Tag: actor Darshan

  • `ದಯೆಯಿಂದಿರಿ’ ಡಿ-ಬಾಸ್ ಫ್ಯಾನ್ಸ್‌ಗೆ ರಕ್ಷಿತಾ ಕಿವಿಮಾತು – ಸ್ಯಾಂಡಲ್‌ವುಡ್ ಕ್ವೀನ್‌ಗೆ ಟಾಂಗ್ ಕೊಟ್ರಾ ಕ್ರೇಜಿ ಕ್ವೀನ್?

    `ದಯೆಯಿಂದಿರಿ’ ಡಿ-ಬಾಸ್ ಫ್ಯಾನ್ಸ್‌ಗೆ ರಕ್ಷಿತಾ ಕಿವಿಮಾತು – ಸ್ಯಾಂಡಲ್‌ವುಡ್ ಕ್ವೀನ್‌ಗೆ ಟಾಂಗ್ ಕೊಟ್ರಾ ಕ್ರೇಜಿ ಕ್ವೀನ್?

    ರ್ಶನ್ ಫ್ಯಾನ್ಸ್ (Darshan Fans) ವಿರುದ್ಧ ನಟಿ ರಮ್ಯಾ (Actress Ramya) ಕೆಂಡಕಾರುತ್ತಿರುವ ಬೆನ್ನಲ್ಲೇ ಇದೀಗ ಕ್ರೇಜಿ ಕ್ವೀನ್ ರಕ್ಷಿತಾ (Rakshitha Prem) ಡಿ-ಬಾಸ್ ಫ್ಯಾನ್ಸ್‌ಗೆ ಕಿವಿಮಾತು ಹೇಳಿದ್ದಾರೆ. ಈ ಮೂಲಕ ಸ್ಯಾಂಡಲ್‌ವುಡ್ ಕ್ವೀನ್‌ಗೆ ಟಾಂಗ್ ಕೊಟ್ಟಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

    ಕ್ರೇಜಿ ಕ್ವೀನ್ ರಕ್ಷಿತಾ ಅವರು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡಿದ್ದಾರೆ. ಸ್ಟೋರಿಯಲ್ಲಿ, ನೀವು ಜನರ ಮಾನಸಿಕ ಸ್ಥಿತಿಗತಿಯನ್ನು ನೋಡೋಕೆ ಸಾಧ್ಯವಿಲ್ಲ, ದಯವಿಟ್ಟು ದಯೆಯಿಂದಿರಿ (ಸಹನೆಯಿಂದಿರಿ) ಎಂದಿದ್ದಾರೆ. ಜೊತೆಗೆ ಇನ್ನೊಂದರಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ `ಮೂಲಭೂತವಾಗಿ ಮಾನವನಿಗಿರಬೇಕಾದ ವಿನಯತೆ’ ನಿಜಕ್ಕೂ ವೈರಲ್ ಆಗಬೇಕೆಂದುಕೊಳ್ಳುತ್ತೇನೆ ಎಂದಿದ್ದಾರೆ.ಇದನ್ನೂ ಓದಿ: ಯುರೋಪಿಯನ್‌ ಒಕ್ಕೂಟದೊಂದಿಗೆ ಟ್ರಂಪ್‌ ಬಿಗ್‌ ಡೀಲ್‌ – ಆಮದುಗಳ ಮೇಲೆ 15% ಸುಂಕ

    ಈ ಮೂಲಕ ನಟಿ ರಕ್ಷಿತಾ ರಮ್ಯಾಗೆ ಟಾಂಗ್ ಕೊಟ್ಟಿದ್ದು, ದರ್ಶನ್ ಪರ ಬ್ಯಾಟ್ ಬೀಸಿದ್ದಾರೆ. ಸದ್ಯ ರಕ್ಷಿತಾ ಪೋಸ್ಟ್ ಡಿ-ಬಾಸ್ ಫ್ಯಾನ್ಸ್ ಪೇಜ್‌ನಲ್ಲಿ ಭಾರೀ ವೈರಲ್ ಆಗುತ್ತಿದ್ದು, ಅಟೆನ್ಷನ್ ಗಿಟ್ಟಿಸಿಕೊಳ್ಳುವವರಿಗೆ ರಕ್ಷಿತಾ ಅವರ ಸಂದೇಶ ಇಲ್ಲ ಎನ್ನುತ್ತಿದ್ದಾರೆ.

    ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy Case) ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ನಟಿ ರಮ್ಯಾ ಪದೇ ಪದೇ ದರ್ಶನ್ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗುತ್ತಿದ್ದಾರೆ. ಜೊತೆಗೆ ಡಿ-ಬಾಸ್ ಅಭಿಮಾನಿಗಳು ನಿರಂತರವಾಗಿ ರಮ್ಯಾಗೆ ಸೋಷಿಯಲ್ ಮೀಡಿಯಾ ಮೂಲಕ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದಾರೆ. ಇದರ ಬೆನ್ನಲ್ಲೇ ನಟಿ ಕೂಡ ದರ್ಶನ್ ಫ್ಯಾನ್ಸ್ ವಿರುದ್ಧ ಗರಂ ಆಗಿದ್ದಾರೆ.

    Rakshitha Prem's Instagram Stories
    Rakshitha Prem’s Instagram Stories

    ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ರಮ್ಯಾಗೆ ಅಶ್ಲೀಲ ಕಮೆಂಟ್ ಮಾಡಿದ್ದವರ ಅಕೌಂಟ್‌ಗಳನ್ನು ಬಹಿರಂಗೊಳಿಸಿದ್ದಾರೆ. ರೇಣುಕಾಸ್ವಾಮಿ ಕಳುಹಿಸಿದ ಸಂದೇಶಕ್ಕೂ, ಡಿಬಾಸ್ ಫ್ಯಾನ್ಸ್ ಕಳುಹಿಸುತ್ತಿರುವ ಸಂದೇಶಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಇವರೆಲ್ಲಾ ಸ್ತ್ರೀ-ದ್ವೇಷಿ ಮನೋಭಾವದವರು. ಇಂತವರಿಂದಲೇ ಹೆಣ್ಮಕ್ಕಳು ದೌರ್ಜನ್ಯ, ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಅಂತ ಇನ್‌ಸ್ಟಾಗ್ರಾಮ್ ಪೋ‌ಸ್ಟ್‌ನಲ್ಲಿ ರಮ್ಯಾ ಆಕ್ರೋಶ ಹೊರಹಾಕಿದ್ದಾರೆ.

    ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಹೆಸರು ಕೇಳಿ ಬಂದಾಗ, ಅವತ್ತು ಕೂಡ ರಮ್ಯಾ ಮಾತಾಡಿದ್ದರು. ದರ್ಶನ್‌ರಿಂದ ತಪ್ಪಾಗಿದ್ದರೆ ಕಠಿಣ ಶಿಕ್ಷೆಯೇ ಆಗಬೇಕು ಅಂತ ಪ್ರತಿಕ್ರಿಯೆ ನೀಡಿದ್ದರು. ಜಾಮೀನು ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದಾಗಲೂ ದರ್ಶನ್ ವಿರುದ್ಧವೇ ಪೋಸ್ಟ್ ಮಾಡಿದ್ದರು. ಹಾಗಾಗಿ ದರ್ಶನ್ ಫ್ಯಾನ್ಸ್ ರಮ್ಯಾ ವಿರುದ್ಧ ತಿರುಗಿಬಿದ್ದಿದ್ದರು. ಈಗೀಗ ತೀರಾ ವೈಯಕ್ತಿಕವಾಗಿ ರಮ್ಯಾಗೆ ಟೀಕೆ ಮಾಡುತ್ತಿದ್ದಾರೆ.

    ಈ ಕುರಿತು `ಪಬ್ಲಿಕ್ ಟಿವಿ’ ಜೊತೆ ಮಾತನಾಡಿರೋ ಮೋಹಕತಾರೆ, ಕಾನೂನು ಹೋರಾಟ ಮಾಡೋದಾಗಿ ತಿಳಿಸಿದ್ದಾರೆ. ಎಲ್ಲಾ ಮೆಸೇಜ್‌ಗಳೊಂದಿಗೆ ದೂರು ಕೊಡೋದಾಗಿ ತಿಳಿಸಿದ್ದಾರೆ. ಸುದೀಪ್, ಯಶ್ ಅಲ್ಲ, ಅವರ ಹೆಂಡತಿ ಮಕ್ಕಳನ್ನೂ ಬಿಟ್ಟಿಲ್ಲ. ಚಿಕ್ಕಚಿಕ್ಕ ಮಕ್ಕಳ ಬಗ್ಗೆ ಕೆಟ್ಟಕೆಟ್ಟ ಪದ ಬಳಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಪರಿಶಿಷ್ಟರ 11.8 ಸಾವಿರ ಕೋಟಿಯನ್ನು `ಗ್ಯಾರಂಟಿ’ಗಾಗಿ ದೋಚಲು ಕಾಂಗ್ರೆಸ್ ಮುಂದಾಗಿದೆ: ಅಶೋಕ್ ಕಿಡಿ

  • ಕರ್ಮ ಯಾರ ಮನೆ ಬಾಗಿಲನ್ನು ಬಿಡಲ್ಲ, ನಂದೇನಾದ್ರೂ ತಪ್ಪಿದ್ರೆ ದೇವ್ರು ನೋಡಿಕೊಳ್ಳಲಿ – ರಕ್ಷಕ್ ಬುಲೆಟ್

    ಕರ್ಮ ಯಾರ ಮನೆ ಬಾಗಿಲನ್ನು ಬಿಡಲ್ಲ, ನಂದೇನಾದ್ರೂ ತಪ್ಪಿದ್ರೆ ದೇವ್ರು ನೋಡಿಕೊಳ್ಳಲಿ – ರಕ್ಷಕ್ ಬುಲೆಟ್

    ಬೆಂಗಳೂರು: ಕರ್ಮ ಯಾರ ಮನೆ ಬಾಗಿಲನ್ನು ಬಿಡಲ್ಲ, ನನ್ನದೇನಾದರೂ ತಪ್ಪಿದ್ರೆ ದೇವರು ನೋಡಿಕೊಳ್ಳಲಿ ಎಂದು ನಟ ರಕ್ಷಕ್ ಬುಲೆಟ್ (Rakshak Bullet) ಕಿಡಿಕಾರಿದ್ದಾರೆ.

    ದೊಡ್ಡಬಳ್ಳಾಪುರ (Doddaballapur) ದೇವಸ್ಥಾನಕ್ಕೆ ಹೋಗಿದ್ದ ಪ್ರಥಮ್‌ಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ ಬಂದಿತ್ತು. ದುಷ್ಕರ್ಮಿಗಳ ಗುಂಪೊಂದು ಡ್ರ‍್ಯಾಗರ್ ತೋರಿಸಿ ಪ್ರಥಮ್‌ಗೆ ಜೀವ ಬೆದರಿಕೆ ಒಡ್ಡಿತ್ತು. ಘಟನೆ ವೇಳೆ ರಕ್ಷಕ್ ಬುಲೆಟ್ ಕೂಡ ಇದ್ದರು. ಈ ಕುರಿತು `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನನ್ನನ್ನು ಒಬ್ಬರು ಕರೆದಿದ್ದರು. ಅದಕ್ಕೆ ಅಲ್ಲಿಗೆ ಹೋಗಿದ್ದೆ. ಹೋದೆ, ನನ್ನ ಕೆಲಸ ಮುಗಿಸಿ ಬಂದೆ. ಕೆಲವು ಕಡೆ ನಾನೇ ಬೆದರಿಕೆ ಹಾಕಿಸಿದ್ದೇನೆ, ಸುಪಾರಿ ಕೊಟ್ಟಿದೀನಿ ಅಂತ ಹೇಳಿದ್ದಾರೆ. ಆದರೆ ನಾನು ಇಲ್ಲಿ ರೌಡಿಸಂ, ಬೇರೆ ವ್ಯವಹಾರ ಮಾಡೋಕೆ ಬಂದಿಲ್ಲ. ನಿಯತ್ತಾಗಿ ನಾನು ನನ್ನ ಕೆಲಸ ಅಂತ ಇದೀನಿ. ಘಟನೆ ನಡೆದ ಜಾಗದಲ್ಲಿ ನಾನಿದ್ದೆ. ಆದರೆ ನನಗೂ ಇದ್ಯಾವುದಕ್ಕೂ ನನಗೆ ಸಂಬಂಧ ಇಲ್ಲ. ನಾನು ಮಧ್ಯದಲ್ಲಿ ಹೋದ್ರೆ ನನ್ನ ಮೇಲೆ ಬರುತ್ತೆ ಅಂತ ಹೋಗಿಲ್ಲ ಎಂದರು.ಇದನ್ನೂ ಓದಿ: ಏಯ್‌.. ಗೂಂಡಾಗಿರಿ ಬಿಟ್ಟುಬಿಡಿ, ಬಾಸಿಸಂ ನಡೆಯಲ್ಲ – ದರ್ಶನ್‌ ಫ್ಯಾನ್ಸ್‌ಗೆ ಒಳ್ಳೆ ಹುಡ್ಗ ಪ್ರಥಮ್‌ ವಾರ್ನಿಂಗ್‌

    ಈ ಘಟನೆ ವೇಳೆ ನಾನು ಆ ಜಾಗದಲ್ಲಿದ್ದೆ ಎನ್ನುವ ಕಾರಣದಿಂದಲೇ ಇಷ್ಟೆಲ್ಲಾ ಆಗ್ತಿದೆ. ಪ್ರಥಮ್ ನನಗೆ ಅಣ್ಣನ ತರ. ಬೇರೆಯವರಿಗೆ ತೊಂದರೆ ಕೊಡೋಕೆ ಬಂದಿಲ್ಲ. ಕಲಾವಿದರಾಗಿ ಕೆಲಸ ಮಾಡೋಕೆ ಬಂದಿದೀನಿ. ಅದನ್ನೇ ಮಾಡ್ತೀನಿ. ಇದರಲ್ಲಿ ನನ್ನ ಪಾತ್ರ ಇಲ್ಲ. ಹೀಗಾಗಿ ಯಾರೇ ಏನೇ ಕೇಳಿದರೂ ನಾನು ನಡೆದಿದ್ದನ್ನು ಹೇಳ್ತೀನಿ. ಏನೇ ಆದರೂ ನಾನು ಎದುರಿಸುತ್ತೇನೆ ಎಂದು ಖಡಕ್ಕಾಗಿ ತಿಳಿಸಿದರು.

    ಈ ಘಟನೆ ದೇವಸ್ಥಾನದ ಮುಂದೆ ನಡೆದಿದೆ. ಅಲ್ಲಿದ್ದವರು ದೇವಸ್ಥಾನಕ್ಕೆ ಬರಲಿ, ನಾನು ಹೋಗ್ತೀನಿ. ಎಲ್ಲರೂ ಒಂದು ಕರ್ಪೂರ ಹಚ್ಚೋಣ. ನಾನೇನಾದ್ರೂ ತಪ್ಪು ಮಾಡಿದ್ರೆ ಆ ದೇವ್ರು ನಂಗೆ ಶಿಕ್ಷೆ ಕೊಡಲಿ. ಆ ತಾಯಿ ನನ್ನ ನೋಡಿಕೊಳ್ಳಲಿ. ಕರ್ಮ ಅನ್ನೋದು ಯಾರ ಮನೆ ಬಾಗಿಲನ್ನೂ ಬಿಡಲ್ಲ. ಪ್ರಥಮ್ ಅಣ್ಣನಿಗೆ ನಾನೇನಾದ್ರೂ ತೊಂದರೆ ಕೊಟ್ಟಿದ್ರೆ ಆ ದೇವ್ರು ನಂಗೆ ಶಿಕ್ಷೆ ಕೊಡಲಿ. ಅದನ್ನು ನಾನು ಸ್ವೀಕರಿಸುತ್ತೇನೆ ಎಂದು ಹೇಳಿದರು.

    ಕೆಲವರಿಗೆ ನಾನೇನು ಮಾಡಿದ್ರೂ ಸಮಸ್ಯೆ, ಇಲ್ಲಿ ನನ್ನ ಪಾತ್ರವೇ ಇಲ್ಲ. ನನ್ನ ಬಗ್ಗೆ ಸುಮ್ಮನೇ ಅಪಪ್ರಚಾರ ಮಾಡ್ತಿದ್ದಾರೆ. ನನ್ನದಲ್ಲದ ತಪ್ಪಿಗೆ ನನ್ನ ಬಗ್ಗೆ ಮಾತಾಡ್ತಿದ್ದಾರೆ. ರಕ್ಷಕ್ ಜೊತೆ ಹುಡುಗರಿದ್ದರು ಅಂತ ಹೇಳ್ತಿದ್ದಾರೆ. ಇದ್ರಿಂದ ನಂಗೆ ತುಂಬಾ ನೋವಾಗಿದೆ. ನನ್ನ ಮನೆಯವರಿಗೂ ತುಂಬಾ ನೋವಾಗಿದೆ. ಘಟನೆಯ ಬಳಿಕ ನಾನು ಹಾಗೂ ಪ್ರಥಮ್ ಒಟ್ಟಿಗೆ ಚೆನ್ನಾಗಿ ಮಾತನಾಡಿದ್ದೇವೆ ಎಂದು ತಿಳಿಸಿದರು.

    ಏನಿದು ಪ್ರಕರಣ? ದೊಡ್ಡಬಳ್ಳಾಪುರ ದೇವಸ್ಥಾನದ ಬಳಿ ಆಗಿದ್ದೇನು?
    ನಟ ಪ್ರಥಮ್‌ಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ ಬಂದಿದೆ ಅನ್ನೋ ಆಡಿಯೋವೊಂದು ಸ್ಫೋಟಗೊಂಡಿತ್ತು. ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳ ಗುಂಪೊಂದು ಪ್ರಥಮ್‌ಗೆ ಜೀವ ಬೆದರಿಕೆ ಒಡ್ಡಿರುವುದಾಗಿ ತಿಳಿದುಬಂದಿತ್ತು. ಈ ಕುರಿತು ವ್ಯಕ್ತಿಯೊಬ್ಬರೊಂದಿಗೆ ಪ್ರಥಮ್ ಮಾತನಾಡಿರುವ ಆಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

    ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳು ಡ್ಯಾಗ್ರರ್ ತೋರಿಸಿ ನಟನಿಗೆ ಜೀವಬೆದರಿಕೆ ಹಾಕಿದ್ದರು. ಪೂಜೆ ಮುಗಿಸಿ ಹೊರಟ ವೇಳೆ ಕಾರಿಗೆ ಅಡ್ಡಬಂದ ಕೆಲವರು ಪ್ರಥಮ್‌ನನ್ನ ಬಲವಂತವಾಗಿ ಕರೆದೊಯ್ದು, ನಮ್ ಬಾಸ್ ಬಗ್ಗೆ ಮಾತಾಡ್ತಿಯ ಅಂತ ಹಲ್ಲೆಗೆ ಯತ್ನಿಸಿ ಅವಾಚ್ಯವಾಗಿ ನಿಂದಿಸಿ ಬೆದರಿಸಿದ್ದರು. ಆ ಸ್ಥಳದಲ್ಲಿ ಬುಲೆಟ್ ರಕ್ಷಕ್ ಕೂಡ ಇರುವುದಾಗಿ ಹೇಳಿದ್ದರು. ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡು ಬಂದ ಪ್ರಥಮ್ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಅವರನ್ನ ಭೇಟಿಯಾಗಿ ಘಟನೆ ವಿವರಿಸಿದ್ದರು. ಬಳಿಕ ಎಸ್ಪಿ ಸಂಬಂಧಪಟ್ಟ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದರು.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಎಸ್ಪಿ ಸಿಕೆ ಬಾಬಾ, ನಟ ಪ್ರಥಮ್ ಮೇಲೆ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಆರೋಪ ಕೇಳಿಬಂದಿದೆ. ದೇವಸ್ಥಾನಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಅವರನ್ನ ಈಗಾಗಲೇ ಕರೆದು ಮಾತನಾಡಿದ್ದೀನಿ. ಅವರಿಗೆ ದೂರು ಕೊಡೋಕೆ ಹೇಳಿದ್ದೀನಿ. ಇಲ್ಲಿವರೆಗೂ ಯಾವುದೇ ದೂರು ನೀಡಿಲ್ಲ. ದೂರು ಕೊಟ್ಟ ನಂತರ ತನಿಖೆ ಮಾಡಿ ಕ್ರಮ ಕೈಗೊಳ್ತಿವಿ ಎಂದು ಹೇಳಿದ್ದರು.ಇದನ್ನೂ ಓದಿ: ಗೂಂಡಾಗಳನ್ನ ಸಾಕ್ಬೇಡಿ, ಮನೆಯಲ್ಲಿ ನಾಯಿ ಸಾಕಿ, ಒಳ್ಳೆಯವರ ಸಹವಾಸ ಮಾಡಿ – ದರ್ಶನ್‌ಗೆ ಪ್ರಥಮ್‌ ಸ್ಟ್ರೈಟ್‌ ಹಿಟ್‌

  • ಥಾಯ್ಲೆಂಡ್‌ನಲ್ಲಿ ಮ್ಯಾಂಗೋ ಸ್ಟಿಕ್ಕಿ ರೈಸ್ ಸವಿದ ದರ್ಶನ್ ವಿಜಯಲಕ್ಷ್ಮಿ

    ಥಾಯ್ಲೆಂಡ್‌ನಲ್ಲಿ ಮ್ಯಾಂಗೋ ಸ್ಟಿಕ್ಕಿ ರೈಸ್ ಸವಿದ ದರ್ಶನ್ ವಿಜಯಲಕ್ಷ್ಮಿ

    ಇನ್ನು ಕೆಲವೇ ದಿನಗಳಲ್ಲಿ ದರ್ಶನ್ ಜಾಮೀನು ಆದೇಶ ಸುಪ್ರೀಂ ಕೋರ್ಟ್‌ನಿಂದ ಹೊರಬೀಳಲಿದೆ. ಆದರೆ ದರ್ಶನ್ ಸದ್ಯ ಕುಟುಂಬದ ಜೊತೆ ದರ್ಶನ್ ಥಾಯ್ಲೆಂಡ್‌ನಲ್ಲಿ ರಿಲ್ಯಾಕ್ಸ್ ಆಗಿದ್ದಾರೆ.

    ಇತ್ತ ಸುಪ್ರೀಂ ಕೋರ್ಟ್‌ನಲ್ಲಿ ತೀವ್ರ ವಿಚಾರಣೆ ನಡೆಯುತ್ತಿದ್ದರೆ ಅತ್ತ ದರ್ಶನ್ ಕುಟುಂಬದ ಜೊತೆ ಟೆನ್ಷನ್ ಇಲ್ಲದೆ ಕಾಲ ಕಳೆಯುತ್ತಿದ್ದಾರಾ ಅನ್ನೋ ಪ್ರಶ್ನೆಯನ್ನು ಅವರ ಪತ್ನಿಯ ಸೋಶಿಯಲ್ ಮೀಡಿಯಾ ಪೋಸ್ಟ್ ಹುಟ್ಟುಹಾಕಿದೆ.ಇದನ್ನೂ ಓದಿ: ದರ್ಶನ್‌-ಪವಿತ್ರಾ ಲಿವ್‌ ಇನ್‌ ರಿಲೇಷನ್‌ ಶಿಪ್‌ನಲ್ಲಿದ್ದರು: ಸರ್ಕಾರ ಪರ ವಕೀಲ

    ದರ್ಶನ್ ಪತ್ನಿ ವಿಜಯಲಕ್ಷ್ಮಿ ಥಾಯ್ಲೆಂಡ್‌ನಿಂದ ಮಧ್ಯಾಹ್ನದ ಊಟದ ತಟ್ಟೆಯ ಫೋಟೋವನ್ನು ಇನ್ಸ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಶೇರ್ ಮಾಡಿದ್ದಾರೆ. ಮ್ಯಾಂಗೋ ಸ್ಟಿಕ್ಕಿ ರೈಸ್ ಸವಿದ ಫೋಟೋವನ್ನ ಶೇರ್ ಮಾಡಿದ್ದಾರೆ.

    ದರ್ಶನ್‌ಗೆ ಜಾಮೀನು ರದ್ದಾಗುತ್ತಾ ಅಥವಾ ಮುಂದುವರೆಯುತ್ತಾ ಅನ್ನೋದು 10 ದಿನದೊಳಗೆ ತಿಳಿಯುತ್ತದೆ. ಕೋರ್ಟ್‌ನಲ್ಲಿ ಪ್ರಬಲ ವಾದ ಪ್ರತಿವಾದ ನಡೆಯುತ್ತಿದ್ದರೆ ದರ್ಶನ್ ಮಾತ್ರ ಕುಟುಂಬದ ಜೊತೆ ರಿಲ್ಯಾಕ್ಸ್ ಆಗೇ ಕಾಲ ಕಳೆಯುತ್ತಿರುವ ಚಿತ್ರಣವನ್ನ ಒಂದು ಫೋಟೋ ಬಿಚ್ಚಿಟ್ಟಿದೆ. ನಾಳೆ ಇದೇ ಶುಕ್ರವಾರ ರಾತ್ರಿ ದರ್ಶನ್ ಕುಟುಂಬದ ಜೊತೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.ಇದನ್ನೂ ಓದಿ: ದರ್ಶನ್‌ ಜಾಮೀನು ಭವಿಷ್ಯ | ನಾವು ಹೈಕೋರ್ಟ್ ಮಾಡಿದ ತಪ್ಪು ಮಾಡಲ್ಲ, ತರಾತುರಿಯಲ್ಲಿ ಆದೇಶ ಕೊಡಲ್ಲ – ಸುಪ್ರೀಂ

  • ಏರ್‌ಪೋರ್ಟ್‌ನಲ್ಲಿ ದರ್ಶನ್ ಫೋಟೋ ರಿವೀಲ್

    ಏರ್‌ಪೋರ್ಟ್‌ನಲ್ಲಿ ದರ್ಶನ್ ಫೋಟೋ ರಿವೀಲ್

    ನಟ ದರ್ಶನ್ ಥೈಲ್ಯಾಂಡ್‌ಗೆ ತೆರಳಿದ್ದಾರೆ. ಪುತ್ರ ವಿನೀಶ್ ಕೂಡ ದರ್ಶನ್‌ಗೆ ಜೊತೆಯಾಗಿ ಪ್ರಯಾಣಿಸಿದ್ದಾರೆ. ಡೆವಿಲ್ ಚಿತ್ರದ ನಿರ್ದೇಶಕ ಪ್ರಕಾಶ್ ಜಯರಾಂ ಸೇರಿ ಚಿತ್ರತಂಡ ದರ್ಶನ್ ಜೊತೆಯೇ ಪ್ರಯಾಣ ಬೆಳೆಸಿದ್ದಾರೆ.

    ಮಂಗಳವಾರ ರಾತ್ರಿ ದರ್ಶನ್ ಥೈಲ್ಯಾಂಡ್‌ಗೆ ತೆರಳಿದ್ದು ,ಬ್ಯಾಂಕಾಕ್ ತಲುಪಿದ್ದಾರೆ. ಗುರುವಾರದಿಂದ ಹಾಡಿನ ಚಿತ್ರೀಕರಣ ಪ್ರಾರಂಭವಾಗಿ ಐದು ದಿನ ನಡೆಯುತ್ತೆ. ಕೊಲೆ ಆರೋಪಿಯಾದ್ಮೇಲೆ ಪ್ರಥಮ ಬಾರಿಗೆ ದರ್ಶನ್ ವಿದೇಶ ಪ್ರಯಾಣ ಮಾಡುತ್ತಿದ್ದು , ಹತ್ತು ದಿನ ಥೈಲ್ಯಾಂಡ್‌ನಲ್ಲಿರುವ ಸಾಧ್ಯತೆ ಇದೆ.ಇದನ್ನೂ ಓದಿ: ಏರ್‌ಪೋರ್ಟ್‌ನಲ್ಲಿ ದರ್ಶನ್ ಫೋಟೋ ರಿವೀಲ್

    ಮಂಗಳವಾರ ರಾತ್ರಿ ಬೆಂಗಳೂರು ಇಂಟರ್‌ನ್ಯಾಶನಲ್ ವಿಮಾನ ನಿಲ್ದಾಣದಲ್ಲಿ ದರ್ಶನ್ ಪುತ್ರ ವಿನೀಶ್ ಹಾಗೂ ಡೈರೆಕ್ಟರ್ ಪ್ರಕಾಶ್ ಜೊತೆ ಕುಳಿತಿರುವ ಫೋಟೋ ಲಭ್ಯವಾಗಿದೆ. ಕೊಲೆ ಆರೋಪದಲ್ಲಿ ಬಂಧಿತರಾಗಿದ್ದ ದರ್ಶನ್ ಪಾಸ್‌ಪೋರ್ಟ್‌ನ್ನು ಕೋರ್ಟ್‌ ವಶಪಡಿಸಿಕೊಂಡಿತ್ತು. ಇದೀಗ ಜಾಮೀನು ಪಡೆದುಕೊಂಡಿರುವ ದರ್ಶನ್ ಕೋರ್ಟ್‌ನಿಂದ ಅನುಮತಿ ಪಡದೇ ವಿದೇಶಕ್ಕೆ ತೆರಳುತ್ತಿದ್ದಾರೆ. ಡೆವಿಲ್ ಚಿತ್ರದ ಹಾಡೊಂದರ ಚಿತ್ರೀಕರಣಕ್ಕಾಗಿ ದರ್ಶನ್ ಥೈಲ್ಯಾಂಡ್‌ಗೆ ಹೋಗಿದ್ದು, ಈ ಮೂಲಕ ಡೆವಿಲ್ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯವಾಗುತ್ತಿದೆ.

    ಈ ಹಿಂದೆ ಯುರೋಪ್ ಹಾಗೂ ದುಬೈಗೆ ತೆರಳಲು ದರ್ಶನ್ ಕೋರ್ಟ್‌ನಿಂದ ಅನುಮತಿ ಕೇಳಿದ್ದವರು. ಆದರೆ ಅಲ್ಲಿ ವೀಸಾ ಹಾಗೂ ಇನ್ನಿತರ ತೊಂದರೆ ಉಂಟಾದ ಕಾರಣಕ್ಕೆ ದರ್ಶನ್ ಇದೀಗ ಭಾರತಕ್ಕೆ ವೀಸಾಫ್ರೀ ಇರುವ ಥೈಲ್ಯಾಂಡ್‌ನಲ್ಲಿ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.ಇದನ್ನೂ ಓದಿ: ಹೈಕಮಾಂಡ್ ನಿರ್ಧಾರವನ್ನು ನಾನು, ಡಿಕೆಶಿ ಇಬ್ಬರೂ ಪಾಲಿಸುತ್ತೇವೆ – ಮತ್ತೆ ಸಿಎಂ ಸ್ಪಷ್ಟನೆ

  • ಪಾರಿಜಾತ ಪುಷ್ಪವೊಂದು ತನ್ನ ಪರಿಮಳದೊಂದಿಗೆ ಜೀವನ ನಡೆಸಿ ನಮ್ಮನ್ನಗಲಿ ಹೊರಟಿದೆ – ಕಲಾ ಸರಸ್ವತಿಗೆ ಕಿಚ್ಚನ ನಮನ

    ಪಾರಿಜಾತ ಪುಷ್ಪವೊಂದು ತನ್ನ ಪರಿಮಳದೊಂದಿಗೆ ಜೀವನ ನಡೆಸಿ ನಮ್ಮನ್ನಗಲಿ ಹೊರಟಿದೆ – ಕಲಾ ಸರಸ್ವತಿಗೆ ಕಿಚ್ಚನ ನಮನ

    – ಸರೋಜಾದೇವಿ ನಿಧನಕ್ಕೆ ಸಂತಾಪ ಸೂಚಿಸಿದ ನಟ ದರ್ಶನ್

    ಭಿನಯ ಸರಸ್ವತಿ ಎಂದೇ ಖ್ಯಾತಿಯಾಗಿರುವ ಬಿ.ಸರೋಜಾದೇವಿ ನಿಧನಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಹಾಗೂ ನಟ ದರ್ಶನ್ (Actor Darshan) ಸಂತಾಪ ಸೂಚಿಸಿದ್ದಾರೆ.

    ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಅಭಿನಯ ಸರಸ್ವತಿ ಎಂದೇ ಹೆಸರಾದ ಬಹುಭಾಷಾ ತಾರೆ ಸರೋಜಾದೇವಿ (B Saroja Devi) ಅವರು ತಮ್ಮ ಮೋಹಕತೆಯೊಂದಿಗೆ ಹೊರಟಿದ್ದಾರೆ. ಹಲವು ಭಾಷೆಗಳ ಪ್ರೌಡಿಮೆ ಹೊಂದಿದ್ದ ಅವರು ಅನೇಕ ದಿಗ್ಗಜರೊಂದಿಗೆ ನಟಿಸಿ ತಾನೇ ಪಾತ್ರವಾಗಿ ಬೆಳ್ಳಿತೆರೆಯಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಪಾರಿಜಾತ ಪುಷ್ಪವೊಂದು ತನ್ನ ಪರಿಮಳದೊಂದಿಗೆ ತುಂಬು ಜೀವನ ನೆಡೆಸಿ ನಮ್ಮನ್ನು ಅಗಲಿ ಹೊರಟಿದೆ. ನಮ್ಮ ಕಲಾ ಸರಸ್ವತಿಗೆ ವಿನಯಪೂರ್ವಕ ನಮನಗಳನ್ನು ತಿಳಿಸಿದ್ದಾರೆ.ಇದನ್ನೂ ಓದಿ: ಬಿ.ಸರೋಜಾದೇವಿ ನಿಧನಕ್ಕೆ ನಿಖಿಲ್ ಕುಮಾರಸ್ವಾಮಿ, ಆರ್.ಅಶೋಕ್ ಸಂತಾಪ

    ಇನ್ನೂ ಬಿ.ಸರೋಜಾದೇವಿ ನಿಧನಕ್ಕೆ ನಟ ದರ್ಶನ್ ಸಂತಾಪ ಸೂಚಿಸಿದ್ದಾರೆ. ಹಿರಿಯ ನಟಿ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಪದ್ಮಭೂಷಣ ಬಿ.ಸರೋಜಾದೇವಿ ಅವರು ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ. ದೇವರು ಅವರ ಕುಟುಂಬದವರಿಗೆ, ಅವರ ಅಪಾರ ಅಭಿಮಾನಿಗಳಿಗೆ ಹಿರಿಯ ಕಲಾವಿದೆಯ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

    1938ರ ಜ.7ರಂದು ಜನಿಸಿದ ಸರೋಜಾದೇವಿ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ನಿಧನರಾದರು.

    ಸುಮಾರು 6 ದಶಕಗಳ ಕಾಲ ಚಿತ್ರರಂಗದ ಸೇವೆ ಮಾಡಿರುವ ಇವರು 5 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದ ಸಾಧನೆಗೆ ಇವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ನೀಡಿ ಪುರಸ್ಕರಿಸಿತ್ತು. ತಮ್ಮ 17ನೇ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗದ ಭೀಷ್ಮ ಹೊನ್ನಪ್ಪ ಭಾಗವತರ್ ಅವರ `ಮಹಾಕವಿ ಕಾಳಿದಾಸ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.ಇದನ್ನೂ ಓದಿ: ಸರೋಜಾ ದೇವಿ ಅಗಲಿಕೆಗೆ ಕಂಬನಿ ಮಿಡಿದ ಸ್ಯಾಂಡಲ್‍ವುಡ್ ನಟ, ನಟಿಯರು

  • ದರ್ಶನ್ ಪತ್ನಿಯ ಹೊಸ ಲುಕ್ ವೈರಲ್

    ದರ್ಶನ್ ಪತ್ನಿಯ ಹೊಸ ಲುಕ್ ವೈರಲ್

    ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijaylakshmi Darshan) ಇನ್ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಕಡು ನೀಲಿ ಬಣ್ಣದ ಉಡುಗೆಯಲ್ಲಿ ವಿಜಯಲಕ್ಷ್ಮಿ ಮಿಂಚಿದ್ದಾರೆ. ದರ್ಶನ್ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ವಿಜಯಲಕ್ಷ್ಮಿಯವರನ್ನ ಭೂಮಿ ತೂಕದ ಹೆಣ್ಣು ಎಂದು ವರ್ಣಿಸುತ್ತಿದ್ದಾರೆ ಫ್ಯಾನ್ಸ್.ಇದನ್ನೂ ಓದಿ: ಸ್ಯಾಂಡಲ್‌ವುಡ್‌ಗೆ ದಕ್ಷಿಣದ ಹೆಸರಾಂತ ನಟ ಶ್ರೀಮನ್ ಎಂಟ್ರಿ

    ಇನ್ಸ್ಟಾಗ್ರಾಂನಲ್ಲಿ ಹೊಸ ಫೋಟೋ ಶೇರ್ ಮಾಡಿರುವ ವಿಜಯಲಕ್ಷ್ಮಿ ಮಗನೊಟ್ಟಿಗೆ ಕೂಡ ಪೋಸ್ ಕೊಟ್ಟಿದ್ದಾರೆ. ಪುತ್ರ ವಿನೀಶ್ ಕೈಯಲ್ಲಿ ಸಾಕುನಾಯಿಯನ್ನು ಎತ್ತಿಕೊಂಡಿದ್ದು, ನಾಯಿಗೆ ತೊಡಿಸಿರುವ ಉಡುಗೆ ಮೇಲೆ `ಬಾಸ್’ ಎಂದು ಹೆಸರು ಇರುವುದು ವಿಶೇಷ. ಈ ಮೂಲಕ ದರ್ಶನ್‌ರಂತೆ ಮಗ ವಿನೀಶ್ ಕೂಡ ಪ್ರಾಣಿಪ್ರೇಮಿ ಎನ್ನುವುದು ಗೊತ್ತಾಗಿದೆ. ಸದ್ಯ ಫೋಟೋಸ್ ಸಕತ್ ವೈರಲ್ ಆಗುತ್ತಿದೆ.

    ಜೈಲು ಸೇರಿದ್ದ ದರ್ಶನ್‌ರನ್ನು (Actor Darshan) ಜಾಮೀನು ಕೊಡಿಸಿ ಬಿಡಿಸಿಕೊಂಡು ಬರುವಲ್ಲಿ ವಿಜಯಲಕ್ಷ್ಮಿಯವರ ಪಾತ್ರ ಮಹತ್ವದ್ದು. ಹೀಗಾಗಿ ದರ್ಶನ್ ಅಭಿಮಾನಿಗಳಂತೂ ವಿಜಯಲಕ್ಷ್ಮಿಯವರನ್ನು ದೇವತೆ ಎಂದು ಹೊಗಳುತ್ತಾರೆ. ಅದೇ ರೀತಿಯಾಗಿ ವಿಜಯಲಕ್ಷ್ಮಿಯವರ ಹೊಸ ಪೋಸ್ಟ್‌ಗೆ ಹೊಗಳಿಕೆಯ ಕಾಮೆಂಟ್ಸ್ ಬರುತ್ತಿವೆ. ಅದರಲ್ಲೊಂದು ಕಾಮೆಂಟ್‌ನಲ್ಲಿ `ಭೂಮಿ ತೂಕದ ಹೆಣ್ಣು’ ಎಂದು ಬಿರುದು ನೀಡಲಾಗಿದೆ. ಒಟ್ನಲ್ಲಿ ಇನ್ಸ್ಟಾಗ್ರಾಂನಲ್ಲಿ ಆಕ್ವೀವ್ ಆಗಿರುವ ವಿಜಯಲಕ್ಷ್ಮಿ ಆಗಾಗ ಹೊಸ ಫೋಟೋಶೂಟ್‌ಗಳನ್ನ ಹಂಚಿಕೊಳ್ಳುತ್ತಲೇ ಇರುತ್ತಾರೆ.ಇದನ್ನೂ ಓದಿ: ರಾಷ್ಟ್ರಪತಿ ಭೇಟಿ ವೇಳೆ ಸಿದ್ದರಾಮಯ್ಯ, ಆಮೀರ್ ಖಾನ್ ಮುಖಾಮುಖಿ

  • ವರ್ಷಕ್ಕೆ 30 ದಿನ ಮಾತ್ರ ತೆರೆಯುವ ಕೊಟ್ಟಿಯೂರು ಶಿವ ದೇಗುಲಕ್ಕೆ ನಟ ದರ್ಶನ್ ಭೇಟಿ

    ವರ್ಷಕ್ಕೆ 30 ದಿನ ಮಾತ್ರ ತೆರೆಯುವ ಕೊಟ್ಟಿಯೂರು ಶಿವ ದೇಗುಲಕ್ಕೆ ನಟ ದರ್ಶನ್ ಭೇಟಿ

    ಡೇವಿಲ್ ಚಿತ್ರೀಕರಣ ಮುಕ್ತಾಯದ ಬಳಿಕ ದೇವರ ಅನುಗ್ರಹ ಪಡೆಯಲು ನಟ ದರ್ಶನ್ (Actor Darshan) ಟೆಂಪನ್ ರನ್ ಶುರು ಮಾಡಿದ್ದಾರೆ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಕೊಟ್ಟಿಯೂರು ದೇವಸ್ಥಾನಕ್ಕೆ ನಟ ದರ್ಶನ್ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ.

    ಕೇರಳದ (Kerala) ಕೊಣ್ಣುರು (Konnur) ಸಮೀಪದಲ್ಲಿರುವ ಕೊಟ್ಟಿಯೂರು ಶಿವ ದೇವಸ್ಥಾನಕ್ಕೆ ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಕೂಡ ಸಾಥ್ ನೀಡಿದ್ದಾರೆ. ಈ ವೇಳೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.ಇದನ್ನೂ ಓದಿ: KRS ಡ್ಯಾಂ ಭರ್ತಿಗೆ 11 ಅಡಿಯಷ್ಟೇ ಬಾಕಿ

     

    ಕೇರಳದ ಕೊಟ್ಟಿಯೂರು ಶಿವ ದೇವಾಲಯವು ಭಾರತದ ಅತ್ಯಂತ ಪ್ರಾಚೀನ ಮತ್ತು ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರತಿವರ್ಷವೂ ವೈಶಾಖ ಮಾಹೋತ್ಸವದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಈ ದೇವಸ್ಥಾನವು ದಕ್ಷಿಣ ಕಾಶಿ ಎಂದು ಕರೆಯಲ್ಪಡುವುದರಿಂದ ಅದರ ಧಾರ್ಮಿಕ ಮಹತ್ವವು ಅಪಾರವಾಗಿದೆ.

    ಕೊಟ್ಟಿಯೂರಿನಲ್ಲಿ ಎರಡು ದೇವಸ್ಥಾನಗಳಿವೆ. ಇಕ್ಕರೆ ಕೊಟ್ಟಿಯೂರು ಮತ್ತು ಅಕ್ಕರೆ ಕೊಟ್ಟಿಯೂರು. ಅಕ್ಕರೆ ಕೊಟ್ಟಿಯೂರು ದೇವಾಲಯವು ವೈಶಾಖ ಮಹೋತ್ಸವದ ಸಮಯದಲ್ಲಿ ಮಾತ್ರ ತೆರೆಯಲ್ಪಡುವ ತಾತ್ಕಾಲಿಕ ಮಂದಿರವಾಗಿದೆ. ಆದರೆ ಇಕ್ಕರೆ ಕೊಟ್ಟಿಯೂರು ದೇವಾಲಯವು ನಿಯಮಿತ ಪೂಜಾ ವಿಧಿಗಳನ್ನು ನಡೆಸುವ ಶಾಶ್ವತ ಮಂದಿರವಾಗಿದೆ. ಇಲ್ಲಿನ ವೈಶಾಖ ಮಹೋತ್ಸವ ಸುಮಾರು 28 ದಿನಗಳವರೆಗೆ ನಡೆಯುತ್ತದೆ. ಈ ವರ್ಷ ಜೂ.8ರಿಂದ ಪ್ರಾರಂಭವಾಗಿ ಜು.4ರವರೆಗೆ ದೇವಸ್ಥಾನ ತೆರೆದಿರುತ್ತದೆ. ಆದರೆ ಜೂ.30ರ ನಂತರ ಮಹಿಳಾ ಭಕ್ತಾದಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಜೊತೆಗೆ ಇಲ್ಲಿ ಬರುವ ಭಕ್ತಾದಿಗಳಿಗೆ ತಂಗಲು ವಸತಿ ಸೌಲಭ್ಯವು ಇರುತ್ತದೆ. ದೇವಸ್ಥಾನವು ಬೆಳಿಗ್ಗೆ 5ರಿಂದ ರಾತ್ರಿ 8:30ರವರೆಗೆ ಮಾತ್ರ ತೆರೆದಿರುತ್ತದೆ.

    ಇಲ್ಲಿ ನಡೆಯುವ ಜಾತ್ರೆ “ಕೊಟ್ಟಿಯೂರು ಉತ್ಸವ” ಎಂಬ ಹೆಸರಿನಿಂದ ಪ್ರಸಿದ್ಧವಾಗಿದ್ದು, ಇದು ದಕ್ಷಿಣ ಭಾರತದ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯುವ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ. ಪಾರ್ವತಿಯ ತಪಸ್ಸು, ದಕ್ಷಿಣ ಯಾಗ ಮತ್ತು ಶೈವ ಪರಂಪರೆಯ ಕಥೆಗಳ ಸ್ಮರಣಾರ್ಥವಾಗಿ ಈ ಉತ್ಸವ ಆಚರಿಸಲಾಗುತ್ತದೆ.

    ಕೆಲ ತಿಂಗಳ ಹಿಂದೆ ಕಣ್ಣೂರು ಬಳಿಯ ಶ್ರೀಕ್ಷೇತ್ರ ಮಡಾಯಿ ಕಾವು ಶ್ರೀಭಗವತೀ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಕುಟುಂಬ ಸಮೇತರಾಗಿ ಶತ್ರು ಸಂಹಾರ ಯಾಗ ಮಾಡಿಸಿ, ಪೂಜೆ ಸಲ್ಲಿಸಿದ್ದರು.ಇದನ್ನೂ ಓದಿ: ಬೆಂಗಳೂರಿನ 10 ಮೆಟ್ರೋ ಸ್ಟೇಷನ್‌ನಲ್ಲಿ ಅಮುಲ್‌ಗೆ ಪ್ರಮೋಷನ್ – ಕನ್ನಡಿಗರು ಕೆಂಡ

  • ಮಗನ ಸಾವಿನ ನೋವು ನಿರಂತರವಾಗಿ ಕಾಡ್ತಿದೆ – ಮೃತ ರೇಣುಕಾಸ್ವಾಮಿ ತಂದೆ

    ಮಗನ ಸಾವಿನ ನೋವು ನಿರಂತರವಾಗಿ ಕಾಡ್ತಿದೆ – ಮೃತ ರೇಣುಕಾಸ್ವಾಮಿ ತಂದೆ

    – ಡಿ-ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆಯಾಗಿ ಇಂದಿಗೆ 1 ವರ್ಷ

    ಚಿತ್ರದುರ್ಗ: ಪುತ್ರಶೋಕಂ ನಿರಂತರಂ ಎಂಬಂತೆ ಮಗನ ಸಾವಿನ ನೋವು ನಿರಂತರವಾಗಿ ಕಾಡುತ್ತಿದೆ ಎಂದು ಮೃತ ರೇಣುಕಾಸ್ವಾಮಿ (Renukaswamy Case) ತಂದೆ ಕಾಶಿನಾಥಯ್ಯ ನೋವು ತೋಡಿಕೊಂಡಿದ್ದಾರೆ.

    ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇ 29ರಂದೇ ಕಾರ್ಯ ಮಾಡಿದ್ದೇವೆ. ಇಂದಿಗೆ ರೇಣುಕಾಸ್ವಾಮಿ ನಮ್ಮನ್ನಗಲಿ ಒಂದು ವರ್ಷವಾಗಿದೆ. ಹೀಗಾಗಿ ನಾನು, ನನ್ನ ಹೆಂಡತಿ, ಸೊಸೆ ಹಾಗೂ ಮೊಮ್ಮಗ ಎಲ್ಲರೂ ರೇಣುಕಾಸ್ವಾಮಿ ಫೋಟೊಗೆ ಸಾಂಕೇತಿಕವಾಗಿ ಪೂಜೆ ಸಲ್ಲಿಸಿದ್ದೇವೆ. ಪುತ್ರಶೋಕಂ ನಿರಂತರಂ ಎಂಬಂತೆ ಮಗನ ನೋವು ಕಾಡುತ್ತಲೇ ಇದೆ ಎಂದರು.ಇದನ್ನೂ ಓದಿ: ಪೊಲೀಸರದ್ದೇ ತಪ್ಪು, ಸರ್ಕಾರಕ್ಕೆ ಯಾಕೆ ಮುಜುಗರ ಆಗ್ಬೇಕು: ಸಿದ್ದರಾಮಯ್ಯ ಪ್ರಶ್ನೆ

    ಇದೇ ವೇಳೆ ನಟ ದರ್ಶನ್ ಅವರಿಗೆ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡಿರುವ ಕುರಿತು ಮಾತನಾಡಿದ ಅವರು, ಅದೆಲ್ಲ ಕಾನೂನು ವಿಚಾರ. ಕಾನೂನು ಒಂದು ಕ್ರಮಕೈಗೊಳ್ಳುತ್ತದೆ. ಮಗನ ಕೊಲೆ ಮಾಡಿದವರಿಗೆ ತಕ್ಕ ಶಿಕ್ಷೆ ಆಗಬೇಕು. ಸರ್ಕಾರ, ಕೋರ್ಟ್ ಮೇಲೆ ನಂಬಿಕೆ ಇದ್ದು, ಕ್ರಮ ಆಗುತ್ತದೆ ಎಂದುಕೊಂಡಿದ್ದೇವೆ. ಈವರೆಗೂ ನಟ ದರ್ಶನ್ ನಮ್ಮನ್ನು ಸಂಪರ್ಕಿಸಿಲ್ಲ. ನಾವು ಕೂಡ ಯಾವುದೇ ರೀತಿಯ ರಾಜಿ, ಪಂಚಾಯಿತಿಗೆ ಯತ್ನಿಸಿಲ್ಲ. ಒಂದು ವೇಳೆ ಆ ಸಂದರ್ಭ ಬಂದರೆ ನಮ್ಮ ಸಮಾಜದ ಮುಖಂಡರು ನಿರ್ಧಾರಿಸುತ್ತಾರೆ. ಆದರೆ ನನ್ನ ಮಗನ ಕೊಲೆ ಮಾಡಿದವರಿಗೆ ತಕ್ಕ ಶಿಕ್ಷೆ ಆಗಬೇಕು. ಸೊಸೆ, ಮೊಮ್ಮಗನ ಜೀವನಕ್ಕೆ ಸರ್ಕಾರ ಅನುಕೂಲ ಮಾಡಿಕೊಡಲಿ ಎಂದು ಮನವಿ ಮಾಡಿಕೊಂಡಿದ್ದಾರೆ

    ಇನ್ನೂ ಡಿ-ಗ್ಯಾಂಗ್‌ನ (D-Gang) ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದು, ನಟ ದರ್ಶನ್ (Actor Darshan) ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ.ಇದನ್ನೂ ಓದಿ: ಪರಿಷತ್‌ಗೆ ಶಿಫಾರಸ್ಸಾಗಿದ್ದ 4 ಹೆಸರುಗಳಿಗೆ ಕೊನೆ ಕ್ಷಣದಲ್ಲಿ ಹೈಕಮಾಂಡ್‌ ಬ್ರೇಕ್‌!

  • ರಾಜಸ್ಥಾನದಲ್ಲಿ `ಡೆವಿಲ್’ ಶೂಟಿಂಗ್ ಮುಗಿಸಿ ಪತ್ನಿ, ಪುತ್ರನೊಂದಿಗೆ ದರ್ಶನ್ ವಾಪಸ್

    ರಾಜಸ್ಥಾನದಲ್ಲಿ `ಡೆವಿಲ್’ ಶೂಟಿಂಗ್ ಮುಗಿಸಿ ಪತ್ನಿ, ಪುತ್ರನೊಂದಿಗೆ ದರ್ಶನ್ ವಾಪಸ್

    ಳೆದ 10 ದಿನಗಳಿಂದ ರಾಜಸ್ಥಾನದಲ್ಲಿ (Rajasthan) ನಡೆಯುತ್ತಿದ್ದ ಡೆವಿಲ್ (Devil) ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದ ನಟ ದರ್ಶನ್ (Actor Darshan) ಇಂದು ಬೆಂಗಳೂರಿಗೆ (Bengaluru) ಮರಳಿದ್ದಾರೆ.

    ರಾಜಸ್ಥಾನದ ಉದಯಪುರದಲ್ಲಿ ಡೆವಿಲ್ ಶೂಟಿಂಗ್ ಭರ್ಜರಿಯಾಗಿ ನಡೆದಿದ್ದು, ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ದರ್ಶನ್‌ಗೆ ಸಾಥ್ ನೀಡಿದ್ದರು. ಚಿತ್ರೀಕರಣ ಮುಗಿಸಿ ಇಂದು ಮಧ್ಯಾಹ್ನ ನಟ ದರ್ಶನ್ ತಮ್ಮ ಪತ್ನಿ ಹಾಗೂ ಪುತ್ರನೊಂದಿಗೆ ಬೆಂಗಳೂರಿಗೆ ವಾಪಸ್ಸಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.ಇದನ್ನೂ ಓದಿ: EXCLUSIVE: ಆಶ್ರಯ ಇಲ್ಲದೆ ವೃದ್ಧಾಶ್ರಮ ಸೇರಿದ ಹಿರಿಯ ನಟಿ ಶೈಲಶ್ರೀ – ನಟಿಗೆ ಧನ ಸಹಾಯ ಮಾಡಿದ ದರ್ಶನ್

    ಇತ್ತೀಚಿಗಷ್ಟೇ ವಿಜಯಲಕ್ಷ್ಮಿ (Vijayalakshmi Darshan) ಅವರು ರಾಜಸ್ಥಾನದ ಕೆಲವು ಸ್ಥಳಗಳಿಗೆ ಭೇಟಿ ನೀಡಿದ ಫೋಟೋಗಳನ್ನು ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು.

    ಮಿಲನಾ ಪ್ರಕಾಶ್ ನಿರ್ದೇಶನದಲ್ಲಿ ಡೆವಿಲ್ ಚಿತ್ರ ಹೊರಬರುತ್ತಿದ್ದು, ದರ್ಶನ್ ಜೊತೆ ರಚನಾ ರೈ, ಶರ್ಮಿಳಾ ಮಾಂಡ್ರೆ, ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಸೇರಿದಂತೆ ಇನ್ನಿತರರು ತೆರೆಹಂಚಿಕೊಂಡಿದ್ದಾರೆ.ಇದನ್ನೂ ಓದಿ: ‘ಡೆವಿಲ್‌’ ಶೂಟಿಂಗ್‌ಗಾಗಿ ರಾಜಸ್ಥಾನದಲ್ಲಿ ಪತಿ ಜೊತೆ ವಿಜಯಲಕ್ಷ್ಮಿ

     

  • ರೇಣುಕಾಸ್ವಾಮಿ ಕೇಸ್: ದರ್ಶನ್ ಜಾಮೀನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಏ.22ಕ್ಕೆ ಮುಂದೂಡಿಕೆ

    ರೇಣುಕಾಸ್ವಾಮಿ ಕೇಸ್: ದರ್ಶನ್ ಜಾಮೀನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಏ.22ಕ್ಕೆ ಮುಂದೂಡಿಕೆ

    ನವದೆಹಲಿ: ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ನಟ ದರ್ಶನ್ ಸೇರಿ 7 ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಏ.22ಕ್ಕೆ ನಡೆಯಲಿದೆ.

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ ಏಳು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಪೊಲೀಸರು (Bengaluru Police) ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇಂದು ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದಿದ್ದು, ಹೆಚ್ಚುವರಿ ಚಾರ್ಜ್ಶೀಟ್ ಸೇರಿದಂತೆ ತಾಂತ್ರಿಕ ದಾಖಲೆಗಳನ್ನು ಸಲ್ಲಿಸುವಂತೆ ತಿಳಿಸಿತ್ತು. ಬಳಿಕ ನ್ಯಾ. ಜೆ.ಬಿ ಪಾರ್ದಿವಾಲಾ ನೇತೃತ್ವದ ದ್ವಿ ಸದಸ್ಯ ಪೀಠದ ಮುಂದೆ ಪ್ರಸ್ತಾಪಿಸಲು ನಿರ್ಧರಿಸಿತ್ತು.ಇದನ್ನೂ ಓದಿ:ನಂಜುಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ದರ್ಶನ್ ತಾಯಿ

    ದರ್ಶನ ಪರ ವಕೀಲರು ಕೌಂಟರ್ ಅಫಿಡವಿಟ್ ಸಲ್ಲಿಕೆಗೆ ಸಮಯವಕಾಶ ಕೇಳಿದ್ದು, ಸಾಕಷ್ಟು ಫೈಲ್‌ಗಳನ್ನು ತರ್ಜುಮೆ ಮಾಡಬೇಕಿದೆ. ಜೊತೆಗೆ ಎಲ್ಲ ಆರೋಪಗಳಿಗೆ ಉತ್ತರ ಸಲ್ಲಿಸಬೇಕಿದೆ. ಅದಕ್ಕಾಗಿ ಎರಡು ವಾರಗಳ ಕಾಲಾವಕಾಶ ಕೇಳಿದ್ದರು. ಹೀಗಾಗಿ ಏ.22 ರಂದು ವಿಚಾರಣೆ ನಡೆಸುವುದಾಗಿ ಪೀಠ ತಿಳಿಸಿದೆ.

    ಇದಕ್ಕೂ ಮುನ್ನ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಮಾ.18ಕ್ಕೆ ನಡೆಯಬೇಕಿತ್ತು. ವಿಚಾರಣೆಗೆ ಪಟ್ಟಿಯಾಗದ ಹಿನ್ನೆಲೆ ದರ್ಶನ್ ಪ್ರಕರಣದಲ್ಲಿನ ರಾಜ್ಯದ ವಿಶೇಷ ವಕೀಲ ಅನಿಲ್ ನಿಶಾನಿ ಅರ್ಜಿ ವಿಚಾರಣೆ ನಡೆಸುವಂತೆ ಪ್ರಸ್ತಾಪಿಸಿದ್ದರು. ಇದಕ್ಕೆ ಉತ್ತರಿಸಿದ ಕೋರ್ಟ್ ಏ.2 ರಂದು ವಿಚಾರಣೆ ನಡೆಸಲಾಗುವುದು ಎಂದು ಹೇಳಿತ್ತು.

    ನಟ ದರ್ಶನ್ 131 ದಿನಗಳ ಜೈಲುವಾಸದ ನಂತರ ವೈದ್ಯಕೀಯ ಕಾರಣಗಳನ್ನು ಉಲ್ಲೇಖಿಸಿ ಅ.30 ರಂದು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ನಂತರ ಹೈಕೋರ್ಟ್ ಡಿ.13 ರಂದು ದರ್ಶನ್ ಮತ್ತು ಪ್ರಮುಖ ಆರೋಪಿ ಪವಿತ್ರ ಗೌಡ ಸೇರಿದಂತೆ ಇತರ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು.ಇದನ್ನೂ ಓದಿ:ರೇಣುಕಾಸ್ವಾಮಿ ಹತ್ಯೆ ಕೇಸ್ – ಸುಪ್ರೀಂನಲ್ಲಿ ನಾಳೆ ದರ್ಶನ್ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ