Tag: Actor Sonu Sood

  • ನಾಲ್ಕು ಕೈ- ನಾಲ್ಕು ಕಾಲು ಇರುವ ಮಗುವಿನ ಶಸ್ತ್ರ ಚಿಕಿತ್ಸೆಗೆ ನೆರವಾದ ಸೋನು ಸೂದ್

    ನಾಲ್ಕು ಕೈ- ನಾಲ್ಕು ಕಾಲು ಇರುವ ಮಗುವಿನ ಶಸ್ತ್ರ ಚಿಕಿತ್ಸೆಗೆ ನೆರವಾದ ಸೋನು ಸೂದ್

    ಬಾಲಿವುಡ್ ನಟ ಸೋನು ಸೂದ್ ಬಹುಭಾಷಾ ಕಲಾವಿದನಾಗಿ ಗುರುತಿಸಿಕೊಂಡಿರುವ ನಟ, ಸಿನಿಮಾಗಳಲ್ಲಿ ಮಾತ್ರ ಹೀರೋ ಅಲ್ಲ, ನಿಜ ಜೀವನದಲ್ಲೂ ಹೀರೋ ಎಂಬುದನ್ನ ಮತ್ತೆ ಪ್ರೂವ್ ಮಾಡಿದ್ದಾರೆ. ವಿಶೇಷ ಮಗುವಿಗೆ ಶಸ್ತ್ರ ಚಿಕಿತ್ಸೆಗೆ ನೆರವಾಗಿ, ಅಭಿಮಾನಿಗಳ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದಾರೆ.

    ನಟನಾಗಿ, ಖಳನಾಯಕನಾಗಿ, ಪೋಷಕ ಪಾತ್ರಗಳ ಮೂಲಕ ಬಹುಭಾಷಾ ತಾರೆಯಾಗಿ ಗುರುತಿಸಿಕೊಂಡಿರುವ ಸೋನು ಸೂದ್ ಆನ್‌ಸ್ಕ್ರೀನ್‌ನಲ್ಲಿ ಮಾತ್ರ ಹೀರೋ ಅಲ್ಲಾ, ನಿಜ ಜೀವನದಲ್ಲೂ ಅದೆಷ್ಟೋ ಸಂಕಷ್ಟದಲ್ಲಿರುವವರಿಗೆ ನೆರವಾಗಿ ಅವರ ಬಾಳಿಗೆ ಬೆಳಕಾಗಿ ಸಾಥ್ ನೀಡಿದ್ದಾರೆ. ಕೊವೀಡ್ ವೇಳೆಯಲ್ಲಿ ಸಾಕಷ್ಟು ಜನರ ಕಷ್ಟಕ್ಕೆ ಸೋನು ಮಿಡಿದಿದ್ದಾರೆ. ಈಗ ನಾಲ್ಕು ಕೈ, ನಾಲ್ಕು ಕಾಲು ಇರುವ ಪುಟ್ಟ ಮಗುವಿನ ನೆರವಿಗೆ ಧಾವಿಸಿದ್ದಾರೆ. ಇದನ್ನೂ ಓದಿ: ಹಾಟ್ ಅವತಾರದಲ್ಲಿ ಪಾರುಲ್ ಯಾದವ್

     

    View this post on Instagram

     

    A post shared by Sonu Sood (@sonu_sood)

    ಬಿಹಾರ್‌ನ ಪುಟ್ಟ ಗ್ರಾಮದ ಹುಡುಗಿ ಚಹುಮುಖಿಯ ದೇಹದಲ್ಲಿ ನಾಲ್ಕು ಕೈ ಮತ್ತು ನಾಲ್ಕು ಕಾಲುಗಳೊಂದಿಗೆ ಜನಿಸಿದ್ದಳು.ಮಗುವಿನ ಪೋಷಕರಿಗೆ ಶಸ್ತ್ರ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದ ಸಂದರ್ಭದಲ್ಲಿ, ಮಗುವಿನ ಚಿಕಿತ್ಸೆಯ ಖರ್ಚನ್ನು ಈಗ ಸೋನು ಅವರೇ ನೋಡಿಕೊಂಡಿದ್ದು. ಇದೀಗ ಶಸ್ತ್ರ ಚಿಕಿತ್ಸೆಯ ನಂತರ ಮಗುವಿನ ಆರೋಗ್ಯ ಸುಧಾರಿಸಿದೆ. ಮಗುವಿನ ಸದ್ಯದ ಸ್ಥಿತಿಯ ಕುರಿತು ಸೋನು ಸೂದ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಸೋನು ಸೂದ್ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಾಕಷ್ಟು ತಾರೆಯರು ಸೋನು ಸೂದ್ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

  • ಪಂಜಾಬ್‌ ʻಸ್ಟೇಟ್‌ ಐಕಾನ್‌ʼ ಸ್ಥಾನದಿಂದ ಹೊರಗುಳಿದ ನಟ ಸೋನು ಸೂದ್‌

    ಪಂಜಾಬ್‌ ʻಸ್ಟೇಟ್‌ ಐಕಾನ್‌ʼ ಸ್ಥಾನದಿಂದ ಹೊರಗುಳಿದ ನಟ ಸೋನು ಸೂದ್‌

    ಚಂಡೀಗಢ: ಕೊರೊನಾ ಸಾಂಕ್ರಾಮಿಕದಿಂದಾಗಿ ಸಂಕಷ್ಟಕ್ಕೊಳಗಾಗಿದ್ದ ಜನತೆಗೆ ನೆರವಾಗುವ ಮೂಲಕ ರಿಯಲ್‌ ಹೀರೋ ಎನಿಸಿಕೊಂಡಿದ್ದ ಬಾಲಿವುಡ್‌ ನಟ ಸೋನು ಸೂದ್‌ ಅವರು ಶುಕ್ರವಾರ ಸ್ವಯಂಪ್ರೇರಿತರಾಗಿ ಪಂಜಾಬ್‌ನ ʻಸ್ಟೇಟ್‌ ಐಕಾನ್‌ʼ ಸ್ಥಾನದಿಂದ ಕೆಳಗಿಳಿದಿದ್ದಾರೆ. ಪಂಜಾಬ್‌ ರಾಜ್ಯ ಚುನಾವಣೆಗೂ ಮುನ್ನ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

    ಸ್ಟೇಟ್‌ ಐಕಾನ್‌ ಸ್ಥಾನದಿಂದ ಹೊರಬಂದಿರುವ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಎಲ್ಲಾ ಒಳ್ಳೆಯ ವಿಷಯಗಳಂತೆ ಈ ಪ್ರಯಾಣವೂ ಕೊನೆಗೊಂಡಿದೆ. ನಾನು ಸ್ವಯಂಪ್ರೇರಣೆಯಿಂದ ಪಂಜಾಬ್‌ನ ಸ್ಟೇಟ್‌ ಐಕಾನ್‌ ಸ್ಥಾನದಿಂದ ಕೆಳಗಿಳಿದಿದ್ದೇನೆ. ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ನನ್ನ ಕುಟುಂಬದ ಸದಸ್ಯರು ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದೊಂದಿಗೆ ಚರ್ಚಿಸಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡ್ರ್ಯಾಗನ್ ಫ್ರೂಟ್‍ನಲ್ಲಿ ಕೊರೊನಾ!

    ಬಾಲಿವುಡ್‌ ನಟನ ನೇಮಕಾತಿಯನ್ನು ಹಿಂಪಡೆದಿರುವುದಾಗಿ ಚುನಾವಣಾ ಆಯೋಗ ಟ್ವೀಟ್‌ ಮಾಡಿ ತಿಳಿಸಿದೆ. ಪಂಜಾಬ್‌ನ ಮೋಗಾ ಜಿಲ್ಲೆಯವರಾದ ಸೋನು ಸೂದ್‌ ಅವರನ್ನು ಕಳೆದ ವರ್ಷ ಚುನಾವಣೆ ಸಂಸ್ಥೆ ʻಸ್ಟೇಟ್‌ ಐಕಾನ್‌ʼ ಎಂದು ಆಯ್ಕೆ ಮಾಡಿತ್ತು.

    ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಸೋನು ಸೂದ್‌ ಅವರ ಸಹೋದರಿ ಮಾಳಿವಕಾ ಸೂದ್‌ ಸ್ಪರ್ಧಿಸುತ್ತಿದ್ದಾರೆ. ಆದರೆ ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ ಎಂಬ ವಿಚಾರ ಇನ್ನೂ ಸ್ಪಷ್ಟವಾಗಿಲ್ಲ. ಎಎಪಿ ಅಥವಾ ಕಾಂಗ್ರೆಸ್‌ ಎರಡರಲ್ಲಿ ಒಂದು ಪಕ್ಷದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಅವರೊಂದಿಗೆ ಸೋನು ಸೂದ್‌ ಸಭೆ ನಡೆಸಲಿದ್ದಾರೆಂಬ ಮಾತುಗಳಿವೆ. ಇದನ್ನೂ ಓದಿ: ಆಸ್ಕರ್‌ ವಿಜೇತ ಮೊದಲ ಕಪ್ಪುವರ್ಣೀಯ ಸಿಡ್ನಿ ಪೊಯ್ಟಿಯರ್‌ ನಿಧನ

    ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ʻದೇಶ್‌ ಕಿ ಮೆಂಟರ್‌ʼ ಕಾರ್ಯಕ್ರಮದ ರಾಯಭಾರಿಯಾಗಿ ಸೋನ್‌ ಸೂದ್‌ ಅವರನ್ನು ಆಯ್ಕೆ ಮಾಡಿದ್ದರು.

  • ಆಂಧ್ರಪ್ರದೇಶದಲ್ಲಿ ಪ್ರವಾಹಪೀಡಿತ ಜನರ ನೆರವಿಗೆ ನಿಂತ ಸೋನು ಸೂದ್‌

    ಆಂಧ್ರಪ್ರದೇಶದಲ್ಲಿ ಪ್ರವಾಹಪೀಡಿತ ಜನರ ನೆರವಿಗೆ ನಿಂತ ಸೋನು ಸೂದ್‌

    ಹೈದರಾಬಾದ್‌: ಸಮಾಜ ಕಾರ್ಯಗಳ ಮೂಲಕವೇ ಜನಪ್ರಿಯರಾಗಿರುವ ಬಾಲಿವುಡ್‌ ನಟ ಸೋನು ಸೂದ್‌ ಆಂಧ್ರಪ್ರದೇಶದಲ್ಲಿ ಪ್ರವಾಹದಿಂದ ಸಂಷ್ಟಕ್ಕೆ ಸಿಲುಕಿರುವವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

    “ಸೋನು ಅವರೇ, ನೆಲ್ಲೂರು ಮತ್ತು ತಿರುಪತಿಯು ಅತಿವೃಷ್ಟಿಯಿಂದ ತೀವ್ರವಾಗಿ ಹಾನಿಗೊಳಗಾಗಿದೆ. ಮನೆಗಳಿಗೆ ಮಳೆ ನೀರು ನುಗ್ಗಿ ಸಮಸ್ಯೆ ಉಂಟುಮಾಡಿದೆ. ಎಷ್ಟೋ ಮಂದಿ ಮನೆಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ. ತಿನ್ನುವ ಆಹಾರಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಯವಿಟ್ಟು ಪ್ರವಾಹ ಪೀಡಿತರಿಗೆ ಸಹಾಯ ಮಾಡಿ” ಮನವಿ ಮಾಡಲಾಗಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸೋನು ಸೂದ್‌, ಮರಳಿ ನಮ್ಮ ಮನೆಗಳನ್ನು ನಿರ್ಮಿಸುವ ಸಮಯ ಬಂದಿದೆ ಎನ್ನುವ ಮೂಲಕ ಸಹಾಯದ ಭರವಸೆಯನ್ನು ನೀಡಿದ್ದಾರೆ. ಇದನ್ನೂ ಓದಿ: ವಾಯು ಮಾಲಿನ್ಯ ಹೆಚ್ಚಳದಿಂದ ಶಾಲಾ-ಕಾಲೇಜು ಬಂದ್ ಮಾಡಿದ ದೆಹಲಿ

    ವಾಯುಭಾರ ಕುಸಿತದಿಂದಾಗಿ ಆಂಧ್ರಪ್ರದೇಶದಲ್ಲಿ ಮಳೆಯ ಅಬ್ಬರ ಜೋರಾಗಿದೆ. ತಿರುಮಲ ತಿರುಪತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಉಂಟಾಗಿದೆ. ಆಂಧ್ರಪ್ರದೇಶದಲ್ಲಿ ಭಾರೀ ಮಳೆಗೆ 25ಕ್ಕೂ ಹೆಚ್ಚು ಜನರು ಅಸುನೀಗಿದ್ದಾರೆ. 100ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ ಎಂದು ವರದಿಗಳಾಗಿವೆ. ನೂರಾರು ಮಂದಿ ಮನೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಸೋನು ಸೂದ್​ ಅವರು ಮಳೆಯಲ್ಲಿ ಸಿಲುಕಿದವರ ಸಹಾಯಕ್ಕೆ ಬಂದಿದ್ದಾರೆ. ಇದನ್ನೂ ಓದಿ: ಮತ್ತೆ ಸದ್ದು ಮಾಡಿದ ಕೊರೊನಾ – ಆಸ್ಟ್ರೀಯಾದಲ್ಲಿ ನಾಳೆಯಿಂದ ಲಾಕ್‍ಡೌನ್

    ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದವರಿಗೆ ಸೋನು ಸೂದ್‌ ಅವರು ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದ್ದರು. ಇದೇ ಕಾರಣಕ್ಕೆ ಎಷ್ಟೋ ಮಂದಿ ಸೋನು ಸೂದ್‌ ಅವರ ಫೋಟೋವನ್ನು ಮನೆಯಲ್ಲಿಟ್ಟು ಪೂಜೆ ಮಾಡುತ್ತಿದ್ದಾರೆ.

  • ಕಂದಮ್ಮನ ಚಿಕಿತ್ಸೆಗೆ ಸಹಾಯವಾದ ರಿಯಲ್ ಹಿರೋ ಸೋನು ಸೂದ್

    ಕಂದಮ್ಮನ ಚಿಕಿತ್ಸೆಗೆ ಸಹಾಯವಾದ ರಿಯಲ್ ಹಿರೋ ಸೋನು ಸೂದ್

    ಮುಂಬೈ: ಬಾಲಿವುಡ್ ನಟ ಸೋನು ಸೂದ್ ಮಗುವಿನ ಶಸ್ತ್ರಚಿಕಿತ್ಸೆಯನ್ನು ಮಾಡಿಸುವ ಮೂಲಕ ಮತ್ತೊಮ್ಮೆ ತಮ್ಮ ಉದಾರತೆಯನ್ನು ತೋರಿಸಿದ್ದಾರೆ.

    ಕೃಷ್ಣ ಮತ್ತು ಬಿಂದು ಪ್ರಿಯಾ ದಂಪತಿಗೆ ಗಂಡು ಮಗು ಜನಿಸಿದೆ. ಈ ದಂಪತಿ ತೆಲಂಗಾಣದ ಖಮ್ಮಮ್ ಜಿಲ್ಲೆಯಯವರಾಗಿದ್ದಾರೆ, ಇವರು ನವಜಾತ ಶಿಶುವಿನಲ್ಲಿ ಹೃದಯದ ಸಮಸ್ಯೆ ಕಂಡುಬಂದಿದೆ. ಮಗುವಿನ ತಂದೆ ಖಾಸಗಿ ಉದ್ಯೋಗಿಯಾಗಿದ್ದರಿಂದ, ಅವರಿಗೆ ಅಗತ್ಯವಾದ ಹಣವನ್ನು ವ್ಯವಸ್ಥೆ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸೂನು ಸೂದ್ ಸಹಾಯ ಮಾಡೂವ ಮೂಲಕವಾಗಿ ಮತ್ತೊಮ್ಮೆ ಮೆಚ್ಚುಗೆಗೆ ಪಾತ್ರರಾಗಿದ್ಧಾರೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಓಲೈಕೆಗಾಗಿ RSS ವಿರುದ್ಧ ಕಾಂಗ್ರೆಸ್ ಹೇಳಿಕೆ ನೀಡುತ್ತಿದೆ: ಬೊಮ್ಮಾಯಿ

    ವೈದ್ಯಕೀಯ ಚಿಕಿತ್ಸೆಯ ವೆಚ್ಚವು 6 ಲಕ್ಷಕ್ಕಿಂತ ಹೆಚ್ಚು ಎಂದು ವೈದ್ಯರು ಹೇಳಿದ್ದರು. ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಜನ ವಿಜ್ಞಾನ ವೇದಿಕೆಯ ಪ್ರತಿನಿಧಿಗಳು ಈ ಬಗ್ಗೆ ಸಾಮಾಜಿಕ ಮಾಧ್ಯಮದ ಮೂಲಕ ತಿಳಿದುಕೊಂಡು ಸೋನು ಸೂದ್ ಅವರನ್ನು ಸಂಪರ್ಕಿಸಿದರು. ಕೂಡಲೇ ಪ್ರತಿಕ್ರಿಯಿಸಿದ ಸೋನು ಸೂದ್, ಅವರನ್ನು ಮುಂಬೈಗೆ ಕರೆತಂದು ಅಲ್ಲಿನ ವಾಡಿಯಾ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ಬಳಿಕ ಶಸ್ತ್ರಚಿಕಿತ್ಸೆ ಕೂಡ ಯಶಸ್ವಿಯಾಗಿದೆ. ಮಗುವಿನ ಆರೋಗ್ಯವು ಈಗ ಉತ್ತಮ ಸ್ಥಿತಿಯಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ

    ಸರಿಯಾದ ಸಮಯದಲ್ಲಿ ತಮಗೆ ಸಹಾಯ ಮಾಡಿದ್ದಕ್ಕಾಗಿ ಕೃಷ್ಣ ದಂಪತಿಗಳು ಸೋನು ಸೂದ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಸೂದ್ ಅವರ ಇಂತಹ ಉದಾರವಾದ ಕೆಲಸಗಳಿಂದ ಅವರನ್ನು ಜನ ನಿಜ ಜೀವನದ ಹೀರೋ ಎಂದು ಕರೆಯುತ್ತಿದ್ದರು. ಅದನ್ನು ಅವರು ಮತ್ತೊಮ್ಮೆ ತಾವು ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಹಿಂದೆಯೂ ಕೂಡಾ ಸೋನು ಸೂದ್ ಅವರು ಹಲವರಿಗೆ ಸಹಾಯ ಮಾಡಿದ್ದಾರೆ. ಸೂನು ಸೂದ್ ಅಭಿಮಾನಿಗಳು ಅವರಿಗೆ ದೇವಸ್ಥಾನವನ್ನು ಕಟ್ಟಿದ್ಧಾರೆ.

  • ದಯವಿಟ್ಟು ಅಜ್ಜಿಯ ಅಡ್ರೆಸ್ ಹೇಳಿ- ಸೋನು ಸೂದ್

    ದಯವಿಟ್ಟು ಅಜ್ಜಿಯ ಅಡ್ರೆಸ್ ಹೇಳಿ- ಸೋನು ಸೂದ್

    ಮುಂಬೈ: ಇತ್ತೀಚೆಗೆ ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದ ಬಾಲಿವುಡ್ ನಟ ಸೋನು ಸೂದ್, ಇದೀಗ ಅಜ್ಜಿಯೊಬ್ಬರ ಅಡ್ರೆಸ್ ಕೇಳುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಅಜ್ಜಿಯ ಲಾಠಿ ಕೈಚಳಕದ ವಿಡಿಯೋ ವೈರಲ್ ಆಗಿದ್ದು, ಇದನ್ನು ನಟ ಸೋನು ಸೂದ್ ಸಹ ಹಂಚಿಕೊಂಡಿದ್ದಾರೆ. ಈ ಕುರಿತು ಟ್ವೀಟದದ ಮಾಡಿ, ದಯವಿಟ್ಟು ನಾನು ಅಜ್ಜಿಯ ಬಗ್ಗೆ ಮಾಹಿತಿ ಪಡೆಯಬಹುದೆ, ನಮ್ಮ ದೇಶದ ಮಹಿಳೆಯರಿಗೆ ಕೆಲ ರಕ್ಷಣಾ ತಂತ್ರಗಳನ್ನು ಕಲಿಸಿಕೊಡಲು ಇವರ ಅವಶ್ಯಕತೆ ಇದೆ. ಈ ಕುರಿತು ಸಣ್ಣ ತರಬೇತಿ ಶಾಲೆಯನ್ನು ತೆರೆಯಬೇಕೆಂದುಕೊಂಡಿದ್ದೇನೆ. ಹೀಗಾಗಿ ಇವರ ಬಗ್ಗೆ ಮಾಹಿತಿ ಕಳುಹಿಸಿ ಎಂದು ಕೇಳಿ, ಅಜ್ಜಿಯ ಸಾಹಸದ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಕ್ಕಳ ಆನ್‍ಲೈನ್ ಶಿಕ್ಷಣಕ್ಕಾಗಿ ಮಾರಿದ ಹಸುವನ್ನು ವಾಪಸ್ ಕೊಡಿಸುವೆ: ಸೋನು ಸೂದ್

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಲಕ್ಷಾಂತರ ಜನ ವಿಡಿಯೋ ಹಂಚಿಕೊಂಡಿದ್ದಾರೆ. ಅಲ್ಲದೆ ಹಲವರು ಈ ಕುರಿತು ಪೋಸ್ಟ್ ಮಾಡಿ ಅವರ ಅಡ್ರೆಸ್ ತಿಳಿಸಿದ್ದಾರೆ. ಈ ಅಜ್ಜಿ 85 ವರ್ಷದವರು, ಇವರ ಹೆಸರು ಶಾಂತಾ ಬಾಲು ಪವಾರ್. ಪುಣೆಯ ಹಡ್ಪಸರ್ ನವರು ಇಂತಹ ಸಂದರ್ಭದಲ್ಲಿಯೂ ಅವರೂ ತುಂಬಾ ಸ್ಟ್ರಾಂಗ್ ಆಗಿದ್ದಾರೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

    ಸೋನು ಸೂದ್ ಕೊರೊನಾ ಮಹಾಮಾರಿ ಹಿಂಡಿ ಹಿಪ್ಪೆ ಮಾಡುತ್ತಿರುವ ಹೊತ್ತಲ್ಲಿ ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ, ಪೊಲೀಸರಿಗೆ ಫೇಸ್ ಶೀಲ್ಡ್ ಸೇರಿದಂತೆ ನಿರ್ಗತಿಕರಿಗೆ ಆಹಾರ ಹಾಗೂ ದಿನಸಿ ಕಿಟ್ ನೀಡಿ ಮಾನವೀಯತೆ ಮೆರೆದಿದ್ದಾರೆ. ಈ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಹೀಗೆ ಸದಾ ಒಂದಿಲ್ಲೊಂದು ಸಹಾಯದಲ್ಲಿ ತೊಡಗಿರುವ ಸೋನು ಸೂದ್ ಇದೀಗ ಅಜ್ಜಿಯ ವಿಡಿಯೋ ನೋಡಿ ಫಿದಾ ಆಗಿದ್ದಾರೆ. ಅಜ್ಜಿ ಅಡ್ರೆಸ್ ಸಹ ಕೇಳಿದ್ದಾರೆ.

  • ಪಿ.ವಿ.ಸಿಂಧು ಬಯೋಪಿಕ್‍ನಲ್ಲಿ ಮಿಂಚಲಿದ್ದಾರೆ ದೀಪಿಕಾ

    ಪಿ.ವಿ.ಸಿಂಧು ಬಯೋಪಿಕ್‍ನಲ್ಲಿ ಮಿಂಚಲಿದ್ದಾರೆ ದೀಪಿಕಾ

    ಬೆಂಗಳೂರು: ಭಾರತದ ಬ್ಯಾಡ್ಮಿಂಟನ್ ತಾರೆ, ಚಿನ್ನದ ಹುಡುಗಿ ಪಿ.ವಿ.ಸಿಂಧು ಬಯೋಪಿಕ್‍ನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡಕೋಣೆ ನಟಿಸಲಿದ್ದಾರೆ.

    ಈ ಕುರಿತು ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ಪಿ.ವಿ.ಸಿಂಧು ಅವರು, ಬಾಲಿವುಡ್ ನಟ ಸೋನು ಸೂದ್ ಇತ್ತೀಚೆಗೆ ಚಿತ್ರದ ಹಕ್ಕನ್ನು ಪಡೆದುಕೊಂಡಿದ್ದಾರೆ. ಅವರಿಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ನೀಡಿದ್ದೇನೆ. ಅಷ್ಟೇ ಅಲ್ಲದೆ ಬಯೋಪಿಕ್ ಅನ್ನು ಚೆನ್ನಾಗಿ ತೆರೆಯ ಮೇಲೆ ತರಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

    ನನ್ನ ಪಾತ್ರವನ್ನು ದೀಪಿಕಾ ಪಡುಕೋಣೆ ನಿರ್ವಹಿಸಿದರೆ ಉತ್ತಮವಾಗಿರುತ್ತದೆ. ಅವರು ಉತ್ತಮ ನಟಿ. ಈಗಾಗಲೇ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಎಲ್ಲರಂತೆ ನಾನೂ ಸಹ ಸಿನಿಮಾ ನೋಡಲು ಎದುರು ನೋಡುತ್ತಿದ್ದೇನೆ ಎಂದು ಸಿಂಧು ಹೇಳಿದ್ದಾರೆ.

    ನನ್ನ ಬಗ್ಗೆ ಸಿನಿಮಾ ನಿರ್ಮಾಣವಾಗುತ್ತಿರವುದು ಖುಷಿ ತಂದಿದೆ. ಆದರೆ ನನ್ನ ಮೊದಲ ಆದ್ಯತೆ ಬ್ಯಾಡ್ಮಿಂಟನ್. ಹೀಗಾಗಿ ಅಭ್ಯಾಸ ಕೂಡ ನಡೆಸುತ್ತಿದ್ದೇನೆ. ನಟಿ ದೀಪಿಕಾ ಪಡುಕೋಣೆ ಸ್ವತಃ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರ್ತಿ ಎನ್ನುವುದು ನನಗೆ ತಿಳಿದಿದೆ. ಅವರ ತಂದೆ, ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರು ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಅವರು ಬ್ಯಾಡ್ಮಿಂಟನ್ ಆಟಗಾರರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಪುತ್ರಿ, ನಟಿ ದೀಪಿಕಾ ಪಡುಕೋಣೆ ಈ ಪಾತ್ರಕ್ಕೆ ಸೂಕ್ತ ಎನ್ನುವುದು ನನ್ನ ಅಭಿಪ್ರಾಯ. ಆದರೆ ಅಂತಿಮ ನಿರ್ಧಾರ ಸಿನಿಮಾ ನಿರ್ಮಾಣ ಮಾಡುವವರದ್ದು ಎಂದು ತಿಳಿಸಿದ್ದಾರೆ.

    ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಆಟಗಾರ್ತಿ ಪಿ.ವಿ.ಸಿಂಧು, ಇತಿಹಾಸ ಸೃಷ್ಟಿಸಿದ್ದಾರೆ. 2016ರ ಒಲಿಂಪಿಕ್ಸ್‍ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸಿಂಧು, ಸದ್ಯ ಮುಂದಿನ ವರ್ಷದ ಒಲಿಂಪಿಕ್ಸ್‍ನಲ್ಲಿ ಚಿನ್ನಕ್ಕೆ ಗುರಿಯಿಟ್ಟಿದ್ದು, ಆ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

    ಈ ಹಿಂದೆ ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕ ಗೆದ್ದಾಗಲೇ ಅವರ ಜೀವನಾಧಾರಿತ ಸಿನಿಮಾ ನಿರ್ಮಾಣದ ಸುದ್ದಿ ಹರಿದಾಡುತ್ತಿತ್ತು. ಆದರೆ ಅದರ ಬಗ್ಗೆ ಯಾವುದೇ ಸ್ಪಷ್ಟವಾದ ಸುದ್ದಿ ಎಲ್ಲೂ ಹೊರ ಬರಲೇ ಇಲ್ಲ. ಈಗ ಸಿನಿಮಾ ನಿರ್ಮಾಣವು ಸ್ಪಷ್ಟವಾಗಿದೆ.

    ಸಿಂಧು ಅವರ ತರಬೇತುದಾರ ಪುಲ್ಲೇಲ ಗೋಪಿಚಂದ್ ಪಾತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸುವ ಸಾಧ್ಯತೆಯಿದೆ. ಸಿನಿಮಾ ಆರಂಭಿಕ ಹಂತದಲ್ಲಿದ್ದು, ಪಾತ್ರದ ಆಯ್ಕೆ ನಡೆಯುತ್ತಿದೆ.

    ತಮ್ಮ ಪಾತ್ರದಲ್ಲಿ ಅಕ್ಷಯ್ ಕುಮಾರ್ ಅವರು ಅಭಿನಯಿಸುವ ಕುರಿತು ಪಿ.ವಿ.ಸಿಂಧು ಅವರ ತರಬೇತುದಾರ ಪುಲ್ಲೇಲ್ಲಾ ಗೋಪಿಚಂದ್ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಅಕ್ಷಯ್ ಎಂದರೆ ನನಗೆ ಇಷ್ಟ. ಅವರು ನನ್ನ ಪಾತ್ರದಲ್ಲಿ ಅಭಿನಯಿಸಿದರೆ ತುಂಬಾ ಚೆನ್ನಾಗಿರುತ್ತದೆ ಎಂದು ತಿಳಿಸಿದ್ದಾರೆ.