Tag: Actor Prabhas

  • ಸಲಾರ್ ಸಿನಿಮಾಕ್ಕಿದೆ ಮೈಸೂರಿನ ಲಿಂಕ್

    ಸಲಾರ್ ಸಿನಿಮಾಕ್ಕಿದೆ ಮೈಸೂರಿನ ಲಿಂಕ್

    ಬೆಂಗಳೂರು: ಟಾಲಿವುಡ್ ನಟ ಪ್ರಭಾಸ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇದೆ. ಆರಂಭದಿಂದಲೂ ಬಜೆಟ್ ವಿಚಾರಕ್ಕೆ ಸದ್ದು ಮಾಡುತ್ತಿರುವ ಈ ಸಿನಿಮಾ ಬಗ್ಗೆ ಹೊಸ ಅಪ್‍ಡೇಟ್ ಸಿಕ್ಕಿದೆ.

    ಕೊರೊನಾ ಲಾಕ್‍ಡೌನ್ ನಂತರ ಸಲಾರ್ ಚಿತ್ರದ ಶೂಟಿಂಗ್ ಮತ್ತೆ ಆರಂಭಗೊಂಡಿದೆ. ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿವೆ. ಸಿನಿಮಾ ಸೆಟ್ ಫೋಟೋಗಳು ಲೀಕ್ ಆಗಿವೆ. ಇದರಲ್ಲಿ ಪ್ರಭಾಸ್  ಬೈಕ್ ಸಾಕಷ್ಟು ಗಮನ ಸೆಳೆಯುತ್ತಿದೆ.

    1970 ಮೈಸೂರು ರಾಜ್ಯದಲ್ಲಿದ್ದ ಎಂಇಸಿ ನಂಬರ್ ಪ್ಲೇಟ್ ಇರುವ ಜಾವಾ ಬೈಕ್ ಎಲ್ಲರ ಗಮನ ಸೆಳೆಯುತ್ತಿದೆ. 1970ರ ಕಾಲಘಟ್ಟದ ಕಥೆಯನ್ನು ಸಿನಿಮಾ ಹೇಳಲಿದೆ ಎಂದು ಮೂಲಗಳು ತಿಳಿಸಿವೆ. ಬೈಕ್ ನಂಬರ್ ಪ್ಲೇಟ್ ಮೇಲೆ ಎಂಇಸಿ 6987 ಎಂದಿದೆ. ಸದ್ಯ, ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿವೆ.

     

    ಕೆಜಿಎಫ್ ಚಿತ್ರ ರೆಟ್ರೋ ಲುಕ್‍ನಲ್ಲಿ ಮೂಡಿ ಬಂದಿತ್ತು. ಇದನ್ನು ನಿರ್ದೇಶಕ ಪ್ರಶಾಂತ್ ನೀಲ್ ಅದ್ಭುತವಾಗಿ ಕಟ್ಟಿ ಕೊಟ್ಟಿದ್ದರು. ಈಗ ಸಲಾರ್ ಚಿತ್ರ ಕೂಡ ರೆಟ್ರೋ ಶೈಲಿಯಲ್ಲೇ ಮೂಡಿ ಬರುತ್ತಿದ್ದು, ಕಥೆಗೆ ಮೈಸೂರಿನ ಲಿಂಕ್ ಕೊಟ್ಟಿರೋದು ಸಾಕಷ್ಟು ಕುತೂಹಲ ಮೂಡಿಸಿದೆ.

  • ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಮದುವೆಯಾಗುವ ಹುಡುಗಿ ಇವರೇನಾ?

    ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಮದುವೆಯಾಗುವ ಹುಡುಗಿ ಇವರೇನಾ?

    ಹೈದರಾಬಾದ್: ಟಾಲಿವುಡ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಕಡೆಸಿಕೊಂಡಿರುವ ನಟ ಪ್ರಭಾಸ್ ಮದುವೆ ವಿಚಾರ ಪದೇ ಪದೇ ಸುದ್ದಿಯಾಗುತ್ತಿದೆ. ಆದರೆ ಇತ್ತೀಚೆಗೆ ಪ್ರಭಾಸ್ ಕುಟುಂಬದ ವ್ಯಕ್ತಿಯೊಬ್ಬರು ಮದುವೆ ಸಿದ್ಧತೆ ನಡೆಯುತ್ತಿದೆ ಎಂಬ ವಿಚಾರವನ್ನು ಹೊರಹಾಕಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಮಾಧ್ಯಮ ವರದಿ ಅನ್ವಯ ಪ್ರಭಾಸ್ ಯುಎಸ್ ನಲ್ಲಿ ವಾಸಿಸುತ್ತಿರುವ ಯುವತಿಯ ಕೈ ಹಿಡಿಯಲಿದ್ದಾರೆ. ಯುವತಿಯ ಕುಟುಂಬಸ್ಥರು ಪ್ರಭಾಸ್ ಕುಟುಂಬಕ್ಕೆ ಆತ್ಮೀಯರು ಎನ್ನಲಾಗಿದೆ. ಅಮೆರಿಕದಲ್ಲಿ ಉದ್ಯಮ ನಡೆಸುತ್ತಿರುವ ವ್ಯಕ್ತಿಯೊಬ್ಬರ ಪುತ್ರಿಯಾಗಿರುವ ಯುವತಿಯನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ. ಪ್ರಭಾಸ್ ಕುಟುಂಬಸ್ಥರು ಈಗಾಗಲೇ ಮಾತುಕತೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಪ್ರಭಾಸ್ ಕುಟುಂಬಸ್ಥರು ಯಾವುದೇ ಅಧಿಕೃತ ಹೇಳಿಕೆಯನ್ನ ನೀಡಿಲ್ಲ.

    ಬಾಹುಬಲಿ ಬಳಿಕ ನಟ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಮದುವೆಯಾಗುತ್ತಾರೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಆದರೆ ಈ ವರದಿಗಳನ್ನು ಇಬ್ಬರು ನಿರಾಕರಿಸಿ ನಾವು ಕೇವಲ ಸ್ನೇಹಿತರಷ್ಟೇ ಎಂದಿದ್ದರು. ಕಳೆದ ವರ್ಷ ಪ್ರಭಾಸ್ ಮದುವೆ ಕುರಿತು ಪ್ರತಿಕ್ರಿಯೆ ನೀಡಿದ್ದ ಅವರ ದೊಡ್ಡಪ್ಪ ಕೃಷ್ಣಂ ರಾಜು, ಇದು ನಮ್ಮ ಕುಟುಂಬದ ವಿಚಾರವಾಗಿದ್ದು, ಇದನ್ನು ಬಹಿರಂಗವಾಗಿ ಚರ್ಚೆ ಮಾಡಲು ಇಷ್ಟಪಡುವುದಿಲ್ಲ. ಆದರೆ ಈ ವರ್ಷ ಪ್ರಭಾಸ್ ಮದುವೆ ನಡೆಯಲಿದೆ ಎಂದಿದ್ದರು. ಸದ್ಯ ಸಹೋ ಸಿನಿಮಾ ಪ್ರಚಾರದಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಆಗಸ್ಟ್ 30 ರಂದು ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ.

  • ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡ್ತಾರಾ ಪ್ರಭಾಸ್?

    ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡ್ತಾರಾ ಪ್ರಭಾಸ್?

    ಹೈದರಾಬಾದ್: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಬಳಿಕ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಎಂದು ಕರೆಸಿಕೊಂಡಿರುವ ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ತಮ್ಮ ಹುಟ್ಟು ಹಬ್ಬ ದಿನದಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡುತ್ತಾರೆ ಎಂಬ ಪ್ರಶ್ನೆಯೊಂದು ಕೇಳಿ ಬರುತ್ತಿದೆ.

    ಟಾಲಿವುಡ್ ಸಿನಿ ರಂಗದಲ್ಲಿ ಸದ್ಯ ಪ್ರಭಾಸ್ ಮದುವೆ ಈ ಕುರಿತ ಸುದ್ದಿ ಕೇಳಿ ಬರುತ್ತಿದ್ದು, ಆಕ್ಟೋಬರ್ 23 ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈ ವೇಳೆಯೇ ತಮ್ಮ ಮದುವೆಯ ಸಿಕ್ರೇಟ್ ಬಿಚ್ಚಿಡಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪ ಬಾಹುಲಿಯನ್ನು ಕೊಂದಿದ್ದು ಯಾಕೆ? ಎಂಬ ಪ್ರಶ್ನೆಯ ಬಳಿಕ ಅಭಿಮಾನಿಗಳು ಪ್ರಭಾಸ್ ಮದುವೆ ಯಾವಾಗ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಸದ್ಯ ಪ್ರಭಾಸ್ ಬಹು ನಿರೀಕ್ಷಿತ ‘ಸಾಹೋ’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಚಿತ್ರವೂ ನವೆಂಬರ್ ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ನಡುವೆ ಪ್ರಭಾಸ್ ಚಿಕ್ಕಪ್ಪ ಕೂಡ ಕೃಷ್ಣಂರಾಜು ಕೂಡ ಮದುವೆ ಬಗ್ಗೆ ಮಾತನಾಡಿ ಪ್ರಭಾಸ್ ಒಪ್ಪಿಗೆ ನೀಡಿದರೆ ಮುಂದುವರೆಯುವುದಾಗಿ ತಿಳಿಸಿದ್ದರು. ಇತ್ತ ಪ್ರಭಾಸ್ ಹಾಗೂ ಅನುಷ್ಕಾ ಜೋಡಿ ಹಸೆಮಣೆ ಏರಲಿ ಎಂದು ಈ ಹಿಂದೆಯೇ ಅಭಿಮಾನಿಗಳು ಇಷ್ಟಪಟ್ಟಿದ್ದು ಎಲ್ಲರಿಗೂ ತಿಳಿದ ಸಂಗತಿ. ಅನುಷ್ಕಾರ ಭಾಗಮತಿ ಸಿನಿಮಾ ಬಿಡುಗಡೆಗೆ ಶುಭ ಹಾರೈಸಿದ್ದ ಪ್ರಭಾಸ್ `ಸ್ವೀಟಿ’ ಎಂದು ಕರೆದಿದ್ದರು. ಈ ವೇಳೆಯೂ ಅಭಿಮಾನಿಗಳು ಖುಷಿ ಪಟ್ಟಿದ್ದರು.

    ಪ್ರಭಾಸ್ ರ ಸಾಹೋ ಚಿತ್ರ ತೆಲುಗು, ತಮಿಳು ಸೇರಿದಂತೆ ಹಿಂದಿಯಲ್ಲೂ ಬಿಡುಗಡೆಯಾಗಲಿದ್ದು ನಿರೀಕ್ಷೆಯನ್ನು ಹೆಚ್ಚಿಸಿದೆ. ಚಿತ್ರದಲ್ಲಿ ಬಾಲಿವುಡ್ ಆಶಿಕಿ ನಟಿ ಶ್ರದ್ಧಾ ಕಪೂರ್ ನಟಿಸಿದ್ದು, ಚಿತ್ರದಲ್ಲಿ ಭಾರೀ ಆ್ಯಕ್ಷನ್ ಸನ್ನಿವೇಶಗಳ್ನು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾಗಿದೆ. ಚಿತ್ರ ಒಟ್ಟಾರೆ 200 ಕೋಟಿ ರೂ. ಬಜೆಟ್‍ನಲ್ಲಿ ಸಾಹೋ ನಿರ್ಮಿಸಲಾಗುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಅಭಿಮಾನಿಗಳಿಗೆ ಪತ್ರ ಬರೆದ ಬಾಹುಬಲಿ ಪ್ರಭಾಸ್

    ಅಭಿಮಾನಿಗಳಿಗೆ ಪತ್ರ ಬರೆದ ಬಾಹುಬಲಿ ಪ್ರಭಾಸ್

    ಹೈದರಾಬಾದ್: ಭಾರತೀಯ ಚಿತ್ರರಂಗವನ್ನು ಹೆಮ್ಮೆ ಪಡುವಂತೆ ಮಾಡಿದ್ದ ಬಹುಬಲಿ ಸಿನಿಮಾ ಭಾಗ ಎರಡು ಬಿಡುಗಡೆಯಾಗಿ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಟ ಪ್ರಭಾಸ್ ಅಭಿಮಾನಿಗಳಿಗೆ ಫೇಸ್‍ಬುಕ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ.

    ಕಳೆದ ವರ್ಷ ಏಪ್ರಿಲ್ 28 ರಂದು ಬಿಡುಗಡೆಯಾಗಿದ್ದ ಬಾಹುಬಲಿ-2 ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ್ಯಾಂತ ಯಶ್ವಸಿ ಪ್ರದರ್ಶನಗೊಂಡು ಬಾಕ್ಸ್ ಆಫೀಸ್ ಗಳಿಕೆಯಲ್ಲಿ ದಾಖಲೆ ನಿರ್ಮಾಣ ಮಾಡಿತ್ತು.

    ಈ ಕುರಿತು ನಟ ಪ್ರಭಾಸ್ ಸಂತಸ ವ್ಯಕ್ತಪಡಿಸಿದ್ದು, “ಬಾಹುಬಲಿ ಚಿತ್ರ ಜರ್ನಿ ತನ್ನ ಜೀವನದಲ್ಲಿ ಅತ್ಯಂತ ಭಾವನಾತ್ಮಕವಾದದ್ದು. ಈ ಚಿತ್ರ ನೀಡಿದ ನಿರ್ದೇಶಕ ರಾಜಮೌಳಿ, ಚಿತ್ರ ತಂಡ ಹಾಗೂ ಯಶ್ವಸಿ ಬೆಂಬಲ ನೀಡಿದ ಅಭಿಮಾನಿಗಳಿಗೆ ಧನ್ಯವಾದ” ಎಂದು ತಿಳಿಸಿದ್ದಾರೆ.

    ಸದ್ಯಕ್ಕೆ ನಟ ಪ್ರಭಾಸ್ ನಿರ್ದೇಶಕ ಸುಜೇತ್ ಅವರ `ಸಹೋ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಹೋ ಚಿತ್ರ ತೆಲುಗು, ತಮಿಳು ಸೇರಿದಂತೆ ಹಿಂದಿಯಲ್ಲೂ ಏಕಕಾಲದಲ್ಲಿ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಬಾಲಿವುಡ್ ನ ಶ್ರದ್ಧಾ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ.

  • ಆಧಾರ್ ಕಾರ್ಡ್ ನಲ್ಲಿ ಪ್ರಭಾಸ್ ಫೋಟೋ ನೋಡಿದ್ರೆ ಆಶ್ಚರ್ಯಪಡ್ತೀರ!

    ಆಧಾರ್ ಕಾರ್ಡ್ ನಲ್ಲಿ ಪ್ರಭಾಸ್ ಫೋಟೋ ನೋಡಿದ್ರೆ ಆಶ್ಚರ್ಯಪಡ್ತೀರ!

    ಹೈದರಾಬಾದ್: ಸಾಮಾನ್ಯವಾಗಿ ಎಲ್ಲರೂ ತಮ್ಮ ಆಧಾರ್ ಕಾರ್ಡ್ ಫೋಟೋವನ್ನ ಬೇರೆಯವರಿಗೆ ತೋರಿಸೋಕೆ ಹಿಂದೇಟು ಹಾಕ್ತಾರೆ. ಯಾಕಂದ್ರೆ ವ್ಯಕ್ತಿಯ ಬೇರೆ ಫೋಟೋಗಳಿಗೂ ಆಧಾರ್ ನಲ್ಲಿರುವ ಫೋಟೋಗೂ ವ್ಯತ್ಯಾಸವಿರುತ್ತದೆ. ಇನ್ನು ಸಿನಿಮಾ ನಟರು ಕ್ಯಾಮೆರಾ ಮುಂದೆ ತಮ್ಮ ರಿಚ್ ಲುಕ್ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಾರೆ. ಆದರೆ ಇದೇ ಸಿನಿಮಾ ನಟ, ನಟಿಯರು ತಮ್ಮ ಗುರುತಿನ ಚೀಟಿಯಲ್ಲಿನ ಫೋಟೋದಲ್ಲಿ ಹೇಗೆ ಕಾಣಿಸುತ್ತಾರೆ ಎಂಬ ಕುತೂಹಲ ಹಲವು ಅಭಿಮಾನಿಗಳಲ್ಲಿ ಮೂಡಿರುತ್ತದೆ.

     

    ಈ ಹಿಂದೆ ಹಲವು ನಟ-ನಟಿಯರ ಗುರುತಿನ ಚೀಟಿ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದರಲ್ಲಿ ಕೆಲವರು ಸಿನಿಮಾದಲ್ಲಿದ್ದಂತೆ ಚಂದವಾಗಿ ಕಂಡರೆ ಇನ್ನೂ ಕೆಲವರ ಫೋಟೋ ನೋಡಿ ಇದು ಅವರೇನಾ…? ಎಂದು ಆಶ್ಚರ್ಯಪಡುವಂತಿತ್ತು. ಪ್ರಸ್ತುತ `ಬಾಹುಬಲಿ’ ಚಿತ್ರದ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದಿರುವ ನಟ ಪ್ರಭಾಸ್ ಅವರ ಆಧಾರ್ ಕಾರ್ಡ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

    ಪ್ರಭಾಸ್ ಆಧಾರ್ ಕಾರ್ಡ್ ಫೋಟೋದಲ್ಲಿ ಸಾಮಾನ್ಯ ವ್ಯಕ್ತಿಯಂತಿದ್ದು, ವಿಭಿನ್ನವಾಗಿ ಕಾಣಿಸುತ್ತಾರೆ. ಹಾಗೇ ಬಾಲಿವುಡ್ ನಟ ರಿತೇಶ್ ದೇಶ್‍ಮುಖ್ ಅವರ ಆಧಾರ್ ಫೋಟೋ ಸಹ ಹರಿದಾಡ್ತಿದೆ. ಇಬ್ಬರು ನಟರ ಆಧಾರ್ ಕಾರ್ಡ್ ಚಿತ್ರಗಳನ್ನ ನೋಟಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.

  • ಇದೇ ವರ್ಷ ಪ್ರಭಾಸ್ ಮದುವೆ: ಕೃಷ್ಣಂ ರಾಜು ಸ್ಪಷ್ಟನೆ

    ಇದೇ ವರ್ಷ ಪ್ರಭಾಸ್ ಮದುವೆ: ಕೃಷ್ಣಂ ರಾಜು ಸ್ಪಷ್ಟನೆ

    ಹೈದರಾಬಾದ್: ಬಾಹುಬಲಿ ಮೂಲಕ ವಿಶ್ವದ್ಯಾದಂತ ಅಭಿಮಾನಿಗಳನ್ನು ಗಳಿಸಿರುವ ನಟ ಪ್ರಭಾಸ್, ಮದುವೆ ವಿಚಾರಕ್ಕೆ ಹಲವು ಬಾರಿ ಸುದ್ದಿಯಾಗಿದ್ದಾರೆ. ಈಗ ಅವರ ಮದುವೆಯ ಕುರಿತು ಟಾಲಿವುಡ್ ನಟ, ಪ್ರಭಾಸ್ ಅವರ ದೊಡ್ಡಪ್ಪ ಮಾಧ್ಯಮಗಳ ಜೊತೆ ಮಾತನಾಡಿದ್ದು, ಪ್ರಭಾಸ್ ಇದೇ ವರ್ಷ ಮದುವೆಯಾಗಲಿದ್ದಾರೆ ಎಂದು ಹೇಳಿದ್ದಾರೆ.

    ಹೈದರಾಬಾದ್‍ನಲ್ಲಿ ಶನಿವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕೃಷ್ಣಂ ರಾಜು, ಪ್ರತಿ ಬಾರಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ಪ್ರಭಾಸ್ ಅವರ ಮದುವೆ ಕುರಿತು ಪ್ರಶ್ನೆ ಎದುರಾಗುತ್ತದೆ. ಪ್ರತಿ ಬಾರಿ ಈ ಕುರಿತು ಉತ್ತರಿಸಲು ಮುಜುಗರ ಉಂಟಾಗುತ್ತದೆ. ಪ್ರಭಾಸ್ ಇದೇ ವರ್ಷ ಮದುವೆಯಾಗಲಿದ್ದಾರೆ ಎಂದು ಹೇಳಿದರು.

    ಈ ಹಿಂದೆ ತಮ್ಮ ಮದುವೆಯ ಕುರಿತು ಮಾತನಾಡಿದ ಪ್ರಭಾಸ್, ನನಗೆ ಈಗಾಗಲೇ 6 ಸಾವಿರ ಮದುವೆ ಪ್ರಸ್ತಾಪಗಳು ಬಂದಿದ್ದು, ಕೆಲಸದಲ್ಲಿ ತೊಡಗಿಕೊಂಡಿರುವುದರಿಂದ ಅವುಗಳನ್ನು ನಿರಾಕರಿಸಿದ್ದಾಗಿ ತಿಳಿಸಿದ್ದರು. ಅಲ್ಲದೇ ನಟಿ ಅನುಷ್ಕಾ ಶೆಟ್ಟಿ ಜೊತೆ ಡೇಟಿಂಗ್ ಮಾಡುತ್ತಿರುವ ಕುರಿತು ವದಂತಿಗಳು ಹಬ್ಬಿದ್ದವು. ಇದನ್ನ ನಿರಾಕರಿಸಿದ್ದ ಪ್ರಭಾಸ್ ನಾನೂ ಅನುಷ್ಕಾ ನಮ್ಮಿಬ್ಬರ ಬಗ್ಗೆ ಡೇಟಿಂಗ್ ವದಂತಿಗಳು ಬರಬಾರದು ಎಂದು ನಿರ್ಧರಿಸಿದ್ದೆವು ಎಂದು ಹೇಳಿದ್ದರು.

    ಕೆಲ ದಿನಗಳ ಹಿಂದೆ `ಭಾಗಮತಿ’ ಚಿತ್ರದ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅನುಷ್ಕಾ ಶೆಟ್ಟಿ, ಪ್ರಭಾಸ್ ನನ್ನ ಅತ್ಯುತ್ತಮ ಸ್ನೇಹಿತ. ಪ್ರಭಾಸ್ ತಮ್ಮ ನಡುವೆ ಇರುವ ಪ್ರೀತಿ, ಪ್ರೇಮ, ಮದುವೆ ಎಂದು ಹೇಳುತ್ತಿರುವ ಗಾಳಿ ಸುದ್ದಿಯೆಲ್ಲಾ ಸುಳ್ಳು ಎಂದು ಹೇಳಿ ವದಂತಿಯನ್ನ ತಳ್ಳಿ ಹಾಕಿದ್ದರು. ಈ ವೇಳೆ ಚಿತ್ರದ ಕುರಿತು ಮಾಹಿತಿ ನೀಡಿದ ಅವರು, `ಭಾಗಮತಿ’ ಚಿತ್ರದಲ್ಲಿ ಐಪಿಎಸ್ ಪಾತ್ರಧಾರಿಯಾದ ಚಂಚಲ ಭಾಗಮತಿಯಾಗಿ ಹೇಗೆ ಬದಲಾಗುತ್ತಾರೆ ಎಂಬುದು ಚಿತ್ರದ ಕಥೆಯಾಗಿದೆ ಎಂದರು. ನಿರ್ದೇಶಕ ಪೂರಿ ಜಗನಾಥ್ ನನ್ನ ಗುರು. ಅವರಿಂದ ಬಹಳ ಕಲಿತಿದ್ದೇನೆ. ನಿರ್ದೇಶಕ ರಾಜಮೌಳಿ ಚಿತ್ರದಲ್ಲಿ ಮತ್ತೆ ಅಭಿನಯಿಸುವ ಬಯಕೆ ಇದೆ ಎಂದು ಹೇಳಿದ್ದರು.

    ಪ್ರಸ್ತುತ ಪ್ರಭಾಸ್ ಸುಜೀತ್ ನಿರ್ದೇಶನದ `ಸಾಹೋ’ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಚಿತ್ರದಲ್ಲಿ ಶ್ರದ್ಧಾ ಕಪೂರ್ ಮತ್ತು ನೀಲ್ ನಿತಿನ್ ಮುಖೇಶ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದು, ಚಿತ್ರವು ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

  • ನನ್ನ ಮೊದಲ ಕ್ರಷ್ ಯಾರು ಅನ್ನೋದನ್ನು ರಿವಿಲ್ ಮಾಡಿದ್ರು ಅನುಷ್ಕಾ ಶೆಟ್ಟಿ

    ನನ್ನ ಮೊದಲ ಕ್ರಷ್ ಯಾರು ಅನ್ನೋದನ್ನು ರಿವಿಲ್ ಮಾಡಿದ್ರು ಅನುಷ್ಕಾ ಶೆಟ್ಟಿ

    ಹೈದರಾಬಾದ್: ಮೊನ್ನೆಯಾಷ್ಟೇ 36ನೇ ಹುಟ್ಟುಹಬ್ಬ ಆಚರಿಸಿಕೊಂಡ ಅನುಷ್ಕಾ ಶೆಟ್ಟಿ ಈಗ ತಮ್ಮ ಮೊದಲ ಕ್ರಷ್ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

    ಹೌದು, ಇತ್ತೀಚೆಗೆ ತೆಲುಗು ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ಸಮಯದಲ್ಲಿ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅನುಷ್ಕಾ ಶೆಟ್ಟಿ, ರಾಹುಲ್ ದ್ರಾವಿಡ್ ಮೇಲೆ ಮೊದಲ ಕ್ರಷ್ ಆಗಿತ್ತು ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅನುಷ್ಕಾ ಶೆಟ್ಟಿ

    ಮೂಲತಃ ಕರಾವಳಿ ಮೂಲದ ಅನುಷ್ಕಾ ಶೆಟ್ಟಿ ಅವರಿಗೆ ದ್ರಾವಿಡ್ ಅವರಲ್ಲಿರುವ ತಾಳ್ಮೆ, ಬ್ಯಾಟಿಂಗ್, ನಡವಳಿಕೆ, ನಾಯಕತ್ವ ಗುಣವನ್ನು ನೋಡಿ ಹುಚ್ಚು ಹಿಡಿಯುವಷ್ಟು ಅವರನ್ನು ಇಷ್ಟಪಟ್ಟಿದ್ದರಂತೆ.

    ರಾಜಮೌಳಿ ನಿರ್ದೇಶನದ ಬಾಹುಬಲಿಯಲ್ಲಿ ದೇವಸೇನಾ ಪಾತ್ರದಲ್ಲಿ ಮಿಂಚಿದ್ದ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ನಡುವೆ ಲವ್ ಇದೆ ಎನ್ನುವ ಸುದ್ದಿ ಈ ಹಿಂದೆ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಬಾಹುಬಲಿಯಲ್ಲಿ ಇವರಿಬ್ಬರ ಸ್ಕ್ರೀನ್ ಕೆಮೆಸ್ಟ್ರಿ ನೋಡಿ ಅಭಿಮಾನಿಗಳು ಸಹ ಇಬ್ಬರ ನಡುವೆ ಪ್ರೀತಿ ಇದೆ ಎಂದು ವದಂತಿ ಹಬ್ಬಿಸುತ್ತಿದ್ದರು. ಆದರೆ ಪ್ರಭಾಸ್ ಈ ಹಿಂದೆ ನಮ್ಮಿಬ್ಬರ ಮಧ್ಯೆ ಯಾವುದೇ ಲವ್ ಇಲ್ಲ ಎಂದು ಹೇಳಿಕೆ ನೀಡಿ ಗಾಸಿಪ್ ಗಳಿಗೆ ತೆರೆ ಎಳೆದಿದ್ದರು.

    ಸದ್ಯ ಅರುಂಧತಿ ಖ್ಯಾತಿಯ ಅನುಷ್ಕಾ ಶೆಟ್ಟಿ ಅವರು ತಮ್ಮ ಮುಂದಿನ ಚಿತ್ರ ‘ಭಾಗಮತಿ’ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ.

    ಇದನ್ನೂ ಓದಿ: ಹುಟ್ಟುಹಬ್ಬದ ದಿನದಂದು ಕಾರು ಡ್ರೈವರ್ ಗೆ ಕಾರು ಗಿಫ್ಟ್ ಕೊಟ್ಟ ಅನುಷ್ಕಾ – ಕಾರಿನ ಬೆಲೆ ಎಷ್ಟು ಗೊತ್ತಾ?

    ಇದನ್ನೂ ಓದಿ: ಹುಟ್ಟು ಹಬ್ಬದ ಸಂಭ್ರಮದಲ್ಲಿರೋ ಪ್ರಭಾಸ್‍ಗೆ ಅನುಷ್ಕಾ ಗಿಫ್ಟ್ ಕೊಟ್ಟಿದ್ದು ಏನು ಗೊತ್ತಾ?