ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) ವಿರುದ್ಧ ಅಸಭ್ಯವಾಗಿ ಕಾಮೆಂಟ್ ಮಾಡಿದ್ದ ಐದು ಸೋಷಿಯಲ್ ಮೀಡಿಯಾ ಪೇಜ್‌ಗಳ ವಿರುದ್ಧ (ಯೂಟ್ಯೂಬ್‌ನಲ್ಲಿ ಪ್ರಸಾರವಾಗಿದ್ದ ಕಾರ್ಯಕ್ರಮಕ್ಕೆ ಎಕ್ಸ್ ಪೇಜ್‌ಗಳಲ್ಲಿ ಕೆಟ್ಟದಾಗಿ ಕಾಮೆಂಟ್ಸ್ ಮಾಡಿದವರ ವಿರುದ್ಧ) ಎಫ್‌ಐಆರ್ (FIR) ದಾಖಲಾಗಿದೆ.
ವಿಜಯಲಕ್ಷ್ಮಿ ಬಗ್ಗೆ ಯೂಟ್ಯೂಬ್ ಚಾನೆಲ್‌ವೊಂದು ಕಾರ್ಯಕ್ರಮ ಮಾಡಿತ್ತು. ಈ ಕಾರ್ಯಕ್ರಮದ ವಿಡಿಯೋಗೆ ಕೆಲವರು ವಿಜಯಲಕ್ಷ್ಮಿ ಬಗ್ಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದರು. ಈ ಸಂಬಂಧ ವ್ಯಕ್ತಿಯೊಬ್ಬರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.ಇದನ್ನೂ ಓದಿ: ಚೌಕಿದಾರ್ ಸಿನಿಮಾದ `ಓ ಮೈ ಬ್ರೋ’ ಹಾಡಿಗೆ ಭರ್ಜರಿ ರೆಸ್ಪಾನ್ಸ್
ದೂರಿನ ಆಧಾರದ ಮೇಲೆ ಮಹಿಳಾ ಆಯೋಗವು ಪೊಲೀಸ್ ಕಮೀಷನರ್‌ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು. ದೂರು ಪರಿಶೀಲನೆ ನಡೆಸಿದ ಸಿಕೆ ಅಚ್ಚುಕಟ್ಟು ಪೊಲೀಸರು BNS ಸೆಕ್ಷನ್ 75, 79 ಹಾಗೂ ಐಟಿ ಆ್ಯಕ್ಟ್ 67, 66 ಅಡಿ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಸದ್ಯ ಐದು ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ.ಇದನ್ನೂ ಓದಿ: ಕಿರುತೆರೆಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಹಾತ್ಮೆ
ಎಲ್ಲವೂ ಸರಿಯಾಗಿದಿದ್ದಿದ್ರೆ ನಟ ದರ್ಶನ್ ಇಂದು ಗೌರಿ ಗಣೇಶ ಹಬ್ಬವನ್ನು ಮನೆಯಲ್ಲಿ ಆಚರಿಸುತ್ತಿದ್ರು. ಆದರೆ ಇದೀಗ ಜೈಲಲ್ಲಿ ಆಚರಿಸಿಬೇಕಾಗಿದೆ. ಸಾಮಾನ್ಯವಾಗಿ ನಟ ದರ್ಶನ್ ಹಬ್ಬಗಳಲ್ಲಿ ಶುಭಾಶಯ ಕೋರಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಪದ್ಧತಿ ಪಾಲಿಸಿಕೊಂಡು ಬಂದಿದ್ದರು. ಕಳೆದ ವರ್ಷವೂ ದರ್ಶನ್ ಪಾಲಿನ ಗೌರಿ ಗಣೇಶ ಹಬ್ಬ ಜೈಲಲ್ಲೇ ನಡೀತು, ಈ ವರ್ಷವೂ ಜೈಲೇ ಕಂಟಿನ್ಯೂ ಆಗಿದೆ. ಇಂಥಹ ವಿಪರ್ಯಾಸದಲ್ಲೂ ವಿಜಯಲಕ್ಷ್ಮಿ ಪತಿ ಜೊತೆ ಫೋಟೋ ಪೋಸ್ಟ್ ಮಾಡಿ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯ ಕೋರಿದ್ದಾರೆ.
ಫಾರ್ಮ್ಹೌಸ್‌ನಲ್ಲಿ ಪೂಜಾ ಸಮಯವೊಂದರಲ್ಲಿ ತೆಗೆದಿರುವ ಫೋಟೋವನ್ನ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪೋಸ್ಟ್ ಮಾಡಿದ್ದಾರೆ. ಬಹುಶಃ ದರ್ಶನ್ ಹೊರಗಡೆ ಇದ್ದಿದ್ರೆ ಸಂಭ್ರಮದಿಂದ ಈ ಬಾರಿಯಾದರೂ ಗೌರಿ ಗಣೇಶ ಹಬ್ಬವನ್ನ ಆಚರಿಸುತ್ತಿದ್ದರೋ ಏನೋ, ಆದರೆ ಈ ಬಾರಿಯೂ ಪರಪ್ಪನ ಅಗ್ರಹಾರದಲ್ಲೇ ಗಣೇಶ ಪ್ರಸಾದ ಸವಿಯಬೇಕಾದ ಪರಿಸ್ಥಿತಿ ಬಂದಿದೆ.
ಒಟ್ನಲ್ಲಿ ಎಲ್ಲಾ ದುಗುಡ ದುಮ್ಮಾನದ ನಡುವೆಯೂ ವಿಜಯಲಕ್ಷ್ಮಿ ಇನ್ಸ್‌ಸ್ಟಾಗ್ರಾಂನಲ್ಲಿ ದರ್ಶನ್ ಫೋಟೋ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ. ಟೀಕೆ ಟಿಪ್ಪಣಿಗೆ ಅವಕಾಶ ನೀಡಲೇಬಾರದು ಎಂದು ತೀರ್ಮಾನಿಸಿ ಕಾಮೆಂಟ್ಸ್ ಸೆಕ್ಷನ್‌ನ್ನು ಆಫ್ ಮಾಡಿದ್ದಾರೆ ವಿಜಯಲಕ್ಷ್ಮಿ ದರ್ಶನ್.
ಹೌದು, ಸುಪ್ರೀಂ ಆದೇಶದ ಬೆನ್ನಲ್ಲೇ ಕಟ್ಟೆಚ್ಚರ ವಹಿಸಲಾಗಿದ್ದು, ದರ್ಶನ್ ಹಾಗೂ ಗ್ಯಾಂಗ್‌ಗೆ ಯಾವುದೇ ವಿಶೇಷ ಸವಲತ್ತುಗಳು ಸಿಗುತ್ತಿಲ್ಲ. ಕಳೆದ ಬಾರಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದ ವೇಳೆ ನಟ ದರ್ಶನ್ ನಟೋರಿಯಸ್ ವಿಚಾರಣಾಧೀನ ಕೈದಿಗಳ ಜೊತೆಗೆ ಬಿಂದಾಸ್ ಆಗಿ ಕಾಲ ಕಳೆದಿದ್ದರು. ಅದರ ಫೋಟೋ ಕೂಡ ವೈರಲ್ ಆಗಿತ್ತು. ಅದಾದ ಬಳಿಕ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ, ಉಳಿದವರನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಿ ಕಠಿಣ ಕ್ರಮ ಕೈಗೊಂಡಿದ್ದರು.
ಈ ಬಾರಿ ಆ ರೀತಿಯ ಯಾವುದೇ ರೀತಿಯ ಸವಲತ್ತುಗಳು ಸಿಗದಂತೆ ಎಚ್ಚರಿಕೆ ವಹಿಸಿದ್ದಾರೆ. ದರ್ಶನ್ ಇರುವ ಸೆಲ್ ಮುಂದೆ ಕಾರಿಡಾರ್ ಇದ್ದು, ಅಲ್ಲಿ ವಾಕಿಂಗ್ ಮಾಡೋಕೆ ಅವಕಾಶವಿದೆ. ಆದರೂ ಕೂಡ ದರ್ಶನ್ ಮಾತ್ರ ಸೆಲ್‌ನಲ್ಲೇ ವಾಕ್ ಮಾಡುತ್ತಿದ್ದಾರೆ. ಸಿಬ್ಬಂದಿ ನೀಡಿರುವ ತೆಳುವಾದ ಬೆಡ್ ಮೇಲೆಯೇ ನಿದ್ದೆ ಮಾಡುತ್ತಿದ್ದಾರೆ. ಸಹಚರರೊಂದಿಗೆ ಮಾತನಾಡದೇ ದಿನಪತ್ರಿಕೆ, ಓದುತ್ತಾ ಕಾಲಕಳೆಯುತ್ತಿದ್ದಾರೆ ಎಂದು ಜೈಲು ಮೂಲಗಳಿಂದ ತಿಳಿದು ಬಂದಿದೆ.ಇದನ್ನೂ ಓದಿ: ನೇಮಕಾತಿ ಪರೀಕ್ಷೆಗಳ ಏಕರೂಪ ಶುಲ್ಕ; ಪ್ರಾಥಮಿಕ ಹಂತಕ್ಕೆ 100 ರೂ., ಮುಖ್ಯ ಪರೀಕ್ಷೆ ಉಚಿತ
ಸುಪ್ರೀಂನಿಂದ ಜಾಮೀನು ರದ್ದು ಬೆನ್ನಲ್ಲೇ ನಟ ದರ್ಶನ್ (Actor Darshan) ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಸೋಮವಾರ ಪತಿಯನ್ನು ನೋಡೋಕೆ ತೆರಳಿದ್ದ ಪತ್ನಿ ವಿಜಯಲಕ್ಷ್ಮಿ ಗಂಟೆಗಟ್ಟಲೆ ಕಾದು ಬಳಿಕ ಭೇಟಿಯಾಗಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಎರಡನೇ ಬಾರಿ ಜೈಲು ಸೇರಿದ್ದಾರೆ. ಈ ಹಿಂದೆ ದರ್ಶನ್ ಜೈಲಿನಲ್ಲಿದ್ದಾಗ ವಿಐಪಿ ಟ್ರೀಟ್ಮೆಂಟ್ ಸಿಗುತ್ತಿತ್ತು. ಜೊತೆಗೆ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಕೂಡ ಸ್ಪೆಷಲ್ ಎಂಟ್ರಿಯಲ್ಲಿ ಬಂದು ದರ್ಶನ್ ಅವರನ್ನು ಭೇಟಿಯಾಗುತ್ತಿದ್ದರು. ಆಗ ಐದು ನಿಮಿಷ ಕಾದರೆ ಸಾಕು ದರ್ಶನ್ ಸಿಗುತ್ತಿದ್ದರು. ಆದರೆ ಈ ಬಾರಿ ಸುಪ್ರೀಂ ಕೋರ್ಟ್ ಸ್ಟ್ರಿಕ್ಟ್ ಆದೇಶದ ಬೆನ್ನಲ್ಲೇ ದರ್ಶನ್‌ಗೆ ವಿಐಪಿ ಟ್ರೀಟ್ಮೆಂಟ್ ಬಂದ್ ಆಗಿದೆ.
ಸೋಮವಾರ ದರ್ಶನ್ ನೋಡಲು ಜೈಲು ಬಳಿ ಹೋಗಿದ್ದ ಪತ್ನಿ ವಿಜಯಲಕ್ಷ್ಮಿ ಸುಮಾರು ಎರಡೂವರೆ ಗಂಟೆ ಕಾದ ಬಳಿಕ ದರ್ಶನ್ ನೋಡಿ ಮಾತನಾಡಿಸಿಕೊಂಡು ಬಂದಿದ್ದಾರೆ. ಜನರಲ್ ಎಂಟ್ರಿಯಲ್ಲಿ ಕಳಿಸಿ ಕಬ್ಬಿಣದ ಜಾಲರಿಯಿಂದ ದರ್ಶನ್ ಜೊತೆ ಮಾತಾಡುವಂತಾಗಿದೆ. ಜೈಲಲ್ಲಿ ದರ್ಶನ್ ಪರಿಸ್ಥಿತಿ ಹಾಗೂ ತಮಗಾದ ಅನುಭವ ನೆನೆದು ವಿಜಯಲಕ್ಷ್ಮಿ ಭಾವುಕರಾಗಿ ಹೊರಬಂದಿದ್ದಾರೆ.
ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾಗೆ (Actress Ramya) ಅಶ್ಲೀಲ ಕಾಮೆಂಟ್ ಹಾಕಿದ್ದವರ ಪೈಕಿ ಸಿಸಿಬಿ ಪೊಲೀಸರು (CCB Police) ಮತ್ತೆ ಇಬ್ಬರನ್ನು ಬಂಧಿಸಿದ್ದು, ಈವರೆಗೂ ಒಟ್ಟು 9 ಜನರನ್ನು ಅರೆಸ್ಟ್ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ನಟಿ ರಮ್ಯಾಗೆ ದರ್ಶನ್ ಅಭಿಮಾನಿಗಳು ಅಶ್ಲೀಲ ಮೆಸೇಜ್ ಕಳುಹಿಸಿದ್ದರು. ಇದರ ಬೆನ್ನಲ್ಲೇ ದರ್ಶನ್ ಫ್ಯಾನ್ಸ್ ವಿರುದ್ಧ ಗರಂ ಆದ ನಟಿ ಅಶ್ಲೀಲ ಮೆಸೇಜ್ ಕಳುಹಿಸಿದ್ದವರ ಖಾತೆಗಳನ್ನು ಬಹಿರಂಗಗೊಳಿಸಿದ್ದರು. ಜೊತೆಗೆ 43 ಅಕೌಂಟ್‌ಗಳ ವಿರುದ್ಧ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಕಿಡಿಗೇಡಿಗಳ ಪತ್ತೆಗಾಗಿ 6 ತಂಡವನ್ನ ರಚನೆ ಮಾಡಲಾಗಿತ್ತು.
ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿಗೆ ನ್ಯಾಯ ಸಿಗುವ ಬಗ್ಗೆ ರಮ್ಯಾ ಪೋಸ್ಟ್ ಹಾಕಿದ್ದಕ್ಕೆ ಅಶ್ಲೀಲ ಕಾಮೆಂಟ್ ಮಾಡಿರುವುದು ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರು ಸೇರಿದಂತೆ ಹಲವು ಕಡೆ ಕಿಡಿಗೇಡಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈವರೆಗೂ ಸಿಸಿಬಿ ಪೊಲೀಸರು ಒಟ್ಟು 9 ಜನರನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಶೋಧ ವೆಬ್ ಸಿರೀಸ್ ಸ್ಟ್ರೀಮಿಂಗ್ ಡೇಟ್ ಫಿಕ್ಸ್
ದುಬಾರಿ ಬಜೆಟ್, ಸ್ಟಾರ್ ನಟರು ಇಲ್ಲದೇ ಸಿನಿಮಾ ಗೆಲ್ಲಿಸಬಹುದು ಎನ್ನುವುದಕ್ಕೆ ಸು ಫ್ರಂ ಸೋ ಸಿನಿಮಾ ಸಾಕ್ಷಿ ಎಂದಿದ್ದಾರೆ ನಟಿ ರಮ್ಯಾ. ದರ್ಶನ್ ರೀತಿಯ ಸ್ಟಾರ್ ನಟರು ಜೈಲಿಗೆ ಹೋದಾಗ, ಸಿನಿಮಾ ರಂಗ ಪಾತಾಳಕ್ಕೆ ಬೀಳುತ್ತದೆ. ಸ್ಟಾರ್ ನಟರು ಸಿನಿಮಾ ಮಾಡದೇ ಇದ್ದರೆ ಸಿನಿಮಾ ರಂಗಕ್ಕೆ ನಷ್ಟಕ್ಕೆ ತಿರುಗುತ್ತಾ? ಎಂದು ಕೇಳಲಾದ ಪ್ರಶ್ನೆಗೆ ರಮ್ಯಾ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ. ಸು ಫ್ರಂ ಸೋನಲ್ಲಿ ಯಾವ ಸ್ಟಾರ್ ನಟರು ಇದ್ದಾರೆ?.. ಕಂಟೆಂಟ್ ಚೆನ್ನಾಗಿದ್ದರೆ ಸಿನಿಮಾ ಗೆಲ್ಲುತ್ತದೆ ಅಂದಿದ್ದಾರೆ ರಮ್ಯಾ.
ದರ್ಶನ್ ಬಗ್ಗೆ ರಮ್ಯಾ ಹೇಳಿದ್ದೇನು?
ದರ್ಶನ್ (Darshan) ಲೈಟ್ಬಾಯ್ ಆಗಿ ಬಂದ್ರೂ ಕಷ್ಟಪಟ್ಟು ಮೇಲೆ ಬಂದಿದ್ರು. ಆದ್ರೆ ಜೀವನ ಹಾಳುಮಾಡಿಕೊಂಡ್ರು ಅಂತ ನಟಿ ರಮ್ಯಾ (Actress Ramya) ಕೊಲೆ ಆರೋಪಿ ದಚ್ಚು ಬಗ್ಗೆ ಸಾಫ್ಟ್ ಕಾರ್ನರ್ ತೋರಿದ್ದಾರೆ. ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ, ನಾನು ಹೇಳಬೇಕಾದ್ದನ್ನೆಲ್ಲ ಹೇಳಿದ್ದೀನಿ. ದೂರು ಕೊಟ್ಮೇಲೆ ಬ್ಯಾಡ್ ಕಾಮೆಂಟ್ಸ್ ಬರ್ತಿಲ್ಲ. ಎಷ್ಟೋ ಜನ ಪೋನ್ ಸ್ವಿಚ್ ಆಫ್ ಮಾಡಿ ಮನೆ ಬಿಟ್ಟಿದ್ದಾರೆ. ಇನ್ನಷ್ಟು ಮಂದಿ ಅರೆಸ್ಟ್ ಆಗಿದ್ದಾರೆ. ದರ್ಶನ್ ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಬಂದವರಾಗಿದ್ದರೂ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ರು. ಆದ್ರೆ ಜೀವನ ಹಾಳು ಮಾಡಿಕೊಂಡ್ರು. ಹೀಗೆ ಆಗದೇ ಇದ್ದಿದ್ದರೇ ಇನ್ನಷ್ಟು ದೊಡ್ಡ ಮಟ್ಟಕ್ಕೆ ಬೆಳಿಯಬಹುದಿತ್ತು ಎಂದರಲ್ಲದೇ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸುವುದಾಗಿ ಹೇಳಿದರು.
ಮುಂದುವರಿದು… ಸುಪ್ರೀಂ ತೀರ್ಪಿನಿಂದ ರೇಣುಕಾಸ್ವಾಮಿ ಹೆಂಡತಿ ಮಗುವಿಗೆ ನ್ಯಾಯ ಸಿಕ್ಕಿದೆ. ಈ ಬೆಳವಣಿಗೆಯಿಂದ ಹೆಣ್ಣುಮಕ್ಕಳಿಗೆ ಧೈರ್ಯ ಬಂದಿದೆ. ಎಲ್ಲ ಒಳ್ಳೆಯದಾಗಿದೆ ಅಂದುಕೊಳ್ತೀನಿ ಅಂತ ಹೇಳಿದ್ದಾರೆ. ಇನ್ನೂ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸೋಶಿಯಲ್ ಮೀಡಿಯಾ ಹ್ಯಾಂಡಲ್ ಜವಾಬ್ದಾರಿ ಹೊತ್ತ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ನಡೆಯನ್ನು ಸ್ವಾಗತಿಸುತ್ತೀನಿ ಅಂದರು. ಇದು ಒಳ್ಳೆ ಬೆಳವಣಿಗೆ, ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಈ ಮೂಲಕ ಒಳ್ಳೆ ಸಂದೇಶ ಕೊಡಬಹುದು. ಅವರು ಸಹ ಹೆಣ್ಣು, ಹೀಗಾಗಿ ಇದು ಒಳ್ಳೆ ಬೆಳವಣಿಗೆ ಅಂತಿನಿ ಅಂದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ಲ್ಲಿ (Renukaswamy Case) ಸುಪ್ರೀಂ (Supreme Court) ಆದೇಶದ ಬೆನ್ನಲ್ಲೇ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಬಗ್ಗೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Actress Ramya) ಸಾಫ್ಟ್ ಕಾರ್ನರ್ ತೋರಿಸಿದ್ದಾರೆ.
ದರ್ಶನ್ ಜೈಲುಪಾಲಾಗಿರುವ ಬಗ್ಗೆ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿರುವ ಅವರು, ನಟ ದರ್ಶನ್ ಜೊತೆ ನಾನು ಸಿನಿಮಾ ಮಾಡಿದ್ದೇನೆ. ಸಿನಿಮಾ ಶೂಟಿಂಗ್ ವೇಳೆ ತಾವು ನಡೆದುಕೊಂಡು ಬಂದ ಹಾದಿ ಬಗ್ಗೆ ನನ್ನ ಬಳಿ ಹಂಚಿಕೊಂಡಿದ್ದರು. ನನಗೆ ಹೆಮ್ಮೆ ಅನಿಸಿತ್ತು. ಲೈಟ್ ಬಾಯ್ ಆಗಿ ಕೆಲಸ ಮಾಡಿ ಈ ಮಟ್ಟಕ್ಕೆ ಬೆಳೆದಿದ್ದಾರೆ. ಆದರೆ ಇತ್ತೀಚಿಗೆ ಅವರ ನಡವಳಿಕೆಯಿಂದ ತುಂಬಾ ಬೇಜಾರಾಗಿತ್ತು. ಎಲ್ಲೋ ಒಂದು ಕಡೆ ಅವರು ತಮ್ಮ ಜೀವನ ಹಾಳು ಮಾಡಿಕೊಂಡರು. ಈ ಮಟ್ಟಕ್ಕೆ ಬೆಳೆದ ಮೇಲೆ ಜವಾಬ್ದಾರಿ ಇರುತ್ತದೆ. ಅವರ ಅಕ್ಕಪಕ್ಕ ಯಾರು ಒಳ್ಳೆಯವರಿಲ್ಲ ಅನಿಸುತ್ತೆ ಗೊತ್ತಿಲ್ಲ. ತಮ್ಮ ಸುತ್ತಮುತ್ತ ಒಳ್ಳೆಯವರನ್ನು ಇಟ್ಟುಕೊಂಡು ಒಳ್ಳೆಯ ದಾರಿಯಲ್ಲಿ ಕರೆದುಕೊಂಡು ಹೋಗಬಹುದಿತ್ತು. ಮೊದಲು ಅಕ್ಕಪಕ್ಕದವರ ಸಹವಾಸ ಬಿಡಬೇಕು ಕಿವಿಮಾತು ಹೇಳಿದ್ದಾರೆ.ಇದನ್ನೂ ಓದಿ: ಬೆಂಗಳೂರು | ನಿಗೂಢ ಸ್ಫೋಟ – ಬಾಲಕ ಸಾವು, 8 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ
ಇನ್ನೊಂದು ಕಡೆ ಜಡ್ಜ್ಮೆಂಟ್ ಕೇಳಿದಾಗ ರಿಲೀಫ್ ಅಂತಾ ಅನಿಸಿದೆ. ಈಗ ನಾವು ಹೋಗುತ್ತಿರುವ ಸಮಾಜ ಕೆಟ್ಟ ದಾರಿಯಲ್ಲಿದೆ. ಹೆಣ್ಣುಮಕ್ಕಳ ರಕ್ಷಣೆ, ಗೌರವ ವಿಷಯದಲ್ಲಿ ಸುಪ್ರೀಂ ಕೋರ್ಟ್ ಆರ್ಡರ್ ಬಂದಾಗ ನಾನು ಮಾಡಿದ ಪೋಸ್ಟ್ಗೆ ಕೆಟ್ಟದಾಗಿ ಕಾಮೆಂಟ್ ಹಾಕುತ್ತಿದ್ದರು. ನಾವೇ ಕಾನೂನು ಕೈಗೆತ್ತಿಕೊಂಡರೆ ಈ ರೀತಿಯ ಕೆಟ್ಟ ಕೆಲಸಗಳು ಆಗುತ್ತವೆ. ಜಡ್ಜ್ಮೆಂಟ್‌ನಿಂದ ಸಮಾಜಕ್ಕೆ ಒಳ್ಳೆಯದಾಗುತ್ತೆ. ಸಮಾಜಕ್ಕೆ ಒಂದೊಳ್ಳೆ ಮೆಸೇಜ್ ಹೋಗಿದೆ. ಯಾರೇ ಆಗಿರಲಿ ಎಲ್ಲರೂ ಸಮಾನರು. ದೊಡ್ಡವರೇ ಆಗ್ಲಿ ಚಿಕ್ಕವರೇ ಆಗ್ಲಿ ಎಲ್ಲರೂ ಕಾನೂನಿನ ಮುಂದೆ ಒಂದೇ ಎಂದು ತಿಳಿಸಿದ್ದಾರೆ.
ಪವಿತ್ರಾ ಗೌಡ ಯಾರು ಅಂತಾ ನನಗೆ ಮೊದಲು ಗೊತ್ತಿರಲಿಲ್ಲ. ಆಕೆಗೆ ಈ ಸ್ಥಿತಿ ಬರಬಾರದಿತ್ತು. ಒಂದು ಕಡೆ ನನಗೆ ಬೇಜಾರಾಗುತ್ತೆ. ಯಾಕಂದ್ರೆ ಪವಿತ್ರಾ ಗೌಡ ಒಬ್ಬ ತಾಯಿ, ಅವರಿಗೆ ಮಗಳಿದ್ದಾಳೆ. ಕಾನೂನು ಕೈಗೆ ತೆಗೆದುಕೊಳ್ಳದೇ ನಾವು ನಿಯಮಗಳ ಪ್ರಕಾರ ನಡೆದುಕೊಂಡಿದ್ರೆ ಇದೆಲ್ಲಾ ಆಗುತ್ತಿರಲಿಲ್ಲ. ನಾವು ಏನಾದರೂ ಮಾಡುವ ಮುಂಚೆ ಯೋಚನೆ ಮಾಡಬೇಕು. ಕೋಪ ಬರೋದು ಸಾಮಾನ್ಯ, ಆದರೆ ಎಲ್ಲರ ಜೀವನದಲ್ಲಿ ಒಳ್ಳೆಯದೇ ಆಗಲ್ಲ. ಕೆಲವೊಂದು ಘಟನೆಗಳು ನಡೆಯುತ್ತವೆ. ಹಾಗಂತ ನಾವು ಕಾನೂನನ್ನ ಕೈಗೆತ್ತಿಕೊಳ್ಳಬಾರದು. ಕಾನೂನು ಪ್ರಕಾರವೇ ನಡೆದುಕೊಂಡು ಬರಬೇಕು. ಮತ್ತೇನಾದರೂ ಆದರೆ ಅಂತ ಜೀವನ ಹಾಳು ಮಾಡಿಕೊಳ್ತೀರಾ? ಅದೇ ರೀತಿ ಬೇರೆಯವರು ಶುರು ಮಾಡ್ಕೊಂಡ್ರೆ ಸಮಾಜ ಹೇಗೆ ಬದಲಾಗುತ್ತೆ? ಎಲ್ಲದಕ್ಕೂ ಒಂದು ಲಿಮಿಟ್ ಇರುತ್ತೆ. ಆದರೆ ಕಾನೂನಿಂದ ನಾವ್ಯಾರು ಎಸ್ಕೇಪ್ ಆಗೋಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ (Renukaswamy Case) ಆರೋಪಿಗಳ ಜಾಮೀನು ರದ್ದಾದ ಬೆನ್ನಲ್ಲೇ ನಟ ದರ್ಶನ್ (Actor Darshan) ಆಪ್ತ ಪ್ರದೂಷ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ಸ್‌ಪೆಕ್ಟರ್ ಸುಬ್ರಮಣ್ಯ ಮತ್ತು ತಂಡ ಆತನನ್ನು ಬಂಧಿಸಿದೆ.
ಕೊಲೆ ಆರೋಪಿಗಳ ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court) ಗುರುವಾರ ಬೆಳಗ್ಗೆ ಮಹತ್ವದ ತೀರ್ಪು ನೀಡಿತ್ತು. ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಈ ಆದೇಶದ ಬೆನ್ನಲ್ಲೇ ಪ್ರದೂಷ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಸಂಜೆ 4:30 ಕ್ಕೆ ನಾನೇ ಬಂದು ಶರಣಾಗ್ತೀನಿ: ಪೊಲೀಸರಿಗೆ ದರ್ಶನ್ ಮಾಹಿತಿ
ಎಲ್ಲರೂ ಸರೆಂಡರ್ ಆಗಬೇಕು. ಆರೋಪಿ ಎಷ್ಟೇ ದೊಡ್ಡವನಾಗಿದ್ದರೂ, ಅವನು ಅಥವಾ ಅವಳು ಕಾನೂನಿಗಿಂತ ಮೇಲಲ್ಲ ಎಂಬ ಸಂದೇಶವನ್ನು ಇದು ನೀಡುತ್ತದೆ. ಯಾವುದೇ ಮಟ್ಟದಲ್ಲಿ ನ್ಯಾಯ ವಿತರಣಾ ವ್ಯವಸ್ಥೆಯು ಯಾವುದೇ ಬೆಲೆ ತೆತ್ತಾದರೂ ಕಾನೂನಿನ ನಿಯಮವನ್ನು ಕಾಪಾಡಿಕೊಳ್ಳಬೇಕು ಎಂಬ ಬಲವಾದ ಸಂದೇಶವನ್ನು ಇದು ಒಳಗೊಂಡಿದೆ. ಯಾವುದೇ ವ್ಯಕ್ತಿ ಕಾನೂನಿಗಿಂತ ಮೇಲಲ್ಲ ಅಥವಾ ಅದಕ್ಕಿಂತ ಕೆಳಗಿಲ್ಲ. ನಾವು ಅದನ್ನು ಪಾಲಿಸುವಾಗ ಯಾರ ಅನುಮತಿಯನ್ನೂ ಕೇಳುವುದಿಲ್ಲ. ಎಲ್ಲಾ ಸಮಯದಲ್ಲೂ ಕಾನೂನಿನ ನಿಯಮವನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಆದೇಶದಲ್ಲಿ ತಿಳಿಸಿದ್ದರು.
ಈ ಆದೇಶದ ಬೆನ್ಬಲ್ಲೇ ದರ್ಶನ್ ಸಹ ಇಂದು (ಆ.14) ನ್ಯಾಯಾಲಯಕ್ಕೆ ಶರಣಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡಳನ್ನು ಬಂಧಿಸಲು ಪೊಲೀಸರು ಅವರ ಮನೆಗೆ ತೆರಳಿದ್ದಾರೆ. ಆರೋಪಿಗಳ ಪರ ವಕೀಲರು ಕಾಲಾವಕಾಶ ಕೇಳದ ಕಾರಣ ಆರೋಪಿಗಳು ಇಂದೇ ಶರಣಾಗಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು. ಇದನ್ನೂ ಓದಿ: ಮತ್ತೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಾರಾ ದರ್ಶನ್?
ಬಳ್ಳಾರಿ: ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Actor Darshan) ಜಾಮೀನು ರದ್ದಾದ ಬೆನ್ನಲ್ಲೇ ನ್ಯಾಯಾಲಯಕ್ಕೆ ಇಂದು (ಆ.14) ಸಂಜೆ ಶರಣಾಗುವ ಸಾಧ್ಯತೆ ಇದೆ. ನ್ಯಾಯಾಲಯಕ್ಕೆ ಶರಣಾದರೆ ಮತ್ತೆ ದರ್ಶನ್ ಬಳ್ಳಾರಿ ಜೈಲಿಗೆ (Ballari Jail) ಶಿಫ್ಟ್ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಬಳ್ಳಾರಿ ಜೈಲಿನಲ್ಲಿ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‍ಗೆ ರಾಜಾತಿಥ್ಯ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಇದಾದ ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಬಳಿಕ ಜಾಮೀನು ಮಂಜೂರಾಗುವ ತನಕ 63 ದಿನಗಳ ಕಾಲ ಬಳ್ಳಾರಿ ಜೈಲಿನಲ್ಲಿ ಕಳೆದಿದ್ದರು. ಅಕ್ಟೋಬರ್ 30 ರಂದು ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿದ್ದರು. ಇದೀಗ ಮತ್ತೆ ಅದೇ ಜೈಲಿಗೆ ಅವರು ಶಿಫ್ಟ್ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ರಾಜ್ಯ ತೊರೆದಿದ್ದಾರಾ ಕೊಲೆ ಆರೋಪಿ ದರ್ಶನ್?
ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದಾಗ ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದ ದರ್ಶನ್‍ಗೆ ವಿಮ್ಸ್ ಆಸ್ಪತ್ರೆಯಲ್ಲಿ ಸ್ಕ್ಯಾನ್ ಸಹ ಮಾಡಿಸಲಾಗಿತ್ತು. ಸ್ಕ್ಯಾನ್ ಬಳಿಕ ತುರ್ತು ಸರ್ಜರಿಗೆ ಸೂಚಿಸಲಾಗಿತ್ತು. ಅದೇ ಆಧಾರದ ಮೇಲೆ ಜಾಮೀನು ದರ್ಶನ್ ಪಡೆದಿದ್ದರು. ಜಾಮೀನು ಪಡೆದ ಬಳಿಕ ದರ್ಶನ್ ಶಸ್ತ್ರಚಿಕಿತ್ಸೆ ಮಾಡಿಸಿರಲಿಲ್ಲ.
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ (Actor Darshan) ಜಾಮೀನು ರದ್ದಾಗಿದ್ದು, ಇಂದೇ ಪೊಲೀಸರಿಗೆ ಅವರು ಶರಣಾಗಬೇಕಿದೆ. ಅವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಬೆಂಗಳೂರು (Bengaluru) ಹಾಗೂ ಮೈಸೂರಿನಲ್ಲಿ (Mysuru) ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಬೆಂಗಳೂರಿನ ಆರ್‌ಆರ್ ನಗರದಲ್ಲಿ ದರ್ಶನ್ ಇಲ್ಲ ಎನ್ನಲಾಗುತ್ತಿದೆ. ಇನ್ನೂ ಮೈಸೂರಿನ ಫಾರ್ಮ್ ಹೌಸ್ ಬಳಿಯೂ ಪೊಲೀಸರು ತೆರಳಿದ್ದು, ಹುಡುಕಾಟ ನಡೆಸುತ್ತಿದ್ದಾರೆ. ಇದೆಲ್ಲದರ ನಡುವೆ ದರ್ಶನ್ ಕರ್ನಾಟಕದಲ್ಲಿಲ್ಲ, ರಾಜ್ಯ ತೊರೆದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ದರ್ಶನ್ ಜಾಮೀನು ರದ್ದು; ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ: ರೇಣುಕಾಸ್ವಾಮಿ ಪತ್ನಿ
ನಟ ದರ್ಶನ್ ಸೇರಿದಂತೆ 7 ಆರೋಪಿಗಳ ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಕೂಡಲೇ ಎಲ್ಲರೂ ಸರೆಂಡರ್ ಆಗಬೇಕು. ಆರೋಪಿ ಎಷ್ಟೇ ದೊಡ್ಡವನಾಗಿದ್ದರೂ, ಅವನು ಅಥವಾ ಅವಳು ಕಾನೂನಿಗಿಂತ ಮೇಲಲ್ಲ ಎಂಬ ಸಂದೇಶವನ್ನು ಇದು ನೀಡುತ್ತದೆ. ಯಾವುದೇ ಮಟ್ಟದಲ್ಲಿ ನ್ಯಾಯ ವಿತರಣಾ ವ್ಯವಸ್ಥೆಯು ಯಾವುದೇ ಬೆಲೆ ತೆತ್ತಾದರೂ ಕಾನೂನಿನ ನಿಯಮವನ್ನು ಕಾಪಾಡಿಕೊಳ್ಳಬೇಕು ಎಂಬ ಬಲವಾದ ಸಂದೇಶವನ್ನು ಇದು ಒಳಗೊಂಡಿದೆ. ಯಾವುದೇ ವ್ಯಕ್ತಿ ಕಾನೂನಿಗಿಂತ ಮೇಲಲ್ಲ ಅಥವಾ ಅದಕ್ಕಿಂತ ಕೆಳಗಿಲ್ಲ. ನಾವು ಅದನ್ನು ಪಾಲಿಸುವಾಗ ಯಾರ ಅನುಮತಿಯನ್ನೂ ಕೇಳುವುದಿಲ್ಲ. ಎಲ್ಲಾ ಸಮಯದಲ್ಲೂ ಕಾನೂನಿನ ನಿಯಮವನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಆದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನ್ಯಾಯಾಂಗ, ಸರ್ಕಾರದ ಬಗ್ಗೆ ವಿಶ್ವಾಸ ಮೂಡಿದೆ: ಸುಪ್ರೀಂ ತೀರ್ಪಿಗೆ ರೇಣುಕಾಸ್ವಾಮಿ ತಂದೆ ಸಂತಸ