Tag: actor Shivrajkumar

  • ಕಿರುತೆರೆಗೆ ಮರಳಿದ ಹ್ಯಾಟ್ರಿಕ್ ಹೀರೋ; ಡ್ಯಾನ್ಸ್ ಶೋಗೆ ತೀರ್ಪುಗಾರರಾಗಿ ಶಿವಣ್ಣ

    ಕಿರುತೆರೆಗೆ ಮರಳಿದ ಹ್ಯಾಟ್ರಿಕ್ ಹೀರೋ; ಡ್ಯಾನ್ಸ್ ಶೋಗೆ ತೀರ್ಪುಗಾರರಾಗಿ ಶಿವಣ್ಣ

    ನ್ನಡ ಟಿವಿ ಲೋಕದಲ್ಲಿ ನಾನಾ ಕಾರ್ಯಕ್ರಮಗಳ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಲೇ ಬಂದಿದೆ. ರಿಯಾಲಿಟಿ ಶೋ, ಸಿನಿಮಾ, ಧಾರಾವಾಹಿ ಹೀಗೆ ಹತ್ತು ಹಲವು ವಿಶೇಷತೆಗಳಿಂದ ಸಿನಿಪ್ರಿಯರನ್ನ ರಂಜಿತ್ತಾ ಬಂದಿದೆ. ಬಿಗ್‌ ಸ್ಕ್ರೀನ್‌ನಲ್ಲಿ ಆಕ್ಟೀವ್‌ ಆಗಿದ್ದ ಚಿತ್ರರಂಗದ ಸ್ಟಾರ್ ಕಲಾವಿದರೆಲ್ಲ ಕಿರುತೆರೆಯತ್ತ ಮುಖ ಮಾಡ್ತಿದ್ದಾರೆ. ಇದೀಗ ಅದೇ ಸಾಲಿಗೆ ಈಗ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಮೋಡಿ ಮಾಡಲು ಬರುತ್ತಿದ್ದಾರೆ.

    ಈಗಾಗಲೇ ರಚಿತಾರಾಮ್, ರವಿಚಂದ್ರನ್, ಮೇಘನಾ ರಾಜ್, ಅನುಪ್ರಭಾಕರ್ ಸೇರಿದಂತೆ ಹಲವರು ಕಿರುತೆರೆಯತ್ತ ಮುಖ ಮಾಡಿದ್ದಾರೆ. ಅದೇ ರೀತಿ ಬಿಗ್ ಸ್ಕ್ರೀನ್‌ ಸ್ಟಾರ್ ಶಿವರಾಜ್‌ಕುಮಾರ್ ಕೂಡ ಖಾಸಗಿ ವಾಹಿನಿಯ ಶೋಗೆ ಜಡ್ಜ್ ಆಗಿ ಕಾಣಿಸಿಕೊಳ್ತಿದ್ದಾರೆ.

    ಕಿರುತೆರೆಯ ಬಿಗ್ ಶೋ `ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋ ಮೂಲಕ ತೀರ್ಪುಗಾರರಾಗಿ ಕಿರುತೆರೆಗೆ ನಟ ಶಿವರಾಜ್‌ಕುಮಾರ್ ಮರಳಿದ್ದಾರೆ. 125 ಸಿನಿಮಾಗಳ ಮೂಲಕ ರಂಜಿಸಿರೋ ನಟ ಶಿವರಾಜ್‌ಕುಮಾರ್ `ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಸೀಸನ್-6ಗೆ ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಶೋನ ಪ್ರೋಮೋ ರಿಲೀಸ್ ಆಗಿದ್ದು, ಶಿವಣ್ಣ ನ್ಯೂ ಲುಕ್ ನೋಡಿ ಫ್ಯಾನ್ಸ್ ಖುಷಿಪಡ್ತಿದ್ದಾರೆ. ಇದನ್ನು ಓದಿ:ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಗೌರವ ಡಾಕ್ಟರೇಟ್

    ಅಪ್ಪು ಅಗಲಿಕೆಯ ನೋವಿನ ನಂತರ ಸಾಲು ಸಾಲು ಸಿನಿಮಾಗಳಿಗೆ ಶಿವಣ್ಣ ಸಹಿ ಹಾಕಿದ್ದಾರೆ. ಕಿರುತೆರೆ ಹಿರಿತೆರೆ ಎರಡರಲ್ಲೂ ನಟ ಶಿವರಾಜ್‌ಕುಮಾರ್ ಬ್ಯುಸಿಯಾಗಿದ್ದಾರೆ. ಸಿನಿಮಾಗಳಿಂದ ಮೋಡಿ ಮಾಡ್ತಿದ್ದ‌ ನಟ ಶಿವಣ್ಣ ಮತ್ತೆ ಹೊಸ ಶೋ ಮೂಲಕ ಕಿರುತೆರೆಗೆ ಮರಳಿದ್ದಾರೆ.

  • ಹಸಿದ ಹೊಟ್ಟೆಗೆ ಆಸರೆಯಾದ ಶಿವಣ್ಣ ದಂಪತಿ

    ಹಸಿದ ಹೊಟ್ಟೆಗೆ ಆಸರೆಯಾದ ಶಿವಣ್ಣ ದಂಪತಿ

    ಬೆಂಗಳೂರು: ಲಾಕ್‍ಡೌನ್‍ನಿಂದಾಗಿ ದಿನಗೂಲಿ ಕಾರ್ಮಿಕರಿಗೆ, ಬಡವರಿಗೆ ಸಾಕಷ್ಟು ಸಮಸ್ಯೆ ಆಗಿದೆ. ಇದನ್ನು ಮನಗಂಡು ನಟ ಶಿವರಾಜ್‍ಕುಮಾರ್, ಅಂತಹವರಿಗೆ ಊಟ ನೀಡುವ ಕೆಲಸಕ್ಕೆ ಮುಂದಾಗಿದ್ದಾರೆ.

    ಶಿವರಾಜ್‍ಕುಮಾರ್ ಅವರು ಆಸರೆ ಎಂಬ ಹೆಸರಿನಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಿದ್ದಾರೆ. ಶಿವರಾಜ್‍ಕುಮಾರ್ ಅವರಿಗೆ ಪತ್ನಿ ಗೀತಾ ಶಿವರಾಜ್‍ಕುಮಾರ್ ಸಾಥ್ ನೀಡಿದ್ದಾರೆ. ನಾಗವಾರದಲ್ಲಿರುವ ತಮ್ಮ ನಿವಾಸದ ಸುತ್ತಮುತ್ತಲಿನ ಏರಿಯಾದಲ್ಲಿರುವ ನೂರಾರು ಜನರಿಗೆ ನಿತ್ಯವು ಆಹಾರ ಒದಗಿಸುವ ಕೆಲಸವನ್ನು ಶಿವರಾಜ್‍ಕುಮಾರ್-ಗೀತಾ ದಂಪತಿ ಮಾಡುತ್ತಿದ್ದಾರೆ.

    ಶಿವಣ್ಣ ಬಾಯ್ಸ್ ಹೆಸರಿನ ತಂಡವೊಂದು ಊಟವನ್ನು ಅಗತ್ಯವಿರುವವರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಮಾನ್ಯತಾ ಟೆಕ್‍ಪಾರ್ಕ್ ಬಳಿ ನಾಗವಾರದ ಏರಿಯಾದ ಸುತ್ತಮುತ್ತಲಿನ ಸುಮಾರು 500 ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಪ್ರತಿನಿತ್ಯ ಸುಮಾರು 500 ಜನರಿಗೆ ಊಟ, ತಿಂಡಿ ಹಾಗೂ ಟೀ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕೆಲಸಕ್ಕಾಗಿಯೇ ಬೊಲೇರೋ ವಾಹನವನ್ನು ಶಿವಣ್ಣ ವ್ಯವಸ್ಥೆ ಮಾಡಿದ್ದು, ಆ ವಾಹನದ ಮೂಲಕವೇ ಅಗತ್ಯವಿರುವ ಜನರ ಬಳಿ ಹೋಗಿ ಊಟ ತಿಂಡಿ ಸರಬರಾಜು ಮಾಡಲಾಗುತ್ತಿದೆ. ಆಸರೆ ಹಸಿದ ಹೊಟ್ಟೆಗೆ ಕೈ ತುತ್ತು ಅನ್ನೋ ಶೀರ್ಷಿಕೆಯಡಿಯಲ್ಲಿ ನಡೆಯುತ್ತಿರೋ ಈ ಕಾರ್ಯಕ್ರಮವು 10ದಿನದವರೆಗೂ ಮುಂದುವರೆಯಲಿದೆ.

    ಸುಮಾರು 1000 ಜನಕ್ಕೆ ಪ್ರತಿದಿನವೂ ಅನ್ನ ದಾಸೋಹ ಮಾಡುವುದಕ್ಕೆ ಶಿವಣ್ಣ, ಗೀತಾ ಶಿವರಾಜ್‍ಕುಮಾರ್ ಹಾಗೂ ಶಿವಣ್ಣ ಬಾಯ್ಸ್ ತಂಡದ ಸದಸ್ಯರು ಯೋಜನೆ ರೂಪಿಸಿಕೊಂಡಿದ್ದಾರೆ. ನಟ ಶಿವರಾಜ್‍ಕುಮಾರ್ ಅವರು ಸದ್ಯ ಸದ್ದಿಲ್ಲದೇ ಮಾಡುತ್ತಿರುವ ಈ ಜನಸೇವೆಗೆ ಅನೇಕರಿಗೆ ಮೆಚ್ಚುಗೆ ವ್ಯಕ್ತವಾಗಿದೆ.

  • ಕಲರ್ ಫುಲ್ ನಾಗರಹಾವಿಗೆ ಮನಸೋತ ಅಭಿಮಾನಿಗಳು- ಸಿನಿಮಾ ವೀಕ್ಷಿಸಿದ್ರು ಹ್ಯಾಟ್ರಿಕ್ ಹೀರೋ ಶಿವಣ್ಣ

    ಕಲರ್ ಫುಲ್ ನಾಗರಹಾವಿಗೆ ಮನಸೋತ ಅಭಿಮಾನಿಗಳು- ಸಿನಿಮಾ ವೀಕ್ಷಿಸಿದ್ರು ಹ್ಯಾಟ್ರಿಕ್ ಹೀರೋ ಶಿವಣ್ಣ

    ಬೆಂಗಳೂರು: ದಶಕಗಳ ಬಳಿಕ ರೀ ಎಂಟ್ರಿ ಕೊಟ್ಟ ನಾಗರಹಾವು ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ಲಭ್ಯವಾಗಿದ್ದು, ವಿಶೇಷವಾಗಿ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಇಂದು ನಗರದ ನರ್ತಕಿ ಚಿತ್ರಮಂದಿರಕ್ಕೆ ಆಗಮಿಸಿ ಸಿನಿಮಾ ವೀಕ್ಷಿಸಿದರು.

    ವಾರಾಂತ್ಯದ ಅವಧಿಯ ಭಾನುವಾರದ ದಿನವಾದ್ದರಿಂದ ಚಿತ್ರಮಂದಿರದ ಮುಂದೇ ಭಾರೀ ಜನಸಾಗರವೇ ತುಂಬಿ ತುಳುಕಿತ್ತು. ಹೊಸ ತಂತ್ರಜ್ಞಾನದೊಂದಿಗೆ ಬಂದಿರುವ ನಾಗರಹಾವು ಸಿನಿಮಾ ಉತ್ತಮವಾಗಿ ಪ್ರದರ್ಶನಗೊಳ್ಳುತ್ತಿದೆ. ಕೇವಲ ಬೆಂಗಳೂರು ನಗರ ಮಾತ್ರವಲ್ಲದೇ ರಾಜ್ಯದ ಹಲವು ಸಿನಿಮಾ ಕೇಂದ್ರಗಳಲ್ಲೂ ಬಿಡುಗಡೆಯಾಗಿರುವ ನಾಗರಹಾವು ಸಿನಿಮಾ ಭರ್ಜರಿ ಪ್ರದರ್ಶನಗೊಳ್ಳುತ್ತಿದೆ. ಇದರೊಂದಿಗೆ ಈ ಹಿಂದೆ ಸಿನಿಮಾ ನೋಡಿದ್ದ ಅಭಿಮಾನಿಗಳು ಸಹ ಹೊಸ ತಂತ್ರಜ್ಞಾನದಲ್ಲಿ ವಿಷ್ಣುವರ್ಧನ್ ಅವರನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

    ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಲೇ ಸ್ಟಾರ್ ಆಗಿಯೂ ರೂಪಿಸಿದ ಚಿತ್ರ ನಾಗರಹಾವು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಸಹೋದರ ಬಾಲಾಜಿ ಅವರು ಹೊಸ ತಂತ್ರಜ್ಞಾನದೊಂದಿಗೆ ತೆರೆಗೆ ತಂದಿದ್ದಾರೆ.

    70ರ ದಶಕದಲ್ಲಿ ನಾಗರಹಾವು ಚಿತ್ರ ತೆರೆಕಂಡಿದ್ದ ಬಳಿಕ ಮತ್ತೊಮ್ಮೆ ಚಿತ್ರ ಹೊಸ ರೂಪದಲ್ಲಿ ಮರು ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆಯ ಮೊದಲ ದಿನವೇ ರಾಜ್ಯದ ಬಾಗಲಕೋಟೆ, ಹುಬ್ಬಳ್ಳಿ, ತುಮಕೂರು, ರಾಯಚೂರು, ದಾವಣಗೆರೆಯಲ್ಲಿ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ದರು. ಅಲ್ಲದೇ ರಾಮಚಾರಿ ಭಾವಚಿತ್ರವಿರುವ ಕೇಕ್ ಕಟ್ ಮಾಡಿ, ಸಿಹಿ ಹಂಚಿ ಅಭಿಮಾನಿಗಳು ಸಂಭ್ರಮಿಸಿದ್ದರು.