Tag: actor krishna

  • ಡ್ರಗ್ಸ್ ಸೇವನೆ: ನಟ ಶ್ರೀಕಾಂತ್ ಬಳಿಕ ಮತ್ತೋರ್ವ ನಟನ ಬಂಧನ

    ಡ್ರಗ್ಸ್ ಸೇವನೆ: ನಟ ಶ್ರೀಕಾಂತ್ ಬಳಿಕ ಮತ್ತೋರ್ವ ನಟನ ಬಂಧನ

    ಮಿಳು ಚಿತ್ರೋದ್ಯಮದಲ್ಲಿ ಡ್ರಗ್ಸ್ ಹವಾ ಜೋರಾಗಿದೆ. ಪೆಡ್ಲರ್ ಪ್ರಸಾದ್ ಬಂಧನವಾದ ನಂತರ, ಆತ ಯಾರಿಗೆಲ್ಲ ಡ್ರಗ್ಸ್ ಸರಬರಾಜು ಮಾಡುತ್ತಿದ್ದೆ ಅಂತ ಬಾಯ್ಬಿಟ್ಟಿದ್ದ. ಪ್ರಸಾದ್ ಹೇಳಿಕೆಯನ್ನು ಗಂಭೀರವಾಗಿ ತಗೆದುಕೊಂಡಿದ್ದ ಚೆನ್ನೈ ಪೊಲೀಸರು, ನಟ ಶ್ರೀಕಾಂತ್ ಮನೆಯ ಮೇಲೆ ದಾಳಿ ಮಾಡಿದ್ದರು. ಶ್ರೀಕಾಂತ್ ರನ್ನು ವಿಚಾರಣೆ ಒಳಪಡಿಸಿದಾಗ ನಲವತ್ತಕ್ಕೂ ಹೆಚ್ಚು ಬಾರಿ ಡ್ರಗ್ಸ್ ಸೇವಿಸಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು.

    ವಿಚಾರಣೆಯ ನಂತರ ಪೊಲೀಸರು ಶ್ರೀಕಾಂತ್ ರನ್ನು ಬಂಧಿಸಿದ್ದರು. ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಶ್ರೀಕಾಂತ್ ಕೂಡ ಹಲವು ನಟರ ಹೆಸರುಗಳನ್ನು ಬಾಯ್ಬಿಟ್ಟಿದ್ದ ಎಂದು ಹೇಳಲಾಗುತ್ತಿದೆ. ಶ್ರೀಕಾಂತ್ ಬಂಧನದ ನಂತರ ನಟ ಕೃಷ್ಣರನ್ನು ಪೊಲೀಸರು ಬಂಧಿಸಿದ್ದಾರೆ. ಕೃಷ್ಣ ಕೂಡ ಡ್ರಗ್ಸ್ ಖರೀದಿಸಿದ್ದರು ಎಂದು ಹೇಳಲಾಗುತ್ತಿದೆ.

    ತಮಿಳು ಚಿತ್ರೋದ್ಯಮದಲ್ಲಿ ಡ್ರಗ್ಸ್ ಪ್ರಕರಣ ತೀವ್ರ ಸಂಚಲನವನ್ನೇ ಉಂಟು ಮಾಡಿದೆ. ಇನ್ನೂ ಕೆಲವು ನಟರು ಮತ್ತು ನಟಿಯರು ಹಾಗೂ ತಂತ್ರಜ್ಞರು ಈ ಡ್ರಗ್ಸ್ ಜಾಲದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಚೆನ್ನೈ ಪೊಲೀಸರು ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

  • ಮಹೇಶ್‌ ಬಾಬು ತಂದೆ ನಟ ಕೃಷ್ಣ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

    ಮಹೇಶ್‌ ಬಾಬು ತಂದೆ ನಟ ಕೃಷ್ಣ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

    ಟಾಲಿವುಡ್(Tollywood) ನಟ ಮಹೇಶ್ ಬಾಬು(Mahesh Babu) ಇತ್ತೀಚೆಗಷ್ಟೇ ತಾಯಿಯನ್ನ ಕಳೆದುಕೊಂಡು ಆಘಾತದಲ್ಲಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಸಂಕಷ್ಟ ಎದುರಾಗಿದೆ. ಮಹೇಶ್ ಬಾಬು ಅವರ ತಂದೆ ಕೃಷ್ಣ (Krishna) ತೀವ್ರ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದು ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ತೆಲುಗಿನ ಸಾಕಷ್ಟು ಸಿನಿಮಾಗಳ ಮೂಲಕ ಹೈಪ್ ಕ್ರಿಯೇಟ್ ಮಾಡಿರುವ 80 ವರ್ಷದ ಲೆಜೆಂಡ್ ಆಕ್ಟರ್ ಕೃಷ್ಣ ಇದೀಗ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಯ ನಂತರ ಕೃಷ್ಣ ಅವರ ಆರೋಗ್ಯ ಸ್ಟೇಬಲ್ ಆಗಿದೆ. ಜನರಲ್ ಚೆಕಪ್‌ಗೆ ಆಸ್ಪತ್ರೆಗೆ ಹೋಗಿದ್ದರು. ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೃಷ್ಣ ಅವರ ಪಿಆರ್ ಸುರೇಶ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

    ನವೆಂಬರ್ 13ರಂದು ಹಿರಿಯ ನಟ ಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ಸಮಸ್ಯೆ ಇರುವ ಕಾರಣ ದಾಖಲಿಸಲಾಗಿತ್ತು ಎನ್ನಲಾಗುತ್ತಿದೆ. ಕೃಷ್ಣ ಅವರ ಪತ್ನಿ ಇಂದಿರಾ ದೇವಿ ನಿಧನದ ಬಳಿಕ ಕೃಷ್ಣ ಅವರ ಆರೋಗ್ಯದಲ್ಲೂ ಸಮಸ್ಯೆ ಕಂಡು ಬಂದಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:`ಬನಾರಸ್’ ಚಿತ್ರದ ಬೆನ್ನಲ್ಲೇ ಝೈದ್ ಖಾನ್‌ಗೆ ಬಂತು ಬಿಗ್ ಆಫರ್

    ಇನ್ನೂ ಸೂಪರ್ ಸ್ಟಾರ್ ಕೃಷ್ಣ  350ಕ್ಕೂ ಹೆಚ್ಚು ತೆಲುಗಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟ, ನಿರ್ಮಾಪಕನಾಗಿಯೂ ಸೈ ಎನಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]