Tag: actor Shivraj Kumar

  • ನಟ ಶಿವರಾಜ್ ಕುಮಾರ್ ಮನೆ ಬಳಿ ಕಳ್ಳತನ- ಖರ್ತನಾಕ್ ಕೊಲಂಬಿಯಾ ಗ್ಯಾಂಗ್ ಅರೆಸ್ಟ್

    ನಟ ಶಿವರಾಜ್ ಕುಮಾರ್ ಮನೆ ಬಳಿ ಕಳ್ಳತನ- ಖರ್ತನಾಕ್ ಕೊಲಂಬಿಯಾ ಗ್ಯಾಂಗ್ ಅರೆಸ್ಟ್

    – ಆರು ಕೆಜಿ ಚಿನ್ನ ಕಳ್ಳತನ ಮಾಡಿರೋ ಗ್ಯಾಂಗ್
    – ಕೃತ್ಯ ಎಸಗಲು ಗ್ಯಾಸ್‌ ಕಟ್ಟರ್‌, ವಾಕಿಟಾಕಿ ಬಳಕೆ

    ಬೆಂಗಳೂರು: ನಟ ಶಿವರಾಜ್ ಕುಮಾರ್ ಪಕ್ಕದ ಮನೆಯಲ್ಲಿ ಕಳ್ಳತನ ಮಾಡಿದ್ದ ಕೊಲಂಬಿಯಾ ದೇಶದ ಖರ್ತನಾಕ್ ಕಳ್ಳರ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ.

    ವಿಲಿಯನ್ ಪಡಿಲ್ಲಾ, ಸ್ಟೆಫಾನಿಯಾ, ಕ್ರಿಶ್ಚಿಯನ್ ಇನಿಸ್ ಬಂಧಿತ ಆರೋಪಿಗಳಿದ್ದು, ಕೊಲಂಬಿಯಾ ಮೂಲದವರಾಗಿದ್ದಾರೆ. ಪಿಪಿಇ ಕಿಟ್ ಧರಿಸಿ ಆರೋಪಿಗಳು ಕಳ್ಳತನ ಮಾಡುತ್ತಿದ್ದರು. ಪೊಲೀಸರ ಬೀಟ್ ವ್ಯವಸ್ಥೆ ವೇಳೆ ಕಳ್ಳತನ ಮಾಹಿತಿ ಪತ್ತೆಯಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಖರ್ತನಾಕ್ ಗ್ಯಾಂಗ್‍ಅನ್ನು ಬಂಧಿಸಿದ್ದಾರೆ. ಕಳೆದ 6 ತಿಂಗಳಿನಿಂದ ಈ ಗ್ಯಾಂಗ್ ಬೆಂಗಳೂರಿನಲ್ಲಿ ಸಕ್ರಿಯವಾಗಿತ್ತು ಎಂಬ ಮಾಹಿತಿ ವಿಚಾರಣೆ ವೇಳೆ ತಿಳಿದು ಬಂದಿದೆ.

    ನಗರದ ಹಲವು ಭಾಗಗಳಲ್ಲಿ ಕಳ್ಳತನ ಮಾಡಿದ್ದ ಈ ಗ್ಯಾಂಗ್ ಸದಸ್ಯರು ಸೈಕಲ್‍ನಲ್ಲಿ ಓಡಾಟ ನಡೆಸಿ ಕಳ್ಳತನ ಮಾಡಬೇಕಿದ್ದ ಮನೆಗಳನ್ನು ಗುರುತು ಮಾಡಿಕೊಳ್ಳುತ್ತಿದ್ದರು. ಸುಮಾರು 15 ಅಡಿ ಎತ್ತರದ ಗೋಡೆಗಳನ್ನು ಸುಲಭವಾಗಿ ಜಿಗಿಯುವ ತರಬೇತಿ ಪಡೆದಿದ್ದ ಆರೋಪಿಗಳು, ಅತ್ಯಾಧುನಿಕ ಸಲಕರಣೆಗಳನ್ನ ಬಳಸಿ ಕೃತ್ಯ ಎಸಗುತ್ತಿದ್ದರು.

    ಗ್ಯಾಂಗ್‍ನಲ್ಲಿದ್ದ ಯುವತಿ ಸ್ಟೆಫಾನಿಯಾ ಮೊದಲು ಕಳ್ಳತನ ಮಾಡಬೇಕಿದ್ದ ಮನೆಗೆ ಹೋಗಿ ಕಾಲಿಂಗ್ ಬೆಲ್ ಒತ್ತುತ್ತಿದ್ದಳು. ಈ ವೇಳೆ ಮನೆಯಿಂದ ಹೊಸ ಬಂದ ವ್ಯಕ್ತಿಗಳಿಗೆ ಸ್ಪ್ರೇ ಮಾಡಿ ಮೂರ್ಚೆ ಹೋಗುವಂತೆ ಮಾಡುತ್ತಿದ್ದಳು. ಬಳಿಕ ವಾಕಿಟಾಕಿಯಲ್ಲಿ ಸ್ನೇಹಿತರನ್ನು ಕರೆಸಿಕೊಂಡು ಕಳ್ಳತನ ಮಾಡುತ್ತಿದ್ದರು. ಅಲ್ಲದೇ ಮನೆಯವರು ಬೇರೆಯಾವರಿಗೆ ಮಾಹಿತಿ ನೀಡಬಾರದು ಎಂಬ ಕಾರಣಕ್ಕೆ ಮೊಬೈಲ್ ನೆಟ್‍ವರ್ಕ್ ಜಾಮರ್ ಬಳಕೆ ಮಾಡುತ್ತಿದ್ದರು.

    ಪೊಲೀಸರ ಬೀಟ್ ವ್ಯವಸ್ಥೆ ವೇಳೆ ಕಳ್ಳತನ ಮಾಹಿತಿ ಪತ್ತೆಯಾಗಿತ್ತು. ಬಳಿಕ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಆನ್ ಲೈನ್ ಫುಡ್ ಡೆಲವರಿ ಮಾಡಿ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು. ಇದೇ ಗ್ಯಾಂಗ್ ಈ ಹಿಂದೆ ಜಯನಗರದಲ್ಲಿ ಕಳ್ಳತನ ಮಾಡಿ ಸಿಕ್ಕಿತ್ತು ಎಂಬ ಮಾಹಿತಿ ಲಭಿಸಿದೆ. ಇದುವರೆಗೂ ಈ ಗ್ಯಾಂಗ್ ಸುಮಾರು ಆರು ಕೆಜಿ ಚಿನ್ನ ಕಳ್ಳತನ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

  • ತಮಿಳುನಾಡಿನಲ್ಲೂ ಹೌಸ್‍ಫುಲ್ ದಾಖಲೆ ಬರೆದ ಕನ್ನಡ ಸಿನಿಮಾಗೆ ವರ್ಷದ ಸಂಭ್ರಮ

    ತಮಿಳುನಾಡಿನಲ್ಲೂ ಹೌಸ್‍ಫುಲ್ ದಾಖಲೆ ಬರೆದ ಕನ್ನಡ ಸಿನಿಮಾಗೆ ವರ್ಷದ ಸಂಭ್ರಮ

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾ ತೆರೆಕಂಡು ಇವತ್ತಿಗೆ ಒಂದು ವರ್ಷವಾಗಿದೆ.

    ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ ನೆರೆಯ ರಾಜ್ಯ ತಮಿಳುನಾಡಿನಲ್ಲಿಯೂ ಟಗರು ಸಿನಿಮಾ ಭಾರೀ ಸದ್ದು ಮಾಡಿತ್ತು. ಈ ಮೂಲಕ ತಮಿಳುನಾಡಿನಲ್ಲಿ ಹೌಸ್‍ಫುಲ್ ಆಗಿದ್ದ ಕನ್ನಡ ಮೊದಲ ಸಿನಿಮಾ ಹೆಮ್ಮೆಯನ್ನು ಗಿಟ್ಟಿಸಿಕೊಂಡಿತ್ತು.

    ತಮಿಳುನಾಡಿನ ಯುವಕರು ಟಗರು ಸಿನಿಮಾಗೆ ಫುಲ್ ಫಿದಾ ಆಗಿದ್ದರು. ತಮ್ಮ ಬೈಕ್‍ಗಳ, ಟೀ ಶರ್ಟ್ ಹಿಂದೆ ಟಗರು ಹಾಗೂ ಶಿವರಾಜ್ ಕುಮಾರ್ ಚಿತ್ರ ಹಾಕಿಸಿಕೊಂಡಿದ್ದರು. ಕೆಲ ಅಭಿಮಾನಿಗಳು ಬ್ಯಾನರ್, ಫ್ಲೆಕ್ಸ್ ಗಳನ್ನು ಹಾಕಿಸಿ ಶಿವರಾಜ್ ಕುಮಾರ್ ಅಭಿನಯಕ್ಕೆ ಗೌರವ ಸಲ್ಲಿಸಿದ್ದರು.

     

    ಅಭಿಮಾನಿಯೊಬ್ಬ ಹೊಸೂರಿನ ರಾಘವೇಂದ್ರ ಚಿತ್ರಮಂದಿರ ಹೌಸ್‍ಫುಲ್ ಆಗಿರುವ ದೃಶ್ಯಗಳನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಬೈಕ್, ಟಿ ಶರ್ಟ್ ಮೇಲೆ ಸಿನಿಮಾ ಫೋಟೋಗಳನ್ನು ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ. ಜೊತೆಗೆ ಶಿವರಾಜ್ ಕುಮಾರ್ ಮಚ್ಚು ಹಿಡಿದಂತೆ ತಾವು ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.

    ರೌಡಿಗಳನ್ನು ಮಟ್ಟಹಾಕುವ ಕಥೆ ಆಧಾರಿತ ಟಗರು ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರತಿಕ್ಷಣಕ್ಕೂ ಪ್ರೇಕ್ಷಕರಲ್ಲಿ ಕುತುಹಲ ಹೆಚ್ಚಿಸುವ ಟಗರು ಸಿನಿಮಾ ಅಭಿಮಾನಿಗಳ ಮನಗೆದ್ದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಿವರಾಜ್ ಕುಮಾರ್ ದಂಪತಿಯಿಂದ ಸಿಎಂ ಎಚ್‍ಡಿಕೆ ಭೇಟಿ

    ಶಿವರಾಜ್ ಕುಮಾರ್ ದಂಪತಿಯಿಂದ ಸಿಎಂ ಎಚ್‍ಡಿಕೆ ಭೇಟಿ

    ಬೆಂಗಳೂರು: ನಟ ಶಿವರಾಜ್ ಕುಮಾರ್ ಪತ್ನಿ ಸಮೇತ ಇಂದು ಕುಮಾರಸ್ವಾಮಿ ಅವರನ್ನು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ್ದಾರೆ.

    ಸಿಎಂ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಅವರ ಸಮಾಧಿ ಸ್ಮಾರಕ ಸ್ಥಳ ಅಭಿವೃದ್ಧಿ ಕುರಿತಂತೆ ಸಿಎಂ ಜೊತೆ ಮಾತನಾಡಿದ್ದೇವೆ. ಶಕ್ತಿಧಾಮ ಕುರಿತು ಕೆಲವು ಮಾಹಿತಿಯನ್ನು ನೀಡಿದ್ದೇವೆ. ಈ ಕುರಿತು ಪರಿಶೀಲನೆ ನಡೆಸಿದ ಬಳಿಕ ಚರ್ಚೆ ನಡೆಸುವುದಾಗಿ ಸಿಎಂ ತಿಳಿಸಿದರು. ಆದರೆ ಈ ವೇಳೆ ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆಸಿಲ್ಲ ಎಂದರು.

    ಇದೇ ವೇಳೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಿಂದ ಪತ್ನಿ ಗೀತಾ ಶಿವರಾಜ್ ಕುಮಾರ್ ಕಣಕ್ಕಿಳಿಸುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಆದರೆ ಅವರು ಸ್ಪರ್ಧಿಸಬೇಕು ಗೆಲ್ಲಬೇಕೆಂದು ದೇವರ ಇಚ್ಛೆ ಇದ್ದರೆ ಯಾರೂ ತಪ್ಪಿಸಲಾಗದು ಎಂದು ಹೇಳಿದರು.

    ಬಳಿಕ ಮಾತನಾಡಿದ ಗೀತಾ ಶಿವರಾಜ್ ಕುಮಾರ್, ಚುನಾವಣೆಯ ಕುರಿತು ಇದುವರೆಗೂ ಯಾವುದೇ ಯೋಚನೆ ಮಾಡಿಲ್ಲ. ಚುನಾವಣೆಗೆ ಇನ್ನು ಸಾಕಷ್ಟು ಸಮಯ ಇದೆ. ಈ ಕುರಿತು ನನ್ನ ಸಹೋದರನ ಜೊತೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

    ಇದೇ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಮಧು ಬಂಗಾರಪ್ಪ ಅವರಿಗೆ ನೀಡುವ ಕುರಿತು ಪ್ರಶ್ನೆಗೆ ಉತ್ತರಿಸಿ, ಸಿಎಂ ಕುಮಾರಸ್ವಾಮಿ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಕುರಿತು ಇದುವರೆಗೂ ಯಾವುದೇ ಚರ್ಚೆ ನಡೆಸಿಲ್ಲ. ಸೂಕ್ತ ವ್ಯಕ್ತಿಯನ್ನು ನೇಮಕ ಮಾಡುವ ಆಶಾಭಾವನೆ ಇದೆ. ಅವರು ಯಾವುದೇ ತೀರ್ಮಾನ ತೆಗೆದುಕೊಂಡರು ಸ್ವಾಗತ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಯಾವುದೇ ಕಾರಣಕ್ಕೂ ರಾಜ್ಯ ಒಡೆಯೋ ಕೆಲ್ಸ ಮಾಡ್ಬೇಡಿ : ಶಿವರಾಜ್ ಕುಮಾರ್

    ಯಾವುದೇ ಕಾರಣಕ್ಕೂ ರಾಜ್ಯ ಒಡೆಯೋ ಕೆಲ್ಸ ಮಾಡ್ಬೇಡಿ : ಶಿವರಾಜ್ ಕುಮಾರ್

    ಬೆಂಗಳೂರು: ನಾವೆಲ್ಲ ಒಂದೇ, ಒಟ್ಟಿಗೆ ಇರಬೇಕು. ಯಾವುದೇ ಕಾರಣಕ್ಕೂ ರಾಜ್ಯ ಒಡೆಯೋ ಕೆಲ್ಸ ಮಾಡಬೇಡಿ ಎಂದು ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಮನವಿ ಮಾಡಿದ್ದಾರೆ.

    `ಕವಚ’ ಚಿತ್ರದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಏನೇ ಸಮಸ್ಯೆ ಇದ್ದರೂ ಬಗೆಹರಿಸಿಕೊಂಡು ಹೋಗೋಣ. ಖಂಡ ಖಂಡ ಕರ್ನಾಟಕ ನಮಗೆ ಗೊತ್ತಿಲ್ಲ. ನಮಗೆ ಗೊತ್ತಿರುವುದು ಒಂದೇ, ಅದು ಅಖಂಡ ಕರ್ನಾಟಕ. ನಾವೆಲ್ಲ ಒಂದೇ. ಒಟ್ಟಿಗೆ ಇರಬೇಕು. ಯಾವುದೇ ಕಾರಣಕ್ಕೂ ರಾಜ್ಯ ಒಡೆಯುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.

    ಪ್ರತ್ಯೇಕ ರಾಜ್ಯ ಬೇಕು ಎಂದು ಕೇಳುವವರಿಗೆ ಬುದ್ಧಿ ಮಾತು ಹೇಳುವಷ್ಟು ದೊಡ್ಡವನು ನಾನಲ್ಲ. ಎಲ್ಲರು ಮಾತನಾಡುವುದು ಕನ್ನಡ ಭಾಷೆ. ಇದರಲ್ಲಿ ಹುಬ್ಬಳ್ಳಿ ಭಾಷೆ, ಮೈಸೂರು, ಬೆಂಗಳೂರು ಭಾಷೆ ಎಂಬುವುದು ಇಲ್ಲ. ಒಂದರನ್ನು ನೋಡಿ ನಾವು ನಕಲು ಮಾಡುವುದು ಬೇಡ, ಯಾವುದೇ ವಿಚಾರ ಬಂದರು ಒಟ್ಟಿಗೆ ಕುಳಿತು ಮಾತನಾಡೋಣ. ನಮ್ಮ ಸ್ವಂತ ತನವನ್ನು ಬಿಟ್ಟುಕೊಡುವುದು ಬೇಡ ಎಂದು ಹೇಳಿದರು.