Tag: actor Vikas

  • ಮರು ಬಿಡುಗಡೆಯಾಗಲಿದೆ ‘ಕಾಣದಂತೆ ಮಾಯಾವಾದನು’ ಚಿತ್ರ – ಅಕ್ಟೋಬರ್ 15ಕ್ಕೆ ರೀ ಎಂಟ್ರಿ

    ಮರು ಬಿಡುಗಡೆಯಾಗಲಿದೆ ‘ಕಾಣದಂತೆ ಮಾಯಾವಾದನು’ ಚಿತ್ರ – ಅಕ್ಟೋಬರ್ 15ಕ್ಕೆ ರೀ ಎಂಟ್ರಿ

    ಸುಮಾರು ಏಳು ತಿಂಗಳಿಂದ ಚಿತ್ರಮಂದಿರದಲ್ಲಿ ಸಿನಿಮಾ ನೋಡದೆ ಬೇಸರದಲ್ಲಿದ್ದ ಕನ್ನಡ ಸಿನಿ ರಸಿಕರಿಗೆ ಅಕ್ಟೋಬರ್ 15ರಿಂದ ಚಿತ್ರಮಂದಿರದಲ್ಲಿ ಸಿನಿಮಾ ನೋಡೋ ಭಾಗ್ಯ ಸಿಕ್ಕಿದೆ. ಚಿತ್ರಮಂದಿರ ಓಪನ್‍ಗೆ ಸರ್ಕಾರ ಅನುಮತಿ ನೀಡಿದ್ದೇ ತಡ ಹಲವು ಚಿತ್ರತಂಡಗಳು ಸಿನಿಮಾ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದ್ರ ನಡುವೆ ಕೊರೊನಾ ಹೊಡೆತಕ್ಕೆ ಸಿಕ್ಕಿ ಕಡಿಮೆ ದಿನ ಪ್ರದರ್ಶನ ಕಂಡ ಚಿತ್ರಗಳು ಒಂದಾದ ಮೇಲೊಂದರಂತೆ ರೀ ರಿಲೀಸ್‍ಗೆ ರೆಡಿಯಾಗುತ್ತಿವೆ. ಈ ಸಾಲಿನಲ್ಲಿ ವಿಕಾಸ್ ನಾಯಕ ನಟನಾಗಿ ನಟಿಸಿರುವ ‘ಕಾಣದಂತೆ ಮಾಯವಾದನು’ ಚಿತ್ರ ಕೂಡ ಸೇರ್ಪಡೆಯಾಗಿದೆ.

    ಅಕ್ಟೋಬರ್ 15ರಂದೇ ‘ಕಾಣದಂತೆ ಮಾಯವಾದನು’ ಚಿತ್ರ ಪ್ರೇಕ್ಷಕರಿಗೆ ಮನರಂಜನೆ ನೀಡಲು ಸಿದ್ಧವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಚಿತ್ರದ ನಿರ್ದೇಶಕ ರಾಜ್ ಪಾತಿಪಾಟಿ ಹಾಗೂ ನಟ ವಿಕಾಸ್ ಸಿನಿಮಾಗೆ ಒಳ್ಳೆಯ ರಿವೀವ್ ಬಂದಿತ್ತು. ಜನರು ಮೆಚ್ಚಿಕೊಂಡಿದ್ರು. ಬಟ್ ನಾವು ಒಂದಿಷ್ಟು ಸೀನ್‍ಗಳನ್ನು ತುಂಬಾ ಟ್ರಿಮ್ ಮಾಡಿದ್ವಿ. ಕಥೆಗೆ ಹೆಚ್ಚು ಇಂಪಾರ್ಟೆನ್ಸ್ ಕೊಟ್ಟು ಕೆಲವು ಸೀನ್‍ಗಳನ್ನು ಟ್ರಿಮ್ ಮಾಡಿದ್ವಿ. ಆದ್ರೀಗ ಒಂದಿಷ್ಟು ಬದಲಾವಣೆಯೊಂದಿಗೆ ಮರು ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ. ಜನರಿಗೆ ಖಂಡಿತ ಮೊದಲಿಗಿಂತ ಈ ಬಾರಿ ಹೆಚ್ಚಾಗಿ ಸಿನಿಮಾ ಇಷ್ಟವಾಗುತ್ತೆ ಅನ್ನೋದು ಚಿತ್ರತಂಡದ ಅಭಿಪ್ರಾಯ.

    ಅಕ್ಟೋಬರ್ 15ಕ್ಕೆ ಹತ್ತಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ‘ಕಾಣದಂತೆ ಮಾಯವಾದನು’ ಚಿತ್ರ ಮರುಬಿಡುಯಾಗುತ್ತಿದೆ. ಚಿತ್ರದಲ್ಲಿ ಲವರ್ ಬಾಯ್, ಆಕ್ಷನ್ ಹೀರೋ ಆಗಿ ವಿಕಾಸ್ ರಮ್ಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ನಟಿಯಾಗಿ ಸಿಂಧೂ ಲೋಕನಾಥ್ ನಟಿಸಿದ್ದಾರೆ. ಲವ್ ಫ್ಯಾಂಟಸಿ, ಹಾರಾರ್, ಆಕ್ಷನ್, ಸಸ್ಪೆನ್ಸ್ ಎಲ್ಲಾ ಎಲಿಮೆಂಟ್‍ಗಳು ಚಿತ್ರದಲ್ಲಿದ್ದು, ಅಚ್ಯುತ್ ಕುಮಾರ್, ಭಜರಂಗಿ ಲೋಕಿ, ಚಿತ್ರದ ತಾರಾಬಳಗದಲ್ಲಿದ್ದಾರೆ. ಚಂದ್ರಶೇಖರ್ ನಾಯ್ಡು, ಸೋಮ್ ಸಿಂಗ್, ಪುಷ್ಪ ಸೋಮ್ ಸಿಂಗ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಂದ್ಹಾಗೆ ಈ ಸಿನಿಮಾ ಜನವರಿ 31ಕ್ಕೆ ಮೊದಲು ಬಿಡುಗಡೆಯಾಗಿತ್ತು.

  • ನಾಯಕ ನಟನಾದ ಜಯಮ್ಮನ ಮಗ ನಿರ್ದೇಶಕ!

    ನಾಯಕ ನಟನಾದ ಜಯಮ್ಮನ ಮಗ ನಿರ್ದೇಶಕ!

    ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಟಾಕ್ ಕ್ರಿಯೇಟ್ ಮಾಡಿರುವ ಚಿತ್ರ ‘ಕಾಣದಂತೆ ಮಾಯವಾದನು’. ವಿಕಾಸ್, ಸಿಂಧು ಲೋಕ್‍ನಾಥ್ ಅಭಿಯಿಸಿರುವ ಈ ಚಿತ್ರ ಇದೇ ತಿಂಗಳ 31ಕ್ಕೆ ಬಿಡುಗಡೆಯಾಗುತ್ತಿದೆ. ವಿಭಿನ್ನ ಕಥಾಹಂದರ, ಸ್ಟೋರಿ ಲೈನ್ ಇರುವ ಈ ಚಿತ್ರವನ್ನು ರಾಜ್ ಪಾತಿಪಾಟಿ ನಿರ್ದೇಶನ ಮಾಡಿದ್ದಾರೆ. ಜಯಮ್ಮನ ಮಗ ಚಿತ್ರದಲ್ಲಿ ದುನಿಯಾ ವಿಜಿಗೆ ಆ್ಯಕ್ಷನ್ ಕಟ್ ಹೇಳಿದ್ದ ವಿಕಾಸ್ ಈ ಚಿತ್ರದ ಮೂಲಕ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದೇ ತಿಂಗಳ 31ಕ್ಕೆ ಈ ಚಿತ್ರ ಚಿತ್ರಮಂದಿರದ ಅಂಗಳಕ್ಕೆ ಬರುತ್ತಿದೆ.

    ರಾಜ್ ಪಾತಿಪಾಟಿ ಮೊದಲ ಬಾರಿ ಆಕ್ಷನ್ ಕಟ್ ಹೇಳಿರೋ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಪಡೆದುಕೊಂಡಿರೋದು ಬಿಡುಗಡೆಯ ಹೊಸ್ತಿಲಲ್ಲಿರುವ ಚಿತ್ರತಂಡಕ್ಕೆ ಖುಷಿ ನೀಡಿದೆ. ಮುಗ್ಧ ಪ್ರೇಮಕಥೆ ಚಿತ್ರದಲ್ಲಿದ್ದು, ಸಾವನಪ್ಪುವ ಪ್ರಿಯಕರ ದೆವ್ವವಾಗಿ ಬಂದು ಹೇಗೆ ತನ್ನ ಪ್ರೀತಿಯನ್ನು ಕಾಪಾಡಿಕೊಳ್ಳುತ್ತಾನೆ ಎನ್ನುವ ಇಂಟ್ರಸ್ಟಿಂಗ್ ಕಥಾಹಂದರ ಚಿತ್ರದಲ್ಲಿದೆ. ಲವ್, ಆಕ್ಷನ್, ಹಾರಾರ್, ಥ್ರಿಲ್ಲರ್ ಅಂಶಗಳು ಚಿತ್ರದಲ್ಲಿದ್ದು ಪ್ರೇಕ್ಷಕನಿಗೆ ಒಂದು ಪವರ್ ಪ್ಯಾಕ್ಡ್ ಎಂಟಟೈನ್ಮೆಂಟ್ ಸಿಗೋದ್ರಲ್ಲಿ ಡೌಟೇ ಇಲ್ಲ ಅಂತಿದೆ ಚಿತ್ರತಂಡ.

    ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫಿಕೇಟ್ ಪಡೆದು ಪಾಸ್ ಆಗಿರೋ ಕಾಣದಂತೆ ಮಾಯವಾದನು ಸಿನಿಮಾ ಇದೇ ಶುಕ್ರವಾರ ಸಿನಿ ಪ್ರೇಕ್ಷಕರ ಎದುರಿಗೆ ಬರಲಿದ್ದಾನೆ. ಗುಮ್ಮಿನೇನಿ ವಿಜಯ್ ಮ್ಯೂಸಿಕ್, ಸುಜ್ಞಾನ್ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ಚಿತ್ರದಲ್ಲಿ ದೊಡ್ಡ ತಾರಾಬಳಗದವಿದ್ದು ಅಚ್ಯುತ್ ಕುಮಾರ್, ಭಜರಂಗಿ ಲೋಕಿ, ರಾಘವ್ ಉದಯ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.