Tag: actor

  • ಗಂಜಿ ಕಾಸಿನ ಆಸೆಗೆ ಹೇಳಿಕೆ ಕೊಟ್ಟ ಚೇತನ್ : ಹೆಬ್ಬಾರ್ ವ್ಯಂಗ್ಯ, ಬಂಧನಕ್ಕೆ ಆಗ್ರಹ

    ಗಂಜಿ ಕಾಸಿನ ಆಸೆಗೆ ಹೇಳಿಕೆ ಕೊಟ್ಟ ಚೇತನ್ : ಹೆಬ್ಬಾರ್ ವ್ಯಂಗ್ಯ, ಬಂಧನಕ್ಕೆ ಆಗ್ರಹ

    ಬೆಂಗಳೂರು: ಕನ್ನಡ ಚಿತ್ರರಂಗಗಳಲ್ಲಿ ನಟಿಸುತ್ತಿರುವ ಚೇತನ್ ಎನ್ನುವ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣರ ವಿರುದ್ಧವಾಗಿ ಅವಹೇಳನಕಾರಿಯಾಗಿ, ಪ್ರಚೋದನಕಾರಿಯಾಗಿ ಮಾತಾಡಿರುವುದು ಗಮನಕ್ಕೆ ಬಂದಿದೆ. ಮೊದಲಿಗೆ ಆತನ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಚಿವ ಶಿವರಾಂ ಹೆಬ್ಬಾರ್ ಟ್ವೀಟ್ ಮಾಡಿದ್ದಾರೆ.

    ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಯೊಂದು ಧರ್ಮ, ಜಾತಿಗಳಿಗೆ ಸ್ಥಾನಮಾನ ನೀಡಿದ್ದಾರೆ. ಈ ವ್ಯಕ್ತಿಯ ಹೇಳಿಕೆ ಸಂವಿಧಾನಕ್ಕೆ ವಿರೋಧವಾದುದು ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವಂತಹದು. ಇದನ್ನೂ ಓದಿ: ನಟ ಚೇತನ್ ವಿರುದ್ಧ FIR ದಾಖಲು

    ಸಮಾಜದಲ್ಲಿ ತಾನು ಗುರುತಿಸಿಕೊಳ್ಳಬೇಕು ಅಂತಲೋ, ಗಂಜೀ ಕಾಸಿನ ಆಸೆಗೋ ಹೇಳಿಕೆ ಕೊಡೋ ಇಂತಹ ಸಮಾಜ ಕಂಟಕರನ್ನು ಕಾನೂನಿನ ಚೌಕಟ್ಟಿನಲ್ಲಿ ಬಂಧಿಸಿ, ಕಠಿಣ ಕ್ರಮ ಜರುಗಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಅಂತಾ ಸಚಿವ ಶಿವರಾಂ ಹೆಬ್ಬಾರ್ ಟ್ವೀಟ್ ಮಾಡಿದ್ದಾರೆ.

    ಚೇತನ್ ಹೇಳಿದ್ದೇನು..?
    ನಟ ಚೇತನ್ ಸಾಮಾಜಿಕ ಜಾಲತಾಣದಲ್ಲಿ ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. . ಬ್ರಾಹ್ಮಣ ಸಮುದಾಯ ವಿರುದ್ಧ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಬ್ರಾಹ್ಮಣರನ್ನು ಭಯೋತ್ಪಾದಕರು ಎಂದು ಚೇತನ್ ನೀಡಿರುವ ಹೇಳಿಕೆ ಭಾರೀ ವಿವಾದ ಸೃಷ್ಟಿಸಿತ್ತು. ಈ ಬೆನ್ನಲ್ಲೇ ನಟನ ವಿರುದ್ಧ ಎಫ್‍ಐಆರ್ ಕೂಡ ದಾಖಲಾಗಿತ್ತು.

     

    View this post on Instagram

     

    A post shared by Chetan Ahimsa (@chetanahimsa)

  • ಫೇಸ್‍ಬುಕ್ ಲೈವ್ ವೇಳೆ ನಿದ್ದೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಕಿರುತೆರೆ ನಟ

    ಫೇಸ್‍ಬುಕ್ ಲೈವ್ ವೇಳೆ ನಿದ್ದೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಕಿರುತೆರೆ ನಟ

    ಚೆನ್ನೈ: ಮಹಾಮಾರಿ ಕೊರೊನಾ ದೇಶವನ್ನು ವಕ್ಕರಿಸಿದ ಬಳಿಕ ಅನೇಕರು ಕೋವಿಡ್ ಗೆ ಬಲಿಯಾದ್ರೆ ಇನ್ನೂ ಕೆಲವರು ಬದುಕುವ ದಾರಿ ಕಾಣದೆ ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ. ಅಂತೆಯೇ ಇದೀಗ ಬೆಂಗಾಲಿ ಕಿರುತೆರೆ ನಟರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಆತ್ಮಹತ್ಯೆಗೆ ಯತ್ನಿಸಿದ ನಟನನ್ನು ಸುವೋ ಚಕ್ರವರ್ತಿ ಎಂದು ಗುರುತಿಸಲಾಗಿದೆ. ಇವರು ಇತ್ತೀಚೆಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ಲೈವ್ ಗೆ ಬಂದು ತಮ್ಮ ಅಭಿಮಾನಿಗಳ ಜೊತೆ ಮಾತನಾಡುತ್ತಲೇ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ: ಟಯರ್ ಸ್ಫೋಟಗೊಂಡು ಅಂಬುಲೆನ್ಸ್ ಮರಕ್ಕೆ ಡಿಕ್ಕಿ – ತುಂಬು ಗರ್ಭಿಣಿ ಸಹಿತ ಮೂವರ ದುರ್ಮರಣ

    ಜೀವನದಲ್ಲಿ ಜಿಗುಪ್ಸೆಗೊಂಡು ನಟ ಫೇಸ್ ಬುಕ್ ಲೈವ್ ನಲ್ಲಿದ್ದಾಗಲೇ ನಿದ್ದೆ ಮಾತ್ರೆ ತೆಗೆದುಕೊಂಡು ಸಾವಿನ ದಾರಿ ಹಿಡಿಯಲು ಮುಂದಾಗಿದ್ದಾರೆ. ಲೈವ್ ನಲ್ಲಿ ನಟ, ಯಾಕೋ ಗೊತ್ತಿಲ್ಲ ನನಗೆ ಕಟ್ಟಡದಿಂದ ಹಾರಿ, ಕೈ ಕಟ್ ಮಾಡಿಕೊಂಡು ಹಿಂಸಾತ್ಮಕವಾಗಿ ಸಾಯಲು ಮನಸ್ಸಿಲ್ಲ. ಇದು ನನಗೆ ಇಷ್ಟನೂ ಇಲ್ಲ. ನನಗೆ ಕೊನೆಯ ಆಯ್ಕೆ ಸಿಕ್ಕಿದ್ದು ನಿದ್ದೆ ಮಾತ್ರೆ. ಹೀಗಾಗಿ ನಿದ್ದೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಯಾರಿಗೆ ಅತೀ ಹೆಚ್ಚು ಬಿಪಿ ಇದೆಯೋ ಅವರು ಹೃದಯಾಘಾತವಾಗಿ ಸಾಯುತ್ತಾರೆ ಎಂದೆಲ್ಲ ಹೇಳಿದ್ದಾರೆ.

    ನಟನ ಮಾತುಗಳನ್ನು ಕೇಳಿದ ಅಭಿಮಾನಿಗಳು ಒಂದು ಕ್ಷಣ ಗಾಬರಿಗೊಂಡಿದ್ದಾರೆ. ಅಲ್ಲದೆ ಅನುಮಾನಗೊಂಡು ಕೂಡಲೇ ಸ್ಥಳೀಯ ಪೊಲಿಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ. ಇತ್ತ ನಟನ ಆತ್ಮಹತ್ಯೆಯ ಯತ್ನದ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಜೀವ ಕಾಪಾಡಿದ್ದಾರೆ. ಸದ್ಯ ನಟನ ಆರೋಗ್ಯ ಸ್ಥಿತಿ ಸುಧಾರಿಸಿದೆ.

    ತನಿಖೆಯ ವೇಳೆ ಕಳೆದ ಆಗಸ್ಟ್ ತಿಂಗಳಿನಿಂದ ಯಾವುದೇ ಅವಕಾಶಗಳು ಸಿಗದೆ ನೊಂದಿರುವುದಾಗಿ ಪೊಲೀಸರ ಮುಂದೆ ನಟ ತಿಳಿಸಿದ್ದಾರೆ. ಮಂಗಳ್ ಚಂಡಿ, ಮಾನಸ ಹೀಗೆ ಹಲವಾರು ಸಿರಿಯಲ್ ಗಳಲ್ಲಿ ಸುವೋ ನಟಿಸಿ ಮನೆ ಮಾತಾಗಿದ್ದಾರೆ.

  • ಲಾಕ್‍ಡೌನ್ ಎಫೆಕ್ಟ್‌ನಿಂದ ನಿರುದ್ಯೋಗ -ನಟ ಆತ್ಮಹತ್ಯೆಗೆ ಯತ್ನ

    ಲಾಕ್‍ಡೌನ್ ಎಫೆಕ್ಟ್‌ನಿಂದ ನಿರುದ್ಯೋಗ -ನಟ ಆತ್ಮಹತ್ಯೆಗೆ ಯತ್ನ

    ಕೊಲ್ಕತ್ತ: ಕೋವಿಡ್ ಸೋಂಕು ಎಷ್ಟೋ ಜನರ ಬದಕನ್ನೇ ಕಿತ್ತುಕೊಂಡಿದೆ. ಲಕ್ಷಾಂತರ ಜನರ ಉಸಿರನ್ನೇ ನಿಲ್ಲಿಸಿದೆ. ಇದೇ ಹಿನ್ನೆಲೆಯಲ್ಲಿ ಕೋವಿಡ್ ನಿಂದ ಕೆಲಸವಿಲ್ಲದೆ ನೊಂದ ನಟನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಇದನ್ನೂ ಓದಿ: ಲಸಿಕೆ ಹಾಕಿಸಿಕೊಂಡ ವರನೇ ಬೇಕೆಂದ ವಧು – ಶಶಿ ತರೂರ್ ತಬ್ಬಿಬ್ಬು

    ಹೌದು ಲಾಕ್‍ಡೌನ್ ವೇಳೆ ಎಲ್ಲೂ ಕೆಲಸ ಸಿಗದೆ ನಿರುದ್ಯೋಗದಿಂದ ಬಳಲಿದ ಬೆಂಗಾಲಿ ನಟನೊಬ್ಬ ಕೊಲ್ಕತ್ತಾದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಅದೃಷ್ಟವಶಾತ್ ಪೊಲೀಸರು ನಟನನ್ನು ಕಾಪಾಡಿದ್ದಾರೆ. ಇದನ್ನೂ ಓದಿ: ಕುಡಿಯಲು ನೀರು ಸಿಗದೆ ಬಾಲಕಿ ಸಾವು

     

    ನಿದ್ದೆ ಮಾತ್ರೆಯನ್ನು ನುಂಗಿದ 31 ವರ್ಷದ ಧಾರವಾಹಿ ನಟ ಫೇಸ್ ಬುಕ್ ಲೈವ್ ಮಾಡಿದ್ದಾನೆ. ಇದನ್ನು ಗಮನಿಸಿದ ಕೆಲವರು ಸುದ್ದಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಫೇಸ್ ಬುಕ್ ಲೈವ್ ಅನ್ನು ಟ್ರ್ಯಾಕ್ ಮಾಡಿದ ಪೊಲೀಸರು ನಟನನ್ನು ಕಾಪಾಡಿದ್ದಾರೆ.

  • ಗಿಡ ನೆಟ್ಟು ಮಾದರಿಯಾದ ಸಿನಿಮಾ ಸ್ಟಾರ್ಸ್

    ಗಿಡ ನೆಟ್ಟು ಮಾದರಿಯಾದ ಸಿನಿಮಾ ಸ್ಟಾರ್ಸ್

    ಬೆಂಗಳೂರು: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತವಾಗಿ ಸೆಲೆಬ್ರೆಟಿಗಳು ಗಿಡನೆಟ್ಟು ಪರಿಚರ Pಕುರಿತಾಗಿ ಕೆಲವು ಸಾಲುಗಳನ್ನು ಬರೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಶುಭಕೋರಿದ್ದಾರೆ. ಮನುಷ್ಯದ ಜೀವನದಲ್ಲಿ ಪ್ರಕೃತಿ ಬಹಳ ಮುಖ್ಯ, ಪರಿಸರ ಆರೋಗ್ಯವಾಗಿದ್ದರೆ ಮಾನವರ ಮುಂದಿನ ಪೀಳಿಗೆ ಆರೋಗ್ಯವಾಗಿರಲು ಸಾಧ್ಯ ಎಂಬ ಸಂದೇಶ ಸಾರಿದ್ದಾರೆ.

    ನಮ್ಮ ಜೀವನ ಪರಿಸರ ಇರುವವರೆಗೆ ಮಾತ್ರ ಎಂಬುದನ್ನು ಮರೆಯದಿರಿ, ನಮಗೆ ಬೇಕಾದಂತೆ ಪರಿಸರ ಬದಲಾಯಿಸುವ ಬದಲು, ಪರಿಸರಕ್ಕೆ ತಕ್ಕಂತೆ ನಾವು ಬದಲಾಗೋಣ ಎಂಬ ಸಂದೇಶವನ್ನು ಬರೆದುಕೊಂಡು ಪರಿಸರ ದಿನಾಚರಣೆಯ ಶುಭಾಶಯೊಂದಿಗೆ ಸಂದೇಶವನ್ನು ಕಿಚ್ಚ ಸುದೀಪ್ ನೀಡಿದ್ದಾರೆ. ಇದನ್ನೂ ಓದಿ:ಪೆಟ್ರೋಲ್, ಡೀಸೆಲ್ ಸುಂಕ ವಿನಾಯಿತಿ ಪ್ರಸ್ತಾಪ ಇಲ್ಲ: ಸಿಎಂ

     

    View this post on Instagram

     

    A post shared by Ragini dwivedi (@rraginidwivedi)

    ನಟ ಶರಣ್ ಸಹ ಟ್ವಿಟ್ಟರ್‌ನಲ್ಲಿ ಪರಿಸರ ದಿನಕ್ಕೆ ಶುಭಕೋರಿದರು. ಗುರುಶಿಷ್ಯರು ಚಿತ್ರದ ಸೆಟ್‍ನಲ್ಲಿ ಗಿಡ ನೆಡಲಾಗಿತ್ತು. ಆ ಫೋಟೋ ಶೇರ್ ಮಾಡಿ ಮನೆಗೊಂದು ಮರ, ಮನಸ್ಸಿಗೊಂದು ನೆಮ್ಮದಿ. ಗುರುಶಿಷ್ಯರು ಚಿತ್ರದ ಶೂಟಿಂಗ್ ದಿನಗಳಲ್ಲಿ ಒಂದು ಪುಟ್ಟ ತೆಂಗಿನ ಸಸಿ ನೆಟ್ಟಿದ್ದ ನೆನಪುಗಳು ಎಂದು ಮೆಲುಕು ಹಾಕಿದ್ದಾರೆ.

     

    View this post on Instagram

     

    A post shared by Allu Arjun (@alluarjunonline)

    ಹೆಚ್ಚಿನ ಮರಗಳನ್ನು ನೆಡೋಣ, ಪರಿಸರ ಸ್ನೇಹಿ ಕೆಲಸಗಳಿಗೆ ಹೊಂದಿಕೊಳ್ಳೋಣ ಎಂದು ತೆಲುಗು ನಟ ಅಲ್ಲು ಅರ್ಜುನ್ ಗಿಡವೊಂದನ್ನು ನೆಡುವ ಫೋಟೋವನ್ನು ಹಂಚಿಕೊಳ್ಳುವ ಮೂಲಕವಾಗಿ ಮೂಲಕ ಪರಿಸರ ದಿನಕ್ಕೆ ಶುಭಕೋರಿದರು. ಸ್ಯಾಂಡಲ್‍ವುಡ್ ನಟ ಸತೀಶ್ ನಿನಾಸಂ ಹಚ್ಚ ಹಸಿರಿನ ವಾತಾವರಣದಲ್ಲಿ ಕುಳಿತು ಕ್ಲೀಕ್ಕಿಸಿಕೊಂಡಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಸೇರ್ ಮಾಡಿಕೊಂಡು ಪರಿಸರ ದಿನಾಚರಣೆ ಶುಭಕೋರಿದ್ದಾರೆ.

    ಪರಿಸರ ದಿನಾಚರಣೆಯ ಅಂಗವಾಗಿ ಸುಮಾರು 150 ಗಿಡಗಳನ್ನು ನೆಟ್ಟಿದ್ದೇವೆ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಹಸಿರಾಗಿಡೋಣ ಎಂದು ಬರೆದುಕೊಂಡು ಕೆಲವು ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಳ್ಳುವ ಮೂಲಕ ಸ್ಯಾಂಡಲ್‍ವುಡ್ ನಟಿ ರಾಗಿಣಿ ಪರಿಸರ ದಿನವನ್ನು ಆಚರಿಸಿದ್ದಾರೆ.

    ಬಾಲಿವುಡ್‍ನಲ್ಲಿ ಕರೀನಾ ಕಪೂರ್, ಅಜಯ್ ದೇವಗನ್, ಸಿದ್ಧಾರ್ಥ್ ಮಲ್ಹೋತ್ರಾ, ವರುಣ್ ಧವನ್, ಸೋನಾಲಿ ಬೇಂದ್ರೆ, ಶಿಲ್ಪಾ ಶೆಟ್ಟಿ ಸೇರಿದಂತೆ ಹಲವರು ಪರಿಸರ ದಿನಕ್ಕೆ ವಿಶ್ ಮಾಡಿದ್ದಾರೆ.

  • 5ಜಿ ನೆಟ್‍ವರ್ಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ

    5ಜಿ ನೆಟ್‍ವರ್ಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ

    ನವದೆಹಲಿ: ಭಾರತದಲ್ಲಿ 5ಜಿ ನೆಟ್‍ವರ್ಕ್ ಸ್ಥಾಪನೆಯ ವಿರುದ್ಧ ನಟಿ ಹಾಗೂ ಪರಿಸರವಾದಿ ಜೂಹಿ ಚಾವ್ಲಾ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 5ಜಿ ನೆಟ್‍ವರ್ಕ್‍ನಿಂದಾಗಿ ಮನುಷ್ಯರಿಗೆ, ಪ್ರಾಣಿ, ಪಕ್ಷಿ ಮತ್ತು ಸಸ್ಯ ಪ್ರಭೇದಗಳಿಗೆ ಸಮಸ್ಯೆಯಾಗುತ್ತದೆ ಎಂದು ದೂರಿದ್ದಾರೆ.

    ದೂರಿನಲ್ಲಿ ಏನಿದೆ?
    ಭಾರತದಲ್ಲಿ 5ಜಿಯನ್ನು ಜಾರಿಗೆ ತಂದರೆ ದೇಶದಲ್ಲಿರುವ ಯಾವುದೇ ವ್ಯಕ್ತಿ, ಪ್ರಾಣಿ, ಪಕ್ಷಿ, ಕೀಟ, ಸಸ್ಯ ಪ್ರಭೇದಗಳು 5ಜಿಯ ವಿಕಿರಣದಿಂದಾಗುವ ತೊಂದರೆಗಳನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ದಿನದ 24 ಗಂಟೆ, ವರ್ಷದ 365 ದಿನ, ಈಗಿರುವ ನೆಟ್‍ವರ್ಕ್ ವಿಕಿರಣಗಳಿಂದ ರೇಡಿಯೋ ಫ್ರಿಕ್ವೆನ್ಸಿ ವಿಕಿರಣ 10x ರಿಂದ 100x ಪಟ್ಟು ಹೆಚ್ಚಾಗಿರುತ್ತದೆ.ಇದನ್ನೂ ಓದಿ: ಬಂಡೀಪುರ ಪ್ರವಾಸ ಮಾಡಿ ಗಿಡ ನೆಟ್ಟ ಪ್ರೇಮಲೋಕ ಚೆಲುವೆ ಜೂಹಿ ಚಾವ್ಲಾ

    5ಜಿ ಯೋಜನೆಗಳಿಂದಾಗಿ ಮನುಷ್ಯರ ಮೇಲೆ ಹಲವು ದುಷ್ಪರಿಣಾಮಗಳಿದ್ದು, ಮುಂದೆ ಬದಲಾಯಿಸಲು ಸಾಧ್ಯವಾಗದ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಮನುಷ್ಯರ ಮೇಲೆ ಮಾತ್ರವಲ್ಲದೇ ಭೂಮಿಯ ಮೇಲಿರುವ ಎಲ್ಲಾ ಪರಿಸರ ವ್ಯವಸ್ಥೆಗೆ ಇದರಿಂದ ತೊಂದರೆ ಎದುರಾಗುತ್ತದೆ.

    5ಜಿಯಿಂದ ಮಾನವಕುಲದ, ಪುರುಷ, ಮಹಿಳೆ, ಮಗು, ವಯಸ್ಕ, ಶಿಶು, ಪ್ರಾಣಿ ಮತ್ತು ಎಲ್ಲಾ ವಿದಧ ಜೀವಿಗಳಿಗೂ ಇದರಿಂದ ಯಾವುದೇ ದುಷ್ಟರಿಣಾಮಗಳಿಲ್ಲ ಎಂದು ಪರೀಕ್ಷಿಸುವಂತೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಡಬೇಕೆಂದು ವಕೀಲರಾದ ದೀಪಕ್ ಖೋಸ್ಲಾ ಅವರ ಮೂಲಕ ಸಲ್ಲಿಸಲಾಗಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಭೂಮಿ ರಹಿತ ರೈತರ ಸಹಾಯಕ್ಕೆ ಮುಂದಾದ ಜೂಹಿ ಚಾವ್ಲಾ

    ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಸಿ.ಹರಿಶಂಕರ್ ಅವರು ಮತ್ತೊಂದು ನ್ಯಾಯಪೀಠಕ್ಕೆ ವರ್ಗಾಯಿಸಿದ್ದು ಮಂಗಳವಾರ ವಿಚಾರಣೆ ನಡೆಯಲಿದೆ.

  • ಸೂಪರ್ ಸ್ಟಾರ್ ರಜನೀಕಾಂತ್ ಜೊತೆ ನಟಿಸಿದ್ದ ನಿತೀಶ್ ವೀರಾ ಕೊರೊನಾಗೆ ಬಲಿ

    ಸೂಪರ್ ಸ್ಟಾರ್ ರಜನೀಕಾಂತ್ ಜೊತೆ ನಟಿಸಿದ್ದ ನಿತೀಶ್ ವೀರಾ ಕೊರೊನಾಗೆ ಬಲಿ

    ಚೆನ್ನೈ: ಅಸುರನ್ ಖ್ಯಾತಿಯ ತಮಿಳು ನಟ ನಿತೀಶ್ ವೀರಾ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ.

    ನಿತೀಶ್ ವೀರಾ(45) ನಿಧನರಾಗಿದ್ದಾರೆ. ನಟ ನಿತೀಶ್ ವೀರಾಗೆ ಕೆಲವೇ ದಿನಗಳ ಹಿಂದೆಯಷ್ಟೇ ಕೋವಿಡ್-19 ಪಾಸಿಟಿವ್ ದೃಢಪಟ್ಟಿತ್ತು. ಚೆನ್ನೈ ಆಸ್ಪತ್ರೆಯಲ್ಲಿ ದಾಖಲಾಗಿ ನಿತೀಶ್ ವೀರಾ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ನಿತೀಶ್ ವೀರಾ ಸಾವನ್ನಪ್ಪಿದ್ದಾರೆ.

    ಕಳೆದ 20 ವರ್ಷಗಳಿಂದ ಕಾಲಿವುಡ್‍ನಲ್ಲಿ ನಟ ನಿತೀಶ್ ವೀರಾ ಸಕ್ರಿಯರಾಗಿದ್ದಾರೆ. ವಲ್ಲರಸು, ಪುದುಪೇಟೈ, ಪೇರರಸು, ನೇಟ್ರು ಇಂಡ್ರು ಮುಂತಾದ ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನು ನಟ ನಿತೀಶ್ ವೀರಾ ನಿಭಾಯಿಸಿದ್ದರು.

    ನಿತೀಶ್ ವೀರಾಗೆ ಹೆಸರು ತಂದುಕೊಟ್ಟಿದ್ದು ಕಾಲಾ ಚಿತ್ರ. ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಲಾ ಚಿತ್ರದಲ್ಲಿ ಕಾತಿರಾವಣ್ ಪಾತ್ರದಿಂದ ನಿತೀಶ್ ವೀರಾ ಕಾಲಿವುಡ್‍ನಲ್ಲಿ ಗುರುತಿಸಿಕೊಂಡರು. ಬಳಿಕ ಅಸುರನ್ ಚಿತ್ರದಲ್ಲೂ ಪಾಂಡಿಯನ್ ಆಗಿ ಅಭಿನಯಿಸಿದ ನಿತೀಶ್ ವೀರಾ ಜನರ ಮನ ಗೆದ್ದಿದ್ದರು.

    ನಿತೀಶ್ ವೀರಾ ನಿಧನಕ್ಕೆ ಕಾಲಿವುಡ್ ಕಂಬನಿ ಮಿಡಿದಿದೆ. ತಮಿಳು ನಟ ವಿಷ್ಣು ವಿಶಾಲ್, ನಟಿ ಸಾಕ್ಷಿ ಅಗರ್‍ವಾಲ್ ಮುಂತಾದವರು ನಿತೀಶ್ ವೀರಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ

  • ರಂಗಭೂಮಿ ಕಲಾವಿದ ರಾಜಾರಾಂ ನಿಧನ

    ರಂಗಭೂಮಿ ಕಲಾವಿದ ರಾಜಾರಾಂ ನಿಧನ

    ಬೆಂಗಳೂರು: ಹಿರಿಯ ನಟ ಹಾಗೂ ರಂಗಭೂಮಿ ಕಲಾವಿದ ರಾಜಾರಾಂ ಅವರು ಕೊರೊನಾಗೆ ಬಲಿಯಾಗಿದ್ದಾರೆ.

    ರಾಜಾರಾಂ (84) ಅವರು ಸಿನಿಮಾ, ಧಾರಾವಾಹಿ ಹಾಗೂ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಸಿನಿಮಾಗಿಂತ ಹೆಚ್ಚಾಗಿ ರಾಜಾರಾಂ ಅವರು ರಂಗಭೂಮಿಯಲ್ಲೇ ಸಕ್ರಿಯವಾಗಿದ್ದರು. ರಾಜಾರಾಂ ಅವರಿಗೆ ಕೊರೊನಾ ಸೋಂಕು ಧೃಡವಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಕುಟುಂಬದ ಕಡೆಯಿಂದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನಟ ಇಂದು ಕೊನೆಯುಸಿರೆಳೆದಿದ್ದಾರೆ.

    1971ರಿಂದ ಇಲ್ಲಿಯವರೆಗೆ 62 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಸಿನಿರಂಗದಲ್ಲಿ ರಾಜ್‍ಕುಮಾರ್ ಸೇರಿದಂತೆ ಬಹುತೇಕ ಎಲ್ಲ ನಾಯಕರೊಂದಿಗೆ ತೆರೆ ಹಂಚಿಕೊಂಡಿದ್ದಾರೆ ರಾಜಾರಾಂ. ಶಾಲಾ ದಿನಗಳಿಂದಲೇ ರಂಗಭೂಮಿಯಲ್ಲಿ ಆಸಕ್ತಿ ತೋರಿದ ರಾಜಾರಾಂ ನಂತರದಲ್ಲಿ ಸಿನಿಮಾಗಳಿಗೆ ಬಂದು ಹೆಸರು ಸಹ ಮಾಡಿದರು. ನೂರಾರು ನಾಟಕಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದ ಹಿರಿಯ ಕಲಾವಿದರಾಗಿದ್ದ ಇವರ ಅಗಲಿಕೆಯ ಬಗ್ಗೆ ನಟ ಸೃಜನ್ ಲೋಕೇಶ್ ಸೇರಿದಂತೆ ಅನೇಕ ಸ್ಯಾಂಡಲ್‍ವುಡ್ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಕಂಬನಿ ಮೀಡಿದಿದ್ದಾರೆ.

     

    View this post on Instagram

     

    A post shared by Srujan Lokesh (@srujanlokesh)

    1971ರಲ್ಲಿ ಕೃಷ್ಣಸ್ವಾಮಿ ನಿರ್ದೇಶಕ ಪಾಪಪುಣ್ಯ ಸಿನಿಮಾ ರಾಜಾರಾಂ ಅವರ ಅಭಿನಯದ ಮೊದಲ ಸಿನಿಮಾ. ಸರೋಜಾ ದೇವಿ, ಕಲ್ಯಾಣ್ ಕುಮಾರ್ ಅಶ್ವತ್ಥ್ ಪ್ರಮುಖ ಪಾತ್ರದಲ್ಲಿದ್ದರು. ವಿಧಾನಸೌಧದಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡಿಕೊಂಡೇ ಸಿನಿಮಾ ಹಾಗೂ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದರು ರಾಜಾರಾಂ. ನಟ ಲೋಕೇಶ್ ಅವರೊಂದಿಗೆ ಬಹಳ ಹಳೆಯ ಗೆಳೆತನವಿತ್ತು. ರಂಗಭೂಮಿಯಲ್ಲಿ ಒಟ್ಟಿಗೆ ಅಭಿನಯಿಸುತ್ತಿದ್ದರು.

    ಕೊರೊನಾ ಮಹಾಮಾರಿಗೆ ಕಲಾ ಸೇವೆ ಮಾಡುತ್ತಿರುವ ಹಲವಾರು ಮಂದಿ ಕಲಾವಿದರು ಕೊರೊನಾಗೆ ಬಲಿಯಾಗಿದ್ದಾರೆ. ಶಂಖನಾದ ಅರವಿಂದ್, ರೇಣುಕಾ ಶರ್ಮಾ, ರಾಮು ಸೇರಿದಂತೆ ಹಲವರು ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.

  • 150 ರೂ. ಖರ್ಚಿನಲ್ಲಿ ಮದುವೆಯಾದ ಕಿರುತೆರೆ ನಟ

    150 ರೂ. ಖರ್ಚಿನಲ್ಲಿ ಮದುವೆಯಾದ ಕಿರುತೆರೆ ನಟ

    ಇಲ್ಲೊಂದು ಜೋಡಿ 150 ರೂಪಾಯಿ ಖರ್ಚಿನಲ್ಲಿ ಮದುವೆ ಆಗಿ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ. ಹೀಗೆ ಸಿಂಪಲ್ ಆಗಿ ಬಾಳ ಬಂಧನಕ್ಕೆ ಒಳಗಾಗಿರುವುದು ಕಿರುತರೆ ಖ್ಯಾತಿಯ ನಟ ವಿರಾಫ್ ಪಟೇಲ್ ಮತ್ತು ನಟಿ ಸಲೋನಿ ಖನ್ನಾ ಆಗಿದ್ದಾರೆ.

     

    View this post on Instagram

     

    A post shared by Viraf Patell (@virafpp)

    ಕಿರುತೆರೆಯಲ್ಲಿ ಹೆಚ್ಚು ಫೇಮಸ್ ಆಗಿರುವ ವಿರಾಫ್ ಪಟೇಲ್ ಮತ್ತು ಸಲೋನಿ ಖನ್ನಾ ಪರಸ್ಪರ ಪ್ರೀತಿಸುತ್ತಿದ್ದರು. ಫೆಬ್ರವರಿಯಲ್ಲಿ ಈ ಜೋಡಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದಕ್ಕಿಂತಲೂ ಅದ್ದೂರಿಯಾಗಿ ಮದುವೆ ಆಗಬೇಕು ಎಂಬುದು ವಿರಾಫ್ ಪಟೇಲ್ ಮತ್ತು ಸಲೋನಿ ಖನ್ನಾ ಅವರ ಆಸೆ ಆಗಿತ್ತು. ಆದರೆ ಅದಕ್ಕೆ ಕೊರೊನಾ ಅವಕಾಶ ನೀಡಿಲ್ಲ. ಅದರ ಬದಲು ಸದ್ಯದ ಪರಿಸ್ಥಿತಿಗೆ ತಕ್ಕಂತೆ ಸಿಂಪಲ್ ಮದುವೆಯನ್ನೇ ಈ ಸೆಲೆಬ್ರಿಟಿಗಳು ಆಯ್ಕೆ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Saloni Khanna Patel (@salk.04)

    ಮೇ 6ರಂದು ದಿಢೀರ್ ಎಂದು ವಿರಾಫ್ ಪಟೇಲ್ ಮತ್ತು ಸಲೋನಿ ಖನ್ನಾ ಬಾಳ ಬಂಧನಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಚ್ಚರಿ ಎಂದರೆ ಮದುವೆಯ ಉಂಗುರದ ಬದಲಿಗೆ ಪತ್ನಿಗೆ ರಬ್ಬರ್ ಬ್ಯಾಂಡ್ ನೀಡಿದ್ದಾರಂತೆ. ವಿರಾಫ್ ಹೊಸ ಸೀರೆ ಖರೀದಿಸುವ ಸಂಭ್ರಮ ಇಲ್ಲ. ವಧುವಿನ ಸೀರೆಯನ್ನು ಬಾಡಿಗೆಗೆ ತರಲಾಗಿದೆ. ಸ್ನೇಹಿತರೇ ಸೇರಿಕೊಂಡು ಮೇಕಪ್ ಮತ್ತು ಕೇಶ ವಿನ್ಯಾಸ ಮಾಡಿದ್ದಾರೆ. ಒಟ್ಟು ಈ ಮದುವೆಗೆ ಅತಿಥಿಗಳಾಗಿದ್ದವರು ಮೂರು ಜನರ ಮಾತ್ರ. ಇನ್ನುಳಿದ ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತ್ರ ಈ ಮದುವೆಯನ್ನು ನೋಡುವ ಅವಕಾಶ ಕಲ್ಪಿಸಲಾಯಿತು. ಒಂದು ಗಂಟೆಯಲ್ಲಿ ಮದುವೆ ಮುಗಿಯಿತು.

     

    View this post on Instagram

     

    A post shared by Saloni Khanna Patel (@salk.04)

    ಈ ಸಿಂಪಲ್ ವಿವಾವಹಕ್ಕೆ ಆದ ಖರ್ಚು ಕೇವಲ 150 ರೂಪಾಯಿ ಎಂದು ಸಲೋನಿ ಖನ್ನಾ ತಿಳಿಸಿದ್ದಾರೆ. ಇದು ಪರ್ಫೆಕ್ಟ್ ಮ್ಯಾರೇಜ್. ಪೈಸಾ ವಸೂಲ್ ಆಯ್ತು, ಮದುವೆ ಒಪ್ಪಿಗೆ ಆಯ್ತು ಎಂಬ ಕ್ಯಾಪ್ಷನ್‍ನೊಂದಿಗೆ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

  • ಇನ್ನು ಎರಡು ವರ್ಷದಲ್ಲಿ ಮಂಜು ಏನಾಗ್ತಾರಂತೆ ಗೊತ್ತಾ?

    ಇನ್ನು ಎರಡು ವರ್ಷದಲ್ಲಿ ಮಂಜು ಏನಾಗ್ತಾರಂತೆ ಗೊತ್ತಾ?

    ಬಿಗ್‍ಬಾಸ್ ರಿಯಾಲಿಟಿ ಶೋಗೆ ಬರುವ ಪ್ರತಿಯೊಬ್ಬ ಸ್ಪರ್ಧಿಯು ಮುಂದೆ ತಾವು ಏನಾಗಬೇಕೆಂಬ ಕನಸ್ಸನ್ನು ಹೊತ್ತುಕೊಂಡು ಬಂದಿರುತ್ತಾರೆ. ಹಾಗೆಯೇ ಲ್ಯಾಗ್ ಮಂಜು ಕೂಡ ಮುಂದೆ ತಾವು ಏನಾಗಬೇಕೆಂದು ಎಂಬ ಆಸೆಯನ್ನು ದೊಡ್ಮನೆಯಲ್ಲಿ ರಿವೀಲ್ ಮಾಡಿದ್ದಾರೆ.

    ಮಂಜು ಹಾಗೂ ದಿವ್ಯಾ ಇಬ್ಬರು ಕುಳಿತು ಮಾತನಾಡುತ್ತಿದ್ದ ವೇಳೆ, ದಿವ್ಯಾ ಸುರೇಶ್ ಮಂಜುಗೆ ಇನ್ನು 2 ವರ್ಷದಲ್ಲಿ ನಿನ್ನನ್ನು ನೀನು ಯಾವ ಸ್ಥಾನದಲ್ಲಿ ನೋಡಬೇಕು ಎಂದು ಅಂದುಕೊಂಡಿದ್ಯಾ ಎಂದು ಪ್ರಶ್ನೆ ಕೇಳುತ್ತಾರೆ.

    ಆಗ ಮಂಜು, ನಾನು ಒಳ್ಳೆ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಬೇಕೆಂದು ಕೊಂಡಿದ್ದೇನೆ. ಕ್ಯಾರೆಕ್ಟರ್ ಆರ್ಟಿಸ್ಟ್ ಅಂದರೆ ತಪ್ಪಾಗುತ್ತದೆ. ನಾನು ಒಬ್ಬ ಒಳ್ಳೆ ನಟ ಆಗಬೇಕು. ನೀನು ಯಾವ ಪಾತ್ರಕೊಟ್ಟರು ಜೀವಿಸುವ ತರಹ ಇರಬೇಕು. ಉದಾಹರಣೆಗೆ ಪ್ರಕಾಶ್ ರೈ, ಅನಂತ್ ನಾಗ್, ಸುದೀಪ್ ಸರ್ ರೀತಿ ಇರಬೇಕು.

    ಒಂದು ಕ್ಯಾರೆಕ್ಟರ್‍ನನ್ನು ರಫ್ ಆಗಿ ಕಂಪೋಸ್ ಮಾಡಿರುತ್ತಾರೆ. ಅವರ ತಲೆಯಲ್ಲಿ ಇವರೇ ಇರಬೇಕು ಎಂದು ಫಿಕ್ಸ್ ಆಗಿರುತ್ತಾರೆ. ಈ ಕ್ಯಾರೆಕ್ಟರ್ ಅವನು ಒಪ್ಪಿಕೊಂಡರೆ ಸಾಕು ಅವನು ನೋಡಿಕೊಳ್ಳುತ್ತಾನೆ ಎಂದು ಇರುತ್ತದೆ. ಉದಾಹರಣೆಗೆ ನಾನೇ ಒಬ್ಬ ರೈಟರ್ ಆಗಿ 20% ಬರೆದಿರುತ್ತೇನೆ. ಅವನು ಒಪ್ಪಿಕೊಂಡರೆ ಸಾಕು 100% ಪಾತ್ರವನ್ನು ಹೆಚ್ಚಿಸಿಕೊಡುತ್ತಾನೆ ಎಂಬುವ ರೀತಿ ನಟನಾಗಬೇಕು ಎಂದು ತಮ್ಮ ಆಸೆಯನ್ನು ತೋಡಿಕೊಂಡಿದ್ದಾರೆ.

  • ತಮಿಳು ಹಾಸ್ಯ ನಟ ವಿವೇಕ್‍ಗೆ ಹೃದಯಾಘಾತ – ಆರೋಗ್ಯ ಸ್ಥಿತಿ ಗಂಭೀರ

    ತಮಿಳು ಹಾಸ್ಯ ನಟ ವಿವೇಕ್‍ಗೆ ಹೃದಯಾಘಾತ – ಆರೋಗ್ಯ ಸ್ಥಿತಿ ಗಂಭೀರ

    ಚೆನ್ನೈ: ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ವಿವೇಕ್ ಅವರಿಗೆ ಇಂದು ಎದೆನೋವು ಕಾಣಿಸಿಕೊಂಡ ಪರಿಣಾಮ ಚೆನ್ನೈನ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ವೈದ್ಯರು ಆರೋಗ್ಯ ಸ್ಥಿತಿ ಪರೀಕ್ಷಿಸಿದಾಗ ಹೃದಯಾಘಾತವಾಗಿರುವುದು ತಿಳಿದು ಬಂದಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಸ್ಥಳಿಯ ಮಾಧ್ಯಮವೊಂದು ವರದಿ ಮಾಡಿದೆ.

    ವೈದ್ಯರು ಆರೋಗ್ಯ ಪರೀಕ್ಷಿಸಿದ ನಂತರ ವಿವೇಕ್ ಅವರು ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೃದ್ರೋಗ ತಜ್ಞರ ತಂಡ ಅವರ ಆರೋಗ್ಯವನ್ನು ನಿರಂತರವಾಗಿ ಗಮನಿಸುತ್ತಿದೆ.

    ವಿವೇಕ್ ಏಪ್ರಿಲ್ 15 ರಂದು ಅವರ ಸ್ನೇಹಿತನೊಂದಿಗೆ ಚೆನ್ನೈನ ಒಮಾಂಡುರಾರ್ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆ ಪಡೆದಿದ್ದರು. ಲಸಿಕೆ ಪಡೆದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ವಿವೇಕ್ ಅವರು, ಎಲ್ಲರೂ ಕೂಡ ಕೋವಿಡ್ -19 ಲಸಿಕೆಗಳನ್ನು ಪಡೆಯುವಂತೆ ಮನವಿ ಮಾಡಿದ್ದರು. ಹಾಗೆ ಕೊರೊನಾದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರತಿಯೊಬ್ಬರು ಸಾಮಾಜಿಕ ಅಂತರ ಪಾಲಿಸಬೇಕೆಂದು ಜನರಿಗೆ ಕಿವಿಮಾತು ಹೇಳಿದ್ದರು.

    ವಿವೇಕ್ ಅವರು ತಮಿಳಿನ ಬಹುಬೇಡಿಕೆಯ ಹಾಸ್ಯ ನಟನಾಗಿದ್ದು, ಈಗಾಗಲೇ 220 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ವಿವೇಕ್ ಸಿನಿಮಾರಂಗಕ್ಕೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರ 2009 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಇದೀಗ ಇಂಡಿಯನ್-2 ಸಿನಿಮಾದಲ್ಲಿ ನಟ ಕಮಲ್ ಹಾಸನ್ ಜೊತೆ ನಟಿಸುತ್ತಿದ್ದು, ಸದ್ಯ ಚಿತ್ರೀಕರಣ ಸ್ಥಗಿತಗೊಂಡಿದೆ.