Tag: actor Darshan

  • ಯಜಮಾನ ಶೂಟಿಂಗ್ ಸೆಟ್ಟಿನಲ್ಲಿ ಕಾಣಿಸಿಕೊಂಡ್ರು ಯಜಮಾನಿ – ಫೋಟೋ ವೈರಲ್

    ಯಜಮಾನ ಶೂಟಿಂಗ್ ಸೆಟ್ಟಿನಲ್ಲಿ ಕಾಣಿಸಿಕೊಂಡ್ರು ಯಜಮಾನಿ – ಫೋಟೋ ವೈರಲ್

    ಬೆಂಗಳೂರು: ಸ್ಯಾಂಡಲ್‍ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ಬಹು ನಿರೀಕ್ಷಿತ ‘ಯಜಮಾನ’ ಚಿತ್ರದ ಶೂಟಿಂಗ್ ಸ್ಥಳಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಭೇಟಿ ನೀಡಿದ್ದಾರೆ.

    ನಗರದ ಪ್ಯಾಲೇಸ್ ಗ್ರೌಂಡ್‍ನಲ್ಲಿ ಯಜಮಾನ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ. ಕೆಲ ಸಮಯ ಚಿತ್ರತಂಡದೊಂದಿಗೆ ಕಾಲ ಕಳೆದ ವಿಜಯಲಕ್ಷ್ಮೀ ಅವರು ದರ್ಶನ್ ರೊಂದಿಗೆ ಮಾತುಕತೆ ನಡೆಸಿ ಬಳಿಕ ಅಲ್ಲಿಂದ ತೆರಳಿದ್ದಾರೆ.

    ಈ ಹಿಂದೆಯೂ ಹಲವು ಬಾರಿ ದರ್ಶನ್  ಅಭಿನಯದ ಸಿನಿಮಾಗಳ ಚಿತ್ರೀಕರಣದ ವೇಳೆ ವಿಜಯಲಕ್ಷ್ಮಿ ಭೇಟಿ ನೀಡಿದ್ದರು. ಆದರೆ ಕೆಲ ವರ್ಷಗಳ ಗ್ಯಾಪ್ ಬಳಿಕ ಪತಿಯ ಸಿನಿಮಾ ಚಿತ್ರೀಕರಣದ ವೇಳೆ ವಿಜಯಲಕ್ಷ್ಮೀ ಕಾಣಿಸಿಕೊಂಡಿದ್ದಾರೆ. ಸದ್ಯ ಇಬ್ಬರೂ ಪರಸ್ಪರ ಮಾತನಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸತತ ಎರಡ್ಮೂರು ತಿಂಗಳಿನಿಂದ ಯಜಮಾನ ಸಿನಿಮಾ ಚಿತ್ರೀಕರಣದಲ್ಲಿ ಭಾಗಹಿಸುತ್ತಿರುವ ದರ್ಶನ್ ನಿರಂತರ ಶೂಟಿಂಗ್‍ನಲ್ಲಿ ತೊಡಗಿಕೊಂಡಿದ್ದಾರೆ. ಮೈಸೂರು, ಬೆಂಗಳೂರಿನಲ್ಲಿ ನಿರ್ಮಿಸಲಾಗಿದ್ದ ವಿಶೇಷವಾದ ಸೆಟ್ಟಿನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದ್ದು, ಅಂತಿಮ ಹಂತ ತಲುಪಿದೆ. ಖ್ಯಾತ ನಿರ್ದೇಶಕ ಬಿ. ಸುರೇಶ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ದರ್ಶನ್ ಜೊತೆಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದಲ್ಲಿ ದರ್ಶನ್ ಅವರ ಲುಕ್ ಹೇಗಿದೆ ಎಂದು ಅಭಿಮಾನಿಗಳಲ್ಲಿ ಕುತೂಹಲ ಇದೆ. ದರ್ಶನ್ ರೊಂದಿಗೆ ರಶ್ಮಿಕಾ ಮಂದಣ್ಣ ಜೋಡಿಯನ್ನು ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮನೆಯಲ್ಲಿ ಪ್ರಾಣಿಗಳನ್ನು ಸಾಕಿದರೆ ಮಾತ್ರ ಪ್ರಾಣಿ ಪ್ರಿಯರಾಗಲ್ಲ: ದರ್ಶನ್

    ಮನೆಯಲ್ಲಿ ಪ್ರಾಣಿಗಳನ್ನು ಸಾಕಿದರೆ ಮಾತ್ರ ಪ್ರಾಣಿ ಪ್ರಿಯರಾಗಲ್ಲ: ದರ್ಶನ್

    ಮೈಸೂರು: ವಿಶ್ವ ಹುಲಿ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಹುಲಿ ದಿನಾಚರಣೆ ಮತ್ತು ಯುವ ಸಂಘಟನೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ಅರಣ್ಯ ಇಲಾಖೆಯ ರಾಯಭಾರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗಿಯಾಗಿದ್ದರು.

    ಸಮಾರಂಭದಲ್ಲಿ ಮಾತನಾಡಿದ ದರ್ಶನ್, ಕಾಡು ಉಳಿಸಿದರೆ ನಾಡು ಸುರಕ್ಷಿತವಾಗಿರಲಿದೆ. ಇತ್ತೀಚಿನ ವರ್ಷಗಳಲ್ಲಿ ಗುಬ್ಬಚ್ಚಿಗಳು ಕಾಣಿಸುತ್ತಿಲ್ಲ ಅತಿಯಾದ ಮೊಬೈಲ್ ವಿಕಿರಣದಿಂದ ಹೀಗಾಗಿದೆ ಎಂದು ವಿಶ್ಲೇಷಿಸಿದರು. ಮನೆಯಲ್ಲಿ ಪ್ರಾಣಿಗಳನ್ನು ಸಾಕಿದ ಮಾತ್ರ ಪ್ರಾಣಿ ಪ್ರಿಯರಾಗುವುದಿಲ್ಲ. ಪ್ಲಾಸ್ಟಿಕ್ ಮುಕ್ತ ಮಾಡಿ ಪರಿಸರ ಉಳಿಸುವ ಮೂಲಕ ಪ್ರಾಣಿ ಪ್ರಿಯರಾಗುವಂತೆ ಕರೆ ನೀಡಿದರು.

    ವನ್ಯ ಜೀವಿಗಳ ಸಂತತಿ ದಿನೇ ದಿನೇ ನಶಿಸುತ್ತಿದೆ. ಡೈನೋಸಾರ್ ಗಳು ಇದ್ದ ಬಗ್ಗೆ ನಾವೀಗ ಅಂತೆ ಕಂತೆಗಳನ್ನು ಕೇಳುತ್ತಿದ್ದೇವೆ. ಮುಂದಿನ ಕನಿಷ್ಠ 50 ವರ್ಷಗಳಲ್ಲಿ ಹುಲಿ, ಸಿಂಹ ಇತ್ತಂತೆ ಎಂದು ಹೇಳುವ ಪರಿಸ್ಥಿತಿ ಬರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಕಾರ್ಯಕ್ರಮದ ನಂತರ ನಟ ದರ್ಶನ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದು ಪೈಪೋಟಿ ನಡೆಸಿದರು. ಅಭಿಮಾನಿಗಳಿಗೆ ನಿರಾಸೆ ಮಾಡದೇ ನಗು ಮೊಗದೊಂದಲೇ ಸೆಲ್ಫಿಗೆ ನಟ ದರ್ಶನ್ ಪೋಸ್ ಕೊಟ್ಟರು.

  • ಧಿಕ್ಕಾರಕ್ಕೆ ಬಗ್ಗದ ನಟ ದರ್ಶನ್‍ರಿಂದ ಚಾಮುಂಡೇಶ್ವರಿಯಲ್ಲಿ ಅಬ್ಬರದ ಪ್ರಚಾರ

    ಧಿಕ್ಕಾರಕ್ಕೆ ಬಗ್ಗದ ನಟ ದರ್ಶನ್‍ರಿಂದ ಚಾಮುಂಡೇಶ್ವರಿಯಲ್ಲಿ ಅಬ್ಬರದ ಪ್ರಚಾರ

    ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಪರ ಚಾಮುಂಡೇಶ್ವರಿಯಲ್ಲಿ ಪ್ರಚಾರ ನಡೆಸಿರುವ ನಟ ದರ್ಶನ್ ಪ್ರಚಾರದ ವೇಳೆ ಸಿಎಂ ಪುತ್ರ ರಾಕೇಶ್ ರನ್ನು ನೆನೆದು, ಮಗ ಮೃತಪಟ್ಟರು ಕುಗ್ಗದೆ ಸಿಎಂ ಜನರಿಗಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಕ್ಷೇತ್ರದ ಹಳ್ಳಿಗಳಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ದರ್ಶನ್, ರಾಕೇಶ್ ಸಾವನ್ನಪ್ಪಿದ ವೇಲೆ ಸಿಎಂ ಸಿದ್ದರಾಮಯ್ಯ ಅವರನ್ನು ನೋಡಿದೆ. ಬಳಿಕ 10-15 ದಿನಗಳಲ್ಲೇ ಮಗನ ಸಾವಿನಿಂದ ಕುಗ್ಗದೆ ಎದ್ದು ಬಂದರು. ಅಲ್ಲದೇ ಜನರು ತನ್ನನ್ನು ಗೆಲ್ಲಿಸಿದ್ದಾರೆ ಅವರ ಪರ ಕೆಲಸ ಮಾಡಬೇಕು ಎಂದು ಹೇಳಿದ್ದರು. ಮನುಷ್ಯನಿಗೆ ಕಷ್ಟ ಬರುತ್ತೆ ಆದರೆ ಅದನ್ನು ಎದುರಿಸಬೇಕು. ಅದ್ದರಿಂದ ಈ ಬಾರಿ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಬೇಕು. ಸಿದ್ದರಾಮಯ್ಯ ಅವರನ್ನು ನಂಬಿ. ಅವರನ್ನು ಗೆಲ್ಲಿಸಿಕೊಟ್ಟ ಜನರ ಪರ ಅವರು ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಡೇರ್ ಅಂಡ್ ಡೆವಿಲ್. ಹೀಗಾಗಿ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

    ಯತೀಂದ್ರ ಸಾಥ್: ಚಾಮುಂಡೇಶ್ವರಿಯಲ್ಲಿ ತಂದೆ ಪರ ಪ್ರಚಾರ ನಡೆಸುತ್ತಿರುವ ದರ್ಶನ್ ಅವರಿಗೆ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ಸಾಥ್ ನೀಡಿದ್ರು. ಅಲ್ಲದೇ ಕಾಂಗ್ರೆಸ್ ಮುಖಂಡರಾದ ಧ್ರುವಕುಮಾರ್, ಶಿವಣ್ಣ, ರಾಕೇಶ್ ಪಾಪಾಣ್ಣ ಕೂಡ ಪ್ರಚಾರದಲ್ಲಿ ಭಾಗವಹಿಸಿದ್ದರು. ದರ್ಶನ್ ಪ್ರಚಾರ ನಡೆಸುತ್ತಿರುವ ನೋಡಲು ಹಲವು ಅಭಿಮಾನಿಗಳು ಆಗಮಿಸಿದ್ರು. ಪ್ರಚಾರ ನಡೆಸಿದ ಎಲ್ಲಾ ಗ್ರಾಮಗಳಲ್ಲಿ ಮಾತನಾಡಿದ ದರ್ಶನ್, ಸಿಎಂ ಪರ ಪ್ರಚಾರ ಮಾಡುತ್ತಿರುವುದು ಒಳ್ಳೆಯದು ಅಲ್ಲವೇ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.

    ಜೆಡಿಎಸ್ ಪ್ರತಿಭಟನೆ: ಪ್ರಚಾರಕ್ಕೂ ಮೊದಲು ನಟ ದರ್ಶನ್ ಅವರನ್ನು ಗ್ರಾಮಕ್ಕೆ ಪ್ರವೇಶ ಮಾಡದಂತೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಚಾಮುಂಡೇಶ್ವರಿಯ ನಾಗನಹಳ್ಳಿಯಲ್ಲಿ ದರ್ಶನ್ ಗ್ರಾಮಕ್ಕೆ ಅಗಮಿಸದಂತೆ ಘೋಷಣೆ ಕೂಗಿದ್ದರು. ಅಲ್ಲದೆ ಯಾವುದೇ ಕಾರಣಕ್ಕೂ ದರ್ಶನ ಗ್ರಾಮಕ್ಕೆ ಆಗಮಿಸಬಾರದು ಎಂದು ಆಕ್ರೋಶ ಕೂಡ ವ್ಯಕ್ತಪಡಿಸಿದ್ದರು. ಸಿಎಂ ಕಳೆದ 12 ವರ್ಷಗಳಿಂದ ತಮ್ಮ ಕ್ಷೇತ್ರವನ್ನು ಮರೆತಿದ್ದಾರೆ. ಅಲ್ಲದೇ ಅವರ ಅಧಿಕಾರ ಅವಧಿಯಲ್ಲಿ ರೈತಪರ ಕೆಲಸ ಮಾಡಿಲ್ಲ. ಅಣ್ಣ ಅಂಬರೀಶ್ ಅವರನ್ನು ಕಾಂಗ್ರೆಶ್ ಪಕ್ಷದಿಂದ ದೂರ ಮಾಡಿದ್ದಾರೆ. ಅದ್ದರಿಂದ ಯಾವುದೇ ಕಾರಣಕ್ಕೂ ಪ್ರಚಾರ ಮಾಡಬಾರದು. ಎಂದು ರೈತ ವಿರೋಧಿ ದರ್ಶನ್ ಎಂದು ಘೋಷಣೆ ಕೂಗಿದ್ದರು.

  • ನಾಳೆ ಸಿಎಂ ಸಿದ್ದರಾಮಯ್ಯ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬ್ಯಾಟಿಂಗ್

    ನಾಳೆ ಸಿಎಂ ಸಿದ್ದರಾಮಯ್ಯ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬ್ಯಾಟಿಂಗ್

    ಮೈಸೂರು: ಈ ಬಾರಿಯ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಧುಮುಕುತ್ತಿರುವ ನಟ, ನಟಿಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ವೇಳೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಶನಿವಾರ ಪ್ರಚಾರ ಮಾಡಲಿದ್ದಾರೆ.

    ಈಗಾಗಲೇ ಸಿದ್ದರಾಮಯ್ಯ ಅವರ ಪರ ನಟಿ ಜಯಮಾಲಾ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಬಾಲಿವುಡ್ ನಟ ರಾಜ್ ಬಬ್ಬರ್ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ಕಣಕ್ಕೆ ಇಳಿಯುತ್ತಿದ್ದಾರೆ. ನಾಳೆ ಬೆಳಗ್ಗೆ 9 ಗಂಟೆಯಿಂದ ಆರಂಭವಾಗುವ ದರ್ಶನ್ ಅವರ ಪ್ರಚಾರ ರಾತ್ರಿ 7.30ರ ವರೆಗೆ ಮುಂದುವರೆಯಲಿದೆ. ಕ್ಷೇತ್ರದ ಒಟ್ಟು 33 ಹಳ್ಳಿಗಳಲ್ಲಿ ದರ್ಶನ್ ರೋಡ್ ಶೋ ನಡೆಸಿ ಪ್ರಚಾರ ನಡೆಸಲಿದ್ದಾರೆ.

    ಮೂಲತಃ ದರ್ಶನ್ ಮೈಸೂರಿನವರಾಗಿದ್ದು, ಅವರ ತಾಯಿ ಮೀನಾ ತೂಗುದೀಪ ಅವರು ಕಾಂಗ್ರೆಸ್ ಮುಖಂಡರು. ಹೀಗಾಗಿ ದರ್ಶನ್ ಸಿಎಂ ಪರ ಪ್ರಚಾರಕ್ಕೆ ಇಳಿಯುತ್ತಿದ್ದಾರೆ.

    ಕಿಚ್ಚ ಸುದೀಪ್ ಪ್ರಚಾರ: ಮೇ 9 ರಂದು ನಟ ಕಿಚ್ಚ ಸುದೀಪ್ ಸಿಎಂ ಪರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಾರೆ ಎನ್ನಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದ ಅಖಾಡ ದಿನದಿನಕ್ಕೂ ಹೆಚ್ಚು ಪೈಪೋಟಿ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಎಲ್ಲಾ ರೀತಿಯ ಪ್ರಚಾರ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ನಡೆದ ಯಾವುದೇ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರು ಯಾರು ಸಿದ್ದರಾಮಯ್ಯ ಅವರ ಪರ ಪ್ರಚಾರ ನಡೆಸಿರಲಿಲ್ಲ.