Tag: actor Darshan

  • ರೇಣುಕಾಸ್ವಾಮಿ ಹತ್ಯೆ ಕೇಸ್ – ಸುಪ್ರೀಂನಲ್ಲಿ ನಾಳೆ ದರ್ಶನ್ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ

    ರೇಣುಕಾಸ್ವಾಮಿ ಹತ್ಯೆ ಕೇಸ್ – ಸುಪ್ರೀಂನಲ್ಲಿ ನಾಳೆ ದರ್ಶನ್ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ

    ನವದೆಹಲಿ: ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ 7 ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ (Supreme Court) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಾಳೆ (ಏ.2) ನಡೆಯಲಿದೆ.

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ ಏಳು ಆರೋಪಿಗಳಿಗೆ ಹೈಕೋರ್ಟ್ (High Court) ಜಾಮೀನು ನೀಡಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಆರೋಪಿಗಳಿಗೆ ಮತ್ತೆ ಸಂಕಷ್ಟ ಎದುರಾಗುವಂತಿದೆ.ಇದನ್ನೂ ಓದಿ:ರೇಣುಕಾಸ್ವಾಮಿ ಹತ್ಯೆ ಕೇಸ್ – ಏ.2ಕ್ಕೆ ದರ್ಶನ್ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ

    ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಮಾ.18ಕ್ಕೆ ನಡೆಯಬೇಕಿತ್ತು. ವಿಚಾರಣೆಗೆ ಪಟ್ಟಿಯಾಗದ ಹಿನ್ನೆಲೆ ದರ್ಶನ್ ಪ್ರಕರಣದಲ್ಲಿನ ರಾಜ್ಯದ ವಿಶೇಷ ವಕೀಲ ಅನಿಲ್ ನಿಶಾನಿ ಅರ್ಜಿ ವಿಚಾರಣೆ ನಡೆಸುವಂತೆ ಪ್ರಸ್ತಾಪಿಸಿದ್ದರು. ಇದಕ್ಕೆ ಉತ್ತರಿಸಿದ ಕೋರ್ಟ್ ಏ.2 ರಂದು ವಿಚಾರಣೆ ನಡೆಸಲಾಗುವುದು ಎಂದು ಹೇಳಿತ್ತು.

    ಮಾ.18ಕ್ಕೂ ಮುನ್ನ ನಡೆದ ವಿಚಾರಣೆಯಲ್ಲಿ ಅರ್ಜಿ ವಿಚಾರಣೆಗೆ ಒಪ್ಪಿಕೊಂಡಿದ್ದ ಸುಪ್ರೀಂಕೋರ್ಟ್ ನಟ ದರ್ಶನ್ ಸೇರಿದಂತೆ ಇತರೆ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿತ್ತು. ಹೈಕೋರ್ಟ್‌ನಲ್ಲಿ ಗೆಲುವು ಪಡೆದಂತೆ ಸುಪ್ರೀಂಕೋರ್ಟ್‌ನಲ್ಲಿಯೂ ಗೆಲುವು ಪಡೆಯಲು ಖ್ಯಾತ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ದರ್ಶನ್ ಕುಟುಂಬದವರು ನೇಮಿಸಿಕೊಂಡಿದ್ದಾರೆ ಹಾಗೂ ಹೈಕೋರ್ಟ್‌ನಲ್ಲಿ ನಡೆದ ವಾದ ಪ್ರತಿವಾದದ ಎಲ್ಲ ದಾಖಲೆ ನೀಡಲಾಗಿದೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಸದ್ಯಕ್ಕೆ ಯಾವುದೇ ಬೆಳವಣಿಗೆ ಕಂಡು ಬಂದಿಲ್ಲ.

    ನಟ ದರ್ಶನ್ 131 ದಿನಗಳ ಜೈಲುವಾಸದ ನಂತರ ವೈದ್ಯಕೀಯ ಕಾರಣಗಳನ್ನು ಉಲ್ಲೇಖಿಸಿ ಅ.30 ರಂದು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ನಂತರ ಹೈಕೋರ್ಟ್ ಡಿ.13 ರಂದು ದರ್ಶನ್ ಮತ್ತು ಪ್ರಮುಖ ಆರೋಪಿ ಪವಿತ್ರ ಗೌಡ ಸೇರಿದಂತೆ ಇತರ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು.ಇದನ್ನೂ ಓದಿ:ಗ್ಯಾರಂಟಿ ಸರ್ಕಾರದಿಂದ ಶಾಕ್‌ – ಡೀಸೆಲ್‌ ದರ 2 ರೂ. ಏರಿಕೆ

  • ಕೇರಳದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ – ದಾಸನಿಗೆ ಸಾಥ್ ನೀಡಿದ ಕೊಲೆ ಆರೋಪಿ ಪ್ರಜ್ವಲ್ ರೈ

    ಕೇರಳದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ – ದಾಸನಿಗೆ ಸಾಥ್ ನೀಡಿದ ಕೊಲೆ ಆರೋಪಿ ಪ್ರಜ್ವಲ್ ರೈ

    ಶನಿವಾರ ನಟ ದರ್ಶನ್ (Actor Darshan) ಕೇರಳದ (Kerala) ಕಣ್ಣೂರಿನ (Kannur) ಭಗವತಿ ದೇವಾಲಯದಲ್ಲಿ ಶತ್ರು ಸಂಹಾರ ಹೋಮ ಮಾಡಿಸಿದ್ದಾರೆ. ಈ ವೇಳೆ ದಾಸನ ಜೊತೆ ಕೊಲೆ ಆರೋಪಿ ಪ್ರಜ್ವಲ್ ರೈ (Prajwal Rai) ಕಾಣಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.ಇದನ್ನೂ ಓದಿ:ನಾರಿಮಣಿಯರಿಗೆ ಸಮ್ಮರ್ ಫ್ಯಾಷನ್ ಟಿಪ್ಸ್

    ಹೌದು, ಪುತ್ತೂರಿನ (Puttur) ಕಾಂಗ್ರೆಸ್ (Congress) ಮುಖಂಡ ಸವಣೂರು ಪ್ರಜ್ವಲ್ ರೈ ಎಂಬಾತ ನಟ ದರ್ಶನ್ ಅನ್ನು ಈ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಶತ್ರು ಸಂಹಾರ ಪೂಜೆ ಮಾಡಿಸಿದ್ದಾನೆ. ಆದರೆ ಪ್ರಜ್ವಲ್ ರೈ ಓರ್ವ ಕೊಲೆ ಆರೋಪಿ. 2017ರಲ್ಲಿ ಕರಾವಳಿ ಭಾಗದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಕರೋಪಾಡಿ ಅಬ್ದುಲ್ ಜಲೀಲ್ ಕೊಲೆ ಪ್ರಕರಣದಲ್ಲಿ ಪ್ರಜ್ವಲ್ ರೈ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರಗಿದ್ದಾನೆ. ಸದ್ಯ ಈ ಆರೋಪಿ, ದರ್ಶನ್ ಜೊತೆ ಕಾಣಿಸಿಕೊಂಡಿರುವುದು ಚರ್ಚೆಗೆ ಆಸ್ಪದ ನೀಡಿದೆ.

    ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಆರೋಪಿಯಾಗಿರುವ ದರ್ಶನ್, ಸಂಕಷ್ಟ ನಿವಾರಣೆಗಾಗಿ ಕೇರಳದ ಕಣ್ಣೂರಿನ ಮಾಡಾಯಿಕಾವು ಶ್ರೀ ಭಗವತಿ ದೇವಸ್ಥಾನಕ್ಕೆ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಹಾಗೂ ನಟ ಧನ್ವೀರ್ ಜೊತೆ ತೆರಳಿ ಶತ್ರು ಸಂಹಾರ ಪೂಜೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಕೊಲೆ ಆರೋಪಿ ಪ್ರಜ್ವಲ್ ರೈ ಕೂಡ ಕಾಣಿಸಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಇದನ್ನೂ ಓದಿ:ಇಶಾನ್ ಕಿಶನ್ ಸ್ಫೋಟಕ ಶತಕ – ರಾಜಸ್ಥಾನ ವಿರುದ್ಧ ಹೈದರಾಬಾದ್‌ಗೆ 44 ರನ್‌ಗಳ ಭರ್ಜರಿ ಜಯ

  • ರೇಣುಕಾಸ್ವಾಮಿ ಹತ್ಯೆ ಕೇಸ್ – ಏ.2ಕ್ಕೆ ದರ್ಶನ್ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ

    ರೇಣುಕಾಸ್ವಾಮಿ ಹತ್ಯೆ ಕೇಸ್ – ಏ.2ಕ್ಕೆ ದರ್ಶನ್ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ

    ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ (Renukaswamy Case) ಪ್ರಕರಣದಲ್ಲಿ ನಟ ದರ್ಶನ್ (Actor Darshan) ಸೇರಿದಂತೆ ಇತರೆ ಆರೋಪಿಗಳಿಗೆ ಹೈಕೋರ್ಟ್ ನೀಡಿದ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಏ.2ಕ್ಕೆ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

    ಜಾಮೀನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಇಂದು ನಡೆಯಬೇಕಿತ್ತು. ವಿಚಾರಣೆಗೆ ಪಟ್ಟಿಯಾಗದ ಹಿನ್ನೆಲೆ ದರ್ಶನ್ ಪ್ರಕರಣದಲ್ಲಿನ ರಾಜ್ಯದ ವಿಶೇಷ ವಕೀಲ ಅನಿಲ್ ನಿಶಾನಿ ಅರ್ಜಿ ವಿಚಾರಣೆ ನಡೆಸುವಂತೆ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಕೋರ್ಟ್ ಏ. 2 ರಂದು ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ.ಇದನ್ನೂ ಓದಿ: ಭೂಮಿಗೆ ಬರುತ್ತಿದ್ದಾರೆ ಸುನಿತಾ ವಿಲಿಯಮ್ಸ್‌ – ಎಲ್ಲಿ ಇಳಿಯುತ್ತಾರೆ? ಇಳಿಯುವ ಪ್ರಕ್ರಿಯೆ ಹೇಗೆ? ಇಳಿದ ನಂತರ ಮುಂದೇನು?

    ಕಳೆದ ವಿಚಾರಣೆಯಲ್ಲಿ ಅರ್ಜಿ ವಿಚಾರಣೆಗೆ ಒಪ್ಪಿಕೊಂಡಿದ್ದ ಸುಪ್ರೀಂಕೋರ್ಟ್ ನಟ ದರ್ಶನ್ ಸೇರಿದಂತೆ ಇತರೆ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿತ್ತು. ಮೂಲಗಳ ಪ್ರಕಾರ ಈವರೆಗೂ ದರ್ಶನ್ ಸುಪ್ರೀಂಕೋರ್ಟ್ ನೋಟಿಸ್‌ಗೆ ಪ್ರತಿಕ್ರಿಯಿಸಿಲ್ಲ ಹಾಗೂ ಅವರ ವಕೀಲರು ವಕಾಲತ್ತು ಕೂಡಾ ಹಾಕಿಲ್ಲ.

    ಹೈಕೋರ್ಟ್ನಲ್ಲಿ ಗೆಲುವು ಪಡೆದಂತೆ ಸುಪ್ರೀಂಕೋರ್ಟ್‌ನಲ್ಲಿಯೂ ಗೆಲುವು ಪಡೆಯಲು ಖ್ಯಾತ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ದರ್ಶನ್ ಕುಟುಂಬದವರು ನೇಮಿಸಿಕೊಂಡಿದ್ದಾರೆ ಹಾಗೂ ಹೈಕೋರ್ಟ್‌ನಲ್ಲಿ ನಡೆದ ವಾದ ಪ್ರತಿವಾದದ ಎಲ್ಲ ದಾಖಲೆ ನೀಡಲಾಗಿದೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಸದ್ಯಕ್ಕೆ ಯಾವುದೇ ಬೆಳವಣಿಗೆ ಕಂಡು ಬಂದಿಲ್ಲ.

    ನಟ ದರ್ಶನ್ 131 ದಿನಗಳ ಜೈಲುವಾಸದ ನಂತರ ವೈದ್ಯಕೀಯ ಕಾರಣಗಳನ್ನು ಉಲ್ಲೇಖಿಸಿ ಅ.30 ರಂದು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ನಂತರ ಹೈಕೋರ್ಟ್ ಡಿ.13 ರಂದು ದರ್ಶನ್ ಮತ್ತು ಪ್ರಮುಖ ಆರೋಪಿ ಪವಿತ್ರ ಗೌಡ ಸೇರಿದಂತೆ ಇತರ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು.ಇದನ್ನೂ ಓದಿ: ಇಸ್ರೇಲ್‌ ಭೀಕರ ವಾಯುದಾಳಿ – ಗಾಜಾದಲ್ಲಿ 300ಕ್ಕೂ ಅಧಿಕ ಮಂದಿ ಸಾವು

     

  • ಮಂಡ್ಯ | ಸಂಕಷ್ಟ ಪರಿಹಾರಕ್ಕೆ ಶಕ್ತಿ ದೇವತೆಗೆ ದರ್ಶನ್ ವಿಶೇಷ ಪೂಜೆ

    ಮಂಡ್ಯ | ಸಂಕಷ್ಟ ಪರಿಹಾರಕ್ಕೆ ಶಕ್ತಿ ದೇವತೆಗೆ ದರ್ಶನ್ ವಿಶೇಷ ಪೂಜೆ

    ಮಂಡ್ಯ: ಪಾಂಡವಪುರ (Pandavapura) ತಾಲೂಕಿನ ಆರತಿ ಉಕ್ಕಡ ಅಹಲ್ಯದೇವಿ (Aarathi Ukkada) ದೇವಸ್ಥಾನಕ್ಕೆ ನಟ ದರ್ಶನ್ (Actor Darshan) ಭೇಟಿ ನೀಡಿದ್ದಾರೆ.

    ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ, ನಟ ಧನ್ವೀರ್ ಜೊತೆ ದರ್ಶನ್ ಅಹಲ್ಯದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಸಂಕಷ್ಟ ಪರಿಹಾರಕ್ಕೆ ಶಕ್ತಿ ದೇವತೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.ಇದನ್ನೂ ಓದಿ: ಮಂಡ್ಯ| ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ಸಾವು

    ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಮಂದಿಗೆ ಕರ್ನಾಟಕ ಹೈಕೋರ್ಟ್ ಡಿ.13 ರಂದು ಜಾಮೀನು ಮಂಜೂರು ಮಾಡಿತ್ತು. ಜೊತೆಗೆ ಕೋರ್ಟ್ ಅನುಮತಿ ಇಲ್ಲದೇ ಬೆಂಗಳೂರು ಬಿಟ್ಟು ಹೋಗುವಂತಿಲ್ಲ. ಪ್ರತಿ ತಿಂಗಳು ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿತ್ತು.

    ಇತ್ತೀಚಿಗಷ್ಟೇ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ಜ.12ರಿಂದ 17ರವರೆಗೆ ಮೈಸೂರಿಗೆ ತೆರಳಲು ಅನುಮತಿ ಕೋರಿದ್ದ ದರ್ಶನ್‌ಗೆ ಕೋರ್ಟ್ ಅನುಮತಿ ನೀಡಿತ್ತು. ಕಳೆದ ಒಂದು ದಿನದ ಹಿಂದೆಯಷ್ಟೇ ನಟ ದರ್ಶನ್ ಕುಟುಂಬದೊಂದಿಗೆ ಮೈಸೂರಿನ ಫಾರಂಹೌಸ್‌ನಲ್ಲಿ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದ್ದರು.ಇದನ್ನೂ ಓದಿ: ಶಿವಣ್ಣಗೆ 6 ಆಪರೇಷನ್‌, 190 ಹೊಲಿಗೆ ಹಾಕಲಾಗಿದೆ: ಮಧು ಬಂಗಾರಪ್ಪ

     

     

  • ದರ್ಶನ್ ಪರ ವಕೀಲರಿಂದ ಹೈಕೋರ್ಟ್‌ಗೆ ಮೆಡಿಕಲ್ ರಿಪೋರ್ಟ್ ಸಲ್ಲಿಕೆ – ವರದಿಯಲ್ಲಿ ಏನಿದೆ?

    ದರ್ಶನ್ ಪರ ವಕೀಲರಿಂದ ಹೈಕೋರ್ಟ್‌ಗೆ ಮೆಡಿಕಲ್ ರಿಪೋರ್ಟ್ ಸಲ್ಲಿಕೆ – ವರದಿಯಲ್ಲಿ ಏನಿದೆ?

    ಬೆಂಗಳೂರು: ನಟ ದರ್ಶನ್‌ಗೆ (Actor Darshan) ಚಿಕಿತ್ಸೆ ಮುಂದುವರೆದಿದ್ದು, ಇಂದು (ನ.6) ದರ್ಶನ್ ಪರ ವಕೀಲರು ಒಂದು ವಾರದ ಮೆಡಿಕಲ್ ರಿಪೋರ್ಟ್‌ನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.

    ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಹಿನ್ನೆಲೆ ಜೈಲಿನಲ್ಲಿದ್ದ ದರ್ಶನ್‌ಗೆ ವೈದ್ಯಕೀಯ ವಿಚಾರಕ್ಕೆ ಸಂಬಂಧಿಸಿದಂತೆ 6 ವಾರಗಳ ಕಾಲ ಹೈಕೋರ್ಟ್ ಮಧ್ಯಂತರ ಜಾಮೀನನ್ನು ನೀಡಿದೆ. ಇದೀಗ ಬೆನ್ನು ನೋವಿಗಾಗಿ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ (BGS Hospital) ನಟ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ಒಂದು ವಾರದಲ್ಲಿ ದರ್ಶನ್‌ಗೆ ನೀಡಲಾಗುವ ಚಿಕಿತ್ಸೆಯ ವರದಿಯನ್ನು ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ (High Court) ಸಲ್ಲಿಸಿದ್ದಾರೆ.ಇದನ್ನೂ ಓದಿ: ಶಿರೂರು ಗ್ರಾಮದ ವಸತಿ ಶಾಲೆ, 1,200 ಆಶ್ರಯ ಮನೆಗಳೆಲ್ಲವೂ ವಕ್ಫ್‌ ಆಸ್ತಿ – ಇಸ್ಲಾಮಿಯಾ ತಂಜೀಮ್ ಸಮಿತಿ ಪಟ್ಟು

    ಇನ್ನೂ ಬಿಜಿಎಸ್ ವೈದ್ಯರು ಆಪರೇಷನ್‌ಗೆ ಸಲಹೆ ನೀಡಿದ್ದರೂ ಅದಕ್ಕೆ ದರ್ಶನ್ ನಿರಾಕರಿಸಿದ್ದಾರೆ. ಈ ಹಿಂದೆ ಫ್ಯಾಕ್ಚರ್ ಆಗಿರೋದು ಒಂದು ಸಮಸ್ಯೆ ಇದೆ. ಆಪರೇಷನ್ ಮಾಡಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಆದರೆ ದರ್ಶನ್ ಬೇಡ ಎಂದಿದ್ದು, ಕನ್ಸರ್ವೇಟಿವ್ ಟ್ರೀಟ್‌ಮೆಂಟ್ ಶುರು ಮಾಡಲಾಗಿದೆ.

    10 ರಿಂದ 15 ದಿನಗಳ ಕಾಲ ಕನ್ಸರ್ವೇಟಿವ್ ಚಿಕಿತ್ಸೆ ನೀಡಲಾಗುತ್ತದೆ. ಫಿಜಿಯೋಥೆರಪಿ, ವ್ಯಾಯಾಮ, ಔಷಧಿ, ಎಕ್ಸ್ಸೈಸ್ ಮೂಲಕ ಗುಣಮುಖ ಮಾಡುವ ಪ್ರಯತ್ನ ನಡೆಯುತ್ತದೆ. ಕನ್ಸರ್ವೇಟಿವ್ ಚಿಕಿತ್ಸೆಯಲ್ಲಿ ಗುಣಮುಖ ಆಗದಿದ್ದರೆ ಆಪರೇಷನ್ ಮಾಡಲು ನಿರ್ಧರಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಹೈಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಏನಿದೆ?
    ದರ್ಶನ್‌ಗೆ ಚಿಕಿತ್ಸೆ ನೀಡುವ ಬಗ್ಗೆಗಿನ ವರದಿಯನ್ನು ದರ್ಶನ್ ಪರ ವಕೀಲರು ಹೈಕೋರ್ಟ್ ಸಲ್ಲಿಸಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿ ಮೊದಲ ವಾರದ ವರದಿಯನ್ನು ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಅದರಂತೆ ಇಂದು ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ ಮೆಡಿಕಲ್ ರಿಪೋರ್ಟ್ ಸಲ್ಲಿಸಿದ್ದಾರೆ.

    ಸದ್ಯ ದರ್ಶನ್‌ಗೆ ಫಿಜಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ಫಿಸಿಯೋಥೆರಫಿಯೇ ಅಂತಿಮ ಅಲ್ಲ ಎನ್ನಿಸುತ್ತಿದೆ. ಫಿಸಿಯೋಥೆರಫಿಯಲ್ಲಿ ಗುಣಮುಖ ಆಗದಿದ್ದಲ್ಲಿ ಸರ್ಜರಿ ಮಾಡಲಾಗುವುದು. ರೋಗಿಗೆ ಶಸ್ತ್ರಚಿಕಿತ್ಸೆ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇನ್ನೂ ಶಸ್ತ್ರಚಿಕಿತ್ಸೆಗೆ ದರ್ಶನ್ ಒಪ್ಪಿಗೆ ಸೂಚಿಸಿಲ್ಲ. ದರ್ಶನ್ ಒಪ್ಪಿಕೊಂಡಲ್ಲಿ ಶಸ್ತ್ರಚಿಕಿತ್ಸೆಗೆ ನಿರ್ಧರಿಸಲಾಗುವುದು ಎಂಬ ವಿಚಾರ ವರದಿಯಲ್ಲಿದೆ ಎನ್ನಲಾಗುತ್ತಿದೆ.

    ಬೆನ್ನು ನೋವಿನ ಕಾರಣ ನಟ ದರ್ಶನ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ. ಈವರೆಗಿನ ಚಿಕಿತ್ಸೆ ಮತ್ತು ಮುಂದಿನ ಪ್ರಕ್ರಿಯೆಗಳ ಬಗ್ಗೆ ದರ್ಶನ್ ಪರ ವಕೀಲರು ಇಂದು ಹೈಕೋರ್ಟ್ಗೆ ವೈದ್ಯಕೀಯ ವರದಿ ಸಲ್ಲಿಸಿದ್ದಾರೆ. ಇದರ ಪ್ರಕಾರ, ದರ್ಶನ್‌ಗೆ ಸರ್ಜರಿ ಮಾಡುವ ಬಗ್ಗೆ ವೈದ್ಯರು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಸದ್ಯಕ್ಕೆ ಫಿಸಿಯೋಥೆರಪಿ ಮಾಡಲಾಗ್ತಿದೆ. ಇದರಿಂದ ಗುಣಮುಖ ಆಗದಿದ್ರೆ ಸರ್ಜರಿ ಬಗ್ಗೆ ನಿರ್ಧಾರ ಮಾಡ್ತೀವಿ. ಒಂದೊಮ್ಮೆ ದರ್ಶನ್ ಒಪ್ಪಿಕೊಂಡ್ರೆ ಸರ್ಜರಿ ಮಾಡ್ತೀವಿ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: ಚಲಾಯಿಸುತ್ತಿರುವಾಗಲೇ ಹೃದಯಾಘಾತ – ಬಿಎಂಟಿಸಿ ಚಾಲಕ ಸಾವು

  • ದರ್ಶನ್ ಎಡಗಾಲಿಗೂ ಸಮಸ್ಯೆ – ಫಿಜಿಯೋಥೆರಪಿನಾ? ಆಪರೇಷನ್‌ನಾ?

    ದರ್ಶನ್ ಎಡಗಾಲಿಗೂ ಸಮಸ್ಯೆ – ಫಿಜಿಯೋಥೆರಪಿನಾ? ಆಪರೇಷನ್‌ನಾ?

    – ಕುಂಟುತ್ತಲೇ ಆಸ್ಪತ್ರೆಗೆ ಬಂದಿದ್ದ ಆರೋಪಿ ನಟ

    ಬೆಂಗಳೂರು: ಜಾಮೀನಿನ ಬಳಿಕ ಆಸ್ಪತ್ರೆಗೆ ದಾಖಲಾಗಿರುವ ನಟ ದರ್ಶನ್‌ಗೆ (Actor Darshan) ಇದೀಗ ವೈದ್ಯಕೀಯ ಕ್ಷೇತ್ರದಲ್ಲಿ ಯಾವ ಚಿಕಿತ್ಸೆ ಕೊಡಬೇಕು ಎನ್ನುವುದೇ ಒಂದು ದೊಡ್ಡ ಚರ್ಚೆಯಾಗಿದೆ.

    ರೇಣುಕಾಸಾಮಿ ಕೊಲೆ ಪ್ರಕರಣದ (Renukaswamy Murder Case) ಹಿನ್ನೆಲೆ ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್‌ಗೆ ಅ.3 ರಂದು ಮಧ್ಯಂತರ ಜಾಮೀನು ಸಿಕ್ಕಿತ್ತು. ಬಳಿಕ ಒಂದು ದಿನ ಸಂಪೂರ್ಣ ವಿಶ್ರಾಂತಿಯ ಬಳಿಕ ನ.1ರಂದು ದರ್ಶನ್ ಕೆಂಗೇರಿಯ (Kengeri) ಬಿಜಿಎಸ್ ಆಸ್ಪತ್ರೆಗೆ (BGS Hospital) ದಾಖಲಾಗಿದ್ದಾರೆ.ಇದನ್ನೂ ಓದಿ: ರಾಯಚೂರು| ಪಟಾಕಿ ಕಿಡಿ ತಗುಲಿ ಅಂಗಡಿಗೆ ಬೆಂಕಿ – ಅಂಗಡಿಯಲ್ಲಿದ್ದ ವಸ್ತುಗಳು ಭಸ್ಮ

    ಆಸ್ಪತ್ರೆಗೆ ದಾಖಲಾದ ಬಳಿಕ ದರ್ಶನ್‌ಗೆ ಫಿಜಿಯೋಥೆರಪಿನಾ? ಅಥವಾ ಆಪರೇಷನ್‌ನಾ? ಎಂದು ಚರ್ಚೆ ನಡೆಯುತ್ತಿದೆ. ಇತ್ತ ಕಾಣಿಸಿಕೊಂಡಿರುವ ನೋವಿಗೆ ಎಕ್ಸಾಮಿನೇಷನ್ ಆಗುವ ತನಕ ಚಿಕಿತ್ಸೆ ಹೇಗೆ ಎಂದು ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ಕೂಡ ರಿಪೋರ್ಟ್‌ಗಳಿಗಾಗಿ ಕಾಯುತ್ತಿದ್ದಾರೆ.

    ಈ ಹಿಂದೆ ಕೂಡ ಇದೇ ರೀತಿ ಬೆನ್ನು ನೋವಿಗೆ ಸಂಬಂಧಿಸಿದಂತೆ ಆಪರೇಷನ್ ಮಾಡಿ ಚಿಕಿತ್ಸೆ ನೀಡಲಾಗಿತ್ತು. ಈಗ ಮತ್ತೆ ಬೆನ್ನಿನಲ್ಲೇ ಸಮಸ್ಯೆ ಉಲ್ಬಣ ಆಗಿದ್ದು, ಆಪರೇಷನ್ ಬದಲು ವೈದ್ಯರು ಫಿಜಿಯೋಥೆರಪಿಗೆ ಹೆಚ್ಚು ಮನ್ನಣೆ ಕೊಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಕುಟುಂಬದವರು ಸಹ ಶಸ್ರ್ತಚಿಕಿತ್ಸೆಯನ್ನು ಕೊನೆಯ ಆಯ್ಕೆಯಾಗಿ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.

    ದರ್ಶನ್‌ಗೆ ಉಂಟಾಗಿರುವ ಬೆನ್ನು ನೋವಿನಿಂದಾಗಿ ಎಡಗಾಲಿಗೂ ಕೂಡ ದೊಡ್ಡಮಟ್ಟದ ಸಮಸ್ಯೆಯಾಗಿ ಕಾಡುತ್ತಿದೆ. ಜೈಲಿಂದ ರಿಲೀಸ್ ಆದ ದಿನಕ್ಕೂ ನಿನ್ನೆ ಆಸ್ಪತ್ರೆಗೆ ಬಂದ ದಿನಕ್ಕೂ ನೋವು ಕೊಂಚ ಹೆಚ್ಚಾದಂತೆ ಕಾಣುತ್ತಿದೆ.

    ಸ್ಪೈನಲ್‌ ಕಾರ್ಡ್ (Spinal Cord) ಸಮಸ್ಯೆಯಿಂದ ಆರಂಭವಾದ ಬೆನ್ನುನೋವು, ಈಗ ಕಾಲುಗಳಿಗೂ ಸಮಸ್ಯೆ ಉಂಟುಮಾಡುತ್ತಿದೆ. ಹಾಗಾಗಿ ಬೆನ್ನು ನೋವು ಜೊತೆಗೆ ಎಡಗಾಲೂ ನೋವಿದ್ದರೆ ರೋಗಿಯ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರಲಿದೆ? ಅದರಿಂದ ದೇಹದ ಮೇಲಾಗುವ ಪರಿಣಾಮ ಏನು? ಎನ್ನುವುದನ್ನು ವೈದ್ಯರು ತಿಳಿಸಬೇಕಾಗಿದೆ.

    ವೈದ್ಯರು ಹೇಳೋದೇನು?
    ವೈದ್ಯರ ಮಾಹಿತಿಯ ಪ್ರಕಾರ, ಮೊದಲಿಗೆ ಬೆನ್ನು ನೋವು ಹೆಚ್ಚಾಗುತ್ತಿದ್ದಂತೆ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳಲಿದೆ. ಬಳಿಕ ನಡೆಯಲು ಸಮಸ್ಯೆ ಎದುರಾಗಿ ಹಂತ ಹಂತವಾಗಿ ಸಮಸ್ಯೆ ಇರುವ ಕಾಲಿನಲ್ಲಿ ಮರಗಟ್ಟುವಿಗೆ ಶುರುವಾಗುತ್ತದೆ. ಆಗ ಕಾಲು ಬೆರಳಿನಿಂದ ಆರಂಭವಾಗಿ ಇಡೀ ಕಾಲಿಗೆ ವೇಗವಾಗಿ ಮರಗಟ್ಟುವಿಕೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ಕಾಲಿನ ಚಲನೆಗೆ ಕೂಡ ಕಷ್ಟವಾಗಿ ಕಾಲು ಸಂಪೂರ್ಣ ನಿಶಕ್ತಿಗೆ ಒಳಗಾಗುತ್ತದೆ. ನಡೆಯಲು ಕಷ್ಟವಾದಾಗ, ಪಾರ್ಶ್ವವಾಯು ಆಗುವ ಸಾಧ್ಯತೆ ಹೆಚ್ಚಾಗುತ್ತದೆ. ಹಾಗಾಗಿ ಶೀಘ್ರದಲ್ಲಿ ಅಗತ್ಯ ಚಿಕಿತ್ಸೆ ನೀಡಬೇಕು ಎನ್ನುತ್ತಾರೆ ವೈದ್ಯರು.ಇದನ್ನೂ ಓದಿ: ದಶಕಗಳ ಬಳಿಕ ಅಪ್ಪಳಿಸಿದ ಭೀಕರ ಪ್ರವಾಹಕ್ಕೆ ಸ್ಪೇನ್‌ ತತ್ತರ – ಸಾವಿನ ಸಂಖ್ಯೆ 205ಕ್ಕೆ ಏರಿಕೆ

  • ಬೆನ್ನುನೋವಿನ ಚಿಕಿತ್ಸೆಗಾಗಿ ಬಿಜಿಎಸ್ ಆಸ್ಪತ್ರೆಯತ್ತ ದರ್ಶನ್ – ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ

    ಬೆನ್ನುನೋವಿನ ಚಿಕಿತ್ಸೆಗಾಗಿ ಬಿಜಿಎಸ್ ಆಸ್ಪತ್ರೆಯತ್ತ ದರ್ಶನ್ – ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ

    ಬೆಂಗಳೂರು: ಬೆನ್ನು ನೋವಿನಿಂದ ಬಳಲುತ್ತಿದ್ದ ಆರೋಪಿ ನಟ ದರ್ಶನ್ (Actor Darshan) ಚಿಕಿತ್ಸೆಗಾಗಿ ಇಂದು (ನ.1) ಬೆಂಗಳೂರಿನ ಕೆಂಗೇರಿ (Kengeri) ಬಳಿಯಿರುವ ಬಿಜಿಎಸ್ ಆಸ್ಪತ್ರೆಯತ್ತ (BGS Hospital) ಹೊರಟಿದ್ದಾರೆ.

    ಮಧ್ಯಾಹ್ನ 2:40 ಸುಮಾರಿಗೆ ದರ್ಶನ್ ಪೊಲೀಸ್ ಭದ್ರತೆಯೊಂದಿಗೆ ಮನೆಯಿಂದ ಹೊರಟಿದ್ದಾರೆ. ಆಸ್ಪತ್ರೆಯಲ್ಲಿ ಮೊದಲು ಬೆನ್ನುನೋವಿಗೆ ಸಂಬಂಧಿಸಿದಂತೆ ಸ್ಕ್ಯಾನಿಂಗ್ ಮಾಡಲಿರುವ ವೈದ್ಯರು, ಬಳಿಕ ಸಮಾಲೋಚನೆ ನಡೆಸಿ ಚಿಕಿತ್ಸೆ ನೀಡುವ ಕೆಲಸ ಆರಂಭಿಸಲಿದ್ದಾರೆ. ಹಿರಿಯ ತಜ್ಞ ವೈದ್ಯ ಡಾ. ನವೀನ್ ಚಿಕಿತ್ಸೆ ನೀಡಲಿದ್ದಾರೆ ಎಂದು ಬಿಜಿಎಸ್ ಆಸ್ಪತ್ರೆಯ ಆಡಳಿತ ಮಂಡಳಿ ಮಾಹಿತಿ ನೀಡಿದೆ.ಇದನ್ನೂ ಓದಿ:ಯುವ ರಾಜ್‌ಕುಮಾರ್ ನಟನೆಯ 2ನೇ ಸಿನಿಮಾಗೆ ಟೈಟಲ್ ಫಿಕ್ಸ್

    ಆಸ್ಪತ್ರೆಗೆ ಬಿಗಿ ಭದ್ರತೆ:
    ಬಿಜಿಎಸ್ ಆಸ್ಪತ್ರೆಗೆ ದಾಖಲಾಗುವುದಕ್ಕೂ ಮುನ್ನ ದರ್ಶನ್ ಬೆಳಗ್ಗೆ ಮಲ್ಲೇಶ್ವರಂನಲ್ಲಿರೋ (Malleshwaram) ಆರ್ಥೋ ಕ್ಲಿನಿಕ್‌ಗೆ (Ortho Clinic) ಭೇಟಿ ನೀಡಿದ್ದರು. ದರ್ಶನ್ ಚಿಕಿತ್ಸೆಗಾಗಿ ದಾಖಲಾಗಲಿರುವ ಹಿನ್ನೆಲೆ ಆಸ್ಪತ್ರೆ ಸುತ್ತಲೂ ಪೊಲೀಸರ ಬಿಗಿ ಬಂದೋ ಬಸ್ತ್ ನಿಯೋಜಿಸಲಾಗಿದೆ. ಆಸ್ಪತ್ರೆ ಮುಂಭಾಗ ಬ್ಯಾರಿಕೇಡ್ ಅಳವಡಿಸಿದ್ದು, ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.ಇದನ್ನೂ ಓದಿ: ಹಾವೇರಿ ಜಿಲ್ಲೆಗೂ ಕಾಲಿಟ್ಟ ವಕ್ಫ್ ಆಸ್ತಿ ವಿವಾದ- ಊರು ಬಿಟ್ಟ ಮುಸ್ಲಿಂ ಕುಟುಂಬಗಳು

  • ಬೆನ್ನುನೋವಿನಿಂದ ದಿನವಿಡೀ ವಿಶ್ರಾಂತಿ – ಇಂದು ದರ್ಶನ್ ಆಸ್ಪತ್ರೆಗೆ ದಾಖಲು?

    ಬೆನ್ನುನೋವಿನಿಂದ ದಿನವಿಡೀ ವಿಶ್ರಾಂತಿ – ಇಂದು ದರ್ಶನ್ ಆಸ್ಪತ್ರೆಗೆ ದಾಖಲು?

    -ಪತ್ನಿ, ಪುತ್ರನ ಜೊತೆ ದೀಪಾವಳಿ ಆಚರಿಸಿದ `ಕಾಟೇರ’

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ದರ್ಶನ್‌ಗೆ ಬರೋಬ್ಬರಿ 5 ತಿಂಗಳ ಬಳಿಕ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದು, ಮೊನ್ನೆಯಷ್ಟೇ ಮನೆಗೆ ಆಗಮಿಸಿದ್ದಾರೆ.

    ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆ ಚಿಕಿತ್ಸೆಗಾಗಿ 6 ವಾರಗಳ ಅವಧಿಯ ಮಧ್ಯಂತರ ಜಾಮೀನನ್ನು ಕೋರ್ಟ್ ನೀಡಿದೆ. ಬುಧವಾರ ರಾತ್ರಿ ನಟ ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿನಿಂದ ನೇರವಾಗಿ ಹೊಸಕೆರೆ ಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ನಿವಾಸಕ್ಕೆ ತೆರಳಿದ್ದಾರೆ. ಪತ್ನಿ ಹಾಗೂ ಪುತ್ರನ ಜೊತೆ ದೀಪಾವಳಿ ಆಚರಿಸಿದ್ದಾರೆ.ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಗುಡ್ ನ್ಯೂಸ್ ಕೊಟ್ಟ ಡಾಲಿ – ಹಸೆಮಣೆ ಏರುತ್ತಿದ್ದಾರೆ ನಟ ಧನಂಜಯ್‌

    ಜಾಮೀನಿನ ಮೇಲೆ ಹೊರಬಂದಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಫ್ಲ್ಯಾಟ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ರಾತ್ರಿ ಮನೆಗೆ ಬಂದ ದರ್ಶನ್ ಊಟ ಮಾಡಿದ ಬಳಿಕ ನಿದ್ದೆಗೆ ಜಾರಿದ್ದಾರೆ. ವಿಪರೀತ ಬೆನ್ನುನೋವು ಹಿನ್ನೆಲೆ ಬೆಳಗ್ಗೆ ಉಪಹಾರದ ಬಳಿಕವೂ ರೆಸ್ಟ್ ಮಾಡಿದ್ದಾರೆ. ಸದ್ಯ ಬೆನ್ನುನೋವು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಶುಕ್ರವಾರವಾದ ಇಂದು ಆಸ್ಪತ್ರೆಗೆ ದಾಖಲಾಗಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

    ದರ್ಶನ್ ಪುತ್ರ ವಿನೀಶ್ ನಿನ್ನೆ (ಅ.31) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರು. ರಾತ್ರಿಯೇ ಮಗನ ಜೊತೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ದೀಪಾವಳಿ ಹಬ್ಬ ಒಂದು ಕಡೆಯಾದರೆ, ಮಗನ ಹುಟ್ಟುಹಬ್ಬ ಇನ್ನೊಂದು ಕಡೆ. ಹೀಗಾಗಿ ಕುಟುಂಬದೊಂದಿಗೆ ದರ್ಶನ್ ಹೆಚ್ಚು ಸಮಯ ಕಳೆದಿದ್ದಾರೆ.

    ಮಧ್ಯಂತರ ಜಾಮೀನು ಆದೇಶ ಘೋಷಣೆಯಾದಾಗಿನಿಂದ ಅಭಿಮಾನಿಗಳಲ್ಲಿ ಸಂತಸ ಮನೆಮಾಡಿಕೊಂಡಿದೆ. ಹೊಸಕೆರೆಹಳ್ಳಿಯಲ್ಲಿರುವ ಅಪಾರ್ಟ್ಮೆಂಟ್‌ಗೆ ದರ್ಶನ್ ಬಂದಿದ್ದಾರೆ ಎನ್ನುವ ವಿಚಾರ ತಿಳಿದ ಅಭಿಮಾನಿಗಳು ರಾತ್ರಿಯಿಂದಲೇ ಅಪಾರ್ಟ್ಮೆಂಟ್ ಬಳಿ ಜಮಾಯಿಸಿದರು. ದರ್ಶನ್‌ಗೆ ಜೈಕಾರ ಹಾಕಿ ಸಂಭ್ರಮಿಸಿದರು. ಅಪಾರ್ಟ್ಮೆಂಟ್ ನಿವಾಸಿಗಳಿಗೆ ತೊಂದರೆ ಆಗಬಾರದು, ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಭದ್ರತೆ ಒದಗಿಸಿದ್ದಾರೆ.

    ಇನ್ನೂ ಆರ್.ಆರ್.ನಗರ ದರ್ಶನ್ ನಿವಾಸ ಬಣಗುಟ್ಟುತ್ತಿದೆ. ಆ ನಿವಾಸದಲ್ಲಿದ್ದ ಐಷಾರಾಮಿ ಕಾರುಗಳನ್ನು ಹೊಸಕೆರೆಹಳ್ಳಿ ಅಪಾರ್ಟ್ಮೆಂಟ್‌ಗೆ ಸಿಬ್ಬಂದಿ ಶಿಫ್ಟ್ ಮಾಡಿದ್ದಾರೆ. ಮಸ್ಟಾಂಗ್ ಕಾರು, ಲ್ಯಾಂಬರ್ಗಿನಿ ಮತ್ತು ಜಾಗ್ವಾರ್‌ನ್ನ ಸ್ವಚ್ಛಗೊಳಿಸಿ ಶಿಫ್ಟ್ ಮಾಡಿದ್ದಾರೆ. ದೀಪಾವಳಿ ಹಬ್ಬ ಪ್ರಯುಕ್ತ ಕಾರುಗಳಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ.

    ಒಟ್ಟಿನಲ್ಲಿ 6 ವಾರಗಳ ಕಾಲ ಹೊರಬಂದಿರುವ ದರ್ಶನ್ ಕುಟುಂದೊಂದಿಗೆ ವಿಶ್ರಾಂತಿ ಪಡೆದಿದ್ದಾರೆ. ಬೆನ್ನುನೋವು ಹಿನ್ನೆಲೆ ಇಂದು 10 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಾಗಲಿದ್ದು, ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಬಹುತೇಕ ಅಪೋಲೋ ಅಥವಾ ಮಣಿಪಾಲ್ ಆಸ್ಪತ್ರೆ ದಾಖಲಾಗುವ ಸಾಧ್ಯತೆಯಿದ್ದು, ಈ ವಿಷಯವನ್ನು ಗೌಪ್ಯವಾಗಿಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

    ದರ್ಶನ್ ಆಸ್ಪತ್ರೆಗೆ ಹೋಗುವ ಹಿನ್ನೆಲೆ ಅಪಾರ್ಟ್ಮೆಂಟ್ ಬಳಿ ಅಭಿಮಾನಿಗಳು ಜಮಾಯಿಸುವ ಸಾಧ್ಯತೆಯಿದ್ದು, ಸದ್ಯ ಅಪಾರ್ಟ್ಮೆಂಟ್ ಬಳಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.ಇದನ್ನೂ ಓದಿ: ಬೆಳಕಿನ ಹಬ್ಬವನ್ನು ಕಣ್ತುಂಬಿಕೊಳ್ಳಬೇಕಾ? ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ!

  • ಪತ್ನಿ ವಿಜಯಲಕ್ಷ್ಮಿ ಫ್ಲ್ಯಾಟ್‌ಗೆ ಭೇಟಿ – ಮಗನ ಹುಟ್ಟುಹಬ್ಬ ಆಚರಣೆ ಬಳಿಕ ಆಸ್ಪತ್ರೆಗೆ ದಾಖಲಾಗಲಿರುವ ದರ್ಶನ್

    ಪತ್ನಿ ವಿಜಯಲಕ್ಷ್ಮಿ ಫ್ಲ್ಯಾಟ್‌ಗೆ ಭೇಟಿ – ಮಗನ ಹುಟ್ಟುಹಬ್ಬ ಆಚರಣೆ ಬಳಿಕ ಆಸ್ಪತ್ರೆಗೆ ದಾಖಲಾಗಲಿರುವ ದರ್ಶನ್

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಆರೋಪಿ ನಟ ದರ್ಶನ್ (Actor Darshan) ನಿನ್ನೆ (ಅ.30) ಬಳ್ಳಾರಿ ಜೈಲಿನಿಂದ (Ballary Jail) ರಿಲೀಸ್ ಆಗಿದ್ದಾರೆ.

    ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದ ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ 2 ತಿಂಗಳು ಕಳೆದು ನಿನ್ನೆ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಒಂದು ಕಡೆ ಜೈಲಿಗೆ ಹೊಂದಿಕೊಳ್ಳಲು ಕಷ್ಟವಾದರೆ ಇನ್ನೊಂದು ಕಡೆ ಬೆನ್ನು ನೋವು ಬೇತಾಳ ತರಹ ಕಾಡುತ್ತಿತ್ತು.

    ಇದೀಗ ಬೆನ್ನು ನೋವಿಗೆ ಸರ್ಜರಿ ಸಲುವಾಗಿ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ನಿನ್ನೆ ಸಂಜೆ ಬಳ್ಳಾರಿ ಜೈಲಿಂದ ನೇರವಾಗಿ ಬೆಂಗಳೂರಿನ ಪತ್ನಿ ವಿಜಯಲಕ್ಷ್ಮಿ ಫ್ಲ್ಯಾಟ್‌ಗೆ ದರ್ಶನ್ ಬಂದಿಳಿದಿದ್ದಾರೆ.ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ 31-10-2024

    ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಸಿಕ್ಕ ಬಳಿಕ ಸಂಜೆ ವೇಳೆಗೆ ಬಳ್ಳಾರಿ ಜೈಲಿಂದ ದರ್ಶನ್ ಬಿಡುಗಡೆಯಾದರು. ಪತ್ನಿ ವಿಜಯಲಕ್ಷ್ಮಿ, ನಟ ಧನ್ವೀರ್, ಸಂಬಂಧಿ ಸುಶಾಂತ್ ನಾಯ್ಡು ಜೊತೆಗೆ ಬೆಂಗಳೂರಿಗೆ ಸುದೀರ್ಘ ಪ್ರಯಾಣ ಬೆಳೆಸಿದರು. ದಾರಿಯುದ್ದಕ್ಕೂ ದರ್ಶನ್ ಅಭಿಮಾನಿಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತು ದಾಸನಿಗೆ ಜೈಕಾರ ಹಾಕಿದರು. ಈ ವೇಳೆ ದರ್ಶನ್ ಅಭಿಮಾನಿಗಳತ್ತ ಕೈ ಬೀಸಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.

    ಬಳ್ಳಾರಿ, ಅನಂತಪುರ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಜಗಳಪುರ, ಚದಲಾಪುರ, ದೇವನಹಳ್ಳಿ, ಹುಣಸಮಾರನಹಳ್ಳಿ, ಹೆಬ್ಬಾಳ, ಮಲ್ಲೇಶ್ವರಂ, ನವರಂಗ್, ಮೈಸೂರು ರೋಡ್ ಮೂಲಕ ಹೊಸಕೆರೆಹಳ್ಳಯ ಪತ್ನಿ ಅಪಾರ್ಟ್ಮೆಂಟ್‌ಗೆ ಭೇಟಿ ನೀಡಿದರು.

    ದರ್ಶನ್ ವಿಜಯಲಕ್ಷ್ಮಿ ಫ್ಲ್ಯಾಟ್‌ಗೆ ಬರ್ತಿದ್ದಕ್ಕೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ಸಂಭ್ರಮಾಚರಣೆ ಮಾಡಿದರು. `ಡಿ ಬಾಸ್ ಡಿ ಬಾಸ್’ ಎಂದು ಜೈಕಾರ ಹಾಕಿದರು. ಈ ವೇಳೆ ದರ್ಶನ್ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿಲೇಬೇಕಾದ ಪರಿಸ್ಥಿತಿ ಎದುರಾಯಿತು.

    ದಾಸ 5 ತಿಂಗಳ ಬಳಿಕ ಜೈಲಿಂದ ಬಿಡುಗಡೆ ಆಗಿದ್ದು, ಮಧ್ಯಂತರ ಜಾಮೀನು ಪಡೆದಿದ್ದಾರೆ. ಇಂದು (ಅ.31) ಮಧ್ಯಾಹ್ನ ಆಸ್ಪತ್ರೆಗೆ ದಾಖಲಾಗಲಿದ್ದಾರೆ. ಇಂದು ಪುತ್ರ ವಿನೀಶ್ ಹುಟ್ಟುಹಬ್ಬ ಇದ್ದು, ಮಗನ ಹುಟ್ಟುಹಬ್ಬ ಆಚರಣೆ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಾಗಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.ಇದನ್ನೂ ಓದಿ: ದಿನ ಭವಿಷ್ಯ 31-10-2024

  • ಜೈಲಿನಲ್ಲಿರೋ ದರ್ಶನ್‌ಗೆ ಮತ್ತೊಂದು ಸಂಕಷ್ಟ: ಪ್ರೊಡ್ಯೂಸರ್‌ಗೆ ಬೆದರಿಕೆ ಕೇಸ್‌ಗೆ ಮರುಜೀವ

    ಜೈಲಿನಲ್ಲಿರೋ ದರ್ಶನ್‌ಗೆ ಮತ್ತೊಂದು ಸಂಕಷ್ಟ: ಪ್ರೊಡ್ಯೂಸರ್‌ಗೆ ಬೆದರಿಕೆ ಕೇಸ್‌ಗೆ ಮರುಜೀವ

    ಬೆಂಗಳೂರು: ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ಬೆದರಿಕೆ ವಿಚಾರವಾಗಿ ನಿರ್ಮಾಪಕ ದಾಖಲಿಸಿದ್ದ ಕೇಸ್ ಇದೀಗ ಮರುಜೀವ ಪಡೆದುಕೊಂಡಿದೆ.

    ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಹಿನ್ನೆಲೆ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ (Ballary Central Jail) ಆರೋಪಿ ದರ್ಶನ್‌ಗೆ (Actor Darshan) ಇದೀಗ ಇನ್ನೊಂದು ಸಂಕಷ್ಟ ಎದುರಾಗಿದೆ. ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿದ್ದರೂ ಆಪತ್ತು ತಪ್ಪದಂತೆ ಆಗಿದೆ.ಇದನ್ನೂ ಓದಿ: ಇಸ್ರೇಲ್‌, ಜಗತ್ತಿಗೆ ಇದು ಒಳ್ಳೆಯ ದಿನ: ಹಮಾಸ್‌ ಮುಖ್ಯಸ್ಥನ ಹತ್ಯೆಗೆ ಅಮೆರಿಕ ಸಂತಸ

    ಈ ಹಿಂದೆ `ಭಗವಾನ್ ಶ್ರೀ ಕೃಷ್ಣಾ’ ಎಂಬ ಭರತ್ ನಿರ್ಮಾಣದ ಸಿನಿಮಾದಲ್ಲಿ ಧೃವನ್ ನಾಯಕನಾಗಿ ನಟಿಸುತ್ತಿದ್ದ. 2020ರಲ್ಲಿ ನಿರ್ಮಾಪಕ ಭರತ್ (Producer Bharath) ಸಿನಿಮಾದ ಶೂಟಿಂಗ್ ಶುರು ಮಾಡಿದ್ದ. ಆದರೆ ಕೋವಿಡ್ ಕಾರಣದಿಂದಾಗಿ ಅರ್ಧಕ್ಕೆ ಸಿನಿಮಾ ನಿಂತುಹೋಗಿತ್ತು. ಈ ವಿಚಾರವಾಗಿ ನಟ ಧೃವನ್, ದರ್ಶನ್ ಬಳಿ ಹೋಗಿದ್ದ. ಈ ವೇಳೆ ದರ್ಶನ್‌ನಿಂದ ಭರತ್‌ಗೆ ಕರೆ ಮಾಡಿಸಿದ್ದ. ಆಗ ದರ್ಶನ್ `ನೀನೆ ಇರೋದಿಲ್ಲ’ ಎಂದು ಭರತ್‌ಗೆ ಬೆದರಿಕೆ ಹಾಕಿದ್ದರು.

    ಕೆಂಗೇರಿ ಪೊಲೀಸ್ ಠಾಣೆಯಲ್ಲಿ (Kengeri Police Station) ಸಿನಿಮಾ ವಿಚಾರವಾಗಿ ಧೃವನ್, ನಟ ದರ್ಶನ್ ಬಳಿ ಹೋಗಿ ಬೆದರಿಕೆ ಹಾಕಿಸಿದ್ದಾನೆ ಎಂದು ನಿರ್ಮಾಪಕ ಭರತ್ ದೂರು ದಾಖಲಿಸಿದ್ದರು. 2022ರ ಆ.5 ರಂದು ಧೃವನ್ ಮೇಲೆ ಎನ್‌ಸಿಆರ್ ದಾಖಲಾಗಿತ್ತು. ಆ ವೇಳೆ ಬೆದರಿಕೆ ಹಾಕಿದ್ದ ವಿಚಾರವಾಗಿ ದರ್ಶನ್ ವಿರುದ್ಧ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ದರ್ಶನ್ ಮತ್ತು ಧೃವನ್ ಮೇಲೆ ಕೆಂಗೇರಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಹಾಗೂ ನೋಟಿಸ್ ಕೂಡ ಕೊಟ್ಟಿರಲಿಲ್ಲ.

    ಇದೀಗ ಬೆದರಿಕೆ ಕೇಸ್ ಅಡಿಯಲ್ಲಿ ಆರೋಪಿ ಧೃವನ್ ಅಲಿಯಾಸ್ ಸೂರಜ್ ಕುಮಾರ್, ನಟ ದರ್ಶನ್, ದರ್ಶನ್ ಮ್ಯಾನೇಜರ್ ನಾಗರಾಜ್ ವಿರುದ್ಧ ಮತ್ತೆ ಎನ್‌ಸಿಆರ್ (Non-Cognizable Report) ದಾಖಲಾಗಿದೆ. ಜೈಲಿನಲ್ಲಿದ್ದರೂ ದರ್ಶನ್ ಪರದಾಡುವಂತಹ ಸ್ಥಿತಿ ಎದುರಾಗಿದೆ.ಇದನ್ನೂ ಓದಿ: ರತನ್ ಟಾಟಾ ಚಿತಾ ಭಸ್ಮವನ್ನು ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲು ನಿರ್ಧಾರ