Tag: Actor yash

  • ಈ ಬಾರಿಯೂ ಸುಮಲತಾ ಪರ ದರ್ಶನ್ ಪ್ರಚಾರ ಫಿಕ್ಸ್

    ಈ ಬಾರಿಯೂ ಸುಮಲತಾ ಪರ ದರ್ಶನ್ ಪ್ರಚಾರ ಫಿಕ್ಸ್

    ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಅವರು ಇದೀಗ ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ, ಲೋಕಸಭೆ ಚುನಾವಣೆಗೆ ಸುಮಲತಾ (Sumalatha) ಪರ ಪ್ರಚಾರ ಮಾಡುವ ಬಗ್ಗೆ ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಾರಿಯೂ ಕೂಡ ಸುಮಲತಾ ಪರ ಪ್ರಚಾರಕ್ಕೆ ಸಾಥ್ ನೀಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ದರ್ಶನ್ ಭೇಟಿ

    2019ರಲ್ಲಿ ನಡೆದ ಲೋಕಸಭಾ ಎಲೆಕ್ಷನ್‌ನಲ್ಲಿ ಸುಮಲತಾ ಮಂಡ್ಯದಲ್ಲಿ ನಿಂತು ಗೆದ್ದು ಬೀಗಿದ್ದರು. ಯಶ್-ದರ್ಶನ್ ಜೋಡೆತ್ತುಗಳಾಗಿ ಸುಮಲತಾ ಪರ ಪ್ರಚಾರ ಮಾಡಿ ಸೈ ಎನಿಸಿಕೊಂಡಿದ್ದರು. ಇದೀಗ ಚುನಾವಣೆ ಪ್ರಚಾರದ ಬಗ್ಗೆ ದರ್ಶನ್ ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.

    ಸುಮಲತಾ ಪರ ಪ್ರಚಾರ ಮಾಡ್ತೀರಾ? ಎಂದು ಕೇಳಿದಕ್ಕೆ ದರ್ಶನ್ ಗರಂ ಆಗಿದ್ದಾರೆ. ಬಳಿಕ ಹೆತ್ತ ತಾಯಿನ ಎಂದಾದರೂ ಬಿಟ್ಟು ಕೊಡೋಕೆ ಆಗುತ್ತಾ ಎಂದಿದ್ದಾರೆ. ಮೊನ್ನೆವರೆಗೂ ಎಲ್ಲಾ ಸುಮಲತಾ ಅಮ್ಮನ ಜೊತೆ ಇದ್ದೆ. ಮುಂದೆಯೂ ಇರುತ್ತೇನೆ ಎಂದಿದ್ದಾರೆ. ಈಗ ಅವರ ಕೈ ಬಿಟ್ರೆ ಆಗುತ್ತಾ ಎಂದಿದ್ದಾರೆ. ನಿಮ್ಮ ಮನೇಲಿ ನಿಮ್ಮ ತಾಯಿನ ಬಿಟ್ ಬಿಡ್ತೀರಾ ಎಂದು ದರ್ಶನ್ ಮರು ಪ್ರಶ್ನೆ ಕೇಳಿದ್ದಾರೆ. ಸುಮಲತಾ ಅಮ್ಮ ಎಂದಿಗೂ ಅಮ್ಮನೇ ಎಂದು ಮಾತನಾಡಿದ್ದಾರೆ. ಈ ಮೂಲಕ ಅವರ ಪರ ಪ್ರಚಾರ ಮಾಡೋದಾಗಿ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ದರ್ಶನ್ ಇದೀಗ ಶೂಟಿಂಗ್‌ಗೆ ಬ್ರೇಕ್ ಹಾಕಿ ಮಂಗಳೂರಿನ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಕೊರಗಜ್ಜ ದೈವ ದೇವರಿಗೆ ಡಿಬಾಸ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ದರ್ಶನ್ ಜೊತೆ ನಟ ಚಿಕ್ಕಣ್ಣ, ನಟ ಯಶಸ್ ಸೂರ್ಯ ಕೂಡ ಭಾಗಿಯಾಗಿದ್ದಾರೆ.

    ದರ್ಶನ್ ಭೇಟಿ ನೀಡಿದ್ದ ವೇಳೆ, ಕೊರಗಜ್ಜ ಕ್ಷೇತ್ರದ ವತಿಯಿಂದ ದರ್ಶನ್‌ಗೆ ಗೌರವ ಸಲ್ಲಿಸಿದ್ದಾರೆ. ಪೂಜೆಯ ಬಳಿಕ ದರ್ಶನ್ ಮಾಧ್ಯಮಕ್ಕೆ ಪ್ರತಿಕ್ರಿಸಿ, ಮೊದಲ ಬಾರಿಗೆ ಕುತ್ತಾರು ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ್ದೇನೆ ಎಂದು ಮಾತನಾಡಿದ್ದಾರೆ.

  • ರಾಕಿಂಗ್ ಸ್ಟಾರ್ ಮನೆ ಮುಂದೆ ಜನಸಾಗರ: ಯಶ್‌ ಜೊತೆಗೆ ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್

    ರಾಕಿಂಗ್ ಸ್ಟಾರ್ ಮನೆ ಮುಂದೆ ಜನಸಾಗರ: ಯಶ್‌ ಜೊತೆಗೆ ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್

    ರಾಕಿಂಗ್ ಸ್ಟಾರ್ ಯಶ್ (Rocking Star Yash) ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲೂ ಯಶ್‌ಗೆ ಫ್ಯಾನ್ಸ್ ಇದ್ದಾರೆ. ಈ ಬಾರಿ ತಮ್ಮ ಹುಟ್ಟುಹಬ್ಬಕ್ಕೆ ಯಶ್ ಬ್ರೇಕ್ ಹಾಕಿದ್ದ ಬೆನ್ನಲ್ಲೇ ಈಗ ರಾಕಿ ಬಾಯ್ ಅವರನ್ನ ನೋಡಲು ಮನೆ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದಾರೆ.

    `ಕೆಜಿಎಫ್ 2′ (Kgf 2) ಸೂಪರ್ ಸಕ್ಸಸ್ ನಂತರ ಯಶ್ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಹೀಗಿರುವಾಗ ನೆಚ್ಚಿನ ನಟನನ್ನು ನೋಡಲು ಬೇರೇ ಬೇರೇ ರಾಜ್ಯಗಳಿಂದ ಅಭಿಮಾನಿಗಳು ಯಶ್ ಮನೆ ಮುಂದೆ ಬೀಡು ಬಿಟ್ಟಿದ್ದಾರೆ. ಕಿಲೋ ಮೀಟರ್ ಉದ್ದದ ಸಾಲಿನಲ್ಲಿ ಯಶ್‌ಗಾಗಿ ಕಾದಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಅನಾರೋಗ್ಯದ ಬಳಿಕ ಮಾಸ್ ಲುಕ್‌ನಲ್ಲಿ ಎಂಟ್ರಿ ಕೊಟ್ಟ ಸಮಂತಾ

    ನಟ ಯಶ್ ಅವರು ಬೆಂಗಳೂರಿನ ಗಾಲ್ಫ್ ರಸ್ತೆಯಲ್ಲಿ (Golf Road) ಮನೆಯನ್ನು ಹೊಂದಿದ್ದಾರೆ. ಯಶ್ ಮನೆ ಬಳಿ ಸಾವಿರಾರು ಜನ ಜಮಾಯಿಸಿ ರಾಕಿ ಬಾಯ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅನೇಕರು ಅವರ ಭಾವಚಿತ್ರವನ್ನು ಪೇಂಟ್ ಮಾಡಿ ತಂದಿದ್ದಾರೆ. ಯಶ್ ತಮ್ಮ ಹುಟ್ಟುಹಬ್ಬಕ್ಕೆ ಸಿಗದೇ ಇರುವ ಕಾರಣ, ಈಗ ನಟನನ್ನು ಭೇಟಿಯಾಗಬೇಕು ಎಂದು ಬಿಹಾರ. ಉತ್ತರ ಪ್ರದೇಶದಿಂದ ಸೇರಿದಂತೆ ಹಲವು ಕಡೆಯಿಂದ ಬಂದು ನಟನ ಮನೆಗೆ ಭೇಟಿ ನೀಡಿದ್ದಾರೆ. ಯಶ್ ಕೂಡ ಅಭಿಮಾನಿಗಳ (Fans) ಆಸೆಯಂತೆ ಅವರನ್ನ ಭೇಟಿಯಾಗಿ ಫೋಟೋಗೆ ಪೋಸ್ ನೀಡಿದ್ದಾರೆ.

     

    View this post on Instagram

     

    A post shared by Yash™ (@yash_kingdom_forever)

    `ಕೆಜಿಎಫ್ 2′ ಬಳಿಕ ಯಶ್ 19ನೇ ಸಿನಿಮಾಗೆ ಕೆವಿಎನ್ (Kvn) ಸಂಸ್ಥೆ ಬಂಡವಾಳ ಹೂಡಲಿದೆ ಎನ್ನಲಾಗುತ್ತಿದೆ. ಇನ್ನೂ ಅಧಿಕೃತ ಅಪ್‌ಡೇಟ್‌ ಸಿಗುವವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಒಂದೇ ವಾರಕ್ಕೆ 700 ಕೋಟಿ ಬಾಚಿದ `ಕೆಜಿಎಫ್ 2′ ಸಿನಿಮಾ

    ಒಂದೇ ವಾರಕ್ಕೆ 700 ಕೋಟಿ ಬಾಚಿದ `ಕೆಜಿಎಫ್ 2′ ಸಿನಿಮಾ

    ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಿ ವಿಶ್ವಾದ್ಯಂತ ಸೌಂಡ್ ಮಾಡುತ್ತಿದೆ. ರಾಕಿಭಾಯ್ ಖಡಕ್ ಫರ್ಫಾಮೆನ್ಸ್ಗೆ ಅಭಿಮಾನಿಗಳು ಉಘೇ ಉಘೇ ಅಂತಿದ್ದಾರೆ. ರಿಲೀಸ್ ಆಗಿ ಒಂದು ವಾರ ಆಗಿದ್ರು ಯಶ್ ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ರೆಕಾರ್ಡ್ ಬ್ರೇಕ್ ಮಾಡುತ್ತಿದೆ. ಈಗ ವಿಶ್ವಾದ್ಯಂತ ಒಟ್ಟು ಒಂದು ವಾರದಲ್ಲಿ ಬಾಕ್ಸ್ಆಫೀಸ್‌ನಲ್ಲಿ 800 ಕೋಟಿ ಬಾಚಿದೆ.

    ಒಂದೊಳ್ಳೆ ಸಿನಿಮಾವನ್ನ ಅಭಿಮಾನಿಗಳು ಎಂದೂ ಕೈ ಬಿಡುವುದಿಲ್ಲ ಅನ್ನೋದಕ್ಕೆ `ಕೆಜಿಎಫ್ 2′ ಸಿನಿಮಾನೇ ಸಾಕ್ಷಿ. ಬಾಕ್ಸ್ಆಫೀಸ್‌ನಲ್ಲಿ `ಕೆಜಿಎಫ್ 2′ ಬಂಗಾರದ ಬೆಳೆ ತೆಗೆದಿದೆ. ರಾಕಿಭಾಯ್ ಚಿತ್ರವನ್ನ ಕೋಟ್ಯಾಂತರ ಜನ ವೀಕ್ಷಿಸಿ ಚಿತ್ರವನ್ನ ಅಪ್ಪಿ ಒಪ್ಪಿಕೊಂಡಿದ್ದಾರೆ. ಈ ಸಿನಿಮಾ ಹಿಂದಿಗೂ ಡಬ್ ಆಗಿದ್ದು, ಹಿಂದಿ ವರ್ಷನ್‌ನಲ್ಲಿ ಏಳು ದಿನಗಳಲ್ಲಿ 250 ಕೋಟಿ ಬಾಚಿದೆ.ಇದನ್ನೂ ಓದಿ: ಮತ್ತೆ ಜೋಡಿಯಾಗಿ ಮಿಂಚಲು ರೆಡಿಯಾದ್ರು ಡಾಲಿ-ಅಮೃತಾ: `ಹೊಯ್ಸಳ’ನಾಗಿ ಡಾಲಿ ಅಬ್ಬರ!

    ಅತೀ ವೇಗದಲ್ಲಿ ಕಲೆಕ್ಷನ್ ವಿಚಾರದಲ್ಲಿ ದಾಖಲೆ ಬರೆದ ಮೊದಲ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಾಹುಬಲಿ 2, ದಂಗಲ್, ಸುಲ್ತಾನ, ಟೈಗರ್ ಜಿಂದಾ ಹೈ, ಚಿತ್ರಗಳು ಮಾಡಿದ ದಾಖಲೆ ಎಲ್ಲಾ ಯಶ್ ಧೂಳಿಪಟ ಮಾಡಿದ್ದಾರೆ. ದೇಶ -ವಿದೇಶದಲ್ಲೂ `ಕೆಜಿಎಫ್ 2′ ಚಿತ್ರ ಟಾಪ್ ಸ್ಥಾನದಲ್ಲಿದೆ. ಒಂದೇ ವಾರದಲ್ಲಿ ಒಟ್ಟು 700 ಕೋಟಿ ಗಳಿಕೆ ಮಾಡಿ, ಯಶ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಗೆಲುವಿನ ಜಯಭೇರಿ ಬಾರಿಸಿದೆ.

    `ಕೆಜಿಎಫ್ 2′ ಸಿನಿಮಾ ನೋಡುವವರ ಸಂಖ್ಯೆ ಕಮ್ಮಿಯಾಗಿಲ್ಲ. ದಿನದಿಂದ ದಿನಕ್ಕೆ ರಾಕಿಭಾಯ್ ಫೀವರ್ ಜೋರಾಗ್ತಿದೆ. `ಕೆಜಿಎಫ್ 2′ ಖಜಾನೆ ಲೂಟಿ ಮಾಡ್ತಿದೆ. `ಕೆಜಿಎಫ್ ಚಾಪ್ಟರ್ 3′ ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

  • `ಕೆಜಿಎಫ್ 2’ಗಾಗಿ ಲಂಡನ್‌ನಿಂದ ಬೆಂಗಳೂರಿಗೆ ಬಂದ ಅಭಿಮಾನಿ!

    `ಕೆಜಿಎಫ್ 2’ಗಾಗಿ ಲಂಡನ್‌ನಿಂದ ಬೆಂಗಳೂರಿಗೆ ಬಂದ ಅಭಿಮಾನಿ!

    `ಕೆಜಿಎಫ್ 2′ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಹೈಪ್ ಸೃಷ್ಟಿಯಾಗಿದೆ. ದೇಶದ ಮೂಲೆ ಮೂಲೆಯಲ್ಲೂ ರಾಕಿಭಾಯ್ ಮೇನಿಯಾ ಜೋರಾಗಿದೆ. ಎಲ್ಲಾ ಕಡೆ ಕೋಟಿ ಕೋಟಿ ಕಲೆಕ್ಷನ್ ಲೂಟಿ ಮಾಡತ್ತಾ, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೀಗ ರಾಕಿಭಾಯ್ ಸಿನಿಮಾ ನೋಡಲೆಂದೇ ಲಂಡನ್‌ನಿಂದ ಬಂದು ಸಿನಿಮಾ ವೀಕ್ಷಿಸಿರೋ ವಿಷ್ಯ ಸಖತ್ ಸುದ್ದಿಯಾಗುತ್ತಿದೆ.

    ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಚಿತ್ರದ ಕ್ರೇಜ್ ಜೋರಾಗಿದೆ ಅನ್ನೋದಕ್ಕೆ ಈ ವಿಚಾರವೇ ಸಾಕ್ಷಿ. ಲಂಡನ್‌ನಲ್ಲಿ ವ್ಯಾಸಂಗ ಮಾಡ್ತಿರೋ ಸ್ಪೂರ್ತಿ, ಯಶ್ ಅಭಿಮಾನಿಯಾಗಿದ್ದು, ಯಶ್ ನಟಿಸಿರೋ ಎಲ್ಲಾ ಚಿತ್ರವನ್ನ ನೋಡಿದ್ದಾರೆ. `ಕೆಜಿಎಫ್ 2′ ಸಿನಿಮಾ ನೋಡುವ ಸಲುವಾಗಿ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರಿಗೆ ಬಂದು `ಕೆಜಿಎಫ್ 2′ ವೀಕ್ಷಿಸಿದ್ದಾರೆ. ಇದನ್ನೂ ಓದಿ:‘ದಿ ಕಾಶ್ಮೀರ್ ಫೈಲ್ಸ್’ ನಂತರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೈಯಲ್ಲಿ ‘ಡೆಲ್ಲಿ ಫೈಲ್ಸ್’

    ಯಶ್‌ಗೆ ಎಲ್ಲಾ ವರ್ಗದ ಅಭಿಮಾನಿಗಳಿದ್ದಾರೆ. ಅದರಲ್ಲೂ ಮಹಿಳೆಯರ ಫ್ಯಾನ್ ಬೇಸ್ ಜಾಸ್ತಿ. ಇದೀಗ ವಿದ್ಯಾರ್ಥಿನಿ ಸ್ಪೂರ್ತಿ ಕೆಜಿಎಫ್ 2ಗಾಗಿ ಲಂಡನ್‌ನಿಂದ ಬೆಂಗಳೂರಿಗೆ ಬಂದು ಬೆಳಗಿನ ಜಾವ 3 ಗಂಟೆಗೆ ಚಿತ್ರ ನೋಡಿ ಖುಷಿಪಟ್ಟಿದ್ದಾರೆ.

  • ಬಾಲಿವುಡ್‌ನಲ್ಲೂ `ಕೆಜಿಎಫ್ ಚಾಪ್ಟರ್ 2′ ಹವಾ: ಹಿಂದಿಯಲ್ಲೂ ನಂಬರ್ ಒನ್

    ಬಾಲಿವುಡ್‌ನಲ್ಲೂ `ಕೆಜಿಎಫ್ ಚಾಪ್ಟರ್ 2′ ಹವಾ: ಹಿಂದಿಯಲ್ಲೂ ನಂಬರ್ ಒನ್

    ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದ `ಕೆಜಿಎಫ್ 2′ ಚಿತ್ರ, ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ರಾಕಿಭಾಯ್‌ನ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. `ಕೆಜಿಎಫ್ ಚಾಪ್ಟರ್ 2′ ಚಿತ್ರ ನೋಡಿ ಅಭಿಮಾನಿಗಳು ಅಪ್ಪಿ ಒಪ್ಪಿಕೊಂಡಿದ್ದಾರೆ. ಆದರೆ ಈ ಚಿತ್ರದ ಕಲೆಕ್ಷನ್ ಕೇಳಿದ್ರೆ ನೀವು ದಂಗಾಗ್ತಿರಾ. ಚಿತ್ರ ರಿಲೀಸ್ ಮೊದಲ ದಿನವೇ ರಾಕಿಭಾಯ್ ಚಿತ್ರ ಬಾಕ್ಸ್ ಆಫೀಸ್ ಲೂಟಿ ಮಾಡಿದೆ. ಹಿಂದಿ ಚಿತ್ರರಂಗದಲ್ಲೂ ರಾಕಿಭಾಯ್‌ದೇ ಹವಾ, ಈವರೆಗೂ ಮಾಡಿದ ಬೇರೇ ಎಲ್ಲ ಚಿತ್ರಗಳ ದಾಖಲೆ ಉಡೀಸ್ ಮಾಡಿದೆ.

    `ಕೆಜಿಎಫ್ 2′ ಚಿತ್ರ ಅಭಿಮಾನಿಗಳ ಪಾಲಿಗೆ ಹಬ್ಬ ಎಂದೇ ಹೇಳಬಹುದು. ಕರ್ನಾಟಕ ಮಾತ್ರವಲ್ಲದೇ ಹಿಂದಿ ಚಿತ್ರರಂಗದಲ್ಲೂ ಕಲೆಕ್ಷನ್ ಜೋರಾಗಿದೆ ಅನ್ನೋದಕ್ಕೆ ಇಲ್ಲಿದೆ ಡಿಟೈಲ್ಸ್. ಈ ಹಿಂದೆ ರಿಲೀಸ್ ಆಗಿದ್ದ ಹೃತಿಕ್ ರೋಷನ್ ನಟನೆಯ `ವಾರ್’ ಚಿತ್ರ 49 ಕೋಟಿ ಗಳಿಸಿ ದಾಖಲೆ ಬ್ರೇಕ್ ಮಾಡಿತ್ತು. ಇದನ್ನೂ ಓದಿ: ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    ಅಮೀರ್ ಖಾನ್ ನಟನೆಯ `ಥಗ್ಸ್ ಆಫ್ ಹಿಂದೂಸ್ತಾನ್’ ಸಿನಿಮಾ 2ನೇ ಸ್ಥಾನದಲ್ಲಿತ್ತು. ಸಲ್ಮಾನ್ ಖಾನ್ ಅಭಿನಯದ `ಭಾರತ್’ ಸಿನಿಮಾ 3 ನೇ ಸ್ಥಾನ ಪಡೆದಿದ್ರೆ, ಬಾಹುಬಲಿ ಹಿಂದಿ ವರ್ಷನ್ 4ನೇ ಸ್ಥಾನ ಪಡೆದಿತ್ತು. ಇದನ್ನೂ ಓದಿ:ಬೀಸ್ಟ್ ಸಿನಿಮಾಕ್ಕೆ ಸೆಡ್ಡು ಹೊಡೆದ ಕೆಜಿಎಫ್-2 – ಕೇರಳ, ತಮಿಳುನಾಡಿನಲ್ಲೂ ರಾಕಿಭಾಯ್ ಹವಾ

    ಬಾಲಿವುಡ್ ಘಟಾನುಘಟಿ ಸ್ಟಾರ್‌ಗಳ ಈ ಹಿಂದಿನ ಬಾಕ್ಸ್ ಆಫೀಸ್ ಕಲೆಕ್ಷನ್ ಬ್ರೇಕ್ ಮಾಡಿ. ಭಾರತದಲ್ಲೇ `ಕೆಜಿಎಫ್ ಚಾಪ್ಟರ್ 2′ ಮೊದಲ ದಿನ ಕಲೆಕ್ಷನ್ ಗಲ್ಲಾಪೆಟ್ಟಿಗೆಯಲ್ಲಿ ಸುಮಾರು 130 ಕೋಟಿ ಬಾಚಿದೆ. ಈ ಹಿಂದಿನ ಎಲ್ಲಾ ದಾಖಲೆ ರಾಕಿಭಾಯ್ ಚಿತ್ರ ಉಡೀಸ್ ಮಾಡಿದೆ. ಭಾರತದ ಎಲ್ಲಾ ರಾಜ್ಯಗಳಲ್ಲೂ `ಕೆಜಿಎಫ್ ಚಾಪ್ಟರ್ 2′ ಮೊದಲ ದಿನದ ಕೆಲೆಕ್ಷನ್ ನಲ್ಲಿ ನಂಬರ್ 1 ಸ್ಥಾನ ಗಿಟ್ಟಿಸಿಕೊಂಡಿದೆ. ಹಾಗೆಯೇ ವಿದೇಶಗಳಲ್ಲಿ ಕೂಡ ಭರ್ಜರಿ ಕಲೆಕ್ಷನ್ ಆಗಿದೆ. ಸದ್ಯ ಎಲ್ಲೆಲ್ಲೂ ಯಶ್ ಮೇನಿಯಾ ಜೋರಾಗಿದೆ.

  • ರಾಕಿಭಾಯ್ `ಕೆಜಿಎಫ್ 2′ ಚಿತ್ರಕ್ಕಾಗಿ 100 ಟಿಕೆಟ್ ಬುಕ್ ಮಾಡಿದ ಮುಂಬೈನ ಯಶ್ ಫ್ಯಾನ್

    ರಾಕಿಭಾಯ್ `ಕೆಜಿಎಫ್ 2′ ಚಿತ್ರಕ್ಕಾಗಿ 100 ಟಿಕೆಟ್ ಬುಕ್ ಮಾಡಿದ ಮುಂಬೈನ ಯಶ್ ಫ್ಯಾನ್

    ಲ್ಲೆಲ್ಲೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ `ಕೆಜಿಎಫ್ 2′ ಚಿತ್ರದ ಹಾವಳಿ ಜೋರಾಗಿದೆ. ಚಿತ್ರದ ಟ್ರೇಲರ್ ಮೂಲಕನೇ ದಾಖಲೆ ಬರೆದಿರೋ `ಕೆಜಿಎಫ್ 2′ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಯಶ್ ನಟನೆಯ ಬಹುನಿರೀಕ್ಷಿತ `ಕೆಜಿಎಫ್ 2′ ಇದೇ ಏಪ್ರಿಲ್ 14ಕ್ಕೆ ತೆರೆಗೆ ಅಬ್ಬರಿಸಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವದೆಲ್ಲಡೆ ಚಿತ್ರ ರಿಲೀಸ್ ಆಗುತ್ತಿದೆ.

    ಈಗಾಗಲೇ `ಕೆಜಿಎಫ್ 2′ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಯುಎಸ್‌ಎನಲ್ಲಿ ಒಂದು ದಿನ ಮುಂಚೆನೇ ಪ್ರೀಮಿಯರ್ ಶೋ ಹಾಕಲಾಗಿದೆ. ಇದಕ್ಕಿನ್ನೂ 6 ದಿನಗಳಷ್ಟೇ ಬಾಕಿಯಿದೆ. ಫಸ್ಟ್ ಡೇ ಫಸ್ಟ್ ಶೋ `ಕೆಜಿಎಫ್ 2′ ಚಿತ್ರವನ್ನ ನೋಡಬೇಕು ಅಂತಾ ಅಭಿಮಾನಿಗಳು ಕಾಯ್ತಿದ್ದಾರೆ. ಕೋಟ್ಯಾಂತರ ಸಂಖ್ಯೆಯಲ್ಲಿ ಈಗಾಗಲೇ ಟಿಕೆಟ್ ಬುಕ್ಕಿಂಗ್ ಮಾಡಲಾಗಿದೆ.

    ವಿಶ್ವದೆಲ್ಲಡೆ ಕಾಯ್ತಿರೋ ರಾಕಿಭಾಯ್ ಸಿನಿಮಾಗಾಗಿ ಮುಂಬೈನ ಯಶ್ ಅಭಿಮಾನಿಯೊಬ್ಬ ಬರೋಬ್ಬರಿ 100 ಟಿಕೆಟ್ ಖರೀದಿಸಿ ಅಚ್ಚರಿ ಮೂಡಿಸಿದ್ದಾನೆ. ಈ ಮುನ್ನ ಈತ ಭಾಯಿಜಾನ್ ಸಲ್ಮಾನ್ ಖಾನ್ ಸಿನಿಮಾಗೆ 100 ಟಿಕೆಟ್ ಖರೀದಿಸಿದರಂತೆ. ಈಗ ಫಸ್ಟ್ ಟೈಮ್ ಸೌತ್ ಸಿನಿಮಾದ ಹೀರೋ ಯಶ್ ಸಿನಿಮಾಗೆ 100 ಟಿಕೆಟ್ ಬುಕ್ ಮಾಡಿದ್ದಾರೆ. ಇದನ್ನು ಓದಿ: ಸೆಂಚ್ಯುರಿ ಸ್ಟಾರ್ ಶಿವರಾಜ್‌ಕುಮಾರ್ ಚಿತ್ರಕ್ಕೆ ಶ್ರೀನಿ ನಿರ್ದೇಶನ

    ಇನ್ನು ನ್ಯಾಷನಲ್ ಸ್ಟಾರ್ ಯಶ್‌ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಜತೆಯಾಗಿದ್ದು, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್, ವಸಿಷ್ಠ ಸಿಂಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಪೋಸ್ಟರ್ ಲುಕ್, ಹಾಡುಗಳ ಮೂಲಕ ಮೋಡಿ ಮಾಡುತ್ತಿರುವ `ಕೆಜಿಎಫ್ 2′ ಸಿನಿಮಾ ನೋಡಲು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ಯಶ್ ಜೊತೆ ಸೆಲ್ಫಿಗೆ ಮುಗಿಬಿದ್ದ ಮುಂಬೈ ಅಭಿಮಾನಿಗಳು

    ಯಶ್ ಜೊತೆ ಸೆಲ್ಫಿಗೆ ಮುಗಿಬಿದ್ದ ಮುಂಬೈ ಅಭಿಮಾನಿಗಳು

    ಮುಂಬೈ: ರಾಕಿಂಗ್ ಸ್ಟಾರ್ ಯಶ್ ಅವರು ಸ್ಯಾಂಡಲ್‍ವುಡ್‍ನಲ್ಲಿ ಬಹುಬೇಡಿಕೆಯ ನಟರಾಗಿದ್ದಾರೆ. ಇವರು ನಟಿಸುವ ಎಲ್ಲಾ ಸಿನಿಮಾಗಳು ಸೂಪರ್ ಹಿಟ್.  ಸ್ಯಾಂಡಲ್‍ವುಡ್‍ನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ರಾಕಿ ಬಾಯ್‍ಗೆ ಸ್ಯಾಂಡಲ್‍ವುಡ್‍ನಲ್ಲಿ ಮಾತ್ರವಲ್ಲದೆ ದೇಶ, ವಿದೇಶಗಳಲ್ಲಿ ಅಭಿಮಾನಿಗಳಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಒಂದು ವೀಡಿಯೋ ವೈರಲ್ ಆಗಿದೆ.

    ಹೌದು ರಾಕಿಬಾಯ್ ಇತ್ತೀಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದೀಗ ಮತ್ತೊಂದು ವೀಡಿಯೋ ವೈರಲ್ ಆಗಿದ್ದು, ಯಶ್ ಸುತ್ತಮುತ್ತಲು ಅಭಿಮಾನಿಗಳು ಮುತ್ತಿಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ದನ್ನೂ ಓದಿ: ಸಖತ್ ಸ್ಟೈಲಿಶ್ ಆಗಿ ಮುಂಬೈನಲ್ಲಿ ಕಾಣಿಸಿಕೊಂಡ ಯಶ್

    ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ಯಶ್ ಉದ್ದನೆಯ ಗಡ್ಡ, ಉದ್ದವಾದ ಕೂದಲು, ಡೆನಿಮ್ ಜಾಕೆಟ್‍ನೊಂದಿಗೆ, ಕಪ್ಪು ಕಲರ್ ಕನ್ನಡಕ ಧರಿಸಿ ರಾಕಿ ಭಾಯ್ ಮಿಂಚಿದ್ದಾರೆ.

    ಪರಭಾಷೆಯಲ್ಲೂ ಅಭಿಮಾನಿಗಳನ್ನು ಹೊಂದಿರುವ ಯಶ್‍ಗೆ ಮುಂಬೈನಲ್ಲಿ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದಿದ್ದಾರೆ. ದನ್ನೂ ಓದಿ:  ನಮ್ಮ ರಚನಾತ್ಮಕ ಸಲಹೆಗಳನ್ನು ಚೀನಾ ಒಪ್ಪಿಲ್ಲ: ಭಾರತೀಯ ಸೇನೆ

    ಮಕ್ಕಳು ಕೂಡ ಯಶ್ ಜಾಕೆಟ್ ಹಿಡಿದು ಭಾಯ್ ಫೋಟೋ ಎಂದು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ದನ್ನೂ ಓದಿ: ಕೋವಿಡ್ ಲಸಿಕೆಗೆ ನೊಬೆಲ್ ಪ್ರಶಸ್ತಿ ಮಿಸ್ – ರಹಸ್ಯ ಬೆಳಕಿಗೆ

    ಅಭಿಮಾನಿಗಳು ಫೋಟೋ ತೆಗಿಸಿಕೊಳ್ಳಲು ಬಂದಾಗ ಯಶ್ ನಗುತ್ತಲೆ ಎಲ್ಲರ ಜೊತೆ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದು ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ ಇಷ್ಟು ಕೂಲ್ ಆಗಿ ಯಾವ ನಟರು ಅಭಿಮಾನಿಗಳ ಜೊತೆಗೆ ಸ್ಪಂದಿಸುವುದಿಲ್ಲ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.

    ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ಸಿನಿಮಾ ಕೆಜಿಎಫ್-2 ಸಿನಿಮಾದದಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಕುರಿತಾಗಿ ಭಾರಿ ನೀರಿಕ್ಷೆ ಇದೆ. ಅಭಿಮಾನಿಗಳು ದೊಡ್ಡ ಪರದೆಯಲ್ಲಿ ಯಶ್ ನೋಡಲು ಕಾತುರರಾಗಿದ್ದಾರೆ.

  • ಸಖತ್ ಸ್ಟೈಲಿಶ್ ಆಗಿ ಮುಂಬೈನಲ್ಲಿ ಕಾಣಿಸಿಕೊಂಡ ಯಶ್

    ಸಖತ್ ಸ್ಟೈಲಿಶ್ ಆಗಿ ಮುಂಬೈನಲ್ಲಿ ಕಾಣಿಸಿಕೊಂಡ ಯಶ್

    ಕೆಜಿಎಫ್ ಸಿನಿಮಾದ ಮೂಲಕ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿದ ಯಶ್ ಈಗ ಆಗಾಗ ಮುಂಬೈನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ ನಲ್ಲಿ ಏರ್‌ರ್ಪೋರ್ಟ್‌ಗೆ ಬಂದಿಳಿದ ಯಶ್ ಅವರ ಲುಕ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

    ವಿಮಾನ ನಿಲ್ದಾಣದಲ್ಲಿ ಯಶ್ ಅವರು ಉದ್ದ ಗಡ್ಡ, ಪುಟ್ಟದಾದ ಪೋನಿ ಹಾಗೂ ಕೂಲಿಂಗ್ ಗ್ಲಾಸ್ ತೊಟ್ಟು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:   ಹೊಸ ಹಲ್ಲು ಹುಟ್ಟಿಲ್ಲವೆಂದು ಪ್ರಧಾನಿಗೆ ಪತ್ರ ಬರೆದ ಪುಟಾಣಿಗಳು

    ಅಲ್ಲದೆ ಕೆಜಿಎಫ್ ಚಾಪ್ಟರ್ 2 ಸಿನಿಮಾದ ರಿಲೀಸ್‍ಗಾಗಿ ಕಾಯುತ್ತಿರುವ ಯಶ್ ಅವರು ಮತ್ತೆ ಯಾವ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನೋ ಕುತೂಹಲ ಸಿನಿರಂಗ ಸೇರಿದಂತೆ ಅಭಿಮಾನಿಗಳಲ್ಲೂ ಇದೆ. ಹೀಗಿರುವಾಗಲೇ ಯಶ್ ಅವರು ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಅವರು ಮುಂಬೈನ ವಿಮಾನ ನಿಲ್ದಾಣದಲ್ಲಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    ಯಶ್ ಅವರನ್ನು ಮುಂಬೈನಲ್ಲಿ ವಿಮಾನ ನಿಲ್ದಾಣದಲ್ಲಿ ನೋಡಿದ ನಂತರ ಈ ವಿಷಯವಾಗಿ ಸಾಕಷ್ಟು ಗುಸು ಗುಸು ಆರಂಭವಾಗಿದೆ. ಹೌದು, ಯಶ್ ಅವರು ಹೊಸ ಸಿನಿಮಾ ಕುರಿತಾಗಿ ಚರ್ಚಿಸೋಕೆ ಮುಂಬೈ ಹೋಗಿದ್ದಾರೆ. ಅಲ್ಲಿ ಅವರು ನಿರ್ದೇಶಕರು ಹಾಗೂ ನಿರ್ಮಾಪಕರನ್ನು ಭೇಟಿಯಾಗಿದ್ದಾರೆ ಎನ್ನುವ ಸುದ್ದಿ ಹಬ್ಬುತ್ತಿದೆ. ಇದನ್ನೂ ಓದಿ:  ಡೆಲ್ಲಿ ಮಣಿಸಿದ ಕೋಲ್ಕತ್ತಾ – 3 ವಿಕೆಟ್‍ಗಳ ಜಯ

    ಕೆ.ಜಿ.ಎಫ್ ಸಿನಿಮಾ ಮೂಲಕ ನಂ.1 ಸ್ಟಾರ್ ಪಟ್ಟಕ್ಕೇರಿರೋ ರಾಕಿಂಗ್ ಸ್ಟಾರ್ ಯಶ್‍ರ ಪ್ರತಿ ಹೆಜ್ಜೆ ಮೇಲೂ ನಿರೀಕ್ಷೆ ಮೂಡಿದೆ. ಯಶ್ ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷಿತ ಕೆಜಿಎಫ್ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು 2022ರ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ.

  • ಹಂಪಿ ಉತ್ಸವದಲ್ಲಿ ರಾಕಿ ಬಾಯ್ ಹವಾ

    ಹಂಪಿ ಉತ್ಸವದಲ್ಲಿ ರಾಕಿ ಬಾಯ್ ಹವಾ

    – ಮೈಸೂರಿನ ದಸರಾ ರೀತಿಯಲ್ಲಿ ಹಂಪಿ ಉತ್ಸವ ಆಚರಣೆ: ಸಚಿವ ಸಿಟಿ ರವಿ

    ಬಳ್ಳಾರಿ: ವಿಜಯನಗರ ಗತ ವೈಭವವನ್ನು ಸಾರುವ ಹಂಪಿ ಉತ್ಸವಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಚಾಲನೆ ನೀಡಿದ್ದಾರೆ. ಸಿಎಂ ಅವರ ಕಾರ್ಯಕ್ರಮ ಮುಗಿದ ಬಳಿಕ ಹಂಪಿಯ ಗಾಯತ್ರಿ ಪೀಠದ ಬಳಿ ಹಾಕಿರುವ ಶ್ರೀ ಕೃಷ್ಣದೇವರಾಯ ವೇದಿಕೆ ಯಶ್ ಆಗಮಿಸಿದ್ದರು.

    ವೇದಿಕೆ ಆಗಮಿಸಿ ಅಭಿಮಾನಿಗಳತ್ತಾ ಕೈ ಬೀಸಿ ಹೊಸ ವರ್ಷದ ಶುಭಾಶಯ ಕೋರಿದ ಯಶ್, ಇತಿಹಾಸ ಹಾಗೆ ಸೃಷ್ಠಿ ಆಗಲ್ಲಾ. ಈ ಮಣ್ಣಿನಲ್ಲಿ ಒಂದು ಪವರ್ ಇದೆ. ಅದಕ್ಕೆ ದೇಶದ ಅತ್ಯಂತ ಉನ್ನತ ಇತಿಹಾಸ ನಿರ್ಮಾಣ ಆಗಿದೆ. ಆದರೆ ಈ ಐತಿಹಾಸಿಕ ಸ್ಥಳವನ್ನು ಕಾಪಾಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.

    ಯಶ್ ಅಭಿಮಾನಿಗಳು ಯಶ್ ವೇದಿಕೆ ಬರಲು ಬಳಸಿದ ಕಾರ್ ಮುಂದೆ ನಿಂತು ವಿವಿಧ ಬಂಗಿಯಲ್ಲಿ ಪೋಸ್ ಕೊಟ್ಟು ಫೋಟೋ ತೆಗೆಸಿಕೊಂಡರು. ಆದರೆ ಅಭಿಮಾನಿಗಳು ಯಶ್ ಬಳಸಿದ್ದ ಕಾರ್ ಅವರದೇ ಎಂದು ತಿಳಿದಿದ್ರು, ಆದರೆ ಅದು ಯಶ್ ಅವರ ಕಾರ್ ಆಗಿರಲಿಲ್ಲ, ಬದಲಾಗಿ ಅದು ಜಿಲ್ಲಾಡಳಿತ ಅವರ ಏರ್ಪಡಿಸಿದ್ದ ಕಾರ್ ಆಗಿತ್ತು.

    ಹಂಪಿ ಉತ್ಸವ 2020 ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿವಹಿಸಿ ಮಾತನಾಡಿದ ಕನ್ನಡ ಸಂಸ್ಕೃತಿ, ಪ್ರವಾಸೋದ್ಯಮ ಸಚಿವ ಸಿಟಿ ರವಿ ಅವರು, ಇನ್ನು ಮುಂದೆ ಪ್ರತಿವರ್ಷ ನಿಗದಿತ ದಿನಾಂಕಗಳಂದು ಹಂಪಿ ಉತ್ಸವವನ್ನು ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕ್ಯಾಲೆಂಡರ್ ನಲ್ಲಿ ಅಳವಡಿಸಿ ಉತ್ಸವದ ಅನಿಶ್ಚಿತತೆ ನಿವಾರಿಸಲಾಗುವುದು ಎಂದರು.

    ಮೈಸೂರಿನ ದಸರಾ ಹೇಗೆ ಆಚರಣೆ ಮಾಡಲಾಗುವುದೋ, ಅದೇ ರೀತಿಯಲ್ಲಿ ಹಂಪಿ ಉತ್ಸವ ಆಚರಣೆ ಮಾಡಲಾಗುವುದು. ಭಾರತದ ಪರಂಪರೆಯ ಅವನತಿ ಮತ್ತು ಉನ್ನತಿಯ ಚರಿತ್ರೆಯನ್ನು ಹಂಪಿಯ ಕಲ್ಲು ಕಲ್ಲುಗಳು ಹೇಳುತ್ತವೆ. ನಮ್ಮ ಗತ ಇತಿಹಾಸ, ಪರಂಪರೆಯನ್ನು ಯಾವ ಶಕ್ತಿಗಳು ನಾಶಮಾಡಿದ್ದವೋ, ಅದೇ ಶಕ್ತಿಗಳು ಸ್ವಾತಂತ್ರ್ಯೋತ್ತರ ಕಾಲದಲ್ಲಿ ದೇಶದ ಅಖಂಡತೆಗೆ ಧಕ್ಕೆ ಉಂಟು ಮಾಡುತ್ತಿವೆ. ಆ ಕಾಲದಲ್ಲೂ ನಮ್ಮನ್ನು ಬಾದಿಸಿ ಈಗಲೂ ನಮ್ಮ ಜೊತೆಯಲ್ಲಿ ಇದ್ದು ನಮ್ಮ ಅಖಂಡತೆಗೆ ಧಕ್ಕೆ ತಂದಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್‍ಗೆ ಟಾಂಗ್ ನೀಡಿದರು. ಇಂತಹ ಉತ್ಸವಗಳು ಕೇವಲ ಮನರಂಜನೆಯ ಆಚರಣೆಗಳಾಗಬಾರದು, ಪರಂಪರೆಯ ಚಿಂತನ ಮಂಥನಗಳಾಗಬೇಕು ಎಂದರು ಕರೆ ನೀಡಿದರು.

  • ‘ಪ್ರಕಾಶಾಭಿನಂದನ’ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ

    ‘ಪ್ರಕಾಶಾಭಿನಂದನ’ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ

    – ರವಿಚಂದ್ರನ್, ಯಶ್, ಹರಿಪ್ರಿಯಾ ಭಾಗಿ

    ಮಂಗಳೂರು: ಉದ್ಯಮಿ ಪ್ರಕಾಶ್ ಶೆಟ್ಟಿ ಅವರ 60ನೇ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ಪ್ರಕಾಶಾಭಿನಂದನ ಕಾರ್ಯಕ್ರಮವನ್ನು ಸಿಎಂ ಬಿಎಸ್ ಯಡಿಯೂರಪ್ಪ ಅವರು ಉದ್ಘಾಟನೆ ಮಾಡಿದರು.

    ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಸಿಎಂ ಬಿಎಸ್‍ವೈ, ಉದ್ಯಮಿ ಪ್ರಕಾಶ್ ಶೆಟ್ಟಿ ಅವರ ಸಾಧನೆ ಎಲ್ಲರಿಗೂ ಪ್ರೇರಣೆಯಾಗಿದ್ದು, ತಮ್ಮನ್ನು ಬೆಳೆಸಿದ ಜನರಿಗೆ ಅವರು ನೆರವಾಗುತ್ತಿದ್ದಾರೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ ಗೌರವ ನೀಡಿದ್ದಾರೆ. ರಾಜ್ಯ ಸರ್ಕಾರ ಅವರ ಸೇವೆಯನ್ನು ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು, ಮತ್ತಷ್ಟು ಯಶಸ್ಸು ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.

    ಬಳಿಕ ಮಾತನಾಡಿದ ನಟ ಯಶ್, ಉದ್ಯಮದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸುವ ಕಾರ್ಯ ಬಹಳ ಅಪರೂಪ. ಉದ್ಯಮಿಗಳು ಹಣವನ್ನು ಹೂಡಿಕೆ ಮಾಡಿ ಜನರಿಗೆ ಉದ್ಯೋಗಗಳನ್ನು ನೀಡುತ್ತಾರೆ. ಅದೇ ರೀತಿ ನನಗೆ ಮಂಗಳೂರಿನ ಜನರ ಬಗ್ಗೆ ಹೆಮ್ಮೆ ಇದ್ದು. ವಿಶ್ವದ ಎಲ್ಲಾ ಪ್ರದೇಶಗಳಿಗೆ ಬಹುಬೇಗ ಹೊಂದಾಣಿಕೆಯಾಗುವ ಸಾಮರ್ಥ್ಯವನ್ನು ಮಂಗಳೂರಿಗರು ಹೊಂದಿದ್ದಾರೆ. ನಾನು ಎಲ್ಲೇ ಹೋದರು ಇಲ್ಲಿನವರು ನನಗೆ ಸಿಗುತ್ತಾರೆ. ಅದಕ್ಕೆ ನನಗೆ ಅಪಾರ ಗೌರವವಿದೆ. ಅಂತೆಯೇ ಉದ್ಯಮ ರಂಗದಲ್ಲಿ ಪ್ರಕಾಶ್ ಶೆಟ್ಟಿ ಅವರಿಗೆ ಮತ್ತಷ್ಟು ಯಶಸ್ಸು ಸಿಗಲಿ ಎಂದು ಆಶಿಸುತ್ತೇನೆ ಎಂದರು.

    ಮಂಗಳೂರಿನ ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸಿ.ಟಿ ರವಿ, ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಕರಾವಳಿಯ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಭಾಗಿಯಾಗಿದ್ದರು.

    ಇತ್ತ ಕನ್ನಡ ಸಿನಿರಂಗದ ಕ್ರೇಜಿಸ್ಟಾರ್ ರವಿಚಂದ್ರನ್, ನಟಿ ಹರಿಪ್ರಿಯಾ, ಕಾವ್ಯ ಶ್ರೀ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು. ಸಂಗೀತ ಕ್ಷೇತ್ರದ ದಿಗ್ಗಜರಾದ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಅವರು ನಡೆಸಿಕೊಡುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಹೈಲೈಟ್ ಆಗಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 25 ಸಾವಿರ ಮಂದಿ ಉಪಸ್ಥಿತಿದ್ದರು.