Tag: Actor Dhanveer

  • ದರ್ಶನ್ ಜೈಲಲ್ಲಿರೋದಕ್ಕೆ ಬರ್ತ್‌ಡೇ ಸೆಲೆಬ್ರೇಷನ್ ಬೇಡವೆಂದ ಧನ್ವೀರ್

    ದರ್ಶನ್ ಜೈಲಲ್ಲಿರೋದಕ್ಕೆ ಬರ್ತ್‌ಡೇ ಸೆಲೆಬ್ರೇಷನ್ ಬೇಡವೆಂದ ಧನ್ವೀರ್

    ರ್ಶನ್ (Darshan) ಜೊತೆ ಸದಾ ನಿಂತವರು (Actor Dhanveer) ನಟ ಧನ್ವೀರ್. ಯಾವುದೇ ಸಂಬಂಧ ಇಲ್ಲದಿದ್ದರೂ ಸಹೋದರನಂತೆ ಕಷ್ಟ ಸುಖದಲ್ಲಿ ಜೊತೆಯಾಗಿದ್ದವರು ಅವರು. ಹೀಗಾಗಿ ದರ್ಶನ್ ಕೂಡ ಹೈಕೋರ್ಟ್‍ನಿಂದ ಬೇಲ್ ಪಡೆದು ಬಂದ ಬಳಿಕ ಧನ್ವೀರ್‌ಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ್ದರು. ಈಗ ಪುನಃ ದರ್ಶನ್ ಜೈಲಿಗೆ ಹೋಗಿದ್ದಾರೆ. ಹೀಗಾಗಿ ಆಪ್ತ ಜೈಲಲ್ಲಿರುವ ಕಾರಣಕ್ಕೆ ಧನ್ವೀರ್ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.

    ಈ ಬಾರಿ ಸೆ.8ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿಲ್ಲ ಮನೆ ಹತ್ತಿರ ಯಾರೂ ಬರಬೇಡಿ ಎಂದು ಧನ್ವೀರ್ ಅಭಿಮಾನಿಗಳಿಗೆ ವಿನಂತಿ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಧನ್ವೀರ್ ಕಾರಣಾಂತರಗಳಿಂದ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ತಾವು ಇದ್ದಲ್ಲೇ ಹರಸಿ ಹಾರೈಸಿ, ಮುಂದಿನ ವರ್ಷ ಸಿಗುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮದ್ವೆಯಲ್ಲಿ ಅನುಶ್ರೀ ಉಟ್ಟ ಸೀರೆಯ ಬೆಲೆ 2.5 ಲಕ್ಷ ಅಲ್ಲ ಕೇವಲ 2,700 ರೂ.

    ಪ್ರತಿ ಬಾರಿ ದರ್ಶನ್ ಕೋರ್ಟ್ ಕಛೇರಿ ಸುತ್ತುವಾಗೆಲ್ಲ, ದೇವಸ್ಥಾನಕ್ಕೆ ಹೋಗುವಾಗೆಲ್ಲ ಜೊತೆ ನಿಂತವರು ಧನ್ವೀರ್. ದರ್ಶನ್ ಕಷ್ಟಕ್ಕೆ ಜೊತೆಯಾಗಿ ಹೆಜ್ಜೆ ಹಾಕ್ತಿರುವ ಧನ್ವೀರ್, ದರ್ಶನ್ ಜೈಲಲ್ಲಿರೋ ಕಾರಣಕ್ಕೆ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಅಶ್ಲೀಲ ಕಾಮೆಂಟ್ ಕೇಸ್‌ – ಪೊಲೀಸರ ತನಿಖೆಗೆ ವಿಜಯಲಕ್ಷ್ಮಿ ನಿರಾಸಕ್ತಿ

  • ದರ್ಶನ್ ಅಭಿಮಾನಿಗಳಿಂದ ಥಿಯೇಟರ್ ಧ್ವಂಸ ಆರೋಪ – ದೇವ್ರು ಒಳ್ಳೆಯದು ಮಾಡ್ಲಿ ಎಂದ ಧನ್ವೀರ್!

    ದರ್ಶನ್ ಅಭಿಮಾನಿಗಳಿಂದ ಥಿಯೇಟರ್ ಧ್ವಂಸ ಆರೋಪ – ದೇವ್ರು ಒಳ್ಳೆಯದು ಮಾಡ್ಲಿ ಎಂದ ಧನ್ವೀರ್!

    ರ್ಶನ್ (Darshan) ಅಭಿಮಾನಿಗಳಿಂದ ಥಿಯೇಟರ್ ಧ್ವಂಸ ಆರೋಪಕ್ಕೆ ನಟ ಧನ್ವೀರ್‌ (Actor Dhanveer) ಪ್ರತಿಕ್ರಿಯಿಸಿದ್ದು, ಒಳ್ಳೆಯದನ್ನ ಮಾಡೋದ್ರಲ್ಲೂ ಕೆಡುಕನ್ನ ಬಯಸುವವರಿಗೆ ದೇವ್ರು ಒಳ್ಳೆಯದನ್ನು ಮಾಡ್ಲಿ ಎಂದಿದ್ದಾರೆ.

    ಇತ್ತೀಚೆಗೆ ಬೆಂಗಳೂರಿನ (Bengaluru) ಥಿಯೇಟರ್‌ವೊಂದರಲ್ಲಿ ಧನ್ವೀರ್‌ ನಟನೆಯ ʻವಾಮನʼ ಚಿತ್ರದ ಟ್ರೇಲರ್‌ ರಿಲೀಸ್‌ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಕೆಲವರು ಕುರ್ಚಿ, ಕಿಟಕಿ ಗಾಜುಗಳನ್ನು ಪೀಸ್‌ ಪೀಸ್‌ ಮಾಡಿದರು. ಇದರು ದರ್ಶನ್‌ ಅಭಿಮಾನಿಗಳೇ ಮಾಡಿರುವ ಕೆಲಸ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ʻಪಬ್ಲಿಕ್ ಟಿವಿʼ ಜೊತೆಗಿನ ಸಂದರ್ಶನದಲ್ಲಿ ನಟ ಧನ್ವೀರ್‌ ಮಾತನಾಡಿದ್ದಾರೆ. ಈ ವೇಳೆ, ಇದನ್ನು ದರ್ಶನ್‌ ಅಭಿಮಾನಿಗಳು ಮಾಡಿದ್ದಾರೆ ಎನ್ನಲು ಸಾಧ್ಯವಿಲ್ಲ. ಅವರು ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಬಂದಿರುತ್ತಾರೆ. ನಡುವಲ್ಲಿ ಯಾರೋ ಒಂದಷ್ಟು ಜನ ಬಂದು ಸೇರಿಕೊಂಡಿರುತ್ತಾರೆ. ಕೆಡುಕನ್ನ ಬಯಸುವವರಿಗೆ ಸಹ ಒಳ್ಳೆಯದಾಗಲಿ ಎಂದಿದ್ದಾರೆ. ಇದನ್ನೂ ಓದಿ: ವಿಜಯಲಕ್ಷ್ಮಿ ಅಕ್ಕ ಹೋರಾಟ ನೋಡಿ ಅವರೊಂದಿಗೆ ನಿಲ್ಲಬೇಕು ಅನ್ನಿಸಿತು: ದರ್ಶನ್‌ ಕೇಸ್‌ ಬಗ್ಗೆ ಧನ್ವೀರ್ ಮಾತು

    ದರ್ಶನ್ ಕಷ್ಟದಲ್ಲಿದ್ದಾಗ ಯಾರು ಬರಲಿಲ್ವೋ ಬಿಡಲಿಲ್ವೋ ನನಗೆ ಗೊತ್ತಿಲ್ಲ. ನಾನು ದರ್ಶನ್ ಹೃದಯ ನೋಡಿ ಅವರ ಹತ್ತಿರ ಹೋಗಿದ್ದು. ಸಂದರ್ಭ ಪ್ರಕರಣ ಎಂಥದ್ದೇ ಇರಲಿ, ಅದು ಕೋರ್ಟ್‍ನಲ್ಲಿದೆ ತಪ್ಪು ಒಪ್ಪು ಬಯಲಾಗುತ್ತೆ, ಕಾನೂನಿದೆ ನೋಡಿಕೊಳ್ಳುತ್ತೆ ಎಂದಿದ್ದಾರೆ.

    ದರ್ಶನ್ ಜೀವನದಲ್ಲಿ ಅಂಥ ಪರಿಸ್ಥಿತಿ ಬಂತು ಅಂತ ಎಲ್ಲರೂ ಸಹಾಯ ಪಡ್ಕೊಂಡವರು ದೂರಾದ್ರು. ಕಷ್ಟ ಅಂತ ಬಂದಾಗ ಯಾರೂ ಕೈಚಾಚಿಲ್ಲ, ಸಹಾಯ ಪಡ್ಕೊಂಡವ್ರೆಲ್ಲ ದೂರಾದ್ರು. ಆವಾಗ ನನಗೆ ಮನಸ್ಸಿಗೆ ಬೇಜಾರಾಯ್ತು, ಜೊತೆಯಲ್ಲಿದ್ದವರೆಲ್ಲಾ ಹೀಗೆ ಮಾಡಿದ್ರು, ವಿಜಯಲಕ್ಷ್ಮಿ ಅಕ್ಕ ಒಂಟಿಯಾಗಿ ಹೋರಾಟ ಮಾಡ್ತಿದ್ರಲ್ಲ ಅದಕ್ಕೆ ನಿಂತೆ. ಅವರಿಗೆ ಎಲ್ಲಾ ರೀತಿಯ ಸೌಲಭ್ಯ ಇದೆ, ಅವರ ಬೇಕಾಗಿರೋದು ನೈತಿಕ ಬೆಂಬಲ. ಅದಕ್ಕೆ ದರ್ಶನ್ ಜೊತೆ ನಿಂತಿದ್ದು ಎಂದಿದ್ದಾರೆ.

    ಜೈಲಿಗೆ ಹೋಗಿ ಬಂದ ಬಳಿಕ ದರ್ಶನ್‍ಗೆ ಯಾರ್ಯಾರ ಮುಖ ಏನು ಅಂತ ಗೊತ್ತಾಯ್ತು. ಈಗ ಅವರಿಗೆ ಯಾರ ಸಹವಾಸನೂ ಬೇಡ ಅಂತ ಸುಮ್ನಿದ್ದಾರೆ. ಕಷ್ಟ ಬಂದಾಗ ಎಲ್ರೂ ದೂರ ಆದ ಮೇಲೆ ಹಾಗೇ ಅನ್ನಿಸುತ್ತೆ ಅಲ್ವಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಲಾಂಗ್ ವಿವಾದ: ವಿನಯ್, ರಜತ್‌ಗೆ ಷರತ್ತುಬದ್ಧ ಜಾಮೀನು ಮಂಜೂರು