Tag: actor

  • ನಟ ವಿನೋದ್ ರಾಜ್ ಬಳಿಯಿಂದ ಕಳವುಗೈದ ಖದೀಮ ಅರೆಸ್ಟ್

    ನಟ ವಿನೋದ್ ರಾಜ್ ಬಳಿಯಿಂದ ಕಳವುಗೈದ ಖದೀಮ ಅರೆಸ್ಟ್

    ಬೆಂಗಳೂರು: ನಗರದ ಹೊರವಲಯದ ನೆಲಮಂಗಲದಲ್ಲಿ ನಟ ವಿನೋದ್ ರಾಜ್‍ಗೆ ಯಮಾರಿಸಿ 1 ಲಕ್ಷ ದರೋಡೆ ಮಾಡಿದ್ದ ಖತರ್ನಾಕ್ ಓಜಿಕುಪ್ಪಂ ಗ್ಯಾಂಗ್‍ನ ಓರ್ವ ಖದೀಮನನ್ನ ಪೊಲೀಸರು ಬಂಧಿಸಿದ್ದಾರೆ.

    ಕಳೆದ ತಿಂಗಳು ಅಭಿಮಾನಿ ಸೋಗಿನಲ್ಲಿ ಬಂದು ನಟ, ವಿನೋದ್ ರಾಜ್‍ರನ್ನು ಕಾರಿನಲ್ಲಿ ಮಾತನಾಡಿಸುತ್ತಲೇ ಕಾರು ಪಂಚರ್ ಮಾಡಿ ಕಾರಿನಲ್ಲಿದ್ದ 1 ಲಕ್ಷ ಹಣವನ್ನ ಖದೀಮರು ಕದ್ದು ಎಸ್ಕೇಪ್ ಆಗಿದ್ದರು. ಈ ಗ್ಯಾಂಗ್‍ನ ಬೆನ್ನಟ್ಟಿದ್ದ ನೆಲಮಂಗಲ ಪೊಲೀಸರು ಕೊನೆಗೆ ಓಜಿಕುಪ್ಪಂ ಗ್ಯಾಂಗ್‍ನ ರಾಜು ಹೈಟೆಕ್ ರಾಜುನನ್ನ ಬಂಧಿಸಿದ್ದಾರೆ.

    ಬಂಧಿತ ರಾಜು ಅಲಿಯಾಸ್ ಹೈಟೆಕ್ ರಾಜು ರಾಯಲ್ ಜೀವನ ಮಾಡುತ್ತಿದ್ದ. ಇವನು ಧರಿಸುತ್ತಿದ್ದ ಶರ್ಟ್, ಪ್ಯಾಂಟ್‍ಗಳು ಬ್ರ್ಯಾಂಡೆಂಡ್ ಬರೋಬ್ಬರಿ 5 ರಿಂದ 8 ಸಾವಿರ ಬೆಲೆ ಬಾಳುವಂತದ್ದಾಗಿದೆ. ಶೂಗಳು, ಗಾಗಲ್ಸ್ ಹಾಕಿಕೊಂಡು ಹೀರೋ ರೇಂಜೆ ಗೆ ಬಿಲ್ಡಪ್ ಕೊಟ್ಟು ಐಶಾರಾಮಿ ಜೀವನ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

    ಸದ್ಯಕ್ಕೆ ಓಜಿಕುಪ್ಪಂ ಗ್ಯಾಂಗ್‍ನ ಓರ್ವ ಅಂದರ್ ಆಗಿದ್ದು, ಮತ್ತಷ್ಟು ಖದೀಮರಿಗೆ ನೆಲಮಂಗಲ ಸಿಪಿಐ ಅನಿಲ್ ಕುಮಾರ್ ನೇತೃತ್ವದ ತಂಡ ಬಲೆ ಬೀಸಿದೆ. ಆರೋಪಿ ಬಂಧನದಿಂದ ನಟ ವಿನೋದ್ ರಾಜ್ ಸಂತಸ ವ್ಯಕ್ತಪಡಿಸಿದ್ದು, ಮುಂದೆ ಈ ಖದೀಮರ ಗ್ಯಾಂಗ್ ಯಾರಿಗೂ ದ್ರೋಹ ಮಾಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೇ ಹಣ ರಿಕವರಿ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಯಜಮಾನ ಚಿತ್ರದ ನಂತ್ರ ಕನ್ನಡದ ಖ್ಯಾತ ನಟನ ಜೊತೆ ರಶ್ಮಿಕಾ ರೊಮ್ಯಾನ್ಸ್

    ಯಜಮಾನ ಚಿತ್ರದ ನಂತ್ರ ಕನ್ನಡದ ಖ್ಯಾತ ನಟನ ಜೊತೆ ರಶ್ಮಿಕಾ ರೊಮ್ಯಾನ್ಸ್

    ಬೆಂಗಳೂರು: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ‘ಯಜಮಾನ’ ಚಿತ್ರದ ನಂತರ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಜೊತೆ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

    ಇತ್ತೀಚೆಗೆ ರಶ್ಮಿಕಾ ಮಂದಣ್ಣ ಜಯನಗರದ ಮಾಲ್ ಉದ್ಘಾಟನೆಗೆ ಬಂದಿದ್ದರು. ಈ ವೇಳೆ ಮಾಧ್ಯಮದವರು ನಿಮ್ಮ ಮುಂದಿನ ಕನ್ನಡ ಸಿನಿಮಾ ಯಾವುದು ಎಂದು ಪ್ರಶ್ನಿಸಿದ್ದರು. ಆಗ ರಶ್ಮಿಕಾ ಒಂದು ಸೂಪರ್ ಸಿನಿಮಾ ಬರುತ್ತಿದೆ. ಅದನ್ನ ನಾನು ಹೇಳಲ್ಲ. ಪ್ರೊಡಕ್ಷನ್ ಹೌಸ್‍ನವರೇ ಹೇಳಲಿ ಎಂದು ಉತ್ತರಿಸಿದ್ದರು.

    ಸದ್ಯ ರಶ್ಮಿಕಾ ಅವರ ಮುಂದಿನ ಕನ್ನಡ ಚಿತ್ರ ಯಾವುದೆಂದು ಬಹಿರಂಗವಾಗಿದೆ. ರಶ್ಮಿಕಾ ನಟ ಧ್ರುವ ಸರ್ಜಾ ಅವರ ಬಹುನಿರೀಕ್ಷಿತ ‘ಪೊಗರು’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಈ ವಿಷಯದ ಬಗ್ಗೆ ಚಿತ್ರತಂಡ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ.

    ಈ ಚಿತ್ರವನ್ನು ನಂದಕಿಶೋರ್ ನಿರ್ದೇಶನ ಮಾಡುತ್ತಿದ್ದಾರೆ. ಆದರೆ ರಶ್ಮಿಕಾ ಹೇಳಿದ್ದ ಸೂಪರ್ ಚಿತ್ರ ಇದೆನಾ ಅಥವಾ ಬೇರೆ ಚಿತ್ರದ ಬಗ್ಗೆ ಮಾತನಾಡಿದ್ದಾರಾ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಈ ಚಿತ್ರದ ಕತೆಯನ್ನು ಧ್ರುವ ಸರ್ಜಾ ಅವರ ಮಾವ ಅರ್ಜುನ್ ಸರ್ಜಾ ಬರೆದಿದ್ದಾರೆ. ಈವರೆಗೂ ಚಿತ್ರದ ನಾಯಕಿ ಯಾರು ಎನ್ನುವುದನ್ನು ನಿರ್ಧರಿಸಿರಲಿಲ್ಲ. ಸದ್ಯ ಈಗ ರಶ್ಮಿಕಾ ಚಿತ್ರದ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನಲಾಗಿದೆ.

    ಸದ್ಯ ಪೊಗರು ಚಿತ್ರದ ಮೊದಲ ಶೂಟ್ ಮುಗಿದಿದೆ. ಈ ಚಿತ್ರದಲ್ಲಿ ಧ್ರುವ ಶಾಲೆ ಹುಡುಗನ ಲುಕ್‍ನಲ್ಲಿ ಶೂಟಿಂಗ್ ಮಾಡಿ ಮುಗಿಸಿದ್ದಾರೆ. ನವೆಂಬರ್ 20ರಂದು ಎರಡನೇ ಶೆಡ್ಯೂಲ್ ಆರಂಭವಾಗಲಿದೆ. ಎರಡನೇ ಶೆಡ್ಯೂಲ್‍ನಲ್ಲಿ ರಶ್ಮಿಕಾ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗುರುಪ್ರಸಾದ್ ವಿರುದ್ಧ ಸಿಡಿದು ಸಂಗೀತಾ ಪರ ಡಾಲಿ ಧನಂಜಯ್ ಬ್ಯಾಟಿಂಗ್

    ಗುರುಪ್ರಸಾದ್ ವಿರುದ್ಧ ಸಿಡಿದು ಸಂಗೀತಾ ಪರ ಡಾಲಿ ಧನಂಜಯ್ ಬ್ಯಾಟಿಂಗ್

    ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ವಿರುದ್ಧ ನಟ ಧನಂಜಯ್ ಮತ್ತೆ ಸಿಡಿದಿದ್ದು, 2ನೇ ಸಲ ಚಿತ್ರದ ನಟಿ ಸಂಗೀತಾ ಭಟ್ ಪರ ಬ್ಯಾಟ್ ಬೀಸಿದ್ದಾರೆ.

    ನಟಿ ಸಂಗೀತಾ ಭಟ್ ವಿರುದ್ಧ ಹೇಳಿಕೆ ನೀಡಿದ್ದ ನಿರ್ದೇಶಕ ಗುರುಪ್ರಸಾದ್ ವಿರುದ್ಧ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಗುರುಪ್ರಸಾದ್‍ರ ಎಲ್ಲಾ ಹೇಳಿಕೆಗಳನ್ನು ನಾನು ವಿರೋಧಿಸುತ್ತೇನೆ. ಇವರ ಹೇಳಿಕೆಯಿಂದಾಗಿ ಸಂಗೀತಾ ಭಟ್ ಸೇರಿದಂತೆ ಎರಡನೇ ಸಲ ಚಿತ್ರದಲ್ಲಿ ಕೆಲಸಮಾಡಿದ್ದ ಎಲ್ಲರೂ ತೊಂದರೆ ಅನುಭವಿಸುವಂತಾಗಿದೆ ಎಂದರು.

    ನಾನು ಅವರ ಬಗ್ಗೆ ಮಾತನಾಡಿದರೆ ತಪ್ಪಾಗುತ್ತದೆ. ಆದರೂ ಸಹ 2ನೇ ಸಲ ಚಿತ್ರದಲ್ಲಿ ನಟಿಸಿದ್ದರಿಂದ ಈ ಬಗ್ಗೆ ಮಾತನಾಡಲು ಬಯಸುತ್ತೇನೆ. ಸಿನಿಮಾ ತಂಡದಲ್ಲಿ ಗುರುಪ್ರಸಾದ್ ಹೊರತು ಪಡಿಸಿ ಯಾರೂ ಸಹ ಸಣ್ಣ ತಪ್ಪು ಮಾಡಿಲ್ಲ. ಅಲ್ಲದೇ ನಿರ್ಧಿಷ್ಟ ವಿಷಯಕ್ಕೆ ನಿರ್ಮಾಪಕ ಯೋಗೇಶ್ ಗುರುಪ್ರಸಾದ್‍ಗೆ ಬೈದಿದ್ದರು ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ನಿರ್ದೇಶಕ ಗುರುಪ್ರಸಾದ್ ವಿರುದ್ಧ ಸಿಡಿದ ಸಂಗೀತಾ ಭಟ್ ಪತಿ

    ನಿಮಗೆ ನೈತಿಕತೆ ಇದ್ದಿದ್ದರೆ, ನೀವು ಈ ರೀತಿ ಮಾತನಾಡುತ್ತಿರಲಿಲ್ಲ. ಮನುಷ್ಯನಿಗೆ ಅಷ್ಟು ಸೇಡು ಇರಬಾರದು, ನೀವು ನಿಮ್ಮ ಸುತ್ತಮುತ್ತಲಿನ ನಾಲ್ಕು ಜನರನ್ನು ತುಳಿಯಲು ಯತ್ನಿಸುತ್ತಿದ್ದೀರಿ. ಆದರೆ ನಿಮ್ಮನ್ನು ಸಹ ತುಳಿಯುವವರೂ ಇರುತ್ತಾರೆ. ಇವಾಗಲಾದರೂ ನಾಲ್ಕು ಜನ ನಿಮ್ಮ ಪರವಾಗಿ ಮಾತನಾಡುವವರನ್ನು ಉಳಿಸಿಕೊಳ್ಳಿ. ಈ ರೀತಿಯ ವರ್ತನೆಯನ್ನು ಬಿಟ್ಟು ನೆಮ್ಮದಿಯಾಗಿ ಉಸಿರಾಡುವುದನ್ನು ಕಲಿತುಕೊಳ್ಳಲಿ ಎಂದು ಧನಂಜಯ್ ಕಿಡಿಕಾರಿದರು. ಇದನ್ನೂ ಓದಿ: ಸ್ವಂತ ಮಗಳನ್ನೇ ಗುರು ಮಧ್ಯರಾತ್ರಿ ಮನೆಯಿಂದ ಹೊರ ಹಾಕಿದ್ರು- ಮಾಜಿ ಪತ್ನಿ ಆರತಿ

    ಒಂದು ವರ್ಷದ ಹಿಂದೆ ಎರಡನೇ ಸಲ ಸಿನಿಮಾದ ವಿಚಾರಕ್ಕೆ ನನ್ನ ವಿರುದ್ಧ ಲೈವ್ ನಲ್ಲಿ ಹರಿಹಾಯ್ದಿದ್ದರು. ನನ್ನನ್ನು ಐರನ್ ಲೆಗ್, ಗೊಡ್ಡಹಸು ಎಂದು ನೇರವಾಗಿ ಆರೋಪಿಸುವ ಮೂಲಕ ಕೆಟ್ಟದಾಗಿ ಮಾತನಾಡಿದ್ದರು. ಅದು ಸಹ ಕಿರುಕುಳವಲ್ಲವೇ, ನಾನು ಸಹ ಅವರಿಂದ ಕಿರುಕುಳಕ್ಕೆ ಒಳಗಾಗಿದ್ದೇನೆ. ಎಲ್ಲರೂ ಅವರನ್ನು ಟಿವಿ ಪರದೆಯ ಮೇಲೆ ನೋಡಿರುತ್ತಾರೆ. ಆದರೆ ಅವರನ್ನು ನಾವು ತುಂಬಾ ಹತ್ತಿರದಿಂದ ನೋಡಿದ್ದೇವೆ. ಅವರು ಆಡುವ ಮಾತನ್ನು ಕೇಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಗುರುಪ್ರಸಾದ್-ಧನಂಜಯ್ ನಡುವಿನ ಗುದ್ದಾಟಕ್ಕೆ ಇದೇ ಕಾರಣ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶೀಘ್ರವೇ ಬಾಹುಬಲಿ ಬೆಡಗಿ ಅನುಷ್ಕಾ ಶೆಟ್ಟಿ ನಿಶ್ಚಿತಾರ್ಥ?

    ಶೀಘ್ರವೇ ಬಾಹುಬಲಿ ಬೆಡಗಿ ಅನುಷ್ಕಾ ಶೆಟ್ಟಿ ನಿಶ್ಚಿತಾರ್ಥ?

    ಹೈದರಾಬಾದ್: ಟಾಲಿವುಡ್ ನಟಿ, ಬಾಹುಬಲಿ ಬೆಡಗಿ, ಕನ್ನಡತಿ ಅನುಷ್ಕಾ ಶೆಟ್ಟಿ ಅವರ ನಿಶ್ಚಿತಾರ್ಥ ಶೀಘ್ರವೇ ನಡೆಯುತ್ತಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.

    ಹೌದು, ಅನುಷ್ಕಾ ಶೆಟ್ಟಿ ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿರುವ ಫೋಟೊದಿಂದಾಗಿ ಈ ಪ್ರಶ್ನೆ ಹುಟ್ಟಿಕೊಂಡಿದೆ. ಕಾಲುಂಗುರ ತೊಡುತ್ತಿರುವ ರೀತಿಯಲ್ಲಿ ಫೋಟೋ ಹಾಕಿಕೊಂಡು “ಈ ಫೋಟೋಗೆ ಯಾವುದೇ ಶೀರ್ಷಿಕೆ ಅಗತ್ಯವಿಲ್ಲ” ಎಂದು ಬರೆದು ಅನುಷ್ಕಾ ಶೆಟ್ಟಿ ಫೋಟೋ ಅಪ್ಲೋಡ್ ಮಾಡಿದ್ದಾರೆ.

    https://www.instagram.com/p/Bpb20StlfT1/?utm_source=ig_web_copy_link

    ಸದ್ಯ ಅನುಷ್ಕಾರವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಅಲ್ಲದೇ ಫೋಟೋ ಮೂಲಕ ನಟಿ ಪರೋಕ್ಷವಾಗಿ ಮದುವೆಯ ಸೂಚನೆಯನ್ನು ನೀಡಿದ್ದಾರಾ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

    ನವೆಂಬರ್ 7 ರಂದು 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಅನುಷ್ಕಾ, ತಮ್ಮ ಹುಟ್ಟಹಬ್ಬದ ದಿನದಂದೇ ಮದುವೆಯ ಸುದ್ದಿ ನೀಡುತ್ತಾರಾ ಎನ್ನುವ ಕುರಿತು ಈಗ ಚರ್ಚೆ ಆರಂಭವಾಗಿದೆ.

    ಬಾಹುಬಲಿ ಖ್ಯಾತಿಯ ಪ್ರಭಾಸ್ ಜೊತೆ ಅನುಷ್ಕಾ ಪ್ರೀತಿಯಲ್ಲಿದ್ದಾರೆ ಎನ್ನುವ ಗಾಸಿಪ್ ಸುದ್ದಿಗಳು ಕೆಲ ವರ್ಷಗಳಿಂದ ಕೇಳಿ ಬರುತ್ತಿವೆ. ಅಲ್ಲದೇ ಅವರಿಬ್ಬರ ನಡವಳಿಕೆಯೂ ಸಹ ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿದ್ದ ಅವರು, ನಾವು ಒಳ್ಳೆಯ ಸ್ನೇಹಿತರು ಎಂದು ಅಭಿಮಾನಿಗಳಲ್ಲಿ ಹೇಳಿದ್ದರು.

    ಸಾಹೋ ಚಿತ್ರದಲ್ಲೂ ಪ್ರಭಾಸ್‍ಗೆ ಅನುಷ್ಕಾ ಜೋಡಿಯಾಗಬೇಕಿತ್ತು ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಸಾಹೋ ಚಿತ್ರದಲ್ಲಿ ಅನುಷ್ಕಾ ಬದಲು ಶ್ರದ್ಧಾ ಕಪೂರ್ ಆಯ್ಕೆಯಾಗಿದ್ದರು. ಈ ನಡುವೆ ಅನುಷ್ಕಾ ಮತ್ತು ಪ್ರಭಾಸ್ ಪರಸ್ಪರ ಬೇರೆ ಬೇರೆ ಚಿತ್ರಗಳಲ್ಲಿ ಬ್ಯುಸಿಯಾಗಿದ್ದರು. ಈ ನಡುವೆ ಇಬ್ಬರು ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ರಿವಿಲ್ ಆಗಿತ್ತು.

    ಇಬ್ಬರ ನಡುವೆ ಇರೋದು ಸ್ನೇಹಾನಾ, ಪ್ರೀತಿನಾ ಎನ್ನುವುದು ರಹಸ್ಯವಾಗಿದೆ. ಇಬ್ಬರೂ ಅನುಭವಿಸುತ್ತಿರುವ ವಿರಹ ವೇದನೆ ಜಗತ್ತಿನ ಮುಂದೆ ಬಂದಿತ್ತು. ಪರಸ್ಪರ ಶೂಟಿಂಗ್ ಗಾಗಿ ಬೇರೆ ಬೇರೆ ಸ್ಥಳದಲ್ಲಿರುವಾಗ ಈ ಜೋಡಿ ಬರೀ ಕಾಲ್ ಅಲ್ಲ, ವೀಡಿಯೋ ಕಾಲ್ ಮೂಲಕ ಗಂಟೆಗಟ್ಟಲೆ ಮಾತನಾಡಿಕೊಳ್ಳುತ್ತಾರೆ. ಪ್ರತಿ ದಿನ ಬಿಡುವು ಇದ್ದರೆ ಸಾಕು ಇಬ್ಬರ ಮೊಬೈಲ್‍ಗಳೂ ವೇಟಿಂಗ್ ನಲ್ಲಿಯೇ ಇರುತ್ತದೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಊರಲ್ಲಿ ವ್ಯವಸಾಯ ಮಾಡ್ತೀನಿ – ಚಿತ್ರರಂಗಕ್ಕೆ ಪ್ರಥಮ್ ಗುಡ್‍ಬೈ?

    ಊರಲ್ಲಿ ವ್ಯವಸಾಯ ಮಾಡ್ತೀನಿ – ಚಿತ್ರರಂಗಕ್ಕೆ ಪ್ರಥಮ್ ಗುಡ್‍ಬೈ?

    ಬೆಂಗಳೂರು: ಒಳ್ಳೆ ಹುಡುಗ ಪ್ರಥಮ್ ಸಿನಿಮಾ ರಂಗಕ್ಕೆ ಗುಡ್‍ಬೈ ಹೇಳಲು ತೀರ್ಮಾನಿಸಿದ್ದು, `ನಟಭಯಂಕರ’ ನನ್ನ ಕೊನೆಯ ಸಿನಿಮಾ. ಮುಂದೇ ಸ್ವಗ್ರಾಮಕ್ಕೆ ತೆರಳಿ ವ್ಯವಸಾಯ ಮಾಡಲು ನಿರ್ಧಾರಿಸಿರುವುದ್ದಾಗಿ ತಿಳಿಸಿದ್ದಾರೆ.

    ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಕುರಿತು ಬರೆದು ಕೊಂಡಿರುವ ಪ್ರಥಮ್, ಬೆಂಗಳೂರಿನ ಯಾಂತ್ರಿಕ ಬದುಕು ಸಾಕಾಗಿದೆ. ಮನೆಯಲ್ಲಿ ಮದುವೆ ವಿಚಾರ ಕುರಿತು ಚರ್ಚೆ ನಡೆಯುತ್ತಿದ್ದು, ಅದಷ್ಟು ಬೇಗ ಊರಿನಲ್ಲಿ ಸೆಟ್ಲ್ ಆಗೋಣ ಎಂದು ಚಿಂತನೆ ನಡೆಸಿದ್ದಾಗಿ ಹೇಳಿದ್ದಾರೆ.

    ಎಫ್‍ಬಿ ಪೋಸ್ಟ್ ನಲ್ಲಿ ಏನಿದೆ?
    ತುಂಬಾ ಮುಖ್ಯವಾದ ವಿಚಾರ. ನಟಭಯಂಕರ ಚಿತ್ರವು ಬಹಳ ಅದ್ಧೂರಿಯಾಗಿ, ಅಚ್ಚುಕಟ್ಟಾಗಿ ಬರುತ್ತಿದ್ದು, ಬಹಳ ಮುಖ್ಯವಾಗಿ ಇದು ನನ್ನ ಚಿತ್ರರಂಗದ ಕೊನೆಯ ಸಿನಿಮಾ. ಬೆಂಗಳೂರಿನ ಯಾಂತ್ರಿಕ ಬದುಕು ಸಾಕಾಗಿದೆ. ಊರಿನಲ್ಲಿ ವ್ಯವಸಾಯ ಮಾಡುವ ನಿರ್ಧಾರ ಮಾಡಲಾಗಿದೆ. ಇದರ ಜೊತೆಗೆ ನನ್ನ ಮದುವೆ ವಿಚಾರವೂ ಮನೆಯಲ್ಲಿ ತುಂಬಾ ಚರ್ಚೆ ನಡೆಯುತ್ತಿದ್ದು, ಮದುವೆ ಆಗುವ ಮುನ್ನವೇ ಊರಿನಲ್ಲಿ ಸೆಟ್ಲ್ ಆಗೋಣ ಎನ್ನುವುದು ಮನೆಯವರ ಎಲ್ಲರ ಆಸೆ. ಈಗಾಗಲೇ ತೋಟದಲ್ಲಿ 200 ತೆಂಗಿನ ಸಸಿಗಳನ್ನ ನೆಟ್ಟು ಮಾದರಿ ರೈತನಾಗಬೇಕೆಂದು ಅದರ ಕಡೆ ಪ್ರಯತ್ನ ಮಾಡುತ್ತಿದ್ದೇನೆ.

    ಬೆಂಗಳೂರು ಬೋರಾಗಿದೆ. ಇದೇ ಕಡೇ ಸಿನಿಮಾ ನಮ್ಮ ಮನೆಯವರ ಒತ್ತಡಕ್ಕೆ ಮಣಿದು ಮದುವೆ ಆಗುವುದರ ಬಗ್ಗೆ ಚಿಂತಿಸುತ್ತಿದ್ದೀನಿ. ನಮ್ಮ ಗುರುಗಳು ಶ್ರೀಕಾಂತ್ ಪ್ರೇಮ ಕುಮಾರ್ ಸರ್ ಮತ್ತು ಸೂರಪ್ಪಬಾಬು ನಿರ್ಮಾಪಕರ ಸಂಘದ ಅಧ್ಯಕ್ಷರು ಸುಮ್ನೆ ಬೆಂಗಳೂರಲ್ಲಿ ಇದ್ದು ಕೆಲಸ ಮಾಡು. ಎಲ್ಲಿಗೂ ಹೋಗಬೇಡ ಎಂದು ಹೇಳಿದ್ದಾರೆ. ಒಂದು ಸಿನಿಮಾದಿಂದ ನೂರು ಜನ ಅನ್ನ ತಿನ್ನುತ್ತಾರೆ. ಬಾಯ್ ಮುಚ್ಚಿಕೊಂಡು ನನ್ನ ಮಾತು ಕೇಳು. ಬೆಂಗಳೂರಲ್ಲೇ ಸಿನಿಮಾ ಮಾಡು ಅಂದಿದ್ದಾರೆ. ನೋಡೋಣ… ನನಗಂತೂ ದೇವ್ರಾಣೆ ಬೆಂಗಳೂರಿನ ಯಾಂತ್ರಿಕ ಬದುಕು ಸಾಕಾಗಿದೆ ಎಂದು ಬರೆದುಕೊಂಡಿದ್ದಾರೆ.

    ಇತ್ತ ಸಾಮಾಜಿಕ ಜಾಲತಾಣದಲ್ಲಿ ಪ್ರಥಮ್ ಅವರ ತೀರ್ಮಾನದ ಕುರಿತು ಭಾರೀ ಚರ್ಚೆ ನಡೆಯುತ್ತಿದ್ದು, ನಿಮಗೆ ಮೀಟೂ ಭಯವೇ? ಅದಕ್ಕೆ ಚಿತ್ರರಂಗ ಬಿಡುವ ನಿರ್ಧಾರ ಮಾಡಿದ್ದೀರಾ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆಸರು ಬದಲಾಯಿಸಿಕೊಂಡ ಪುಟ್ಟಗೌರಿ ಮದುವೆ ನಾಯಕ ರಕ್ಷಿತ್

    ಹೆಸರು ಬದಲಾಯಿಸಿಕೊಂಡ ಪುಟ್ಟಗೌರಿ ಮದುವೆ ನಾಯಕ ರಕ್ಷಿತ್

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿರುವ ರಕ್ಷಿತ್ ಈಗ ತಮ್ಮ ಹೆಸರನ್ನು ಬದಲಾಯಿಸಿಕೊಂಡು ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡುತ್ತಿದ್ದಾರೆ.

    ಮಹೇಶ ಪಾತ್ರಧಾರಿಯ ರಕ್ಷಿತ್ ಈಗ ರಕ್ಷ್ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಸ್ಯಾಂಡಲ್‍ವುಡ್‍ನಲ್ಲಿ ಈಗಾಗಲೇ ರಕ್ಷಿತ್ ಶೆಟ್ಟಿ ಇರುವುದರ ಕಾರಣ ಅವರು ತಮ್ಮ ಹೆಸರನ್ನು ರಕ್ಷ್ ಎಂದು ಬದಲಾಯಿಸಿಕೊಂಡಿದ್ದಾರೆ.

    8ಎಂಎಂ ಚಿತ್ರದ ನಿರ್ದೇಶಕರಾದ ಹರಿಕೃಷ್ಣ ರಕ್ಷ್ ಅವರ ಹೊಸ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ರೆಡ್’ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ರಕ್ಷ್ ಹ್ಯಾಕರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಕ್ಷ್‍ಗೆ ನಾಯಕಿಯಾಗಿ ಸೋನು ಗೌಡ ಮಿಲಿಟರಿ ಆಫಿಸರ್ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

    ಸದ್ಯ ಶುಕ್ರವಾರ ರೆಡ್ ಸಿನಿಮಾದ ಮುಹೂರ್ತ ನಡೆಯಲಿದೆ. ಅಲ್ಲದೇ ಈ ಚಿತ್ರದಲ್ಲಿ ಮತ್ತೊಬ್ಬರು ನಾಯಕಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಮತ್ತೊಬ್ಬ ನಾಯಕಿ ಅಧಿಕೃತವಾಗಿಲ್ಲ. ಈ ಚಿತ್ರಕ್ಕೆ ಜುದಾ ಸ್ಯಾಂಡಿ ಸಂಗೀತ ನೀಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಬರಿಮಲೆಗೆ ಬರೋ ಮಹಿಳೆಯರನ್ನ ಸೀಳಿ ಹಾಕ್ಬೇಕು: ನಟ ಕೊಲ್ಲಂ ತುಳಸಿ

    ಶಬರಿಮಲೆಗೆ ಬರೋ ಮಹಿಳೆಯರನ್ನ ಸೀಳಿ ಹಾಕ್ಬೇಕು: ನಟ ಕೊಲ್ಲಂ ತುಳಸಿ

    ತಿರುವನಂತಪುರಂ: ಶಬರಿಮಲೆಗೆ ಬರುವ ಮಹಿಳೆಯರನ್ನು ಸೀಳಿ ಹಾಕಬೇಕು ಎಂದು ಮಲಯಾಳಂ ಚಿತ್ರ ನಟ ಕೊಲ್ಲಂ ತುಳಸಿ ವಿವಿದಾತ್ಮಕ ಹೇಳಿ ನೀಡಿದ್ದಾರೆ.

    ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಶಬರಿಮಲೆಗೆ ಕಾಲಿಡುವ ಮಹಿಳೆಯನ್ನು ಎರಡು ಭಾಗ ಮಾಡಬೇಕು. ತುಂಡಾದ ಒಂದು ದೇಹವನ್ನು ದೆಹಲಿಗೆ, ಮತ್ತೊಂದನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಮನೆಗೆ ಕಳುಹಿಸಿಕೊಡಬೇಕು ಎಂದು ಹೇಳಿದ್ದಾರೆ.

    ಮಹಿಳೆಯರಿಗೆ ಶಬರಿಮಲೆ ಪ್ರವೇಶ ಮಾಡಲು ಅವಕಾಶ ನೀಡಿದರೆ ದೇವಾಲಯದ ಪಾವಿತ್ರ್ಯ ಧಕ್ಕೆ ಬರುತ್ತದೆ. ಇದೇ ಕಾರಣಕ್ಕೆ ಹಿಂದಿನಿಂದಲೂ ಪ್ರವೇಶ ನಿಷೇಧಿಸಲಾಗಿತ್ತು. ಜನರ ನಂಬಿಕೆಯನ್ನು ಲೆಕ್ಕಿಸದೇ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಸುಪ್ರೀ ಕೋರ್ಟ್ ತೀರ್ಪು ಸಿಕ್ಕಿದೆ ಅಂತಾ ಮಹಿಳೆಯರು ದೇವಾಲಯಕ್ಕೆ ಬಂದರೆ ಕತ್ತರಿಸಿ ಹಾಕಲಾಗುತ್ತದೆ ಎಂದು ಕೊಲ್ಲಂ ತುಳಸಿ ಎಚ್ಚರಿಕೆ ನೀಡಿದ್ದಾರೆ.

    `ಸುಪ್ರೀಂ’ ಹೇಳಿದ್ದೇನು?
    ಶಬರಿಮಲೆ, ಮಹಿಳೆಯರ ಧಾರ್ಮಿಕ ಹಕ್ಕನ್ನು ಕಸಿದುಕೊಂಡಿದ್ದು, ಭಕ್ತಿಯನ್ನು ಲಿಂಗದ ಆಧಾರದಲ್ಲಿ ವಿವರಿಸಲು ಸಾಧ್ಯವಿಲ್ಲ. ಧಾರ್ಮಿಕ ಹಕ್ಕಿಗೂ- ದೈಹಿಕ ಸ್ಥಿತಿಗತಿಗೂ ಸಂಬಂಧವೇ ಇಲ್ಲ. ಅಯ್ಯಪ್ಪನ ಭಕ್ತರು ಅನ್ಯಧರ್ಮದವರಂತೆ ಪ್ರತ್ಯೇಕ ಸ್ಥಾನಮಾನ ಹೊಂದಿಲ್ಲ. ಒಂದೆಡೆ ಮಹಿಳೆಯರನ್ನು ದೇವರಂತೆ ಪೂಜಿಸುತ್ತೇವೆ. ಮತ್ತೊಂದೆಡೆ ನಿಷೇಧ ಹೇರಲಾಗಿದೆ. ಮಹಿಳೆ ದೇವರಿಗೆ ಸಮಾನವಾಗಿದ್ದು ಮಹಿಳೆಯರಿಗೆ ಶಬರಿಮಲೆಗೆ ಬಹಿಷ್ಕಾರ ಸರಿಯಲ್ಲ. ಮಹಿಳೆಯರ ಬಗೆಗಿನ ಇಬ್ಬಗೆ ನೀತಿಯಿಂದ ಆಕೆಯ ಸ್ಥಾನಮಾನಕ್ಕೆ ಧಕ್ಕೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಐದು ವಿವಾದಿತ ಲಿಪ್‍ಲಾಕ್ ಸೀನ್- ಮಗಳನ್ನೇ ಕಿಸ್ ಮಾಡಿ ಸುದ್ದಿಯಾಗಿದ್ದ ಖ್ಯಾತ ನಿರ್ದೇಶಕ

    ಐದು ವಿವಾದಿತ ಲಿಪ್‍ಲಾಕ್ ಸೀನ್- ಮಗಳನ್ನೇ ಕಿಸ್ ಮಾಡಿ ಸುದ್ದಿಯಾಗಿದ್ದ ಖ್ಯಾತ ನಿರ್ದೇಶಕ

    ಮುಂಬೈ: ಬಾಲಿವುಡ್ ಚಿತ್ರಗಳಲ್ಲಿ ಲಿಪ್‍ಲಾಕ್ ಸೀನ್‍ನಲ್ಲಿ ಹಲವಾರು ಸೆಲೆಬ್ರಿಟಿಗಳು ವಿವಾದಕ್ಕೆ ಸಿಲುಕಿದ್ದಾರೆ. ಹಲವಾರು ಕಲಾವಿದರು ಕಿಸ್ಸಿಂಗ್ ಸೀನ್‍ನಿಂದ ಸುದ್ದಿ ಆಗಿದ್ದಲ್ಲದೇ ವಿವಾದಕ್ಕೂ ಸಿಲುಕಿದ್ದಾರೆ. ಕಿಸ್ ಮಾಡಿ ವಿವಾದಕ್ಕೆ ಸಿಲುಕಿದ ಬಾಲಿವುಡ್ ತಾರೆಯರ ಬಗ್ಗೆ ಮಾಹಿತಿ;

    1. ದೀಪಿಕಾ ಪಡುಕೋಣೆ- ಸಿದ್ಧಾರ್ಥ್ ಮಲ್ಯ:
    ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ಉದ್ಯಮಿ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ಮಲ್ಯ 2013ರಲ್ಲಿ ಇಬ್ಬರು ಒಬ್ಬರನ್ನೊಬ್ಬರು ಕಿಸ್ ಮಾಡಿದ್ದಕ್ಕೆ ವಿವಾದಕ್ಕೆ ಸಿಲುಕಿದ್ದರು. ಆ ವೇಳೆ ಐಪಿಎಲ್ ನಡೆಯುತ್ತಿದ್ದು, ರಾಯಲ್ ಚಾಲೆಂಜೆರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆಯುತ್ತಿತ್ತು. ದೀಪಿಕಾ ಹಾಗೂ ಸಿದ್ಧಾರ್ಥ್ ಇಬ್ಬರು ಒಟ್ಟಿಗೆ ಮ್ಯಾಚ್ ವೀಕ್ಷಿಸುತ್ತಿದ್ದರು. ಆಗ ಆರ್ ಸಿಬಿ ತಂಡ ಪಂದ್ಯದಲ್ಲಿ ಗೆಲುವು ಕಂಡಿತ್ತು. ಈ ವೇಳೆ ಸಿದ್ಧಾರ್ಥ್ ದೀಪಿಕಾರನ್ನು ಹಿಡಿದು ಕಿಸ್ ಮಾಡಿದ್ದರು.

    2. ಮಹೇಶ್ ಭಟ್- ಪೂಜಾ ಭಟ್:
    ನಿರ್ದೇಶಕ ಹಾಗೂ ನಿರ್ಮಾಪಕರಾದ ಮಹೇಶ್ ಭಟ್ ತಮ್ಮ ಜೀವನದಲ್ಲಿ ಯಾವಾಗಲೂ ವಿವಾದದಲ್ಲೇ ಸಿಲುಕಿದ ವ್ಯಕ್ತಿ. ಮಹೇಶ್ ಭಟ್ ಒಮ್ಮೆ ತಮ್ಮ ಮಗಳು ಪೂಜಾ ಭಟ್ ಜೊತೆ ಲಿಪ್‍ಲಾಕ್ ಮಾಡಿ ವಿವಾದಕ್ಕೆ ಸಿಲುಕಿದ್ದರು. ಸ್ಟಾರ್ ದಷ್ಟ್ ಮ್ಯಾಗಜೀನ್‍ಗಾಗಿ ಮಹೇಶ್ ಹಾಗೂ ಪೂಜಾ ಲಿಪ್ ಲಾಕ್ ಸೀನ್ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋ ಮ್ಯಾಗಜೀನ್ ಕವರ್ ಪೇಜ್‍ನಲ್ಲಿ ಹಾಕಲಾಗಿತ್ತು. ಆಗ ಈ ಫೋಟೋ ಸಾಕಷ್ಟು ವಿವಾದ ಆಗಿತ್ತು. ಫೋಟೋ ಅಲ್ಲದೇ ಮಹೇಶ್ ಅವರ ಹೇಳಿಕೆಯೂ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಪೂಜಾ ನನ್ನ ಮಗಳು ಆಗಿಲ್ಲದಿದ್ದರೆ ನಾನು ಆಕೆಯನ್ನೇ ಮದುವೆಯಾಗುತ್ತಿದ್ದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಾಕಷ್ಟು ಜನ ವಿರೋಧ ವ್ಯಕ್ತಪಡಿಸಿದ್ದರು.

    3. ರಾಖಿ ಸಾವಂತ್- ಮೀಕಾ ಸಿಂಗ್:
    2007ರಲ್ಲಿ ರಾಖಿ ಸಾವಂತ್ ಅವರು ಮೀಕಾ ಸಿಂಗ್ ಅವರ ಬರ್ತ್ ಡೇ ಪಾರ್ಟಿಗೆ ಹೋಗಿದ್ದರು. ಈ ವೇಳೆ ಮೀಕಾ, ರಾಖಿ ಸಾವಂತ್‍ನನ್ನು ಬಲವಂತವಾಗಿ ಎಳೆದು ಕಿಸ್ ಮಾಡಿದ್ದಾರೆ. ಈ ಕಿಸ್ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಅಲ್ಲದೇ ರಾಖಿ ಸಾವಂತ್, ಮೀಕಾ ಅವರ ಮೇಲೆ ರೊಚ್ಚಿಗೆದಿದ್ದರು. ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟೀಲೆರಿತ್ತು.

    4. ಬಿಪಾಶಾ ಬಸು- ಕ್ರಿಸ್ಟಿಯಾನೋ ರೋನಲ್ಡೋ:
    ಫುಟ್ ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಲ್ಡೋ ಅವರು ಬಾಲಿವುಡ್ ಬೆಡಗಿ ಬಿಪಾಶಾ ಬಸುಗೆ ಸಾರ್ವಜನಿಕವಾಗಿ ಕಿಸ್ ಮಾಡಿದ್ದರು. ಭಾರತೀಯ ಮಾಧ್ಯಮಗಳಲ್ಲೂ ಈ ವಿವಾದ ಸಾಕಷ್ಟು ಸದ್ದು ಮಾಡಿತ್ತು. ಕ್ರಿಸ್ಟಿಯಾನೋ ಹಾಗೂ ಬಿಪಾಶಾ ಅವರ ಕಿಸ್ ವಿವಾದದ ಕಾರಣದಿಂದಾಗಿ ಜಾನ್ ಅಬ್ರಹಾಂ ನಟಿ ಬಿಪಾಶಾ ಜೊತೆ ಬ್ರೇಕಪ್ ಮಾಡಿಕೊಂಡಿದ್ದರು.

    5. ಲೀನಾ ಚಂದ್ರವರ್ಕರ್ – ರಾಮ್ ಜೇಟ್ಮಲಾನಿ: 2015ರಲ್ಲಿ ದೇಶದ ಖ್ಯಾತ ವಕೀಲ ರಾಮ್ ಜೇಟ್ಮಲಾನಿ ಅವರು ಒಂದು ಅವಾರ್ಡ್ ಕಾರ್ಯಕ್ರಮದಲ್ಲಿ ಎಲ್ಲರ ಸಮ್ಮುಖದಲ್ಲಿ ಖ್ಯಾತ ನಟಿ ಲೀನಾ ಅವರಿಗೆ ಸಖತ್ ಜೋಶ್‍ಯಿಂದ ಕಿಸ್ ಮಾಡಿದ್ದರು. ಈ ಕಿಸ್ ಕೂಡ ಸಾಕಷ್ಟು ವಿವಾದ ಸೃಷ್ಟಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಿಮ್ ಟ್ರೈನರ್ ಕಿಡ್ನಾಪ್, ಹಲ್ಲೆ ಕೇಸ್ – ವಿಜಿ ವಿಚಾರಣೆ ಡಿ.12ಕ್ಕೆ ಮುಂದೂಡಿಕೆ

    ಜಿಮ್ ಟ್ರೈನರ್ ಕಿಡ್ನಾಪ್, ಹಲ್ಲೆ ಕೇಸ್ – ವಿಜಿ ವಿಚಾರಣೆ ಡಿ.12ಕ್ಕೆ ಮುಂದೂಡಿಕೆ

    ಬೆಂಗಳೂರು: ನಟ ದುನಿಯಾ ವಿಜಿ ಮೇಲೆ ದಾಖಲಾಗಿರುವ ಹಲ್ಲೆ ಪ್ರಕರಣದ ವಿಚಾರಣೆ ಡಿಸೆಂಬರ್ 12ಕ್ಕೆ ಮುಂದೂಡಿಕೆಯಾಗಿದೆ.

    ಜಿಮ್ ಟ್ರೈನರ್ ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಿ ಇಂದು 8 ನೇ ಎಸಿಎಂಎಂ ಕೋರ್ಟ್ ಗೆ ಹಾಜರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಜಿಗೆ ಷರತ್ತುಬದ್ಧ ಜಾಮೀನು ದೊರೆತಿದ್ದು, ಜಾಮೀನಿನ ನಂತರದ ಮೊದಲ ವಿಚಾರಣೆ ಇಂದು ನಡೆದಿತ್ತು. ಹೀಗಾಗಿ ವಿಜಿ ಇಂದು ನ್ಯಾ.ಮಹೇಶ್ ಬಾಬು ಮುಂದೆ ಹಾಜರಾಗಿದ್ದರು.

    ಖುದ್ದು ಹಾಜರಿಗೆ ಸೂಚನೆ ಇಲ್ಲದಿದ್ದರೂ ಕೋರ್ಟ್ ಗೆ ಹಾಜರಾಗಿದ್ದು, ವಿಜಿ ಪರ ವಕೀಲರು ಚಾರ್ಜ್ ಶೀಟ್ ಹಾಕುವವರೆಗೂ ಕೋರ್ಟ್ ಗೆ ಖುದ್ದು ಹಾಜರಾತಿಗೆ ವಿನಾಯಿತಿ ಕೇಳಿದ್ದಾರೆ. ಆದ್ರೆ ನ್ಯಾ. ಮಹೇಶ್ ಬಾಬು ಅವರು ವಕೀಲರ ಮನವಿಯನ್ನು ತಿರಸ್ಕರಿಸಿದ್ದಾರೆ. ಅಲ್ಲದೇ ಡಿಸೆಂಬರ್ 12 ಕ್ಕೆ ಅರ್ಜಿ ವಿಚಾರಣೆ ಮುಂದೂಡಿ, ಮುಂದಿನ ವಿಚಾರಣೆ ವೇಳೆ ಹಾಜರಾಗಲು ಸೂಚನೆ ನೀಡಿದ್ದಾರೆ.

    ಕಾನೂನಿನ ಮೇಲೆ ತಮಗಿರುವ ಗೌರವ ವ್ಯಕ್ತಪಡಿಸಲು ವಿಜಿ ಇಂದು ಕೋರ್ಟ್ ಮುಂದೆ ಹಾಜರಾಗಿದ್ದರು. ದುನಿಯಾ ವಿಜಿ ಜೊತೆ ಇತರೆ ಮೂವರು ಆರೋಪಿಗಳು ಕೂಡ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಕೋರ್ಟ್ ನಿಂದ ಹೊರಬರುತ್ತಿದ್ದಂತೆಯೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ವಿಜಿ ನಿರಾಕರಿಸಿದರು.

    ಏನಿದು ಪ್ರಕರಣ?
    ಸೆಪ್ಟೆಂಬರ್ 22ರ ಶನಿವಾರ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತಿತ್ತು. ಈ ಕಾಂಪಿಟೇಷನ್ ನೋಡಲು ದುನಿಯಾ ವಿಜಿ ಮತ್ತು ತಂಡ ಬಂದಿತ್ತು. ಈ ವೇಳೆ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿದೆ. ಆದರೆ ಗಲಾಟೆ ವಿಕೋಪಕ್ಕೆ ತಿರುಗಿ ದುನಿಯಾ ವಿಜಯ್ ಗ್ಯಾಂಗ್, ಮಾರುತಿಗೌಡನ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಹಾಕಿಕೊಂಡು ಕಿಡ್ನಾಪ್ ಮಾಡಿದ್ದರು. ದುನಿಯಾ ವಿಜಿ, ಮಣಿ ಮತ್ತು ಪ್ರಸಾದ್ ಸಹಚರರಿಂದ ಈ ಕೃತ್ಯ ನಡೆದಿದೆ ಆರೋಪ ಕೇಳಿ ಬಂದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಧರ್ಮಸ್ಥಳಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿ

    ಧರ್ಮಸ್ಥಳಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿ

    ಮಂಗಳೂರು: ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ 20ನೇ ವರ್ಷದ ಭಜನಾ ಕಮ್ಮಟದ ಸಮಾರೋಪದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಾಲ್ಗೊಂಡಿದ್ದಾರೆ.

    ಏಳು ದಿನಗಳ ಕಾರ್ಯಕ್ರಮದಲ್ಲಿ 300 ಭಜನಾ ತಂಡಗಳು ಭಾಗವಹಿಸಿದ್ದವು. ಸಮಾರೋಪದ ಅಂಗವಾಗಿ ಭಜನಾ ತಂಡಗಳ 3 ಸಾವಿರಕ್ಕೂ ಹೆಚ್ಚು ಭಜನಾ ಪಟುಗಳಿಂದ ಭಜನೆಯೊಂದಿಗೆ ನಡೆದ ಶೋಭಾಯಾತ್ರೆ ಅಮೋಘವಾಗಿತ್ತು.

    ಈ ಕಾರ್ಯಕ್ರಮದಲ್ಲಿ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮುಖ್ಯ ಆಕರ್ಷಣೆಯಾಗಿದ್ದರು. ಭಜನಾ ತಂಡಗಳ ಜೊತೆ ಪುನೀತ್ ರಾಜ್‍ಕುಮಾರ್, ರಾಘವೇಂದ್ರ ಸ್ವಾಮಿಗಳ ಕೀರ್ತನೆಯನ್ನು ಹಾಡಿದರು. ಅಲ್ಲದೇ ಪುನೀತ್ ತಮ್ಮ ತಂದೆ ರಾಜಕುಮಾರ್ ಜೊತೆ ಧರ್ಮಸ್ಥಳಕ್ಕೆ ಬಂದ ನೆನಪುಗಳನ್ನು ಹಂಚಿಕೊಂಡರು.

    ಧರ್ಮಸ್ಥಳದ ನನ್ನ ಹಾಗೂ ನನ್ನ ತಂದೆಯ ನಂಟು, ನೆನೆಪು ಸಾಕಷ್ಟು ಇದೆ. ಇಲ್ಲಿ ಚಿತ್ರೀಕರಣ ಮಾಡುವಾಗ ನನ್ನ ತಂದೆ ಜೊತೆ ಬಂದ ನೆನೆಪಿದೆ ಹಾಗೂ ಮಂಜುನಾಥನ ಆಶೀರ್ವಾದ ಪಡೆಯೋಕೆ ಪ್ರತಿ ಎರಡು ವರ್ಷಕ್ಕೊಮ್ಮೆ ಬರುತ್ತೇನೆ. ಆದರೆ ಸಾಂಸ್ಕೃತಿಕ, ಭಜನಾ ಕಾರ್ಯಕ್ರಮಕ್ಕೆ ಬಂದಿದ್ದು ಇದೇ ಮೊದಲ ಬಾರಿ ಬಂದಿದ್ದು ಎಂದು ಹೇಳಿದರು.

    ಅಷ್ಟೇ ಅಲ್ಲದೇ ಪುನೀತ್ ರಾಜ್‍ಕುಮಾರ್ ಧರ್ಮಸ್ಥಳ ಹಾಗೂ ಧರ್ಮಧಿಕಾರಿ ವೀರೇಂದ್ರ ಹೆಗ್ಡೆ ಬಗ್ಗೆ ಮಾತನಾಡಿದರು. ಅಲ್ಲದೇ ಕಾರ್ಯಕ್ರಮದಲ್ಲಿ ಪುನೀತ್ ತಮ್ಮ ತಂದೆ ಅವರ ಚಿತ್ರದ ‘ಹಾಲಲ್ಲಾದರು ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ..’ ಹಾಡನ್ನು ಕಾರ್ಯಕ್ರಮದಲ್ಲಿ ಹಾಡಿದರು. ಪುನೀತ್ ಹಾಡಿಗೆ ನೆರೆದಿದ್ದರವರು ಕೂಡ ದನಿಗೂಡಿಸಿರುವುದು ವಿಶೇಷವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv