Tag: actor

  • ನಟ ಸುನೀಲ್ ರಾವ್ ಮದುವೆಗೆ ಆಗಮಿಸಿದ ಸ್ಯಾಂಡಲ್‍ವುಡ್ ತಾರೆಯರು!

    ನಟ ಸುನೀಲ್ ರಾವ್ ಮದುವೆಗೆ ಆಗಮಿಸಿದ ಸ್ಯಾಂಡಲ್‍ವುಡ್ ತಾರೆಯರು!

    ಬೆಂಗಳೂರು: ಸ್ಯಾಂಡಲ್‍ವುಡ್ ಖ್ಯಾತ ಗಾಯಕಿ ಬಿ.ಕೆ ಸುಮಿತ್ರ ಅವರ ಪುತ್ರ ನಟ, ಗಾಯಕ ಸುನೀಲ್ ರಾವ್ ತನ್ನ ಪ್ರೇಯಸಿ ಶ್ರೇಯಾ ಐಯ್ಯರ್ ಜೊತೆ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

    ಬೆಂಗಳೂರಿನ ಜೆಪಿ ನಗರದಲ್ಲಿ ಸುನೀಲ್ ಹಾಗೂ ಶ್ರೇಯಾ ಅವರ ಮದುವೆ ನಡೆಯಿತು. ಸುನೀಲ್ ರಾವ್ ಮದುವೆ ತುಂಬಾ ಅದ್ಧೂರಿಯಾಗಿ ನಡೆದಿದ್ದು, ಹಿಂದೂ ಸಂಪ್ರದಾಯದಂತೆ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಸುನೀಲ್ ರಾವ್ ಮದುವೆಯಲ್ಲಿ ಹಲವಾರು ಸಿನಿಮಾ ಕಲಾವಿದರು ಭಾಗಿಯಾಗಿದ್ದರು.

    ನಟಿ ಸುಧಾರಾಣಿ, ನಟಿ ಹಗೂ ನೃತ್ಯಗಾರ್ತಿ ಹೇಮಾ ಪಂಚಮುಖಿ, ನಟಿ ಅನುಪಮಾ ಗೌಡ, ನಿರ್ದೇಶಕ ರಘುಶಾಸ್ತ್ರಿ ಮದುವೆಯಲ್ಲಿ ಭಾಗಿಯಾಗಿದ್ದರು. ಅಲ್ಲದೇ ಯುವ ಗಾಯಕ-ಗಾಯಕಿಯಾಗಿರುವ ಚಿನ್ಮಯ್, ಸಿಂಚನ್ ದೀಕ್ಷಿತ್, ಡಾ. ಶಮಿತಾ ಮಲ್ನಾಡ್ ಹಾಗೂ ನಿರ್ದೇಶಕ ಮಯೂರ ರಾಘವೇಂದ್ರ ಸುನೀಲ್ ಅವರ ಮದುವೆಗೆ ಆಗಮಿಸಿದ್ದರು. ಸುನೀಲ್ ರಾವ್ ಅವರ ಸಹೋದರಿ ಸೌಮ್ಯ ರಾವ್ ಮುಂಬೈನಲ್ಲಿ ಖ್ಯಾತ ಗಾಯಕಿಯಾಗಿದ್ದು, ತನ್ನ ಸಹೋದರನ ಮದುವೆಗೆ ಆಗಮಿಸಿ ನೂತನ ದಂಪತಿಗೆ ಶುಭ ಕೋರಿದ್ದಾರೆ.

    ಪ್ರೀತಿ ಶುರುವಾಗಿದ್ದು ಹೇಗೆ?
    ಸುನೀಲ್ ರಾವ್ ಹಾಗೂ ಶ್ರೇಯಾ ಐಯ್ಯರ್ ವೆಬ್ ಸೀರಿಸ್ ಚಿತ್ರೀಕರಣದ ವೇಳೆ ಒಬ್ಬರಿಗೊಬ್ಬರು ಪರಿಚಯವಾಗಿದ್ದರು. ಪರಿಚಯವಾದ ಮೇಲೆ ಇಬ್ಬರು ಒಬ್ಬರನೊಬ್ಬರು ಪ್ರೀತಿಸಲು ಶುರು ಮಾಡಿದ್ದರು. ಈಗ ಇಬ್ಬರ ಕುಟುಂಬದ ಒಪ್ಪಿಗೆಯಿಂದ ಹೊಸ ಜೀವನಕ್ಕೆ ಕಾಲಿಟ್ಟರು. ಸದ್ಯ ಸುನೀಲ್ ರಾವ್ ‘ಎಕ್ಸ್ ಕ್ಯೂಸ್ ಮಿ’ ಚಿತ್ರದ ನಂತರ ವೆಬ್ ಸೀರಿಸ್ ನಲ್ಲಿ ನಟಿಸಿ ಮತ್ತೆ ಚಿತ್ರರಂಗದಲ್ಲಿ ಸಕ್ರೀಯ ನಟನಾಗಿ ಕಾಣಿಸಿಕೊಂಡಿದ್ದಾರೆ. ಈಗ ‘ತುರ್ತು ನಿರ್ಗಮನ’ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್ ವುಡ್‍ಗೆ ಎಂಟ್ರಿ ಕೊಡುತ್ತಿದ್ದಾರೆ.

    ಸುನೀಲ್ ರಾವ್ ಅವರ ಪತ್ನಿ ಶ್ರೇಯಾ ಐಯ್ಯರ್ ವೃತ್ತಿಯಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿದ್ದು, ಸುನೀಲ್ ಅಭಿನಯಿಸಿದ ವೆಬ್ ಸೀರಿಸ್‍ಗೆ ಡಿಸೈನರ್ ಆಗಿ ಕೆಲಸ ಮಾಡಿದ್ದರು. ಸದ್ಯ ‘ಟಕ್ಕರ್’ ಚಿತ್ರಕ್ಕೂ ಶ್ರೇಯಾ ಅವರೇ ವಸ್ತ್ರ ವಿನ್ಯಾಸ ಮಾಡಲಿದ್ದಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಸುನೀಲ್ ರಾವ್!

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಸುನೀಲ್ ರಾವ್!

    ಬೆಂಗಳೂರು: ಸ್ಯಾಂಡಲ್‍ವುಡ್ ಖ್ಯಾತ ಗಾಯಕಿ ಬಿ.ಕೆ ಸುಮಿತ್ರ ಅವರ ಪುತ್ರ ನಟ ಹಾಗೂ ಗಾಯಕ ಸುನೀಲ್ ರಾವ್ ತನ್ನ ಪ್ರೇಯಸಿ ಶ್ರೇಯಾ ಐಯ್ಯರ್ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಸುನೀಲ್ ರಾವ್ ಅವರ ಪತ್ನಿ ಶ್ರೇಯಾ ಐಯ್ಯರ್ ವೃತ್ತಿಯಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿದ್ದು, ಸುನೀಲ್ ಅಭಿನಯಿಸಿದ ವೆಬ್ ಸೀರಿಸ್‍ಗೆ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಸದ್ಯ ‘ಟಕ್ಕರ್’ ಚಿತ್ರಕ್ಕೂ ಶ್ರೇಯಾ ಅವರೇ ವಸ್ತ್ರ ವಿನ್ಯಾಸ ಮಾಡಲಿದ್ದಾರೆ.

    ಬೆಂಗಳೂರಿನ ಜೆಪಿ ನಗರದಲ್ಲಿ ಸುನೀಲ್ ಹಾಗೂ ಶ್ರೇಯಾ ಅವರ ಮದುವೆ ನಡೆದಿದೆ. ಸುನೀಲ್ ಆಪ್ತರಾದ ಅನುಪಮ ಗೌಡ ಹಾಗೂ ರಘು ಶಾಸ್ತ್ರಿ ಸೇರಿದಂತೆ ಹಲವಾರು ಗಣ್ಯರು ಮದುವೆಯಲ್ಲಿ ಭಾಗಿಯಾಗಿದ್ದರು.

    ಪ್ರೀತಿ ಶುರುವಾಗಿದ್ದು ಹೇಗೆ?
    ಸುನೀಲ್ ರಾವ್ ಹಾಗೂ ಶ್ರೇಯಾ ಐಯ್ಯರ್ ವೆಬ್ ಸೀರಿಸ್ ಚಿತ್ರೀಕರಣದ ವೇಳೆ ಒಬ್ಬರಿಗೊಬ್ಬರು ಪರಿಚಯವಾಗಿದ್ದರು. ಪರಿಚಯವಾದ ಮೇಲೆ ಇಬ್ಬರು ಒಬ್ಬರನೊಬ್ಬರು ಪ್ರೀತಿಸಲು ಶುರು ಮಾಡಿದ್ದರು. ಈಗ ಇಬ್ಬರ ಕುಟುಂಬದ ಒಪ್ಪಿಗೆಯಿಂದ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಸದ್ಯ ಸುನೀಲ್ ರಾವ್ ‘ಎಕ್ಸ್ ಕ್ಯೂಸ್ ಮಿ’ ಚಿತ್ರದ ನಂತರ ವೆಬ್ ಸೀರಿಸ್ ನಲ್ಲಿ ನಟಸಿ ಮತ್ತೆ ಚಿತ್ರರಂಗದಲ್ಲಿ ಸಕ್ರೀಯ ನಟನಾಗಿ ಕಾಣಿಸಿಕೊಂಡಿದ್ದಾರೆ. ಈಗ ‘ತುರ್ತು ನಿರ್ಗಮನ’ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡುತ್ತಿದ್ದಾರೆ.

  • ನಡುರಸ್ತೆಯಲ್ಲಿ ತಲ್ವಾರ್ ನಿಂದ ಹಲ್ಲೆ ನಡೆಸಿದ್ದ ರೈ ಬೆಂಬಲಿಗ ಪೊಲೀಸರಿಗೆ ಶರಣು

    ನಡುರಸ್ತೆಯಲ್ಲಿ ತಲ್ವಾರ್ ನಿಂದ ಹಲ್ಲೆ ನಡೆಸಿದ್ದ ರೈ ಬೆಂಬಲಿಗ ಪೊಲೀಸರಿಗೆ ಶರಣು

    ಮಂಗಳೂರು: ಹಲವು ದಿನಗಳಿಂದ ತಲೆ ಮರಿಸಿಕೊಂಡಿದ್ದ ಮಾಜಿ ಸಚಿವ ರಮಾನಾಥ್ ರೈ ಆಪ್ತ, ತುಳು ನಟ ಸುರೇಂದ್ರ ಮಂಗಳೂರು ಡಿಸಿಐಬಿ ಪೊಲೀಸರಿಗೆ ಶರಣಾಗಿದ್ದಾನೆ.

    ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ನಟ ಸುರೇಂದ್ರ ವಿರುದ್ಧ ಪ್ರಕರಣ ದಾಖಲಾಗಿತ್ತು. ಘಟನೆಯ ಬಳಿಕ ಸುರೇಂದ್ರ ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡಿದ್ದ. ಸದ್ಯ ಬಂಟ್ವಾಳ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದು, ಇಂದು ಸಂಜೆ ಶರಣಾಗಿರುವ ಸುರೇಂದ್ರರನ್ನು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

    ಏನಿದು ಘಟನೆ:
    ಬಂಟ್ವಾಳ ಪೇಟೆ ಬಳಿಯ ಬಡ್ಡಕಟ್ಟೆ ಎಂಬಲ್ಲಿ ಜೂನ್ 21ರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದಿರುವ ಬೀದಿ ಕಾಳಗದಲ್ಲಿ ರಮಾನಾಥ ರೈ ಆಪ್ತ ಸುರೇಂದ್ರ, ತಲ್ವಾರ್ ಹಿಡಿದು ಕೊಲೆಗೆ ಯತ್ನಿಸಿದ್ದ. ಈ ಘಟನೆಯನ್ನು ಸ್ಥಳೀಯ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು. ಬಳಿಕ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ಸುರೇಂದ್ರ ತಲ್ವಾರ್ ಹಿಡಿದು ಬಿಜೆಪಿ ಕಾರ್ಯಕರ್ತರನ್ನು ಅಟ್ಟಿಸಿಕೊಂಡು ಬರುತ್ತಿರುವುದನ್ನು ಕಾಣಬಹುದಾಗಿತ್ತು.

    ಘಟನೆಯಲ್ಲಿ ಗಣೇಶ್ ಮತ್ತು ಪುಷ್ಪರಾಜ್ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದರು. ಅಂದಹಾಗೇ ಸುರೇಂದ್ರ ಈ ಹಿಂದೆ ಎರಡು ತುಳು ಸಿನಿಮಾಗಳಲ್ಲಿ ನಟಿಸಿದ್ದು, ತುಳು ಸಿನಿಮಾ ರಂಗದ ಕಲಾವಿದರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾನೆ. ಅಲ್ಲದೆ, ಮಂಗಳೂರು ಮತ್ತು ಬಂಟ್ವಾಳದಲ್ಲಿ ಹಣದ ವ್ಯವಹಾರ ನಡೆಸುತ್ತಾ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದನು ಎಂಬುದಾಗಿ ತಿಳಿದುಬಂದಿತ್ತು.

    https://www.youtube.com/watch?v=BD46Vi6guss

  • ಕಬಾಬ್, ಚಿಕನ್ ಬಿರಿಯಾನಿ ಎಚ್‍ಡಿಕೆ ತಟ್ಟೆಯಲ್ಲಿ, ನೀರ್ ಮಜ್ಜಿಗೆ, ಕೋಸಂಬರಿ, ಪಾನಕ ಕೈ ತಟ್ಟೆಯಲ್ಲಿದೆ: ಜಗ್ಗೇಶ್

    ಕಬಾಬ್, ಚಿಕನ್ ಬಿರಿಯಾನಿ ಎಚ್‍ಡಿಕೆ ತಟ್ಟೆಯಲ್ಲಿ, ನೀರ್ ಮಜ್ಜಿಗೆ, ಕೋಸಂಬರಿ, ಪಾನಕ ಕೈ ತಟ್ಟೆಯಲ್ಲಿದೆ: ಜಗ್ಗೇಶ್

    ಪಬ್ಲಿಕ್ ಟಿವಿ
    ಮೈಸೂರು: ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರನ್ನು ನೋಡಿದರೆ ಅಯ್ಯೋ ಪಾಪಾ ಅನಿಸುತ್ತದೆ. ಸರ್ಕಾರ ರಚನೆಗೆ ತನು, ಮನ, ಧನ ಎಲ್ಲ ಅರ್ಪಿಸಿ, ಈಗ ಒಳಿತು ಮಾಡು ಮನುಸ ಎಂಬ ಹಾಡಿನಂತೆ ಕೂತಿದ್ದಾರೆ ಅಂತ ನಟ, ಬಿಜೆಪಿ ಮುಖಂಡ ಜಗ್ಗೇಶ್ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿಯವರು ನಮಗೆ ಒಳ್ಳೆಯ ಸ್ನೇಹಿತ. ಹಾಗಾಗಿ ಒಮ್ಮೆ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವುದನ್ನು ನೋಡುವ ಆಸೆ ಇತ್ತು. ಆದರೆ ಅವರೀಗ ಎಲ್ಲವನ್ನೂ ದಾನ ಮಾಡಿದ ಮೇಲೆ ನಗುತ್ತಾ ಒಳಗಡೆ ಕೊರಗುತ್ತಿದ್ದಾರೆ. ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ಬಂಡಾಯದ ಬಾವುಟ ಹಾರಿಸಿದ್ದಾರೆ ಅಂದ್ರು.

     

    ಕಬಾಬ್, ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ ಎಲ್ಲಾ ಸಿಎಂ ಎಚ್‍ಡಿಕೆ ತಟ್ಟೆಯಲ್ಲಿದೆ. ನೀರ್ ಮಜ್ಜಿಗೆ, ಕೋಸಂಬರಿ, ಪಾನಕ ಎಲ್ಲವೂ ಕಾಂಗ್ರೆಸ್ ತಟ್ಟೆಯಲ್ಲಿದೆ. ಇಬ್ಬರು ಊಟಕ್ಕೆ ಕೂತಿದ್ದಾರೆ. ಜೆಡಿಎಸ್‍ನವರು ಮೃಷ್ಠಾನ್ನ ಭೋಜನ ಮಾಡುವುದನ್ನ ನೋಡಿಕೊಂಡು ಕಾಂಗ್ರೆಸ್ಸಿನವರು ಸುಮ್ಮನಿರುವುದಕ್ಕೆ ಸಾಧ್ಯಾನಾ.? ನೋಡ್ತಾ ಇರಿ, ತಟ್ಟೆ ಮುಂದೆಯೇ ಇಬ್ಬರು ಬಡಿದಾಡಿಕೊಳ್ತಾರೆ. ಆ ಕಾಲ ತುಂಬಾ ದೂರ ಇಲ್ಲ. ಮದುವೆ ಮನೆಯಲ್ಲಿ ಊಟಕ್ಕೆ ಕಿತ್ತಾಡುವ ಸಂದರ್ಭ ಬಹಳ ಬೇಗ ಬರತ್ತೆ. ಈ ಆಟವನ್ನು ನೋಡಲು ನಾನೂ, ಜನರು ನೀವೂ ಎಲ್ಲರೂ ಕಾಯುತ್ತಿದ್ದೇವೆ ಅಂತ ಜಗ್ಗೇಶ್ ವ್ಯಂಗ್ಯವಾಡಿದ್ದಾರೆ.

  • ರಾಕಿಂಗ್ ಸ್ಟಾರ್ ಯಶ್‍ರನ್ನ ಭೇಟಿ ಮಾಡಿದ ಶ್ರೀರಾಮುಲು

    ರಾಕಿಂಗ್ ಸ್ಟಾರ್ ಯಶ್‍ರನ್ನ ಭೇಟಿ ಮಾಡಿದ ಶ್ರೀರಾಮುಲು

    ಬೆಂಗಳೂರು: ಮೊಳಕಾಲ್ಮೂರು ಶಾಸಕ ಶ್ರೀರಾಮುಲು, ನಟ ಯಶ್ ಅವರನ್ನು ಭೇಟಿ ಮಾಡಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಾಧನೆ ಬಗ್ಗೆ ವಿವರಿಸಿದ್ದಾರೆ.

    ಬೆಂಗಳೂರಿನಲ್ಲಿ ನಾರಾಯಣ ಹೃದಯಾಲಯದಲ್ಲಿ ಭೇಟಿ ಮಾಡಿ ಸುಮಾರು 30 ನಿಮಿಷಗಳ ಕಾಲ ಯಶ್ ಜೊತೆ ಮಾತುಕತೆ ನಡೆಸಿ ಮೋದಿ ಸರ್ಕಾರದ ಸಾಧನೆ ಬಗ್ಗೆ ವಿವರಿಸಿದ್ದಾರೆ. ಅಲ್ಲದೇ ಮೋದಿ ಸಾಧನೆ ಕುರಿತಾದ ಕಿರುಹೊತ್ತಿಗೆಯನ್ನು ಕೂಡ ನೀಡಿದ್ದಾರೆ. ಇದನ್ನೂ ಓದಿ: ಮೋದಿ ಕುರಿತ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ – ಪೇಜಾವರ ಶ್ರೀ

    ಕಪ್ಪುಹಣ ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಮನವರಿಕೆ ಮಾಡಿದ್ದಾರೆ. ಗಂಗಾನದಿ ಶುದ್ಧೀಕರಣ ಕುರಿತು ಮೋದಿ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಅಂಕಿ ಸಂಖ್ಯೆ ಸಮೇತ ವಿವರಿಸಿದ್ದಾರೆ. 2014 ರ ಲೋಕಸಭಾ ಚುನಾವಣೆ ವೇಳೆ ಮೋದಿ ನೀಡಿದ ಭರವಸೆಗಳನ್ನು ಈಡೇರಿಕೆಗೆ ಮೋದಿ ಕೈಗೊಂಡ ಕ್ರಮಗಳ ಕುರಿತು ವಿವರಿಸಿದ್ದಾರೆ. ಈ ಮೂಲಕ ಬಿಜೆಪಿ ಗಣ್ಯರಲ್ಲಿ ಮೋದಿ ವಿರುದ್ಧ ತಪ್ಪು ತಿಳುವಳಿಕೆ ಮೂಡದಂತೆ ಮುಂಜಾಗೃತೆ ವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಪೇಜಾವರ ಶ್ರೀ ಸನ್ಯಾಸಿಗಳು, ಅವರು ಟಿವಿ ನೋಡದ ಕಾರಣ ಕೇಂದ್ರದ ಯೋಜನೆಗಳ ಅರಿವಿಲ್ಲ: ಕರಂದ್ಲಾಜೆ

    ಭೇಟಿ ಯಾಕೆ?:
    ಪ್ರಧಾನಿ ಮೋದಿ ಸರ್ಕಾರದ ಸಾಧನೆ ಸಮಧಾನ ತಂದಿಲ್ಲ ಎಂಬ ಪೇಜಾವರ ಶ್ರೀಗಳ ಹೇಳಿಕೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಇದೀಗ ಎಚ್ಚೆತ್ತುಕೊಂಡಿದ್ದಾರೆ. ಪೇಜಾವರ ಶ್ರೀಗಳಂತೆ ಹಲವು ಗಣ್ಯರು ಇದೇ ರೀತಿ ಹೇಳಿಕೆಗಳನ್ನು ಕೊಟ್ರೆ ಬಿಜೆಪಿ ಹಿನ್ನಡೆಯಾಗೊದ್ರಿಂದ ವಿವಿಧ ಕ್ಷೇತ್ರದ ಗಣ್ಯರ ಭೇಟಿ ಮಾಡಿ ಮೋದಿ ಸರ್ಕಾರದ ಸಾಧನೆ ಬಗ್ಗೆ ಬಿಜೆಪಿ ನಾಯಕರು ವಿವರಿಸ್ತಿದ್ದಾರೆ. ಬಿಜೆಪಿ ನಾಯಕರು ಪ್ರತಿನಿತ್ಯ ತಮ್ಮ ಸಂಪರ್ಕದಲ್ಲಿರುವ ಗಣ್ಯರನ್ನು ಭೇಟಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಪೇಜಾವರ ಶ್ರೀಗಳು ಗಂಗಾನದಿ ಬಳಿ ಹೋಗಿಲ್ಲ, ನಾನು ಕರ್ಕೊಂಡು ಹೋಗ್ತಿನಿ: ಕೆ.ಎಸ್.ಈಶ್ವರಪ್ಪ

  • ಮೋದಿಯೆಂಬ ಸಿಂಹವನ್ನು ಅಡ್ಡಗಟ್ಟಲು ನಾಯಿ, ನರಿಗಳು ಒಟ್ಟು ಸೇರಿವೆ- ಜಗ್ಗೇಶ್ ಆಕ್ರೋಶ

    ಮೋದಿಯೆಂಬ ಸಿಂಹವನ್ನು ಅಡ್ಡಗಟ್ಟಲು ನಾಯಿ, ನರಿಗಳು ಒಟ್ಟು ಸೇರಿವೆ- ಜಗ್ಗೇಶ್ ಆಕ್ರೋಶ

    ಬೆಂಗಳೂರು: ರಾಜ್ಯದಲ್ಲಿ ಮೋದಿಯೆಂಬ ಸಿಂಹವನ್ನು ಅಡ್ಡಗಟ್ಟಲು ನಾಯಿ, ನರಿ ಹಾಗೂ ಜಿಗಣೆಗಳೆಲ್ಲವೂ ಒಟ್ಟು ಸೇರಿವೆ ಅಂತ ನಟ ಹಾಗೂ ಬಿಜೆಪಿ ಮುಖಂಡ ಜಗ್ಗೇಶ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಅಪಮಿತ್ರ ಮೈತ್ರಿಯನ್ನು ವಿರೋಧಿಸಿ ನಗರದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಮಾತನಾಡಿದ ಜಗ್ಗೇಶ್, ಭಾರತೀಯ ಜನತಾ ಪಾರ್ಟಿ ಕಪ್ಪು ಪಟ್ಟಿ ಧರಿಸಿ ಕರಾಳ ದಿನವನ್ನು ಆಚರಿಸುತ್ತಿದೆ. ಮತವನ್ನು ನೀಡಿ ಭಾರತೀಯ ಜನತಾ ಪಕ್ಷವನ್ನು ಏಕಪಕ್ಷೀಯವಾಗಿ ಹೊರತಂದಿದ್ದೀರಿ. ಆದ್ರೆ ವಾಮಮಾರ್ಗದಿಂದ ನಮ್ಮನ್ನು ಪಕ್ಕಕಿಡಬೇಕು ಎನ್ನುವ ಷಡ್ಯಂತ್ರ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರ ಬೆವರಿನ ಹನಿಗೆ ಬೆಲೆ ಕೊಡುವ ಈ ಮೈತ್ರಿ ಸರ್ಕಾರಕ್ಕೆ ಧಿಕ್ಕಾರ ಅಂತ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಮೋದಿಯೆಂಬ ಈ ರಾಜ್ಯದ ಸಿಂಹವನ್ನು ಅಡ್ಡಗಟ್ಟಲು ನಾಯಿ, ನರಿ, ಜಿಗಣೆಗಳೆಲ್ಲ ಒಟ್ಟಿಗೆ ಸೇರಿರುವ ಕಾರ್ಯಕ್ರಮಗಳನ್ನು ನಾವು ನೀವು ನೋಡ್ತಾ ಇದ್ದೀವಿ. ನಿರೋದ್ಯೋಗಿ ಸಂಸ್ಥೆಗಳು ಮೋದಿಯವರ ಹೊಡೆತಗಳನ್ನು ತಾಳಲಾರದೆ ಮೂಲೆಗುಂಪಾದಂತಹ ಎಲ್ಲರೂ ಇವತ್ತು ಒಂದು ವೇದಿಕೆಯಲ್ಲಿ ಸೇರಿ ಮೋದಿಯನ್ನು ಮಣಿಸಲು ನಾವಿದ್ದೇವೆ ಎಂಬ ಭ್ರಮೆ ಹಾಗೂ ಚಿಂತನೆಯಿಂದ ಬಂದು ನಿಂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಇಂದು ಈ ನಾಡಿನ ಜನತೆಯ ಪರವಾಗಿ ಹೇಳುತ್ತಿದ್ದೇವೆ, ನಿಮಗೆಲ್ಲರಿಗೂ ಕೂಡ ಅದೇ ರೀತಿಯ ಮುಖಭಂಗ ಇನ್ನೂ ಮೂರು ತಿಂಗಳಲ್ಲಿ ಆಗಿಲ್ಲವೆಂದಲ್ಲಿ ಬೃಂದಾವನದಲ್ಲಿ ರಾಯರಿಲ್ಲ ಎನ್ನುಂತಹ ಮಾತನ್ನು ಹೇಳಲು ಇಷ್ಟ ಪಡುತ್ತೇನೆ ಅಂತ ಅವರು ಜಗ್ಗೇಶ್ ಸವಾಲೆಸೆದರು.

  • ಯಾರಿಗೂ ಆಪರೇಷನ್ ಅಗತ್ಯವಿಲ್ಲ, ಅವರವರ ಆಪರೇಷನ್ ಅವರೇ ಮಾಡಿಕೊಳ್ತಾರೆ: ಜಗ್ಗೇಶ್

    ಯಾರಿಗೂ ಆಪರೇಷನ್ ಅಗತ್ಯವಿಲ್ಲ, ಅವರವರ ಆಪರೇಷನ್ ಅವರೇ ಮಾಡಿಕೊಳ್ತಾರೆ: ಜಗ್ಗೇಶ್

    ಬೆಂಗಳೂರು: ಯಾವುದೇ ನೈತಿಕತೆ ಇಲ್ಲದೇ ರೂಪಿಸಿರುವ ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬಹುಕಾಲ ಉಳಿಯಲ್ಲ. ಚುನಾವಣೆಯ ಬಳಿಕ ನಡೆದ ಸಮ್ಮಿಶ್ರ ಸರ್ಕಾರವನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಅತೀ ಶೀಘ್ರದಲ್ಲೇ ಸರ್ಕಾರ ಉರುಳಲಿದೆ ಎಂದು ಬಿಜೆಪಿ ನಾಯಕ, ನಟ ಜಗ್ಗೇಶ್ ಭವಿಷ್ಯ ನುಡಿದಿದ್ದಾರೆ.

    ರಾಜ್ಯದಲ್ಲಿ ರಚನೆ ಆಗಿರುವ ಸಮ್ಮಿಶ್ರ ಸರ್ಕಾರದಲ್ಲಿ ಈಗಾಗಲೇ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ. ಮುಂದೇ ಇದು ಕಾಡ್ಗಿಚ್ಚಾಗಿ ಹರಡಲಿದೆ. ಸಿದ್ದರಾಮಯ್ಯ ಅವರು ಜನತಾ ಪರಿವಾರದಿಂದ ಬಂದ ಕಾರಣ ಬಹು ಬೇಗ ಹೊಂದಾಣಿಕೆ ಆಗಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ನಾಯಕರ ಹೊಂದಾಣಿಕೆ ಮುಂದುವರೆಯಲು ಸಾಧ್ಯವಿಲ್ಲ. ಯಾವುದೇ ನಾಯಕರು ಸಹ ಅಧಿಕಾರ ಬಿಟ್ಟುಕೊಟ್ಟು ಸುಮ್ಮನೆ ಕೂರುವುದಿಲ್ಲ. ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಯಾವುದೇ ಅಪರೇಷನ್ ಅಗತ್ಯವಿಲ್ಲ. ಅವರವರ ಅಪರೇಷನ್ ಅವರೇ ಮಾಡಿಕೊಳ್ಳುತ್ತಾರೆ ಎಂದರು.

    ನಾನು ಈ ಹಿಂದೆ ಕಾಂಗ್ರೆಸ್ ಪಕ್ಷ ಬಿಟ್ಟು ಅಂದರೆ 12 ವರ್ಷಗಳ ಹಿಂದೆಯೇ ಬಿಜೆಪಿಗೆ ಬಂದೆ. ಆದರೆ ಇಂದಿಗೂ ನನ್ನನ್ನು ಆಪರೇಷನ್ ಕಮಲ ಒಳಗಾಗಿದ್ದವರು ಎಂದು ಟೀಕಿಸುತ್ತಾರೆ. ಇಂತಹ ಮಂದಿಗೆ ತಾನು ಒಂದು ಪ್ರಶ್ನೆ ಕೇಳುತ್ತೇನೆ. ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ನಾಯಕರಾ ಎಂಬುದನ್ನು ಸ್ಪಷ್ಟ ಪಡಿಸಬೇಕಿದೆ ಎಂದರು.

    ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಪ್ರಧಾನಿಗಳೇ ಕಣ್ಣಕ್ಕೆ ಇಳಿದಿದ್ದಾರೆ. ಪ್ರಧಾನಿ ಮೋದಿ ಅವರನ್ನು ಮೂಲೆ ಗುಂಪು ಮಾಡಲು ಪ್ರಯತ್ನಿಸುತ್ತಿದದ್ದಾರೆ. ಆದರೆ ಮೋದಿ ಇವುಗಳನ್ನು ಮೀರಿ ಪುಟಿದೇಳುತ್ತಾರೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ರು.

    ಕೇವಲ 8 ದಿನಗಳಲ್ಲಿ ತಾನು ಚುನಾವಣೆಯ ಅಭ್ಯರ್ಥಿಯಾಗಿದ್ದು, 60 ಸಾವಿರ ಮತ ಪಡೆದಿದ್ದೇನೆ. ಆತ್ಮಸಾಕ್ಷಿಯಿಂದ ನಾನು ಚುನಾವಣೆ ಎದುರಿಸಿದ್ದೇನೆ. ಆದರೆ ವಿರೋಧಿಗಳು ಒಂದು ಮತಕ್ಕೆ 500 ರೂ. ನಿಂದ 1 ಸಾವಿರ ವರೆಗೂ ನೀಡಿದ್ದಾರೆ ಎಂದು ಆರೋಪಿಸಿದರು. ನಿಮ್ಮ ಆತ್ಮಸಾಕ್ಷಿಗೆ ಕೆಲಸ ಮಾಡಿ ಮತ ಪಡೆದಿದ್ದೀರಾ ಅಥವಾ ಕಡೆಯ ನಾಲ್ಕು ದಿನ ಹಣ ನೀಡಿ ಮತ ಪಡೆದಿದ್ದೀರಾ. ಈ ಕುರಿತು ಸಾಕ್ಷಿ ಸಮೇತ ಆಧಾರಗಳನ್ನು ನೀಡುತ್ತೇನೆ ಎಂದರು.

  • ಮತದಾನದ ಬಳಿಕ ರಾಯರ ದರ್ಶನ ಪಡೆದ ಜಗ್ಗೇಶ್

    ಮತದಾನದ ಬಳಿಕ ರಾಯರ ದರ್ಶನ ಪಡೆದ ಜಗ್ಗೇಶ್

    ರಾಯಚೂರು: ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿತ್ರನಟ ಜಗ್ಗೇಶ್ ಮತದಾನ ನಂತರ ಮಂತ್ರಾಲಯಕ್ಕೆ ಆಗಮಿಸಿ ರಾಯರ ದರ್ಶನ ಪಡೆದರು.

    ಈ ವೇಳೆ ಮಂತ್ರಾಲಯದಲ್ಲಿ ಮಾತನಾಡಿದ ಜಗ್ಗೇಶ್ ಇಲ್ಲಿಯವರೆಗೂ ಚುನಾವಣೆ ಬ್ಯುಸಿಯಲ್ಲಿದ್ದೆ. ಹದಿನೈದು ದಿನದಿಂದ ಪಾರಾಯಣ ಮಾಡಲು ಆಗಿರಲಿಲ್ಲ. ಹೀಗಾಗಿ ಆರಾಧ್ಯ ದೈವ ಗುರುರಾಯರ ದರ್ಶನಕ್ಕೆ ಬಂದಿದ್ದೇನೆ ಎಂದರು.

    ಇದೇ ವೇಳೆ ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಜ್ಯೋತಿಷಿಗಳಲ್ಲ, ಮೇಧಾವಿಯೂ ಅಲ್ಲ ಅವರು ಮುಖ್ಯಮಂತ್ರಿಯಾಗಲ್ಲ ಎಂದರು. ಅಲ್ಲದೇ ಯಶವಂತಪುರದಲ್ಲಿ ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರು ಕಣ್ಣೆದುರಲ್ಲೇ ಹಣ ಹಂಚಿದ್ದಾರೆ ಎಂದು ಆರೋಪಿಸಿದರು.

    ಚುನಾವಣೆಯಲ್ಲಿ ನನ್ನ ಸೋಲು, ಗೆಲುವನ್ನು ರಾಯರ ಮೇಲೆ ಹಾಕುವುದಿಲ್ಲ. ನಾನು ಹದಿನೈದು ದಿನದ ಅಭ್ಯರ್ಥಿ, ಯಶವಂತಪುರದಲ್ಲಿ ನನ್ನ ಗೆಲುವಿನ ಬಗ್ಗೆ ಆಶಾಭಾವನೆ ಹೊಂದಿದ್ದೇನೆ. ಪ್ರಧಾನಿ ಮೋದಿ ದೇಶದಲ್ಲಿ ಭ್ರಷ್ಟಾಚಾರ ತಡೆಯಲು ಮುಂದಾಗಿದ್ದಾರೆ. ಆದರೆ ಅದಕ್ಕೆ ಮತದಾರರು ಮತ ಹಾಕಿ ಪ್ರಜಾಪ್ರಭುತ್ವ ಉಳಿಸಬೇಕಿತ್ತು. ಮಾಧ್ಯಮಗಳು ಸಹ ಮತದಾನದ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದ್ರು ಬೆಂಗಳೂರು ನಗರ ಸೇರಿದಂತೆ ಹಲವು ಕಡೆ ಹೆಚ್ಚಿನ ಮಂದಿ ಮತ ಹಾಕಲು ಜನರು ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

  • ಜನಪರ ಯೋಜನೆಗಳು ಜಾರಿಗೆ ಬರಲು ಹೆಚ್‍ಡಿಕೆ ಸಿಎಂ ಆಗ್ಬೇಕು- ಗೀತಾ ಶಿವರಾಜ್ ಕುಮಾರ್

    ಜನಪರ ಯೋಜನೆಗಳು ಜಾರಿಗೆ ಬರಲು ಹೆಚ್‍ಡಿಕೆ ಸಿಎಂ ಆಗ್ಬೇಕು- ಗೀತಾ ಶಿವರಾಜ್ ಕುಮಾರ್

    ಚಿಕ್ಕಮಗಳೂರು: ಬೇರೆ ಪಕ್ಷ ಅಧಿಕಾರಕ್ಕೆ ಬಂದ್ರೆ ಜೆಡಿಎಸ್ ಶಾಸಕರು ಅವರ ಮನೆ ಮುಂದೆ ನಿಲ್ಲುವಂತಹ ಸ್ಥಿತಿ ಬರುತ್ತೆ, ಆಗ ಅಭಿವೃದ್ಧಿಯೂ ಕುಂಠಿತಗೊಳ್ಳುತ್ತೆ ಅದಕ್ಕೆ ಜೆಡಿಎಸ್‍ಗೆ ಮತ ನೀಡಿ ಜೆಡಿಎಸ್ ಅಭ್ಯರ್ಥಿಯನ್ನ ಗೆಲ್ಲಿಸಿ ಎಂದು ನಟ ಶಿವರಾಜ್‍ಕುಮಾರ್ ಪತ್ನಿ ಗೀತಾ ಶಿವರಾಜ್‍ಕುಮಾರ್ ಹೇಳಿದ್ರು.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಆಲ್ದೂರು ಹೋಬಳಿಯಲ್ಲಿ ರೋಡ್ ಶೋ ಮೂಲಕ ಜೆಡಿಎಸ್ ಅಭ್ಯರ್ಥಿ ಬಿ.ಬಿ.ನಿಂಗಯ್ಯ ಪರ ಮತಯಾಚಿಸಿದ ಅವರು, ಜೆಡಿಎಸ್ ರೈತ ಪರ ಸರ್ಕಾರ, ಕುಮಾರಸ್ವಾಮಿಯ ಜನಪರ ಯೋಜನೆಗಳು ಜಾರಿಗೆ ಬರಬೇಕಾದ್ರೆ ಅವರು ಸಿಎಂ ಆಗಬೇಕು. ಆದ್ದರಿಂದ ಜೆಡಿಎಸ್‍ಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು.

    ಇದೇ ವೇಳೆ, ಮಾತನಾಡಿದ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಬಿ.ಬಿ.ನಿಂಗಯ್ಯ ಪ್ರಧಾನಿ ಮೋದಿ ಪರ ಬ್ಯಾಟ್ ಬೀಸಿದ್ದಾರೆ. ದೇಶದ ಪ್ರಧಾನಿ ಕೂಡ ಇದು 10 ಪರ್ಸೆಂಟ್ ಸರ್ಕಾರ ಅಂತಾರೆ. ಅವರು ಓರ್ವ ಪ್ರಧಾನಿ ಹಗುರವಾಗಿ ಮಾತನಾಡಲು ಆಗುವುದಿಲ್ಲ. ಅವರಿಗಿರುವ ಮಾಹಿತಿಯನ್ನ ಆಧರಿಸಿ ಮಾತನಾಡಿರಬಹುದು ಎಂದು ಬಿಜೆಪಿ ಪರ ಮೃದು ಧೋರಣೆ ತಾಳಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

  • ಚುನಾವಣೆಯಲ್ಲಿ ನಾಯಿ ಅಲ್ಲ, ಜನ ಮತ ಹಾಕೋದು- ಪ್ರಧಾನಿ ವಿರುದ್ಧ ಪ್ರಕಾಶ್ ರೈ ಕೆಂಡಾಮಂಡಲ

    ಚುನಾವಣೆಯಲ್ಲಿ ನಾಯಿ ಅಲ್ಲ, ಜನ ಮತ ಹಾಕೋದು- ಪ್ರಧಾನಿ ವಿರುದ್ಧ ಪ್ರಕಾಶ್ ರೈ ಕೆಂಡಾಮಂಡಲ

    ಗದಗ: ಬಿಜೆಪಿ ವಿರೋಧ ಮಾಡುವವರು ಮುಧೋಳ ನಾಯಿ ನೋಡಿ ಕಲಿಯಿರಿ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಬಹುಭಾಷಾ ನಟ ಪ್ರಕಾಶ್ ರೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ರು.

    ಗದಗ ನಗರದಲ್ಲಿ ಖಾಸಗಿ ಹೋಟೆಲ್ ನಲ್ಲಿ ನಡೆದ ಸಂವಾದ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಪ್ರಕಾಶ್ ರೈ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಮೋದಿ ಮುಧೋಳ ನಾಯಿ ಬಗ್ಗೆ ಮಾತಾಡ್ತಾರೆ. ಬಿಜೆಪಿ ವಿರೋಧಿಗಳು ಮುಧೋಳ ನಾಯಿ ನೋಡಿ ಕಲಿಬೇಕು ಅಂತಾರೆ. ಇನ್ನು ಸೈನ್ಯದಲ್ಲಿ ಮುಧೋಳ ನಾಯಿಗೆ ಕೆಲಸ ಕೊಡ್ತಾರಂತೆ. ಆದ್ರೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ನಾಯಿ ಮತ ಹಾಕಲ್ಲ. ಜನ ಮತ ಹಾಕ್ತಾರೆ ಅಂತ ಕಿಡಿಕಾರಿದ್ರು.

    ಇಲ್ಲಿನ ನಾಯಿಗಳು ಜನರ ಪ್ರೀತಿ, ಊಟಕ್ಕಾಗಿ ಮನೆ ಕಾಯುತ್ತವೆ. ಆದ್ರೆ ಮತ ಹಾಕೋದು ರೈತರು, ಯುವಕರು. ಹೀಗಾಗಿ ನಮ್ಮ ಗತಿ ನಾಯಿ ಪಾಡು ಆಗಲು ಬಿಡಲ್ಲ ಅಂತ ಮೋದಿ ವಿರುದ್ಧ ಗರಂ ಆದ್ರು.

    ಪ್ರಧಾನಿ ಸ್ಥಾನಕ್ಕೆ ಗೌರವ ಕೊಡಿ. ನಾವು ಮನುಷ್ಯರು ಆದ್ರೆ ಪ್ರಧಾನಿಗಳ ದೃಷ್ಠಿಯಲ್ಲಿ ನಾವು ನಾಯಿಗಿಂತ ಕಡೆಯಾದ್ವಾ ಅಂತ ಪ್ರಶ್ನಿಸಿದ್ರು. ಪ್ರಧಾನಿ ಮೋದಿ ಅವರಿಗೆ ಅಭಿವೃದ್ಧಿ ಅನ್ನೋದು ಬರಿ ಸುಳ್ಳು. ಇನ್ನು ಇದೇ ವೇಳೆ ಪ್ರಧಾನಿ ಮೋದಿ ಅವರ ಮಹದಾಯಿ ಹೇಳಿಕೆ ಹಾಗೂ ಅನಂತಕುಮಾರ್ ಹೆಗ್ಡೆ ಅವರ ಸಂವಿಧಾನ ಬದಲಾವಣೆ ಹೇಳಿಕೆಗೆ ನಟ ಪ್ರಕಾಶ್ ರೈ ಕಿಡಿಕಾರಿದ್ರು.

    ಇದಕ್ಕೂ ಮೊದಲು ಬಹುಭಾಷಾ ನಟ ಪ್ರಕಾಶ್ ರೈ ಗದಗ ನಗರದ ತೋಂಟದಾರ್ಯ ಮಠಕ್ಕೆ ಭೇಟಿ ನೀಡಿದ್ದರು. ಮಠಕ್ಕೆ ಭೇಟಿ ನೀಡಿ ವಾಪಾಸ್ ಹೊರಡೋ ವೇಳೆ ಆವರಣದಲ್ಲಿಯೇ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ರೈಗೆ ಮುತ್ತಿಗೆ ಹಾಕಿ ಘೇರಾವ್ ಹಾಕಿ ಕಪ್ಪು ಬಟ್ಟೆ ಪ್ರದರ್ಶನ ಮಾಡಿದ್ರು.