Tag: actor

  • ಫೋರ್ಬ್ಸ್ ಟಾಪ್ 10 ಪಟ್ಟಿಯಲ್ಲಿ ಇತರೆ ನಟಿಯರ ಹೆಸರು ಯಾಕಿಲ್ಲ? ಪ್ರಿಯಾಂಕಾ ಚೋಪ್ರಾ ಹೀಗಂದ್ರು

    ಫೋರ್ಬ್ಸ್ ಟಾಪ್ 10 ಪಟ್ಟಿಯಲ್ಲಿ ಇತರೆ ನಟಿಯರ ಹೆಸರು ಯಾಕಿಲ್ಲ? ಪ್ರಿಯಾಂಕಾ ಚೋಪ್ರಾ ಹೀಗಂದ್ರು

    ಮುಂಬೈ: ಫೋರ್ಬ್ಸ್ ಪಟ್ಟಿ ಬಿಡುಗಡೆಯಾಗಿದ್ದು, ಟಾಪ್ 10 ಪಟ್ಟಿಯಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಹೆಸರು ಕೂಡ ಇದೆ. ಈ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಬಿಟ್ಟರೆ ಬೇರೆ ಯಾವ ನಟಿಯರ ಹೆಸರು ಕೇಳಿ ಬಂದಿಲ್ಲ. ಈ ಪಟ್ಟಿಯಲ್ಲಿ ಬೇರೆ ನಟಿಯರ ಹೆಸರು ಯಾಕಿಲ್ಲ ಎಂದು ಕೇಳಿದ್ದಿಕ್ಕೆ ವೇತನ ಲಿಂಗಭೇದ ಎಂದು ಪ್ರಿಯಾಂಕಾ ಉತ್ತರಿಸಿದ್ದಾರೆ.

    ವೇತನ ಲಿಂಗಭೇದ ಇದು ವಿಶ್ವದ ಸಮಸ್ಯೆ ಹಾಗೂ ಎಲ್ಲ ವೃತ್ತಿಯಲ್ಲಿ ಈ ಸಮಸ್ಯೆ ಇರುತ್ತದೆ. ಅದು ಬಾಲಿವುಡ್ ಆಗಿರಲಿ, ಹಾಲಿವುಡ್ ಆಗಿರಲಿ ಅಥವಾ ಬೇರೆ ವೃತ್ತಿ ಆಗಿರಲ್ಲಿ ಮಹಿಳೆಯರಿಗಿಂತ ಪುರುಷರಿಗೆ ವೇತನ ಹೆಚ್ಚು ಇರುತ್ತದೆ. ನನ್ನ ಪ್ರಕಾರ ಇದು ಒಂದು ದೊಡ್ಡ ಸಮಸ್ಯೆ ಹಾಗೂ ಇದು ಚಿತ್ರರಂಗದಲ್ಲಿ ಮಾತ್ರವಲ್ಲ. ಎಲ್ಲ ವೃತ್ತಿಯಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಹೇಳಿದರು.

    ಇದನ್ನೂ ಓದಿ: ಫೋರ್ಬ್ಸ್ ಇಂಡಿಯಾ ಟಾಪ್ 100 ಸೆಲೆಬ್ರಿಟಿ ಪಟ್ಟಿ ರಿಲೀಸ್: ಯಾರ ಆದಾಯ ಎಷ್ಟು ಕೋಟಿ ಇದೆ ಗೊತ್ತಾ?

    ಫೋರ್ಬ್ಸ್ 2017ರ ಟಾಪ್ 10 ಪಟ್ಟಿಯಲ್ಲಿ ನಟಿಯರಲ್ಲಿ ನೀವು ಒಬ್ಬರೆ ಇದ್ದೀರ? ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದಕ್ಕೆ ಪ್ರಿಯಾಂಕಾ,”ನನಗೆ ತುಂಬಾನೇ ಖುಷಿಯಾಗುತ್ತಿದೆ. ಪುರುಷರಿಗೆ ಸಮಾನವಾದ ಸ್ಥಾನಕ್ಕೆ ನಾನು ತಲುಪಿದ್ದೇನೆ. ಚಿತ್ರರಂಗದಲ್ಲಿ ಈ ರೀತಿ ನಡೆಯುವುದು ಅಪರೂಪವಾಗಿದೆ. ಈ ಸಮಯದಲ್ಲಿ ಬೇರೆ ನಟಿಯರು ಟಾಪ್ 10 ಪಟ್ಟಿಯಲ್ಲಿ ಯಾಕೆ ಇಲ್ಲ ಎಂಬ ಪ್ರಶ್ನೆ ಹುಟ್ಟುತ್ತದೆ” ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಇದನ್ನೂ ಓದಿ: ಫೋರ್ಬ್ಸ್  ಪಟ್ಟಿಯಲ್ಲೂ ಬಾಹುಬಲಿ ಶೈನಿಂಗ್: ಯಾರ ಆದಾಯ ಎಷ್ಟು ಕೋಟಿ ರೂ.?

    ನಟರಿಗೆ ಹೆಚ್ಚು ಸಂಭಾವನೆ ಕೊಟ್ಟು ಪಕ್ಷಪಾತ ಮಾಡಿದ್ದಕ್ಕೆ ಈ ಹಿಂದೆ ನಟಿ ದೀಪಿಕಾ ಪಡುಕೋಣೆ, ಕಂಗನಾ ರಣೌತ್ ಹಾಗೂ ಅನುಷ್ಕಾ ಶರ್ಮಾ ಹಿಂದಿ ಚಲನಚಿತ್ರ ವಿರುದ್ಧ ವಾಗ್ದಾಳಿ ನಡೆಸಿದ್ದರು.

    ಫೋರ್ಬ್ಸ್ 2017ರ ಟಾಪ್ ಸೆಲೆಬ್ರಿಟಿ ಪಟ್ಟಿಯಲ್ಲಿ 35 ವರ್ಷ ನಟಿ ಪ್ರಿಯಾಂಕ ಚೋಪ್ರಾ 8ನೇ ಸ್ಥಾನವನ್ನು ಪಡೆದಿದ್ದು, ಆದಾಯ 68 ಕೋಟಿ ರೂ. ಇದೆ.

  • ಗೆಲುವಿನಂಚಿನಲ್ಲಿರೋ ಪ್ರಧಾನಿ ಮೋದಿಯನ್ನು ಪ್ರಶ್ನಿಸಿ ನಟ ಪ್ರಕಾಶ್ ರೈ ಟ್ವೀಟ್

    ಗೆಲುವಿನಂಚಿನಲ್ಲಿರೋ ಪ್ರಧಾನಿ ಮೋದಿಯನ್ನು ಪ್ರಶ್ನಿಸಿ ನಟ ಪ್ರಕಾಶ್ ರೈ ಟ್ವೀಟ್

    ಬೆಂಗಳೂರು: ಪ್ರಿಯ ಪ್ರಧಾನ ಮಂತ್ರಿಗಳೇ, ಗೆಲುವಿಗಾಗಿ ಅಭಿನಂದನೆಗಳು. ಆದರೆ, ನೀವು ನಿಜಕ್ಕೂ ಸಂತೋಷವಾಗಿದ್ದೀರಾ? ಎಂದು ಬಹುಭಾಷಾ ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.

    ಸಂಘ ಪರಿವಾರ ಮತ್ತು ಬಿಜೆಪಿ ವಿರುದ್ಧದ ಹೋರಾಟವನ್ನು ಮುಂದುವರೆಸಿರುವ ಅವರು, ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಬಿಜೆಪಿ ಪರ ಬಂದಿರುವ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದಾರೆ.

    ನನ್ನ ಪ್ರಿಯ ಪ್ರಧಾನಮಂತ್ರಿಗಳಿಗೆ ಎಂದು ಪತ್ರದ ಮಾದರಿಯಲ್ಲಿ ಆರಂಭವಾಗಿರುವ ಟ್ವೀಟ್‍ನಲ್ಲಿ ಆತ್ಮೀಯರೇ, ಅಭಿನಂದನೆಗಳು. ಹೌದು, ಆದರೆ ವಿಕಾಸದ ತಂತ್ರದಿಂದ ನೀವು ಚುನಾವಣೆಯಲ್ಲಿ ಭಾರೀ ಬಹುಮತದಿಂದ ಗೆಲ್ಲಬೇಕಾಗಿತ್ತು. 150 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ನಿಮ್ಮ ಗುರಿ ಏನಾಯ್ತು? ಒಂದು ಕ್ಷಣ ನಿಂತು ಆಲೋಚಿಸುತ್ತೀರಾ? ಒಡೆದು ಗೆಲ್ಲುವ ತಂತ್ರ ಫಲಿಸಿಲ್ಲ. ಪಾಕಿಸ್ತಾನ, ಧರ್ಮ, ಜಾತಿ, ದಬ್ಬಾಳಿಕೆ, ವೈಯಕ್ತಿಕ ಲಾಭಗಳಿಕೆಯ ಅಹಂಗಳಿಗಿಂತಲೂ ದೊಡ್ಡ ಸಮಸ್ಯೆಗಳು ನಮ್ಮ ದೇಶದಲ್ಲಿವೆ. ಗ್ರಾಮೀಣ ಪ್ರದೇಶಕ್ಕೆ ಸಂಬಂಧಿಸಿದ ಮುಖ್ಯ ಸಮಸ್ಯೆಗಳು ಇವೆ. ರೈತರ ದನಿಯನ್ನು ನಿರ್ಲಕ್ಷ್ಯಿಸಲಾಗಿದೆ ಹಾಗೂ ಗ್ರಾಮೀಣ ಭಾರತದ ಸಮಸ್ಯೆಗಳ ದನಿ ಏರಿದೆ ಕೇಳಿಸುತ್ತಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

  • ಎಸ್ ಆರ್ ಹಿರೇಮಠ್ ಹೇಳಿಕೆಗೆ ಕೆಪಿಜೆಪಿ ಸ್ಥಾಪಕ ಉಪೇಂದ್ರ ತಿರುಗೇಟು!

    ಎಸ್ ಆರ್ ಹಿರೇಮಠ್ ಹೇಳಿಕೆಗೆ ಕೆಪಿಜೆಪಿ ಸ್ಥಾಪಕ ಉಪೇಂದ್ರ ತಿರುಗೇಟು!

    ಬೆಳಗಾವಿ: ನಾನು ನನ್ನ ಅಣ್ಣ ಸೇರಿ ಒಂದು ರೆಸಾರ್ಟ್ ಖರೀದಿ ಮಾಡಿದ್ದೀವಿ. ಇದರ ಹಿಂದುಗಡೆ ನಮ್ಮ ಜಮೀನಿದೆ. ಹಿರೇಮಠ್ ಕಡೆಯವರು ಯಾರೋ ಬಂದು ರೇಸಾರ್ಟ್ ನೋಡ್ಬಿಟ್ಟು ಕೃಷಿ ಭೂಮಿಯಲ್ಲಿ ರೆಸಾರ್ಟ್ ಕಟ್ಟಿದ್ದಾರೆ ಅಂತ ಹೇಳಿದ್ದಾರೆ ಅಂತ ನಟ ಹಾಗೂ ಕೆಪಿಜೆಪಿ ಸ್ಥಾಪಕ ಉಪೇಂದ್ರ ತಿರುಗೇಟು ನೀಡಿದ್ದಾರೆ.

    ನಗರದಲ್ಲಿ ಕೆಪಿಜೆಪಿ ಪಕ್ಷದ ಪ್ರಚಾರಕ್ಕೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೃಷಿ ಭೂಮಿಯಲ್ಲಿ ರೆಸಾರ್ಟ್ ಮಾಡಲು ಸಾಧ್ಯವೇ ಇಲ್ಲ. ಕೃಷಿ ಭೂಮಿಯನ್ನು ಕೃಷಿಗಾಗಿಯೇ ಬಳಸಬೇಕು. ಇಂದಿಗೂ ನಾವು ಅಲ್ಲಿ ವ್ಯವಸಾಯ ಮಾಡ್ತಾ ಇದ್ದೀವಿ. ಬೆಳೆ ಬೆಳೆಯುತ್ತಾ ಇದ್ದೀವಿ. ಒಟ್ಟಿನಲ್ಲಿ ಅವರಿಗೆ ಈ ಗೊಂದಲ ಉಂಟಾಗಲು ಕಾರಣ ಅವರು ರೆಸಾರ್ಟ್ ಮುಂದುಗಡೆ ಬಂದಿದ್ದಾರೆ. ಹೀಗಾಗಿ ಅವರು ಹಿಂದುಗಡೆ ನೋಡಿಲ್ಲ. ಹೀಗಾಗಿ ಮಂದುಗಡೆ ಬಂದು ಈ ಜಮೀನಿನಲ್ಲಿ ಹೊಟೇಲ್ ಮಾಡ್ಕೊಂಡಿದ್ದಾರೆ ಅಂತ ಅವರು ಹೇಳಿದ್ದಾರೆ.

    ನಾವು ಹೊಟೇಲನ್ನು ಕೆಸ್‍ಇಡಿಸಿ (ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ ಡೆವೆಲಪ್ ಮೆಂಟ್ ಕಾರ್ಪೋರೇಶನ್) ಯಿಂದ ತೆಗೆದುಕೊಂಡಿದ್ದೇವೆ. ಅದರ ಸಂಪೂರ್ಣ ದಾಖಲೆಗಳಿವೆ. ಅದನ್ನೆಲ್ಲಾ ನೋಡಿಯೇ ಕೋರ್ಟ್ ನಮ್ಮ ಪರ ತೀರ್ಪು ನೀಡಿದೆ. ಹೀಗಾಗಿ ಕೋರ್ಟ್ ನಿರ್ಧಾರ ತೆಗೆದುಕೊಂಡ ಮೇಲೂ ಒಬ್ಬ ವ್ಯಕ್ತಿ ಅದರ ಬಗ್ಗೆ ಮಾತನಾಡುತ್ತಾರೆ ಅಂದ್ರೆ ನನಗೆ ಅದರ ಬಗ್ಗೆ ಅರ್ಥನೇ ಆಗಲ್ಲ. ಕೋರ್ಟ್ ಗಿಂತಲೂ ಇವರು ದೊಡ್ಡವರಾಗಿಬಿಟ್ಟರಾ ಅಂತ ಅವರು ಹೇಳಿದ್ರು. ಇದನ್ನೂ ಓದಿ: ನಟ, ಕೆಪಿಜೆಪಿ ಸ್ಥಾಪಕ ಉಪೇಂದ್ರಗೆ ಎಸ್.ಆರ್. ಹಿರೇಮಠ ಕಿವಿಮಾತು!

    ಇದೇ ವೇಳೆ ಪಕ್ಷದ ಪರ ಪ್ರಚಾರ ಮಾಡಿದ ಅವರು, ಜನ ಈಗಿರುವ ರಾಜಕೀಯ ವ್ಯವಸ್ಥೆಗೆ ಬೇಸತ್ತು ಹೋಗಿದ್ದಾರೆ. ವಿಷಯಾಧಾರಿತ ರಾಜಕೀಯ ನಡೆಯುತ್ತಿದೆ. ಹೊಸ ರಾಜಕಾರಣಕ್ಕೆ ವೇದಿಕೆ ರೂಪಿಸಿದ್ದೇನೆ. ಸಾಕಷ್ಟು ಜನರು ನನ್ನ ಕೈಜೋಡಿಸುತ್ತಿದ್ದಾರೆ. ಕೇವಲ 20 ರಷ್ಟು ಜನರ ಕೈಯಲ್ಲಿ ಅಧಿಕಾರವಿದೆ. ಶೇ.80 ಜನರು ಸುಮ್ಮನಿದ್ದೇವೆ. ಅಕೌಂಟೆಬಿಲಿಟಿ ನಮಗೆ ಬೇಕಾಗಿದೆ. ಹಿಂದೆ ರಾಜರ ಆಡಳಿತ ಕಾಲವಿತ್ತು. ಈಗ ರಾಜಕಾರಣವಾಗಿದೆ ರಾಜಕೀಯ ವ್ಯವಸ್ಥೆ ಅಂದ್ರು.

    ವಿಚಾರ ಇರೋರು ರಾಜಕಾರಣಕ್ಕೆ ಬರದಂತೆ ಹೆದರಿಸುತ್ತಾರೆ. ನಮ್ಮ ಮೈಂಡ್ ಸೆಟ್ ಹೇಗಾಗಿದೆ ಅಂದ್ರೆ ಹಣವಿದ್ರೆ ಮಾತ್ರ ರಾಜಕಾರಣ ಅಂತಾ ಆಗಿ ಹೋಗಿದೆ. ರಾಜ್ಯ ಮಟ್ಟದ ಪ್ಲಾನಿಂಗ್ ನಮ್ಮ ಪ್ರಣಾಳಿಕೆಯಲ್ಲಿದೆ. ಜನವರಿ ಅಂತ್ಯದವರೆಗೂ ಕೆಪಿಜೆಪಿ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡುವ ಉದ್ದೇಶ ಇದೆ. ಅರ್ಹತೆ ಇರುವ ಅಭ್ಯರ್ಥಿಗಳನ್ನ ಸಂದರ್ಶನ ಮಾಡಿ ಆಯ್ಕೆ ಮಾಡ್ತಿವಿ ಅಂತ ಅವರು ವಿವರಿಸಿದ್ರು.

    https://www.youtube.com/watch?v=7C5QPHui87Y

     

  • ರಾತ್ರಿ ಮಾವನನ್ನು ಭೇಟಿಯಾದ ಶ್ರೀನಗರ ಕಿಟ್ಟಿ- ಸುನಿಲ್ ಹೆಗ್ಗರವಳ್ಳಿ ಮಾತಿಗೆ ಬೇಸರ

    ರಾತ್ರಿ ಮಾವನನ್ನು ಭೇಟಿಯಾದ ಶ್ರೀನಗರ ಕಿಟ್ಟಿ- ಸುನಿಲ್ ಹೆಗ್ಗರವಳ್ಳಿ ಮಾತಿಗೆ ಬೇಸರ

    ಬೆಂಗಳೂರು: ಸಿಸಿಬಿ ಕಚೇರಿಯಲ್ಲಿದ್ದ ತಮ್ಮ ಮಾವನನ್ನು ನಟ ಶ್ರೀನಗರ ಕಿಟ್ಟಿ ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

    ಬಳಿಕ ಮಾತನಾಡಿದ ಕಿಟ್ಟಿ, ಸುನಿಲ್ ಹೆಗ್ಗರವಳ್ಳಿ ಬಗ್ಗೆ ಮಾತನಾಡೋಕೂ ಇಷ್ಟವಿಲ್ಲ. ಅವನನ್ನು ನಾನು ನಿನ್ನೆ ಮೊನ್ನೆಯಿಂದ ನೋಡ್ತಿಲ್ಲ. ಅವನನ್ನು ಮನೆ ಮಗನಂತೆ ನೋಡಿಕೊಂಡಿದ್ದರು. ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ನನಗೆ ಕೆಲಸ ಕಲಿಸಿಕೊಟ್ಟವರು ರವಿ ಬೆಳಗೆರೆ ಅಂತ ಅವನೇ ಹೇಳಿಕೊಂಡಿದ್ದಾನೆ. ಅದರಲ್ಲೂ ಯಾರನ್ನೂ ಏಕವಚನದಲ್ಲಿ ಮಾತನಾಡೋದು ಸರಿಯಲ್ಲ. ಆದ್ರೆ ಮೊನೆನ ಅವನು ಆಡಿದ ಮಾತುಗಳು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ ಅಂದ್ರು.

    ತಪ್ಪು ಮಾಡದಿದ್ದಾಗ ಹೊರಗಿನವರು ಆಡೋ ಮಾತುಗಳು ಮನಸ್ಸಿಗೆ ನೋವುಂಟು ಮಾಡುತ್ತೆ. ರವಿ ಬೆಳಗೆರೆಗೆ ಬಿಪಿ ಹೆಚ್ಚಾಗಿದ್ದು ಸುಧಾರಿಸಿಕೊಳ್ತಿದ್ದಾರೆ. ನಮಗೆ ಕಾನೂನಿನ ಮೇಲೆ ನಂಬಿಕೆಯಿದ್ದು, ನ್ಯಾಯ ಸಿಗುವ ವಿಶ್ವಾಸ ಇದೆ. ತಪ್ಪು ಮಾಡಿದ್ದರೆ ಶಿಕ್ಷೆ ಆಗೇ ಆಗುತ್ತೆ ಅಂತ ಅವರು ಹೇಳಿದ್ದರು.

    ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ವೇಳೆ ವಿಶೇಷ ತನಿಖಾ ತಂಡ ಬೆಂಗಳೂರಿನಲ್ಲಿ ಸುಪಾರಿ ಕಿಲ್ಲರ್ ವಿಜಯಪುರದ ಚಡಚಣದ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಯನ್ನು ಶುಕ್ರವಾರ ಬಂಧಿಸಿತ್ತು. ಆತನ ವಿಚಾರಣೆ ವೇಳೆ ರವಿ ಬೆಳೆಗೆರೆಯವರು ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪತ್ರಕರ್ತ ರವಿ ಬೆಳಗೆರೆಯನ್ನು ಬಂಧಿಸಲಾಗಿತ್ತು.

    ರವಿ ಬೆಳಗೆರೆ ಎರಡನೇ ಪತ್ನಿ ಜತೆ ಹಾಯ್ ಬೆಂಗಳೂರು ಪತ್ರಿಕೆ ವರದಿಗಾರ ಸನೀಲ್ ಹೆಗ್ಗರವಳ್ಳಿ ಅಕ್ರಮ ಸಂಬಂಧದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸುನೀಲ್ ಹತ್ಯೆ ಮಾಡಲು ನಿರ್ಧರಿಸಿದ್ದ ಬೆಳಗೆರೆ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಗೆ 30 ಲಕ್ಷ ರುಪಾಯಿ ಸುಪಾರಿ ಕೊಟ್ಟಿದ್ದರು ಎಂಬುದಾಗಿ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಳಗೆರೆ ಬಂಧನವಾಗಿ ವಿಚಾರಣೆ ನಡೆಯುತ್ತಿತ್ತು. ಅಂತೆಯೇ ಭಾನುವಾರ ರಾತ್ರಿ ಸುಮಾರು 9.40ರ ವೇಳೆಗೆ ಮಧು ಎಂಬಾತ ಸುನಿಲ್ ಹೆಗ್ಗರವಳ್ಳಿಗೆ ಕರೆ ಮಾಡಿದ್ದಾರೆ.

    ಸುನೀಲ್ ರಿಸೀವ್ ಮಾಡಿದಾಗ ಕರೆ ಮಾಡಿದ್ದ ಮಧು ಎಂಬಾತ ರವಿ ಬೆಳೆಗೆರೆಯವರಿಗೆ ಫೋನ್ ಕೊಟ್ಟಿದ್ದಾನೆ. ಈ ವೇಳೆ ಸುನೀಲ್ ಜೊತೆ ಮಾತನಾಡಿದ ರವಿ ಬೆಳಗೆರೆ, ಯಶೋಮತಿ ಜೊತೆ ಸಂಬಂಧ ಇದೆ ಅಂತಾ ಮಾಧ್ಯಮಗಳ ಮುಂದೆ ಹೇಳಿದ್ದೀಯಾ? ಅಂತಾ ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಸುನೀಲ್, ನನಗೆ ಯಶೋಮತಿ ಜೊತೆ ಸಂಬಂಧವಿಲ್ಲ. ಹೀಗಿದ್ದಾಗ ನಾನ್ ಯಾಕೆ ಹಾಗೆ ಹೇಳಲಿ? ಅಂತಾ ಪ್ರಶ್ನಿಸಿದ್ದರು ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿತ್ತು.

    ನನಗೆ ಏನೇ ಆದರೂ ರವಿ ಬೆಳಗೆರೆ ಅವರೇ ಕಾರಣ. ಸಿಸಿಬಿ ಕಚೇರಿಯಿಂದ ಕರೆ ಮಾಡುವ ಮೂಲಕ ತಾನು ಏನ್ ಬೇಕಾದ್ರೂ ಮಾಡ್ತೀನಿ ಅನ್ನೋ ಮೆಸೇಜ್ ಕೊಟ್ಟಿದ್ದಾರೆ. ಯಶೋಮತಿ ನನ್ನ ಗೆಳತಿಯಷ್ಟೇ. ಎಲ್ಲರೂ ರವಿ ಬೆಳಗೆರೆಯಂತೆ ಇರಲು ಆಗುತ್ತಾ? ಅವರಿಗಾದರೂ ಹತ್ತಾರು ಮಂದಿ ಗರ್ಲ್ ಫ್ರೆಂಡ್ಸ್ ಇದ್ದಾರೆ ಅಂತಾ ಸುನಿಲ್ ಕೂಡ ಪ್ರತಿಕ್ರಿಯಿಸಿದ್ದರು.

    https://www.youtube.com/watch?v=4amfU_N3xCI

    https://www.youtube.com/watch?v=kbcTIaQVj5Q

    https://www.youtube.com/watch?v=ED0FdtDgq5U

  • ಪರಿಸರ ಪ್ರೇಮಿಗಳಲ್ಲಿ ಕ್ಷಮೆ ಕೇಳಿದ ಶಿವಣ್ಣ

    ಪರಿಸರ ಪ್ರೇಮಿಗಳಲ್ಲಿ ಕ್ಷಮೆ ಕೇಳಿದ ಶಿವಣ್ಣ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಪರಿಸರ ಪ್ರೇಮಿಗಳಲ್ಲಿ ಕ್ಷಮೆಯನ್ನು ಕೇಳಿದ್ದಾರೆ.

    ನಟ ಶಿವರಾಜ್ ಕುಮಾರ್ ಮಲ್ಲೇಶ್ವರಂ ನಲ್ಲಿರುವ ಕಲ್ಯಾಣ್ ಜ್ಯುವೆಲರ್ಸ್ ನ ಹೊಸ ಶೋರೂಂನ ಉದ್ಘಾಟನೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶೋರೂಂಗೆ ಅಡ್ಡಲಾಗಿದ್ದ ಎರಡು ಮರಗಳನ್ನು ಶೋರೂಂ ಅವರು ಅಂಗಡಿ ಕಾಣುವುದಿಲ್ಲ ಎಂದು ಕಡಿಸಿದ್ದಾರೆ. ಇದರಿಂದ ಪರಿಸರ ಪ್ರೇಮಿಗಳು ಆಕ್ರೋಶಗೊಂಡು ಪ್ರತಿಭಟನೆಯನ್ನು ಮಾಡಲು ಆರಂಭಿಸಿದ್ದರು.

    ಉದ್ಘಾಟನೆ ಮಾಡಲು ಸಮಾರಂಭಕ್ಕೆ ಆಗಮಿಸಿದ ಶಿವಣ್ಣಗೂ ಪ್ರತಿಭಟನೆಯ ಬಿಸಿ ತಟ್ಟಿದೆ. ಆದ್ದರಿಂದ ಪ್ರತಿಭಟನಕಾರರ ಮನವೊಲಿಸಿ ಕಲ್ಯಾಣ್ ಜ್ಯುವೆಲರ್ಸ್ ಪರವಾಗಿ ಕ್ಷಮೆಯನ್ನು ಕೇಳಿದ್ದಾರೆ. ಅಷ್ಟೇ ಅಲ್ಲದೇ ಜ್ಯುವೆಲ್ಲರ್ಸ್ ಅಂಗಡಿ ಮುಂದೆ ಗಿಡವೊಂದನ್ನು ನೆಟ್ಟು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.

    ಒಂದು ಸಣ್ಣ ತಪ್ಪಾಗಿದೆ. ಅದನ್ನು ಮುಂದುವರೆಸಿಕೊಂಡು ಹೋಗೋದು ಬೇಡ. ಇವತ್ತು ಒಂದು ಗಿಡ ನೆಟ್ಟಿದ್ದೇವೆ. ಇನ್ನೂ ನೂರು ಗಿಡ ನೆಡುತ್ತೇವೆ. ನಾನು ನಿಮ್ಮೆಲ್ಲರ ಮುಂದೆ ಪ್ರಾಮಿಸ್ ಮಾಡುತ್ತೇನೆ. ನಿಮ್ಮೆಲ್ಲರಿಗೂ ಬೇಜರಾಗಿದ್ದರಿಂದ ಕ್ಷಮಿಸಿ, ಕ್ಷಮಿಸಿ ಎಂದು ಪರಿಸರ ಪ್ರೇಮಿಗಳಲ್ಲಿ ಎರಡು ಬಾರಿ ಕ್ಷಮೆ ಕೇಳಿದ್ದಾರೆ.

  • ಮೋದಿಯೊಬ್ಬರಿಂದ ಬದಲಾವಣೆ ಮಾಡಲು ಸಾಧ್ಯವಿಲ್ಲ, ಜನ ಬದಲಾಗದಿದ್ದರೆ ದೇಶ ಬದಲಾಗಲ್ಲ: ಉಪೇಂದ್ರ

    ಮೋದಿಯೊಬ್ಬರಿಂದ ಬದಲಾವಣೆ ಮಾಡಲು ಸಾಧ್ಯವಿಲ್ಲ, ಜನ ಬದಲಾಗದಿದ್ದರೆ ದೇಶ ಬದಲಾಗಲ್ಲ: ಉಪೇಂದ್ರ

    ಉಡುಪಿ: ಮೋದಿಯೊಬ್ಬರಿಂದ ದೇಶವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಜನ ಬದಲಾಗದಿದ್ದರೆ ದೇಶ ಬದಲಾಗಲ್ಲ ಎಂದು ನಟ ಕೆಪಿಜೆಪಿ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಉಪ್ಪಿ, ನಾನು ಪ್ರಾಕ್ಟಿಕಲ್ ಇಲ್ಲ ಅಂತ ಜನ ನನ್ನನ್ನು ನೋಡಿ ನಗುತ್ತಿದ್ದಾರೆ. ಆದರೆ ರಾಜಕೀಯ ದೃಷ್ಟಿಯಲ್ಲಿ ನೋಡಿದರೆ ನಾನು ಪ್ರಾಕ್ಟಿಕಲ್ ಇಲ್ಲ. ಪ್ರಜೆಗಳು ಮಾತನಾಡುವ ಕಾಲ ಬಂದಿದೆ ಎಂದು ಉಪ್ಪಿ ಹೇಳಿದರು. ಎಂಎಲ್‍ಎ ಸೀಟು ಗೆಲ್ಲಲು 50 ಕೋಟಿ ರೂಪಾಯಿ ಬೇಕು. ನನ್ನ ಬಳಿ ಕಾಸಿಲ್ಲ. ಆದರೆ ಕನಸಿದೆ. ಅದನ್ನು ಈಡೇರಿಸಲು ಜನ ಬೆಂಬಲ ಬೇಕಾಗಿದೆ ಎಂದರು.

    ಸತ್ಯಕ್ಕೆ ಸಾವಿಲ್ಲ ಸತ್ಯ ಸಾಯೋದೇ ಇಲ್ಲ. ನನಗೆ ಶೀಘ್ರವಾಗಿ ಕೆಲಸವಾಗಬೇಕಿಲ್ಲ, ನಾನು ಸ್ಮಾರ್ಟಾಗಿ ಕೆಲಸ ಮಾಡುತ್ತೇನೆ. ಅಣ್ಣಾ ಹಜಾರೆ ಬೆಂಬಲ ಕೇಜ್ರಿವಾಲ್‍ಗೆ ಇತ್ತು. ಅರವಿಂದ ಕೇಜ್ರೀವಾಲ್ ಇನ್ನೂ ಚೆನ್ನಾಗಿ ಕೆಲಸ ಮಾಡಬಹುದಿತ್ತು ಎಂದು ಹೇಳಿದರು. ನಮ್ಮ ದೇಶದಲ್ಲಿ ಆರೋಗ್ಯ, ಶಿಕ್ಷಣ ಸರಿಯಾಗಿ ಸಿಕ್ಕಿದ್ದರೆ ಇವತ್ತು ಭ್ರಷ್ಟಾಚಾರ ಎಂಬುವುದು ಇರುತ್ತಿರಲಿಲ್ಲ ಎಂದು ತಿಳಿಸಿದರು.

    ರಾಷ್ಟ್ರೀಯ ಪಕ್ಷಗಳಿಂದ ಬೇಡಿಕೆ ಬಂದಿದೆ. 15 ವರ್ಷದಿಂದ ಆಹ್ವಾನಗಳಿದ್ದರೂ ನಾನು ನನ್ನ ಕನಸನ್ನು ಹೊತ್ತು ಈಗ ಹೊರಟಿದ್ದೇನೆ. ಬೆಕ್ಕಿಗೆ ಗಂಟೆ ಕಟ್ಟಿದ್ದೇನೆ. ಗಂಟೆ ಬಾರಿಸಲು ಜನ ಬೇಕು. 50 ಸಾವಿರ ಜನರ ಮೇಲ್ ಬಂದಿದೆ. 30 ಸಾವಿರ ಮಂದಿ ಕ್ರಿಯಾಶೀಲ ಜನ ನನ್ನ ಜೊತೆಗಿದ್ದಾರೆ ಎಂದು ಉಪೇಂದ್ರ ಹೇಳಿದರು. ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ನನ್ನ ಆಲೋಚನೆಯ ಜನ ತಮ್ಮ ಆಲೋಚನೆಗಳನ್ನು ಹೇಳಬೇಕಿದೆ ಎಂದು ಮನವಿ ಮಾಡಿದರು.

  • ಉಜಿರೆಯಲ್ಲಿ ಮಾನವೀಯತೆ ಮೆರೆದ ರಿಯಲ್ ಸ್ಟಾರ್ ಉಪೇಂದ್ರ

    ಉಜಿರೆಯಲ್ಲಿ ಮಾನವೀಯತೆ ಮೆರೆದ ರಿಯಲ್ ಸ್ಟಾರ್ ಉಪೇಂದ್ರ

    ಮಂಗಳೂರು: ರಿಯಲ್ ಸ್ಟಾರ್ ಹಾಗೂ ಕೆಪಿಜೆಪಿ ಸ್ಥಾಪಕ ಉಪೇಂದ್ರ ಅವರು ಮಾನವೀಯತೆ ಮೆರೆದಿದ್ದಾರೆ. ಅಂಧ ಮಕ್ಕಳ ಸಹಾಯಕ್ಕಾಗಿ ರಸ್ತೆ ಬದಿಯಲ್ಲಿ ಹಾಡು ಹಾಡುತ್ತಾ ದೇಣಿಗೆ ಸಂಗ್ರಹಿಸುತ್ತಿದ್ದ ಸಂದರ್ಭದಲ್ಲಿ ನಟ ಕಾರಿನಿಂದ ಇಳಿದು ಮಕ್ಕಳ ಜೊತೆ ಬೆರೆಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ರಸ್ತೆ ಬದಿ ಹಾಡುತ್ತಾ ದೇಣಿಗೆ ಯಾಚಿಸುತ್ತಿದ್ದರು. ಈ ಸಂದರ್ಭದಲ್ಲಿ ಅದೇ ಮಾರ್ಗವಾಗಿ ತನ್ನ ಕಾರಿನಲ್ಲಿ ಹೋಗುತ್ತಿದ್ದ ನಟ ಉಪೇಂದ್ರ, ತಕ್ಷಣ ಕಾರು ನಿಲ್ಲಿಸಿ ಹಾಡು ಹೇಳುತ್ತಿದ್ದ ಅಂಧ ಮಕ್ಕಳ ಬಳಿ ಹೋಗಿದ್ದಾರೆ. ಮಕ್ಕಳ ಹಾಡಿಗೆ ಮೆಚ್ಚಿ ಮೂರು ಸಾವಿರ ರೂಪಾಯಿಯನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ.

    ಅಂಧರು ರಸ್ತೆ ಬದಿ ಹಾಡಿಕೊಂಡು ಹೋಗುತ್ತಿದ್ದರೂ ಮುಖ ತಿರುಗಿಸಿಕೊಂಡು ಹೋಗೋ ಜನರ ನಡುವೆ ಸ್ಟಾರ್ ನಟ ದಿಢೀರ್ ತಮ್ಮ ಬಳಿಗೆ ಬಂದು ಹಣ ನೀಡಿದ್ದು ಅಂಧ ಕಲಾವಿದರಿಗೆ ಖುಷಿ ತಂದಿದೆ.

    ಬಳಿಕ ಎಲ್ಲಾ ಮಕ್ಕಳಿಗೂ ಶುಭ ಹಾರೈಸಿದ ಉಪೇಂದ್ರ ಮತ್ತೆ ಕಾರು ಹತ್ತಿದ್ದಾರೆ. ಯಾವುದೇ ಅಹಂಕಾರ ಇಲ್ಲದೆ ಅಂಧ ಮಕ್ಕಳ ಜೊತೆ ಉಪೇಂದ್ರ ತೋರಿದ ಪ್ರೀತಿಗೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಬಾಲಿವುಡ್ ಹಿರಿಯ ನಟ ಶಶಿಕಪೂರ್ ಇನ್ನಿಲ್ಲ

    ಬಾಲಿವುಡ್ ಹಿರಿಯ ನಟ ಶಶಿಕಪೂರ್ ಇನ್ನಿಲ್ಲ

    ಮುಂಬೈ: ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ಶಶಿಕಪೂರ್ (79) ಇಂದು ನಿಧನರಾಗಿದ್ದಾರೆ.

    ಮುಂಬೈನ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಗೆ ಆನಾರೋಗ್ಯ ಸಮಸ್ಯೆಯಿಂದ ದಾಖಲಾಗಿದ್ದ ಶಶಿಕಪೂರ್ ಇಂದು ಸಂಜೆ 5.20 ರ ವೇಳೆಯಲ್ಲಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕರು ದೃಢಪಡಿಸಿದ್ದಾರೆ.

    ಸಿನಿಮಾ ರಂಗದಲ್ಲಿ ಇವರು ಮಾಡಿರುವ ಸಾಧನೆಯನ್ನ ಗುರುತಿಸಿ ಭಾರತ ಸರ್ಕಾರ ಇವರಿಗೆ 2011 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಅಲ್ಲದೇ 2015 ರಲ್ಲಿ ಚಿತ್ರರಂಗದ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆಯುವ ಮೂಲಕ ತಮ್ಮ ಕುಟುಂಬದಲ್ಲಿ ಈ ಪ್ರಶಸ್ತಿ ಪಡೆದ ಮೂರನೇ ವ್ಯಕ್ತಿ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದರು.

    ಬಾಲ್ಯ ನಟರಾಗಿ ತಮ್ಮ ತಂದೆ ಪೃಥ್ವಿರಾಜ್ ಕಪೂರ್ ಅವರೊಂದಿಗೆ ಸಿನಿಮಾ ರಂಗಕ್ಕೆ ಪ್ರವೇಶ ಪಡೆದ ಇವರು, `ದೀವಾರ್’ (1975), `ಸತ್ಯಂ ಶಿವಂ ಸುಂದರಂ’ (1978), `ಜುನೂನ್’ (1978), `ಶಾನ್’ (1980) ಮತ್ತು 1982 ರಲ್ಲಿ ಬಿಡುಗಡೆಯಾದ `ನಮಕ್ ಹಲಾಲ್’ ಸೇರಿದಂತೆ 110 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

    1978 ರಲ್ಲಿ ಪೃಥ್ವಿ ಥಿಯೇಟರ್ ಸ್ಥಾಪಿಸಿದ ಶಶಿಕಪೂರ್ ಹಾಲಿವುಡ್ ನಟಿ ಜೆನ್ನಿಫರ್ ಅವರನ್ನು ಮದುವೆಯಾಗಿದ್ದರು. ಇವರಿಗೆ ಸಂಜನಾ, ಕುನಾಲ್ ಮತ್ತು ಕರಣ್ ಎಂಬ ಮಕ್ಕಳಿದ್ದಾರೆ. ಶಶಿಕಪೂರ್ ಅವರ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

    https://twitter.com/RoshanKrRai/status/937662099588767746

  • ಕೆಪಿಸಿಸಿ ಕಚೇರಿಗೆ ದಿಢೀರ್ ಭೇಟಿ ನೀಡಿದ ನಟ ರವಿಶಂಕರ್!

    ಕೆಪಿಸಿಸಿ ಕಚೇರಿಗೆ ದಿಢೀರ್ ಭೇಟಿ ನೀಡಿದ ನಟ ರವಿಶಂಕರ್!

    ಬೆಂಗಳೂರು: ಖ್ಯಾತ ಖಳನಟ, ಡೈಲಾಗ್ ಕಿಂಗ್ ರವಿಶಂಕರ್ ಇಂದು ದಿಢೀರ್ ಅಂತ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ್ದಾರೆ.

    ಇತ್ತೀಚೆಗಷ್ಟೇ ಬಿಜೆಪಿ ಪಕ್ಷ ಸೇರಿಕೊಂಡಿದ್ದ ನಟ ಇಂದು ದಿಢೀರ್ ಅಂತ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿರುವುದು ಕುತೂಹಲ ಹುಟ್ಟಿಸಿದೆ. ಆದ್ರೆ ಈ ಬಗ್ಗೆ ರವಿಶಂಕರ್ ಸ್ಪಷ್ಟ ಪಡಿಸಿದ್ದು, ಸಿವಿಲ್ ಕೇಸ್ ಒಂದು ಇದ್ದ ಹಿನ್ನೆಲೆಯಲ್ಲಿ ಭೇಟಿ ನೀಡಿರುವುದಾಗಿ ಹೇಳಿದ್ದಾರೆ.

    ನಟ ರವಿಶಂಕರ್ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರನ್ನು ಭೇಟಿ ಮಾಡಲೆಂದು ಕೆಪಿಸಿಸಿ ಕಚೇರಿಗೆ ಬಂದಿದ್ದರು. ಆದ್ರೆ ಆ ಸಂದರ್ಭದಲ್ಲಿ ಸಚಿವರು ಅಲ್ಲಿ ಇಲ್ಲದ ಕಾರಣ ರವಿಶಂಕರ್ ವಾಪಾಸ್ ತೆರಳಿದ್ದಾರೆ ಎಂದು ತಿಳಿದುಬಂದಿದೆ.

    ನಟ ಸಾಯಿ ಕುಮಾರ್ ಸಹೋದರರಾಗಿರೋ ಇವರು ಇತ್ತೀಚೆಗಷ್ಟೇ ಬಿಜೆಪಿ ಸೇರುವ ಮೂಲಕ ಉಹಾಪೋಹಗಳಿಗೆ ತೆರೆ ಎಳೆದಿದ್ದರು. ಸಾಯಿ ಕುಮಾರ್ ಅವರು ಈಗಾಗಲೇ ಬಿಜೆಪಿ ಪಕ್ಷದ ಸದಸ್ಯರಾಗಿದ್ದಾರೆ. ಮೊದಲಿನಿಂದಲೂ ಬಿಜೆಪಿಯನ್ನು ಬೆಂಬಲಿಸುತ್ತಿದ್ದು, ಪಕ್ಷದ ಬಗ್ಗೆ ಒಲವು ಹೆಚ್ಚು ಇದ್ದುದರಿಂದ ತಾನು ಬಿಜೆಪಿಗೆ ಸೇರಿಕೊಂಡಿರುವುದಾಗಿ ಹೇಳಿದ್ದರು.

    ತೆಲುಗು, ತಮಿಳು ಚಿತ್ರರಂಗದಲ್ಲಿ ಡಬ್ಬಿಂಗ್ ಕಲಾವಿದರಾಗಿ ಹೆಸರು ಮಾಡಿದ್ದ ರವಿಶಂಕರ್ ಅವರ ನಟನಾ ಪ್ರತಿಭೆಯನ್ನು ಕನ್ನಡ ಚಿತ್ರರಂಗ ಚಿತ್ರಲೋಕಕ್ಕೆ ಪರಿಚಯಿಸಿತ್ತು. ಹೀಗಾಗಿ ತನಗೆ ವೃತ್ತಿಜೀವನದಲ್ಲಿ ಮರುಹುಟ್ಟು ನೀಡಿದ ಕನ್ನಡ ಚಿತ್ರರಂಗದ ಮೇಲಿನ ವಿಶೇಷ ಅಭಿಮಾನದಿಂದ ನಟ ರವಿಶಂಕರ್ ಅವರು ತಮ್ಮ ಕುಟುಂಬ ವರ್ಗದವರೊಂದಿಗೆ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ.

  • ನಟ ಹುಚ್ಚ ವೆಂಕಟ್ ತಲೆಗೆ ಹೆಲ್ಮೆಟ್ ನಿಂದ ಹಲ್ಲೆಗೈದ ಯುವಕ!

    ನಟ ಹುಚ್ಚ ವೆಂಕಟ್ ತಲೆಗೆ ಹೆಲ್ಮೆಟ್ ನಿಂದ ಹಲ್ಲೆಗೈದ ಯುವಕ!

    ಬೆಂಗಳೂರು: ಸ್ಯಾಂಡಲ್ ವುಡ್ ನಟ ಹುಚ್ಚ ವೆಂಕಟ್ ಮೇಲೆ ಯುವಕನೊಬ್ಬ ನಡುರಸ್ತೆಯಲ್ಲೇ ಹಲ್ಲೆ ಮಾಡಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಈ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ  ರಾತ್ರಿ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಏನಿದು ಘಟನೆ?: ರಾತ್ರಿ ಊಟ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಯುವಕನೊಬ್ಬ ನಟ ವೆಂಕಟ್ ರನ್ನು ರೇಗಿಸಿದ್ದಾನೆ. ಈ ವೇಳೆ ವೆಂಕಟ್ ಆತನಿಗೆ ಸೈಲೆಂಟಾಗಿ ಬುದ್ಧಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಯುವಕ ತನ್ನ ಕೈಯಲಿದ್ದ ಹೆಲ್ಮೆಟ್ ನಿಂದ ವೆಂಕಟ್ ತಲೆಗೆ ಹಲ್ಲೆ ಮಾಡಿದ್ದಾನೆ. ಹೆಲ್ಮೆಟ್ ನಿಂದ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ಕುರಿತು ಹುಚ್ಚ ವೆಂಕಟ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಯಾವುದೋ ಒಂದು ಸಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮಿಬ್ಬರ ನಡುವೆ ಗಲಾಟೆ ಶುರುವಾಯ್ತು. ಅವರು ಡ್ರಿಂಕ್ಸ್ ಮಾಡಿದ್ರು. ಆ ಬಳಿಕ ಮಾತುಕತೆ ಮೂಲಕ ಬಗೆಹರಿಸಿಕೊಂಡಿದ್ದೇವೆ ಅಂತ ಹೇಳಿದ್ರು.

    ಗಲಾಟೆಗಳು ನನಗೆ ಮಾಮೂಲಿಯಾಗಿದೆ. ಕುಡಿದಿದ್ರಿಂದ ಆತ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆ ಬಳಿಕ ಯುವಕ ಸಾರಿ ಕೇಳಿದ್ದಾನೆ. ಈ ವಿಚಾರವನ್ನು ದೊಡ್ಡದು ಮಾಡಬೇಡಿ. ಗಲಾಟೆ, ಹಲ್ಲೆಗಳು ನಮಗೆ ದೊಡ್ಡ ವಿಚಾರವಲ್ಲ. ಒಂದು ಸಮಾಜ ಅಂತ ಹೋದಾಗ ಇದೆಲ್ಲ ಮಾಮೂಲಿ, ಹಲ್ಲೆಗಳು ನಡೆಯುತ್ತವೆ. ಅದನ್ನು ಎದುರಿಸಬೇಕು ಅಂತ ಅಂದ್ರು.

    ಪೊಲೀಸ್ ರಕ್ಷಣೆ ತಗೊಂಡಿಲ್ಲ. ಸೆಕ್ಯುರಿಟಿ ಗಾರ್ಡ್ ಗಳಿಲ್ಲ. ಹೀಗೆ ಯಾರಿಲ್ಲದೇ ಒಬ್ಬನೇ ಒಡಾಡುತ್ತಿದ್ದೀನಿ. ಹೀಗಾಗಿ ಒಂದೊಂದು ಬಾರಿ ಹೀಗಾಗುತ್ತೆ. ಯುವಕ ನನ್ನ ಮೇಲೆ ಹಲ್ಲೆ ಮಾಡಿದ್ದಕ್ಕೆ ನಾನು ಹೊಡೆದಿದ್ದೀನಿ. ಹೀಗಾಗಿ ಈ ವಿಚಾರ ಇಲ್ಲೇ ಬಿಟ್ಬಿಡಿ ಅಂತ ಹುಚ್ಚಾ ವೆಂಕಟ್ ಮನವಿ ಮಾಡಿಕೊಂಡಿದ್ದಾರೆ.