Tag: actor

  • ಪೊಲೀಸರಲ್ಲಿ ಕ್ಷಮೆಯಾಚಿಸಿದ ದುನಿಯಾ ವಿಜಯ್

    ಪೊಲೀಸರಲ್ಲಿ ಕ್ಷಮೆಯಾಚಿಸಿದ ದುನಿಯಾ ವಿಜಯ್

    ಬೆಂಗಳೂರು: ನನ್ನಿಂದ ತಪ್ಪಾಗಿದೆ ಕ್ಷಮಿಸಿ. ತಲ್ವಾರ್‌ನಿಂದ ಕೇಕ್ ಕತ್ತರಿಸುವುದು ತಪ್ಪು ಎನ್ನುವುದು ಗೊತ್ತಿರಲಿಲ್ಲ ಎಂದು ದುನಿಯಾ ವಿಜಯ್ ಪೊಲೀಸರ ಮುಂದೆ ಕ್ಷಮೆ ಯಾಚಿಸಿದ್ದಾರೆ.

    ನಟ ದುನಿಯಾ ವಿಜಯ್ ತಮ್ಮ ಹುಟ್ಟುಹಬ್ಬದಂದು ತಲ್ವಾರ್‌ನಿಂದ ಕೇಕ್ ಕತ್ತರಿಸಿದ್ದ ಪ್ರಕರಣಕ್ಕೆ ಸಂಬಂಧ ಗಿರಿನಗರ ಪೊಲೀಸರು ನೋಟಿಸ್ ನೀಡಿದ್ದರು. ಈ ಹಿನ್ನೆಲೆ ದುನಿಯಾ ವಿಜಯ್ ಇಂದು ಪೊಲೀಸ್ ವಿಚಾರಣೆಗೆ ಹಾಜರಾದರು. ಸತತ ಎರಡು ಗಂಟೆಗಳ ಕಾಲ ದುನಿಯಾ ವಿಜಯ್ ವಿವರಣೆ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ವಿಚಾರಣೆ ಬಳಿಕ ಮಾತನಾಡಿದ ದುನಿಯಾ ವಿಜಯ್, ಘಟನೆ ಸಂಬಂಧ ಎಲ್ಲಾ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದೇನೆ. ಹುಟ್ಟುಹಬ್ಬದ ವೇಳೆ ಅಭಿಮಾನಿಯೊಬ್ಬ ಕೊಟ್ಟ ತಲ್ವಾರ್‍ನಿಂದ ಕೇಕ್ ಮಾಡಿದೆ. ಆಗ ಅದು ತಪ್ಪು ಎನ್ನುವುದು ನನಗೆ ಗೊತ್ತಾಗಿಲ್ಲ. ಇನ್ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುತ್ತೇನೆ ಎಂದರು ಸ್ಪಷ್ಟನೆ ನೀಡಿದರು.

    ಆಗಿದ್ದೇನು?:
    ದುನಿಯಾ ವಿಜಯ್ ಬೆಂಗಳೂರಿನ ತಮ್ಮ ನಿವಾಸದಲ್ಲಿ ಭಾನುವಾರ 46ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಂಡಿದ್ದರು. ಈ ವೇಳೆ ಕತ್ತಿಯಲ್ಲಿ ಕೇಕ್ ಕಟ್ ಮಾಡಿ ಹೊಸ ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದರು. ಬಳಿಕ ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ, ತಮ್ಮ ತಪ್ಪಿನ ಬಗ್ಗೆ ನಟ ವಿಜಯ್ ಒಪ್ಪಿಕೊಂಡು ಕ್ಷಮೆ ಕೇಳಿದ್ದರು.

  • ಗ್ರಾಮ ದತ್ತು ಪಡೆದ ಸಿನಿಮಾ ತಂಡ

    ಗ್ರಾಮ ದತ್ತು ಪಡೆದ ಸಿನಿಮಾ ತಂಡ

    ಬಾಗಲಕೋಟೆ: ಸಿನಿಮಾ ತಂಡವೊಂದು ಜಿಲ್ಲೆಯ ಬಾದಾಮಿ ತಾಲೂಕಿನ ಕರ್ಲಕೊಪ್ಪ ಗ್ರಾಮವನ್ನು ದತ್ತು ಪಡೆದುಕೊಂಡು ಮಾದರಿಯನ್ನಾಗಿ ಮಾಡಲು ಮುಂದಾಗಿದೆ.

    ‘ಥರ್ಡ್ ಕ್ಲಾಸ್’ ಸಿನಿಮಾದ ನಾಯಕ ಜಗದೀಶ್ ಗ್ರಾಮವನ್ನು ದತ್ತು ಪಡೆದುಕೊಂಡಿದ್ದಾರೆ. ಇವರಿಗೆ ಸಿನಿಮಾ ತಂಡ ಕೂಡ ಸಾಥ್ ನೀಡಿದೆ. ಇತ್ತೀಚೆಗೆ ಮಲ್ಲಪ್ರಭಾ ನದಿಯ ಪ್ರವಾಹದಿಂದ ಹಾನಿಯಾಗಿದ್ದ ಕರ್ಲಕೊಪ್ಪ ಗ್ರಾಮದಲ್ಲಿ ಶಾಲೆಯ ಕಟ್ಟಡ ಸೇರಿದಂತೆ, ರಸ್ತೆ ಅಭಿವೃದ್ಧಿ ಹಾಗೂ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲು ಈ ಸಿನಿಮಾ ತಂಡ ಮುಂದಾಗಿದೆ.

    ಈ ಹಿನ್ನೆಲೆಯಲ್ಲಿ ಬಾಗಲಕೋಟೆ ನಗರಕ್ಕೆ ಸಿನಿಮಾ ಪ್ರಚಾರಕ್ಕೆ ಆಗಮಿಸಿದ ಚಿತ್ರದ ನಾಯಕ ನಮ್ಮ ಜಗದೀಶ್ ಹಾಗೂ ನಟಿ ರೂಪಿಕಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರವಾಹದಿಂದ ಹಾನಿಯಾದ ಮಕ್ಕಳಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ. ಸಿನಿಮಾ ತಂಡ ಗ್ರಾಮ ವಾಸ್ತವ್ಯ ಮಾಡಿ, ಜಾಗೃತಿ ಮೂಡಿಸುವ ಜೊತೆಗೆ ವಿವಿಧ ಬಗೆಯ ಅಭಿವೃದ್ಧಿ ಕಾರ್ಯಗಳಿಂದ ಸಮಾಜ ಸುಧಾರಣೆ ಮಾಡಲು ಮುಂದಾಗಿದ್ದಾರೆ.

  • ದರೋಡೆಕೋರರನ್ನು ಬೆನ್ನಟ್ಟಿ ಹಿಡಿದಿದ್ದ ನಟನಿಗೆ ಡಿಸಿಪಿ ಸನ್ಮಾನ

    ದರೋಡೆಕೋರರನ್ನು ಬೆನ್ನಟ್ಟಿ ಹಿಡಿದಿದ್ದ ನಟನಿಗೆ ಡಿಸಿಪಿ ಸನ್ಮಾನ

    ಬೆಂಗಳೂರು: ದರೋಡೆಕೋರರನ್ನು ಬೆನ್ನಟ್ಟಿ ಹಿಡಿದ್ದ ನಟ ರಘು ಭಟ್ ಅವರನ್ನು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಸನ್ಮಾನಿ ಅಭಿನಂದಿಸಿದರು.

    ನಟ ರಘು ಭಟ್  ಕುಟುಂಬದೊಂದಿಗೆ ಮನೆ ಹೋಗುತ್ತಿರುವಾಗ ದರೋಡೆಕೊರರಿಬ್ಬರು ಕಾರು ಚಾಲಕನ ಬಳಿ ಮೊಬೈಲ್ ಹಾಗೂ ಚೈನ್ ಪಡೆದು ಪರಾರಿಯಾಗುತ್ತಿದ್ದರು. ಕಿರುಚಾಡುತ್ತಿದ್ದ ಚಾಲಕ ಧ್ವನಿ ಕೇಳಿಸಿಕೊಂಡ ರಘು ಅವರು  ದರೋಡೆಕೋರರನ್ನು ಚೇಸ್ ಮಾಡಲು ಆರಂಭಿಸಿದಾಗ, ದರೋಡೆಕೋರರು ಬೈಕ್ ಸ್ಕೀಡ್ ಆಗಿ ಕೆಳಗೆ ಬಿದ್ದಿದ್ದರು. ಸುಮಾರು 2 ಕಿ.ಮೀ ಚೇಸ್ ಮಾಡಿದ ಬಳಿಕ  ಭಾರತಿ ನಗರದ ಸೇಂಟ್ ಜಾನ್ಸ್ ವೃತ್ತದಲ್ಲಿ ರಘು, ದರೋಡೆಕೋರರನ್ನು ಹಿಡಿದಿದ್ದರು. ನಂತರ ಇಬ್ಬರನ್ನೂ, ಹಲಸೂರು ಪೊಲೀಸರಿಗೆ ಒಪ್ಪಿಸಿದ್ದರು.

    ಬಂಧಿತ ಆರೋಪಿಗಳಲ್ಲಿ ಖಾಜಾ ಮೋಹಿನ್ ವಿರುದ್ಧ ದರೋಡೆ, ಸರ ಕಳ್ಳತನ, ಕಳ್ಳತನ ಸೇರಿದಂತೆ ಒಟ್ಟು 27 ಪ್ರಕರಣಗಳಿವೆ. ಆರೋಪಿ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡಲು ಆದೇಶಿಸಲಾಗಿದೆ. ಮತ್ತೊಬ್ಬ ಆರೋಪಿ ಅಬ್ದುಲ್ ಮೋಹಿಮ್‍ನನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಆರೋಪಿಗಳು ದರೋಡೆ ಮಾಡಿದ್ದ ಮೊಬೈಲ್, ಹಣ, ಚೈನ್‍ಗಳನ್ನು ಪೊಲೀಸರು ಚಾಲಕನಿಗೆ ತಲುಪಿಸಿದ್ದಾರೆ.

  • ‘ಹತ್ಯಾಚಾರಿ’ಗಳ ಎನ್‍ಕೌಂಟರ್- ಪೊಲೀಸರಿಗೆ ಸ್ಟಾರ್ಸ್ ಶಬ್ಬಾಶ್

    ‘ಹತ್ಯಾಚಾರಿ’ಗಳ ಎನ್‍ಕೌಂಟರ್- ಪೊಲೀಸರಿಗೆ ಸ್ಟಾರ್ಸ್ ಶಬ್ಬಾಶ್

    ಹೈದರಾಬಾದ್: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಹೈದರಾಬಾದ್ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ಮಾಡಿ ಹತ್ಯೆಗೈದಿದ್ದಾರೆ. ಇದರಿಂದ ಇಡೀ ದೇಶದ ಜನರು ಪೊಲೀಸರಿಗೆ ಸೆಲ್ಯೂಟ್ ಮಾಡುತ್ತಿದ್ದಾರೆ. ಇದೀಗ ಟಾಲಿವುಡ್‍ನ ಸ್ಟಾರ್ ನಟರು ಕೂಡ ಪೊಲೀಸರು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಟಾಲಿವುಡ್ ನಟ ನಾಗಾರ್ಜುನ, ಜ್ಯೂ. ಎನ್‍ಟಿಆರ್. ನಾನಿ, ಅಲ್ಲು ಅರ್ಜುನ್, ರಾಕುಲ್ ಪ್ರೀತ್ ಸಿಂಗ್ ಸೇರಿದಂತೆ ಇನ್ನೂ ಅನೇಕರು ಟ್ವೀಟ್ ಮಾಡುವ ಮೂಲಕ ಪೊಲೀಸರು ಎನ್‍ಕೌಂಟರನ್ನು ಶ್ಲಾಘಿಸುತ್ತಿದ್ದಾರೆ.

    “ಇಂದು ಬೆಳಗ್ಗೆ ಸುದ್ದಿ ನೋಡಿ ಎಚ್ಚರಗೊಂಡಿದ್ದೇನೆ ಹಾಗೂ ಪೊಲೀಸರ ಎನ್‍ಕೌಂಟರ್ ಮೂಲಕ ನ್ಯಾಯ ಸಿಕ್ಕಿದೆ” ಎಂದು ನಾಗಾರ್ಜುನ್ ಬರೆದು ಟ್ವೀಟ್ ಮಾಡಿದರೆ, ಇತ್ತ ನಟ ಎನ್‍ಟಿಆರ್ “ನ್ಯಾಯ ಸಿಕ್ಕಿದೆ. ಈಗ ದಿಶಾ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಬರೆದುಕೊಂಡಿದ್ದಾರೆ.

    “ಊರಿಗೆ ಒಬ್ಬನೇ ರೌಡಿ ಇರಬೇಕು. ಅದು ಪೊಲೀಸ್ ಆಗಿರಬೇಕು” ಎಂಬ ಸಿನಿಮಾ ಡೈಲಾಗ್ ಹೇಳುವ ಮೂಲಕ ನಟ ನಾನಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

    “ಅತ್ಯಾಚಾರದಂತಹ ಅಪರಾಧ ಮಾಡಿದ ನಂತರ ನೀವು ಎಷ್ಟು ದೂರ ಓಡಿ ಹೋಗಬಹುದು” ಎಂದು ಬರೆದು ಎನ್‍ಕೌಂಟರ್ ಮಾಡಿದ ಪೊಲೀಸರಿಗೆ ರಾಕುಲ್ ಸಿಂಗ್ ಧನ್ಯವಾದ ತಿಳಿಸಿದ್ದಾರೆ.

    “ಕೊನೆಗೂ ಅವರು ಮಾಡಿದ ಅಮಾನವೀಯ ಅಪರಾಧಕ್ಕೆ ಶಿಕ್ಷೆಯಾಗಿದೆ. ಮತ್ತೆ ಮುಗ್ಧ ದಿಶಾ ಹಿಂದಿರುಗಿ ಬರಲು ಸಾಧ್ಯವಿಲ್ಲ. ಆದರೆ ಮುಂದೆ ಯಾರಾದರೂ ಅತ್ಯಾಚಾರ ಅಥವಾ ಕೊಲೆಯ ಬಗ್ಗೆ ಯೋಚನೆ ಮಾಡಿದಾಗ ಅವರು ಅದರ ಪರಿಣಾಮಗಳ ಬಗ್ಗೆಯೂ ಅರಿತುಕೊಳ್ಳುತ್ತಾರೆ” ಎಂದು ನಟ ನಿಖಿಲ್ ಸಿದ್ಧಾರ್ಥ ಹೇಳಿದ್ದಾರೆ.

    “ನ್ಯಾಯ ಸಿಕ್ಕಿದೆ, ನಮ್ಮ ತೆಲಂಗಾಣ ಮುಖ್ಯಮಂತ್ರಿಗೆ ಧನ್ಯವಾದಗಳು. ನಮ್ಮ ಪೊಲೀಸ್ ಶ್ರೀ ಸಜ್ಜನಾರ್ ಅವರಿಗೆ ಹ್ಯಾಟ್ಸಪ್. ದಿಶಾ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ನಟ ರಾಜಶೇಖರ್ ಬರೆದುಕೊಂಡಿದ್ದಾರೆ. ಜೊತೆಗೆ ಸಿಎಂ ಮತ್ತು ಪೊಲೀಸ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.

    ಇಂದು ಹೈದರಾಬಾದ್-ಬೆಂಗಳೂರು ಹೈವೇ 44ರಲ್ಲಿ ಪೊಲೀಸರು ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದಾರೆ. ಕಾಮುಕರು ಪಶುವೈದ್ಯೆಯನ್ನು ಬೆಂಕಿ ಹಚ್ಚಿ ಸುಟ್ಟ ಸ್ಥಳದಲ್ಲೇ ಪೊಲೀಸರು ಅತ್ಯಾಚಾರಿಗಳ ಮೇಲೆ ಫೈರಿಂಗ್ ಮಾಡಿ ಹತ್ಯೆ ಮಾಡಿದ್ದಾರೆ. ಪಶುವೈದ್ಯೆಯನ್ನು ಸುಟ್ಟ ಘಟನಾ ಸ್ಥಳ ಮಹಜರು ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ನಾಲ್ವರು ಅತ್ಯಾಚಾರಿಗಳ ಮೇಲೆ ಎನ್‍ಕೌಂಟರ್ ಮಾಡಿದ್ದಾರೆ. ಕರ್ನಾಟಕದ ಹುಬ್ಬಳ್ಳಿ ಮೂಲದ ವಿಶ್ವನಾಥ್ ಸಜ್ಜನರ್ ನೇತೃತ್ವದಲ್ಲಿ ಈ ಎನ್ ಕೌಂಟರ್ ನಡೆದಿದೆ.

  • ತಪ್ಪಿರುವ ದಾರಿಯನ್ನ ಸರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತೇನೆ: ರವಿಚಂದ್ರನ್

    ತಪ್ಪಿರುವ ದಾರಿಯನ್ನ ಸರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತೇನೆ: ರವಿಚಂದ್ರನ್

    ಬೆಂಗಳೂರು: ತಪ್ಪಿರುವ ದಾರಿಯನ್ನು ಸರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತೇನೆ ಎಂದು ನಟ, ನಿರ್ಮಾಪಕ ಮತ್ತು ನಿರ್ದೇಶಕ ಡಾ. ವಿ ರವಿಚಂದ್ರನ್ ಅವರು ಹೇಳಿದ್ದಾರೆ.

    ಇಂದು ಸಿಎಂಆರ್ ಯುನಿರ್ವಸಿಟಿ 4ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ನಟ ರವಿಚಂದ್ರನ್‌ಗೆ ಡಾಕ್ಟರೇಟ್ ಗೌರವ ನೀಡಲಾಯಿತು. ಬೆಂಗಳೂರಿನ ಸಿಎಂಆರ್ ಕಾಲೇಜಿನಲ್ಲಿ ಅವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರವಿಚಂದ್ರನ್ ಅವರ ಪತ್ನಿ ಸುಮತಿ, ಮಗಳು ಗೀತಾಂಜಲಿ, ಅಳಿಯ ಅಜಯ್, ಮಕ್ಕಳಾದ ವಿಕ್ರಂ ಮತ್ತು ಮನೋರಂಜನ್ ಭಾಗಿಯಾಗಿದ್ದರು.

    ಈ ವೇಳೆ ಡಾಕ್ಟರೇಟ್ ಗೌರವ ಪಡೆದು ಮಾತನಾಡಿದ ರವಿಚಂದ್ರನ್, ಇನ್ನೂ ಮುಂದೆ ತಪ್ಪಿರುವ ದಾರಿಯನ್ನು ಸರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತೇನೆ. ಡಾಕ್ಟರೇಟ್ ಗೌರವ ಸ್ವೀಕರಿಸಿ, ಇನ್ಮುಂದೆ ಹೊಸ ದಾರಿಯನ್ನು ಹಿಡಿಯುತ್ತೇನೆ. ನನ್ನನ್ನು ಗುರುತಿಸಿ ಸಿಎಂಆರ್ ಯುನಿವರ್ಸಿಟಿಯವರು ಡಾಕ್ಟರೇಟ್ ಗೌರವ ನೀಡಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

    ಈ ಹಿಂದೆಯೇ ಮೂರು ದಶಕಗಳಿಂದ ಚಿತ್ರರಂಗದಲ್ಲಿ ರವಿಚಂದ್ರನ್ ಅವರು ಮಾಡಿದ ಸೇವೆಗೆ ಗೌರವ ಡಾಕ್ಟರೇಟ್ ನೀಡಬೇಕು ಎಂದು ಅಭಿಮಾನಿಗಳು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರು. ಅವರ ಬಹುದಿನದ ಆಸೆ ಈಡೇರಿರುವುದರಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ರವಿಚಂದ್ರನ್ ಅವರು ನಟ, ನಿರ್ದೇಶಕ, ನಿರ್ಮಾಪಕ, ಗೀತ ರಚನೆ, ಸಂಗೀತ, ಸಂಭಾಷಣೆ ಸೇರಿದಂತೆ ಹಲವು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ 85ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ.

    ಭಾರತೀಯ ಚಿತ್ರರಂಗದಲ್ಲಿ ವರನಟ ರಾಜ್‌ಕುಮಾರ್ ಅವರು ಮೊದಲು ಡಾಕ್ಟರೇಟ್ ಪದವಿಯನ್ನು ಪಡೆದಿದ್ದು, ಆ ಬಳಿಕ ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್ ಸೇರಿದಂತೆ ಹಲವರು ಗೌರವ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಈ ಸಾಲಿಗೆ ಈಗ ರವಿಚಂದ್ರನ್ ಅವರು ಕೂಡ ಸೇರ್ಪಡೆಯಾಗಿದ್ದಾರೆ.

  • ಪ್ರಕಾಶ್ ರೈ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು

    ಪ್ರಕಾಶ್ ರೈ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು

    ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರೈ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ. ಅಖಿಲ ಭಾರತ ಹಿಂದೂ ಮಹಾಸಭಾದಿಂದ ಈ ದೂರು ನೀಡಲಾಗಿದೆ. ಜೊತೆಗೆ ಪೊಲೀಸ್ ಆಯುಕ್ತರಿಗೂ ರೈ ವಿರುದ್ಧ ದೂರು ನೀಡಲಾಗಿದೆ.

    ಕನ್ನಡ ಚಿತ್ರರಂಗದಲ್ಲಿ ಪ್ರಕಾಶ್ ರೈಗೆ ನಟನೆ ಮಾಡಲು ಅವಕಾಶ ಕೊಡಬಾರದು. ಹಿಂದೂ ದೇವರ ಹಾಗೂ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಅವರನ್ನು ಚಿತ್ರ ರಂಗದಿಂದ ದೂರವಿಡಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಪ್ರಕಾಶ್ ರೈ ಹೇಳಿದ್ದು ಏನು?
    ಖಾಸಗಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಪ್ರಕಾಶ್ ರೈ ಭಾಗವಹಿಸಿ ರಾಮಾಯಣದಲ್ಲಿ ಬರುವ ರಾಮ-ಲೀಲಾ ಬಗ್ಗೆ ಮಾತನಾಡುತ್ತಾ, ಅದಕ್ಕೆ ಪೋರ್ನ್ ಸೈಟ್ ಬಗ್ಗೆ ಉದಾಹರಣೆ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.

    ರಾಮಲೀಲಾ ಕಾರ್ಯಕ್ರಮದ ಬಗ್ಗೆ ಸಿಟ್ಟಿನಿಂದ ಉತ್ತರಿಸಿದ ಪ್ರಕಾಶ್ ರೈ, ಶ್ರೀರಾಮ, ಸೀತೆ, ಲಕ್ಷ್ಮಣ ಪಾತ್ರಧಾರಿಗಳನ್ನು ಹೆಲಿಕಾಪ್ಟರ್ ಮೂಲಕ ಮುಂಬೈನಿಂದ ಮೇಕಪ್ ಮಾಡಿ ಕರೆತರಲಾಗುತ್ತದೆ. ಈ ರೀತಿಯ ಕಾರ್ಯಕ್ರಮಗಳು ದೇಶದಲ್ಲಿ ನಡೆಯಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

    ಈ ಹೇಳಿಕೆಗೆ ನಿರೂಪಕರು, ಎಲ್ಲರಿಗೂ ಅದಕ್ಕೆ ಆಕ್ಷೇಪ ಇರಬೇಕು ಎಂದೇನಿಲ್ಲ. ಇದು ಪ್ರಜಾಪ್ರಭುತ್ವ ದೇಶ, ಎಲ್ಲರ ಭಾವನೆಗೂ ಬೆಲೆ ಕೊಡಬೇಕಾಗುತ್ತದೆ ಎಂದಾಗ ಮಕ್ಕಳು ಪೋರ್ನ್ ಸೈಟ್ ನೋಡುತ್ತಿದ್ದರೆ ಸುಮ್ಮನಿರಲು ಸಾಧ್ಯವೇ? ಈ ರೀತಿಯ ಕಾರ್ಯಕ್ರಮಗಳು ದೇಶಕ್ಕೆ ಅಪಾಯಕಾರಿ. ಇದರಿಂದಾಗಿ ದೇಶದಲ್ಲಿರುವ ಅಲ್ಪಸಂಖ್ಯಾತರಿಗೆ ಭಯದ ಸನ್ನಿವೇಶವನ್ನು ಸೃಷ್ಟಿಸುವುದು ಎಷ್ಟು ಸರಿ ಎಂದು ಮರು ಪ್ರಶ್ನೆ ಹಾಕಿದ್ದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಹಿಂದೂಗಳು ದೇವಸ್ಥಾನಕ್ಕೆ ಹೋಗುವುದು, ಅಲ್ಲಿನ ವಿಗ್ರಹಕ್ಕೆ ಪೂಜಿಸುವುದು ಬೆಳೆದುಕೊಂಡು ಬಂದ ಪದ್ಧತಿ. ರಾಮಲೀಲಾ ಮುಂತಾದ ಕಾರ್ಯಕ್ರಮ ನಡೆಸಿ ನಾಟಕ ಮಾಡುವುದು ಯಾಕೆ? ಜನರಿಗೆ ಭಯ ಹುಟ್ಟು ಹಾಕುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

  • ವಿಡಿಯೋ- 4 ಬೆಕ್ಕುಗಳೊಂದಿಗೆ ಹೋರಾಡಿ ಪಾರಾದ ನಾಗರ ಹಾವು

    ವಿಡಿಯೋ- 4 ಬೆಕ್ಕುಗಳೊಂದಿಗೆ ಹೋರಾಡಿ ಪಾರಾದ ನಾಗರ ಹಾವು

    ಹಾವು-ಮುಂಗುಸಿ, ನಾಯಿ-ಬೆಕ್ಕಿನ ಕದನವನ್ನು ಆಗಾಗ ನೋಡಿರುತ್ತೀರಿ. ಆದರೆ ಇಲ್ಲಿ 4 ಬೆಕ್ಕುಗಳೊಂದಿಗೆ ಹೋರಾಡಿ ತನ್ನ ಪ್ರಾಣ ಉಳಿಸಿಕೊಂಡು ಪಾರಾದ ವಿಷಕಾರಿ ನಾಗರ ಹಾವಿನ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಈ ವಿಡಿಯೋವನ್ನು ನಟ ನೈಲ್ ನಿತಿನ್ ಮುಕೇಶ್ ಎಂಬವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಭಾನುವಾರ ಶೇರ್ ಮಾಡಿಕೊಂಡಿದ್ದಾರೆ. ನಟ ತಮ್ಮ ಮುಂಬರುವ ಬೈಪಾಸ್ ರೋಡ್ ಚಿತ್ರದ ಚಿತ್ರೀಕರಣಕ್ಕೆ ತೆರಳಿದ ಸಂದರ್ಭದಲ್ಲಿ ಬೆಕ್ಕುಗಳು ಹಾಗೂ ಹಾವು ಇರುವುದನ್ನು ಗಮನಿಸಿದ್ದಾರೆ. ಅಲ್ಲದೆ ತಮ್ಮ ಮೊಬೈಲ್ ನಲ್ಲಿ ಅವುಗಳ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

    ವಿಡಿಯೋದಲ್ಲೇನಿದೆ..?
    ವಿಷಕಾರಿ ನಾಗರಾಹವನ್ನು ನಾಲ್ಕು ಬೆಕ್ಕುಗಳು ಸುತ್ತುವರಿದಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು. ಇದರಲ್ಲಿ 2 ಬೆಕ್ಕುಗಳು ಹಾವಿನ ಮೇಲೆ ದಾಳಿ ಮಾಡಲು ಯತ್ನಿಸಿವೆ. ಹಾವು ಕೂಡ ತನ್ನ ಮೇಲೆ ದಾಳಿ ಮಾಡುತ್ತಿರುವ ಬೆಕ್ಕುಗಳಿಂದ ಪಾರಾಗಲು ಶತ ಪ್ರಯತ್ನ ಮಾಡುತ್ತದೆ. ಕೊನೆಗೆ ಹೇಗೋ ಬೆಕ್ಕುಗಳಿಂದ ತಪ್ಪಿಸಿಕೊಂಡು ಪಕ್ಕದಲ್ಲೇ ಇರುವ ಗಿಡಗಳೊಳಗೆ ಸೇರಿಕೊಂಡು ಬಚಾವ್ ಆಗಿದೆ.

    ಈ ದೃಶ್ಯಗಳು ನಟನ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಇಂದು ಬೆಳಗ್ಗೆ ಚಿತ್ರದ ಶೂಟಿಂಗ್‍ಗೆ ತೆರಳಿದ್ದೆ. ಹೀಗೆ ಬಂದು ಕಾರಿನಿಂದ ಇಳಿದಾಗ ಈ ದೃಶ್ಯವನ್ನು ನೋಡಿದೆ ಎಂದು ಬರೆದುಕೊಂಡಿದ್ದಾರೆ.

    ಈ ವಿಡಿಯೋವನ್ನು ನಟ ತಮ್ಮ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ತಕ್ಷಣವೇ 77 ಸಾವಿರಕ್ಕೂ ಹೆಚ್ಚು ವ್ಯೂವ್ ಪಡೆದುಕೊಂಡಿದ್ದು, ಸಾಕಷ್ಟು ಕಮೆಂಟ್ ಗಳು ಕೂಡ ಬಂದಿವೆ. ವ್ಯಕ್ತಿಯೊಬ್ಬನ ಕಮೆಂಟ್ ಗೆ ವನ್ಯಜೀವಿ ಅಧಿಕಾರಿಗಳಿಗೆ ಮಾಹಿತಿ ನಿಡಿದ್ದು, ಕೂಡಲೇ ಅವರು ಸ್ಥಳಕ್ಕೆ ದೌಡಾಯಿಸಿ ಹಾವನ್ನು ರಕ್ಷಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

     

    View this post on Instagram

     

    Earlier in the day. Went for the BGM with @naman.n.mukesh for #BypassRoad , got down of the car and saw this.

    A post shared by Neil Nitin Mukesh (@neilnitinmukesh) on

  • ಮಡಿಕೇರಿಯಲ್ಲಿ ಹುಚ್ಚ ವೆಂಕಟ್ ಹುಚ್ಚಾಟ- ಸ್ಥಳೀಯರಿಂದ ಗೂಸಾ

    ಮಡಿಕೇರಿಯಲ್ಲಿ ಹುಚ್ಚ ವೆಂಕಟ್ ಹುಚ್ಚಾಟ- ಸ್ಥಳೀಯರಿಂದ ಗೂಸಾ

    ಮಡಿಕೇರಿ: ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮತ್ತೆ ಹಳೇ ವರಸೆಯನ್ನು ಮುಂದುವರಿಸಿದ್ದು, ಇಂದು ಮಡಿಕೇರಿಯಲ್ಲಿ ಹುಚ್ಚಾಟವಾಡಿ ಸಾರ್ಜಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

    ಹುಚ್ಚ ವೆಂಕಟ್ ಇಂದು ಸಂಜೆ ಮಡಿಕೇರಿ ನಗರದ ಡಿಪೋ ಬಳಿ ಕಾಣಿಸಿಕೊಂಡು, ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದರು. ಈ ವೇಳೆ ನಾಪೋಕ್ಲುವಿನ ದಿಲೀಪ್ ಎಂಬವರು ತಮ್ಮ ಕಾರನ್ನು ಡಿಪೋ ಬಳಿ ನಿಲ್ಲಿಸಿ ಸಮೀಪದ ಎಟಿಎಂಗೆ ಹೋಗಿದ್ದರು. ಎಟಿಎಂನಿಂದ ಹಿಂತಿರುಗುತ್ತಿದ್ದ ದಿಲೀಪ್ ಸಾಮಾನ್ಯವಾಗಿಯೇ ಹುಚ್ಚ ವೆಂಕಟ್ ಅವರನ್ನು ನೋಡಿದ್ದಾರೆ. ಇಷ್ಟಕ್ಕೆ ಕೆರಳಿದ ಹುಚ್ಚ ವೆಂಕಟ್ ‘ನನ್ನ ಯಾಕೆ ಗುರಾಯಿಸುತ್ತಿದ್ದೀಯಾ’ ಎಂದು ತಕರಾರು ಎತ್ತಿದ್ದಾರೆ.

    ದಿಲೀಪ್ ಉತ್ತರಿಸಲು ಯತ್ನಿಸುತ್ತಿದ್ದಂತೆ ಹುಚ್ಚ ವೆಂಕಟ್ ಏಕಾಏಕಿ ದಾಳಿ ಮಾಡಲು ಆರಂಭಿಸಿದ್ದಾರೆ. ಮಾಧ್ಯಮದವರು ಸ್ಥಳಕ್ಕೆ ಹೋಗಿ ವರದಿ ಮಾಡುತ್ತಿದ್ದಾಗಲೂ ಹುಚ್ಚ ವೆಂಕಟ್ ದಿಲೀಪ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ದಿಲೀಪ್ ತಪ್ಪಿಸಿಕೊಳ್ಳುತ್ತಿದ್ದಂತೆ ಕಾರಿನತ್ತ ಆಗಮಿಸಿದ ಹುಚ್ಚ ವೆಂಕಟ್ ಸ್ಥಳದಲ್ಲಿದ್ದ ಕಲ್ಲಿನಿಂದ ಕಾರಿನ ಗ್ಲಾಸ್ ಒಡೆದಿದ್ದಾರೆ. ಅಷ್ಟೇ ಅಲ್ಲದೆ, ಕಾರಿನ ಮೇಲೆ ಕಾಲಿಟ್ಟು ದಿಲೀಪ್‍ರನ್ನು ಗದರಿಸಿದ್ದಾರೆ.

    ಹುಚ್ಚ ವೆಂಕಟ್ ಹುಚ್ಚಾಟವನ್ನು ಗಮನಿಸುತ್ತಿದ್ದ ಸ್ಥಳೀಯರು ಕೋಪಗೊಂಡು, ಬುದ್ಧಿ ಹೇಳಲು ಮುಂದಾದರು. ಆದರೆ ಹುಚ್ಚ ವೆಂಕಟ್ ಸುಮ್ಮನಾಗದಿದ್ದಾಗ ಸುತ್ತುವರಿದ ಸಾರ್ವಜನಿಕರು ದಿಲೀಪ್ ಕೈಯಿಂದ ಹಲ್ಲೆ ನಡೆಸಿದ್ದಲ್ಲದೆ, ತಾವೂ ಕೂಡ ಥಳಿಸಿದ್ದಾರೆ.

    ಮಳೆಯ ನಡುವೆ ಬಿದ್ದ ಹೊಡೆತಕ್ಕೆ ತಣ್ಣಗಾಗದ ಹುಚ್ಚ ವೆಂಕಟ್ ಮತ್ತೆ ಗದರಿ ಅಚ್ಚರಿ ಮೂಡಿಸಿದರು. ಈ ಬಗ್ಗೆ ಸಾರ್ವಜನಿಕರು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಮಡಿಕೇರಿ ಪೊಲೀಸರು ಹುಚ್ಚ ವೆಂಕಟ್ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.

    ಹುಚ್ಚ ವೆಂಕಟ್ ನಿನ್ನೆಯಷ್ಟೇ ಮಂಡ್ಯ ಜಿಲ್ಲೆಯ ಪಾಂಡವಪುರದ ಮಂಡ್ಯ ಸರ್ಕಲ್‍ನಲ್ಲಿ ಸಹಜ ಸ್ಥಿತಿಯಲ್ಲೇ ಕಾಣಿಸಿಕೊಂಡಿದ್ದರು. ನೀಲಿ ಶರ್ಟ್, ಕಪ್ಪು ನೀಲಿ ಬಣ್ಣ ಪ್ಯಾಂಟ್ ಹಾಗೂ ಶೂ ಹಾಕಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಇದನ್ನು ನೋಡಿದ ಕೆಲ ಯುವಕರು ತಮ್ಮ ಮೊಬೈಲ್‍ನಲ್ಲಿ ಹುಚ್ಚ ವೆಂಕಟ್ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿದಿದ್ದರು. ಆದರೆ ಇಂದು ಮಡಿಕೇರಿಯಲ್ಲಿ ತಮ್ಮ ಹುಚ್ಚಾಟದಿಂದ ಜನರ ಕೋಪಕ್ಕೆ ಗುರುಯಾಗಿದ್ದಾರೆ.

  • ತವರು ಮನೆಗೆ ಹಣ ಕಳಿಸಿದ್ದಕ್ಕೆ ಪತ್ನಿ ಮೇಲೆ ನಟ ಹಲ್ಲೆ

    ತವರು ಮನೆಗೆ ಹಣ ಕಳಿಸಿದ್ದಕ್ಕೆ ಪತ್ನಿ ಮೇಲೆ ನಟ ಹಲ್ಲೆ

    ಬೆಂಗಳೂರು: ತವರು ಮನೆಗೆ ಹಣ ಕಳಿಸಿದ್ದಕ್ಕೆ ಸ್ಯಾಂಡಲ್‍ವುಡ್ ನಟ ಬಾಲು ನಾಗೇಂದ್ರ ತಮ್ಮ ಧರ್ಮಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ.

    ಹುಲಿರಾಯ, ಕಪಟನಾಟಕ ಪಾತ್ರಧಾರಿ, ಕಡ್ಡಿಪುಡಿ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಬಾಲು ನಾಗೇಂದ್ರ, ಪತ್ನಿ ತವರು ಮನೆಗೆ ಹಣ ಕಳಿಸುತ್ತಿರುವುದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಅವರ ಪತ್ನಿ ದೂರು ನೀಡಿದ್ದಾರೆ.

    ದೂರಿನಲ್ಲೇನಿದೆ?:
    ರೇಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದ ನಾಗೇಂದ್ರ ಅವರ ಪತ್ನಿ, ಪ್ರತೀ ತಿಂಗಳು 8000 ಹಣವನ್ನು ತವರು ಮನೆಗೆ ಕಳುಹಿಸುತ್ತಿದ್ದರು. ಇದರಿಂದ ಕೋಪಗೊಂಡ ನಟ, ನನಗೆ ದಿನ ಹೊಡೆಯುತ್ತಿದ್ದರು. ಅಲ್ಲದೆ ಪ್ರತೀ ದಿನ ಕೆಲಸಕ್ಕೆ ಬಿಡುವಾಗ ರಸ್ತೆಯುದ್ದಕ್ಕೂ ಥಳಿಸುತ್ತಿದ್ದರು ಎಂದು ಬಾಲು ಪತ್ನಿ ಆರೋಪ ಮಾಡಿದ್ದಾರೆ.

    ನಟ ನಾಗೇಂದ್ರ ಹೆಂಡತಿ ಮಗುವನ್ನು ಹೊಡೆದು ತವರು ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಕೆಲಸಕ್ಕೆ ಹೋಗಲ್ಲ ಓದ್ಕೋಬೇಕು ಎಂದು ಪತ್ನಿ ಹೇಳಿದ್ದಕ್ಕೆ ಕೋಪಗೊಂಡ ನಾಗೇಂದ್ರ ಕೆಲಸಕ್ಕೆ ಹೋಗುವಂತೆ ದಿನ ಹಿಂಸೆ ನೀಡುತ್ತಿದ್ದರು. ನನ್ನ ಬಳಿಯಿಂದ ಪಡೆದ 1.5 ಲಕ್ಷ ಹಣವನ್ನು ವಾಪಸ್ ಮಾಡಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಇವೆಲ್ಲಾ ವಿಚಾರಗಳಿಂದ ಬೇಸತ್ತು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಟನ ವಿರುದ್ಧ ಐಪಿಸಿ ಸೆಕ್ಷನ್ 498ಎ (ಪತ್ನಿಗೆ ಹಿಂಸೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

  • ಅಪಘಾತ ಮಾಡಿ, ರಿಪೇರಿ ಖರ್ಚು ಕೊಡ್ತೀನೆಂದು ಕೈಕೊಟ್ಟ ಧಾರವಾಹಿ ನಟ

    ಅಪಘಾತ ಮಾಡಿ, ರಿಪೇರಿ ಖರ್ಚು ಕೊಡ್ತೀನೆಂದು ಕೈಕೊಟ್ಟ ಧಾರವಾಹಿ ನಟ

    – ನಟ ದಿಲೀಪ್ ಶೆಟ್ಟಿ ವಿರುದ್ಧ ದೂರು ದಾಖಲು

    ಬೆಂಗಳೂರು: ಅಪಘಾತ ಮಾಡಿ, ರಿಪೇರಿ ಖರ್ಚು ಕೊಡುತ್ತೇನೆ ಎಂದು ಹೇಳಿ ಈಗ ಉಲ್ಟಾ ಹೊಡೆದ ಆರೋಪದ ಹಿನ್ನೆಲೆಯಲ್ಲಿ ವಿದ್ಯಾವಿನಾಯಕ ಧಾರವಾಹಿ ನಟ ದಿಲೀಪ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ.

    ಈ ಘಟನೆ ತಡರಾತ್ರಿ 2.30 ರ ವೇಳೆಗೆ ಚಾಮರಾಜಪೇಟೆ ನಾಲ್ಕನೇ ಮುಖ್ಯ ರಸ್ತೆಯಲ್ಲಿ ನಡೆದಿದ್ದು, ಯುವತಿಯ ಜೊತೆ ಕಾರಿನಲ್ಲಿ ಬಂದ ದಿಲೀಪ್, ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದು ದೂರು ನೀಡಬೇಡಿ ಕಾರಿನ ರಿಪೇರಿ ಖರ್ಚು ನಾನೇ ಕೊಡುತ್ತೇನೆ ಎಂದು ಹೇಳಿದ್ದಾರೆ.

    ಇಂದು ಬೆಳಗ್ಗೆ ಬಂದು ಇನ್ನೋವಾ ಕಾರಿನ ಚಾಲಕನೇ ನನಗೆ ಡಿಕ್ಕಿ ಹೊಡೆದಿದ್ದಾನೆ ಎಂದು ದಿಲೀಪ್ ಆರೋಪಿಸಿದ್ದಾರೆ. ಈಗ ಕಾರು ಚಾಲಕ ತಿಪ್ಪೇಸ್ವಾಮಿ ಮತ್ತು ದಿಲೀಪ್ ಇಬ್ಬರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡು, ಇಬ್ಬರು ಚಿಕ್ಕಪೇಟೆ ಸಂಚಾರಿ ಠಾಣೆಯಲ್ಲಿ ದೂರು ನೀಡಿದ್ದಾರೆ.