Tag: actor

  • ಕಿರುತೆರೆಗೆ ಗುಡ್ ಬೈ, ಸಿನಿಮಾಗಳಲ್ಲಿ ʻಕನ್ನಡತಿʼ ಹೀರೋ ಕಿರಣ್ ರಾಜ್ ಬ್ಯುಸಿ

    ಕಿರುತೆರೆಗೆ ಗುಡ್ ಬೈ, ಸಿನಿಮಾಗಳಲ್ಲಿ ʻಕನ್ನಡತಿʼ ಹೀರೋ ಕಿರಣ್ ರಾಜ್ ಬ್ಯುಸಿ

    ಟಿವಿ ಪರದೆಯಲ್ಲಿ `ಕನ್ನಡತಿ’ಯ (Kannadathi) ಹರ್ಷ ಕುಮಾರ್ ಆಗಿ ಮಿಂಚಿದ್ದ ಕಿರಣ್ ರಾಜ್ (Kiran Raj) ಇದೀಗ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಿರುತೆರೆಯ `ಕನ್ನಡತಿ’ ಸೀರಿಯಲ್ ಅಂತ್ಯವಾದ ಬೆನ್ನಲ್ಲೇ ಕಿರಣ್ ರಾಜ್ ಮುಂದೇನು ಮಾಡ್ತಾರೆ ಅನ್ನೋದಕ್ಕೆ ಇಲ್ಲಿದೆ ಡಿಟೈಲ್ಸ್.

    ಕಿನ್ನರಿ, ದೇವತೆ, ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಗಮನ ಸೆಳೆದಿದ್ದ ಕಿರಣ್ ರಾಜ್ ಮತ್ತಷ್ಟು ಜನಪ್ರಿಯತೆ ತಂದು ಕೊಟ್ಟಿದ್ದು ಕನ್ನಡತಿ ಸೀರಿಯಲ್, ಕಿರಣ್ ರಾಜ್ ಮತ್ತು ರಂಜನಿ ರಾಘವನ್ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಕನ್ನಡತಿಯ ಕನ್ನಡ ಅಭಿಮಾನಕ್ಕೆ ಕಥೆಗೆ ಟಿವಿ ಪ್ರೇಕ್ಷಕರು ಫಿದಾ ಆಗಿದ್ದರು. ಈಗ ಈ ಧಾರಾವಾಹಿಗೆ ಬ್ರೇಕ್ ಬಿದ್ದಿದೆ. ಇದನ್ನೂ ಓದಿ: ಬಾತ್‌ಟಬ್‌ನಲ್ಲಿ ಹಾಟ್ ಆಗಿ ಪೋಸ್ ಕೊಟ್ಟ ತುಪ್ಪದ ಬೆಡಗಿ ರಾಗಿಣಿ

    `ಕನ್ನಡತಿ’ ಧಾರಾವಾಹಿಯನ್ನ ಅದೆಷ್ಟು ಅಚ್ಚುಕಟ್ಟಾಗಿ ಟಿವಿಪರದೆಯಲ್ಲಿ ತೋರಿಸಿದ್ದರೋ ಹಾಗೆಯೇ ಕನ್ನಡತಿಯ ಅಂತಿಮ ಅಧ್ಯಾಯ ಕೂಡ ಅರ್ಥಪೂರ್ಣವಾಗಿ ತೋರಿಸಿ ಸೀರಿಯಲ್‌ಗೆ ಅಂತ್ಯ ಹಾಡಿದ್ದಾರೆ.

    ನಟ ಕಿರಣ್ ರಾಜ್ ಅವರು ಕನ್ನಡತಿ ಸೀರಿಯಲ್ ಮಾಡುವಾಗಲೇ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದರು. ತಮ್ಮದೇ ಬಟ್ಟೆ ಬ್ರ್ಯಾಂಡ್ ಜೊತೆಗೆ ಬಿರಿಯಾನಿ ರೆಸ್ಟೋರೆಂಟ್ ಕೂಡ ಹೊಂದಿದ್ದಾರೆ. ಕಿರಣ್ ರಾಜ್ ಫೌಂಡೇಶನ್ ಮೂಲಕ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡ್ತಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ  ನಟ ಕಿರಣ್‌ ಸಾಕಷ್ಟು ಜನರಿಗೆ ಸಹಾಯ ಹಸ್ತ ನೀಡಿದ್ದಾರೆ.

    ಇನ್ನೂ ಕಿರಣ್ ನಟಿಸಿರುವ `ಭರ್ಜರಿ ಗಂಡು’ (Bharjari Gandu), `ಶೇರ್’ (Sher) ಸಿನಿಮಾಗಳು ತೆರೆಗೆ ಬರಲಿದೆ. ಇದೇ ಫೆಬ್ರವರಿಯಲ್ಲಿ ಹೊಸ ಸಿನಿಮಾ ಕೂಡ ಅನೌನ್ಸ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಟಿ ಲಾವಣ್ಯ ಜೊತೆ ಹಸೆಮಣೆ ಏರಲು ರೆಡಿಯಾದ ವರುಣ್‌ ತೇಜ್‌

    ನಟಿ ಲಾವಣ್ಯ ಜೊತೆ ಹಸೆಮಣೆ ಏರಲು ರೆಡಿಯಾದ ವರುಣ್‌ ತೇಜ್‌

    ಚಿತ್ರರಂಗದಲ್ಲಿ ಗಟ್ಟಿಮೇಳದ ಸೌಂಡ್ ಜೋರಾಗಿದೆ. ಸ್ಟಾರ್ ನಟ-ನಟಿಯರು ಹಸೆಮಣೆ ಏರುತ್ತಿದ್ದಾರೆ. ಈ ಬೆನ್ನಲ್ಲೇ ತೆಲುಗು ನಟ ವರುಣ್ ತೇಜ್ (Varun Tej) ಮದುವೆಯ (Wedding) ಸುದ್ದಿ ಹರಿದಾಡುತ್ತಿದೆ. ಸದ್ಯದಲ್ಲೇ ಸ್ಟಾರ್ ನಟಿಯ ಕೈ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ.

    ಮೆಗಾಸ್ಟಾರ್ ಫ್ಯಾಮಿಲಿಯ ಪ್ರತಿಭಾನ್ವಿತ ನಟ ವರುಣ್ ತೇಜ್‌ಗೆ ಸೌತ್‌ನಲ್ಲಿ ಬೇಡಿಕೆಯಿದೆ. `ಮುಕುಂದ’ (Mukunda) ಚಿತ್ರದ ಮೂಲಕ ನಾಯಕ ನಟನಾಗಿ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ವರುಣ್, ಸಾಕಷ್ಟು ಸಿನಿಮಾಗಳ ಮೂಲಕ ಛಾಪು ಮೂಡಿಸಿದ್ದಾರೆ. ನಟ ನಾಗಬಾಬು, ಮೆಗಾಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್ ಅವರಂತಹ ಸ್ಟಾರ್ ನಟರಿದ್ದರೂ ಕೂಡ ತಮ್ಮ ಪರಿಶ್ರಮದಿಂದ ತೆಲುಗು ರಂಗದಲ್ಲಿ ವರುಣ್ ಗಟ್ಟಿನೆಲೆ ಗಿಟ್ಟಿಸಿಕೊಂಡಿದ್ದಾರೆ.‌ ಇದನ್ನೂ ಓದಿ: ಅಪಘಾತವಾಗಿ ಎರಡು ವರ್ಷ: ನಟಿ ರಿಷಿಕಾ ಸಿಂಗ್ ಬದುಕುಳಿದಿದ್ದೇ ಪವಾಡ

    ವರುಣ್ ತೇಜ್ ಅವರ ಸಹೋದರಿ ನಿಹಾರಿಕಾ (Niharika) ಮದುವೆ ಲಾಕ್‌ಡೌನ್ ವೇಳೆಯಲ್ಲಿ ನಡೆದಿತ್ತು. ಚಿತ್ರರಂಗದಲ್ಲಿ ಒಬ್ಬೊಬ್ಬರೇ ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಬೆನ್ನಲ್ಲೇ ವರುಣ್ ತೇಜ್ ಮದುವೆ ಸುದ್ದಿ ಈಗ ಹಾಟ್ ಟಾಪಿಕ್ ಆಗಿದೆ.

    ಇನ್ನೂ ವರುಣ್ ತೇಜ್ ಮತ್ತು ನಟಿ ಲಾವಣ್ಯ ತ್ರಿಪಾಠಿ (Lavanya Tripati) ಹಲವು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗುತ್ತಿದೆ. ಈ ವರ್ಷ ಈ ಜೋಡಿ ಮದುವೆಯ ಕುರಿತು ಗುಡ್ ನ್ಯೂಸ್ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿನಿಮಾ ಸ್ಟಾರ್ ಗಳಿಗೇಕೆ ಸ್ಮಾರಕ? : ನಟ ಚೇತನ್ ಪ್ರಶ್ನೆ

    ಸಿನಿಮಾ ಸ್ಟಾರ್ ಗಳಿಗೇಕೆ ಸ್ಮಾರಕ? : ನಟ ಚೇತನ್ ಪ್ರಶ್ನೆ

    ಲನಚಿತ್ರ ತಾರೆಯರಿಗೆ ಸಾರ್ವಜನಿಕ ಜಾಗ, ಹಣ ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು ಸ್ಮಾರಕ (memorial) ನಿರ್ಮಾಣ ಮಾಡಬಾರದು ಎಂದು ನಟ (Actor), ಸಾಮಾಜಿಕ ಹೋರಾಟಗಾರ ಚೇತನ್ (Chetan) ಸರಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.  ಹಲವಾರು ಕನ್ನಡಿಗರಂತೆಯೇ ನಟ, ನಟಿಯರು ಕೂಡ ಕೆಲಸ ಮಾಡಿ ಸಂಪಾದಿಸುತ್ತಾರೆ. ಈಗಾಗಲೇ ನಮ್ಮ ಸಮಾಜದಲ್ಲಿ ಅವರಿಗೆ ಅನಗತ್ಯ ಪ್ರಚಾರ ನೀಡಿದ್ದೇವೆ. ಅವರ ಸಿನಿಮಾ ಯಶಸ್ಸಿಗೆ ಅನಗತ್ಯವಾಗಿಯೇ ಗಮನ ಸೆಳೆಯುತ್ತಾರೆ. ಹಾಗಾಗಿ ಸ್ಮಾರಕಗಳನ್ನು ಕಟ್ಟದಂತೆ ಅವರು ಮನವಿ ಮಾಡಿದ್ದಾರೆ.

    Actor chetan (1)

    ನಾಡಿಗೆ ಬೇಕಾಗಿದ್ದು ಸ್ಟಾರ್ ಗಳ ಸ್ಮಾರಕಗಳ ಬದಲು ಕರ್ನಾಟಕ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವಂತಹ ವಸ್ತು ಸಂಗ್ರಹಾಲಯಗಳು. ನಮ್ಮ ನೆಲ ಸ್ಮಾರಕಗಳಿಗಿಂತ ವಸ್ತು ಸಂಗ್ರಹಾಲಯಗಳಿಗೆ ಬಳಕೆಯಾಗಲಿ ಎಂದು ನಟ ಚೇತನ್ ಆಗ್ರಹಿಸಿದ್ದಾರೆ. ನಿನ್ನೆಯಷ್ಟೇ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ಉದ್ಘಾಟನೆ ಆಗಿದೆ. ಈ ಬೆನ್ನಲ್ಲೇ ಚೇತನ್ ಇಂತಹ ಮಾತುಗಳನ್ನು ಆಡಿದ್ದಾರೆ. ಇವರ ಮಾತು ಯಾವ ಸ್ವರೂಪ ಪಡೆದುಕೊಳ್ಳುತ್ತದೆಯೋ ಕಾದು ನೋಡಬೇಕು. ಇದನ್ನೂ ಓದಿ: ದೈವ ದರ್ಶನ ಪಡೆದ ನಿರೂಪಕಿ ಅನುಶ್ರೀ

    ಸಿನಿಮಾ ರಂಗದ ವಿಚಾರವಾಗಿ ಚೇತನ್ ಈ ಹಿಂದೆಯೇ ಅನೇಕ ಮಾತುಗಳನ್ನು ಆಡಿದ್ದಾರೆ. ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಹೋರಾಟವನ್ನೇ ಅವರು ಕೈಗೆತ್ತಿಕೊಂಡಿದ್ದರು. ನಟ ನಟಿಯರ ತಾರತಮ್ಯದ ಬಗ್ಗೆ ಧ್ವನಿ ಎತ್ತಿದ್ದರು. ಕಾರ್ಮಿಕರ ಕಷ್ಟಗಳ ಕುರಿತು ಮಾತನಾಡಿದ್ದರು. ಇದೀಗ ಸ್ಮಾರಕಗಳ ಬಗ್ಗೆ ಚೇತನ್ ಮಾತನಾಡಿದ್ದಾರೆ. ಜನರ ಹಣವನ್ನು ಈ ರೀತಿಯಾಗಿ ದುಂದುವೆಚ್ಚ ಮಾಡಬೇಡಿ ಎಂದು ಅವರು ಸರಕಾರಕ್ಕೆ ಸಲಹೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾನು ಕುಡಿದು ಮಾತಾಡ್ತಾ ಇದ್ದೀನಿ ಅನ್ಕೊಂಡ್ರೇನೋ: ನಟ ಸುದೀಪ್‌

    ನಾನು ಕುಡಿದು ಮಾತಾಡ್ತಾ ಇದ್ದೀನಿ ಅನ್ಕೊಂಡ್ರೇನೋ: ನಟ ಸುದೀಪ್‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚಿತ್ರರಂಗ ನನ್ನ ಸ್ವತ್ತಲ್ಲ, ಕೆಸಿಸಿಗೆ ಎಲ್ಲರಿಗೂ ಆಹ್ವಾನವಿದೆ: ಕಿಚ್ಚ ಸುದೀಪ್

    ಚಿತ್ರರಂಗ ನನ್ನ ಸ್ವತ್ತಲ್ಲ, ಕೆಸಿಸಿಗೆ ಎಲ್ಲರಿಗೂ ಆಹ್ವಾನವಿದೆ: ಕಿಚ್ಚ ಸುದೀಪ್

    ಕೋವಿಡ್ ಕಾರಣಗಳಿಂದ ಕಳೆದ ಕೆಲವು ವರ್ಷಗಳಿಂದ ನಿಂತಿದ್ದ `ಕರ್ನಾಟಕ ಚಲನಚಿತ್ರ ಕಪ್’ (KARNATAKA CHALANACHITRA CUP) ಈಗ ಮತ್ತೊಮ್ಮೆ ಚಾಲನೆ ಸಿಕ್ಕಿದೆ. ಸಿನಿಮಾ ಕೆಲಸದಿಂದ ಬ್ರೇಕ್ ಪಡೆದು ಚಿತ್ರರಂಗದ ಕಲಾವಿದರು ಕ್ರಿಕೆಟ್ (Cricket) ಆಟಕ್ಕಾಗಿ `ಕೆಸಿಸಿ’ಗಾಗಿ (Kcc) ಸಾಥ್ ನೀಡುತ್ತಿದ್ದರು. ಈಗ ಈ ವರ್ಷ ನಡೆಯಲಿರುವ ಕೆಸಿಸಿ ಮೂರನೇ ಆವೃತ್ತಿಯಲ್ಲಿ ಏನೆಲ್ಲ ಇರಲಿದೆ ಎನ್ನುವ ಬಗ್ಗೆ ಸುದೀಪ್ (Sudeep) ಮಾತನಾಡಿದ್ದಾರೆ.

    ಕಳೆದ ಎರಡು ಸೀಸನ್‌ಗಳಲ್ಲಿ ಹಲವರು ಕೆಸಿಸಿಯಲ್ಲಿ ಆಡಿದ್ದಾರೆ. ಇನ್ನೂ ಕೆಲವರು ಇದರಲ್ಲಿ ಪಾಲ್ಗೊಂಡಿಲ್ಲ. ಕೆಲವರಿಗೆ ಸುದೀಪ್ ಕಡೆಯಿಂದ ಆಹ್ವಾನ ಹೋಗಿಲ್ಲ ಎನ್ನುವ ಮಾತುಗಳು ಬಂದಿದ್ದವು. ಇದಕ್ಕೆ ಸುದೀಪ್ ಈ ವರ್ಷ ಆರಂಭದಲ್ಲೇ ಉತ್ತರ ನೀಡಿದ್ದಾರೆ. ನಾವು ಚಿತ್ರರಂಗದ ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಇದನ್ನೂ ಓದಿ: ತೆಲುಗು ಯುವನಟ ಸುಧೀರ್ ಆತ್ಮಹತ್ಯೆ: ಚಿತ್ರೋದ್ಯಮಕ್ಕೆ ಮತ್ತೊಂದು ಆಘಾತ

    ಕೆಲವರಿಗೆ ಈ ಟೂರ್ನಿಯಲ್ಲಿ ಆಡೋಕೆ ಇಷ್ಟ ಇರಲ್ಲ. ಅಂಥವರು ಬರಲ್ಲ. ಅವರು ಯಾಕೆ ಬಂದಿಲ್ಲ, ಇವರು ಯಾಕೆ ಬಂದಿಲ್ಲ ಅಂತ ಕೇಳಬೇಡಿ. ಚಿತ್ರರಂಗ ನನ್ನ ಸ್ವತ್ತಲ್ಲ. ಹೀಗಾಗಿ, ನಾವು ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಅವರವರ ಶೆಡ್ಯೂಲ್ ನೋಡಿಕೊಂಡು ಬರುತ್ತಾರೆ ಎಂದು ಸುದೀಪ್ ಸೋಮವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾತನಾಡಿದ್ದಾರೆ.

    ಕಳೆದ ವರ್ಷದಂತೆ ಈ ವರ್ಷವೂ ಕೂಡ ಆರು ಅಂತಾರಾಷ್ಟ್ರೀಯ ಆಟಗಾರರು ಇರುತ್ತಾರೆ. ಸಿನಿಮಾ ರಂಗದವರು ಇರುತ್ತಾರೆ. ಬೇರೆ ಚಿತ್ರರಂಗದವರೂ ಆಡೋಕೆ ಬರಬಹುದು. ರಾಜಕೀಯ ಹಾಗೂ ಮಾಧ್ಯಮದವರು ಕೂಡ ಇದರಲ್ಲಿ ಭಾಗಿ ಆಗಬಹುದು ಎಂದು ಸುದೀಪ್ ಹೇಳಿದ್ದಾರೆ.

    ಕೆಸಿಸಿ ಸೀಸನ್- 3 ಟೂರ್ನಿಯಲ್ಲಿ ಸುದೀಪ್ ಜೊತೆ ಶಿವರಾಜ್‌ಕುಮಾರ್, ಗಣೇಶ್, ಡಾಲಿ ಧನಂಜಯ್ ಮುಂತಾದವರು ಭಾಗವಹಿಸುತ್ತಾರೆ. ಈ ಪಂದ್ಯವು ಫೆ.11 ಮತ್ತು 12ರಂದು ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Special-ಸೈನ್ಯಕ್ಕೆ ಕುಟುಂಬವನ್ನೇ ಅರ್ಪಿಸಿದ್ದರು ಅಗಲಿದ ನಟ ಲಕ್ಷ್ಮಣ

    Special-ಸೈನ್ಯಕ್ಕೆ ಕುಟುಂಬವನ್ನೇ ಅರ್ಪಿಸಿದ್ದರು ಅಗಲಿದ ನಟ ಲಕ್ಷ್ಮಣ

    ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾದ ಹಿರಿಯ ನಟ ಲಕ್ಷ್ಮಣ ಅವರ ಕುಟುಂಬವು ಭಾರತೀಯ ಸೈನ್ಯಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದೆ. ಲಕ್ಷ್ಮಣ ಅವರ ತಂದೆಯು ಸೈನ್ಯದಲ್ಲಿದ್ದರು. ಅವರ ಪ್ರೇರಣೆಯಿಂದಾಗಿ ಸ್ವತಃ ಲಕ್ಷ್ಮಣ ಕೂಡ ಸೈನ್ಯವನ್ನು ಸೇರಬೇಕು ಎಂದು ಆಸೆಪಟ್ಟಿದ್ದರು. ಆಯ್ಕೆ ಕೂಡ ಆಗಿದ್ದರು. ಆದರೆ, ತಾಯಿಯು ಒಪ್ಪದ ಕಾರಣಕ್ಕಾಗಿ ಸೈನಿಕನಾಗಲು ಆಗಲಿಲ್ಲ. ತಾವು ಸೈನ್ಯ ಸೇರಲಿಲ್ಲ ಅನ್ನುವ ಕೊರಗು ಸದಾ ಅವರಲ್ಲಿತ್ತು. ಹಾಗಾಗಿ ತಮ್ಮ ಮಕ್ಕಳನ್ನೂ ಮತ್ತೆ ಸೈನ್ಯಕ್ಕೆ ಸೇರಿಸಿದರು.

    ತಂದೆಯು ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದರೆ, ಲಕ್ಷ್ಮಣ ಸಹೋದರ ಪೊಲೀಸ್ ಇಲಾಖೆಯಲ್ಲಿದ್ದಾರೆ. ಅಲ್ಲದೇ, ಲಕ್ಷ್ಮಣ ಪುತ್ರ ಭರತ್ ಅವರು ನೌಕಾಪಡೆಯಲ್ಲಿ ಕಮಾಂಡರ್ ಆಗಿ ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರಿ ಮಮತಾ ಅವರನ್ನು ಆರ್ಮಿ ಆಫೀಸರ್ ಗೆ ಮದುವೆ ಮಾಡಿಕೊಟ್ಟಿದ್ದಾರೆ. ಇವರು ಪುಣೆಯಲ್ಲಿ ವಾಸವಾಗಿದ್ದಾರೆ. ಹೀಗೆ ಕುಟುಂಬದ ಬಹುತೇಕ ಸದಸ್ಯರು ಖಾಕಿ ಹಾಕಿರುವುದು ಅವರೊಳಗಿನ ದೇಶ ಪ್ರೇಮಕ್ಕೆ ಸಾಕ್ಷಿಯಾಗಿದೆ.

    ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಖಳನಟರಾಗಿ ನಟಿಸಿರುವ ಲಕ್ಷ್ಮಣ ಅವರು ಮಲ್ಲ, ಯಜಮಾನ, ಸೂರ್ಯವಂಶ, ಅಂತ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದರು. ರೆಬಲ್ ಸ್ಟಾರ್ ಅಂಬರೀಶ್ ಅವರ ನೆಚ್ಚಿನ ನಟ ಎನ್ನುವ ಖ್ಯಾತಿಗೂ ಪಾತ್ರರಾಗಿದ್ದರು. ಡಾ.ರಾಜ್ ಕುಮಾರ್, ಡಾ.ಅಂಬರೀಶ್, ಡಾ.ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್ ಹೀಗೆ ಸಾಕಷ್ಟು ದಿಗ್ಗಜ ನಟರೊಂದಿಗೆ ಕೆಲಸ ಮಾಡಿದ ಹೆಗ್ಗಳಿಕೆ ಇವರದ್ದು.

    ತಂದೆ ಸೈನಿಕರಾಗಿದ್ದರು. ಸಹೋದರ ಕೂಡ ಪೊಲೀಸ್ ಇಲಾಖೆಯಲ್ಲಿದ್ದರು. ಹಾಗಾಗಿ ಸಹಜವಾಗಿಯೇ ಲಕ್ಷ್ಮಣ ಅವರ ಸೆಳೆತ ಖಾಕಿ ಮೇಲೆಯೇ ಇತ್ತು. ಆದರೆ, ತಾಯಿ ಒಪ್ಪದ ಕಾರಣದಿಂದಾಗಿ ಬಣ್ಣದ ಪ್ರಪಂಚಕ್ಕೆ ಬಂದರು. ಕೆಲವು ಕಾಲ ಫ್ಯಾಕ್ಟರಿಯಲ್ಲೂ ಕೆಲಸ ಮಾಡುತ್ತಿದ್ದರು. ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ನಟನರಾಗಿ ಸೇವೆ ಸಲ್ಲಿಸಿ, ಆನಂತರ ಸಿನಿಮಾ ರಂಗಕ್ಕೆ ಬಂದರು. ಸಿನಿಮಾದಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಪಾರು’ ಖ್ಯಾತಿಯ ಶರತ್ ಪದ್ಮನಾಭ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಪಾರು’ ಖ್ಯಾತಿಯ ಶರತ್ ಪದ್ಮನಾಭ್

    ಕಿರುತೆರೆಯ ಜನಪ್ರಿಯ ಧಾರಾವಾಹಿ `ಪಾರು’ (Paaru) ಮೂಲಕ ಮನೆ ಮಾತಾದ ನಟ ಶರತ್ ಪದ್ಮನಾಭ್ (Sharath Padmanabh) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಟ ಶರತ್ ಬಹುಕಾಲದ ಗೆಳತಿ ದಿವ್ಯಶ್ರೀ (Divyashree) ಜೊತೆ ಹಸೆಮಣೆ ಏರಿದ್ದಾರೆ.

    ಜಸ್ಟ್ ಮಾತ್ ಮಾತಲ್ಲಿ, ಪುಟ್ಮಲ್ಲಿ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಮಿಂಚಿದ್ದ ಪ್ರತಿಭಾನ್ವಿತ ನಟ ಶರತ್ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಆಪ್ತರು, ಗುರುಹಿರಿಯರ ಸಮ್ಮುಖದಲ್ಲಿ (ಜ.22)ರಂದು ಶರತ್ ಮತ್ತು ದಿವ್ಯಶ್ರೀ ಮದುವೆಯಾಗಿದ್ದಾರೆ.

    ಮದುವೆಗೆ `ಪಾರು’ ಸೀರಿಯಲ್ ತಂಡ ಮತ್ತು ವಾಹಿನಿ ಕೆಲ ಸ್ನೇಹಿತರಿಗಷ್ಟೇ ಆಹ್ವಾನ ನೀಡಲಾಗಿತ್ತು. ನಟ ಅನಿರುದ್ಧ, ʻಗಟ್ಟಿಮೇಳʼ ಖ್ಯಾತಿಯ ರಕ್ಷ್, ‌ʻಹಿಟ್ಲರ್‌ ಕಲ್ಯಾಣʼ ಸೀರಿಯಲ್‌ ದಿಲೀಪ್‌ ರಾಜ್ ಸೇರಿದಂತೆ ಹಲವರು ಮದುವೆ (Wedding) ಸಂಭ್ರಮದಲ್ಲಿ ಭಾಗಿಯಾಗಿದ್ದರು.

    ಇನ್ನೂ ನಟ ಶರತ್ ತಮ್ಮ ಎಂಗೇಜ್‌ಮೆಂಟ್ ಬಗ್ಗೆಯಾಗಲಿ, ಅಥವಾ ಮದುವೆ ಬಗ್ಗೆಯಾಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Breaking- 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಕನ್ನಡದ ಹೆಸರಾಂತ ನಟ ಲಕ್ಷ್ಮಣ ಇನ್ನಿಲ್ಲ

    Breaking- 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಕನ್ನಡದ ಹೆಸರಾಂತ ನಟ ಲಕ್ಷ್ಮಣ ಇನ್ನಿಲ್ಲ

    ಸ್ಯಾಂಡಲ್ ವುಡ್ ಹೆಸರಾಂತ ನಟ ಲಕ್ಷ್ಮಣ (Lakshmana) ಹೃದಯಾಘಾತದಿಂದಾಗಿ ನಿಧನರಾಗಿದ್ದಾರೆ. ಕೆಲ ವರ್ಷಗಳಿಂದ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಇಂದು ಬೆಳಗ್ಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ರಸ್ತೆ ಮಧ್ಯೆದಲ್ಲೇ ಲಕ್ಷ್ಮಣ ಕೊನೆಯುಸಿರು ಎಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಬೆಂಗಳೂರಿನ ಮೂಡಲಪಾಳ್ಯದ ನಿವಾಸದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಖಳನಟರಾಗಿ ನಟಿಸಿರುವ ಇವರು ಮಲ್ಲ, ಯಜಮಾನ, ಸೂರ್ಯವಂಶ, ಅಂತ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದರು. ರೆಬಲ್ ಸ್ಟಾರ್ ಅಂಬರೀಶ್ ಅವರ ನೆಚ್ಚಿನ ನಟ ಎನ್ನುವ ಖ್ಯಾತಿಗೂ ಪಾತ್ರರಾಗಿದ್ದರು. ಡಾ.ರಾಜ್ ಕುಮಾರ್, ಡಾ.ಅಂಬರೀಶ್, ಡಾ.ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್ ಹೀಗೆ ಸಾಕಷ್ಟು ದಿಗ್ಗಜ ನಟರೊಂದಿಗೆ ಕೆಲಸ ಮಾಡಿದ ಹೆಗ್ಗಳಿಕೆ ಇವರದ್ದು. ಇದನ್ನೂ ಓದಿ: ಮದುವೆ ಬಳಿಕ ಮಕ್ಕಳನ್ನು ಕರೆದುಕೊಂಡು ಬರುತ್ತೇನೆ, ಪಾಪಾರಾಜಿಗಳಿಗೆ ಸುನೀಲ್ ಶೆಟ್ಟಿ ಅಭಯ

    ತಂದೆ ಸೈನಿಕರಾಗಿದ್ದರು. ಸಹೋದರ ಕೂಡ ಪೊಲೀಸ್ ಇಲಾಖೆಯಲ್ಲಿದ್ದರು. ಹಾಗಾಗಿ ಸಹಜವಾಗಿಯೇ ಲಕ್ಷ್ಮಣ ಅವರ ಸೆಳೆತ ಖಾಕಿ ಮೇಲೆಯೇ ಇತ್ತು. ಆದರೆ, ತಾಯಿ ಒಪ್ಪದ ಕಾರಣದಿಂದಾಗಿ ಬಣ್ಣದ ಪ್ರಪಂಚಕ್ಕೆ ಬಂದರು. ಕೆಲವು ಕಾಲ ಫ್ಯಾಕ್ಟರಿಯಲ್ಲೂ ಕೆಲಸ ಮಾಡುತ್ತಿದ್ದರು. ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ನಟನರಾಗಿ ಸೇವೆ ಸಲ್ಲಿಸಿ, ಆನಂತರ ಸಿನಿಮಾ ರಂಗಕ್ಕೆ ಬಂದರು. ಸಿನಿಮಾದಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಟ ಸುಶಾಂತ್ ಸಿಂಗ್ ಮುದ್ದಿನ ಶ್ವಾನ ಸಾವು

    ನಟ ಸುಶಾಂತ್ ಸಿಂಗ್ ಮುದ್ದಿನ ಶ್ವಾನ ಸಾವು

    ಬಾಲಿವುಡ್ (Bollywood) ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajaput) ಇಲ್ಲ ಎಂದು ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸುಶಾಂತ್ ನಿಧನದ ಹಿಂದಿನ ಅಸಲಿ ಕಾರಣ ಇನ್ನೂ ಬಹಿರಂಗವಾಗಿಲ್ಲ. ಈ ನಡುವೆ ಮತ್ತೊಂದು ಬೇಸರದ ಸುದ್ದಿ ಹೊರಬಿದ್ದಿದೆ. ನಟ ಸುಶಾಂತ್ ಪ್ರೀತಿಯ ಶ್ವಾನ (Dog) ಫಡ್ಜ್ ಅಗಲಿದೆ.

    ನಟ ಸುಶಾಂತ್ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ. ಈ ನಡುವೆ ಮತ್ತೊಂದು ಬೇಸರದ ಸುದ್ದಿ ಬಹಿರಂಗವಾಗಿದೆ. ಸುಶಾಂತ್ ಸಿಂಗ್ ಪ್ರೀತಿಯ ನಾಯಿ(Dog) ಫಡ್ಜ್‌ ಸಾವಾಗಿದೆ. ಈ ಬಗ್ಗೆ ಸುಶಾಂತ್ ಸಹೋದರಿ ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದಾರೆ. ಫಡ್ಜ್  ಸಾವಿನ ಸುದ್ದಿ ಬಹಿರಂಗವಾಗುತ್ತಿದ್ದಂತೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಮದುವೆ ಬಗ್ಗೆ ನಟಿ ರಚಿತಾ ರಾಮ್ ಮನದಾಳದ ಮಾತು

    ಫಡ್ಜ್ ಜೊತೆ ಇರುವ ಸುಶಾಂತ್ ಸಿಂಗ್ ಫೋಟೋಗಳನ್ನು ಶೇರ್ ಮಾಡಿ ಪ್ರಿಯಾಂಕಾ ಸಿಂಗ್ (Priyanka Singh) ಸ್ನೇಹಿತನ ಜೊತೆ ನೀನು ಕೂಡ ಸ್ವರ್ಗ ಸೇರಿಕೊಂಡೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರೈಲಿನ ಅಪಾಯಕಾರಿ ಜಾಗದಲ್ಲಿ ಕುಳಿತ ಸೋನು ಸೂದ್‌ಗೆ ಅಧಿಕಾರಿಗಳಿಂದ ಕ್ಲಾಸ್‌

    ರೈಲಿನ ಅಪಾಯಕಾರಿ ಜಾಗದಲ್ಲಿ ಕುಳಿತ ಸೋನು ಸೂದ್‌ಗೆ ಅಧಿಕಾರಿಗಳಿಂದ ಕ್ಲಾಸ್‌

    ಬಾಲಿವುಡ್ (Bollywood) ನಟ ಸೋನು ಸೂದ್ (Sonu Sood) ಸಿನಿಮಾ ಮತ್ತು ಸಾಮಾಜಿಕ ಕಾರ್ಯಗಳ ಮೂಲಕ ಅನೇಕ ಅಭಿಮಾನಿಗಳ ಮನಗೆದ್ದಿದ್ದಾರೆ. ಹೀಗಿರುವಾಗ ಇದೀಗ ನಟ ಸೋನು ನಡೆಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ರೈಲಿನಲ್ಲಿ ಪ್ರಯಾಣ ಮಾಡಿರುವ ಸೋನು, ಅಪಾಯಕಾರಿ ಸ್ಥಳದಲ್ಲಿ ಕೂತು ವೀಡಿಯೋ ಮಾಡಿದ್ದಾರೆ. ಈ ವೀಡಿಯೋ ಟ್ರೋಲಿಗರ ಬಾಯಿಗೂ ಆಹಾರವಾಗಿದೆ. ನಟನ ನಡೆಗೆ ಮುಂಬೈ ರೈಲ್ವೆ ಅಧಿಕಾರಿಗಳು (Mumbai Railway Officers) ಎಚ್ಚರಿಕೆ ಕೊಟ್ಟಿದ್ದಾರೆ.

    ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಸೋನು ಸೂದ್ ಮಿಂಚಿದ್ದಾರೆ. ಚಿತ್ರಗಳಲ್ಲಿ ಮಾತ್ರವಲ್ಲದೇ ತೆರೆ ಹಿಂದೆ ಕೂಡ ರಿಯಲ್ ಹೀರೋ ಆಗಿ ಸಂಕಷ್ಟದಲ್ಲಿರುವವರಿಗೆ ಸೋನು ಸಾಥ್ ನೀಡಿದ್ದಾರೆ. ಇತ್ತೀಚೆಗೆ ಅವರು ರೈಲ್ವೆ ನಿಲ್ದಾಣದ ನಲ್ಲಿಯಲ್ಲಿ ನೀರು ಕುಡಿದು ಸುದ್ದಿಯಾಗಿದ್ದರು. ಆದರೆ ಈ ಬಾರಿ ಅವರು ಟ್ರೋಲ್ ಆಗುವಂತಹ ವೀಡಿಯೋ ಸದ್ದು ಮಾಡ್ತಿದೆ. ರೈಲು ಬೋಗಿಯ ಮೆಟ್ಟಿಲಿನ ಸಮೀಪದಲ್ಲಿ ಸೋನು ಸೂದ್ ಕುಳಿತುಕೊಂಡಿದ್ದಾರೆ. ರೈಲು ಜೋರಾಗಿ ಚಲಿಸುತ್ತಿರುವಾಗ ತುದಿಗಾಲಿನಲ್ಲಿ ಕುಳಿತು ಅವರು ವೀಡಿಯೋಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ: ಪ್ರೆಗ್ನೆನ್ಸಿ ಬಗ್ಗೆ ಸೀಕ್ರೆಟ್ ಮಾಡಿದ್ಯಾಕೆ ಎಂದು ಅಸಲಿ ವಿಚಾರ ಬಿಚ್ಚಿಟ್ಟ `ಕಬ್ಜ’ ಸುಂದರಿ

    ಈ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಸೋನು ಸೂದ್ ಹಂಚಿಕೊಂಡಿದ್ದಾರೆ. ಅದನ್ನು ಕಂಡು ಅನೇಕರು ಬುದ್ಧಿ ಮಾತು ಹೇಳಿದ್ದಾರೆ. ಇದು ನಿಜಕ್ಕೂ ಬೇಜವಾಬ್ದಾರಿಯುತ ನಡವಳಿಕೆ. ಈ ರೀತಿ ಪ್ರಯಾಣ ಮಾಡುವುದು ಸುರಕ್ಷಿತವಲ್ಲ, ಅಭಿಮಾನಿಗಳಿಗೆ ಮಾದರಿ ಆಗಿರುವ ನೀವು ಈ ರೀತಿ ನಡೆದುಕೊಳ್ಳಬಾರದು ಎಂದು ಕೂಡ ಜನರು ಕಾಮೆಂಟ್ ಮಾಡಿದ್ದಾರೆ.

     

    View this post on Instagram

     

    A post shared by Sonu Sood (@sonu_sood)

    ಮುಂಬೈ ರೈಲ್ವೆ ಪೊಲೀಸರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲೂ ಈ ಬಗ್ಗೆ ಪ್ರತಿಕ್ರಿಯೆ ನೀಡಲಾಗಿದೆ. ಈ ರೀತಿ ಪ್ರಯಾಣ ಮಾಡುವುದು ಸಿನಿಮಾಗಳಲ್ಲಿ ಮನರಂಜನೆ ನೀಡಬಹುದು. ಆದರೆ ನಿಜ ಜೀವನದಲ್ಲಿ ಅಲ್ಲ. ಎಲ್ಲ ಸುರಕ್ಷತಾ ಕ್ರಮಗಳನ್ನು ಪಾಲಿಸೋಣ ಎಂದು ಅಧಿಕಾರಿಗಳು ಟ್ವೀಟ್ ಮಾಡಿ, ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]