Tag: actor

  • ರಮ್ಯಾಗೆ ನಟ ಜಗ್ಗೇಶ್‍ರಿಂದ ಸಖತ್ ಕ್ಲಾಸ್

    ರಮ್ಯಾಗೆ ನಟ ಜಗ್ಗೇಶ್‍ರಿಂದ ಸಖತ್ ಕ್ಲಾಸ್

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅಂತ್ಯಸಂಸ್ಕಾರಕ್ಕೆ ಬಾರದ ನಟಿ, ಮಾಜಿ ಸಂಸದೆ ರಮ್ಯಾ ಅವರಿಗೆ ನವರಸನಾಯಕ ಜಗ್ಗೇಶ್ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ.

    ಟ್ವಿಟ್ಟರಿನಲ್ಲಿ ಅಭಿಮಾನಿಯೊಬ್ಬರು, “ಕಡೆಯಾಗ ನೋಡಿದೋಳೋನಾ ಕಡೆಗಣಿಸೋದೆ ತಕ್ಕ ಉತ್ತರ. ಹತ್ತಿದ ಏಣಿನಾ ಮರೆಯೋ ಇಂಥೋರನ್ನಾ ನೆನಿಲುಬಾರದು” ಡ್ರಾಮಾ ಕ್ವೀನ್ ಎಂದು ಹ್ಯಾಶ್‍ಟ್ಯಾಗ್ ಬಳಸಿ ಜಗ್ಗೇಶ್ ಅವರಿಗೆ ಟ್ಯಾಗ್ ಮಾಡಿದ್ದರು.

    ಅಭಿಮಾನಿಯ ಟ್ವೀಟ್‍ಗೆ ಜಗ್ಗೇಶ್ ಪ್ರತಿಕ್ರಿಯಿಸಿ, “ಸಾವಿನಲ್ಲಿ ಗೌರವಿಸದವರು ಮನುರೂಪದ ರಾಕ್ಷಸ ಗುಣದವರು. ಕ್ರೂರತ್ವದ ಮಗ್ಗಲು ಪ್ರಕಟಿಸಿದ ಮಹನೀಯರು. ದೇವನೊಬ್ಬ ಇರುವ ಅವ ಎಲ್ಲ ನೋಡುತಿರುವ ದೋಸೆ ಮೊಗಚಿ ತಳಸೀಯುತ್ತದೆ ತಪ್ಪದೆ ಒಂದು ದಿನ. ಯತಃ ಮನಃ ತಥಃ ಜೀವನ ಎಂದು ಜಗ್ಗೇಶ್ ರೀ-ಟ್ವೀಟ್ ಮಾಡಿದ್ದಾರೆ.

    ಜಗ್ಗೇಶ್ ಅವರ ಟ್ವೀಟ್‍ಗೆ ಅಭಿಮಾನಿಗಳು ರೀ-ಟ್ವೀಟ್ ಮಾಡಿ, “7,500 ಕಿಲೋಮೀಟರ್ ನಿಂದ ದರ್ಶನ್ ಅವರು ತನ್ನ ತಂದೆ ಸಮಾನ ಅಂಬಿ ಅವರ ದರ್ಶನಕ್ಕೆ ಬಂದಿದ್ದಾರೆ. ಭಾರತೀಯ ಚಿತ್ರರಂಗ, ರಾಜಕೀಯ ಕ್ಷೇತ್ರ, ಕೋಟ್ಯಂತರ ಅಭಿಮಾನಿಗಳು ಅಂಬಿ ಅಣ್ಣನ ಸಾವಿಗೆ ಕಂಬನಿ ಮಿಡಿದಿದೆ. ಶ್ರೇಷ್ಠ ವ್ಯಕ್ತಿಯ ಅಂತಿಮ ದರ್ಶನ ಸಿಗುವುದಕ್ಕೂ ಯೋಗ್ಯತೆ ಬೇಕು. ಅಂತಹದರಲ್ಲಿ ಈ ರಮ್ಯಾಗೆ ಎಲ್ಲಿದೆ ಯೋಗ್ಯತೆ” ಎಂದು ರೀ-ಟ್ವೀಟ್ ಮಾಡಿದ್ದಾರೆ.

    ಮತ್ತೆ ಕೆಲವರು ನಮ್ ಮಂಡ್ಯ ರೈತರ ಪಾದದ ಧೂಳಿಗ್ ಸಮ ಇಲ್ಲದೇ ಹೋಗಿರೋರು ಬಂದರೆಷ್ಟು ಬಿಟ್ಟರೆಷ್ಟು. ನಮ್ಮ ಮಂಡ್ಯ ಮಣ್ಣಿನ ತಿಲಕ ಅಣ್ಣನ್ ಹಣೆಗೆ ಇಟ್ಟಾಗೇ ಅಣ್ಣನ್ ಆತ್ಮಕ್ಕೆ ಶಾಂತಿ ಸಿಕ್ಕಾಯ್ತು ಎಂದು ಟ್ವೀಟ್ ಮಾಡಿ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಯಾರನ್ನು ಬೇಕಾದ್ರೂ ಮದ್ವೆಯಾಗು, ಆದ್ರೆ ನಾನು ಕರೆದಾಗೆಲ್ಲ ಬರ್ಬೇಕು – ನಟನಿಂದ ಯುವತಿಯ ಮೇಲೆ ರೇಪ್

    ಯಾರನ್ನು ಬೇಕಾದ್ರೂ ಮದ್ವೆಯಾಗು, ಆದ್ರೆ ನಾನು ಕರೆದಾಗೆಲ್ಲ ಬರ್ಬೇಕು – ನಟನಿಂದ ಯುವತಿಯ ಮೇಲೆ ರೇಪ್

    ಬೆಂಗಳೂರು: ಸ್ಯಾಂಡಲ್‍ವುಡ್ ಸಿನಿಮಾ ನಟ ಮತ್ತು ಡ್ಯಾನ್ಸ್ ಮಾಸ್ಟರ್ ವಿರುದ್ಧ  ಯುವತಿ ಆತ್ಯಾಚಾರದ ಆರೋಪ  ಮಾಡಿ ದೂರು ದಾಖಲಿಸಿದ್ದಾರೆ.

    ಕರಣ್ ಮಹಾದೇವ್ ಅಲಿಯಾಸ್ ಮಂಜುನಾಥ್ ಎಂಬಾತನ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಈತ ಗೂಳಿಹಟ್ಟಿ ಚಿತ್ರದ ಸಹನಟನಾಗಿದ್ದು, ಡ್ಯಾನ್ಸ್ ಕಲಿಸುತ್ತೇನೆ ಎಂದು ಸ್ನೇಹ ಬೆಳೆಸಿ ಬಳಿಕ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ಕರಣ್ ನನಗೆ ಫೇಸ್‍ಬುಕ್ ಮೂಲಕ ಪರಿಚಯವಾಗಿದ್ದನು. ಬಳಿಕ ಮಾತನಾಡಬೇಕು ಎಂದು ಉಲ್ಲಾಳ ಉಪನಗರಕ್ಕೆ ಕರೆಸಿಕೊಂಡು ನನ್ನ ಮನೆಯ ಮೇಲ್ಗಡೆ ಸ್ಟುಡಿಯೋ ಇಟ್ಟುಗೊಂಡಿದ್ದೇನೆ. ನಿನಗೆ ಸಂಗೀತ ಹೇಳಿಕೊಡುತ್ತೇನೆ ಎಂದು ಹೇಳಿದನು. ಹೀಗಾಗಿ ನಾನು ಪ್ರತಿದಿನ ಸಂಗೀತ ಕಲಿಯಲು ಹೋಗುತ್ತಿದ್ದೆ. ಒಂದು ದಿನ ಸಲುಗೆಯಿಂದ ನನ್ನ ಹತ್ತಿರ ಬಂದು ಅಸಭ್ಯವಾಗಿ ನಡೆದುಕೊಂಡನು. ಆಗ ನಾನು ಈ ರೀತಿ ಮಾಡುವುದು ತಪ್ಪು ಎಂದು ಹೇಳಿದ್ದೆ. ಅದಕ್ಕೆ ನಿನ್ನ ಬಗ್ಗೆ ಅಪಪ್ರಚಾರ ಮಾಡುತ್ತೇನೆ, ನಿನ್ನ ತಂದೆ-ತಾಯಿಯನ್ನು ಬಿಡುವುದಿಲ್ಲ ಎಂದು ಬೆದರಿಸಿ ಅತ್ಯಾಚಾರ ಎಸಗಿದನು. ಬಳಿಕ ನಾನು ಆತನ ಮನೆಗೆ ಹೋಗೋದನ್ನು ನಿಲ್ಲಿಸಿದೆ.

    ಅಷ್ಟೇ ಅಲ್ಲದೇ ಲೈಂಗಿಕ ಸಂಪರ್ಕ ಹೊಂದಿರುವುದನ್ನು ಪೋಷಕರಿಗೆ ಹೇಳುತ್ತೇನೆ ಎಂದು ಬೆದರಿಸಿ ಮತ್ತೆ ಕರೆಸಿಕೊಂಡು ಅತ್ಯಾಚಾರ ಎಸಗಿದನು. ಬಳಿಕ ನನಗೆ ಬೇರೆ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿದ್ದರು. ಈ ಬಗ್ಗೆ ತಿಳಿದ ಕರಣ್, ನೀನು ಯಾರನ್ನೂ ಬೇಕಾದರೂ ಮದುವೆಯಾಗು ಆದರೆ ನಾನು ಕರೆದಾಗೆಲ್ಲಾ ಬಂದು ಲೈಂಗಿಕ ಕ್ರಿಯೆಗೆ ಸಹಕರಿಸಬೇಕು. ಇಲ್ಲವಾದರೆ ನೀನು ಮದುಯಾಗುವ ಹುಡುಗ ಮತ್ತು ಆತನ ಮನೆಯವರಿಗೆ ಹೇಳುತ್ತೇನೆ ಎಂದು ಬೆದರಿಕೆ ಒಡ್ಡುವ ಮೂಲಕ ನನ್ನನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದನು.

    ನಾನು ಗರ್ಭಿಣಿಯಾದೆ, ಬಳಿಕ ಅವನು ಮನೆಯ ಬಳಿ ಇರುವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಾವಿಬ್ಬರು ಗಂಡ-ಹೆಂಡತಿ, ನಮಗೆ ಇಷ್ಟುಬೇಗ ಮಗು ಬೇಡ ಎಂದು ಗರ್ಭಪಾತ ಮಾಡಿಸಿದನು. ಬಳಿಕ ನಾನು ಆತನ ಮನೆಗೆ ಹೋಗೋದನ್ನು ನಿಲ್ಲಿಸಿದೆ. ಈ ವೇಳೆ ನೀನು ಬರದೆ ಇದ್ದರೂ ನಿನ್ನ ಬಾಳನ್ನು ಹಾಳು ಮಾಡುತ್ತೇನೆ ಎಂದು ಹೇಳಿ ನಿಶ್ಚಿತಾರ್ಥವಾಗಿದ್ದ ಹುಡುಗನಿಗೆ ನಾವಿಬ್ಬರೂ ಸಲಿಗೆಯಿಂದ ಇದ್ದ ವಿಡಿಯೋ, ಆಡಿಯೋವನ್ನು ತೋರಿಸಿದ್ದಾನೆ. ಅವರು ನಮ್ಮ ಮನೆ ಬಳಿ ಬಂದು ಗಲಾಟೆ ಮಾಡಿ ಮದುವೆಯನ್ನು ಮುರಿದುಕೊಂಡು ಹೋಗಿದ್ದಾರೆ. ಇದಕ್ಕೆಲ್ಲಾ ಕರಣ್ ಮಹಾದೇವ್ ಕಾರಣನಾಗಿದ್ದು, ಆತನ ವಿರುದ್ಧ ಸೂಕ್ತ ಕ್ರಮಕೊಳ್ಳಬೇಕು ಎಂದು ದೂರಿನಲ್ಲಿ ಯುವತಿ ಉಲ್ಲೇಖಿಸಿದ್ದಾರೆ.

    ಈ ಕುರಿತು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಂತವಾಗಿ ನೆರವೇರಿತು ಅಂಬಿ ಅಂತ್ಯಕ್ರಿಯೆ- ರಿಯಲ್ ಹೀರೋ ಆದ್ರು ಎಚ್‍ಡಿಕೆ

    ಶಾಂತವಾಗಿ ನೆರವೇರಿತು ಅಂಬಿ ಅಂತ್ಯಕ್ರಿಯೆ- ರಿಯಲ್ ಹೀರೋ ಆದ್ರು ಎಚ್‍ಡಿಕೆ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತ್ಯಕ್ರಿಯೆಯನ್ನು ಶಾಂತವಾಗಿ ಯಾವುದೇ ಹಿಂಸಾಚಾರಕ್ಕೆ ಆಸ್ಪದ ಇಲ್ಲದಂತೆ ಮುಗಿಸಿದ ಶ್ರೇಯಸ್ಸು ಸರ್ಕಾರಕ್ಕೆ ಸಂದಿದೆ. ಅದರಲ್ಲೂ ಕುಮಾರಸ್ವಾಮಿ ಅವರ ಮುತುವರ್ಜಿಯಿಂದಾಗಿ ಈ ಘನಕಾರ್ಯ ನಡೆದಿದೆ. ಈ ಮೂಲಕ ಮುಖ್ಯಮಂತ್ರಿಯವರು ರಿಯಲ್ ಹೀರೋ ಆಗಿದ್ದಾರೆ.

    ಡಾ. ರಾಜಕುಮಾರ್ ನಿಧನದ ವೇಳೆ ನಡೆದಿದ್ದ ಘಟನೆಗಳಿಂದ ಪಾಠ ಕಲಿತಿದ್ದ ಕುಮಾರಸ್ವಾಮಿ ಅವರು ಅಂಬಿ ಅವರ ಎಲ್ಲಾ ವಿಧಿವಿಧಾನಗಳನ್ನು ಶಾಂತಿಭಂಗವಾಗದಂತೆ ಸಮರ್ಥವಾಗಿ, ದಕ್ಷವಾಗಿ ನಿಭಾಯಿಸಿದ್ದಾರೆ.

    ಸಿಎಂ ರಿಯಲ್ ಹೀರೋ ಅನಿಸಿದ್ದು ಹೇಗೆ?:
    ನಟ ಅಂಬರೀಶ್ ಅವರ ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆಯೇ ಕುಮಾರಸ್ವಾಮಿಯವರು ತಕ್ಷಣವೇ ಆಸ್ಪತ್ರೆಯತ್ತ ದೌಡಾಯಿಸಿದ್ದರು. ಅಲ್ಲದೇ ಆಸ್ಪತ್ರೆಯ ಮುಂದೆ ಅದಾಗಲೇ ನೆರೆದಿದ್ದ ಅಭಿಮಾನಿಗಳಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದರು.

    ಅಂಬಿ ಪಾರ್ಥಿವ ಶರೀರ ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡುವುದಾಗಿ ಘೋಷಣೆ ಮಾಡಿದ್ದರು. ಮರುದಿನ ಅಂದರೆ ಭಾನುವಾರ ಮಂಡ್ಯದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ರು. ಅಲ್ಲದೇ ಈ ಕುರಿತಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ಮಾತುಕತೆ ನಡೆಸಿ, ಸೇನಾ ಹೆಲಿಕಾಪ್ಟರ್ ನೀಡುವಂತೆ ರಕ್ಷಣಾ ಸಚಿವೆಯಲ್ಲಿ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸೇನಾ ಹೆಲಿಕಾಪ್ಟರ್ ಮೂಲಕ ಅಂಬಿ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಶಿಫ್ಟ್ ಮಾಡುವಲ್ಲಿ ಯಶಸ್ವಿಯಾದ್ರು.

    ಇಷ್ಟು ಮಾತ್ರವಲ್ಲದೇ ಅಂಬಿ ಪಾರ್ಥಿವ ಶರೀರದ ಜೊತೆ ಸೇನಾ ಹೆಲಿಕಾಪ್ಟರ್‍ನಲ್ಲಿ ಸಿಎಂ ಕೂಡ ತೆರಳಿದ್ದರು. ಅಲ್ಲಿಯೂ ಖುದ್ದು ನಿಂತು ವ್ಯವಸ್ಥೆ ಪರಿಶೀಲನೆ ನಡೆಸಿದ್ದರು. ಸಚಿವ ಪುಟ್ಟರಾಜು ಸೇರಿದಂತೆ ಹಲವರ ಉಸ್ತುವಾರಿಯ ಮುಖಾಂತರ ಮಂಡ್ಯದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು.

    ಅಲ್ಲಿಂದ ಮತ್ತೆ ಅಂಬಿ ಪಾರ್ಥಿವ ಶರೀರವನ್ನು ಸೇನಾ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಕರೆತಂದಿದ್ದು, ಬಳಿಕ ಕಂಠೀರವ ಸ್ಟೇಡಿಯಂನಿಂದ ಸ್ಟುಡಿಯೋವರೆಗೆ ಅಂತಿಮ ಯಾನ ನಡೆಸಲಾಯಿತು. ಈ ವೇಳೆಯೂ ಕುಮಾರಸ್ವಾಮಿಯವರು ಅಂಬಿ ಪಾರ್ಥಿವ ಶರೀರದೊಂದಿಗೆ ಸಾಗಿದ್ದರು.

    ಬಳಿಕ ಖುದ್ದು ಸಿಎಂ ಕುಮಾರಸ್ವಾಮಿಯೇ ಮುತುವರ್ಜಿ ವಹಿಸಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಒಟ್ಟಿನಲ್ಲಿ ಶಾಂತವಾಗಿ ಯಾವುದೇ ಹಿಂಸಾಚಾರಕ್ಕೆ ಆಸ್ಪದ ಇಲ್ಲದಂತೆ ಅಂಬರೀಶ್ ಅಂತ್ಯಸಂಸ್ಕಾರವನ್ನು ಅಚ್ಚುಕಟ್ಟಾಗಿ ನೆರವೇರಿಸಿದ ಹೆಗ್ಗಳಿಕೆ ಸಿಎಂ ಕುಮಾರಸ್ವಾಮಿ ಪಾತ್ರರಾಗಿದ್ದಾರೆ.

    https://www.youtube.com/watch?v=107Y6xA1jyg

    https://www.youtube.com/watch?v=7x6fhqCn8pU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಪರೇಷನ್ ಬಿಟ್ರೆ ಯಾವುದೇ ಚಿಕಿತ್ಸೆ ಇಲ್ಲ- ರಮ್ಯಾ ಕಾಯಿಲೆ ಬಗ್ಗೆ ಮೂಳೆ ತಜ್ಞರ ಸ್ಪಷ್ಟನೆ

    ಆಪರೇಷನ್ ಬಿಟ್ರೆ ಯಾವುದೇ ಚಿಕಿತ್ಸೆ ಇಲ್ಲ- ರಮ್ಯಾ ಕಾಯಿಲೆ ಬಗ್ಗೆ ಮೂಳೆ ತಜ್ಞರ ಸ್ಪಷ್ಟನೆ

    ಮಂಡ್ಯ: ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಆಸ್ಟಿಯೋಕ್ಲ್ಯಾಟೋಮಾ (Osteoclastoma) ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ಅಂಬರೀಶ್ ಅವರ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿಲ್ಲ.

    ಈ ಕಾಯಿಲೆ ಬಗ್ಗೆ ಮೂಳೆ ತಜ್ಞ ಡಾ.ಜಗನ್ನಾಥ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಆಸ್ಟಿಯೋಕ್ಲ್ಯಾಟೋಮಾ ಎಂಬ ಕಾಯಿಲೆ ಪ್ರಮುಖವಾಗಿ ಮೂಳೆಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಇದನ್ನು ಮೂಳೆ ಕ್ಯಾನ್ಸರ್ ಎಂದು ಹೇಳಲಾಗುತ್ತದೆ ಎಂದು ತಿಳಿಸಿದ್ದಾರೆ.

    ಇದು ಅಪರೂಪದ ಕಾಯಿಲೆಯಾಗಿದ್ದು, ಪುರುಷ ಮತ್ತು ಮಹಿಳೆ ಇಬ್ಬರಲ್ಲೂ ಸಮಾನಾಗಿ ಕಾಣಿಸಿಕೊಳ್ಳುತ್ತದೆ. ಇದು 2-3 ಸಾವಿರ ಮಂದಿಯಲ್ಲಿ ಒಬ್ಬರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಯನ್ನು ಮೂಳೆಯಲ್ಲಿ ಬದಲಾವಣೆ ಕಂಡುಬಂದ ನಂತರ ತಿಳಿಯಬಹುದಾಗದೆ. ಆಸ್ಟಿಯೋಕ್ಲ್ಯಾಟೋಮಾ ಕಾಯಿಲೆ ಮೊದಲನೇ ಹಂತದಲ್ಲಿ ಇದ್ದಾಗಲೇ ಚಿಕಿತ್ಸೆ ಪಡೆಯಬೇಕು ಇಲ್ಲವಾದರೆ ಮೂಳೆಯನ್ನು ತಿನ್ನುತ್ತಾ ಹೋಗುತ್ತದೆ ಎಂದು ಅವರು ವಿವರಿಸಿದ್ದಾರೆ.

    ಆಸ್ಟಿಯೋಕ್ಲ್ಯಾಟೋಮಾ ಕಾಯಿಲೆ ಬಂದರೆ, ಮೂಳೆಗಳಲ್ಲಿ ತುಂಬಾ ನೋವು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಮುಖ್ಯವಾಗಿ ಜಾಯಿಂಟ್‍ಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆ ಬಂದರೆ ಓಡಾಡೋಕೆ ಆಗಲ್ಲ. ಅಲ್ಲದೇ ಕಾಯಿಲೆ ಕಾಣಿಸಿಕೊಂಡ ಜಾಗವನ್ನು ಅಲುಗಾಡಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಆ ಜಾಗದಲ್ಲಿ ತುಂಬಾ ನೋವಾಗುತ್ತದೆ. ಒಂದು ವೇಳೆ ಈ ಕಾಯಿಲೆ ಬಂದರೆ ಅದಕ್ಕೆ ಚಿಕಿತ್ಸೆ ಎಂದರೆ ಆಪರೇಷನ್ ಮಾತ್ರ. ಆಪರೇಷನ್ ಬಿಟ್ಟು ಬೇರೆ ಯಾವುದೇ ಚಿಕಿತ್ಸೆ ಇಲ್ಲ. ಆಪರೇಷನ್ ಮಾಡಿದ ತಕ್ಷಣ ಸಂಪೂರ್ಣ ಬೆಡ್ ರೆಸ್ಟ್ ಮಾಡಬೇಕು ಎಂದು ಡಾ.ಜಗನ್ನಾಥ್ ಹೇಳಿದ್ದಾರೆ.

    https://www.instagram.com/p/BpH55YWjMcE/?utm_source=ig_embed

    ಆಸ್ಟಿಯೋಕ್ಲ್ಯಾಟೋಮಾ ಎನ್ನುವುದು ಮೂಳೆಗಳಿಗೆ ಸಂಬಂಧಿಸಿದ ರೋಗವಾಗಿದ್ದು, ರಮ್ಯಾ ಅವರ ಕಾಲಿನ ಎಲುಬುಗಳ ನಡುವೆ ಉಂಟಾಗಿರುವ ಸಮಸ್ಯೆ ಇದಾಗಿದೆ. ಕೊಂಚ ನಿರ್ಲಕ್ಷ್ಯ ವಹಿಸಿದ್ರು ಮಾರಕ ಕಾಯಿಲೆ ಕ್ಯಾನ್ಸರ್‍ಗೆ ತುತ್ತಾಗುತ್ತಿದ್ದರಂತೆ. ಹೀಗಾಗಿ ಅವರು ಚಿಕಿತ್ಸೆ ಪಡೆದು ಅಕ್ಟೊಬರ್‍ನಿಂದ ವಿಶ್ರಾಂತಿ ಪಡೆಯುತ್ತಿದ್ದಾರಂತೆ. ಈ ಕುರಿತು ಸ್ವತಃ ರಮ್ಯಾ ಅವರೇ ತಮ್ಮ ಇನ್ ಸ್ಟಾಗ್ರಾಂನಲ್ಲಿ ಕಾಲಿನ ಚಿತ್ರ ಹಾಕಿ ಬರೆದುಕೊಂಡಿದ್ದಾರೆ.

    ದೇಹದಲ್ಲಿ ಸಮಸ್ಯೆಗಳಾದರೆ ವ್ಯತಾಸ ಕಂಡು ಬಂದರೆ ಡಾಕ್ಟರ್ ಸಂಪರ್ಕಿಸಿ. ನಿರ್ಲಕ್ಷ್ಯ ಮಾಡಿದರೆ ಸೂಕ್ತ ಬೆಲೆ ತೆರಬೇಕಾಗತ್ತದೆ. ನಿರ್ಲಕ್ಷ್ಯ ಮಾಡಿ ನಾನು ಈಗ ಪಾಠ ಕಲಿತಿದ್ದೇನೆ ಅಂತ ಕಾಲಿನ ಚಿತ್ರ ಹಾಕಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಒಟ್ಟಿನಲ್ಲಿ ನಟ ಅಂಬರೀಶ್ ಅಂತಿಮ ದರ್ಶನಕ್ಕೆ ಬಾರದ ಮಾಜಿ ಸಂಸದೆ ರಮ್ಯಾ ವಿರುದ್ಧ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆದ್ರೆ ರಮ್ಯಾ ಅವರು ಅಂಬಿ ನೋಡಲು ಯಾಕೆ ಬರಲಿಲ್ಲ ಅನ್ನೋ ಅಸಲಿ ಕಾರಣ ಇದೀಗ ತಿಳಿದುಬಂದಿದೆ.

    https://www.youtube.com/watch?v=pMVHrrxwSzo

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬಿ ಅಂತಿಮ ದರ್ಶನಕ್ಕೆ ಬಾರದ ರಮ್ಯಾ ಅಸಲಿ ಕಾರಣ ಇಲ್ಲಿದೆ

    ಅಂಬಿ ಅಂತಿಮ ದರ್ಶನಕ್ಕೆ ಬಾರದ ರಮ್ಯಾ ಅಸಲಿ ಕಾರಣ ಇಲ್ಲಿದೆ

    ಮಂಡ್ಯ: ನಟ ಅಂಬರೀಶ್ ಅಂತಿಮ ದರ್ಶನಕ್ಕೆ ಬಾರದ ಮಾಜಿ ಸಂಸದೆ ರಮ್ಯಾ ವೀರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆದ್ರೆ ರಮ್ಯಾ ಗೈರಾಗಲು ಅಸಲಿ ಕಾರಣವೊಂದು ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ರಮ್ಯಾ ಅವರು ಆಸ್ಟಿಯೋಕ್ಲ್ಯಾಟೋಮಾ(Osteoclastoma) ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆಸ್ಟಿಯೋಕ್ಲ್ಯಾಟೋಮಾ ಎನ್ನುವುದು ಮೂಳೆಗಳಿಗೆ ಸಂಬಂಧಿಸಿದ ರೋಗವಾಗಿದೆ. ರಮ್ಯಾ ಅವರ ಕಾಲಿನ ಎಲುಬುಗಳ ನಡುವೆ ಉಂಟಾಗಿರುವ ಸಮಸ್ಯೆ ಇದಾಗಿದ್ದು, ಕೊಂಚ ನಿರ್ಲಕ್ಷ್ಯ ವಹಿಸಿದ್ರು ಮಾರಕ ಕಾಯಿಲೆ ಕ್ಯಾನ್ಸರ್ ಗೆ ತುತ್ತಾಗುತ್ತಿದ್ರಂತೆ. ಹೀಗಾಗಿ ಅವರು ಚಿಕಿತ್ಸೆ ಪಡೆದು ಅಕ್ಟೊಬರ್ ನಿಂದ ವಿಶ್ರಾಂತಿ ಪಡೆಯುತ್ತಿದ್ದಾರಂತೆ. ಈ ಕುರಿತು ಸ್ವತಃ ರಮ್ಯಾ ಅವರೇ ತಮ್ಮ ಇನ್ ಸ್ಟಾಗ್ರಾಂನಲ್ಲಿ ಕಾಲಿನ ಚಿತ್ರ ಹಾಕಿ ಬರೆದುಕೊಂಡಿದ್ದಾರೆ.

    https://www.instagram.com/p/BpH55YWjMcE/

    ದೇಹದಲ್ಲಿ ಸಮಸ್ಯೆಗಳಾದ್ರೆ ವ್ಯತಾಸ ಕಂಡು ಬಂದ್ರೆ ಡಾಕ್ಟರ್ ಸಂಪರ್ಕಿಸಿ. ನಿರ್ಲಕ್ಷ್ಯ ಮಾಡಿದರೆ ಸೂಕ್ತ ಬೆಲೆ ತೆರಬೇಕಾಗುತ್ತೆ. ನಿರ್ಲಕ್ಷ್ಯ ಮಾಡಿ ನಾನು ಈಗ ಪಾಠ ಕಲಿತಿದ್ದೇನೆ ಅಂತ ಕಾಲಿನ ಚಿತ್ರ ಹಾಕಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಆಸ್ಟಿಯೋಕ್ಲ್ಯಾಟೋಮಾ ಎಂಬುದು ಒಂದು ಅಪರೂಪದ ಕಾಯಿಲೆಯಾಗಿದ್ದು, ಇದೀಗ ಮಾಜಿ ಸಂಸದೆ ಈ ರೋಗಕ್ಕೆ ತುತ್ತಾಗಿದ್ದಾರೆ. ಈ ಕಾಯಿಲೆ 10 ಲಕ್ಷ ಮಂದಿಯಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತದೆ.

    ದಿವ್ಯ ಸ್ಪಂದನ ಎಂಬ ಹುಡುಗಿ ಸ್ಯಾಂಡಲ್‍ವುಡ್‍ನಲ್ಲಿ ರಮ್ಯಾ ಆಗಿ ಬೆಳೆಯುವಲ್ಲಿ ಅಂಬಿ ಆಶೀರ್ವಾದವಿತ್ತು. ಅಲ್ಲದೇ ನಟಿಯಾಗಿದ್ದ ರಮ್ಯಾ ಮಂಡ್ಯದಲ್ಲಿ ಗೆದ್ದು ಸಂಸದೆಯಾಗಿದ್ದರು. ಆದರೆ ಅಂಬರೀಶ್ ನಿಧನಕ್ಕೆ ಕೇವಲ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದರು. ಇದರಿಂದ ಸಿಟ್ಟಿಗೆದ್ದ ಅಂಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರಮ್ಯಾಗೆ ಛೀಮಾರಿ ಹಾಕಿದ್ದರು. ಅಲ್ಲದೇ ಮಂಡ್ಯದ ಜನತೆ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

    ಅಮರ್‍ನಾಥ್, ಜಲೀಲ, ಕನ್ವರ್ ಲಾಲ್, ರೆಬೆಲ್ ಸ್ಟಾರ್, ಕಲಿಯುಗ ಕರ್ಣ, ಮಂಡ್ಯದ ಗಂಡು… ಹೀಗೆ ನಾನಾ ಹೆಸರುಗಳಿಂದ ಜನಮಾನಸದಲ್ಲಿ ಅಚ್ಚೊತ್ತಿ ಅಂಬರೀಶ್ ಅಮರರಾಗಿದ್ದಾರೆ. ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ನಡೆಯಿತು. ರಾತ್ರಿ 10 ಗಂಟೆ ಕಳೆದರೂ ಅಂಬಿ ಅಭಿಮಾನಿಗಳು ಸ್ಟುಡಿಯೋಗೆ ಭೇಟಿ ನೀಡುತ್ತಿದ್ದರು. ಕೊನೆಗೆ ಪೊಲೀಸರು ಬ್ಯಾರಿಕೇಡ್‍ಗಳನ್ನು ತೆರೆದು ಅವಕಾಶ ಮಾಡಿಕೊಟ್ಟರು.

    https://www.youtube.com/watch?v=vpV25SEDROE

    https://www.youtube.com/watch?v=ei5fso60PsU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬಿಯನ್ನು ಮದ್ವೆಗೆ ಒಪ್ಪಿಸಿದ್ದು ಹೇಗೆ? ಡಿಕೆ ಶಿವಕುಮಾರ್ ನೆನಪು ಮೆಲುಕು

    ಅಂಬಿಯನ್ನು ಮದ್ವೆಗೆ ಒಪ್ಪಿಸಿದ್ದು ಹೇಗೆ? ಡಿಕೆ ಶಿವಕುಮಾರ್ ನೆನಪು ಮೆಲುಕು

    ಬೆಂಗಳೂರು: ಕಂಠೀರವ ಸ್ಟೇಡಿಯಂನಲ್ಲಿ ನಟ, ಮಾಜಿ ಸಚಿವ ಅಂಬರೀಶ್ ಅವರ ಅಂತಿಮ ದರ್ಶನ ಪಡೆದ ಸಚಿವ ಡಿ.ಕೆ.ಶಿವಕುಮಾರ್ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡರು. ಅಂಬರೀಶ್ ಅವರನ್ನು ಮದುವೆ ಹೇಗೆ ಒಪ್ಪಿಸಲಾಯ್ತು ಎಂಬ ಘಟನೆಯನ್ನು ಮಾಧ್ಯಮಗಳ ಜೊತೆ ಹಂಚಿಕೊಂಡರು.

    ಒಂದು ಸಾರಿ ಎಲ್ಲರು ಮಂಗಳೂರಿಗೆ ಹೋಗುತ್ತಿದ್ದರು. ದಿ.ಮಾಜಿ ಸಚಿವ ಹೆಚ್.ಸಿ.ಶ್ರೀಕಂಠಯ್ಯ ನನ್ನನ್ನು ಕರೆದಿದ್ದರು. ನಾನು ಬಂಗಾರಪ್ಪ ಅವರ ಸಂಪುಟದಲ್ಲಿ ಸಚಿವನಾಗಿದ್ದರಿಂದ ಏನೋ ಒಂದು ಕಾರಣ ಹೇಳಿ ಹೋಗಿದ್ದೆ. ಅಂದು ಸಾಯಂಕಾಲ ನಾನು, ಶ್ರೀಕಂಠಯ್ಯನವರು, ಅಂಬರೀಶ್, ಅಪ್ಪಾಜಿ ನಾಯಕ್, ಶ್ರೀಪತಿರಾಯರು ಸೇರಿದಂತೆ ನಾಲ್ಕೈದು ಜನ ಮಾತನಾಡುತ್ತಾ ಕುಳಿತೆವು.

    ಅಂದು ಮದುವೆ ಆಗ್ತೀನಿ ಅಂತಾ ಹೇಳುತ್ತಾ ಅಂಬರೀಶ್ ದಿನಗಳನ್ನು ಮುಂದೂಡುತ್ತಿದ್ದರು. ಹೀಗಾಗಿ ಶ್ರೀಕಂಠಯ್ಯನವರು ಆ ವೇಳೆ ಅಂಬರೀಶ್ ಮದುವೆ ವಿಚಾರ ಪ್ರಸ್ತಾಪ ಮಾಡಿದರು. ಅಂಬರೀಶ್ ನಿನಗೆ 39 ವಯಸ್ಸು ಆಯ್ತು. ಯಾವಾಗ ಮದುವೆ ಆಗ್ತೀಯಾ ಹೇಳು ನೀನು ಎಂದು ಎತ್ತರದ ಧ್ವನಿಯಲ್ಲಿ ಕೇಳಿದರು. ಯಾಕೆ ಆ ಹುಡುಗಿಯನ್ನ (ಸುಮಲತಾ) ಕಾಡಸ್ತೀಯಾ? ಆದಷ್ಟು ಬೇಗ ಮದ್ವೆ ಆಗು ಎಂದು ಗದರಿದರು. ಇದನ್ನು ಓದಿ: ಅಂಬಿ ಬರೆದ ಮೊದಲ ಪ್ರೇಮ ಪತ್ರದಲ್ಲಿ ಏನಿತ್ತು?

    ನಿನ್ನ ಮದುವೆ ವಿಚಾರ ಮಾತಾಡೋದಕ್ಕೆ ಎಲ್ಲರನ್ನು ಕರೆಸಿದ್ದೇನೆ. ಇವತ್ತು ಎರಡರಲ್ಲಿ ಒಂದು ತೀರ್ಮಾನ ಆಗಬೇಕು ಎಂದು ಶ್ರೀಕಂಠಯ್ಯನವರು ಹೇಳಿದರು. ಚುಂಚನಗಿರಿ ಸ್ವಾಮಿಗಳು ಕೂಡ ಹೇಳಿದ್ದಾರೆ. ಅದ್ದರಿಂದಲೇ ನಾವೆಲ್ಲಾ ಇಲ್ಲಿ ಸೇರಿದ್ದೇವೆ ಎಂದು ಒತ್ತಾಯ ಮಾಡಿದರು. ಶ್ರೀಕಂಠಯ್ಯ ಅವರ ಮಾತಿಗೆ ಒಪ್ಪಿಗೆ ಸೂಚಿಸಿದ ಅಂಬಿ ಒಂದು ವಾರದಲ್ಲಿ ಅಂತಿಮ ತೀರ್ಮಾನ ತಿಳಿಸುವುದಾಗಿ ಹೇಳಿದರು.  ಇದನ್ನು ಓದಿ: ಪತ್ನಿಗೆ ಕಂಡೀಷನ್ ಹಾಕ್ತೀರಾ ಪ್ರಶ್ನೆಗೆ ಅಂಬಿಯ ಪ್ರತಿಕ್ರಿಯೆ ಹೀಗಿತ್ತು 

    ಅಂದು ನನಗೆ ಅಂಬರೀಶ್ ಅವರ ಬಳಿ ಜೋರು ಮಾಡಿ ಮಾತನಾಡುವ ಶಕ್ತಿ ಇರಲಿಲ್ಲ. ಆದರೆ ಶ್ರೀ ಕಂಠಯ್ಯನವರು ದೊಡ್ಡ ಜಗಳವನ್ನೆ ಮಾಡಿದ್ದರು. ಆಗ ಆಯ್ತು ಬಿಡಿ ಅಣಯ್ಯ ಎಂದು ಅಂಬಿ ಹೇಳಿದ್ದರು. ಆ ಬಳಿಕವೇ ಅವರಿಬ್ಬರ ಪ್ರೇಮದ ಬೆಸುಗೆಗೆ ಇಡೀ ಸಮಾಜ ಬೆಂಬಲಕ್ಕೆ ನಿಂತಿದ್ದನ್ನು ಕಂಡ ಅಂಬಿ ಮದುವೆಗೆ ಅಂತಿಮವಾಗಿ ಒಪ್ಪಿಗೆ ನೀಡಿದರು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪವನ್ ಕಲ್ಯಾಣ್ ಬಣ್ಣದ ಲೋಕಕ್ಕೆ ವಿದಾಯ

    ಪವನ್ ಕಲ್ಯಾಣ್ ಬಣ್ಣದ ಲೋಕಕ್ಕೆ ವಿದಾಯ

    ಹೈದರಾಬಾದ್: ತೆಲುಗಿನ ಪ್ರಖ್ಯಾತ ನಟ ಪವನ್ ಕಲ್ಯಾಣ್ ಅವರು ತಮ್ಮ ಬಣ್ಣದ ಲೋಕಕ್ಕೆ ವಿದಾಯ ಹೇಳಿದ್ದಾರೆ.

    ಪವನ್ ಕಲ್ಯಾಣ್ ಅವರು ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ಗಾಸಿಪ್ ಗಳು ಹರಿದಾಡಿದ್ದು, ಇದೀಗ ಮುಂದಿನ ಚಿತ್ರಕ್ಕೆ ಸಹಿ ಮಾಡಿಲ್ಲ ಅಂತ ಹೇಳುವ ಮೂಲಕ ಊಹಾಪೋಹಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ.

    ಈ ಬಗ್ಗೆ ಟ್ವಿಟ್ಟರ್ ನಲ್ಲಿ ಒಂದು ಪತ್ರವನ್ನು ಪೋಸ್ಟ್ ಮಾಡಿರುವ ನಟ, ನಾನು ಒಂದು ಚಿತ್ರಕ್ಕೆ ಸಹಿ ಮಾಡಿರುವುದಾಗಿ ಸುದ್ದಿ ಹರಿದಾಡುತ್ತಿದೆ. ಆದ್ರೆ ಇದು ಶುದ್ಧ ಸುಳ್ಳಾಗಿದೆ. ನನಗೆ ಸಿನಿಮಾದಲ್ಲಿ ನಟಿಸಲು ಸಮಯವಿಲ್ಲ. ಹೀಗಾಗಿ ನಾನು ಯಾವುದೇ ಚಿತ್ರದಲ್ಲಿ ನಟನೆ ಮಾಡುವುದಿಲ್ಲ. ಬದಲಾಗಿ ನನ್ನನ್ನು ನಾನು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ. ನನ್ನ ಉಳಿದ ಜೀವನ ಜನರ ಸೇವೆಗೆ ಮುಡಿಪು ಎಂದು ಗಬ್ಬರ್ ಸಿಂಗ್ ಪವನ್ ಕಲ್ಯಾಣ್ ಹೇಳಿದ್ದಾರೆ.

    ಖುಷಿ, ಅತ್ತಾರಿಂಟಿಕಿ ದಾರೇದಿ, ಗಬ್ಬರ್ ಸಿಂಗ್ ಸಿನಿಮಾಗಳ ಮೂಲಕ ಮನೆ ಮಾತಾಗಿದ್ದ ನಟ, 2014ರಿಂದ ಜನಸೇನಾ ಪಕ್ಷದ ಮೂಲಕ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನಿಶ್ಚಿತಾರ್ಥ ಮಾಡಿಕೊಂಡ ಸಿಸಿಎಲ್ ಸ್ಟಾರ್ ಆಟಗಾರ ರಾಜೀವ್

    ನಿಶ್ಚಿತಾರ್ಥ ಮಾಡಿಕೊಂಡ ಸಿಸಿಎಲ್ ಸ್ಟಾರ್ ಆಟಗಾರ ರಾಜೀವ್

    ಬೆಂಗಳೂರು: ಸೆಲೆಬ್ರಿಟಿ ಕ್ರಿಕೆಟ್ ಲೀಗ್‍ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಪರವಾಗಿ ಆಡುತ್ತಿದ್ದ ಆಟಗಾರ, ಸ್ಯಾಂಡಲ್‍ವುಡ್ ಕಲಾವಿದ ರಾಜೀವ್ ಅವರು ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ಬೆಂಗಳೂರು ಮೂಲದ ರೇಷ್ಮಾ ಅವರ ಜೊತೆ ರಾಜೀವ್ ನಿಶ್ಚಿತಾರ್ಥ ನೆರವೇರಿದೆ. ರಾಜೀವ್ ಹಾಗೂ ರೇಷ್ಮಾ ಅವರ ನಿಶ್ಚಿತಾರ್ಥಕ್ಕೆ ಸ್ಯಾಂಡಲ್‍ವುಡ್ ತಾರೆಯರು ಶುಭಾಶಯ ಕೋರಿದ್ದಾರೆ. ರಾಜೀವ್ ಸ್ಯಾಂಡಲ್‍ವುಡ್‍ಗಿಂತ ಸಿಸಿಎಲ್ ಟೂರ್ನಿಯಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ.

    ರಾಜೀವ್ ಮದುವೆಯಾಗುತ್ತಿರುವ ರೇಷ್ಮಾ ಅವರು ಬೆಂಗಳೂರು ಮೂಲದವರಾಗಿದ್ದು, ದಯಾನಂದ ಸಾಗರ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿದ್ದಾರೆ ಎನ್ನಲಾಗಿದೆ. ರಾಜೀವ್ ಹಾಗೂ ರೇಷ್ಮಾ ಅವರ ನಿಶ್ಚಿತಾರ್ಥ ಕಾರ್ಯಕ್ರಮ ನಗರದ ಪೈವಿಸ್ತಾ ಕನ್ವಂಷನ್ ಹಾಲ್‍ನಲ್ಲಿ ನಡೆದಿದೆ.

    ಕಿಚ್ಚ ಸುದೀಪ್ ನೇತೃತ್ವದ ತಂಡದಲ್ಲಿ ರಾಜೀವ್ ಕ್ರಿಕೆಟ್ ಆಟವಾಡುತ್ತಿದ್ದಾರೆ. ಸುದೀಪ್ ತಮ್ಮ ಗೆಳೆಯ ಕೂಡ ರಾಜೀವ್ ಅವರ ವೃತ್ತಿ ಜೀವನದಲ್ಲಿ ಹಾಗೂ ಚಿತ್ರಗಳಿಗೆ ಬೆಂಬಲ ನೀಡುತ್ತಾರೆ. ಸದ್ಯ ರಾಜೀವ್ ನಿಶ್ಚಿತಾರ್ಥಕ್ಕೆ ಸುದೀಪ್ ಅವರ ಪತ್ನಿ ಪ್ರಿಯಾ ಅವರು ಹೋಗಿ ನವಜೋಡಿಗೆ ಶುಭಾಶಯ ತಿಳಿಸಿದ್ದಾರೆ.

    ಸುದೀಪ್ ಹೈದರಾಬಾದ್‍ನಲ್ಲಿ ‘ಪೈಲ್ವಾನ್’ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದ ಕಾರಣ ಅವರು ರಾಜೀವ್ ನಿಶ್ಚಿತಾರ್ಥಕ್ಕೆ ಆಗಮಿಸಲು ಸಾಧ್ಯವಾಗಿರಲಿಲ್ಲ. ಆದರೆ ಸುದೀಪ್ ತಮ್ಮ ಟ್ವಿಟ್ಟರಿನಲ್ಲಿ ರಾಜೀವ್ ಹಾಗೂ ರೇಷ್ಮಾ ಅವರ ಫೋಟೋವನ್ನು ಹಾಕಿ ಶುಭಾಶಯ ತಿಳಿಸಿದ್ದಾರೆ.

    ರಾಜೀವ್ ಅವರ ನಿಶ್ಚಿತಾರ್ಥದಲ್ಲಿ ಅವರ ಆಪ್ತ ಸ್ನೇಹಿತ, ನಟ ಪ್ರದೀಪ್ ಆಗಮಿಸಿದ್ದರು. ರಾಜೀವ್ ಹಾಗೂ ಪ್ರದೀಪ್ ಒಂದೇ ತಂಡದಲ್ಲಿ ಆಟವಾಡಿದ್ದಾರೆ. ಸದ್ಯ ಪ್ರದೀಪ್ ಅವರು ಕೂಡ ರಾಜೀವ್ ನಿಶ್ಚಿತಾರ್ಥದಲ್ಲಿ ಭಾಗವಹಿಸಿ ಗೆಳೆಯನಿಗೆ ಶುಭ ಕೋರಿದ್ದಾರೆ. ಅಲ್ಲದೇ ಕಿರುತೆರೆ ಖ್ಯಾತ ನಟ, ಬಿಗ್ ಬಾಸ್ ಸ್ಪರ್ಧಿ ಜಗನ್ ಅವರು ರಾಜೀವ್ ಅವರ ನಿಶ್ಚಿತಾರ್ಥದಲ್ಲಿ ಭಾಗವಹಿಸಿದ್ದಾರೆ.

    ರಾಜೀವ್ ಸ್ಯಾಂಡಲ್‍ವುಡ್‍ನಲ್ಲಿ ಪೋಷಕ ನಟನಾಗಿ ಮಿಂಚಿದ್ದಾರೆ. ‘ಉಸಿರೇ ಉಸಿರೇ’ ಚಿತ್ರದಲ್ಲಿ ನಾಯಕನಾಗಿ ನಟಿಸಿ, ‘ಜಿಂದಗಿ’, ಆರ್‍ಎಕ್ಸ್ ಸೂರಿ’, ‘ಅಮವಾಸ್ಯೆ’, ‘ಬೆಂಗಳೂರು 560023’, ಚಿತ್ರದಲ್ಲಿ ನಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪ್ರೆಸೆಂಟ್ಸ್ ಪ್ರೊಡಕ್ಷನ್ ನಂ.1- ಅಪ್ಪನಾಗುವ ಸಂಭ್ರಮದಲ್ಲಿ ರಿಷಬ್ ಶೆಟ್ಟಿ

    ಪ್ರೆಸೆಂಟ್ಸ್ ಪ್ರೊಡಕ್ಷನ್ ನಂ.1- ಅಪ್ಪನಾಗುವ ಸಂಭ್ರಮದಲ್ಲಿ ರಿಷಬ್ ಶೆಟ್ಟಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ತಾವು ತಂದೆಯಾಗುತ್ತಿರುವ ಖುಷಿ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಡದಿಯೊಂದಿಗಿರುವ ಫೋಟೋ ಪೋಸ್ಟ್ ಮಾಡಿರುವ ರಿಷಬ್, `ಪ್ರಗತಿ ರಿಷಬ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಪ್ರೆಸೆಂಟ್ಸ್ ಪ್ರೊಡಕ್ಷನ್ ನಂ. 1′ ಎಂದು ಬರೆದುಕೊಂಡಿದ್ದಾರೆ.

    `ಸರ್ಕಾರಿ ಹಿ. ಪ್ರಾ. ಶಾಲೆ ಕಾಸರಗೋಡು’ ಸಿನಿಮಾ ಮೂಲಕ ಜಾದೂ ಮಾಡಿದ್ದ ರಿಷಬ್, ಮಕ್ಕಳ ಮೂಲಕ ಕನ್ನಡ ಪ್ರೀತಿಯನ್ನು ಮೆರೆದಿದ್ದರು. ಕರ್ನಾಟಕದ ಎಲ್ಲ ಭಾಗಗಳ ಜನರೂ ಈ ಚಿತ್ರವನ್ನು ಪ್ರೀತಿಯಿಂದ ವೀಕ್ಷಿಸಿ ಮೆಚ್ಚಿಕೊಂಡಿದ್ದರು. ಕಿರಿಕ್ ಪಾರ್ಟಿ ಯಶಸ್ವಿನ ಬಳಿಕ ಮತ್ತೊಂದು ಗೆಲುವು ಪಡೆದಿದ್ದರು.

    ಅಂದ ಹಾಗೇ 2017 ಫೆಬ್ರವರಿಯಲ್ಲಿ ರಿಷಬ್ ಶೆಟ್ಟಿ ಪಗ್ರತಿ ಅವರ ವಿವಾಹ ನಡೆದಿತ್ತು. ಮದುವೆಯ ಬಳಿಕ ತಮ್ಮ ಪ್ರೇಮ್ ಕಹಾನಿಯ ಗಟ್ಟು ಬಿಚ್ಚಿಟ್ಟಿದ್ದ ರಿಷಬ್, ಅಂದು ಕೈ ಕುಲುಕಿ ಹೋದವಳನ್ನೇ ಕೈ ಹಿಡಿಯೋ ಭಾಗ್ಯ ನನ್ನದಾಯ್ತು ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ರವಿ ಶ್ರೀವತ್ಸ ವಿರುದ್ಧ ಮೀಟೂ ಆರೋಪ- ಬಹಿರಂಗವಾಗಿ ಕ್ಷಮೆ ಕೇಳಿದ ಸಂಜನಾ: ವಿಡಿಯೋ ನೋಡಿ

    ರವಿ ಶ್ರೀವತ್ಸ ವಿರುದ್ಧ ಮೀಟೂ ಆರೋಪ- ಬಹಿರಂಗವಾಗಿ ಕ್ಷಮೆ ಕೇಳಿದ ಸಂಜನಾ: ವಿಡಿಯೋ ನೋಡಿ

    ಬೆಂಗಳೂರು: ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಮೀಟೂ ಆರೋಪ ಮಾಡಿದ್ದ ನಟಿ ಸಂಜನಾ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.

    ಗಂಡ-ಹೆಂಡತಿ ಚಿತ್ರದಲ್ಲಿ ಪದೇ ಪದೇ ಕಿಸ್ಸಿಂಗ್ ಸೀನ್ ಮಾಡಿಸಿದ್ದರು ಎಂದು ಆರೋಪಿಸಿದ್ದ ಸಂಜನಾ ಕಲಾವಿದರ ಸಂಘ, ನಿರ್ದೇಶಕರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕ್ಷಮೆ ಕೇಳಿದ್ದಾರೆ.

    ಸಂಜನಾ ಹೇಳಿದ್ದೇನು?
    ನಾನು ನನ್ನ ಅನುಭವ ಹಾಗೂ ಜೀವನದಲ್ಲಿ ನಡೆದ ಸತ್ಯವನ್ನೇ ಹೇಳಿಕೊಂಡಿದ್ದೇನೆ. ಅಲ್ಲದೇ ಗಂಡ-ಹೆಂಡತಿ ಚಿತ್ರದ ವೇಳ ಆದಂತಹ ಅನುಭವಗಳನ್ನು ಹೇಳಿಕೊಳ್ಳಲು ನನಗೆ ಆಗ ಸಾಧ್ಯವಾಗಿರಲಿಲ್ಲ. ಅಲ್ಲದೇ ನಾನು ಆಹ ಚಿಕ್ಕವಳಿದ್ದೆ. ಈ ಎಲ್ಲಾ ವಿಷಯವನ್ನು ಮೀಟೂ ಅಭಿಯಾನದ ಮೂಲಕ ಹಂಚಿಕೊಂಡಿದ್ದೆ. ಇದರಿಂದಾಗಿ ಚಿತ್ರದ ನಿರ್ದೇಶಕ ಹಾಗೂ ನಿರ್ದೇಶಕರ ಸಂಘದವರಿಗೆ ನೋವುಂಟಾಗಿದೆ.

    ನನ್ನ ಉದ್ದೇಶ ಯಾರ ಹೆಸರು ಹಾಗೂ ಜೀವನವನ್ನು ಹಾಳು ಮಾಡಬೇಕೆಂದು ಇರಲಿಲ್ಲ. ಹೀಗಾಗಿ ನಾನು ಕಲಾವಿದರ ಸಂಘದ ಹಿರಿಯರಾದ ನಟ ಅಂಬರೀಶ್, ದೊಡ್ಡಣ್ಣ ಹಾಗೂ ರಾಕ್‍ಲೈನ್ ವೆಂಕಟೇಶ್ ಅವರ ಮಾತಿಗೆ ಬೆಲೆಕೊಟ್ಟು, ಗಂಡ-ಹೆಂಡತಿ ನಿರ್ದೇಶಕರು ಹಾಗೂ ಚಿತ್ರತಂಡ ಮತ್ತು ನಿರ್ದೇಶಕರ ಸಂಘದ ಎಲ್ಲರಿಗೂ ಕ್ಷಮೆಯನ್ನು ಕೋರುತ್ತೇನೆ. ಈ ಘಟನೆಯನ್ನು ಮುಂದುವರಿಸಿಕೊಂಡು ಹೋಗಲು ಇಷ್ಟಪಡುವುದಿಲ್ಲ. ಹೀಗಾಗಿ ಎಲ್ಲರ ಬಳಿ ನಾನು ಕ್ಷಮೆ ಕೇಳುತ್ತೇನೆ.

    ಸಂಜನಾ ಆರೋಪವೇನು?
    ಅಕ್ಟೋಬರ್ 7ರಂದು ಮಾಧ್ಯಮಗಳೊಂದಿಗೆ ತಮ್ಮ ಸಿನಿ ಜರ್ನಿಯಲ್ಲಿ ನಡೆದ ಹಿಂಸೆಯ ಬಗ್ಗೆ ತೆರೆದಿಟ್ಟ ಸಂಜನಾ ಗರ್ಲಾನಿ, ನನಗೂ ಚಿತ್ರರಂಗದಲ್ಲಿ ತುಂಬಾ ಹೀನಾಯವಾಗಿ ನಡೆಸಿಕೊಂಡಿದ್ದಾರೆ. ನಿನ್ನ ವೃತ್ತಿ ಜೀವನ ಚೆನ್ನಾಗಿರಬೇಕು ಅಂದರೆ ಕಿಸ್ಸಿಂಗ್ ಸೀನ್ ಮಾಡು ಎಂದು ನಿರ್ದೇಶಕರು ಒತ್ತಾಯ ಮಾಡಿದ್ದರು. ಅಲ್ಲದೇ ಒಮ್ಮೆಲೇ 50ಕ್ಕೂ ಹೆಚ್ಚು ಕಿಸ್ಸಿಂಗ್ ಸೀನ್ ಮಾಡಿಸಿದ್ದರು. ಬ್ಯಾಕ್ ಲೆಸ್ ಸೀನ್ ಮಾಡುವಾಗಲು ಇಂತಹದ್ದೇ ಹಿಂಸೆಯಾಗಿತ್ತು. ಚಿತ್ರೀಕರಣದ ಸಮಯದಲ್ಲಿ ಭಯ ಹುಟ್ಟಿಸುವ ವಾತಾವರಣ ಇತ್ತು. ನನ್ನ ಮೇಲೆ ದಬ್ಬಾಳಿಕೆ ಮಾಡಿ ಕಿಸ್ಸಿಂಗ್ ಸೀನ್ ಗಳನ್ನು ಮಾಡಿಸಿಕೊಂಡರು. ಈ ವೇಳೆ ವಿದೇಶದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಬ್ಯಾಕಾಂಕ್ ನಿಂದ ಬಂದ ನಂತರವೂ ಬೆಂಗಳೂರಿನಲ್ಲಿ ಕಿಸ್ಸಿಂಗ್ ಸೀನ್ ಮಾಡಿಸಿದ್ದರು ಎಂದು ಚಿತ್ರನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಆರೋಪ ಮಾಡಿದ್ದರು.

    ಸಂಜನಾ ಗರ್ಲಾನಿ ಆರೋಪಕ್ಕೆ ನಿರ್ದೇಶಕ ರವಿ ಶ್ರೀವತ್ಸ ನಿರ್ದೇಶಕರ ಸಂಘದ ಮೊರೆ ಹೋಗಿದ್ದರು. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದ ವಿ.ನಾಗೇಂದ್ರ ಪ್ರಸಾದ್ ನಿರ್ದೇಶಕರಿಗೆ ಕ್ಷಮೆ ಕೋರುವಂತೆ ಸಂಜಾನಾಗೆ ಆಗ್ರಹಿಸಿದ್ದರು. ಅಲ್ಲದೇ ಈ ಬಗ್ಗೆ ಕಲಾವಿದರ ಸಂಘಕ್ಕೆ ದೂರನ್ನು ಸಹ ಕೊಟ್ಟಿದ್ದರು.

    https://www.youtube.com/watch?v=SiaVF8Wjf1c

    https://www.youtube.com/watch?v=ALJ_vOFTo5Y

    https://youtu.be/Fngx4OL8iUY

    https://youtu.be/2YYfQAOr3SM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews