ಬೆಂಗಳೂರು: ನಟಿ ರಮ್ಯಾಗೆ (Ramya) ಅಶ್ಲೀಲ ಕಾಮೆಂಟ್ ಮಾಡಿದ್ದ ಪ್ರಕರಣದಲ್ಲಿ ಬಂಧನವಾಗಿರುವ ಹನ್ನೆರಡು ಜನ ಆರೋಪಿಗಳಿಗೆ ಇನ್ನೂ ಜಾಮೀನು ಸಿಕ್ಕಿಲ್ಲ.
ಕಳೆದ ಎರಡು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲೇ ಆರೋಪಿಗಳಿದ್ದಾರೆ. ಇತ್ತ ಸಿಸಿಬಿ ಪೊಲೀಸರು ಪ್ರಕರಣದ ತನಿಖೆ ಮುಕ್ತಾಯಕ್ಕೆ ಬಂದಿದ್ದು, ಇನ್ನೊಂದು ವಾರದಲ್ಲಿ ಚಾರ್ಜ್‌ಶೀಟ್ ಹಾಕಲು ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಆರೋಗ್ಯ ವಿಚಾರಿಸಿದ ರಮ್ಯಾ
ಕಳೆದ ಜುಲೈನಲ್ಲಿ ನಟಿ ರಮ್ಯಾ, ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನ್ಯಾಯ ಸಿಗಬೇಕು ಅಂತಾ ಕಾಮೆಂಟ್ ಮಾಡಿದ್ರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಹಲವರು ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ್ರು. ಈ ಸಂಬಂಧ 43 ಅಕೌಂಟ್‌ಗಳ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ರು.
ರಾಯಚೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ (BJP-JDS Alliance) ಚುನಾವಣಾ ಪೂರ್ವ ಮೈತ್ರಿ ಹಿನ್ನೆಲೆ ಸಂಸದೆ ಸುಮಲತಾ ಕಾಂಗ್ರೆಸ್ ಸೇರ್ತಾರೆ ಅನ್ನೋ ಚರ್ಚೆ ಶುರುವಾಗಿದೆ. ಈ ಬೆನ್ನಲ್ಲೇ ಸಣ್ಣ ನೀರಾವರಿ ಸಚಿವ ಎನ್.ಎಸ್ ಬೋಸರಾಜು ಸುಮಲತಾ (Sumalatha Ambareesh) ಕಾಂಗ್ರೆಸ್ ಪಕ್ಷಕ್ಕೆ ಬರಬಹುದು, ಈಗಲೇ ಏನೂ ಹೇಳೋದಕ್ಕೆ ಸಾಧ್ಯವಿಲ್ಲ ಅಂತ ಹೇಳಿದ್ದಾರೆ.
ರಾಯಚೂರಿನಲ್ಲಿ (Raichur) ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಲು ರಮ್ಯಾ (ನಟಿ/ಮಾಜಿ ಸಂಸದೆ) (Ramya) ಬೇಕಂತಿಲ್ಲ, ಇಬ್ಬರು ಮೂವರು ಅಭ್ಯರ್ಥಿ ರೆಡಿ ಇದ್ದಾರೆ. ಸರ್ವೆ ನಡೆಯುತ್ತಿದೆ, ಜನರ ಅಭಿಪ್ರಾಯದ ಮೇಲೆ ಅಭ್ಯರ್ಥಿ ಅಂತಿಮವಾಗುತ್ತೆ. ಸುಮಲತಾ ಪಕ್ಷಕ್ಕೆ ಬಂದರೂ ಬರಬಹುದು. ತುಂಬಾ ಪವರಫುಲ್ ಕ್ಯಾಂಡಿಡೇಟ್ಸ್ ಪೈಪೋಟಿಯಲ್ಲಿದ್ದಾರೆ. 100% ಗೆಲ್ಲುವಂತ ಅಭ್ಯರ್ಥಿ ಮಂಡ್ಯದಲ್ಲಿ ಇದ್ದಾರೆ. ಯಾರು ಸೂಕ್ತ ಅನ್ನೋದನ್ನ ಮುಂದೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ತಿಳಿಸಿದ್ದಾರೆ.
ಇನ್ನೂ ಖಾಸಗಿ ವಾಹನ ಮಾಲೀಕರ ಹೋರಾಟ ಕುರಿತು ಪ್ರತಿಕ್ರಿಯಿಸಿದ ಎನ್.ಎಸ್.ಬೋಸರಾಜು, ಖಾಸಗಿ ವಾಹನಗಳ ಮಾಲೀಕರು ಅವರ ಲಾಭಕ್ಕೆ ಹೋರಾಟ ಮಾಡುತ್ತಿದ್ದಾರೆ. ಶಕ್ತಿಯೋಜನೆ ಬಗ್ಗೆ ಅವರಿಗೆ ವಿರೋಧ, ಅಸಮಧಾನವಿಲ್ಲ. ಅವರ ಬಸ್‌ಗಳಿಗೆ ಯೋಜನೆ ಕೊಟ್ಟಿಲ್ಲ, ಅವರ ವ್ಯವಹಾರ ಕಡಿಮೆಯಾಗುತ್ತೆ ಅಂತ ಹೋರಾಟ ಮಾಡ್ತಿದ್ದಾರೆ. ಸಾಧಕ-ಬಾಧಕಗಳನ್ನ ನೋಡಿ ಸರ್ಕಾರ ತೀರ್ಮಾನ ಮಾಡುತ್ತದೆ. ಅವರಿಗೆ ತೊಂದರೆ ಕೊಡಬೇಕು ಅನ್ನೋದು ಸರ್ಕಾರದ ಉದ್ದೇಶವಲ್ಲ ಎಂದಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಹೊರಗಿನವರು ನಮ್ಮವರೂ ಮೋಸ ಮಾಡ್ತಾರೆ, ಅನುಭವವಿದೆ: ಪರಮೇಶ್ವರ್
ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳು ಹೆಚ್ಚಾಗಿ ಓಡಾಡುತ್ತವೆ. ಅವರಿಗೆ ಯಾವ ರೀತಿ ಅನುಕೂಲ ಮಾಡಬೇಕು ಅನ್ನೋದನ್ನ ಸರ್ಕಾರ ತೀರ್ಮಾನ ಮಾಡುತ್ತೆ. ರಾಜ್ಯ ಮಾತ್ರವಲ್ಲ ಇಡೀ ದೇಶದಲ್ಲಿ ಶಕ್ತಿ ಯೊಜನೆ ಬಗ್ಗೆ ಒಳ್ಳೆಯ ಮಾತನಾಡುತ್ತಿದ್ದಾರೆ. ಮಧ್ಯವರ್ತಿಗಳಿಗೆ ಒಂದು ಪೈಸೆ ಸಿಗದಂತೆ 5 ಗ್ಯಾರೆಂಟಿಗಳನ್ನ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರು ಬಂದ್ ವೇಳೆ ಕಾನೂನು ಉಲ್ಲಂಘನೆ – 13 ಕೇಸ್, 12 ಮಂದಿ ಅರೆಸ್ಟ್
ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನ ಪಡೆದು ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರದ ಗದ್ದುಗೆ ಏರಿದೆ. ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಹಾಗೂ ಉಪಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ ಶಿವಕುಮಾರ್ (DK Shivakumar) ಶನಿವಾರ ಪ್ರಮಾಣವಚನ ಸ್ವೀಕರಿಸಿದರು.
ಕಾರ್ಯಕ್ರಮದ ಬಳಿಕ ಪಬ್ಲಿಕ್ ಟಿವಿಯೊಂದಿಗೆ (Public TV) ಮಾತನಾಡಿದ ಕಾಂಗ್ರೆಸ್ ಮಾಜಿ ಸಂಸದೆ ಹಾಗೂ ನಟಿ ರಮ್ಯಾ (Ramya), ಕಾಂಗ್ರೆಸ್ ತನ್ನ 5 ಗ್ಯಾರಂಟಿಗಳನ್ನು 100 ಪರ್ಸೆಂಟ್ ಪೂರೈಸಲಿದೆ ಎಂದು ಹೇಳಿದರು.
ಈ ಬಾರಿ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದಿರೋದು ತುಂಬಾ ಖುಷಿಯಾಗಿದೆ. ಈ ಹಿಂದೆ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ 5 ವರ್ಷ ಉತ್ತಮ ಆಡಳಿತ ಕೊಟ್ಟಿದ್ದಾರೆ. ಈ ಬಾರಿಯೂ 5 ವರ್ಷ ಭ್ರಷ್ಟರಹಿತ ಆಡಳಿತವನ್ನ ಕಾಂಗ್ರೆಸ್ ಸರ್ಕಾರ ನೀಡಲಿದೆ. ಕೊಟ್ಟ ಮಾತಿನಂತೆ 5 ಗ್ಯಾರಂಟಿಗಳನ್ನೂ ಪೂರೈಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ತಂದೆಗೆ ಮಗ ಡಾಕ್ಟರ್ ಆಗ್ಬೇಕು ಅನ್ನೋ ಆಸೆ; ಆದ್ರೆ ಸಿದ್ದು ಆಗಿದ್ದು ವಕೀಲ, ಮಾಡಿದ್ದು ರಾಜಕೀಯ
ಕಾಂಗ್ರೆಸ್‌ನವರು ಸುಮ್ಮನೆ ಮಾತು ಕೊಡಲ್ಲ, ಮಾತು ಕೊಟ್ಮೇಲೆ ಖಂಡಿತಾ ಈಡೇರಿಸುತ್ತಾರೆ. ಕಾಂಗ್ರೆಸ್ ಮೇಲೆ ವಿಶ್ವಾಸವಿಡಬೇಕು. ಈಗಷ್ಟೇ ಅಧಿಕಾರಕ್ಕೆ ಬಂದಿರುವುದರಿಂದ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದ್ರೆ 100% ಕೊಟ್ಟ ಭರವಸೆಗಳನ್ನ ಈಡೇರಿಸಲಿದೆ ಎಂದರು.
ಅಂದು ಸಂಜೆ 4 ಗಂಟೆಗೆ ಬೆಳಗಾವಿ ತಾಲೂಕಿನ ಸುಳೇಬಾವಿಗೆ ಆಗಮಿಸಿ, ಶ್ರೀ ಮಹಾಲಕ್ಷ್ಮೀ ದೇವಿ ದರ್ಶನ ಪಡೆದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಚುನಾವಣಾ ಪ್ರಚಾರ (Election Campaign) ಕಾರ್ಯ ಆರಂಭಿಸಲಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅಪ್ಪಾಜಿ ಮೇಲಿನ ಪ್ರೀತಿ ಉಕ್ಕಿ ಹರಿಯುತ್ತಿದೆ – ನಿಶ್ವಿಕಾ ನಾಯ್ಡು
ಸಂಜೆ 5 ಗಂಟೆಗೆ ಶಿಂದೊಳ್ಳಿ ಗ್ರಾಮದಲ್ಲಿ ರೋಡ್ ಶೋ ನಡೆಸಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆ 7 ಗಂಟೆಗೆ ಹೊನ್ನಿಹಾಳ ಗ್ರಾಮದಲ್ಲಿ ರಸ್ತೆ ಶೋ ನಡೆಸಲಿದ್ದಾರೆ. ಗುರುವಾರವಷ್ಟೇ ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದಾರಾಮಯ್ಯ ಪರ ಭರ್ಜರಿ ಪ್ರಚಾರ ನಡೆಸಿದ್ದ ಶಿವಣ್ಣ ವಿವಿಧ ಸಿನಿಮಾ ಗೀತೆಗಳನ್ನಾಡಿ ಅಭಿಮಾನಿಗಳನ್ನ ರಂಜಿಸಿದ್ರು. ಸಿದ್ದರಾಮಯ್ಯ ಅವರನ್ನ ಗೆಲ್ಲಿಸುವಂತೆ ಮನವಿ ಮಾಡಿದ್ರು.
ಮೈಸೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಪರವಾಗಿ ಗುರುವಾರ (ಮೇ 4) ರಂದು ಮೈಸೂರಿನ ವರುಣಾ ಕ್ಷೇತ್ರದಲ್ಲಿ ಮೋಹಕ ತಾರೆ ರಮ್ಯಾ (Ramya), ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ (Shivarajkumar) ಹಾಗೂ ನಟ ದುನಿಯಾ ವಿಜಯ್ (Duniya Vijay) ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ವಿಧಾನಸಭಾ ಚುನಾವಣೆಗೆ ದಿನಗಣನೆ ಬಾಕಿಯಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷಗಳ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಬಾರಿ ಹಳೆ ಮೈಸೂರು ಭಾಗದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಲೇಬೆಕೆಂದು ಪಣ ತೊಟ್ಟಿರುವ ಸಿದ್ದರಾಮಯ್ಯ ಅವರು ವರುಣಾದಲ್ಲಿ ಎರಡು ದಿನ ಮಾತ್ರ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಆಯಮ್ಮನನ್ನ ಗೆಲ್ಲಿಸಿದ್ದು ಸರಿಯಲ್ಲ – ಸುಮಲತಾ ಗೆಲುವಿಗೆ ಸಿದ್ದು ಪಶ್ಚಾತಾಪ
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕಾಗಿರುವ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ, ಹ್ಯಾಟ್ರಿಕ್ ಹೀರೊ ಡಾ.ಶಿವರಾಜ್‌ಕುಮಾರ್ ಹಾಗೂ ನಟ ದುನಿಯಾ ವಿಜಯ್ ಸಿದ್ದರಾಮಯ್ಯ ಅವರ ಪರ ಪ್ರಚಾರಕ್ಕಿಳಿಯುತ್ತಿದ್ದಾರೆ. ಈಗಾಗಲೇ ಕೆಲವು ದಿನಗಳಿಂದ ನಟ ಕಿಚ್ಚ ಸುದೀಪ್ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ನಡೆಸುತ್ತಿದ್ದು, ಇದಕ್ಕೆ ಕೌಂಟರ್‌ಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್ ಸ್ಟಾರ್ ಪ್ರಚಾರಕರನ್ನ ಕಣಕ್ಕಿಳಿಸುತ್ತಿದೆ.
ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪರವಾಗಿ ಚುನಾವಣಾ ಪ್ರಚಾರಕ್ಕೆ ನಟಿ ರಮ್ಯಾ (Actor Ramya) ಮತ್ತು ನಟ ದುನಿಯಾ ವಿಜಯ್ (Duniya Vijay) ಬರುತ್ತಾರೆ. ಆದ್ರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬರುವ ಪ್ಲಾನ್ ಇಲ್ಲ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೇಳಿದ್ದಾರೆ.
ಬಿಜೆಪಿಯವರಿಗೆ ನನ್ನ ತಂದೆ ಕೊಟ್ಟ ಆಡಳಿತದಲ್ಲಿ ತಪ್ಪು ಹುಡುಕಲಾಗುತ್ತಿಲ್ಲ, ಅವರ ಪ್ರಾಮಾಣಿಕತೆ ಬಗ್ಗೆ ಪ್ರಶ್ನೆ ಮಾಡೋಕೆ ಆಗ್ತಿಲ್ಲ. ಹಾಗಾಗಿ ಜಾತಿ ವಿರೋಧಿ ಹಣೆಪಟ್ಟಿ ಕಟ್ಟುವ ಪ್ರಯತ್ನ ಮಾಡ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಲಿಂಗಾಯತ ವಿರೋಧಿ ಪಟ್ಟ ಕಟ್ಟುವ ಪ್ರಯತ್ನವನ್ನ ಬಿಜೆಪಿ ಮಾಡ್ತಿದೆ. ಅದು ಯಶಸ್ವಿಯಾಗಲ್ಲ. ಬಿಜೆಪಿ ಐಟಿ ಸೆಲ್ ಒಂದು ರೀತಿ ಸುಳ್ಳಿನ ಫ್ಯಾಕ್ಟರಿ ಇದ್ದಂತೆ. ಲಿಂಗಾಯತ ಸಮಯದಾಯಗಳ ವೋಟ್ ಪಡೆಯುವುದಕ್ಕಾಗಿ ಬೇರೆ ದಾರಿಯಿಲ್ಲದೇ ಲಿಂಗಾಯತ ವಿರೋಧಿ ಹಣೆಪಟ್ಟಿ ಕಟ್ಟುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
– ಪ್ರಜ್ಞಾವಂತ ಸಮಾಜ ಯಾವ ಮಟ್ಟಕ್ಕೆ ಇಳಿಯುತ್ತಿದೆ ಅನ್ನೋದು ನೋಡಿ ಬೇಜಾರಾಗ್ತಿದೆ
– ಯಶಸ್ಸು, ಅಧಿಕಾರ, ಹಣ ಯಾವುದು ಶಾಶ್ವತವಲ್ಲ ಅನ್ನೋ ಅರಿವು ಎಲ್ಲರಿಗೂ ಇರಬೇಕು
– ಫ್ಯಾನ್ಸ್ ವಾರ್ ಬಗ್ಗೆ ದನಿ ಎತ್ತಿದ ರಮ್ಯಾ
ಕನ್ನಡ ಚಿತ್ರರಂಗದಲ್ಲಿ (Kannada Film Industry) ಫ್ಯಾನ್ಸ್‌ಗಳ ನಡುವೆ ವಾರ್ (Fans War) ನಡೆಯುತ್ತಿದೆ. ನೆಚ್ಚಿನ ಕಲಾವಿದರನ್ನ ಹೊಗಳುವ ಭರದಲ್ಲಿ ಮತ್ತೊಬ್ಬ ನಟನಿಗೆ ಬೈಯ್ಯುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಇವರ ವಿರುದ್ಧ ಸ್ಯಾಂಡಲ್‌ವುಡ್ (Sandalwood) ಕ್ವೀನ್ ನಟಿ ರಮ್ಯಾ (Actor Ramya) ದನಿ ಎತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ (Social Media) ತಮ್ಮ ತಮ್ಮ ಅಭಿಮಾನಿಗಳು ಏನೆಲ್ಲ ಮಾಡುತ್ತಿದ್ದಾರೆ ಎಂಬುದನ್ನು ನಟರು ಗಮನಿಸಬೇಕು. ಇಂತಹ ವರ್ತನೆಯನ್ನು ನಮ್ಮ ನಟರು ಖಂಡಿಸಿ ತಮ್ಮ ಅಭಿಮಾನಿಗಳಿಗೆ ತಿಳುವಳಿಕೆ ಹೇಳಿ ಅವರನ್ನು ಸುಸಂಸ್ಕೃತರಾಗಿ ಮಾಡುವ ಜವಾಬ್ದಾರಿ ಹೊರಬೇಕು. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅಭಿಮಾನಿಗಳು ಮಾಡುವ ಸಮಾಜ ವಿರೋಧಿ ಚಟವಟಿಕೆಗಳಿಗೆ ಬೆಂಬಲ ಕೊಡಬಾರದು ಎಂದು ರಮ್ಯಾ ಕರೆ ನೀಡಿದ್ದಾರೆ. ಜೊತೆಗೆ ಯಶಸ್ಸು, ಅಧಿಕಾರ, ಹಣ ಯಾವುದು ಶಾಶ್ವತವಲ್ಲ ಅನ್ನುವ ಸಾಮಾನ್ಯ ಅರಿವು ಎಲ್ಲರಿಗೂ ಇರಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಟಿ ಉರ್ಫಿ ಜಾವೇದ್ ಗೆ ‘ಲಾರಿಂಜೈಟಿಸ್’ ಖಾಯಿಲೆ: ಆಸ್ಪತ್ರೆಗೆ ದಾಖಲು
Blocking and turning off comments is frustrating for trolls who so badly want to abuse but have no space to do so. The pressure they must be under 🫤Let off some steam- Meditate. Go for a walk. Do some yoga. Internalise. Eat ice cream. 🤗👻
ರಮ್ಯಾ ಅವರ ಟ್ವೀಟ್‌ನಲ್ಲಿ ಏನಿದೆ?
`ಚಿತ್ರರಂಗದಲ್ಲಿ ಇವತ್ತು ತಲುಪಿರುವ ಹಂತಕ್ಕೆ ಬರಲು ಪ್ರತಿಯೊಬ್ಬರೂ ತಮ್ಮದೇ ಆದ ಸವಾಲುಗಳನ್ನು ಎದುರಿಸಿಕೊಂಡು ಬಂದಿರುತ್ತಾರೆ. ಕೇವಲ ನಾಯಕ ನಟರು ಮತ್ತು ನಾಯಕ ನಟಿಯರಷ್ಟೇ ಅಲ್ಲ, ಸಂಗೀತ ನಿರ್ದೇಶಕರು, ಗಾಯಕರು, ನೃತ್ಯ ನಿರ್ದೇಶಕರು, ಬರಹಗಾರರು, ಫೈಟ್ ಮಾಸ್ಟರ್‌ಗಳು ಮುಂತಾದ ಪ್ರತಿಯೊಬ್ಬ ತಂತ್ರಜ್ಞರೂ ಅನೇಕ ಕಷ್ಟಕರವಾದ ಪರಿಸ್ಥಿತಿಗಳನ್ನು ಎದುರಿಸಿ ಉನ್ನತ ಸ್ಥಾನಕ್ಕೆ ಬಂದಿರುತ್ತಾರೆ. ಕೆಲವರ ಕಷ್ಟಗಳು ಸಾರ್ವಜನಿಕವಾಗಿ ನಮಗೆ ತಿಳಿದಿರುತ್ತೆ, ಮತ್ತಷ್ಟು ತಿಳಿದಿರುವುದಿಲ್ಲ. ಕೆಲವರು ಉನ್ನತ ಸ್ಥಾನಕ್ಕೆ ಏರಿದ್ದರೆ ಅನೇಕರಿಗೆ ದೊಡ್ಡ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲದೆ ಇರಬಹುದು. ಚಿತ್ರರಂಗದಲ್ಲಿ ತಮ್ಮ ಆಸೆಯ ಗೋಪುರ ಕಟ್ಟಿಕೊಂಡು ಬರುವವರ ಹಿನ್ನೆಲೆಗಳು ಬೇರೆಯೇ ಇರಬಹುದು. ಹಲವರಿಗೆ ಎರಡು ಹೊತ್ತು ಊಟ ಗಿಟ್ಟಿಸಿಕೊಳ್ಳುವುದೂ ಕಷ್ಟವಾಗಿದ್ದರೆ, ಹಲವರಿಗೆ ಮೈ ತುಂಬಾ ಸಾಲ ಮಾಡಿಕೊಂಡು ಸಾಧನೆ ಮಾಡಬೇಕು ಅಂತಾ ಬಂದಿರಬಹುದು. ಹಲವರು ಇದ್ದುದೆಲ್ಲವನ್ನು ಬಿಟ್ಟು ಚಿತ್ರರಂಗದಲ್ಲಿ ಸಾಧಿಸಬೇಕೆಂದು ಬಂದದ್ದು ಉಂಟು. ಯಶಸ್ಸು ಬಹಳ ಕಡಿಮೆ ಜನರ ಪಾಲಾಗಿದೆ. ಆದರೆ ಶ್ರಮ ಪಟ್ಟವರ ಸಂಖ್ಯೆ ಎಣಿಸಲಸಾಧ್ಯ.
ಎಲ್ಲಕ್ಕಿಂತ ಮುಖ್ಯ ಮನುಷ್ಯ ತನ್ನ ಬೇರುಗಳಿಗೆ ಗಟ್ಟಿಯಾಗಿ ಅಂಟಿಕೊಂಡಿರುವುದು ಮತ್ತು ತಾವು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ ಮೇಲೆ ಬಂದ ಬಳಿಕ ತಮ್ಮಂತೆ ಕಷ್ಟಪಟ್ಟು ಶ್ರದ್ಧೆಯಿಂದ ಕೆಲಸ ಮಾಡಲು ಹಂಬಲ ಇರುವ ಪ್ರತಿಭೆಗಳನ್ನು ಹುಡುಕಿ ಸಹಾಯ ಮಾಡುವುದು ಉತ್ತಮ ನಡವಳಿಕೆ. ನಾನು ಯಾವತ್ತಿಗೂ ನಂಬರ್ 1 ಮತ್ತು ಈ ಸ್ಥಾನ ನನಗೆ ಮಾತ್ರ ಧಕ್ಕಬೇಕು ಅನ್ನುವ ಅಹಂ ಬಿಟ್ಟು ನಮ್ಮಲ್ಲಿ ಯಾರೇ ಮೇಲೆ ಬಂದರೂ ಅದನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಯಶಸ್ಸು, ಅಧಿಕಾರ, ಹಣ ಯಾವುದು ಶಾಶ್ವತವಲ್ಲ ಅನ್ನುವ ಸಾಮಾನ್ಯ ಅರಿವು ಎಲ್ಲರಿಗೂ ಇರಬೇಕು. ಇದನ್ನೂ ಓದಿ: ಡೇಂಜರ್ ಝೋನ್‌ನಲ್ಲಿ 8 ಸ್ಪರ್ಧಿಗಳು, ಯಾರ ಆಟಕ್ಕೆ ಬ್ರೇಕ್ ಹಾಕಲಿದ್ದಾರೆ ಬಿಗ್ ಬಾಸ್
ಇಂದು ಅಭಿಮಾನಿ ಸಂಘಗಳು, ಅಭಿಮಾನಿ ಬಳಗಗಳು ತೋರುತ್ತಿರುವ ನಡವಳಿಕೆ ಬಹಳ ಚಿಂತಾಜನಕವಾಗಿದೆ. ತಮ್ಮ ಗುಂಪಿನಲ್ಲಿ ಅಥವಾ ಬಣದಲ್ಲಿ ಕಾಣಿಸಿಕೊಳ್ಳದ ಎಲ್ಲರನ್ನೂ ಬಹಳ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ತಾಯಿ, ಹೆಂಡತಿ, ಮಗಳು ಅನ್ನುವ ಎಲ್ಲ ಪವಿತ್ರ ಸಂಬಂಧಗಳಿಗೆ ಮಸಿ ಬಳಿಯುವಂತಹ ಬಹಳ ಕೆಟ್ಟ ಮಾತುಗಳು ಆಡುವುದನ್ನು ಕಂಡಲ್ಲಿ ನೋವಾಗುತ್ತದೆ. ನಮ್ಮ ಪ್ರಜ್ಞಾವಂತ ಸಮಾಜ ಯಾವ ಮಟ್ಟಕ್ಕೆ ಇಳಿಯುತ್ತಿದೆ ಅನ್ನುವುದು ನೋಡಿ ಬೇಜಾರಾಗುತ್ತಿದೆ.
ಮುಂಚಿನಿಂದಲೂ ಅಭಿಮಾನಿ ಸಂಘಗಳು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದು ನಾವು ಕಂಡಿದ್ದೇವೆ, ಕೇಳಿದ್ದೇವೆ. ರಕ್ತದಾನ ಶಿಬಿರ, ಅನ್ನದಾನ, ವೃದ್ಧಾಶ್ರಮ, ಅನಾಥಾಶ್ರಮದಲ್ಲಿ ಸೇವೆ ಮಾಡುವುದು, ಗಿಡ ನೆಡುವುದು, ಪ್ರಕೃತಿ ಕಾಪಾಡುವುದು, ಬಡವರಿಗೆ ಆಹಾರ ಮತ್ತು ಔಷಧಿ ಹಂಚುವುದು ಮುಂತಾದ ಅನೇಕ ಕಾರ್ಯಗಳನ್ನು ಮಾಡಿಕೊಂಡು ಬಂದಿರುವುದು ಅಭಿಮಾನಿ ಸಂಘಗಳಿಗೆ ಇರುವ ಹೆಗ್ಗಳಿಕೆ, ಆದರೆ ಅಭಿಮಾನಿಗಳು ಅನ್ನುವ ಹೆಸರಿನಲ್ಲಿ ಈಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನಿಜ ರೂಪವನ್ನು, ಹೆಸರನ್ನು ಹಾಕಿಕೊಳ್ಳದೆ ಅನಾಮಧೇಯವಾಗಿ ತಮಗೆ ಆಗದವರ ಬಗ್ಗೆ ಅತ್ಯಂತ ಕೆಟ್ಟ ರೀತಿಯಲ್ಲಿ ಮಾತಾಡುವುದು ವಿಷಾದನೀಯ. ಇಂತಹ ವರ್ತನೆಯನ್ನು ನಮ್ಮ ನಟರು ಖಂಡಿಸಿ ತಮ್ಮ ಅಭಿಮಾನಿಗಳಿಗೆ ತಿಳುವಳಿಕೆ ಹೇಳಿ ಅವರನ್ನು ಸುಸಂಸ್ಕೃತರಾಗಿ ಮಾಡುವ ಜವಾಬ್ದಾರಿ ಹೊರಬೇಕಿದೆ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅಭಿಮಾನಿಗಳು ಮಾಡುವ ಸಮಾಜ ವಿರೋಧಿ ಚಟವಟಿಕೆಗಳಿಗೆ ಬೆಂಬಲ ಕೊಡಬಾರದು.
ಕನ್ನಡ ಚಿತ್ರರಂಗ ಇವತ್ತು ದೇಶ-ವಿದೇಶಗಳಲ್ಲಿ ದೊಡ್ಡ ಖ್ಯಾತಿ ಪಡೆದಿದೆ. ಐಎಂಡಿಬಿ ಉನ್ನತ 10 ಚಿತ್ರಗಳ ಪಟ್ಟಿಯಲ್ಲಿ 3 ಕನ್ನಡ ಚಿತ್ರಗಳಿವೆ ಅಂತ ಹೇಳಲು ನಮಗೆಲ್ಲ ಬಹಳ ಹೆಮ್ಮೆ ಆಗಬೇಕಿದೆ. ಕನ್ನಡ ಚಿತ್ರಗಳು ಈ ವರ್ಷ ಕಂಡ ಯಶಸ್ಸು ಬೇರಾವುದೇ ಭಾಷೆಯ ಚಿತ್ರಗಳಿಗೂ ಲಭ್ಯವಾಗಿಲ್ಲ, ಇದಕ್ಕಿಂತ ಹೆಮ್ಮೆಯ ವಿಚಾರ ಮತ್ತು ಸ್ಫೂರ್ತಿ ಬೇಕಿದೆಯೇ? ಕಲಾದೇವಿಯ ಸೇವೆ ಮಾಡಿಕೊಂಡು ಸಮಾಜಕ್ಕೂ, ನಮ್ಮ ಚಿತ್ರರಂಗಕ್ಕೂ ಒಳ್ಳೆಯ ಹೆಸರು ತರುವುದು ನಮ್ಮೆಲ್ಲರ ಗುರಿ ಅಗಿರಬೇಕು. ಇದು ನಮ್ಮೆಲ್ಲರ ಜವಾಬ್ದಾರಿಯೂ ಹೌದು. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ನಮ್ಮ ಅಭಿಮಾನಿಗಳು ಮತ್ತು ಬೆಂಬಲಿಗರನ್ನು ಉತ್ತೇಜಿಸೋಣ. ಪ್ರೀತಿ ಮತ್ತು ವಿಶ್ವಾಸ ತುಂಬಿದ ಉತ್ತಮ ಸಮಾಜ ನಿರ್ಮಿಸೋಣ. ದ್ವೇಷ ಮತ್ತು ಅಸೂಯೆಗಳನ್ನು ದಮನ ಮಾಡೋಣ, ಎಲ್ಲರಿಗೂ ಒಳಿತಾಗಲಿ ಎಂದು ಬರೆದುಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]