Tag: actor Vishal

  • Transgender Beauty Contest | ವೇದಿಕೆಯಲ್ಲೇ ಪ್ರಜ್ಞೆ ತಪ್ಪಿದ ನಟ ವಿಶಾಲ್

    Transgender Beauty Contest | ವೇದಿಕೆಯಲ್ಲೇ ಪ್ರಜ್ಞೆ ತಪ್ಪಿದ ನಟ ವಿಶಾಲ್

    ಮಿಳುನಾಡಿನ (Tamil Nadu) ವಿಲ್ಲುಪುರಂನಲ್ಲಿ ನಡೆದ ಮಿಸ್ ಕೂವಾಗಮ್ ಟ್ರಾನ್ಸ್‌ಜೆಂಡರ್ ಬ್ಯೂಟಿ ಕಂಟೆಸ್ಟ್‌ಗೆ (Transgender Beauty Contest) ಅತಿಥಿಯಾಗಿ ತೆರಳಿದ್ದ ತಮಿಳು ನಟ ವಿಶಾಲ್ (Actor Vishal) ವೇದಿಕೆಯ ಮೇಲೆ ಕುಸಿದು ಬಿದ್ದು ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ.

    ಕಾರ್ಯಕ್ರಮದ ವೇಳೆ ವಿಶಾಲ್ ಹಠಾತ್ತನೆ ಪ್ರಜ್ಞೆ ತಪ್ಪಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಮಾಜಿ ಸಚಿವ ಕೆ. ಪೊನ್ಮುಡಿ ಹಾಗೂ ಕಾರ್ಯಕ್ರಮ ಆಯೋಜಕರು, ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದ್ದು, ಈ ಬಗ್ಗೆ ಯಾವುದೇ ಅಧಿಕೃತ ವೈದ್ಯಕೀಯ ಹೇಳಿಕೆ ಬಿಡುಗಡೆಯಾಗಿಲ್ಲ. ಇದನ್ನೂ ಓದಿ: ಕಯಾದು ಸೌಂದರ್ಯಕ್ಕೆ ಕ್ಯೂ ನಿಂತ ಅರ್ಧ ಡಜನ್ ಸಿನಿಮಾ!

    ಇತ್ತೀಚೆಗೆ ಅವರ ಅನಾರೋಗ್ಯದ ಬಗ್ಗೆ ಹಲವಾರು ವರದಿಗಳು ಬಂದಿವೆ. ಇದರ ಬೆನ್ನಲ್ಲೇ ಅಭಿಮಾನಿಗಳು ಆರೋಗ್ಯಕ್ಕೆ ಆದ್ಯತೆ ನೀಡಬೇಕೆಂದು ಅವರನ್ನು ಒತ್ತಾಯಿಸುತ್ತಿದ್ದಾರೆ. ಇದೀಗ ಈ ಘಟನೆಯು ವಿಶಾಲ್ ಮತ್ತು ಅವರ ಅಭಿಮಾನಿಗಳಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದ್ದು, ಅವರ ಆರೋಗ್ಯಕ್ಕಾಗಿ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

    ವಿಶಾಲ್ ಅವರ ಮ್ಯಾನೇಜರ್‌ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಊಟ ಮಾಡದ ಕಾರಣ ಅವರ ಆರೋಗ್ಯದಲ್ಲಿ ಏರುಪೇರಾಗಿರಬಹುದು ಎಂದಿದ್ದಾರೆ. ಇನ್ನೂ ಈ ವರ್ಷ ಜನವರಿಯಲ್ಲಿ ಡೆಂಗ್ಯೂನಿಂದ ಬಳಲಿ ಅವರು ಚೇತರಿಸಿಕೊಂಡಿದ್ದರು. ಈ ವೇಳೆ ಅವರ ಆರೋಗ್ಯಕ್ಕಾಗಿ ಅಭಿಮಾನಿಗಳು ನಿರಂತರವಾಗಿ ಪ್ರಾರ್ಥಿಸಿದ್ದರು.

    ಜನವರಿಯಲ್ಲಿ ‘ಮದಗಜರಾಜ’ (Madha Gaja Raja) ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾಗ, ಅವರ ಮಾತು ತೊದಲುತ್ತಿತ್ತು. ಅಲ್ಲದೇ ಕೈ ಸಹ ನಡುಗುತ್ತಿತ್ತು. ಅವರ ಈ ಸ್ಥಿತಿ ಕಂಡು ಫ್ಯಾನ್ಸ್ ಆಘಾತಗೊಂಡಿದ್ದರು. ಇದನ್ನೂ ಓದಿ: ಕಾಮಿಡಿ ಕಿಲಾಡಿ-3 ವಿನ್ನರ್ ರಾಕೇಶ್‌ ಪೂಜಾರಿ ನಿಧನ

  • `ಕಾಂತಾರ’ ಎಫೆಕ್ಟ್, ಭೂತಕೋಲ ನೋಡಲು ಧರ್ಮಸ್ಥಳಕ್ಕೆ ಬರಲಿದ್ದಾರೆ ನಟ ವಿಶಾಲ್

    `ಕಾಂತಾರ’ ಎಫೆಕ್ಟ್, ಭೂತಕೋಲ ನೋಡಲು ಧರ್ಮಸ್ಥಳಕ್ಕೆ ಬರಲಿದ್ದಾರೆ ನಟ ವಿಶಾಲ್

    ಅಂತರಾಷ್ಟ್ರೀಯ ಮಟ್ಟದಲ್ಲಿ `ಕಾಂತಾರ’ (Kantara) ಸದ್ದು ಜೋರಾಗಿದೆ. ಭೂತಕೋಲದ ಬಗ್ಗೆ ಪರಿಚಯ ಆದಮೇಲೆ ಅದೆಷ್ಟೋ ಜನ ದೈವ ಆರಾಧನೆಯನ್ನ ನೋಡಲು ಕಾಯ್ತಿದ್ದಾರೆ. ಹೀಗಿರುವಾಗ ಭೂತಕೋಲವನ್ನು ಸೆಲೆಬ್ರಿಟಿಗಳು ಕೂಡ ನೋಡಲು ಉತ್ಸುಕರಾಗಿದ್ದಾರೆ. ಕೋಲವನ್ನು ನೋಡಲು ಧರ್ಮಸ್ಥಳಕ್ಕೆ ಬರೋದಾಗಿ  ಕಾಲಿವುಡ್‌ (Kollywood) ನಟ ವಿಶಾಲ್ (Actor Vishal) ಹೇಳಿದ್ದಾರೆ.

    `ಕಾಂತಾರ’ ಬರೋದಕ್ಕೂ ಮುಂಚೆ ಕನ್ನಡಿಗರಿಗಷ್ಟೇ ದೈವ ಕೋಲದ ಬಗ್ಗೆ ಅರಿವಿತ್ತು. ಈ ಚಿತ್ರ ನೋಡಿದ ಮೇಲೆ ದೇಶ-ವಿದೇಶದ ಜನರಿಗೂ ಈ ಬಗ್ಗೆ ಪರಿಚಯವಾಯ್ತು. ಈ ಸಿನಿಮಾದ ಕ್ಲೈಮ್ಯಾಕ್ಸ್ ನೋಡಿದ ಅನೇಕರಿಗೆ ರೋಮಾಂಚನವಾಗಿತ್ತು. ಇದೀಗ ಇದೇ ರೀತಿ ಕಾಂತಾರ ನೋಡಿ, ವಿಶಾಲ್‌ ಅವರಿಗೂ ಭಾಸವಾಗಿದೆ. ತುಳುನಾಡಿನ ಸಂಸ್ಕೃತಿಯ ದೈವ ನೇಮವನ್ನು ಕಣ್ಣಾರೆ ನೋಡಲು ವಿಶಾಲ್ ಇಷ್ಟಪಟ್ಟಿದ್ದಾರೆ. ಇದನ್ನೂ ಓದಿ: ಭೂತಕೋಲದಲ್ಲಿ ನಟಿ ಅನುಷ್ಕಾ ಶೆಟ್ಟಿ ಭಾಗಿ

    ಧರ್ಮಸ್ಥಳಕ್ಕೆ (Dharmasthaala) ತೆರಳಿ, ದೈವಕೋಲ ಮತ್ತು ಅಲ್ಲಿನ ಪ್ರತೀತಿ ಬಗ್ಗೆ ತಿಳಿದುಕೊಳ್ಳಲು ಎಂದು ನಟ ವಿಶಾಲ್  ಆಸಕ್ತಿ ತೋರಿದ್ದಾರೆ. ಸದ್ಯದಲ್ಲೇ ಧರ್ಮಸ್ಥಳ ಕ್ಷೇತ್ರಕ್ಕೆ ನಟ ಬರಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಪಘಾತದಲ್ಲಿ ಗಾಯಗೊಂಡ ನಟ ವಿಶಾಲ್

    ಅಪಘಾತದಲ್ಲಿ ಗಾಯಗೊಂಡ ನಟ ವಿಶಾಲ್

    ಚೆನ್ನೈ: ಇತ್ತೀಚೆಗಷ್ಟೇ ತಮ್ಮ ಬಹುದಿನಗಳ ಗೆಳತಿ ಅಶಿಷಾ ರೆಡ್ಡಿರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ತಮಿಳು ನಟ ವಿಶಾಲ್ ಸಿನಿಮಾ ಶೂಟಿಂಗ್ ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಸದ್ಯ ವಿಶಾಲ್ ಅವರ ಮುಂದಿನ ಸಿನಿಮಾದ ಶೂಟಿಂಗ್ ಟರ್ಕಿಯಲ್ಲಿ ನಡೆಯುತ್ತಿದ್ದು, ಸಹಾಸ ದೃಶ್ಯ ಚಿತ್ರೀಕರಣದ ವೇಳೆ ಬೈಕಿನಿಂದ ಬಿದ್ದು ಗಾಯಗೊಂಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ವಿಶಾಲ್ ಅವರ ಎಡಗೈ ಹಾಗೂ ಎಡಗಾಲಿಗೆ ಗಾಯವಾಗಿದ್ದು, ಚಿಕಿತ್ಸೆ ಪಡೆದ ಬಳಿಕ ಕನಿಷ್ಠ 2 ವಾರಗಳ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ. ಸಿನಿಮಾ ಶೂಟಿಂಗ್ ಪೂರ್ಣಗೊಂಡ ಬಳಿಕವೇ ಚಿತ್ರತಂಡ ವಾಪಸ್ ಆಗಲಿದ್ದು, ಬಹುತೇಕ ಚೇತರಿಸಿಕೊಳ್ಳುವ ನಿರೀಕ್ಷೆಯನ್ನು ಚಿತ್ರತಂಡ ವ್ಯಕ್ತಪಡಿಸಿದೆ. ಇತ್ತ ತಮ್ಮ ನೆಚ್ಚಿನ ನಟ ಬಹುಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಟ್ವೀಟ್ ಮಾಡಿ ಪ್ರಾರ್ಥನೆ ಮಾಡಿದ್ದಾರೆ.

    ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 1 ಸಿನಿಮಾವನ್ನು ನಟ ವಿಶಾಲ್ ತಮಿಳುನಾಡಿನಲ್ಲಿ ವಿತರಣೆ ಮಾಡಿದ್ದರು. ಆ ವೇಳೆಯೇ ಇಬ್ಬರು ನಟನ ನಡುವಿನ ಸ್ನೇಹಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಟಾಲಿವುಡ್ ಜೂನಿಯರ್ ಎನ್‍ಟಿಆರ್ ನಟನೆಯ ಟೆಂಪರ್ ಸಿನಿಮಾ ತಮಿಳು ರಿಮೇಕ್ ‘ಅಯೋಗ್ಯ’ ಸಿನಿಮಾದಲ್ಲಿ ವಿಶಾಲ್ ನಟಿಸಿದ್ದು, ಬಿಡುಗಡೆಗೆ ಸಿದ್ಧವಾಗಿದೆ.