Tag: actor Puneet Rajkumar

  • ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ; ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಸಾಗರ – ಅಪ್ಪು ಸಮಾಧಿ ದರ್ಶನ

    ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ; ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಸಾಗರ – ಅಪ್ಪು ಸಮಾಧಿ ದರ್ಶನ

    ಇಂದು (ಮಾ.17) ಸ್ಯಾಂಡಲ್‌ವುಡ್‌ ನಟ ಪವರ್‌ ಸ್ಟಾರ್‌ ದಿವಂಗತ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ ಜನ್ಮದಿನ. ನೆಚ್ಚಿನ ನಟ ಜನ್ಮದಿನವನ್ನು ಅಭಿಮಾನಿಗಳು ಸ್ಮರಣೀಯವಾಗಿ ಆಚರಿಸುತ್ತಿದ್ದಾರೆ. ನಿನ್ನೆ ರಾತ್ರಿಯಿಂದಲೇ ಕಂಠೀರವ ಸ್ಟುಡಿಯೋಗೆ ಅಭಿಮಾನಿಗಳು ಆಗಮಿಸುತ್ತಿದ್ದು, ಅಪ್ಪು ಸಮಾಧಿ ದರ್ಶನ ಪಡೆಯುತ್ತಿದ್ದಾರೆ.

    ಅಪ್ಪು ಅವರ 49ನೇ ಜನ್ಮದಿನದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ನಟ ಯುವ ರಾಜ್‌ಕುಮಾರ್‌ ಪುನೀತ್‌ ಸಮಾಧಿ ದರ್ಶನ ಪಡೆದಿದ್ದಾರೆ. ನಂತರ ಅಪ್ಪು ಪುತ್ಥಳಿ ಅನಾವರಣ ಮಾಡಿದ್ದಾರೆ. ಭಾನುವಾರವಾದ ಇಂದು ನಗರದೆಲ್ಲೆಡೆ ಅಪ್ಪು ಪುತ್ಥಳಿಯ ತೇರು ಸಂಚರಿಸಲಿದೆ. ಇದನ್ನೂ ಓದಿ: ಮಾರ್ಚ್ 17ರಂದು ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ಆಚರಣೆ ಹೇಗಿರಲಿದೆ?

    ಕುಟುಂಬ ಸಮೇತ ಅಪ್ಪು ಸಮಾಧಿ ದರ್ಶನಕ್ಕೆ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಎಲ್ಲೆಡೆ ಫ್ಯಾನ್ಸ್‌ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಶನಿವಾರ ರಾತ್ರಿ 11 ಗಂಟೆಯಿಂದಲೇ ಕಂಠೀರವ ಸ್ಟೂಡಿಯೋಗೆ ಅಪ್ಪು ಫ್ಯಾನ್ಸ್ ಆಗಮಿಸುತ್ತಿದ್ದಾರೆ.

    ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕ ಗೋಪಾಲಯ್ಯ ಕೂಡ ಅಪ್ಪು ಸಮಾಧಿಗೆ ಭೇಟಿ ನೀಡಿ ದರ್ಶನ ಪಡೆದರು. ಫ್ಯಾನ್ಸ್‌ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪೊಲೀಸರ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಪುನೀತ್‌ ಫೋಟೊ, ಗುಲಾಬಿ ಹೂವನ್ನು ಸಮಾಧಿ ಬಳಿ ಇಟ್ಟು ಅಪ್ಪು ಫ್ಯಾನ್ಸ್‌ ತಮ್ಮ ನೆಚ್ಚಿನ ನಟನನ್ನು ಭಾವಪೂರ್ಣವಾಗಿ ನೆನಪಿಸಿಕೊಳ್ಳುತ್ತಿದ್ದಾರೆ.

  • ಅಭಿಮಾನಿಗಳಲ್ಲಿ ಲವ್ಲಿಸ್ಟಾರ್ ಪ್ರೇಮ್ ಕಳಕಳಿಯ ಮನವಿ

    ಅಭಿಮಾನಿಗಳಲ್ಲಿ ಲವ್ಲಿಸ್ಟಾರ್ ಪ್ರೇಮ್ ಕಳಕಳಿಯ ಮನವಿ

    ವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಚಿತ್ರರಂಗದ ಆಸ್ತಿ. ಅಪ್ಪು ನಿಧನದಿಂದ ಇಡೀ ಚಿತ್ರರಂಗವೇ ತತ್ತರಿಸಿದೆ. ಇನ್ನು ಪುನೀತ್‌ ಅಗಲಿಕೆಯ ನೋವಿನಿಂದ ಚಿತ್ರರಂಗದ ಸ್ನೇಹಿತರು, ಕುಟುಂಬಸ್ಥರು, ನೋವಿನಲ್ಲಿದ್ದಾರೆ. ಈ ವೇಳೆ ನೆನಪಿರಲಿ ಪ್ರೇಮ್ ತಮ್ಮ ಹುಟ್ಟುಹಬ್ಬದ ವಿಚಾರವಾಗಿ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

    ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ವ್ಯಕ್ತಿತ್ವದಿಂದ, ಅಮೋಘ ನಟನೆಯಿಂದ ಮನೆಮಾತಾಗಿರೋ ನಟ ಪ್ರೇಮ್‌ಗೆ ಏಪ್ರಿಲ್ 18ರಂದು ಹುಟ್ಟುಹಬ್ಬದ ಸಂಭ್ರಮ. ಇದೀಗ ಒಂದು ದಿನ ಮುಂಚಿತವಾಗಿ ಅಭಿಮಾನಿಗಳಿಗೆ ಮನವಿ ಪತ್ರವೊಂದನ್ನು ತಮ್ಮ ಇನ್ಸ್ಟಾಗಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅಪ್ಪು ಅಗಲಿಕೆಯ ಹಿನ್ನಲೆ ಹುಟ್ಟು ಹಬ್ಬದ ಸೆಲೆಬ್ರೇಶನ್ ಬೇಡ ಅಂತಾ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

     

    View this post on Instagram

     

    A post shared by Prem Nenapirali (@premnenapirali)

    ಪ್ರತಿ ವರ್ಷ ನನ್ನ ಹುಟ್ಟು ಹಬ್ಬವನ್ನು ನಿಮ್ಮದೇ ಎಂಬಂತೆ ಸಂಭ್ರಮಿಸುತ್ತಿದ್ದಿರಿ. ನಮ್ಮೆಲ್ಲರ ಪ್ರೀತಿಯ ಅಪ್ಪು ಸರ್, ಹಾಗೂ ನನ್ನ ಜೀವದ ಗೆಳೆಯ ಸುನೀಲ್ ದೂರವಾಗಿದ್ದಾರೆ, ಆದ ಕಾರಣ ಈ ವರ್ಷ ಬರ್ತಡೇ ಸೆಲೆಬ್ರೇಶನ್ ಬೇಡ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಲು ದೇವಸ್ಥಾನಕ್ಕೆ ಹೋಗುತ್ತಿರುವ ಕಾರಣ ಮನೆಯಲ್ಲಿ ಇರುವುದಿಲ್ಲ. ಆದರೆ ನಿಮ್ಮ ಫೋನ್ ಕರೆಗಳಿಗೆ ಕಾಯುತ್ತಿರುತ್ತೇನೆ ಎಂದು ಇನ್ಸ್ಟಾಗಾಂ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ:`ಕೆಜಿಎಫ್ 2′ ಸಕ್ಸಸ್ ಅಲೆಗೆ ಬೆದರಿದ ಬಾಲಿವುಡ್: ಚಿತ್ರರಂಗಕ್ಕೆ ಮತ್ತೆ ಶಕ್ತಿ ತುಂಬಲು ಶಾರುಖ್ ಖಾನ್ ಪ್ಲ್ಯಾನ್‌

    ನಟ ಪ್ರೇಮ್ ಮತ್ತು ಅಪ್ಪು ಮಧ್ಯೆ ಒಳ್ಳೆಯ ಬಾಂಧವ್ಯವಿತ್ತು. ಅಪ್ಪು ಮತ್ತು ಪ್ರಾಣ ಸ್ನೇಹಿತ ಸುನೀಲ್ ಅಗಲಿಕೆಯ ನೋವಿನಿಂದ ಹೊರಬರಲಾಗುತ್ತಿಲ್ಲ. ಇಡೀ ಚಿತ್ರರಂಗವೇ ಅಪ್ಪು ನಿಧನದ ನೋವಿನಲ್ಲಿರಬೇಕಾದರೆ ನೆನಪಿರಲಿ ಪ್ರೇಮ್ ಸೆಲೆಬ್ರೇಶನ್ ಬೇಡ ಅಂತಾ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ನೀವು ಎಲ್ಲಿದ್ದಿರೋ ಅಲ್ಲಿಂದಲೇ ಶುಭ ಹಾರೈಸಿ ಎಂದು ಕೇಳಿಕೊಂಡಿದ್ದಾರೆ.

  • ಅಪ್ಪು ‘ಜೇಮ್ಸ್’ ನಂತರ ‘ಗಂಧದ ಗುಡಿ’ಗಾಗಿ ಸಿದ್ಧವಾಗ್ತಿವೆ ಕರುನಾಡ ಥಿಯೇಟರ್ಸ್‌ 

    ಅಪ್ಪು ‘ಜೇಮ್ಸ್’ ನಂತರ ‘ಗಂಧದ ಗುಡಿ’ಗಾಗಿ ಸಿದ್ಧವಾಗ್ತಿವೆ ಕರುನಾಡ ಥಿಯೇಟರ್ಸ್‌ 

    ರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ನಟನೆಯ `ಜೇಮ್ಸ್’ ಸಿನಿಮಾ ರಿಲೀಸ್ ಆಗಿ ೨೫ನೇ ದಿನದತ್ತ ಮುನ್ನುಗ್ಗುತ್ತಿದೆ. ಪುನೀತ್ ಅವರ ಕೊನೆಯ `ಜೇಮ್ಸ್’ ಚಿತ್ರವನ್ನ ಹಬ್ಬದ ರೀತಿಯಲ್ಲಿ ಅಭಿಮಾನಿಗಳು ಸೆಲೆಬ್ರೇಟ್ ಮಾಡಿದ್ದಾಯ್ತು. ಈಗ ಅಪ್ಪು ಕನಸಿನ ಪ್ರಾಜೆಕ್ಟ್ `ಗಂಧದ ಗುಡಿ’ ತೆರೆಗೆ ಅಬ್ಬರಿಸಲು ಸಿದ್ದವಾಗ್ತಿದೆ.

    ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್ ಪುನೀತ್ ಮತ್ತು ಅಮೋಘ ವರ್ಷ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರೋ ಈ `ಗಂಧದ ಗುಡಿ’ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಪುನೀತ್, ಕರ್ನಾಟಕದ ಹಲವು ಜಾಗಗಳಿಗೆ ಭೇಟಿ ನೀಡಿ, ಬೆಟ್ಟ ಗುಡ್ಡ ಪರಿಸರಗಳ ಮಧ್ಯೆ ಚಿತ್ರೀಸಿರೋ ಈ ಚಿತ್ರ, ಇದೇ ಮೇ ತಿಂಗಳ ಕೊನೆಯ ವಾರದಲ್ಲಿ ತೆರೆಗೆ ಬದರಲು ಸಿದ್ದವಾಗಿದೆ ಎನ್ನುತ್ತಿದೆ ಗಾಂಧಿನಗರದ ಮೂಲಗಳು.

    ಈ ಚಿತ್ರ ನೈಜವಾಗಿ ಮೂಡಿ ಬರಬೇಕು ಎಂದು ಮೇಕಪ್ ಹಚ್ಚದೇ ಪುನೀತ್ ನಟಿಸಿರೋ ಸಿನಿಮಾವಿದು. `ಗಂಧದ ಗುಡಿ’ ಟೈಟಲ್ ಹೊತ್ತು ಕರ್ನಾಟಕದ ಮೂಲೆ ಮೂಲೆಯಲ್ಲೂ ಶೂಟ್ ಮಾಡಿ ಕರುನಾಡ ಬಗ್ಗೆ ಡಾಕ್ಯುಮೆಂಟರಿ ಸಿದ್ದಪಡಿಸಿ ಹಸಿರಿನ ಕಥೆಯನ್ನು ಹೇಳೋಕೆ ಹೊರಟಿದ್ದಾರೆ ನಿರ್ದೇಶಕ ಅಮೋಘ ವರ್ಷ. ಈ ಡಾಕ್ಯುಮೆಂಟರಿ ಮಾದರಿಯ ಈ ಸಿನಿಮಾ ಪಿಆರ್‌ಕೆ ಪ್ರೋಡಕ್ಷನ್ ಮೂಲಕ ಅಪ್ಪು ಕನಸಿನ ಚಿತ್ರವಾಗಿ ತೆರೆಗೆ ಬರಲಿದೆ.ಇದನ್ನು ಓದಿ:ತೆಲುಗಿನ ನಟ ನಿತಿನ್ ಜೊತೆ ಭರಾಟೆ ಬೆಡಗಿ ಶ್ರೀಲೀಲಾ ರೊಮ್ಯಾನ್ಸ್

    ತಮ್ಮ ನೆಚ್ಚಿನ ಕಲಾವಿದ ನಟಿಸಿರೋ ಈ ಚಿತ್ರವನ್ನು ನೋಡೋದಕ್ಕೆ ಅಪ್ಪು ಫ್ಯಾನ್ಸ್ ಸಿದ್ಧರಾಗಿದ್ದಾರೆ. `ಜೇಮ್ಸ್’ ಸೂಪರ್ ಸಕ್ಸಸ್ ನಂತರ `ಗಂಧದ ಗುಡಿ’ ಮೂವಿ, ಭಿನ್ನ ಕಾನ್ಸೆಪ್ಟ್ ಆಗಿ ನಿಲ್ಲುವುದರಲ್ಲಿ ಅನುಮಾನವೇ ಇಲ್ಲ. `ಜೇಮ್ಸ್’ ಚಿತ್ರ ನೋಡಿ ಕಣ್ತುಂಬಿಕೊAಡಿದ್ದ ಅಪ್ಪು ಅಭಿಮಾನಿಗಳು ಈಗ ಅಪ್ಪು ಕನಸಿನ ಸಿನಿಮಾ ನೋಡಲು ಕಾಂಟ್ ವೈಟ್ ಅನ್ನುತ್ತಿದ್ದಾರೆ.

  • ಅಪ್ಪು ಅಡ್ವಾನ್ಸ್ ಪಡೆದಿದ್ದ ಹಣ ನಿರ್ಮಾಪಕರಿಗೆ ವಾಪಸ್

    ಅಪ್ಪು ಅಡ್ವಾನ್ಸ್ ಪಡೆದಿದ್ದ ಹಣ ನಿರ್ಮಾಪಕರಿಗೆ ವಾಪಸ್

    ಬೆಂಗಳೂರು: ಇತ್ತೀಚೆಗಷ್ಟೇ ನಿಧನರಾದ ನಟ ಪುನೀತ್ ರಾಜಕುಮಾರ್ ಸಿನಿಮಾಗಳಲ್ಲಿ ಅಭಿನಯಿಸಲು ಪಡೆದಿದ್ದ ಅಡ್ವಾನ್ಸ್ ಹಣವನ್ನು ಅಪ್ಪು ಧರ್ಮಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಾಪಕರಿಗೆ ಮರುಕಳಿಸಿದ್ದಾರೆ.

    ಮುಂದಿನ ವರ್ಷಕ್ಕೆ ಅಪ್ಪು ಭರ್ತಿ 5 ಚಿತ್ರ ಮಾಡಲು ಡೇಟ್ಸ್ ಕೊಟ್ಟಿದ್ದರು. ಆದರೆ ಅಪ್ಪು ಅಕಾಲಿಕ ನಿಧನದಿಂದಾಗಿ ಆ ಸಿನಿಮಾಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅಶ್ವಿನಿಯವರೇ ಖುದ್ದು ನಿರ್ಮಾಪಕರಿಗೆ ಕರೆ ಮಾಡಿ ಅವರಿಂದ ಪಡೆದ ಅಷ್ಟೂ ಹಣವನ್ನು ಖಾತೆಗೆ ಹಾಕುತ್ತಿದ್ದಾರೆ.

    ನಿರ್ಮಾಪಕ ಉಮಾಪತಿ ಅಪ್ಪು ಡೇಟ್ಸ್ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 25ರಂದು ಉಮಾಪತಿ ಅಡ್ವಾನ್ಸ್ ಕೊಟ್ಟಿದ್ದರು. ಉಮಾಪತಿ ಪ್ರೊಡಕ್ಷನ್‌ನಲ್ಲಿ ಸಿನಿಮಾ ಮಾಡಲು ಅಪ್ಪು ಓಕೆ ಎಂದಿದ್ದರು. ಆದರೆ ಅಪ್ಪು ಅವರ ನಿಧನದ ಹಿನ್ನೆಲೆಯಲ್ಲಿ ಅಶ್ವಿನಿ ಅವರು ಹಣ ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ರಾಯನ್ ರಾಜ್ ಸರ್ಜಾ ಕ್ರಿಸ್‍ಮಸ್ ಸಂಭ್ರಮ ಹೇಗಿತ್ತು ಗೊತ್ತಾ?

    ಈ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಉಮಾಪತಿಯವರಿಗೆ ಹಣ ವಾಪಸ್ ಕಳಿಸುವುದಾಗಿ ಕರೆ ಬರುತ್ತಿತ್ತು. ಆದರೆ ನಿರ್ದೇಶಕ ಉಮಾಪತಿ ಅವರು ಚಿಕ್ಕ ಹಣ ಬೇಡ ಎಂದಿದ್ದರು. ಆದರೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಉಮಾಪತಿ ಅಕೌಂಟ್‌ಗೆ ಆರ್‌ಟಿಜಿಎಸ್ ಮಾಡಿ ದೊಡ್ತನವನ್ನು ಮರೆದಿದ್ದಾರೆ. ಇಂದು ಪಿಆರ್‌ಕೆ ಸಿಬ್ಬಂದಿಯ ಮೂಲಕ ಹಣವನ್ನು ಹಾಕಿ ಫೋನ್ ಮೂಲಕ ಉಮಾಪತಿ ಜೊತೆ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಮಾತನಾಡಿದ್ದಾರೆ. ಇದನ್ನೂ ಓದಿ: ಸಿನಿಮಾರಂಗದಲ್ಲಿ ಉತ್ತಮ ನಟನಾಗಿ ಯಶಸ್ವಿಯಾಗುವ ಪ್ಲಾನ್ ಇದೆ: ನಿಖಿಲ್ ಕುಮಾರಸ್ವಾಮಿ

    ಕಳೆದ ಒಂದು ವಾರದಿಂದ ಸುಮಾರು ಮೂರ್ನಾಲ್ಕು ನಿರ್ಮಾಪಕರಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅಡ್ವಾನ್ಸ್ ಹಣವನ್ನು ಮರುಳಿಸುತ್ತಿದ್ದಾರೆ.

  • ಪುನೀತ್ ರಾಜ್ ಕುಮಾರ್ ಕುಟುಂಬಕ್ಕೆ ಆದಿಚುಂಚನಗಿರಿ ಶ್ರೀಗಳಿಂದ ಸಾಂತ್ವನ

    ಪುನೀತ್ ರಾಜ್ ಕುಮಾರ್ ಕುಟುಂಬಕ್ಕೆ ಆದಿಚುಂಚನಗಿರಿ ಶ್ರೀಗಳಿಂದ ಸಾಂತ್ವನ

    – ಮಠಕ್ಕೆ ಬಂದು ಪೂಜೆ ಮಾಡುವಂತೆ ಹೇಳಿದ ಶ್ರೀಗಳು
    – ಶ್ರೀಗಳಿಗೆ ಸುಧಾಕರ್ ಸಾಥ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ದಿ. ಪುನೀತ್ ರಾಜ್ ಕುಮಾರ್ ಅವರ ಕುಟುಂಬವನ್ನು ಭೇಟಿಯಾಗಿ ಆದಿಚುಂಚನಗಿರಿ ಶ್ರೀಗಳು ಸಾಂತ್ವನ ಹೇಳಿದ್ದಾರೆ.

    ಇಂದು ಪುನೀತ್ ರಾಜ್‍ಕುಮಾರ್ ನಿವಾಸಕ್ಕೆ ಆಗಮಿಸಿದ ಆದಿಚುಂಚನಗಿರಿ ಶ್ರೀಗಳು ಅಪ್ಪು ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಬಳಿಕ ಮಾತನಾಡಿದ ಅವರು, ಕನ್ನಡ ಕಲಾ ಕ್ಷೇತ್ರಕ್ಕೆ ಪುನೀತ್ ರಾಜ್‍ಕುಮಾರ್ ಅವರು ನೀಡಿದ ಕೊಡುಗೆ ಅಪಾರ. ಮೊದೊಲಿನಿಂದಲೂ ರಾಜ್‍ಕುಮಾರ್ ಕುಟುಂಬಕ್ಕೆ ಮತ್ತು ಮಠಕ್ಕೆ ಅವಿನಾಭಾವ ಸಂಬಂಧ ಇದೆ ಎಂದರು.

    ರಾಜ್‍ಕುಮಾರ್ ಕುಟುಂಬದ ಕುಡಿ ಪುನೀತ್ ಅವರು ಚಿಕ್ಕ ವಯಸ್ಸಿನಿಂದ ಕಲೆಗೆ ಜೀವನ ಮುಡುಪಾಗಿಟ್ಟಿದ್ದರು. ಅವರ ಅಕಾಲಿಕ ನಿಧನದಿಂದಾಗಿ ಕುಟುಂಬ ಕಂಗೆಟ್ಟಿದೆ. ಅವರ ಅಗಲಿಕೆಯ ನೋವು ಭರಿಸಲು ಕಷ್ಟ. ಆದರೂ ಪ್ರತಿ ಕಷ್ಟದಲ್ಲೂ ಅಪ್ಪು ಕುಟುಂಬದ ಜೊತೆ ಮಠ ಇರುತ್ತದೆ ಎಂದು ತಿಳಿಸಿದರು.

    ಅಪ್ಪು ಕುಟುಂಬಕ್ಕೆ ಮತ್ತು ಕನ್ನಡ ನಾಡಿಗೆ ಅಪ್ಪು ಅಗಲಿಕೆ ಭರಿಸುವ ಶಕ್ತಿ ದೇವರು ನೀಡಲಿ ಅಂತ ಕೇಳಿಕೊಳ್ತೀವಿ ಎಂದು ಹೇಳಿದ ಅವರು ಕುಟುಂಬಕ್ಕೆ ಆಶೀರ್ವಾದ ನೀಡಿದರು. ಇದನ್ನೂ ಓದಿ: ಆಂಧ್ರಪ್ರದೇಶ ಪ್ರವಾಹ – ತಲಾ 25 ಲಕ್ಷ ದೇಣಿಗೆ ನೀಡಿದ ಚಿರಂಜೀವಿ, ರಾಮ್‍ಚರಣ್

    ಶ್ರೀಗಳಿಗೆ ಆರೋಗ್ಯ ಸಚಿವ ಸುಧಾಕರ್ ಸಾಥ್ ನೀಡಿದ್ದರು. ಈ ವೇಳೆ ಮಾತನಾಡಿದ ಸಚಿವ ಸುಧಾಕರ್ ಶ್ರೀಗಳು, ಇಂದು ಪುನೀತ್ ನಿವಾಸಕ್ಕೆ ಭೇಟಿ ಆಗಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಪುನೀತ್ ನಿಧನರಾಗಿ ಒಂದು ತಿಂಗಳು ಕಳೆದಿದೆ. ನೈತಿಕ ಸ್ಫೂರ್ತಿ ಮತ್ತು ವಿಶೇಷ ಆಶೀರ್ವಾದ ನೀಡಲು ಇಂದು ಶ್ರೀಗಳು ಬಂದಿದ್ದಾರೆ ಎಂದು ಹೇಳಿದರು.

    ಅಶ್ವಿನಿ ಅವರಿಗೆ ವಿಶೇಷ ಆಶೀರ್ವಾದ ನೀಡಿದ್ದಾರೆ. ಶೀಘ್ರದಲ್ಲಿ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಸಿ ಅಂತ ಶ್ರೀಗಳು ಅವರ ಕುಟುಂಬಕ್ಕೆ ತಿಳಿಸಿದ್ದಾರೆ. ಶ್ರೀಗಳು ಬಂದಿರೋದು ಅವರ ಕುಟುಂಬಕ್ಕೆ ಸಮಾಧಾನ ತಂದಿದೆ. ಪುನೀತ್ ಕುಟುಂಬದ ಜೊತೆ ಮಠ, ಸ್ವಾಮೀಜಿಗಳು, ಲಕ್ಷಾಂತರ ಭಕ್ತರು ಸದಾ ಇರುತ್ತಾರೆ ಎಂದರು.

    ಈ ಸಂದರ್ಭದಲ್ಲಿ ರಾಘವೇಂದ್ರ ರಾಜ್‍ಕುಮಾರ್ ಹಾಜರಿದ್ದರು. ಇದನ್ನೂ ಓದಿ:ಹಿರಿಯ ನಟ ಶಿವರಾಮ್ ಆರೋಗ್ಯ ಗಂಭೀರ

  • 2 ಗಂಟೆ ವ್ಯಾಯಾಮ, ಮೂರು ಗಂಟೆ ಐಸಿಯುನಲ್ಲಿ ಚಿಕಿತ್ಸೆ – ಪುನೀತ್ ಕೊನೆಕ್ಷಣ ಹೀಗಿತ್ತು

    2 ಗಂಟೆ ವ್ಯಾಯಾಮ, ಮೂರು ಗಂಟೆ ಐಸಿಯುನಲ್ಲಿ ಚಿಕಿತ್ಸೆ – ಪುನೀತ್ ಕೊನೆಕ್ಷಣ ಹೀಗಿತ್ತು

    ಬೆಂಗಳೂರು: ವೈದ್ಯರು ಸತತ ಮೂರು ಗಂಟೆಗಳ ಕಾಲ ಚಿಕಿತ್ಸೆ ನೀಡಿದ್ದರೂ ಅವರ ಪ್ರಯತ್ನಕ್ಕೆ ಪುನೀತ್ ರಾಜ್‍ಕುಮಾರ್ ದೇಹ ಸ್ಪಂದಿಸಲಿಲ್ಲ.

    PUNEET RAJKUMAR

    ಹೃದಯಾಘಾತದಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ನಟ ಪುನೀತ್ ರಾಜ್‍ಕುಮಾರ್ ಅವರನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಇದನ್ನೂ ಓದಿ: ಇದು ಸಾಯುವ ವಯಸ್ಸು ಅಲ್ಲ: ನರೇಂದ್ರ ಮೋದಿ

    ಪ್ರತಿನಿತ್ಯ ಮಾಡುವಂತೆ ಇಂದೂ ಪುನೀತ್ ಜಿಮ್‍ನಲ್ಲಿ ಕಸರತ್ತು ನಡೆಸಿದ್ದಾರೆ. ಸತತ ಎರಡು ಗಂಟೆ ವ್ಯಾಯಾಮ ಮಾಡಿದ ಬಳಿಕ ಅವರಿಗೆ ಹೃದಯದಲ್ಲಿ ನೋವು ಕಾಣಿಸಿಕೊಂಡಿದೆ. ಇದನ್ನೂ ಓದಿ: ಯುವಕರ ಕಣ್ಮಣಿ, ಯೂತ್ ಐಕಾನ್ ಆಗಿದ್ರು ಪುನೀತ್- ಸಿಎಂ

    ವಿಕ್ರಂ ಆಸ್ಪತ್ರೆಯ ವೈದ್ಯ ಡಾ. ರಂಗನಾಥ್ ಮಾತನಾಡಿ, ಎದೆ ನೋವು ಎಂದು ಪುನೀತ್ ರಾಜ್‍ಕುಮಾರ್ ಅವರು ಕುಟುಂಬದ ವೈದ್ಯರ ಬಳಿ ಹೋಗಿದ್ದಾರೆ. ಅಲ್ಲಿ ಇಸಿಜಿ ಮಾಡಿಸಿದಾಗ ಹೃದಯಾಘಾತವಾಗಿರುವುದು ತಿಳಿದುಬಂದಿದೆ. ಅಲ್ಲಿಂದ ನೇರವಾಗಿ ವಿಕ್ರಮ ಆಸ್ಪತ್ರೆಗೆ ಪುನೀತ್ ಅವರನ್ನು ಕರೆತರಲಾಗುತ್ತಿತ್ತು. ಮಾರ್ಗ ಮಧ್ಯೆದಲ್ಲಿಯೇ ಅವರಿಗೆ ಹಾರ್ಟ್ ಅಸಿಸ್ಟೋಲ್ (ಹೃದಯದ ಚಲನೆ ನಿಲ್ಲುವುದು) ಆಗಿತ್ತು. ಭಾರೀ ಹೃದಯಾಘಾತವೇ ಆಗಿತ್ತು ಎಂದು ಹೇಳಿದ್ದಾರೆ.

    PUNEET RAJKUMAR

    ಆದರೂ ಮೂರು ಗಂಟೆಗಳ ಕಾಲ ಅವರನ್ನು ವೆಂಟಿಲೇಟರ್‍ನಲ್ಲಿಟ್ಟು ಬದುಕುಳಿಸಲು ನಾನಾ ರೀತಿಯಲ್ಲಿ ಪ್ರಯತ್ನ ಪಟ್ಟೆವು. ಹೃದಯ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದೆವು. ಆದರೆ ಅವರಿಂದ ಯಾವುದೇ ರೀತಿಯ ಸ್ಪಂದನೆ ಸಿಗಲಿಲ್ಲ. ಹಾರ್ಟ್ ಅಸಿಸ್ಟೋಲ್ ಸ್ಥಿತಿಯಲ್ಲೇ ಇತ್ತು. ವೈದ್ಯರ ತಂಡ ಸಾಕಷ್ಟು ಪ್ರಯತ್ನಪಟ್ಟರು ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಗುರುವಾರ ಮಧ್ಯಾಹ್ನ 2.30ರ ಹೊತ್ತಿಗೆ ಪುನೀತ್ ರಾಜ್‍ಕುಮಾರ್ ಇನ್ನಿಲ್ಲ ಎಂಬ ಸುದ್ದಿಯನ್ನು ಘೋಷಿಸಲೇಬೇಕಾಯಿತು ಎಂದು ವೈದ್ಯರು ತಿಳಿಸಿದ್ದಾರೆ.

  • ಯುವಕರ ಕಣ್ಮಣಿ, ಯೂತ್ ಐಕಾನ್ ಆಗಿದ್ರು ಪುನೀತ್- ಸಿಎಂ

    ಯುವಕರ ಕಣ್ಮಣಿ, ಯೂತ್ ಐಕಾನ್ ಆಗಿದ್ರು ಪುನೀತ್- ಸಿಎಂ

    ಬೆಂಗಳೂರು: ಅತ್ಯಂತ ಕಿರಿಯ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ ಮೇರು ನಟನನ್ನು ಕರ್ನಾಟಕ ಕಳೆದುಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಷಾದಿಸಿದರು.

    PUNEET RAJKUMAR

    ಹೃದಯಾಘಾತದಿಂದ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದ ಪುನೀತ್ ರಾಜ್‍ಕುಮಾರ್ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ನಿಜಕ್ಕೂ ಇದೊಂದು ಆಘಾತಕಾರಿ ಸುದ್ದಿ. ಅತ್ಯಂತ ಕಿರಿಯ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ ಮೇರು ನಟನನ್ನು ಕರ್ನಾಟಕ ಕಳೆದುಕೊಂಡಿದೆ. ಅವರ ಕುಟುಂಬ ಹಾಗೂ ಇಡೀ ಕರ್ನಾಟಕದ ಜನ ದುಃಖದಲ್ಲಿದ್ದಾರೆ ಎಂದು ಸಂತಾಪ ಸೂಚಿಸಿದರು. ಇದನ್ನೂ ಓದಿ: ಪ್ರೀತಿಯ ಅಪ್ಪು ಇನ್ನಿಲ್ಲ

    ಪುನೀತ್ ಯುವಕರ ಕಣ್ಮಣಿ, ಯೂತ್ ಐಕಾನ್ ಆಗಿದ್ದರು. ನವೆಂಬರ್ 1ಕ್ಕೆ ವೆಬ್‍ಸೈಟ್‍ವೊಂದನ್ನು ಉದ್ಘಾಟನೆ ಮಾಡುವ ಸಂಬಂಧ ನಿನ್ನೆ ನನ್ನೊಂದಿಗೂ ಮಾತನಾಡಿದ್ದರು. ನಾನು ಅವರನ್ನು ಭೇಟಿಯಾಗಲು ಆಗಲಿಲ್ಲ. ಡಾ.ರಾಜ್‍ಕುಮಾರ್ ಅವರ ಸಂಸ್ಕಾರದಲ್ಲಿ ಪುನೀತ್ ಬೆಳೆದಿದ್ದರು. ತಂದೆಯಂತೆಯೇ ವಿನಯವಂತ. ನನಗೂ ರಾಜ್‍ಕುಮಾರ್ ಕುಟುಂಬಕ್ಕೂ ಹಳೆಯ ಬಾಂಧವ್ಯವಿದೆ. ಅಪ್ಪುನನ್ನು ಸಣ್ಣವಯಸ್ಸಿನಿಂದಲೂ ನೋಡಿದ್ದೇನೆ. ಬಹಳ ಎತ್ತರಕ್ಕೆ ಬೆಳೆದಿದ್ದ, ಇನ್ನೂ ಉಜ್ವಲ ಭವಿಷ್ಯವಿತ್ತು. ಅಪ್ಪು ಅಗಲಿಕೆಯಿಂದ ಕಲಾರಂಗಕ್ಕೆ ದೊಡ್ಡ ಪ್ರಮಾಣದ ನಷ್ಟವುಂಟಾಗಿದೆ. ಚಿತ್ರರಂಗದಲ್ಲಿ ನಾಯಕತ್ವದ ಗುಣವುಳ್ಳಂತಹ ವ್ಯಕ್ತಿಯನ್ನು ನಾವಿಂದು ಕಳೆದುಕೊಂಡಿದ್ದೇವೆ ಎಂದು ದುಃಖಿಸಿದರು. ಇದನ್ನೂ ಓದಿ: ತಂದೆ ಹಾದಿ ಹಿಡಿದ ಮಗ- ನೇತ್ರದಾನ ಮಾಡಿ ಸಾವಲ್ಲೂ ಸಾರ್ಥಕತೆ ಮೆರೆದ ಅಪ್ಪು
    PUNEET RAJKUMAR

    ಕಂಠೀರವ ಸ್ಟೇಡಿಯಂನಲ್ಲಿ ಪುನೀತ್ ರಾಜ್‍ಕುಮಾರ್ ಅಂತಿಮ ದರ್ಶನಕ್ಕೆ ಅಭಿಮಾನಿಗಳಿಗೆ ಸೂಕ್ತ ವ್ಯವಸ್ಥೆಯೊಂದಿಗೆ ಅವಕಾಶ ಮಾಡಿಕೊಡಲಾಗುವುದು. ಯಾರೂ ಸಹ ಅತಿಯಾದ ಭಾವನೆಗೆ ಒಳಗಾಗದೇ, ಸಂಯಮ ಕಳೆದುಕೊಳ್ಳದೆ ಶಾಂತಿಯಿಂದ ವರ್ತಿಸಬೇಕು. ಶಾಂತಿ, ಸುವ್ಯವಸ್ಥೆಯಿಂದ ಪುನೀತ್ ರಾಜ್‍ಕುಮಾರ್‍ರನ್ನು ಬೀಳ್ಕೊಡೋಣ. ಆಗ ಮಾತ್ರ ನಿಜವಾಗಿಯೂ ನಾವು ಅವರಿಗೆ ಸಲ್ಲಿಸುವ ಗೌರವವಾಗುತ್ತದೆ ಎಂದು ಮನವಿ ಮಾಡಿದರು.

  • ಅಭಿಮಾನಿ ಮದುವೆಯಲ್ಲಿ ಪಾಲ್ಗೊಂಡ ನಟ ಪವರ್ ಸ್ಟಾರ್

    ಅಭಿಮಾನಿ ಮದುವೆಯಲ್ಲಿ ಪಾಲ್ಗೊಂಡ ನಟ ಪವರ್ ಸ್ಟಾರ್

    ಕಾರವಾರ: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಉತ್ತರ ಕನ್ನಡ ಜಿಲ್ಲೆಯ ಅಭಿಮಾನಿಯೊಬ್ಬರ ಮದುವೆಗೆ ಆಗಮಿಸಿ ಶುಭಕೋರಿದ್ದಾರೆ.

    ಒಬ್ಬ ನಟ ಸ್ಟಾರ್ ಆಗಲು ಕಾರಣ ಪ್ರೇಕ್ಷಕರು. ಒಂದು ಸಿನಿಮಾ ಯಶಸ್ವಿಯಾಗಲು ಪ್ರೇಕ್ಷಕರೆ ಮುಖ್ಯ. ಸಿನಿಮಾ ಬಿಡುಗಡೆಯು ಒಬ್ಬ ನಟನು ಬರೆದಿರುವ ಪರೀಕ್ಷೆಯಂತೆ ಅದರ ಫಲಿತಾಂಶವನ್ನು ನೀಡುವವನು ಅಭಿಮಾನಿ. ಒಬ್ಬ ನಟನ ಯಶಸ್ಸಿಗೆ ಅಭಿಮಾನಿಯೇ ಅಡಿಪಾಯ. ಅಂತಹ ಅಭಿಮಾನಿಗಳನ್ನು ಎಷ್ಟೋ ಕಲಾವಿದರು ಸ್ಟಾರ್ ಆದ ನಂತರ ಮರೆತೆ ಬಿಡುತ್ತಾರೆ. ಹಾಗೂ ನಟನ ಜೊತೆಗೆ ಆಟೋಗ್ರಾಫ್ ಹಾಗೂ ಫೋಟೋ ತೆಗೆಸಿಕೊಳ್ಳುವುದು ಕಷ್ಟವಾಗಿ ಬಿಡುತ್ತದೆ. ಆದ್ರೆ ಅಭಿಮಾನಿಗಳನ್ನೇ ದೇವರು ಎಂದು ಹೇಳುವ ಸ್ಯಾಂಡಲ್ ವುಡ್ ನಟ ಪುನೀತ್ ರಾಜ್ ಕುಮಾರ್ ತಮ್ಮ ಬ್ಯುಸಿ ಶೆಡ್ಯೂಲ್ ಗಳ ಮಧ್ಯೆ ಬಿಡುವು ಮಾಡಿಕೊಂಡು ಅಭಿಮಾನಿಯ ಮದುವೆ ಸಮಾರಂಭಕ್ಕೆ ಹಾಜರಾಗುವ ಮೂಲಕ ಸರಳತೆ ಮೆರೆದಿದ್ದಾರೆ.

    ಇಂದು ಉತ್ತರಕನ್ನಡ ಜಿಲ್ಲೆಯ ಕುಮಟ ಪಟ್ಟಣದ ದೇವರಹಕ್ಕಲ ಸಭಾ ಭವನದಲ್ಲಿ ನಡೆದ ಅಭಿಮಾನಿ ಗುರುರಾಜ ಎಂಬವರ ವಿವಾಹ ಮಹೋತ್ಸವಕ್ಕೆ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಆಗಮಿಸಿ ಶುಭಕೋರಿದ್ದಾರೆ. ಇನ್ನೂ ನೆಚ್ಚಿನ ನಟನನ್ನು ನೋಡಲು ನೂರಾರು ಜನರು ಮುಗಿಬಿದ್ದರು. ಅಭಿಮಾನಿಗಳಿಂದಾಗಿ ಕೆಲಕಾಲ ರಸ್ತೆ ಸಂಚಾರ ಸಹ ಸ್ತಬ್ದವಾಗಿತ್ತು.

    ನಟ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಟೀಸರ್‍ನಲ್ಲಿಯೇ ಪುನೀತ್ ಅಭಿನಯಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. ಇತ್ತೀಚೆಗಷ್ಟೇ ಚಿತ್ರತಂಡ ನೀನಾದೆ ನಾ ಎಂಬ ಸಾಂಗ್ ಬಿಡುಗಡೆ ಮಾಡಿದ್ದು, ಹಾಡು ಯೂ ಟ್ಯೂಬ್‍ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ರಾಜಕುಮಾರ ಚಿತ್ರದ ನಂತರ ಮತ್ತೆ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಪುನೀತ್‍ಗೆ ಆ್ಯಕ್ಷನ್ ಕಟ್ ಹೇಳಿದ್ದು, ಹೊಂಬಾಳೆ ಫಿಲ್ಮಂಸ್ ಬ್ಯಾನರ್ ನಡಿ ಚಿತ್ರ ಸೆಟ್ ಏರಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

    ಕೋವಿಡ್ ಸಮಯದಲ್ಲಿ ಜನರಿಗೆ ಆಹಾರ, ಮಾಸ್ಕ್, ಸ್ಯಾನಿಟೈಸರ್ ಹೀಗೆ ಹಲವು ರೀತಿಯಲ್ಲಿ ಸಹಾಯ ಹಸ್ತ ಚಾಚುವ ಮೂಲಕ ಎಷ್ಟೋ ಜನರನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ಇತ್ತೀಚೆಗೆ ಸ್ಯಾಂಡಲ್‍ವುಡ್ ನಟರು ತಮ್ಮ ಸರಳತೆಯ ಮೂಲಕ ಜನರ ಮನ ಗೆಲ್ಲುತ್ತಿದ್ದಾರೆ ಎಂದರೆ ತಪ್ಪಾಗಲಾರದು.

  • ‘ಯುವರತ್ನ’ನಿಗೆ ಜೋಡಿಯಾದ್ರು ಸಯ್ಯೇಷಾ ಸೈಗಲ್

    ‘ಯುವರತ್ನ’ನಿಗೆ ಜೋಡಿಯಾದ್ರು ಸಯ್ಯೇಷಾ ಸೈಗಲ್

    ಬೆಂಗಳೂರು: ರಾಜಕುಮಾರ ಹಿಟ್ ಸಿನಿಮಾ ಬಳಿಕ ಮತ್ತೆ ಒಂದಾಗಿರುತ್ತಿರುವ ನಿರ್ದೇಶಕ ಆನಂದ್ ರಾಮ್ ಹಾಗೂ ನಟ ಪುನೀತ್ ರಾಜ್‍ಕುಮಾರ್ ಅವರ ಯುವರತ್ನ ಸಿನಿಮಾಗೆ ಕಾಲಿವುಡ್ ನಟಿ ಸಯ್ಯೇಷಾ ಸೈಗಲ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

    ಸಿನಿಮಾದ ಟೈಟಲ್ ಅನಾವರಣ ಮಾಡಿ ಚಿತ್ರೀಕರಣ ಆರಂಭಿಸಿದ್ದ ಯುವರತ್ನ ಸಿನಿಮಾಗೆ ನಾಯಕಿ ಯಾರು ಎಂಬ ಪ್ರಶ್ನೆಗೆ ಸಂತೋಷ್ ಆನಂದ್ ರಾಮ್ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ ಅಭಿಮಾನಿಗಳ ಕುತೂಹಲಕ್ಕೆ ಉತ್ತರಿಸಿದ್ದಾರೆ.

    ಯುವರತ್ನ ಸಿನಿಮಾ ಘೋಷಣೆ ಆದ ದಿನದಿಂದಲೂ ಕೂಡ ಚಿತ್ರ ನಾಯಕಿ ಬಗ್ಗೆ ಅಭಿಮಾನಿಗಳು ಸಾಕಷ್ಟು ಕುತೂಹಲ ಹೊಂದಿದ್ದರು. ಟಾಲಿವುಡ್ ನಟಿ ತಮನ್ನಾ ಸೇರಿದಂತೆ ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ಅವರೊಂದಿಗೆ ಅಭಿನಯಿಸಿದ್ದ ಅನುಪಮಾ ಪರಮೇಶ್ವರನ್ ಅವರ ಹೆಸರು ಕೂಡ ಕೇಳಿ ಬಂದಿತ್ತು.

    ಸದ್ಯ ಚಿತ್ರತಂಡ 21 ವರ್ಷದ ಸಯ್ಯೇಷಾ ಸೈಗಲ್ ಅವರನ್ನು ಫಿಕ್ಸ್ ಮಾಡಿದ್ದು, ಮುಂಬೈನಲ್ಲಿ ಹುಟ್ಟಿ ಬೆಳೆದಿದ್ದ ಇವರು ತಮಿಳಿನ ವಿಜಯಮ್ ರವಿ ಅವರ ‘ವನಮಗಂ’ ಚಿತ್ರದಲ್ಲಿ ನಟಿಸಿ ತಮ್ಮ ಗ್ಲಾಮರ್ ಲುಕ್ ಹಾಗೂ ನಟನೆಯ ಮೂಲಕ ಗಮನಸೆಳೆದಿದ್ದರು. ಇದಕ್ಕೂ ಮುನ್ನ ಟಾಲಿವುಡ್ ನಟ ನಾಗರ್ಜುನ ಅವರ ಪುತ್ರ ಅನಿಲ್ ಸಿನಿಮಾ ಮೂಲಕ ಸಿನಿ ಜರ್ನಿ ಆರಂಭಿಸಿದ್ದರು. ಅಲ್ಲದೇ ಬಾಲಿವುಡ್‍ನಲ್ಲಿ ವಿಜಯ್ ದೇವಗನ್ ಅವರೊಂದಿಗೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಿ ಸಯ್ಯೇಷಾ ಅವರಿಗೆ ಇದು ಡೆಬ್ಯೂ ಸಿನಿಮಾ ಆಗಿದೆ.

    https://www.instagram.com/p/BLqJRv0AJEw/

    ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರು ಯುವರತ್ನ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ. `ರಾಜಕುಮಾರ’ ಚಿತ್ರದ ನಿರ್ಮಾಪಕ, ನಿರ್ದೇಶಕ ಹಾಗೂ ನಟನ ಕಾಂಬಿನೇಷನ್ ಬರುತ್ತಿರುವ 2ನೇ ಚಿತ್ರ ಯುವರತ್ನ. ಈಗಾಗಲೇ ಫೆಬ್ರವರಿ 14 ರಂದು ಚಿತ್ರೀಕರಣ ಆರಂಭವಾಗಿದ್ದು, ಚಿತ್ರದಲ್ಲಿ ಪುನೀತ್ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ 16 ವರ್ಷಗಳ ಹಿಂದೆ ತೆರೆಕಂಡಿದ್ದ `ಅಭಿ’ ಚಿತ್ರದ ಬಳಿಕ ಪುನೀತ್ ಮತ್ತೆ ಕಾಲೇಜ್ ಸ್ಟೂಡೆಂಟ್ ಆಗಿದ್ದಾರೆ.

    ಉಳಿದಂತೆ ನಟಿ ಸಯ್ಯೇಷಾ ಸೈಗಲ್ ಕಳೆದ ಕೆಲ ದಿನಗಳ ಹಿಂದೆಯಷ್ಟೇ ತಮಿಳು ನಟ ಆರ್ಯ ಅವರೊಂದಿನ ಪ್ರೀತಿಯ ವಿಚಾರವನ್ನು ರಿವೀಲ್ ಮಾಡಿ ಸುದ್ದಿಯಾಗಿದ್ದರು. ಮಾರ್ಚ್ ತಿಂಗಳನಲ್ಲಿ ಇಬ್ಬರ ವಿವಾಹ ನಿಗದಿಯಾಗಿದೆ. ಸಯ್ಯೇಷಾ ಸೈಗಲ್ ನಟ ನಿರ್ಮಾಪಕ ಸಮೇತ್ ಸೈಗಲ್ ಮತ್ತು ನಟಿ ಶಹೀನ್ ಬಾನು ಅವರ ಪುತ್ರಿಯಾಗಿದ್ದಾರೆ.

    https://www.instagram.com/p/BNRfxrmA5Bl/

    https://www.instagram.com/p/BRsX-sxBD-G/

    https://www.instagram.com/p/Bb1LUKQnILv/

    https://www.instagram.com/p/BuFjpHbjZkI/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv