Tag: actor Surya

  • ಬ್ಯಾನರ್‌ ಕಟ್ಟುತ್ತಿದ್ದಾಗ ವಿದ್ಯುತ್‌ ಶಾಕ್‌ – ನಟ ಸೂರ್ಯನ ಅಭಿಮಾನಿಗಳು ಸಾವು!

    ಬ್ಯಾನರ್‌ ಕಟ್ಟುತ್ತಿದ್ದಾಗ ವಿದ್ಯುತ್‌ ಶಾಕ್‌ – ನಟ ಸೂರ್ಯನ ಅಭಿಮಾನಿಗಳು ಸಾವು!

    ಅಮರಾವತಿ: ತಮಿಳು ಚಿತ್ರರಂಗದ ನಟ ಸೂರ್ಯ (Actor Surya) ಅವರ ಹುಟ್ಟುಹಬ್ಬದ ಬ್ಯಾನರ್‌ ಕಟ್ಟುತ್ತಿದ್ದ ವೇಳೆ ವಿದ್ಯುತ್‌ ಸ್ಪರ್ಶಿಸಿ ಇಬ್ಬರು ಅಭಿಮಾನಿಗಳು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ (Andhra Pradesh) ನಡೆದಿದೆ.

    ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಮೋಪುಲವಾರಿಪಾಲೆಂ ಗ್ರಾಮದಲ್ಲಿ ನರಸರಾವ್‌ ಪೇಟೆ ಮಂಡಲದ ನಕ್ಕಾ ವೆಂಕಟೇಶ್‌ ಮತ್ತು ಪೋಲೂರಿ ಸಾಯಿ ಹೆಸರಿನ ಅಭಿಮಾನಿಗಳಿಬ್ಬರು ಸಾವನ್ನಪ್ಪಿರುವುದಾಗಿ ಪೊಲೀಸರು (Andhra Police) ತಿಳಿಸಿದ್ದಾರೆ. ಇದನ್ನೂ ಓದಿ: ವಿದೇಶಿ ಪ್ರಜೆಯಿಂದ 5,000 ರೂ. ಪಡೆದು ರಶೀದಿ ಕೊಡದೇ ಯಾಮಾರಿಸಿದ್ದ ಟ್ರಾಫಿಕ್‌ ಪೊಲೀಸ್‌ ಅಮಾನತು

    ಪೊಲೀಸರ ಪ್ರಕಾರ, ಬ್ಯಾನರ್‌ ಕಟ್ಟುತ್ತಿದ್ದ ಇಬ್ಬರೂ ನಟ ಸೂರ್ಯ ಅವರ ಅಭಿಮಾನಿಗಳು. ಅವರ ಹುಟ್ಟುಹಬ್ಬಕ್ಕೆ ಬ್ಯಾನರ್‌ ಕಟ್ಟುತ್ತಿದ್ದರು. ಈ ವೇಳೆ ಫ್ಲೆಕ್ಸ್‌ನ ಕಬ್ಬಿಣದ ರಾಡ್‌ ಓವರ್ಹೆಡ್‌ ವಿದ್ಯುತ್‌ ತಂತಿಗೆ ತಗುಲಿ ದುರಂತ ಸಂಭವಿಸಿದೆ. ಇಬ್ಬರು ಯುವಕರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರೂ ನರಸರಾವ್‌ಪೇಟೆಯ ಖಾಸಗಿ ಪದವಿ ಕಾಲೇಜಿನಲ್ಲಿ 2ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮೃತದೇಹಗಳನ್ನ ನರಸರಾವ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುದ್ದಿನ ನಾಯಿ ನಾಪತ್ತೆ – ಭದ್ರತಾ ಸಿಬ್ಬಂದಿ ಅಮಾನತು ಮಾಡುವಂತೆ ಪೊಲೀಸ್ ಅಧಿಕಾರಿಗೆ ಪತ್ರ ಬರೆದ ನ್ಯಾಯಾಧೀಶ

    ಈ ನಡುವೆ ಮೃತ ಪೋಲೂರಿ ಸಾಯಿ ಅವರ ಸಹೋದರಿ ಅನನ್ಯಾ ತನ್ನ ಅಣ್ಣನ ಸಾವಿಗೆ ತಾನೇ ಕಾರಣ ಎಂಬುದಾಗಿ ಮರುಕ ವ್ಯಕ್ತಪಡಿಸಿದ್ದಾಳೆ. ಕಾಲೇಜಿಗೆ ಸಾಕಷ್ಟು ಶುಲ್ಕ ಕಟ್ಟುತ್ತಿದ್ದೇವೆ. ಕಾಲೇಜಿಗೆ ಸೇರುವ ಮುನ್ನವೇ ವಿದ್ಯಾರ್ಥಿಗಳಿಗೆ ಭದ್ರತೆ, ನಿಗಾ ಇಡುವುದಾಗಿ ಭರವಸೆ ನೀಡಿದ್ದರು. ಆದ್ರೆ ಕಾಲೇಜು ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳ ರಕ್ಷಣೆ, ನಿಗಾ ಇಡುತ್ತಿಲ್ಲ. ನಾವು ದಿನಗೂಲಿ ನೌಕರರು, ಕಾಲೇಜು ಶುಲ್ಕ ಕಟ್ಟಲು ಅಣ್ಣ ಪಾರ್ಟ್‌ ಟೈಂ ಕೆಲಸ ಮಾಡುತ್ತಿದ್ದ. ನನಗಾಗಿ ಶುಲ್ಕ ಕಟ್ಟಲು ಕೆಲಸ ಮಾಡುತ್ತಿದ್ದ ವೇಳೆ ನನ್ನ ಅಣ್ಣ ಸಾವನ್ನಪ್ಪಿದ್ದಾನೆ ಎಂಬುದಾಗಿ ಹೇಳಿಕೊಂಡಿದ್ದಾಳೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟ ಸೂರ್ಯಗೆ ದುಬಾರಿ ವಾಚ್ ಗಿಫ್ಟ್ ಮಾಡಿದ ಕಮಲ್ ಹಾಸನ್

    ನಟ ಸೂರ್ಯಗೆ ದುಬಾರಿ ವಾಚ್ ಗಿಫ್ಟ್ ಮಾಡಿದ ಕಮಲ್ ಹಾಸನ್

    ಕಾಲಿವುಡ್‌ನಲ್ಲಿ ಧೂಳೆಬ್ಬಿಸುತ್ತಿರುವ `ವಿಕ್ರಮ್’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಇದೇ ಸಕ್ಸಸ್ ಖುಷಿಯಲ್ಲಿ ನಿರ್ದೇಶಕ ಲೋಕೇಶ್ ಕನಗರಾಜ್‌ಗೆ ದುಬಾರಿ ಕಾರು ಗಿಫ್ಟ್ ಮಾಡಿದ ಬೆನ್ನಲ್ಲೇ ನಟ ಸೂರ್ಯಗೆ ದುಬಾರಿ ವಾಚ್ ಅನ್ನು ಕಮಲ್ ಹಾಸನ್ ಗಿಫ್ಟ್ ಮಾಡಿದ್ದಾರೆ.

    `ವಿಕ್ರಮ್’ ಸಿನಿಮಾ ಕಮಲ್ ಹಾಸನ್ ಕೆರಿಯರ್‌ಗೆ ಬಿಗ್ ಬ್ರೇಕ್ ನೀಡಿದೆ. ಕಾಲಿವುಡ್ ರಂಗದಲ್ಲಿ ಕಮಲ್ ಹಾಸನ್ ಸಿನಿಮಾ ಸದ್ದು ಮಾಡುತ್ತಿದೆ. ಗಲ್ಲಾಪೆಟ್ಟಿಗೆಯಲ್ಲಿ 175 ಕೋಟಿ ಕಲೆಕ್ಷನ್ ಮಾಡಿ, 200 ಕೋಟಿಯತ್ತ ಲಗ್ಗೆ ಇಡುತ್ತಿದೆ. ಈ ಸಕ್ಸಸ್ ಖುಷಿಯಲ್ಲಿ ಚಿತ್ರದ ನಿರ್ದೇಶಕ ಲೋಕೇಶ್ ಕನಗರಾಜ್‌ಗೆ 70 ಲಕ್ಷ ಮೌಲ್ಯದ ದುಬಾರಿ ಕಾರನ್ನು ಗಿಫ್ಟ್ ಮಾಡಿದ ಬೆನ್ನಲ್ಲೆ ನಟ ಸೂರ್ಯ ಅವರಿಗೂ ಕೂಡ ದುಬಾರಿ ವಾಚ್ ಅನ್ನು ಗಿಫ್ಟ್ ಮಾಡಿದ್ದಾರೆ. ಇದನ್ನೂ ಓದಿ: ನಿರ್ದೇಶಕನಿಗೆ ಐಷಾರಾಮಿ ಕಾರು, ಸಹ ನಿರ್ದೇಶಕರಿಗೆ ದುಬಾರಿ ಬೈಕ್ ಗಿಫ್ಟ್ ಮಾಡಿದ ಕಮಲ್ ಹಾಸನ್

    `ವಿಕ್ರಮ್’ ಸಿನಿಮಾ ಮಲ್ಟಿ ಸ್ಟಾರ್ಸ್ ಇರುವ ತಂಡ ಈ ಚಿತ್ರದಲ್ಲಿ ನಟ ಸೂರ್ಯ ಕೂಡ ಪವರ್‌ಫುಲ್ ಪಾತ್ರದಲ್ಲಿ ಖಡಕ್ ಆಗಿ ನಟಿಸಿದ್ದಾರೆ. ಚಿತ್ರದ ಯಶಸ್ಸಿಗೆ ಸೂರ್ಯ ಅವರು ಕಾರಣ ಅಂತಾ ಚೆಂದದ ದುಬಾರಿ ವಾಚ್ ಉಡುಗೊರೆಯಾಗಿ ಕಮಲ್ ಹಾಸನ್ ನೀಡಿದ್ದಾರೆ. ಸ್ವತಃ ಕಮಲ್ ಹಾಸನ್ ಅವರೇ ಸೂರ್ಯ ಇರುವ ಜಾಗಕ್ಕೆ ತೆರಳಿ ವಾಚ್ ಅನ್ನು ಸೂರ್ಯ ಅವರಿಗೆ ತೊಡಸಿ ಸಂಭ್ರಮಿಸಿದ್ದಾರೆ. ಈ ವೇಳೆ ನಿರ್ದೇಶಕ ಲೋಕೇಶ್ ಕನಗರಾಜ್ ಕೂಡ ಸಾಥ್ ನೀಡಿದ್ದಾರೆ. ಒಟ್ನಲ್ಲಿ ಕಮಲ್ ಹಾಸನ್ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ದೌರ್ಜನ್ಯ ಖಂಡಿಸಿ, ಭಾವನಾ ಮೆನನ್ ಬೆಂಬಲಕ್ಕೆ ನಿಂತ ತಮಿಳು ನಟ ಸೂರ್ಯ

    ದೌರ್ಜನ್ಯ ಖಂಡಿಸಿ, ಭಾವನಾ ಮೆನನ್ ಬೆಂಬಲಕ್ಕೆ ನಿಂತ ತಮಿಳು ನಟ ಸೂರ್ಯ

    ನ್ನಡದಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ, ಮಲಯಾಳಿ ನಟಿ ಭಾವನಾ ಮೆನನ್ ಮೇಲಿನ ದೌರ್ಜನ್ಯ ಖಂಡಿಸಿರುವ ಸಾಲಿನಲ್ಲಿ ನಟ ಸೂರ್ಯ ಇದೀಗ ಸೇರ್ಪಡೆಗೊಂಡಿದ್ದಾರೆ. ತಮ್ಮ ಹೊಸ ಸಿನಿಮಾ ‘ಎತುರ್ಕುಂ ತೂನಿಂದವನ್’ ಸಿನಿಮಾದ ಪ್ರಚಾರಕ್ಕಾಗಿ ಕೊಚ್ಚಿಗೆ ತೆರಳಿದ್ದ ಸೂರ್ಯ, ಕೇರಳದಲ್ಲಿ ನಡೆದ ನಟಿ ಮೇಲಿನ ಹಲ್ಲೆ ಮತ್ತು ದೌರ್ಜನ್ಯವನ್ನು ಯಾವ ನಾಗರೀಕ ಸಮಾಜ ಒಪ್ಪಿಕೊಳ್ಳುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಆ ನಟಿಯೊಂದಿಗೆ ನಾವೆಲ್ಲರೂ ಇದ್ದೇವೆ. ಅವರು ಧೈರ್ಯದಿಂದ ಜೀವನ ನಡೆಸಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ : ರಕ್ಷಿತ್ ಶೆಟ್ಟಿ ‘777 ಚಾರ್ಲಿ’ ಸಿನಿಮಾ ಏನಾಯ್ತು? ಗುಡ್ ನ್ಯೂಸ್ ಕೊಡುತ್ತಂತೆ ಚಿತ್ರತಂಡ

    ನಟಿ ಭಾವನಾ ಮೇಲೆ 2017ರಲ್ಲಿ ಕೇರಳದಲ್ಲಿ ಹಲ್ಲೆ ನಡೆಯಿತು. ಪ್ರಭಾವಿ ನಟರೊಬ್ಬರು ಇದರ ಹಿಂದೆ ಇದ್ದಾರೆ ಎಂದು ಸ್ಟಾರ್ ನಟ ದಿಲೀಪ್ ಮೇಲೆ  ಆರೋಪ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲೀಪ್ ಅವರ ಬಂಧನ ಕೂಡ ಆಗಿತ್ತು. ಈಗವರು ಜಾಮೀನನ ಮೇಲೆ ಆಚೆ ಬಂದಿದ್ದಾರೆ. ಈ ಪ್ರಕರಣ ಮತ್ತೆ ಇದೀಗ ಮುನ್ನೆಲೆಗೆ ಬಂದಿದೆ. ಇದನ್ನೂ ಓದಿ : ಜೊತೆ ಜೊತೆಯಲಿ ಅನಿರುದ್ಧಅವರ ಮೊದಲ ಪತ್ನಿ ನಟಿ ಸೋನು ಗೌಡ

    ಇತ್ತೀಚೆಗಷ್ಟೇ ತಮ್ಮ ಮೇಲೆ ಆದ ದೌರ್ಜನ್ಯದ ಕುರಿತು ಬಹಿರಂಗವಾಗಿ ಭಾವನಾ ಮಾತನಾಡಿದ್ದರು. ಅದೊಂದು ನಕರದ ಸನ್ನಿವೇಶವೆಂದು ಹೇಳಿಕೊಂಡಿದ್ದರು. ಅಂತಹ ಘಟನೆ ನನ್ನ ಜೀವನದಲ್ಲಿ ನಡೆಯಿತಲ್ಲ ಎಂದು ಮಾನಸಿಕವಾಗಿ ಕುಸಿದು ಹೋಗಿದ್ದೆ ಎಂದೂ ಅವರು ನೋವನ್ನು ಹಂಚಿಕೊಂಡಿದ್ದರು. ಇದನ್ನೂ ಓದಿ : ದೂರದರ್ಶನದಲ್ಲಿ ಸಿಗ್ತಾರೆ ದಿಯಾ ಹೀರೋ

    ಈ ಎಲ್ಲವನ್ನೂ ಮರೆತು ಮತ್ತೆ ಸಹಜ ಜೀವನಕ್ಕೆ ಬರಲು ಹಲವು ವರ್ಷಗಳಿಂದ ಪ್ರಯತ್ನ ಪಡುತ್ತಿದ್ದ ಭಾವನಾ ಇತ್ತೀಚೆಗಷ್ಟೇ ಬಿಡುಗಡೆಯಾದ ಭಜರಂಗಿ 2 ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. ಆ ಸಿನಿಮಾದಲ್ಲಿಯ ಪಾತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡರು. ಇದೀಗ ಮತ್ತೆ ನಟನೆಯಲ್ಲಿ ಭಾವನಾ ಸಕ್ರೀಯರಾಗಿದ್ದಾರೆ.

  • ಸುರೇಶ್ ರೈನಾ ಪ್ರಶ್ನೆಗೆ ಕಾಲಿವುಡ್ ಸ್ಟಾರ್ ಸೂರ್ಯ ಉತ್ತರ

    ಸುರೇಶ್ ರೈನಾ ಪ್ರಶ್ನೆಗೆ ಕಾಲಿವುಡ್ ಸ್ಟಾರ್ ಸೂರ್ಯ ಉತ್ತರ

    ಚೆನ್ನೈ: ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಭಿಮಾನಿಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದೆ. ಈ ಬಾರಿಯ ಟೂರ್ನಿ ಫೈನಲ್ ನಲ್ಲಿ ಚೆನ್ನೈ ಸೋತರೂ ಕೂಡ ಅಭಿಮಾನಿಗಳ ಬೆಂಬಲ ಮಾತ್ರ ಕಡಿಮೆ ಆಗಿಲ್ಲ. ಸದ್ಯ ಚೆನ್ನೈ ತಂಡದ ಆಟಗಾರರ ರೈನಾ ಅವರು ನಟ ಸೂರ್ಯ ಅವರಿಗೆ ಪ್ರಶ್ನೆಯೊಂದನ್ನು ಕೇಳಿದ್ದು, ಈ ಪ್ರಶ್ನೆಗೆ ಕಾಲಿವುಡ್ ಸ್ಟಾರ್ ಉತ್ತರಿಸಿದ್ದಾರೆ.

    ಟ್ವಿಟ್ಟರ್ ನಲ್ಲಿ ಸೂರ್ಯ ಅವರ ಮುಂದಿನ ಸಿನಿಮಾ ‘ಎನ್‍ಜಿಕೆ’ ಪ್ರಚಾರದ ಕುರಿತು ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಈ ವೇಳೆ ರೈನಾ, ಚೆನ್ನೈ ತಂಡ ನಿಮ್ಮ ನೆಚ್ಚಿನ ಆಟಗಾರ ಯಾರು? ಮತ್ತು ಏಕೆ? ಎಂದು ಪ್ರಶ್ನೆ ಮಾಡಿದ್ದರು. ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ನಟ ಸೂರ್ಯ, ಧೋನಿ ಹಾಗೂ ನೀವು ನಮ್ಮ ಆಟಗಾರರು. ಏಕೆಂದರೆ ನಿಮ್ಮ ಹಾಡುಗರಿಕಾ ಕೌಶಲ್ಯ ಹಾಗೂ ಧೋನಿ ಅವರ ಡ್ರಾಯಿಂಗ್ ಸ್ಕಿಲ್ ಕಾರಣ ಎಂದಿದ್ದಾರೆ.

    ಟ್ವಿಟ್ಟರ್ ನಲ್ಲಿ ಅನಿರೀಕ್ಷತವಾಗಿ ರೈನಾ ಅವರ ಟ್ವೀಟ್ ಎದುರಾಗುತ್ತಿದಂತೆ ಸಂತಸ ವ್ಯಕ್ತಪಡಿಸಿದ ಸೂರ್ಯ, ರೈನಾ ಪುತ್ರಿ ಸೇರಿದಂತೆ ಇಡೀ ಕುಟುಂಬಕ್ಕೆ ಶುಭ ಕೋರಿದರು. ಈ ಹಿಂದೆ ಇಬ್ಬರು ಭೇಟಿ ಆಗಿ ಫೋಟೋ ತೆಗೆದುಕೊಂಡಿದ್ದ ಘಟನೆಯನ್ನ ನೆನಪಿಸಿಕೊಂಡು, ‘ನಾನು ಯಾವಾಗಲೂ ಸಿಎಸ್‍ಕೆ ಅಭಿಮಾನಿಯಾಗಿರುತ್ತೇನೆ’ ಎಂದಿದ್ದಾರೆ.