Tag: actor Darshan

  • ದರ್ಶನ್‌ ನನ್ನ ಪ್ರೀತಿಯ ಹಿರಿಯ ಮಗ: ಸುಮಲತಾ ಅಂಬರೀಶ್‌

    ದರ್ಶನ್‌ ನನ್ನ ಪ್ರೀತಿಯ ಹಿರಿಯ ಮಗ: ಸುಮಲತಾ ಅಂಬರೀಶ್‌

    ನ್ನ ಪ್ರೀತಿಯ ಹಿರಿಯ ಮಗ ದರ್ಶನ್‌ ಎಂದು ಸಂಸದೆ ಸುಮಲತಾ ಅಂಬರೀಶ್‌ ಹೇಳಿದ್ದಾರೆ. ಕನ್ನಡ ಚಿತ್ರರಂಗಕ್ಕೆ ದರ್ಶನ್‌ ಪದಾರ್ಪಣೆ ಮಾಡಿ ಇಲ್ಲಿಗೆ 25 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಬೆಳ್ಳಿ ಪರ್ವ ಡಿ-25 ಸಮಾರಂಭದಲ್ಲಿ ಸುಮಲತಾ ಅಂಬರೀಶ್‌ ಪಾಲ್ಗೊಂಡು ಮಾತನಾಡಿದ್ದಾರೆ.

    ಮಂಡ್ಯದ ಮಣ್ಣಿನ ತಿಲಕ ಇಟ್ಟು ಅಂಬರೀಶ್‌ರನ್ನು ಬೀಳ್ಕೊಟ್ಟೆವು‌. ಸುಮಲತಾ ಕೂಡ ಈ ಮಣ್ಣನ್ನ ಬಿಡಲ್ಲ. ಮಂಡ್ಯವನ್ನ ಎಂದಿಗೂ ಬಿಡೋದಿಲ್ಲ ಎಂದು ಶ್ರೀರಂಗಪಟ್ಟಣದಲ್ಲಿ ಸುಮಲತಾ ಅಂಬರೀಶ್‌ ಭಾವುಕರಾಗಿ ನುಡಿದಿದ್ದಾರೆ.

    ನನ್ನ ಪ್ರೀತಿಯ ಹಿರಿಯ ಮಗ ದರ್ಶನ್. D-25 ಮಾತ್ರವಲ್ಲ, ನಿನ್ನೆಯಷ್ಟೇ ಹುಟ್ಟು ಆಚರಿಸಿಕೊಂಡಿದ್ದಾರೆ. ಕಾಟೇರ 50 ದಿನ ಸಂಭ್ರಮ ಆಗಿದೆ. ಕಾಟೇರ ಪ್ರೀ ರಿಲೀಸ್ ಇವೆಂಟ್ ಮಂಡ್ಯದಲ್ಲಿ ನಡೆದಿತ್ತು. ಈ ಸಿನಿಮಾ ದೊಡ್ಡ ಹಿಟ್ ಆಗುತ್ತೆ ಎಂದು ಅವತ್ತೆ ಹೇಳಿದ್ದೆ. ಅದರ ಸಂಭ್ರಮವೂ ಮಂಡ್ಯದಲ್ಲೇ ಆಗ್ತಿದೆ. ಕಾಟೇರ ದರ್ಶನ್ ಅವ್ರನ್ನ ಎಲ್ಲೋ ಕರೆದುಕೊಂಡು ಹೋಗಿ ಕೂರಿಸಿದೆ. 25 ವರ್ಷ ಸುಮ್ಮನೆ ಹಾಗೇ ಬಂದ ಜರ್ನಿ ಅಲ್ಲ. ದರ್ಶನ್ ಮೊದಲ ಸಿನಿಮಾ ಮುಹೂರ್ತಕ್ಕೆ ನಾನು ಅಂಬರೀಶ್ ಹೋಗಿದ್ದೆವು. ದರ್ಶನ್ ಆಗ ಇನ್ನೂ ಚಿಕ್ಕ ಹುಡುಗ. ಈಗಲೂ 47 ಅಲ್ಲ, ದರ್ಶನ್‌ಗೆ 27 ವರ್ಷ ಎಂದು ಮಾತನಾಡಿದ್ದಾರೆ.

    ದರ್ಶನ್ ಬದುಕಿನಲ್ಲಿ ಸವಾಲು ಎದುರಿಸಿ ನಿಂತವನು. ಶ್ರಮದಿಂದ ಬೆಳೆದು ಅಭಿಮಾನಿಗಳ ಪ್ರೀತಿಗಳಿಸಿದ್ದಾನೆ‌. ಸಾರ್ವಜನಿಕ ಜೀವನದಲ್ಲಿ ಇರುವವರು ಮಾದರಿಯಾಗಬೇಕು. ದರ್ಶನ್ ಕಷ್ಟಪಟ್ಟು ಬೆಳೆದ ರೀತಿ ನಿಮಗೆ ಸ್ಪೂರ್ತಿ ಆಗಬೇಕು. ಬರ್ತ್‌ಡೇ ಆಚರಣೆ ಬದಲು ಬಡವರಿಗೆ ಸಹಾಯ ಮಾಡಲು ದರ್ಶನ್ ಕೋರಿದ್ದರು. ಮಕ್ಕಳ ಯಶಸ್ಸು ತಾಯಿಗೆ ಸಂತೋಷ. ಅಭಿಷೇಕ್‌ಗೆ ದರ್ಶನ್ ಗೈಡ್ ಮಾಡ್ತಾನೆ. ಅಭಿ ಜೊತೆ ದರ್ಶನ್ ಇದ್ದಾನೆ, ಇರ್ತಾನೆ. ಎಲೆಕ್ಷನ್ ಟೈಮಲ್ಲಿ ನನ್ನ ಜೊತೆಗಿದ್ದವರು ದರ್ಶನ್, ಯಶ್. ನನ್ನ ಕಷ್ಟಕಾಲದಲ್ಲಿ ಜೊತೆಗೆ ನಿಂತು ಧೈರ್ಯ ತುಂಬಿದರು. ಅಂಬರೀಶ್ ಇದ್ದಾಗ ಇದ್ದವರು ಕೊನೆವರೆಗೂ ಜೊತೆಯಲ್ಲಿ ನಿಂತಿಲ್ಲ. ಅವರಿಂದ ಸಹಾಯದ ನಿರೀಕ್ಷೆಯನ್ನು ನಾವು ಮಾಡಲ್ಲ ಎಂದು ನುಡಿದಿದ್ದಾರೆ.

    ನಡೆದು ಬಂದ ದಾರಿ ಯಾವತ್ತೂ ಮರೆಯಬಾರದು. ಅದು ದರ್ಶನ್‌ಗೆ ಇದೆ. ಆ ಕಾರಣಕ್ಕಾಗಿ ಇಷ್ಟು ಎತ್ತರಕ್ಕೆ ಬೆಳೆದಿದ್ದಾನೆ. ಅಭಿ ಅಥವಾ ಸಚ್ಚಿಗೆ ಟಿಕೆಟ್ ಕೇಳ್ತೀರಾ ಅಂದ್ರೆ. ನಾನು ಸಚ್ಚಿದಾನಂದಗೆ ಟಿಕೆಟ್ ಕೇಳ್ತೀನಿ. ಸಚ್ಚಿ ನನ್ನ ಪರ ಎಲೆಕ್ಷನ್ ಮಾಡಿದ್ದಾನೆ. ನನ್ನ ಪರ ನಿಂತವರನ್ನ, ನಾವು ನಡೆದು ಬಂದ ದಾರಿ ಯಾವತ್ತು ಮರೆಯಬಾರದು‌. ಆ ಗುಣ ದರ್ಶನ್‌ನಲ್ಲಿದೆ. ಎಲ್ಲರನ್ನು ಜೊತೆಗೂಡಿಸಿಕೊಂಡು ಬೆಳೆಸುವ ಗುಣ ದರ್ಶನ್‌ಗೆ ಇದೆ. ಅಂಬರೀಶ್ ಅವರಲ್ಲಿ ಬಿಟ್ಟರೆ ಆ ಗುಣ ಕಂಡದ್ದು ದರ್ಶನ್‌ನಲ್ಲಿ ಮಾತ್ರ. ನನ್ನ ಜೊತೆ ಅಂಬರೀಶ್ ಇದ್ದಾರೆ. ನನ್ನ ಹಿಂದೆ ನನ್ನ ಮಕ್ಕಳಿದ್ದಾರೆ. 5 ವರ್ಷ ನಿಮ್ಮ‌ ಪ್ರೀತಿಗಳಿಸಿದ್ದೇನೆ ಎಂದು ಜನರ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

  • ಡಿಬಾಸ್‌ಗೆ ಮೈಸೂರು ಪೇಟ ತೊಡಿಸಿ ಸನ್ಮಾನ

    ಡಿಬಾಸ್‌ಗೆ ಮೈಸೂರು ಪೇಟ ತೊಡಿಸಿ ಸನ್ಮಾನ

    – ನಟ ದರ್ಶನ್‌ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗಿ 25 ವಸಂತ
    – ಶ್ರೀರಂಗಪಟ್ಟಣದಲ್ಲಿ ಬೆಳ್ಳಿ ಪರ್ವ ಡಿ-25 ಅದ್ಧೂರಿ ಕಾರ್ಯಕ್ರಮ

    ಚಾಲೆಂಜಿಂಗ್‌ ಸ್ಟಾರ್‌ ನಟ ದರ್ಶನ್‌ (Darshan) ಅವರು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟು ಇಲ್ಲಿಗೆ 25 ವಸಂತ ತುಂಬಿದೆ. ಈ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಬೆಳ್ಳಿ ಪರ್ವ D-25 (Belli Parva D-25) ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿದೆ.

    ಸಂಗೀತ ನಿರ್ದೇಶಕ ಹರಿಕೃಷ್ಣ ತಂಡದಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟಿತು. ದರ್ಶನ್‌ ನಟಿಸಿರುವ ಚಿತ್ರಗಳ ಗೀತೆಗಳಿಗೆ ನೃತ್ಯ ಕಲಾವಿದರು ಹೆಜ್ಜೆ ಹಾಕಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿ ಜರ್ನಿಯ 25 ವಸಂತಗಳು ಒಂದೇ ವೇದಿಕೆಯಲ್ಲಿ ರಿವೀಲ್ ಆಯಿತು. ಸಮಾರಂಭದಲ್ಲಿ ತಾರಾ ಬಳಗವೇ ಭಾಗಿಯಾಗಿತ್ತು. ಅಲ್ಲದೇ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಹ ಪಾಲ್ಗೊಂಡಿದ್ದರು. ಇದನ್ನೂ ಓದಿ: ಜಗ್ಗೇಶ್ ಹುಲಿ ಉಗುರು ಕೇಸ್ ನಲ್ಲಿ ಸಹಾಯಕ್ಕೆ ಬಂದಿದ್ದು ಡಿಕೆಶಿ

    ರಂಗನಾಥಸ್ವಾಮಿ ದೇವಾಲಯದ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಡಿ ಬಾಸ್‌ಗೆ ಅಭಿನಂದನೆ ಸಲ್ಲಿಸುವುದನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಅಭಿಮಾನಿಗಳ ಆಗಮಿಸಿದ್ದರು. ಇಂಡವಾಳು ಸಚ್ಚಿದಾನಂದರು ಕಾರ್ಯಕ್ರಮ‌ ಆಯೋಜಿಸಿದ್ದಾರೆ.

    ಬೆಳ್ಳಿ ಪರ್ವ ಡಿ-25 ಕಾರ್ಯಕ್ರಮಕ್ಕೆ ಆಗಮಿಸಿದ ದರ್ಶನ್‌ ಮೊದಲಿಗೆ ಸುತ್ತೂರು ಶ್ರೀಗಳ ಪಾದ ಮುಟ್ಟಿ ಆಶೀರ್ವಾದ ಪಡೆದರು. ದಾಸ ಎಂಟ್ರಿಯಾಗ್ತಿದ್ದಂತೆ ಅಭಿಮಾನಿಗಳಿಂದ ಜೈಕಾರದ ಸುರಿಮಳೆ ಸುರಿಸಿದರು. ಪಟಾಕಿಗಳು ಸಿಡಿಸಲಾಯಿತು. ಶಿಳ್ಳೆ, ಚಪ್ಪಾಳೆ ಮೂಲಕ ದರ್ಶನ್‌ಗೆ ಗ್ರ್ಯಾಂಡ್ ವೆಲ್‌ಕಮ್ ಕೋರಲಾಯಿತು. ಇದನ್ನೂ ಓದಿ: ‘ಸಿಂಧೂರ ಲಕ್ಷ್ಮಣ’ನಿಗೆ ನಿರ್ಮಾಪಕ ಯಾರು?: ದರ್ಶನ್ ಚಿತ್ರದ ಬಗ್ಗೆ ಚರ್ಚೆ

    ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಪೂರೈಸಿದ ದರ್ಶನ್‌ಗೆ ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ಸುತ್ತೂರು ಶ್ರೀಗಳು ಅಭಿನಂದಿಸಿದರು. ಚಾಮುಂಡೇಶ್ವರಿ ವಿಗ್ರಹ ನೀಡಿ ಹರಸಿದರು. ರಜತ ಮಹೋತ್ಸವದಂತೆ ಸುವರ್ಣ ಮಹೋತ್ಸವ ಪೂರೈಸಲಿ ಎಂದು ಹಾರೈಸಿದರು.

    ಡಿ-25 ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಮಾತನಾಡಿ, ಕಲಾಕ್ಷೇತ್ರಕ್ಕೆ ಕಲಾವಿದರ ಕೊಡುಗೆ ಅಪಾರ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಮನೆ ಮಾತಾಗಿದ್ದರು. ಮೇರು ಕಲಾವಿದ ದರ್ಶನ್ ಮೈಸೂರಿನಲ್ಲಿ ಹುಟ್ಟಿ ಬೆಳೆದಿದ್ದಾರೆ. ಅದು ಸಂತೋಷ ತಂದಿದೆ. ಸುವರ್ಣ ಮಹೋತ್ಸವ ಕೂಡ ಆಚರಿಸಿ ದರ್ಶನ್. ಭಗವಂತನ ಆಶೀರ್ವಾದ ಅವರ ಮೇಲೆ ಇರಲಿ ಎಂದ ಶ್ರೀಗಳು ಹರಸಿದರು. ಇದನ್ನೂ ಓದಿ: ದರ್ಶನ್ ಚಿತ್ರಜೀವನದ ಬೆಳ್ಳಿ ಹಬ್ಬ: ಶ್ರೀರಂಗಪಟ್ಟಣದತ್ತ ಸೆಲೆಬ್ರಿಟಿಗಳು

    ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಮಾತನಾಡಿ, ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಕಲೆಗೆ ಸಾಕಷ್ಟು ಶಕ್ತಿ ಇದೆ. ದರ್ಶನ್ ಕಲೆಗಾಗಿ ತಮ್ಮ ಬದುಕನ್ನ ಅರ್ಪಿಸಿದ್ದಾರೆ. ಸಾಧನೆ ಮೂಲಕ ಎತ್ತರ ಏರಬಹುದು. ಆದರೆ ಯಶಸ್ಸು ಉಳಿಸಿಕೊಳ್ಳುವುದು ಕಷ್ಟ. ಅಭಿಮಾನಿಗಳ ಆಶೀರ್ವಾದ ನಿಮ್ಮ ಮೇಲಿದೆ ಎಂದು ನುಡಿದರು.

  • ನಾವು ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ – ಕಾವೇರಿ ಹೋರಾಟದ ಬಗ್ಗೆ ಮೌನ ಮುರಿದ ನಟ ದರ್ಶನ್

    ನಾವು ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ – ಕಾವೇರಿ ಹೋರಾಟದ ಬಗ್ಗೆ ಮೌನ ಮುರಿದ ನಟ ದರ್ಶನ್

    ಮೈಸೂರು: ಕಾವೇರಿ (Cauvery) ಹೋರಾಟಕ್ಕೆ ಕನ್ನಡ ನಟರು ಸಕ್ರಿಯರಾಗಿ ಬರುತ್ತಿಲ್ಲ ಎಂಬ ಕೂಗಿಗೆ ನಟ ದರ್ಶನ್ (Darshan) ಗರಂ ಆಗಿದ್ದಾರೆ.

    ಮೈಸೂರು (Mysuru) ಜಿಲ್ಲೆಯ ಬನ್ನೂರಿನಲ್ಲಿ ಈ ಬಗ್ಗೆ ಮಾತನಾಡಿರೋ ನಟ ದರ್ಶನ್, ಕಾವೇರಿ ಹೋರಾಟದ ಬಗ್ಗೆ ಮೌನ ಮುರಿದಿದ್ದು ನಟರು ಹೋರಾಟಕ್ಕೆ ಬರುತ್ತಿಲ್ಲ ಎಂಬ ಕೂಗಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ದರ್ಶನ್, ಸುದೀಪ್, ಶಿವಣ್ಣ, ಯಶ್, ಅಭಿ ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯಾದ್ಯಂತ ಏಕಕಾಲಕ್ಕೆ ಜನತಾ ದರ್ಶನ

    ಮೊನ್ನೆ ಬಂದ ತಮಿಳು ಚಿತ್ರದಲ್ಲಿ ಕರ್ನಾಟಕದಲ್ಲೇ ಕೋಟಿ ಕೋಟಿ ಮಾಡಿದವನು ನಿಮಗೆ ಕಾಣ್ತಿಲ್ವ? ಕರ್ನಾಟಕದಲ್ಲೇ ಒಬ್ಬ ವಿತರಕ ತಮಿಳು ಚಿತ್ರದಿಂದ ಕರ್ನಾಟಕದದಲ್ಲೇ 36 ಕೋಟಿ ರೂ. ಮಾಡಿದ. 6 ಕೋಟಿ ಹಾಕಿ 36 ಕೋಟಿ ಮಾಡಿದ. ಅವನಿಗೆ ಯಾಕೆ ನೀವು ಕೇಳಲ್ಲ? ನಾವು ಮಾತ್ರ ನಿಮಗೆ ಕಾಣೋದಾ? ನಿಮಗೆ ಪ್ರಶ್ನೆ ಕೇಳ್ತಾ ಇದ್ದೀನಿ ಹೇಳಿ ಎಂದು ಜನರನ್ನು ದರ್ಶನ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದರ್ಶನ್ 25 ಕೋಟಿ ಲೋನ್ ಕೇಸ್‍ಗೆ ಬಿಗ್ ಟ್ವಿಸ್ಟ್ – ಆರೋಪಿ ಜೊತೆ ನಿರ್ಮಾಪಕ ಉಮಾಪತಿಗೆ ನಂಟು!

    ದರ್ಶನ್ 25 ಕೋಟಿ ಲೋನ್ ಕೇಸ್‍ಗೆ ಬಿಗ್ ಟ್ವಿಸ್ಟ್ – ಆರೋಪಿ ಜೊತೆ ನಿರ್ಮಾಪಕ ಉಮಾಪತಿಗೆ ನಂಟು!

    – ಯಾರಿದ್ರೂ ಬಿಡಲ್ಲ ಅಂತ ದರ್ಶನ್ ವಾರ್ನಿಂಗ್
    – ಮಿತ್ರದ್ರೋಹಿ ಹುಟಕಾಟದಲ್ಲಿ ದರ್ಶನ್!!

    ಬೆಂಗಳೂರು: ನಟ ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನಿಸಿದ ಪ್ರಕರಣ ಪೊಲೀಸರಿಗೆ ಅಷ್ಟೇನೂ ಸವಾಲು ಅನ್ನಿಸಿಲ್ಲ. ಆದರೆ ನಟ ದರ್ಶನ್ ತಮ್ಮ ಆಪ್ತ ವಲಯದಲ್ಲಿರುವ ನಂಬಿಕೆ ದ್ರೋಹಿ ಯಾರು ಅಂತ ಹುಡುಕಾಟ ಶುರು ಮಾಡಿದ್ದಾರೆ. ಮೈಸೂರಿನಲ್ಲಿಂದು ತುರ್ತು ಸುದ್ದಿಗೋಷ್ಠಿ ನಡೆಸಿದ ನಟ ದರ್ಶನ್, ನಿರ್ಮಾಪಕ ಉಮಾಪತಿಯತ್ತ ಬೊಟ್ಟು ಮಾಡಿದ್ದಾರೆ.

    ದರ್ಶನ್ ನಿನ್ನೆ ಏಕಾಏಕಿ ಮೈಸೂರಿನ ಎನ್.ಆರ್. ಉಪವಿಭಾಗ ಪೊಲೀಸ್ ಕಚೇರಿಯಲ್ಲಿ ಕಾಣಿಸಿಕೊಂಡಿದ್ದರು. ದರ್ಶನ್ ಹೆಸರಿನ ಆಸ್ತಿಗೆ ಸಂಬಂಧಪಟ್ಟ ನಕಲಿ ದಾಖಲೆ ಸೃಷ್ಟಿಸಿ 25 ಕೋಟಿ ರೂ. ಬ್ಯಾಂಕ್ ಸಾಲ ಪಡೆಯಲು ಯತ್ನಿಸಲಾಗಿದೆ. 25 ಲಕ್ಷ ರೂ. ಲಂಚ ಕೇಳಿದ್ದಾರೆ ಅಂತೆಲ್ಲ ಆರೋಪ ಕೇಳಿ ಬಂದಿದ್ದವು. ಈ ಸಂಬಂಧ ಮೈಸೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಅಲ್ಲದೆ ನಿನ್ನೆ ಪೊಲೀಸರು ಆರೋಪಿ ಅರುಣಾ ಕುಮಾರಿಯ ಹೇಳಿಕೆ ದಾಖಲಿಸಿಕೊಂಡಿದ್ದರು. ಇಂದು ಸಿಆರ್ ಪಿಸಿ 41/ಎ ಅನ್ವಯ ನೋಟಿಸ್ ನೀಡಿ ಬಿಟ್ಟು ಕಳುಹಿಸಿದ್ದಾರೆ.

    ಹರ್ಷ-ಅರುಣಾ ಕುಮಾರಿ ಭೇಟಿ:
    ಯಾವುದೇ ಸಂದರ್ಭದಲ್ಲಿ ಪ್ರಕರಣದ ತನಿಖೆಗೆ ಬರಬೇಕು. ಸಾಕ್ಷ್ಯನಾಶ ಮಾಡಬಾರದು ಅಂತೆಲ್ಲ ಷರತ್ತು ವಿಧಿಸಲಾಗಿದೆ. ಆರೋಪಿ ಅರುಣಾ ಕುಮಾರಿ ಮತ್ತು ದೂರುದಾರ ಹರ್ಷ ಮೆಲಂಟಾ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಹೋಟೆಲ್ ನಲ್ಲಿ ಭೇಟಿಯಾಗಿದ್ದರು. ಅದಕ್ಕೆ ಸಂಬಂಧಪಟ್ಟ ಸಿಸಿ ಕ್ಯಾಮೆರಾ ಫೋಟೇಜ್ ಗಳನ್ನು ವಶಪಡಿಸಿಕೊಂಡಿದ್ದಾರೆ.

    ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ನಟ ದರ್ಶನ್ ಸುದ್ದಿಗೋಷ್ಠಿ ನಡೆಸಿ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಸುಮಾರು ಒಂದು ಗಂಟೆಯಷ್ಟು ಸುದೀರ್ಘವಾಗಿ ಮಾತನಾಡಿದ ದರ್ಶನ್, ನಿರ್ಮಾಪಕ ಉಮಾಪತಿ ಗೌಡ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ಸಂಬಂಧಿ ಧೀರಜ್ ಪ್ರಸಾದ್ ಭಾಗವಹಿಸಿದ್ದು ಅಚ್ಚರಿ ಮೂಡಿಸಿತ್ತು. ಉಳಿದಂತೆ ಸ್ನೇಹಿತರಾದ ನಾಗರಾಜ್, ಶರ್ಮಾ, ರಾಕೇಶ್ ಪಾಪಣ್ಣ, ಹರ್ಷ ಮೆಲಂಟಾ ಹಾಜರಿದ್ದರು.

    ಒಂದಲ್ಲ, ಎರಡಲ್ಲ 25 ಕೋಟಿ:
    ಇದೆಲ್ಲವೂ ಶುರುವಾಗಿದ್ದು ಏಪ್ರಿಲ್ 9ರಂದು. ನಿರ್ಮಾಪಕ ಉಮಾಪತಿ ಕರೆ ಮಾಡಿ, ಹರ್ಷ ಮೆಲಂಟಾ ಬ್ಯಾಂಕ್ ಲೋನ್‍ಗೆ ಅಪ್ಲೈ ಮಾಡಿದ್ದಾರೆ. ನಿಮ್ಮ ಆಸ್ತಿ ದಾಖಲೆಗಳ ಶ್ಯೂರಿಟಿ ಕೊಟ್ಟಿದ್ದಾರೆ ಅಂತ ತಿಳಿಸಿದ್ರು. ಒಂದಲ್ಲ, ಎರಡಲ್ಲ 25 ಕೋಟಿ ರೂ. ವ್ಯವಹಾರ ಅನ್ನುತ್ತಿದ್ದಂತೆಯೇ ನಾನು ಅಲರ್ಟ್ ಆದೆ. ನಾವೆಲ್ಲರೂ ಸ್ನೇಹಿತರು. ಯಾರ ಮೇಲೆ ಅನುಮಾನ ಪಡಬೇಕು ಅಂತಾನೇ ಗೊತ್ತಾಗುತ್ತಿಲ್ಲ ಎಂದು ದರ್ಶನ್ ಹೇಳಿದ್ದಾರೆ.

    ಇನ್ನು ಸುದ್ದಿಗೋಷ್ಠಿ ಉದ್ದಕ್ಕೂ ನಿರ್ಮಾಪಕ ಉಮಾಪತಿ ನಡೆಯ ಬಗ್ಗೆ ದರ್ಶನ್ ಅನುಮಾನ ವ್ಯಕ್ತಪಡಿಸಿದ್ರು. ಅದಕ್ಕೆ ಪೂರಕವಾದ ಒಂದಷ್ಟು ವಾಟ್ಸಪ್ ಚಾಟ್ ಸ್ಕ್ರೀನ್ ಶಾಟ್, ಹರ್ಷ ಮೆಲಂಟಾ ಅವರೊಂದಿಗೆ ಅರುಣಾ ಕುಮಾರಿ ಮಾತನಾಡಿರುವ ಫೋನ್ ಕಾಲ್ ಆಡಿಯೋ, ಅರುಣಾಕುಮಾರಿ ಕಳುಹಿಸಿರುವ ತಮಗೆ ಕಳುಹಿಸಿದ ವಾಯ್ಸ್ ಮೆಸೇಜ್ ಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ರು.

    ವಾಟ್ಸಪ್ ಚಾಟ್, ಆಡಿಯೋ ವೈರಲ್:
    ಇನ್ನು ವಂಚನೆ ಯತ್ನ ಕಥೆಯೊಳಗಿನ ಮತ್ತೊಂದು ಉಪಕತೆಯನ್ನೂ ದರ್ಶನ್ ಜಗಜ್ಜಾಹೀರು ಮಾಡಿದ್ರು. ಆರೋಪಿ ಅರುಣಾಕುಮಾರಿ ತನ್ನ ಪುತ್ರನೊಂದಿಗೆ ಈಗ ಬೆಂಗಳೂರಿನಲ್ಲಿದ್ದಾಳೆ. ಗಂಡನಿಂದ ದೂರವಾಗಿ ಆರೇಳು ವರ್ಷಗಳಾಗಿವೆ. ಇನ್ನು ಅಚ್ಚರಿಯ ವಿಚಾರ ಏನಂದ್ರೆ, ಆಕೆಯ ಗಂಡ ಕುಮಾರ್ ಪ್ರಕರಣದ ದೂರುದಾರ ಹರ್ಷ ಮೆಲಂಟಾ ಮಾಲೀಕತ್ವದ ಹೋಟೆಲ್‍ನಲ್ಲೇ ಕೆಲಸ ಮಾಡುತ್ತಿದ್ದಾರೆ. ಸುದ್ದಿಗೋಷ್ಠಿ ಮಧ್ಯ ಮಾತನಾಡಿದ ಕುಮಾರ್, ನನ್ನ ಹೆಂಡತಿಯಾಗಿದ್ದ ಅರುಣಕುಮಾರಿ ಓದಿರೋದೇ ಪಿಯುಸಿ. ಅದ್ಹೇಗೆ ಬ್ಯಾಂಕ್ ಮ್ಯಾನೇಜರ್ ಆದ್ಲೋ ಗೊತ್ತಿಲ್ಲ ಅಂತ ಮುಗ್ಧತೆ ತೋರಿಸಿದರು. ಇದೆಲ್ಲದರ ನಡುವೆ ಉಮಾಪತಿ ಮಹಿಳೆಯೊಂದಿಗೆ ಮಾಡಿರುವ ವಾಟ್ಸಪ್ ಚಾಟ್, ಆಡಿಯೋ, ಅರುಣಾ ಕುಮಾರಿ ದರ್ಶನ್ ತೋಟಕ್ಕೆ ಹೋದ ದೃಶ್ಯ ಎಲ್ಲವು ವೈರಲ್ ಆಗಿದೆ. ಇದನ್ನೂ ಓದಿ: ನಾನು ತಪ್ಪು ಮಾಡಿಲ್ಲ, ಇನ್ನೊಬ್ಬರ ಭಿಕ್ಷೆಯಲ್ಲಿ ಬದುಕಬೇಕಿಲ್ಲ: ಉಮಾಪತಿ

    ಉಮಾಪತಿ ಸುತ್ತ ಅನುಮಾನದ ಹುತ್ತ:
    ಒಟ್ಟಾರೆ, ಇಡೀ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ನಡೆಯ ಸುತ್ತಲೂ ಅನುಮಾನದ ಹುತ್ತ ಬೆಳೆಯುತ್ತಲೇ ಇದೆ. ಈಗ ಚಂಡು ಉಮಾಪತಿ ಅಂಗಳದಲ್ಲಿದ್ದು, ಉಮಾಪತಿ ಇನ್ನೆರಡು ದಿನಗಳಲ್ಲಿ ಸಾಬೀತುಪಡಿಸುತ್ತೇನೆ ಎಂದಿದ್ದಾರೆ. ಸದ್ಯ ಪೊಲೀಸ್ ತನಿಖೆಗೆ ಅಷ್ಟೇನೂ ಸವಾಲು ಅನ್ನಿಸದೇ ಇರುವ ಈ ಪ್ರಕರಣದಲ್ಲಿ, ದರ್ಶನ್ ತೋರುತ್ತಿರುವ ಆಸಕ್ತಿ ಹಾಗೂ ಉಮಾಪತಿಯ ಹೇಳಿಕೆ ಎಲ್ಲವು ಸಾಕಷ್ಟು ಗೊಂದಲ ಉಂಟುಮಾಡುತ್ತಿರೋದಂತು ಸುಳ್ಳಲ್ಲ. ಇದನ್ನೂ ಓದಿ:  ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ – ಗುಡುಗಿದ ದರ್ಶನ್

  • ಲೋನ್ ಪಡೆಯಲು ಶ್ಯೂರಿಟಿ ಹಾಕಿ ಅಂದ್ರು, ದಾಖಲೆಗಳೇ ಇರಲಿಲ್ಲ: ಉಮಾಪತಿ

    ಲೋನ್ ಪಡೆಯಲು ಶ್ಯೂರಿಟಿ ಹಾಕಿ ಅಂದ್ರು, ದಾಖಲೆಗಳೇ ಇರಲಿಲ್ಲ: ಉಮಾಪತಿ

    ಬೆಂಗಳೂರು: ಲೋನ್ ಪಡೆಯಲು ಶ್ಯೂರಿಟಿ ಹಾಕುವಂತೆ ಕೇಳಿದ್ದರು. ಆದರೆ ಅವರ ಬಳಿ ಆಸ್ತಿಯ ಕುರಿತು ಯಾವುದೇ ಓರಿಜಿನಲ್ ದಾಖಲೆಗಳು ಇರಲಿಲ್ಲ. ಹೀಗಾಗಿ ಇದು ಫೇಕ್ ಎಂದು ತಿಳಿದು ದೂರು ನೀಡಿದೆವು ಎಂದು ನಿರ್ಮಾಪಕ ಉಮಾಪತಿಯವರು ತಿಳಿಸಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ 25 ಕೋಟಿ ರೂ. ವಂಚನೆ ಪ್ರಕರಣದ ಕುರಿತು ತೀವ್ರ ಚರ್ಚೆ ನಡೆಯುತ್ತಿದ್ದು, ಈ ಕುರಿತು ನಿರ್ಮಾಪಕ ಉಮಾಪತಿ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.

    ಹರ್ಷ ಅವರು ಲೋನ್‍ಗೆ ಅಪ್ಲೈ ಮಾಡಿದ್ದರು, ಶ್ಯೂರಿಟಿ ಹಾಕುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಾನಗೆ ಫೋನ್ ಕರೆ ಬಂದಿತ್ತು. ಇದಾದ ಬಳಿಕ ದರ್ಶನ್ ಅವರು ಹಾಗೂ ನಾನು ಮಾತನಾಡಿಕೊಂಡು ಬಳಿಕ ಡಾಕ್ಯೂಮೆಂಟ್ ವೆರಿಫಿಕೇಶನ್‍ಗೆ ಕರೆಯುತ್ತೇವೆ. ಆಗ ಅವರ ಬಳಿ ಸಂಪೂರ್ಣವಾದ ದಾಖಲೆ ಇಲ್ಲದಿರುವುದು ಹಾಗೂ ಫೇಕ್ ಎನ್ನುವುದು ತಿಳಿಯುತ್ತದೆ. ಇದನ್ನೂ ಓದಿ: ನನಗೆ ಸ್ವಲ್ಪ ಸಮಯ ಕೊಡಿ, ಸತ್ಯ ಹೊರಗೆ ಬರಲಿದೆ: ದರ್ಶನ್

    ಬಳಿಕ ದರ್ಶನ್ ಅವರು ಹಾಗೂ ನಾನು ನಮ್ಮ ಆಫೀಸ್‍ನಲ್ಲಿ ಕುಳಿತು ಮಾತನಾಡಿ, ಬಳಿಕ ನಮ್ಮ ಆಫೀಸ್ ವ್ಯಾಪ್ತಿಯಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತೇವೆ. ಆದರೆ ಈ ಆಸ್ತಿ ಮೈಸೂರು ವ್ಯಾಪ್ತಿಗೆ ಬರುತ್ತವೆ ಎಂದು ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತದೆ. ಬಳಿಕ ತನಿಖೆ ಆರಂಭವಾಗುತ್ತದೆ, ಕೆಲ ಮಾಹಿತಿ ಬೇಕೆಂದು ನನ್ನನ್ನು, ದರ್ಶನ್ ಅವರನ್ನು ಹಾಗೂ ಹರ್ಷ ಅವರನ್ನು ಕರೆದಿದ್ದರು. ಬಳಿಕ ನಾವು ಪೊಲೀಸರಿಗೆ ಮಾಹಿತಿ ನೀಡಿ ಬಂದಿದ್ದೇವೆ ಎಂದು ವಿವರಿಸಿದರು.

    ಯಾವ ಆಸ್ತಿ, ಅದರ ಆಧಾರದ ಕುರಿತು ಯಾವುದೇ ಒರಿಜಿನಲ್ ಡಾಕ್ಯೂಮೆಂಟ್ ಇಲ್ಲ. ಅಲ್ಲದೆ ದರ್ಶನ್ ಅವರಿಗೆ ಸಂಬಂಧಿಸಿದ ದಾಖಲೆಗಳು ಸಹ ಇಲ್ಲ. ಆದರೆ ಯಾವುದೋ ವಿವರ ಬರೆದು ಹಾಕಿದ್ದಾರೆ. ಆಸ್ತಿ ದಾಖಲೆ ಯಾವುದೂ ಇಲ್ಲ ಎಂದಿದ್ದಾರೆ. ಒಟ್ಟು 25 ಕೋಟಿ ರೂ. ಲೋನ್ ಗೆ ಅಪ್ಲೈ ಮಾಡಿ ಶ್ಯೂರಿಟಿ ಹಾಕಲು ನಮ್ಮ ಬಳಿ ಬಂದಿದ್ದರು. ಆದರೆ ಆಸ್ತಿಯ ಯಾವುದೇ ದಾಖಲೆ ಇವರ ಬಳಿ ಇರಲಿಲ್ಲ. ಯಾಕೆ ಹೀಗೆ ಮಾಡಿದರು ಎಂಬುದನ್ನು ತಿಳಿದುಕೊಳ್ಳಲು ದೂರು ನಿಡಿದ್ದೇವೆ. ಇನ್ನೂ ಸರಿಯಾದ ಮಾಹಿತಿಯನ್ನು ಬಾಯ್ಬಿಡುತ್ತಿಲ್ಲ ಎಂದು ತಿಳಿಸಿದ್ದಾರೆ.

    ಪರಿಚಯ ಹೇಗಾಯ್ತು?
    ಅರುಣಾ ಕುಮಾರಿ ಅವರು ಏಪ್ರಿಲ್‍ನಿಂದ ನನಗೆ ಪರಿಚಯವಾಗಿದ್ದರು. ಲೋನ್ ವಿಚಾರವಾಗಿ ನನ್ನ ಬಳಿ ಮಾತನಾಡುತ್ತಿದ್ದರು. ಮೇನಲ್ಲಿ ಈ ಘಟನೆ ನಡೆದಿದೆ, ಜೂನ್‍ನಲ್ಲಿ ದರ್ಶನ್ ಅವರಿಗೆ ಮಾಹಿತಿ ನೀಡಿ, ಇದೀಗ ದೂರು ನೀಡಿದ್ದೇವೆ. ಪರಿಚಯವಾದ ನಂತರ ಲೋನ್ ಬಗ್ಗೆ ಮಾತನಾಡಿದ್ದರು, ಬಳಿಕ ಫೆಸ್ಬುಕ್‍ನಲ್ಲಿ ಅರುಣಾ ಕುಮಾರಿ ಪರಿಚಯವಾಗಿದ್ದರು. ಮ್ಯಾನೇಜರ್ ಎಂದೇ ಪರಿಚಯ ಮಾಡಿಕೊಂಡಿದ್ದರು. ನಮ್ಮಲ್ಲಿ ಪ್ರಾಪರ್ಟಿ ಸೀಜ್ ಆಗುತ್ತಿರುತ್ತದೆ, ತೆಗೆದುಕೊಳ್ಳಲು ಆಸಕ್ತಿ ಇದ್ದರೆ ನಿಮಗೆ ಕೊಡುತ್ತೇನೆ ಎಂದಿದ್ದರು.

    ಇದಾದ ಬಳಿಕ ಲೋನ್ ವಿಚಾರದಲ್ಲಿ ದರ್ಶನ್ ಸರ್ ಹಾಗೂ ನಿಮ್ಮ ಹೆಸರು ಬರುತ್ತಿದೆ, ನೀವು ಲೋನ್‍ಗೆ ಅಪ್ಲೈ ಮಾಡುತ್ತಿದ್ದಿರಂತೆ ಎಂದು ಕೇಳಿದರು. ಆಗ ಇಲ್ಲ ನಾವು ಯಾವುದೇ ಲೋನ್‍ಗೆ ಅಪ್ಲೈ ಮಾಡುತ್ತಿಲ್ಲ. ಶ್ಯೂರಿಟಿನೂ ಹಾಕುತ್ತಿಲ್ಲ ಎಂದು ಹೇಳಿದೆ ಎಂದು ಉಮಾಪತಿಯವರು ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದಾರೆ.

  • ದರ್ಶನ್ ಬರೋದನ್ನ ನಾನು ಕಾತುರದಿಂದ ಕಾಯುತ್ತಿದ್ದೇನೆ: ಮುನಿರತ್ನ

    ದರ್ಶನ್ ಬರೋದನ್ನ ನಾನು ಕಾತುರದಿಂದ ಕಾಯುತ್ತಿದ್ದೇನೆ: ಮುನಿರತ್ನ

    ಬೆಂಗಳೂರು: ಆರ್.ಆರ್.ನಗರದಲ್ಲಿ ಇಂದು ನಟ ದರ್ಶನ್ ಅವರೊಂದಿಗೆ ಇಡೀ ದಿನ ಪ್ರಚಾರ ಮಾಡುತ್ತೇವೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ತಿಳಿಸಿದ್ದಾರೆ.

    ಇಂದಿನ ಪ್ರಚಾರದ ಕುರಿತು ಮಾತನಾಡಿದ ಮುನಿರತ್ನ ಅವರು, ಮೊದಲು ರಾಜರಾಜೇಶ್ವರಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸುತ್ತೇನೆ. ಬಳಿಕ ನಾನು ದರ್ಶನ್ ಮನೆಗೆ ತೆರಳಿ ಒಟ್ಟಿಗೆ ಪ್ರಚಾರಕ್ಕೆ ಹೊರಡುತ್ತೇವೆ. ದರ್ಶನ್ ಕ್ರೇಜ್ ಎಷ್ಟಿದೆ ಅಂತ ಎಲ್ಲರಿಗೂ ಗೊತ್ತು. ಹಿಂದೆ ದರ್ಶನ್, ಯಶ್, ಸುದೀಪ್, ರಮ್ಯಾ ಎಲ್ಲರೂ ನನ್ನ ಪರ ಪ್ರಚಾರ ಮಾಡಿದ್ದರು. ನಾನು ಸಿನಿಮಾದವನು ಆಗಿರುವುದರಿಂದ ಅವ್ರೆಲ್ಲ ಬಂದು ಪ್ರಚಾರ ಮಾಡಿದ್ದರು ಎಂದರು.

    ಇದೇ ವೇಳೆ ಪ್ರಚಾರದಲ್ಲಿ ಸಚಿವ ಬಿಸಿ ಪಾಟೀಲ್, ಅಮೂಲ್ಯ ಪ್ರಚಾರಕ್ಕೆ ಬರುತ್ತಾರೆ ಎಂದು ತಿಳಿಸಿದ ಮುನಿರತ್ನ ಅವರು, ದರ್ಶನ್ ಬರೋದನ್ನ ನಾನು ಕಾತುರದಿಂದ ಕಾಯುತ್ತಿದ್ದೇನೆ ಎಂದರು. ಬೆಳಗ್ಗೆ 10.30 ರಿಂದ ಸಂಜೆಯ ವರೆಗೂ ದರ್ಶನ್ ನಮ್ಮೊಂದಿಗೆ ಇರುತ್ತಾರೆ. ಈ ಬಗ್ಗೆ ನಾನು ಹೇಳುವುದಕ್ಕಿಂತ ನೀವೇ ನೋಡುತ್ತೀರಿ ಎಂದು ತಿಳಿಸಿದರು.

  • ಸುಮಲತಾ ಹುಟ್ಟಹಬ್ಬ- ಅಂಬರೀಶ್ ಸಮಾಧಿಗೆ ಪೂಜೆ

    ಸುಮಲತಾ ಹುಟ್ಟಹಬ್ಬ- ಅಂಬರೀಶ್ ಸಮಾಧಿಗೆ ಪೂಜೆ

    ಬೆಂಗಳೂರು: ಸಂಸದೆ ಸುಮಲತಾ ಅಂಬರೀಶ್ ಅವರು ಇಂದು 57ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಹುಟ್ಟಹಬ್ಬದ ಹಿನ್ನೆಲೆಯಲ್ಲಿ ಪತಿ ಅಂಬರೀಶ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.

    ಕಂಠೀರವ ಸ್ಟುಡಿಯೊ ಆವರಣದಲ್ಲಿರುವ ಅಂಬರೀಶ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ ಅವರು ಬಳಿಕ ಮಂಡ್ಯಗೆ ತೆರಳಿದರು. ಈ ವೇಳೆ ಸುಮಲತಾ ಅವರಿಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸಾಥ್ ನೀಡಿದರು. ಮಂಡ್ಯ ಕ್ಷೇತ್ರ ಜನತೆಯೊಂದಿಗೆ ಸುಮಲತಾ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

    ಇತ್ತ ಸುಮಲತಾ ಅವರ ಪುತ್ರ ಅಭಿಷೇಕ್ ಅವರು ತಮ್ಮ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿದ್ದು, ಅಮ್ಮನ ಕೈಯಿಂದ ಕೇಕ್ ಕತ್ತರಿಸುವ ಮೂಲಕ ಹುಟ್ಟಹಬ್ಬ ಆಚರಿಸಿದ ವಿಡಿಯೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಲದೇ ವಿಶ್ವದಲ್ಲೇ ನೀವು ಬೆಸ್ಟ್ ಅಮ್ಮ ಆಗಿದ್ದಕ್ಕೆ ಧನ್ಯವಾದ ಎಂದು ಅಭಿಷೇಕ್ ಹೇಳಿದ್ದಾರೆ.

    ನಟ ದರ್ಶನ್ ಅವರು ಕೂಡ ಸುಮಲತಾ ಅವರಿಗೆ ಹುಟ್ಟಹಬ್ಬದ ಶುಭಾಶಯ ತಿಳಿಸಿದ್ದು. ಮದರ್ ಇಂಡಿಯಾ ಸುಮಲತಾ ಅಮ್ಮರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯ ಎಂದು ತಿಳಿಸಿದ್ದಾರೆ. ಸುಮಲತಾ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸೇರಿದಂತೆ ಹಲವು ರಾಜಕೀಯ ನಾಯಕರು, ನಟ-ನಟಿಯರು ಕೂಡ ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ್ದಾರೆ.

  • ತೂಗುದೀಪ ಫಾರ್ಮ್ ಹೌಸ್‍ನಲ್ಲಿ ‘ಸಾರಥಿ’ಯ ಎತ್ತಿನ ಬಂಡಿ ಸವಾರಿ

    ತೂಗುದೀಪ ಫಾರ್ಮ್ ಹೌಸ್‍ನಲ್ಲಿ ‘ಸಾರಥಿ’ಯ ಎತ್ತಿನ ಬಂಡಿ ಸವಾರಿ

    ಮೈಸೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್ ಇಲ್ಲದ ಕಾರಣ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ತೂಗುದೀಪ  ಫಾರ್ಮ್ ಹೌಸ್‍ನಲ್ಲಿ ವಿರಾಮದ ಸಮಯ ಕಳೆಯುತ್ತಿದ್ದಾರೆ. ಸದ್ಯ ಫಾರ್ಮ್ ಹೌಸ್‍ನಲ್ಲಿ ದರ್ಶನ್ ಎತ್ತಿನ ಬಂಡಿ ಸವಾರಿ ಮಾಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.

    ವಿಡಿಯೋದಲ್ಲಿ ದರ್ಶನ್ ತಮ್ಮ ಆಪ್ತರೊಂದಿಗೆ ಎತ್ತಿನ ಬಂಡಿ ಸವಾರಿ ಮಾಡಿರುವುದನ್ನು ಕಾಣಬಹುದುದಾಗಿದೆ. ಅಲ್ಲದೇ ಸವಾರಿಯ ಬಳಿಕ ಎತ್ತುಗಳು ಮಸ್ತ್ ಆಗಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಇತ್ತೀಚೆಗಷ್ಟೇ ಧಾರವಾಡಕ್ಕೆ ಭೇಟಿ ನೀಡಿದ್ದ ನಟ ದರ್ಶನ್, ಮಾಜಿ ಸಚಿವ ವಿನಯ ಕುಲಕರ್ಣಿ ಹಾಲಿನ ಡೈರಿಗೆ ಭೇಟಿ ನೀಡಿದ್ದರು. ಅಲ್ಲದೇ ಅಲ್ಲಿ ಚಕ್ಕಡಿ ಸವಾರಿ ಮಾಡಿದ್ದರು. ಹಲವು ವರ್ಷಗಳಿಂದ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ದರ್ಶನ್ ಸ್ನೇಹರಾಗಿದ್ದು, ಈ ಹಿನ್ನೆಲೆಯಲ್ಲಿ ಆಗಾಗ ದರ್ಶನ್ ಇಲ್ಲಿಗೆ ಭೇಟಿ ನೀಡುತ್ತಾರೆ. ಧಾರವಾಡ ನಗರದ ಹೊರ ವಲಯದಲ್ಲಿ ವಿನಯ ಕುಲಕರ್ಣಿ ಅವರ ಡೈರಿ ಇದೆ. ದರ್ಶನ್ ತಮ್ಮ ಭೇಟಿ ವೇಳೆ ವಿನಯ ಡೈರಿಯಿಂದ ಅವರು ಹಸು, ಮೇಕೆಗಳನ್ನು ಖರೀದಿ ಮಾಡಲು ಆಗಮಿಸಿರುವುದಾಗಿ ತಿಳಿಸಿದ್ದರು.

  • ಅಂತರಾಷ್ಟ್ರೀಯ ಆನೆ ದಿನಕ್ಕೆ ಗಜ ವಿಶೇಷ ಪೋಸ್ಟ್

    ಅಂತರಾಷ್ಟ್ರೀಯ ಆನೆ ದಿನಕ್ಕೆ ಗಜ ವಿಶೇಷ ಪೋಸ್ಟ್

    ಬೆಂಗಳೂರು: ಪ್ರಾಣಿ, ಪಕ್ಷಿ ಸೇರಿದಂತೆ ವನ್ಯ ಜೀವಿಗಳನ್ನು ಹೆಚ್ಚು ಪ್ರೀತಿಸುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಆನೆಗಳೆಂದರೆ ಇನ್ನೂ ಹೆಚ್ಚು ಪ್ರೀತಿ. ಇಂದು ಅಂತರಾಷ್ಟ್ರೀಯ ಆನೆ ದಿನದ ಹಿನ್ನೆಲೆ ಅವುಗಳ ರಕ್ಷಣೆ ಕುರಿತು ವಿಶೇಷ ಪೋಸ್ಟ್ ಹಾಕಿ ಗಮನಸೆಳೆದಿದ್ದಾರೆ.

    ಇನ್‍ಸ್ಟಾಗ್ರಾಮ್‍ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಡಿ ಬಾಸ್, ಇಂದು ಆಗಸ್ಟ್ 12 ರಂದು ‘ವಿಶ್ವ ಆನೆ ದಿನ’ ಈ ಸಂದರ್ಭದಲ್ಲಿ ಆನೆಗಳು ಎದುರಿಸುತ್ತಿರುವ ಹಲವಾರು ಬೆದರಿಕೆಗಳಿಂದ ಅವುಗಳನ್ನು ಸಂರಕ್ಷಿಸಲು ಮತ್ತು ರಕ್ಷಿಸಲು ಸಹಾಯ ಮಾಡುವುದಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡೋಣ ಎಂಬ ಸಾಲುಗಳನ್ನು ಬರೆದಿದ್ದಾರೆ. ಅಲ್ಲದೆ. ಈ ಪೋಸ್ಟ್‍ನ್ನು ಕರ್ನಾಟಕ ಅರಣ್ಯ ಇಲಾಖೆಗೆ ಟ್ಯಾಗ್ ಮಾಡಿದ್ದಾರೆ.

    ಇತ್ತೀಚೆಗೆ ಆನೆಗಳ ಮೇಲೆ ಹೆಚ್ಚು ದಾಳಿ ನಡೆಯುತ್ತಿದ್ದು, ಕೇರಳದಲ್ಲಿ ಸಹ ಆನೆಯ ಬಾಯಿಯಲ್ಲಿ ಸ್ಫೋಟಕವನ್ನಿಟ್ಟು ಬ್ಲಾಸ್ಟ್ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ವೇಳೆ ಗರ್ಭಿಣಿ ಆನೆಯೊಂದು ಸಾವನ್ನಪ್ಪಿದ್ದು, ಇಂದು ವಿಶ್ವಾನೆ ದಿನದ ಹಿನ್ನೆಲೆ ದರ್ಶನ್ ಆನೆಗಳ ರಕ್ಷಣೆ ಕುರಿತು ಗಮನ ಸೆಳೆದಿದ್ದಾರೆ. ಆನೆಗಳು ಎದುರಿಸುತ್ತಿರುವ ಬೆದರಿಕೆಯನ್ನು ಹೋಗಲಾಡಿಸಿ ಅವುಗಳಿಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದಾರೆ.

    ದರ್ಶನ್ ಕಾಡು ಹಾಗೂ ವನ್ಯಜೀವಿಗಳ ಬಗ್ಗೆ ಸಾಕಷ್ಟು ಪ್ರೀತಿ ತೋರಿಸುವ ಹಿನ್ನೆಲೆ ಅವರನ್ನು ಅರಣ್ಯ ಇಲಾಖೆಯ ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ದರ್ಶನ್ ತಮ್ಮದೇ ಫಾರ್ಮ್‍ನಲ್ಲಿ ಹಲವಾರು ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಅಲ್ಲದೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಹುಲಿ ಮತ್ತು ಆನೆಗಳನ್ನು ಸಹ ದತ್ತು ಪಡೆದು ಪ್ರಾಣಿಗಳ ಪಾಲನೆಗೆ ಸಹಾಯ ಮಾಡುತ್ತಿದ್ದಾರೆ.

    ದರ್ಶನ್ ಅವರ ಈ ಗುಣವನ್ನು ಗಮನಿಸಿದ ಅರಣ್ಯ ಇಲಾಖೆ ಗುಜರಾತ್‍ನಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ರಾಯಭಾರಿರಾಗಿ ನೇಮಕ ಮಾಡಿದಂತೆ ಕರ್ನಾಟಕದಲ್ಲಿ ಚಾಲೆಂಜಿಂಗ್ ಸ್ಟಾರ್ ಅವರನ್ನು ನೇಮಕ ಮಾಡಿದ್ದಾರೆ. ಅಲ್ಲದೆ ಕಾಡ್ಗಿಚ್ಚು ಹಾಗೂ ಅರಣ್ಯ ಸಂರಕ್ಷಣೆ ಬಗ್ಗೆ 90 ನಿಮಿಷಗಳ ಸಾಕ್ಷ್ಯ ಚಿತ್ರದಲ್ಲಿ ಸಹ ದರ್ಶನ್ ನಟಿಸಿದ್ದಾರೆ.

  • ಮಲೆಮಹದೇಶ್ವರ ಅರಣ್ಯದಲ್ಲಿ ನಟ ದರ್ಶನ್-ಚಾಲೆಂಜಿಂಗ್ ಸ್ಟಾರ್‌ಗೆ ಸಾಥ್ ಕೊಟ್ಟ ಚಿಕ್ಕಣ್ಣ

    ಮಲೆಮಹದೇಶ್ವರ ಅರಣ್ಯದಲ್ಲಿ ನಟ ದರ್ಶನ್-ಚಾಲೆಂಜಿಂಗ್ ಸ್ಟಾರ್‌ಗೆ ಸಾಥ್ ಕೊಟ್ಟ ಚಿಕ್ಕಣ್ಣ

    ಚಾಮರಾಜನಗರ: ಸ್ಯಾಂಡಲ್‍ವುಡ್ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರಿಗೆ ಪ್ರಾಣಿ, ಪಕ್ಷಿಗಳೆಂದರೇ ಅಚ್ಚುಮೆಚ್ಚು. ವಿರಾಮ ಸಿಕ್ಕ ಸಮಯದಲ್ಲೆಲ್ಲಾ ಅವರು ಕಾಡು ಸುತ್ತಾಟ ನಡೆಸುತ್ತಾರೆ. ಸದ್ಯ ಚಾಮರಾಜನಗರ ಮಲೆಮಹದೇಶ್ವರ ಅರಣ್ಯದಲ್ಲಿ ದರ್ಶನ್ ಸುತ್ತಾಡಿದ್ದಾರೆ.

    ಕೊರೊನಾ ಕಾರಣದಿಂದ ಸಾಕಷ್ಟು ಸಿನಿಮಾ ಶೂಟಿಂಗ್‍ನಿಂದ ದೂರು ಉಳಿದಿರುವ ದರ್ಶನ್, ವಿರಾಮದ ಸಮಯವನ್ನು ತಮ್ಮ ಫಾರ್ಮ್ ಹೌಸ್‍ನಲ್ಲಿ ಕಳೆಯುತ್ತಿದ್ದರು. ನಿನ್ನೆಯ ಲಾಕ್‍ಡೌನ್ ನಡೆಯೂ ಮಲೆಮಹದೇಶ್ವರ ವನ್ಯಧಾಮದ ದೊಡ್ಡಮಾಕಳಗಿ ವ್ಯಾಪ್ತಿಯ ಅರಣ್ಯದಲ್ಲಿ ಸಂಚಾರಿ ಪ್ರಕೃತಿಯ ಸೌಂದರ್ಯವನ್ನು ಸವಿದಿದ್ದಾರೆ.

    ಕೊಳ್ಳೇಗಾಲದ ಬಫರ್ ವಲಯದಲ್ಲಿ ದೊಡ್ಡಮಾಕಳಗಿ ಅರಣ್ಯ ಪ್ರದೇಶ ಬರುತ್ತದೆ. ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಲ್ಲಿನ ಸ್ಥಳ ಹಾಗೂ ಪರಿಸರ ವೈವಿದೈತೆಯ ಕುರಿತು ಡಿಎಫ್‍ಒ ಅವರಿಂದ ಮಾಹಿತಿ ಪಡೆದಿದ್ದಾರೆ. ಈ ವೇಳೆ ನಟ ಚಿಕ್ಕಣ್ಣ ಅವರು ದರ್ಶನ್ ಅವರಿಗೆ ಸಾಥ್ ನೀಡಿದ್ದಾರೆ. ಅರಣ್ಯ ಭೇಟಿ ಬಳಿಕ ಮಲೆಮಹದೇಶ್ವರ ವನ್ಯಧಾಮದ ಡಿಎಫ್‍ಒ ಕಚೇರಿ ಸಮೀಪ ಎರಡು ಗಿಡ ನೆಟ್ಟಿದ್ದಾರೆ. ಈ ಕುರಿತು ಡಿಎಫ್‍ಒ ಎಡುಕೂಂಡಲ ಮಾಹಿತಿ ನೀಡಿದ್ದಾರೆ.

    ರಾಬರ್ಟ್ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಸಿಕ್ಕ ವಿರಾಮದ ಸಮಯದಲ್ಲಿ ನಟ ದರ್ಶನ್ ಉತ್ತರಾಖಂಡದ ಕಾಡಿಗೆ ಭೇಟಿ ನೀಡಿ, ಸ್ವತಃ ವ್ಯನ್ಯ ಜೀವಿಗಳ ಫೋಟೋ ಕ್ಲಿಕ್ಕಿಸಿದ್ದರು. ಇದಕ್ಕೂ ಮುನ್ನ ಕೀನ್ಯಾ ಸೆರೆಂಗೆಟ್ಟಿ ಕಾಡಿಗೆ ಭೇಟಿ ನೀಡಿದ್ದರು. ಆ ವೇಳೆ ಅವರು ಕ್ಲಿಕ್ಕಿಸಿದ್ದ ಫೋಟೋಗಳನ್ನು ಮಾರಾಟ ಮಾಡಿ ಅರಣ್ಯವಾಸಿಗಳ ಕಲ್ಯಾಣಕ್ಕೆ ನೀಡಿದ್ದರು.