Tag: actor

  • ಬೆಂಗ್ಳೂರಲ್ಲಿ ಅಮ್ಮನ ಎದುರೇ ನಟನಿಂದ ರೇಪ್!

    ಬೆಂಗ್ಳೂರಲ್ಲಿ ಅಮ್ಮನ ಎದುರೇ ನಟನಿಂದ ರೇಪ್!

    ಬೆಂಗಳೂರು: ಕಿರುಚಿತ್ರ ನಿರ್ದೇಶಕ, ನಟ ಮದುವೆಯಾಗುತ್ತೇನೆ ಎಂದು ನಂಬಿಸಿ ತನ್ನ ತಾಯಿಯ ಎದುರೇ 21 ವರ್ಷದ ಯುವತಿಯನ್ನು ಅತ್ಯಾಚಾರ ಮಾಡಿರುವ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಪಿ. ಪ್ರಮೋದ್ ಕುಮಾರ್ ಎಂಬಾತನೇ ಯುವತಿಯ ಮೇಲೆ ಅತ್ಯಾಚಾರವೆಸಗಿದ ನಟ, ನಿರ್ದೇಶಕ. ಈತ ಬೆಂಗಳೂರು ವಿವೇಕನಗರದ ಅಶ್ವಿನಿ ಲೇಔಟ್ ನಿವಾಸಿಯಾಗಿದ್ದಾನೆ. ಸಂತ್ರಸ್ತ ಯುವತಿ ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದಾಳೆ.

    ಪ್ರಮೋದ್ ಯುವತಿಯನ್ನು ಹುಟ್ಟುಹಬ್ಬದ ಪಾರ್ಟಿಗಾಗಿ ಮನೆಗೆ ಕರೆದು ಆಕೆಯ ಮೇಲೆ ಕೃತ್ಯ ಎಸಗಿದ್ದಾನೆ. ಮಗ ಯುವತಿಯನ್ನು ರೇಪ್ ಮಾಡುವುದನ್ನು ಸ್ವತಃ ಆತನ ಅಮ್ಮ ನೋಡಿದರೂ ಸುಮ್ಮನಾಗಿದ್ದು, ಇದೀಗ ಆಕೆಯೂ ಎರಡನೇ ಪ್ರಮುಖ ಆರೋಪಿಯಾಗಿದ್ದಾರೆ. ಸದ್ಯ ನಟನನ್ನು ವಿವೇಕ ನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    ಯುವತಿ ನಟನ ತಾಯಿಯ ವಿರುದ್ಧವೂ ದೂರು ದಾಖಲಿಸಿದ್ದಾರೆ. ನಟ ತನ್ನನ್ನು ದುರುಪಯೋಗ ಪಡಿಸಿಕೊಂಡ ಬಳಿಕ ಆತನ ತಾಯಿ, ನಿಂದಿಸಿ ನನ್ನ ಮಗನನ್ನು ಭೇಟಿ ಮಾಡಬೇಡ ಎಂದು ಬೆದರಿಕೆ ಹಾಕಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

    ಸಂತ್ರಸ್ತೆ ಹಾಗೂ ಆರೋಪಿ ಅಕ್ಕಪಕ್ಕದ ಮನೆಯವರಾಗಿದ್ದು ಕಳೆದ ಎರಡು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಹೀಗೆ ಇತ್ತೀಚೆಗೆ ನನ್ನ ಹುಟ್ಟುಹಬ್ಬದ ಪಾರ್ಟಿಯಿದೆ ಎಂದು ಮನೆಗೆ ಕರೆದಿದ್ದಾನೆ. ಹೀಗಾಗಿ ಯುವತಿ ಆತನ ಮನೆಗೆ ತೆರಳಿದ್ದು, ಈ ವೇಳೆ ಆತ ಯುವತಿಯ ಮೇಲೆ ರೇಪ್ ಮಾಡಿದ್ದಾನೆ. ಅಲ್ಲದೆ ತಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ಪ್ರತಿ ನಿತ್ಯ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗುವ ಮೂಲಕ ಭೌತಿಕವಾಗಿ ಆಕೆಯೊಂದಿಗೆ ನಿಕಟ ಸಂಬಂಧ ಹೊಂದಲು ಯತ್ನಿಸುತ್ತಿದ್ದನು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಕೋರಮಂಗಲ 7ನೇ ಬ್ಲಾಕ್ ನಲ್ಲಿರುವ ತನ್ನ ಕಚೇರಿ ಆವರಣದಲ್ಲಿಯೇ ಕುಮಾರ್ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಲ್ಲದೆ ನಮ್ಮಿಬ್ಬರ ಸಂಬಂಧ ಆತನ ತಾಯಿಗೂ ತಿಳಿದಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಇಬ್ಬರು ಪ್ರತಿನಿತ್ಯ ಭೇಟಿಯಾಗುವುದನ್ನು ಗಮನಿಸಿದ ನಟನ ತಾಯಿ, ನನ್ನ ಮಗನ ಭೇಟಿ ಮಾಡಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.

    ಮದುವೆ ಪ್ಲಾನ್:
    ಕುಮಾರ್ ಮದುವೆ ಮಾಡಿಕೊಳ್ಳಲು ಹುಡುಗಿ ಹುಡುಕುತ್ತಿದ್ದಾನೆ ಎಂದು ಸಂತ್ರಸ್ತೆ ನಂಬಿದ್ದು, ನನ್ನನ್ನೇ ಮದುವೆಯಾಗುತ್ತಾನೆ ಎಂದು ಆಕೆ ಆತ ಕರೆದಲ್ಲಿಗೆ ಹೋಗುತ್ತಿದ್ದಳು. ಆದರೆ ಆತನ ತಾಯಿ ಮಾತ್ರ ಯುವತಿಯನ್ನು ತನ್ನ ಸೊಸೆಯಾಗಿ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಇದರಿಂದಾಗಿ ಕುಮಾರ್ ಕೂಡ ಸಂತ್ರಸ್ತೆಯೊಂದಿಗಿನ ಮದುವೆ ವಿಚಾರ ಕೈಬಿಟ್ಟಿದ್ದನು. ಅಲ್ಲದೆ ಇನ್ನೊಂದು ಬಾರಿ ನನ್ನ ಮಗನ ಜೊತೆ ನಿನ್ನ ಕಂಡರೆ ಕೊಲೆ ಮಾಡುವುದಾಗಿಯೂ ಕುಮಾರ್ ತಾಯಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಕುಮಾರ್ ಸಂತ್ರಸ್ತೆಯನ್ನು ದೂರ ಮಾಡಲು ಯತ್ನಿಸುತ್ತಿದ್ದನು. ಆಕೆಯ ಫೋನ್ ಕಾಲ್ ಗಳನ್ನು ರಿಸೀವ್ ಮಾಡಲು ಕೂಡ ನಿರಾಕರಿಸುತ್ತಿದ್ದನು. ಮೇ 10ರಂದು ಆಕೆಯನ್ನು ತನ್ನ ಕಚೇರಿಗೆ ಕರೆಸಿಕೊಂಡು ಅಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.

    ಒಟ್ಟಿನಲ್ಲಿ ಕುಮಾರ್ ತನ್ನನ್ನು ದೂರ ಮಾಡುತ್ತಿರುವುದನ್ನು ಗಮನಿಸಿದ ಸಂತ್ರಸ್ತೆ ಈತ ತನ್ನನ್ನು ಮದುವೆ ಮಾಡಿಕೊಳ್ಳಲ್ಲವೆಂದು ನೊಂದು ಇದೀಗ ಪೊಲೀಸ್ ಠಾಣೆ ಮಟ್ಟಿಲೇರಿದ್ದಾಳೆ. ಸದ್ಯ ವಿವೇಕನಗರ ಪೊಲೀಸರು ಆರೋಪಿ ನಟ ಪ್ರಮೋದ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 376(ರೇಪ್), 417(ಮೋಸ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಪ್ಲಾಸ್ಟಿಕ್ ಆಟಿಕೆ ನುಂಗಿ ನಟನ ಮಗು ಸಾವು

    ಪ್ಲಾಸ್ಟಿಕ್ ಆಟಿಕೆ ನುಂಗಿ ನಟನ ಮಗು ಸಾವು

    ಮುಂಬೈ: ಕಿರುತೆರೆಯ ನಟನೊಬ್ಬನ ಎರಡು ವರ್ಷದ ಮಗು ಪ್ಲಾಸ್ಟಿಕ್ ಆಟಿಕೆಯನ್ನು ನುಂಗಿ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

    ಕಿರುತೆರೆ ನಟ ಪ್ರತಿಶ್ ವೊರಾ ಅವರ 2 ವರ್ಷದ ಮಗು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಪ್ಲಾಸ್ಟಿಕ್ ಆಟಿಕೆಯನ್ನು ನುಂಗಿದ ಪರಿಣಾಮ ಮೃತಪಟ್ಟಿದೆ. ಮಗು ಕಳೆದುಕೊಂಡು ಕುಟುಂಬದವರು ತುಂಬ ದುಃಖಿತರಾಗಿದ್ದಾರೆ.

    ಈ ಬಗ್ಗೆ ಮಾತನಾಡಿದ ನಟ ಪ್ರತಿಶ್ “ಕಳೆದ ರಾತ್ರಿ ನನ್ನ ಮಗಳು ಪ್ಲಾಸ್ಟಿಕ್ ಗೊಂಬೆಯೊಂದಿಗೆ ಆಟವಾಡುತ್ತಿದ್ದಳು. ಆಗ ಗೊಂಬೆಯ ಚೂರನ್ನು ನುಂಗಿದ್ದಾಳೆ. ಬಾಯಿಯಿಂದ ಗೊಂಬೆಯ ಚೂರನ್ನು ತೆಗೆಯಲಾರದೇ ಮೃತಪಟ್ಟಿದ್ದಾಳೆ. ದಯವಿಟ್ಟು ನನ್ನ ಮಗಳಿಗಾಗಿ ದೇವರನ್ನು ಪ್ರಾರ್ಥಿಸಿ” ಎಂದು ದುಃಖದಲ್ಲಿ ಹೇಳಿದ್ದಾರೆ.

    ಮಗುವಿನ ಗಂಟಲಿಗೆ ಪ್ಲಾಸ್ಟಿಕ್ ಸಿಲುಕಿಕೊಂಡ ಪರಿಣಾಮ ಉಸಿರಾಟದ ಸಮಸ್ಯೆಯಿಂದ ಮಗು ಮೃತಪಟ್ಟಿದೆ. ನಟ ಪ್ರತಿಶ್ ವೊರಾ ಅವರು ‘ಪ್ಯಾರ್ ಕೆ ಪಾಪಡ್’ ಎಂಬ ಜನಪ್ರಿಯ ಟಿವಿ ಶೋನಲ್ಲಿ ಅಭಿನಯಿಸುತ್ತಿದ್ದಾರೆ.

    https://www.instagram.com/p/BvjalUPHbeJ/

  • ಅಸಭ್ಯ ವರ್ತನೆ- ನಾಟಕ ಕಲಾವಿದೆಯಿಂದ ಯುವಕನಿಗೆ ಚಪ್ಪಲಿ ಏಟು!

    ಅಸಭ್ಯ ವರ್ತನೆ- ನಾಟಕ ಕಲಾವಿದೆಯಿಂದ ಯುವಕನಿಗೆ ಚಪ್ಪಲಿ ಏಟು!

    ಬಾಗಲಕೋಟೆ: ನಾಟಕ ಪ್ರದರ್ಶನ ನಡೆಯುತ್ತಿದ್ದ ವೇಳೆ ಕಲಾವಿದೆ ಜೊತೆ ಅನುಚಿತವಾಗಿ ವರ್ತಿಸಿದ ಯುವಕನೊಬ್ಬ ಚಪ್ಪಲಿ ಏಟು ತಿಂದ ಘಟನೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ನಡೆದಿದೆ.

    ಸೋಮವಾರ ರಾತ್ರಿ ಹಿಪ್ಪರಗಿ ಗ್ರಾಮದಲ್ಲಿ “ಸೇಡಿಗಾಗಿ ಸಿಡಿದೆದ್ದ ಬಡವ” ಎಂಬ ನಾಟಕ ಪ್ರದರ್ಶನ ನಡೆಯುತ್ತಿತ್ತು. ನಾಟಕಕ್ಕೂ ಮುನ್ನ ಹಿಪ್ಪರಗಿ ಗ್ರಾಮದ ನಿವಾಸಿ ಬಸವರಾಜ್ ನಾಟಕ ಕಲಾವಿದೆ ರೇಖಾ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ ನನ್ನನ್ನು ಚುಂಬಿಸಲು ಬಂದಿದ್ದ ಎಂದು ಆರೋಪಿಸಿ ಕಲಾವಿದೆ ಬಸವರಾಜ್‍ಗೆ ಚಪ್ಪಲಿಯಿಂದ ಭರ್ಜರಿಯಾಗಿ ಥಳಿಸಿದ್ದಾರೆ. ಇದನ್ನೂ ಓದಿ:ನಾಟಕದ ವೇದಿಕೆಯ ಮೇಲೆಯೇ ಮೈ ಮರೆತು ಜೋಡಿಯಿಂದ ಲಿಪ್‍ಲಾಕ್

    ಬಳಿಕ ಈ ವಿಷಯ ತಿಳಿದ ಗ್ರಾಮಸ್ಥರು ಇಂದು ಬೆಳಿಗ್ಗೆ ಇದೇ ವಿಚಾರವಾಗಿ ಗುರುಹಿರಿಯರ ಸಮ್ಮುಖದಲ್ಲಿ ಮಾತುಕತೆ ನಡೆಸಿದ್ದರು. ಈ ವೇಳೆ ಕೂಡ ಯುವಕನಿಗೆ ಕಲಾವಿದೆ ಚಪ್ಪಲಿ ಏಟು ನೀಡಿದ್ದಾರೆ. ನಂತರ ಗ್ರಾಮಸ್ಥರು ಯುವಕನಿಗೆ ಬುದ್ಧಿವಾದ ಹೇಳಿ, ಕಲಾವಿದೆಯ ಕಾಲಿಗೆ ಬೀಳಿಸಿ, ಕ್ಷಮೆ ಕೇಳಿಸಿ, ಪರಿಸ್ಥಿತಿ ಶಾಂತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ಅಕ್ಷಯ್‌ ಕುಮಾರ್‌ನನ್ನು ನಮೋ ಟಿವಿಗೆ ನಿರೂಪಕರನ್ನಾಗಿ ಮಾಡ್ಬೇಕು: ಓವೈಸಿ ವ್ಯಂಗ್ಯ

    ಅಕ್ಷಯ್‌ ಕುಮಾರ್‌ನನ್ನು ನಮೋ ಟಿವಿಗೆ ನಿರೂಪಕರನ್ನಾಗಿ ಮಾಡ್ಬೇಕು: ಓವೈಸಿ ವ್ಯಂಗ್ಯ

    – ಮೋದಿ ಅಕ್ಷಯ್ ಕುಮಾರ್‌ಗಿಂತ ಉತ್ತಮ ನಟ

    ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಏಪ್ರಿಲ್ 24ರಂದು ಸಂದರ್ಶನ ಮಾಡಿದ್ದರು. ಈ ವಿಚಾರವಾಗಿ ಅನೇಕ ವಿಪಕ್ಷ ನಾಯಕರು ವ್ಯಂಗ್ಯವಾಡುತ್ತಿದ್ದಾರೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಕೂಡ ಲೇವಡಿ ಮಾಡಿದ್ದಾರೆ.

    ಮಹಾರಾಷ್ಟ್ರದ ಮಾಲೇಗಾಂವ್‍ನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಟಿವಿ ನಿರೂಪಕರು ಸರಿಯಾಗಿ ನಟನೆ ಮಾಡುವುದಿಲ್ಲ. ಅವರು ನನ್ನ ಸಂದರ್ಶನ ಮಾಡುವುದು ಬೇಡ ಎಂದು ಪ್ರಧಾನಿ ಮೋದಿ ತಿಳಿಸಿದ್ದರು. ಹೀಗಾಗಿ ಉತ್ತಮ ನಟನನ್ನು ಈ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳುತ್ತೇನೆಂದು ಹೇಳಿ, ನಟ ಅಕ್ಷಯ್ ಕುಮಾರ್ ಅವರನ್ನು ಅಂತಿಮಗೊಳಿಸಿದ್ದರು ಎಂದು ವ್ಯಂಗ್ಯವಾಡಿದರು.

    ಅಕ್ಷಯ್ ಕುಮಾರ್ ಅವರಿಗಿಂತ ಪ್ರಧಾನಿ ಮೋದಿ ಅವರೇ ಉತ್ತಮ ನಟರಾಗಿದ್ದಾರೆ. ಸಂದರ್ಶನದ ವೇಳೆ ನಾನು ಮಲಗುವುದು 4 ಗಂಟೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅವರ ಮಾತುಗಳು ನಿಜವಾಗಿದ್ದರೇ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರಾ? 2 ಕೋಟಿ ಯುವಕರು ನಿರುದ್ಯೋಗಿಗಳಾಗಿ ಯಾಕೆ ಉಳಿದರು? ಜಮ್ಮು ಕಾಶ್ಮೀರದ ಪುಲ್ವಾಮಾಗೆ 50 ಕೆಜಿ ಆರ್‍ಡಿಎಕ್ಸ್ ಹೇಗೆ ಪ್ರವೇಶ ಮಾಡಿತು? ಈ ಘಟನೆಯಲ್ಲಿ 40 ಸೈನಿಕರು ಹೇಗೆ ಪ್ರಾಣ ಬಿಟ್ಟರು ಎಂದು ಪ್ರಶ್ನಿಸಿದ ಓವೈಸಿ ಅವರು, ಇದನ್ನೆಲ್ಲ ನೋಡಿದರೆ ಪ್ರಧಾನಿ ಮೋದಿ ಉತ್ತಮ ನಟರು ಎನ್ನುವುದು ತಿಳಿಯುತ್ತದೆ ಎಂದರು.

    ನಮೋ ಟಿವಿಗೆ ಅಕ್ಷಯ್ ಕುಮಾರ್ ಅವರನ್ನು ನಿರೂಪಕರನ್ನಾಗಿ ಮಾಡಬೇಕು. ನೀವು ಮಾವಿನ ಹಣ್ಣನ್ನು ಕತ್ತರಿಸಿ ತಿನ್ನುತ್ತಿರೋ ಅಥವಾ ಕಚ್ಚಿ ತಿನ್ನುತ್ತೀರೋ ಎಂದು ಅಕ್ಷಯ್ ಕುಮಾರ್, ಮೋದಿ ಅವರಿಗೆ ಪ್ರಶ್ನೆ ಕೇಳುತ್ತಾರೆ. ಇದೊಂದು ಪ್ರಶ್ನೆಯೇ ಎಂದು ಕುಟುಕಿದರು.

  • ಕಾಂಗ್ರೆಸ್‍ಗೆ ನಟ ಜಗ್ಗೇಶ್ ಸವಾಲು

    ಕಾಂಗ್ರೆಸ್‍ಗೆ ನಟ ಜಗ್ಗೇಶ್ ಸವಾಲು

    ಶಿವಮೊಗ್ಗ: ಕಾಂಗ್ರೆಸ್ ನಾಯಕರಿಗೆ ನಟ, ಬಿಜೆಪಿ ನಾಯಕ ಜಗ್ಗೇಶ್ ಸವಾಲೆಸೆದಿದ್ದಾರೆ.

    ಶಿವಮೊಗ್ಗ ಗ್ರಾಮಾಂತರ ಹಾಗೂ ತೀರ್ಥಹಳ್ಳಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಜಗ್ಗೇಶ್ ಬುಧವಾರ ಸಂಜೆ ಭದ್ರಾವತಿಯಲ್ಲಿ ಬಹಿರಂಗ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಜೆಡಿಎಸ್‍ನಿಂದ ಕರೆದುಕೊಂಡು ಬಂದು ಕಾಂಗ್ರೆಸ್ ನವರು ಯಾಕೆ ನಮ್ಮ ನಾಯಕರು ಅಂದ್ರು ಎಂದು ಉತ್ತರ ಕೊಟ್ಟರೆ, ನಾನು ಯಾಕೆ ಕಾಂಗ್ರೆಸ್ ಬಿಟ್ಟೆ ಎಂದು ಉತ್ತರ ಕೊಡ್ತೀನಿ ಎಂದು ಜಗ್ಗೇಶ್ ಚಾಲೆಂಜ್ ಹಾಕಿದ್ದಾರೆ.

    ಇದೇ ವೇಳೆ ಸಿನಿಮೀಯ ಶೈಲಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ರಾಜ್ಯದಲ್ಲಿನ ಮೈತ್ರಿ ಬಗ್ಗೆ ಟೀಕೆ ಮಾಡಿದ್ರು. ಯಾವ ಘಟಬಂಧನೂ ಇಲ್ಲ. ಮೋದಿನ ಮನೆಗೂ ಕಳಿಸೋಕೆ ಆಗೋಲ್ಲ. ಇವತ್ತು ರಾಜ್ಯದಲ್ಲಿ ಎರಡೆರಡು ಪಕ್ಷ ಸೇರಿಕೊಂಡು ಏನೋ ಮಾಡ್ತಿವಿ ಅಂತಿದ್ದಾರೆ. ಏನೂ ಮಾಡಕ್ಕೆ ಆಗಲ್ಲ ಎಂದು ವಾಗ್ದಾಳಿ ನಡೆಸಿದ್ರು.

    ರಾಹುಲ್ ಗಾಂಧಿಗೆ ಎಬಿಸಿಡಿ ಗೊತ್ತಿಲ್ಲ. ವೇದಿಕೆ ಮೇಲೆ ಹೆಂಗೆ ಮಾತಾಡಬೇಕು ಎಂದು ಮೊದಲು ಟ್ರೈನಿಂಗ್ ಕೊಟ್ಟು ಕರ್ಕಂಡ್ ಬರ್ರಪ್ಪ ಎಂದು ಸಲಹೆ ನೀಡಿದರು. ಯಾಕೆ ಎಸ್ ಎಂ ಕೃಷ್ಣ ಬಿಜೆಪಿಗೆ ಬಂದ್ರೂ ಎಂದು ಕಾಂಗ್ರೆಸ್ ನವರು ಉತ್ತರ ಕೊಡಿ ಎಂದು ಹೇಳಿದರು.


    ಶಿವಮೊಗ್ಗ ಲೋಕಸಭಾ ಕಣದಲ್ಲಿ ಸಿನಿಮಾ ಮಂದಿಯ ಪ್ರಚಾರ ಆರಂಭವಾಗಿದೆ. ಕಳೆದ ನಾಲ್ಕು ದಿನಗಳಿಂದ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಬೆನ್ನಲ್ಲೇ ಬುಧವಾರ ಜಗ್ಗೇಶ್ ಬಿಜೆಪಿ ಪರ ಬ್ಯಾಟಿಂಗ್ ಮಾಡಿದ್ದಾರೆ.

    ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಎಸ್ ಮಧು ಬಂಗಾರಪ್ಪ ಹಾಗೂ ಬಿಜೆಪಿಯಿಂದ ಬಿ.ವೈ ರಾಘವೇಂದ್ರ ಚುನಾವಣಾ ಕಣದಲ್ಲಿದ್ದಾರೆ.

  • ಖ್ಯಾತ ನಟ ಅನಿಲ್ ಕುಮಾರ್ ವಿಧಿವಶ

    ಖ್ಯಾತ ನಟ ಅನಿಲ್ ಕುಮಾರ್ ವಿಧಿವಶ

    ಬೆಂಗಳೂರು: ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ಖ್ಯಾತ ನಟ ಅನಿಲ್ ಕುಮಾರ್ (48) ವಿಧಿವಶರಾಗಿದ್ದಾರೆ.

    ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಅವರು ನಗರದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.

    ಹೆಗ್ಗೋಡಿನ ನೀನಾಸಂನಲ್ಲಿ ಅನಿಲ್‍ಕುಮಾರ್ ತರಬೇತಿ ಪಡೆದಿದ್ದರು. ಆಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನಿಲ್ ಅವರ ಸಹಪಾಠಿಯಾಗಿದ್ದರು. ಮೂಡಲ ಮನೆ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಅನಿಲ್ ಅವರು, ಅನೇಕ ಸೀರಿಯಲ್, ರಂಗಭೂಮಿ ಹಾಗೂ ಸಿನಿಮಾದಲ್ಲಿ ನಟಿಸಿದ್ದಾರೆ.

    ಅನಿಲ್ ಕುಮಾರ್ ಅವರು ಮೂಡಲ ಮನೆ, ಲಕ್ಷ್ಮೀ ಬಾರಮ್ಮ, ಚಿ ಸೌ ಸಾವಿತ್ರಿ, ಪ್ರೀತಿ ಪ್ರೇಮ, ಅಳಗುಳಿ ಮನೆ, ಮದರಂಗಿ, ಜನುಮದ ಜೋಡಿ ಧಾರಾವಾಹಿಯಲ್ಲಿ ನಟನೆ ಮಾಡಿದ್ದಾರೆ. ಈಗ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬ್ರಹ್ಮಗಂಟು ಧಾರಾವಾಹಿಯಲ್ಲಿ ನಟಿಸುತ್ತಿದ್ದರು.

    ರಾಜ್ಯ ಪ್ರಶಸ್ತಿ ವಿಜೇತ ಪಲ್ಲಟ ಸಿನಿಮಾದಲ್ಲಿ ಅನಿಲ್‍ಕುಮಾರ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೇಮಂತರಾವ್ ನಿರ್ದೇಶನದ ಕವಲುದಾರಿ ಸಿನಿಮಾದಲ್ಲಿ ನಟಿಸಿದ್ದಾರೆ. ಬಹು ಅಂಗಾಗ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಗೆಳೆಯ ಅನಿಲ್‍ಕುಮಾರ್ ಅವರನ್ನು ಕಂಡು ದರ್ಶನ್ ಮರುಗಿ, ಸಹಾಯ ಮಾಡಿದ್ದರು.

  • ಎಲ್ಲರ ಸಮ್ಮುಖದಲ್ಲಿ ನಟನಿಗೆ ಐ ಲವ್ ಯೂ ಎಂದ ಅಲಿಯಾ: ವಿಡಿಯೋ ನೋಡಿ

    ಎಲ್ಲರ ಸಮ್ಮುಖದಲ್ಲಿ ನಟನಿಗೆ ಐ ಲವ್ ಯೂ ಎಂದ ಅಲಿಯಾ: ವಿಡಿಯೋ ನೋಡಿ

    ಮುಂಬೈ: ಬಾಲಿವುಡ್ ನಟಿ ಅಲಿಯಾ ಭಟ್ ಮುಂಬೈನಲ್ಲಿ ನಡೆದ ಪ್ರಶಸ್ತಿ ಸಮಾರಂಭದ ಕಾರ್ಯಕ್ರಮದ ವೇದಿಕೆಯಲ್ಲಿ ನಟ ರಣ್‍ಬೀರ್ ಕಪೂರ್ ಗೆ ಐ ಲವ್ ಯೂ ಎಂದು ಹೇಳಿದ್ದಾರೆ. ಅಲಿಯಾ ಐ ಲವ್ ಯೂ ಎಂದು ಹೇಳುತ್ತಿದ್ದಂತೆ ರಣ್‍ಬೀರ್ ನಾಚಿ ನೀರಾಗಿದ್ದಾರೆ.

    ಇತ್ತೀಚೆಗೆ ರಣ್‍ಬೀರ್ ಕಪೂರ್ ಹಾಗೂ ಅಲಿಯಾ ಭಟ್ 64ನೇ ಫಿಲ್ಮ ಫೇರ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅಲಿಯಾಗೆ ‘ರಾಝಿ’ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿತ್ತು. ಅವಾರ್ಡ್ ಪಡೆದ ನಂತರ ಅಲಿಯಾ ವೇದಿಕೆಯಲ್ಲೇ ರಣ್‍ಬೀರ್ ಅವರನ್ನು ಸ್ಪೆಶಲ್ ಎಂದು ಹೇಳಿದ್ದಾರೆ.

    ವಿಡಿಯೋದಲ್ಲಿ ಅಲಿಯಾ, ರಣ್‍ಬೀರ್ ಗೆ ಐ ಲವ್ ಯೂ ಎಂದು ಹೇಳಿದ್ದಾರೆ. ಅಲಿಯಾ ಐ ಲವ್ ಯೂ ಎಂದು ಹೇಳುತ್ತಿದ್ದಂತೆ ರಣ್‍ಬೀರ್ ಕಪೂರ್ ನಾಚಿ ನೀರಾಗಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ‘ಸಂಜು’ ಚಿತ್ರಕ್ಕಾಗಿ ನಟ ರಣ್‍ಬೀರ್ ಕಪೂರ್ ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿತ್ತು. ವೇದಿಕೆಯಲ್ಲಿ ಅವರ ಹೆಸರನ್ನು ಘೋಷಣೆ ಮಾಡುತ್ತಿದ್ದಂತೆ ಪಕ್ಕದಲ್ಲೇ ಕೂತಿದ್ದ ಅಲಿಯಾ ರಣ್‍ಬೀರ್ ಅವರನ್ನು ಸೈಡಿನಿಂದ ತಪ್ಪಿಕೊಂಡು ಕೆನ್ನೆಗೆ ಮುತ್ತು ನೀಡಿದ್ದಾರೆ.

    ಸದ್ಯ ಅಲಿಯಾ ಭಟ್ ಹಾಗೂ ರಣ್‍ಬೀರ್ ಕಪೂರ್ ಈಗ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ.

  • ಡಬಲ್ ಸಂಭ್ರಮದಲ್ಲಿ ರಿಷಬ್ ಶೆಟ್ಟಿ

    ಡಬಲ್ ಸಂಭ್ರಮದಲ್ಲಿ ರಿಷಬ್ ಶೆಟ್ಟಿ

    ಬೆಂಗಳೂರು: ಸ್ಯಾಂಡಲ್‍ವುಲ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ತಂದೆಯಾಗುವ ಖುಷಿಯಲ್ಲಿದ್ದಾರೆ. ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ತುಂಬು ಗರ್ಭಿಣಿಯಾಗಿದ್ದು, ಅವರ ಸೀಮಂತ ಕಾರ್ಯ ಶುಕ್ರವಾರ ಅದ್ಧೂರಿಯಾಗಿ ನಡೆದಿದೆ.

    ಈ ಸೀಮಂತ ಕಾರ್ಯಕ್ಕೆ ಸ್ಯಾಂಡಲ್‍ವುಡ್ ತಾರೆಯರು ಆಗಮಿಸಿ ಹಾರೈಸಿದ್ದಾರೆ. ಬೆಲ್ ಬಾಟಂ ಸಿನಿಮಾದ ನಾಯಕಿ ಹರಿಪ್ರಿಯಾ ಅವರು ಕೂಡ ಸೀಮಂತ ಕಾರ್ಯದಲ್ಲಿ ಹಾಜರಿದ್ದರು. ಪ್ರಗತಿ, ರಿಷಬ್ ಶೆಟ್ಟಿ ಹಾಗೂ ಅವರ ಕುಟುಂಬದ ಜೊತೆಗಿರುವ ಫೋಟೋಗಳನ್ನು ಹರಿಪ್ರಿಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ರಿಷಬ್ ಅವರಿಗೆ ಒಂದು ಕಡೆ ಬೆಲ್ ಬಾಟಂ ಸಿನಿಮಾ ಗೆಲುವು, ಮತ್ತೊಂದು ಕಡೆ ತಂದೆಯಾಗುವ ಖುಷಿ. ಕುಂದಾಪುರ ಮೂಲದ ರಿಷಬ್ ಶೆಟ್ಟಿಯವರು 2017 ಫೆಬ್ರವರಿ 9ರಂದು ಪ್ರಗತಿ ಜೊತೆ ಸಪ್ತಪದಿ ತುಳಿದಿದ್ದರು. ಸ್ಯಾಂಡಲ್‍ವುಡ್ ಬಹುತೇಕ ಕಲಾವಿದರು ಮದುವೆಯಲ್ಲಿ ಭಾಗವಹಿಸಿ ವಧು-ವರರಿಗೆ ಶುಭಕೋರಿದ್ದರು.

    ಪ್ರಗತಿ ಅವರ ಸೀಮಂತ ಕಾರ್ಯಕ್ರಮದಲ್ಲಿ ರಿಷಬ್ ಆತ್ಮೀಯ ಸ್ನೇಹಿತ, ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಸೇರಿದಂತೆ ಬಹಳಷ್ಟು ಜನ ಆಪ್ತರು ಭಾಗಿಯಾಗಿದ್ದರು. ಜಯತೀರ್ಥ ನಿರ್ದೇಶನದ ರಿಷಬ್ ಶೆಟ್ಟಿ ನಟನೆಯ ಬೆಲ್ ಬಾಟಂ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, 5ನೇ ವಾರಕ್ಕೆ ಕಾಲಿಟ್ಟಿದೆ.

  • ಅಂಬಿ ಸಾಧನೆ, ಜನರ ಪ್ರೀತಿ ಸುಮಲತಾ ಕೈ ಹಿಡಿಯುತ್ತೆ- ಜಗ್ಗೇಶ್

    ಅಂಬಿ ಸಾಧನೆ, ಜನರ ಪ್ರೀತಿ ಸುಮಲತಾ ಕೈ ಹಿಡಿಯುತ್ತೆ- ಜಗ್ಗೇಶ್

    ರಾಯಚೂರು: ನಟಿ ಸುಮಲತಾ ಅವರು ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋ ನಂಬಿಕೆಯಿದೆ. ಅಂಬರೀಶ್ ಸಾಧನೆ, ಜನರ ಪ್ರೀತಿ ಸುಮಲತಾ ಅವರ ಕೈ ಹಿಡಿಯುತ್ತೆ ಎಂದು ನವರಸನಾಯಕ ಜಗ್ಗೇಶ್ ಹೇಳಿದ್ದಾರೆ.

    56 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ನವರಸನಾಯಕ ಜಗ್ಗೇಶ್ ಪ್ರತೀ ವರ್ಷದಂತೆ ಈ ಬಾರಿಯೂ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು. ಈ ವೇಳೆ ಮಂತ್ರಾಲಯದಲ್ಲಿ ಮಾತನಾಡಿದ ಅವರು, ಎಷ್ಟೇ ದೇವಸ್ಥಾನಗಳಿಗೆ ಹೋದರು ರಾಯರ ದರ್ಶನ ಪಡೆದರೆ ಮಾತ್ರ ಸಮಾಧಾನ ಆಗುತ್ತೆ ಎಂದರು.

    ರಾಜಕೀಯ ವಿಚಾರವಾಗಿ ಸಮಲತಾ ಸ್ಪರ್ಧೆ ಕುರಿತು ಮಾತನಾಡಿ, ರಾಜಕೀಯ ಹೊರತುಪಡಿಸಿ ಅಂಬರೀಶ್ ಅವರ ಜೊತೆ 30 ವರ್ಷಗಳ ಸಂಬಂಧವಿದೆ. ಯಾವತ್ತೂ ಕೂಡ ಅವರ ಕುಟುಂಬಕ್ಕೆ ಒಳಿತನ್ನೇ ಬಯಸುತ್ತೇನೆ. ಸುಮಲತಾ ಅವರು ಸರಿಯಾದ ಸಮಯಕ್ಕೆ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋ ನಂಬಿಕೆಯಿದೆ. ಅಂಬರೀಶ್ ಸಾಧನೆ, ಜನರ ಪ್ರೀತಿ ಸುಮಲತಾ ಅವರ ಕೈ ಹಿಡಿಯುತ್ತೆ ಎಂದರು.

    ನಟರು ಊಟಕ್ಕಾಗಿ ಬಣ್ಣಹಚ್ಚಿದ್ರೆ ರಾಜಕಾರಣಿಗಳು ವೋಟಿಗಾಗಿ ಬಣ್ಣ ಹಚ್ಚುತ್ತಾರೆ. ಬಣ್ಣ ಹಾಕಿಕೊಳ್ಳುವ ರಾಜಕಾರಣಿಗಳ ಬಣ್ಣ ಜನ ತೆಗೀತಾರೆ. ರಾಜಕಾರಣಿಗಳು ಮಾನ, ಮರ್ಯಾದೆ ಕೆಡಿಸಿಕೊಂಡಿದ್ದೇವೆ. ಅದರಲ್ಲಿ ಯಾರೂ ಉತ್ತಮರು ಅನ್ನೋದನ್ನ ಜನ ನಿರ್ಣಯ ಮಾಡುತ್ತಾರೆ ಎಂದರು.

    ಸ್ವಹಿತಾಸ್ತಕಿಗೆ ಮಹಾಘಟಬಂಧನ್ ಮಾಡಿಕೊಳ್ಳಲಾಗಿದೆ. ಅಭಿವೃದ್ಧಿ ಭಾರತವನ್ನ ನೋಡಬೇಕು ಅಂದ್ರೆ ಮೋದಿಗೆ ಅಧಿಕಾರ ಕೊಡಬೇಕು ಎಂದು ಜಗ್ಗೇಶ್ ಹೇಳಿದರು.

  • ಅಪ್ಪ-ಅಮ್ಮ ಇಲ್ಲದ ನನಗೆ ರಾಯರೇ ತಂದೆ-ತಾಯಿ: ಬರ್ತ್ ಡೇ ಸಂಭ್ರಮದಲ್ಲಿ ಜಗ್ಗೇಶ್

    ಅಪ್ಪ-ಅಮ್ಮ ಇಲ್ಲದ ನನಗೆ ರಾಯರೇ ತಂದೆ-ತಾಯಿ: ಬರ್ತ್ ಡೇ ಸಂಭ್ರಮದಲ್ಲಿ ಜಗ್ಗೇಶ್

    ಬೆಂಗಳೂರು: ಇಂದು ಸ್ಯಾಂಡಲ್‍ವುಡ್ ನ ಇಬ್ಬರು ನಟರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು 44ನೇ ಬರ್ತ್ ಡೇ ಆಚರಣೆಯಲ್ಲಿದ್ದರೆ, ಇತ್ತ ನವರಸ ನಾಯಕ, ಮಾತಿನ ಮಲ್ಲ ಜಗ್ಗೇಶ್ ಅವರು 56 ನೇ ವರ್ಷದ ಹುಟ್ಟುಹಬ್ಬದ ಆಚರಣೆಯಲ್ಲಿದ್ದಾರೆ.

    ಜಗ್ಗೇಶ್ ಅವರ ಹುಟ್ಟುಹಬ್ಬ ಇಂದು ಇದ್ದ ಕಾರಣ ನಿನ್ನೆಯೇ ಅವರು ಪತ್ನಿ ಜೊತೆ ಮಂತ್ರಾಲಯಕ್ಕೆ ತೆರಳಿದ್ದಾರೆ. ಈ ಕುರಿತು ಜಗ್ಗೇಶ್ ಅವರು ಟ್ವೀಟ್ ಮಾಡಿದ್ದಾರೆ.

    ಟ್ವೀಟ್ ನಲ್ಲೇನಿದೆ..?
    ತಂದೆತಾಯಿ ರಾಯರ ಆಶೀರ್ವಾದ #ಮಾರ್ಚ್ 17 ರಂದು 56 ವರ್ಷಕ್ಕೆ ನನ್ನ ದೇಹ ಕಾಲಿಟ್ಟಿದೆ. ಅಪ್ಪ- ಅಮ್ಮ ಇಲ್ಲದ ನನಗೆ ರಾಯರೆ ತಂದೆ- ತಾಯಿ ಆಗಿದ್ದಾರೆ. ಹಾಗಾಗಿ ಪತ್ನಿ ಸಮೇತ ರಾಯರ ಆಶೀರ್ವಾದಕ್ಕೆ ಮಂತ್ರಾಲಯಕ್ಕೆ ಬಂದಿದ್ದೇನೆ. ರಾಯರು ಧರಿಸುತ್ತಿದ್ದ ಪಾದುಕೆ ಹಾಗು ರಾಯರೆ ಕೈಯಾರೆ ತಯಾರು ಮಾಡಿ ಪೂಜಿಸುತ್ತಿದ್ದ ಶ್ರೀನಿವಾಸದೇವರ ದರ್ಶನ ಪಡೆದೆವು ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

    ಇಂದು ಮತ್ತೊಂದು ಟ್ವೀಟ್ ಮಾಡಿರುವ ಜಗ್ಗೇಶ್, ಹುಟ್ಟುಹಬ್ಬದ ಪ್ರಯುಕ್ತ ಶುಭಕೋರಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಇದೇ ವೇಳೆ ನಟ ಪುನೀತ್ ರಾಜ್ ಕುಮಾರ್ ಹುಟ್ಟಹಬ್ಬಕ್ಕೂ ಶುಭಾಶಯ ಕೋರಿದ್ದಾರೆ.

    ಇಂದಿನ ಟ್ವೀಟ್ ನಲ್ಲೇನಿದೆ..?
    ತಂದೆ-ತಾಯಿ ರಾಯರ ಆಶೀರ್ವಾದ ಸದಾಬೇಡುವ ಈ ನನ್ನ ದೇಹಕ್ಕೆ 56 ವರ್ಷವಾಗಿದೆ. ನಿಮ್ಮೆಲ್ಲರ ಹಾಗು ನನ್ನ ಕುಟುಂಬದ ಹಾರೈಕೆಯಿಂದ ಓಡುವ ನನ್ನ ವಯಸ್ಸು ಆಯುಷ್ಯ ನಿಲ್ಲಿಸಿ ಸಾಧ್ಯವಾದಷ್ಟು ನಿಮಗೆಲ್ಲ ನಗಿಸಿ ಸಂತೋಷ ನೀಡುವ ಕಾಯಕ ಮಾಡುತ್ತಿರುವೆ. ಹರಸಿ ಹಾರೈಸುತ್ತಿರುವ ನಿಮಗೆ #ಮಾಧ್ಯಮಮಿತ್ರರಿಗೆ ಧನ್ಯವಾದಗಳು. ನನ್ನ ಗುರುಗಳ ಸಂಜಾತ ಪುನೀತ್ ರಾಜ್‍ಗೆ ಹ್ಯಾಪಿ ಬರ್ತ್ ಡೇ ಎಂದು ಬರೆದುಕೊಂಡಿದ್ದಾರೆ.