Tag: actor

  • ವಿದ್ವತ್ ಆರೋಗ್ಯ ವಿಚಾರಿಸಿ ಕಣ್ಣೀರು ಹಾಕಿದ ನಟ ಪುನೀತ್ ರಾಜ್ ಕುಮಾರ್! ವೀಡಿಯೋ ನೋಡಿ

    ವಿದ್ವತ್ ಆರೋಗ್ಯ ವಿಚಾರಿಸಿ ಕಣ್ಣೀರು ಹಾಕಿದ ನಟ ಪುನೀತ್ ರಾಜ್ ಕುಮಾರ್! ವೀಡಿಯೋ ನೋಡಿ

    ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರನಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಯುವಕ ವಿದ್ವತ್ ನನ್ನು ನಟ ಪುನೀತ್ ರಾಜ್ ಕುಮಾರ್ ಇಂದು ಭೇಟಿ ಮಾಡಿದ್ದಾರೆ.

    ನಗರದ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿದ ನಟ ಪುನೀತ್ ಅವರು ವಿದ್ವತ್ ಆರೋಗ್ಯ ವಿಚಾರಿಸಿದ್ದು, ಈ ವೇಳೆ ಅವರು ಕಣ್ಣೀರು ಹಾಕಿದ್ದಾರೆ. ಹಲ್ಲೆಗೊಳಗಾದ ವಿದ್ವತ್, ರಾಘವೇಂದ್ರ ರಾಜ್‍ಕುಮಾರ್ ಪುತ್ರನ ಸ್ನೇಹಿತರಾಗಿದ್ದಾರೆ. ಇದನ್ನೂ ಓದಿ: ಯುಬಿ ಸಿಟಿ ಗಲಾಟೆ ಹೇಗಾಯ್ತು? ಯಾವೆಲ್ಲ ಸೆಕ್ಷನ್ ಹಾಕಲಾಗಿದೆ? ಆರೋಪಿಗಳ ಉದ್ಯೋಗ ಏನು? ನಲಪಾಡ್ ರೌಡಿಸಂ ಫುಲ್ ಡಿಟೇಲ್ ಇಲ್ಲಿದೆ

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪುನೀತ್, ಹಲ್ಲೆಗೊಳಗಾದ ವಿದ್ವತ್ ಫ್ಯಾಮಿಲಿ ಫ್ರೆಂಡ್. ಆತನನ್ನು ನಾನು ಚಿಕ್ಕಂದಿನಿಂದಲೇ ನೋಡಿದ್ದೀನಿ. ಆತನು ನನಗೆ ಪರಿಚಯ. ಸದ್ಯ ಆತ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾನೆ. ವಿದ್ವತ್ ನನ್ನ ತಮ್ಮನ ಹಾಗೆ. ಕಾನೂನಿಗಿಂತ ಯಾರು ದೊಡ್ಡವರಲ್ಲ. ತಪ್ಪಿತಸ್ಥಿರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಮಗ ತಪ್ಪು ಮಾಡಿದ್ರೆ ಅಪ್ಪನ ಮೇಲೆ ಕ್ರಮ ತೆಗೆದುಕೊಳ್ಳಬೇಕು ಅಂತ ಯಾವ ಐಪಿಸಿ ಸೆಕ್ಷನ್ ನಲ್ಲಿದೆ- ಸಚಿವ ಜಾರ್ಜ್ ಪ್ರಶ್ನೆ

    ಏನಿದು ಘಟನೆ?: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಊಟ ಮಾಡುವ ವಿಷಯಕ್ಕಾಗಿ ಕಿರಿಕ್ ತೆಗೆದು ಯುವಕನೋರ್ವನ ಮೇಲೆ ಹಲ್ಲೆ ನಡೆಸಿದ್ದಾನೆ. ಉದ್ಯಮಿ ಲೋಕ್‍ನಾಥ್ ಪುತ್ರ ವಿದ್ವತ್ ಹಲ್ಲೆಗೊಳಗಾದ ಯುವಕನಾಗಿದ್ದು, ಇವರು ಇತ್ತೀಚೆಗೆ ವಿದ್ವತ್ ಸಿಂಗಾಪೂರ್‍ನಲ್ಲಿ ಪದವಿ ಮುಗಿಸಿ ನಗರಕ್ಕೆ ಆಗಮಿಸಿದ್ದರು. ಶನಿವಾರ ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ವೇಳೆ ಊಟ ಮಾಡುವ ವಿಷಯಕ್ಕಾಗಿ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿದೆ. ಈ ಜಗಳ ತಾರಕಕ್ಕೇರಿ ಹ್ಯಾರಿಸ್ ಅವರ ಪುತ್ರ ಮಹಮ್ಮದ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದರು. ಇದನ್ನೂ ಓದಿ: ನಲಪಾಡ್ ಗೆ ಋಣ ಸಂದಾಯ – ಕಬ್ಬನ್ ಪಾರ್ಕ್ ಪೊಲೀಸರ ಮತ್ತೊಂದು ಅವಾಂತರ ಬಟಾಬಯಲು!

    ಸದ್ಯ ವಿದ್ವತ್ ಮೂಗಿನ ಹೊಳ್ಳೆಗಳು ಒಡೆದಿದ್ದು, ಮೂಗು ಫ್ರಾಕ್ಚರ್ ಆಗಿದೆ. ಬಲಭಾಗದ 5 ಪಕ್ಕೆಲುಬುಗಳು ಮುರಿದಿದ್ದು, ಎಡಭಾಗದ 4 ಪಕ್ಕೆಲುಬುಗಳು ಮುರಿದಿವೆ. ಆದ್ದರಿಂದ ವಿದ್ವತ್ ಸ್ಥಿತಿ ಗಂಭೀರವಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

     

  • ಕಾರು ಅಪಘಾತದಲ್ಲಿ ನಟ ಮಂಡ್ಯ ರಮೇಶ್ ಕೂದಲೆಳೆ ಅಂತರದಲ್ಲಿ ಪಾರು

    ಕಾರು ಅಪಘಾತದಲ್ಲಿ ನಟ ಮಂಡ್ಯ ರಮೇಶ್ ಕೂದಲೆಳೆ ಅಂತರದಲ್ಲಿ ಪಾರು

    ಮಂಡ್ಯ: ಚಿತ್ರ ನಟ ಮಂಡ್ಯ ರಮೇಶ್ ಅವರ ಕಾರು ಅಪಘಾತಕ್ಕೀಡಾಗಿದ್ದು, ಕೂದಲೆಳೆಯ ಅಂತರದಲ್ಲಿ ಹಾಸ್ಯ ನಟ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಲೋಕಪಾವನಿ ಸೇತುವೆ ಬಳಿ ನಡೆದಿದೆ.

    ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ 7.10ರಲ್ಲಿ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಮಜಾ ಟಾಕೀಸ್ ಶೂಟಿಂಗ್ ಮುಗಿಸಿಕೊಂಡು ಮಂಡ್ಯ ರಮೇಶ್ ತಾವೊಬ್ಬರೇ ಕಾರು ಚಲಾಯಿಸಿಕೊಂಡು ಮೈಸೂರಿಗೆ ಬರುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಲಾರಿ ಅಡ್ಡದಿಡ್ಡಿ ಚಲಿಸಿದೆ. ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಕಾರು ನಿಯಂತ್ರಣ ತಪ್ಪಿ ಡಿವೈಡರ್‍ಗೆ ಡಿಕ್ಕಿ ಹೊಡೆದು, ಹಾರಿ ಮಧ್ಯ ನಿಂತಿದೆ.

    ಘಟನೆಯಿಂದಾಗಿ ಕಾರಿನ ಮುಂಭಾಗ ಜಖಂಗೊಂಡಿದೆ. ಕಾರಿನ ಚಕ್ರಗಳು ಸ್ಫೋಟಗೊಂಡಿವೆ. ಅದೃಷ್ಟವಶಾತ್ ಮಂಡ್ಯ ರಮೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದ ಗಾಬರಿಗೊಂಡಿದ್ದ ಮಂಡ್ಯ ರಮೇಶ್, ತಮ್ಮ ಶಿಷ್ಯನಿಗೆ ಕರೆ ಮಾಡಿ ದ್ವಿಚಕ್ರ ವಾಹನದಲ್ಲಿ ಮೈಸೂರಿಗೆ ತೆರಳಿದ್ದಾರೆ. ನಂತರ ಕಾರನ್ನು ತೆಗೆದುಕೊಂಡು ಹೋಗಿದ್ದು, ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

    https://www.youtube.com/watch?v=wUwELE27XPI

  • ಸ್ಯಾಂಡಲ್‍ವುಡ್ ನಟನ ಮೇಲೆ ಕಬಡ್ಡಿ ಆಟಗಾರರಿಂದ ಹಲ್ಲೆ

    ಸ್ಯಾಂಡಲ್‍ವುಡ್ ನಟನ ಮೇಲೆ ಕಬಡ್ಡಿ ಆಟಗಾರರಿಂದ ಹಲ್ಲೆ

    ಬೆಂಗಳೂರು: ಕಬಡ್ಡಿ ಸೋತಿದ್ದಕ್ಕೆ ಹತಾಶೆಗೊಂಡು ಸ್ಯಾಂಡಲ್‍ವುಡ್ ನಟನಿಗೆ ಮತ್ತೊಂದು ತಂಡ ಥಳಿಸಿದ ಘಟನೆ ಅನ್ನಪೂರ್ಣೇಶ್ವರಿ ನಗರದ ಬಿಬಿಎಂಪಿ ಪಾರ್ಕ್ ನಲ್ಲಿ ನಡೆದಿದೆ.

    18 ಪ್ಲಸ್ ಸಿನಿಮಾದ ನಾಯಕ ನಟ ಭರತ್ ಮೇಲೆ ಹಲ್ಲೆ ನಡೆಸಲಾಗಿದೆ. ಕಬಡ್ಡಿ ಟೂರ್ನಿಯಲ್ಲಿ ಭಾಗವಹಿಸಿದ್ದ ಭರತ್ ತಂಡ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಫೈನಲ್ ಪಂದ್ಯದಲ್ಲಿ ಸೋತಿದ್ದಕ್ಕೆ ಸಿಟ್ಟಾಗಿ ಕಿಟ್ಟಿ, ಪ್ರೇಮ್, ನಂದು ಎಂಬವರು ನಟ ಭರತ್ ಹಾಗೂ ನವೀನ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ.

    2 ದಿನಗಳ ಹಿಂದೆ ನಟನ ಮೇಲೆ ಹಲ್ಲೆ ನಡೆದಿದೆ. ಹಲ್ಲೆಯ ನಂತರ ಭರತ್ ಮುಖ ಊದಿಕೊಂಡಿದೆ. ಅನ್ನಪೂರ್ಣೆಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • `ಎಡಕಲ್ಲು ಗುಡ್ಡದ ಮೇಲೆ’ ಖ್ಯಾತಿಯ ನಟ ಚಂದ್ರಶೇಖರ್ ಇನ್ನಿಲ್ಲ

    `ಎಡಕಲ್ಲು ಗುಡ್ಡದ ಮೇಲೆ’ ಖ್ಯಾತಿಯ ನಟ ಚಂದ್ರಶೇಖರ್ ಇನ್ನಿಲ್ಲ

    ಬೆಂಗಳೂರು: ಕನ್ನಡದ ಹಿರಿಯ ನಟ ಚಂದ್ರ ಶೇಖರ್ ಅವರು ವಿಧಿವಶರಾಗಿದ್ದಾರೆ. ಕೆನಡಾದಲ್ಲಿ ಅವರಿಗೆ ಹೃದಯಾಘಾತವಾಗಿ ಇಂದು ಮುಂಜಾನೆ 3.30ರ ಸುಮಾರಿಗೆ ಕನ್ನಡದ ನಟ ಕಣ್ಮುಚ್ಚಿದ್ದಾರೆ.

    1973ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕರಾಗಿ ಕಾಣಿಸಿಕೊಂಡಿದ್ದರು. ಆ ಬಳಿಕ ಶಿವಲಿಂಗ, ಅಸ್ತಿತ್ವ, ಕಾರಂಜಿ, ಜೀವ, ಪೂರ್ವಾಪರ, ಮಳೆ ಬಂತು ಮಳೆ, ಮಾನಸ ಸರೋವರ ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

    ಡಾ. ರಾಜ ನನ್ನ ರಾಜ ಜೊತೆ ನಟಿಸಿದ್ದರು. ನಂತರ ಸಾಹಸ ಸಿಂಹ ವಿಷ್ಟುವರ್ಧನ್ ಜೊತೆ ವಂಶವೃಕ್ಷ ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು. ಮೃತರು ಪತ್ನಿ ಶೀಲಾ ಹಾಗೂ ಪುತ್ರಿ ತಾನ್ಯರನ್ನು ಅಗಲಿದ್ದಾರೆ.

    ಸದ್ಯ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ರವಾನಿಸಲಾಗುತ್ತದೆಯೋ, ಇಲ್ಲವೋ ಎಂಬುದರ ಬಗ್ಗೆ ಖಚಿತ ಮಾಹಿತಿ ತಿಳಿದಬಂದಿಲ್ಲ.

  • ರೈಲಿನ ಫುಟ್ ಬೋರ್ಡ್‍ನಿಂದ ಕೆಳಗೆ ಬಿದ್ದು ಯುವ ನಟ ದುರ್ಮರಣ

    ರೈಲಿನ ಫುಟ್ ಬೋರ್ಡ್‍ನಿಂದ ಕೆಳಗೆ ಬಿದ್ದು ಯುವ ನಟ ದುರ್ಮರಣ

    ಮುಂಬೈ: ರೈಲಿನಿಂದ ಬಿದ್ದ ಮರಾಠಿಯ ಯುವ ನಟರೊಬ್ಬರು ದುರ್ಮರಣಕ್ಕೀಡಾದ ಘಟನೆ ಸೋಮವಾರ ಬೆಳಗ್ಗೆ ಮುಂಬೈನಲ್ಲಿ ನಡೆದಿದೆ.

    ಪ್ರಫುಲ್ ಭಲೇರಾವ್(22) ರೈಲು ಅಪಘಾತದಲ್ಲಿ ಸಾವನ್ನಪ್ಪಿದ ನಟ. ಪ್ರಫುಲ್ ಮಲಾಡ್ ನಿಂದ ಗೋರೆಗಾಂವ್ ಗೆ ಹೋಗುತ್ತಿದ್ದ ರೈಲನ್ನು ಏರಿದಾಗ ಈ ಅವಘಡ ಸಂಭವಿಸಿದೆ.

    ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ಪ್ರಫುಲ್ ರೈಲು ಹಿಡಿಯಲೆಂದು ಓಡಿಬಂದಿದ್ದು, ಫುಟ್ ಬೋರ್ಡ್ ನಲ್ಲಿ ನಿಂತಿದ್ದಾರೆ. ಈ ವೇಳೆ ರೈಲು ವೇಗವಾಗಿ ಚಲಿಸಿದ್ದು, ಪ್ರಫುಲ್ ಎಡವಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

    ಸೋಮವಾರ ಮುಂಜಾನೆ 4.15ರ ಸುಮಾರಿಗೆ ಪ್ರಫುಲ್, ಚರ್ಚ್ ಗೇಟ್ ನಿಂದ ಮಲಾಡ್ ಗೆ ಪ್ಲಾಟ್‍ಫಾರ್ಮ್ ನಂಬರ್ 2ರಲ್ಲಿ ರೈಲನ್ನ ಏರಿದ್ದರು. ಫುಟ್ ಬೋರ್ಡ್ ಮೇಲೆ ನಿಂತಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದರು. ನಂತರ ಸಿಗ್ನಲ್ ಪೋಲ್‍ಗೆ ಹೊಡೆದು ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ರೈಲ್ವೆಯ ಹಿರಿಯ ಪೊಲೀಸ್ ಅಧಿಕಾರಿ ಶೈಲೇಂದ್ರ ಧಿವಾರ್ ತಿಳಿಸಿದ್ದಾರೆ.

    4.30ರ ಸುಮಾರಿಗೆ ರೈಲ್ವೇ ಟ್ರ್ಯಾಕ್ ನಲ್ಲಿ ಶವ ಇರುವ ಕುರಿತು ಕರೆಯೊಂದು ನಮಗೆ ಬಂದಿತ್ತು. ಘಟನೆ ನಡೆದ ಸಂದರ್ಭದಲ್ಲಿ ಅಷ್ಟೊಂದು ಜನಜಂಗುಳಿ ಇರಲಿಲ್ಲ. ಹೀಗಾಗಿ ನಟ ರೈಲಿನಿಂದ ಕೆಳಗೆ ಬಿದ್ದಾಗ ಫುಟ್‍ಬೋರ್ಡ್‍ನಲ್ಲಿ ಹೊರಕ್ಕೆ ಬಾಗಿರಬಹುದಾದ ಸಾಧ್ಯತೆ ಇದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದೇವೆ ಅಂತ ಅವರು ವಿವರಿಸಿದ್ದಾರೆ.

    ಪ್ರಫುಲ್ ಮರಾಠಿಯ ಫೇಮಸ್ ನಟರಾಗಿದ್ದು, `ಕುಂಕು’ ಎಂಬ ಪ್ರಸಿದ್ಧ ಟಿವಿ ಕಾರ್ಯಕ್ರಮದಿಂದಾಗಿ ಹೆಸರುವಾಸಿಯಾಗಿದ್ದರು. ಆ ಬಳಿಕ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದ ಇವರು, ಇತ್ತೀಚೆಗೆ ಮರಾಠಿಯಲ್ಲಿ ಬಿಡುಗಡೆಗೊಂಡ ಬರಾಯನ್ ಚಿತ್ರದಲ್ಲೂ ಕೂಡ ಕಾಣಿಸಿಕೊಂಡಿದ್ದರು.

  • `ಜಾಗ್ವಾರ್’ ಖ್ಯಾತಿಯ ನಿಖಿಲ್ ಗೌಡಗೆ 28ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ

    `ಜಾಗ್ವಾರ್’ ಖ್ಯಾತಿಯ ನಿಖಿಲ್ ಗೌಡಗೆ 28ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ

    ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಮನೆಯ ಕುಡಿ ಜಾಗ್ವಾರ್ ಖ್ಯಾತಿಯ ನಿಖಿಲ್ ಗೌಡ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

    28ನೇ ವಸಂತಕ್ಕೆ ಕಾಲಿಟ್ಟ ನಿಖಿಲ್ ಗೌಡ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ನೂರಾರು ಸಂಖ್ಯೆಯ ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ ನಿಖಿಲ್ ನರೆದಿದ್ದವರನ್ನು ಸಂತೋಷ ಪಡಿಸಿದರು.

    ರಾಜಕೀಯ ಕೆಲಸ ಕಾರ್ಯಗಳ ನಿಮಿತ್ತ ತಂದೆ ಹೆಚ್ ಡಿ ಕುಮಾರಸ್ವಾಮಿ ಜೆಪಿ ನಗರದ ಮನೆಯಲ್ಲಿರಲಿಲ್ಲ. ಆದರೂ ನಿಖಿಲ್ ಹುಟ್ಟುಹಬ್ಬದ ಸಂಭ್ರಮ ಮುಗಿಲುಮುಟ್ಟಿತ್ತು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುನಿರೀಕ್ಷೆ ಹುಟ್ಟು ಹಾಕಿರುವ `ಕುರುಕ್ಷೇತ’್ರ ಚಿತ್ರ ಮಾರ್ಚ್‍ಗೆ ತೆರೆಕಾಣಲಿದೆ. ದರ್ಶನ್ ಅಭಿನಯನದ 50 ನೇ ಮತ್ತು ನಿಖಿಲ್ ಅಭಿನಯನದ 2ನೇ ಚಿತ್ರ. ಎಲ್ಲರಿಗೂ ಅಭಿನಂದನೆಗಳು. ಮುಂಬರುವ ಚುನಾವಣೆಯಲ್ಲಿ ತಂದೆಗೆ ಪ್ರಚಾರದಲ್ಲಿ ನೆರವಾಗುತ್ತೇನೆ. ರಾಜಕೀಯಕ್ಕೆ ಬರುವ ಉದ್ದೇಶವಿಲ್ಲ. ಕುರುಕ್ಷೇತ್ರದ ಚಿತ್ರ ಗೆಲ್ಲುವ ವಿಶ್ವಾಸವಿದೆ. ಇದೀಗ ಬಜರಂಗಿ ಖ್ಯಾತಿಯ ಹರ್ಷ ಜೊತೆ `ಸೀತರಾಮಕಲ್ಯಾಣ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ ಎಂದರು.

  • ನಟ, ನಿರ್ದೇಶಕ ಕಾಶಿನಾಥ್ ನಡೆದುಬಂದ ಹಾದಿ

    ನಟ, ನಿರ್ದೇಶಕ ಕಾಶಿನಾಥ್ ನಡೆದುಬಂದ ಹಾದಿ

    ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಟ, ನಿರ್ದೇಶಕರಲ್ಲಿ ಕಾಶಿನಾಥ್ ಕೂಡ ಒಬ್ಬರು. ಡಬಲ್ ಮಿನಿಂಗ್ ಡೈಲಾಗ್‍ನಿಂದಲೇ ಫೇಮಸ್ ಆದ ಇವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯುವಪ್ರತಿಭೆಗಳಗೆ ಅವಕಾಶ ನೀಡಿದ್ದಾರೆ.

    ಕಾಶಿನಾಥ್ ಅವರು ವಿಜಯಾ ಕಾಲೇಜಿನಲ್ಲಿ ತಮ್ಮ ವ್ಯಾಸಾಂಗವನ್ನು ಮುಗಿಸಿದ್ರು. ನಂತರ ಅಸಿಮಾ ಎಂಬ ಫಿಲ್ಮಂ ಸೆಂಟರ್ ಗೆ ಸೇರಿಕೊಂಡರು. 1975ರಲ್ಲಿ ಕಾಶಿನಾಥ್ ಅವರು ಅಪರೂಪದ ಅಥಿತಿಗಳು ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಸ್ಯಾಂಡಲ್‍ವುಡ್ ಗೆ ಎಂಟ್ರಿ ಕೊಟ್ಟರು. ನಂತರ 1978ರಲ್ಲಿ ಸಸ್ಪೆನ್ಸ್ ಥ್ರೀಲ್ಲರ್ ಆದ ಅಪರಿಚಿತ ಚಿತ್ರವನ್ನು ನಿರ್ದೇಶನ ಮಾಡಿದ್ದು, ಆ ಚಿತ್ರ ಯಶಸ್ವಿಯಾಯ್ತು. ಆ ಚಿತ್ರವನ್ನು ಬೀ-ಶೇಕ್ ಎಂದು ಹೆಸರಿಟ್ಟು ಹಿಂದಿಯಲ್ಲಿ ಕೂಡ ನಿರ್ದೇಶನ ಮಾಡಿದ್ದರು.

    ಅಪರಿಚಿತ ಚಿತ್ರದ ನಂತರ ಕಾಶಿನಾಥ್ ಅವರು 16 ಸಿನಿಮಾಗಳನ್ನ ಒಟ್ಟಿಗೆ ನಿರ್ದೇಶಿಸಿದ್ದು, ಆ ಚಿತ್ರಗಳೆಲ್ಲಾ ಸಾಕಷ್ಟು ಹಿಟ್ ಆಗಿದ್ದವು. 1984ರಲ್ಲಿ ಮೊದಲ ಬಾರಿಗೆ ಕಾಶಿನಾಥ್ ಅವರು ಅನುಭವ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದರು. ಅವರಿಗೆ ಅಭಿನಯ ಹಾಗೂ ಉಮಾಶ್ರೀ ನಾಯಕಿಯರಾಗಿ ಸಾಥ್ ನೀಡಿದ್ದರು. ಅನುಭವ ಚಿತ್ರ ಕನ್ನಡದಲ್ಲಿ ಯಶಸ್ವಿ ಆಗುತ್ತಿದ್ದಂತೆ ಆ ಚಿತ್ರವನ್ನು ಹಿಂದಿಯಲ್ಲಿ ಅನುಭವ್ ಎಂಬ ಹೆಸರಲ್ಲಿ ನಿರ್ದೇಶನ ಮಾಡಿದ್ದರು. 2 ಹಿಂದಿ ಸಿನಿಮಾ ನಿರ್ದೇಶನ ಮಾಡಿದ್ದಾರೆ.

    1988ರಲ್ಲಿ ಅವಳೇ ನನ್ನ ಹೆಂಡ್ತಿ ಚಿತ್ರದಲ್ಲಿ ಟಾಪ್ ನಟಿ ಭವ್ಯ ಹಾಗೂ ತಾರಾ ಜೊತೆ ನಟಿಸಿದ್ದರು. ನಂತರ 1988ರಲ್ಲಿ ಅವನೇ ನನ್ನ ಗಂಡ, ಮನ್ಮಥ ರಾಜ ಹಾಗೂ 1990ರಲ್ಲಿ ಚಪಲ ಚನ್ನಿಗರಾಯ ಎಂಬ ಹಾಸ್ಯ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. 1993ಯಲ್ಲಿ ಸೂಪರ್ ಸ್ಟಾರ್ ಉಪೇಂದ್ರ ಅವರು ನಿರ್ದೇಶನ ಮಾಡಿದ್ದ ಶ್…! ಹಾಗೂ ಹಲೋ ಯಮ ಚಿತ್ರದಲ್ಲಿ ಕಾಶಿನಾಥ್ ನಟಿಸಿದ್ದರು.

    ಕಾಶಿನಾಥ್ ಅವರು ತಮ್ಮ ಸಿನಿಮಾ ಜೀವನದಲ್ಲಿ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಉಪೇಂದ್ರ, ವಿ. ಮನೋಹರ್, ಸುನೀಲ್ ಕುಮಾರ್ ದೇಸಾಯಿರಂತಹ ಪ್ರತಿಭೆಗಳಿಗೆ ಸ್ಯಾಂಡಲ್‍ವುಡ್ ನಲ್ಲಿ ಅವಕಾಶ ನೀಡಿದ್ದಾರೆ. ಫೆಬ್ರವರಿ 3, 2017ರಲ್ಲಿ ತೆರೆಕಂಡ ಚೌಕ ಚಿತ್ರದಲ್ಲಿ ಕಾಶಿನಾಥ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಇದು ಅವರ ಕೊನೆಯ ಚಿತ್ರ.

  • 2018ಕ್ಕೆ ಈ 10 ಬಾಲಿವುಡ್ ಸ್ಟಾರ್‍ಗಳ ಕೈಯಲ್ಲಿ ಯಾವ ಸಿನಿಮಾ ಕೂಡ ಇಲ್ಲ!

    2018ಕ್ಕೆ ಈ 10 ಬಾಲಿವುಡ್ ಸ್ಟಾರ್‍ಗಳ ಕೈಯಲ್ಲಿ ಯಾವ ಸಿನಿಮಾ ಕೂಡ ಇಲ್ಲ!

    ಮುಂಬೈ: ಬಾಲಿವುಡ್‍ನಲ್ಲಿ ದೊಡ್ಡ ದೊಡ್ಡ ಬ್ಯಾನರ್‍ನ ಸಿನಿಮಾಗಳು 2018ರಲ್ಲಿ ಬಿಡುಗಡೆಗೆ ಕ್ಯೂನಲ್ಲಿವೆ. ಆದ್ರೆ ಕೆಲವು ಹೆಸರಾಂತ ಬಾಲಿವುಡ್ ನಟ ನಟಿಯರ ಒಂದು ಸಿನಿಮಾವೂ ಕೂಡ ಈ ವರ್ಷ ರಿಲೀಸ್ ಆಗ್ತಿಲ್ಲ. ಒಂದು ಅವರಿಗೆ ಕಲಸ ಇಲ್ಲ ಅಥವಾ ಅವರ ಸಿನಿಮಾಗಳ ಬಿಡುಗಡೆ 2019ಕ್ಕೆ ಆಗಲಿದೆ.

    ಪ್ರಿಯಾಂಕಾ ಚೋಪ್ರಾ, ವಿದ್ಯಾ ಬಾಲನ್, ಬಿಪಾಶಾ ಬಸು ಸೇರಿದಂತೆ ಹಲವು ಸ್ಟಾರ್ ನಟಿಯರ ಕೈಯಲ್ಲೂ ಈ ವರ್ಷ ಯಾವುದೇ ಸಿನಿಮಾಗಳಿಲ್ಲ. ಪ್ರಿಯಾಂಕಾ ಚೋಪ್ರಾ ‘ನೆಕ್ಷ್ಟ್ ಸೂಪರ್‍ಸ್ಟಾರ್’ ಎಂಬ ರಿಯಾಲಿಟಿ ಶೋನಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಅವಕಾಶಗಳಿಂದ ವಂಚಿತರಾಗಿರುವ ಆ 10 ಕಲಾವಿದರ ಪಟ್ಟಿ ಈ ಕೆಳಗಿನಂತಿದೆ.

    1. ವಿದ್ಯಾ ಬಾಲನ್: 2005ರಲ್ಲಿ ‘ಪರಿಣೀತಾ’ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ವಿದ್ಯಾಗೆ ಆರಂಭದಲ್ಲಿ ಹೇಳಿಕೊಳ್ಳುವಷ್ಟು ಯಶಸ್ಸು ಸಿಗಲಿಲ್ಲ. ಆದ್ರೆ ತಮ್ಮ ಮನೋಜ್ಞ ಅಭಿನಯದ ಮೂಲಕವೇ ತಮ್ಮನ್ನು ತಾವು ಗುರುತಿಸಿಕೊಂಡವರು ವಿದ್ಯಾಬಾಲನ್. 2011ರಲ್ಲಿ ತೆರೆಕಂಡ ‘ದಿ ಡರ್ಟಿ ಪಿಕ್ಚರ್’ ವಿದ್ಯಾ ಸಿನಿಕೆರಿಯರ್ ನಲ್ಲಿ ಬ್ರೇಕ್ ನೀಡಿದ ಸಿನಿಮಾ. 2017ರಲ್ಲಿ ತೆರೆಕಂಡ ‘ತುಮಾರಿ ಸುಲು’ ವಿದ್ಯಾ ಬಾಲನ್ ನಟನೆಯ ಕೊನೆಯ ಚಿತ್ರವಾಗಿದೆ.

    2. ವಿವೇಕ್ ಓಬೇರಾಯ್: 2002ರಲ್ಲಿ ತೆರೆಕಂಡ ‘ಕಂಪನಿ’ ಚಿತ್ರದ ಮೂಲಕ ವಿವೇಕ್ ಓಬೇರಾಯ್ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಂಡರು. ನಂತರದ ದಿನಗಳಲ್ಲಿ ರೋಡ್, ಸಾಥಿಯಾ, ದಮ್, ಮಸ್ತಿ, ಕಾಲ್, ಕಿಸನಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಹೆಸರುವಾಸಿಯಾದ್ರು. ಕ್ರಿಶ್-3 ವಿವೇಕ್ ಓಬೇರಾಯ್ ಸಿನಿ ಜೀವನಕ್ಕೆ ಹೊಸ ತಿರುವು ನೀಡಿತು. 2017ರಲ್ಲಿ ತೆರೆಕಂಡ ಕಾಮಿಡಿ ಸಿನಿಮಾ ‘ಬ್ಯಾಂಕ್ ಚೋರ್’ ವಿವೇಕ್ ಅಭಿನಯದ ಕೊನೆಯ ಸಿನಿಮಾ.

    3. ನಿಮ್ರತ್ ಕೌರ್: 2005ರಲ್ಲಿ ತೆರೆಕಂಡ ‘ಯಹಾ’ ನಿಮ್ರತ್ ಅಭಿನಯದ ಮೊದಲ ಚಿತ್ರ. ಒನ್ ನೈಟ್ ವಿಥ್ ದಿ ಕಿಂಗ್, ದಿ ಲಂಚ್ ಬಾಕ್ಸ್ ನಂತಹ ಯಶಸ್ವಿ ಚಿತ್ರಗಳಲ್ಲಿ ನಿಮ್ರತ್ ನಟಿಸಿದ್ದು, 2016ರಲ್ಲಿ ನಟಿಸಿದ ಏರ್‍ಲಿಫ್ಟ್ ಇವರ ಕೊನೆಯ ಫಿಲ್ಮ್.

    4. ಆದಿತ್ಯಾ ರಾಯ್ ಕಪೂರ್: 2009ರ ‘ಲಂಡನ್ ಡ್ರೀಮ್ಸ್’ ಸಿನಿಮಾ ಆದಿತ್ಯಾ ಅಭಿನಯದ ಮೊದಲ ಸಿನಿಮಾ. ನಂತರ ಸಹನಟನಾಗಿ ಆ್ಯಕ್ಷನ್ ರಿಪ್ಲೈ ಮತ್ತು ಗುಝಾರಿಶ್ ಚಿತ್ರಗಳಿಗೆ ಬಣ್ಣ ಹಚ್ಚಿದರು. 2013ರಲ್ಲಿ ತೆರೆಕಂಡ ‘ಆಶೀಕಿ 2’ ಸಿನಿಮಾ ಆದಿತ್ಯಾಗೆ ಲವರ್ ಬಾಯ್ ಇಮೇಜ್ ತಂದುಕೊಟ್ಟಿತು. 2017ರಲ್ಲಿ ತೆರೆಕಂಡ ‘ಓಕೆ ಜಾನು’ ಕೊನೆಯ ಸಿನಿಮಾ.

    5. ಆಥಿಯಾ ಶೆಟ್ಟಿ: ಸಲ್ಮಾನ್ ಖಾನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ‘ಹೀರೋ’ ಚಿತ್ರದ ಮೂಲಕ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ಸಿನಿರಂಗಕ್ಕೆ ಪರಿಚಿತವಾದ್ರು. 2017ರಲ್ಲಿ ತೆರೆಕಂಡ ಅಜೇಯ್ ದೇವಗನ್ ಮುಖ್ಯಭೂಮಿಕೆಯ ‘ಮುಬಾರಕಾಂ’ ಆಥಿಯಾ ಶೆಟ್ಟಿಯ ಕೊನೆಯ ಚಿತ್ರ.

    6. ಶೃತಿ ಹಾಸನ್: ಲಕ್ಕಿ (2009) ಚಿತ್ರದ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ರು. ತೆಲಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ತಮ್ಮ ಛಾಪು ಮೂಡಿಸರುವ ಶೃತಿಗೆ 2017ರಲ್ಲಿ ತೆರೆಕಂಡ ‘ಬೆಹನ್ ಹೋಗಿ ತೇರಿ’ ಬಾಲಿವುಡ್‍ನ ಕೊನೆಯ ಚಿತ್ರ. 2018ಕ್ಕೆ ಶೃತಿ ಕೈಯಲ್ಲಿ ಯಾವುದೇ ಸಿನಿಮಾಗಳಿಲ್ಲ ಅಂತಾ ಹೇಳಲಾಗುತ್ತಿದೆ.

    7. ವಾಣಿ ಕಪೂರ್: ಶುದ್ಧ್ ದೇಸಿ ರೊಮ್ಯಾನ್ಸ್ (2013) ಚಿತ್ರದ ಮೂಲಕ ಸಹ ನಟಿಯಾಗಿ ಕಾಣಿಸಿಕೊಂಡ ವಾಣಿ ಕಪೂರ್‍ಗೆ ನಂತರ ಯಾವುದೇ ಚಿತ್ರದ ಅವಕಾಶಗಳು ಬರಲಿಲ್ಲ. 2016ರಲ್ಲಿ ತೆರೆಕಂಡ ‘ಬೇಫಿಕ್ರೆ’ ಸಿನಿಮಾ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡ ಮೊದಲ ಮತ್ತು ಕೊನೆಯ ಸಿನಿಮಾ.

    8. ಕೊಂಕಣ ಸೇನ್ ಶರ್ಮಾ: ತಮ್ಮ ಮನೋಜ್ಞ ಅಭಿನಯದ ಮೂಲಕವೇ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ ನಟಿ ಕೊಂಕಣ ಸೇನ್ ಶರ್ಮಾ. 2005ರಲ್ಲಿ ‘ಮಿಕ್ಸಡ್ ಡಬಲ್ಸ್’ ಚಿತ್ರದ ಮೂಲಕ ತಮ್ಮನ್ನು ತಾವು ಗುರತಿಸಿಕೊಂಡವರು. ಒಂದು ಮಗುವಿನ ತಾಯಿಯಾದ ಬಳಿಕವೂ ತಮ್ಮ ಗ್ಲಾಮರ್ ಉಳಿಸಿಕೊಂಡಿರುವ ಕೊಂಕಣ ಸೇನ್ ಶರ್ಮಾ ನಟಿಸಿರುವ 2017ರಲ್ಲಿ ತೆರಕಂಡ ‘ಲಿಪ್‍ಸ್ಟಿಕ್ ಅಂಡರ್ ಮೈ ಬುರ್ಕಾ’ ಕೊನೆಯ ಚಿತ್ರವಾಗಿದೆ.

    9. ಬಿಪಾಶಾ ಬಸು: ಬಂಗಾಳಿ ಕೃಷ್ಣ ಸುಂದರಿ ಬಿಪಾಶಾ ಬಸು ಹಾರರ್ ಸಿನಿಮಾಗಳ ಮೂಲಕವೇ ತಮ್ಮನ್ನು ತಾವು ಪರಿಚಯಿಸಿಕೊಂಡ ನಟಿ. 2001ರಲ್ಲಿ ‘ಅಜನಬೀ’ ಮೊದಲ ಸಿನಿಮಾ ಮತ್ತು 2015ರಲ್ಲಿಯ ‘ಅಲೋನ್’ ಕೊನೆಯ ಫಿಲ್ಮ್. ಮದುವೆಯ ಬಳಿಕ ಬಿಪಾಶಾ ಚಿತ್ರರಂಗದಿಂದ ದೂರ ಉಳಿದಿದ್ದಾರೆ ಅಂತಾ ಹೇಳಲಾಗುತ್ತಿದೆ.

    10. ಪ್ರಿಯಾಂಕಾ ಚೋಪ್ರಾ: ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಕೂಡ ಈ ವರ್ಷ ಬಾಲಿವುಡ್ ಸಿನಿಮಾಗಳಿಂದ ವಂಚಿತರಾಗಿದ್ದಾರೆ. 2001ರ ‘ಅಜನಬಿ’ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ನೀಡಿದ ಪ್ರಿಯಾಂಕಾ, 2016ರಲ್ಲಿ ತೆರೆಕಂಡ ‘ಗಂಗಾಜಲ್’ ಹಿಂದಿಯ ಕೊನೆಯ ಸಿನಿಮಾವಾಗಿದೆ. ಆದರೂ ಹಾಲಿವುಡ್ ಸಿನಿಮಾ ಮತ್ತು ರಿಯಾಲಿಟಿ ಶೋಗಳಲ್ಲಿ ಪ್ರಿಯಾಂಕ ಕಾಣಿಸಿಕೊಳ್ಳುತ್ತಿದ್ದಾರೆ.

  • ತಂಪು ಪಾನೀಯದಲ್ಲಿ ಮತ್ತು ಬರೋ ಔಷಧಿ ಬೆರೆಸಿ ನಾಯಕ ನಟನಿಂದ ಅತ್ಯಾಚಾರ!

    ತಂಪು ಪಾನೀಯದಲ್ಲಿ ಮತ್ತು ಬರೋ ಔಷಧಿ ಬೆರೆಸಿ ನಾಯಕ ನಟನಿಂದ ಅತ್ಯಾಚಾರ!

    ಬೆಂಗಳೂರು: ತಂಪು ಪಾನೀಯದಲ್ಲಿ ಮತ್ತು ಬರೋ ಔಷಧಿ ಬೆರೆಸಿ ಹೊಂಬಣ್ಣ ಚಿತ್ರದ ನಾಯಕ ನಟ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿಯೊಬ್ಬರು ದೂರು ನೀಡಿದ್ದಾರೆ.

    ಹೊಂಬಣ್ಣ ಚಿತ್ರದ ನಾಯಕ ಸುಬ್ರಮಣ್ಯ ನನಗೆ ತಂಪು ಪಾನೀಯದಲ್ಲಿ ಮತ್ತು ಬರೋ ಔಷಧಿ ಬೆರೆಸಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಸಂತ್ರಸ್ತೆ ದೂರು ನೀಡಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಸುಬ್ರಮಣ್ಯ ಬೆಂಗಳೂರು ಬಿಟ್ಟು ಪರಾರಿಯಾಗಿದ್ದಾನೆ. ಸುಬ್ರಮಣ್ಯ ಮೂಲತಃ ತೀರ್ಥಹಳ್ಳಿಯವನಾಗಿದ್ದು, ಹೊಂಬಣ್ಣ ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಿದ್ದಾನೆ.

    ದೂರಿನಲ್ಲಿ ಏನಿದೆ?
    ಕಳೆದ 2 ವರ್ಷಗಳಿಂದ ನನಗೂ ನಮ್ಮ ಕುಟುಂಬದವರಿಗೆ ಸುಬ್ರಮಣ್ಯನ ಪರಿಚಯವಿದೆ. ಕುಟುಂಬದವರ ಜೊತೆ ಮಾತನಾಡಿ ಮದುವೆಯಾಗುವುದಾಗಿ ಹೇಳಿದ್ದ. ಈ ವಿಚಾರ ಆತನ ಪೋಷಕರಿಗೂ ತಿಳಿದಿತ್ತು. ಮದುವೆ ಮಾಡಿಕೊಳ್ಳೋಣ ಎಂದಿದ್ದಕ್ಕೆ ನನ್ನ ಸಿನಿಮಾ ಈ ವರ್ಷದ ಜುಲೈ 7 ರಂದು ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಯಾದ ಬಳಿಕ ಮದುವೆ ಆಗುತ್ತೇನೆ ಎಂದು ಹೇಳಿದ್ದ. ಸಿನಿಮಾ ರಿಲೀಸ್ ಆದ ಮೇಲೆ ನಮ್ಮ ಮನೆಯ ಗೃಹಪ್ರವೇಶ ಕಾರ್ಯಕ್ರಮ ನಡೆಯಲಿ. ಆಮೇಲೆ ನಿನ್ನನ್ನು ಮದುವೆ ಆಗುತ್ತೇನೆ ಎಂದು ಹೇಳಿ ದಿನ ದೂಡುತ್ತಿದ್ದ.

    ನವೆಂಬರ್ 1 ರಂದು ನನ್ನ ಅಕ್ಕನ ಮನೆಯಲ್ಲಿ ಪಾರ್ಟಿ ಇದೆ ಎಂದು ಸುಳ್ಳು ಹೇಳಿ ಕರೆದುಕೊಂಡು ಹೋದ. ಮನೆಯವರಿಗೂ ಗೊತ್ತಿದೆ ಎಂದು ನಾನು ಹೋಗಿದ್ದೆ. ಆದರೆ ಆತ ಅಕ್ಕನ ಮನೆಗೆ ಬದಲು ತನ್ನ ರೂಮಿಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಕುಡಿಯಲು ಜ್ಯೂಸ್ ಕೊಟ್ಟಿದ್ದಾನೆ. ಸ್ವಲ್ಪ ಸಮಯದ ನಂತರ ನನಗೆ ಪ್ರಜ್ಞೆ ತಪ್ಪಿತ್ತು. ಎಚ್ಚರವಾದಾಗ ಅವನ ಮತ್ತು ನನ್ನ ಮೈಮೇಲೆ ಬಟ್ಟೆ ಇರಲಿಲ್ಲ. ಈ ವೇಳೆ ಸುಬ್ರಮಣ್ಯ ನನ್ನನ್ನು ದೈಹಿಕವಾಗಿ ಬಳಸಿಕೊಂಡಿರುವುದು ತಿಳಿಯಿತು. ನನ್ನ ಅನುಮತಿ ಇಲ್ಲದೆ ಅತ್ಯಾಚಾರ ಮಾಡಿದ್ದಾನೆ. ನಾನು ಪ್ರಶ್ನೆ ಮಾಡಿದ್ದಕ್ಕೆ ನಿನ್ನನ್ನೇ ನಾನು ಮದುವೆಯಾಗುತ್ತೇನೆ ಸಮಾಧಾನವಾಗಿರು ಎಂದು ಹೇಳುತ್ತಿದ್ದ. ಆದರೆ ಕೆಲವು ದಿನಗಳಾದ ಬಳಿಕ ನನ್ನನ್ನು ನಿರ್ಲಕ್ಷ್ಯ ಮಾಡಲು ಪ್ರಾರಂಭಿಸಿದ್ದಾನೆ.

    ಯಾಕೆ ನನ್ನನ್ನು ನೀನು ಮದುವೆಯಾಗುತ್ತಿಲ್ಲ ಎಂದು ಕೇಳಿದಾಗ ನನಗೆ 20 ಲಕ್ಷ ರೂ. ಹಾಕಿ ಸಿನಿಮಾ ತೆಗೆಯುವಂತಹ ಹುಡುಗಿ ಬೇಕು ನೀವು ಬಡವರು ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೇ ಸಿನಿಮಾ ರಂಗದವರು ಬಂದರೆ ಅವರ ಜೊತೆ ಸಹಕರಿಸು ಎಂದು ಹೇಳಿದ್ದ. ಆದರೆ ಇದಕ್ಕೆ ನಾನು ನಿರಾಕರಿಸಿದೆ. ನಂತರ ಇಲ್ಲಸಲ್ಲದ ಆರೋಪ ಮಾಡಿ ನನಗೆ ಮತ್ತು ನನ್ನ ಕುಟುಂಬದವರ ತೇಜೋವಧೆ ಮಾಡಿದ್ದಾನೆ. ಇದೆಲ್ಲವನ್ನು ಪ್ರಶ್ನೆ ಮಾಡಿದ್ದಕ್ಕೆ ನನಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.