಫಲ ಕಂಡಿದೆ. ಹತ್ತಾರು ಗ್ರಾಮಗಳ ರೈತರ ಬದುಕಿಗೆ ಆಸರೆಯಾಗಿದೆ.
Live Tv
[brid partner=56869869 player=32851 video=960834 autoplay=true]