Tag: Actor Kiccha sudeep

  • ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಸುದೀಪ್‌ ದಂಪತಿ ಭೇಟಿ

    ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಸುದೀಪ್‌ ದಂಪತಿ ಭೇಟಿ

    `ವಿಕ್ರಾಂತ್‌ರೋಣ’ (Vikranthrona) ಚಿತ್ರದ ಸಕ್ಸಸ್ ನಂತರ ಕಿಚ್ಚ ಸುದೀಪ್ (Kiccha Sudeep) ಸದ್ಯ ಬಿಗ್ ಬಾಸ್ (Bigg Boss) ಕಾರ್ಯಕ್ರಮದ ನಿರೂಪಣೆಯಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣಕ್ಕೆ ಬ್ರೇಕ್ ಹಾಕಿ, ಕುಟುಂಬದ ಜೊತೆ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ(Shirdi) ಸುದೀಪ್ ಭೇಟಿ ಕೊಟ್ಟಿದ್ದಾರೆ.

    ಚಂದನವನದ ಪ್ರತಿಭಾನ್ವಿತ ನಟ ಕಿಚ್ಚ ಸುದೀಪ್, ವಿಕ್ರಾಂತ್ ರೋಣ ಚಿತ್ರದ ನಂತರ ಒಂದೊಳ್ಳೆ ಕಥೆಯ ಮೂಲಕ ಬರಲು ರೆಡಿಯಾಗಿದ್ದಾರೆ. ಚಿತ್ರದ ಆಯ್ಕೆ ಮತ್ತಷ್ಟು ಸೆಲೆಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಬಿಗ್ ಬಾಸ್ ಶೋ ಶೂಟಿಂಗ್ ನಡುವೆ ಪತ್ನಿ ಜೊತೆ ವಿದೇಶಕ್ಕೆ ಹೋಗಿ, ಕ್ರಿಕೆಟ್ ಮ್ಯಾಚ್ ವೀಕ್ಷಿಸಿದ್ದರು. ಈ ಬೆನ್ನಲ್ಲೇ ಈಗ ಪತ್ನಿ ಪ್ರಿಯಾ ಜೊತೆ ಶಿರಡಿ ಸನ್ನಿಧಿಗೆ ಸುದೀಪ್ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ರಣ್ವೀರ್ ಸಿಂಗ್ ಗೂ ಕಾಸ್ಟಿಂಗ್ ಕೌಚ್ ಅನುಭವ : ನಟ ಬಿಚ್ಚಿಟ್ಟ ಕರಾಳ ಸತ್ಯ

    ತಮ್ಮ ಎಲ್ಲಾ ಕೆಲಸಕ್ಕೂ ಬ್ರೇಕ್ ಹಾಕಿ, ಪತ್ನಿ ಪ್ರಿಯಾ(Priya Sudeep) ಜೊತೆ ಶಿರಡಿಗೆ ಸುದೀಪ್ ತೆರಳಿದ್ದಾರೆ. ಸಾಯಿಬಾಬಾ ಸನ್ನಿಧಿಯಲ್ಲಿ ವಿಶೇಷ ಪೂಜೆ ಕೂಡ ಮಾಡಿಸಿದ್ದಾರೆ. ಈಗ ಶಿರಡಿಗೆ ಭೇಟಿ ಕೊಟ್ಟಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಇನ್ನೂ ಸುದೀಪ್, ಬಿಗ್ ಬಾಸ್ ಶೋ ಮುಕ್ತಾಯದ ನಂತರ ಡೈರೆಕ್ಟರ್ ನಂದಕಿಶೋರ್ ಜೊತೆ ಸಿನಿಮಾ ಮಾಡಲಿದ್ದಾರೆ. ಬಳಿಕ ರಮ್ಯಾ ಜೊತೆ ಕೂಡ ಕಿಚ್ಚ ನಟಿಸಲಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್‍ಬಾಸ್ ಮನೆಯಲ್ಲಿ ಶುಭಾಗೆ ಇರುವ ಪ್ರಶ್ನೆ ಯಾವುದು ಗೊತ್ತಾ?

    ಬಿಗ್‍ಬಾಸ್ ಮನೆಯಲ್ಲಿ ಶುಭಾಗೆ ಇರುವ ಪ್ರಶ್ನೆ ಯಾವುದು ಗೊತ್ತಾ?

    ಬಿಗ್‍ಬಾಸ್ ಮನೆಯ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಶುಭಾ ಪದೇ ಪದೇ ಕೇಳುವ ಆ ಒಂದು ಮಾತಿನ ಕುರಿತಾಗಿ ಸುದೀಪ್ ಚರ್ಚಿಸಿದ್ದಾರೆ. ಶುಭಾ ಅವರಿಗೆ ಬಿಗ್ ಬಾಸ್ ಟಾಸ್ಕ್ ನೀಡಿದಾಗ ಪ್ರತಿಸಲ ಅವರಿಗೆ ಒಂದು ಪ್ರಶ್ನೆ ಮೂಡುತ್ತದೆ ಎಂದಿದ್ದಾರೆ.

    ಬಿಗ್‍ಬಾಸ್ ಮನೆಯಲ್ಲಿ ಟಾಸ್ಕ್ ಅಂತಾ ಹೇಳಿದಾಗ ಶುಭಾ ಯಾವ ಟಾಸ್ಕ್ ಏನು ರೂಲ್ಸ್ ಎಂದು ಕೇಳದೆ ಅವರು ಪದೇ ಪದೇ ಕೇಳುವುದು ಒಂದೇ, ಅದು ಒಟ್ಟೆ ಬದಲಾಯಿಸಬೇಕಾ ಏನು ಶುಭಾ ಅವರೇ ಎಂದು ಹೇಳಿದ್ದಾರೆ. ಈ ವೇಳೆ ಶುಭಾ ಹೇಳಿರುವ ಕಾರಣವನ್ನು ಕೇಳಿ ಸುದೀಪ್ ಬಿದ್ದಿ ಬಿದ್ದು ನಕ್ಕಿದ್ದಾರೆ.

    ಹೌದು ಸರ್ ನಾವು ಮನೆಯಿಂದ ಎಷ್ಟೊಂದು ಬಟ್ಟೆಯನ್ನು ತಂದಿರುತ್ತೇವೆ. ಆದರೆ ಬಿಗ್‍ಬಾಸ್ ಕೊಡುವ ಬಟ್ಟೆ ಒಂದೇ ಬಣ್ಣದ್ದಾಗಿರುತ್ತದೆ. ನನಗೆ ಪ್ರತಿಸಲ ಒಂದೇ ಬಣ್ಣದ ಬಟ್ಟೆ ಸಿಗುತ್ತದೆ ಎಂದು ಕ್ಯೂಟ್ ಆಗಿ ಶುಭಾ ಹೇಳುತ್ತಿರುವಾಗ ಸುದೀಪ್ ಅವರು ನುಗುತ್ತಿದ್ದರು.

    ಬಿಗ್‍ಬಾಸ್ ಕೊಡುವ ಟೀ ಶರ್ಟ್ ಬೋರಿಂಗ್ ಆಗಿರುತ್ತದೆ. ಒಂದೇ ಶರ್ಟ್‍ನಲ್ಲಿ ಮೂರುದಿನಗಳು ಕಳೆಯಬೇಕು. ನನಗೆ 2 ಬಾರಿ ಹಸಿರು ಬಣ್ಣದ ಬಟ್ಟೆಯೇ ಬಂದಿದೆ. ನಾವು ನಮ್ಮ ಬಟ್ಟೆಯನ್ನೇ ಹಾಕಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಆಗ ಸುದೀಪ್ ಓ… ಆಗ ನೀವು ಇದು ನನ್ನ ಅಕ್ಕಾ ಕೊಡಿಸಿದ್ದು, ಅಣ್ಣಾ ಕೊಡಸಿದ್ದು, ಹರಿದು ಬಿಟ್ಟೆ ಅಂತಾ ಜಗಳ ಮಾಡೋಕಾ ಎಂದು ಹೇಳಿದ್ದಾರೆ.

    ಪ್ಲವರಿ ಪ್ಲವರಿ ಬಟ್ಟೆ ಕೊಡಿ ಸರ್ ಎಂದು ಶುಭಾ ಮುದ್ದ ಮುದ್ದಾ ಸುದೀಪ್ ಬಳಿ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ಸುದೀಪ್ ನಿಮಗೆ ಅಂತಹ ಬಟ್ಟೆಗಳು ಬೇಕಾದಲ್ಲಿ ಶಮಂತ್ ಮತ್ತು ರಘು ಅವರ ಬಳಿ ಹೋಗಿ ಅವರ ಹತ್ತಿರುವ ಬಟ್ಟೆಗಳು ಹಾಗೇ ಇವೆ ಎಂದು ಹೇಳಿ ನಗೆ ಚಟಾಕೆ ಹಾರಿಸಿದ್ದಾರೆ.

  • ಅರ್ಧ ಶತಕ ಸಿಡಿಸಿದ ಮಯಾಂಕ್‍ಗೆ ಕಿಚ್ಚನ ಶುಭಾಶಯ!

    ಅರ್ಧ ಶತಕ ಸಿಡಿಸಿದ ಮಯಾಂಕ್‍ಗೆ ಕಿಚ್ಚನ ಶುಭಾಶಯ!

    ಬೆಂಗಳೂರು: ಸಿನಿಮಾ, ಬಿಗ್‍ಬಾಸ್ ಶೋ ಅಂತ ಅದೇನೇ ಬ್ಯುಸಿಯಾಗಿದ್ದರೂ ಕ್ರಿಕೆಟ್ ಅನ್ನು ಮಾತ್ರ ತಪ್ಪಿಸದೇ ನೋಡುವವರು ಕಿಚ್ಚ ಸುದೀಪ್. ನಟನೆ ಬಿಟ್ಟರೆ ಕ್ರಿಕೆಟ್ ಅವರ ಆಸಕ್ತಿಯ ಕ್ಷೇತ್ರ. ಇದೀಗ ಅವರು ಟೀಂ ಇಂಡಿಯಾಗೆ ಆಯ್ಕೆಯಾಗಿ ಮೊದಲ ಪಂದ್ಯದಲ್ಲಿಯೇ ಅರ್ಧ ಶತಕ ಸಿಡಿಸಿರುವ ಕ್ರಿಕೆಟರ್ ಮಯಾಂಕ್ ಅಗರ್ವಾಲ್ ರನ್ನು ಅಭಿನಂದಿಸಿದ್ದಾರೆ. ಇದೇ ಫೋರ್ಸ್ ನೊಂದಿಗೆ ಮುಂದುವರೆಯುವಂತೆ ಸ್ಫೂರ್ತಿಯನ್ನೂ ತುಂಬಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧದ ಪಂದ್ಯಾಟದಲ್ಲಿ ಮಾಯಾಂಕ್ 76 ರನ್ ಗಳಿಸಿ ಕ್ರಿಕೆಟ್ ಪ್ರೇಮಿಗಳನ್ನು ಖುಷಿಗೊಳಿಸಿದ್ದಾರೆ. ಈ ಮೂಲಕ ಅವರು ಕ್ರಿಕೆಟ್ ದಂತಕತೆ ಸುನೀಲ್ ಗವಾಸ್ಕರ್ ದಾಖಲೆಯನ್ನೂ ಮುರಿದಿದ್ದಾರೆ. ಈ ಅಮೋಘ ಸಾಧನೆಯನ್ನು ಸುದೀಪ್ ಟ್ವಿಟ್ಟರ್ ಮೂಲಕ ಕೊಂಡಾಡಿದ್ದಾರೆ. ನಿಮ್ಮ ಆಟ ನಿಜಕ್ಕೂ ರೋಚಕವಾಗಿತ್ತು. ಅದ್ಭುತವಾಗಿ ಆಡಿದ್ದೀರಿ. ಇಂಥಾ ಹತ್ತಾರು ಟೂರ್ನಿಗಳನ್ನ ನೀವು ಗೆಲ್ಲುವಂತಾಗಲಿ ಅಂತ ಕಿಚ್ಚ ಹಾರೈಸಿದ್ದಾರೆ.

    ಮಯಾಂಕ್ ಅಗರ್ವಾಲ್ ಕರ್ನಾಟಕದ ಹುಡುಗ. ಆರಂಭದಲ್ಲಿ ಇವರನ್ನು ಟೀಮಿನಿಂದ ಕೈ ಬಿಡಲಾಗಿತ್ತು. ಆದರೆ ಪೃಥ್ವಿ ಗಾಯ ಗೊಂಡಾಗ ಕೊನೆಯ ಎರಡು ಟೆಸ್ಟ್ ಪಂದ್ಯಾಟಗಳಿಗಾಗಿ ಮಯಾಂಕ್ ರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಹೀಗೆ ಅನಿರೀಕ್ಷಿತವಾಗಿ ಸಿಕ್ಕ ಅವಕಾಶವನ್ನು ಚೆಂದಗೆ ಬಳಸಿಕೊಂಡ ಮಯಾಂಕ್ ಗೆ ಎಲ್ಲೆಡೆಯಿಂದ ಅಭಿನಂದನೆಗಳು ಬರುತ್ತಿವೆ. ಈ ಕನ್ನಡದ ಹುಡುಗನ ಸಾಧನೆಯನ್ನು ಕಿಚ್ಚ ಕೂಡಾ ಈ ಮೂಲಕ ಮೆಚ್ಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv