Tag: Actor Pratham

  • ನಟ ಪ್ರಥಮ್ ಮೇಲೆ ಹಲ್ಲೆ ಆರೋಪ ಪ್ರಕರಣ – ಹೈಕೋರ್ಟ್‌ನಲ್ಲಿ ಇತ್ಯರ್ಥ

    ನಟ ಪ್ರಥಮ್ ಮೇಲೆ ಹಲ್ಲೆ ಆರೋಪ ಪ್ರಕರಣ – ಹೈಕೋರ್ಟ್‌ನಲ್ಲಿ ಇತ್ಯರ್ಥ

    ಬೆಂಗಳೂರು: ಒಳ್ಳೆ ಹುಡ್ಗ ಪ್ರಥಮ್‌ (Actor Pratham) ಮೇಲೆ ರೌಡಿ ಶೀಟರ್‌ ಬೇಕರಿ ರಘು ಹಲ್ಲೆ ಆರೋಪ ಪ್ರಕರಣ ಹೈಕೋರ್ಟ್‌ನಲ್ಲಿಂದು ಇತ್ಯರ್ಥವಾಗಿದೆ.

    ಪ್ರಕರಣದ ರಾಜಿ ಸಂಧಾನಕ್ಕೆ ಆರೋಪಿ ಬೇಕರಿ ರಘು ಪರ ವಕೀಲರು ಅರ್ಜಿ ಹಾಕಿದ್ದರು. ಇಂದು ಹೈಕೋರ್ಟ್ ಹಾಲ್ 11 ರಲ್ಲಿ ಅರ್ಜಿ ವಿಚಾರಣೆ ನಡೆಯಿತು. ವಿಚಾರಣೆಗೆ ಹಾಜರಾಗಿದ್ದ ನಟ ಪ್ರಥಮ್‌ ರಾಜಿ ಸಂಧಾನಕ್ಕೆ ಕೋರ್ಟ್‌ ಮುಂದೆ ಒಪ್ಪಿಗೆ ಸೂಚಿಸಿದ್ದಾರೆ.

    ಏನಿದು ಕೇಸ್‌?
    ತನ್ನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆಂದು ಪ್ರಥಮ್‌ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ (Doddaballapura Rural Police) ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಪ್ರಕರಣ ದಾಖಲಾಗಿತ್ತು.

    ದೊಡ್ಡಬಳ್ಳಾಪುರ ದೇವಸ್ಥಾನದ ಬಳಿ ಆಗಿದ್ದೇನು?
    ಜುಲೈ 22ರಂದು ದೊಡ್ಡಬಳ್ಳಾಪುರ ತಾಲ್ಲೂಕಿನ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ ಪ್ರಥಮ್ ಬಂದಿದ್ದರು. ಈ ವೇಳೆ ಪ್ರಥಮ್ ರನ್ನ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ಜೀವ ಬೆದರಿಕೆ ಹಾಕಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆ ನಡೆದು ಹಲವು ದಿನಗಳ ನಂತರ ಖುದ್ದು, ಪ್ರಥಮ್ ನೇರವಾಗಿ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ ಬಾಬಾ ಅವರನ್ನು ಭೇಟಿಯಾಗಿ ದೂರು ನೀಡಿದ್ದರು.

    ಪ್ರಥಮ್ ನೀಡಿದ ದೂರಿನಲ್ಲೇನಿತ್ತು?
    ಜುಲೈ 22 ರಂದು ಮಹೇಶ್ ಎಂಬ ಸಿನಿಮಾ ಪ್ರೊಮೋಟರ್ ಅವರು ನನಗೆ ದೊಡ್ಡ ಬಳ್ಳಾಪುರದ ಯಲ್ಲಮ್ಮ ದೇವಸ್ಥಾನದ ಪೂಜೆಗೆ ಕರೆದಿದ್ದರು. ಪೂಜೆ ಮುಗಿಸಿ ಮಧ್ಯಾಹ್ನ ಸುಮಾರು 3:50 ಗಂಟೆಗೆ ನಾನು ವಾಪಸ್‌ ಬರುವ ವೇಳೆ ಯಶಸ್ವಿನಿ ಮತ್ತು ಬೇಕರಿ ರಘು ಹಾಗೂ ಒಂದಷ್ಟು ಅಪರಿಚಿತರು ನನ್ನ ಕಾರನ್ನು ಸುತ್ತುವರೆದು ಅಜ್ಞಾತ ಸ್ಥಳಕ್ಕೆ (ಗ್ರಾಮದ ಹೆಸರು ತಿಳಿದಿರುವುದಿಲ್ಲ. ಸ್ಥಳವನ್ನು ಗುರ್ತಿಸುತ್ತೇನೆ) ಕರೆದೊಯ್ದಿದ್ದರು. ದರ್ಶನ್ ಅವರನ್ನ ಕುರಿತು ನನ್ನ ಬಾಸ್ ಬಗ್ಗೆ, ಮಾತನಾಡಿದ್ದೀಯ ಅಂತ ಅವಾಚ್ಯ ಶಬ್ದಗಳಿಂದ ಬೈಯ್ದು, ಅವರ ಬಳಿ ಇದ್ದ ಡ್ರ್ಯಾಗರ್‌ ಮತ್ತು ಚಾಕು ತೋರಿಸಿ ಚುಚ್ಚಲು ಮುಂದಾಗಿ ಭಯಪಡಿಸಿರುತ್ತಾರೆ. ಇವರು ನನ್ನ ಬಳಿ ಗಲಾಟೆ ಮಾಡುವಾಗ, ಜೈಲಿನಲಿ.. ದರ್ಶನ್ ಜೊತೆ ಇದ್ದ ಬ್ಯಾರಕ್ ಪೋಟೋವನ್ನ ತೋರಿಸಿರುತ್ತಾರೆ. ಆ ನಂತರ ಅಲ್ಲಿಂದ ಬಹಳ ಉಪಾಯದಿಂದ ಪ್ರಾಣ ಉಳಿಸಿಕೊಂಡು ಬಂದಿದ್ದೆ ದೊಡ್ಡ ವಿಚಾರ. ಈ ವಿಚಾರವನ್ನ ನನ್ನ ಜೊತೆ ಇದ್ದ ನನ್ನ ಸ್ನೇಹಿತರಾದ ಮಹೇಶ್, ಪ್ರಮೋದ್ ಮತ್ತು ಚಾಲಕ ಪ್ರಕಾಶ್ ಇವರು ಖುದ್ದು ಮೇಲ್ಕಂಡ ವಿಚಾರಕ್ಕೆ ಸಾಕ್ಷಿಯಾಗಿರುತ್ತಾರೆ. ನನಗೆ ಜೀವ ಭಯವಿರುವುದರಿಂದ ರಕ್ಷಣೆ ನೀಡಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದರು.

  • ನಟ ಪ್ರಥಮ್‌ಗೆ ಡ್ರ್ಯಾಗರ್‌ ತೋರಿಸಿ ಧಮ್ಕಿ ಹಾಕಿ ಹಲ್ಲೆಗೆ ಯತ್ನಿಸಿದ್ದ ರೌಡಿಶೀಟರ್‌ ಅರೆಸ್ಟ್‌

    ನಟ ಪ್ರಥಮ್‌ಗೆ ಡ್ರ್ಯಾಗರ್‌ ತೋರಿಸಿ ಧಮ್ಕಿ ಹಾಕಿ ಹಲ್ಲೆಗೆ ಯತ್ನಿಸಿದ್ದ ರೌಡಿಶೀಟರ್‌ ಅರೆಸ್ಟ್‌

    ಟ ಪ್ರಥಮ್‌ಗೆ (Actor Pratham) ಡ್ರ್ಯಾಗರ್‌ ತೋರಿಸಿ ಧಮ್ಕಿ ಹಾಕಿ ಹಲ್ಲೆಗೆ ಯತ್ನಿಸಿದ್ದ ರೌಡಿಶೀಟರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

    ಪ್ರಥಮ್‌ಗೆ ಬೆದರಿಕೆ ಹಾಕಿದ್ದ ರೌಡಿಶೀಟರ್ ಬೇಕರಿ ರಘು ಎಂಬಾತನನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲಿಸರು ಅರೆಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ನಟ ಪ್ರಥಮ್‌ಗೆ ಜೀವ ಬೆದರಿಕೆ ಕೇಸ್ – ಆರೋಪಿಗಳಾದ ಬೇಕರಿ ರಘು, ಯಶಸ್ವಿನಿಗೆ ಜಾಮೀನು ಮಂಜೂರು

    ಕಳೆದ ತಿಂಗಳು ದೊಡ್ಡಬಳ್ಳಾಪುರ ಸಿವಿಲ್ ಕೋರ್ಟ್‌ಗೆ ಹಾಜರಾಗಿ ಬೇಕರಿ ರಘು ಜಾಮೀನು ಪಡೆದಿದ್ದ. ಬಂಧನಕ್ಕೂ ಮುನ್ನವೇ ಜಾಮೀನು ಪಡೆದುಕೊಂಡಿದ್ದ. ಸದ್ಯ ಪ್ರಕರಣ ಸಂಬಂಧ ರಘುನನ್ನು ಪೊಲೀಸರು ಬಂಧಿಸಿದ್ದಾರೆ.

    ನ್ಯಾಯಾಲಯ ವಿಧಿಸಿದ ಷರತ್ತುಗಳ ಉಲ್ಲಂಘನೆ ಮಾಡಿದ ಕಾರಣ ನೀಡಿ ಬಂಧಿಸಲಾಗಿದೆ. ದೊಡ್ಡಬಳ್ಳಾಪುರ ಸಿವಿಲ್ ಕೋರ್ಟ್‌ನಿಂದ ಕಳೆದ ತಿಂಗಳು ಷರತ್ತುಬದ್ಧ ಜಾಮೀನು ನೀಡಲಾಗಿತ್ತು. ಪ್ರತಿ ಭಾನುವಾರ ಠಾಣೆಗೆ ಬಂದು ಸಹಿ ಹಾಕಲು ಸೂಚನೆ ನೀಡಲಾಗಿತ್ತು. ಇದನ್ನೂ ಓದಿ: ನಟ ಪ್ರಥಮ್‌ಗೆ ಜೀವಬೆದರಿಕೆ ಕೇಸ್‌ – ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಇಬ್ಬರ ವಿರುದ್ಧ FIR

    ಈ ಸಂಬಂಧ ರಘು, ನ್ಯಾಯಾಲಯದ ಜಾಮೀನು ಷರತ್ತು ಉಲ್ಲಂಘಿಸಿದ್ದಾನೆ. ರಘು ಹಾಗೂ ಪ್ರಕರಣದ ಮತ್ತೋರ್ವ ಆರೋಪಿ ಯಶಸ್ವಿನಿಯನ್ನು ಪೊಲೀಸರು ಬಂಧಿಸಿದ್ದಾರೆ.

  • ಅಂಬೇಡ್ಕರ್‌ಗೆ ಅವಮಾನ ಆರೋಪ – ಪ್ರಥಮ್‌ಗೆ ಮಸಿ ಬಳಿದ ದಲಿತ ಸಂಘಟನೆ ಮುಖಂಡರು

    ಅಂಬೇಡ್ಕರ್‌ಗೆ ಅವಮಾನ ಆರೋಪ – ಪ್ರಥಮ್‌ಗೆ ಮಸಿ ಬಳಿದ ದಲಿತ ಸಂಘಟನೆ ಮುಖಂಡರು

    ಚಿಕ್ಕಬಳ್ಳಾಪುರ: ಅಂಬೇಡ್ಕರ್‌ಗೆ ಅಪಮಾನ ಮಾಡಿದ ಆರೋಪದ ಮೇಲೆ ನಟ ಪ್ರಥಮ್‌ಗೆ (Pratham) ದಲಿತ ಸಂಘಟನೆಗಳ ಮುಖಂಡರು ಮಸಿ ಬಳಿದಿರುವ ಘಟನೆ ದೊಡ್ಡಬಳ್ಳಾಪುರ (Doddaballapura) ಗ್ರಾಮಾಂತರ ಪೊಲೀಸ್ ಠಾಣೆ ಎದುರು ನಡೆದಿದೆ.

    ಜೀವ ಬೆದರಿಕೆ ಆರೋಪದ ಪ್ರಕರಣ ಸಂಬಂಧ ಪ್ರಥಮ್ ವಿಚಾರಣೆಗೆ ಆಗಮಿಸಿ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಠಾಣೆಯಿಂದ ಹೊರಬಂದ ಕೂಡಲೇ ಪ್ರಥಮ್‌ನನ್ನ ದಲಿತ ಸಂಘಟನೆಗಳ ಮುಖಂಡರು ಅಡ್ಡಗಟ್ಟಿ, ಕ್ಷಮೆ ಕೇಳುವಂತೆ ಒತ್ತಾಯಿಸಿದ್ದರು. ಇದನ್ನೂ ಓದಿ: ಆನೇಕಲ್ | ಟ್ಯೂಷನ್‌ಗೆ ಹೋಗ್ತಿದ್ದ ಬಾಲಕನ ಕಿಡ್ನ್ಯಾಪ್ ಮಾಡಿ ಬರ್ಬರ ಹತ್ಯೆ

    ಕೂಡಲೇ ಸ್ಪಷ್ಟನೆ ನೀಡಲು ಮುಂದಾದ ಪ್ರಥಮ್‌ಗೆ ದಲಿತ ಮುಖಂಡರು ಏಕಾಏಕಿ ಮಸಿ ಬಳಿಯಲು ಮುಗಿಬಿದ್ದರು. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ಎದುರೇ ಘಟನೆ ನಡೆದಿದ್ದು, ಸಿಪಿಐ ಸಾಧಿಕ್ ಪಾಷಾ ಅವರು ಮುಖಂಡರಿಗೆ ಈ ರೀತಿ ಮಾಡದಂತೆ ತಿಳಿಸಿದ್ದರು. ಆದರೂ ಪಟ್ಟು ಬಿಡದ ದಲಿತ ಮುಖಂಡರು ಪ್ರಥಮ್ ಕಾರು ಅಡ್ಡಗಟ್ಟಿ ಆಕ್ರೋಶ ಹೊರಹಾಕಿದ್ದಾರೆ.

  • ಕರ್ಮ ಯಾರ ಮನೆ ಬಾಗಿಲನ್ನು ಬಿಡಲ್ಲ, ನಂದೇನಾದ್ರೂ ತಪ್ಪಿದ್ರೆ ದೇವ್ರು ನೋಡಿಕೊಳ್ಳಲಿ – ರಕ್ಷಕ್ ಬುಲೆಟ್

    ಕರ್ಮ ಯಾರ ಮನೆ ಬಾಗಿಲನ್ನು ಬಿಡಲ್ಲ, ನಂದೇನಾದ್ರೂ ತಪ್ಪಿದ್ರೆ ದೇವ್ರು ನೋಡಿಕೊಳ್ಳಲಿ – ರಕ್ಷಕ್ ಬುಲೆಟ್

    ಬೆಂಗಳೂರು: ಕರ್ಮ ಯಾರ ಮನೆ ಬಾಗಿಲನ್ನು ಬಿಡಲ್ಲ, ನನ್ನದೇನಾದರೂ ತಪ್ಪಿದ್ರೆ ದೇವರು ನೋಡಿಕೊಳ್ಳಲಿ ಎಂದು ನಟ ರಕ್ಷಕ್ ಬುಲೆಟ್ (Rakshak Bullet) ಕಿಡಿಕಾರಿದ್ದಾರೆ.

    ದೊಡ್ಡಬಳ್ಳಾಪುರ (Doddaballapur) ದೇವಸ್ಥಾನಕ್ಕೆ ಹೋಗಿದ್ದ ಪ್ರಥಮ್‌ಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ ಬಂದಿತ್ತು. ದುಷ್ಕರ್ಮಿಗಳ ಗುಂಪೊಂದು ಡ್ರ‍್ಯಾಗರ್ ತೋರಿಸಿ ಪ್ರಥಮ್‌ಗೆ ಜೀವ ಬೆದರಿಕೆ ಒಡ್ಡಿತ್ತು. ಘಟನೆ ವೇಳೆ ರಕ್ಷಕ್ ಬುಲೆಟ್ ಕೂಡ ಇದ್ದರು. ಈ ಕುರಿತು `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನನ್ನನ್ನು ಒಬ್ಬರು ಕರೆದಿದ್ದರು. ಅದಕ್ಕೆ ಅಲ್ಲಿಗೆ ಹೋಗಿದ್ದೆ. ಹೋದೆ, ನನ್ನ ಕೆಲಸ ಮುಗಿಸಿ ಬಂದೆ. ಕೆಲವು ಕಡೆ ನಾನೇ ಬೆದರಿಕೆ ಹಾಕಿಸಿದ್ದೇನೆ, ಸುಪಾರಿ ಕೊಟ್ಟಿದೀನಿ ಅಂತ ಹೇಳಿದ್ದಾರೆ. ಆದರೆ ನಾನು ಇಲ್ಲಿ ರೌಡಿಸಂ, ಬೇರೆ ವ್ಯವಹಾರ ಮಾಡೋಕೆ ಬಂದಿಲ್ಲ. ನಿಯತ್ತಾಗಿ ನಾನು ನನ್ನ ಕೆಲಸ ಅಂತ ಇದೀನಿ. ಘಟನೆ ನಡೆದ ಜಾಗದಲ್ಲಿ ನಾನಿದ್ದೆ. ಆದರೆ ನನಗೂ ಇದ್ಯಾವುದಕ್ಕೂ ನನಗೆ ಸಂಬಂಧ ಇಲ್ಲ. ನಾನು ಮಧ್ಯದಲ್ಲಿ ಹೋದ್ರೆ ನನ್ನ ಮೇಲೆ ಬರುತ್ತೆ ಅಂತ ಹೋಗಿಲ್ಲ ಎಂದರು.ಇದನ್ನೂ ಓದಿ: ಏಯ್‌.. ಗೂಂಡಾಗಿರಿ ಬಿಟ್ಟುಬಿಡಿ, ಬಾಸಿಸಂ ನಡೆಯಲ್ಲ – ದರ್ಶನ್‌ ಫ್ಯಾನ್ಸ್‌ಗೆ ಒಳ್ಳೆ ಹುಡ್ಗ ಪ್ರಥಮ್‌ ವಾರ್ನಿಂಗ್‌

    ಈ ಘಟನೆ ವೇಳೆ ನಾನು ಆ ಜಾಗದಲ್ಲಿದ್ದೆ ಎನ್ನುವ ಕಾರಣದಿಂದಲೇ ಇಷ್ಟೆಲ್ಲಾ ಆಗ್ತಿದೆ. ಪ್ರಥಮ್ ನನಗೆ ಅಣ್ಣನ ತರ. ಬೇರೆಯವರಿಗೆ ತೊಂದರೆ ಕೊಡೋಕೆ ಬಂದಿಲ್ಲ. ಕಲಾವಿದರಾಗಿ ಕೆಲಸ ಮಾಡೋಕೆ ಬಂದಿದೀನಿ. ಅದನ್ನೇ ಮಾಡ್ತೀನಿ. ಇದರಲ್ಲಿ ನನ್ನ ಪಾತ್ರ ಇಲ್ಲ. ಹೀಗಾಗಿ ಯಾರೇ ಏನೇ ಕೇಳಿದರೂ ನಾನು ನಡೆದಿದ್ದನ್ನು ಹೇಳ್ತೀನಿ. ಏನೇ ಆದರೂ ನಾನು ಎದುರಿಸುತ್ತೇನೆ ಎಂದು ಖಡಕ್ಕಾಗಿ ತಿಳಿಸಿದರು.

    ಈ ಘಟನೆ ದೇವಸ್ಥಾನದ ಮುಂದೆ ನಡೆದಿದೆ. ಅಲ್ಲಿದ್ದವರು ದೇವಸ್ಥಾನಕ್ಕೆ ಬರಲಿ, ನಾನು ಹೋಗ್ತೀನಿ. ಎಲ್ಲರೂ ಒಂದು ಕರ್ಪೂರ ಹಚ್ಚೋಣ. ನಾನೇನಾದ್ರೂ ತಪ್ಪು ಮಾಡಿದ್ರೆ ಆ ದೇವ್ರು ನಂಗೆ ಶಿಕ್ಷೆ ಕೊಡಲಿ. ಆ ತಾಯಿ ನನ್ನ ನೋಡಿಕೊಳ್ಳಲಿ. ಕರ್ಮ ಅನ್ನೋದು ಯಾರ ಮನೆ ಬಾಗಿಲನ್ನೂ ಬಿಡಲ್ಲ. ಪ್ರಥಮ್ ಅಣ್ಣನಿಗೆ ನಾನೇನಾದ್ರೂ ತೊಂದರೆ ಕೊಟ್ಟಿದ್ರೆ ಆ ದೇವ್ರು ನಂಗೆ ಶಿಕ್ಷೆ ಕೊಡಲಿ. ಅದನ್ನು ನಾನು ಸ್ವೀಕರಿಸುತ್ತೇನೆ ಎಂದು ಹೇಳಿದರು.

    ಕೆಲವರಿಗೆ ನಾನೇನು ಮಾಡಿದ್ರೂ ಸಮಸ್ಯೆ, ಇಲ್ಲಿ ನನ್ನ ಪಾತ್ರವೇ ಇಲ್ಲ. ನನ್ನ ಬಗ್ಗೆ ಸುಮ್ಮನೇ ಅಪಪ್ರಚಾರ ಮಾಡ್ತಿದ್ದಾರೆ. ನನ್ನದಲ್ಲದ ತಪ್ಪಿಗೆ ನನ್ನ ಬಗ್ಗೆ ಮಾತಾಡ್ತಿದ್ದಾರೆ. ರಕ್ಷಕ್ ಜೊತೆ ಹುಡುಗರಿದ್ದರು ಅಂತ ಹೇಳ್ತಿದ್ದಾರೆ. ಇದ್ರಿಂದ ನಂಗೆ ತುಂಬಾ ನೋವಾಗಿದೆ. ನನ್ನ ಮನೆಯವರಿಗೂ ತುಂಬಾ ನೋವಾಗಿದೆ. ಘಟನೆಯ ಬಳಿಕ ನಾನು ಹಾಗೂ ಪ್ರಥಮ್ ಒಟ್ಟಿಗೆ ಚೆನ್ನಾಗಿ ಮಾತನಾಡಿದ್ದೇವೆ ಎಂದು ತಿಳಿಸಿದರು.

    ಏನಿದು ಪ್ರಕರಣ? ದೊಡ್ಡಬಳ್ಳಾಪುರ ದೇವಸ್ಥಾನದ ಬಳಿ ಆಗಿದ್ದೇನು?
    ನಟ ಪ್ರಥಮ್‌ಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ ಬಂದಿದೆ ಅನ್ನೋ ಆಡಿಯೋವೊಂದು ಸ್ಫೋಟಗೊಂಡಿತ್ತು. ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳ ಗುಂಪೊಂದು ಪ್ರಥಮ್‌ಗೆ ಜೀವ ಬೆದರಿಕೆ ಒಡ್ಡಿರುವುದಾಗಿ ತಿಳಿದುಬಂದಿತ್ತು. ಈ ಕುರಿತು ವ್ಯಕ್ತಿಯೊಬ್ಬರೊಂದಿಗೆ ಪ್ರಥಮ್ ಮಾತನಾಡಿರುವ ಆಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

    ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳು ಡ್ಯಾಗ್ರರ್ ತೋರಿಸಿ ನಟನಿಗೆ ಜೀವಬೆದರಿಕೆ ಹಾಕಿದ್ದರು. ಪೂಜೆ ಮುಗಿಸಿ ಹೊರಟ ವೇಳೆ ಕಾರಿಗೆ ಅಡ್ಡಬಂದ ಕೆಲವರು ಪ್ರಥಮ್‌ನನ್ನ ಬಲವಂತವಾಗಿ ಕರೆದೊಯ್ದು, ನಮ್ ಬಾಸ್ ಬಗ್ಗೆ ಮಾತಾಡ್ತಿಯ ಅಂತ ಹಲ್ಲೆಗೆ ಯತ್ನಿಸಿ ಅವಾಚ್ಯವಾಗಿ ನಿಂದಿಸಿ ಬೆದರಿಸಿದ್ದರು. ಆ ಸ್ಥಳದಲ್ಲಿ ಬುಲೆಟ್ ರಕ್ಷಕ್ ಕೂಡ ಇರುವುದಾಗಿ ಹೇಳಿದ್ದರು. ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡು ಬಂದ ಪ್ರಥಮ್ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಅವರನ್ನ ಭೇಟಿಯಾಗಿ ಘಟನೆ ವಿವರಿಸಿದ್ದರು. ಬಳಿಕ ಎಸ್ಪಿ ಸಂಬಂಧಪಟ್ಟ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದರು.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಎಸ್ಪಿ ಸಿಕೆ ಬಾಬಾ, ನಟ ಪ್ರಥಮ್ ಮೇಲೆ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಆರೋಪ ಕೇಳಿಬಂದಿದೆ. ದೇವಸ್ಥಾನಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಅವರನ್ನ ಈಗಾಗಲೇ ಕರೆದು ಮಾತನಾಡಿದ್ದೀನಿ. ಅವರಿಗೆ ದೂರು ಕೊಡೋಕೆ ಹೇಳಿದ್ದೀನಿ. ಇಲ್ಲಿವರೆಗೂ ಯಾವುದೇ ದೂರು ನೀಡಿಲ್ಲ. ದೂರು ಕೊಟ್ಟ ನಂತರ ತನಿಖೆ ಮಾಡಿ ಕ್ರಮ ಕೈಗೊಳ್ತಿವಿ ಎಂದು ಹೇಳಿದ್ದರು.ಇದನ್ನೂ ಓದಿ: ಗೂಂಡಾಗಳನ್ನ ಸಾಕ್ಬೇಡಿ, ಮನೆಯಲ್ಲಿ ನಾಯಿ ಸಾಕಿ, ಒಳ್ಳೆಯವರ ಸಹವಾಸ ಮಾಡಿ – ದರ್ಶನ್‌ಗೆ ಪ್ರಥಮ್‌ ಸ್ಟ್ರೈಟ್‌ ಹಿಟ್‌

  • ಗೂಂಡಾಗಳನ್ನ ಸಾಕ್ಬೇಡಿ, ಮನೆಯಲ್ಲಿ ನಾಯಿ ಸಾಕಿ, ಒಳ್ಳೆಯವರ ಸಹವಾಸ ಮಾಡಿ – ದರ್ಶನ್‌ಗೆ ಪ್ರಥಮ್‌ ಸ್ಟ್ರೈಟ್‌ ಹಿಟ್‌

    ಗೂಂಡಾಗಳನ್ನ ಸಾಕ್ಬೇಡಿ, ಮನೆಯಲ್ಲಿ ನಾಯಿ ಸಾಕಿ, ಒಳ್ಳೆಯವರ ಸಹವಾಸ ಮಾಡಿ – ದರ್ಶನ್‌ಗೆ ಪ್ರಥಮ್‌ ಸ್ಟ್ರೈಟ್‌ ಹಿಟ್‌

    – ನಾನು ಕಂಪ್ಲೆಂಟ್‌ ಕೊಟ್ರೆ ಬೆಂಕಿ ಹೊತ್ತಿಕೊಳ್ಳುತ್ತೆ
    – 2‌,000 ಜನ ಕಾಲ್‌ ಮಾಡಿ ದೂರು ಕೊಡು ಅಂದ್ರು; ಪ್ರಥಮ್‌

    ಬೆಂಗಳೂರು: ತನಗೆ ಜೀವ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿದ್ದ ನಟ ಪ್ರಥಮ್‌ (Actor Pratham), ದರ್ಶನ್‌ ಅಭಿಮಾನಿಗಳ ವಿರುದ್ಧ ರೊಚ್ಚಿಗೆದ್ದಿದ್ದಾರೆ. ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿರುವ ಪ್ರಥಮ್‌ ಕೊಲೆ ಆರೋಪಿ ನಟ ದರ್ಶನ್‌ ಮತ್ತವರ ಅಭಿಮಾನಿಗಳಿಗೆ (Darshan Fans) ನೇರ ಎಚ್ಚರಿಕೆ ಕೊಟ್ಟಿದ್ದಾರೆ.

    ನಮಗೂ ಅಭಿಮಾನಿಗಳಿದ್ದಾರೆ ಸರ್‌
    ದರ್ಶನ್ ಸರ್, ಒಳ್ಳೆಯವ್ರ ಸಹವಾಸ ಇಟ್ಕೊಳ್ಳಿ. ನಿಮ್ಗೆ ಪ್ರೀತಿಯಿಂದ ಹೇಳ್ತಿದಿನಿ ದರ್ಶನ್ (Darshan) ಸರ್. ನಿಮ್ ಹುಡುಗರಿಗೆ ಹೇಳಿ. ನಿಮ್ಗೆ ಫ್ಯಾನ್ಸ್ ಇರುವಂತೆ ನಮಗೂ ಇದ್ದಾರೆ ಸರ್‌, ನಾವು ಪ್ರೀತಿ ಗಳಿಸಿದ್ದೀವಿ ಸರ್. ದರ್ಶನ್ ಜೊತೆ ಇದ್ದವ್ರು ಯೋಗ್ಯರು ಇರಬೇಕು. ನಮ್ಗೆ ಸಮಸ್ಯೆ ಆದ್ರೆ ಸುಮ್ಮನೆ ಇರಲ್ಲ ಅಂತ ವಾರ್ನಿಂಗ್‌ ಕೊಟ್ಟಿದ್ದಾರೆ ಪ್ರಥಮ್‌. ಇದನ್ನೂ ಓದಿ: ಏಯ್‌.. ಗೂಂಡಾಗಿರಿ ಬಿಟ್ಟುಬಿಡಿ, ಬಾಸಿಸಂ ನಡೆಯಲ್ಲ – ದರ್ಶನ್‌ ಫ್ಯಾನ್ಸ್‌ಗೆ ಒಳ್ಳೆ ಹುಡ್ಗ ಪ್ರಥಮ್‌ ವಾರ್ನಿಂಗ್‌

    ದೇವಸ್ಥಾನದಲ್ಲಿ ಕೆಲವರು ಮಾರಾಕಾಸ್ತ್ರಗಳನ್ನ ಇಟ್ಕೊಂಡಿದ್ರು. ಅಲ್ಲಿಯೇ ರಕ್ಷಕ್ ಕೂಡ ಇದ್ರು. ಎಸ್ಪಿಗೆ ಎಲ್ಲಾ ಮಾಹಿತಿ ನೀಡಿದ್ದೇನೆ. ಅವ್ರು ತನಿಖೆ ಮಾಡ್ತಾರೆ. ಆದ್ರೆ ಪ್ರೀತಿಯಿಂದ ಹೇಳ್ತಿದಿನಿ ಸರ್. ನಮ್ಮ ತಂಟೆಗೆ ಬರೋದು ಬೇಡ. ನಿಮ್ಮ ಹುಡ್ಗುರುಗಳಿಗೆ ಹೇಳಿ ಅಂತ ದರ್ಶನ್‌ ಅಭಿಮಾನಿಗಳಿಗೆ ಹೇಳಿ ಅಂತ ವಿನಯದಿಂದಲೇ ಡಿಚ್ಚಿ ಕೊಟ್ಟಿದ್ದಾರೆ. ಇದನ್ನೂ ಓದಿ: ನಟ ಪ್ರಥಮ್‌ಗೆ ಡ್ಯಾಗರ್ ತೋರಿಸಿ ಜೀವಬೆದರಿಕೆ – ಬಾಸ್‌ ಬಗ್ಗೆ ಮಾತಾಡ್ತೀಯಾ ಅಂತ ಅವಾಜ್‌

    2,000 ಜನ ಫೋನ್‌ ಮಾಡಿ ಕಂಪ್ಲೆಂಟ್‌ ಕೊಡಿ ಅಂದ್ರು
    ಡ್ರ್ಯಾಗರ್‌ ಹಿಡಿದು ಬಂದವರು ನಮ್ಮ ಬಾಸ್‌ ಬಗ್ಗೆ ಮಾತನಾಡಬೇಡಿ ಅಂತ ಹೇಳಿದ್ದು ನಿಜ. ಎಸ್ಪಿಗೆ ಹೇಳಿದ್ದೀನಿ, ತನಿಖೆ ಮಾಡ್ತಿದ್ದಾರೆ. ನಾನು ಯಾರ ಹೆಸರನ್ನು ಹೇಳಲ್ಲ. ಜನ ಪ್ರೀತಿ ಕೊಟ್ಟಾಗ ಪ್ರೀತಿಯಿಂದ ನಡೆದುಕೊಳ್ಳಬೇಕು. ನಾನು ಯಾರ ಹೆಸರನ್ನೂ ಯಾಕೆ ಹೇಳ್ತಿಲ್ಲ ಅಂದ್ರೆ, ಅವರ ಮೇಲೆ ಗೌರವ ಇದೆ. 2,000 ಜನ ಫೋನ್‌ ಮಾಡಿ ಕಂಪ್ಲೆಂಟ್‌ ಕೊಡಿ ಅಂತ ಹೇಳಿದ್ರು. ದೂರು ಕೊಟ್ಟರೆ ಬೆಂಕಿ ಹೊತ್ತಿಕೊಳ್ಳುತ್ತೆ ಅಂತ ಹೇಳಿದ್ದಾರೆ. ಇದನ್ನೂ ಓದಿ: Exclusive | ರೇಣುಕಾಸ್ವಾಮಿ ಕೇಸ್‌ – ʻಡಿ ಬಾಸ್‌ʼ ಫ್ಯಾನ್ಸ್‌ ವಿರುದ್ಧ ನಟಿ ರಮ್ಯಾ ಕೆಂಡ

    ಎಚ್ಚೆತ್ತುಕೊಳ್ಳಿ
    ಮುಂದುವರಿದು… ಇಂತಹ ಗೂಂಡಾಗಳನ್ನ ಯಾಕೆ ಸಾಕುತ್ತೀರಾ? ಮನೆಯಲ್ಲಿ ನಾಯಿ ಸಾಕಿ, ಬೆಕ್ಕು, ಗಿಳಿ, ಪಾರಿವಾಳ ಸಾಕಿ, ಇದೆಲ್ಲ ಬೇಡ. ಕಲಾವಿದರು ಕಲಾವಿದರಾಗಿಯೇ ಇರಿ. ನಿಮ್ಮ ಹೆಸರು ದುರ್ಬಳಕೆ ಆಗ್ತಿದೆ ಅಂದಾಗ ಎಚ್ಚೆತ್ತುಕೊಳ್ಳಿ ಅಂತ ದರ್ಶನ್‌ಗೆ ನೇರ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ಶೂಟಿಂಗ್‌ ಮುಗಿಸಿ ಬೆಂಗಳೂರಿಗೆ ನಟ ದರ್ಶನ್ ವಾಪಸ್

    ಏನಿದು ಪ್ರಕರಣ? ದೊಡ್ಡಬಳ್ಳಾಪುರ ದೇವಸ್ಥಾನದ ಬಳಿ ಆಗಿದ್ದೇನು?
    ನಟ ಪ್ರಥಮ್‌ಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ ಬಂದಿದೆ ಅನ್ನೋ ಆಡೊಯೋವೊಂದು ಸ್ಫೋಟಗೊಂಡಿತ್ತು. ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳ ಗುಂಪೊಂದು ಪ್ರಥಮ್‌ಗೆ ಜೀವ ಬೆದರಿಕೆ ಒಡ್ಡಿರುವುದಾಗಿ ತಿಳಿದುಬಂದಿತ್ತು. ಈ ಕುರಿತು ವ್ಯಕ್ತಿಯೊಬ್ಬರೊಂದಿಗೆ ಪ್ರಥಮ್ ಮಾತನಾಡಿರುವ ಆಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳು ಡ್ಯಾಗ್ರರ್ ತೋರಿಸಿ ನಟನಿಗೆ ಜೀವಬೆದರಿಕೆ ಹಾಕಿದ್ದರು. ಪೂಜೆ ಮುಗಿಸಿ ಹೊರಟ ವೇಳೆ ಕಾರಿಗೆ ಅಡ್ಡಬಂದ ಕೆಲವರು ಪ್ರಥಮ್‌ನನ್ನ ಬಲವಂತವಾಗಿ ಕರೆದೊಯ್ದು, ನಮ್ ಬಾಸ್ ಬಗ್ಗೆ ಮಾತಾಡ್ತಿಯ ಅಂತ ಹಲ್ಲೆಗೆ ಯತ್ನಿಸಿ ಅವಾಚ್ಯವಾಗಿ ನಿಂದಿಸಿ ಬೆದರಿಸಿದ್ದಾರೆ. ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡು ಬಂದ ಪ್ರಥಮ್ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಅವರನ್ನ ಭೇಟಿಯಾಗಿ ಘಟನೆ ವಿವರಿಸಿದ್ದರು. ಬಳಿಕ ಎಸ್ಪಿ ಸಂಬಂಧಪಟ್ಟ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದರು.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಎಸ್ಪಿ ಸಿಕೆ ಬಾಬಾ, ನಟ ಪ್ರಥಮ್ ಮೇಲೆ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಆರೋಪ ಕೇಳಿಬಂದಿದೆ. ದೇವಸ್ಥಾನಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಅವರನ್ನ ಈಗಾಗಲೇ ಕರೆದು ಮಾತನಾಡಿದ್ದೀನಿ. ಅವರಿಗೆ ದೂರು ಕೊಡೋಕೆ ಹೇಳಿದ್ದೀನಿ. ಇಲ್ಲಿವರೆಗೂ ಯಾವುದೇ ದೂರು ನೀಡಿಲ್ಲ. ದೂರು ಕೊಟ್ಟ ನಂತರ ತನಿಖೆ ಮಾಡಿ ಕ್ರಮ ಕೈಗೊಳ್ತಿವಿ ಎಂದು ಹೇಳಿದ್ದರು.

  • ಏಯ್‌.. ಗೂಂಡಾಗಿರಿ ಬಿಟ್ಟುಬಿಡಿ, ಬಾಸಿಸಂ ನಡೆಯಲ್ಲ – ದರ್ಶನ್‌ ಫ್ಯಾನ್ಸ್‌ಗೆ ಒಳ್ಳೆ ಹುಡ್ಗ ಪ್ರಥಮ್‌ ವಾರ್ನಿಂಗ್‌

    ಏಯ್‌.. ಗೂಂಡಾಗಿರಿ ಬಿಟ್ಟುಬಿಡಿ, ಬಾಸಿಸಂ ನಡೆಯಲ್ಲ – ದರ್ಶನ್‌ ಫ್ಯಾನ್ಸ್‌ಗೆ ಒಳ್ಳೆ ಹುಡ್ಗ ಪ್ರಥಮ್‌ ವಾರ್ನಿಂಗ್‌

    – ದರ್ಶನ್‌ ಸರ್‌ ಒಳ್ಳೆಯವರ ಸಹವಾಸ ಮಾಡಿ; ನಯವಾಗಿಯೇ ಟಾಂಗ್‌ ಕೊಟ್ಟ ನಟ

    ಬೆಂಗಳೂರು: ಗೂಂಡಾಗಿರಿ ಬಿಟ್ಟುಬಿಡಿ.. ಬಾಸಿಸಂ ನಡೆಯಲ್ಲ… ಈ ಪ್ರಥಮ್‌ನ ಯಾರಿಂದನೂ ಹೆದರಿಸೋಕೆ ಆಗಲ್ಲ ಅಂತ ನಟ ಒಳ್ಳೆ ಹುಡುಗ ಪ್ರಥಮ್‌ (Pratham) ದರ್ಶನ್‌ ಅಭಿಮಾನಿಗಳಿಗೆ (Darshan Fans) ವಾರ್ನಿಂಗ್‌ ಕೊಟ್ಟಿದ್ದಾರೆ.

    ಯೆಸ್‌. ಪ್ರಥಮ್‌ಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ ಬಂದಿತ್ತು. ದೊಡ್ಡಬಳ್ಳಾಪುರ (Doddaballapura) ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳ ಗುಂಪೊಂದು ಡ್ರ್ಯಾಗರ್‌ ತೋರಿಸಿ ಪ್ರಥಮ್‌ಗೆ ಜೀವ ಬೆದರಿಕೆ ಒಡ್ಡಿತ್ತು. ದರ್ಶನ್‌ ಅಭಿಮಾನಿಗಳು ಅಂತ ಹೇಳಿಕೊಂಡು ಕೆಲವರು ಬೆದರಿಕೆ ಹಾಕಿದ್ದರು ಎಂಬುದಾಗಿ ನಟ ಆರೋಪ ಮಾಡಿದ್ದರು. ಈ ಕುರಿತು ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿರುವ ಪ್ರಥಮ್‌, ದರ್ಶನ್‌ ಅಭಿಮಾನಿಗಳಿಗೆ ನಯವಾಗಿಯೇ ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ನಟ ಪ್ರಥಮ್‌ಗೆ ಡ್ಯಾಗರ್ ತೋರಿಸಿ ಜೀವಬೆದರಿಕೆ – ಬಾಸ್‌ ಬಗ್ಗೆ ಮಾತಾಡ್ತೀಯಾ ಅಂತ ಅವಾಜ್‌

    ಗೂಂಡಾಗಿರಿ ಬಿಟ್ಟುಬಿಡಿ.. ಬಾಸಿಸಂ ನಡೆಯಲ್ಲ.. ಪ್ರಥಮ್‌ನ ಯಾರಿಂದನೂ ಹೆದರಿಸೋಕೆ ಆಗಲ್ಲ. ಎಲ್ಲಾ ಹೆಸ್ರುಗಳು ಹೇಳಿದ್ರೆ ಇಷ್ಟೊತ್ತಿಗೆ ಏನೇನೋ ಆಗ್ತಿತ್ತು. ಬೆಂಕಿ ಹೊತ್ತಿಕೊಳ್ತಿತ್ತು. ದರ್ಶನ್ ಸರ್ ನಿಮ್ ಹುಡುಗ್ರುಗೆ ಹೇಳಿ. ಇಲ್ಲಿಯವರೆಗೆ ಪ್ರಥಮ್ ಹಾಸ್ಯ, ತುಂಟಾಟ ಮಾತ್ರ ನೋಡಿದ್ದಾರೆ. ಹಾಗೆಯೇ ನೋಡಿದ್ರೆ ಚೆಂದ. ಪ್ರೀತಿಯಿಂದ ಹೇಳ್ತಿದ್ದೀನಿ ಸರ್‌.. ನಿಮ್ಮ ಅಭಿಮಾನಿಗಳಿಗೆ ಹೇಳಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುತ್ತೆ ಎಂದು ನಂಬಿದ್ದೇನೆ: ರಮ್ಯಾ

    ದರ್ಶನ್‌ ಹೆಸರನ್ನ ಮಿಸ್‌ಯೂಸ್‌ ಮಾಡಿಕೊಳ್ತಿದ್ದಾರೆ
    ದರ್ಶನ್ ಹೆಸರನ್ನ ಅಭಿಮಾನಿಗಳು ಮಿಸ್ ಯೂಸ್ ಮಾಡಿಕೊಳ್ತಿದ್ದಾರೆ. ಬಾಸ್ ಇಸಂ ಕನ್ನಡದಲ್ಲಿ ನಡೆಯಲ್ಲ. ಕರ್ನಾಟಕದಲ್ಲಿ ಕನ್ನಡ ಬಾಸ್‌… ಕನ್ನಡಿಗರು ನನಗೆ ಬಾಸ್‌.. ಅವರವರ ಅಪ್ಪ-ಅಮ್ಮ ಅವರಿಗೆ ಬಾಸ್‌. ಯಾರಾದ್ರೂ ಯಾರಾದ್ರೂ ಮೀಡಿಯಾಗೆ ಏನ್ರಿ ಮೀಡಿಯಾ ಅಂದ್ರೆ… ಕಿರಿಟಕ್ಕೆ ಸಮಾನ ಅನ್ನಬೇಕು ಕಲಾವಿದರು. ಮೀಡಿಯಾದಿಂದ ಅನ್ನ ತಿಂತಿದಿವಿ ಅಂತ ದರ್ಶನ್‌ ಅಭಿಮಾನಿಗಳನ್ನ ಕುಟುಕಿದ್ದಾರೆ. ಇದನ್ನೂ ಓದಿ: Exclusive | ರೇಣುಕಾಸ್ವಾಮಿ ಕೇಸ್‌ – ʻಡಿ ಬಾಸ್‌ʼ ಫ್ಯಾನ್ಸ್‌ ವಿರುದ್ಧ ನಟಿ ರಮ್ಯಾ ಕೆಂಡ

    ದರ್ಶನ್ ಸರ್ ವಿ ಲವ್‌ ಯು ಸರ್‌, ನೀವು ಚೆನ್ನಾಗಿ ಬದುಕಿ ಎಂದರಲ್ಲದೇ ಶಿವಣ್ಣ, ಸುದೀಪ್‌ಗೆ ಒಳ್ಳೆದಾಗ್ಲಿ. ಅವ್ರು ದೊಡ್ಡ ಕಲಾವಿದರು ಎನ್ನುತ್ತಲೇ ದರ್ಶನ್‌ಗೆ ತಿವಿದಿದ್ದಾರೆ. ರಕ್ಷಕ್ ನನ್ನ ಸ್ನೇಹಿತ.. ತಮ್ಮ.. ಅವನು ಕಲಿತುಕೊಳ್ತಾನೆ. ದರ್ಶನ್‌ ಸರ್‌ ನಿಮ್ಮ ಹಡುಗ್ರುಗೆ ಸರಿಯಾಗಿ ಇರೋಕೆ ಹೇಳಿ ದರ್ಶನ್ ಸರ್. ನಮ್ಗೂ ಬದುಕು ಮುಖ್ಯ. ಪ್ರಥಮ್ ಕೋಪ ಮಾಡಿಕೊಂಡ್ರೆ… ಎಚ್ಚರಿಕೆ ಕೊಟ್ಟಿದ್ದಾರೆ.

    ಅಲ್ಲಿ ಏನಾಯ್ತು ಅಂತ ಹೇಳಿಕೆ ಕೊಟ್ರೆ ಬೇರೆ ಏನೇನೋ ಆಗುತ್ತೆ. ದರ್ಶನ್ ಸರ್ ಯೋಗ್ಯರ ಸಹವಾಸ ಮಾಡಿ. ಗೂಂಡಾಗಳನ್ನ ಸಾಕುವ ಬದಲು ಮನೆಯಲ್ಲಿ ನಾಯಿ ಸಾಕಿ, ಗಿಳಿ ಸಾಕಿ, ಪಾರಿವಾಳ ಸಾಕಿ ಅಂತ ಕುಟುಕಿದ್ದಾರೆ. ಇದನ್ನೂ ಓದಿ: ಡಾರ್ಲಿಂಗ್ ಕೃಷ್ಣ ಅಭಿನಯದ ಬ್ರ್ಯಾಟ್ ಚಿತ್ರದ ʻನಾನೇ ನೀನಂತೆʼ ಹಾಡಿಗೆ ಮೆಚ್ಚುಗೆಯ ಸುರಿಮಳೆ

    ಏನಿದು ಪ್ರಕರಣ? ದೊಡ್ಡಬಳ್ಳಾಪುರ ದೇವಸ್ಥಾನದ ಬಳಿ ಆಗಿದ್ದೇನು?
    ನಟ ಪ್ರಥಮ್‌ಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ ಬಂದಿದೆ ಅನ್ನೋ ಆಡೊಯೋವೊಂದು ಸ್ಫೋಟಗೊಂಡಿತ್ತು. ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳ ಗುಂಪೊಂದು ಪ್ರಥಮ್‌ಗೆ ಜೀವ ಬೆದರಿಕೆ ಒಡ್ಡಿರುವುದಾಗಿ ತಿಳಿದುಬಂದಿತ್ತು. ಈ ಕುರಿತು ವ್ಯಕ್ತಿಯೊಬ್ಬರೊಂದಿಗೆ ಪ್ರಥಮ್ ಮಾತನಾಡಿರುವ ಆಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳು ಡ್ಯಾಗ್ರರ್ ತೋರಿಸಿ ನಟನಿಗೆ ಜೀವಬೆದರಿಕೆ ಹಾಕಿದ್ದರು. ಪೂಜೆ ಮುಗಿಸಿ ಹೊರಟ ವೇಳೆ ಕಾರಿಗೆ ಅಡ್ಡಬಂದ ಕೆಲವರು ಪ್ರಥಮ್‌ನನ್ನ ಬಲವಂತವಾಗಿ ಕರೆದೊಯ್ದು, ನಮ್ ಬಾಸ್ ಬಗ್ಗೆ ಮಾತಾಡ್ತಿಯ ಅಂತ ಹಲ್ಲೆಗೆ ಯತ್ನಿಸಿ ಅವಾಚ್ಯವಾಗಿ ನಿಂದಿಸಿ ಬೆದರಿಸಿದ್ದಾರೆ. ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡು ಬಂದ ಪ್ರಥಮ್ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಅವರನ್ನ ಭೇಟಿಯಾಗಿ ಘಟನೆ ವಿವರಿಸಿದ್ದರು. ಬಳಿಕ ಎಸ್ಪಿ ಸಂಬಂಧಪಟ್ಟ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದರು.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಎಸ್ಪಿ ಸಿಕೆ ಬಾಬಾ, ನಟ ಪ್ರಥಮ್ ಮೇಲೆ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಆರೋಪ ಕೇಳಿಬಂದಿದೆ. ದೇವಸ್ಥಾನಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಅವರನ್ನ ಈಗಾಗಲೇ ಕರೆದು ಮಾತನಾಡಿದ್ದೀನಿ. ಅವರಿಗೆ ದೂರು ಕೊಡೋಕೆ ಹೇಳಿದ್ದೀನಿ. ಇಲ್ಲಿವರೆಗೂ ಯಾವುದೇ ದೂರು ನೀಡಿಲ್ಲ. ದೂರು ಕೊಟ್ಟ ನಂತರ ತನಿಖೆ ಮಾಡಿ ಕ್ರಮ ಕೈಗೊಳ್ತಿವಿ ಎಂದು ಹೇಳಿದ್ದರು.

  • ನಟ ಪ್ರಥಮ್‌ಗೆ ಡ್ಯಾಗರ್ ತೋರಿಸಿ ಜೀವಬೆದರಿಕೆ – ಬಾಸ್‌ ಬಗ್ಗೆ ಮಾತಾಡ್ತೀಯಾ ಅಂತ ಅವಾಜ್‌

    ನಟ ಪ್ರಥಮ್‌ಗೆ ಡ್ಯಾಗರ್ ತೋರಿಸಿ ಜೀವಬೆದರಿಕೆ – ಬಾಸ್‌ ಬಗ್ಗೆ ಮಾತಾಡ್ತೀಯಾ ಅಂತ ಅವಾಜ್‌

    – ಈವರೆಗೂ ದೂರು ಕೊಡದ ನಟ

    ಬೆಂಗಳೂರು: ನಟ ಪ್ರಥಮ್‌ಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ ಬಂದಿದೆ. ಸಿನಿ ಚಿತ್ರೀಕರಣವೊಂದಕ್ಕೆ ತೆರಳೋದಕ್ಕೂ ಮುನ್ನ ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳ ಗುಂಪೊಂದು ಪ್ರಥಮ್‌ಗೆ (Olle Hudga Pratham) ಜೀವ ಬೆದರಿಕೆ ಒಡ್ಡಿರುವುದಾಗಿ ತಿಳಿದುಬಂದಿದೆ.

    ಈ ಕುರಿತು ವ್ಯಕ್ತಿಯೊಬ್ಬರೊಂದಿಗೆ ಪ್ರಥಮ್‌ ಮಾತನಾಡಿರುವ ಆಡಿಯೋ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ (Doddaballapura Temple) ಹೋಗಿದ್ದ ವೇಳೆ ದುಷ್ಕರ್ಮಿಗಳು ಡ್ಯಾಗ್ರರ್‌ ತೋರಿಸಿ ನಟನಿಗೆ ಜೀವಬೆದರಿಕೆ ಹಾಕಿದ್ದಾರೆ. ಪೂಜೆ ಮುಗಿಸಿ ಹೊರಟ ವೇಳೆ ಕಾರಿಗೆ ಅಡ್ಡಬಂದ ಕೆಲವರು ಪ್ರಥಮ್‌ನನ್ನ ಬಲವಂತವಾಗಿ ಕರೆದೊಯ್ದು, ನಮ್ ಬಾಸ್ ಬಗ್ಗೆ ಮಾತಾಡ್ತಿಯ ಅಂತ ಹಲ್ಲೆಗೆ ಯತ್ನಿಸಿ ಅವಾಚ್ಛವಾಗಿ ನಿಂದಿಸಿ ಬೆದರಿಸಿದ್ದಾರೆ. ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡ ಬಂದ ಪ್ರಥಮ್ ಬೆಂಗಳೂರು ಗ್ರಾಮಾಂತರ ಎಸ್ಪಿ (Bengaluru Rural SP) ಸಿಕೆ ಬಾಬಾ ಅವರನ್ನ ಭೇಟಿಯಾಗಿ ಘಟನೆ ವಿವರಿಸಿದ್ದಾರೆ. ಬಳಿಕ ಎಸ್ಪಿ ಸಂಬಂಧಪಟ್ಟ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ 10 ವರ್ಷ ಸಿಎಂ ಆಗ್ಬಿಟ್ರೆ ತಾಯಿ ಚಾಮುಂಡಿಗಿಂತ ದೊಡ್ಡವರಾಗಿಬಿಡ್ತಾರೆ: ಪ್ರತಾಪ್‌ ಸಿಂಹ ಕಿಡಿ

    ಈವರೆಗೂ ದೂರು ಕೊಡದ ನಟ
    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಎಸ್ಪಿ ಸಿಕೆ ಬಾಬಾ, ನಟ ಪ್ರಥಮ್ ಮೇಲೆ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಆರೋಪ ಕೇಳಿಬಂದಿದೆ. ದೇವಸ್ಥಾನಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಅವರನ್ನ ಈಗಾಗಲೇ ಕರೆದು ಮಾತನಾಡಿದ್ದೀನಿ. ಅವರಿಗೆ ದೂರು ಕೊಡೋಕೆ ಹೇಳಿದ್ದೀನಿ. ಇಲ್ಲಿವರೆಗೂ ಯಾವುದೇ ದೂರು ನೀಡಿಲ್ಲ. ದೂರು ಕೊಟ್ಟ ನಂತರ ತನಿಖೆ ಮಾಡಿ ಕ್ರಮ ಕೈಗೊಳ್ತಿವಿ ಎಂದು ಹೇಳಿದ್ದಾರೆ. ಇದನ್ನೂ ಓದಿ ಶಿವಲಿಂಗೇಗೌಡ್ರು ನಮ್ಮನೆಗೆ, ಸಿಎಂ ಮನೆಗೆ ತಿರುಗಿ 4 ಜೊತೆ ಚಪ್ಪಲಿ ಸವೆಸಿದ್ದಾರೆ: ಡಿ.ಕೆ ಶಿವಕುಮಾರ್

  • ಊರಲ್ಲಿ ವ್ಯವಸಾಯ ಮಾಡ್ತೀನಿ – ಚಿತ್ರರಂಗಕ್ಕೆ ಪ್ರಥಮ್ ಗುಡ್‍ಬೈ?

    ಊರಲ್ಲಿ ವ್ಯವಸಾಯ ಮಾಡ್ತೀನಿ – ಚಿತ್ರರಂಗಕ್ಕೆ ಪ್ರಥಮ್ ಗುಡ್‍ಬೈ?

    ಬೆಂಗಳೂರು: ಒಳ್ಳೆ ಹುಡುಗ ಪ್ರಥಮ್ ಸಿನಿಮಾ ರಂಗಕ್ಕೆ ಗುಡ್‍ಬೈ ಹೇಳಲು ತೀರ್ಮಾನಿಸಿದ್ದು, `ನಟಭಯಂಕರ’ ನನ್ನ ಕೊನೆಯ ಸಿನಿಮಾ. ಮುಂದೇ ಸ್ವಗ್ರಾಮಕ್ಕೆ ತೆರಳಿ ವ್ಯವಸಾಯ ಮಾಡಲು ನಿರ್ಧಾರಿಸಿರುವುದ್ದಾಗಿ ತಿಳಿಸಿದ್ದಾರೆ.

    ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಕುರಿತು ಬರೆದು ಕೊಂಡಿರುವ ಪ್ರಥಮ್, ಬೆಂಗಳೂರಿನ ಯಾಂತ್ರಿಕ ಬದುಕು ಸಾಕಾಗಿದೆ. ಮನೆಯಲ್ಲಿ ಮದುವೆ ವಿಚಾರ ಕುರಿತು ಚರ್ಚೆ ನಡೆಯುತ್ತಿದ್ದು, ಅದಷ್ಟು ಬೇಗ ಊರಿನಲ್ಲಿ ಸೆಟ್ಲ್ ಆಗೋಣ ಎಂದು ಚಿಂತನೆ ನಡೆಸಿದ್ದಾಗಿ ಹೇಳಿದ್ದಾರೆ.

    ಎಫ್‍ಬಿ ಪೋಸ್ಟ್ ನಲ್ಲಿ ಏನಿದೆ?
    ತುಂಬಾ ಮುಖ್ಯವಾದ ವಿಚಾರ. ನಟಭಯಂಕರ ಚಿತ್ರವು ಬಹಳ ಅದ್ಧೂರಿಯಾಗಿ, ಅಚ್ಚುಕಟ್ಟಾಗಿ ಬರುತ್ತಿದ್ದು, ಬಹಳ ಮುಖ್ಯವಾಗಿ ಇದು ನನ್ನ ಚಿತ್ರರಂಗದ ಕೊನೆಯ ಸಿನಿಮಾ. ಬೆಂಗಳೂರಿನ ಯಾಂತ್ರಿಕ ಬದುಕು ಸಾಕಾಗಿದೆ. ಊರಿನಲ್ಲಿ ವ್ಯವಸಾಯ ಮಾಡುವ ನಿರ್ಧಾರ ಮಾಡಲಾಗಿದೆ. ಇದರ ಜೊತೆಗೆ ನನ್ನ ಮದುವೆ ವಿಚಾರವೂ ಮನೆಯಲ್ಲಿ ತುಂಬಾ ಚರ್ಚೆ ನಡೆಯುತ್ತಿದ್ದು, ಮದುವೆ ಆಗುವ ಮುನ್ನವೇ ಊರಿನಲ್ಲಿ ಸೆಟ್ಲ್ ಆಗೋಣ ಎನ್ನುವುದು ಮನೆಯವರ ಎಲ್ಲರ ಆಸೆ. ಈಗಾಗಲೇ ತೋಟದಲ್ಲಿ 200 ತೆಂಗಿನ ಸಸಿಗಳನ್ನ ನೆಟ್ಟು ಮಾದರಿ ರೈತನಾಗಬೇಕೆಂದು ಅದರ ಕಡೆ ಪ್ರಯತ್ನ ಮಾಡುತ್ತಿದ್ದೇನೆ.

    ಬೆಂಗಳೂರು ಬೋರಾಗಿದೆ. ಇದೇ ಕಡೇ ಸಿನಿಮಾ ನಮ್ಮ ಮನೆಯವರ ಒತ್ತಡಕ್ಕೆ ಮಣಿದು ಮದುವೆ ಆಗುವುದರ ಬಗ್ಗೆ ಚಿಂತಿಸುತ್ತಿದ್ದೀನಿ. ನಮ್ಮ ಗುರುಗಳು ಶ್ರೀಕಾಂತ್ ಪ್ರೇಮ ಕುಮಾರ್ ಸರ್ ಮತ್ತು ಸೂರಪ್ಪಬಾಬು ನಿರ್ಮಾಪಕರ ಸಂಘದ ಅಧ್ಯಕ್ಷರು ಸುಮ್ನೆ ಬೆಂಗಳೂರಲ್ಲಿ ಇದ್ದು ಕೆಲಸ ಮಾಡು. ಎಲ್ಲಿಗೂ ಹೋಗಬೇಡ ಎಂದು ಹೇಳಿದ್ದಾರೆ. ಒಂದು ಸಿನಿಮಾದಿಂದ ನೂರು ಜನ ಅನ್ನ ತಿನ್ನುತ್ತಾರೆ. ಬಾಯ್ ಮುಚ್ಚಿಕೊಂಡು ನನ್ನ ಮಾತು ಕೇಳು. ಬೆಂಗಳೂರಲ್ಲೇ ಸಿನಿಮಾ ಮಾಡು ಅಂದಿದ್ದಾರೆ. ನೋಡೋಣ… ನನಗಂತೂ ದೇವ್ರಾಣೆ ಬೆಂಗಳೂರಿನ ಯಾಂತ್ರಿಕ ಬದುಕು ಸಾಕಾಗಿದೆ ಎಂದು ಬರೆದುಕೊಂಡಿದ್ದಾರೆ.

    ಇತ್ತ ಸಾಮಾಜಿಕ ಜಾಲತಾಣದಲ್ಲಿ ಪ್ರಥಮ್ ಅವರ ತೀರ್ಮಾನದ ಕುರಿತು ಭಾರೀ ಚರ್ಚೆ ನಡೆಯುತ್ತಿದ್ದು, ನಿಮಗೆ ಮೀಟೂ ಭಯವೇ? ಅದಕ್ಕೆ ಚಿತ್ರರಂಗ ಬಿಡುವ ನಿರ್ಧಾರ ಮಾಡಿದ್ದೀರಾ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಲೆಕ್ಷನ್‍ಗೆ ನಿಂತು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ `ಎಂಎಲ್‍ಎ’ ಪ್ರಥಮ್

    ಎಲೆಕ್ಷನ್‍ಗೆ ನಿಂತು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ `ಎಂಎಲ್‍ಎ’ ಪ್ರಥಮ್

    ಬೆಂಗಳೂರು: ಸೆಟ್ಟೇರಿದಾಗಿನಿಂದಲೂ ಸಿನಿ ಅಂಗಳದಲ್ಲಿ ತನ್ನದೇ ಚಾಪನ್ನು ಹುಟ್ಟುಹಾಕಿದ್ದ ಪ್ರಥಮ್ ಅಭಿನಯದ ಎಂಎಲ್‍ಎ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

    ಪುನೀತ್ ರಾಜ್ ಕುಮಾರ್ ಒಡೆತನದ ಆಡಿಯೋ ಪಿಆರ್‌ಕೆ ಸಂಸ್ಥೆ ಮೂಲಕ ಎಂಎಲ್‍ಎ ಚಿತ್ರ ಟ್ರೇಲರ್ ಬಿಡುಗಡೆಯಾಗಿದ್ದು, ಈಗಾಗಲೇ 39 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ `ಎಂಎಲ್‍ಎ’ ಚಿತ್ರದ ಹಾಡುಗಳು ಹಿಟ್ ಆಗಿದ್ದು, ಸದ್ಯ ಬಿಡುಗಡೆಯಾಗಿರುವ ಟ್ರೈಲರ್ ನಲ್ಲಿ ಪ್ರಥಮ್ ಅವರ ತುಂಟಾಟ, ಚೇಷ್ಠೆಗಳು ಗಮನ ಸೆಳೆದಿದೆ.

    ಟ್ರೇಲರ್ ನಲ್ಲಿ ತಮ್ಮ ವಿಭಿನ್ನ ಅಭಿನಯದ ಮೂಲಕ ಪ್ರಥಮ್ ಗಮನ ಸೆಳೆದಿದ್ದು, ಚಿತ್ರ ಸಂಪೂರ್ಣ ಭರಪೂರ ಮನರಂಜನೆ ನೀಡುವ ವಿಶ್ವಾಸ ಮೂಡಿಸಿದೆ. ಈ ಹಿಂದೆ ಚಿತ್ರದ ಹಾಡುಗಳ ಬಿಡುಗಡೆ ಮಾಡಿ ಅಭಿಮಾನಿಗಳ ಮನಗೆದ್ದಿದ್ದ ಚಿತ್ರತಂಡವನ್ನು ನಟ ದರ್ಶನ್, ಯಶ್ ಸೇರಿದಂತೆ ಅನೇಕರು ಹಾಡುಗಳನ್ನು ಮೆಚ್ಚಿಕೊಂಡಿದ್ದರು. ಬಳಿಕ ಮತ್ತೊಂದು ವಿಶೇಷ ಹಾಡನ್ನು ಆಕ್ಷನ್ ಪ್ರಿನ್ಸ್ ಧೃವ ಸರ್ಜಾ ಅವರ ಮೂಲಕ ಬಿಡುಗಡೆ ಮಾಡಿಸಿ ಪ್ರಥಮ್ ಸುದ್ದಿಯಾಗಿದ್ದರು.

    ಚಿತ್ರಕ್ಕೆ ವೆಂಕಟೇಶ್ ರೆಡ್ಡಿ ಬಂಡವಾಳ ಹಾಕಿದ್ದು, ಆರ್ಯ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾಗೆ ಕೃಷ್ಣ ಸಾರಥಿ ಛಾಯಾಗ್ರಹಣವನ್ನ ಹೊಂದಿದ್ದು, ವಿಕ್ರಮ್ ಸುಬ್ರಹ್ಮಣ್ಯ ಸಂಗೀತ ನೀಡಿದ್ದಾರೆ. ಇನ್ನು ಚಿತ್ರದ ನಾಯಕಿಯಾಗಿ ಸೋನಾಲ್ ಮಾಂಟೇರಿಯೋ ಕಾಣಿಸಿಕೊಂಡಿದ್ದು, ಉಳಿದಂತೆ ಮಾಳವಿಕಾ ಅವಿನಾಶ್, ಚಂದ್ರಕಲಾ ಮತ್ತಿತರರು ಅಭಿನಯಿಸಿದ್ದಾರೆ.