Tag: actor Darshan

  • ತಮ್ಮ ಅರೆಸ್ಟ್ ಆದ ಚಿಂತೆಯಲ್ಲೇ ತಂದೆ ಗೋಳಾಡಿದ್ದರು, ಕೊನೆಯುಸಿರೆಳೆದರು: ಆರೋಪಿ ಸಹೋದರಿ ಕಣ್ಣೀರು

    ತಮ್ಮ ಅರೆಸ್ಟ್ ಆದ ಚಿಂತೆಯಲ್ಲೇ ತಂದೆ ಗೋಳಾಡಿದ್ದರು, ಕೊನೆಯುಸಿರೆಳೆದರು: ಆರೋಪಿ ಸಹೋದರಿ ಕಣ್ಣೀರು

    ಚಿತ್ರದುರ್ಗ: “ನನ್ನ ತಮ್ಮ ಅರೆಸ್ಟ್ ಆದ ಚಿಂತೆಯಲ್ಲೇ ಅವನನ್ನು ಬಿಡಿಸಿಕೊಂಡು ಬನ್ನಿ ಅಂತ ತಂದೆ ಗೋಳಾಡಿದ್ದರು, ಅದೇ ಚಿಂತೆಯಲ್ಲಿ ಕೊನೆಯುಸಿರೆಳೆದರು. ನಿಜಕ್ಕೂ ನನ್ನ ನನ್ನ ತಮ್ಮ ಯಾವುದೇ ತಪ್ಪು ಮಾಡಿಲ್ಲ, ಬಡವರ ಮಕ್ಕಳೆಂದು ಅವನನ್ನ ಪ್ರಕರಣದಲ್ಲಿ ಸಿಲುಕಿಸಿದ್ದಾರೆ…” ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ಅನು ಅಲಿಯಾಸ್ ಅನಿಲ್ ಸಹೋದರಿಯ ನೋವಿನ ನುಡಿಗಳಿವು..

    ಚಿತ್ರದುರ್ಗದಲ್ಲಿ (Chitradurga) ಮಾಧ್ಯಮಗಳ ಜೊತೆ ಮಾತನಾಡಿದ ಆರೋಪಿ ಅನು ಸಹೋದರಿ, ನನ್ನ ತಮ್ಮ ಅರೆಸ್ಟ್ ಆದ ಸುದ್ದಿ ಕೇಳಿ ನನ್ನ ತಂದೆ ಕಣೀರಿಟ್ಟಿದ್ದರು. ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಅವನನ್ನು ಬಿಡಿಸಿಕೊಂಡು ಬನ್ನಿ ಎಂದು ಗೋಳಾಡಿದ್ದರು. ಅದೇ ಚಿಂತೆಯಲ್ಲಿ ಮಲಗಿದವರು ಕೊನೆಯುಸಿರೆಳೆದಿದ್ದಾರೆ. ನನ್ನ ತಮ್ಮ ಯಾವುದೇ ತಪ್ಪು ಮಾಡಿಲ್ಲ. ಅವನು ನನ್ನ ಬಳಿ ಯಾವುದೇ ವಿಷಯವನ್ನೂ ಮುಚ್ಚಿಟ್ಟವನಲ್ಲ. ಬಡವರ ಮಕ್ಕಳೆಂದು ನನ್ನ ತಮ್ಮನನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ.

    ಅನು ನಮ್ಮ ಜೊತೆಯಲ್ಲಿಯೇ ಇದ್ದರೂ ಯಾವುದೇ ವಿಷಯ ಹೇಳಿಲ್ಲ. ಟಿವಿ ನೋಡಿದ ಬಳಿಕವೇ ನಮಗೂ ವಿಷಯ ತಿಳಿದಿದೆ. ದಯವಿಟ್ಟು ಅವನ್ನು ಕರೆದುಕೊಂಡು ಬನ್ನಿ ಎಂದು ಅಳಲು ತೋಡಿಕೊಂಡಿದ್ದಾರೆ.

    ಚಿತ್ರದುರ್ಗ ನಗರದಲ್ಲಿದ್ದ ಎ6 ಆರೋಪಿ ಜಗ್ಗ ಅಲಿಯಾಸ್ ಜಗದೀಶ್ ಹಾಗೂ ಎ7 ಆರೋಪಿ ಅನು ಅಲಿಯಾಸ್ ಅನಿಲ್ ಎಂಬ ಇಬ್ಬರು ಆರೋಪಿಗಳನ್ನ ಪೊಲಿಸರು ಶುಕ್ರವಾರ ಬೆಳಗ್ಗೆ ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಚಿತ್ರದುರ್ಗ ಡಿವೈಎಸ್ಪಿ ದಿನಕರ್ ನೇತೃತ್ವದಲ್ಲಿ ಆರೋಪಿಯನ್ನ ಬಂಧಿಸಲಾಗಿತ್ತು. ಬಳಿಕ ಕಾಮಾಕ್ಷಿಪಾಳ್ಯ ಪೊಲೀಸರು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದರು.

    ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಹತ್ಯೆ ಪ್ರಕರಣದಲ್ಲಿ (Renukaswamy Murder Case) ದರ್ಶನ್ (Actor Darshan), ಗೆಳತಿ ಪವಿತ್ರಾ ಗೌಡ (Pavithra Gowda) ಸೇರಿದಂತೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಸದ್ಯ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿದ್ದು, ವಿಚಾರಣೆ ನಡೆಯುತ್ತಿದೆ.

  • ರೇಣುಕಾಸ್ವಾಮಿ ಹತ್ಯೆ‌ಗೂ ಮುನ್ನ ಏನಾಯ್ತು? ಇಂಚಿಂಚು ಮಾಹಿತಿ ಬಾಯ್ಬಿಟ್ಟ ಆರೋಪಿಗಳು; ಡಿ-ಗ್ಯಾಂಗ್‌ ಕ್ರೌರ್ಯ ಅನಾವರಣ!

    ರೇಣುಕಾಸ್ವಾಮಿ ಹತ್ಯೆ‌ಗೂ ಮುನ್ನ ಏನಾಯ್ತು? ಇಂಚಿಂಚು ಮಾಹಿತಿ ಬಾಯ್ಬಿಟ್ಟ ಆರೋಪಿಗಳು; ಡಿ-ಗ್ಯಾಂಗ್‌ ಕ್ರೌರ್ಯ ಅನಾವರಣ!

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy Case) ವಿಚಾರವಾಗಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದರ್ಶನ್ ಗ್ಯಾಂಗ್ ವಿಚಾರಣೆ ಮುಂದುವರಿದಿದೆ. ರೇಣುಕಾಸ್ವಾಮಿ ಕೊಲೆಯಾಗಿದ್ದು ಎಷ್ಟೊತ್ತಿಗೆ? ಹೇಗೆಲ್ಲಾ ಹಲ್ಲೆ ಮಾಡಿ ಕೊಂದಿದ್ದಾರೆ? ಯಾರು ಇದಕ್ಕೆ ಸಾಥ್‌ ನೀಡಿದ್ದರು ಎಂಬ ಇಂಚಿಂಚು ಮಾಹಿತಿಯನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ಮಾಹಿತಿಗಳು ಡಿ-ಗ್ಯಾಂಗ್ (D Gang) ಕ್ರೌರ್ಯವನ್ನು ಅನಾವರಣ ಮಾಡಿವೆ.

    ಸದ್ಯ ಕಸ್ಟಡಿ ಅವಧಿ ಮುಗಿಯಲು ಇನ್ನೆರಡು ದಿನವಷ್ಟೇ ಬಾಕಿ ಉಳಿದ ಕಾರಣ, ಇನ್ನಷ್ಟು ವಿವರ ಬಾಯ್ಬಿಡಿಸಲು ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ತಾಂತ್ರಿಕ ಸಾಕ್ಷ್ಯಗಳನ್ನೂ ಸಂಗ್ರಹಿಸಿದ್ದಾರೆ. ದರ್ಶನ್‌ ಸೇರಿ ಎಲ್ಲಾ ಆರೋಪಿಗಳ ಮೊಬೈಲ್‌ ರಿಟ್ರೈವ್‌ಗೆ ಕಳಿಸಿದ್ದಾರೆ. ದರ್ಶನ್ ಆಪ್ತನೊಬ್ಬನ ಮನೆ ಮೇಲೆ ದಾಳಿ ನಡೆಸಿ, ಸುಪಾರಿ ನೀಡಲು ಇಟ್ಟಿದ್ದರು ಎನ್ನಲಾದ 30 ಲಕ್ಷ ರೂ. ಹಣವನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ. 10ನೇ ಆರೋಪಿ ವಿನಯ್ ಮಾಲೀಕತ್ವದ ಪಬ್ ಮೇಲೆ ರೇಡ್ ಮಾಡಿ, ಸಿಸಿಟಿವಿಯ ಕೆಲ ದೃಶ್ಯಾವಳಿಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಡಿ-ಗ್ಯಾಂಗ್‌ನ ಪವನ್,ನಾಗ ಹೇಳಿದ್ದೇನು?
    ರೇಣುಕಾಸ್ವಾಮಿಯ ತಲೆಯನ್ನು ಲಾರಿಗೆ ಜಜ್ಜಿದ ರೀತಿಗೆ ಸಂಜೆಯೇ ಸತ್ತು ಹೋಗಿದ್ದ. ಜೂ.8ರಂದು ಸಂಜೆ 6ರಿಂದ 6:30ರ ಒಳಗೆ ಪ್ರಾಣ ಹೋಗಿತ್ತು. ಹಲ್ಲೆಯ ತೀವ್ರತೆಗೆ 6 ಗಂಟೆಗೆಲ್ಲಾ ರೇಣುಕಾಸ್ವಾಮಿ ಕುಸಿದು ಬಿದ್ದಿದ್ದ. ರೇಣುಕಾಸ್ವಾಮಿ ನೀರು ಕುಡಿಸಿ ಎಬ್ಬಿಸೋದಕ್ಕೆ ನೋಡಿದ್ವಿ.. ಎದ್ದೇಳಲಿಲ್ಲ. ದರ್ಶನ್‌ಗೆ ಫೋನ್ ಮಾಡಿದಾಗ ಡಾಕ್ಟರ್‌ನ ಕರೆಸಿ ಅಂತ ಹೇಳಿದ್ರು, ಗಡಿಬಿಡಿಯಲ್ಲಿ ಇಷ್ಟೆಲ್ಲಾ ಮಾಡೋ ಹೊತ್ತಿಗೆ ಸ್ವಾಮಿ ಪ್ರಾಣ ಹೋಗಿತ್ತು. ರಾತ್ರಿ 8 ಗಂಟೆ ತನಕ ಏನ್ ಮಾಡೋದು ಅಂತಾನೇ ಗೊತ್ತಾಗಲಿಲ್ಲ. ಚಿತ್ರದುರ್ಗದಿಂದ ಬಂದಿದ್ದ ರವಿಗೆ ಹೆಣ ಬಿಸಾಡೋದಕ್ಕೆ ಹೇಳಿದ್ವಿ, ಆದರೆ, ರವಿ ಭಯ ಬಿದ್ದು, ನಾನು ಹಾಗೇ ಮಾಡೋಲ್ಲ ಅಂದ. ವಿನಯ್, ಪ್ರದೋಷ್ ಅಣ್ಣ ಸ್ವಲ್ಪ ಹೊತ್ತು ಹೊರಗೆ ಹೋಗಿದ್ದರು. ಆಮೇಲೆ ಕಾರ್ತಿಕ್ ಟೀಮನ್ನು ಪ್ರದೋಷ್‌ ಅಣ್ಣ ರೆಡಿ ಮಾಡಿದ್ರು. ರೇಣುಕಾಸ್ವಾಮಿ ಶವವನ್ನು ಕಾರ್ತೀಕ್ ಟೀಂ ತಗೊಂಡು ಹೋಯ್ತು ಅಂತಾ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಡಿ-ಗ್ಯಾಂಗ್‌ನ ದೀಪಕ್ ಹೇಳಿದ್ದೇನು?
    ಪಟ್ಟಣಗೆರೆ ಶೆಡ್‌ಗೆ ಬಿರಿಯಾನಿ ತರಿಸಿದ್ವಿ, ರೇಣುಕಾಸ್ವಾಮಿಗೆ ತಿನ್ನೋಕೆ ಬಿರಿಯಾನಿ ನೀಡಿದ್ವಿ. ಆದ್ರೆ, ನಾನು ಸಸ್ಯಹಾರಿ, ತಿನ್ನಲ್ಲ ಎಂದು ಸ್ವಾಮಿ ಹೇಳಿದ. ಆದರೂ, ಸ್ವಾಮಿಗೆ ಬಲವಂತವಾಗಿ ಬಿರಿಯಾನಿ ತಿನ್ನಿಸಿದ್ವಿ. ಸ್ವಾಮಿ ಬಿರಿಯಾನಿಯನ್ನು ತಿನ್ನದೇ ನೆಲಕ್ಕೆ ಉಗುಳಿದ್ದ, ಇದರಿಂದ ಸಿಟ್ಟಗೆದ್ದು ರೇಣುಕಾಸ್ವಾಮಿಯನ್ನು ಥಳಿಸಿದ್ವಿ, ಬಾಸ್ ಬರ್ತಾರೆ, ಒದೆ ತಿನ್ನೋಕೆ ರೆಡಿಯಾಗು ಅಂತಾನೂ ಹೇಳಿದ್ವಿ. ಬಿರಿಯಾನಿ ತಿಂದ್ರೆ ಶಕ್ತಿ ಬರುತ್ತೆ ಅಂತಾ ಹೇಳಿದ್ವಿ ಎಂದು ಇಂಚಿಂಚು ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ರೇಣುಕಾಸ್ವಾಮಿಯನ್ನ ಅಪಹರಿಸಿದ್ದು ಹೇಗೆ?
    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಿತ್ಯ ಹೊಸ-ಹೊಸ ವಿಚಾರಗಳು ಬೆಳಕಿಗೆ ಬರ್ತಿವೆ. ರೇಣುಕಾಸ್ವಾಮಿಯನ್ನು ರಘು ಗ್ಯಾಂಗ್ ಜೂನ್ 8ರಂದು ಚಿತ್ರದುರ್ಗದಲ್ಲಿ ಪುಸಲಾಯಿಸಿ ಕಿಡ್ನಾಪ್ ಮಾಡಿತ್ತು. ಇದಕ್ಕೆ ಇಂದು ದೃಶ್ಯ ಸಾಕ್ಷ್ಯವೂ ಸಿಕ್ಕಿದೆ. ಜೂ.8ರಂದು ಬೆಳಗ್ಗೆ 9:56ಕ್ಕೆ ಕುಂಚಿಗನಾಳ್ ಬಳಿ ಸಿನಿಮೀಯ ರೀತಿಯಲ್ಲಿ ರೇಣುಕಸ್ವಾಮಿಯನ್ನು ರಘು ಗ್ಯಾಂಗ್ ಅಪಹರಿಸುತ್ತದೆ. ಆಟೋದಿಂದ ರೇಣುಕಸ್ವಾಮಿಯನ್ನು ಕಾರಿಗೆ ಶಿಫ್ಟ್ ಮಾಡಿಕೊಂಡು ಬೆಂಗಳೂರಿಗೆ ಕರೆತರಲಾಗುತ್ತದೆ. ಕುಂಚಿಗನಾಳ್ ಬಳಿಯ ಪೆಟ್ರೋಲ್ ಬಂಕ್ ಬಳಿ ಪ್ರಕರಣದ 7ನೇ ಆರೋಪಿ ಜಗ್ಗನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮಾರ್ಗಮಧ್ಯೆ ಗುಯಿಲಾಳು ಚೆಕ್‌ಪೋಸ್ಟ್‌ನಲ್ಲಿಯೂ ಇಟಿಯೋಸ್ ಕಾರು ಪಾಸ್ ಆಗುವ ಸಿಸಿಟಿವಿ ದೃಶ್ಯ ʻಪಬ್ಲಿಕ್ ಟಿವಿʼಗೆ ಲಭ್ಯ ಆಗಿದೆ. ಮಾರ್ಗಮಧ್ಯೆ ತುಮಕೂರಲ್ಲಿ ರೇಣುಕಾಸ್ವಾಮಿಯೇ ರಘು ಗ್ಯಾಂಗ್‌ಗೆ ತಿಂಡಿ ಕೊಡಿಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ತಡರಾತ್ರಿ ಚಿತ್ರದುರ್ಗದಲ್ಲಿ ರಘು ಗ್ಯಾಂಗ್ ಸಮ್ಮುಖದಲ್ಲಿ ಪೊಲೀಸರು ಮಹಜರು ಪ್ರಕ್ರಿಯೆ ಮುಗಿಸಿದ್ದಾರೆ.

    ಮಗನ ಬಂಧನದಿಂದ ಮನನೊಂದು ತಂದೆ ಸಾವು:
    ಈ ಹೊತ್ತಲ್ಲೇ ಎ6 ಆರೋಪಿ ಜಗ್ಗ, ಎ7 ಆರೋಪಿ ಅನುಕುಮಾರ್ ಇಬ್ಬರನ್ನೂ ಚಿತ್ರದುರ್ಗ ಡಿವೈಎಸ್‌ಪಿ ಬಂಧಿಸಿದ್ದಾರೆ. ಕೂಡಲೇ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ. ಮಗನ ಬಂಧನ ವಿಚಾರ ತಿಳಿದು ತಂದೆ ಚಂದ್ರಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಮಗ ಬರೋವರೆಗೂ ಅಂತ್ಯಕ್ರಿಯೆ ಮಾಡಲ್ಲ ಎಂದು ಕೂತಿದ್ದಾರೆ.

    ಇನ್ನೂ ಆರೋಪಿ ಜಗದೀಶ್ ತಾಯಿ ಸುಲೋಚನಮ್ಮ ಪ್ರತಿಕ್ರಿಯಿಸಿ, ಯಾರ ಮಕ್ಕಳು ಕೊಲೆ ಆಗಬಾರದು. ಮಕ್ಕಳು ಸತ್ತರೇ ಆಗುವ ನೋವು ನನಗೂ ಗೊತ್ತು, ನನ್ನ ಮಗ ತಪ್ಪು ಮಾಡಿದರೆ ಶಿಕ್ಷೆ ಆಗಲಿ, ಆದ್ರೆ ನಿಜಾಂಶ ಬಯಲಾಗಬೇಕು ಎಂದು ಅಲವತ್ತುಕೊಡಿದ್ದಾರೆ. ಇತ್ತ, ಬೆಂಗಳೂರಲ್ಲಿ ಸ್ಕಾರ್ಪಿಯೋ ಮಾಲಿಕ ಪುನೀತ್ ಮತ್ತು ಶೆಡ್ ಕ್ಲೀನ್ ಮಾಡಿದ್ದ ಹೇಮಂತ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಈವರೆಗೂ ಸಿಕ್ಕಿಬಿದ್ದವರ ಆರೋಪಿಗಳ ಸಂಖ್ಯೆ 18ಕ್ಕೇರಿದೆ. ಎ-9 ಆರೋಪಿ ರಾಜು ಸದ್ಯ ಪೊಲೀಸರಿಂದ ಕಣ್ಮರೆಯಾಗಿದ್ದಾನೆ.

  • ರೇಣುಕಾಸ್ವಾಮಿ ಹತ್ಯೆ ಕೇಸ್‌: ಕಣ್ಣೆದುರೇ ಮಗ ಅರೆಸ್ಟ್‌ – ಮನನೊಂದ ತಂದೆ ಹೃದಯಾಘಾತದಿಂದ ಸಾವು!

    ರೇಣುಕಾಸ್ವಾಮಿ ಹತ್ಯೆ ಕೇಸ್‌: ಕಣ್ಣೆದುರೇ ಮಗ ಅರೆಸ್ಟ್‌ – ಮನನೊಂದ ತಂದೆ ಹೃದಯಾಘಾತದಿಂದ ಸಾವು!

    ಚಿತ್ರದುರ್ಗ: ದರ್ಶನ್‌ ಮತ್ತು ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ A6, A7 ಆರೋಪಿಗಳನ್ನು ಚಿತ್ರದುರ್ಗ ಡಿವೈಎಸ್ಪಿ (Chitradurga DYSP), ಕಾಮಾಕ್ಷಿಪಾಳ್ಯ ಪೊಲೀಸರ ನೇತೃತ್ವದಲ್ಲಿ ಶುಕ್ರವಾರ ಬಂಧಿಸಲಾಯಿತು. A7 ಆರೋಪಿ ಬಂಧನದ ಬೆನ್ನಲ್ಲೇ ಆತನ ತಂದೆ ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ಹೃದಯ ವಿದ್ರಾವಕ ಘಟನೆ ನಡೆದಿದೆ.

    ಚಿತ್ರದುರ್ಗ ಡಿವೈಎಸ್ಪಿ ದಿನಕರ್, ಕಾಮಾಕ್ಷಿಪಾಳ್ಯ ಇನ್ಸ್ ಪೆಕ್ಟರ್ ಸಂಜಯ್ ಗೌಡ್ ನೇತೃತ್ವದಲ್ಲಿ ಎ6 ಆರೋಪಿ (Accused) ಜಗ್ಗ ಅಲಿಯಾಸ್ ಜಗಧೀಶ್, ಎ7 ಆರೋಪಿ ಅನಿ ಅಲಿಯಾಸ್ ಅನುಕುಮಾರ್ ಇಬ್ಬರನ್ನೂ ಬಂಧಿಸಿ ಬೆಂಗಳೂರಿಗೆ ಕರೆದೊಯ್ದರು. ಇದನ್ನೂ ಓದಿ: ಪೋಕ್ಸೊ ಕೇಸಲ್ಲಿ ಬಿಎಸ್‌ವೈಗೆ ರಿಲೀಫ್‌; ಒತ್ತಾಯದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೈಕೋರ್ಟ್‌ ಸೂಚನೆ

    ಬಂಧನದ ಬೆನ್ನಲ್ಲೇ ಆರೋಪಿ ಅನುಕುಮಾರ್‌ ತಂದೆ ಚಂದ್ರಣ್ಣ (60) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಗನ ಬಂಧನದಿಂದ ಮನನೊಂದ ತಂದೆ ಚಿತ್ರದುರ್ಗದ ಸಿಹಿ ನೀರು ಹೊಂಡ ಬಳಿಯ ಮನೆಯಲ್ಲಿ ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ದೆಹಲಿಯ ಯಮುನಾ ಬಳಿಯ ಪ್ರಾಚೀನ ಶಿವಮಂದಿರ ಕೆಡವಲು ನೀಡಿದ ಆದೇಶ ಎತ್ತಿಹಿಡಿದ ಸುಪ್ರೀಂ

  • ಭೂಮಿ ಮೇಲೆ ಇಲ್ಲದಂತೆ ಮಾಡ್ತೀನಿ ಅಂತಾ ದರ್ಶನ್‌ ಬೆದರಿಸಿದ್ದರು: ನಿರ್ಮಾಪಕ

    ಭೂಮಿ ಮೇಲೆ ಇಲ್ಲದಂತೆ ಮಾಡ್ತೀನಿ ಅಂತಾ ದರ್ಶನ್‌ ಬೆದರಿಸಿದ್ದರು: ನಿರ್ಮಾಪಕ

    ಬೆಂಗಳೂರು: ನಟ ದರ್ಶನ್‌ (Actor Darshan) ಅಭಿಮಾನಿಗಳಿಂದ ನನಗೆ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಆರೋಪಿಸಿ ಸಿನಿಮಾ ನಿರ್ಮಾಪಕ ಭರತ್‌ ಪೊಲೀಸ್‌ ಠಾಣೆಗೆ ಮತ್ತೆ ದೂರು ನೀಡಿದ್ದಾರೆ.

    ದೂರಿನ ಕುರಿತು ‘ಪಬ್ಲಿಕ್‌ ಟಿವಿ’ ಜೊತೆ ಮಾತನಾಡಿದ ಅವರು, ನಾನು ‘ಭಗವಾನ್‌ ಶ್ರೀಕೃಷ್ಣ’ ಸಿನಿಮಾ (2022) ಮಾಡುತ್ತಿದ್ದೆ. ಸಿನಿಮಾದ ನಿರ್ಮಾಪಕ ನಾನು. ಶೆಡ್ಯೂಲ್‌ ಮುಗಿದ ಮೇಲೆ ನಾವು ಒಂದು ಬ್ರೇಕ್‌ ತೆಗೆದುಕೊಂಡಿದ್ದೆವು. ಸ್ಕ್ರಿಪ್ಟ್‌ ರೆಡಿ ಇರಲಿಲ್ಲ. ಹೀಗಾಗಿ ಬ್ರೇಕ್‌ ತೆಗೆದುಕೊಂಡಿದ್ದೆವು. ಆಗ ದರ್ಶನ್‌ ಅವರು ನನಗೆ ಸಿನಿಮಾ ಮಾಡುವಂತೆ ಒತ್ತಡ ಹಾಕುತ್ತಾರೆ. ಸಿನಿಮಾ ಮಾಡದಿದ್ದರೆ ನೀನು ಭೂಮಿ ಮೇಲೆ ಇಲ್ಲದಂತೆ ಮಾಡುತ್ತೇವೆ ಎಂದು ಬೆದರಿಸಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚರಂಡಿಗೆ ಬೇಡ, ಸ್ವಾಮಿ ಮನೆಯವರಿಗಾದ್ರೂ ಶವ ಸಿಕ್ಕಲಿ ಎಂದಿದ್ದ ಆರೋಪಿ ಕಾರ್ತಿಕ್!

    ನಮ್ಮ ಸಿನಿಮಾದ ಹೀರೋ ಫೋನ್‌ ಥ್ರೂ ಕಾನ್ಫರೆನ್ಸ್‌ ತೆಗೆದುಕೊಂಡು ದರ್ಶನ್‌ ಸರ್‌ ಮಾತನಾಡಿದ್ದರು. ನನಗೆ ಬೆದರಿಕೆ ಹಾಕಿದ್ದರು. ಮತ್ತೆ ನನ್ನನ್ನು ಫ್ಯಾಕ್ಟರಿಯೊಂದಕ್ಕೆ ಕರೆಸಿಕೊಂಡು ಎನ್‌ಒಸಿಗೆ ಸಹಿ ಹಾಕು ಅಂತಾ ಒತ್ತಡ ಹಾಕಿದ್ದರು. ಅದಕ್ಕೆ ನಾನು, ನನ್ನ ಅಮೌಂಟ್‌ ಸೆಟಲ್‌ಮೆಂಟ್‌ ಮಾಡಿ ನಂತರ ಸಹಿ ಹಾಕುತ್ತೇನೆ ಎಂದಿದ್ದೆ. ನನಗೆ ಹಲ್ಲೆ ಮಾಡಿರಲಿಲ್ಲ. ಆದರೆ ಸಂದರ್ಭ ಹಾಗಿತ್ತು. ನನ್ನ ಜೊತೆ ಕೆಲ ಸ್ನೇಹಿತರು ಕೂಡ ಬಂದಿದ್ದರು. ಹಾಗಾಗಿ ನಾನು ಬಚಾವ್‌ ಆಗಿ ಬಂದೆ. ಇಲ್ಲದೇ ಇದ್ದಿದ್ರೆ ಅವತ್ತು ನನಗೂ ಏನು ಮಾಡ್ತಿದ್ರೋ ಗೊತ್ತಿಲ್ಲ ಎಂದು ನೆನಪಿಸಿಕೊಂಡಿದ್ದಾರೆ.

    ಬೆದರಿಕೆ ಪ್ರಕರಣದಲ್ಲಿ ಮುಂಚೆ ದರ್ಶನ್‌ ಅವರನ್ನು ಕರೆಸಿ ಪೊಲೀಸರು ತನಿಖೆ ಮಾಡಿರಲಿಲ್ಲ. ಆಮೇಲೆ ನಾನು ಸುಮ್ಮನೆ ಆಗಿದ್ದೆ. ಈಗ ಕೊಲೆ ಪ್ರಕರಣ ಬೆಳಕಿಗೆ ಬಂದ್ಮೇಲೆ, ನನ್ನ ಹಳೆ ಆಡಿಯೋ ವೈರಲ್‌ ಆಗುತ್ತಿದೆ. ಅದಕ್ಕೆ ಅವರ ಅಭಿಮಾನಿಗಳು ಬೆದರಿಕೆ ಸಂದೇಶ ಕಳಿಸುತ್ತಿದ್ದಾರೆ. ಆದ್ದರಿಂದ ನಾನು ರಕ್ಷಣೆ ಬೇಕು ಎಂದು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಡೀಲ್‌ ಮಾಡಲಾಗಿದ್ದ 30 ಲಕ್ಷ ಹಣ ಸೀಜ್‌

  • ರೇಣುಕಾಸ್ವಾಮಿ ಹತ್ಯೆ ಪ್ರಕರಣ – ದರ್ಶನ್ ಗ್ಯಾಂಗ್‍ನ ಮತ್ತಿಬ್ಬರು ಅರೆಸ್ಟ್

    ರೇಣುಕಾಸ್ವಾಮಿ ಹತ್ಯೆ ಪ್ರಕರಣ – ದರ್ಶನ್ ಗ್ಯಾಂಗ್‍ನ ಮತ್ತಿಬ್ಬರು ಅರೆಸ್ಟ್

    ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಆರೋಪಿ ದರ್ಶನ್ (Darshan) ಗ್ಯಾಂಗ್‍ನ ಮತ್ತಿಬ್ಬರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

    ಚಿತ್ರದುರ್ಗ ನಗರದಲ್ಲಿದ್ದ ಎ6 ಜಗ್ಗ ಅಲಿಯಾಸ್ ಜಗದೀಶ್ ಹಾಗೂ ಎ7 ಅನಿ ಅಲಿಯಾಸ್ ಅನಿಲ್ ಎಂಬ ಇಬ್ಬರು ಆರೋಪಿಗಳನ್ನ ಪೊಲಿಸರು ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಚಿತ್ರದುರ್ಗ ಡಿವೈಎಸ್ಪಿ ದಿನಕರ್ ಹಾಗೂ ಕಾಮಾಕ್ಷಿಪಾಳ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಕೋಳಿ ಎಸೆದಂತೆ ಎಸೆದು ಟ್ರಕ್‌ಗೆ ಗುದ್ದಿ, ಸಿಕ್ಕ ಸಿಕ್ಕ ವಸ್ತುಗಳಲ್ಲಿ ಹೊಡೆದು ಹತ್ಯೆ

    ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಮರ್ಡರ್ ಪ್ರಕರಣದಲ್ಲಿ ದರ್ಶನ್, ಗೆಳತಿ ಪವಿತ್ರಾ (Pavithra Gowda) ಗೌಡ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಸದ್ಯ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿದ್ದು, ವಿಚಾರಣೆ ನಡೆಯುತ್ತಿದೆ.

    ಚಿತ್ರದುರ್ಗದ ರೇಣುಕಾಸ್ವಾಮಿ, ಪವಿತ್ರಾ ಗೌಡ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಮಾಡಿದ ನಂತರ ಅವರನ್ನು ಅಪಹರಿಸಿ ರೇಣುಕಾಸ್ವಾಮಿ ಅವರನ್ನು ಜೂನ್ 9 ಭಾನುವಾರ ಹತ್ಯೆ ಮಾಡಲಾಗಿತ್ತು. ಕೊಲೆ ಮಾಡಿದ ಇಬ್ಬರು ಅರೋಪಿಗಳ ಜೊತೆ ದರ್ಶನ್ ನಿರಂತರ ಸಂಪರ್ಕದಲ್ಲಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಪೊಲೀಸ್ ವಿಚಾರಣೆಯ ಸಂದರ್ಭದಲ್ಲಿ ಕೊಲೆ ಆರೋಪಿಗಳು ದರ್ಶನ್ ಸೂಚನೆಯಂತೆ ಕೊಲೆ ಮಾಡಿದ್ದೇವೆ. ಕೊಲೆಗೆ ದರ್ಶನ್ ಸುಪಾರಿ ನೀಡಿದ್ದರು ಎಂದು ಆರೋಪಿಗಳು ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ದರ್ಶನ್ ಬಂಧಿಸಲಾಗಿತ್ತು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ನ 8ನೇ ಆರೋಪಿ ಶರಣಾಗತಿ – ದರ್ಶನ್‌ಗೆ ಕಾರು ಕೊಟ್ಟಿದ್ದವರಿಗೂ ಸಂಕಷ್ಟ!

  • ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧೆಗೆ ಬಯಸಿದ್ರಾ ನಟ ದರ್ಶನ್? – ಕಾಂಗ್ರೆಸ್‌ ಅಚ್ಚರಿ ಅಭ್ಯರ್ಥಿ ಜೈಲುಪಾಲಾಗಿದ್ದಾರೆ ಎಂದ ಸಿಪಿವೈ

    ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧೆಗೆ ಬಯಸಿದ್ರಾ ನಟ ದರ್ಶನ್? – ಕಾಂಗ್ರೆಸ್‌ ಅಚ್ಚರಿ ಅಭ್ಯರ್ಥಿ ಜೈಲುಪಾಲಾಗಿದ್ದಾರೆ ಎಂದ ಸಿಪಿವೈ

    ರಾಮನಗರ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧನವಾಗಿರುವ ನಟ ದರ್ಶನ್ (Actor Darshan), ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧೆಗೆ ಬಯಸಿದ್ರಾ ಅನ್ನೋ ಬಗ್ಗೆ ಮಾಜಿ ಸಚಿವ ಸಿ.ಪಿ ಯೋಗೇಶ್ವರ್‌ ಸುಳಿವು ಕೊಟ್ಟಿದ್ದಾರೆ. ದರ್ಶನ್‌ ಅವರನ್ನ ಕಾಂಗ್ರೆಸ್‌ನಿಂದ ನಿಲ್ಲಿಸಲು ಡಿಕೆ ಬ್ರದರ್ಸ್‌ ಸಿದ್ಧತೆ ನಡೆಸಿದ್ದರು ಎಂದು ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (CP Yogeshwara) ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಕಾಂಗ್ರೆಸ್ ನಿಂದ ಅಚ್ಚರಿ ಅಭ್ಯರ್ಥಿ ಹಾಕ್ತೇವೆ ಎಂದಿದ್ದ ಡಿ.ಕೆ ಸುರೇಶ್ (DK Syu ಹೇಳಿಕೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ನವರ ಅಚ್ಚರಿ ಅಭ್ಯರ್ಥಿ ಇದೀಗ ಜೈಲುಪಾಲಾಗಿದ್ದಾರೆ. ಚಿತ್ರನಟರೊಬ್ಬರು ಕಾಂಗ್ರೆಸ್ ಪರವಾಗಿ ಹೆಚ್ಚು ಪ್ರಚಾರ ಮಾಡಿದ್ದರು. ಅವರನ್ನ ಕಾಂಗ್ರೆಸ್‌ಗೆ ಸೇರಿಸಿಕೊಂಡು ಚುನಾವಣೆಗೆ ನಿಲ್ಲಿಸಲು ಡಿ.ಕೆ ಬ್ರದರ್ಸ್ ಪ್ಲ್ಯಾನ್‌ ಮಾಡಿದ್ದರು. ಆ ವ್ಯಕ್ತಿ ಯಾರು ಅಂತ ನೀವೆ ಊಹೆ ಮಾಡಿಕೊಳ್ಳಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ದರ್ಶನ್‌‌ ಸ್ಪರ್ಧೆಗೆ ಬಯಸಿದ್ದರು ಅನ್ನೋ ಸುಳಿವು ಬಿಟ್ಟುಕೊಟ್ಟಿದ್ದಾರೆ. ಇದನ್ನೂ ಓದಿ: ಚರಂಡಿಗೆ ಬೇಡ, ಸ್ವಾಮಿ ಮನೆಯವರಿಗಾದ್ರೂ ಶವ ಸಿಕ್ಕಲಿ ಎಂದಿದ್ದ ಆರೋಪಿ ಕಾರ್ತಿಕ್!

    ದರ್ಶನ್ ಮೇಲೆ ಕೊಲೆ ಆರೋಪ ಕುರಿತು ಮಾತನಾಡಿ, ಈ‌ ವಿಚಾರವನ್ನ ಮಾಧ್ಯಮಗಳಲ್ಲಿ ನೋಡಿದ್ದೇನೆ. ಇದೊಂದು ವಿಚಿತ್ರ ಕೇಸ್ ಅನ್ನಿಸ್ತಿದೆ. ಪಾಪ ಅವರಿಗೆ ರಾಜಕೀಯಕ್ಕೆ ಬರಬೇಕು ಅಂತ ಆಸೆ ಇತ್ತೇನೋ. ಆದರೆ ಈ ರೀತಿ ಅನಾಹುತ ಆಗೋಗಿದೆ. ಮುಂದೆ ಏನಾಗುತ್ತೋ ನೋಡೊಣ ಎಂದು ಸಿಪಿವೈ ಹೇಳಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವರಾಗಿ ಬಂದ ಕುಮಾರಸ್ವಾಮಿಗೆ ಏರ್ಪೋರ್ಟ್ ಬಳಿ ಅದ್ದೂರಿ ಸ್ವಾಗತ

    ಇದೇ ವೇಳೆ ಪೋಕ್ಸೋ ಕೇಸ್‌ನಲ್ಲಿ ಮಾಜಿ ಸಿಎಂ ಬಿಎಸ್‌ವೈ ವಿರುದ್ಧ ಜಾಮೀನು ರಹಿತ ವಾರೆಂಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಕಾಂಗ್ರೆಸ್ ನವರ ದ್ವೇಷದ ರಾಜಕಾರಣ. ಯಡಿಯೂರಪ್ಪರನ್ನು ಅನವಶ್ಯಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ಏನಾಗುತ್ತೋ ನೋಡೋಣ, ಅವರು ಸಹ ಕಾನೂನು ಹೋರಾಟ ಮಾಡ್ತಿದ್ದಾರೆ. ಅವರಿಗೆ ಏನು ತೊಂದರೆ ಆಗೋದಿಲ್ಲ ಅಂದುಕೊಳ್ಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಕೋಳಿ ಎಸೆದಂತೆ ಎಸೆದು ಟ್ರಕ್‌ಗೆ ಗುದ್ದಿ, ಸಿಕ್ಕ ಸಿಕ್ಕ ವಸ್ತುಗಳಲ್ಲಿ ಹೊಡೆದು ಹತ್ಯೆ

  • ರೇಣುಕಾಸ್ವಾಮಿ ಕೊಲೆ ಕೇಸ್‌ನ 8ನೇ ಆರೋಪಿ ಶರಣಾಗತಿ – ದರ್ಶನ್‌ಗೆ ಕಾರು ಕೊಟ್ಟಿದ್ದವರಿಗೂ ಸಂಕಷ್ಟ!

    ರೇಣುಕಾಸ್ವಾಮಿ ಕೊಲೆ ಕೇಸ್‌ನ 8ನೇ ಆರೋಪಿ ಶರಣಾಗತಿ – ದರ್ಶನ್‌ಗೆ ಕಾರು ಕೊಟ್ಟಿದ್ದವರಿಗೂ ಸಂಕಷ್ಟ!

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಅಪಹರಣ ಹಾಗೂ ಕೊಲೆ ಪ್ರಕರಣದ 8ನೇ ಆರೋಪಿ-ಚಾಲಕ ರವಿ ಚಿತ್ರದುರ್ಗ ಪೊಲೀಸರ (Chitradurga Police) ಮುಂದೆ ಶರಣಾಗಿದ್ದಾನೆ.

    ಬಾಡಿಗೆಗೆ ಅಂತ ಹೇಳಿ ಆರೋಪಿ ಜಗ್ಗ ಮತ್ತು ರಘು ಕರೆಸಿಕೊಂಡಿದ್ದರು. ದರ್ಶನ್ (Actor Darshan) ಭೇಟಿಗೆಂದು ಹೇಳಿ ರೇಣುಕಾಸ್ವಾಮಿ ಕರೆದುಕೊಂಡು ಬಂದಿದ್ದರು. ರೇಣುಕಾಸ್ವಾಮಿ ಖುಷಿಯಿಂದಲೇ ಕಾರಿನಲ್ಲಿ ಬಂದಿದ್ದ ಎಂದು ರವಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಇನ್ನೂ ಫೇಕ್ ಅಕೌಂಟ್ ಬಳಸಿ ಕಾಮೆಂಟ್ ಹಾಕ್ತಿದ್ದ ರೇಣುಕಾಸ್ವಾಮಿಯ ಲೊಕೇಶನ್ ಟ್ರೇಸ್ ಮಾಡಲು ದರ್ಶನ್ ಗ್ಯಾಂಗ್, ಕೆಲ ಪೊಲೀಸ್ ಅಧಿಕಾರಿಗಳ ಸಹಕಾರ ಪಡೆದಿತ್ತು ಎಂದು ಸಹ ಹೇಳಲಾಗಿದೆ. ಇದನ್ನೂ ಓದಿ: ನನ್​ ತಂದೆ ಬಗ್ಗೆ ನಿಂದಿಸಿದ್ದಕ್ಕೆ ಥ್ಯಾಂಕ್ಸ್ – ದರ್ಶನ್‌ ಪುತ್ರ ವಿನೀಶ್‌ ಭಾವುಕ ಪೋಸ್ಟ್‌!

    ಜೂನ್ ಮೊದಲ ವಾರದಿಂದಲೇ ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿಯ ಬೆನ್ನುಬಿದ್ದಿತ್ತು. ಜೂನ್ 2ರಂದು ಫೋನ್ ಮಾಡಿ ಬೆದರಿಕೆ ಹಾಕಿತ್ತು. ಇದರಿಂದ ರೇಣುಕಾಸ್ವಾಮಿ ವಿಚಲಿತರಾಗಿದ್ದರು. ಜೂನ್‌ 8ರಂದು ರೇಣುಕಾಸ್ವಾಮಿ ಕಿಡ್ನಾಪ್‌ಗೂ ಮುನ್ನ, ಆತನನ್ನು ಮನೆಯಿಂದ ಫಾರ್ಮಸಿವರೆಗೂ ರಾಘವೇಂದ್ರ ಅಂಡ್ ಗ್ಯಾಂಗ್ ಕಾರಲ್ಲಿ ಫಾಲೋ ಮಾಡಿತ್ತು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನನಗೆ ದರ್ಶನ್ ಮೇಲೆ‌ ಕೇಸು ದಾಖಲಾಗಿ 24 ಗಂಟೆ ನಂತ್ರ ವಿಷಯ ಗೊತ್ತಾಯ್ತು – ಡಿಕೆಶಿ

    ಈ ಮಧ್ಯೆ, ರೇಣುಕಾಸ್ವಾಮಿ ಶವ ಸಾಗಿಸಲು ಪುನೀತ್ ಎಂಬುವವರ ಸ್ಕಾರ್‌ಪಿಯೋ ಬಳಸಲಾಗಿತ್ತು. ಹೀಗಾಗಿ ಪುನೀತ್‌ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಮಧ್ಯೆ, ರಾಘವೇಂದ್ರ ಸೇರಿ ಕೆಲ ಆರೋಪಿಗಳನ್ನು ಮಹಜರಿಗಾಗಿ ಪೊಲೀಸರು ಚಿತ್ರದುರ್ಗಕ್ಕೆ ಕರೆದೊಯ್ದಿದ್ದಾರೆ. ಬಂಧಿತರ ಪೈಕಿ ಪ್ರದೋಶ್, ದರ್ಶನ್ ಜೊತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದ. ಬಿಜೆಪಿಯಲ್ಲಿಯೂ ಗುರುತಿಸಿಕೊಂಡಿದ್ದ, ದರ್ಶನ್ ಮ್ಯಾನೇಜರ್ ನಾಗರಾಜ್ ಇತ್ತೀಚಿಗೆ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ. ರಾಜ್ಯ ಕುರುಬರ ಸಂಘದ ನಿರ್ದೇಶನಕನೂ ಆಗಿದ್ದ. ಮೈಸೂರು ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ಮಾಡಿಕೊಂಡಿದ್ದ ಎಂಬ ವಿಚಾರ ಗೊತ್ತಾಗಿದೆ. ಮಂಡ್ಯ, ರಾಮನಗರದಲ್ಲಿ ದರ್ಶನ್ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಇದನ್ನೂ ಓದಿ: ಚಿತ್ರರಂಗದಿಂದ ದರ್ಶನ್ ಬ್ಯಾನ್? – ಫಿಲ್ಮ್ ಚೇಂಬರ್ ಹೇಳಿದ್ದೇನು?

  • ನನ್​ ತಂದೆ ಬಗ್ಗೆ ನಿಂದಿಸಿದ್ದಕ್ಕೆ ಥ್ಯಾಂಕ್ಸ್ – ದರ್ಶನ್‌ ಪುತ್ರ ವಿನೀಶ್‌ ಭಾವುಕ ಪೋಸ್ಟ್‌!

    ನನ್​ ತಂದೆ ಬಗ್ಗೆ ನಿಂದಿಸಿದ್ದಕ್ಕೆ ಥ್ಯಾಂಕ್ಸ್ – ದರ್ಶನ್‌ ಪುತ್ರ ವಿನೀಶ್‌ ಭಾವುಕ ಪೋಸ್ಟ್‌!

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್‌ (Actor Darshan) ಅವರ ಪುತ್ರ ವಿನೀಶ್‌ (Vinish), ತಂದೆಯನ್ನು ನೆನೆದು ತಮ್ಮ ಇನ್‌ಸ್ಟಾಗ್ರಾಮ್‌ (Instagram Post) ಖಾತೆಯಲ್ಲಿ ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

    ನಾನು 15 ವರ್ಷದ ಹುಡುಗನಿದ್ದೇನೆ. ನನಗೂ ಮನಸ್ಸಿದೆ, ಭಾವನೆಗಳಿವೆ ಅನ್ನೋದನ್ನ ಪರಿಗಣಿಸದೇ ನನ್ನ ತಂದೆಯ ಬಗ್ಗೆ ಕೆಟ್ಟ ಕಾಮೆಂಟ್ಸ್ ಮತ್ತು ಆಕ್ಷೇಪಾರ್ಹ ಭಾಷೆಯಲ್ಲಿ ನಿಂದಿಸುತ್ತಿರುವವರಿಗೆ ಧನ್ಯವಾದಗಳು. ನನ್ನ ತಂದೆ ಮತ್ತು ತಾಯಿಯ ಬೆಂಬಲದ ಅಗತ್ಯವಿರುವ ಈ ಕಷ್ಟದ ಸಮಯದಲ್ಲಿಯೂ ನನ್ನನ್ನು ಶಪಿಸುವುದರಿಂದ ನೀವು ಬದಲಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

    ನಟರೂ ಆಗಿರುವ ಆರೋಪಿ ದರ್ಶನ್‌ ತೂಗುದೀಪ ವಿರುದ್ಧ ಕೇಳಿಬಂದಿರುವ ಕೊಲೆ ಆರೋಪ ಪ್ರಕರಣದಲ್ಲಿ ಕೆಲ ಪ್ರಭಾವಿಗಳು ದರ್ಶನ್ ರಕ್ಷಿಸಲು ಪ್ರಯತ್ನ ನಡೆಸಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಫನ್‌ ಕರೆಗಳನ್ನು ಮಾಡಿ ಒತ್ತಡ ಹೇರುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿವೆ. ಇದನ್ನೂ ಓದಿ: ಏನಿದು ಬಿಎಸ್‌ವೈ ವಿರುದ್ಧದ ಪೋಕ್ಸೊ ಕೇಸ್‌? – ಇಲ್ಲಿದೆ ನೋಡಿ ಟೈಮ್‌ಲೈನ್‌..

    ಈ ಬೆನ್ನಲ್ಲೇ ದರ್ಶನ್ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ನಡೆಗೆ ಬಿಜೆಪಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ. ನಾವು ಎಲ್ಲಿದೀವಿ? ಪಾಕಿಸ್ತಾನದಲ್ಲಿ ಇದೀವಾ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಮಾಧ್ಯಮ ನಿರ್ಬಂಧ, ಮಾಧ್ಯಮದವರ ಮೇಲಿನ ಹಲ್ಲೆ ಖಂಡನೀಯ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಪೊಲೀಸ್ ಠಾಣೆ ಬಳಿ ನಿಷೇಧಾಜ್ಞೆ ವಿಧಿಸಿದ್ದನ್ನು ಪಿ.ರಾಜೀವ್ ತೀವ್ರವಾಗಿ ಖಂಡಿಸಿದ್ದಾರೆ.

    ಈ ಎಲ್ಲಾ ಬೆಳವಣಿಗೆಯಿಂದ ರಾಜ್ಯ ಸರ್ಕಾರ ಮುಜುಗರಕ್ಕೀಡಾಗಿದೆ. ಈ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ಗೃಹ ಸಚಿವ ಪರಮೇಶ್ವರ್ ಹಿಂದೇಟು ಹಾಕಿದ್ದಾರೆ. ಅಭಿಮಾನಿಗಳು ಹೆಚ್ಚು ಬರಬಹುದು ಅಂತ ಪೊಲೀಸ್ರು ಹಾಗೆ ಮಾಡಿರಬಹುದು ಎಂದು ಡಿಸಿಎಂ ಹೇಳಿದ್ದಾರೆ. ಸಚಿವ ಹೆಚ್‌.ಕೆ ಪಾಟೀಲ್ ಮಾತ್ರ, ಇಂತಹ ಸ್ಥಿತಿ ಯಾಕೆ ಬಂತೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಟ್ರೇಲರ್‌ನಲ್ಲಿ ಆಕ್ಷೇಪಾರ್ಹ ಸಂಭಾಷಣೆಗಳಿವೆ: ‘ಹಮಾರೆ ಬಾರಹ್‌’ ಸಿನಿಮಾ ಬಿಡುಗಡೆಗೆ ಸುಪ್ರೀಂ ತಡೆ

  • ನನಗೆ ದರ್ಶನ್ ಮೇಲೆ‌ ಕೇಸು ದಾಖಲಾಗಿ 24 ಗಂಟೆ ನಂತ್ರ ವಿಷಯ ಗೊತ್ತಾಯ್ತು – ಡಿಕೆಶಿ

    ನನಗೆ ದರ್ಶನ್ ಮೇಲೆ‌ ಕೇಸು ದಾಖಲಾಗಿ 24 ಗಂಟೆ ನಂತ್ರ ವಿಷಯ ಗೊತ್ತಾಯ್ತು – ಡಿಕೆಶಿ

    – ದರ್ಶನ್‌ ಕೇಸ್‌ ಮುಚ್ಚಿಹಾಕುವ ಪ್ರಯತ್ನ ನಡೆದಿತ್ತಾ? – ಡಿಸಿಎಂ ಹೇಳಿದ್ದೇನು?

    ಬೆಂಗಳೂರು: ಆರೋಪಿ ನಟ ದರ್ಶನ್ (Actor Darshan) ಇರಿಸಿರುವ ಠಾಣೆಗೆ ಶಾಮಿಯಾನ ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಮ್ಮನ್ನು ಜೈಲಿನ ಅನುಭವವನ್ನು ಹೇಳಿಕೊಂಡಿದ್ದಾರೆ. ನನ್ನನ್ನೂ ಸ್ಟೇಷನ್‌ಗೆ, ಕೊರ್ಟ್‌ಗೆ ಕರೆದುಕೊಂಡು ಹೋಗಬೇಕಾದ್ರೆ ಪೊಲೀಸರು ಮರೆಮಾಚಿ ಕರೆದುಕೊಂಡು ಹೋಗ್ತಿದ್ರು ಅಂತ ಹಳೆಯ ನೆನಪೊಂದನ್ನು ಮೆಲುಕು ಹಾಕಿದ್ದಾರೆ.

    ನಗರದ ವಿಕಾಸ ಸೌಧದಲ್ಲಿಂದು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಜಲಸಂಪನ್ಮೂಲ ಇಲಾಖೆಯ (Water Resources Department) ಸಭೆ ನಡೆಯಿತು. ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಶಾಸಕ ಟಿ.ಬಿ ಜಯಚಂದ್ರ ಸೇರಿದಂತೆ ಮೊದಲಾದವರು ಭಾಗಿಯಾಗಿದ್ದರು. ಭದ್ರಾ ಮೇಲ್ದಂಡೆ ಯೋಜನೆಗಳ ಅರಣ್ಯ ತೀರುವಳಿ ಮತ್ತು ಭೂಸ್ವಾಧೀನ ಪ್ರಸ್ತಾವನೆ ಕುರಿತು ಚರ್ಚೆ ನಡೆಸಲಾಯಿತು. ಇದನ್ನೂ ಓದಿ: ದರ್ಶನ್ ಕೊಲೆ ಮಾಡಿದ್ದರೆ ದೊಡ್ಡ ತಪ್ಪು – ರೇಣುಕಾಸ್ವಾಮಿ ಕುಟುಂಬಕ್ಕೆ ಸರ್ಕಾರ ನೆರವಾಗಲಿ: ಅಶೋಕ್

    ಇದಕ್ಕೂ ಮುನ್ನ ದರ್ಶನ್ ಅರೆಸ್ಟ್ (Darshan Arrest) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದರು. ದರ್ಶನ್ ಕೇಸ್ ಮುಚ್ಚಿಹಾಕುವ ವಿಚಾರದಲ್ಲಿ ತಮ್ಮನ್ನು ಸಂಪರ್ಕ ಮಾಡಿದ್ರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಬಳಿ ಮಾತು-ಕತೆ ಆಡಿಲ್ಲ. ನನ್ನ ಜೊತೆಗೆ ಸಂಪರ್ಕವೂ ಇರಲಿಲ್ಲ. ಕೇಸ್ ಆಗಿ 24 ಗಂಟೆ ಆದ್ಮೇಲೆ ನನಗೆ ಗೊತ್ತಾಯ್ತು ಎಂದು ಹೇಳಿದ್ದಾರೆ.

    ಇದೇ ವೇಳೆ ಠಾಣೆಗೆ ಶಾಮಿಯಾನ ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದೆಲ್ಲ ನನಗೆ ಗೊತ್ತಿಲ್ಲ. ನನ್ನ ಕೇಸ್‌ನಲ್ಲಿ ಆದ ಅನುಭವ ಹೇಳ್ತೀನಿ ಕೇಳಿ. ನನ್ನನ್ನ ಸ್ಟೇಷನ್‌ಗೆ, ಕೊರ್ಟ್‌ಗೆ ಕರೆದುಕೊಂಡು ಹೋಗಬೇಕಾದ್ರೆ ಪೊಲೀಸರು ಮರೆಮಾಚಿ ಕರೆದುಕೊಂಡು ಹೋಗ್ತಿದ್ರು. ಕೆಲ ಸಮಯ ದಾರಿ ಬದಲಾಯಿಸುತ್ತಿದ್ದರು. ಹಾಗೆಯೇ ದರ್ಶನ್ ಅಭಿಮಾನಿಗಳು ಹಾಕೋದು, ಬಾವುಟ ಹಾರಿಸೋದು ಮಾಡ್ತಾರೆ, ಕೆಲವೊಮ್ಮೆ ಓಡೋಡಿ ಬರುತ್ತಿದ್ದರು. ಹೆಚ್ಚು ಅಭಿಮಾನಿಗಳು ಸೇರುತ್ತಾರೆ ಎಂಬ ಕಾರಣಕ್ಕೆ ಹಾಗೆ ಮಾಡಿರಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟ್ರೇಲರ್‌ನಲ್ಲಿ ಆಕ್ಷೇಪಾರ್ಹ ಸಂಭಾಷಣೆಗಳಿವೆ: ‘ಹಮಾರೆ ಬಾರಹ್‌’ ಸಿನಿಮಾ ಬಿಡುಗಡೆಗೆ ಸುಪ್ರೀಂ ತಡೆ

    ಎತ್ತಿನಹೊಳೆ ಯೋಜನೆಗೆ ವಿಶೇಷ ತಾಂತ್ರಿಕ ತಂಡ ರಚನೆ:
    ಸಭೆ ಬಳಿಕ ಎತ್ತಿನಹೊಳೆ ಯೋಜನೆ ಕುರಿತು ಮಾತನಾಡಿದ ಡಿಸಿಎಂ, ಎತ್ತಿನಹೊಳೆಯಲ್ಲಿ ಏನೆಲ್ಲ ಸಮಸ್ಯೆ ಇದೆ, ಅನ್ನೋದರ ಬಗ್ಗೆ ಚರ್ಚಿಸಿದ್ದೇವೆ. ಪ್ರತ್ಯೇಕವಾದ ಸರ್ವೇ ಮಾಡುತ್ತೇವೆ. ಕಂದಾಯ ಹಾಗೂ ಅರಣ್ಯ ಇಲಾಖೆಗಳಿಂದಲೂ ಸರ್ವೇ ಮಾಡುತ್ತೇವೆ. ಎತ್ತಿನಹೊಳೆ ಪ್ರಾಜೆಕ್ಟ್‌ನಲ್ಲಿ 50 ಕೋಟಿ ಹಣ ರೈತರಿಗೆ ಕೊಡಬೇಕಾಗಿತ್ತು. ಈಗಾಗಲೇ 10 ಕೋಟಿ ರೂಪಾಯಿ ಕೊಟ್ಟಿದ್ದೇವೆ. ಆದರೆ ಕೆಲವು ಜಾಗ ಅರಣ್ಯ ಇಲಾಖೆ ನಮ್ದೇ ಅಂತ ಹೇಳ್ತಿದ್ದಾರೆ. ಹೀಗಾಗಿ ಇದನ್ನು ಕ್ಯಾಬಿನೆಟ್ ನಲ್ಲಿ ಇಟ್ಟು ಚರ್ಚೆ ಮಾಡುತ್ತಾರೆ. ನೀರನ್ನು ಹೊರಗಡೆ ತೆಗೆದು ತೋರಿಸಬೇಕು ಎಂದು ಹೇಳಿದ್ದೇನೆ. ಮೊದಲ ಹಂತದಲ್ಲಿ 45 ಕಿಲೋ ಮೀಟರ್ ವರೆಗೂ ನೀರು ಹರಿಸಬೇಕು. ಇದಕ್ಕಾಗಿ ವಿಶೇಷ ತಾಂತ್ರಿಕ ತಂಡವನ್ನು ರಚನೆ ಮಾಡುತ್ತೇವೆ. ಯಾವ ಕಡೆ ನೀರು ಸಮುದ್ರಕ್ಕೆ ಸೇರುತ್ತಿದೆ, ಅದನ್ನು ಗಮನಕ್ಕೆ ತರುವಂತೆ ಒಂದು ಟೀಮ್ ರಚನೆ ಮಾಡುಲು ಹೇಳಿದ್ದೇನೆ ಎಂದು ಉತ್ತರಿಸಿದರು. ಇದನ್ನೂ ಓದಿ: ‌250 ಕೋಟಿ ರೂ. ವೆಚ್ಚದಲ್ಲಿ ಐದೇ ತಿಂಗಳಲ್ಲಿ ನಿರ್ಮಿಸಿದ್ದ ನಸ್ಸೌ ಕೌಂಟಿ ಸ್ಟೇಡಿಯಂ ನೆಲಸಮ?

  • ಪೊಲೀಸ್ ಠಾಣೆಗೆ ಶಾಮಿಯಾನ, ಮಾಧ್ಯಮ ನಿರ್ಬಂಧ ಖಂಡನೀಯ: ಮಾಜಿ ಶಾಸಕ ಪಿ.ರಾಜೀವ್

    ಪೊಲೀಸ್ ಠಾಣೆಗೆ ಶಾಮಿಯಾನ, ಮಾಧ್ಯಮ ನಿರ್ಬಂಧ ಖಂಡನೀಯ: ಮಾಜಿ ಶಾಸಕ ಪಿ.ರಾಜೀವ್

    ಬೆಂಗಳೂರು: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಹೋಗಿದೆ. ಅಮಾಯಕರ ಕೊಲೆಗಳು ನಡೆಯುತ್ತಿವೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ (P.Rajeev) ಆಕ್ಷೇಪ ವ್ಯಕ್ತಪಡಿಸಿದರು.

    ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈಗಿನ ಸರ್ಕಾರದಲ್ಲಿ ನಾವು ಏನು ಮಾಡಿದರೂ ದಕ್ಕಿಸಿಕೊಳ್ಳಬಹುದು. ನಮ್ಮ ಪ್ರಭಾವದಿಂದ ನಾವು ಬಚಾವ್ ಆಗಬಹುದು ಎಂಬ ಭಾವನೆಯಿಂದ ಕ್ಷುಲ್ಲಕ ಕಾರಣಕ್ಕೆ ಕೊಲೆಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲು- ದರ್ಶನ್‌ ಇರುವ ಪೊಲೀಸ್‌ ಠಾಣೆಗೆ ಶಾಮಿಯಾನ!

    ಸರ್ಕಾರವು ಕಾನೂನು-ಸುವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಬೇಕು. ಕಾನೂನು ಎಲ್ಲರಿಗೂ ಸಮಾನ. ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡುವುದೇ ಕಾನೂನು. ನಮ್ಮ ಸಂವಿಧಾನದಂತೆ ಕಾನೂನಿನಡಿ ಎಲ್ಲರೂ ಸಮಾನರು. ಆದರೆ, ವಿಐಪಿಯನ್ನು ಕರೆದುಕೊಂಡು ಬಂದ ತಕ್ಷಣ ಶಾಮಿಯಾನ ಹಾಕಿ, ಮಾಧ್ಯಮದವರ ಮೇಲೆ ಹಲ್ಲೆ ಮಾಡಿ, ಮಾಧ್ಯಮದವರನ್ನು ಪೊಲೀಸ್ ಠಾಣೆ ಆವರಣಕ್ಕೆ ಬಿಡಲಾರದಂತೆ ವರ್ತಿಸುತ್ತಿದೆ. ಇದು ಸರ್ಕಾರ ಯಾವ ರೀತಿ ಆಡಳಿತ ನಡೆಸುತ್ತಿದೆ ಎಂಬುದಕ್ಕೆ ಸಾಕ್ಷಿ ಎಂದು ವಾಗ್ದಾಳಿ ನಡೆಸಿದರು.

    ಪ್ರತಿಯೊಬ್ಬರ ಮಾನ-ಪ್ರಾಣಕ್ಕೆ ಬಹಳ ದೊಡ್ಡ ಘನತೆ ಇದೆ. ಅಮಾಯಕರ ಪ್ರಾಣಹಾನಿಗೆ ಕಾರಣ ಆದವರ ವಿರುದ್ಧ ಕಾನೂನಿನಡಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು. ಇನ್ನು ಮುಂದೆ ಅಮಾಯಕರ ಪ್ರಾಣಹಾನಿ ಆಗದಂತೆ ಗೃಹ ಸಚಿವರು ಮತ್ತು ಪೊಲೀಸ್ ಇಲಾಖೆ ತನ್ನ ಕರ್ತವ್ಯ ನಿರ್ವಹಿಸಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಕಣ್ಣು ಕಳೆದುಕೊಂಡಿದ್ದ ಕೆಲಸಗಾರ ಪರಿಹಾರ ಕೇಳಲು ಹೋದಾಗ ನಾಯಿ ಛೂ ಬಿಟ್ಟಿದ್ದ ದರ್ಶನ್‌ ಟೀಂ

    ವೈಯಕ್ತಿಕ ಹಿತಾಸಕ್ತಿ, ಓಲೈಕೆಗೆ 144 ಸೆಕ್ಷನ್ ಬಳಕೆ ಆಗ್ತಿದೆ. ಪೊಲೀಸ್ ಠಾಣೆಗೆ 144 ಸೆಕ್ಷನ್ ಹಾಕುವುದು ಎಂದರೆ ಪೊಲೀಸ್ ಸ್ಟೇಷನನ್ನು ರಕ್ಷಿಸಲು ಇನ್ನೊಬ್ಬ ಖಾಸಗಿಯವರಿಗೆ ಕೊಟ್ಟಂತೆ. ಅಂದರೆ, ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಹೋಗಿದೆ ಎಂಬುದಕ್ಕೆ ನಿದರ್ಶನವಿದು ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು. ಮಾಧ್ಯಮದವರನ್ನು ದೂರ ಇಡುವ ಉದ್ದೇಶ, ಇನ್ನೊಬ್ಬರನ್ನು ದೂರವಿಡಲು ಮತ್ತು ಠಾಣೆಯಲ್ಲಿ ತಮ್ಮ ವೈಯಕ್ತಿಕ ಹಿತಾಸಕ್ತಿಯ ಚಟುವಟಿಕೆ ಮಾಡುವುದಕ್ಕಾಗಿ ಅಥವಾ ಯಾರನ್ನೋ ಓಲೈಕೆಗೆ 144 ಸೆಕ್ಷನ್ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

    ಕೊಲೆ ಮಾಡಿದವನು, ಕೊಲೆಗೆ ಸಂಚು ಮಾಡಿದವನು, ಕೊಲೆಗೆ ದುಷ್ಪ್ರೇರಣೆ ನೀಡಿದವನು, ಕೊಲೆ ಪ್ರಕರಣದ ಸಾಕ್ಷಿ ನಾಶ ಮಾಡುವವನು, ಕೊಲೆಯ ಸಾಕ್ಷ್ಯದ ದಿಕ್ಕು ತಪ್ಪಿಸುವವನು, ಈ ಎಲ್ಲ ಚಟುವಟಿಕೆಗಳು ಕೊಲೆಯ ಒಳಸಂಚಿನ ಭಾಗವೇ ಆಗುತ್ತದೆ. ಅದು ಒಬ್ಬ ಕೊಲೆಗಾರನ ಹೊಣೆಗಾರಿಕೆಯಷ್ಟೇ ಪ್ರಮುಖ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಇದನ್ನೂ ಓದಿ: ಪತಿಯನ್ನು ಅನ್‌ಫಾಲೋ ಮಾಡಿ ಡಿಪಿ ತೆಗೆದಿದ್ದ ವಿಜಯಲಕ್ಷ್ಮಿ ಇಂದು ಇನ್‌ಸ್ಟಾದಿಂದ್ಲೇ ದೂರ!

    ಜನರಿಗೆ ತನಿಖಾ ಸಂಸ್ಥೆ, ಪೊಲೀಸ್ ಇಲಾಖೆ ಬಗ್ಗೆ ವಿಶ್ವಾಸ ಕಡಿಮೆ ಆಗಬಾರದು. ಇದು ಪೊಲೀಸ್ ಇಲಾಖೆಯ ಗುರುತರವಾದ ಜವಾಬ್ದಾರಿ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಆ ನಿಟ್ಟಿನಲ್ಲಿ ಎಸ್‍ಐಟಿ, ಪೊಲೀಸ್ ಠಾಣೆಗಳ ನಡವಳಿಕೆ ಜನರಲ್ಲಿ ವಿಶ್ವಾಸ ಮೂಡಿಸುವಂತೆ ಇರಬೇಕು ಎಂದು ಆಶಯ ವ್ಯಕ್ತಪಡಿಸಿದರು.