Tag: actor

  • ಅಮೆರಿಕಕ್ಕೆ ಹೋಗಲ್ಲ, ಭಾರತದಲ್ಲೇ ಇರ್ತೀನಿ, ದೇಶವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಚೇತನ್

    ಅಮೆರಿಕಕ್ಕೆ ಹೋಗಲ್ಲ, ಭಾರತದಲ್ಲೇ ಇರ್ತೀನಿ, ದೇಶವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಚೇತನ್

    ಬೆಂಗಳೂರು: ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣ ನೀಡಿ ನಟ, ಸಾಮಾಜಿಕ ಹೋರಾಟಗಾರ ಚೇತನ್ (Chetan) ಅವರ ವೀಸಾವನ್ನು (Visa) ಕೇಂದ್ರ ಸರ್ಕಾರ ರದ್ದು ಮಾಡಿದೆ. ಈ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿರುವ ಚೇತನ್ ಉದ್ದೇಶಪೂರ್ವಕವಾಗಿ ನನ್ನ ಮೇಲೆ ಈ ರೀತಿ ಪಿತೂರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಚೇತನ್, ನಾನು ಹುಟ್ಟಿ, ಓದಿದ್ದು ಅಮೆರಿಕದಲ್ಲಿ (America) ಆದರೂ ಕಾರ್ಯನಿರ್ವಹಿಸಲು ಭಾರತಕ್ಕೆ (India) ಬಂದೆ. ಸಿನಿಮಾ ಸೇರಿದಂತೆ ಸಾಕಷ್ಟು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಹೋರಾಟ ಮಾಡಿ ಆದಿವಾಸಿಗಳಿಗೆ 528 ಮನೆಗಳನ್ನು ಕಟ್ಟಿಸಿದ್ದೇನೆ. ನನ್ನ ಸಿದ್ಧಾಂತ, ಅಂಬೇಡ್ಕರ್ ವಾದ, ಪೆರಿಯರ್ ವಾದ ಸರ್ಕಾರಕ್ಕೆ ಇಷ್ಟವಾಗಿಲ್ಲ ಎಂದು ಈ ರೀತಿ ಕ್ರಮ ಕೈಗೊಂಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಬ್ರಾಹ್ಮಣ್ಯ ಲಾಬಿ ಎನ್ನುವ ಮಾತು ಹೇಳಿದ್ದಕ್ಕೆ ಕೇಸ್ ಹಾಕಿದ್ರು. ಗನ್ ಮ್ಯಾನ್‌ನನ್ನು ಒಂದೂವರೆ ವರ್ಷದ ಹಿಂದೆಯೇ ತೆಗೆದಿದ್ದಾರೆ. ಒಂದು ಸತ್ಯದ ಟ್ವೀಟ್ ಮಾಡಿದ್ದಕ್ಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಎಂದು ಹೇಳಿ 3 ದಿನ ಜೈಲಿಗೆ ಕಳುಹಿಸಿದರು. ಸಾಗರೋತ್ತರ ವೀಸಾ (OCI) ನನಗೆ ನೀಡಿದ್ದಾರೆ. ಇದರಲ್ಲಿ ಮತ ಹಾಕುವುದು, ಚುನಾವಣೆಗೆ ನಿಲ್ಲುವುದು, ಸರ್ಕಾರಿ ನೌಕರನಾಗಿ ಕೆಲಸ ಮಾಡುವುದು ಬಿಟ್ಟರೆ ಬೇರೆ ಎಲ್ಲಾ ಹಕ್ಕು ನನಗೆ ಇದೆ ಎಂದು ತಿಳಿಸಿದರು.

    ಕಳೆದ 10 ತಿಂಗಳ ಹಿಂದೆ ಕ್ರಿಮಿನಲ್ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದೀರಿ, ನಿಮ್ಮ ವೀಸಾ ರದ್ದು ಮಾಡಬಹುದು ಎಂಬ ಶೋಕಾಸ್ ನೋಟಿಸ್ ನೀಡಿದ್ದರು. ಆಗ ಗೃಹ ಇಲಾಖೆಗೆ ಹೋಗಿ ಎಲ್ಲಾ ದಾಖಲೆ ಸಲ್ಲಿಸಿ ಬಂದಿದ್ದೆ. ದೇಶವಿರೋಧಿ ಚುಟುವಟಿಕೆಯಲ್ಲಿ ನಾನು ಎಲ್ಲಿ ಭಾಗಿಯಾಗಿದ್ದೇನೆ? ಉದ್ದೇಶಪೂರ್ವಕವಾಗಿ ನನ್ನ ಮೇಲೆ ಈ ರೀತಿ ಪಿತೂರಿ ಮಾಡುತ್ತಿದ್ದಾರೆ. ನಾನು ಈ ದೇಶದಲ್ಲಿ ಇರಬಾರದು ಅಂತ ವೀಸಾ ರದ್ದುಗೊಳಿಸಿದ್ದಾರೆ. ವಾಕ್ ಸ್ವಾತಂತ್ರವನ್ನು ಕಿತ್ತು, ಜೈಲಿಗೆ ಹಾಕುವುದಲ್ಲದೇ ನಾನು ದೇಶದಲ್ಲೂ ಇರಬಾರದು ಎಂದು ವೀಸಾ ರದ್ದು ಮಾಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ನಟ ಚೇತನ್‌ ಭಾರತದ ವೀಸಾ ರದ್ದು

    ನಾನು ವಕೀಲರ ಬಳಿ ಮಾತನಾಡಿದ್ದೇನೆ. ಇದಕ್ಕೆ ವಿರುದ್ಧವಾಗಿ ಸ್ಟೇ ತರುತ್ತೇನೆ. ನಾನು ಕಾನೂನಿನ ಹೋರಾಟ ಮಾಡುತ್ತೇನೆ. ನನಗೆ 15 ದಿನದವರೆಗೆ ಸಮಯ ಕೊಟ್ಟಿದ್ದಾರೆ. 15 ದಿನದೊಳಗೆ ನಾನು ಸ್ಟೇ ತರುತ್ತೇನೆ ಎಂದು ತಿಳಿಸಿದರು.

    ಭಾರತದಲ್ಲಿ 18 ವರ್ಷದಿಂದ ಇದ್ದೇನೆ. ಜಾನಪದ ರಂಗಭೂಮಿ ಮತ್ತು ಅದರಿಂದ ಸಾಮಾಜಿಕ ಬದಲಾವಣೆ ಎನ್ನುವ ವಿಚಾರದ ಮೇಲೆ ಸಂಶೋಧನೆ ಅನುದಾನ ತೆಗೆದುಕೊಂಡು ಭಾರತಕ್ಕೆ 2005 ರಲ್ಲಿ ಬಂದೆ. 2015 ರಿಂದ ಪೂರ್ಣಪ್ರಮಾಣದಲ್ಲಿ ಭಾರತದಲ್ಲಿಯೇ ಇದ್ದೇನೆ. ನನ್ನ ತಂದೆ ಮತ್ತು ತಾಯಿ ಭಾರತದವರೇ ಆಗಿರುವುದರಿಂದ 2018 ರಲ್ಲಿ ನನಗೆ ಒಸಿಐ ಕೊಟ್ಟಿದ್ದಾರೆ. ನನ್ನ ಬಳಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಎಲ್ಲವೂ ಇದೆ. ನಾನು ಕೂಡಾ ತೆರಿಗೆಯನ್ನು ಇದೇ ದೇಶಕ್ಕೆ ಕಟ್ಟುತ್ತೇನೆ. ಆದರೆ ಈ ತಕ್ಷಣವೇ ಒಸಿಐ ರದ್ದು ಮಾಡಲಾಗಿದೆ ಎಂದು ನೋಟಿಸ್ ನೀಡಿದ್ದಾರೆ. ಇದರಲ್ಲಿ ಯಾವುದೇ ಅರ್ಥ ಇಲ್ಲ. ನಾನು ಇದೇ ದೇಶದವನು, ನನಗೆ ಅಮೆರಿಕಕ್ಕೆ ಹೋಗುವ ಮನಸ್ಸಿಲ್ಲ ಎಂದು ಚೇತನ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ 3ನೇ ಪಟ್ಟಿ ರಿಲೀಸ್‌ – ಸಿದ್ದರಾಮಯ್ಯ ಕೋಲಾರದಿಂದ ಔಟ್‌, ಉಮಾಶ್ರೀಗೂ ಕೊಕ್‌

  • ಸಲ್ಮಾನ್ ಖಾನ್‌ ಕೊಲ್ಲುವುದಾಗಿ ಹೇಳಿದ್ದ ರಾಕಿ ಭಾಯ್ ಬಂಧನ

    ಸಲ್ಮಾನ್ ಖಾನ್‌ ಕೊಲ್ಲುವುದಾಗಿ ಹೇಳಿದ್ದ ರಾಕಿ ಭಾಯ್ ಬಂಧನ

    ಬಾಲಿವುಡ್ (Bollywood) ಸ್ಟಾರ್ ಸಲ್ಮಾನ್ ಖಾನ್‌ಗೆ (Salman Khan) ಆಗಾಗ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಲೇ ಇರುತ್ತದೆ. ಇತ್ತೀಚಿಗೆ ಸಲ್ಲುಗೆ ಏ.30ರೊಳಗೆ ಕೊಲ್ಲುವುದಾಗಿ ಬೆದರಿಕೆ ಕರೆ ಬಂದಿತ್ತು. ರಾಕಿ ಭಾಯ್ ಹೆಸರಿನಲ್ಲಿ ಸಲ್ಮಾನ್ ಧಮ್ಕಿ ಹಾಕಿದ್ದ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಕೊಲೆ ಬೆದರಿಕೆ ಹಾಕಿದ್ದವನನ್ನು ಪೊಲೀಸರು ಅರೆಸ್ಟ್ (Arrest) ಮಾಡಿದ್ದಾರೆ.

    ಏಪ್ರಿಲ್ 30ರೊಳಗೆ ಸಲ್ಮಾನ್ ಖಾನ್‌ರನ್ನು ಕೊಲ್ಲುತ್ತೇನೆ ಎಂದು ಮುಂಬೈ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ತನ್ನನ್ನು ತಾನು ರಾಕಿಭಾಯ್ ಎಂದು ಹೇಳಿಕೊಂಡಿದ್ದ ಈತ 16 ವರ್ಷದ ಹುಡುಗನಾಗಿದ್ದು, ಥಾಣೆಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ರಾಜಸ್ಥಾನದ ಜೋಧಪುರದ ನಿವಾಸಿಯಾಗಿರುವ ಈತ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದ. ಈತನ ನಂಬರ್ ಅನ್ನು ಟ್ರ್ಯಾಕ್ ಮಾಡಲಾಗಿತ್ತು ಎಂದು ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಸಿನಿಮಾದವರಿಗೆ ಹೆಣ್ಣು ಯಾಕೆ ಕೊಡಲ್ಲ ಎಂದು ರೇಗಾಡಿದ ಡಾಲಿ

    ಕರೆ ಮಾಡಿದವರು ಅಪ್ರಾಪ್ತ ವಯಸ್ಸಿನ ಬಾಲಕ. ಇದು ಗಂಭೀರವಾದ ಕರೆಯಾಗಿರಲಿಲ್ಲ. ಆತ ಯಾಕಾಗಿ ಕರೆ ಮಾಡಿದ್ದ ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. ಮಾ.18ರಂದು ಸಲ್ಮಾನ್ ಜೀವಬೆದರಿಕೆ ಕರೆ ಬಂದಿತ್ತು. ಸಲ್ಲು ಆತ್ಮೀಯರೊಬ್ಬರಿಗೆ ಸಲ್ಮಾನ್ ಕೊಲೆ ಬೆದರಿಕೆ ವಿಷ್ಯವಾಗಿ ಇಮೇಲ್ ಸಂದೇಶ ಬಂದಿತ್ತು. ಸಲ್ಮಾನ್ ಈಗ ಬಿಗಿ ಭದ್ರತೆ ನೀಡಲಾಗಿದೆ.

    ಸಲ್ಮಾನ್ ಬೆದರಿಕೆ ಕರೆ ಹೆಚ್ಚಾಗುತ್ತಿದ್ದಂತೆ, ಬಿಳಿ ಬುಲೆಟ್ ಪ್ರೂಫ್ ನಿಸ್ಸಾನ್ ಎಸ್‌ಯುವಿ ಕಾರ್ ಖರೀದಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ಗಮನಿಸಿ, ಭದ್ರತೆ ಕೂಡ ಹೆಚ್ಚಾಗಿದೆ. ಸಲ್ಮಾನ್ ಖಾನ್ ಅವರು ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಏ.21ಕ್ಕೆ ಸಿನಿಮಾ ತೆರೆಗೆ ಬರಲಿದೆ. ಮೊದಲ ಬಾರಿಗೆ ಪೂಜಾ ಹೆಗ್ಡೆ- ಸಲ್ಮಾನ್ ಖಾನ್ ಜೋಡಿಯಾಗಿ ನಟಿಸಿದ್ದಾರೆ.

  • ನನ್ನ ಜೀವನದಲ್ಲಿ ಇದೊಂದು ಸಿನಿಮಾ ಕಪ್ಪು ಚುಕ್ಕೆ: ಹಿರಿಯ ನಟ ದತ್ತಣ್ಣ

    ನನ್ನ ಜೀವನದಲ್ಲಿ ಇದೊಂದು ಸಿನಿಮಾ ಕಪ್ಪು ಚುಕ್ಕೆ: ಹಿರಿಯ ನಟ ದತ್ತಣ್ಣ

    ಕಿರುತೆರೆಯ ಜನಪ್ರಿಯ Weekend With Ramesh ಶೋನಲ್ಲಿ ಹಿರಿಯ ನಟ ದತ್ತಣ್ಣ ಅತಿಥಿಯಾಗಿ ಆಗಮಿಸಿದ್ದಾರೆ. ಬಾಲ್ಯ, ಶಿಕ್ಷಣ, ಸೇನೆಯಲ್ಲಿ ಸೇವೆ, ರಂಗಭೂಮಿ, ಸಿನಿಮಾ ಜರ್ನಿ ಹೀಗೆ ಸಾಕಷ್ಟು ವಿಚಾರಗಳನ್ನ ನಿರೂಪಕ-ನಟ ರಮೇಶ್ ಅರವಿಂದ್ ಜೊತೆ ಹಂಚಿಕೊಂಡಿದ್ದಾರೆ. ನನ್ನ ಸಿನಿಮಾ ಕೆರಿಯರ್‌ನಲ್ಲಿ ಈ ಚಿತ್ರವೊಂದು ಕಪ್ಪು ಚುಕ್ಕೆ ಎಂದು ನಿರ್ದೇಶಕರೊಬ್ಬರನ್ನು ಬಾಯಿ ಬಂದಂತೆ ಬೈದಿದರಂತೆ. ಈ ಬಗ್ಗೆ ಕಾರ್ಯಕ್ರಮದಲ್ಲಿ ದತ್ತಣ್ಣ  ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:ಪತ್ನಿ, ಪುತ್ರನ ಜೊತೆ ವಿನೋದ್ ರಾಜ್? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನಿರ್ದೇಶಕ

    ಹಿರಿಯ ನಟ ದತ್ತಣ್ಣ ಅವರು ಕನ್ನಡ, ಹಿಂದಿ, ತೆಲುಗು, ಮತ್ತು ಮಲಯಾಳಂ ಸೇರಿದಂತೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಗೆ ಬಗೆಯ ಪಾತ್ರಗಳ ಮೂಲಕ ರಂಜಿಸಿದ್ದಾರೆ. ಇದೀಗ ವೀಕೆಂಡ್ ಟೆಂಟ್‌ನಲ್ಲಿ ‘ನೀರ್‌ದೋಸೆ’ (Neerdose Film) ಚಿತ್ರದ ಬಗ್ಗೆ ದತ್ತಣ್ಣ ಮೌನ ಮುರಿದಿದ್ದಾರೆ. ನೀರ್‌ದೋಸೆಯಲ್ಲಿ ದತ್ತಾತ್ರೆಯ ಹೆಸರಿನ ಪೋಲಿ ತಾತನ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ವಿಜಯ ಪ್ರಸಾದ್, ಆ ಕತೆಯನ್ನು ಹೇಳಿದಾಗ ಕತೆ ಚೆನ್ನಾಗಿದೆ ಆದರೆ ಸಂಭಾಷಣೆ ಚೆನ್ನಾಗಿಲ್ಲ, ಜಾಸ್ತಿ ಪೋಲಿ ಸಂಭಾಷಣೆಗಳಾದವು ಬೇಡ ಎಂದಿದ್ದರಂತೆ. ಈವರೆಗೆ ಬಹಳ ಗಂಭೀರ ಪಾತ್ರಗಳನ್ನು ಮಾಡಿದ್ದೀರಿ ಈಗ ಈ ಪಾತ್ರ ಮಾಡಿಬಿಡಿ ಎಂದು ವಿಜಯ ಪ್ರಸಾದ್ (Vijay Prasad) ಮನವಿ ಮಾಡಿದ್ದರು. ಅವರ ಪ್ರೀತಿಗೆ ಕಟ್ಟುಬಿದ್ದು ಸಿನಿಮಾದಲ್ಲಿ ದತ್ತಣ್ಣ ನಟಿಸಿದರು.

    ಬಳಿಕ ಚಿತ್ರದ ಟ್ರೈಲರ್ ನೋಡಿ ಉರಿದು ಹೋದ ನಟ ದತ್ತಣ್ಣ, ನಿರ್ದೇಶಕ ವಿಜಯಪ್ರಸಾದ್ ಅವರಿಗೆ ಫೋನ್ ಮಾಡಿ ಬಾಯಿಗೆ ಬಂದಂತೆ ಬೈದಿದರಂತೆ. ನನ್ನ ಜೀವನದಲ್ಲಿ ಇದೊಂದು ಸಿನಿಮಾ ಕಪ್ಪು ಚುಕ್ಕೆ ಎಂದು ಬಿಟ್ಟರಂತೆ. ವಿಜಯ ಪ್ರಸಾದ್ ಜೊತೆ ಮಾತು ನಿಲ್ಲಿಸಿಬಿಟ್ಟಿದ್ದರಂತೆ. ಮುಂದೆ ಚಿತ್ರ ರಿಲೀಸ್ ವೇಳೆಗೆ ವಿಜಯ್ ಪ್ರಸಾದ್ ಮನವಿಯ ಮೇರೆಗೆ Neerdose ಸಿನಿಮಾವನ್ನ ದತ್ತಣ್ಣ ನೋಡಿದ ಬಳಿಕ ಅವರ ಕೋಪ ಇಳಿಯಿತಂತೆ.

    ಕಾರ್ಯಕ್ರಮಕ್ಕೆ ಆಗಮಿಸಿದ್ದ ನಿರ್ದೇಶಕ ವಿಜಯ ಪ್ರಸಾದ್, ದತ್ತಣ್ಣ ಬಗ್ಗೆ ಮಾತನಾಡುತ್ತಾ, ಎಲ್ಲರೊಟ್ಟಿಗೂ ಬೆರೆಯುವ ದತ್ತಣ್ಣ ಅವರು, ಶೂಟಿಂಗ್ ಮುಗಿದ ಮೇಲೆ ನಮ್ಮೊಟ್ಟಿಗೆ ಕೂತು ಗುಂಡು ಹಾಕುತ್ತಾ ನಮ್ಮೊಡನೆ ಬೆರೆತುಬಿಡುತ್ತಾರೆ. ದತ್ತಣ್ಣ ಬ್ಯಾಗ್ ಇಲ್ಲದೆ ಎಲ್ಲಿಗೂ ಬರೊಲ್ಲ ಗುಂಡಿನ ವ್ಯವಸ್ಥೆ ಇಲ್ಲದೆ ಎಲ್ಲಿಯೂ ಉಳಿಯುವುದಿಲ್ಲ ಎಂದು ಜೋಕ್ (Joke) ಮಾಡಿದರು.

  • `ಇಂಡಿಯನ್ ಮೈಕಲ್ ಜಾಕ್ಸನ್’ ಪ್ರಭುದೇವ ಕನ್ನಡಕ್ಕೆ ಕನ್ನಡಿಗರ ಚಪ್ಪಾಳೆ

    `ಇಂಡಿಯನ್ ಮೈಕಲ್ ಜಾಕ್ಸನ್’ ಪ್ರಭುದೇವ ಕನ್ನಡಕ್ಕೆ ಕನ್ನಡಿಗರ ಚಪ್ಪಾಳೆ

    ಕಿರುತೆರೆಯ ಜನಪ್ರಿಯ Weekend With Ramesh ಶೋನಲ್ಲಿ `ಇಂಡಿಯನ್ ಮೈಕಲ್ ಜಾಕ್ಸನ್’ ಪ್ರಭುದೇವ ಎಂಟ್ರಿಯಾಗಿದೆ. ಬಾಲ್ಯ ಜೀವನ, ಶಿಕ್ಷಣ, ಸಿನಿಮಾ ಕೆರಿಯರ್, ಡ್ಯಾನ್ಸ್, ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಪ್ರಭುದೇವ ಅವರು ಈ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಪ್ರಭುದೇವ (Prabhudeva) ಅವರ ಕನ್ನಡಕ್ಕೆ (Kannada) ಕನ್ನಡಿಗರು ಫಿದಾ ಆಗಿದ್ದಾರೆ.

    ಮೈಸೂರು (Mysore) ಮೂಲದ ಪ್ರಭುದೇವ್ ಅವರು ಇತರೆ ಭಾಷೆಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಭಾರತದ ಮೈಕಲ್ ಜಾಕ್ಸನ್ ಎಂದೇ ಖ್ಯಾತಿಗಳಿಸಿರುವ ಪ್ರಭುದೇವ ನಟ ನಿರ್ದೇಶಕ ಡ್ಯಾನ್ಸರ್ ಆಗಿದ್ದಾರೆ. ಈಗ ಐದನೇ ಆವೃತ್ತಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಎರಡನೇ ಸಾಧಕನಾಗಿ ಪ್ರಭುದೇವ ಆಗಮಿಸಿದ್ದಾರೆ. ಮೊದಲ ಸಂಚಿಕೆಯಲ್ಲಿ ರಮ್ಯಾ ಸ್ಪೂರ್ತಿಯ ಕಥೆ ಎಲ್ಲರಿಗೂ ಮೋಡಿ ಮಾಡಿತ್ತು. ಆದರೆ ಅವರ ಅತಿಯಾದ ಇಂಗ್ಲಿಷ್ ಬಳಕೆ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಇನ್ನೂ ಬಾಲಿವುಡ್‌ನ ಬಹುಬೇಡಿಕೆ ನಟ, ನಿರ್ದೇಶಕ ಕೊರಿಯೋಗ್ರಾಫರ್ ಪ್ರಭುದೇವ ಬರುತ್ತಾರೆ ಎಂದಾಗ ಹಿಂದಿ & ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ ಎಂದು ಅಂದುಕೊಂಡವರೇ ಜಾಸ್ತಿ. ಆದರೆ ಆಗಿದ್ದೇ ಬೇರೆ.

    ಪ್ರಭುದೇವ ಅವರು ಅಪರೂಪಕ್ಕೆ ಇಂಗ್ಲಿಷ್ ಪದ ಬಳಸಿದ್ದರು ಕೂಡ ಅತೀ ಹೆಚ್ಚು ಕನ್ನಡದಲ್ಲಿಯೇ ಮಾತನಾಡಿದರು. ಅವರ ತಂದೆ ಮೂಗೂರು ಸುಂದರಂ, ತಾಯಿ, ಸಹೋದರ ನಾಗೇಂದ್ರ ಪ್ರಸಾದ್ ಸೇರಿ ಅವರ ಬಳಗ ಎಲ್ಲವೂ ಕನ್ನಡದಲ್ಲಿಯೇ ಮಾತನಾಡಿದ್ದರು. ಕೆಲವರಿಗೆ ಇದು ತಮಿಳು ಮಿಶ್ರಿತ ಕನ್ನಡ ಅಂತ ಅನಿಸಿರಬಹುದು. ಆದರೆ ಅದು ತಮಿಳು ಮಿಶ್ರಿತ ಕನ್ನಡ ಅಲ್ಲವೇ ಅಲ್ಲ. ಚಾಮರಾಜನಗರ ಭಾಷೆಯ ಕನ್ನಡವಿದು, ಕಾಡು ಭಾಷೆ ಅಂತಲೂ ಹೇಳುತ್ತಾರೆ. ಡಾ ರಾಜ್‌ಕುಮಾರ್ ಅವರು ಚಾಮರಾಜನಗರದ ಕಡೆಯವರು ಬಂದ್ರು ಅಂದ್ರೆ ನಮ್ಮ ಕಾಡಿನವ್ರು ಅಂತ ಹೇಳುತ್ತಿದ್ದರಂತೆ. ಅಷ್ಟೇ ಅಲ್ಲ, ದೋಸೆ ಕೊಡು ಎನ್ನಲು ತತ್ತಾಯ್ಯಾ ಒಂದ್ ದ್ಯಾಸ್ಯಾ ಅಂತ ಹೇಳುತ್ತಿದ್ದರಂತೆ. ಮನೆಯಲ್ಲಿ ಅಣ್ಣಾವ್ರು ಹೀಗೆ ಮಾತನಾಡ್ತಿದ್ರಂತೆ. ಒಟ್ನಲ್ಲಿ ರಮ್ಯಾ (Ramya) ಕನ್ನಡ ಬಳಕೆಗೆ ಅಸಮಾಧಾನ ವ್ಯಕ್ತವಾದ ಬೆನ್ನಲ್ಲೇ ಪ್ರಭುದೇವ ಅವರ ಕನ್ನಡಕ್ಕೆ ಕನ್ನಡಿಗರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇದನ್ನೂ ಓದಿ: ದಶಕದ ನಂತರ ಮತ್ತೆ ಬಣ್ಣ ಹಚ್ಚಿದ ಸಂಗೀತ ನಿರ್ದೇಶಕ ಗುರುಕಿರಣ್

    ಶಾಲೆಯ ಗೆಳೆಯರು ಸೇರಿದಂತೆ ಬಾಲ್ಯದ ಗೆಳೆಯರೆಲ್ಲರೂ ಸಹ ವೇದಿಕೆಯ ಮೇಲೆ ಬಂದು ಪ್ರಭುದೇವ ಅವರಿಗೆ ಸರ್ಪ್ರೈಸ್ ನೀಡುವ ಮೂಲಕ ಮತ್ತೊಮ್ಮೆ ಶಾಲಾ ದಿನಗಳು ಹಾಗೂ ಬಾಲ್ಯಕ್ಕೆ ಕರೆದುಕೊಂಡು ಹೋಗುವ ಕೆಲಸವನ್ನು ಮಾಡಿದ್ದಾರೆ. ಅಮಾವಾಸ್ಯೆ ಎಂದರೆ ಎಲ್ಲರಿಗೂ ಭಯ ಇದ್ದೇ ಇರುತ್ತದೆ. ಆ ದಿನ ಮಗು ಜನಿಸಿದ್ರೆ ಹೇಗಾಗಿರಬೇಡ, ಆದರೆ ಮೂಗೂರು ಸುಂದರ್ ಅವರು ತಮ್ಮ ಮಗ ಅಮಾವಾಸ್ಯೆ ದಿನ ಹುಟ್ಟಿದ ಎಂದು ತುಂಬಾ ಖುಷಿಯನ್ನ ಪಟ್ಟಿದ್ದಾರೆ. ಅದನ್ನು ಸ್ವತಃ ಅವರೇ ಹೇಳಿದ್ದಾರೆ. ನನ್ನ ಮಗ ಅಮಾವಾಸ್ಯೆಯ ದಿನ ಹುಟ್ಟಿದ್ದು ನನಗಂತೂ ತುಂಬಾ ಸಂತಸವನ್ನು ತಂದಿದೆ ಎಂದು ವೇದಿಕೆಯ ಮೇಲೆ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಪ್ರಭುದೇವ ಅವರಿಗೆ ಹಪ್ಪಳ ಎಂದರೆ ತುಂಬಾ ಇಷ್ಟ. ಇದರಿಂದಾಗಿ ಹಪ್ಪಳದ ಕಥೆಯನ್ನ ಹೇಳಿದ್ದಾರೆ. ನಾವು ಮನೆಯಲ್ಲಿ ಇದ್ದಾಗ ಹಪ್ಪಳವನ್ನು ಜೋಡಿಸಿಕೊಂಡು ತಿನ್ನುತ್ತಿದ್ದೆವು ಎಂದು ನಟ ರಮೇಶ್ ಬಳಿ ಹೇಳಿದ್ದಾರೆ. ಇನ್ನು ಇದೇ ವೇಳೆ `ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ತಂದೆ ಮಗ ಇಬ್ಬರು ಸೇರಿಕೊಂಡು ಡ್ಯಾನ್ಸ್ ಮಾಡಿದ್ದಾರೆ.

    `ಪದ್ಮಶ್ರೀ’ ಜೊತೆಗೆ 2 ರಾಷ್ಟ್ರ ಪ್ರಶಸ್ತಿ ಪುರಸ್ಕಾರ ಪಡೆದ ಪ್ರಭುದೇವ ಅವರು ಅಪ್ಪಟ ಕನ್ನಡದ ಪ್ರತಿಭೆ. 36 ವರ್ಷಗಳಲ್ಲಿ 100ಕ್ಕೂ ಅಧಿಕ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿರುವ ಪ್ರಭುದೇವ ಅವರು 61 ಚಿತ್ರಗಳಲ್ಲಿ ನಟಿಸಿದ್ದಾರೆ, 15 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ, 3 ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ. ಭಾರತದ ಸ್ಟಾರ್ ನಟರ ಜೊತೆ ಪ್ರಭುದೇವ ಕೆಲಸ ಮಾಡಿದ್ದಾರೆ.

  • ಎಲೆಕ್ಷನ್ ಡೇಟ್ ಅನೌನ್ಸ್ ಬೆನ್ನಲ್ಲೇ ಪ್ರಶ್ನೆ ಎತ್ತಿದ ನಟ ಉಪೇಂದ್ರ

    ಎಲೆಕ್ಷನ್ ಡೇಟ್ ಅನೌನ್ಸ್ ಬೆನ್ನಲ್ಲೇ ಪ್ರಶ್ನೆ ಎತ್ತಿದ ನಟ ಉಪೇಂದ್ರ

    ವಿಧಾನಸಭಾ ಚುನಾವಣಾ(Election) ಡೇಟ್ ಅನೌನ್ಸ್ ಆಗಿದೆ.ಇದೇ ಮೇ 10ಕ್ಕೆ ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಏಣಿಕೆ ನಡೆಯಲಿದೆ. ಈ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ (Actor Upendra) ಪ್ರಶ್ನೆಯೊಂದನ್ನ ಎತ್ತಿದ್ದು, ಸಂಚಲನ ಮೂಡಿಸಿದೆ.

    ಅಂತೂ ಕುತೂಹಲ ಕೆರಳಿಸಿದ ವಿಧಾನಸಭಾ ಚುನಾವಣೆ ದಿನಾಂಕದಲ್ಲಿ ಇದೀಗ ಸ್ಪಷ್ಟನೆ ಸಿಕ್ಕಿದೆ. ಮತದಾನ ಮಾಡಲು ಮುಹೂರ್ತ ಫಿಕ್ಸ್ ಆಗಿದೆ. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಈ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಈ ಪ್ರಶ್ನೆ ಸಾರ್ವಜನಿಕರ ತಲೆಗೆ ಹುಳ ಬಿಟ್ಟಂತಾಗಿದೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಉಪೇಂದ್ರ ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದಲ್ಲಿ ಮತದಾನ ನಡೆಯುತ್ತದೆ. ಮೇ 13 ಶನಿವಾರದಂದು ಫಲಿತಾಂಶ ಪ್ರಕಟವಾಗುತ್ತಿದೆ. ಮತ ಎಣಿಕೆಗೆ ಎರಡು ದಿನ ಬೇಕೆ ಬಲ್ಲವರು ತಿಳಿಸುತ್ತೀರಾ ಎಂದು ಟ್ವೀಟ್ ಮಾಡಿದ್ದಾರೆ. ಉಪೇಂದ್ರ ಅವರು ಹೀಗೆ ಯಾಕೆ ಕೇಳಿದ್ದಾರೆ ಅವರ ತಲೆಯಲ್ಲಿ ಹೇಗೆ ಬಂತು ಎಂದು ಸಾರ್ವಜನಕರಿಲ್ಲಿ ಪ್ರಶ್ನೆಗಳ ಜೊತಗೆ ಚರ್ಚೆಗಳು ಸಹ ಶುರುವಾಗಿವೆ.

    ಉಪೇಂದ್ರ ಅವರೇ, ಚುನಾವಣೆ ಆದ ದಿನವೇ ಮತ ಎಣಿಕೆ ಮಾಡಲು ಹೇಗೆ ಸಾಧ್ಯ ಹಳ್ಳಿ ಹಳ್ಳಿಗಳಿಂದ ಮತ ಪೆಟ್ಟಿಗೆ ಸುರಕ್ಷಿತವಾಗಿ ಕೊಂಡೊಯ್ದು, ನೋಂದಾಯಿತ ಮತ ಎಣಿಕೆ ಕೇಂದ್ರಕ್ಕೆ ತಲುಪಬೇಕು. ಇದಕ್ಕೆ ಸಮಯ ಬೇಕಲ್ಲವೇ? ಎಂದಿದ್ದಾರೆ. ಇನ್ನೂ ಕೆಲವರು ನಿಮ್ಮ ಸಿನಿಮಾ ಶೂಟಿಂಗ್ ಮುಗಿದ ಬಳಿಕವೇ ರಿಲೀಸ್ ಮಾಡ್ತೀರಾ ಎಂದು ಉಪ್ಪಿಗೆ ಪ್ರಶ್ನೆ ಮಾಡಿದ್ದಾರೆ.

  • ಕನ್ನಡ ಮಾತನಾಡಿ ಎಂದಿದ್ದಕ್ಕೆ ನಟ ಸಲ್ಮಾನ್ ಆಕ್ರೋಶ

    ಕನ್ನಡ ಮಾತನಾಡಿ ಎಂದಿದ್ದಕ್ಕೆ ನಟ ಸಲ್ಮಾನ್ ಆಕ್ರೋಶ

    ಬಾಲಿವುಡ್ (Bollywood) ನಟ ಕಮ್ ಡ್ಯಾನ್ಸರ್ ಸಲ್ಮಾನ್ ಯೂಸುಫ್ ಖಾನ್ (Salman Yusuff Khan) ಇದೀಗ ಕನ್ನಡದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಕನ್ನಡದಲ್ಲಿ (Kannada) ಮಾತನಾಡಿ ಎಂದು ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿ ನಿಂದಿಸಿದ್ದಾರೆ. ತನಗೆ ಅವಮಾನ ಆಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಶೇರ್ ಮಾಡುವ ಮೂಲಕ ಕರ್ನಾಟಕ ಮೂಲದ ನಟ ಆರೋಪಿಸಿದ್ದಾರೆ. ಇದನ್ನೂ ಓದಿ: ಪೆದ್ದಮ್ಮ ತಲ್ಲಿ ದೇವಿಗೆ ಸೀರೆ, ಗಾಜಿನ ಬಳೆ ಅರ್ಪಣೆ ಮಾಡಿದ ಸಮಂತಾ

     

    View this post on Instagram

     

    A post shared by Salmanyusuffkhan (@salmanyusuffkhan)

    ಕೆಲಸದ ನಿಮಿತ್ತ ದುಬೈಗೆ ಹೋಗಲು ಸಲ್ಮಾನ್ ಲೇಟ್ ನೈಟ್ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಡ್ಯಾನ್ಸರ್ ಸಲ್ಮಾನ್ ಅವರ ಭದ್ರತಾ ತಪಾಸಣೆ ಮಾಡಿಸುತ್ತಿದ್ದಾಗ ಅವರ ಪಾಸ್‌ಪೋರ್ಟ್ ನೋಡಿದ ಅಧಿಕಾರಿ ಬೆಂಗಳೂರಿನವರೇ ಆದ ಸಲ್ಮಾನ್ ಜೊತೆ ಕನ್ನಡದಲ್ಲಿ ಮಾತನಾಡಿದ್ದಾರೆ. ಆಗ ನಟ ನನಗೆ ಕನ್ನಡ ಬರುವುದಿಲ್ಲ ಎಂದು ತಿಳಿಸಿದ್ದಾರೆ. ಅಧಿಕಾರಿ ಕನ್ನಡದಲ್ಲಿ ಮಾತನಾಡುವಂತೆ ನನ್ನನ್ನು ಬಲವಂತಪಡಿಸಿದರು. ಈ ಅಧಿಕಾರಿ ಅನಕ್ಷರಸ್ಥ. ಇಂಥ ಅನಕ್ಷರಸ್ಥರಿಂದಲೇ ದೇಶ ಅಭಿವೃದ್ಧಿ ಆಗುತ್ತಿಲ್ಲ ಎಂದು ಸಲ್ಮಾನ್ ನಿಂದಿಸಿದ್ದಾರೆ.

    ಸೆಲ್ಫಿ ವಿಡಿಯೋವನ್ನು ಮೂಲಕ ನಡೆದ ಘಟನೆಯನ್ನು ನಟ ವಿವರವಾಗಿ ತಿಳಿಸಿದ್ದಾರೆ. ಹುಟ್ಟಿರೋದು ಬೆಂಗಳೂರಿನಲ್ಲಿ. ನಿಮ್ಮ ತಂದೆ ಹುಟ್ಟಿರುವುದು ಬೆಂಗಳೂರಿನಲ್ಲಿ. ಆದರೂ, ನಿಮಗೆ ಕನ್ನಡ ಬರುವುದಿಲ್ಲ ಎಂದರೆ ಹೇಗೆ ಎಂದು ಅಧಿಕಾರಿ ಪ್ರಶ್ನಿಸಿದ್ದಾರೆ. ಇದಕ್ಕೆ ಸಲ್ಮಾನ್ ಅವರು ಉತ್ತರಿಸಿ ನಾನು ಸೌದಿ ಹುಡುಗ. ನಾನು ಹುಟ್ಟಿದ್ದು ಬೆಂಗಳೂರಿನಲ್ಲಿ ಮಾತ್ರ ಆದರೆ ಕಲಿತಿದ್ದು ಸೌದಿನಲ್ಲಿ. ಹಾಗಾಗಿ, ನಾನು ಕನ್ನಡ ಕಲಿತಿಲ್ಲ ಎಂದಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿದ ಮಾತ್ರಕ್ಕೆ ಕನ್ನಡ ಬರಲೇ ಬೇಕು ಎಂಬ ನಿಯಮ ಇದೆಯೇ. ನಾನು ಬೆಂಗಳೂರಿನವನೇ. ಆದರೆ, ವಿಶ್ವದ ನಾನಾ ಕಡೆ ಟ್ರಾವೆಲ್ ಮಾಡುವ ಹಕ್ಕು ನನಗಿದೆ. ಈ ರೀತಿಯ ಅನಕ್ಷರಸ್ಥ ಜನರು ಇರುವವವರೆಗೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ನನ್ನದೇ ನಗರದಲ್ಲಿ ನಾನು ಯಾರೆಂದು ಪ್ರೂವ್ ಮಾಡಬೇಕಿದೆ ಎಂದು ನಟ ವೀಡಿಯೋದಲ್ಲಿ ಕಿಡಿಕಾರಿದ್ದಾರೆ.

     

    View this post on Instagram

     

    A post shared by Salmanyusuffkhan (@salmanyusuffkhan)

    ಬೆಂಗಳೂರಿಗಾಗಿ ಹಲವು ವೇದಿಕೆಗಳಲ್ಲಿ ಪ್ರಶಸ್ತಿ ಗೆದ್ದಿದ್ದೇನೆ. ಆದರೆ, ಈಗ ನಾನು ಭಾರತೀಯ ಎಂಬುದನ್ನು ನಾನು ಸಾಬೀತುಪಡಿಸಬೇಕಾದ ಪರಿಸ್ಥಿತಿ ಬಂದಿದೆ. ನಮ್ಮ ಮಾತೃಭಾಷೆ ಹಿಂದಿ. ಆ ಭಾಷೆ ನನಗೆ ಬರುತ್ತದೆ. ಅದು ಸಾಕಲ್ಲವೆ ಎಂದು ಸಲ್ಮಾನ್ ಅಧಿಕಾರಿಯನ್ನು ಪ್ರಶ್ನೆ ಮಾಡಿದ್ದಾರೆ. ಪ್ರಧಾನಿ ಮೋದಿಜೀ ಅವರಿಗೆ ಕನ್ನಡದಲ್ಲಿ ಮಾತನಾಡಲು ಬರುತ್ತದೆಯೇ. ಈ ಅನಕ್ಷರಸ್ಥರಿಗೆ ಏನು ಹೇಳುವುದು. ಆ ಅಧಿಕಾರಿ ವಿರುದ್ಧ ದೂರು ನೀಡಲು ಪ್ರಯತ್ನಿಸಿದೆ. ಆದರೆ ಇಲ್ಲಿ ಯಾರೂ ನನಗೆ ಸರಿಯಾದ ಮಾಹಿತಿ ನೀಡಲಿಲ್ಲ ಎಂದು ನಟ ಸಲ್ಮಾನ್ ಹೇಳಿದ್ದಾರೆ. ಈ ವೀಡಿಯೋ ಇದೀಗ ಸಾಕಷ್ಟು ಜನರ ಚರ್ಚೆಗೆ ಗ್ರಾಸವಾಗಿದೆ.

  • ಮಾಜಿ ಫ್ರೆಂಡ್ ಗೆ ನಟನೆ ಬರಲ್ಲ: ವಿವಾದದ ಕಿಡಿ ಹೊತ್ತಿಸಿದ ಕಂಗನಾ ರಣಾವತ್

    ಮಾಜಿ ಫ್ರೆಂಡ್ ಗೆ ನಟನೆ ಬರಲ್ಲ: ವಿವಾದದ ಕಿಡಿ ಹೊತ್ತಿಸಿದ ಕಂಗನಾ ರಣಾವತ್

    ಬಾಲಿವುಡ್ ಹೆಸರಾಂತ ನಟ ಹೃತಿಕ್ ರೋಷನ್ (Hrithik Roshan) ಮತ್ತು ನಟಿ ಕಂಗನಾ ರಣಾವತ್ (Kangana Ranaut) ಡೇಟಿಂಗ್ ವಿಚಾರ ಗುಟ್ಟಾಗೇನೂ ಉಳಿದಿರಲಿಲ್ಲ. ಇಬ್ಬರೂ ಪರಸ್ಪರ ಅರ್ಥ ಮಾಡಿಕೊಂಡು ಡೇಟಿಂಗ್ ಮಾಡುತ್ತಿದ್ದಾರೆ ಎಂಬೆಲ್ಲ ಸುದ್ದಿ ಬಿಟೌನ್ ನಲ್ಲಿ ಕೇಳಿ ಬಂದಿತ್ತು. ಇಬ್ಬರೂ ಹೊಸ ಬದುಕು ಕಟ್ಟಿಕೊಳ್ಳಲಿದ್ದಾರೆ ಎನ್ನುವಲ್ಲಿಗೆ ಅವರ ಫ್ರೆಂಡ್ ಶಿಪ್ ವಿಸ್ತರಿಸಿತ್ತು. ಆದರೆ, ಈ ಜೋಡಿ ಅದನ್ನು ಮುಂದುವರೆಸಲಿಲ್ಲ. ಬ್ರೇಕ್ ಅಪ್ ಎಂದು ಹೇಳುವ ಮೂಲಕ ದೂರ ದೂರವಾದರು.

    ಇಬ್ಬರೂ ದೂರವಾದ ನಂತರ ಕಂಗನಾ ಸುಮ್ಮನೆ ಕೂರಲಿಲ್ಲ. ಹೃತಿಕ್ ಬಗ್ಗೆ ಪರೋಕ್ಷ ಮತ್ತು ಪ್ರತ್ಯೆಕ್ಷವಾಗಿಯೇ ಹಲವು ಆರೋಪಗಳನ್ನು ಮಾಡಿದರು. ಹೃತಿಕ್ ಬಗ್ಗೆ ಸಲ್ಲದ ಮಾತುಗಳನ್ನೂ ಆಡಿದರು. ಹೀಗಾಗಿ ಫ್ರೆಂಡ್ ಶಿಪ್ ಶಾಶ್ವತವಾಗಿ ಮುರಿದು ಬಿತ್ತು. ಹಲವು ದಿನಗಳ ನಂತರ ಮತ್ತೆ ಹೃತಿಕ್ ಬಗ್ಗೆ ಕಂಗನಾ ಮಾತನಾಡಿದ್ದಾರೆ. ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಅವರು ಟಾಂಗ್ ನೀಡುವಂತೆ ಉತ್ತರಿಸಿದ್ದಾರೆ. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಅಭಿಮಾನಿಗಳ ಜೊತೆ ಸಂವಾದಿಸುತ್ತಲೇ ಇರುತ್ತಾರೆ ಕಂಗನಾ. ಅಭಿಮಾನಿಗಳು ಕೇಳಿದ ಪ್ರಶ್ನೆಗೆ ತಮ್ಮದೇ ಆದ ರೀತಿಯಲ್ಲಿ ಅವರು ಉತ್ತರಿಸುತ್ತಾರೆ. ಈ ಬಾರಿ ಅಭಿಮಾನಿಯೊಬ್ಬ ಕೇಳಿದ್ದ ಪ್ರಶ್ನೆಗೆ ವಿಚಿತ್ರ ಹಾಗೂ ವಿವಾದ (Controversy) ಎನ್ನುವ ರೀತಿಯಲ್ಲಿ ಅವರು ಉತ್ತರಿಸಿದ್ದಾರೆ. ಈ ಉತ್ತರ ಹೃತಿಕ್ ಅಭಿಮಾನಿಗಳನ್ನು ಕೆಣಕಿದೆ.

    ಅಭಿಮಾನಿಯೊಬ್ಬರು ‘ನಿಮಗೆ ಹೃತಿಕ್ ರೋಷನ್ ಮತ್ತು ದಿಲ್ಜಿತ್ ದೋಸಾಂಜ್ ಇವರಿಬ್ಬರಲ್ಲಿ ಯಾರು ಇಷ್ಟ, ಯಾರು ಉತ್ತಮ ನಟ’ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ವಿಭಿನ್ನವಾದ ರೀತಿಯಲ್ಲಿ ಉತ್ತರಿಸಿರುವ ಕಂಗನಾ, ‘ಒಬ್ಬರೇ ಕೇವಲ ಆ್ಯಕ್ಷನ್ ಮಾಡ್ತಾರೆ, ಮತ್ತೊಬ್ಬರು ವಿಡಿಯೋ ಸಾಂಗ್ ನಲ್ಲೇ ಕಳೆದು ಹೋಗಿದ್ದಾರೆ. ಇವರಲ್ಲಿ ಒಬ್ಬರನ್ನು ನಾನು ನಟಿಸಿದ್ದೇನೆ ನೋಡಿಲ್ಲ. ನೀವು ನೋಡಿದ್ದರೆ ತಿಳಿಸಿ’ ಎಂದು ಪರೋಕ್ಷವಾಗಿ ಹೃತಿಕ್ ಗೆ ಟಾಂಗ್ ಕೊಟ್ಟಿದ್ದಾರೆ ಕಂಗನಾ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಲಿಪ್‌ಲಾಕ್ ಫೋಟೋ ಶೇರ್ ಮಾಡಿ ಪತ್ನಿಗೆ ಫರ್ಹಾನ್ ಅಖ್ತರ್ ರೊಮ್ಯಾಂಟಿಕ್ ವಿಶ್

    ಲಿಪ್‌ಲಾಕ್ ಫೋಟೋ ಶೇರ್ ಮಾಡಿ ಪತ್ನಿಗೆ ಫರ್ಹಾನ್ ಅಖ್ತರ್ ರೊಮ್ಯಾಂಟಿಕ್ ವಿಶ್

    ಬಾಲಿವುಡ್ (Bollywood) ನಟ ಫರ್ಹಾನ್ ಅಖ್ತರ್ (Farhan Akhtar) ಮದುವೆ ಮೊದಲ ವಾರ್ಷಿಕೋತ್ಸವದ (Wedding Anniversary) ಸಂಭ್ರಮದಲ್ಲಿದ್ದಾರೆ. ಬಿಟೌನ್‌ನ ಬೆಸ್ಟ್ ಜೋಡಿಗಳಲ್ಲಿ ಫರ್ಹಾನ್-ಶಿಬಾನಿ (Shibani) ಕೂಡ ಒಬ್ಬರು. ಇದೀಗ ಆ್ಯನಿವರ್ಸರಿ ದಿನ ಪತ್ನಿ ಜೊತೆಗಿನ ರೊಮ್ಯಾಂಟಿಕ್ ಫೋಟೋವನ್ನ ನಟ ಫರ್ಹಾನ್ ಶೇರ್ ಮಾಡಿದ್ದಾರೆ.

    `ತೂಫಾನ್’ ಆಕ್ಟರ್ ಫರ್ಹಾನ್ ಅಖ್ತರ್ ದಂಪತಿ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಫರ್ಹಾನ್ ತನ್ನ ಪತ್ನಿ ಶಿಬಾನಿಗೆ ಲಿಪ್ ಕಿಸ್ ಮಾಡಿರುವ ಫೋಟೋ ಶೇರ್ ಮಾಡಿ ರೊಮ್ಯಾಂಟಿಕ್ ಸಾಲನ್ನು ಬರೆದಿದ್ದಾರೆ. 365 ಸಂತಸದ ದಿನಗಳು ಎಂದು ಫರ್ಹಾನ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಸಿದ್ಧಾರ್ಥ್ ಜೊತೆಗಿನ ಡೇಟಿಂಗ್ ವಿಚಾರಕ್ಕೆ ನಟಿ ಅದಿತಿ ರಾವ್‌ ಹೈದರಿ ಪ್ರತಿಕ್ರಿಯೆ

     

    View this post on Instagram

     

    A post shared by Farhan Akhtar (@faroutakhtar)

    ಶಿಬಾನಿ ಕೆಂಪು ಬಣ್ಣದ ಲೆಹಂಗಾದಲ್ಲಿ ಮಿಂಚಿದ್ದರೆ, ಫರ್ಹಾನ್ ಕಪ್ಪು ಬಣ್ಣದ ಸೂಟ್‌ನಲ್ಲಿ ಮಿಂಚಿದ್ದಾರೆ. ಇನ್ನೂ ಜೋಡಿಗೆ ಹೃತಿಕ್ ರೋಷನ್, ರಿಯಾ ಚಕ್ರವರ್ತಿ, ಹೀಗೆ ಅನೇಕರು ವಾರ್ಷಿಕೋತ್ಸವಕ್ಕೆ ಶುಭಕೋರಿದ್ದಾರೆ.

     

    View this post on Instagram

     

    A post shared by Farhan Akhtar (@faroutakhtar)

    ಇನ್ನೂ ಫರ್ಹಾನ್ ಅಖ್ತರ್ ಅವರಿಗೆ ಇದು ಎರಡನೇ ಮದುವೆಯಾಗಿದ್ದು, ಮೊದಲ ಪತ್ನಿ ಅದುನಾ ಭಬಾನಿಗೆ 2017ರಲ್ಲಿ ಅವರು ವಿಚ್ಛೇದನ ನೀಡಿದ್ದರು. ಬಳಿಕ ಶಿಬಾನಿ ಅವರನ್ನು ಪ್ರೀತಿಸಲು ಆರಂಭಿಸಿದರು. ಇಬ್ಬರ ಪ್ರೀತಿಗೆ ಕುಟುಂಬದವರ ಒಪ್ಪಿಗೆ ಪಡೆದು ದಾಂಪತ್ಯಕ್ಕೆ ಕಾಲಿಟ್ಟರು. ಫರ್ಹಾನ್ ಅಖ್ತರ್ ಅವರು ಮುಸ್ಲಿಂ ಧರ್ಮಕ್ಕೆ ಸೇರಿದವರು. ಶಿಬಾನಿ ದಂಡೇಕರ್ ಹಿಂದು ಧರ್ಮದವರಾಗಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಖ್ಯಾತ ಕ್ರಿಕೆಟರ್ ಬಗ್ಗೆ ಸಿನಿಮಾ ಮಾಡಲು ಮುಂದಾದ ನಿರ್ದೇಶಕ ರಾಜ್‌ಕುಮಾರ್ ಹಿರಾನಿ

    ಖ್ಯಾತ ಕ್ರಿಕೆಟರ್ ಬಗ್ಗೆ ಸಿನಿಮಾ ಮಾಡಲು ಮುಂದಾದ ನಿರ್ದೇಶಕ ರಾಜ್‌ಕುಮಾರ್ ಹಿರಾನಿ

    ಬಾಲಿವುಡ್ (Bollywood) ನಿರ್ದೇಶಕ ರಾಜ್‌ಕುಮಾರ್ ಹಿರಾನಿ (Director Rajkumar Hirani) ಅವರು ಮತ್ತೊಮ್ಮೆ ಸಾಧಕನ ಬದುಕನ್ನ ತೆರೆಮೇಲೆ ತರಲು ರೆಡಿಯಾಗಿದ್ದಾರೆ. ಖ್ಯಾತ ಕ್ರಿಕೆಟಿಗನ ಬಯೋಪಿಕ್ (Biopic) ಮಾಡಲು ಸ್ಟಾರ್ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಮುಂದಾಗಿದ್ದಾರೆ.

    ಹಿಂದಿ ಸಿನಿಮಾ ರಂಗದ ಸಕ್ಸಸ್‌ಫುಲ್ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರು ಈ ಹಿಂದೆ 3 ಈಡಿಯಟ್ಸ್, ಪಿಕೆ, ಸಂಜು (Snaju) ಹೀಗೆ ಸಿನಿಮಾ ನಿರ್ದೇಶನ ಮಾಡಿ ಸೇ ಎನಿಸಿಕೊಂಡಿದ್ದಾರೆ. ಸದ್ಯ `ಪಠಾಣ್’ ಸ್ಟಾರ್ ಶಾರುಖ್ ಖಾನ್ ಜೊತೆ ಡಂಕಿ ಚಿತ್ರದಲ್ಲಿ ನಿರ್ದೇಶಕ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ನಡುವೆ ಕಾವಿತೊಟ್ಟು ಅಚ್ಚರಿ ಮೂಡಿಸಿದ ಮಿಲ್ಕಿ ಬ್ಯೂಟಿ

    ಈ ಹಿಂದೆ ಸಂಜಯ್ ದತ್ (Sanjay Dutt) ಅವರ ಸಂಜು ಬಯೋಪಿಕ್ (Biopic) ಮಾಡಿ ಖ್ಯಾತಿ ಪಡೆದಿದ್ದರು. ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಮತ್ತೆ ಇಂತಹದ್ದೇ ಪ್ರಯತ್ನಕ್ಕೆ ಹಿರಾನಿ ಮುಂದಾಗಿದ್ದಾರೆ. ಖ್ಯಾತ ಕ್ರಿಕೆಟರ್ (Cricketer) ಲಾಲಾ ಅಮರನಾಥ್ (Lal Amarnath) ಜೀವನದ ಕುರಿತು ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.

    ಭಾರತಕ್ಕಾಗಿ 24 ಟೆಸ್ಟ್ ಪಂದ್ಯಗಳನ್ನು ಆಡಿದ ಕೀರ್ತಿ ಲಾಲಾ ಅಮರನಾಥ್ ಅವರಿಗೆ ಸಲ್ಲುತ್ತದೆ. ಮಾಮೂಲಿ ಕ್ರೀಡಾಧಾರಿತ ಸಿನಿಮಾ ರೀತಿಯಲ್ಲಿ ಅವರ ಬದುಕಿನ ಕಥೆಯನ್ನು ಕಟ್ಟಿಕೊಡುವ ಬದಲು ಬೇರೆಯದೇ ಫ್ಲೇವರ್‌ನಲ್ಲಿ ಈ ಸಿನಿಮಾವನ್ನು ನಿರ್ದೇಶಿಸಲು ರಾಜ್‌ಕುಮಾರ್ ಹಿರಾನಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೂರು ಮದುವೆ ಗುಟ್ಟನ್ನು ಬಿಚ್ಚಿಟ್ಟ ನಟ ಪವನ್ ಕಲ್ಯಾಣ್

    ಮೂರು ಮದುವೆ ಗುಟ್ಟನ್ನು ಬಿಚ್ಚಿಟ್ಟ ನಟ ಪವನ್ ಕಲ್ಯಾಣ್

    ಟಾಲಿವುಡ್ (Tollywood) ಅಂಗಳದಲ್ಲಿ ಪವನ್ ಕಲ್ಯಾಣ್ (Pawan Kalyan) ಮೂರು ಮದುವೆ ಬಗ್ಗೆ ಸಖತ್ ಸುದ್ದಿಯಾಗಿತ್ತು. ನಟನ ವೈಯಕ್ತಿಕ ಜೀವನ ಹಳ್ಳ ಹಿಡಿದಿರುವ ಬಗ್ಗೆ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿತ್ತು. ಈಗ ಬಾಲಯ್ಯನ (Actor Balayya) ಮುಂದೆ ಮೂರು ಮದುವೆ ಬಗ್ಗೆ ಪವನ್ ಕಲ್ಯಾಣ್ ಓಪನ್ ಆಗಿ ಮಾತನಾಡಿದ್ದಾರೆ. 3 ಮದುವೆ ಗುಟ್ಟನ್ನು ಪವನ್ ಕಲ್ಯಾಣ್ ಬಿಚ್ಚಿಟ್ಟಿದ್ದಾರೆ.

    ತೆಲುಗು ಚಿತ್ರರಂಗದಲ್ಲಿ ತಮ್ಮದೇ ಶೈಲಿಯಲ್ಲಿ ಸ್ಟಾರ್ ಆಗಿ ಮಿಂಚಿದವರು ಪವನ್ ಕಲ್ಯಾಣ್, ಸಿನಿಮಾ ಜೊತೆಗೆ ರಾಜಕೀಯದಲ್ಲೂ ಪವನ್ ಬೆಳಗುತ್ತಿದ್ದಾರೆ. ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗ ಇತ್ತೀಚಿಗೆ ಬಾಲಯ್ಯ ಅವರ ನಿರೂಪಣೆಯ ಟಾಕ್ ಶೋವೊಂದರಲ್ಲಿ ನಟ ಪವನ್ ಭಾಗವಹಿಸಿದ್ದಾರೆ. ಮದುವೆ, ರಾಜಕೀಯ (Politics) ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

    ಪವನ್ ಕಲ್ಯಾಣ್ ಎಂದಾಕ್ಷಣ ಗಾಸಿಪ್ ಪ್ರಿಯರಿಗೆ ಚರ್ಚೆಗೆ ಗ್ರಾಸವಾಗೋದೇ ಅವರ ಮದುವೆ ಮತ್ತು ಡಿವೋರ್ಸ್ ವಿಚಾರ. ಅದಕ್ಕೆಲ್ಲಾ ಪವನ್ ಕಲ್ಯಾಣ್ ಖಡಕ್ ಉತ್ತರ ಕೊಟ್ಟಿದ್ದಾರೆ. ವೈಯಕ್ತಿಕ ಜೀವನವನ್ನ ರಾಜಕೀಯಕ್ಕೆ ಹೋಲಿಸಿ ಮಾತನಾಡುವವರಿಗೂ ತಿರುಗೇಟು ನೀಡಿದ್ದಾರೆ. ಇದೀಗ ಬಾಲಯ್ಯ ನಡೆಸಿ ಕೊಡುವ ಅನ್‌ಸ್ಟಾಪೆಬಲ್ (Unstoppable Show) ಶೋನಲ್ಲಿ ಮೂರು ಮದುವೆಯಾಗಿದ್ದು ಯಾಕೆ? ಅದೆಲ್ಲ ಹೇಗಾಯಿತು ಎನ್ನುವುದನ್ನು ಬಾಯ್ಬಿಟ್ಟಿದ್ದಾರೆ.

    ನಾನು ಜೀವನದಲ್ಲಿ ಮದುವೆಯನ್ನೇ ಆಗಬಾರದು ಎಂದು ಯೋಚಿಸಿದ್ದೆ. ಒಂಟಿಯಾಗಿರಬೇಕು ಎಂದು ಅಂದುಕೊಂಡಿದ್ದೆ, ಈಗ ಹಿಂದುರುಗಿ ನೋಡಿದರೆ ಇದು ನಾನೇನಾ ಅನ್ನಿಸುತ್ತದೆ. ಮೊದಲು ಮದುವೆಯಾದೆ ಹೊಂದಾಣಿಕೆ ಆಗಲಿಲ್ಲ, ಎರಡನೇಯದು ಇದೇ ರೀತಿ ಆಯ್ತು. ಪ್ರತಿ ಬಾರಿಯೂ ಭಿನ್ನಾಭಿಪ್ರಾಯಗಳು ಬೆಳೆಯುತ್ತಿತ್ತು. ಕೊನೆಗೆ ಮೂರನೇ ಬಾರಿ ಮದುವೆಯಾಗಬೇಕಾಯ್ತು. ಮೂರು ಮದುವೆಯಾದೆ ಅಂತಾರಲ್ಲ. ನಾನೇನು ಮೂರು ಮದುವೆಯನ್ನ ಒಟ್ಟಿಗೆ ಆಗಿದ್ದೇನಾ? ಡಿವೋರ್ಸ್ ಪಡೆದ ಬಳಿಕ ತಾನೇ ಮದುವೆ ಆಗಿದ್ದು, ನಾನೇನು ಮದುವೆಯ ವ್ಯಾಮೋಹದಿಂದ ಆಗಿದ್ದಲ್ಲ. ರಾಜಕೀಯದಲ್ಲಿರುವ ಕಾರಣ ಕೆಲವರಿಗೆ ಇದೇ ನನ್ನ ವಿರುದ್ಧದ ಅಸ್ತ್ರವಾಗಿದೆ. ಇದನ್ನೂ ಓದಿ:ಅಭಿಮಾನಿಗೆ ಪ್ರಪೋಸ್ ಮಾಡಿದ `ಪುಷ್ಪ’ ನಟಿ ರಶ್ಮಿಕಾ ಮಂದಣ್ಣ

    ಹೊಂದಾಣಿಕೆಯ ಕೊರತೆಯಿಂದ ಮೂರು ಸಂಬಂಧಗಳು ಮುರಿದು ಬಿತ್ತು. ನಾನು ಒಂದೇ ಸಲಕ್ಕೆ ಮೂರು ಸಲ ಮದುವೆಯಾಗಿಲ್ಲ ಎಂದು ಪವನ್ ಕಲ್ಯಾಣ್‌ ಖಡಕ್ ಉತ್ತರ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k